ದಿನಾಂಕ :12/10/2020 ರ ಅಪರಾಧ ಪ್ರಕರಣಗಳು

  1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.19/2020 ಕಲಂ: 66(D) INFORMATION TECHNOLOGY  ACT 2000 & 419,420 ಐ.ಪಿ.ಸಿ:-

          ದಿನಾಂಕ:-12-10-2020 ರಂದು ಅರ್ಜಿದಾರರಾದ ಅನಿಲ್ .ಆರ್ ಬಿನ್ ರಾಮಪ್ಪ ,20ವರ್ಷ, ನಾಯಕರು, ಮಯೂರಿ ರೆಸ್ಟೋರೆಂಟ್ನಲ್ಲಿ ಕ್ಯಾಷಿಯರ್ ಕೆಲಸ  ವಾಸ ಮಾರ್ಗಾನುಕುಂಟೆ ಬಾಗೇಪಲ್ಲಿ  ತಾಲ್ಲೂಕು.  ಮೊ.9980096567   ರವರು ಠಾಣೆಗೆ ಹಾಜರಾಗಿ   ಟೈಪ್ ಮಾಡಿ ನೀಡಿದ ದೂರು ಏನೆಂದರೆ  ತಾನು ನಮ್ಮ ಗ್ರಾಮ ಮಾರ್ಗಾನುಕುಂಟೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಸಂಖ್ಯೆ:10738101013700 ರಂತೆ ಖಾತೆಯನ್ನು ಹೊಂದಿದ್ದು, ಸದರಿ ಖಾತೆಯಲ್ಲಿ ನನ್ನ ವ್ಯವಹಾರವನ್ನು ಮಾಡುತ್ತಿರುತ್ತೇನೆ. ದಿನಾಂಕ:11/10/2020 ರಂದು ನಾನು ನನ್ನ ಮನೆಯಲ್ಲಿದ್ದಾಗ ನನ್ನ ಮೊಬೈಲ್ ನಲ್ಲಿ ಬ್ರೌಸ್ ಮಾಡುತ್ತಾ ಓಎಲ್ಎಕ್ಸ್ ಆಪ್ ನಲ್ಲಿ ಕೆಟಿಎಂ ಬೈಕ್ ದ್ವಿಚಕ್ರವಾಹನವನ್ನು ಮಾರಾಟ ಮಾಡುವುದಾಗಿ ಅದರ ಮೇಲೆ ಮೊಬೈಲ್ ನಂ.8917257068 ಅನ್ನು ಹಾಕಿ ಈ ಸಂಖ್ಯೆಗೆ ಕಾಲ್ ಮಾಡಲು ತಿಳಿಸಿ ಅದರ ಬೆಲೆ 28000/- ರೂ ಎಂತ ನಮೂದಿಸಿದ್ದರು. ನಾನು ಸದರಿ ವಾಹನವನ್ನು ಕೊಂಡುಕೊಳ್ಳೋಣವೆಂತ ಭಾವಿಸಿ ಮೇಲ್ಕಂಡ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರ ಮಾಡಲಾಗಿ ಅವನು ನಾನು ಆರ್ಮಿಯಲ್ಲಿ ಇರುವುದಾಗಿ ಮತ್ತು ನನಗೆ ಈಗ ದೂರ ವರ್ಗಾವಣೆಯಾಗಿದ್ದು ನನ್ನ ಬಳಿ ಇರುವ ದ್ವಿಚಕ್ರವಾಹನವನ್ನು ತುರ್ತು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ. ನಾನು ಅಂತಿಮ ಬೆಲೆ ಏನೆಂತ ಕೇಳಿದೆ. ಅದಕ್ಕೆ 25000/- ಅಂತಿಮ ಬೆಲೆಯಾಗಿರುತ್ತದೆಂತ ತಿಳಿಸಿದ್ದು ನಾನು ಕೊಂಡುಕೊಳ್ಳಲು ತೀರ್ಮಾನಿಸಿದ್ದು ಅವನು ಟ್ರಾನ್ಸ್ ಪೋರ್ಟಿಂಗ್ ಚಾರ್ಜ್ ಎಂತ 3 ಸಾವಿರ ರೂ ಕಳುಹಿಸಿ ನಂತರ ವಾಹನ ಮನೆಗೆ ಡಿಲವರಿ ಆದ ಮೇಲೆ ಉಳಿದ ಹಣ ಕೊಡಿ ಎಂತ ತಿಳಿಸಿ ಅವನ ಪೋನ್ ಪೇ ಅಕೌಂಟ್ ನಂ.8619525222 ಅನ್ನು ಕಳುಹಿಸಿದ.ನಾನು ನನ್ನ ಪೋನ್ ಪೇ ಅಕೌಂಟ್ ನಂ.9980096567. ರಂದ ಹಣವನ್ನು ಕಳುಹಿಸಿದೆ. ನಂತರ ಪುನ: ವಿವಿಧ ಚಾರ್ಜುಗಳಿಗೆಂತ ಒಟ್ಟು 5 ಬಾರಿ 25000/- ರೂಗಳನ್ನು ಮೇಲ್ಕಂಡ ಆರೋಪಿತನಿಗೆ ಕಳುಹಿಸಿಕೊಟ್ಟಿದ್ದು, ಅಂತಿಮವಾಗಿ ಡೆಲಿವರಿ ಬಾಯ್ ಎಂತ ಮೊ. ನಂ.6367516139 ರಿಂದ ಕರೆ ಮಾಡಿ ವಾಹನವನ್ನು ತೆಗೆದುಕೊಂಡು ಬಂದಿರುತ್ತೇನೆಂತ ತಿಳಿಸಿ ಪುನಃ 10 ಸಾವಿರ ರೂಗಳನ್ನು ಕಳುಹಿಸಿ ನಿಮಗೆ ದ್ವಿಚಕ್ರವಾಹನದೊಂದಿಗೆ ವಾಪಸ್ಸು ನೀಡುವುದಾಗಿ ತಿಳಿಸಿದ ಆಗ ನಮ್ಮನ್ನು ಮೋಸ ಮಾಡುತ್ತಿರುವುದಾಗಿ ತಿಳಿಯಿತು. ಅದ್ದರಿಂದ ನನ್ನಿಂದ ಹಣವನ್ನು ಪಡೆದು ಬೈಕನ್ನು ಕಳುಹಿಸದೇ ಹಣವೂ ವಾಪಸ್ಸು ಕೊಡದೇ ವಂಚಿಸಿದ ಮೇಲ್ಕಂಡ ಪೋನ್ ಬಳಕೆದಾರರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರು.  ಸದರಿ ಅನಾಮದೇಯ ವ್ಯಕ್ತಿ ಓಎಲ್ಎಕ್ಸ್ ಆಪ್ ನಲ್ಲಿ ದ್ವಿಚಕ್ರವಾಹನವನ್ನು ಅಪ್ ಲೋಡ್ ಮಾಡಿದ್ದ ಐಡಿ ನಂ. 1600328897 ಆಗಿರುತ್ತದೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.66/2020 ಕಲಂ: 15(A),32(3) KARNATAKA EXCISE ACT :-

          ದಿನಾಂಕ 12-10-2020 ರಂದು ಸಂಜೆ 16-15 ಗಂಟೆಯ ಸಮಯದಲ್ಲಿ ಪಿಎಸ್ಐ ಸಾಃಎಬರು ಠಾಣೆಗೆ  ಮಾಲು , ಆರೋಪಿ ,ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ  ಸಾಹೇಬರು  ಇದೇ ದಿನ ಮದ್ಯಾಹ್ನ 14-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಅವರಿಗೆ ಬಂದ ಖಚಿತವಾದ ಮಾಹಿತಿ ಎನೆಂದರೆ  ಕುಪ್ಪಹಳ್ಳಿ ಗ್ರಾಮದಲ್ಲಿರುವ ಶ್ರೀನಿವಾಸ ರವರು ತನ್ನ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿಯನ್ನು ಪಡೆಯದೇ ಅಕ್ರಮವಾಗಿ ತನ್ನ  ಚಿಲ್ಲರೆ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು  ಮಾಹಿತಿಯಂತೆ ಠಾಣೆಯಲ್ಲಿದ್ದ ಸಿಬ್ಬಂದಿಯಾದ ಮಧುಸೂದನ ಮತ್ತು ಪ್ರಕಾಶ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕ ಪಾರೂಖ್ ರವರೊಂದಿಗೆ  ಹೊರಟು ಕುಪ್ಪಹಳ್ಳಿ ಗ್ರಾಮದ ಗೇಟಿನ ಬಳಿ ಇದ್ದಂತಹ  ಪಂಚರನ್ನು ಬರಮಾಡಿಕೊಂಡು  ಅವರುಗಳ ಸಮಕ್ಷಮದಲ್ಲಿ ಮದ್ಯಾಹ್ನ 14-30 ಗಂಟೆಗೆ  ಶ್ರೀನಿವಾಸ  ರವರ ಬಾಬತ್ತು  ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು ಕುಡಿಯುತ್ತಿದ್ದ  ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವನ ಹೆಸರು ವಿಳಾಸವನ್ನು ಕೇಳಲಾಗಿ  ಶ್ರೀನಿವಾಸ ಬಿನ್ ಲೇಟ್ ಗೋವಿಂದಪ್ಪ 46 ವರ್ಷ ಬಲಜಿಗರು ಚಿಲ್ಲರೆ ಅಂಗಡಿ ವ್ಯಾಪಾರ ನಂದಿ ಗ್ರಾಮ ,ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಅಂಗಡಿಯ  ಮುಂದೆ ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS WHISKY  ಹೆಸರಿನ  24 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ  35-13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-2 ಲೀಟರ್ 70 ML ಮದ್ಯವಿದ್ದು ಒಟ್ಟು ಬೆಲೆ 843 ರೂ ಆಗುತ್ತದೆ.,2) HAYWARDS CHEERS   WHISKY  ಹೆಸರಿನ ಮದ್ಯದ 5 ಖಾಲಿ ಟೆಟ್ರಾ ಪ್ಯಾಕೇಟುಗಳು 3) 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಇವುಗಳನ್ನು ತನ್ನ ಅಂಗಡಿಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು  ಚಿಲ್ಲರೆ ಅಂಗಡಿ ಯಲ್ಲಿದ್ದ ಶ್ರೀನಿವಾಸ  ರವರನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲ  ತನ್ನ ಗ್ರಾಮ ನಂದಿ ಗ್ರಾಮವಾಗಿದ್ದು ಇದು ತನ್ನ ತಂಗಿಯಾದ ನಾಗಮಣಿ ರವರ ಚಿಲ್ಲರೆ ಅಂಗಡಿಯಾಗಿದ್ದು ತನ್ನ ತಂಗಿ ಇಲ್ಲದ ಕಾರಣ ತಾನು ನಂದಿ ಗ್ರಾಮದಿಂದ  ಬಂದು ಇಲ್ಲಿ ವ್ಯಾಪಾರ ಮಾಡುತ್ತಿರುವುದಾಗಿ  ತಿಳಿಸಿದನು, ಸದರಿ ಮಾಲನ್ನು ಪಂಚರ ಸಮಕ್ಷಮ ಸಂಜೆ 14-45 ಗಂಟೆಯಿಂದ 15-30 ಗಂಟೆ ವರೆವಿಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಅಂಗಡಿಯ  ಮಾಲೀಕ ಶ್ರೀನಿವಾಸ  ಮತ್ತು  ಸಿಕ್ಕ ಮಾಲುಗಳ ನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಫಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರವವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.278/2020 ಕಲಂ: 279,337,338 ಐ.ಪಿ.ಸಿ:-

          ದಿನಾಂಕ 12/10/2020 ರಂದು ಪಿರ್ಯಾದಿದಾರರಾದ ಶ್ರೀ ಹೆಚ್.ಎನ್ ಶಿವಪ್ಪ ಬಿನ್ ಲೇಟ್ ನಾರಾಯಣಪ್ಪ ವಾಸ-ಹೊಸಪೇಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 09/10/2020 ರಂದು ವಿಜಯಪುರ ಕಡೆಯಿಂದ ಹೊಸಪೇಟೆ ಗ್ರಾಮಕ್ಕೆ ತನ್ನ ದ್ವಿ ಚಕ್ರ ವಾಹನ ಸಂಖ್ಯೆ ಕೆಎ-01-ಯು-2482 ರಲ್ಲಿ ಚಲಿಸುತ್ತಿದ್ದಾಗ ಜಂಗಮಕೋಟೆ ಕ್ರಾಸ್ ಕಡೆಯಿಂದ ಟಿಎನ್-52-ಡಬ್ಲ್ಯೂ-1415 ಎಂಬ ಸಂಖ್ಯೆಯ ಲಾರಿ ಭದ್ರನಕೆರೆಯ ಕಟ್ಟೆಯ ಮಾರ್ಗದಲ್ಲಿ ಬಂದು ತನ್ನ ಚಲಿಸುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾನು ಕೆಳಗೆ ಬಿದ್ದ ಪರಿಣಾಮ ತನ್ನ ಮೂಗಿಗೆ, ಬಾಯಿಗೆ ಏಟು ಬಿದ್ದು 2 ಹಲ್ಲುಗಳು ಮುರಿದಿದೆ. ಬಲಭಾಗದ ಮುಖದ ಕೆನ್ನೆಗೆ ಗಾಯಗಳಾಗಿದ್ದು, ಬಲಕಾಲಿನ ಹಿಮ್ಮಡಿಗೆ ಪೆಟ್ಟು ಬಿದ್ದು ನಡೆಯಲು ಸಹ ಆಗುವುದಿಲ್ಲ. ಆದ್ದರಿಂದ ತನಗೆ ಅಪಘಾತ ಮಾಡಿರುವ ಲಾರಿಯ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳ ಬೇಕು, ಅಪಘಾತವಾಗಿ 3 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು ಇಂದು ತಡವಾಗಿ ಬಂದು ದೂರನ್ನು ನೀಡಿರುವುದ್ದಾಗಿರುತ್ತದೆ.