ದಿನಾಂಕ :12/08/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.190/2020 ಕಲಂ. 78(3) ಕೆ.ಪಿ ಆಕ್ಟ್:-

          ದಿ: 10-08-2020 ರಂದು ಸಂಜೆ 4:15 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರವರು ಮಾಲು, ಮಹಜರ್ ಮತ್ತು ಆರೋಪಿಯನ್ನು ಹಾಜರುಪಡಿಸಿ ನೀಡಿದ ವರಧಿಯ ಸಾರಾಂಶ – ದಿ: 10-08-2020 ರಂದು ಬಾಗೇಪಲ್ಲಿ ಪುರದಲ್ಲಿ ಗಸ್ತಿನಲ್ಲಿದ್ದಾಗ, ಸಂಜೆ ಸುಮಾರು 3:00 ಗಂಟೆಯಲ್ಲಿ ಕುಂಬಾರಪೇಟೆ ಸರ್ಕಲ್ ಬಳಿ ಇದ್ದಾಗ, ಕುಂಬಾರಪೇಟೆ ಗಲ್ಲಿಯಲ್ಲಿ ಯಾರೂ ಒಬ್ಬ ಆಸಾಮಿ 1 ರೂ ಗೆ 70 ರೂ ಎಂದು ಹೇಳುತ್ತಾ ಸಾರ್ವಜನಿಕರಿಗೆ ಮಟ್ಕಾ ಚೀಟಿ ಬರೆದು ಕೊಡುತ್ತಿದ್ದು, ನಾನು ಮತ್ತು ಸಿಬ್ಬಂಧಿಯಾದ ನಟರಾಜ್ ಹೆಚ್.ಸಿ 156,  ಖಲಂಧರ್ ಹೆಚ್.ಸಿ 209 ರವರು ಹಿಡಿದುಕೊಳ್ಳಲು ಹೋದಾಗ, ಸ್ಥಳದಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದ ಆಸಾಮಿಯನ್ನು ಹಿಡಿದುಕೊಂಡು ಪರಿಶೀಲಿಸಲಾಗಿ ಸದರಿಯವರ ಬಳಿ ರೂ 580/- ಹಣ ಮತ್ತು ಮಟ್ಕಾ ಬರೆದಿರುವ 04 ಮಟ್ಕಾ ಚೀಟಿಗಳು ದೊರೆತಿದ್ದು, ಸದರಿಯವರ ಹೆಸರು ಮತ್ತು ವಿಳಾಸ ಕೇಳಲಾಗಿ ಷಂಶುದ್ದೀನ್ ಬಿನ್ ಷಾವುದ್ದೀನ್ 62 ವರ್ಷ, ಮುಸ್ಲಿಂ ಜನಾಂಗ, ಕುಂಬಾರಪೇಟೆ, ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು, ಸದರಿ ಆಸಾಮಿಯ ಬಳಿ 04 ಮಟ್ಕಾ ಚೀಟಿಗಳನ್ನು ಮತ್ತು 580/- ರೂಗಳ ಹಣವನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಸೂಕ್ತ ಮುಂದಿನ ಕ್ರಮ ಜರುಗಿಸಲು ಸೂಚಿಸಿ ಎಸ್.ಹೆಚ್.ಓ ರವರಿಗೆ ನೀಡಿರುತ್ತೇನೆ, ಎಂದು ದೂರು.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.191/2020 ಕಲಂ. 78(3) ಕೆ.ಪಿ ಆಕ್ಟ್:-

          ದಿ: 10-08-2020 ರಂದು ರಾತ್ರಿ 8:10 ಗಮಟೆಗೆ ಪಿ.ಎಸ್.ಐ ಸಾಹೇಬರವರು ಮಾಲು, ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶ –  ದಿ:10-08-2020 ರಂದು ಸಂಜೆ 6:50 ಗಂಟೆಯಲ್ಲಿ ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಕುಂಬಾರಪೇಟೆಯ ಏರ್ ಟವರ್ ಮುಂಬಾಗದ ರಸ್ತೆಯಲ್ಲಿ  ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ  ಬಂದ ಮಾಹಿತಿ ಮೇರೆಗೆ  ಸಿಬ್ಬಂದಿಗಳಾದ ಪಿ.ಸಿ-214 ಅಶೋಕ ರವರೊಂದಿಗೆ ಬಾಗೇಪಲ್ಲಿ  ಪುರದ ಡಿ.ವಿ.ಜಿ ರಸ್ತೆಯಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸರ್ಕಾರಿ ಜೀಫ್ ಸಂಖ್ಯೆ ಕೆಎ-40 ಜಿ-537 ವಾಹನದಲ್ಲಿ  ಮೇಲ್ಕಂಡ ಸ್ಥಳಕ್ಕೆ  ಸಂಜೆ 7:00  ಗಂಟೆಗೆ ಹೋಗಿ, ಸ್ವಲ್ಪ  ದೂರದಲ್ಲಿ  ಮರೆಯಲ್ಲಿ ಜೀಫ್ ನ್ನು ನಿಲ್ಲಿಸಿ ಸದರಿ ಸ್ಥಳಕ್ಕೆ  ಪಂಚರೊಂದಿಗೆ  ಮತ್ತು ಸಿಬ್ಬಂದಿಯೊಂದಿಗೆ ನಡೆದುಕೊಂಡು  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ,  ಯಾರೋ ಒಬ್ಬ ಆಸಾಮಿ  ರಸ್ತೆಯಲ್ಲಿ ಬನ್ನಿ ಬನ್ನಿ ಮಟ್ಕಾ ಅಂಕಿಗಳನ್ನು  ಬರೆಸಿ ಒಂದು ರೂಪಾಯಿಗೆ 70 ರೂಪಾಯಿ ಕೊಡುತ್ತೇನೆ ಎಂದು ಕೂಗುತ್ತಾ, ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ ಮಟ್ಕಾ ಜೂಜಾಟವಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಸುತ್ತುವರೆದು ಹಿಡಿದು ಆತನ ಬಳಿ ಪರಿಶೀಲಿಸಲಾಗಿ  ವಿವಿಧ ಅಂಕಿಗಳು ಬರೆದಿರುವ ಒಂದು  ಮಟ್ಕಾ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ನು ಹಾಗೂ 420/-  ರೂ.ಹಣ ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣವೆಂದು ತಿಳಿಸಿದ್ದು,  ಆತನ  ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಹರೀಶ ಬಿನ್ ನರಸಿಂಹಪ್ಪ, 29 ವರ್ಷ, ನಾಯಕರು, ಕೂಲಿ ಕೆಲಸ, 15 ನೇ ವಾರ್ಡ್,ಕುಂಬಾರ ಪೇಟೆ,  ಬಾಗೇಪಲ್ಲಿ ಟೌನ್    ಎಂತ ತಿಳಿಸಿದ್ದು  ಸದರಿ ಆಸಾಮಿಗೆ  ಮಟ್ಕಾ ಜೂಜಾಟವಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು  ಕೇಳಲಾಗಿ ಆತನು  ಯಾವುದೇ ಪರವಾನಿಗೆ ಇಲ್ಲವೆಂದು  ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿರುತ್ತಾನೆ.  ಸಂಜೆ 7: 10 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೆ ಪಂಚನಾಮೆಯನ್ನು ಜರುಗಿಸಿ, ಪಂಚನಾಮೆ,  ಮಾಲು ಮತ್ತು ಆಸಾಮಿಯನ್ನು ರಾತ್ರಿ 8:10 ಗಂಟೆಗೆ ಠಾಣೆಯಲ್ಲಿ ತಮ್ಮ ವಶಕ್ಕೆ ನೀಡುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ, ಎಂದು ದೂರು.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ.52/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 11/08/2020 ರಂದು ಮದ್ಯಾಹ್ನ 14:00 ಗಂಟೆಯಲ್ಲಿ ಚೇಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ,ಪ್ರತಾಪ್   ಕೆ.ಆರ್.  ಆದ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನಲ್ಲಿ  ಠಾಣೆಯ ಸಿಬ್ಬಂದಿಯವರಾದ ಸಂತೋಷ್ .ಸಿಪಿಸಿ -141  ಮತ್ತು ಜೀಪ್ ಚಾಲಕ ಶ್ರೀನಾಥ ಎಪಿಸಿ-98 ರವರೊಂದಿಗೆ ಠಾಣಾ ಸರಹದ್ದು  ಕೊಂಡಮಾರಪಲ್ಲಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ  ಇದೇ   ಗ್ರಾಮದಲ್ಲಿ ನಾರಾಯಣಾ ಸ್ವಾಮಿ  ಬಿನ್ ತಲಾರಿ ವೆಂಕಟರವಣಪ್ಪ ಎಂಬುವರು ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು  ನಾರಾಯಣಾ ಸ್ವಾಮಿ ರವರ  ಮನೆಯ  ಮುಂಭಾಗ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಇಬ್ಬರು  ಆಸಾಮಿಗಳು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ.  ಸದರಿ ಸ್ಥಳದಲ್ಲಿ  ಮಧ್ಯದ ಪ್ಯಾಕೇಟ್ ಗಳಿದ್ದು ಅಲ್ಲಿಯೇ ಇದ್ದ ನಾರಾಯಣಾ ಸ್ವಾಮಿ ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ` ಹೆಸರು ನಾರಾಯಣಾ ಸ್ವಾಮಿ ಬಿನ್ ತಲಾರಿ ವೆಂಕಟರವಣಪ್ಪ,  35 ವರ್ಷ, ನಾಯಕರು, ಜಿರಾಯ್ತಿ ಕೆಲಸ, ವಾಸ:ಕೊಂಡಮಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಸ್ಥಳದಲ್ಲಿದ್ದ ಮಧ್ಯದ ಪ್ಯಾಕೇಟ್ ಗಳನ್ನು  ಪರಿಶೀಲಿಸಲಾಗಿ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 10 ಟೆಟ್ರಾ ಪ್ಯಾಕೇಟ್ಗಳಿದ್ದು ಇವುಗಳು ಒಟ್ಟು 900 ಎಂ.ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 30.32 ಎಂದು ನಮೂದಿಸಿದ್ದು ಇವುಗಳು ಒಟ್ಟು 303.2 ರೂಗಳಾಗಿರುತ್ತೆ ಹಾಗೂ ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಮದ್ಯಾಹ್ನ 14:30 ಗಂಟೆಯಿಂದ 15:30 ಗಂಟೆಯ ವರೆಗೆ ದಾಳಿ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ವರದಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂ. 52/2020 ಕಲಂ:15(ಎ), 32(3) ಕೆ.ಇ.ಆಕ್ಟ್ ರೀತ್ಯ  ಪ್ರಕರಣ ದಾಖಾಲಾಗಿರುತ್ತೆ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.32/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:-11/08/2020 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿದಾರ ಶ್ರೀಕಾಂತ್ ಕೆ ಆರ್ ಬಿನ್ ರಾಮಾಂಜೀನಪ್ಪ 25 ವರ್ಷ,   ಬಲಜಿಗರು, ಟ್ರ್ಯಾಕ್ಟರ್ ಮೆಕಾನಿಕ್ ವೃತ್ತಿ, ವಾರ್ಡ್ ನಂ-14,  ಕಂದವಾರ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ತಮ್ಮ ರಂಜಿತ್ ಕುಮಾರ್ ಕೆ ಆರ್ ಬಿನ್ ರಾಮಾಂಜೀನಪ್ಪ 22 ವರ್ಷ, ವ್ಯಾಪಾರ ವೃತ್ತಿ ರವರು ಹಾಗೂ ತನ್ನ ಸ್ನೇಹಿತ ಸುರೇಶ್ ಕುಮಾರ್ ಬಿನ್ ಲೇಟ್ ಮುನಿಸ್ವಾಮಿ 28 ವರ್ಷ, ಬಲಜಿಗರು, ವ್ಯಾಪಾರ ವೃತ್ತಿ, ವಾರ್ಡ್ ನಂ-14, ಕಂದವಾರ, ಚಿಕ್ಕಬಳ್ಳಾಪುರ ಟೌನ್ ಮತ್ತು ತಾಲ್ಲೂಕು ರವರೊಂದಿಗೆ ದಿನಾಂಕ:-07/08/2020 ರಂದು ಕೆಲಸದ ನಿಮಿತ್ತ ದೇವನಹಳ್ಳಿಗೆ ಹೋಗಿ ಬರುವುದಾಗಿ ಹೇಳಿ ತನ್ನ KA-40-L-1325 ರ ಹಿರೋಹೊಂಡಾ ಸ್ಪೆಂಡರ್ ಪ್ಲಸ್ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಹೋಗಿದ್ದು, ದೇವನಹಳ್ಳಿಯಲ್ಲಿ ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ಮನೆಗೆ ಬರಲು ಬೆಂಗಳೂರು – ಚಿಕ್ಕಬಳ್ಳಾಪುರ ಎನ್.ಎಚ್-44 ಬಿ.ಬಿ ರಸ್ತೆಯ ಜಡಲತಿಮ್ಮನಹಳ್ಳಿ ಗೇಟ್ ಬಳಿ ಸುಮಾರು ರಾತ್ರಿ 11-30 ಗಂಟೆಯ ಸಮಯದಲ್ಲಿ ಬರುತ್ತಿದ್ದಾಗ ಹಿಂದಿನಿಂದ ಬೆಂಗಳೂರು ಕಡೆಯಿಂದ ಬಂದ ಯಾವುದೋ ಕಾರಿನ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಮ್ಮ ರಂಜಿತ್ ಕುಮಾರ್ ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಹೊರಟು ಹೋದ ಪರಿಣಾಮ ದ್ವಿಚಕ್ರವಾಹನ ಸಮೇತ ಇಬ್ಬರೂ ಠಾರ್ ರಸ್ತೆಯಲ್ಲಿ ಬಿದ್ದಾಗ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ನನ್ನ ತಮ್ಮ ರಂಜಿತ್ ಕುಮಾರ್ ರವರಿಗೆ ಹಣೆಗೆ, ಬಲ ಕೆನ್ನೆಗೆ, ಕೈಗಳಿಗೆ ಹಾಗೂ ಎಡ ತೊಡೆಗೆ ರಕ್ತ ಗಾಯಗಳಾಗಿದ್ದು, ಹಾಗೂ ಹಿಂದೆ ಕುಳಿತ್ತಿದ್ದ ಸುರೇಶ್ ಕುಮಾರ್ ರವರಿಗೆ ಮುಖಕ್ಕೆ, ಕಿವಿಗೆ ಹಾಗೂ ಎಡ ಮೊಣಕಾಲಿಗೆ ರಕ್ತ ಗಾಯಗಳಾಗಿರುವುದಾಗಿ ಉಪಚರಿಸುತ್ತಿದ್ದ ಅಲ್ಲಿನ ಸ್ಥಳೀಯರು ನನಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದು, ತಾನು ಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ತಾನು ಅಲ್ಲಿನ ಸ್ಥಳೀಯರ ಸಹಾಯದಿಂದ ಅಲ್ಲಿಗೆ ಬಂದ 108 ಆಂಬೂಲೆನ್ಸ್ ವಾಹನದಲ್ಲಿ ಗಾಯಾಳು ಸುರೇಶ್ ಕುಮಾರ್ ರವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಹಾಗೂ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ತನ್ನ ತಮ್ಮ ಗಾಯಾಳು ರಂಜಿತ್ ಕುಮಾರ್ ರವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಸೇರಿಸಿದ್ದು, ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿಕೊಂಡು ಈ ದಿನ ತಡವಾಗಿ ದಿನಾಂಕ:-11/08/2020 ರಂದು ಸದರಿ ಅಪಘಾತ ಪಡಿಸಿ ವಾಹನ ಸಮೇತ ಹೊರಟು ಹೋದ ಯಾವುದೋ ಕಾರನ್ನು ಹಾಗೂ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.299/2020 ಕಲಂ. 15(ಎ) ಕೆ.ಇ. ಆಕ್ಟ್:-

          ದಿನಾಂಕ 11-08-2020 ರಂದು ಸಂಜೆ 16-30 ಗಂಟೆಗೆ ಠಾಣೆಯ ಹೆಚ್.ಸಿ-165 ಚಂದ್ರಪ್ಪ ರವರು ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:11/08/2020 ರಂದು ಪಿ.ಎಸ್.ಐ ಸಾಹೇಬರ ನೇಮಕದಂತೆ ತಾನು ಮತ್ತು ಸಿ.ಪಿ.ಸಿ-16 ಲೋಕೇಶ ರವರು ಠಾಣಾ ಸರಹದ್ದಿನ  ಕೋನಪಲ್ಲಿ, ಚಾಂಡ್ರಹಳ್ಳಿ, ಕತ್ತಿರಗುಪ್ಪೆ ಇತ್ಯಾದಿ ಕಡೆಗಳಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ಕತ್ತಿರಗುಪ್ಪೆ ಗ್ರಾಮದ ಬಳಿ ಗಸ್ತು ಮಾಡುತ್ತಿದ್ದಾಗ, ಸದರಿ ಗ್ರಾಮದ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ ರವರು ತನ್ನ ಅಂಗಡಿಯ ಬಳಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಅದರಂತೆ ಕತ್ತಿರಗುಪ್ಪೆಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಅವರೊಂದಿಗೆ ಸ್ಥಳಕ್ಕೆ ಹೋದಾಗ ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಮುಂದೆ ನೋಡಲಾಗಿ 90 ಎಂ.ಎಲ್ ನ ಹೇವಾರ್ಡ್ಸ್ ಚೀರ್ಸ್ ವಿಸ್ಕಿ ಕಂಪನಿಯ 3 ಟೆಟ್ರಾ ಪಾಕೆಟ್ ಗಳು, ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಮತ್ತು ಒಂದು ಲೀಟರ್ ನ ಎರಡು ನೀರಿನ ಬಾಟಲಿಗಳಿದ್ದು, ಅವುಗಳನ್ನು ಪರಿಶೀಲಿಸಲಾಗಿ, ಮದ್ಯದ ಟೆಟ್ರಾ ಪಾಕೆಟ್ ಗಳಲ್ಲಿ ಸ್ವಲ್ವ ಮದ್ಯವಿದ್ದು, ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಸ್ವಲ್ವ ನೀರು ಮಿಶ್ರಿತ ಮದ್ಯವಿರುತ್ತೆ. ನೀರಿನ ಬಾಟಲಿಗಳನ್ನು ಪರಿಶೀಲಿಸಲಾಗಿ, ಸದರಿ ಬಾಟಲಿಗಳಲ್ಲಿ ಸುಮಾರು 1/4 ರಷ್ಟು ನೀರು ಇರುತ್ತೆ. ಅಲ್ಲಿದ್ದ ಸಾರ್ವಜನಿಕರನ್ನು ಮಧ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ, 45ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ:ಕತ್ತಿರಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪಂಚರ ಸಮಕ್ಷಮ ಮದ್ಯಾಹ್ನ 3-15 ರಿಂದ 4-00 ಗಂಟೆಯವರೆಗೆ ಮಹಜರ್ ಕ್ರಮ ಕೈಗೊಂಡು ಮೇಲ್ಕಂಡ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡು ಮಾಲು, ಪಂಚನಾಮೆಯೊಂದಿಗೆ ಠಾಣೆಗೆ ವಾಪಸ್ಸಾಗಿ ದೂರನ್ನು ನೀಡುತ್ತಿದ್ದು, ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವ ಆರೋಪಿ ವೆಂಕಟರೆಡ್ಡಿ ಬಿನ್ ವೆಂಕಟರಾಯಪ್ಪ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.300/2020 ಕಲಂ. 87 ಕೆ.ಪಿ. ಆಕ್ಟ್:-

          ದಿನಾಂಕ 11-08-2020 ರಂದು ರಾತ್ರಿ 8-57 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಇ ಮೇಲ್ ಮೂಲಕ ಅನುಮತಿ ಪಡೆದುಕೊಂಡ ಅನುಮತಿ ಪತ್ರದ ಸಾರಾಂಶವೇನೆಂದರೆ  ಈ ದಿನ ದಿನಾಂಕ :11-08-2020 ರಂದು ಸಂಜೆ 4.30 ಗಂಟೆಯ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿಪಿಐ ಕೆ.ಎಂ.ಶ್ರೀನಿವಾಸಪ್ಪ ಆದ ನಾನು ಕಛೇರಿಯಲ್ಲಿದ್ದಾಗ, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಮುನಗನಹಳ್ಳಿ ಗ್ರಾಮದ ಬಳಿ ಇರುವ ಚೊಕ್ಕರೆಡ್ಡಿ ರವರ ಜಮೀನಿನಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಎಸ್.ನರೇಶ ನಾಯ್ಕ, ಸಿಬ್ಬಂದಿಯವರಾದ ಹೆಚ್.ಸಿ-41 ಶ್ರೀ.ಜಗದೀಶ, ಹೆಚ್.ಸಿ.249 ಸಂದೀಪ್ ಕುಮಾರ್, ಸಿಪಿಸಿ-504 ಶ್ರೀ.ಸತೀಶ, ಸಿಪಿಸಿ-239 ಶ್ರೀ.ಮಣಿಕಂಠ, ಸಿಪಿಸಿ-544 ಶ್ರೀ.ವೆಂಕಟರವಣ, ಸಿಪಿಸಿ-339 ಶ್ರೀ.ಕರಿಯಪ್ಪ, ಸಿಪಿಸಿ 513 ಜಗದೀಶ ಹಾಗೂ ಜೀಪ್ ಚಾಲಕ ವೇಣು ಮತ್ತು ಪಂಚರೊಂದಿಗೆ KA-40-G-540 ನಂಬರಿನ ಇಲಾಖಾ ಜೀಪಿನಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಮುನಗನಹಳ್ಳಿ ಗ್ರಾಮದ ಬಳಿ ಇರುವ ಚೊಕ್ಕರೆಡ್ಡಿ ರವರ ಜಮೀನಿನ ಬಳಿ ಹೋಗಿ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಜಮೀನಿನಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿ ನಾನು, ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಅವರನ್ನು ವಶಕ್ಕೆ ಪಡೆದು ಅವರುಗಳ ಹೆಸರು, ವಿಳಾಸ ಕೇಳಲಾಗಿ 1) ಸುಬ್ರಮಣಿ ಬಿನ್ ಲೇಟ್ ಕೃಷ್ಣಪ್ಪ, 40 ವರ್ಷ, ಬಲಜಿಗರು, ಟೈಲರ್ ಕೆಲಸ, ಎನ್.ಎನ್.ಟಿ ರಸ್ತೆ, ಚಿಂತಾಮಣಿ ನಗರ 2) ಶಿವಕುಮಾರ್ ಬಿನ್ ಲೇಟ್ ಜಯರಾಮ್, 43 ವರ್ಷ, ಮೊದಲಿಯಾರ್ ಜನಾಂಗ, ಕುಮಾರ್ ಸ್ಟುಡಿಯೋದಲ್ಲಿ ಕೆಲಸ, ಪ್ರಭಾಕರ ಲೇ ಔಟ್, ಚಿಂತಾಮಣಿ ನಗರ 3) ಆನಂದರೆಡ್ಡಿ ಬಿನ್ ಲೇಟ್ ಬೈಯನ್ನ, 45 ವರ್ಷ, ವಕ್ಕಲಿಗರು, ಜಿರಾಯ್ತಿ, ಧನಮಿಟ್ಟೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 4) ಮಂಜುನಾಥ ಬಿನ್ ನರಸಪ್ಪ, 38 ವರ್ಷ, ನಾಯಕರು, ಕೂಲಿಕೆಲಸ, ಟ್ಯಾಂಕ್ ಬಂಡ್ ರಸ್ತೆ, ಕೆಎಂ ಕೃಷ್ಣಾರೆಡ್ಡಿ ಕಾಲೋನಿ, ಚಿಂತಾಮಣಿ ನಗರ 5) ಕವಿರಾಜ್ ಬಿನ್ ಜಾಲಿಸಿಂಗ್, 48 ವರ್ಷ, ರಜಪೂತರು, ಕಾಲೇಜಿನಲ್ಲಿ ಗುಮಾಸ್ತ ಕೆಲಸ, ಆಶ್ರಯ ಬಡಾವಣೆ, ಮಸೀದಿ ಎದುರು, ಚಿಂತಾಮಣಿ ನಗರ ಎಂತ ತಿಳಿಸಿದ್ದು, ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ ನೆಲದ ಮೇಲೆ ಒಂದು ನ್ಯೂಸ್ ಪೇಪರ್ ಹಾಸಿದ್ದು ಅದರ ಮೇಲೆ 52 ಇಸ್ಪೀಟ್ ಕಾರ್ಡುಗಳು ಹಾಗೂ ಪಣಕ್ಕಿಟ್ಟಿದ್ದ 4,390/- ರೂ ನಗದು ಹಣ ಆರೋಪಿಗಳು ಜೂಜಾಟವಾಡಲು ತಂದಿದ್ದ 1) ನೋಂದಣಿ ಸಂಖ್ಯೆ ಕೆಎ-40 ವಿ-1045 ಹೀರೋ ಹೆಚ್.ಎಫ್ ಡಿಲಕ್ಸ್ 2) ಕೆಎ-03 ಇ-8488 ರಾಯಲ್ ಎನ್ ಪೀಲ್ಡ್ ಬುಲ್ಲೆಟ್ 3)ಕೆಎ-40 ಯು-510 ಟಿವಿಎಸ್ ಸ್ವೋರ್ಟ್ ಪ್ಲಸ್ 4) ನೋಂದಣಿ ಸಂಖ್ಯೆ ಇಲ್ಲದ ಹೋಂಡಾ ಆಕ್ಟೀವಾ 6ಜಿ ದ್ವಿಚಕ್ರ ವಾಹನಗಳು ಸ್ಥಳದಲ್ಲಿದ್ದು, ಸದರಿ ಮಾಲುಗಳನ್ನು ಸಂಜೆ 5.00 ರಿಂದ 6.00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯನ್ನು ಕೈಗೊಳ್ಳುವುದರ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಜೂಜಾಟವಾಡುತ್ತಿದ್ದ ಮೇಲ್ಕಂಡ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.301/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ: 12/08/2020 ರಂದು ಮದ್ಯಾಹ್ನ 1.00 ಗಂಟೆಗೆ ಠಾಣೆಯ ಹೆಚ್.ಸಿ-165 ರವರು ಕೋಲಾರದ ಎಸ್.ಎನ್.ಆರ್ ಆಸ್ವತ್ರೆಯಿಂದ ಗಾಯಾಳು ವೆಂಕಟರಾಯಪ್ಪ ಬಿನ್ ಲೇಟ್ ಮುನಿವೆಂಕಟಪ್ಪ, 75 ವರ್ಷ,  ವಕ್ಕಲಿಗರು, ಜಿರಾಯ್ತಿ, ಎ.ಗುಟ್ಟಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 09/08/2020 ರಂದು ಸಂಜೆ 4.30 ಗಂಟೆ ಸಮಯದಲ್ಲಿ ತಾನು ಮತ್ತು ತಮ್ಮ ಗ್ರಾಮದ ದೊಡ್ಡರಾಮಪ್ಪ ಬಿನ್ ದೊಡ್ಡಕದಿರಪ್ಪ ರವರು ಉಪ್ಪಾರಪೇಟೆ ಮತ್ತು ಅಮಿಟಿಗಾನಹಳ್ಳಿ ಗ್ರಾಮದ ಮದ್ಯೆ ರಸ್ತೆಯ ಎಡ ಬಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯಾರೋ ದ್ವಿಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಬಲಕಾಲಿಗೆ ಡಿಕ್ಕಿ ಹೊಡೆಸಿದ್ದು ತಾನು ಕೆಳಗೆ ಬಿದ್ದು ಹೋಗಿರುತ್ತೇನೆ. ತನ್ನ ಎಡ ಕಾಲಿನ ಮೊಣಕಾಲಿನ ಬಳಿ ತರಚಿದ ಗಾಯವಾಗಿರುತ್ತೆ ಮತ್ತು ಬಲ ಕಾಲು ಮುರಿದು ಹೋಗಿರುತ್ತೆ. ನಂತರ ಅಲ್ಲಿದ್ದ ಸಾರ್ವಜನಿಕರು ಒಂದು ತಮ್ಮನ್ನು ಉಪಚರಿಸಿದ್ದು, ದೊಡ್ಡರಾಮಪ್ಪ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ನಂತರ ತನ್ನ ಮಗ ನಾರಾಯಣಸ್ವಾಮಿ ಮತ್ತು ನವೀನ್ ರವರುಗಳು ಬಂದು ಯಾವುದೋ ಆಟೋದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಚತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ನಂತರ ಕೋಲಾರದ ಎಸ್.ಎನ್.ಆರ್ ಆಸ್ವತ್ರೆಗೆ ಕಳುಹಿಸಿಕೊಟ್ಟರು. ಅಲ್ಲಿ ವೈದ್ಯರು ಚಿಕಿತ್ಸೆ ನೀಡಿ ಬೆಂಗಳೂರಿನ ನಿಮ್ಹಾನ್ಸ್ ಆಸ್ವತ್ರೆಗೆ ಕಲುಹಿಸಿಕೊಟ್ಟಿದ್ದು ಅಲ್ಲಿನ ವೈದ್ಯರು ವಾಪಸ್ಸು ಪುನಃ ಕೋಲಾರದ ಎಸ್.ಎನ್.ಆರ್ ಆಸ್ವತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ಹಾಲಿ ತಾನು ಸದರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತೇನೆ. ತನಗೆ ಅಪಘಾತ ಪಡಿಸಿದ ವಾಹನದ ಬಗ್ಗೆ ತನ್ನ ಮಗನನ್ನು ವಿಚಾರಿಸಲಾಗಿ ಕೆಎ-03 ಇಬಿ-578 ಹಿರೋ ಹೊಂಡಾ ದ್ವಿಚಕ್ರ ವಾಹನ ಎಂದು ತಿಳಿಸಿರುತ್ತಾನೆ. ತಾನು ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ದೂರು ನೀಡಲು ತಡವಾಗಿರುತ್ತೆ. ತನಗೆ ಅಪಘಾತ ಪಡಿಸಿದ ದ್ವಿಚಕ್ರ ವಾಹನ ಸವಾರನಿಗೂ ಗಾಯಗಳಾಗಿದ್ದು ದ್ವಿಚಕ್ರ ವಾಹನ ಮತ್ತು ಆತನು ಅಲ್ಲಿಯೇ ಬಿದ್ದಿದ್ದು, ಆತನನ್ನು ಯಾರೋ ಸಾರ್ವಜನಿಕರು ಆಟೋದಲ್ಲಿ ಕರೆದುಕೊಂಡು ಹೋದರು. ಆದ್ದರಿಂದ ತನಗೆ ಅಪಘಾತ ಮಾಡಿ ಗಾಯಪಡಿಸಿದ ಮೇಲ್ಕಂಡ ದ್ವಿಚಕ್ರ ವಾಹನ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.302/2020 ಕಲಂ. 353,323,504,506 ಐ.ಪಿ.ಸಿ:-

          ದಿನಾಂಕ:12/08/2020 ರಂದು ಮದ್ಯಾಹ್ನ 2.30 ಗಂಟೆಗೆ ಪಿರ್ಯಾಧಿದಾರರಾದ ಎನ್.ಮೋಹನ್ ಬಿನ್ ಎಲ್.ನಾರಾಯಣಾಚಾರಿ, 46 ವರ್ಷ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಪೆರಮಾಚನಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿ, ಚಿಂತಾಮಣಿ ತಾಲ್ಲೂಕು ತಾನು ಈಗ್ಗೆ ಸುಮಾರು 4 ವರ್ಷಗಳಿಂದ ಚಿಂತಾಮಣಿ ತಾಲ್ಲೂಕು ಪೆರಮಾಚನಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುತ್ತೇನೆ. ಈ ಹಿಂದೆ ಕೆ.ವಿ.ಶಂಕರ್ ಬಿನ್ ವೆಂಕಟಪ್ಪ, ಕೊಂಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ತಮ್ಮ ಪಂಚಾಯ್ತಿ ಅದ್ಯಕ್ಷರಾಗಿದ್ದರು. ಆತನ ಅಧಿಕಾರಾವಧಿಯು ದಿನಾಂಕ 02/07/2020 ಕ್ಕೆ ಕೊನೆಗೊಂಡಿರುತ್ತೆ. ಆದರೆ ಸದರಿ ಕೆ.ವಿ.ಶಂಕರ್ ರವರು ತನ್ನ ಅಧಿಕಾರಾವಧಿ ಮುಗಿದ ನಂತರವು ಸಹ ಆಗಾಗ್ಗೆ ತಮ್ಮ ಪಂಚಾಯ್ತಿ ಕಛೇರಿಗೆ ಬಂದು ಗ್ರಾಮ ಪಂಚಾಯ್ತಿಗೆ ಸಂಬಂದಿಸಿದ ದಾಖಲಾತಿಗಳನ್ನು ಕೊಡುವಂತೆ ಕೇಳಿದಾಗ ತಾನು ಆತನಿಗೆ ದಾಖಲಾತಿಗಳನ್ನು ಕೊಡುತ್ತಿದ್ದೆನು. ಆದರೂ ಸಹ ಆತನು ನಾನು ಮಾಜಿ ಪಂಚಾಯ್ತಿ ಅಧ್ಯಕ್ಷನಾಗಿರುತ್ತೇನೆ ಎಂದು ತನ್ನ ಮೇಲೆ ದಬ್ಬಾಳಿಕೆ ಮಾಡುತ್ತಿದ್ದನು. ಈಗ್ಗೆ ಸುಮಾರು ಎರಡು ತಿಂಗಳ ಹಿಂದೆ ಆತನು ತಮ್ಮ ಪಂಚಾಯ್ತಿಗೆ ಸಂಬಂದಿಸಿದ ಕೆಲವು ಬಿಲ್ಲುಗಳನ್ನು ತೆಗೆದುಕೊಂಡು ಹೋಗಿದ್ದು, ಇದುವರೆಗೆ ಆತನು ಬಿಲ್ಲುಗಳನ್ನು ಕೊಟ್ಟಿರುವುದಿಲ್ಲ. ಈ ದಿನ ದಿನಾಂಕ 12/08/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಾನು ಪೆರಮಾಚನಹಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಕರ್ತವ್ಯದಲ್ಲಿದ್ದಾಗ, ಮೇಲ್ಕಂಡ ಕೆ.ವಿ.ಶಂಕರ್ ಬಿನ್ ವೆಂಕಟಪ್ಪ ರವರು ಕಛೇರಿಗೆ ಬಂದಾಗ ತಾನು ಆತನನ್ನು ಕುರಿತು ಸದರಿ ಬಿಲ್ಲುಗಳನ್ನು ವಾಪಸ್ಸು ಕೊಡುವಂತೆ ಕೇಳಿದಾಗ, ಆತನು ತನ್ನನ್ನು ಕುರಿತು ಬೋಳಿ ತನ್ನ ಮಗನೇ ನಿನ್ನದು ಜಾಸ್ತಿ ಆಗಿದೆ ಎಂದು ನೀನು ಯಾರು ನನ್ನನ್ನು ಬಿಲ್ಲುಗಳನ್ನು ಕೇಳುವುದಕ್ಕೆ ಎಂದು ತನ್ನ ಮೇಲೆ ಜಗಳ ತೆಗೆದು ತನ್ನನ್ನು ಹಿಡಿದು ಎಳೆದಾಡಿ ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಗಳಿಂದ ತನ್ನ ಬೆನ್ನು ಮತ್ತು ಮೈ-ಕೈ ಮೇಲೆ ಹೊಡೆದು ನೋವುಂಟು ಮಾಡಿ ನೀನು ಕಛೇರಿಯಿಂದ ಆಚೆ ಹೋಗು ಇಲ್ಲದಿದ್ದರೆ ನಿನ್ನನ್ನು ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಅಷ್ಟರಲ್ಲಿ ತಮ್ಮ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಗಣಕ ಯಂತ್ರ ನಿರ್ವಾಹಕರಾದ ಕೆ.ಆರ್.ಮಂಜುಳ ಬಿನ್ ರಾಮಣ್ಣ, ಜವಾನನಾದ ಪಿ.ಎ.ಮಂಜುನಾಥ ಬಿನ್ ಆಂಜಿನಪ್ಪ ಮತ್ತು ಪಂಚಾಯ್ತಿ ಕಛೇರಿಗೆ ಬಂದಿದ್ದ ನಾಯಿಂದ್ರಹಳ್ಳಿ ಗ್ರಾಮದ ವಾಸಿ ಮೂರ್ತಿ ರವರು ಬಂದು ಜಗಳ ಬಿಡಿಸಿರುತ್ತಾರೆ. ಸದರಿ ವಿಚಾರವನ್ನು ತಾನು ತಮ್ಮ ಮೇಲಧಿಕಾರಿಗಳ ಗಮನಕ್ಕೆ ತಂದು ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು, ತಾನು ನಿರ್ವಹಿಸುತ್ತಿದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡ ಕೆ.ವಿ.ಶಂಕರ್ ಬಿನ್ ವೆಂಕಟಪ್ಪ ರವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.106/2020 ಕಲಂ. 380,454,457 ಐ.ಪಿ.ಸಿ:-

          ದಿನಾಂಕ 11/08/2020 ರಂದು ಸಂಜೆ 6:00 ಗಂಟೆಯಲ್ಲಿ ಪಿರ್ಯಾದಿ ಎಂ ರಾಜಣ್ಣ ಬಿನ್ ಲೇಟ್ ಮೈಲಾರಪ್ಪ, 59 ವರ್ಷ, ಪರಿಶಿಷ್ಟ ಜಾತಿ ತಹಶೀಲ್ದಾರರು ಗೌರಿಬಿದನೂರು ತಾಲ್ಲೂಕು ರವರು ಗಿರೀಶ್ ಕುಮಾರ್ ಹೆಚ್.ಎಸ್ ಬಿನ್ ಲೇಟ್ ಸಂಜೀವಪ್ಪ, 29 ವರ್ಷ, ಗ್ರಾಮ ಸಹಾಯಕ ರವರ ಮೂಲಕ ಠಾಣೆಗೆ ಕಳುಹಿಸಿದ ದೂರಿನ ಸಾರಾಂಶವೇನೆಂದರೆ, ಹಳೆ ತಾಲ್ಲೂಕು ಕಛೇರಿಯಲ್ಲಿನ ಭೂಮಿ ಕೇಂದ್ರವು ದಿನಾಂಕ 08/08/2020 ರಂದು ಸಂಜೆ 4:00 ಗಂಟೆಯವರೆಗೂ ಕಾರ್ಯ ನಿರ್ವಹಿಸಿದ್ದು ನಂತರ ಭೂಮಿ ಕೇಂದ್ರಕ್ಕೆ ಬೀಗ ಹಾಕಲಾಗಿರುತ್ತೆ. ಮರುದಿನ ದಿನಾಂಕ 09/08/2020 ರಂದು ಭಾನುವಾರವಾಗಿದ್ದರಿಂದ ರಜಾದಿನವಾಗಿರುತ್ತೆ. ದಿನಾಂಕ 10/08/2020 ರಂದು ಕಛೇರಿಯ ಬಾಗಿಲನ್ನು ತೆರೆದು ನೋಡಲಾಗಿ ಕಛೇರಿಯಲ್ಲಿನ ಹಿಂಬಾಗಿಲನ್ನು ತೆರೆದು ಕೋಣೆಯಲ್ಲಿದ್ದ ಖಾತೆ ಬದಲಾವಣೆಯಾಗಿರುವ ಮ್ಯುಟೇಶನ್ ಕಡತಗಳು, ಹೊಸ ಅರ್ಜಿಗಳು ಮತ್ತು ಜೆ ನಮೂನೆಗಳೂ ಸುಮಾರು 250 ರಿಂದ 300 ಕಡತಗಳು ಕಳುವಾಗಿರುತ್ತವೆ. ಬೇರೆ ಯಾವುದೇ ವಸ್ತುಗಳು ಕಳುವಾಗಿರುವುದಿಲ್ಲವೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.84/2020 ಕಲಂ. 143,147,148,323,324,504 ರೆ/ವಿ 149 ಐ.ಪಿ.ಸಿ:-

          ದಿನಾಂಕ:12/08/2020 ರಂದು ಬೆಳಿಗ್ಗೆ: 10-30 ಗಂಟೆಗೆ ಪಿ.ಸಿ.484 ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡು ಹಾಜರುಪಡೆಸಿದ ಹೇಳಿಕೆಯ ಸಾರಾಂಶ ಈಗ್ಗೆ ಮೂರು ದಿನದ ಹಿಂದೆ ತಮ್ಮ ಗ್ರಾಮದ ಮೂರ್ತಿ ರವರು ತಮ್ಮ ತಂದೆಯ ಪೋನ್ ನಂಬರ್ 9663684653 ಗೆ ಕರೆ ಮಾಡಿ ತಮ್ಮ ಗ್ರಾಮದ ಅಂಜಲಿಯನ್ನು ತನ್ನ ಜೊತೆ ಮಾತನಾಡಲು ತಿಳಿಸುವಂತೆ ತನಗೆ ತಿಳಿಸಿದಾಗ ತಾನು ಈ ವಿಚಾರವನ್ನು ಅಂಜಲಿಗೆ ತಿಳಿಸಿದ್ದರಿಂದ ಈ ವಿಚಾರವಾಗಿ ಗಲಾಟೆಗಳಾಗಿ ಸುಮ್ಮನಿದ್ದು,  ಈಗಿರುವಲ್ಲಿ ದಿನಾಂಕ:11/08/2020 ರಂದು  ಸಂಜೆ:05-00 ಗಂಟೆಯ ಸಮಯದಲ್ಲಿ  ಅಂಜಲಿಯವರ ಮನೆಯ ಬಳಿ ಹೋಗುತ್ತಿದ್ದಾಗ  ಹಳೇ ವಿಚಾರ ಪ್ರಸ್ತಾವಣೆ ಮಾಡಿ  ಅಂಜಲಿ  ತನ್ನನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯ್ದಾಗ ತಾನು ಏಕೆ  ಎಂದು ಕೇಳಿದ್ದಕ್ಕೆ ತನ್ನ ಜುಟ್ಟು ಹಿಡಿದು ಎಳೆದಾಡಿ, ಕೈಗಳಿಂದ ಮೈಮೇಲೆ ಹೊಡೆದು ಮೂಗೇಟು ಉಂಟು ಮಾಡಿದ್ದು, ಆಗ ಜಗಳ ಬಿಡಿಸಲು ಬಂದ ತಮ್ಮ ತಂದೆ ನಾರಾಯಣಸ್ವಾಮಿ @ ನೀಲಟಪ್ಪ, ಮಾವ  ಬುರುಡುಗುಂಟೆ ಗ್ರಾಮದ ನಾರಾಯಣಸ್ವಾಮಿ, ಅವರ ಮಕ್ಕಳಾದ ಮಂಜುನಾಥ, ನರಸಿಂಹಮೂರ್ತಿ, ಸುಬ್ರಮಣಿ ರವರಿಗೆ ತಮ್ಮ ಗ್ರಾಮದ ಮೂರ್ತಿ, ಈಶ್ವರ @ ವಿಶ್ವನಾಥ, ವೆಂಕಟೇಶ, ವೆಂಕಟರಾಯಪ್ಪ, ರವರು ದೊಣ್ಣೆ ಮತ್ತು ಕೈಗಳಿಂದ ಹೊಡೆದಾಗ, ಆಗ ತಮ್ಮ ಅತ್ತೆಯವರಾದ ರಾಮಲಕ್ಷ್ಮಮ್ಮ ಹಾಗೂ ಇತರರು ಬಂದು ಜಗಳ ಬಿಡಿಸಿದರು.  ತನಗೆ ಮೈ-ಕೈ ನೋವುಗಳು ಜಾಸ್ತಿಯಾಗಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದು ತಮ್ಮಗಳ ಮೇಲೆ ಗಲಾಟೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.51/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ:11/08/2020 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:07/08/2020 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಯಾರೋ ಆಸಾಮಿ ನನಗೆ ಕರೆಮಾಡಿ ನಿಮ್ಮ ತಂದೆಯವರಿಗೆ ಅಪಘಾತವಾಗಿದೆ ಎಂದು ತಿಳಿಸಿದ್ದು ಅದರಂತೆ ನಾನು ಬಂದು ನೋಡಲಾಗಿ ಜೂಲಪಾಳ್ಯ ರಸ್ತೆಯಿಂದ ಪಾತಪಾಳ್ಯ ಗ್ರಾಮಕ್ಕೆ ರಸ್ತೆಯಲ್ಲಿ ಜಡಮಡಗು ರಸ್ತೆ ಸಮೀಪ ಅಪಘಾತವಾಗಿದ್ದು ವಿಚಾರಿಸಲಾಗಿ ನಮ್ಮ ತಂದೆ ಬಾಬತ್ತು ಕೆಎ-40 ಎಲ್-1303 ದ್ವಿ ಚಕ್ರವಾಹನದಲ್ಲಿ ಹಿಂಬದಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಕುಳ್ಳರಿಸಿಕೊಂಡು ಜೂಲಪಾಳ್ಯ ಕಡೆಗೆ ಹೋಗುವಾಗ ಜೂಲಪಾಳ್ಯ ಕಡೆಯಿಂದ ಎದುರುಗಡೆ  ಮಂಜುನಾಥ ಬಿನ್ ಗುಡೆ ಮದ್ದಿರೆಡ್ಡಿ ಕೊತ್ತೂರು ಗ್ರಾಮ ರವರು ತನ್ನ ಬಾಬತ್ತು ಕೆಎ-01 ಹೆಚ್ ಕ್ಯೂ-3640 ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಮದು ನ್ಮತಂದೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನ್ಮಮ ತಂದೆ ರಸ್ತೆ ಮೇಲೆ ಬಿದ್ದು ತಲೆಗೆ ರಕ್ತಗಾಯವಾಗಿದ್ದು ಎಡಗೈಗೆ ಮುರಿದಂತಹ ಗಾಯವಾಗಿರುತ್ತೆ, ಕೂಡಲೇ 108 ಆಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ಅದರಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಲಾಗಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದು ಅಲ್ಲಿಂದ ವೈದ್ಯರ ಸಲಹೆಯ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ, ನ್ಮ ತಂದೆಯವರನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಇರುವ ಕಾರಣ ಈ ದಿನ ತಡವಾಗಿ ಬಂದು ದೂರು ನೀಡಿರುತತೇನೆ, ನಮ್ಮ ತಂದೆಯ ಹೆಸರು ವಿಳಾಸ ಮದ್ದಿರೆಡ್ಡಿ ಬಿನ್ ಲೆಟ್ ಮದ್ದನ್ನ 60 ವರ್ಷ  ಗುಜ್ಜೇಪಲ್ಲಿ ಗ್ರಾಮ ನಮ್ಮ ತಂದೆಗೆ ಅಪಘಾತಪಡಿಸಿರುವ ಮೇಲ್ಕಂಡ ಮುಂಜುನಾಥನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ,ಸಂ 51/2020 ಕಲಂ 279,337, ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.219/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ:-12/08/2020 ರಂದು ಸಂಜೆ 4-15 ಗಂಟೆಗೆ ಪಿರ್ಯಾದಿದಾರರಾದ ದೇವರಾಜು ಬಿನ್ ಆಂಜಿನಪ್ಪ, 36 ವರ್ಷ, ಗೊಲ್ಲರು, ಜಿರಾಯ್ತಿ, ವಾಸ-ಕೃಷ್ಣಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 10/08/2020 ರಂದು ಮದ್ಯಾಹ್ನ 3-00 ಗಂಟೆ ಸಮಯದಲ್ಲಿ ತನ್ನ ತಂದೆಯವರಾದ ಆಂಜಿನಪ್ಪ ಬಿನ್ ಲೇಟ್ ಬೈಯ್ಯಣ್ಣ (65 ವರ್ಷ) ರವರು ತಮ್ಮ ಗ್ರಾಮದ ಸಮೀಪ ಜಂಗಮಕೋಟೆ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಕುರಿಗಳನ್ನು ಮೇಯಿಸಲು ಹೊಡೆದು ಕೊಂಡು ಹೋಗುತ್ತಿದ್ದಾಗ ಈ ಸಮಯದಲ್ಲಿ ಜಂಗಮಕೋಟೆ ಕಡೆಯಿಂದ ಎಪಿ-03-ಬಿಎ-4696 ನೊಂದಣಿ ಸಂಖ್ಯೆಯ ಸ್ಟಾರ್ ಸ್ವೋಟ್ಸ್ ದ್ವಿ ಚಕ್ರ ವಾಹನದ ಸವಾರನು ತನ್ನ ದ್ವಿ ಚಕ್ರ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ತಂದೆಯವರಾದ ಆಂಜಿನಪ್ಪ ರವರಿಗೆ ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಪರಿಣಾಮ ಎಡ ಮೊಣ ಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿರುತ್ತದೆ. ಆಗ ವಿಷಯ ತಿಳಿದು ಸ್ಥಳಕ್ಕೆ ಹೋದ ತನ್ನ ಅಣ್ಣ ಹಾಗು ಅಪಘಾತವನ್ನುಂಟು ಮಾಡಿದ ದ್ವಿ ಚಕ್ರ ವಾಹನದ ಸವಾರನು ತನ್ನ ತಂದೆಯವರನ್ನು ಉಪಚರಿಸಿ ಯಾವುದೇ ಆಂಬುಲನ್ಸ್ ನಲ್ಲಿ ಬೆಂಗಳೂರಿನ ಬಾಪಿಸ್ಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತಾರೆ. ನಂತರ ತನಗೆ ವಿಷಯ ತಿಳಿದು ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿರುತ್ತದೆ. ನಂತರ ತಾನು ನಡೆದ ವಿಷಯವನ್ನು ತನ್ನ ತಂದೆಯಿಂದ ತಿಳಿದು ಕೊಂಡಿರುತ್ತೇನೆ. ತನ್ನ ತಂದೆ ಆಂಜಿನಪ್ಪ ಇನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ತಾನು ಅವರ ಆರೈಕೆಯಲ್ಲಿ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ತಂದೆಯವರಿಗೆ ಅಪಘಾತವನ್ನುಂಟು ಮಾಡಿದ ಮೇಲ್ಕಂಡ ಎಪಿ-03-ಬಿಎ-4696 ನೊಂದಣಿ ಸಂಖ್ಯೆಯ ಸ್ಟಾರ್ ಸ್ವೋಟ್ಸ್ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.