ದಿನಾಂಕ : 13/10/2019ರ ಅಪರಾಧ ಪ್ರಕರಣಗಳು

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ. 82/2019 ಕಲಂ. 380-457 ಐ.ಪಿ.ಸಿ:-

     ದಿನಾಂಕ:12/10/2019 ರಂದು ರಾತ್ರಿ 8-00 ಗಂಟೆಗೆ  ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ,   ಪಿರ್ಯಾದಿದಾರರು  ಬಾಬತ್ತು ನಿಮ್ಮಕಾಯಲಪಲ್ಲಿ ಗ್ರಾಮದ  ಸರ್ವೇ ನಂ 62 ರಲ್ಲಿ  4 ಎಕರೆ 16 ಗುಂಟೆ ಜಮೀನುಯಿದ್ದು ಸದರಿ ಜಮೀನಿನಲ್ಲಿ  ಕೊಳವೆ ಬಾವಿಯಿದ್ದು  ಸದರಿ ಕೊಳವೆ ಬಾವಿಯಿಂದ ಟೆಕ್ಸ್ ಮೋ ಸಬ್ ಮರ್ಸಿಬಲ್ 10-12 HP ಮೋಟರ್ ಪಂಪ್ ಮೂಲಕ ಜಮೀನಿಗೆ ನೀರನ್ನು ಹಾಯಿಸುತ್ತಿದ್ದು, ಸದರಿ ಜಮೀನಿನಲ್ಲಿ ಮೋಟಾರ್ ಪಂಪ್  ಮತ್ತು ಕೃಷಿ ಪರಿಕರಗಳನ್ನು ಇಟ್ಟುಕೊಳ್ಳಲು   ಶೆಡ್ ನಿರ್ಮಾಣ  ಮಾಡಿಕೊಂಡಿದ್ದು, ಕೊಳವೆ ಬಾವಿಯಲ್ಲಿ ನೀರು ಇಲ್ಲದ  ಕಾರಣ  ಸದರಿ ಮೋಟಾರ್ ಪಂಪ್ , ಪ್ಯಾನಲ್ ಬೋರ್ಡ್ ಮತ್ತು ಕೇಬಲ್ ವೈರ್ ನ್ನು ಶೆಡ್ ನಲ್ಲಿ ಇಟ್ಟಿದ್ದು ಪಿರ್ಯಾದಿದಾರರು  ಎಂದಿನಂತೆ ದಿನಾಂಕ:15/08/2019 ರಂದು ಬೆಳಗ್ಗೆ 06:00 ಗಂಟೆಗೆ ಜಮೀನಿನ ಬಳಿ ಹೋಗಿ ನೋಡಲಾಗಿ ಯಾರೋ ಕಳ್ಳರು  ಹಿಂದಿನ ದಿನ ರಾತ್ರಿ ವೇಳೆಯಲ್ಲಿ ಶೆಡ್ಡ್ ನ ಬೀಗ ಮುರಿದು ಟೆಕ್ಸ್ ಮೋ   ಮೋಟಾರ್ ಪಂಪ್ , ಕೇಬಲ್ ವೈರ್ , ಪ್ಯಾನಲ್ ಬೋರ್ಡ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇದರಿಂದಾಗಿ ತನಗೆ  57,120/- ರೂಪಾಯಿಗಳಷ್ಟು ನಷ್ಟವಾಗಿರುತ್ತೆ.  ತನ್ನ ಮೋಟಾರ್ ಪಂಪ್ ಕಳ್ಳತನ ಆಗಿರುವ ಬಗ್ಗೆ ನಿಮ್ಮಕಾಯಲಪಲ್ಲಿ ಗ್ರಾಮದ ರಾಜು ಬಿನ್ ಮೀಸಾಲು ವೆಂಕಟರವಣ ಎಂಬುವವರ ಮೇಲೆ ಗುಮಾನಿಯಿರುತ್ತೆ. ಎಂದು ಈ  ದಿನ ದಿನಾಂಕ 12/10/2019 ರಂದು ರಾತ್ರಿ 8-00 ಗಂಟೆಗೆ  ತಡವಾಗಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಪಡೆದು ಠಾಣಾ ಮೊ.ಸಂಖ್ಯೆ:82/2019 ಕಲಂ:457,380 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 288/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 12/10/2019 ರಂದು ಸಂಜೆ 06.20 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 12/10/2019 ರಂದು ಸಂಜೆ 06.10 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗಿಡ್ನಹಳ್ಳಿ ಗ್ರಾಮದ  ಮುನಿಶಾಮಪ್ಪ ಬಿನ್ ಮುಸಲಪ್ಪ, 50 ವರ್ಷ, ನಾಯಕರು ಗಿಡ್ನಹಳ್ಳಿ ಗ್ರಾಮ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 289/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 12/10/2019 ರಂದು ಸಂಜೆ 07.50 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 12/10/2019 ರಂದು ಸಂಜೆ 07.40 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಸೊಸೇಪಾಳ್ಯ ಗ್ರಾಮದ  ಜೋಸೆಪ್ ಬಿನ್ ಲೇಟ್ ಆಂತೋಣಿಯಪ್ಪ, 49 ವರ್ಷ, ಕ್ರಿಶ್ಚಿಯನ್ನರು, ಸೊಸೇಪಾಳ್ಯ ಗ್ರಾಮ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 290/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 12/10/2019 ರಂದು ರಾತ್ರಿ 08.45 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 12/10/2019 ರಂದು ರಾತ್ರಿ 08.35 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಗಿಡ್ನಹಳ್ಳಿ ಗ್ರಾಮದ  ರಾಜಣ್ಣ ಬಿನ್ ಮುನಿಯಪ್ಪ, 45 ವರ್ಷ, ಪ ಜಾತಿ, ಗಿಡ್ನಹಳ್ಳಿ ಗ್ರಾಮ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 291/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 12/10/2019 ರಂದು ರಾತ್ರಿ 09.40 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 12/10/2019 ರಂದು ರಾತ್ರಿ 09.30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮುಸ್ಟೂರು ಗ್ರಾಮದ  ಶ್ರೀನಿವಾಸ ಬಿನ್ ಲೇಟ್ ಮುನಿಯಪ್ಪ, 38 ವರ್ಷ, ಆದಿಕರ್ನಾಟಕ, ಆಟೋಚಾಲಕ ವೃತ್ತಿ, ಮುಸ್ಟೂರು ಗ್ರಾಮ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 292/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 13/10/2019 ರಂದು ಬೆಳಿಗ್ಗೆ 10.40 ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 13/10/2019 ರಂದು ಬೆಳಿಗ್ಗೆ 10.30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಂಚನಬಲೆ ಗ್ರಾಮದ  ರಾಮಪ್ಪ ಬಿನ್ ಲೇಟ್ ವೆಂಕಟರಾಯಪ್ಪ, 65 ವರ್ಷ, ಆದಿಕರ್ನಾಟಕ, ಕೂಲಿ ಕೆಲಸ, ಮಂಚನಬಲೆ ಗ್ರಾಮ ರವರು, ಅವರ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 379/2019 ಕಲಂ. 324-506 ಐ.ಪಿ.ಸಿ & 3(1)(r),3(1)(s) The SC & ST (Prevention of Atrocities) Amendment Act:-

     ದಿನಾಂಕ: 12/10/2019 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ  ಪಿರ್ಯಾದಿದಾರರಾದ ಕೆ.ಹೆಚ್ ಶಿವಣ್ಣ ಬಿನ್ ಹನುಮಂತಪ್ಪ, 38 ವರ್ಷ, ಆದಿ ಕರ್ನಾಟಕ, ಅಂಬೇಡ್ಕರ್ ನಗರ, ಕೈವಾರ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 11/10/2019 ರಂದು ಬೆಳಗ್ಗೆ 10.00 ಗಂಟೆಯಲ್ಲಿ ತನ್ನ ತಂದೆ ಹನುಮಪ್ಪ, 65 ವರ್ಷ ರವರು ಕೂಲಿ ಕೆಲಸಕ್ಕೆಂದು ಕೈವಾರ ಕ್ರಾಸ್ ಗೆ ಹೋಗಿದ್ದಾಗ ಮಾರಪ್ಪನಹಳ್ಳಿ ಗ್ರಾ,ಮದ ವಾಸಿಯಾದ ಎನ್. ನಾಗೇಶ್ ಬಿನ್ ನಾರಾಯಣಸ್ವಾಮಿ, 36 ವರ್ಷ, ವಕ್ಕಲಿಗರು, ಜೀರಾಯ್ತಿ, ರವರು ತನ್ನ ತಂದೆ ಬಳಿ ಬಂದು ವಿನಾ ಕಾರಣ ಹಣಕ್ಕಾಗಿ ಗಲಾಟೆ ಮಾಡಿ ಜಾತಿ ನಿಂದನೆ ಮಾಡಿ ಬೈದಿದ್ದು, ತನ್ನ ತಂದೆ ಹಣ ಕೊಡಲು ನಿರಾಕರಿಸಿದಾಗ ತನ್ನ ತಂದೆಯನ್ನು ಕುರಿತು ಕಮ್ಮಿ ಜಾತಿ ನನ್ನ ಮಗನೇ ಎಂದು ಬೈದು ಹಣವನ್ನು ಕಸಿಯಲು ಪ್ರಯತ್ನ ಪಟ್ಟಾಗ ತನ್ನ ತಂದೆ  ಅವನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು, ಆ ಸಮಯದಲ್ಲಿ ಅಲ್ಲಿಯೇ ಇದ್ದ ಟಮೋಟ ಕಟ್ಟಿಗೆಯವನ ಬಳಿ ಇದ್ದ ಮಚ್ಚಿನಿಂದ ತನ್ನ  ತಂದೆಯ ತಲೆಗೆ ಹೊಡೆದು ಗಾಯಪಡಿಸಿದ್ದು, ಈ ಸಮಯದಲ್ಲಿ ಕೈವಾರ ಗ್ರಾಮದ ಗಣೇಶ. ಎ ಬಿನ್ ಆಂಜಪ್ಪ ರವರು ನನಗೆ ದೂರವಾಣಿ ಕರೆ ಮಾಡಿ ವಿಷಯವನ್ನು ತಿಳಿಸಿರುತ್ತಾರೆ. ಆಗ ತಾನು ಅಲ್ಲಿಗೆ ಹೋಗಿ ತನ್ನ ತಂದೆಗೆ ಕೈವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿ ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಗೆ ದಾಖಲು ಮಾಡಿರುತ್ತೇನೆ.  ನಂತರ  ಈ ದಿನ ದಿನಾಂಕ:12/10/2019 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ  ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಮೇಲ್ಕಂಡ ನಾಗೇಶ್ ರವರು  ತನ್ನನ್ನು ಕುರಿತು ನಿಮ್ಮ ತಂದೆಗೆ ಪೂಜೆ ಆಗಿದೆ ಇನ್ನು ನಿನಗೆ ಕೈಕಾಲು ಕತ್ತರಿಸುತ್ತೇನೆಂದು ಪ್ರಾಣ ಬೆದರಿಕೆ ಹಾಕಿ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿರುತ್ತಾನೆ. ಇದುವರೆಗೂ ತಾನು ತಮ್ಮ ತಂದೆಯವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದುದರಿಂದ ಈ ದಿನ ಬಂದು ತಡವಾಗಿ ದೂರನ್ನು ನೀಡುತ್ತಿರುತ್ತೇನೆ. ಆದ್ದರಿಂದ ಮೇಲ್ಕಂಡ ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.172/2019 ಕಲಂ. 143-147-323-324-448-504-506 ರೆ/ವಿ 149 ಐ.ಪಿ.ಸಿ:-

     ಈ  ದಿನ ದಿನಾಂಕ 13/10/2019 ರಂದು ಫಿರ್ಯಾದಿದಾರರಾದ ಚಿನ್ನಪ್ಪ ಬಿನ್ ಲೇಟ್ ಹನುಮಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ತನಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೇ ಮುರಳಿ, ಎರಡನೇ ಮುನಿಯಪ್ಪ ಎಂಬುರಾಗಿರುತ್ತಾರೆ. ಈಗ್ಗೆ ಸುಮಾರು 2 ತಿಂಗಳ ಹಿಂದೆ ತನ್ನ ಮಗನಾದ ಮುರಳಿ ತಮಗೆ ತಿಳಿಯಂದತ್ತೆ ತಮ್ಮ ಗ್ರಾಮದ ವಾಸಿಯಾದ ಶಿವಪ್ಪನ ಮಗಳಾದ ರಾಣಿ ಎಂಬಾಕೆಯನ್ನು ಕರೆದುಕೊಂಡು ಹೋಗಿ ಎಲ್ಲಿಯೋ ಮದುವೆಮಾಡಿಕೊಂಡು ಬಂದಿದ್ದು ಈ ವಿಚಾರದಲ್ಲಿ ತಮ್ಮ ಗ್ರಾಮದ ಹಿರಿಯರೆಲ್ಲಾ ಸೇರಿ ಪಂಚಾಯ್ತಿಮಾಡಿ ತನ್ನ ಮಗ ಮುರಳಿ ಮತ್ತು ಆತನ ಹೆಂಡತಿ ಬೇರೆಯಾಗಿ ವಾಸವಾಗಿರುವಂತ್ತೆ ತಿಳಿಸಿರುತ್ತಾರೆ. ಅದರಂತ್ತೆ ತಾನು ತನ್ನ ಹೆಂಡತಿ ಚಿನ್ನಮ್ಮ, ತನ್ನ ಎರಡನೇ ಮಗ ಮುನಿಯಪ್ಪ ರವರು ಒಂದು ಮನೆಯಲ್ಲಿ ತನ್ನ ದೊಡ್ಡಮಗ ಮುರಳಿ ಮತ್ತು ಆತನ ಹೆಂಡತಿ ರಾಣಿ ರವರು ಮತ್ತೊಂದು ಮನೆಯಲ್ಲಿ ವಾಸವಾಗಿದ್ದು ತಾನು ತನ್ನ ಮಗನನ್ನು ಬೇರೆ ಇಟ್ಟಿರುವ ವಿಚಾರದಲ್ಲಿ ತನ್ನ ಮಗ ಮರುಳಿ ಮತ್ತು ತನ್ನ ಮಗನ ಹೆಂಡತಿಯ  ತಂದೆ ಶಿವಪ್ಪ ರವರು ತಮ್ಮ ಮೇಲೆ ದ್ವೇಶವನ್ನು ಬೆಳೆಸಿಕೊಂಡಿರುದ್ದರು ಹೀಗಿರುವಲ್ಲಿ ದಿನಾಂಕ 02/10/2019 ರಂದು ತಾನು ಮನೆಯಲ್ಲಿದ್ದಾಗ ಮಧ್ಯಾಹ್ನ ಸುಮಾರು 2-00 ಗಂಟೆ ಸಮಯದಲ್ಲಿ ತನ್ನ ದೊಡ್ಡ ಮಗ ಮುರಳಿ, ಆತನ ಹೆಂಡತಿ ರಾಣಿ, ತನ್ನ ದೊಡ್ಡಮಗನ ಮಾವ ಶಿವಪ್ಪ, ಶಿವಪ್ಪನ ಮಗ ಬಾಲಾಜಿ, ಶಿವಪ್ಪನ ಹೆಂಡತಿ ಗುರಮ್ಮ ಮತ್ತು ಗಂಗರಾಜ ಬಿನ್ ರಾಮಾಂಜಿನಪ್ಪ ರವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ತಮ್ಮ ಮನೆಯ ಬಾಗಿಲನ್ನು ಕಲ್ಲುಗಳಿಂದ ಹೊಡೆದು  ತಮ್ಮ ಮನೆಯ ಒಳಗೆ ಅಕ್ರಮ ಪ್ರವೇಶಮಾಡಿ ಶಿವಪ್ಪ ತನ್ನನ್ನು ಕುರಿತು ಲೋಪರ್ ನನ್ನ ಮಗನೆ ನಿನ್ನಮ್ಮನೇ ಕೇಯ ಮುರಳಿಯನ್ನು ಬೇರೆಯಾಗಿ ಇಡುತ್ತಿಯ ಎಂದು ಅವಾಚ್ಯವಾಗಿ ಬೈದು ಎಲ್ಲರೂ ಸೇರಿಕೊಂಡು ತನ್ನನ್ನು ಕೈಗಳಿಂದ ಹೊಡೆದು ಕಾಲುಗಳಿಂದ ಒದ್ದಿದ್ದು. ತನ್ನ ಮಗನಾದ ಮುರಳಿ ಅಲ್ಲಿಯೇ ಬಿದಿದ್ದ ಒಂದು ದೊಣ್ಣೆಯನ್ನುತೆಗೆದುಕೊಂಡು ತನ್ನ ಮೈ ಕೈ ಮೇಲೆ ಹೊಡೆದು ಗಾಯಗಳನ್ನು ಉಂಟುಮಾಡಿಮಾಡಿದ್ದು. ನಂತರ ಎಲ್ಲರೂ ಸೇರಿಕೊಂಡು ತನ್ನನ್ನು ಕುರಿತು ಲೋಪರ್ ನನ್ನ ಮಗನೆ ನೀನೇನಾದರು ಮುರಳಿಯ ತಂಟೆಗೆ ಹೋದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದ್ದು ಈ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳು ಕೋರಿ ನೀಡಿರುವ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.438/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:11/10/2019 ರಂದು ಸಂಜೆ 4-30   ಗಂಟೆಯಲ್ಲಿ ಶ್ರೀ.ಮೋಹನ್ .ಎನ್ ಪಿ.ಎಸ್.ಐ , ಗೌರೀಬಿದನೂರು ಗ್ರಾಮಾಂತರ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಮದ್ಯಾಹ್ನ 3-00 ಗಂಟೆಯಲ್ಲಿ ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ಹುಣಸೇನಹಳ್ಳಿ   ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ- 20 ಶ್ರೀನಿವಾಸರೆಡ್ಡಿ ,  ಪಿ.ಸಿ. 335  ಮಹಂತೇಶ್ ಸಜ್ಜನ್   ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಮದ್ಯಾಹ್ನ 3-15   ಗಂಟೆಯಲ್ಲಿ ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ಹುಣಸೇನಹಳ್ಳಿ   ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಸಂದೀಪ್ ಬಿನ್  ರಾಮಾಂಜಿಪ್ಪ,  20 ವರ್ಷ, ನಾಯಕರು, ಗಾರ್ಮೆಂಟ್ಸ್ ನಲ್ಲಿ ಕೆಲಸ,  ವಾಸ ಸಂತೆ ಬಿದನೂರು ಗ್ರಾಮ, ಹಿಂದೂಪುರ ತಾಲ್ಲೂಕು ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 260-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಹರೀಶ್ ಬಿನ್ ಲೆಟ್ ಹನುಮಂತಪ್ಪ,ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 2600-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 3-15   ಗಂಟೆಯಿಂದ 3-45 ಗಂಟೆಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ಸಂಜೆ 4-30   ಗಂಟೆಗೆ ಬಂದು  ಮುಂದಿನ ಕ್ರಮಕ್ಕಾಗಿ  ನನ್ನ ವಶಕ್ಕೆ ನೀಡಿ, ಕಾನೂನು ಕ್ರಮ ಜರುಗಿಸಲು ನನ್ನ ವಶಕ್ಕೆ ನೀಡಿ, ದೂರಿನ ಮೂಲಕ  ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.97/2019 ಕಲಂ. 323-504 ಐ.ಪಿ.ಸಿ:-

     ಘನ ನ್ಯಾಯಾಲಯದಲ್ಲಿ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ನಿವೇದಿಸಿಕೊಳ್ಳುವುದೇನೆಂದರೆ  ದಿನಾಂಕ 13-10-2019 ರಂದು ಘನ ನ್ಯಾಯಾಲಯದ ಕರ್ತವ್ಯದ ಪೇದೆ ಪಿಸಿ 174 ರವರು ಘನ ನ್ಯಾಯಲಯದಿಂದ ಪ್ರಕರಣವನು ದಾಖಲಿಸಿಕೊಳ್ಳಲು ಅನುಮತಿಯನ್ನು ಪಡೆದು ಬಂದು ಹಾಜರು ಪಡೆಸಿದರ ಸಾರಾಂಶವೆಂದರೆ   ದಿನಾಂಕ 07-10-2019 ರಂದು ಎ ಎಸ್ ಐ ವೆಂಕಟರವಣಪ್ಪ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪಿರ್ಯಾದಿಯ ಹೇಳಿಕೆಯನ್ನು ಪಡೆದು ಬಂದು ನೀಡಿದ ಸಾರಾಂಶವೇಂದರೆ ಶ್ರೀ ಚೌಡಪ್ಪ ಬಿನ್ ರಾಮನ್ನ 30 ವರ್ಷ ಆದಿ ದ್ರಾವಿಡ ಜನಾಂಗ,ಜಿರಾಯ್ತಿ ವಾಸ ಜೂಲಪಾಳ್ಯ ಗ್ರಾಮ  ಬಾಗೇಪಲ್ಲಿ ತಾಲ್ಲೂಕುರವರು  ದಿನಾಂಕ 07-10-2019 ರಂದು ಬೆಳಿಗ್ಗೆ ಸುಮಾರು 10-45 ಗಂಟೆ ಸಮಯದಲ್ಲಿ ನಮ್ಮ ಗ್ರಾಮದಲ್ಲಿ ನಮ್ಮ ಮನೆಯೆ ಪಕ್ಕದಲ್ಲಿ ಖಾಲಿ ಜಾಗದಲ್ಲಿ ನಮ್ಮ ಗ್ರಾಮದ ವಾಸಿಯಾದ ನಾರಾಯಣಪ್ಪ ರವರು ಪಾಯ ಕೆಲಸ ಮಾಡುತ್ತಿದ್ದು ನಮ್ಮ ಮನೆಯ ಪಕ್ಕದಲ್ಲಿ ದಾರಿ ಬಿಟ್ಟು ಪಾಯ ಹಾಕಿಕೋಳುವಂತೆ ನಾನು ಹೋಗಿ ಕೇಳಲಾಗಿ ನಾವು ಹೋಗಿ ಬರಲು ದಾರಿಯನ್ನು ಬಿಡದೇ ಪಾಯವನ್ನು ಹಾಕುತ್ತಿದ್ದನು ನಾನು ದಾರಿ ಬಿಡುವಂತೆ ಕೇಳಿದಾಗ ನಾರಾಯಣಪ್ಪ, ತಿರುಮಳೇಶ್, ಸುಮಂಗಳ ರವರು ಗಲಾಟೆ ಮಾಡಿ ತಿರುಮಳೇಶ್ ನನ್ನ ಕತ್ತನ್ನು ಹಿಡಿದುಕೊಂಡು ಗೋಡೆಗೆ ತಳ್ಳಿದ ನಿನ್ನನ್ನು ಈ ಪಾಯದಲ್ಲಿ ಹಾಕಿ ತುಳಿಯುತ್ತೇನೆ ಎಂದು ಬೈದ,ಅಷ್ಟರಲ್ಲಿ ನಮ್ಮ ಗ್ರಾಮದ ವಾಸಿಗಳಾದ ಗಂಗಾದರಪ್ಪ ಮತ್ತು ನಮ್ಮ ಬಾವನಾದ ಶ್ರೀನಿವಾಸ ಬಿನ್ ವೆಂಕಟರವಣಪ್ಪ ರವರು ಜಗಳ ಬಿಡಿಸಿ ಕಳುಹಿಸಿಕೊಟ್ಟರು ನಂತರ ಮೂಗೇಟುಗಳಾಗಿದ್ದ ನಾನು  ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ  ಮೇರಿಗೆ  ಠಾಣಾ ಎನ್ ಸಿ ಆರ್ 55/2019 ರಂತೆ ದಾಖಲಿಸಿರುತ್ತೆ. ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿರುವುದರಿಂದ ಕಲಂ 323,504, ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು  ಅನುಮತಿ ನೀಡಬೇಕಾಗಿ ಘನ ನ್ಯಾಯಾಲಯದಲ್ಲಿ  ಕೋರಿದ್ದು ಅದರಂತೆ ನ್ಯಾಯಾಲಯ  ಅನುಮತಿ ನೀಡಿದ್ದು ಅದರಂತೆ ಠಾಣಾ ಮೊ ಸಂ 97/2019  ಕಲಂ 323,504, ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.