ದಿನಾಂಕ :13/01/2021 ರ ಅಪರಾಧ ಪ್ರಕರಣಗಳು

  1. ಡಿ.ಸಿ.ಬಿ/ಸಿಇಎನ್ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 419,420  ಐ.ಪಿ.ಸಿ & 66(C),66(D) (INFORMATION TECHNOLOGY  ACT 2000:-

     ದಿನಾಂಕ:13/1/2021 ರಂದು ಪಿರ್ಯಾದಿ  ಶ್ರೀ ಶ್ರೀನಿವಾಸಗೌಡ ಕೆ ಸಿ ಬಿನ್ ಚಿನ್ನೇಗೌಡ,55 ವರ್ಷ, ಗೊಲ್ಲಗೌಡರು, ಜಿರಾಯ್ತಿ ಕೆಲಸ, ವಾಸ ಚಿನ್ನನಾಗೇನಹಳ್ಳಿ ಗ್ರಾಮ, ಗೌರೀಬಿದನೂರು ತಾಲ್ಲೂಕು, ಮೊ ಸಂ:9449147252 ರವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿ ನೀಡಿರುವ ದೂರಿನ ಸಾರಾಂಶವೆನೆಂದರೆ   ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಿದ್ದು ಮಂಚೇನಹಳ್ಳಿಯ ಬ್ಯಾಂಕ್ ಆಪ್ ಬರೋಡಾ ಶಾಖೆಯಲ್ಲಿ ಉಳಿತಾಯ ಖಾತೆ ನಂ: 67200100001010 ರಂತೆ ಖಾತೆಯನ್ನು ಹೊಂದಿರುತ್ತೇನೆ. ಇದಕ್ಕೆ ಎ ಟಿ ಎಂ ಕಾರ್ಡನ್ನು ಪಡೆದಿದ್ದು ಇದರಲ್ಲಿ ನನ್ನ ಹಣ ಕಾಸಿನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ಈಗಿರುವಲ್ಲಿ ದಿನಾಂಕ:05/01/2021 ರಂದು 10-00 ಗಂಟೆಯಲ್ಲಿ ನಾನು ನಮ್ಮ ತೋಟದಲ್ಲಿ  ಕೆಲಸ ಮಾಡುತ್ತಿದ್ದಾಗ 8388843643  ಮೊಬೈಲ್ ನಂಬರ್ ನಿಂದ ನನ್ನ ಮೊಬೈಲ್ ಗೆ ಕರೆ ಬಂದಿದ್ದು, ನಾನು ಕರೆ ಸ್ವೀಕರಿಸಲಾಗಿ ಕರೆ ಮಾಡಿರುವ ವ್ಯಕ್ತಿಯು ತಾನು ಬರೋಡಾ ಬ್ಯಾಂಕ್ ಹೆಡ್ ಆಪೀಸ್ ನಿಂದ ಕರೆ ಮಾಡುತ್ತಿರುವುದಾಗಿ  ನಿಮ್ಮ ಎ.ಟಿ.ಎಂ ಕಾರ್ಡ್ನ್ನು ವಿಜಯ ಬ್ಯಾಂಕ್ ನಿಂದ ಬ್ಯಾಂಕ್ ಆಪ್ ಬರೋಡಾಗೆ ವರ್ಗಾಯಿಸಬೇಕು ಅಂತ ತಿಳಿಸಿ,  ಎ.ಟಿ.ಎಂ ಕಾರ್ಡ್ ಮೇಲಿನ  16 ನಂಬರ್ ಗಳನ್ನು ತಿಳಿಸಲು ಹೇಳಿದನು.  ನಾನು ನಿಜವೆಂದು ಆತನ ಮಾತನ್ನು ನಂಬಿಕೊಂಡು ನನ್ನ ಎ.ಟಿ.ಎಂ ಕಾರ್ಡ್  ನಂಬರ್ ಅನ್ನು ಆತನಿಗೆ ಹೇಳಿರುತ್ತೇನೆ. ನಂತರ ಓ.ಟಿ.ಪಿ ನಂಬರ್ ಇರುವ ಸಂದೇಶ ಬರುವುದಾಗಿ ಸದರಿ ಓ.ಟಿ.ಪಿ ನಂಬರ್ ಹೇಳಿ ನಿಮ್ಮ ಎ.ಟಿ.ಎಂ ಕಾರ್ಡ್  ಬ್ಯಾಂಕ್ ಆಪ್ ಬರೋಡಾಗೆ ವರ್ಗಾವಣೆ  ಮಾಡಿಕೊಡುವುದಾಗಿ ತಿಳಿಸಿದನು. ಆತನು ಹೇಳಿದಂತೆ ನನ್ನ ಮೊಬೈಲ್ ಗೆ  ಬಂದಿದ್ದ ಒಟಿಪಿ ನಂಬರ್ಗಳನ್ನು ದಿನಾಂಕ:5/1/2021 ರಂದು 02 ಭಾರಿ ,6/1/2021 ರಂದು 5 ಭಾರಿ & 8/1/2021 ರಂದು 02  ಭಾರಿ ಆತನಿಗೆ ಹೇಳಿರುತ್ತೇನೆ, ನಂತರ ನನ್ನ ಖಾತೆಯಿಂದ ಮೊದಲು 5000/-, 45000/- 10.236/-10467/-.19999/- 5000/-3000/-10236/- ,10467/-ರೂಗಳು ಕಟಾವು ಆಗಿರುವ ಬಗ್ಗೆ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ನನಗೆ ತಿಳಿಯಿತು ಮೇಲ್ಕಂಡ ಓಟಿ.ಪಿ ನಂಬರ್ ಗಳನ್ನು ನನ್ನಿಂದ ಪಡೆದುಕೊಂಡು ಒಟ್ಟು 1,19,405/- ರೂಗಳು ವರ್ಗಾವಣೆ/ ಕಡಿತ ಮಾಡಿಕೊಂಡಿರುವ ಬಗ್ಗೆ ನನಗೆ ಬ್ಯಾಂಕ್  ಹೋಗಿ ವಿಚಾರಿಸಿದಾಗ ತಿಳಿಯಿತು. ನನ್ನ ಖಾತೆಯಿಂದ ಹಣ ವರ್ಗಾವಣೆ ಆದ ಬಗ್ಗೆ ಮಂಚೇನಹಳ್ಳಿ  ಬ್ಯಾಂಕ್ ವ್ಯವಸ್ಥಾಪಕರಲ್ಲಿ ದೂರು ನೀಡಲು ಓಡಾಡುತ್ತಿದ್ದುದರಿಂದ ದೂರು ನೀಡಲು ತಡವಾಗಿರುತ್ತದೆ. ನನಗೆ ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿ ನಂಬಿಸಿ ನನ್ನ ಖಾತೆಯಲ್ಲಿದ್ದ ಮೇಲ್ಕಂಡ ಹಣವನ್ನು ವರ್ಗಾಯಿಸಿ ಕೊಂಡು ವಂಚಿಸಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ: 12/01/2021ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಬೆಂಗಳೂರು ನಗರದ ವಾಸಿ ಸೈಯ್ಯದ್ ಅಬ್ದುಲ್ ವಾಹಿದ್ ಬಿನ್ ಸೈಯ್ಯದ್ ಅಬ್ದುಲ್ ಸತ್ತಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:12.01.2021 ರಂದು ಮದ್ಯಾಹ್ನ 15:30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೆನೆಂದರೆ ತಾನು ಈಗ್ಗೆ ಸುಮಾರು 6 ತಿಂಗಳುಗಳಿಂದ ತಮ್ಮ ಪೌಲ್ಟ್ರಿ ಸೆಂಟರ್ ನಲ್ಲಿ ಧರ್ಮೇಂದ್ರ ಕುಮಾರ್ ಬಿನ್ ಕಿಶೋರ್ ಶಾ, 33 ವರ್ಷ, ಮಾಣಿಕ್ ಪುರ್ ಗ್ರಾಮ, ಗೈಘಾಟ್ ತಾಲ್ಲೂಕು, ಚಂಪಾರನ್ ಜಿಲ್ಲೆ, ಬಿಹಾರ ರಾಜ್ಯ ಮತ್ತು ಶಂಭು ಷಾ ಬಿನ್ ಶಂಕರ್ ಷಾ, 30 ವರ್ಷ, ವಾರ್ಡ್ ನಂ-9, ಅಮಾವ ಗ್ರಾಮ, ಸಿಸ್ವಾ ತಾಲ್ಲೂಕು, ಚಂಪಾರನ್ ಜಿಲ್ಲೆ, ಬಿಹಾರ್ ರಾಜ್ಯರವರುಗಳು ತನ್ನ ಪೌಲ್ಟ್ರಿ ಫಾರಂನಲ್ಲಿ ಕೂಲಿಕೆಲಸ ಮಾಡಿಕೊಂಡು ತನ್ನ ಪೌಲ್ಟ್ರಿ ಸೆಂಟರ್ ನಲ್ಲಿಯೇ ವಾಸವಾಗಿದ್ದರು. ತನ್ನ ಪೌಲ್ಟ್ರಿ ಸೆಂಟರ್ ಗೆ ಕೋಳಿಗಳನ್ನು ಲೋಡ್ ಮಾಡಿಕೊಂಡು ಬರಲು ಪರಿಚಯಸ್ಥರಾದ ಮಹಮ್ಮದ್ ಅಜ್ಮತ್ತುಲ್ಲಾ ಖಾನ್ ರವರ ಬಾಬತ್ತು KA-53, C-7346 ಐಚರ್ ಕ್ಯಾಂಟರ್ ವಾಹನದಲ್ಲಿ ಚಾಲಕ ಸೈಯ್ಯದ್ ಸಮೀರ್ ರವರ ಜೊತೆಯಲ್ಲಿ ಧರ್ಮೇಂದ್ರ ಕುಮಾರ್ ಮತ್ತು ಶಂಭು ಷಾ ರವರನ್ನು ದಿನಾಂಕ: 26/12/2020 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ಕಳುಹಿಸಿಕೊಟ್ಟಿದ್ದು, ಐಚರ್ ಕ್ಯಾಂಟರ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಚಾಲಕ ಸೈಯ್ಯದ್ ಸಮೀರ್ ರವರು ಬೆಂಗಳೂರು ಬಿಟ್ಟು ಚಿಕ್ಕಬಳ್ಳಾಪುರ ಮಾರ್ಗವಾಗಿ ಪೆರೇಸಂದ್ರಕ್ಕೆ ಹೋಗುವಾಗ ರಾತ್ರಿ ಸುಮಾರು 11-30 ಗಂಟೆ ಸಮಯದಲ್ಲಿ ಬೆಂಗಳೂರು-ಹೈದರಾಬಾದ್ ರಸ್ತೆಯಲ್ಲಿ ಡೊಡ್ಡಪೈಯಲಗುರ್ಕಿ ಗ್ರಾಮದ ಗೇಟ್ ಸಮೀಪ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ ಯಾವುದೋ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ಐಚರ್ ಕ್ಯಾಂಟರ್ ವಾಹನದ ಮುಂಭಾಗ ಜಖಂಗೊಂಡಿದ್ದು, ಕ್ಯಾಂಟರ್ ವಾಹನದಲ್ಲಿದ್ದ ಧರ್ಮೇಂದ್ರ ಕುಮಾರ್ ರವರಿಗೆ ಎಡಕಾಲಿಗೆ ಮತ್ತು ಶಂಭು ಷಾ ಎಡಕಾಲಿಗೆ, ಪಕ್ಕೆಲಬುಗಳಿಗೆ, ಎರಡೂ ಕುಂಡಿಗಳಿಗೆ [ರುಂಡಿಗಳಿಗೆ] ಗಾಯಗಳಾಗಿದ್ದು, ಸ್ಥಳೀಯರ ಸಹಾಯದಿಂದ ಚಾಲಕ ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದು, ವಿಷಯ ತಿಳಿದು ತಾನು ಚಿಕ್ಕಬಳ್ಳಾಪುರಕ್ಕೆ ಬಂದು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಅವರನ್ನು ನೋಡಿಕೊಳ್ಳುವವರು ಅವರ ಸಂಬಂದಿಕರು ಯಾರೂ ಇಲ್ಲದೇ ಇದ್ದುದರಿಂದ ತಾನು ಅವರೊಂದಿಗೆ ಇದ್ದು, ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಅಪಘಾತವನ್ನುಂಟು ಮಾಡಿದ KA-53, C-7346 ಐಚರ್ ಕ್ಯಾಂಟರ್ ವಾಹನದ ಚಾಲಕ ಸೈಯ್ಯದ್ ಸಮೀರ್ ರವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ಈ ಪ್ರ ವ,ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 302 ಐ.ಪಿ.ಸಿ:-

          ದಿನಾಂಕ:-12/01/2021 ರಂದು ಸಂಜೆ 06-00 ಗಂಟೆ ಸಮಯದಲ್ಲಿ ಪಿರ್ಯಾದಿ ಕೃಷ್ಣಮೂರ್ತಿ ಎ.ಎಸ್ ರವರು ಅಂಗರೇಖನಹಳ್ಳಿ ಗ್ರಾಮದ ಕೃತ ನಡೆದ ಸ್ಥಳದಲ್ಲಿ  ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತನ್ನ ತಂದೆ ಸೊಣ್ಣಪ್ಪ ರವರಿಗೆ ಇಬ್ಬರು ಹೆಂಡತಿಯರಿದ್ದು, 1ನೇ ಮಾರಮ್ಮ ಮತ್ತು 2ನೇ ಗೌರಮ್ಮ ರವರಾಗಿದ್ದು, ತಾನು 1ನೇ ಮಾರಮ್ಮನ ಮೂರನೇ ಮಗನಾಗಿದ್ದು,ತನ್ನ ತಾಯಿಗೆ ಒಟ್ಟು 06 ಜನ ಮಕ್ಕಳು ಹಾಗೂ ತನ್ನ ಚಿಕ್ಕಮ್ಮ ರವರಿಗೆ 02 ಜನ ಗಂಡು ಮಕ್ಕಳು ಇದ್ದು ಎಲ್ಲರೂ ಒಟ್ಟು ಕುಟುಂಬದಲ್ಲಿ ವಾಸವಾಗಿದ್ದು, ತಾನು 06 ವರ್ಷಗಳ ಹಿಂದೆ ಕೊರಮಂಗಲ ಗ್ರಾಮದ ವಾಸಿ ಶ್ರೀ ವೆಂಕಟರಾಜಪ್ಪ ರವರ ಮಗಳಾದ ಶಶಿಕಲಾ ರವರನ್ನು ಮದುವೆಯಾಗಿದ್ದು, ತನ್ನ 1ನೇ ಚಾರ್ವಿತ (05ವರ್ಷ) 2ನೇ ವೈನಿತ (02ವರ್ಷ) ಆಗಿದ್ದು,ತನ್ನ ಮಗಳು ಚಾರ್ವಿತ ಹುಟ್ಟಿದಾಗಿನಿಂದ ಬಲಗಾಲಿಗೆ ಅಂಗವಿಕಲತೆಯನ್ನು ಹೊಂದಿದ,ಈ ಅಂಗವಿಕಲತೆಯನ್ನು ತನ್ನ ತಮ್ಮನಾದ ಶಂಕರ ರವರು ಮೊದಲಿನಿಂದಲೂ ಮನೆಗೆ ಧರಿದ್ರಮಗು ಮನೆಯಲ್ಲಿ ಇರಬಾರದು,ಮಗುವನ್ನು ಸಾಯಿಸಬೇಕೆಂದು ಆಗಾಗ ಗಲಾಟೆ ಮಾಡುತ್ತಿದ್ದನು ಸುಮಾರು ಮೂರು ವರ್ಷಗಳ ಹಿಂದೆ ಇದೇ ವಿಚಾರದಲ್ಲಿ ಮನೆಯಲ್ಲಿ ಜಗಳ ಮಾಡಿಕೊಂಡು ಮನೆಯನ್ನು ಬಿಟ್ಟು ಹೊರಟು ಹೋಗಿ ತೊಟದ ಶೆಡ್ಡನಲ್ಲಿ ವಾಸ ಮಾಡಿಕೊಂಡು ಹೋಟೆಲ್ ಗಳಲ್ಲಿ ಊಟ ತಿಂದುಕೊಂಡು ಇದ್ದನು ಇತ್ತಿಚಿಗೆ 05 ತಿಂಗಳ ಹಿಂದೆ ಮನೆಗೆ ವಾಪಸ್ಸು ಬಂದಿದ್ದು, ಮನೆಯಲ್ಲಿ ಈ ಹಿಂದೆ ಆಗಿದ್ದ ಗಲಾಟೆಯಿಂದ ತನ್ನ ಮಗಳನ್ನು ಯಾರಾದರು ಒಬ್ಬರು ನೋಡಿಕೊಳ್ಳುತ್ತಿದ್ದರು, ಈಗಿರುವಾಗ ಈ ದಿನ ಸಂಜೆ ತಾನು ತೋಟದ ಬಳಿ ಇದ್ದಾಗ ತಮ್ಮ ಗ್ರಾಮದ ವಾಸಿ ಕೃಷ್ಣಪ್ಪ ರವರು ತನ್ನ ಬಳಿ ಬಂದು ತನ್ನ ಮಗಳನ್ನು ಶಂಕರ್ ಚಾಕುವಿನಿಂದ ಕತ್ತು ಕೊಯ್ದು ಸಾಯಿಸಿರುತ್ತಾನೆಂದು ತಿಳಿಸಿದ.ಈ ಕೂಡಲೆ ತಾನು ಮನೆಯ ಬಳಿ ಹೋಗಿ ವಿಚಾರಮಾಡಲಾಗಿ,ನೋಡಲಾಗಿ ನಿಜವಾಗಿದ್ದು ತನ್ನ ಹೆಂಡತೆ ಶಶಿಕಲಾ ಮಗವನ್ನು ಎತ್ತಿಕೊಂಡಿದ್ದು ಕುತ್ತುಗೆಯಲ್ಲಿ ರಕ್ತ ಸುರಿಯುತ್ತಿತ್ತು,ತನ್ನ ಹೆಂಡತಿಯನ್ನು ವಿಚಾರಿಸಿದಾಗ ಸಂಜೆ ಸುಮಾರು 04-30 ಗಂಟೆಯಲ್ಲಿ ತಮ್ಮ ಮನೆಯ ಮುಂದೆ ಇರುವ ಪಟಾಲಮ್ಮ ದೇವಾಸ್ಥಾನದ ಬಳಿ ಆಟವಾಡುತ್ತಿದ್ದ ತನ್ನ ಮಗಳ ಚಾರ್ವಿತ್ ಳನ್ನು ಗ್ರಾಮದಿಂದ ಬಂದ ಶಂಕರರವರು ತನ್ನ ಜೇಬಿನಲ್ಲಿ ಚಾಕುವನ್ನು ಇಟ್ಟುಕೊಂಡಿದವನ್ನು ಮಗುವನ್ನು ಹಿಡಿದುಕೊಂಡು ದೇವಾಸ್ಥಾನದ ಮುಂದೆಚಾಕುವಿನಿಂದ ಕುತ್ತಿಗೆಯನ್ನು ಕೊಯ್ಯದಿದ್ದು ಪಿರ್ಯಾದಿಯ ಹೆಂಡತಿ ಶಶಿಕಲಾ ಮತ್ತು  ತಮ್ಮ ಗ್ರಾಮದ ಕೆಂಪಣ್ಣ ಬಿನ್ ಲೇಟ್ ಹನುಮಂತರಾಯಪ್ಪ,ಗಂಗಾಧರ ಬಿನ್ ಮುನಿಯಪ್ಪ,ಆನಂದಮ್ಮ ಕೋಂ ನರಸಿಂಹಪ್ಪರವರು ಕುದ್ದು ನೋಡಿ ಅಲ್ಲಿಗೆ ಹೋಗುವಷ್ಟರಲ್ಲಿ ಶಂಕರ್ ರವರು ಚಾಕುವನ್ನುತನ್ನ ಮನೆಯ ಮುಂದೆ ಬೀಸಾಡಿ ಓಡಿಹೋಗಿರುತ್ತಾನೆ ಎಂದ ತನ್ನ ಹೆಂಡತಿ ತಿಳಿಸಿರುತ್ತಾರೆ,ತನ್ನ ಮಗಳು ತೀವ್ರ ರಕ್ತಸಾವ್ರದಿಂದ ಮೃತ ಪಟ್ಟಿರುತ್ತಾಳೆ,ತನ್ನ ಮಗಳು ಚಾರ್ವಿತ್ ಅಂಗವಿಕಲತೆ ಮತ್ತು ಮನೆಯಲ್ಲಿ ಇದ್ದರೆ ಧರಿದ್ರವೆಂದು ಹೊಂಚುಹಾಕಿ ಕತ್ತು ಕೊಯ್ದು ಕೊಲೆ ಮಾಡಿರುತ್ತಾನೆಂದು ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿದರ ಮೇರೆಗೆ ನೀಡಿದ ದೂರಿನ್ನು ಪಡೆದು ಸಂಜೆ 06-45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿರುತ್ತೆ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 143,147,148,448,323,504,149  ಐ.ಪಿ.ಸಿ:-

          ದಿನಾಂಕ: 03-01-2021 ರಂದು  ಸಂಜೆ  ಈ ಕೇಸಿನ ಪಿರ್ಯಾಧಿ ಶ್ರೀ ಮಹೇಶ್  ಮುಖ್ಯ ಆಡಳಿತಾಧಿಕಾರಿಗಳು ಅನನ್ಯ ಆಸ್ಪತ್ರೆ ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ದೂರಿನ ಸಾರಾಂಶವೇನೆಂದರೆ,  ದಿನಾಂಕ: 30-12-2020 ರಂದು  ಮದ್ಯಾಹ್ನ ಸುಮಾರು 2-30 ಗಂಟೆಯಲ್ಲಿ ಶಿಡ್ಲಘಟ್ಟ ತಾಲ್ಲೂಕು ಪಲಿಚೇರ್ಲು ಗ್ರಾಮದ ವಾಸಿಯಾದ ಶ್ರೀ ಕೃಷ್ಣಪ್ಪ ಬಿನ್ ಕೆಂಪಣ್ಣ ಎಂಬುವವರನ್ನು ಚಿಂತಾಜನಿಕ ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿ   ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು  ಕರ್ತವ್ಯದಲ್ಲಿದ್ದ  ವೈಧ್ಯರು ರೋಗಿಯ ಅನಾರೋಗ್ಯ ಪರಿಸ್ಥಿತಿಯ ಬಗ್ಗೆ  ಕ್ಲೀಷ್ಟತೆಯ ಬಗ್ಗೆ  ತಿಳುವಳಿಕೆ ನೀಡಿದಾಗ  ಕುಟುಂಭದವರು  ಚಿಕಿತ್ಸೆ ಮಾಡಲು ಒಪ್ಪಿಗೆ ಸೂಚಿಸಿ ಹೆಚ್ಚಿನ ಅಪಾಯದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕೊಟ್ಟಿರುತ್ತಾರೆ. ಅದರಂತೆ ರೋಗಿ ಕೃಷ್ಣಪ್ಪರವರನ್ನು  ಐಸಿಯುಗೆ  ದಾಖಲು ಮಾಡಿಕೊಂಡು  ವೈದ್ಯರು ಚಿಕಿತ್ಸೆಯನ್ನು  ಪ್ರಾರಂಭಿಸಿದ್ದು. ರೋಗಿಯ ಪರಿಸ್ಥಿತಿಯ ಬಗ್ಗೆ ಡಾ|| ಮಧುವನ್ ರವರು ಅವರ ಮಗಳಾದ ಕವಿತಾರವರಿಗೆ  ಮತ್ತು ಅವರ ಕುಟುಂಭದವರಿಗೆ ರೋಗಿಯ ಸ್ಥಿತಿ ತುಂಬಾ ಗಂಭೀರವಾಗಿರುವುದಾಗಿ ತಿಳಿಸಿ ಹೇಳಿರುತ್ತಾರೆ. ದಿನಾಂಕ: 31-12-2020 ರಂದು ಬೆಳಗ್ಗೆ 8-00 ಗಂಟೆಯಲ್ಲಿ ಕವಿತಾ ರವರು ಮತ್ತು ಅವರ ಕುಟುಂಭದವರು ಐಸಿಯುನಲ್ಲಿದ್ದ  ರೋಗಿ ಕೃಷ್ಣಪ್ಪ ರವರನ್ನು  ನೋಡಿ ಡಾ|| ಅಮೃತ್ ರವರನ್ನು, ತನ್ನ ತಂದೆಯನ್ನು ಡಿಜ್ಚಾರ್ಜ ಮಾಡಿಕೊಳ್ಳುವುದಾಗಿ ತಿಳಿಸಿದ್ದು ಆಗ ಡಾ|| ಅಮೃತ್ ರವರು ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಯಾವುದಾದರೂ ಆಸ್ಪತ್ರೆಗೆ ಸೇರಿಸುವಿರಾ ಎಂದು  ಕೇಳಿರುತ್ತಾರೆ.   ಕವಿತಾ ರವರು  ತಮ್ಮ ತಂದೆ ಬದುಕುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದರಿಂದ  ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿರುತ್ತಾರೆ.  ಆಗ ವೈಧ್ಯರು  ಕವಿತಾರವರನ್ನು ಐಸಿಯುಗೆ ಕರೆದುಕೊಂಡು ಹೋಗಿ ರೋಗಿ ಕೃಷ್ಣಪ್ಪರವರು ಉಸಿರಾಟದ ಬಗ್ಗೆ ಪಲ್ಸ್ , ಉಸಿರಾಟದ ಬಗ್ಗೆ  ತೋರಿಸಿ ರೋಗಿಯು ಐಸಿಯು ವೆಂಟಿಲೇಟರ್ ಸಹಾಯದಲ್ಲಿ ಉಸಿರಾಡುತ್ತಿರುವುದಾಗಿ  ಅದನ್ನು ತೆಗೆದರೆ ಬದುಕುವ ಸಾಧ್ಯತೆಗಳು ಕಡಿಮೆ ಇರುವುದಾಗಿ ತಿಳಿಸಿದರೂ  ಎಲ್ಲಕ್ಕೂ ಒಪ್ಪಿದ್ದರಿಂದ (ಡಿಸ್ಚಾರ್ಜ್ ಅಗೆನಿಸ್ಟ್ ಮೆಡಿಕಲ್ ಅಡ್ವೈಸ್) ಎಂದು ಡಿಸ್ಚಾರ್ಜ್ ಮಾಡಿರುತ್ತಾರೆ.  ಅದರಂತೆ  ಮದ್ಯಾಹ್ನ 2-30 ಗಂಟೆಗೆ ರೋಗಿ ಕೃಷ್ಣಪ್ಪ ರವರನ್ನು ಐಸಿಯು ನಿಂದ ಸ್ಕ್ರೇಚರ್ ಗೆ ವರ್ಗಾಯಿಸುತ್ತಿದ್ದಾಗ  ತೀವ್ರ ಉಸಿರಾಟದ ತೊಂದರೆಯಿಂದ  ನಾಡಿ ಮಿಡಿತ  ನಿಂತುಹೋಗಿರುತ್ತದೆ ಪರೀಕ್ಷಿಸಿದ ವೈದ್ಯರು  ದೃಡೀಕರಿಸಿರುತ್ತಾರೆ.  ಆಗ ಕವಿತಾ ಮತ್ತು ಅವರ ಕುಟುಂಭದವರು  ಸ್ಥಳದಲ್ಲಿ ಗಲಾಟೆ ಮಾಡಿ ನಾವು ಹಣ ಕೊಡುತ್ತೇವೆ  ಕೃಷ್ಣಪ್ಪರವರನ್ನು ಉಳಿಸಿಕೊಡಿ ಎಂದು ಆಸ್ಪತ್ರೆಯಲ್ಲಿ ಕೂಗಾಡಿ  ಕೃಷ್ಣಪ್ಪರವರು ಬೆಳಗ್ಗೆಯೇ ಸತ್ತು ಹೋಗಿರುತ್ತಾರೆ ನಮಗೆ ತಿಳಿಸಿಲ್ಲವೆಂದು  ಇಲ್ಲಸಲ್ಲದ ಅರೋಪಗಳನ್ನು ಮಾಡಿ ಆಸ್ಪತ್ರೆಯ ಸಿಬ್ಬಂಧಿಯವರ ಮೇಲೆ  ದೌಜ್ಯನ್ಯವೆಸಗಿ ಗಲಾಟೆ ಮಾಡಿ ಅವ್ಯಾಚ್ಯಶಬ್ದಗಳಿಂದ ಬೈದು ಐಸಿಯು ಬಾಗಿಲು ಹೊಡೆದು  ಸಿಬ್ಬಂಧಿಯನ್ನು ಹೊರಗೆಡೆ ಎಳೆಯಲು ಪ್ರಯತ್ನಿಸಿದ್ದು ಕೂಡಲೆ ಪೊಲೀಸರಿಗೆ ಕರೆ ಮಾಡಿ ರಕ್ಷಣೆಗಾಗಿ  ಕೋರಿದ ಕೂಡಲೆ ಬಂದು  ಗಲಾಟೆಗೆ ಸೇರಿದ್ದ ಗುಂಪನ್ನು ಚದುರಿಸಿದ್ದು ಆಗ ಕೃಷ್ಣಪ್ಪ ರವರು ಸತ್ತು ಹೋಗಿದ್ದನ್ನು  ಮುಂದಿಟ್ಟುಕೊಂಡು ಹೆಚ್ಚಿನ ಹಣವನ್ನು ವಾಪಸ್ಸು ಮಾಡಲು ಒತ್ತಡ ಹೇರಿದಾಗ ಕವಿತಾರವರು ಚಿಕಿತ್ಸೆಗೆ ಪಾವತಿಸಿದ್ದ ಹಣವನ್ನು ವಾಪಸ್ಸು ಹಿಂದಿರುಗಿಸಿದ್ದಾಗಿ, ರೋಗಿಯ ಪ್ರಾಣವನ್ನು ಉಳಿಸುವ ವಿಚಾರವಾಗಿ ಎಲ್ಲಾ ಚಿಕಿತ್ಸೆಯನ್ನು ಕೈಗೊಂಡಿದ್ದರೂ  ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟ ಕೃಷ್ಣಪ್ಪರವರ ವಿಚಾರವಾಗಿ  ಅಕ್ರಮವಾಗಿ  ಗುಂಪು ಕಟ್ಟಿಕೊಂಡು ಐಸಿಯುಗೆ ನುಗ್ಗಿ ಆಸ್ಪತ್ರೆಯ  ಸಿಬ್ಬಂಧಿಯನ್ನು ತಳ್ಳಾಡಿ, ಅವ್ಯಾಚ್ಯ ಶಬ್ದಗಳಿಂದ ಬೈದು ಬೆದರಿಸಿದ ಕವಿತಾ ಮತ್ತು ಅವರ ಕುಟುಂಭಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿದ ಮೇರೆಗೆ  ದಿನಾಂಕ:03-01-2021 ರಂದು ಠಾಣಾ ಎನ್ ಸಿಅರ್-05/2021 ರಂತೆ ದಾಖಲಿಸಿಕೊಂಡು  ಪ್ರಕರಣದಲ್ಲಿ  ಕಲಂ 143, 147, 148, 448, 323, 504 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯಕ್ಕೆ  ಮನವಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದು ಈ ದಿನ  ದಿನಾಂಕ: 12-01-21 ರಂದು ಬೆಳಗ್ಗೆ 11-00 ಗಂಟೆಗೆ ನ್ಯಾಯಾಲಯದ ಪೇದೆ ಪಿಸಿ-332 ರಂದು ತಂದು ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಮೇರೆಗೆ ಮೊಸಂ 02/2021 ಕಲಂ 143, 147, 148, 448, 323, 504 ರೆ/ವಿ 149 ಐಪಿಸಿ  ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.15/2021 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 12/01/2021 ರಂದು ರಾತ್ರಿ 8.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಠಾಣೆಯ CPC-339 ಶ್ರೀ ಕರಿಯಪ್ಪ ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ದಿನಾಂಕ: 12/01/2021 ರಂದು ಬೆಳಿಗ್ಗೆ 10.30 ಗಂಟೆಯ ಸಮಯದಲ್ಲಿ ಮಾನ್ಯ  ಶ್ರೀ ಶ್ರೀನಿವಾಸಪ್ಪ ಕೆ.ಎಂ, ಸಿ.ಪಿ.ಐ, ಚಿಂತಾಮಣಿ (ಗ್ರಾ) ವೃತ್ತ ರವರಿಗೆ ಚಿಂತಾಮಣಿ ಗ್ರಾಮಾಂತರ  ಠಾಣಾ ಸರಹದ್ದಿಗೆ ಸೇರಿದ ದೊಡ್ಡಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಮಾನ್ಯರ ಮೌಖಿಕ ಆದೇಶದಂತೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ನಾರಾಯಣಸ್ವಾಮಿ.ಕೆ ಮತ್ತು ಸಿಬ್ಬಂದಿಯವರಾದ  ನರಸಿಂಹಮೂರ್ತಿ ಹೆಚ್.ಸಿ 124, ಜಗದೀಶ್ ಹೆಚ್.ಸಿ 41, ವೆಂಕಟರವಣ ಪಿ.ಸಿ-544, ಸರ್ವೆಶ್ ಪಿ.ಸಿ-436, ವಿಶ್ವನಾಥ ಪಿ.ಸಿ-516, ಅರುಣ್ ಪಿ.ಸಿ-464, ಶ್ರೀನಾಥರಾವ್ ಪಿ.ಸಿ-466, ರೋಷನ್ ಜಮೀರ್ ಪಿ.ಸಿ-23 ರವರುಗಳೊಂದಿಗೆ ಪಂಚರನ್ನು ಠಾಣೆಯ ಸರ್ಕಾರಿ ಜೀಪಿನಲ್ಲಿ ಹಾಗೂ ದ್ವಿಚಕ್ರವಾಹನಗಳಲ್ಲಿ ದೊಡ್ಡಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರಿ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸದರಿ ಅರಣ್ಯ ಪ್ರದೇಶದಲ್ಲಿ ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದ ಸದರಿ ಗುಂಪನ್ನು ಪೊಲೀಸರು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಕೆಲವರು ಸ್ಥಳದಿಂದ ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದವರನ್ನು ಸುತ್ತುವರಿದು ಹಿಡಿದು ಅವರ ಹೆಸರು, ವಿಳಾಸವನ್ನು ಕೇಳಲಾಗಿ 1) ಆದಿನಾರಾಯಣ ಬಿನ್ ಪಾಪಣ್ಣ,  45 ವರ್ಷ, ನಾಯಕರು, ಕೂಲಿ ಕೆಲಸ, ಪೈಪಾಳ್ಯ ಗ್ರಾಮ, ಬಾಗೇಪಲ್ಲಿ ತಾಲ್ಲೂಕು, 2) ರಾಜೇಶ್ ಬಿನ್  ಲೇಟ್ ಕದಿರಪ್ಪ, 40 ವರ್ಷ, ನಾಯಕರು, ಕೂಲಿ ಕೆಲಸ, ದೊಡ್ಡಹಳ್ಳಿ ಚಿಂತಾಮಣಿ ತಾಲ್ಲೂಕು, 3) ವೆಂಕಟರವಣಪ್ಪ ಬಿನ್ ಗೋಪಾಲಪ್ಪ, 65 ವರ್ಷ, ಕುರುಬರು, ಜಿರಾಯ್ತಿ, ದೊಡ್ಡಹಳ್ಳಿ ಚಿಂತಾಮಣಿ ತಾಲ್ಲೂಕು, 4)  ಸತ್ಯನಾರಾಯಣರೆಡ್ಡಿ ಬಿನ್ ಮುನಿರೆಡ್ಡಿ, 44 ವರ್ಷ, ಒಕ್ಕಲಿಗರು, ಜಿರಾಯ್ತಿ, ಭತ್ತಲಹಳ್ಳಿ ಚಿಂತಾಮಣಿ ತಾಲ್ಲೂಕು, 5) ವೆಂಕಟರವಣಪ್ಪ ಬಿನ್ ವೆಂಕಟರಾಯಪ್ಪ, 50 ವರ್ಷ, ಒಕ್ಕಲಿಗರು, ಜಿರಾಯ್ತಿ, ಕುಂಟ್ಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು, 6) ಶ್ರೀನಿವಾಸ ಬಿನ್ ಲೇಟ್ ಚಿನ್ನಬಯ್ಯಣ್ಣ, 44 ವರ್ಷ, ಕೂಲಿ ಕೆಲಸ, ಕರಿಯಪಲ್ಲಿ, ಗ್ರಾಮ ಮುಂಗಾನಹಳ್ಳಿ ಹೋಬಳಿ ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ ಆರೋಪಿಗಳು ಪಂದ್ಯಕ್ಕೆಂದು ಪಣಕ್ಕೆ ಇಟ್ಟಿದ್ದ, ಒಟ್ಟು 2,320-ರೂ ನಗದು ಹಣ,  02 ಜೀವಂತ ಕೋಳಿ ಹುಂಜಗಳು ಹಾಗೂ 1) ನೋಂದಣಿ ಸಂಖ್ಯೆ:ಕೆಎ-40 ಕೆ-7060 ಪ್ಯಾಷನ್ ಪ್ರೋ, 2) ಕೆಎ-40 ಎಕ್ಸ್-3076 ಹೀರೋ ಸ್ಪ್ಲೆಂಡರ್ ಪ್ಲಸ್, 3) ಕೆಎ-43 ಕೆ-3038 ಡಿಸ್ಕವರ್, 4) ಕೆಎ-40 ಕ್ಯೂ-8550 ಟಿವಿಎಸ್ ಹೆವಿ ಡ್ಯೂಟಿ, 5) ಕೆಎ-51 ಇಸಿ-9763 ಡಿಸ್ಕವರ್ 6) ಕೆಎ-05 ಜೆಹೆಚ್-4710 ಮಹೀಂದ್ರಾ ಸೆಂಚುರೋ, 7) ಕೆಎ-11 ವೈ-0875 ಪ್ಯಾಷನ್ ಪ್ರೋ, 8) ಕೆಎ-07 ಎಲ್-9278 ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರವಾಹನಗಳನ್ನು ಮತ್ತು 9) ಎಪಿ-39 ಜಿಎಫ್-4836 ಮಾರುತಿ ಈಕೋ ವಾಹನವನ್ನು ಸ್ಥಳದಲ್ಲಿದ್ದವುಗಳನ್ನು ಮದ್ಯಾಹ್ನ 12-00 ಗಂಟೆಯಿಂದ ಮದ್ಯಾಹ್ನ 1-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಠಾಣೆಗೆ ವಾಪಸ್ಸಾಗಿದ್ದು ಮೇಲ್ಕಂಡಂತೆ ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.16/2021 ಕಲಂ. 279,337 ಐ.ಪಿ.ಸಿ:-

          ದಿನಾಂಕ:13/01/2021 ರಂದು ಮದ್ಯಾಹ್ನ 1.30 ಗಂಟೆಗೆ ಪಿರ್ಯಾದಿದಾರರಾದ ರಾಮಾಂಜಿನಪ್ಪ ಬಿನ್ ಲೇಟ್ ಮುನಿಯಪ್ಪ, 40 ವರ್ಷ, ಎ.ಕೆ ಜನಾಂಗ, ಕೂಲಿ ಕೆಲಸ, ವಾಸ: ಅಮ್ಮನಲ್ಲೂರು ಗ್ರಾಮ, ಕೋಲಾರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:09/01/2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ತಮ್ಮ ಚಿಕ್ಕಪ್ಪನಾದ ಸೂಲೂರಪ್ಪ ನವರ ಮಗನಾದ ಎಸ್.ರಾಮಾಂಜಿ ರವರ ಬಾಬತ್ತು ದ್ವಿ ಚಕ್ರ ವಾಹನ ಸಂಖ್ಯೆ: ಕೆ.ಎ 40 ಆರ್ 205 ಸ್ಲೆಂಡರ್ ಪ್ಲಸ್ ಗಾಡಿಯಲ್ಲಿ ಎಸ್.ರಾಮಾಂಜಿ ಮತ್ತು ತನ್ನ ತಮ್ಮನಾದ ಅಶ್ವಥ್ ರವರು ಕೆಲಸ ನಿಮಿತ್ತ ವೈಜಕೂರು ಗ್ರಾಮಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು ಸಂಜೆ 4.20 ಗಂಟೆಯಲ್ಲಿ ವಾಪಸ್ಸು ಬರಲು ವೈಜಕೂರು ಗ್ರಾಮದ ಕಾಲುದಾರಿಯಿಂದ ಕಡಪ-ಬೆಂಗಳೂರು ರಸ್ತೆಗೆ ತಿರುಗಿಕೊಳ್ಳುತ್ತಿದ್ದಾಗ ಮದನಪಲ್ಲಿ ಕಡೆಯಿಂದ ಬಂದ ಎ.ಪಿ.39 ಎಫ್.ಪಿ 5009 ಇನ್ನೋವಾ ಕಾರಿನ ಚಾಲಕ ಕಾರನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಎಸ್.ರಾಮಾಂಜಿ ಮತ್ತು ತನ್ನ ಅಶ್ವಥ್ ರವರು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ಇಬ್ಬರು ವಾಹನದ ಸಮೇತ ಕೆಳಕ್ಕೆ ಬಿದ್ದಿದ್ದು ದ್ವಿ ಚಕ್ರ ವಾಹನ ಸವಾರನಾದ ಎಸ್.ರಾಮಾಂಜಿಗೆ ಬಲ ಕಾಲಿನ ಪಾದಕ್ಕೆ ಮತ್ತು ತಲೆಗೆ ರಕ್ತಗಾಯವಾಗಿರುತ್ತೆ, ವಾಹನದ ಹಿಂಭಾಗ ಕುಳಿತಿದ್ದ ಅಶ್ವಥ್ ಗೆ ಬಲಭಾಗದ ಸೊಂಟಕ್ಕೆ ಮತ್ತು ಬಲಕಾಲಿಗೆ ಊತಗಾಯವಾಗಿರುತ್ತೆ. ದ್ವಿ ಚಕ್ರ ವಾಹನ ಜಖಂ ಆಗಿರುತ್ತೆ. ಈ ವಿಚಾರವನ್ನು ತಮ್ಮ ಸಂಬಂಧಿಕರು ತನಗೆ ಕರೆಮಾಡಿ ತಿಳಿಸಿದ್ದು, ತಾನು ಸ್ಥಳಕ್ಕೆ ಹೋಗಿ ನೋಡಿದಾಗ ವಿಷಯ ನಿಜವಾಗಿರುತ್ತೆ. ನಂತರ ಆಂಬುಲೇನ್ಸ್ ನಲ್ಲಿ ಗಾಯಾಳುಗಳನ್ನು ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಅಶ್ವಥ್ ರನ್ನು ಚಿಕಿತ್ಸೆಗಾಗಿ ದಾಖಲಿಸಿಕೊಂಡು, ಎಸ್ ರಾಮಾಂಜಿ ರವರನ್ನು ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರ ಮೇರೆಗೆ ರಾಮಾಂಜಿಯನ್ನು ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗಾಗಿ ದಾಖಲು ಮಾಡಿರುತ್ತೇನೆ. ತಾನು ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ದಿನಾಂಕ: 13/01/2021 ರಂದು ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು ಸದರಿ ಅಪಘಾತಕ್ಕೆ ಕಾರಣವಾದ ಎ.ಪಿ.39 ಎಫ್.ಪಿ 5009 ಇನ್ನೋವಾ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕಾಗಿ ತಮ್ಮಲ್ಲಿ ಕೋರಿರುತ್ತಾರೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 324,504,506 ಐ.ಪಿ.ಸಿ:-

          ದಿನಾಂಕ:12/01/2021 ರಂದು ಚಿಂತಾಮಣಿ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಾದ ನಾರಾಯಣರೆಡ್ಡಿ ಬಿನ್ ಲೆಟ್ ರಾಮೇಗೌಡ, 67 ವರ್ಷ, ಹಣ್ಣಿನ ವ್ಯಾಪಾರ, ವಕ್ಕಲಿಗ, ಹಾಲಿ ವಾಸ ಎನ್.ಆರ್ ಬಡಾವಣೆ, ಚಿಂತಾಮಣಿ ನಗರ ಖಾಯಂ ವಿಳಾಸ: ಎಬ್ರಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ  ಹೇಳಿಕೆಯ ಸಾರಾಂಶವೆನೆಂದರೆ ನನಗೆ ರಾಮೇಗೌಡ ಎಂಬ 45 ವರ್ಷದ ಮಗನಿದ್ದು, ನನ್ನ ಮಗ ಚಿಂತಾಮಣಿ ನಗರ ಆಚಾರ್ಯ ಕಾಂಪ್ಲೇಕ್ಸ್ ನಲ್ಲಿ ಡಿ.ಟಿ,ಹೆಚ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂದ್ದು, ವ್ಯಾಪಾರದಲ್ಲಿ ನಷ್ಟ ಉಂಟಾಗಿದ್ದು ನಂತರ ವಿಚಾರಣೆ ಮಾಡಲಾಗಿ ನಂತರ ವಿಜಯ್ ಕುಮಾರ್ ಬಿನ್ ನಾರೆಪ್ಪ, ಚನ್ನ ಕೇಶವಪುರ ರವರ ಬಳಿ ಸಾಲ ಪಡೆದುಕೊಂಡಿರುವುದಾಗಿ ತಿಳಿದಿರುತ್ತೆ ನಂತರ ವಿಜಯ್ ಕುಮಾರ್ ರವರು ನನ್ನ ಮಗ ಹಣ ವಾಪಸ್ಸು ನೀಡದಿದ್ದರಿಂದ ಡಿ.ಟಿ.ಹೆಚ್ ಅಂಗಡಿಗೆ ಬೀಗ ಹಾಕಿಕೊಂಡು ಅಂಗಡಿಯ ಕೀಯನ್ನು ಅವರೆ ನನ್ನ ಮಗನ ಕಡೆಯಿಂದ ಪಡೆದುಕೊಂಡಿರುತ್ತಾರೆ ನಂತರ ನನ್ನ ಮಗ ಸಾಲದ ಬಾದೆ ತಾಳಲಾರದೆ ಮನೆ ಬಿಟ್ಟು ಹೊರಟು ಹೋಗಿದ್ದು ಈ ಬಗ್ಗೆ ಚಿಂತಾಮಣಿ ನಗರ ಠಾಣೆಯಲ್ಲಿ ಮೊ ಸಂ: 02/2021 ರಂತೆ ಪ್ರಕರಣ ದಾಖಲಾಗಿರುತ್ತೆ. ನಂತರ ದಿನಾಂಕ:12/01/2021 ರಂದು ಬೆಳಿಗ್ಗೆ 10:30 ಗಂಟೆ ಸಮಯದಲ್ಲಿ ವಿಜಯ್ ಕುಮಾರ್ ರವರು ಡಬ್ಬಲ್ ರಸ್ತೆಯಲ್ಲಿರುವ ನಮ್ಮ ಅಂಗಡಿ ಬಳಿ ಬಂದು ನಿನ್ನ ಮಗ ನನಗೆ ಹಣ ಕೊಡಬೇಕು ನಿನ್ನ ಮಗ ಸತ್ತಿದ್ದಾನೂ, ಬದುಕಿದ್ದಾನೋ ಗೊತ್ತಿಲ್ಲ ಅವನು ಪಡೆದುಕೊಂಡಿರುವ ಹಣವನ್ನು ನೀನು ಕೊಡು ಎಂದು ಅಂಗಡಿ ಬಳಿ ನಿಯಮ್ಮ, ನೀಯಾಲಿ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ನಂತರ ನಾನು ನನ್ನ ಮಗ ಬಂದ ನಂತರ ನಿನಗೆ ಬರಬೇಕಾದ ಹಣ ನೀಡುವುದಾಗಿ ತಿಳಿಸಿದರೂ ಸಹ ಕೇಳದೆ ಅಲ್ಲೇ ಇದ್ದ ತೆಂಗಿನ ಕಾಯಿಯಲ್ಲಿ ಬಲಗಡೆಯ ದವಡೆಯ ಮೇಲೆ ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ ನಂತರ ನನಗೆ ಬರಬೇಕಾದ ಹಣ ನನಗೆ ನೀಡದಿದ್ದಲ್ಲಿ ನಿನ್ನನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾನೆ. ನಮ್ಮ ಅಂಗಡಿಯ ಪಕ್ಕದಲ್ಲಿದ್ದ ಮಂಜುನಾಥ್ ವೆಂಕಟಗಿರಿಕೋಟೆ ಮತ್ತು ಸುರೇಶ್( ವಾಚ್ ಮೆಕಾನಿಕ್ ) ರವರು ಬಂದು ಜಗಳ ಬೀಡಿಸಿರುತ್ತಾರೆ ಸ್ವಲ್ಪ ಸಮಯದ ನಂತರ ನರೇಂದ್ರ ಎಂಬುವವರು ನನ್ನನ್ನು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆಂದು ಹಾಗೂ ನನ್ನ ಮೇಲೆ ಹಲ್ಲೆ ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ನೀಡಿದ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಸಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.04/2021 ಕಲಂ. 114,143,147,323,341,504,149 ಐ.ಪಿ.ಸಿ:-

          ದಿನಾಂಕ 12/01/2021 ರಂದು ಶಿಡ್ಲಘಟ್ಟ ವೃತ್ತ ನಿರೀಕ್ಷಕರ ಕಛೇರಿಯಿಂದ ಟಪಾಲು ಮೂಲಕ ರವಾನಿಸಿರುವ ಸಿ.ಪಿ.ಐ ರವರ ಸಹಿ ಇರುವ ಪಿರ್ಯಾದುದಾರರ ಅರ್ಜಿಯ ಸಾರಾಂಶವೇನೆಂದರೆ, ಪಿರ್ಯಾದುದಾರರಿಗೆ ಈಗ್ಗೆ ಸುಮಾರು 9 ವರ್ಷಗಲ ಹಿಂದೆ ಚಿಂತಾಮಣಿ ತಾಲ್ಲೂಕು ಗಡಿಗವಾರಹಳ್ಳಿ ಗ್ರಾಮದ ನಜ್ಮಾ ಎಂಬುವರನ್ನು ಮದುವೆಯಾಗಿದ್ದು, ತಮಗೆ 8 ವರ್ಷದ ಅಫೀಜಾ ಮತ್ತು  1 ½ ವರ್ಷದ ಮಹಮದ್ ಅಬೂವನ್ ಎಂಬ ಇಬ್ಬರು ಮಕ್ಕಳಿದ್ದು  ಹೀಗಿದ್ದಲ್ಲಿ ದಿನಾಂಕ 02/01/2021 ರಂದು  ಸಂಜೆ 7.30 ಗಂಟೆ ಸಮಯದಲ್ಲಿ ತನ್ನ ಹೆಂಡತಿ ತಮ್ಮ ಮನೆಯಲ್ಲಿ ಯಾರೂ ಇಲ್ಲದೇ ಇರುವ ಸಮಯದಲ್ಲಿ ತಮ್ಮ ಮನೆಯಲ್ಲದ್ದ ಹಣ ಮತ್ತು ಒಡವೆಗಳನ್ನು ಎತ್ತಿಕೊಂಡು ಎಲ್ಲಿಯೋ ಹೊರಟು ಹೋಗಿದ್ದು, ತಾನು ತನ್ನ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ಹುಡಕಲಾಗಿ ಪತ್ತೆಯಾಗದೇ ಇದ್ದು, ನಂತರ ತಮ್ಮ ಗ್ರಾಮದ ನಜ್ಜು @ ನಜೀರ್ ಬಿನ್ ಸುಭಾನ್ ಸಾಭಿ ಎಂಬುವರ ಜೊತೆಯಲ್ಲಿ ಹೋಗಿರುವುದಾಗಿ ತಿಳಿದು ಬಂದಿದ್ದು, ಈ ಬಗ್ಗೆ ದೂರು ನೀಡಲು ಠಾಣೆಗೆ ಹೋಗಿರುವುದಾಗಿ ತಿಳಿದ ತನ್ನ ಹೆಂಡತಿ ನಜ್ಮ ರವರ  ಕುಮ್ಮಕ್ಕಿನಿಂದ ನಜೀರ್ ಮತ್ತು ಅವರ ಹೆಂಡತಿ, ಮುನೀರ್ ಮತ್ತು ಅವರ ಹೆಂಡತಿ, ಶಪಿ ಮತ್ತು ಅವರ ಮಕ್ಕಳು ವಿನಾಃ ಕಾರಣ ತಮ್ಮ ಮನೆಯ ಬಳಿ ಬಂದು ತನ್ನನ್ನು ಅಡ್ಡಗಟ್ಟಿ ಅವಾಚ್ಚ ಶಬ್ದಗಳಿಂದ ಬೈದು ತನ್ನ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡಿದ್ದು ಮೇಲ್ಕಂಡ ವರ ಮೇಲ್ಕಂಡವರ ಮೇಲೆ ಸೂಕ್ತ ಕಾನೂನಿ ರೀತ್ಯಾ ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 309 ಐ.ಪಿ.ಸಿ:-

          ದಿನಾಂಕ 12-01-2021 ರಂದು 13-45 ಗಂಟೆಗೆ ಪಿ.ಸಿ. 272 ಶ್ರೀನಿವಾಸ ರವರು ಠಾಣೆಗೆ ಹಾಝರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ  ಸುಮಾರು 1 ವರ್ಷ 6 ತಿಂಗಳಿನಿಂದ ಕರ್ತವ್ಯವನ್ನು ನಿರ್ವಹಿಸುತ್ತಿರುತ್ತೇನೆ.  ದಿನಾಂಕ 12-01-2021 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾ ಹಾಜರಾತಿಗೆ ಹಾಜರಾಗಿರುತ್ತೇನೆ. ಠಾಣಾಧಿಕಾರಿಗಳು ನನಗೆ  ಗೌರಿಬಿದನೂರು ತಾಲ್ಲೂಕು ಕಛೇರಿಯ ಆವರಣದಲ್ಲಿರುವ ತಾಲ್ಲೂಕು ಖಜಾನೆ ಬೆಂಗಾವಲು ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾಗ ಮಧ್ಯಾಹ್ನ ಸುಮಾರು 01-30 ಗಂಟೆಯಲ್ಲಿ  ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಯಾರೋ ಆಸಾಮಿಯು ತನ್ನಷ್ಟಕ್ಕೆ ತಾನೆ ಚಾಕುವಿನಿಂದ ತಿವಿದುಕೊಳ್ಳುತ್ತಿರುವ  ಬಗ್ಗೆ ಜನರು ಮಾತಾಡಿಕೊಳ್ಳುತ್ತಿದ್ದು  ನಾನು ಕೂಡಲೇ ತಾಲ್ಲೂಕು ಕಛೇರಿಯ ಮುಂಭಾಗಕ್ಕೆ ಬಂದಾಗ  ಗಾಯಾಳು ಇಲ್ಲದೇ ಇದ್ದು  ಅಲ್ಲಿದ್ದ ಸಾರ್ವಜನಿಕರಾದ ಯತೀಶ ಬಿನ್ ವರದರಾಜು, 26 ವರ್ಷ, ಲಿಂಗಾಯಿತರು, ವ್ಯಾಪಾರ, ವಾಸ ಹಳೇಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕುರವರನ್ನು ಕೇಳಲಾಗಿ ಸದರಿಯವರು ಮಧ್ಯಾಹ್ನ 01-20 ಗಂಟೆಯಲ್ಲಿ ಗೌರಿಬಿದನೂರು  ತಾಲ್ಲೂಕು ಗಂಗಸಂದ್ರ ಗ್ರಾಮದ ವಾಸಿ ಜಗನ್ನಾಥ್ ಬಿನ್ ಲೇಟ್ ಹಳ್ಳಿ ಸಿದ್ದಪ್ಪ, ಸುಮಾರು 65 ವರ್ಷ ರವರು ಯಾವುದೋ ವಿಚಾರಕ್ಕೆ ತನ್ನಷ್ಟಕ್ಕೆ ತಾನೆ ಯಾವುದೋ ಒಂದು ಚಾಕುವಿನಿಂದ ಹೊಟ್ಟೆಯ ಮೇಲೆ ತಿವಿದುಕೊಳ್ಳುತ್ತಿದ್ದು ಬಿಡಿಸಲು ಹೋದಾಗ  ತಾನೆ ಅಲ್ಲಿಂದ ಹೊರಟು ಹೋದನು ಎಂದು  ತಿಳಿಸಿದರು. ಗೌರಿಬಿದನೂರು  ತಾಲ್ಲೂಕು ಗಂಗಸಂದ್ರ ಗ್ರಾಮದ ವಾಸಿ ಜಗನ್ನಾಥ್ ಬಿನ್ ಲೇಟ್ ಹಳ್ಳಿ ಸಿದ್ದಪ್ಪ, ಸುಮಾರು 65 ವರ್ಷ ರವರು ಸಾರ್ವಜನಿಕ ಸ್ಥಳದಲ್ಲಿ ಯಾವುದೋ ವಿಚಾರಕ್ಕೆ ತನ್ನಷ್ಟಕ್ಕೆ ತಾನೆ ಯಾವುದೋ ಒಂದು ಚಾಕುವಿನಿಂದ ಹೊಟ್ಟೆಯ ಮೇಲೆ ತಿವಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾನೆ. ಸದರಿ ಆಸಾಮಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 279,337,304(A)  ಐ.ಪಿ.ಸಿ:-

          ದಿನಾಂಕ: 13/01/2021 ರಂದು ಬೆಳಿಗ್ಗೆ 9-30 ಗಂಟೆಗೆ ಪಿರ್ಯಾದಿದಾರರಾದ Y G ಸತೀಶ್ ಬಿನ್ Y A ಗುರವಪ್ಪ, 20 ವರ್ಷ, ಬೋವಿ ಜನಾಂಗ, ಖಾಸಗಿ ಕಂಪೆನಿಯಲ್ಲಿ ಕೆಲಸ, ವಾಸ ಯರ್ರಗುಂಟೆ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 12/01/2021 ರಂದು ನಮ್ಮ ತಂದೆ Y A ಗುರವಪ್ಪ ಬಿನ್ ಲೇಟ್ ಆಂಜಿನಪ್ಪ, 43 ವರ್ಷ ಮತ್ತು ನಮ್ಮ ಗ್ರಾಮದ ಆನಂದಪ್ಪ ಬಿನ್ ಒಬಳಪ್ಪ, 50 ವರ್ಷ, ನಾಯಕ ಜನಾಂಗದವರು ನಮ್ಮ ದ್ವಿ ಚಕ್ರ ವಾಹನ KA-40-EF-3627 ಹಿರೋ ಪ್ಯಾಷನ್ ದ್ವಿ ಚಕ್ರ ವಾಹನದಲ್ಲಿ ಮದ್ಯಾಹ್ನ ಕೆಲಸದ ಬಗ್ಗೆ ಹೋಗಿದ್ದು ದಿನಾಂಕ: 12/01/2021 ರಂದು ಸಂಜೆ 5-45 ಗಂಟೆ ಸಮಯದಲ್ಲಿ ಇಂದಿರಾನಗರ ಗ್ರಾಮದ ಗೋವಿಂದರಾಜು ಬಿನ್ ವೆಂಕಟೇಶಪ್ಪ ರವರು ಪೋನ್ ಮೂಲಕ ನಿಮ್ಮ ತಂದೆ ಗುರುವಪ್ಪ ಮತ್ತು ಆನಂದಪ್ಪ ರವರು ತರಿದಾಳು ಗ್ರಾಮದ ಕೆರೆಯ ಕೋಡಿ ಬಳಿ ದ್ವಿ ಚಕ್ರ ವಾಹನದಲ್ಲಿ ಬರುತ್ತಿರುವಾಗ ಆಕಸ್ಮಿಕವಾಗಿ ರಸ್ತೆಗೆ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ದ್ವಿ ಚಕ್ರ ವಾಹನದಲ್ಲಿ ಬಿದ್ದು ದ್ವಿ ಚಕ್ರ ವಾಹನ ಚಾಲನೆ ಮಾಡುತ್ತಿದ್ದ ಆನಂದಪ್ಪ ರವರಿಗೆ ಬಲಗಾಲಿಗೆ, ತಲೆಗೆ, ಮುಖಕ್ಕೆ ಗಾಯಗಳಾಗಿ ನಿಮ್ಮ ತಂದೆ ಗುರುವಪ್ಪ ರವರಿಗೆ ತಲೆಗೆ, ಎದೆಗೆ, ಗಾಯಗಳಾಗಿರುವುದಾಗಿ ತಿಳಿಸಿದ್ದು ನಾನು ತಕ್ಷಣ ಹೋಗಿ ನೋಡಿದಾಗ ವಿಷಯ ನಿಜವಾಗಿದ್ದು ಅಲ್ಲಿಗೆ ಬಂದ 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಗುರುವಪ್ಪ ರವರು ಸಂಜೆ 6-55 ಗಂಟೆಯಲ್ಲಿ ಮೃತಪಟ್ಟಿರುವುದಾಗಿ ಆನಂದಪ್ಪ ರವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿಗೆ ಕಳುಹಿಸಿಕೊಟ್ಟು ಬೆಂಗಳೂರಿನ ಯಲಹಂಕ ನವ ಚೇತನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮ KA-40-EF-3627 ದ್ವಿ ಚಕ್ರ ವಾಹನವನ್ನು ಆನಂದಪ್ಪ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ನಾಯಿ ಅಡ್ಡಬಂದಿದ್ದರಿಂದ ವಾಹನ ಸ್ಕಿಡ್ ಆಗಿ ಜಾರಿ ಬಿದ್ದು ನಮ್ಮ ತಂದೆ ಗುರುವಪ್ಪ ರವರು ಮೃತಪಟ್ಟಿದ್ದು ದ್ವಿ ಚಕ್ರ ವಾಹನದ ಸವಾರ ಆನಂದಪ್ಪ ರವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.