ದಿನಾಂಕ :13/10/2020 ರ ಅಪರಾಧ ಪ್ರಕರಣಗಳು

  1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.20/2020 ಕಲಂ: 66(D) INFORMATION TECHNOLOGY  ACT 2000 & 420 ಐ.ಪಿ.ಸಿ:-

     ದಿನಾಂಕ: 12-10-2020 ರಂದು ರಾತ್ರಿ 7-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹರೀಶ್.ಎನ್ ಬಿನ್ ಪಿ. ನರಸಿಂಹರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡಂತೆ ವಾಸವಾಗಿದ್ದು, ನನ್ನ ಪತ್ನಿಯವರು ಹೆರಿಗೆಗಾಗಿ ಚಿಂತಾಮಣಿ ತಾಲ್ಲೂಕಿನ ಹನುಮಯ್ಯಗಾರಿಹಳ್ಳಿಗೆ ಹೋಗಿರುತ್ತಾರೆ.  ದಿನಾಂಕ:09/10/2020 ರಂದು ನನ್ನ ಪತ್ನಿ ಶ್ವೇತಾ.ಹೆಚ್.ಎಸ್ ರವರು ತನ್ನ ಮೊಬೈಲ್ ಸಂಖ್ಯೆ7760892532 ಯಿಂದ ಸಂಜೆ ನನಗೆ ಪೋನ್ ಮಾಡಿ ಈ ದಿನ ಬೆಳಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ 1]9748644497,2]7870184310,3] 8345015193, 4] 9091585625   ಮೊಬೈಲ್ ನಂಬರುಗಳಿಂದ  ಸ್ನಾಪ್ ಡೀಲ್ ಪ್ಲಸ್ ಪ್ರೈವೇಟ್ ಲಿಮಿಟೆಡ್  ಎಂತ ಪೋನ್ ಮಾಡಿ ಲಕ್ಕಿ ಡ್ರಾ ಲಾಟರಿಯಲ್ಲಿ ಕಾರ್ ಬಂದಿರುವುದಾಗಿ ತಿಳಿಸಿ ರಿಜಿಸ್ಟ್ರೇಷನ್ ಪೀ 90000/- ಕಳುಹಿಸಿಕೊಡಿ ಎಂತ ತಿಳಿಸಿದ್ದು ಅದರಂತೆ ನಾನು ನನ್ನ ಪೋನ್ ಪೇ ಖಾತೆ 7760892532ಸಂಖ್ಯೆಯಿಂದ ಅವರು ತಿಳಿಸಿದ ಪೋನ್ ಪೇ ಖಾತೆ ಸಂಖ್ಯೆ 7870184310 ಗೆ ಹಣವನ್ನು ಕಳುಹಿಸಲು ತಿಳಿಸಿದ್ದು ಅದರಂತೆ ನಾನು ನನ್ನ ಪೋನ್ ಪೇ ಖಾತೆಯಿಂದ ಮೊದಲಿಗೆ 1] ರೂ 7000, 2] 5000, 3] 5000, 4] 5000, 5] 13000, 6] 5600 ಮತ್ತು 7] 10000 ರೂ  ರಂತೆ ಒಟ್ಟು 50600/- ರೂಗಳನ್ನು ಮೇಲ್ಕಂಡ ಪೋನ್ ಪೇ ಖಾತೆಗೆ ಹಾಕಿರುತ್ತೇನೆ.  ನಂತರ ಪುನಃ 32400/- ರೂಗಳನ್ನು MR. GURUDEV SUNA A/C 34053218822 IFSC SBIN 0004702 ಗೆ ಕಳುಹಿಸಿಕೊಡಿ ಎಂತ ಪೋನ್ ಮಾಡಿ ತಿಳಿಸಿದರು. ನನ್ನ ಖಾತೆಯಲ್ಲಿ ಹಣ  ಇಲ್ಲದಿರುವುದರಿಂದ ನಾನು ಪುನಃ ಹಣವನ್ನು ಕಳುಹಿಸಿರುವುದಿಲ್ಲವೆಂತ ನನಗೆ ತಿಳಿಸಿದರು. ನಂತರ ನಾನು ನನ್ನ ಮೊಬೈಲ್ ಸಂಖ್ಯೆ:9900959412 ಯಿಂದ ಸದರಿಯವರಿಗೆ ಹಣವನ್ನು ಮರುಪಾವತಿ ಮಾಡುವಂತೆ 9748644497 ಗೆ ಪೋನ್ ಮಾಡಿ ಕೇಳಿದ್ದು  ಸದರಿಯವರು ಉಳಿದ ಹಣ 32400/- ರೂಗಳನ್ನು ಕಳುಹಿಸಿಕೊಡಿ ಪುನಃ ನಿಮ್ಮ ಹಣ ವಾಪಸ್ಸು ಕೊಡುವುದಾಗಿ ತಿಳಿಸಿದರು.  ನಂತರ ನಾನು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ತಿಳಿಸಿದಾಗ ಸೋಮವಾರ ಹಣವನ್ನು ಮರುಪಾವತಿ ಮಾಡುವುದಾಗಿ ತಿಳಿಸಿ ಇದುವರೆಗೂ ಹಣವನ್ನು ವಾಪಸ್ಸು ನೀಡದ ಕಾರಣ ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು ಸ್ನಾಪ್ ಡೀಲ್ ಪ್ಲಸ್ ಪ್ರೈವೇಟ್ ಲಿಮಿಟೆಡ್  ಎಂತ ಪೋನ್ ಮಾಡಿ ಲಕ್ಕಿ ಡ್ರಾ ನಲ್ಲಿ ಲಾಟರಿ ಬಂದಿರುವುದಾಗಿ ತಿಳಿಸಿ 50600/- ರೂಪಾಯಿಗಳನ್ನು ನನ್ನ ಪತ್ನಿಯವರಿಂದ ಪಡೆದು ಕಾರನ್ನು ನೀಡದೇ ಹಣವನ್ನು ನೀಡದೇ ಮೋಸ ಮಾಡಿರುವ ಮೇಲ್ಕಂಡ ಮೊಬೈಲ್ ಸಂಖ್ಯೆಯ ಬಳಕೆದಾರರನ್ನ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.373/2020 ಕಲಂ: ಮನುಷ್ಯ ಕಾಣೆ:-

     ದಿನಾಂಕ  13-10-2020 ರಂದು 12-00 ಗಂಟೆಗೆ ರವಿಶಂಕರ ರೆಡ್ಡಿ ಬಿನ್ ಸುಬ್ಬಿರೆಡ್ಡಿ.ಎ.ಆರ್, 52ವರ್ಷ, ವಕ್ಕಲಿಗರು, ಶಿಕ್ಷಕರು, ವಾಸ: ಆಂಜನೇಯಸ್ವಾಮಿ ದೇವಾಲಯ ಹತ್ತಿರ, ಬೂರಗಮಾಕಲಹಳ್ಳಿ ಗ್ರಾಮ, ಚಿಂತಾಮಣಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ಸರ್ಕಾರಿ ಶಿಕ್ಷಕರಾಗಿ ಕೆಲಸ  ಮಾಡಿಕೊಂಡಿ ವಾಸವಾಗಿರುತ್ತೇನೆ, ತಾನು ಚಿಂತಾಮಣಿ ತಾಲ್ಲೂಕು ಬೂರಗಮಾಕಲಹಳ್ಳಿ ಗ್ರಾಮದಲ್ಲಿ ಸುಮಾರು 20 ವರ್ಷಗಳಿಂದ ಸ್ವಂತ ಮನೆಯನ್ನು ಕಟ್ಟಿಕೊಂಡು ಬೂರಮಾಕಲಹಳ್ಳಿ ಗ್ರಾಮದಲ್ಲಿಯೇ ವಾಸವಾಗಿರುತ್ತೇವೆ, ತಮಗೆ ಒಬ್ಬನೇ ಗಂಡು ಮಗನಿದ್ದು, ತನ್ನ ಮಗನಾದ ಸೊಸ್ತೀಕ್ ಆರ್, ರವರು ಪಿಯುಸಿ ವ್ಯಾಸಂಗವನ್ನು ಮಾಡಿದ ನಂತರ ನೀಟ್ ಪರೀಕ್ಷೆಯನ್ನು ಬರೆದು ಮನೆಯಲ್ಲಿಯೇ ಇರುತ್ತಾನೆ, ನಂತರ ದಿನಾಂಕ:12/10/2020 ರಂದು ನೀಟ್ ಪರೀಕ್ಷೆಯ ಪಲಿತಾಂಶ ಬರುವುದಾಗಿ ತಿಳಿದಿದ್ದು, ತನ್ನ ಮಗನಾದ ಸೊಸ್ತೀಕ್ ರವರು ನೀಟ್ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬರಬಹುದು ಎಂದು ತಿಳಿದು, ಹಾಗೂ ಅಂಕಗಳು ಕಡಿಮೆ ಬಂದರೆ ತನ್ನನ್ನು ತನ್ನ ತಂದೆಯು ಬೈಯಬಹುದು ಎಂದು ತಿಳಿದು, ಭಯಬೀತನಾಗಿ ದಿನಾಂಕ:12/10/2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಊಲವಾಡಿ ಗ್ರಾಮದಲ್ಲಿ ಬ್ಯಾಂಕಿಗೆ ಹೋಗಿ ಬರುವುದಾಗಿ ತಿಳಿಸಿ ಕೆಎ-67 ಇ 1578 ಹೋಂಡಾ ಸ್ಕೂಟಿ ದ್ವಿಚಕ್ರ ಹೋದವನು ಮತ್ತೆ ಮನೆಗೆ ವಾಪಸ್ಸು ಬಂದಿರುವುದಿಲ್ಲಾ, ತನ್ನ ಮಗನಾದ ಸೊಸ್ತೀಕ್ ರವರನ್ನು ಎಲ್ಲಾ ಕಡೆಗಳಲ್ಲಿ ಹುಡುಕಲಾಗಿ ಮತ್ತು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲಾ, ತನ್ನ ಮಗ ಸೊಸ್ತೀಕ್ ರವರ ಮೊ.ನಂ: 8123456679/9663557039 ಆಗಿರುತ್ತೆ. ಆದ್ದರಿಂದ ಕಾಣೆಯಾಗಿರುವ ತನ್ನ ಮಗ ಸೊಸ್ತೀಕ್ ರವರನ್ನ ಪತ್ತೆ ಮಾಡಿಕೊಡಲು ಕೋರಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.374/2020 ಕಲಂ: 279,337 ಐ.ಪಿ.ಸಿ :-

     ದಿನಾಂಕ 13-10-2020 ರಂದು ಮದ್ಯಾಹ್ನ 1-00 ಗಂಟೆಗೆ ಮುನಿಯಪ್ಪ.ಪಿ ಬಿನ್ ಪೆರುಮಾಳ್, 51 ವರ್ಷ, ಪಳ್ಳಿಗ ಜನಾಂಗ, ಫೈನಾನ್ಸ್ ಕೆಲಸ, ಹಾಲೀ ವಾಸ 2-ನೇ ಕ್ರಾಸ್, ಗುಂಡಪ್ಪ ಲೇಔಟ್, ಚಿಂತಾಮಣಿ ಟೌನ್. ಸ್ವಂತ ಸ್ಥಳ ಶಿಂಗ್ಯಾರಕೊಟ್ಟೈ, ವೇಡಸಂದೂರ್ ತಾಲ್ಲೂಕು, ದಿಂಡಿಗಲ್ ಜಿಲ್ಲೆ, ತಮಿಳುನಾಡು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಪಿ.ಎಂ.ಎಸ್ ಫೈನಾನ್ಸ್ ಸರ್ವಿಸ್ ಎಂಬ ಹೆಸರಿನಲ್ಲಿ ಚಿಂತಾಮಣಿ ತಾಲ್ಲೂಕಿನಾದ್ಯಂತ ಫೈನಾನ್ಸ್ ನಡೆಸುತ್ತಿದ್ದು, ಈ ಫೈನಾನ್ಸ್ ನಲ್ಲಿ ಒಟ್ಟು 06 ಜನ ಕೆಲಸಗಾರರು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುತ್ತಾರೆ. ಇವರಲ್ಲಿ ಆಂಧ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಶಾಂತಿಪುರಂ ಬಳಿ ಇರುವ ಮಾದನಪಲ್ಲಿ ಗ್ರಾಮದ ವಾಸಿ ಆನಂದಕುಮಾರ್ ಬಿನ್ ವೆಂಕಟಮುನಿ ಮತ್ತು ಅದೇ ಆಂಧ್ರಪ್ರದೇಶದ ಕುಪ್ಪಂ ತಾಲ್ಲೂಕಿನ ಶಾಂತಿಪುರಂ ಬಳಿ ಇರುವ ಬುಕ್ಕಲಪಲ್ಲಿ ಗ್ರಾಮದ ವಾಸಿ ಅಶೋಕ್ ಬಿನ್ ವೆಂಕಟೇಶಪ್ಪ ರವರುಗಳು ಸಹ ಈಗ್ಗೆ ಸುಮಾರು ಒಂದು ವರ್ಷದಿಂದ ಕೆಲಸ ಮಾಡುತ್ತಿರುತ್ತಾರೆ. ಹೀಗಿರುವಾಗ ದಿನಾಂಕ:11/10/2020 ರಂದು ಮದ್ಯಾಹ್ನ ಸು.3-10 ಗಂಟೆಯ ಸಮಯದಲ್ಲಿ ಅಶೋಕ ತನಗೆ ಪೋನ್ ಮಾಡಿ ತಾನು ಮತ್ತು ಆನಂದಕುಮಾರ್ ರವರುಗಳು ಬರುತ್ತಿದ್ದ ಹೋಂಡಾ ಶೈನ್ ದ್ವಿಚಕ್ರವಾಹನಕ್ಕೆ ಕೈವಾರ ಕ್ರಾಸ್ ನಿಂದ ಸ್ವಲ್ಪ ಮುಂದೆ ಇರುವ ರೆಸಾಟರ್್ ಬಳಿ ರಸ್ತೆಯಲ್ಲಿ ಅಪಘಾತವಾಗಿದೆ ಇಬ್ಬರಿಗೂ ಗಾಯಗಳಾಗಿವೆ ಬೇಗ ಬನ್ನಿ ಎಂದು ಹೇಳಿದ. ನಂತರ ತಾನು ಅಲ್ಲಿಗೆ ಹೋಗುವಷ್ಟರಲ್ಲಿ ಗಾಯಾಳುಗಳಾದ ಆನಂದಕುಮಾರ್ ಮತ್ತು ಅಶೋಕ ಸ್ಥಳದಲ್ಲಿ ಇರಲಿಲ್ಲ. ಅವರ ಹೋಂಡಾ ಶೈನ್ ದ್ವಿಚಕ್ರವಾಹನ ನೋಂದಣಿ ಸಂಖ್ಯೆ:ಕೆಎ-67 ಇ-1848 ಸ್ಥಳದಲ್ಲಿ ರಸ್ತೆಯ ಬದಿಯಲ್ಲಿತ್ತು. ವಿಚಾರ ತಿಳಿಯಲಾಗಿ ಯಾರೋ ಸಾರ್ವಜನಿಕರು ಮೇಲ್ಕಂಡ ಇಬ್ಬರು ಗಾಯಾಳುಗಳನ್ನು ಉಪಚರಿಸಿ ಸ್ಥಳಕ್ಕೆ 108 ಆಂಬ್ಯೂಲೆನ್ಸ್ ವಾಹನವನ್ನು ಕರೆಸಿ ಸದರಿ ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿನ ಹಾಸ್ಮ್ಯಾಟ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಟ್ಟರೆಂತ ವಿಚಾರ ತಿಳಿಯಿತು.  ನಂತರ ತಾನು ಅದೇ ದಿನ ಬೆಂಗಳೂರಿನ ಹಾಸ್ಮ್ಯಾಟ್ ಆಸ್ಪತ್ರೆಗೆ ಹೋಗಿ ನೋಡಲಾಗಿ ಸದರಿ ಆಸ್ಪತ್ರೆಯಲ್ಲಿ ಗಾಯಾಳುಗಳ ಪೈಕಿ ಅಶೋಕ ಮಾತ್ರ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದ. ಆನಂದಕುಮಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೇ ದಿನ ಇಲ್ಲಿಂದ ಬೆಂಗಳೂರಿನ ಸೆಂಟ್ಜಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟರೆಂತ ಅಶೋಕ ತನಗೆ ತಿಳಿಸಿದ. ಆಗ ತಾನು ಗಾಯಾಳು ಅಶೋಕ ರವರನ್ನು ನಡೆದ ಘಟನೆಯ ಬಗ್ಗೆ ಕೇಳಲಾಗಿ ಈ ದಿನ ದಿನಾಂಕ:11/10/2020 ರಂದು ಮದ್ಯಾಹ್ನ ಸು.3-00 ಗಂಟೆಯ ಸಮಯದಲ್ಲಿ ತಾನು ಮತ್ತು ಆನಂದಕುಮಾರ್ ರವರುಗಳು ಹೋಂಡಾ ಶೈನ್ ದ್ವಿಚಕ್ರವಾಹನ ನೋಂದಣಿ ಸಂಖ್ಯೆ:ಕೆಎ-67 ಇ-1848 ರಲ್ಲಿ ಎಂದಿನಂತೆ ಸಂತೇಕಲ್ಲಹಳ್ಳಿ, ವೈಜಕೂರು, ತಳಗವಾರ ಗ್ರಾಮಗಳ ಕಡೆಗಳಲ್ಲಿ ಫೈನಾನ್ಸ್ ಕಲೆಕ್ಷನ್ ಮಾಡಿಕೊಂಡು ಚಿಂತಾಮಣಿಗೆ ವಾಪಸ್ಸು ಬರಲೆಂದು ಕೈವಾರ ಕ್ರಾಸ್ ಬಳಿ ಇರುವ ರೆಸಾರ್ಟ್ ಮುಂಭಾಗದ ರಸ್ತೆಯಲ್ಲಿ ಬರುತ್ತಿದ್ದಾಗ, ಆನಂದಕುಮಾರ್ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದು, ತಮ್ಮ ಮುಂಭಾಗದಲ್ಲಿ ಲಾರಿಯೊಂದು ಚಿಂತಾಮಣಿ ಕಡೆಗೆ ಹೋಗುತ್ತಿದ್ದು, ಆನಂದಕುಮಾರ್ ಚಿಂತಾಮಣಿಗೆ ಬೇಗ ಬರುವ ಆತುರದಲ್ಲಿ ಲಾರಿಯನ್ನು ಓವರ್ ಟೆಕ್ ಮಾಡಿ ಮುಂದೆ ಹೋಗಲೆಂದು ದ್ವಿಚಕ್ರವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು, ಅದೇ ಸಮಯಕ್ಕೆ ಎದುರುಗಡೆಯಿಂದ ಚಿಂತಾಮಣಿ ಕಡೆಯಿಂದ ಯಾವುದೋ ಗೂಡ್ಸ್ ವಾಹನ ಬಂದಿದ್ದು, ಆಗ ಆನಂದಕುಮಾರ್ ಗಾಬರಿಯಲ್ಲಿದ್ದು, ದ್ವಿಚಕ್ರವಾಹನ ಆತನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಮೋರಿಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ. ಈ ಅಪಘಾತದಿಂದ ತನಗೆ ಬಲಮೊಣಕಾಲಿಗೆ ರಕ್ತಗಾಯವಾಗಿದ್ದು, ಆನಂದಕುಮಾರನಿಗೆ ಕಾಲಿಗೆ ಮತ್ತು ತಲೆಗೆ ರಕ್ತಗಾಯಗಳಾಗಿರುತ್ತೆಂದು ವಿಚಾರ ತಿಳಿಸಿದ. ನಂತರ ನಾನು ಈ ವಿಚಾರವನ್ನು ಗಾಯಾಳುಗಳ ತಂದೆ-ತಾಯಿರವರಿಗೆ ತಿಳಿಸಿ, ಮೇಲ್ಕಂಡ ಇಬ್ಬರು ಗಾಯಾಳುಗಳು ಕ್ರಮವಾಗಿ ಬೆಂಗಳೂರಿನ ಹಾಸ್ಮ್ಯಾಟ್ ಮತ್ತು ಸೆಂಟ್ ಜಾನ್ಸ್ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇವರುಗಳ ಉಸ್ತುವಾರಿಯನ್ನು ನಾನೇ ನೋಡಿಕೊಳ್ಳುತ್ತಿದ್ದುದರಿಂದ ಈ ದಿನ ತಡವಾಗಿ ಠಾಣೆಗೆ ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ದ್ವಿಚಕ್ರವಾಹನದ ಸವಾರ ಆನಂದಕುಮಾರ್ ರವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕಾಗಿ ಕೋರಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.229/2020 ಕಲಂ: 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ: 12/10/2020 ರಂದು ಸಂಜೆ 18-15 ಗಂಟೆಗೆ ಪಿರ್ಯಾದಿದಾರರಾದ ಡಿ.ಎನ್ ಮಂಜುನಾಥ್ ಬಿನ್ ಕೆ ನಾರಾಯಣಪ್ಪ, 35 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಾಸ ದೊಡ್ಡಮಲ್ಲೇಕೆರೆ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:10/10/2020 ರಂದು ಬೆಳಿಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮಗಳಾದ ಸುಮಾರು 4 ವರ್ಷದ ಸಮೀಕ್ಷ ರವರು ನನ್ನ ಬಾಬತ್ತು ಕೆ.ಎ-51, ಎಕ್ಸ್-7444 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಹಾಗೂ ನಮ್ಮ ಮಾವ ವಿಜಯ್ ಕುಮಾರ್ ಬಿನ್ ದೊಡ್ಡಪ್ಪಯ್ಯ ಮತ್ತು ನಮ್ಮ ಅತ್ತೆ ನಂಜಮ್ಮ ರವರು ಒಂದು ದ್ವಿ ಚಕ್ರ ವಾಹನದಲ್ಲಿ ಮೈಲಗಾನಹಳ್ಳಿ ಗ್ರಾಮದ ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಬರಲು ಮೇಲ್ಕಂಡ ದ್ವಿ ಚಕ್ರ ವಾಹನದಲ್ಲಿ ತೊಂಡೇಬಾವಿ- ಕೊರಟಗೆರೆ ರಸ್ತೆಯಲ್ಲಿ ಬರುತ್ತಿರುವಾಗ ಮದ್ಯಾಹ್ನ ಸುಮಾರು 12-00 ಗಂಟೆಯಲ್ಲಿ ಪುಲಗಾನಹಳ್ಳಿ ಮತ್ತು ಅಲ್ಲೀಪುರ ಮಧ್ಯೆ ಇರುವ ಭರತ್ ಕ್ಲಿನಿಕ್ ಮುಂದೆ ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ತೊಂಡೇಬಾವಿ ಕಡೆಯಿಂದ ಬಂದ ಕೆ.ಎ-05, ಎಬಿ-7144 ನೊಂದಣಿ ಸಂಖ್ಯೆಯ ಬಲ್ಕರ್ ಲಾರಿಯ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಾನು ಮತ್ತು ನನ್ನ ಮಗಳು ಹೋಗುತ್ತಿದ್ದ ಕೆ.ಎ-51, ಎಕ್ಸ್-7444 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿ ಬಲ್ಕರ್ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು ದ್ವಿ ಚಕ್ರ ವಾಹನ ಜಖಂಗೊಂಡು ದ್ವಿ ಚಕ್ರ ವಾಹನ ಚಾಲನೆ ಮಾಡುತ್ತಿದ್ದ ನಾನು ಮತ್ತು ದ್ವಿ ಚಕ್ರ ವಾಹನದಲ್ಲಿದ್ದ ನನ್ನ ಮಗಳು ಸಮೀಕ್ಷಾ ರವರು ಕೆಳಗೆ ಬಿದ್ದು ಹೋಗಿದ್ದು ನನಗೆ ತಲೆಗೆ, ಮುಖಕ್ಕೆ ಕಾಲುಗಳಿಗೆ, ಗಾಯಗಳಾಗಿದ್ದು ನನ್ನ ಮಗಳು ಸಮೀಕ್ಷಳಿಗೆ ಮುಖಕ್ಕೆ, ಮೂಗಿಗೆ ಮತ್ತು ಎಡಕಾಲಿಗೆ ರಕ್ತಗಾಯವಾಗಿದ್ದು, ನಮ್ಮ ಹಿಂದೆ ಬರುತ್ತಿದ್ದ ನಮ್ಮ ಮಾವ ವಿಜಯ್ ಕುಮಾರ್ ಮತ್ತು ನಮ್ಮ ಅತ್ತೆ ನಂಜಮ್ಮ ರವರು ಗಾಯಗೊಂಡಿದ್ದ ನನ್ನನ್ನು ಮತ್ತು ನನ್ನ ಮಗಳನ್ನು ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಅಲ್ಲೀಪುರ ಗ್ರಾಮದ ಐಕೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಅಂಬೂಲೆನ್ಸ್ ನಲ್ಲಿ ನಾನು ಮತ್ತು ನನ್ನ ಮಗಳು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ನಂತರ ವೈದ್ಯರ ಸಲಹೆಯ ಮೇರೆಗೆ ಗೌರಿಬಿದನೂರು ಸೋಮೇಶ್ವರ ಆಸ್ಪತ್ರೆಗೆ ಸೇರಿ ಹೆಚ್ಚಿನ ಚಿಕಿತ್ಸೆ ಪಡೆದುಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಕೆ.ಎ-05, ಎಬಿ-7144 ನೋಂದಣಿ ಸಂಖ್ಯೆಯ ಬಲ್ಕರ್ ಲಾರಿಯ ಚಾಲಕನ ಮೇಲೆ ಕಾನೂ ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.66/2020 ಕಲಂ: 15(A),32(3) ಕೆ.ಇ  ಆಕ್ಟ್ :-

     ದಿನಾಂಕ 12-10-2020 ರಂದು ಸಂಜೆ 16-15 ಗಂಟೆಯ ಸಮಯದಲ್ಲಿ ಪಿಎಸ್ಐ ಸಾಃಎಬರು ಠಾಣೆಗೆ  ಮಾಲು , ಆರೋಪಿ ,ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ  ಸಾಹೇಬರು  ಇದೇ ದಿನ ಮದ್ಯಾಹ್ನ 14-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಅವರಿಗೆ ಬಂದ ಖಚಿತವಾದ ಮಾಹಿತಿ ಎನೆಂದರೆ  ಕುಪ್ಪಹಳ್ಳಿ ಗ್ರಾಮದಲ್ಲಿರುವ ಶ್ರೀನಿವಾಸ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ ತನ್ನ  ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು  ಮಾಹಿತಿಯಂತೆ ಠಾಣೆಯಲ್ಲಿದ್ದ ಸಿಬ್ಬಂದಿಯಾದ ಮಧುಸೂದನ ಮತ್ತು ಪ್ರಕಾಶ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕ ಪಾರೂಖ್ ರವರೊಂದಿಗೆ  ಹೊರಟು ಕುಪ್ಪಹಳ್ಳಿ ಗ್ರಾಮದ ಗೇಟಿನ ಬಳಿ ಇದ್ದಂತಹ  ಪಂಚರನ್ನು ಬರಮಾಡಿಕೊಂಡು  ಅವರುಗಳ ಸಮಕ್ಷಮದಲ್ಲಿ ಮದ್ಯಾಹ್ನ 14-30 ಗಂಟೆಗೆ  ಶ್ರೀನಿವಾಸ  ರವರ ಬಾಬತ್ತು  ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಕುಡಿಯುತ್ತಿದ್ದ  ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವನ ಹೆಸರು ವಿಳಾಸವನ್ನು ಕೇಳಲಾಗಿ  ಶ್ರೀನಿವಾಸ ಬಿನ್ ಲೇಟ್ ಗೋವಿಂದಪ್ಪ 46 ವರ್ಷ ಬಲಜಿಗರು ಚಿಲ್ಲರೆ ಅಂಗಡಿ ವ್ಯಾಪಾರ ನಂದಿ ಗ್ರಾಮ ,ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಅಂಗಡಿಯ  ಮುಂದೆ ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS WHISKY  ಹೆಸರಿನ  24 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ  35-13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-2 ಲೀಟರ್ 70 ML ಮದ್ಯವಿದ್ದು ಒಟ್ಟು ಬೆಲೆ 843 ರೂ ಆಗುತ್ತದೆ.,2) HAYWARDS CHEERS   WHISKY  ಹೆಸರಿನ ಮದ್ಯದ 5 ಖಾಲಿ ಟೆಟ್ರಾ ಪ್ಯಾಕೇಟುಗಳು 3) 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಇವುಗಳನ್ನು ತನ್ನ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಚಿಲ್ಲರೆ ಅಂಗಡಿ ಯಲ್ಲಿದ್ದ ಶ್ರೀನಿವಾಸ  ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲ  ತನ್ನ ಗ್ರಾಮ ನಂದಿ ಗ್ರಾಮವಾಗಿದ್ದು ಇದು ತನ್ನ ತಂಗಿಯಾದ ನಾಗಮಣಿ ರವರ ಚಿಲ್ಲರೆ ಅಂಗಡಿಯಾಗಿದ್ದು ತನ್ನ ತಂಗಿ ಇಲ್ಲದ ಕಾರಣ ತಾನು ನಂದಿ ಗ್ರಾಮದಿಂದ  ಬಂದು ಇಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ  ತಿಳಿಸಿದನು, ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 14-45 ಗಂಟೆಯಿಂದ 15-30 ಗಂಟೆ ವರೆವಿಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಂಗಡಿಯ  ಮಾಲೀಕ ಶ್ರೀನಿವಾಸ  ಮತ್ತು  ಸಿಕ್ಕ ಮಾಲುಗಳ ನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಫಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರವವರದಿ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.72/2020 ಕಲಂ: 15(A),32(3) ಕೆ.ಇ  ಆಕ್ಟ್ :-

     ದಿನಾಂಕ:13/10/2020 ರಂದು ಮದ್ಯಾಹ್ನ 01-30 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ.  ದಿನಾಂಕ:13/10/2020 ರಂದು ಬೆಳಗ್ಗೆ ಸುಮಾರು 09-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ರೇಚನಾಯಕನಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ನಾರೇಮದ್ದೇಪಲ್ಲಿ ಗ್ರಾಮದಲ್ಲಿ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-59 ರಲ್ಲಿ ನಾರೇಮದ್ದೇಪಲ್ಲಿ ಗ್ರಾಮದ ಮನೆಯ ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ ಮುಂಬಾಗದ ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು  ಓಡಿ ಹೋಗಿದ್ದು  ಮನೆಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು  ಹೆಸರು ವಿಳಾಸ ಕೇಳಲಾಗಿ  ವೆಂಕಟೇಶ ಬಿನ್ ವೆಂಕಟರವಣಪ್ಪ 35 ವರ್ಷ, ಪಿಚ್ಚಗುಂಟ್ಲ ಜನಾಂಗ, ವ್ಯಾಪಾರ ನಾರೇಮದ್ದೇಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು.  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  20  ಹೈ ವಾರ್ಡ್ಸ್  ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  700/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ,  ನಂತರ ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿಯನ್ನು ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ  72/2020  ಕಲಂ 15(ಎ) 32(3) ಕೆ,ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.278/2020 ಕಲಂ: 279,337,338 ಐ.ಪಿ.ಸಿ:-

     ದಿನಾಂಕ 12/10/2020 ರಂದು ಪಿರ್ಯಾದಿದಾರರಾದ ಶ್ರೀ ಹೆಚ್.ಎನ್ ಶಿವಪ್ಪ ಬಿನ್ ಲೇಟ್ ನಾರಾಯಣಪ್ಪ ವಾಸ-ಹೊಸಪೇಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 09/10/2020 ರಂದು ವಿಜಯಪುರ ಕಡೆಯಿಂದ ಹೊಸಪೇಟೆ ಗ್ರಾಮಕ್ಕೆ ತನ್ನ ದ್ವಿ ಚಕ್ರ ವಾಹನ ಸಂಖ್ಯೆ ಕೆಎ-01-ಯು-2482 ರಲ್ಲಿ ಚಲಿಸುತ್ತಿದ್ದಾಗ ಜಂಗಮಕೋಟೆ ಕ್ರಾಸ್ ಕಡೆಯಿಂದ ಟಿಎನ್-52-ಡಬ್ಲ್ಯೂ-1415 ಎಂಬ ಸಂಖ್ಯೆಯ ಲಾರಿ ಭದ್ರನಕೆರೆಯ ಕಟ್ಟೆಯ ಮಾರ್ಗದಲ್ಲಿ ಬಂದು ತನ್ನ ಚಲಿಸುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾನು ಕೆಳಗೆ ಬಿದ್ದ ಪರಿಣಾಮ ತನ್ನ ಮೂಗಿಗೆ, ಬಾಯಿಗೆ ಏಟು ಬಿದ್ದು 2 ಹಲ್ಲುಗಳು ಮುರಿದಿದೆ. ಬಲಭಾಗದ ಮುಖದ ಕೆನ್ನೆಗೆ ಗಾಯಗಳಾಗಿದ್ದು, ಬಲಕಾಲಿನ ಹಿಮ್ಮಡಿಗೆ ಪೆಟ್ಟು ಬಿದ್ದು ನಡೆಯಲು ಸಹ ಆಗುವುದಿಲ್ಲ. ಆದ್ದರಿಂದ ತನಗೆ ಅಪಘಾತ ಮಾಡಿರುವ ಲಾರಿಯ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳ ಬೇಕು, ಅಪಘಾತವಾಗಿ 3 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಇಂದು ತಡವಾಗಿ ಬಂದು ದೂರನ್ನು ನೀಡಿರುವುದ್ದಾಗಿರುತ್ತದೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.280/2020 ಕಲಂ: 323,341,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 13-10-2020 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ಫಿರ್ಯಾದಿದಾರರಾದ ಎಂ. ಶ್ರೀನಿವಾಸ ಬಿನ್ ಲೇಟ್ ಮುನಿಯಪ್ಪ, 49 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಕೆಂಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಮತ್ತು ಮೂಲತಃ ತಮ್ಮ ಗ್ರಾಮದ ಹಾಲಿ ಮಲ್ಲಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಬಚ್ಚರೆಡ್ಡಿ ಬಿನ್ ಮುನಿಸೊಣ್ಣಪ್ಪ ರವರಿಗೆ ಹಣಕಾಸಿನ ವಿಚಾರದಲ್ಲಿ ವಿವಾದಗಳಿದ್ದು ಈಗ್ಗೆ 4-5 ತಿಂಗಳುಗಳ ಹಿಂದೆ ನಮಗೆ ಮತ್ತು ಬಚ್ಚರೆಡ್ಡಿ ರವರಿಗೆ ಹಣಕಾಸಿನ ವಿಚಾರದಲ್ಲಿ ಗಲಾಟೆಗಳಾಗಿದ್ದು ಎರಡೂ ಕಡೆಯ ಹಿರಿಯರು ಮಾತನಾಡಿ ಪರಸ್ಪರ ರಾಜಿ ಮಾಡಿಸಿದ್ದು ನಾವು ಯಾವುದೇ ದೂರು ವಗೈರೆ ನೀಡಿರುವುದಿಲ್ಲ, ಹೀಗಿದ್ದು ದಿನಾಂಕ: 10-10-2020 ರಂದು ಬೆಳಿಗ್ಗೆ ಸುಮಾರು 8.30 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದಿಂದ ಅಬ್ಲೂಡು ಗ್ರಾಮಕ್ಕೆ ಬರುವ ಚಾಗೆ ಮುರಳಿ ರವರ ತೋಟದ ಸಮೀಪ ತಾನು ತಮ್ಮ ತೋಟದ ಕಡೆಗೆ ಹೋಗುತ್ತಿದ್ದಾಗ ಮಲ್ಲಹಳ್ಳಿ ಗ್ರಾಮದ ಬಚ್ಚರೆಡ್ಡಿ ಬಿನ್ ಮುನಿಸೊಣ್ಣಪ್ಪ ಮತ್ತು ಅವರ ಬಾಮೈದನಾದ ನರೇಂದ್ರ @ ನವೀನ್ ಎಂಬುವರು ತನ್ನನ್ನು ಅಡ್ಡಗಟ್ಟಿ ಏ ಲೋಪರ್ ನನ್ನ ಮಗನೇ ನೀನು ನನ್ನನ್ನು ಏನೂ ಮಾಡಲು ಆಗುವುದಿಲ್ಲ, ನಿಮ್ಮ ಅಣ್ಣ ತಮ್ಮಂದಿರ ಮೇಲೆ ನಾನು ಈಗಾಗಲೇ ಶಿಡ್ಲಘಟ್ಟ ಪೊಲಿಸ್ ಠಾಣೆಯಲ್ಲಿ ದೂರು ನೀಡಿ ಕೇಸ್ ಹಾಕಿಸಿದ್ದೇನೆ, ಇನ್ನು ಮುಂದೆ ನೀವೇನಾದರೂ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಮತ್ತು ನಿಮ್ಮ ಅಣ್ಣ-ತಮ್ಮಂದಿರನ್ನು ಪ್ರಾಣ ತೆಗೆಯದೆ ಬಿಡುವುದಿಲ್ಲ ಎಂದು ಕೈಗಳಿಂದ ಹೊಡೆದಿದ್ದು, ಆಗ ಬಚ್ಚರೆಡ್ಡಿ ರವರ ಬಾಮೈದ ನರೇಂದ್ರ @ ನವೀನ್ ರವರು ಸಹ ತನ್ನನ್ನು ಕೈಗಳಿಂದ ಹೊಡೆದು ಲೋಪರ್ ನನ್ನ ಮಕ್ಕಳೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ನೀವೇನಾದರೂ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಇಲ್ಲಿಯೇ ಮುಗಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿದ್ದು, ತನ್ನನ್ನು ಇಬ್ಬರೂ ಸೇರಿಕೊಂಡು ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿ ಕಾಲಿನಲ್ಲಿ ಒದ್ದಿದ್ದು, ತನಗೆ ಮೂಗೇಟುಗಳಾಗಿರುತ್ತದೆ, ಅಷ್ಟರಲ್ಲಿ ತಮ್ಮ ಗ್ರಾಮದ ಮುನಿರಾಮಪ್ಪ ಬಿನ್ ನಾಗಪ್ಪ ರವರು ಬಂದು ಗಲಾಟೆ ಬಿಡಿಸಿ ಇಬ್ಬರಿಗೂ ಬುದ್ದಿವಾದ ಹೇಳಿದ್ದು, ಆ ಸಮಯದಲ್ಲಿ ತಮ್ಮ ಗ್ರಾಮದ ಹಿರಿಯರು ಇಬ್ಬರಿಗೂ ರಾಜಿ ಮಾಡುವುದಾಗಿ ಹೇಳಿದ್ದು ಮೇಲ್ಕಂಡವರು ಇದುವರೆಗೂ ರಾಜಿಗೆ ಬರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಹಳೆ ವೈಶಮ್ಯಗಳ ಹಿನ್ನೆಲೆಯಲ್ಲಿ ನನ್ನನ್ನು ಅಡ್ಡಗಟ್ಟಿ ಕೈಗಳಿಂದ ಹೊಡೆದು ಕಾಲಿನಲ್ಲಿ ಒದ್ದು ಗಾಯಗೊಳಿಸಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.