ದಿನಾಂಕ :13/09/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.225/2020 ಕಲಂ:279,337  ಐ.ಪಿ.ಸಿ :-

     ದಿ: 12-09-2020 ರಂದು ಸಂಜೆ 7:30 ಗಂಟೆಗೆ ಪಿರ್ಯಾಧಿದಾರರಾದ ಸಂಜುಕುಮಾರ್ ಬಿನ್ ಅಣ್ಣೆಪ್ಪ, ಚೊಂಡೆನೋರ, ವಯಸ್ಸು 50 ವರ್ಷ, ಲಿಂಗಾಯತ ಜನಾಂಗ, ಚವಳಿ, ಬೀದರ ತಾಲ್ಲೂಕು&ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶ – ದಿ:11-09-2020 ರಂದು 20:47 ಗಂಟೆಗೆ ನಮ್ಮೂರಿನ ಓಂಕಾರ ತಂದೆ ಶಂಕರಪ್ಪ, ಚೊಂಡಿ ಸದ್ಯ ಯಲಹಂಕ ಇವರು ಕರೆ ಮಾಡಿ ನಿಮ್ಮ ಮಗ ಕಿರಣಕುಮಾರ ಈತನಿಗೆ ಆಕ್ಸಿಡೆಂಟ್ ಆಗಿದ್ದು,  ಚಿಕಿತ್ಸೆ ಕುರಿತು ಬೆಂಗಳೂರಿನ ಪ್ರೋಲೈಫ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೇನೆ, ನೀವು ಬೇಗ ಬರ್ರಿ ಅಂತಾ ತಿಳಿಸಿದ ಮೇರೆಗೆ, ನಾನು ಗಾಬರಿಗೊಂಡು ಬೆಂಗಳೂರಿಗೆ ಬಂದು ಆಸ್ಪತ್ರೆಯಲ್ಲಿ ನೋಡಲು ನನ್ನ ಮಗ ಕಿರಣಕುಮಾರ, ಇತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಗ ಅಲ್ಲೆ ಇದ್ದ ಓಂಕಾರ ಈತನಿಗೆ ವಿಚಾರಿಸಲು ನಿನ್ನೆ ದಿ: 11-09-2020 ರಂದು 21:45 ಗಂಟೆಗೆ ಪ್ರೋಲೈಫ್ ಆಸ್ಪತ್ರೆಯಿಂದ ನನಗೆ ಕರೆ ಮಾಡಿ ಕಿರಣಕುಮಾರ, ಇತನಿಗೆ ಆಕ್ಸಿಡೆಂಟ್ ಆಗಿದ್ದು, ನೀವು ಬರ್ರಿ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಬಂದು ನೋಡಲು ಕಿರಣಕುಮಾರ ಇತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅವನ ಜೊತೆ ಇದ್ದ ಬಿಸ್ಮ ತಂದೆ ಸಂಜುಕುಮಾರ ಪಾಟೀಲ್, ಬೀದರ , ಇತನಿಗೆ ವಿಚಾರಿಸಲು ಅವನು ತಿಳಿಸಿದ್ದೇನೆಂದರೆ, ನಾನು ಮತ್ತು ಕಿರಣಕುಮಾರ ಇಬ್ಬರೂ ಕೂಡಿಕೊಂಡು ಕಿರಣಕುಮಾರ ರವರ ಮಾಲೀಕರ ಖಾಸಗೀ ಕೆಲಸ ಕುರಿತು ಕಾರ್ ನಂ: KA33M3756 ನೇದ್ದರ ಮೇಲೆ ಬೆಂಗಳೂರಿಗೆ ಬಂದು ವಾಪಸ್ಸು ಬೀದರಗೆ ಹೋಗುವಾಗ ಸಾಲು ಮರದ ತಿಮ್ಮಕ್ಕ ಪಾರ್ಕ್ ಮುಂಭಾಗ ಸಮಯ ಸುಮಾರು ರಾತ್ರಿ 8:00 ಗಂಟೆಯ ಸಮಯಕ್ಕೆ ರಸ್ತೆಯ ಮೇಲೆ ನಾಯಿಯೊಂದು ಅಡ್ಡಬಂದಿದ್ದು, ಅದಕ್ಕೆ ಕಿರಣಕುಮಾರ ಈತನಿಗೆ ವೇಗ ಹತೋಟಿಯಲ್ಲಿ ಇಟ್ಟುಕೊಳ್ಳಲು ಆಗದ ಕಾರಣ ಡಿವೈಡರ್ ಗೆ ಡಿಕ್ಕಿ ಮಾಡಿದ್ದಾನೆ, ಪರಿಣಾಮ ನಾವು ಇಬ್ಬರು ಕಾರಿನಿಂದ ಕೆಳಗೆ ಬಿದ್ದು ನನಗೆ ತಲೆಯ ಹಿಂಭಾಗ ರಕ್ತಗಾಯ ಮತ್ತು ಎರಡು ಕೈಗೆ ತರಚಿದ ರಕ್ತಗಾಯವಾಗಿರುತ್ತದೆ.  ಕಿರಣಕುಮಾರ ತನಿಗೆ ಎರಡು ಕಾಲುಗಳಿಗೆ ಭಾರಿ ರಕ್ತಗುಪ್ತಗಾಯ ಮತ್ತು ತಲೆಯ ಹಿಂಭಾಗ ರಕ್ತಗಾಯ ಹಾಗೂ ಎರಡೂ ಕೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ.  ಆಗ ಅಲ್ಲಿಂದಲೇ ಹೋಗುತ್ತಿದ್ದ ಸಾರ್ವಜನಿಕರು ನೋಡಿ ನಮಗೆ ಖಾಸಗೀ ವಾಹನದಲ್ಲಿ ಹಾಕಿಕೊಂಡು ಬೆಂಗಳೂರಿನ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದಾರೆ ಅಂತಾ ತಿಳಿಸಿದ್ದಾರೆ.  ನಂತರ ಅವನಿಗೂ ಕೂಡಾ ಪ್ರಜ್ಞೆ ತಪ್ಪಿರುತ್ತದೆ, ಅಂತಾ ಓಂಕಾರ ಇವರು ನನಗೆ ತಿಳಿಸಿರುತ್ತಾರೆ. ಕಾರಣ ಕಾರ ನಂ:KA33M3756 ನೇದರ ಚಾಲಕ ಕಿರಣಕುಮಾರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ, ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.226/2020 ಕಲಂ:379 ಐ.ಪಿ.ಸಿ :-

     ದಿ: 12-09-2020 ರಂದು ಸಂಜೆ 8:00 ಗಂಟೆಗೆ ಪಿರ್ಯಾಧಿದಾರರಾದ ರಮೇಶ ಬಿನ್ ಈರಣ್ಣ, 32 ವರ್ಷ, ನಾಯಕ ಜನಾಂಗ, ಎಸ್.ಬಿ.ಐ ಮುದ್ದೇನಹಳ್ಳಿ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕರು, ವಾಸ-21 ನೇ ವಾರ್ಡ್, ಕೋರ್ಟ್ ಹಿಂಭಾಗ, ಬಾಗೇಪಲ್ಲಿ ಪುರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಾನು ಈ ಹಿಂದೆ ಎಸ್.ಬಿ.ಐ ಪರೇಸಂದ್ರ ಶಾಖೆಯಲ್ಲಿ ಕ್ಯಾಷ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಎಸ್.ಬಿ.ಐ ಪೆರೇಸಂದ್ರ ಶಾಖೆಯ ವಿಳಾಸದಲ್ಲಿ ಹೋಂಡ ಆಕ್ಟೀವ 5ಜಿ ದ್ವಿಚಕ್ರವಾಹನ ಸಂಖ್ಯೆ- KA 40 ED 4495 ನ್ನು ರೀದಿಸಿರುತ್ತೇನೆ. ನಾನು ಹಾಲಿ ಎಸ್.ಬಿ.ಐ ಮುದ್ದೇನಹಳ್ಳಿ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ನನ್ನ ಪತ್ನಿಯಾದ ಶ್ರೀಮತಿ ಸುಮಲತ ರವರು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಾಲಿ ನಾವು ಬಾಗೇಪಲ್ಲಿ ಪುರದ 21 ನೇ ವಾರ್ಡ್ ಕೊರ್ಟ್ ಹಿಂಬಾಗದ ಈಶ್ವರಪ್ಪ ರವರ ಮನೆಯಲ್ಲಿ ಬಾಡಿಗೆಗೆ ಮನೆಮಾಡಿಕೊಂಡು ವಾಸವಾಗಿರುತ್ತೇವೆ. ನಾನು ಪ್ರತಿದಿನ ಮನೆಯಿಂದ ಕೆಲಸಕ್ಕೆ ನನ್ನ ದ್ವಿಚಕ್ರವಾಹನದಲ್ಲಿಯೇ ಹೋಗಿಬರುತ್ತಿರುತ್ತೇನೆ. ಎಂದಿನಂತೆ ನಾನು ದಿನಾಂಕ: 08.09.2020 ರಂದು ಕರ್ತವ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ರಾತ್ರಿ 08:00 ಗಂಟೆಗೆ ಬಂದಿದ್ದು ನನ್ನ ದ್ವಿಚಕ್ರವಾಹನವನ್ನು ಎಂದಿನಂತೆ ಮನೆಯ ಮುಂಬಾಗ ನಿಲ್ಲಿಸಿ ಲಾಕ್ ಮಾಡಿಕೊಂಡು ಮನೆ ಒಳಗೆ ಹೋಗಿರುತ್ತೇನೆ. ಮಾರನೆಯ ದಿನ ದಿನಾಂಕ: 09.09.2020 ರಂದು ಬೆಳಿಗ್ಗೆ ಸಮಯ 06:00 ಗಂಟೆಯಲ್ಲಿ  ದ್ವಿಚಕ್ರವಾಹನವನ್ನು ನೋಡಲಾಗಿ ನಾನು ರಾತ್ರಿ ನಿಲ್ಲಿಸಿದ್ದ ಸ್ಥಳದಲ್ಲಿ ದ್ವಿಚಕ್ರವಾಹನ ಇರುವುದಿಲ್ಲ. ಯಾರೋ ಕಳ್ಳರು ನನ್ನ ಬಾಬತ್ತು ದ್ವಿಚಕ್ರವಾಹನವನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುತ್ತೇನೆ. ದಯವಿಟ್ಟು ಕಳ್ಳತನವಾಗಿರುವ ಸುಮಾರು 48,000/- ರೂ ಮೌಲ್ಯದ ನನ್ನ ಬಾಬತ್ತು ಬೂದು ಬಣ್ಣದಿಂದ ಕೂಡಿರುವ 2018 ನೇ ಸಾಲಿನ ಹೋಂಡ ಆಕ್ಟೀವ 5ಜಿ ದ್ವಿಚಕ್ರವಾಹನ ಸಂಖ್ಯೆ-    KA40 ED 4495, ಚಾಸ್ಸಿಸ್ ನಂಬರ್- ME4JF50BJJU131612, ಇಂಜಿನ್ ನಂಬರ್- JF50EU8131647 ನ್ನು ಪತ್ತೆಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತಿದ್ದೇನೆ, ಎಂದು ದೂರು.

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.89/2020 ಕಲಂ: 15(A),32(3) ಕೆ.ಇ ಆಕ್ಟ್ :-

     ದಿನಾಂಕ:12/09/2020.ರಂದು ಸಂಜೆ 5-00 ಗಂಟೆಯಲ್ಲಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೀ ಪ್ರಕಾಶ್, ಆದ ನಾನು ಠಾಣೆಯ ಸಿಬ್ಬಂದಿ  ಹೆಚ್.ಸಿ – 36 ವಿಜಯಕುಮಾರ್  ರವರನ್ನು ಜೊತೆಯಲ್ಲಿ ಕರೆದುಕೊಂಡು ಠಾಣೆಯ ಸರಹದ್ದಿನಲ್ಲಿರುವ ಗ್ರಾಮಗಳಾದ ಬೋಡಂಪಲ್ಲಿ, ಮುಂಗಾನಹಳ್ಳಿ  ಚಿಂತಪಲ್ಲಿ ಗ್ರಾಮಗಳಲ್ಲಿ  ಗಸ್ತು ಮಾಡಿಕೊಂಡು ವೈ. ದೇವಪಲ್ಲಿ ಗ್ರಾಮದಲ್ಲಿ ಸಂಜೆ  5-30 ಗಂಟೆಯ ಸಮಯದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ,  ವೈ. ದೇವಪಲ್ಲಿ  ಗ್ರಾಮದ ವಾಸಿ  ಶಂಕರಪ್ಪ ಬಿನ್ ದುರ್ಗಂ ಕೃಷ್ಣಪ್ಪ, ರವರು ಚಿಲ್ಲರೆ ಅಂಗಡಿ  ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ವೈ ದೇವಪಲ್ಲಿ  ಗ್ರಾಮದಲ್ಲಿ  ಪಂಚರನ್ನು ಬರಮಾಡಿಕೊಂಡು ವೈ ದೇವಪಲ್ಲಿ  ಗ್ರಾಮದ ವಾಸಿ ಶಂಕರಪ್ಪ ಬಿನ್ ದುರ್ಗಂ ಕೃಷ್ಣಪ್ಪ ರವರ ಚಿಲ್ಲರೆ ಅಂಗಡಿ  ಬಳಿಗೆ ಹೋಗಿ ಜೀಪ್ ನಿಲ್ಲಿಸಿ ನೋಡುವಷ್ಟರಲ್ಲಿ  ಚಿಲ್ಲರೆ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಪೊಲೀಸ್ ಜೀಪ್ನನ್ನು ಕಂಡು ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಶಂಕರಪ್ಪ ಬಿನ್ ದುರ್ಗಂ ಕೃಷ್ಣಪ್ಪ, 54 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ಮೊ ನಂ:9448492579.  ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ. ನಂತರ ಪಂಚರ ಸಮಕ್ಷಮ ಸಂಜೆ 5-30 ರಿಂದ 6-00 ಗಂಟೆಯವರೆಗೆ  ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 2 ಲೀಟರ್ 160 ಎಂ.ಎಲ್ ನ 1041  ರೂಗಳ ಬೆಲೆ ಬಾಳುವ  180 ಎಂ.ಎಲ್ ನ ಓಲ್ಡ್ ಟವರೇನ್ ವಿಸ್ಕೀ 12 ಪಾಕೆಟ್ ಗಳು,   ಮಧ್ಯವನ್ನು  ಹಾಗೂ  180 ಎಂ.ಎಲ್ ನ ಓಲ್ಡ್ ಟವರೇನ್ ವಿಸ್ಕೀ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ ರಾತ್ರಿ  6-30 ಗಂಟೆಗೆ  ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:88/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.334/2020 ಕಲಂ: 279,337 ಐ.ಪಿ.ಸಿ :-

     ದಿನಾಂಕ: 12/09/2020 ರಂದು ಸಂಜೆ 7.30 ಗಂಟೆಗೆ ಸೋಮಶೇಖರ್.ಆರ್ ಬಿನ್ ಲೇಟ್ ರಾಮರೆಡ್ಡಿ, 30 ವರ್ಷ, ವಕ್ಕಲಿಗ ಜನಾಂಗ, ಡ್ರೈವರ್ ಕೆಲಸ, ಹಾಲೀ ವಾಸ ಪಣಸಚೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಸ್ವಂತ ಸ್ಥಳ: ಕಾರಂಜಿಕಟ್ಟೆ, ಕೋಲಾರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಈಗ್ಗೆ ಸುಮಾರು 10 ವರ್ಷಗಳಿಂದ ಪಣಸಚೌಡನಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತೇನೆ. ತನ್ನ ಸ್ನೇಹಿತನಾದ ಪಣಸಚೌಡನಹಳ್ಳಿ ಗ್ರಾಮದ ವಾಸಿ ಹರೀಶ.ವಿ ಬಿನ್ ವೆಂಕಟಸ್ವಾಮಿ, 26 ವರ್ಷ ರವರು 2018-ನೇ ಸಾಲಿನಲ್ಲಿ ನೋಂದಣಿ ಸಂಖ್ಯೆ:ಕೆಎ-67-0169 ವುಳ್ಳ ಸ್ವಿಫ್ಟ್ ಡಿಸೈರ್ ಟೂರ್ಸ್ ಕಾರೊಂದನ್ನು ಖರೀದಿಸಿ ಅದನ್ನು ಬಾಡಿಗೆಗೆ ಓಡಿಸಿಕೊಂಡಿರುತ್ತಾನೆ. ಹೀಗಿರುವಾಗ ದಿನಾಂಕ:06/09/2020 ರಂದು ಬೆಳಿಗ್ಗೆ ತಾನು ಮತ್ತು ತನ್ನ ಸ್ನೇಹಿತ ಹರೀಶ ಆಂಧ್ರಪ್ರದೇಶದ ಪಲಮನೇರ್ ಬಳಿ ಇರುವ ವಿರೂಪಾಕ್ಷಪುರದ ಬಳಿ ಆತನ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿ, ಬಾಡಿಗೆಯನ್ನು ಮುಗಿಸಿಕೊಂಡು ಮರುದಿನ ದಿನಾಂಕ:07/09/2020 ರಂದು ಪಣಸಚೌಡನಹಳ್ಳಿ ಗ್ರಾಮಕ್ಕೆ ವಾಪಸ್ಸು ಬರಲೆಂದು ಬೆಳಗಿನ ಜಾವ ಸು.04-00 ಗಂಟೆಯ ಸಮಯದಲ್ಲಿ ಪಣಸಚೌಡನಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಮಾರ್ಗದ ರಸ್ತೆಯಲ್ಲಿ ದೊಡ್ಡಬೊಮ್ಮನಹಳ್ಳಿ-ಪಣಸಚೌಡನಹಳ್ಳಿ ಗ್ರಾಮಗಳ ಮಧ್ಯೆ ದೊಡ್ಡಬೊಮ್ಮನಹಳ್ಳಿ ಗ್ರಾಮದ ವಾಸಿ ತಿಮ್ಮಣ್ಣ ರವರ ಬೀಡು ಜಮೀನಿನ ಬಳಿ ಹೋಗುತ್ತಿದ್ದಾಗ, ಕಾರನ್ನು ಚಾಲಕ ಹರೀಶ ಚಾಲನೆ ಮಾಡುತ್ತಿದ್ದು, ತಾನು ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಿದ್ದೆ. ಹರೀಶ ಆತನ ಬಾಬತ್ತು ಮೇಲ್ಕಂಡ ಕಾರನ್ನು ಅತಿ ವೇಗವಾಗಿ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ, ಅದೇ ಸಮಯಕ್ಕೆ ತಮ್ಮ ಎದುರಿಗೆ ಪಣಸಚೌಡನಹಳ್ಳಿ ಗ್ರಾಮದ ಕಡೆಯಿಂದ ಯಾವುದೋ ಕಾರು ಬರುತ್ತಿದ್ದು, ಸದರಿ ಕಾರಿನ ಹೆಡ್ಲೈಟ್ ಬೆಳಕು ತಮ್ಮ ಮುಖಕ್ಕೆ ಬಿದ್ದಾಗ, ವೇಗವಾಗಿ ಹೋಗುತ್ತಿದ್ದ ತಮ್ಮ ಕಾರಿನ ಚಾಲಕ ಹರೀಶನ ನಿಯಂತ್ರಣ ತಪ್ಪಿ ರಸ್ತೆಯ ಎಡಭಾಗದ ಹಳ್ಳಕ್ಕೆ ಮುಗುಚಿಕೊಂಡು ಬಿದ್ದು ಹೋಗಿದ್ದು, ಇದರಿಂದ ಹರೀಶನಿಗೆ ಪ್ರಜ್ಞೆ ತಪ್ಪಿ ಹೋಗಿ ಕಾರು ಜಖಂಗೊಂಡಿತು. ನಂತರ ತಾನು ಈ ವಿಚಾರವನ್ನು ತಮ್ಮ ಸ್ನೇಹಿತರಾದ ಮುರಳಿ ಬಿನ್ ಲೇಟ್ ಮುನಿವೆಂಕಟಪ್ಪ ಮತ್ತು ನಾಗೇಶ ಬಿನ್ ಕೃಷ್ಣಪ್ಪ ರವರುಗಳಿಗೆ ಪೋನ್ ಮಾಡಿ ತಿಳಿಸಿದ್ದು, ಅವರು ಸ್ಥಳಕ್ಕೆ ಕಾರಿನಲ್ಲಿ ಬಂದ ನಂತರ ತಾವು 03 ಜನ ಪ್ರಜ್ಞೆ ತಪ್ಪಿ ಬಿದ್ದಿದ್ದ ಹರೀಶನನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿದೆವು. ಈ ಅಪಘಾತದ ಘಟನೆಯಿಂದ ಚಾಲಕ ಹರೀಶನಿಗೆ ಎದೆಯ ಎಡಭಾಗದಲ್ಲಿ, ಬೆನ್ನಿನ ಹಿಂಭಾಗದಲ್ಲಿ ಪೆಟ್ಟಾಗಿದ್ದು, ತನಗೆ ಮೈಮೇಲೆ ಯಾವುದೇ ರೀತಿಯ ಗಾಯಗಳಾಗದ ಕಾರಣ ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಿಲ್ಲ. ತನ್ನ ಸ್ನೇಹಿತ ಚಾಲಕ ಹರೀಶನ ಬಾಬತ್ತು ಅಪಘಾತಕ್ಕೀಡಾಗಿ ಜಖಂಗೊಂಡಿರುವ ಕಾರು ಅಪಘಾತ ನಡೆದ ಸ್ಥಳದಲ್ಲಿರುತ್ತೆ. ಗಾಯಾಳು ಹರೀಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಈತನ ಆರೈಕೆಯನ್ನು ತಾನು ಮತ್ತು ಅವರ ಕುಟುಂಬದವರು ನೋಡಿಕೊಂಡಿದ್ದರಿಂದ ಇದುವರೆಗೂ ಪೊಲೀಸ್ ಠಾಣೆಗೆ ಯಾವುದೇ ದೂರನ್ನು ನೀಡಲು ಸಾಧ್ಯವಾಗಿರುವುದಿಲ್ಲ. ಗಾಯಾಳು ಹರೀಶ ಡಿಸ್ ಚಾರ್ಜ್ ಆಗಿರುವುದರಿಂದ ತಾನು ಈ ದಿನ ತಡವಾಗಿ ಠಾಣೆಗೆ ದೂರು ನೀಡುತ್ತಿದ್ದು, ಕಾರು ಚಾಲಕ ಹರೀಶನ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.109/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ :-

     ಗಾಯಾಳುವಾದ ಸುಪ್ರೀತ್ ಬಿನ್ ನಾಗರಾಜ್ 26 ವರ್ಷ, ಚಾಲಕ ವೃತ್ತಿ, ಆದಿ ಕರ್ನಾಟಕ ಜನಾಂಗ, ವಾಸ ಬಂಬೂಬಜಾರ್ ಚಿಂತಾಮಣಿ ನಗರ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ನಾನು ಹೀಗ್ಗೆ ಸುಮಾರು 02 ತಿಂಗಳಿನಿಂದ ನಮ್ಮ ಅತ್ತಿಗೆ ಶಾಂತಮ್ಮ ರವರ ಮನೆಯಲ್ಲಿ ವಾಸವಾಗಿರುತ್ತೆನೆ ಹಾಗೂ ನಮ್ಮ ಅತ್ತಿಗೆಯ ಮಗಳಾದ ಗಾಯತ್ರಿ ಮತ್ತು ಅಕೆಯ ಗಂಡನಾದ ಪ್ರಸಾದ್ ರವರೂ ಸಹ ನಮ್ಮೊಂದಿಗೆ ವಾಸವಿರುತ್ತಾರೆ ಹೀಗಿರುವಾಗ ದಿನಾಂಕ: 11/09/2020 ರಂದು ರಾತ್ರಿ 9:30 ಗಂಟೆ ಸಮಯದಲ್ಲಿ ಪ್ರಸಾದ್ ರವರು ಗಾಯತ್ರಿಯನ್ನು ಬೈದು ಹೊಡೆಯಲು ಮುಂದಾಗಿದ್ದು ಆಗ ಮನೆಯಲ್ಲಿದ್ದ ನಾನು ಮತ್ತು ಶಾಂತಮ್ಮ ರವರು ಬುದ್ದಿವಾದ ಹೇಳಿ ಬಿಡಿಸಲು ಹೋದಾಗ ನಿವ್ಯಾರು ನನ್ನನ್ನು ಕೇಳುವುದಕ್ಕೆ ನನ್ನ ಹೆಂಡತಿ ನನ್ನ ಇಷ್ಟ ನಾನು ಏನೂ ಬೇಕಾದರೂ ಮಾಡುತ್ತೆನೆ ಎಂದು ಏಕಾಏಕಿ ನನಗೆ ಅಲ್ಲೆ ಇದ್ದ ಕೋಲಿನಿಂದ ನನ್ನ ಎಡಭಾಗದ ಉಬ್ಬಿನ ಮೇಲ್ಬಾಗದ ಹಣೆಯ ಮೇಲೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ ನಂತರ ಆತನ ತಮ್ಮನಾದ ಮಾರ್ಟಿನ್ ಮತ್ತು ಆತನ ಹೆಂಡತಿ ಮಾನಸರವರು ಸಹ ಯಾಕೆ ನಮ್ಮ ಅಣ್ಣನ ಮೇಲೆ ಗಲಾಟೆ ಮಾಡುತ್ತಿದ್ದಿರಿ ಎಂದು ಬೇವರ್ಸಿ ಮುಂಡೆ ಲೋಪರ್ ನನ್ನ ಮಕ್ಕಳೆ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಆ ಪೈಕಿ ಮಾನಸ ರವರು ಶಾಂತಮ್ಮ ರವರ ಕೂದಲನ್ನು ಹಿಡಿದು ಎಳೆದು ಕೆನ್ನೆಗಳಿಗೆ ಕೈಗಳಿಂದ ಹೊಡೆದಿರುತ್ತಾರೆ ಶಾಂತಮ್ಮ ರವರ ಅಳಿಯನಾದ ಪ್ರಸಾದ್ ರವರು  ಇಟ್ಟುಕೋಲಿನಿಂದ ನಮ್ಮ ಅತ್ತಿಗೆ ಶಾಂತಮ್ಮ ರವರ ತಲೆಗೆ ಹೊಡದು ಮೂಗೇಟುವುಮಟು ಮಾಡಿರುತ್ತಾರೆ ಶಾಂತಮ್ಮ ಹಾಗೂ ಅವರ ಮಗ ಬಾಲಾಜಿ ರವರು ಬೀಡಿಸಲು ಬಂದಾಗ ಮಾರ್ಟಿನ್ ರವರು ಕೈಗಳಿಂದ ಬೆನ್ನಿನ ಮೇಲೆ ಗುದ್ದಿ ಕಾಲುಗಳಿಂದ ಓದ್ದಿರುತ್ತಾರೆ ನಾನು ಮೈಕೈ ನೋವು ಎಂದು ಕಿರುಚಾಡಿದಾಗ ಅಲ್ಲೆ ಇದ್ದ ಸುಬ್ಬಮ್ಮ, ನೂರ್ ಜಾನ್ ಮತ್ತು ಜಾವೀದ್ ಪಾಷ ರವರು ಬಂದು ಜಗಳ ಬೀಡಿಸಿರುತ್ತಾರೆ ನಂತರ ನನಗೆ ತಲೆಯ ಗಾಯದ ನೋವು ಜಾಸ್ತಿ ಆಗಿದ್ದರಿಂದ ಈ ದಿನ ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೆನೆ ಆದ್ದರಿಂದ ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.239/2020 ಕಲಂ: 20(a) (1),20(b)(I)A ) NARCOTIC DRUGS & PSYCHOTROPIC SUBSTANCES ACT, 1985:-

     ದಿನಾಂಕ 12-09-2020 ರಂದು ಬೆಳೀಗ್ಗೆ 11-45 ಗಂಟೆಗೆ ಗಂಗರಾಜು ಹೆಚ್.ಸಿ. 220 ರವರು    ಎಸ್. ರವಿ ಪೊಲೀಸ್ ವೃತ್ತ ನಿರೀಕ್ಷಕರು, ಗೌರಿಬಿದನೂರು ವೃತ್ತರವರು ರವಾನಿಸಿಕೊಂಡ ದೂರನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂಧರೆ ಈ ದಿನ ದಿನಾಂಕ 12-09-2020 ರಂದು ಬೆಳಿಗ್ಗೆ ಸುಮಾರು 08-00 ಗಂಟೆಯಲ್ಲಿ ನಾನು ಕಛೇರಿಯಲ್ಲಿ ಇದ್ದಾಗ ಬಂದ ಭಾತ್ಮಿ ಏನೆಂದರೆ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ , ಬೊಟ್ಟದಪ್ಪನಹಳ್ಳಿ ಗ್ರಾಮದಲ್ಲಿ  ಯಾರೋ ಒಬ್ಬ ಅಸಾಮಿಯು ಮಾದಕವಸ್ತುವಾದ ಗಾಂಜವನ್ನು ಬೆಳೆಸಿ ಮಾರಾಟವನ್ನು ಮಾಡುತ್ತಿದ್ದಾನೆಂದು ಬಂದ ಖಚಿತವಾದ ಭಾತ್ಮಿಯ ಮೇರೆಗೆ  ಕಛೇರಿಗೆ ಪಂಚರಾದ 1)ಈರೇಗೌಡ ಬಿನ್ ಬೀರಪ್ಪ, 43 ವರ್ಷ, ಪಿ.ಡಿಓ. ಜಿ. ಕೊತ್ತೂರು ಪಂಚಾಯ್ತಿ, ವಾಸ  ಗುಟ್ಟೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, 2) ಸಲ್ಮಾನ್.ಎಂ. ಬಿನ್ ಮಹಬೂಬ್ ಪಾಶ, 26 ವರ್ಷ, ಗ್ರಾಮಲೆಕ್ಕಿಗ, ಜಿ.ಕೊತ್ತೂರು  ಕಂದಾಯ ವೃತ್ತ, ವಾಸ ವೆಂಕಟರಮಣ ಸ್ವಾಮಿ ದೇವಾಲಯದ ಹತ್ತಿರ, ಗೌರಿಬಿದನೂರು ಟೌನ್ ರವರನ್ನು ಹಾಗೂ ವಿಡಿಯೋ ಗ್ರಾಫರ್ ಗೌತಮ್ ಬಿನ್ ಗಂಗಾಧರ, ದೊಡ್ಡಕುರುಗೋಡು ಗ್ರಾಮರವರನ್ನು ಕರೆಯಿಸಿಕೊಂಡು  ನನಗೆ ಬಂದ ಭಾತ್ಮಿಯನ್ನು ತಿಳಿಸಿದ್ದು ನಂತರ ನಾನು ಮಾಹಿತಿಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಚಿಕ್ಕಬಳ್ಳಾಪುರ ಜಿಲ್ಲೆ ರವರಿಗೆ ತಿಳಿಸಿ ದಾಳಿಯನ್ನು ಮಾಡಲು ಅನುಮತಿಯನ್ನು ಪಡೆದುಕೊಂಡಿದ್ದು ನಂತರ ನಾನು ಪಂಚರು ಮತ್ತು  ಗೌರಿಬಿದನೂರು ನಗರ ಠಾಣೆಯ ಹೆಚ್.ಸಿ. 224 ವೆಂಕಟೇಶ್ , ಹೆಚ್.ಸಿ. 220 ಗಂಗರಾಜು ರವರೊಂದಿಗೆ ಸರ್ಕಾರಿ ವಾಹನ ಕೆ.ಎ.-40-ಜಿ-1222 ವಾಹನದಲ್ಲಿ ಬೊಟ್ಟಾದಪ್ಪನಹಳ್ಳಿಗೆ ಹೋಗಿದ್ದು ಕೆರೆಕಟ್ಟೆಯ ಬಳಿ ಇರುವ ಆಂಜನೇಯಸ್ವಾಮಿ ದೇವಾಲಯದ ಬಳಿ ಹೋಗುವಷ್ಟರಲ್ಲಿ ಒಬ್ಬ ಆಸಾಮಿಯು ಹೋಗುತ್ತಿದ್ದವನು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಸದರಿಯವನನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಮಹೇಶ ಬಿನ್ ಲೇಟ್ ಗೋವಿಂದಪ್ಪ, 28 ವರ್ಷ, ಭಟ್ಟರಾಜರು ಜನಾಂಗ, ವ್ಯವಸಾಯ, ವಾಸ ಬೊಟ್ಟಾದಪ್ಪನಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ಹೇಳಿದನು. ಆತನನ್ನು  ವಿಚಾರಿಸಲಾಗಿ ಆತನ ಬಳಿ  ಜೇಬಿನಲ್ಲಿ ಒಂದು ಪ್ಲಾಸ್ಟೀಕ್ ಕವರ್ ಇದ್ದು ಕೇಳಲಾಗಿ ಸದರಿ ಕವರ್ ನಲ್ಲಿರುವುದು ಗಾಂಜಾಗಿಡದ ಸೊಪ್ಪು ಎಂದು ಹೇಳಿದ್ದು, ಇದನ್ನು ಯಾರಿಗಾದರೂ ಮಾರಾಟವನ್ನು ಮಾಡೋಣವೆಂತ ಹೋಗುತ್ತಿರುವುದಾಗಿ ತಿಳಿಸಿದನು. ಈ ಗಾಂಜಾ ಸೊಪ್ಪು ಎಲ್ಲಿಂದ ತರುತ್ತಿರುವುದಾಗಿ ಪ್ರಶ್ನಿಸಿದಾಗ ಇದನ್ನು ತನ್ನ ಮನೆಯ ಪಕ್ಕ ಬೆಳೆದಿರುವ ಗಿಡಗಳಿಂದ ಸಂಗ್ರಹಿಸಿ ಒಣಗಿಸಿ ತಂದಿರುವುದಾಗಿ ಹಾಗೂ ತನ್ನ ಮನೆಯಲ್ಲಿ ಇನ್ನೂ ಸುಮಾರು 6 ಕೆ.ಜಿ. ತೂಕದ 9 ಗಾಂಜಾ ಗಿಡಗಳನ್ನು ಒಣಗಿಸಲು ಇಟ್ಟಿರುತ್ತೇನೆಂದು ತಿಳಿಸಿದ್ದು  ನಂತರ  ಬೊಟ್ಟಾದಪ್ಪನಹಳ್ಳಿ ಗ್ರಾಮದಲ್ಲಿ ಆಸಾಮಿಯು ತೋರಿಸಿದ ಮನೆಯನ್ನು ಪಂಚರ ಸಮಕ್ಷಮ ನೋಡಲಾಗಿ ಶ್ರೀನಿವಾಸ ರಾಜು ಬಿನ್ ಲೇಟ್ ಗಂಗರಾಜುರವರ ಹಳೇ ಮನೆಯಾಗಿರುತ್ತೆ. ಸದರಿ ಮನೆಯು ಶೀತಲಗೊಂಡಿರುತ್ತೆ.  ಸದರಿ ಮನೆಯಲ್ಲಿ 9 ಗಾಂಜಾ ಗಿಡಗಳನ್ನು ಒಣಗಿಸಲು ಇಟ್ಟಿದ್ದು, ಇವುಗಳಿಂದ ಸುಮಾರು 1 ಲಕ್ಷ ರೂಗಳನ್ನು ಸಂಪಾದನೆ ಮಾಡಬಹುದೆಂದು ತಿಳಿಸಿದನು. ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ಬೆಳೆದು ಮಾರಾಟವನ್ನು ಮಾಡಲು ಅಕ್ರಮವಾಗಿ ದಾಸ್ತಾನು ಮಾಡಿರುವ ಮಹೇಶ ಬಿನ್ ಲೇಟ್ ಗೋವಿಂದಪ್ಪ, 28 ವರ್ಷ, ಭಟ್ಟರಾಜರು ಜನಾಂಗ, ವ್ಯವಸಾಯ, ವಾಸ ಬೊಟ್ಟಾದಪ್ಪನಹಳ್ಳಿ ಗ್ರಾಮ, ನಗರಗೆರೆ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂಬುವನ ವಿರುದ್ದ ಕಲಂ 20(ಎ),1 , 20(ಬಿ),1(ಎ) ಎನ್.ಡಿ.ಪಿ.ಎಸ್. ಕಾಯ್ದೆ ರೀತ್ಯ ಪ್ರಕರಣವನ್ನು ದಾಖಲಿಸಿ ಪ್ರ.ವ.ವರದಿಯನ್ನು ಸಲ್ಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.240/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ 13/09/2020 ರಂದು ಬೆಳಿಗ್ಗೆ 9-45 ಗಂಟೆಗೆ ಪಿರ್ಯಾದಿ ಶ್ರೀಮತಿ ವೀಣಾ ಕೋಂ ಉಮಾಶಂಕರ, 38 ವರ್ಷ,ವಕ್ಕಲಿಗ ಜನಾಂಗ, ಗೃಹಿಣಿ, ಎಚ್ ನಾಗಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ  ತನ್ನ ಮೈದುನ ಗಂಗಾಧರಪ್ಪ ಬಿನ್ ಲೇಟ್ ಲಿಂಗಪ್ಪ, 47 ವರ್ಷ, ವಕ್ಕಲಿಗರು, ಕೂಲಿ ಕೆಲಸ, ಹಾಲಿ ವಾಸ ದಬ್ಬೆಗಟ್ಟೆ ಗ್ರಾಮ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ ಸ್ವಂತ ಸ್ಥಳ ಹೆಚ್. ನಾಗಸಂದ್ರ ಗ್ರಾಮಗೌರಿಬಿದನೂರು ತಾಲ್ಲೂಕು ರವರು ಹಲವಾರು ವರ್ಷಗಳಿಂದ ಗೌರಿಬಿದನೂರು ಟೌನಿನಲ್ಲಿ ಮತ್ತು ಆರ್.ಎಂ.ಸಿ. ಯಾಡರ್ರ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಮನೆಗೆ ಹೋಗದೇ ಅಲ್ಲಲ್ಲಿ ಮಲಗಿಕೊಂಡು ಇರುತ್ತಿದ್ದರು. ಹೀಗಿರುವಾಗ  ದಿನಾಂಕ :12/09/2020 ರಂದು  ರಾತ್ರಿ ಸುಮಾರು 8-00 ಗಂಟೆ ಸಮಯದಲ್ಲಿ ನನಗೆ ಪರಿಚಯ ಇರುವ ಹುದೂತಿ ಗ್ರಾಮದ ವಾಸಿ  ತಿಮ್ಮರಾಜು ಬಿನ್ ರಾಮಕೃಷ್ಣಪ್ಪ  ರವರು ಕರೆ ಮಾಡಿ ನಿಮ್ಮ ಮೈದುನ ಗಂಗಾಧರ ರವರಿಗೆ ಗೌರಿಬಿದನೂರು ತಾಲ್ಲೂಕು ಆರ್.ಎಂ.ಸಿ. ಯಾಡರ್ರ್ ಗೇಟ್  ಮುಂಭಾಗ ಬೆಂಗಳೂರು-ಹಿಂದೂಪುರ ಎಸ್.ಹೆಚ್.-09 ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ  ಅಪಘಾತ ಆಗಿರುವುದಾಗಿ , ನಿಮ್ಮ ಮೈದುನ ಗಂಗಾಧರಪ್ಪ ರವರನ್ನು  ಯಾವುದೋ ಆಂಬುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ತಿಳಿಸಿದರು. ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮೈದುನ ಗಂಗಾಧರಪ್ಪ ರವರಿಗೆ ಅಪಘಾತ ಆಗಿರುವುದು ನಿಜವಾಗಿರುತ್ತೆ. ನಂತರ ವಿಚಾರಿಸಲಾಗಿ ನನ್ನ ಮೈದುನ ಗಂಗಾಧರಪ್ಪ ರವರು  ದಿನಾಂಕ :12/09/2020 ರಂದು  ರಾತ್ರಿ ಸುಮಾರು 7-00 ಗಂಟೆ ಆರ್.ಎಂ.ಸಿ. ಯಾಡರ್ರ್ ಗೇಟ್ ಮುಂಭಾಗ ಬೆಂಗಳೂರು-ಹಿಂದೂಪುರ  ಎಸ್.ಹೆಚ್.-09 ರಸ್ತೆಯಲ್ಲಿ  ರಸ್ತೆ ದಾಟುತ್ತಿದ್ದಾಗ  ಬೆಂಗಳೂರು ಕಡೆಯಿಂದ ಬಂದ ಕೆ.ಎ-22-ಬಿ-4728 ಖಾಸಗಿ ಬಸ್ಸಿನ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಗಂಗಾಧರ ರವರಿಗೆ ತಲೆಗೆ, ಮೂಗಿಗೆ, ರಕ್ತಗಾಯವಾಗಿದ್ದು ಮತ್ತು ಇತರ ಕಡೆ ತರಚಿದ ಗಾಯಗಳಾಗಿರುತ್ತೆ. ನಂತರ ಗಾಯಗೊಂಡಿದ್ದ ನನ್ನ ಮೈದುನ ನನ್ನು  ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ತಂದು ದಾಖಲು ಮಾಡಿರುತ್ತಾರೆ. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನಮ್ಮ ಸಂಭಂದಿ  ರಾಜಶೇಖರ ರವರೊಂದಿಗೆ ಬೆಂಗಳೂರು ಬ್ಯಾಟರಾಯನಪುರದ ಪ್ರೋ ಲೈಫ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ನನ್ನ ಮೈದುನನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ  ಈ ದಿನ ತಡವಾಗಿ ಬಂದು ದೂರು ನೀಡುತ್ತಿರುತ್ತೇನೆ.ಕೆಎ-22-ಬಿ-4728 ಖಾಸಗಿ ಬಸ್ಸು  ಮತ್ತು ಚಾಲಕನ ವಿರುದ್ದ  ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.241/2020 ಕಲಂ: 323,324,504,506 ಐ.ಪಿ.ಸಿ:-

     ದಿನಾಂಕ 13/09/2020 ರಂದು ಬೆಳಿಗ್ಗೆ  10-30 ಗಂಟೆಗೆ ಪಿರ್ಯಾದಿ ಲಕ್ಷ್ಮಣರೆಡ್ಡಿ ಬಿನ್ ಅಕ್ಕಲರೆಡ್ಡಿ, 45 ವರ್ಷ, ವಕ್ಕಲಿಗರು, ಚೀಗಟಗೆರೆ ಗ್ರಾಮ ಗೌರಿಬಿದನೂರು ತಾಲ್ಲೂಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ 13/09/2020 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ನವೀನ್ ಕುಮಾರ್ ಬಿನ್ ಲೇಟ್ ಲಕ್ಷ್ಣರೆಡ್ಡಿ ಚೀಗಟಗೆರೆ ರವರು ಸರ್ಕಾರಿ ಸರ್ವೇ ನಂ 71 ರಲ್ಲಿ ಶ್ಯಾ ಇನಾಮಿತಿ ಜಮೀನು ಇದ್ದು ಅದರಲ್ಲಿರುವ ರಸ್ತೆಗೆ ಅಡ್ಡಲಾಗಿ ನವೀನ್ ರವರು ಕಟ್ಟಡ ಕಟ್ಟುತ್ತಿದ್ದು ನಾನು ಮತ್ತು ಗ್ರಾಮಸ್ಥರಾದ ಸೋಮರೆಡ್ಡಿ, ರಾಮಕೃಷ್ಣಾರೆಡ್ಡಿ, ರಘುಬಾಬು ಮತ್ತು ಇತರರು ಹೋಗಿ ಯಾಕಪ್ಪ ರಸ್ತೆಗೆ ಅಡ್ಡಲಾಗಿ ಕಟ್ಟುತ್ತಿದ್ದೀಯಾ ಅಂತ ಕೇಳಿದಾಗ ಇದು ನನ್ನ ಜಮೀನು ಪಕ್ಕದಲ್ಲಿರುವ ಸರ್ಕಾರಿ ಜಾಗ ಏಯ್ ಲೋಪರ್ ನನ್ನ ಮಕ್ಕಳಾ, ಸುವರ್ ನನ್ನ ಮಕ್ಕಳಾ ನಿವ್ಯಾರು ಕೇಳೋದಿಕ್ಕೆ ಇಲ್ಲಿಗೆ ಬಂದರೆ ಪ್ರಾಣ ತಗೆಯುವುದಾಗಿ ಬೆದರಿಕೆ ಹಾಕಿದನು ನಾವೆಲ್ಲರು ಸೇರಿ ತಹಶೀಲ್ದಾರ್ ಗೆ ದೂರು ನೀಡೋನವೆಂದು ವಾಪಸ್ಸು ಹೋಗುತ್ತಿದ್ದಾಗ ನನಗೆ ಅಲ್ಲಿದ್ದ ಕಂಬಿಯಿಂದ ಬೆನ್ನಿಗೆ ಹೊಡೆದುನು ಅಯ್ಯೋ ಅಂತ ಕೆಳಗೆ ಬಿದ್ದಾಗ ನನ್ನ ಎಡಗಾಲಿಗೆ ಮತ್ತೆ ದೊಣ್ಣೆಯಿಂದ ಹೊಡೆದನು ಸ್ಪಲ್ಪ ರಕ್ತ ಗಾಯವಾಯಿತು ನಂತರ ನವೀನ್ ಓಡಿ ಹೋದನು ನನ್ನನ್ನು ನಾಗಭೂಷಣ್ ರೆಡ್ಡಿ ರವರು ಯಾವುದೋ ಆಟೋದಲ್ಲಿ ಚಿಕಿತ್ಸೆಗಾಗಿ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಆದ್ದರಿಂದ ನವೀನ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.154/2020 ಕಲಂ: 32,34,38A,36(B) ಕೆ.ಇ ಆಕ್ಟ್:-

     ದಿನಾಂಕ:12/09/2020 ರಂದು ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜನಾಥ ಎಂ.ಎನ್. ಆದ ತಾನು ಈ ದಿನ ದಿನಾಂಕ:12/09/2020 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ಗುಡಿಬಂಡೆ ಟೌನ್ನಲ್ಲಿ ಸಿಬ್ಬಂದಿಯೊಂದಿಗೆ ಗಸ್ತಿನಲ್ಲಿದ್ದಾಗ ಗುಡಿಬಂಡೆ ಟೌನ್ನ ಕೆ.ಎಸ್.ಆರ್.ಟಿ.ಸಿ ಬಸ್ಸ್ ನಿಲ್ದಾಣದ ದೇವರಾಜ್ ವೈನ್ಸ್ ನಿಂದ ಯಾರೋ ಒಬ್ಬ ಅಸಾಮಿ ಒಂದು ಮದ್ಯದ ಪಾಕೇಟ್ ಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಅಕ್ರಮವಾಗಿ ತುಂಬಿಕೊಂಡು ಕೆ.ಎ-02 ಇಆರ್-4496 ನೊಂದಣಿ ದ್ವಿ ಚಕ್ರವಾಹನದಲ್ಲಿ ಸಾಗಾಣಿಕೆ ಮಾಡಿಕೊಂಡು ಮಾರುತಿ ಸರ್ಕಲ್ ಕಡೆ ಬರುತ್ತಿರುವುದಾಗಿ ಬಾತ್ಮಿದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಗುಡಿಬಂಡೆ ಟೌನ್ ನಲ್ಲಿ ಪಂಚಾಯ್ತಿದಾರರನ್ನು ಬರ ಮಾಡಿಕೊಂಡು ಮಾರುತಿ ಸರ್ಕಲ್ ಬಳಿ ಕಾಯುತ್ತಿದ್ದಾಗ ಬೆಳಿಗ್ಗೆ 10-45 ಗಂಟೆಯಲ್ಲಿ ಕೆ.ಎ-02 ಇಆರ್-4496 ನೊಂದಣಿ ದ್ವಿ ಚಕ್ರ ವಾಹನದಲ್ಲಿ ಅಸಾಮಿಯು ಬಂದಿದ್ದು ಸದರಿ ದ್ವಿ ಚಕ್ರ ವಾಹನವನ್ನು  ತಡೆದು ನಿಲ್ಲಿಸಿ  ಸದರಿ ಅಸಾಮಿಯ ಬಳಿ ಇದ್ದ ಒಂದು ಬಿಳಿ ಚೀಲವನ್ನು ಪರಿಶೀಲನೆ ಮಾಡಲಾಗಿ ಹೈವಾರ್ಡ್ಸ್  ಚೀರ್ಸ್ ವೀಸ್ಕಿ ಕಂಪನಿಯ 90 ಎಂ.ಎಲ್. ಸಾಮರ್ಥ್ಯದ  ಮದ್ಯವುಳ್ಳ  96 ಟೆಟ್ರಾ ಪಾಕೇಟ್ಗಳು ಇದ್ದು ಇದರ ಒಟ್ಟು ಮದ್ಯ 8 ಲೀಟರ್ 640 ಎಂ.ಎಲ್. ಆಗಿದ್ದು ಒಂದು ಟೆಟ್ರಾ ಪಾಕೇಟ್ ನ ಬೆಲೆ 35.13 ರೂಗಳಾಗಿರುತ್ತೆ. ಸದರಿ ಆಸಾಮಿ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಂಜನಾಥ ಬಿನ್ ನಾಗೇಶ್ ನಾಯ್ಕ, 22 ವರ್ಷ, ಲಂಬಾಣಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ನರ್ಲಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ನಂತರ ಇಷ್ಟು ಪ್ರಮಾಣದ ಮದ್ಯವನು ಸಾಗಾಣಿಕೆ ಮಾಡಲು ಇರುವ ಪರವಾನಿಗೆಯನ್ನು ಹಾಜರ್ ಪಡಿಸುವಂತೆ ಕೇಳಲಾಗಿ ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲ ಎಂದು ತಿಳಿಸಿದ್ದು ಕಾನೂನು ಬಹಿರವಾಗಿ ಗುಡಿಬಂಡೆ ಟೌನ್ನಲ್ಲಿರುವ ದೇವರಾಜ್ ವೈನ್ಸ್ ನಲ್ಲಿ ಮದ್ಯವನ್ನು ಖರೀದಿಸಿ ನಮ್ಮ ಗ್ರಾಮದಲ್ಲಿರುವ ತನ್ನ ಚಿಲ್ಲರೆ ಅಂಗಡಿಯಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿದರು. ಸದರಿ ಅಸಾಮಿಯು ಯಾವುದೇ ಪರವಾನಿಗೆ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಐಟಂ ನಲ್ಲಿ ಎರಡನ್ನು ಬಿಳಿ ಬಟ್ಟೆ ಚೀಲದಲ್ಲಿ ಇಟ್ಟು ಅರಗು ಮಾಡಿ ‘P’ ಎಂಬ ಅಕ್ಷರದಿಂದ ಸೀಲ್ ಮಾಡಿ ಎಫ್.ಎಸ್.ಎಲ್. ಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು  ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತು ಪಡಿಸಿಕೊಮಡು ಸದರಿ ಮಾಲನ್ನು ಅಸಲು ಪಂಚನಾಮೆ ಯೊಂದಿಗೆ ಮದ್ಯಾಹ್ನ 12-10 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 12-30 ಗಂಟೆಗೆ ಸದರಿ ಆರೋಪಿತನ ಅಂದರೆ ಕಾನೂನು ಬಾಹಿರವಾಗಿ ಮದ್ಯವನ್ನು ನೀಡಿದ ದೇವರಾಜ್ ವೈನ್ಸ್ ನ ಮಾಲಿಕ ಮತ್ತು ಕ್ಯಾಷೀಯರ್ ಹಾಗೂ ಮದ್ಯವನ್ನು ಸಾಗಾಟ ಮಾಡಿದವರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.252/2020 ಕಲಂ: 379 ಐ.ಪಿ.ಸಿ:-

     ದಿನಾಂಕ: 12-09-2020 ರಂದು ಸಂಜೆ 6-15 ಗಂಟೆಗೆ ಪಿರ್ಯಾದಿದಾರರಾದ ಸುಹೇಲ್ ಪಾಷ ಬಿನ್ ಸೈಯದ್ ಪ್ಯಾರಾ, 31 ವರ್ಷ, ಮುಸ್ಲಿಂ, ವಾಸ-ಖಾಜೀ ಮೊಹಲ್ಲಾ ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಇದೇ ಶಿಡ್ಲಘಟ್ಟ ತಾಲ್ಲೂಕು ಹೆಚ್.ಕ್ರಾಸ್ ನಲ್ಲಿ ವಿಜಯಪುರ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಸೋಮಶೇಖರ್ ರವರ ಕಟ್ಟಡದ ಮೊದಲನೇ ಮಹಡಿಯಲ್ಲಿ ಪೈಕಿ (ಹೈದರಾಬಾದ್ ಬಿರಿಯಾನಿ) ಹೋಟೆಲ್ ನಡೆಸುತ್ತಿದ್ದು, ತಾನು ಈಗ್ಗೆ ಸುಮಾರು 7 ತಿಂಗಳ ಹಿಂದೆ ಕೆಎ-67-ಇ-8172 ನೊಂದಣಿ ಸಂಖ್ಯೆಯ ಹೊಂಡಾ ಡಿಯೋ ದ್ವಿ ಚಕ್ರ ವಾಹನವನ್ನು ಖರೀದಿ ಮಾಡಿಕೊಂಡು ಪ್ರತಿ ದಿನ ತಾನು ತಮ್ಮ ಗ್ರಾಮದಿಂದ ಹೆಚ್.ಕ್ರಾಸ್ ಗೆ ಹೋಟೆಲ್ ಗೆ ಬಂದು ವ್ಯಾಪಾರವನ್ನು ಮುಗಿಸಿಕೊಂಡು ಹೋಗುತ್ತಿರುತ್ತೇನೆ. ಹೀಗಿರುವಾಗ ದಿನಾಂಕ: 08-09-2020 ರಂದು ಬೆಳಿಗ್ಗೆ ನಾನು ಎಂದಿನಂತೆ ನನ್ನ ಬಾಬತ್ತು ದ್ವಿ ಚಕ್ರ ವಾಹನದಲ್ಲಿ ಹೆಚ್ ಕ್ರಾಸ್ ಗೆ ನಮ್ಮ ಗ್ರಾಮದಿಂದ ಬಂದು ಹೋಟೆಲ್ ನ ಕೆಳಭಾಗ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ, ಆ ದಿನ ರಾತ್ರಿ 11-00 ಗಂಟೆಯವರೆಗೆ ಕೆಲಸ ಮಾಡಿಕೊಂಡಿದ್ದು, ತಡರಾತ್ರಿಯಾದ ಕಾರಣ ನಾನು ಊರಿಗೆ ಹೋಗಲು ಆಗದಿದ್ದ ಕಾರಣ ಮತ್ತೆ ನಾನು ನನ್ನ ದ್ವಿ ಚಕ್ರ ವಾಹನವನ್ನು ನಮ್ಮ ಹೋಟೆಲ್ ನ ಕೆಳಭಾಗದಲ್ಲಿರುವ ಅಂಗಡಿಯ ಪಕ್ಕದಲ್ಲಿರುವ ಸಂಧಿಯಲ್ಲಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಹೋಟೆಲ್ ನಲ್ಲಿಯೇ ಮಲಗಿರುತ್ತೇನೆ. ನಂತರ ಮಾರನೇ ದಿನ ದಿನಾಂಕ: 09-09-2020 ರಂದು ಬೆಳಿಗ್ಗೆ ಸುಮಾರು 6-00 ಗಂಟೆಗೆ ನಾನು ಮಹಡಿಯ ಮೇಲಿನ ಹೋಟೆಲ್ ನಿಂದ ಕೆಳಗೆ ಇಳಿದು ಬಂದು ನೋಡಲಾಗಿ ನನ್ನ ದ್ವಿ ಚಕ್ರ ವಾಹನವು ನಿಲ್ಲಿಸಿದ ಕಡೆ ಕಾಣಿಸಲಿಲ್ಲ. ನಂತರ ತಾನು ಅಕ್ಕ ಪಕ್ಕದಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ದಿನಾಂಕ: 08-09-2020 ರಂದು ರಾತ್ರಿ ಯಾರೋ ಕಳ್ಳರು ನನ್ನ ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡಿರುತ್ತಾರೆ. ಕಳುವಾಗಿರುವ ನನ್ನ ದ್ವಿ ಚಕ್ರ ವಾಹನವು ಹಳದಿ ಬಣ್ಣದಿಂದ ಕೂಡಿದ್ದು, ಇದು ಹಾಲಿ 48,000 ರೂ ಬೆಲೆ ಬಾಳುವುದ್ದಾಗಿರುತ್ತದೆ. ತಾನು ತನ್ನ ದ್ವಿ ಚಕ್ರ ವಾಹನವನ್ನು ಇದುವರೆವಿಗೂ ಹುಡುಕಾಡಿಕೊಂಡಿದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನ್ನ ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡಿರುವ ಕಳ್ಳರನ್ನು ಹಾಗು ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.