ದಿನಾಂಕ : 13/12/2019ರ ಅಪರಾಧ ಪ್ರಕರಣಗಳು

1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 144/2019 ಕಲಂ. 323-504 ಐ.ಪಿ.ಸಿ :-
ದಿನಾಂಕ: 10/12/2019 ರಂದು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀಮತಿ ಭಾಗ್ಯಮ್ಮ ಕೊಂ ನಾರಾಯಣಸ್ವಾಮಿ,24 ವರ್ಷ,ದಿ ಕರ್ನಾಟಕ ಕೂಲಿಕೆಲಸ, ವಾಸ: ಮೈಲಾಪುರ ಗ್ರಾಮ, ಚಿಂತಾಮಣಿ ತಾಲೂಕು ರವರ ಹೇಳಿಕೆ ಪಡೆದಿದ್ದರ ಸಾರಾಂಶವೇನೆಂದರೆ ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದು 2 ನೇ ಮಗು ಈಗ 2 ತಿಂಗಳಾಗಿರುತ್ತೆ. ದಿ: 04/12/2019 ರಂದು ನಮ್ಮ ಗ್ರಾಮದ ಆಶಾ ಕಾರ್ಯಕರ್ತೆಯಾದ ವಿಜಯಮ್ಮ ಕೋಂ ನಾಗೇಶ್ 35 ವರ್ಷ ರವರು ಅವರ ಮಗಳನ್ನು ನಮ್ಮ ಮನೆಗೆ ಕಳುಹಿಸಿ ನನ್ನ 2ನೇ ಮಗುವಿನ ತಾಯಿ ಕಾರ್ಡ್ ಕೊಡುವಂತೆ ಹೇಳಿ ಕಳುಹಿಸಿದ್ದರಿಂದ ಅದರಂತೆ ನಾನು ತಾಯಿ ಕಾರ್ಡ್ ನ್ನು ಕೊಟ್ಟು ಕಳುಹಿಸಿರುತ್ತೇನ. ದಿ: 10/12/2019 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ನಾನು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿದ್ದಾಗ ಆಶಾ ಕಾರ್ಯಕರ್ತೆ ವಿಜಯಮ್ಮ ರವರು ಹೊಲದ ಕಡೆ ಹೋಗಲು ಬಂದು ನನ್ನನ್ನು ಕುರಿತು 1 ನೇ ಮತ್ತು 2 ನೇ ಮಗುವಿನ ತಾಯಿ ಕಾರ್ಡ್ ಕೊಡಲು ಹೇಳಿದ್ದರೆ 2 ನೇ ಮಗುವಿನ ಕಾರ್ಡ್ ಮಾತ್ರ ಕೊಟ್ಟಿದ್ದೀಯ ಬೋಳಿ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ತನ್ನ ತಲೆಯ ಕೂದಲನ್ನು ಹಿಡಿದು ಎಳೆದಾಡಿ ರಸ್ತೆಯಲ್ಲಿ ಬೀಳಿಸಿ ಕೈಗಳಿಂದ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ನಮ್ಮ ಗ್ರಾಮದ ರತ್ನಮ್ಮ ಮತ್ತು ಅಮರಾವತಿ ರವರು ಜಗಳ ಬಿಡಿಸಿರುತ್ತಾರೆ. ಮೇಲ್ಕಂಡವರನ್ನು ಠಾಣೆಗೆ ಕರೆಯಿಸಿ ಬಂದೋಬಸ್ತ್ ಮಾಡಿಕೊಡಬೇಕೆಂದು ಕೋರಿದ್ದರ ಮೇರೆಗೆ ಠಾಣೆಯ ಎನ್ ಸಿ ಆರ್ ನಂ: 217/2019 ರಂತೆ ದಾಖಲಿಸಿಕೊಂಡಿರುತ್ತೆ. ಸದರಿ ಅರ್ಜಿಯಲ್ಲಿ ಭಾರತೀಯ ದಂಡ ಸಂಹಿತೆಯ ಅಂಶಗಳು ಅಸಂಜ್ಞೆಯ ಅಪರಾಧಕ್ಕೆ ಸಂಬಂದಿಸಿದ್ದಾಗಿರುವುದರಿಂದ ಕಲಂ:323.504 ಐಪಿಸಿಯನ್ನು ಅಳವಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ದಿನಾಂಕ:12/12/2019 ರಂದು ಸಂಜೆ 16-00 ಗಂಟೆಗೆ ಹೆಚ್ ಸಿ 107 ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.
2. ಸಿ.ಇ.ಎನ್/ಡಿ.ಸಿ.ಬಿ ಪೊಲೀಸ್ ಠಾಣೆ ಮೊ.ಸಂ. 21/2019 ಕಲಂ. 420 ಐ.ಪಿ.ಸಿ & 66(C),66(D) INFORMATION TECHNOLOGY ACT :-
ದಿನಾಂಕ:13-12-2019 ರಂದು ಪಿರ್ಯಾಧಿದಾರರಾದ ಶ್ರೀ ಸುಧರ್ಶನ್ ವೈ,ಪೂಜಾರ್ ಬಿನ್ ಯಲ್ಲಪ್ಪ ಪೂಜಾರ್, 57 ವರ್ಷ, ಅಸಿಸ್ಟಂಟ್ ಜನರಲ್ ಮ್ಯಾನೆಜರ್ , ಬಿ,ಎಸ್,ಎನ್,ಎಲ್, ಬಿ,ಎಸ್,ಎನ್,ಎಲ್ ಕ್ವಾಟ್ರಸ್, ವಾಪಸಂದ್ರ, ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಚಿಕ್ಕಬಳ್ಳಾಪುರದಲ್ಲಿರುವ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂಖ್ಯೆ-52010100782 ನ್ನು ಹೊಂದಿದ್ದು ಸದರಿ ಖಾತೆಯಲ್ಲಿ ನನ್ನ ವೇತನ ಹಾಗೂ ಇತರೇ ವಹಿವಾಟುಗಳನ್ನು ಮಾಡಿಕೊಂಡಿರುತ್ತೇನೆ, ಈಗಿರುವಲ್ಲಿ ದಿನಾಂಕ:-3-12-2019 ರಂದು ನನ್ನ ಆಡಿಟರ್ ರವರು ನನಗೆ ಪೋನ್ ಕರೆ ಮಾಡಿ 1.11000/-ರೂ ನಿಮ್ಮ ಖಾತೆಗೆ ಇನ್ ಕಮ್ ಟ್ಯಾಕ್ಸ್ ರೀಪಂಡ್ ಆಗಿದೆ ಎಂತ ತಿಳಿಸಿದರು, ನಂತರ ನಾನು ತುರ್ತಾಗಿ ಕಾರ್ಪೋರೇಷನ್ ಬ್ಯಾಂಕಿನ ವ್ಯವಸ್ಥಾಪಕರನ್ನು ಸಂಪರ್ಕಿಸಿ ನನ್ನ ಖಾತೆಯ ಸ್ಟೇಟ್ ಮೆಂಟ್ ನ್ನು ತೆಗೆದುಕೊಂಡು ನೋಡಲಾಗಿ ನನ್ನ ಖಾತೆಯಲ್ಲಿ ಒಟ್ಟು ಸುಮಾರು 1,05000/- ರೂಗಳನ್ನು ಯಾರೋ ನನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡಿರುವುದು ಕಂಡುಬಂದಿರುತ್ತೆ, ಆದುದರಿಂದ ತಾವುಗಳು ನನ್ನ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವವರನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ಹಣ ನನಗೆ ವಾಪಸ್ಸು ಕೊಡಿಸಬೇಕಾಗಿ ಕೋರಿ ನೀಡಿರುವ ದೂರಾಗಿರುತ್ತದೆ.
3. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 340/2019 ಕಲಂ. 279-304(ಎ) ಐ.ಪಿ.ಸಿ:-
ದಿನಾಂಕ 13/12/2019 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತನ್ನ ತಂದೆಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿಯಾದ ಕಾಮಕ್ಕರವರಿಗೆ ಒಂದು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಎರಡನೇ ಹೆಂಡತಿಯಾದ ನಾರಾಯಣಮ್ಮನಿಗೆ ಒಂದು ಗಂಡು ಮಗ ಇರುತ್ತಾನೆ. ನಮ್ಮ ಚಿಕ್ಕಮ್ಮ ನಾರಾಯಣಮ್ಮರವರು ಮೃತಪಟ್ಟಿರುತ್ತಾರೆ. ನಮ್ಮ ತಂದೆಯವರಾದ ಹನುಮಂತಪ್ಪ ಬಿನ್ ಲೇಟ್ ಮ್ಯಾಕಲಪ್ಪ 70 ವರ್ಷ ರವರು ಮತ್ತು ನಮ್ಮ ತಾಯಿ ಕಾಮಕ್ಕರವರು ನನ್ನೊಂದಿಗೆ ನಮ್ಮ ಮನೆಯಲ್ಲಿಯೇ ವಾಸವಾಗಿದ್ದು, ದಿ:12.12.2019 ರಂದು ಬೆಳಿಗ್ಗೆ 8-30 ಗಂಟೆ ಸಮಯದಲ್ಲಿ ಜಾತವಾರ ಗೇಟಿನಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ವಾಪಸ್ಸು ನಮ್ಮ ಮನೆಗೆ ಬರಲು ರಸ್ತೆಯನ್ನು ದಾಟುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ಬರುತ್ತಿದ್ದ ಕೆಎ 06 ಎಂ 5725 ನೊಂದಣಿ ಸಂಖ್ಯೆಯ ಟಾಟಾ ಸುಮೋ ವಾಹನದ ಚಾಲಕ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ನಮ್ಮ ತಂದೆಗೆ ಡಿಕ್ಕಿ ಹೊಡೆಸಿದ್ದು, ನಮ್ಮ ತಂದೆಯವರು ಕೆಳಗೆ ಬಿದ್ದು ಹೋದ ಪರಿಣಾಮ ನಮ್ಮ ತಂದೆಯವರ ತಲೆಯ ಹಿಂಭಾಗ , ಸೊಂಟಕ್ಕೆ , ಬೆನ್ನಿಗೆ ಮತ್ತು ಇತರೆ ಕಡೆಗಳಲ್ಲಿ ರಕ್ತ ಗಾಯಗಳಾಗಿದ್ದು, ತಕ್ಷಣ ಅಲ್ಲಿಯೇ ಇದ್ದ ವೆಂಕಟೇಶ ಸಿ ಬಿನ್ ಚೌಡಪ್ಪ , ಪ್ರಸನ್ನ ಬಿನ್ ಮುನಿಯಪ್ಪರವರುಗಳು ನೋಡಿ ಉಪಚರಿಸಿ ವೆಂಕಟೇಶರವರು ನನಗೆ ಫೋನ್ ಮಾಡಿ ತಿಳಿಸಿದ್ದು, ನಾನು ಸ್ಥಳಕ್ಕೆ ಬಂದು ನೋಡಲಾಗಿ ನಿಜವಾಗಿದ್ದು, ನಂತರ ಯಾವುದೋ ಒಂದು ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿ ನಂತರ ಅಲ್ಲಿಂದ ಪುನಃ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಈ ದಿನ ದಿ:13.12.2019 ರಂದು ಬೆಳಿಗ್ಗೆ 9-50 ಗಂಟೆ ಸಮಯದಲ್ಲಿ ನಮ್ಮ ತಂದೆ ಹನುಮಂತಪ್ಪರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ನಮ್ಮ ತಂದೆಯವರ ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ 06 ಎಂ 5725 ನೊಂದಣಿ ಸಂಖ್ಯೆಯ ಟಾಟಾ ಸುಮೋ ವಾಹನದ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.
4. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 219/2019 ಕಲಂ. ಮನುಷ್ಯ ಕಾಣೆ:-
ದಿನಾಂಕ-13/12/2019 ರಂದು ಶ್ರೀಮತಿ ಸರೋಜಮ್ಮ ಕೋಂ ಅಶೋಕ 40 ವರ್ಷ,ಒಕ್ಕಲಿಗರು,ಭಗತ್ ಸಿಂಗ್ ನಗರ,ವಾಡರ್್-04 ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ನನಗೆ ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿದ್ದು ನಮಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಇದ್ದು ಇಬ್ಬರು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ.ನನ್ನ ಗಂಡ ಇದೇ ಚಿಕ್ಕಬಳ್ಳಾಪುರ ನಗರದ ಎ.ಪಿ.ಎಂ.ಸಿ.ಯಾರ್ಡನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು ನಾವುಗಳು ಸಂತೋಷದಿಂದ ಜೀವನ ಮಾಡಿಕೊಂಡಿರುತ್ತೇವೆೆ. ಈ ಹಿಂದೆಯೂ ನನ್ನ ಗಂಡ ಮನೆಯಲ್ಲಿ ಯಾರಿಗೂ ಹೇಳದೆ ನನಗೂ ಸಹ ತಿಳಸದೆ ಮನೆಯನ್ನು ಬಿಟ್ಟು ಎಲ್ಲಿಗಾದರೂ ಹೋಗುತ್ತಿದ್ದು ಆ ಬಳಿಕ ಸುಮಾರು ಎರಡು ತಿಂಗಳ ಬಳಿಕ ಮತ್ತೆ ಮನೆಗೆ ವಾಪಸ್ಸು ಬರುತ್ತಿದ್ದು ಈ ಹಿಂದೆ ಅದೇ ರೀತಿ ಮನೆಯನ್ನು ಬಿಟ್ಟು ಎಲ್ಲಿಗೂ ಹೋಗಿದ್ದು ನಾನು ಈ ವಿಚಾರದ ಬಗ್ಗೆ ನಗರ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದು ಸುಮಾರು ಎರಡು ತಿಂಗಳ ಬಳಿಕ ಮತ್ತೆ ವಾಪಸ್ಸು ಮನೆಗೆ ಬಂದಿರುತ್ತಾರೆ.ಅದೇ ರೀತಿಯಲ್ಲಿ ದಿನಾಂಕ:18-10-2019 ರಂದು ಇದೇ ರೀತಿಯಲ್ಲಿ ಪುನಃ ನನ್ನ ಗಂಡ ಅಶೋಕರವರು ನನಗೆ ತಿಳಿಸದೆ ಮನೆಯನ್ನು ಬಿಟ್ಟು ಹೋಗಿರುತ್ತಾರೆ. ನಾನು ನಮ್ಮ ಸಂಬಂದಿಕರ ಬಳಿ ಮತ್ತು ಅವರ ಸ್ನೇಹಿತರ ಬಳಿ ಹೋಗಿ ವಿಚಾರಿಸಿದ್ದು ಅವರ ಸುಳಿವು ಸಿಗಲಿಲ್ಲ.ಮತ್ತೆ ನಾನು ಮನೆಗೆ ಬರುವುದಾಗಿ ಕಾದಿದ್ದು ಸುಮಾರು ಎರಡು ತಿಂಗಳಾದರೂ ಮನೆಗೆ ವಾಪಸ್ಸು ಬಂದಿರುವುದಿಲ್ಲ ಎಂದೂ ದೂರು ನೀಡಿದರ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತೆ.
5. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ. 74/2019 ಕಲಂ. 279-304(ಎ) ಐ.ಪಿ.ಸಿ:-
ದಿನಾಂಕ:-13/12/2019 ರಂದು ಬೆಳಿಗ್ಗೆ :-09:30 ಗಂಟೆಗೆ ಪಿರ್ಯಾದಿ ಶ್ರೀಮತಿ ರತ್ನಮ್ಮ ಕೋಂ ಕೊಂಡಪ್ಪ 49 ವರ್ಷ, ಬೋವಿ ಜನಾಂಗ, ಕೂಲಿಕೆಲಸ, ಶೇಟ್ಟಿವಾರಹಳ್ಳಿ ಗ್ರಾಮ, ಮಂಡಿಕಲ್ಲು ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ. ರವ್ರು ಠಾಣೆಗೆ ಹಾಜ್ರಾಗಿ ನೀಡಿದ ಬೆರಳಚ್ಚು ದೂರನ ಸಾರಾಂಶವೇನೆಂದರೆ ತನ್ನ ತವರು ಮನೆ ದಿಂಬಾರ್ಲಹಳ್ಲಿ ಗ್ರಾಮವಾಗಿರುತ್ತದೆ. ತಮ್ಮ ತಂದೆ ತಾಯಿಗೆ ಒಟ್ಟು 5 ಜನ ಮಕ್ಕಳಿದ್ದು 4 ಹೆಣ್ಣು ಮಕ್ಕಳು, ತನ್ನ ಅಣ್ಣ ನಾರಾಯಣಸ್ವಾಮಿ ಒಬ್ಬನೇ ಗಂಡು ಮಗನಾಗಿರುತ್ತಾನೆ. ದಿನಾಂಕ:-12/12/2019 ರಂದು ರಾತ್ರಿ ಚಿಕ್ಕಬಳ್ಳಾಪುರ ತಾಲ್ಲೂಕು ತಿಪ್ಪೇನಹಳ್ಳಿ ಗ್ರಾಮದ ವಾಸಿ ನಾಗರಾಜು ರವರು ತನಗೆ ಪೋನ್ ಮಾಡಿ ನಿಮ್ಮ ಅಣ್ಣನಾದ ಶ್ರೀ. ನಾರಾಯಣಸ್ವಾಮಿ ಬಿನ್ ಲೇಟ್ ತಿಮ್ಮಣ್ಣ 53 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ದಿಂಬಾರ್ಲಹಳ್ಳಿ ಗ್ರಾಮ, ಸಾದಲಿ ಹೋಬಳಿ, ಶಿಡ್ಲಘಟ್ಟ ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ ರವರು ತಮ್ಮ ಗ್ರಾಮ ಬಳಿ ಸುಮಾರು ಸಂಜೆ 4-20 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ-ಗೌರಿಬಿದನೂರು ಎನ್.ಹೆಚ್-234 ರಸ್ತೆಯ ಡಿವೈನ್ ಸಿಟಿ ಬಳಿಯ ಮುಂದಿನ ರಸ್ತೆಯ ಬಳಿ ನಡೆದು ಕೊಂಡು ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಕೆಎ-40-ಎಫ್-58 ರ ಬಸ್ಸಿನ ಚಾಲಕ ವಾಹವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಅಣ್ಣರವರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನಾರಾಯಣಸ್ವಾಮಿರವರು ಟಾರ್ ರಸ್ತೆಯಲ್ಲಿ ಬಿದ್ದಾಗ ತಲೆಯ ಮೇಲೆ ಬಸ್ ಚಕ್ರ ಹತ್ತಿದ ಪರಿಣಾಮ ತಲೆ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ತಕ್ಷಣ ಅಲ್ಲಿನ ಸ್ಥಳೀಯರು 108 ಅಂಬ್ಯೂಲೆನ್ಸ ವಾಹನಕ್ಕೆ ಕರೆ ಮಾಡಿ ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುತ್ತಾರೆ, ಎಂದು ತಮಗೆ ತಿಳಿಸಿರುತ್ತಾರೆ. ಅದರಂತೆ ತಾನು ತಮ್ಮ ಸಂಬಂದಿಕರಿಗೆ ಪೋನ್ ಮಾಡಿ ವಿಚಾರ ತಿಳಿಸಿ ಈ ದಿನ ದಿನಾಂಕ:-13/12/2019 ರಂದು ಬೆಳಿಗ್ಗೆ ತಾನು ತಮ್ಮ ಸಂಬಂದಿಕರಾದ ಮಂಜುನಾಥ ಆರ್.ವಿ, ದಿಂಬಾರ್ಲಹಳ್ಳಿ ಗ್ರಾಮದ ಕೃಷ್ಣಪ್ಪ ಹಾಗೂ ಇತರರು ಬಂದು ನೋಡಿದಾಗ ವಿಚಾರ ನಿಜವಾಗಿದ್ದು, ನಾರಾಯಣಸ್ವಾಮಿರವರ ತಲೆ ಅಪಘಾತದಲ್ಲಿ ಹೊಡೆದು ಹೋಗಿ ಮೃತ ಪಟ್ಟಿರುತ್ತಾರೆ. ಸದರಿ ಅಪಘಾತ ಪಡಿಸಿದ ಕೆಎ-40-ಎಫ್-58 ರ ಬಸ್ಸಿನ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ಲಕ್ಷ್ಮೀಪತಿ ಬಿನ್ ನರಸಿಂಹಪ್ಪ 45 ವರ್ಷ, ಬ್ಯಾಡ್ಜ್ ನಂ-3024 ಗೌರಿಬಿದನೂರು ಡಿಫೋ ಎಂತ ತಿಳಿಸಿದ್ದು, ತಮ್ಮ ಅಣ್ಣನ ಸಾವಿಗೆ ಕಾರಣನಾದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.
6. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.459/2019 ಕಲಂ. 324-504 ಐ.ಪಿ.ಸಿ:-
ದಿನಾಂಕ 12/12/2019 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ದೇವರಾಜ ಬಿನ್ ಬುಡ್ಡಪ್ಪ, 35 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಗಾಜಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಮಕ್ಷಮ ನೀಡಿದ ಹೇಳಿಕೆಯನ್ನು ಪಡೆದು ಸಂಜೆ 5.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಗಾಯಾಳುವಿನ ಹೇಳಿಕೆಯ ಸಾರಾಂಶವೇನೆಂದರೆ, ತಾನು ತಮ್ಮ ಗ್ರಾಮದಲ್ಲಿ ತಮ್ಮ ಜಮೀನನ್ನು ಇತ್ತೀಚೆಗೆ ಬೆಂಗಳೂರು ವಾಸಿ ರೂಪಮ್ಮ ಕೋಂ ರಾಮಣ್ಣ ಎಂಬುವರಿಗೆ ಮಾರಿದ್ದು, ತಾವು ಸದರಿ ಜಮೀನಿನಲ್ಲಿ ಕೂಲಿಗೆ ಕಾವಲಿಗಾಗಿ ಹೋಗುತ್ತಿದ್ದು, ದಿನಾಂಕ 12/12/2019 ರಂದು ಮದ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ತಾನು ಸದರಿ ಜಮೀನಿನಲ್ಲಿ ಕಾವಲಿಗಾಗಿ ಇದ್ದಾಗ, ತಮ್ಮ ಗ್ರಾಮದ ತಮ್ಮ ಜನಾಂಗದ ವಾಸಿಗಳಾದ ಕುಟುಮಪ್ಪ ರವರ ಮಗ ಶಂಕರ ಆತನ ಅಕ್ಕನಾದ ಶೋಭ ಮತ್ತು ಶಶಿ ರವರುಗಳು ರಾಗಿ ತೆನೆ ಕೊಯುತ್ತಿದ್ದರು. ತಾನು ಜಮೀನಿನ ಮಾಲೀಕರಿಗೆ ಹೇಳದೆ ಯಾಕೆ ರಾಗಿ ತೆನೆ ಕೊಯ್ಯುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಶಂಕರ ಏಕಾಏಕಿ ಆತನ ಕೈಯಲ್ಲಿದ್ದ ಕುಡುಗೋಲಿನಿಂದ ತನ್ನ ಎಡಕೈ ಭುಜಕ್ಕೆ ಹೊಡೆದು ರಕ್ತಗಾಯಪಡಿಸಿ ನನ್ನ ಮಗನೇ ನನ್ನನ್ನೇ ಯಾಕೆ ರಾಗಿ ತೆನೆ ಕೊಯ್ಯುತ್ತಿದ್ದೀಯೆಂದು ಕೇಳುತ್ತೀಯ ಬೋಳಿ ಮಗನೇ ಎಂದು ಕೆಟ್ಟ ಮಾತುಗಳಿಂದ ಬೈದಿರುತ್ತಾರೆ. ಶೋಭ, ಶಶಿ ಮತ್ತು ಸುನಂದಮ್ಮ ಕೋಂ ವೆಂಕಟರವಣಪ್ಪ ಹಾಗೂ ವೆಂಕಟರವಣಪ್ಪ ಬಿನ್ ಹನುಮಪ್ಪ ರವರು ಗಲಾಟೆ ಬಿಡಿಸಿರುತ್ತಾರೆ. ವೆಂಕಟರವಣಪ್ಪ ರವರು ತನ್ನನ್ನು ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿರುತ್ತಾರೆ. ಆದ್ದರಿಂದ ಶಂಕರ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿರುತ್ತಾರೆ.
7. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.334/2019 ಕಲಂ. 87 ಕೆ.ಪಿ. ಆಕ್ಟ್:-
ದಿನಾಂಕ: 12/12/2019 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಿವ ಕುಮಾರ್ ಆದ ನಾನು ಠಾಣೆಯಲ್ಲಿದ್ದಾಗ, ನನಗೆ ಚಿಂತಾಮಣಿ ನಗರದ ಕಾರುಪಾಕಲ ಛತ್ರದ ಕಾಂಪೌಂಡ್ ಒಳಗಡೆ ಈಶಾನ್ಯ ಮೂಲೆಯಲ್ಲಿ ಅಂದರ್ ಬಾಹರ್ ಜೂಜಾಟ ನಡೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ದಾಳಿ ಮಾಡಲು ನಾನು ಮತ್ತು ಪಿ.ಎಸ್.ಐ ನಾರಾಯಣಸ್ವಾಮಿ. ಆರ್, ಹೆಚ್.ಸಿ 245 ಸೋಮಶೇಖರಾಚಾರಿ, ಪಿ.ಸಿ 190 ವೇಣು, ಸಂಜಯ್ ಕುಮಾರ್ ಸಿ.ಪಿ.ಸಿ 236, ವಿಶ್ವನಾಥ ಸಿ.ಪಿ.ಸಿ 457 ಜೀಪು ಚಾಲಕ ಆಂಜನಪ್ಪ ಎ.ಹೆಚ್.ಸಿ 37 ರವರೊಂದಿಗೆ ಕೆ.ಎ.40-ಜಿ-356 ಸರ್ಕಾರಿ ಜೀಪುನಲ್ಲಿ ಬೆಂಗಳೂರು ವೃತ್ತದ ಮೂಲಕ ಹೋಗಿ ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ, ಪಂಚರಾಗಿ ಸಹಕರಿಸಬೇಕೆಂತ ಕೋರಿದ್ದರ ಮೇರೆಗೆ ಅವರು ಒಪ್ಪಿಕೊಂಡಿದ್ದು, ಜೀಪಿನಲ್ಲಿ ಕುಳ್ಳರಿಸಿಕೊಂಡು ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಕಾಲ್ನಡಿಗೆಯಲ್ಲಿ ಛತ್ರದ ಬಳಿಗೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಕೆಲವು ವ್ಯೆಕ್ತಿಗಳು ಗುಂಪು ಸೇರಿಕೊಂಡು ಕುಳಿತುಕೊಂಡು ಇಸ್ಪೇಟ್ ಎಲೆಗಳನ್ನು ಚಾಪೆಯ ಮೇಲೆ ಹಾಕಿಕೊಂಡು ಅಂದರ್ ಕಡೆ 100ರೂ ಬಾಹರ್ ಕಡೆ 100 ರೂ ಎಂದು ಕೂಗುತ್ತಾ ಜೂಜಾಟ ಆಡುತ್ತಿದ್ದವರನ್ನು ನಾವು ಸುತ್ತುವರೆದು ದಾಳಿ ಮಾಡಿ, ಅವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಎಸ್.ಆರ್. ಸುಬ್ರಮಣಿ ಬಿನ್ ಲೇಟ್ ಎಸ್.ಆರ್. ರಂಗಪ್ಪ, 53 ವರ್ಷ, ಅಡಿಗೆ ಕೆಲಸ, ಬ್ರಾಹ್ಮಣ ಜನಾಂಗ, ನಾರಸಿಂಹ ಪೇಟೆ,ಚಿಂತಾಮಣಿ ನಗರ 2) ಶ್ರೀಧರ್ ಬಿನ್ ರಾಮ, 35 ವರ್ಷ, ಅಶೋಕ್ ಹೋಟೆಲ್ ನಲ್ಲಿ ಕೆಲಸ, ಇಡಿಗ ಜನಾಂಗ, ರಾಯಲ್ ಸರ್ಕಲ್ ಹತ್ತಿರ , ಚಿಂತಾಮಣಿ ನಗರ 3) ಶಿವಾಜಿ ಬಿನ್ ವೆಂಕೋಬರಾವ್, 31 ವರ್ಷ, ಮರಾಠ ಜನಾಂಗ, ವಾಸ ಸೊಣ್ಣಶೆಟ್ಟಿಹಳ್ಳಿ, ಚಿಂತಾಮಣಿ ನಗರ 4)ನವೀನ್ ಕುಮಾರ್ ಬಿನ್ ಕೃಷ್ಣಪ್ಪ, 31 ವರ್ಷ, ವ್ಯಾಪಾರ,ಆದಿ ಕರ್ನಾಟಕ ಜನಾಂಗ, ವಾಸ ಮಾಳಪಲ್ಲಿ, ವಾರ್ಡ ನಂ 08, ಚಿಂತಾಮಣಿ ನಗರ 5) ಸಂದೀಪ್ ಬಿನ್ ಪುಟ್ಟಯ್ಯ, 31 ವರ್ಷ, ಇಡಿಗ ಜನಾಂಗ, ಬ್ರಹ್ಮಶ್ರೀ ಹೋಟೆಲ್ ನಲ್ಲಿ ಕೆಲಸ, ಊರ ಮುಂದೆ, ಚಿಂತಾಮಣಿ ನಗರ 6) ರಾಮ ಬಿನ್ ನಾರಾಯಣ, 51 ವರ್ಷ, ಇಡಿಗ ಜನಾಂಗ, ವಾಸ ಅಜಾದ್ ಚೌಕ ಹತ್ತಿರ, ಚಿಂತಾಮಣಿ ನಗರ 7) ಪ್ರಭಾಕರ ಬಿನ್ ಶಿವರಾಜ್ ಗೌಡ, 31 ವರ್ಷ, ಲಕ್ಮೀ ಟಿಫನ್ ಸೆಂಟರ್ ನಲ್ಲಿ ಕೆಲಸ, ವಕ್ಕಲಿಗರು, ವಾಸ ಎನ್.ಎನ್.ಟಿ ರಸ್ತೆ,ಚಿಂತಾಮಣಿ ನಗರ 8) ಗೋವಿಂದ ಬಿನ್ ಬಸಪ್ಪ, 42 ವರ್ಷ, ಈಡಿಗ ಜನಾಂಗ, ಶ್ರೀ ಮಂಜುನಾಥ ಹೋಟೆಲ್ ನಲ್ಲಿ ಕೆಲಸ, ವಾಸ ಟ್ಯಾಂಕ್ ಬಂಡ್ ರಸ್ತೆ ಎಂದು ತಿಳಿಸಿದ್ದು, ಅವರು ಜೂಜಾಟಕ್ಕೆ ಇಟ್ಟಿದ್ದ 10,500-00ರೂ ನಗದು ಹಣ , 52 ಇಸ್ಪೇಟ್ ಎಲೆಗಳು, ಒಂದು ಚಾಪೆಯನ್ನುಅಮಾನತ್ತು ಪಡಿಸಿಕೊಂಡು ಮಾಲು, ಪಂಚನಾಮೆ ಹಾಗೂ ಆರೋಪಿಗಳೊಂದಿಗೆ ಮಧ್ಯಾಹ್ನ 13-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ನೀಡಿದ ವರದಿಯ ಮೇರೆಗೆ ಇದು ಸಂಜ್ಞೇಯ ಅಪರಾಧವಾಗಿರುವುದರಿಂದ ಎನ್ ಸಿ ಆರ್ 277/2019 ರಿತ್ಯಾ ದಾಖಲಸಿದ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ನಂತರ ಪ್ರ ವ ವರದಿಯನ್ನು ದಾಖಲಿಸಿರುತ್ತೆ.
8. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.335/2019 ಕಲಂ. 78(3) ಕೆ.ಪಿ. ಆಕ್ಟ್:-
ದಿನಾಂಕ:12-12-2019 ರಂದು ಪಿ ಎಸ್ ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ತಾನು ಈ ದಿನ ಮದ್ಯಾಹ್ನ 3-00 ಗಂಟೆಯಲ್ಲಿ ಸರ್ಕಾರಿ ಜೀಪು ಸಂಖ್ಯೆ: ಕೆ.ಎ 07- ಜಿ -188 ವಾಹನದಲ್ಲಿ ಕೃಷ್ಣಪ್ಪ ಸಿ.ಪಿ.ಸಿ 524 , ವೇಣು ಸಿ.ಪಿ.ಸಿ 190 ರವರೊಂದಿಗೆ ದೊಡ್ಡಪೇಟೆ, ಜೆ.ಜೆ. ಕಾಲೋನಿ ಕಡೆಗಳಲ್ಲಿ ನಗರಗಸ್ತಿನಲ್ಲಿದ್ದಾಗ, ಅಜಾದ್ ಚೌಕ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಪ್ಲವರ್ ವೃತ್ತದ ಬಳಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ, ಅವರನ್ನು ಜೀಪಿನಲ್ಲಿ ಕರೆದುಕೊಂಡು ಊರ ಮುಂದೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಪಂಚರನ್ನು ಮತ್ತು ಸಿಬ್ಬಂದಿಯನ್ನು ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಅಜಾದ್ ಚೌಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯೆಕ್ತಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸುತ್ತಾ, ಮಟ್ಕಾ ಚೀಟಿ ಬರೆಯುತ್ತಿದ್ದನು. ನಾವು ಪಂಚರೊಂದಿಗೆ ಸುತ್ತುವರೆದು, ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿಹೋಗಿದ್ದು, ಮಟ್ಕಾಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಸುಧಾಕರ ಬಿನ್ ವೆಂಕಟಾಚಾರಿ , 28 ವರ್ಷ, ಆಚಾರಿ ಜನಾಂಗ, ಕೂಲಿಕೆಲಸ, ವಾರ್ಡ್ ನಂ 25 ಬಾಗೇಪಲ್ಲಿ ಸರ್ಕಲ್ ಚಿಂತಾಮಣಿ ಟೌನ್ ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ 430 ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಆಡಿ ಸಂಪಾದಿಸಿರುವ ಹಣವೆಂತ ತಿಳಿಸಿದ್ದು, ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಹಣ, ಒಂದು ಪೆನ್ನು ಮಟ್ಕಾ ಚೀಟಿಯನ್ನು ಅಮಾನತ್ತು ಪಡಿಸಿಕೊಂಡು, ಮಾಲು, ಆಸಾಮಿ, ಪಂಚನಾಮೆಯೊಂದಿಗೆ ಸಂಜೆ 4-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯ ಮೇರೆಗೆ ಇದು ಅಸಂಜ್ಞೆಯ ಅಪರಾಧವಾಗಿರುವುದರಿಂದ ಠಾಣೆಯ ಎನ್.ಸಿ.ಆರ್ ನಂ 279 /2019 ರಂತೆ ದಾಖಲಿರುತ್ತೆ ಇದು ಅಸಂಜ್ಞೇಯ ಅಪರಾಧವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರ ವ ವರದಿಯನ್ನು ದಾಖಲಿಸಿರುತ್ತೆ.
9. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.208/2019 ಕಲಂ.279-304(ಎ) ಐ.ಪಿ.ಸಿ:-
ಈ ದಿನ ದಿನಾಂಕ 12/12/2019 ರಂದು ಫಿರ್ಯಾದಿದಾರರಾದ ಶ್ರೀಮತಿ.ಚನ್ನಮ್ಮ ಕೋಂ ನಾಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತನ್ನಗಂಡನಾದ ನಾಗಪ್ಪ ಬಿನ್ ಲೇಟ್ ಗಂಗಪ್ಪ, 55ವರ್ಷ ಎಂಬುವರು ಎಲ್ಲಿಯಾದರು ಹೋಗಿ ಬರಲು ನಂ ಕೆಎ 40 ಎಲ್ 3550 ನೊಂದಣಿ ಸಂಖ್ಯೆಯ ಟಿವಿಎಸ್ ಹೆವಿಡ್ಯೂಟಿ ಎಕ್ಸ್ ಎಲ್ ದ್ವಿಚಕ್ರ ವಾಹನವನ್ನು ಕೊಂಡುಕೊಂಡಿದ್ದು ಸದರಿ ದ್ವಿಚಕ್ರ ವಾಹನದಲ್ಲಿ ತಮ್ಮ ಸುತ್ತಮುತ್ತಲ ಯಾವುದಾದರು ಗ್ರಾಮಗಳಿಗೆ ಹೋಗಿ ಬರಬೇಕಾದರೆ ಹೋಗಿ ಬರುತ್ತಿದ್ದು ಹೀಗಿರುವಲ್ಲಿ ಈ ದಿನ ದಿನಾಂಕ 12/12/2019 ರಂದು ತನ್ನ ಗಂಡನಾದ ನಾಗಪ್ಪ ರವರು ನಲ್ಲೋಜನಹಳ್ಳಿ ಗ್ರಾಮದಲ್ಲಿ ಇರುವ ತನ್ನ ಮಗಳ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ತಮ್ಮ ಬಾಬತ್ತು ನಂ ಕೆಎ 40 ಎಲ್ 3550 ದ್ವಿಚಕ್ರ ವಾಹನದಲ್ಲಿ ಮಧ್ಯಾಹ್ನ ಸುಮಾರು 12-30 ಗಂಟೆ ಸಮಯದಲ್ಲಿ ಹೋಗಿದ್ದು ನಂತರ ಇದೇ ದಿನ ಮಧ್ಯಾಹ್ನ ಸುಮಾರು 3-00 ಗಂಟೆ ಸಮಯದಲ್ಲಿ ಯಾರೋ ತನ್ನ ತಮ್ಮನಾದ ಸುಬ್ಬರಾಯಪ್ಪ ರವರಿಗೆ ಪೋನ್ ಮಾಡಿ ತನ್ನ ಗಂಡನಾದ ನಾಗಪ್ಪ ರವರಿಗೆ ಚಂದಗಾನಹಳ್ಳಿ ಬೈಯ್ಯಪ್ಪನಹಳ್ಳಿ ಗೇಟ್ ಗಳ ಮಧ್ಯದಲ್ಲಿ ಅಪಘಾತವಾಗಿರುವುದಾಗಿ ವಿಚಾರವನ್ನು ತಿಳಿಸಿದ್ದರ ಮೇರೆಗೆ ತಾನು ಮತ್ತು ತನ್ನ ತಮ್ಮನಾದ ಸುಬ್ಬರಾಯಪ್ಪ ತಮ್ಮ ಭಾವನ ಮಗನಾದ ಮಂಜುನಾಥ ಬಿನ್ ನಾರಾಯಣಪ್ಪ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ಗಂಡನಾದ ನಾಗಪ್ಪ ರವರು ಗಾಯಗೊಂಡು ರಸ್ತೆಯ ಬದಿಯಲ್ಲಿ ಬಿದ್ದಿದ್ದು ತನ್ನ ಗಂಡನನ್ನು ಉಪಚರಿಸಲಾಗಿ ತನ್ನ ಗಂಡನ ಎದೆಗೆ ಹಾಗೂ ಬಲ ಕಾಲಿಗೆ ರಕ್ತಗಾಯಗಲಾಗಿದ್ದು ಸ್ಥಳದಲ್ಲಿ ತನ್ನ ಗಂಡನ ಬಾಬತ್ತು ದ್ವಿಚಕ್ರವಾಹನ ಮತ್ತು ನಂ ಕೆಎ 01 ಬಿ 1491 ಕ್ವಾಲಿಸ್ ಕಾರ್ ಜಖಂ ಆಗಿದ್ದು ವಿಚಾರವನ್ನು ತಿಳಿಯಲಾಗಿ ತನ್ನ ಗಂಡ ತನ್ನ ಮಗಳ ಮನೆಗೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಬರಲು ದಿಬ್ಬೂರಹಳ್ಳಿ ಕಡೆಯಿಂದ ಚಂದಗಾನಹಳ್ಳಿ ಗೇಟ್ ಬಿಟ್ಟು ಸ್ವಲ್ಪ ಮುಂದೆ ಬರುತ್ತಿದ್ದಾಗ ಎದುರುಗಡೆಯಿಂದ ನಂ ಕೆಎ 01 ಬಿ 1491 ಕಾರ್ ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ತನ್ನ ಗಂಡನ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಯಿಸಿ ಅಪಘಾತವನ್ನು ಉಂಟುಮಾಡಿದ್ದರಿಂದ ತನ್ನ ಗಂಡನಿಗೆ ಗಾಯಗಳಾಗಿರುವುದಾಗಿ ವಿಚಾರ ತಿಳಿಯಿತು. ತಕ್ಷಣ ಗಾಯಗೊಂಡಿದ್ದ ತನ್ನ ಗಂಡನನ್ನು ಚಿಕಿತ್ಸೆಗಾಗಿ 108 ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ತನ್ನ ಗಂಡ ಮೃತಪಟ್ಟಿದ್ದು ತನ್ನ ಗಂಡನ ಮೃತ ದೇಹವು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾದಲ್ಲಿ ಇದ್ದು ಮೇಲ್ಕಂಡಂತ್ತೆ ಅಪಘಾತವನ್ನು ಉಂಟುಮಾಡಿದ್ದ ಕಾರ್ ಮತ್ತು ಅದರ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿರುವ ದೂರಾಗಿರುತ್ತೆ.
10. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.209/2019 ಕಲಂ.379 ಐ.ಪಿ.ಸಿ:-
ಈ ದಿನ ದಿನಾಂಕ 12/12/2019 ರಂದು ಪಿರ್ಯಾದಿದಾರರಾದ ಟಿ.ಎನ್.ಶ್ರೀಕಾಂತ ಬಿನ್ ನಾರಾಯಣಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತಾನು ಈಗ್ಗೆ ಸುಮಾರು ಒಂದು ವರ್ಷದ ಹಿಂದ ನಂ ಕೆಎ 67 ಇ 2243 ನೊಂದಣಿ ಸಂಖ್ಯೆಯ ಟಿ.ವಿ.ಎಸ್ ಹೆವಿಡ್ಯೂಟಿ ದ್ವಿಚಕ್ರ ವಾಹನವನ್ನು ಕೊಂಡುಕೊಂಡಿದ್ದು ಸದರಿ ದ್ವಿಚಕ್ರ ವಾಹನವನ್ನು ತಾನು ಎಲ್ಲಿಗಾದರು ಹೋಗಿ ಬರಲು ಉಪಯೋಗಿಸಿಕೊಳ್ಳುತ್ತಿದ್ದುಪ್ರತಿ ದಿನ ರಾತ್ರಿ ವೇಳೆಯಲ್ಲಿ ತನ್ನ ಬಾಬತ್ತು ದ್ವಿಚಕ್ರ ವಾಹನವನ್ನು ತಮ್ಮ ಬಾಬತ್ತು ಮನೆಯ ಮುಂಭಾಗದಲ್ಲಿಯೇ ನಿಲ್ಲಿಸಿ ಬೀಗ ಹಾಕುತ್ತಿದ್ದು ಎಂದಿನಂತ್ತೆ ದಿನಾಂಕ 10/12/2019 ರಂದು ರಾತ್ರಿಯೂ ಸಹ ತಾನು ತನ್ನ ಬಾಬತ್ತು ನಂ ಕೆಎ 67 ಇ 2243 ದ್ವಿಚಕ್ರ ವಾಹನವನ್ನು ತಮ್ಮ ಬಾಬತ್ತು ಮನೆಯ ಮುಂಭಾಗದಲ್ಲಿ ನಿಲ್ಲಿಸಿ ಬೀಗ ಹಾಕಿ ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದು. ನಂತರ ಮಾರನೇಯ ದಿನ ದಿನಾಂಕ 11/12/2019 ರಂದು ಬೆಳಿಗ್ಗೆ ಸುಮಾರು 6-00 ಗಂಟೆ ಸಮಯದಲ್ಲಿ ತಾನು ಎದ್ದು ನೋಡಲಾಗಿ ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ತನ್ನ ಬಾಬತ್ತು ನಂ ಕೆಎ 67 ಇ 2243 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು ಇದುವರೆಗೂ ತನ್ನ ಬಾಬತ್ತು ದ್ವಿಚಕ್ರ ವಾಹವನ್ನು ತಮ್ಮ ಗ್ರಾಮದ ಸುತ್ತಮುತ್ತಲು ಹುಡುಕಾಡಿಕೊಂಡಿದ್ದು ಎಲ್ಲಿಯೂ ಪತ್ತೆಯಾಗದ ಕಾರಣ ಈ ದಿನ ತಡವಾಗಿ ಬಂದು ದೂರನ್ನು ನೀಡುತ್ತಿದ್ದು ಕಳುವಾಗಿರುವ ತನ್ನ ಬಾಬತ್ತು ದ್ವಿಚಕ್ರ ವಾಹನ ಹಾಗೂ ಕಳ್ಳರನ್ನು ಪತ್ತೆಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನಿಡಿರುವ ದೂರಾಗಿರುತ್ತೆ.
11. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.508/2019 ಕಲಂ.87 ಕೆ.ಪಿ ಆಕ್ಟ್:-
ದಿನಾಂಕ 11-12-2019 ರಂದು ಸಂಜೆ 4-30 ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ 5 ಜನ ಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 11-12-2019 ರಂದು ಮದ್ಯಾಹ್ನ 2-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ವಿಧುರಾಶ್ವತ್ಥ ಹೊರ ಠಾಣೆಯ ವ್ಯಾಪ್ತಿಯಲ್ಲಿ ನಾನು ಮತ್ತು ಠಾಣೆಯ ಸಿಬ್ಬಂದಿಯಾದ ಪಿ.ಸಿ. 208 ತಿಪ್ಪೆಸ್ವಾಮಿ , ಪಿ.ಸಿ-312 ಮೈಲಾರಪ್ಪ ರವರೊಂದಿಗೆ ಗಸ್ತು ಮಾಡುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಇಡಗೂರು ಗ್ರಾಮದ ಮೈಲಾರಿ ಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಹುಣಸೇ ಮರದ ಕೆಳಗೆ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮ ಜೂಜಾಟವನ್ನು ಆಡುತ್ತಿದ್ದಾರೆಂದು ಖಚಿತವಾದ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ ಇಡಗೂರು ಗ್ರಾಮಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಇಡಗೂರು ಗ್ರಾಮದ ಮೈಲಾರಿ ಲಿಂಗೇಶ್ವರ ದೇವಸ್ಥಾನದ ಮುಂದೆ ಇರುವ ಹುಣಸೇ ಮರದ ಕೆಳಗೆ 05 ಜನರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ, ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸುತ್ತುವರೆದು ಕುಳಿತಿದ್ದವರನ್ನು ಹಿಡಿದುಕೊಂಡು ವಿಚಾರಿಸಲಾಗಿ 1) ನಾಗಣ್ಣ ಬಿನ್ ಲೇಟ್ ದೊಡ್ಡವೆಂಕಟಪ್ಪ, 40 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು , 2) ನಂಜುಂಡಪ್ಪ ಬಿನ್ ಲೇಟ್ ನಾಗಣ್ಣ , 67 ವರ್ಷ, ಲಿಂಗಾಯಿತರು, ಜಿರಾಯ್ತಿ, ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 3) ಚಿಕ್ಕವೆಂಕಟರವಣಪ್ಪ ಬಿನ್ ಲೇಟ್ ಚಿನ್ನಪ್ಪ, 80 ವರ್ಷ, ದೇವಾಂಗ ಜನಾಂಗ, ಜಿರಾಯ್ತಿ, ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು 4) ಎಂ. ಗಂಗಣ್ಭ ಬಿನ್ ಲೇಟ್ ಮುದ್ದಣ್ಣ, 75 ವರ್ಷ, ಲಿಂಗಾಯಿತರು, ಜಿರಾಯ್ತಿ, ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ದೊಡ್ಡಚೌಡಪ್ಪ ಬಿನ್ ಚಿಕ್ಕಭೀಮಣ್ಣ, 80 ವರ್ಷ, ಸಾಧರ ಜನಾಂಗ, ವಾಸ ಇಡಗೂರು ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ ಎಣಿಸಲಾಗಿ 1500/- ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ. ಸ್ಥಳದಲ್ಲಿ ಮದ್ಯಾಹ್ನ 3-00 ಗಂಟೆಯಿಂದ 4-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 1) 1500/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 4-30 ಗಂಟೆಗೆ ವಾಪಸ್ಸು ಬಂದಿದ್ದು, ಆರೋಪಿಗಳು, ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ ಕಲಂ: 87 ಕೆ.ಪಿ.ಆಕ್ಟ್ – 1963 ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಅರ್ಜಿಯನ್ನು ನೊಂದಾಯಿಸಿಕೊಂಡಿರುತ್ತೆ. ನಂತರ ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣ ದಾಖಲಿಸಿರುತ್ತೆ.
12. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.509/2019 ಕಲಂ.15(ಎ), 32(3) ಕೆ.ಇ ಆಕ್ಟ್:-
ಈ ಮೂಲಕ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಮೋಹನ್ ಎನ್. ಪಿ.ಎಸ್.ಐ ಆದ ನಾನು ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 12/12/2019 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಮುಧುಗೆರೆ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-10 ಶ್ರೀರಾಮಯ್ಯ , ಪಿ.ಸಿ-179 ಶಿವಶೇಖರ್ , ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ ಮುಧುಗೆರೆ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಸಂಜೆ 4-00 ಗಂಟೆಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಗೋಪಿ ಬಿನ್ ವೆಂಕಟಪ್ಪ, 48 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, , ವಾಸ ಮುಧುಗೆರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 180 ಎಂ.ಎಲ್.ಸಾಮರ್ಥ್ಯದ OLD TAVERN WHISKY ಯ 04 ಟೆಟ್ರಾ ಪಾಕೆಟ್ ಗಳು ಇದ್ದು, 90 ಎಂ .ಎಲ್.ಸಾಮರ್ಥ್ಯದ HAY WARDS CHEERS WHISKY ಯ 02 ಟೆಟ್ರಾ ಪಾಕೆಟ್ ಗಳು ಇವುಗಳ ಒಟ್ಟು ಸಾಮರ್ಥ್ಯ 900 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 356.64 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 180 ಎಂ.ಎಲ್ ಸಾಮರ್ಥ್ಯದ OLD TAVERN WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 4-00 ಗಂಟೆಯಿಂದ 4-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 180 ಎಂ.ಎಲ್.ಸಾಮರ್ಥ್ಯದ OLD TAVERN WHISKY 04 ಟೆಟ್ರಾ ಪಾಕೆಟ್ ಗಳು, 90 ಎಂ .ಎಲ್.ಸಾಮರ್ಥ್ಯದ HAY WARDS CHEERS WHISKY ಯ 02 ಟೆಟ್ರಾ ಪಾಕೆಟ್ ಗಳು , ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, OLD TAVERN WHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-30 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.
13. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.510/2019 ಕಲಂ.15(ಎ), 32(3) ಕೆ.ಇ ಆಕ್ಟ್:-
ಈ ಮೂಲಕ ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಮೋಹನ್ ಎನ್. ಪಿ.ಎಸ್.ಐ ಆದ ನಾನು ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 12/12/2019 ರಂದು ಸಂಜೆ 4-30 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿ ಮುಧುಗೆರೆ ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-10 ಶ್ರೀರಾಮಯ್ಯ , ಪಿ.ಸಿ-460 ಷೇಕ್ ಸನಾವುಲ್ಲಾ , ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ ಮುಧುಗೆರೆ ಗ್ರಾಮದಲ್ಲಿ ಹೋಗಿ ಅಲ್ಲಿ, ಪಂಚಾಯ್ತಿದಾರರನ್ನು ಕರೆದುಕೊಂಡು ಮಾಹಿತಿ ಇದ್ದ ಸ್ಥಳಕ್ಕೆ ಸಂಜೆ 4-30 ಗಂಟೆಗೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ ತನ್ನ ಅಂಗಡಿಯ ಮುಂದೆ ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು, ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದವರು ಓಡಿಹೋಗಿರುತ್ತಾರೆ. ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ನಾಗರಾಜು ಬಿನ್ ಚಿಕ್ಕಗಂಗಯ್ಯ, 39 ವರ್ಷ, ಎಸ್.ಸಿ ಜನಾಂಗ, ಜಿರಾಯ್ತಿ, ವಾಸ ಮುಧುಗೆರೆ ಗ್ರಾಮ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ, ಅದರಲ್ಲಿ 90 ಎಂ .ಎಲ್.ಸಾಮರ್ಥ್ಯದ HAY WARDS CHEERS WHISKY ಯ 10 ಟೆಟ್ರಾ ಪಾಕೆಟ್ ಗಳು ಇವುಗಳ ಒಟ್ಟು ಸಾಮರ್ಥ್ಯ 900 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 303.32 /- ರೂ.ಗಳಾಗಿರುತ್ತೆ. ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ .ಎಲ್.ಸಾಮರ್ಥ್ಯದ HAY WARDS CHEERS WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ ಸ್ಥಳದಲ್ಲಿ ಸಂಜೆ 4-30 ಗಂಟೆಯಿಂದ 5-00 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 90 ಎಂ .ಎಲ್.ಸಾಮರ್ಥ್ಯದ HAY WARDS CHEERS WHISKY ಯ 04 ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, OLD TAVERNWHISKY ಯ 4 ಖಾಲಿ ಟೆಟ್ರಾ ಪಾಕೆಟ್ ಗಳನ್ನು ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 6-00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು, ಈ ಮೆಮೋನೊಂದಿಗೆ ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.
14. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.231/2019 ಕಲಂ.279-304(ಎ) ಕೆ.ಇ ಆಕ್ಟ್:-
ದಿನಾಂಕ 13/12/2019 ರಂದು ಬೆಳಿಗ್ಗೆ 10 ಗಂಟೆಯಲ್ಲಿ ಪಿರ್ಯಾದಿ ರಾಕೇಶ್ ವಿ ಬಿನ್ ವೆಂಕಟೇಶ ಉಪ್ಪಾರ ಕಾಲೋನಿ ಗೌರಿಬಿದನೂರು ನಗರ ಫೋ: 9632773503 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಸವೇನೆಂದರೆ, ನಾನು ಮತ್ತು ನಮ್ಮ ಉಪ್ಪಾರ ಕಾಲೋನಿಯ ವಾಸಿ ಅನಂತ ಬಿನ್ ನರಸಿಂಹಪ್ಪ 23 ವರ್ಷ ರವರು ದಿನಾಂಕ 12/12/2019 ರಂದು ಎ.ಪಿ 02 X 8478 ರ ಲಾರಿಯಲ್ಲಿ ಜೋಳದ ಮೂಟೆಗಳನ್ನು ತುಂಬಿಕೊಂಡು ಹೊಸೂರಿಗೆ ಹೋಗಿ ಅಲ್ಲಿ ಖಾಲಿ ಮಾಡಿಕೊಂಡು ಅಲ್ಲಿ ರಾತ್ರಿ 8 ಗಂಟೆಗೆ ಹೊಸೂರನ್ನು ಬಿಟ್ಟು ಗೌರಿಬಿದನೂರಿನ ನಮ್ಮ ಮನೆಗೆ ಹೋಗಲು ಖಾಲಿ ಲಾರಿಯೊಂದಿಗೆ ವಾಪಸ್ಸು ಬರುತ್ತಿದ್ದೆವು. ರಾತ್ರಿ ಸುಮಾರು 12:30 ಸಮಯದಲ್ಲಿ ಅನಂತನು ನಮ್ಮ ಲಾರಿಯನ್ನು ಬೆಂಗಳೂರು –ಮಧುಗಿರಿ ಬೈಪಾಸ್ ರಸ್ತೆಯ ಲೀಡರ್ಸ್ ಶಾಲೆಯ ಬಳಿ ತಿರುವಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ನಮ್ಮ ಲಾರಿಯು ಸ್ಕಿಡ್ ಆಗಿ ಉರುಳಿಕೊಂಡು ಆ ಸಮಯದಲ್ಲಿ ಲಾರಿ ಚಾಲಕನಾದ ಅನಂತನು ಡ್ರೈವರ್ ಸೀಟಿನಿಂದ ಕೆಳಗಡೆ ಬಿದ್ದು ಹೋಗಿದ್ದು ಆತನ ಮೇಲೆ ಲಾರಿಯು ಬಿದ್ದು ಹೋಗಿ ತಲೆ ಮತ್ತು ದೇಹದ ಭಾಗವು ಜಜ್ಜಿ ಹೋಗಿ ಸ್ಥಳದಲ್ಲಿಯೇ ಸತ್ತುಹೋದನು. ನಾನು ಲಾರಿಯ ಒಳಗೆ ಎಡಭಾಗದಲ್ಲಿ ಕುಳಿತುಕೊಂಡಿದ್ದು ಲಾರಿಯು ಉರುಳಿಕೊಂಡ ತಕ್ಷಣ ನಾನು ಒಳಗೆ ಇದ್ದ ರಾಡನ್ನು ಹಿಡಿದುಕೊಂಡಿದ್ದರಿಂದ ನನ್ನ ಕಾಲು ಮಾತ್ರ ಗ್ಲಾಸ್ ತಗುಲಿ ಎಡಕಾಲಿಗೆ ಸ್ವಲ್ಪ ಗಾಯವಾಗಿರುತ್ತದೆ. ಮತ್ತು ಮೈ ಕೈಗೆ ತರಚಿದ ಗಾಯವಾಗಿರುತ್ತದೆ. ಅನಂತನು ನಂಬರ್ ಎ.ಪಿ 02 X 8478 ರ ಲಾರಿಯನ್ನು ಬೆಂಗಳೂರು ಕಡೆಯಿಂದ ನಡೆಸಿಕೊಂಡು ಬರುತ್ತಿದ್ದಾಗ ಬೆಂಗಳೂರು ಮಧುಗಿರಿ ಬೈಪಾಸ್ ರಸ್ತೆಯಲ್ಲಿ ದಿನಾಂಕ 13/12/2019 ರಂದು ಬೆಳಗಿನ ಜಾವ 00:30 ಗಂಟೆಗೆ ತಿರುವಿನಲ್ಲಿ ಅಫಘಾತದಿಂದ ಲಾರಿಯು ಉರುಳಿಕೊಂಡು ಲಾರಿಯ ಕೆಳಗೆ ಚಾಲಕ ಅನಂತನು ಬಿದ್ದಿದ್ದರಿಂದ ಹೆಚ್ಚಿನ ಗಾಯಗಳಾಗಿ ಮೃತಪಟ್ಟಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
15. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.232/2019 ಕಲಂ.323-324-504 ರೆ/ವಿ 34 ಐ.ಪಿ.ಸಿ:-
ದಿನಾಂಕ 13-12-2019 ರಂದು ಪಿರ್ಯಾದಿ ರೂಮಾನ್ ಖಾನ್ ಬಿನ್ ಸಾಲಾರ್ ಖಾನ್ ಟಿಪ್ಪುನಗರ ಗೌರಿಬಿದನೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 08-12-2019 ರಂದು ನಗರ ಸಭೆ ಬೋರ್ ವೆಲ್ ಬಳಿ ಸ್ವಚ್ಛತೆ ಮಾಡುವ ವಿಚಾರವಾಗಿ ನಮಗೂ ಮತ್ತು ಇಮ್ರಾನ್ ಖಾನ್ ರವರಿಗೆ ಮಾತು ಕಥೆಗಳಿದ್ದು ಈ ಸಂಬಂದ ನಗರ ಪೊಲೀಸ್ ಠಾಣೆಯಲ್ಲಿ ಇಮ್ರಾನ್ ರವರು ದೂರು ನೀಡಿದ್ದು ತೀರ್ಮಾನ ಮಾಡಿಕೊಂಡು ಹೊಗಿದ್ದೆವು. ದಿನಾಂಕ 09-12-2019 ರಂದು ರಾತ್ರಿ ಸುಮಾರು 8:30 ಸಮಯದಲ್ಲಿ ಇಮ್ರಾನ್ ಖಾನ್ ಬಿನ್ ಅಲ್ಲಾಬಕಾಶ್ ಖಾನ್, ಅರ್ಶಿಯಾ ಖಾನಂ ಕೋಂ ಲೇಟ್ ಖಲಂದರ್ ಖಾನ್, ರೋಷನ್ ಬಿನ್ ಲೇಟ್ ರಷೀದ್, ನಜೀಯಾ ಕೋಂ ಚಾಂದ್ ಬಾಷ ರವರು ನಮ್ಮ ಮನೆಯ ಹತ್ತಿರ ಬಂದು ಗಲಾಟೆ ಮಾಡುತ್ತಿದ್ದರು ಆ ಸಮಯದಲ್ಲಿ ನಾನು ಪೇಟೆಯಿಂದ ಮನೆಯ ಬಳಿ ಬರುವಷ್ಟರಲ್ಲಿ ಮೇಲ್ಕಂಡ ನಾಲ್ಕು ಜನ ಜನರು ನನ್ನನ್ನ ಕೆಟ್ಟ ಮಾತುಗಳಿಂದ ನಿಮ್ಮ ತಾಯಿನ, ಹೆಂಡತಿ ಹಾಳು ಮಾಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಧನ ಕರುಗಳನ್ನು ಕಟ್ಟಿ ಹಾಕುವ ಜಾಗದಲ್ಲಿ ಸ್ವಚ್ಛ ಮಾಡಲು ನೀನು ಯಾರು ಬೋಳಿ ಮಗನೆ ಎಂದು ಬೈದು ಇಮ್ರಾನ್ ಖಾನ್ ನನ್ನನ್ನು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದು ಗಟ್ಟಿಯಾಗಿ ಹಿಡಿದುಕೊಂಡುನು ಆ ಸಮಯದಲ್ಲಿ ಅರ್ಶಿಯಾ ರವರು ನನ್ನ ಸೊಂಟದ ಎಡಭಾಗದಲ್ಲಿ ಬಾಯಿಯಿಂದ ಕಚ್ಚಿ ರಕ್ತ ಗಾಯ ಮಾಡಿದರು ಅದೇ ರೀತಿ ನಜೀಯಾ ರವರು ನನ್ನ ಬೆನ್ನಿನ ಮೇಲೆ ಬಾಯಿಯಿಂದ ಕಚ್ಚಿ ರಕ್ತಗಾಯ ಮಾಡಿರುತ್ತಾರೆ. ಹಾಗೂ ರೋಷನ್ ಹಾಗೂ ಇಮ್ರಾನ್ ಖಾನ್ ರವರು ನನ್ನನ್ನು ಕೆಳಗೆ ತಳ್ಳಿ ಕಾಲು ಕೈಗಳಿಂದ ಹೊಡೆದು ಮೂಗೇಟು ಉಂಟುಮಾಡಿರುತ್ತಾರೆ. ನಂತರ ಅಡ್ಡ ಬಂದ ನನ್ನ ತಂದೆ ಸಾಲಾರ್ ಖಾನ್ ರವರಿಗೂ ಸಹ ಹೊಡೆದಿರುತ್ತಾರೆ. ಈ ಗಲಾಟೆಯಿಂದ ಗಾಯಗೊಂಡ ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುತ್ತೇನೆ. ಈ ದಿನ ಆಸ್ಪತ್ರೆಯಿಂದ ಬಂದ ನಂತರ ನಮ್ಮ ಮನೆಯಲ್ಲಿ ಮಾತನಾಡಿ ತಡವಾಗಿ ಈ ದಿನ ದೂರು ನೀಡಿರುತ್ತೇನೆ. ನನ್ನ ಮೇಲೆ ಹಲ್ಲೆ ನಡೆಸಿ ಕೆಟ್ಟ ಮಾತುಗಳಿಂದ ಬೈದು ಬಾಯಿಯಿಂದ ಕಚ್ಚಿ ರಕ್ತಗಾಯ ಮಾಡಿದ ಇಮ್ರಾನ್, ಅರ್ಷಿಯಾ, ರೋಷನ್ ಮತ್ತು ನಜೀಯಾ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ.
16. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.105/2019 ಕಲಂ.87 ಕೆ.ಪಿ. ಆಕ್ಟ್:-
ದಿನಾಂಕ 12/12/2019 ರಂದು ಸಂಜೆ 5-00 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:12/12/2019 ರಂದು ಮದ್ಯಾಹ್ನ 03-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ರಾಚವಾರಪಲ್ಲಿ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ರಾಚವಾರಪಲ್ಲಿ ಗ್ರಾಮದ ಬಳಿ ಇರುವ ಸರ್ಕಾರಿ ಕೆರೆಯ ಪಕ್ಕದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಆಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ 1) ಶಂಕರ ಬಿನ್ ಚೌಡಪ್ಪ, 40 ವರ್ಷ, ಭೋವಿ ಜನಾಂಗ ಜಿರಾಯ್ತೀ, ಗ್ಯಾದವಾಂಡ್ಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು 2) ಆದಿ ನಾರಾಯಣ ಬಿನ್ ವೆಂಕಟರಾಯಪ್ಪ, 35 ವರ್ಷ, ಬೆಸ್ತರು, ಜಿರಾಯ್ತಿ, ರಾಚವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3) ಬಸವಯ್ಯ ಬಿನ್ ವಂಕಟಸ್ವಾಮಿ, 45 ವರ್ಷ, ಭೋವಿ ಜನಾಂಗ, ಜಿರಾಯ್ತಿ, ಗೊಟ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 4) ನರಸಿಂಹಪ್ಪ ಬಿನ್ ಸುಬ್ಬಣ್ಣ, 38 ವರ್ಷ, ನಾಯಕ ಜನಾಂಗ ಜಿರಾಯ್ತಿ ರಾಚವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 5)ಈಶ್ವರ ರೆಡ್ಡಿ ಬಿನ್ ಲೇಟ್ ಬೈಯ್ಯಪ್ಪ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಬೂದಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದರು. ಸ್ಥಳದಿಂದ ಇಬ್ಬರು ಓಡಿ ಹೋಗಿದ್ದು ಅವರುಗಳ ಹೆಸರು ವಿಳಾಸ ತಿಳಿಯಲಾಗಿ 06) ಬೈರೆಡ್ಡಿ ಬಿನ್ ಕೊಂಡರೆಡ್ಡಿ 32 ವರ್ಷ ವಕ್ಕಲಿಗರು,ಜಿರಾಯ್ತಿ ಗೊಟ್ಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು,07) ಶಿವ ಶಂಕರ ಬಿನ್ ಗಂಟ ವೆಂಕಟರವಣಪ್ಪ 30 ವರ್ಷ ಭೋವಿ ಜನಾಂಗ ಜಿರಾಯ್ತಿ ಗೊಟ್ಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಯಿತು., ನಂತರ ಸ್ಥಳದಲ್ಲಿದ್ದ ಮೇಲ್ಕಂಡ 01 ರಿಂದ 05 ರವರೆಗಿನ ಆಸಾಮಿಗಳನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ 2320/- ರೂ ನಗದು ಹಣವನ್ನು ಒಂದು ಹಳೆಯ ಪ್ಲಾಸ್ಟಿಕ್ ಚೀಲ, ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿಗಳು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ನೀಡಿದ ವರದಿ ಮೇರೆಗೆ ಠಾಣಾ ಎನ್.ಸಿ.ಆರ್ 60/2019 ರೀತ್ಯಾ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಘನ ನ್ಯಾಯಾಲಯದಿಂದ ಸಂಜ್ಞೆಯ ಪ್ರಕರಣವಾಗಿ ದಾಖಲಿಸಲು ಅನುಮತಿಯನ್ನು ಪಡೆದು ಠಾಣಾ ಮೊ. ಸಂ. 105/2019 ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.