ದಿನಾಂಕ: 14-04-2019 ರ ಅಪರಾಧ ಪ್ರಕರಣಗಳು

1) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 121/2019 ಕಲಂ. 279,337 ಐಪಿಸಿ ಮತ್ತು ಸೆಕ್ಷನ್ 185 ಐಎಂವಿ ಆಕ್ಟ್ :-

     ದಿನಾಂಕ:13/04/2019 ರಂದು ಸಂಜೆ 17-00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಗಾಯಾಳು ಬಿ.ಆರ್ ನವೀನ್ ಬಿನ್ ರಾಮನ್ ಮೂರ್ತಿ ಎಪಿ.ಸಿ-61 ಡಿ.ಎ.ಆರ್ ಚಿಕ್ಕಬಳ್ಳಾಪುರ ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೇ, ತಾನು ಎಪಿಸಿ-61 ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಮ್ಮ ಇಲಾಖಾಧಿಕಾರಿಗಳು ನನಗೆ ಚಿಂತಾಮಣಿ ಹೆದ್ದಾರಿ ಗಸ್ತು ವಾಹನದಲ್ಲಿ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು,ಅದರಂತೆ ನಾನು ದಿನಾಂಕ:13/04/2019 ರಂದು ಚಿಂತಾಮಣಿ ಹೈವೇ ಪೆಟ್ರೋಲಿಂಗ್ ವಾಹನ ಸಂಖ್ಯೆ:ಕೆಎ-03-ಜಿ-1423 ರಲ್ಲಿ ಚಾಲಕರಾದ ಎಆರ್ ಎಸ್.ಐ ಖಾದರ್ ವಲಿ ರವರೊಂದಿಗೆ ಗಸ್ತಿನಲ್ಲಿದ್ದಾಗ ಮದ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಯಾಜ್ ಬೇಗ್ ರವರು ತಮ್ಮ ಕಛೇರಿಗೆ ಒದಗಿಸಿರುವ ಕೆಎ-40-ಜಿ-540 ರಲ್ಲಿ ಚಿಂತಾಮಣಿ ತಾಲ್ಲೂಕು ಐಮರೆಡ್ಡಿಹಳ್ಳಿ ಗೇಟ್ ಬಳಿ ಬಂದು ವಾಹನವನ್ನು ನಿಲ್ಲಿಸಿಕೊಂಡು ವಾಹನಗಳ ತಪಾಸಣೆ ಮಾಡಿಕೊಂಡು ಐಎಂವಿ ಕೇಸುಗಳನ್ನು ದಾಖಲಿಸುತ್ತಿದ್ದು, ಹೆದ್ದಾರಿ ಗಸ್ತಿನಲ್ಲಿದ್ದ ನಮಗೂ ಸಹ ವಾಹನಗಳ ತಪಾಸಣೆ ಮಾಡುವ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿದ್ದು, ಅದರಂತೆ ನಾನು ಎ.ಆರ್.ಎಸ್.ಐ ರವರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ನಿಲ್ಲಿಸುತ್ತಿದ್ದಾಗ ವಾಹನಗಳ ದಾಖಲೆಗಳನ್ನು ಸಿ.ಪಿ.ಐ ರವರು ಪರಿಶೀಲಿಸಿ ಐಎಂವಿ ಕೇಸುಗಳನ್ನು ದಾಖಲಿಸುತ್ತಿದ್ದರು. ಇದೇ ದಿನ ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ನಾನು ರಸ್ತೆಯ ಎಡಬದಿಯಲ್ಲಿ ನಿಂತುಕೊಂಡು ವಾಹನಗಳನ್ನು ನಿಲ್ಲಿಸುತ್ತಿದ್ದಾಗ ಈ ಸಮಯದಲ್ಲಿ ಚಿಂತಾಮಣಿ ಕಡೆಯಿಂದ ಕೆಎ-07-ಈಬಿ-1833 ನೊಂದಣೆ ಸಂಖ್ಯೆಯ ಹಿರೋ ಪ್ಯಾಷನ್ ಪ್ರೋ ದ್ವಿಚಕ್ರ ವಾಹನ ಬರುತ್ತಿದ್ದು ಸದರಿ ವಾಹನ ಸವಾರನಿಗೆ ನಾನು ದೂರದಿಂದಲೇ ದ್ವಿ ಚಕ್ರ ವಾಹನವನ್ನು ನಿಲ್ಲಿಸುವಂತೆ ಸೂದನೆ ನೀಡಿದರೂ ಸಹ ಸದರಿ ದ್ವಿಚಕ್ರ ವಾಹನ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ನನ್ನ ಬಲ ಮೊಣಕಾಲಿಗೆ ತಲೆಗೆ ರಕ್ತಗಾಯವಾಗಿದ್ದು ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ ತರಚಿದ ಗಾಯಗಳಾಗಿದ್ದು, ನನಗೆ ಅಪಘಾತವನ್ನುಂಟು ಮಾಡಿದ ದ್ವಿಚಕ್ರ ವಾಹನ ಸವಾರನು ಸಹ ದ್ವಿಚಕ್ರ ವಾಹನದ ಸಮೇತ ಬಿದ್ದು ಹೋಗಿ ಆತನ ತಲೆಗೆ ಹಾಗು ಕಾಲುಗಳಿಗೆ ತರಚಿದ ಗಾಯಗಳಾಗಿರುತ್ತೆ. ನಂತರ ವಿಚಾರ ಮಾಡಲಾಗಿ ನನಗೆ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ದ್ವಿಚಕ್ರ ವಾಹನ ಸವಾರ ಶ್ರೀನಿವಾಸಪುರ ತಾಲ್ಲೂಕು ಚಿಲ್ಲವಾರಿಪಲ್ಲಿ ಗ್ರಾಮದ ಮಂಜುನಾಥರೆಡ್ಡಿ ಬಿನ್ ಶ್ರೀರಾಮರೆಡ್ಡಿ ಎಂದು ತಿಳಿದು ಬಂದಿದ್ದು ಸದರಿ ಅಸಾಮಿ ಮದ್ಯಪಾನ ಮಾಡಿ ದ್ವಿಚಕ್ರ ವಾಹನ ಚಾಲನೆ ಮಾಡಿ ಅಪಘಾತಪಡಿಸಿರುವುದಾಗಿದ್ದು, ಮೇಲ್ಕಂಡ ದ್ವಿಚಕ್ರ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

2) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 123/2019 ಕಲಂ. 143,147,148,323,324,504,506 ರೆ/ವಿ 149 ಐಪಿಸಿ ಮತ್ತು ಸೆಕ್ಷನ್ 3(1)(ಆರ್),3(1)(ಎಸ್) ಎಸ್.ಸಿ./ಎಸ್.ಟಿ. ಪಿಓಎ ಆಕ್ಟ್ :-

     ದಿನಾಂಕ 14-04-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನರಸಿಂಹಪ್ಪ ಬಿನ್ ಯರ್ರಪ್ಪ, 25 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ಚೌಡದೇನಹಳ್ಳಿ ಗ್ರಾಮ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 1-40 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ತಮ್ಮ ಗ್ರಾಮದಲ್ಲಿ ಸರ್ಕಾರಿ ಕೊಳವೆ ಬಾವಿ ಬತ್ತಿ ಹೋಗಿದ್ದು  ನೀರು ಬಾರದ ಕಾರಣ ಸರ್ಕಾರದ ವತಿಯಿಂದ ತಮ್ಮ ಗ್ರಾಮದ ವೀರಪಲ್ಲಿ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ ರವರ ಕೊಳವೆಬಾವಿಯಿಂದ ನೀರನ್ನು ಬಿಡುವ ವ್ಯವಸ್ಥೆ ಮಾಡಿರುತ್ತಾರೆ. ಹೀಗಿರುವಾಗ ದಿನಾಂಕ 14-04-2019 ರಂದು ಬೆಳಗ್ಗೆ 08-30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ತಮ್ಮ ಮಂಜುನಾಥ ರವರು  ತಮ್ಮ ಗ್ರಾಮದ ಭಜಂತ್ರಿ ಕೊಂಡಪ್ಪ ರವರ ಮನೆಯ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ವೆಂಕಟರೆಡ್ಡಿ ರವರ ಕೊಳವೆ ಬಾವಿಯಿಂದ ಬರುವ ನೀರನ್ನು ಹಿಡಿದುಕೊಳ್ಳುತ್ತಿದ್ದಾಗ ತಮ್ಮ ಗ್ರಾಮದ ಸವರ್ಣಿಯ ಜನಾಂಗಕ್ಕೆ ಸೇರಿದ ವಕ್ಕಲಿಗ ಜನಾಂಗದ ವೆಂಕಟರೆಡ್ಡಿ ಬಿನ್ ಮುನಿಶಾಮಿ ಎಂಬುವವರು ಅಲ್ಲಿಗೆ ಬಂದು ಈ ಬೋರ್ ವೆಲ್ ತಮ್ಮ ಮಾವನಿಗೆ ಸೇರಿದ್ದು ನಿಮಗೂ ನಮಗೂ ಆಗುವುದಿಲ್ಲ  ನೀವು ಬೇರೆ ಕಡೆ ನೀರು ಹಿಡಿದುಕೊಳ್ಳಿ ಎಂದು ಹೇಳಿದ್ದು ಆಗ ತಾನು ಮತ್ತು ತನ್ನ ತಮ್ಮ ಸರ್ಕಾರದ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ ಎಂದಾಗ ಮೇಲ್ಕಂಡ ವೆಂಕಟರೆಡ್ಡಿ ತಮ್ಮನ್ನು ಕುರಿತು ನೀವು ಕೀಳು ಜಾತಿಯ ಮಾಲ ಜಾತಿಯವರು ಎಂದು ಜಾತಿಯ ಬಗ್ಗೆ ಬೈದು ಜಾತಿ ನಿಂದನೆ ಮಾಡಿ ವೆಂಕಟರೆಡ್ಡಿ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ತನ್ನ ಮೂಗಿನ ಮೇಲೆ, ಸೊಂಟದ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಹಾಗೂ ತಮ್ಮ ಗ್ರಾಮದ ಬಲಜಿಗ ಜನಾಂಗಕ್ಕೆ ಸೇರಿದ ದೇವರಾಜ ಬಿನ್ ಶ್ರೀನಿವಾಸ, ಶ್ರೀನಿವಾಸ ಬಿನ್ ಪಾಪಣ್ಣ, ಹನುಮಪ್ಪ ಬಿನ್ ಪಾಪಣ್ಣ, ವಕ್ಕಲಿಗ ಜನಾಂಗಕ್ಕೆ ಸೇರಿದ ಮಂಜುನಾಥ ಬಿನ್ ಚೆನ್ನಕೇಶವವರೆಡ್ಡಿ ಅಕ್ರಮ ಗುಂಪುಕಟ್ಟಿಕೊಂಡು ಬಂದು ಅವರೂ ಸಹ ತಮ್ಮ ಜಾತಿಯ ಬಗ್ಗೆ ಕೀಳಾಗಿ ಬೈದು ಆ ಪೈಕಿ ದೇವರಾಜು ಕಲ್ಲಿನಿಂದ ತನ್ನ ತಮ್ಮನ ಸೊಂಟದ ಮೇಲೆ ಹೊಡೆದು ಗಾಯಪಡಿಸಿದನು. ಉಳಿದ ಶ್ರೀನಿವಾಸ, ಮಂಜುನಾಥ, ಹನುಮಪ್ಪ ರವರು ಕೈಗಳಿಂದ ತನ್ನ ಮತ್ತು ತನ್ನ ತಮ್ಮನ ಮೈ ಕೈ ಮೇಲೆ ಹೊಡೆದು ನೋವುಂಟು ಮಾಡಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಚೌಡಪ್ಪ ಬಿನ್ ಮುನೆಪ್ಪ, ಮುನಿಶಾಮಿ ಬಿನ್ ಚಿಕ್ಕ ಬೈರಪ್ಪ ರವರು ಅಡ್ಡಬಂದು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

3) ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 124/2019 ಕಲಂ.323,324,504,506 ರೆ/ವಿ 34 ಐಪಿಸಿ ಮತ್ತು ಸೆಕ್ಷನ್ 3(1)(ಆರ್),3(1)(ಎಸ್) ಎಸ್.ಸಿ./ಎಸ್.ಟಿ. ಪಿಓಎ ಆಕ್ಟ್ :-

     ದಿನಾಂಕ 14-04-2019 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ರಾಮಚಂದ್ರಪ್ಪ ಬಿನ್ ಲೇಟ್ ನಾರೆಪ್ಪ, 40 ವರ್ಷ, ಆದಿ ದ್ರಾವಿಡ ಜನಾಂಗ, ಜಲಗಾರ, ಚೌಡದೇನಹಳ್ಳಿ ಗ್ರಾಮ ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 2-10 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ತಮ್ಮ ಗ್ರಾಮದಲ್ಲಿ ಸರ್ಕಾರಿ ಕೊಳವೆ ಬಾವಿ ಬತ್ತಿ ಹೋಗಿದ್ದು  ನೀರು ಬಾರದ ಕಾರಣ ಸರ್ಕಾರದ ವತಿಯಿಂದ ತಮ್ಮ ಗ್ರಾಮದ ವೀರಪಲ್ಲಿ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ ರವರ ಕೊಳವೆಬಾವಿಯಿಂದ ನೀರನ್ನು ಬಿಡುವ ವ್ಯವಸ್ಥೆ ಮಾಡಿರುತ್ತಾರೆ. ತಾನು ಮೇಲ್ಕಂಡ ಬೋರ್ ವೆಲ್ ನಿಂದ ಗ್ರಾಮಕ್ಕೆ ನೀರನ್ನು ಬಿಡುತ್ತಿರುತ್ತೇನೆ. ಹೀಗಿರುವಾಗ ದಿನಾಂಕ 14-04-2019 ರಂದು ಬೆಳಗ್ಗೆ 08-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಉಷಾ ರವರು ಶಾಲೆಗೆ ನೀರು ಬರುತ್ತಿಲ್ಲ ನೀರು ಬಿಡುವಂತೆ ಹೇಳಿದ್ದು ತಾನು ಪಂಚಾಯಿತಿಯವರನ್ನು ಕೇಳಿ ಬಿಡುತ್ತೇನೆ ಎಂದು ಹೇಳಿರುತ್ತೇನೆ. ಹೀಗಿರುವಾಗ ತಮ್ಮ ಗ್ರಾಮದ ಬಲಜಿಗ ಜನಾಂಗಕ್ಕೆ ಸೇರಿದ ಚೌಡಪ್ಪ ಬಿನ್ ಮುನಿಯಪ್ಪ ಎಂಬುವವನು ತನ್ನನ್ನು ಕುರಿತು ಯಾರೋ ಅವನು ವಾಟರ್ ಮ್ಯಾನ್ ಬಾರೋ ಇಲ್ಲಿ ನಿಮ್ಮಮ್ಮನ್ ತೋಟಿ ಜಾತಿನೇ ಕೆಯ್ಯಾ ಎಂದು ತನ್ನ ಜಾತಿಯ ಬಗ್ಗೆ ಬೈದು ನೀನು ಪೈಪ್ ಅನ್ನು ಕಟ್ ಮಾಡಿ ನೀರನ್ನು ಗ್ರಾಮದ ಕುಂಟೆಗೆ ಬಿಡುವಂತೆ ಹೇಳಿದನು. ಆಗ ತಾನು ಪಂಚಾಯಿತಿಯವರನ್ನು ಕೇಳಿ ಬಿಡುತ್ತೇನೆ ಎಂದು ಹೇಳಿರುತ್ತೇನೆ. ಆಗ ಚೌಡಪ್ಪ ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿದನು. ಅಷ್ಟರಲ್ಲಿ ತಮ್ಮ ಗ್ರಾಮದ ತಮ್ಮ ಜನಾಂಗದ ಸಂಪಂಗಿ ಬಿನ್ ಯರ್ರಪ್ಪ, ಮಂಜುನಾಥ ಬಿನ್ ಯರ್ರಪ್ಪ, ನರಸಿಂಹಪ್ಪ ಬಿನ್ ಯರ್ರಪ್ಪ ರವರು  ಅಲ್ಲಿಗೆ ಬಂದು ತನ್ನನ್ನು ಕುರಿತು ಅವಾಶ್ಚ ಶಬ್ದಗಳಿಂದ ಬೈದು ಎಳೆದಾಡುತ್ತಿದ್ದಾಗ ತಮ್ಮ  ಗ್ರಾಮದ ವೆಂಕಟರೆಡ್ಡಿ ಬಿನ್ ಮುನಿಶಾಮಿ ಎಂಬುವವರು ಜಗಳ ಬಿಡಿಸಲು ಬಂದಾಗ ಸಂಪಂಗಿ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ವೆಂಕಟರೆಡ್ಡಿ ರವರ ತಲೆಯ ಹಿಂಭಾಗ ಮತ್ತು ಮುಂಭಾಗ ಹೊಡೆದು ರಕ್ತಗಾಯ ಪಡಿಸಿದನು. ಮಂಜುನಾಥ ಮತ್ತು ನರಸಿಂಹಪ್ಪ ರವರು ವೆಂಕಟರೆಡ್ಡಿ ರವರನ್ನು ಕೈಗಳಿಂದ ಮೈ ಮೇಲೆ ಹೊಡೆದು ನೋವುಂಟು ಮಾಡಿ ಎಲ್ಲರೂ ಸೇರಿಕೊಂಡು ತಮ್ಮನ್ನು ಮುಗಿಸಿಬಿಡುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಮುನಿರೆಡ್ಡಿ ಬಿನ್ ವೆಂಕಟರೆಡ್ಡಿ, ರಾಗುಟ್ಟಹಳ್ಳಿ ಗ್ರಾಮದ ಮುರಳಿ ಬಿನ್ ನಾರಾಯಣಸ್ವಾಮಿ ರವರು ಅಡ್ಡಬಂದು ಜಗಳ ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

4) ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 126/2019 ಕಲಂ. 87 ಕೆ.ಪಿ. ಆಕ್ಟ್ :-

     ದಿನಾಂಕ: 13/04/2019 ರಂದು ಸಂಜೆ 6-30 ಗಂಟೆಗೆ ಗೌರಿಬಿದನೂರು ವೃತ್ತದ ಪೊಲೀಸ್ ವೃತ್ತ ನಿರೀಕ್ಷರಾದ ವೈ.ಅಮರನಾರಾಯಣ, ಸಿ.ಪಿ.ಐ ಸಾಹೇಬರವರು ನೀಡಿದ ಮೆಮೋ ಸಾರಾಂಶವೇನೆಂದರೆ ಈ ದಿನ ದಿನಾಂಕ:13/04/2019 ರಂದು ಸಾಯಂಕಾಲ 4-30 ಗಂಟೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಇಡಗೂರು ಗ್ರಾಮದ ಹೊರವಲಯದಲ್ಲಿ ಯಾರೋ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಭಾರದಲ್ಲಿರುವ ಶ್ರೀ ಕೆ.ಸಿ.ಗೌತಮ್, ಪ್ರೊಬೇಷನರಿ ಡಿ.ವೈ.ಎಸ್.ಪಿ ಸಾಹೇಬರು, ಅಪರಾಧ ಪಿ.ಎಸ್.ಐ ಲಿಯಾಕತ್ ಉಲ್ಲಾ ಮತ್ತು ಪೊಲೀಸ್ ಸಿಬ್ಬಂದಿಯವರೊಂದಿಗೆ ಪೊಲೀಸ್ ಜೀಪುಗಳಲ್ಲಿ ಪಂಚಾಯ್ತಿ ದಾರರನ್ನು ಕರೆದುಕೊಂಡು ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ ಇಡಗೂರು ಗ್ರಾಮದ ಹೊರವಲಯಕ್ಕೆ ಹೋಗಿ ಮರೆಯಲ್ಲಿ ಜೀಪುಗಳನ್ನು ನಿಲ್ಲಿಸಿ ಜೀಪುಗಳಿಂದ ಇಳಿದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ನಾವು ಮಾಹಿತಿ ಬಂದ ಸ್ಥಳವಾದ ಕೆರೆಯ ಅಂಗಳದಲ್ಲಿ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ 5-6 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ ಗೆ 500/- ರೂ. ಬಾಹರ್ ಗೆ 500/-ಗಳೆಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಗುರುಪ್ರಸಾದ್ ಬಿನ್ ಲೇಟ್ ನಾಗರಾಜಾಚಾರ್, 35 ವರ್ಷ, ವಿಶ್ವಕರ್ಮ ಜನಾಂಗ, ಚಾಲಕ ವೃತ್ತಿ, ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 2] ಕೃಷ್ಣಪ್ಪ ಬಿನ್ ಲೇಟ್ ಚಿಕ್ಕಗಂಗಪ್ಪ, 47 ವರ್ಷ, ನಾಯಕರು, ಜಿರಾಯ್ತಿ, ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 3] ಪ್ರಕಾಶ್ @ ಪ್ರಸಾದ್ ಬಿನ್ ಲೇಟ್ ಗಂಗಪ್ಪ, 29 ವರ್ಷ, ಕುರುಬರು, ವ್ಯಾಪಾರ, ವೆಂಕಟಾಪುರ ಗ್ರಾಮ, ಹಿಂದೂಪುರ ತಾಲ್ಲೂಕು, 4] ಬಾಸ್ಕರ್ ಬಾಬು ವೈ.ಎನ್ ಬಿನ್ ಲೇಟ್ ನಾಗರಾಜಾಚಾರ್, 31 ವರ್ಷ, ವಿಶ್ವಕರ್ಮ ಜನಾಂಗ, ಪ್ಯಾಕ್ಟರಿಯಲ್ಲಿ ಕೆಲಸ, ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 5] ವೆಂಕಟೇಶ ಬಿನ್ ಸಿದ್ದಪ್ಪ, 47 ವರ್ಷ, ನಾಯಕರು, ವ್ಯಾಪಾರ, ಯಲಹಂಕ, ಬೆಂಗಳೂರು ನಗರ, 6] ನಾಗರಾಜಪ್ಪ ಬಿನ್ ಲೇಟ್ ಬಾಬಣ್ಣ, 65 ವರ್ಷ, ಜಿರಾಯ್ತಿ, ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು,  ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಇಸ್ಪೀಟು ಎಲೆಗಳನ್ನು ಎಣಿಸಲಾಗಿ 52 ಇಸ್ಪೀಟ್ ಎಲೆಗಳು ಇದ್ದು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣವಿದ್ದು ಎಣಿಸಲಾಗಿ 12060/- ರೂ. ನಗದು ಹಣವಿದ್ದು, ಮೇಲ್ಕಂಡ 6 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 12060/- ರೂ. ನಗದು ಹಣವನ್ನು ಸಾಯಂಕಾಲ 5-00 ಗಂಟೆಯಿಂದ 6-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ ಇವುಗಳನ್ನು ಹಾಗು ಆರೋಪಿಗಳನ್ನು ಪಂಚನಾಮೆಯನ್ನು ವಶಕ್ಕೆ ನೀಡುತ್ತಿದ್ದು, ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87  ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಠಾಣೆಯಲ್ಲಿ ಎನ್ ಸಿ ಆರ್ 212/2019 ರಂತೆ ದಾಖಲು ಮಾಡಿಕೊಂಡು ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪ್ರ.ವ.ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತೆ.