ದಿನಾಂಕ :13/05/2020 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.195/2020 ಕಲಂ. 428,429 ಐ.ಪಿ.ಸಿ, 4,8,9,11 KARNTAKA PREVENTION OF COW SLANGHTER & CATTLE PREVENTION ACT-1964 & 11(1) PREVENTION OF CRUELTY TO ANIMALS ACT, 192(A) INDIAN MOTOR VEHICLES ACT & 25 [1A],27 INDIAN ARMS ACT:-

          ದಿನಾಂಕ 12-05-2020 ರಂದು ಸಂಜೆ 5-30 ಗಂಟೆಗೆ  ಹರೀಶ ಕೆ.ಆರ್ ಬಿನ್ ರಾಮಾಂಜಿನಪ್ಪ, 31ವರ್ಷ, ಗಾಣಿಗರು, ಸಾಪ್ಟ್ ವೇರ್ ಇಂಜಿನಿಯರ್,  ವಾಸ:ಕೆಂದನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಾನು ಯುಬಿಎಸ್ ಪೈನಾನ್ಸಿಯಲ್ ಸರ್ವಿಸ್ಸ್ ಕಂಪನಿಯಲ್ಲಿ ವರ್ಕ್ ಪ್ರಂ ಹೋಂ ನಿಂದ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ:11-05-2020 ರಂದು ರಾತ್ರಿ ಸುಮಾರು 10-10 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯಲ್ಲಿದ್ದಾಗ ತಮ್ಮ ಗ್ರಾಮದ ತನ್ನ ಸ್ನೇಹಿತನಾದ ಚೇತನ್ ಕುಮಾರ್ ಬಿನ್ ಕೃಷ್ಣಪ್ಪ ಎಂಬುವವರು ತನ್ನ ಮೊಬೈಲ್ ನಲ್ಲಿ  ವ್ಯಾಟ್ಸಪ್ಗೆ ಒಂದು ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿಕೊಟ್ಟಿದ್ದು, ಸದರಿ ವಿಡಿಯೋವನ್ನು ನೋಡಲಾಗಿ ತಮ್ಮ ಗ್ರಾಮದ ಹರೀಶ ಬಿನ್ ದೇವಪ್ಪ, ಪೂಜಪ್ಪ, ದೇವಪ್ಪ, ರಾಜೇಶ್ ಬಿನ್ ತಿರುಮಲಪ್ಪ ಹಾಗೂ ಇತರರು ಕೆಎ-67-0628 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ತಮ್ಮ ಗ್ರಾಮದ ತಪತೇಶ್ವರ ಬೆಟ್ಟಕ್ಕೆ ಒಂದು ನಾಟಿ ಹಸುವನ್ನು ಸಾಗಿಸಿಕೊಂಡು ಹೋಗಿ ಸದರಿ ಬೆಟ್ಟದಲ್ಲಿ ಹಸುವಿಗೆ ಹಿಂಸೆ ನೀಡಿದಂತೆ ಕಂಡುಬಂದಿರುತ್ತೆ. ಈ ಘಟನೆಯ ಬಗ್ಗೆ ತಮ್ಮ ಗ್ರಾಮಸ್ಥರನ್ನು ವಿಚಾರ ಮಾಡಲಾಗಿ ದಿನಾಂಕ:10-05-2020 ರಂದು ಮಧ್ಯಾಹ್ನ ಸುಮಾರು 2-30 ಗಂಟೆಯ ಸಮಯದಲ್ಲಿ ತಮ್ಮ ಗ್ರಾಮದ ಹರೀಶ ಬಿನ್ ದೇವಪ್ಪ, ಪೂಜಪ್ಪ, ದೇವಪ್ಪ, ರಾಜೇಶ್ ಬಿನ್ ತಿರುಮಲಪ್ಪ, ಕೃಷ್ಣಮೂರ್ತಿ ಬಿನ್ ನಡಿಪನ್ನ ಹಾಗೂ ಇತರರು ಒಂದು ಹಸುವನ್ನು ತಮ್ಮ ಗ್ರಾಮದ ವಾಸಿಯಾದ ಶ್ರೀನಾಥ ಬಿನ್ ಕೃಷ್ಣಪ್ಪ ರವರಿಗೆ ಸೇರಿದ ಕೆಎ-67 0628 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ತಪತೇಶ್ವರ ಬೆಟ್ಟಕ್ಕೆ ಸಾಗಿಸಿಕೊಂಡು ಹೋಗಿ ಸದರಿ ಹಸುವಿಗೆ ಬಂದೂಕಿನಿಂದ ಗುಂಡು ಹಾರಿಸಿ ಗಾಯಗೊಳಿಸಿ, ಹಿಂಸೆಯನ್ನು ನೀಡಿ ಸಾಯಿಸಿ ಅದರ ಮಾಂಸವನ್ನು ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಮೇಲ್ಕಂಡವರು ಒಂದು ಹಸುವನ್ನು ಎಲ್ಲಿಂದಲೋ ಟಾಟಾ ಏಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಿಕೊಂಡು ಹೋಗಿ ಬಂದೂಕಿನಿಂದ ಗುಂಡು ಹಾರಿಸಿ ಹಿಂಸೆ ನೀಡಿ ಕೊಂದು ಅದರ ಮಾಂಸವನ್ನು ಮಾರಾಟ ಮಾಡಿರುವ ಮೇಲ್ಕಂಡವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.196/2020 ಕಲಂ. 279,304(A) ಐ.ಪಿ.ಸಿ :-

          ದಿನಾಂಕ 13-05-2020 ರಂದು ಬೆಳಗ್ಗೆ 10-00 ಗಂಟೆಗೆ ಕೆ.ಎಸ್.ರಾಜೇಶ ಬಿನ್ ಡಿ.ಕೆ.ಶ್ರೀರಾಮ್, 37 ವರ್ಷ, ವಕ್ಕಲಿಗರು, ವ್ಯಾಪಾರ, ವೆಂಕಟಗಿರಿಕೋಟೆ ವಾರ್ಡ್ ನಂ.1, ಪಂಪ್ ಹೌಸ್ ಬಳಿ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಶಿಡ್ಲಘಟ್ಟ ತಾಲ್ಲೂಕು ಕನ್ನಮಂಗಲ ಗ್ರಾಮದ ವಾಸಿಯಾದ ತನ್ನ ಚಿಕ್ಕಪ್ಪನಾದ ಡಿ.ಕೆ.ಕೆಂಪನ್ನ ಬಿನ್ ಲೇಟ್ ದಾಸಪ್ಪ ರವರಿಗೆ 60 ವರ್ಷ ವಯಸ್ಸಾಗಿದ್ದು ಜಿರಾಯ್ತಿ ಮಾಡಿಕೊಂಡಿರುತ್ತಾರೆ. ಈ ದಿನ ದಿನಾಂಕ 13/05/2020 ರಂದು ಬೆಳಿಗ್ಗೆ 08.10 ಗಂಟೆ ಸಮಯದಲ್ಲಿ ಟಿ.ವಡ್ಡಹಳ್ಳಿ ಗ್ರಾಮದ ವಾಸಿಯಾದ ನವೀನ್ ಕುಮಾರ್ ಬಿನ್ ಸುಬ್ಬರಾಯಪ್ಪ ಮತ್ತು ನರಸಿಂಹ ಬಿನ್ ನಾರಾಯಣಸ್ವಾಮಿ ಎಂಬುವರು ತನಗೆ ಪೋನ್ ಮಾಡಿ ಈಗ್ಗೆ ಸ್ವಲ್ವ ಸಮಯದ ಹಿಂದೆ ಟಿ.ವಡ್ಡಹಳ್ಳಿ ಅಟ್ಟೂರು ಗ್ರಾಮಗಳ ಮಾರ್ಗಮದ್ಯೆ ಇರುವ ಆಂಜಿನಪ್ಪ ರವರ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ನಿಮ್ಮ ಚಿಕ್ಕಪ್ಪನಾದ ಡಿ.ಕೆ.ಕೆಂಪನ್ನ ರವರಿಗೆ ಅಪಘಾತವಾಗಿದ್ದು, ಆತನಿಗೆ ಗಾಯಗಳಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿರುವುದಾಗಿ ತಿಳಿಸಿದ್ದರಿಂದ ತಾನು ತನ್ನ ದೊಡ್ಡಪ್ಪನ ಮಕ್ಕಳಾದ ಬೈರೇಗೌಡ ಬಿನ್ ಅಶ್ವಥಪ್ಪ ಮತ್ತು ಪುನಿತ್ ಬಿನ್ ಬೈರೇಗೌಡ ರವರು ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಾಗಿದ್ದು, ರಸ್ತೆಯ ಬದಿಯಲ್ಲಿ ಎರಡು ದ್ವಿಚಕ್ರ ವಾಹನಗಳು ಬಿದ್ದಿದ್ದು, ತನ್ನ ಚಿಕ್ಕಪ್ಪ ಡಿ.ಕೆ.ಕೆಂಪನ್ನ ರವರನ್ನು ನವೀನ್ ಕುಮಾರ್ ಮತ್ತು ನರಸಿಂಹ ಹಾಗೂ ಸಾರ್ವಜನಿಕರು ಉಪಚರಿಸುತ್ತಿದ್ದು, ನೋಡಲಾಗಿ ತನ್ನ ಚಿಕ್ಕಪ್ಪನ ತಲೆಯ ಹಿಂಭಾಗದಲ್ಲಿ ಊತಗಾಯವಾಗಿ ಎಡಕೈ ಬೆರಳುಗಳಿಗೆ ತರಚಿದ ಗಾಯಗಳಾಗಿ ಮೂಗಿನಿಂದ ರಕ್ತ ಸ್ರಾವವಾಗಿದ್ದು, ತನ್ನ ಚಿಕ್ಕಪ್ಪ ಮೃತಪಟ್ಟಿರುತ್ತಾರೆ. ಸ್ಥಳದಲ್ಲಿದ್ದ ಅಪಘಾತಕ್ಕೀಡಾದ ದ್ವಿಚಕ್ರ ವಾಹನಗಳನ್ನು ಪರಿಶೀಲಿಸಲಾಗಿ ತನ್ನ ಚಿಕ್ಕಪ್ಪನ ದ್ವಿಚಕ್ರ ವಾಹನವು ಕೆಎ-40 ಇಬಿ-1396 ಬಜಾಜ್ ಡಿಸ್ಕವರ್ ಕಂಪನಿಯದ್ದಾಗಿದ್ದು, ತನ್ನ ಚಿಕ್ಕಪ್ಪನಿಗೆ ಅಪಘಾತಪಡಿಸಿದ ದ್ವಿಚಕ್ರ ವಾಹನವು ಕೆಎ-40 ವೈ-7506 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ಕಂಪನಿಯದ್ದಾಗಿದ್ದು ಎರಡೂ ವಾಹನಗಳು ಜಖಂ ಆಗಿರುತ್ತೆ. ಸ್ಥಳದಲ್ಲಿದ್ದ ನವೀನ್ ಕುಮಾರ್ ಮತ್ತು ನರಸಿಂಹ ರವರನ್ನು ವಿಚಾರ ಮಾಡಲಾಗಿ, ಈ ದಿನ ಬೆಳಿಗ್ಗೆ 08.00 ಗಂಟೆ ಸಮಯದಲ್ಲಿ ನಿನ್ನ ಚಿಕ್ಕಪ್ಪನಾದ ಡಿ.ಕೆ.ಕೆಂಪನ್ನ ರವರು ಟಿ.ವಡ್ಡಹಳ್ಳಿ ಕಡೆಯಿಂದ ಕನ್ನಮಂಗಲಕ್ಕೆ ಕೆಎ-40 ಇಬಿ-1396 ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಕೆಎ-40 ವೈ-7506 ನೋಂದಣಿ ಸಂಖ್ಯೆಯ ಹೋಂಡಾ ಶೈನ್ ದ್ವಿಚಕ್ರ ವಾಹನದ ಸವಾರನಾದ ಯಶ್ವಂತ್ ಕುಮಾರ್ ರವರು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿನ್ನ ಚಿಕ್ಕಪ್ಪ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ ಪರಿಣಾಮ ಇಬ್ಬರೂ ವಾಹನಗಳ ಸಮೇತ ರಸ್ತೆಯ ಮೇಲೆ ಬಿದ್ದು ಹೋಗಿದ್ದು, ಈ  ಪರಿಣಾಮ ನಿನ್ನ ಚಿಕ್ಕಪ್ಪನ ತಲೆಗೆ ಮತ್ತಿತರೆ ಕಡೆ ಗಾಯಗಳಾಗಿದ್ದು ತಾವು ಆತನನ್ನು ಉಪಚರಿಸುತ್ತಿದ್ದಾಗ ಆತನ ತಲೆಗೆ ಆಗಿದ್ದ ಗಾಯದ ದೆಸೆಯಿಂದ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸ್ಥಳದಲ್ಲಿ ಅಪಘಾತಪಡಿಸಿದ ದ್ವಿಚಕ್ರ ವಾಹನದ ಸವಾರ ಇದ್ದು, ಆತನಿಗೂ ಸಹ ಎರಡೂ ಕಾಲುಗಳಿಗೆ ಗಾಯಳಾಗಿದ್ದು, ಆತನ ಹೆಸರು ಮತ್ತು ವಿಳಾಸ ವಿಚಾರ ಮಾಡಲಾಗಿ ಯಶ್ವಂತ್ ಕುಮಾರ್ ಬಿನ್ ವೆಂಕಟೇಶಪ್ಪ, ಅಟ್ಟೂರು ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ನಂತರ ತಾವು ತನ್ನ ಚಿಕ್ಕಪ್ಪನ ಮೃತದೇಹವನ್ನು ಯಾವುದೋ ಒಂದು ವಾಹನದಲ್ಲಿ ಸಾಗಿಸಿಕೊಂಡು ಬಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತೇವೆ. ಅಪಘಾತಪಡಿಸಿ ತನ್ನ ಚಿಕ್ಕಪ್ಪನ ಸಾವಿಗೆ ಕಾರಣನಾದ ಯಶ್ವಂತ್ ಕುಮಾರ್ ರವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿದೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.109/2020 ಕಲಂ. 323,324,504 ಐ.ಪಿ.ಸಿ    :-

          ದಿನಾಂಕ:12/05/2020 ರಂದು ಬೆಳಿಗ್ಗೆ   ಗೌರೀಬಿದನೂರು ಸರ್ಕಾರಿ  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಮತಿ ಗಂಗಮ್ಮ ಕೋಂ ಲೇಟ್ ನಂಧೀಶಪ್ಪ 60 ವರ್ಷ, ಲಿಂಗಾಯಿತ ಜನಾಂಗ ಇವರು  ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:11/05/2020 ರಂದು  ಸಂಜೆ 6-00 ಗಂಟೆಯಲ್ಲಿ ಪಿರ್ಯಾದಿದಾರರ ಮೇಲೆ ಅದೇ ಗ್ರಾಮದ ವಾಸಿಯಾದ ನಾಗರಾಜ ಬಿನ್ ಚಿಂತಾಮಣಿ ಲೇಟ್ ಸಿದ್ದಪ್ಪ ಎಂಬುವವರು  ಪಿರ್ಯಾದಿದಾರರ ಮನೆಯ ಮುಂದೆ ನೀರಿನ ಕೊಳಾಯಿ ವಿಚಾರದಲ್ಲಿ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ನಿಂಧಿಸಿ, ಕೈಗಳಿಂದ  ಮತ್ತು ಕಟ್ಟಿಗೆಯಿಂದ ಹೊಡೆದು ರಕ್ತ ಗಾಯ ಮಾಡಿರುತ್ತಾನೆಂದು ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ದೂರಿನ ಸಾರಾಂಶವಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.110/2020 ಕಲಂ. 323,324,504 ಐ.ಪಿ.ಸಿ     :-

          ದಿನಾಂಕ 13.05.2020 ರಂದು ಬೆಳಿಗ್ಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ  ಶ್ರೀ.  ಗಂಗರಾಜಪ್ಪ ಬಿನ್ ಲೇಟ್ ತಿಮ್ಮಪ್ಪ , 55 ವರ್ಷ, ಭೋವಿ ಜನಾಂಗ, ಜಿರಾಯ್ತಿ, ವಾಸ ನರಸಾಪುರ ಗ್ರಾಮ, ಡಿ. ಪಾಳ್ಯ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ದಿನಾಂಕ 12.05.2020 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ತನ್ನ ಮಗನಾದ ಶಂಕರ , 30 ವರ್ಷ ರವರು ತನ್ನ ಮೇಲೆ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ತನ್ನನ್ನು ನೆಲಕ್ಕೆ ಬೀಳಿಸಿ ಕಾಲು ಕೈಗಳಿಂದ ತನ್ನ ಬೆನ್ನು, ಕಾಲು, ಭುಜದ ಮೇಲೆ ಒದ್ದು, ಕೋಲಿನಿಂದ ಹೊಡೆದಿರುತ್ತಾರೆ. ತನಗೆ ಭುಜದ ಮೇಲೆ ರಕ್ತಗಾಯವಾಗಿದ್ದು, ಬೆನ್ನಿನ ಮೇಲೆ ಮೂಗೇಟು ಆಗಿರುತ್ತೆ. ತಾನು ನೆಲಕ್ಕೆ ಬಿದ್ದಿದ್ದರಿಂದ  ತನ್ನ ಗ್ರಾಮದ ವಾಸಿ ಶಾಂತರಾಜ ಬಿನ್ ತಿಮ್ಮಪ್ಪ ರವರು ತನ್ನನ್ನು ಯಾವುದೋ ಒಂದು ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ಚಿಕಿತ್ಸೆಗಾಗಿ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ತನ್ನ ಮೇಲೆ ಹಲ್ಲೆ ಮಾಡಿರುವ ಶಂಕರ ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು  ಕೋರಿ ದೂರು.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.116/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ          :-

          ದಿನಾಂಕ: 12-05-2020 ರಂದು ಸಂಜೆ 6.00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೋ ಪಡೆದುಕೊಂಡು ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಶ್ರೀ ಲಕ್ಷ್ಮಿನರಸಿಂಹಪ್ಪ ಬಿನ್ ನಾರಾಯಣಪ್ಪ, 38 ವರ್ಷ, ಗೊಲ್ಲರು, ಜಿರಾಯ್ತಿ, ವಾಸ: ಗುಡ್ಲನರಸಿಂಹನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆ ಪಡೆದು ರಾತ್ರಿ 7.30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರರಕಣ ದಾಖಲಿಸಿದ್ದರ ಸಾರಾಂಶವೇನೆಂದರೆ, ನಮ್ಮ ಬಾಬತ್ತು ಗುಡ್ಲನರಸಿಂಹನಹಳ್ಳಿ ಗ್ರಾಮದ ಸರ್ವೆ ನಂ. 39/2 ರಲ್ಲಿ 1 ಎಕರೆ 19 ಗುಂಟೆ ಜಮೀನು ತನ್ನ ತಂದೆಯವರ ಹೆಸರಿನಲ್ಲಿದ್ದು ಸದರಿ ಜಮೀನಿನಲ್ಲಿ ತಾವು ತಿಪ್ಪೆಯನ್ನು ಹಾಕಿಕೊಂಡು ಸ್ವಾದೀನಾನುಭವದಲ್ಲಿದ್ದು, ತಮ್ಮ ಜಮೀನಿನ ಪಕ್ಕದಲ್ಲಿಯೇ ಸುಮಾರು 10 ಎಕರೆ ಗೋಮಾಳ ಜಮೀನು ಇರುತ್ತದೆ, ಹೀಗಿರುವಲ್ಲಿ ಈ ದಿನ ದಿನಾಂಕ: 12-05-2020 ರಂದು ಮದ್ಯಾಹ್ನ ಸುಮಾರು 2.30 ಗಂಟೆ ಸಮಯದಲ್ಲಿ ತಾನು ತಮ್ಮಜಮೀನಿನಲ್ಲಿರುವ ತಿಪ್ಪೆಯ ಅಕ್ಕ ಪಕ್ಕದಲ್ಲಿ ಬೆಳೆದಿದ್ದ ಗಿಡಗಳನ್ನು ಕಿಳ್ಳುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ರವಿಕುಮಾರ್ ಬಿನ್ ಜಲ್ಲಿಗೂಡು ನರಸಪ್ಪ, ನರಸಿಂಹಮೂರ್ತಿ ಬಿನ್ ಜಲ್ಲಿಗೂಡು ಮುನಿಯಪ್ಪ, ತಿಪ್ಪಾರೆಡ್ಡಿ ಬಿನ್ ನಲ್ಲಯ್ಯಗಾರಿ ಮುನಿಯಪ್ಪ, ವೆಂಕಟೇಶ ಬಿನ್ ಮುನಿನರಸಪ್ಪ, ಕೊಂಡೇಗೌಡ ಬಿನ್ ರೌಡಿ ನಾರಾಯಣಸ್ವಾಮಿ ಸುರೇಶ್ ಬಿನ್ ರೌಡಿ ನಾರಾಯಣಸ್ವಾಮಿ ಎಂಬುವರು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕೈಗಳಲ್ಲಿ ಕಬ್ಬಿಣದ ರಾಡನ್ನು ಹಿಡಿದುಕೊಂಡು ತನ್ನ ಬಳಿ ಬಂದು ತನ್ನನ್ನು ಕುರಿತು ನಿಮ್ಮಮ್ಮನೇ ಕ್ಯಾಯ, ಸೂಳೆ ನನ್ನ ಮಗನೇ ಈ ಜಮೀನು ಗೋಮಾಳ ಆಗಿದ್ದು, ಇದನ್ನು ನಿಮ್ಮ ಮನೆಯವರು ಸ್ವಂತ ಮಾಡಿಕೊಂಡಿದ್ದೀರ,  ಈ ಜಮೀನು ಊರಿನ ಜನರಿಗೆ ಸೇರಿದ್ದು ಎಂದು ತನಗೆ ಕೆಟ್ಟ ಮಾತುಗಳಿಂದ ಬೈದು ಆ ಪೈಕಿ ನರಸಿಂಹಮೂರ್ತಿ ಎಂಬುವನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದಾಗ ರಕ್ತಗಾಯಡಿಸಿದಾಗ ತಾನು ಕೆಳಗೆ ಬಿದ್ದು ಹೋಗಿದ್ದು, ಆಗ ಉಳಿದವರು ಕೈಗಳಿಂದ ಮೈಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವುಂಟುಮಾಡಿ ಜಗಳ ಮಾಡುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕೆ ಬಂದ ತನ್ನ ಅಣ್ಣ ನರಸಿಂಹಮೂರ್ತಿ ರವರು ಜಗಳ ಬಿಡಿಸಲು ಅಡ್ಡ ಬಂದಾಗ ನರಿಂಹಮೂರ್ತಿ ಬಿನ್ ನರಸಪ್ಪ ತನ್ನ ಕೈಯಲ್ಲಿದ್ದ ರಾಡಿನಿಂದ ತನ್ನ ಅಣ್ಣನ ತಲೆಗೆ ಹೊಡೆದು ರಕ್ತಗಾಯಪಡಿಸಿದಾಗ ಉಳಿದವರು ಸಹ ಆತನಿಗೆ ಕೈಗಳಿಂದ ಹೊಡೆದು ನೋವುಂಟುಮಾಡಿರುತ್ತಾರೆ, ಮೇಲ್ಕಂಡವರೆಲ್ಲರೂ ಸೇರಿ ತಮ್ಮನ್ನು ಕುರಿತು ಜಮೀನಿನ ಸುದ್ದಿಗೆ ಏನಾದರೂ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿ ಜಗಳ ಮಾಡುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳಾದ ಮುನಿರಾಜು ಬಿನ್ ರಾಜಣ್ಣ, ನರಸೇಗೌಡ ಬಿನ್ ನರಸಿಂಗದಾಸ್ ಹಾಗೂ ಇತರರು ಅಡ್ಡ ಬಂದು ಜಗಳ ಬಿಡಿಸಿದ್ದು ಗಾಯಾಳುಗಳಾದ ತನ್ನನ್ನು ಮತ್ತು ತನ್ನ ಅಣ್ಣ ಯಾವುದೋ ವಾಹನದಲ್ಲಿ ಒಂದು ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿ ವೈದ್ಯರ ಸಲಹೆಯ ಮೇರೆಗೆ ಆಂಬ್ಯುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡು ವಾಪಸ್ಸು ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ. 6. ಶಿಡ್ಲಘಟ್ಟ   ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.117/2020 ಕಲಂ. 143,147,148,323,324,504,506 ರೆ/ವಿ 149 ಐ.ಪಿ.ಸಿ     :-

          ದಿನಾಂಕ: 12-05-2020 ರಂದು ಸಂಜೆ 6.00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೆಮೋ ಪಡೆದುಕೊಂಡು ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಶ್ರೀ ನರಸಿಂಹಮೂರ್ತಿ ಬಿನ್ ನರಸಪ್ಪ, 28 ವರ್ಷ, ಗೊಲ್ಲರು, ಜಿರಾಯ್ತಿ, ವಾಸ: ಗುಡ್ಲನರಸಿಂಹನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆ ಪಡೆದು ರಾತ್ರಿ 8.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರರಕಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಸರ್ವೆ ನಂ. 39 ರಲ್ಲಿ ಸುಮಾರು 10 ಎಕರೆ ಸರ್ಕಾರಿ ಜಮೀನಿದ್ದು ಜಮೀನಿನ ಪಕ್ಕದಲ್ಲಿರುವ ತಮ್ಮ ಗ್ರಾಮದ ವಾಸಿಗಳಾದ ಲಕ್ಷ್ಮಿನರಪ್ಪ ಬಿನ್ ನಾರಾಯಣಪ್ಪ ಆತನ ಅಣ್ಣನಾದ ನರಸಿಂಹಮೂರ್ತಿ ಬಿನ್ ನಾರಾಯಣಪ್ಪ ಎಂಬುವರು ತಮ್ಮ ಮನೆಯವರಾದ ನಾಗೇಶ ಬಿನ್ ನರಸಿಂಹಮೂರ್ತಿ, ಮುನಿರಾಜು ಬಿನ್ ಲಕ್ಷ್ಮಪ್ಪ, ಸುಷ್ಮ ಕೋಂ ಗಂಗರಾಜು ಎಂಬುವರೊಂದಿಗೆ ತಮ್ಮ ಜಮೀನನ್ನ ಬಿಟ್ಟು ಪಕ್ಕದಲ್ಲಿರುವ ಸರ್ಕಾರಿ ಜಮೀನಿನಲ್ಲಿ ತಿಪ್ಪೆಗಳನ್ನು ಹಾಕಿಕೊಳ್ಳಲು ಈ ದಿನ ದಿನಾಂಕ: ದಿನಾಂಕ: 12-05-2020 ರಂದು ಮದ್ಯಾಹ್ನ ಸುಮಾರು 2.30 ಗಂಟೆ ಸಮಯದಲ್ಲಿ ಸ್ವಚ್ಚ ಮಾಡುತ್ತಿದ್ದಾಗ ಇದನ್ನು ಕಂಡ ತನ್ನ ಮಾವ ವೆಂಕಟೇಶ್ ರವರು ತನಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ತಾನು ಸ್ಥಳಕ್ಕೆ ಹೋಗಿ ತನ್ನ ಮೊಬೈಲ್ ಮೂಲಕ ವಿಡಿಯೋ ಮಾಡುತ್ತಿದ್ದಾಗ ಲಕ್ಷ್ಮಿನರಸಪ್ಪ ತನ್ನ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದು ಆಗ ತಾನು ಮೇಲ್ಕಂಡವರಿಗೆ ಈ ಜಮೀನು ಊರಿನ ಜನರಿಗೆ ಸೇರಿದ್ದು ಇದರಲ್ಲಿ ನೀವು ಯಾಕೆ ಕೆಲಸ ಮಾಡುತ್ತಿದ್ದೀರ ಎಂದು ಕೇಳಿದ್ದಕ್ಕೆ ಮೇಲ್ಕಂಡವರು ಈ ಜಮೀನಿಗೂ ನಿನಗೂ ಏನು ಸಂಬಂದ ಲೋಪರ್ ನನ್ನ ಮಗನೇ ಎಂದು ತನ್ನ ಮೇಲೆ ಜಗಳ ತೆಗೆದು ಆ ಪೈಕಿ ಲಕ್ಷ್ಮಿನರಸಿಂಹಪ್ಪ ಎಂಬುವನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿದಾಗ ನಾಗೇಶ ಎಂಬುವನ ಲಕ್ಷ್ಮಿನರಸಪ್ಪನ ಕೈಯಲ್ಲಿದ್ದ ಮಚ್ಚನ್ನು ತೆಗೆದುಕೊಂಡು ತನ್ನ ಬೆನ್ನಿನ ಹಿಂಭಾಗ ಹೊಡೆದು ಗಾಯಪಡಿಸಿದಾಗ ಉಳಿದವರು ಕೈಗಳಿಂದ ಮೈಮೇಲೆ ಹೊಡೆದು ನೋವುಂಟುಮಾಡಿ ಮೇಲ್ಕಂಡವರೆಲ್ಲರೂ ಸೇರಿ ತನ್ನನ್ನು ಕುರಿತು ಇನ್ನೊಂದು ಸಲ ತಮ್ಮ ತಂಟೆಗೆ ಬಂದೆ ನಿನಗೆ ಒಂದು ಗತಿ ಕಾಣಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಜಗಳ ಮಾಡುತ್ತಿದ್ದಾಗ ತನ್ನ ಮಾವ ವೆಂಕಟೇಶ ಹಾಗೂ ತಮ್ಮ ಗ್ರಾಮದ ವಾಸಿಗಳಾದ ರಮೇಶ ಬಿನ್ ನಾರಾಯಣಸ್ವಾಮಿ, ಮಂಜುನಾಥ ಬಿನ್ ನಾರಾಯಣಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿ ತಮ್ಮನ್ನು ಯಾವುದೋ ಕಾರಿನಲ್ಲಿ ಕರೆದುಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆಯ ಮೇರೆಗೆ ಆಂಬ್ಯುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡಿಸಿಕೊಂಡು ವಾಪಸ್ಸು ಸರ್ಕಾರಿ ಆಸ್ಪತ್ರೆಗೆ ಬಂದಿದ್ದು, ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.118/2020 ಕಲಂ. 279,337 ಐ.ಪಿ.ಸಿ          :-

          ದಿನಾಂಕ:12-05-2020 ರಂದು ರಾತ್ರಿ 9-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಸತೀಶ್ ಕುಮಾರ್ ಎನ್ ಬಿನ್ ನಲ್ಲಪ್ಪ ಎಸ್, ಸುಮಾರು 31 ವರ್ಷ, ಪ.ಜಾತಿ, ಪೊಲೀಸ್ ಇಲಾಖೆಯಲ್ಲಿ ಕೆಲಸ, ಗೊಟ್ಟಹಳ್ಳಿ ಗ್ರಾಮ, ಸುಗಟೂರು ಹೋಬಳಿ, ಕೋಲಾರ ತಾಲ್ಲೂಕು. ವಾಸ:ಚಿಕ್ಕಬಳ್ಳಾಪುರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಈಗ್ಗೆ 12 ವರ್ಷದಿಂದ ನಾನು ಚಿಕ್ಕಬಳ್ಳಾಪುರ ಡಿ.ಎ.ಆರ್ ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತನ್ನ ಸ್ವಂತ ಸ್ಥಳ ಕೋಲಾರ ತಾಲ್ಲೂಕು ಗೊಟ್ಟಹಳ್ಳಿ ಗ್ರಾಮವಾಗಿರುತ್ತೆ. ತಾನು ಚಿಕ್ಕಬಳ್ಳಾಪುರ ಟೌನ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು,  ಈಗಿರುವಲ್ಲಿ  ದಿನಾಂಕ:10-05-2020 ರಂದು ತನಗೆ ಚಿಂತಾಮಣಿ ಕೆನರಾ  ಬ್ಯಾಂಕ್ ಕರೆನ್ಸಿ ಚೆಸ್ಟ್  ಗಾರ್ಡ್ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಬೆಳಿಗ್ಗೆ 6-00 ಗಂಟೆಗೆ ತನ್ನ ಬಾಬತ್ತು  ಕೆಎ-07 ಇ.ಸಿ-2774 ಬುಲೇಟ್ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ಹೋಗಿ ನಂತರ ಕೆಲಸ ಮುಗಿಸಿಕೊಂಡು ಮತ್ತೆ ವಾಪಸ್ಸು ಚಿಕ್ಕಬಳ್ಳಾಪುರಕ್ಕೆ ಬರಲು ಅದೇ ದಿನ ಸುಮಾರು  ಸಂಜೆ 6-45 ಗಂಟೆ ಸಮಯದಲ್ಲಿ ಚಿಂತಾಮಣಿ-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ಕದಿರಿನಾಯಕನಹಳ್ಳಿ ಗ್ರಾಮದ ಗೇಟ್ ಬಳಿ ತಾನು ರಸ್ತೆಯ ಎಡಬದಿಯಲ್ಲಿಯೇ ಬರುತ್ತಿದ್ದಾಗ ಎದರುಗಡೆಯಿಂದ ಅಂದರೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದ ಕೆಎ-02 ಇ.ಬಿ-5337 ದ್ವಿಚಕ್ರವಾಹನದ ಸವಾರ ತನ್ನ ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ  ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ತಾನು ದ್ವಿಚಕ್ರವಾಹನ ಸಮೇತ ಕೆಳಗಡೆ ಬಿದ್ದುಹೋಗಿದ್ದು ತನಗೆ ಬಲ ಕಣ್ಣಿನ ಹುಬ್ಬಿನ  ಮೇಲೆ ಮತ್ತು ಕೆಳಗಡೆ ರಕ್ತಗಾಯವಾಗಿದ್ದು, ಎದೆಗೆ, ಬಲಭುಜಕ್ಕೆ ಮೂಗೇಟುಗಳಾಗಿರುತ್ತೆ, ಬಲಕಾಲು ಮೊಣಕಾಲಿಗೆ ತರಚಿದಗಾಯವಾಗಿರುತ್ತೆ, ತನ್ನ ದ್ವಿಚಕ್ರವಾಹನ ಜಖಂಗೊಂಡಿರುತ್ತೆ. ಅಲ್ಲಿಯೇ ಇದ್ದ ಸಾರ್ವಜನಿಕರು ಗಾಯಗಳಾಗಿದ್ದ ತನ್ನನ್ನು ಯಾವುದೋ ಒಂದು ವಾಹನದಲ್ಲಿ ಹಾಕಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ತಾನು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ನಂತರ ಅಲ್ಲಿನ ವೈದ್ಯರ ಸಲಹೆಯ ಮೇರಗೆ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಂಡು ನಂತರ ಅಲ್ಲಿನ ವೈದ್ಯರ ಸಲಹೆಯ ಮೇರಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ತನಗೆ ಅಪಘಾತದಲ್ಲಿ ಉಂಟಾದ ಗಾಯಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತನಗೆ ಅಪಘಾತವುಂಟು ಮಾಡಿದ ಕೆಎ-02 ಇ.ಬಿ-5337 ದ್ವಿಚಕ್ರವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.