ದಿನಾಂಕ :12/09/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.224/2020 ಕಲಂ:279,337  ಐ.ಪಿ.ಸಿ :-

     ದಿನಾಂಕ 12/09/2020 ರಂದು ಮದ್ಯಾಹ್ನ 12:30 ಗಂಟೆಗೆ  ಫಿರ್ಯಾದಿದಾರರು ಠಾಣೆಗೆ  ಹಾಜರಾಗಿ ನೀಡಿದ ದೂರಿನ ಸಾರಾಂಶ – ನಮ್ಮ ತಂದೆಯವರಾದ ಸತ್ತಾರ್ ಸಾಬ್[ಸುಮಾರು 60 ವರ್ಷ] ರವರು ಬಾಗೇಪಲ್ಲಿ ಟೌನ್ ರಾಯಲ್ ಫಂಕ್ಷನ್ ಹಾಲ್ ಮುಂಭಾಗದ ಕಟ್ಟಿಗೆ ಮಿಷನ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.  ನಮ್ಮ ತಂದೆಯವರು ದಿ: 10-09-2020 ರಂದು ಸಂಜೆ ಸುಮಾರು 6:00 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ನಂತರ ಬಾಗೇಪಲ್ಲಿ ಟೌನ್ ಗೂಳೂರು ಸರ್ಕಲ್ ನಲ್ಲಿರುವ ಸೂರ್ಯ ಮೆಡಿಕಲ್ಸ್ ನಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ಬರುವುದಾಗಿ ಮನೆಯಲ್ಲಿ ಹೇಳಿ ಹೊರಗೆ ಹೋಗಿದ್ದರು.   ರಾತ್ರಿ ಸುಮಾರು 7:15 ಗಂಟೆಗೆ ಯಾರೋ ನನಗೆ ಫೋನ್ ಮಾಡಿ ನಿಮ್ಮ ತಂದೆಗೆ ಗೂಳುರು ರಸ್ತೆಯಲ್ಲಿ ಅಪಘಾತವಾಗಿದ್ದು, ನಿಮ್ಮ ತಂದೆಯವರನ್ನು ಆಟೋದಲ್ಲಿ ಕರೆದುಕೊಂಡು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದ್ದು, ಕೂಡಲೇ ನಾನು ಬಾಗೇಪಲ್ಲಿ ಆಸ್ಪತ್ರೆಗೆ ಹೋಗಿ ನೋಡಲಾಗಿ, ನಮ್ಮ ತಂದೆಗೆ ಎಡಗಾಲಿನ ಮೊಣಕಾಲಿನ ಕೆಳಗೆ ಮೂಳೆ ಮುರಿತದ  ರಕ್ತಗಾಯವಾಗಿದ್ದು, , ಎಡಗಣ್ಣಿನ ಬಳಿ ರಕ್ತಗಾಯವಾಗಿದ್ದು, ಬಲಗಾಲು ಮತ್ತು ಬಲಗೈಗೂ ಸಹ ತರಚಿದ ಗಾಯಗಳಾಗಿರುತ್ತವೆ.  ವಿಚಾರಿಸಲಾಗಿ ನಮ್ಮ ತಂದೆಯವರು ಸಂಜೆ ಸುಮಾರು 6:30 ಗಂಟೆಯಲ್ಲಿ ಸೂರ್ಯ ಮೆಡಿಕಲ್ಸ್ ನಲ್ಲಿ ಮಾತ್ರೆಗಳನ್ನು ತೆಗೆದುಕೊಂಡು ನಮ್ಮ ಮನೆಗೆ ವಾಪಸ್ಸು ಬರಲು ಗೂಳೂರು ರಸ್ತೆಯಲ್ಲಿ ರಾಶಿ ಕಂಪ್ಯೂಟರ್ಸ್ ಮುಂಭಾಗದಲ್ಲಿ, ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಹಿಂದುಗಡೆಯಿಂದ ಅಂದರೆ ಗೂಳೂರು ಸರ್ಕಲ್ ಕಡೆಯಿಂದ KA-03-HC-7179 Access 125 ದ್ವಿಚಕ್ರ ವಾಹನದ ಸವಾರನು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ತಂದೆಗೆ ಹಿಂಬಧಿಯಿಂದ ಡಿಕ್ಕಿ ಹೊಡೆಸಿದ್ದರ ಪರಿಣಾಮ ನಮ್ಮ ತಂದೆಗೆ ಮೇಲ್ಕಂಡಂತೆ ಗಾಯಗಳಾಗಿರುವುದಾಗಿ, ದ್ವಿಚಕ್ರ ವಾಹನದ ಸವಾರನು ತನ್ನ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟುಹೋಗಿರುವುದಾಗಿ ತಿಳಿದುಬಂದಿರುತ್ತದೆ. ಗಾಯಗೊಂಡಿದ್ದ ನಮ್ಮ ತಂದೆಯವರನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಪಡಿಸಿದ್ದು, ವೈದ್ಯರ ಸಲಹೆಗೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಿಂದೂಪುರದ ಬಾಲಾಜಿ ಆರ್ಥೋಪೆಡಿಕ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಕೊಡಿಸುತ್ತಿದ್ದು, ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ.  ಆದ್ದರಿಂದ ನಮ್ಮ ತಂದೆಗೆ ಅಪಘಾತ ಮಾಡಿ,  ರಕ್ತಗಾಯಗಳನ್ನುಂಟು ಮಾಡಿರುವ ಮೇಲ್ಕಂಡ KA-03-HC-7179 Access 125 ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ದೂರು.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.333/2020 ಕಲಂ:279,304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ 11-09-2020 ರಂದು ರಾತ್ರಿ 11-45 ಗಂಟೆಗೆ ಆದಿನಾರಾಯಣಪ್ಪ ಬಿನ್ ರಾಮಪ್ಪ, 59ವರ್ಷ, ಗೊಲ್ಲರು, ಜಿರಾಯ್ತಿ, ವಾಸ:ಗಡ್ಡಂಪಲ್ಲಿ ಗ್ರಾಮ, ರಾಶ್ಚೆರುವು ಅಂಚೆ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನಗೆ ನಾಲ್ಕು ಜನ ಮಕ್ಕಳಿದ್ದು, 1ನೇ ಶೋಭ, 2ನೇ ನಾಗೇಶ್, 3ನೇ ರವಣಮ್ಮ ಮತ್ತು 4ನೇ ಪವನ್ ರವರಾಗಿರುತ್ತಾರೆ. ತನ್ನ ಮಗನಾದ ಪವನ್ರವರಿಗೆ 20 ವರ್ಷ ವಯಸ್ಸಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕೊರೋನಾ ವೈರಸ್ ಖಾಯಿಲೆಯ ಹಿನ್ನೆಲೆಯಲ್ಲಿ ಕಳೆದ 6 ತಿಂಗಳುಗಳಿಂದ ತಮ್ಮ ಗ್ರಾಮದಲ್ಲಿಯೇ ಇರುತ್ತಾನೆ. ಈ ದಿನ ದಿನಾಂಕ:11-09-2020 ರಂದು ಬೆಳಿಗ್ಗೆ 06-00 ಗಂಟೆಯ ಸಮಯದಲ್ಲಿ ತನ್ನ ಮಗ ಪವನ್ ಮತ್ತುತಮ್ಮ ಗ್ರಾಮದ ಕಾರ್ತಿಕ್ ಬಿನ್ ರಾಮಪ್ಪ, 18ವರ್ಷ, ವಿದ್ಯಾರ್ಥಿ ಆದಿಕನರ್ಾಟಕ ಜನಾಂಗರವರು ಕೆಲಸದ ನಿಮಿತ್ತ ನಮ್ಮ ಬಾಬತ್ತು ಕೆಎ-67 ಇಎಸ್-5734 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರವಾಹನದಲ್ಲಿ ಬೆಂಗಳೂರಿಗೆ ಹೋಗಿರುತ್ತಾರೆ. ಈ ದಿನ ಸಂಜೆ 7-30 ಗಂಟೆಯ ಸಮಯದಲ್ಲಿ ಯಾರೋ ಸಾರ್ವಜನಿಕರು ನನಗೆ ಫೋನ್ ಮಾಡಿ ತನ್ನ ಮಗ ಪವನ್ ಮತ್ತು ಕಾರ್ತಿಕ್ ರವರಿಗೆ ಬೆಂಗಳೂರು-ಕಡಪ ರಸ್ತೆಯಲ್ಲಿ ಚಿಂತಾಮಣಿ ತಾಲ್ಲೂಕು ವೈಜಕೂರು ಮತ್ತು ಟಿ.ಹೊಸಹಳ್ಳಿ ಮಾರ್ಗ ಮದ್ಯೆ ಅಪಘಾತವಾಗಿ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತ ದೇಹಗಳನ್ನು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ನಾನು, ಕಾತರ್ಿಕ್ರವರ ತಂದೆ ರಾಮಪ್ಪ ಬಿನ್ ಲೇಟ್ ಸೀತಪ್ಪ ಮತ್ತು ಇತರರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿರುತ್ತದೆ. ನಂತರ ತಾವು ಅಪಘಾತ ನಡೆದ ಸ್ಥಳಕ್ಕೆ ಹೋಗಿ ಅಪಘಾತದ ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರನ್ನು ವಿಚಾರ ಮಾಡಲಾಗಿ ನನ್ನ ಮಗ ಪವನ್ ಮತ್ತು ಕಾರ್ತಿಕ್ ರವರು ಮೇಲ್ಕಂಡ ಕೆಎ-67 ಇಎಸ್-5734 ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರವಾಹನದಲ್ಲಿ ಬೆಂಗಳೂರು-ಕಡಪ ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದಾಗ ಸಂಜೆ 7-00 ಗಂಟೆಯ ಸಮಯದಲ್ಲಿ ವೈಜಕೂರು ಮತ್ತು ಟಿ.ಹೊಸಹಳ್ಳಿ ಮಾರ್ಗ ಮದ್ಯೆ ದ್ವಿಚಕ್ರವಾಹನದ ಮುಂದೆ ನೋಂದಣಿ ಸಂಖ್ಯೆಯಿಲ್ಲದ ಮಸ್ಸೆ ಫರ್ಗೂಸನ್ ಟ್ರಾಕ್ಟರ್/ಕೆಎ-40 7709 ನೋಂದಣಿ ಸಂಖ್ಯೆಯ ಟ್ರೈಲರ್ ಹೋಗುತ್ತಿದ್ದು, ಸದರಿ ಟ್ರಾಕ್ಟರ್ ಚಾಲಕ ಟ್ರಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೇ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಕಾರ್ತಿಕ್ ಮತ್ತು ಪವನ್ ರವರ ದ್ವಿಚಕ್ರವಾಹನವು ಟ್ರಾಕ್ಟರ್ನ ಟ್ರೈಲರ್ಗೆ ತಗುಲಿದ್ದು, ಅದರ ಪರಿಣಾಮ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಪವನ್ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಕಾರ್ತಿಕ್  ದ್ವಿಚಕ್ರವಾಹನದ ಸಮೇತ ಕೆಳಗೆ ಬಿದ್ದು ಹೋಗಿ ಪವನ್ ಮತ್ತು ಕಾರ್ತಿಕ್ ರವರಿಗೆ ತಲೆಗಳಿಗೆ ರಕ್ತಗಾಯಗಳು, ಮೈಮೇಲೆ ಸಣ್ಣಪುಟ್ಟ ತರಚಿದ ಗಾಯಗಳಾಗಿರುತ್ತವೆ. ಇಬ್ಬರಿಗೂ ತಲೆಗಳಿಗೆ ತೀವ್ರವಾಗಿ ಗಾಯಗಳಾಗಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಫಘಾತಪಡಿಸಿದ ಮೇಲ್ಕಂಡ ಟ್ರಾಕ್ಟರ್ ಚಾಲಕ ಟ್ರಾಕ್ಟರ್ ಅನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿ ಪೆರಮಾಚನಹಳ್ಳಿ ಗೇಟ್ ಬಳಿ ಟ್ರಾಕ್ಟರ್ ಅನ್ನು ನಿಲ್ಲಿಸಿ ಚಾಲಕ ಪರಾರಿಯಾಗಿದ್ದು ಟ್ರಾಕ್ಟರ್ ಅನ್ನು ಪೋಲಿಸರು ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಟ್ರಾಕ್ಟರ್ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಯಾವುದೇ ಸೂಚನೆಯನ್ನು ನೀಡದೇ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ಅಪಘಾತವನ್ನುಂಟು ಮಾಡಿ ನನ್ನ ಮಗ ಪವನ್ ಮತ್ತು ಕಾರ್ತಿಕ್ ರವರ ಸಾವಿಗೆ ಕಾರಣನಾದ ಮೇಲ್ಕಂಡ ನೋಂದಣಿ ಸಂಖ್ಯೆಯಿಲ್ಲದ ಮಸ್ಸೆ ಫರ್ಗೂಸನ್ ಟ್ರಾಕ್ಟರ್/ಕೆಎ-40 7709 ನೋಂದಣಿ ಸಂಖ್ಯೆಯ ಟ್ರೈಲರ್ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.238/2020 ಕಲಂ:279,337,304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ:11/09/2020 ರಂದು ರಾತ್ರಿ 7-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಶ್ರೀನಿವಾಸ ಬಿನ್ ತಿಪ್ಪಣ್ಣ, 38 ವರ್ಷ, ಮುಧುಗೆರೆ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ಪಿರ್ಯಾದಿದಾರರು ದಿನಾಂಕ:11/09/2020 ರಂದು ಬೆಳಿಗ್ಗೆ ಗಾರ್ಮೆಂಟ್ಸ್ ಕೆಲಸಕ್ಕೆ ದೊಡ್ಡಬಳ್ಳಾಪುರಕ್ಕೆ ಹೋಗಿ ಸಂಜೆ 4-00 ಗಂಟೆಗೆ ಕೆಲಸ ಮುಗಿಸಿಕೊಂಡು ದೊಡ್ಡಬಳ್ಳಾಪುರದಿಂದ ಗೌರಿಬಿದನೂರಿಗೆ ಬಂದು ಗೌರಿಬಿದನೂರಿನಿಂದ ಮುಧುಗೆರೆ ಹೋಗಲು ಅವರ ಬಾಬತ್ತು ಕೆಎ–40, ಇಡಿ–5632 ಡಿಯೋ ದ್ವಿ ಚಕ್ರ ವಾಹನದಲ್ಲಿ ಸಂಜೆ 6-00 ಗಂಟೆಗೆ  ಗೌರಿಬಿದನೂರಿನಿಂದ ಹೊರಟು ಸಂಜೆ 6-30 ಗಂಟೆ ಸಮಯದಲ್ಲಿ ಮುಧುಗೆರೆ ಗ್ರಾಮದ ಗೇಟ್ ಗೆ ಸುಮಾರು 100 ಮೀಟರ್ ದೂರ ಇರುವಂತೆ ಹೋಗುತ್ತಿದ್ದಾಗ ಪಿರ್ಯಾದಿದಾರರ ಮುಂದೆ ರಸ್ತೆಯ ಎಡ ಬದಿಯಲ್ಲಿ ಮುದುಗೆರೆ ಗ್ರಾಮದ ವಿಜೇತ ಕುಮಾರ್ ಬಿನ್ ಲೇಟ್ ವೆಂಕಟರವಣಪ್ಪ, 27 ವರ್ಷ, ರವರು ಕುರಿಗಳನ್ನು ಹೊಡೆದುಕೊಂಡು ಹೊಗುತ್ತಿದ್ದಾಗ ಪಿರ್ಯಾದಿದಾರರ ಹಿಂದೆ ಗೌರಿಬಿದನೂರು ಕಡೆಯಿಂದ ಬಂದ ಯಾವುದೋ ಲಾರಿಯ ಚಾಲಕ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ-40, ಇಡಿ-5632 ದ್ವಿ ಚಕ್ರ ವಾಹನದಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ , ಗಡ್ಡಕ್ಕೆ, ಎಡ ಮೊಣಕಾಲಿಗೆ ಗಾಯಗಳಾಗಿದ್ದು, ನಂತರ ಅದೇ ಲಾರಿಯ ಚಾಲಕ ಮುಂದೆ ಕುರಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ವಿಜೇತ ಕುಮಾರ್ ಗೆ ಡಿಕ್ಕಿ ಹೊಡೆಸಿದ ಪರಿಣಾಮ ಆತನಿಗೂ ಸಹ ತೀವ್ರ ಗಾಯಗಳಾಗಿದ್ದು ಹೊಟ್ಟೆಯ ಮೇಲೆ ಲಾರಿ ಚಕ್ರ ಹರಿದಿದ್ದು ಅಫಘಾತ ಮಾಡಿದ ಲಾರಿಯ ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ನಂತರ ಸ್ಥಳಕ್ಕೆ ಬಂದ 108 ಆಂಬುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇನೆ. ತೀವ್ರವಾಗಿ ಗಾಯಗೊಂಡಿದ್ದ ವಿಜೇತ ಕುಮಾರ್ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದು ಅಪಘಾತಕ್ಕೆ ಕಾರಣವಾದ ಲಾರಿ ಹಾಗೂ ಲಾರಿಯ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.153/2020 ಕಲಂ:379  ಐ.ಪಿ.ಸಿ :-

     ದಿನಾಂಕ:11/09/2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶಿವಪ್ಪ ಬಿನ್ ಆದೆಪ್ಪ, 30 ವರ್ಷ, ನಾಯಕ ಜನಾಂಗ, ಚಾಲಕ, ಚೆಂಡೂರು ಗ್ರಾಮ, ಗುಡಿಬಂಡೆ ತಾಲ್ಲೂಕು, ರವರು, ನೀಡಿದ ದೂರಿನ ಸಾರಾಂಶವೆನೆಂದರೆ  ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ತಮ್ಮಲ್ಲಿ ನಿವೇದಿಸಿಕೊಳುವುದೇನೆಂದರೆ, ತಾನು 2010 ನೇ ಇಸವಿಯಲ್ಲಿ ಕೆ,ಎ 40 ಎಲ್ -7250 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನ ಖರೀದಿಸಿರುತ್ತೇನೆ. ದಿನಾಂಕ:20/08/2020 ರಂದು ಮದ್ಯಾಹ್ನ ಸುಮಾರು 12.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದಿಂದ ಮೇಲ್ಕಂಡ ದ್ವಿ ಚಕ್ರವಾಹನದಲ್ಲಿ ಚೆಂಡೂರು ಕ್ರಾಸ್ ಗೆ ಬಂದು ಅಲ್ಲಿರುವ ರೋಹಿತ್ ಹಾರ್ಡವೇರ್ ಅಂಗಡಿಯ ಮುಂದೆ ನಿಲ್ಲಿಸಿ ಚಿಕ್ಕಬಳ್ಳಾಪುರಕ್ಕೆ ಕೆಲದ ನಿಮ್ಮಿತ್ತ ಹೋಗಲು ಚೆಂಡೂರು ಕ್ರಾಸ್ ನಿಂದ ಬಸ್ ನಲ್ಲಿ ಹೋಗಿ ಪುನಃ ದಿನಾಂಕ:20/08/2020 ರಂದು ಸಂಜೆ 5.30 ಗಂಟೆ ಸಮಯದಲ್ಲಿ ಬಂದು ದ್ವಿ ಚಕ್ರ ವಾಹನವನ್ನು ನಿಲ್ಲಿಸಿದ ಜಾಗದಲ್ಲಿ ನೋಡಲಾಗಿ ತನ್ನ ಬಾಬತ್ತು ಮೇಲ್ಕಂಡ ದ್ವಿಚಕ್ರವಾಹನ ಸ್ಥಳದಲ್ಲಿ ಇರುವುದಿಲ್ಲ ನಂತರ ಅಂಗಡಿಯ ಮಾಲೀಕರನ್ನು ಅಕ್ಕ-ಪಕ್ಕದಲ್ಲಿರುವ ಜನರನ್ನು ವಿಚಾರಿಸಿದಾಗ ತಮಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ. ತನ್ನ ಬಾಬತ್ತು ಕೆ,ಎ 40 ಎಲ್ -7250 ನೊಂದಣಿ ಸಂಖ್ಯೆಯ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಅಂದಾಜು 20000/- ಬೆಲೆ ಬಾಳುವ ದ್ವಿ ಚಕ್ರ ವಾಹನವನ್ನು ಯಾರೋ ಅಪರಿಚಿತರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ತಾನು ತಮ್ಮ ಗ್ರಾಮದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ವಾಹನವನ್ನು ಹುಡುಕಲಾಗಿ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ತಡವಾಗಿ ಹಾಜರಾಗಿ ನನ್ನ ಬಾಬತ್ತು ಮೇಲ್ಕಂಡ ದ್ವಿ ಚಕ್ರ ವಾಹನವನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು  ಜರುಗಿಸಬೇಕಾಗಿ ತಮ್ಮಲ್ಲಿ ಕೊರಿ ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.251/2020 ಕಲಂ:80,81 Juvenile Justice (Care and Protection of Children) Act :-

     ದಿನಾಂಕ: 11-09-2020 ರಂದು ಮದ್ಯಾಹ್ನ 2.30 ಗಂಟೆಗೆ ಫಿರ್ಯಾದಿದಾರರು ಠಾಣೆಯ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 29-08-2020 ರಂದು ಇಲಾಖೆಗೆ ಬಂದ ಮಾಹಿತಿ ಅನ್ವಯ ಶಿಡ್ಲಘಟ್ಟ ತಾಲ್ಲೂಕು ಮಳಮಾಚನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಮಾಹಿತಿಯನ್ನು ಪಡೆಯಲಾಗಿ ಚಿಂತಾಮಣಿ ತಾಲ್ಲೂಕು ತಿನಕಲ್ಲು ಗ್ರಾಮದ ವಾಸಿಗಳಾದ ನರಸಿಂಹಮೂರ್ತಿ ಮತ್ತು ಮಹಾಲಕ್ಷ್ಮಿ ಎಂಬ ದಂಪತಿಗಳು ತಮ್ಮ ಎರಡನೇ ಮಗುವಾದ ಮೂರು ತಿಂಗಳ ಹೆಣ್ಣು ಮಗುವನ್ನು ದಿನಾಂಕ: 26-08-2020 ರಂದು ಶಿಡ್ಲಘಟ್ಟ ತಾಲ್ಲೂಕು ಮಳಮಾಚನಹಳ್ಳಿ ಗ್ರಾಮದ ಮಂಜುನಾಥ ಮತ್ತು ಮುನಿರತ್ನಮ್ಮ ಎಂಬ ದಂಪತಿಗಳಿಗೆ ಕಾನೂನು ಬಾಹಿರವಾಗಿ ದತ್ತು/ಮಾರಾಟ ಮಾಡಿರುವುದಾಗಿ ತಿಳಿದು ಬಂದಿದ್ದು ಆದರಂತೆ ದಿನಾಂಕ: 29-08-2020 ರಂದು ಹೆಣ್ಣು ಮಗುವನ್ನು ಇಲಾಖೆ ವಶಕ್ಕೆ ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಅಗತ್ಯ ಚಿಕಿತ್ಸೆ ಕೊಡಿಸಿ ಉಲ್ಲೇಖಿತ ಪತ್ರ 1 ರಂತೆ ಇಲಾಖೆ ಮೇಲಾಧಿಕಾರಿಗಳಿಗೆ ಹಾಗೂ ತಮ್ಮ ಪೊಲೀಸ್ ಠಾಣೆಗೂ ಮಾಹಿತಿ ನೀಡಿ ತದನಂತರ ಮಕ್ಕಳ ಕಲ್ಯಾಣಿ ಸಮಿತಿ ಚಿಕ್ಕಬಳ್ಳಾಪುರ ರವರ ಅನುಮೋದನೆ ಪಡೆದು ತಾತ್ಕಾಲಿಕ ಆಶ್ರಯಕ್ಕಾಗಿ ಮಕ್ಕಳ ವಿಶೇಷ ದತ್ತು ಕೇಂದ್ರದಲ್ಲಿ ದಾಖಲಿಸರಲಾಗಿದೆ. ಉಲ್ಲೇಖ-2ರ ಮಕ್ಕಳ ಕಲ್ಯಾಣ ಸಮಿತಿ ಪತ್ರದಂತೆ ಸದರಿ ಮೂರು ತಿಂಗಳ ನವಜಾತ ಶಿಶುವನ್ನು ಕಾನೂನು ಬಾಹಿರ ದತ್ತು/ಮಾರಾಟ ಮಾಡಿರುವ ಮತ್ತು ತೆಗೆದುಕೊಂಡಿರುವ ಹಾಗೂ ಈ ರೀತಿ ಮಗುವನ್ನು ಪಡೆಯಲು ಸಹಕರಿಸಿದವರ ವಿರುದ್ದ ಕಾನೂನು ಕೈಗೂಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಮೊ.ಸಂ. 251/2020 ಕಲಂ 80, 81 Juvenile Justice Act-2015 & Sec. 58 Juvenile Justice Model rules-2016 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.