ದಿನಾಂಕ :12/01/2021 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 279,337  ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

  ದಿ: 11-01-2021 ರಂದು ಸಂಜೆ 18:30 ಗಂಟೆಗೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನಗೆ 3 ಜನ ಮಕ್ಕಳಿದ್ದು, 1ನೇ ಗಿರೀಶ ಕುಮಾರ, 2ನೇ ನಿಕಿಲ್ ಕುಮಾರ, 3ನೇ ಅಶ್ವಿನಿ ಆಗಿರುತ್ತಾರೆ. ನನ್ನ 2ನೇ ಮಗನಾದ ನಿಕಿಲ್ ಕುಮಾರ, 24 ವರ್ಷ, ವ್ಯವಸಾಯ ರವರು  ದಿನಾಂಕ.10/01/2021 ರಂದು ಸಂಜೆ ಸುಮಾರು 5-30 ಗಂಟೆಯಲ್ಲಿ ಬಾಗೇಪಲ್ಲಿ ಟೌನ್ ನಲ್ಲಿ ವಾಸವಾಗಿರುವ ತನ್ನ ಸ್ನೇಹಿತನ ಮನೆಗೆ ಹೋಗಿ ಬರುತ್ತೆನೆಂದು ತಿಳಿಸಿ ಸೋಮೇನಹಳ್ಳಿಯಿಂದ ಹೊರಟಿರುತ್ತಾನೆ. ನಂತರ ರಾತ್ರಿ ಸುಮಾರು 10-00 ಗಂಟೆಯಲ್ಲಿ ಯಾರೋ ನನಗೆ ಪೋನ್ ಮಾಡಿ ನಿಮ್ಮ ಮಗನಾದ ನಿಕಿಲ್ ಕುಮಾರನಿಗೆ ಪರಗೋಡು ಡ್ಯಾಂ ಬಳಿ ಸ್ವಲ್ಪ ಮುಂದೆ ಸಾಲುಮರದ ತಿಮ್ಮಕ್ಕ ಪಾರ್ಕ ಬಳಿ ಎನ್.ಹೆಚ್ 44 ರಸ್ತೆಯಲ್ಲಿ ಅಪಘಾತವಾಗಿದ್ದು, ಆಂಬ್ಯೂಲೆನ್ಸ್ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ತಕ್ಷಣ ನಾನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ನಿಕಿಲ್ ಕುಮಾರನಿಗೆ ತಲೆಗೆ ಮತ್ತು ಎಡಕಾಲಿಗೆ ರಕ್ತ ಗಾಯವಾಗಿದ್ದು, ಬಲಕಾಲಿನ ತೊಡೆ ಬಳಿ ತರಚಿದ ಗಾಯವಾಗಿದ್ದು, ಪ್ರಜ್ಞೆ ತಪ್ಪಿದ್ದು ಮಾತಾನಾಡುತ್ತಿರಲಿಲ್ಲ. ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ ಆಸ್ಪತ್ರೆ ತೋರಿಸಿದ್ದು ನಂತರ ಯಲಹಂಕದ ಕೆ.ಕೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ನಂತರ ವಿಚಾರ ಮಾಡಿ ತಿಳಿಯಲಾಗಿ ದಿನಾಂಕ 10/01/2021 ರಂದು ರಾತ್ರಿ ಬಾಗೇಪಲ್ಲಿಯಿಂದ ಸೋಮೇನಹಳ್ಳಿ ಗ್ರಾಮಕ್ಕೆ ಬರಲು ತನ್ನ ಬಾಬತ್ತು ಕೆ.ಎ-51-ಆರ್-1508 ನೊಂದಣಿ ಸಂಖ್ಯೆಯ ಹೀರೋ ಹೋಂಡಾ ಸ್ಪ್ಲೇಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ರಾತ್ರಿ ಸುಮಾರು 8-00 ಗಂಟೆಯಲ್ಲಿ ಎನ್.ಹೆಚ್-44 ರಸ್ತೆಯಲ್ಲಿ ಸಾಲುಮರದ ತಿಮ್ಮಕ್ಕ ಪಾರ್ಕ ಬಳಿ ರಸ್ತೆಯಲ್ಲಿ ಬರುತ್ತಿರುವಾಗ, ಹಿಂಬದಿಯಿಂದ ಬಂದ  ಯಾವುದೋ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು  ದ್ಚಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ರಸ್ತೆ ಅಪಘಾತವನ್ನುಂಟು ಮಾಡಿ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಅಪಘಾತದ ಪರಿಣಾಮ ನನ್ನ ಮಗನಿಗೆ ತಲೆಗೆ, ಎಡಕಾಲಿಗೆ ರಕ್ತಗಾಯಗಳಾಗಿದ್ದು, ಬಲಕಾಲಿನ ತೊಡೆ ಬಳಿ ತರಚಿದ ಗಾಯವಾಗಿರುತ್ತದೆ ಎಂದು ವಿಚಾರ ತಿಳಿಯಿತು. ಆದ್ದರಿಂದ ನನ್ನ ಮಗನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಯಾವುದೋ ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ  ಡಿಕ್ಕಿ ಹೊಡೆದು ಅಪಘಾತನ್ನುಂಟು ಮಾಡಿ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ  ಕಾರನ್ನು ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ, ಎಂದು ದೂರು.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.13/2021 ಕಲಂ. 454,380  ಐ.ಪಿ.ಸಿ :-

  ದಿನಾಂಕ: 11/01/2021 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾಧಿದಾರರಾದ ದೇವರಾಜ ಬಿನ್ ನ್ಯಾನಪ್ಪ, 30 ವರ್ಷ, ಲಿಂಗಾಯಿತರು, ಕೂಲಿ ಕೆಲಸ, ವೈಜಕೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 10/01/2021 ರಂದು ತಾನು ಬೆಳಿಗ್ಗೆ 10.00 ಗಂಟೆಗೆ ದನಗಳನ್ನು ಮೇಯಿಸಲು ಊರಿನ ಆಚೆ ತೋಟಗಳ ಕಡೆಗೆ ಹೋಗಿರುತ್ತೇನೆ. ಸಂಜೆ ಸುಮಾರು 5.30 ಗಂಟೆಗೆ ತಮ್ಮ ಪಕ್ಕದ ಮನೆಯ ವಾಸಿಯಾದ ಭರತ್ ರವರು ತನಗೆ ಪೋನ್ ಮಾಡಿ ನಿಮ್ಮ ಮನೆಯ ಬೀಗವನ್ನು ಯಾರೋ ಕಿತ್ತು ಹಾಕಿರುತ್ತಾರೆ, ನಿಮ್ಮ ತಾಯಿ ಗಾಬರಿಯಲ್ಲಿರುತ್ತಾರೆ ಬಾ ಎಂದು ಕರೆದಿದ್ದರಿಂದ ತಾನು ಬಂದು ನೋಡುವಷ್ಟರಲ್ಲಿ ತಮ್ಮ ಮನೆಯ ಕಾಂಪೌಂಡ್ ನ ಗ್ರೀಲ್ಸ್ ಹಾಗೂ ಮುಂಭಾಗದ ಡೋರ್ ನ ಬೀಗವನ್ನು ಕಿತ್ತು ಹಾಕಿದ್ದು ತಮ್ಮ ತಾಯಿ ಮತ್ತು ತನ್ನ ಅಣ್ಣ ಮನೆಯಲ್ಲಿದ್ದರು. ತಾನು ತಮ್ಮ ತಾಯಿಯನ್ನು ಈ ಬಗ್ಗೆ ವಿಚಾರಿಸಲಾಗಿ ಇದೇ ದಿನ ಸಂಜೆ ಸುಮಾರು 4.00 ಗಂಟೆಗೆ ತಾನು ಗ್ರೀಲ್ಸ್ ಗೆ ಹಾಗೂ ಮುಂಭಾಗದ ಬಾಗಿಲಿಗೆ ಬೀಗವನ್ನು ಹಾಕಿಕೊಂಡು  ಪಕ್ಕದಲ್ಲಿಯೇ ಇರುವ ನಾರಾಯಣಪ್ಪರವರ ತೋಟದಲ್ಲಿ  ಹುಲ್ಲು ಕೊಯ್ಯಲು ಹೋಗಿದ್ದು ಸುಮಾರು 5.30 ಗಂಟೆಗೆ ಪುನ: ವಾಪಸ್ಸು ಬರುವಷ್ಟರಲ್ಲಿ ಮನೆಯ ಗ್ರೀಲ್ಸ್ ನ ಬೀಗವನ್ನು ಬಾಗಿಲಿನ ಡೋರ್ ಲಾಕ್ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿದ್ದರೆಂದು ತಿಳಿಸಿದರು. ತಾವೆಲ್ಲರೂ ಗಾಬರಿಯಿಂದ ಒಳಗೆ ಹೋಗಿ ನೋಡಲಾಗಿ ರೂಂನಲ್ಲಿಟ್ಟಿದ್ದ ಬೀರುವನ್ನು ಸಹ ಕಿತ್ತುಹಾಕಿ ಅದರಲ್ಲಿಟ್ಟಿದ್ದ ಸುಮಾರು 2 ಲಕ್ಷ ರೂ ನಗದು ಹಣ ಹಾಗೂ ಅದರಲ್ಲಿದ್ದ 1).08 ಗ್ರಾಂ ತೂಕದ ಓಲೆ, 2).03 ಗ್ರಾಂ ತೂಕದ ಉಂಗುರ, 3).03 ಗ್ರಾಂ ತೂಕದ ಮಾಟಿ, 4).40 ಗ್ರಾಂ ತೂಕದ ಎರಡೆಲೆ ಚೈನು, 5).30 ಗ್ರಾಂ ತೂಕದ ಬಳೆ, 6).ಸುಮಾರು ಅರ್ಧ ಕೆ.ಜಿ ಬೆಳ್ಳಿ ವಸ್ತುಗಳು ಹಾಗೂ ಇದೇ ರೂಂನ ಸರ್ಜಾದ ಮೇಲೆ ಹಳೆಯ ಮರದ ಪೆಟ್ಟಿಗೆಯ ಬೀಗವನ್ನು ಕಿತ್ತು ಹಾಕಿ ಅದರಲ್ಲಿದ್ದ 5 ಲಕ್ಷ  ನಗದು ಹಣ ಸಹ ಕಾಣಲಿಲ್ಲ. ಸದರಿ ಬೀರುವಿನ ಬೀಗದ ಕೈ ಮತ್ತು ಮರದ ಪೆಟ್ಟಿಗೆಗೆ ಹಾಕಿದ್ದ ಬೀಗದ ಕೀಗಳು ತಮ್ಮ ತಾಯಿಯ ಬಳಿಯಲ್ಲಿಯೇ ಇರುತ್ತವೆ. ಯಾರೋ ಕಳ್ಳರು ದಿನಾಂಕ: 10/01/2021 ರಂದು ಮದ್ಯಾಹ್ನ 4.00 ರಿಂದ 5.30 ಗಂಟೆಯ ಮದ್ಯೆ ತಮ್ಮ ಮನೆಗೆ ಹಾಕಿದ್ದ ಬೀಗಗಳನ್ನು ಯಾವುದೋ ಆಯುಧದಿಂದ ಕಿತ್ತು ಹಾಕಿ ಒಳಗಡೆ ಪ್ರವೇಶಿಸಿ ರೂಂನಲ್ಲಿಟ್ಟಿದ್ದ ಬೀರು ಮತ್ತು ಮರದ ಪೆಟ್ಟಿಗೆಯಲ್ಲಿಟ್ಟಿದ್ದ ಒಟ್ಟು ಸುಮಾರು 84 ಗ್ರಾಂ ತೂಕದ ಬಂಗಾರದ ವಡವೆಗಳು ಮತ್ತು ಅರ್ಧ ಕೆ.ಜಿ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಬಂಗಾರ ಮತ್ತು ಬೆಳ್ಳಿಯ ವಸ್ತುಗಳ ಒಟ್ಟು ಬೆಲೆ ಸುಮಾರು 2.35.000/- ರೂ ಆಗಿರುತ್ತೆ. ಆದ್ದರಿಂದ ಮೇಲ್ಕಂಡ ವಡವೆಗಳು ಹಾಗೂ 7 ಲಕ್ಷ ನಗದು ಹಣವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.08/2021  ಕಲಂ. 324,504,506 ಐ.ಪಿ.ಸಿ :-

  ದಿನಾಂಕ 11/01/2021 ರಂದು ಸಂಜೆ 16-15 ಗಂಟೆಗೆ ಪಿರ್ಯಾದಿ ಶ್ರೀಮತಿ ವರಲಕ್ಷ್ಮಮ್ಮ ಕೋಂ ಲೇಟ್ ನಾಗರಾಜ, 45 ವರ್ಷ, ನಾಯಕರು, ಕೊಲಿ ಕೆಲಸ ,ವಾಸ ಗಂಗಸಂದ್ರ ಗ್ರಾಮ, ಕಸಬಾ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ 10-01-2021 ರಂದು ರಾತ್ರಿ 11-40 ಗಂಟೆಯಲ್ಲಿ ತಮ್ಮ ಗ್ರಾಮದ ವಾಸಿಗಳಾದ ಯಲ್ಲಪ್ಪ, ಲಕ್ಷ್ಮೀಕಾಂತ ಹಾಗೂ ರಾಮಾಂಜಿನಮ್ಮ ರವರೊಂದಿಗೆ ಒಂದು ವಾರದ ಹಿಂದೆ ವಿನಾಕಾರಣ ಜಗಳವಾಗಿತ್ತು ಈ ವಿಚಾರ ಮನಸ್ಸಿನಲ್ಲಿಟ್ಟುಕೊಂಡು ಈ ದಿನ ರಾತ್ರಿ 11-40 ರಲ್ಲಿ ಯಲ್ಲಪ್ಪ, ಲಕ್ಷ್ಮೀಕಾಂತ, ರಾಮಾಂಜಿನಮ್ಮ ರವರು ತಮ್ಮ ಮನೆಯ ಬಳಿ ಬಂದು ವಿನಾಕಾರಣ ಅವಾಚ್ಯಶಬ್ದಗಳಿಂದ ಬೈದು ತಮ್ಮ ಮನೆಯ ಬಾಗಿಲು ಬಡಿದು ನಾವು ಹೊರಗೆ ಬಂದು ನೊಡುವಷ್ಠರಲ್ಲಿ ಯಲ್ಲಪ್ಪ ತನ್ನ ಕೈಯಲ್ಲಿದ್ದ ಕೊಲಿನಿಂದ ತನ್ನ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ಲಕ್ಷ್ಮೀಕಾಂತ ಕಲ್ಲಿನಿಂದ ತನ್ನ ಮಗ ಲಕ್ಷ್ಮೀನರಸಿಂಹ ರವರಿಗೆ ಬಲಗೈ ಮೇಲೆ ಹೊಡೆದು ಗಾಯ ಪಡಿಸಿರುತ್ತಾನೆ ಹಾಗೂ ಈ ನನ್ನ ಮಕ್ಕಳನ್ನು ಸುಮ್ಮನೆ ಬಿಡಬಾರದು ಸಾಯಿಸಿಬಿಡಿ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆಗ ತಾನು ಕೊಗಿಕೊಂಡಾಗ ತಮ್ಮ ತಾಯಿ ತಿಪ್ಪಕ್ಕ ಕೋಂ ಲೆಟ್ ತಿಪ್ಪನ್ನ ರವರು ಹೊರಗೆ ಬಂದಾಗ ಅವರನ್ನು ರಾಮಾಂಜೀನಮ್ಮ ರವರು ತನ್ನ ಕೈಯಲ್ಲಿದ್ದ ಕೊಲಿನಿಂದ ರಾಮಾಂಜೀನಮ್ಮ ತಮ್ಮ ತಾಯಿಯ ಎಡಗೈ ಮುಂಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾರೆ ತಮ್ಮ ಗಲಾಟೆ ಶಬ್ದ ಕೇಳಿ ತಮ್ಮಅಕ್ಕ ಪಕ್ಕದ ಮನೆಯವರಾದ ಶಾಮೀರ್ ಮತ್ತು ಯಶೋದಮ್ಮ ಎಂಬುವವರು ಬಂದು ಜಗಳ ಬಿಡಿಸಿರುತ್ತಾರೆ ನಂತರತಮ್ಮ ಗ್ರಾಮದ ಆಶಾಕಾರ್ಯಕರ್ತೆ ಗಂಗರತ್ನಮ್ಮ ರವರು ಆಂಬುಲೆನ್ಸ್ ಗೆ ಪೋನ್ ಮಾಡಿದ್ದು ಆಂಬುಲೆನ್ಸ್ ಬಂದ ನಂತರ  ನಾವು ಮೂರು ಜನರು ಗೌರಿಬಿದನೂರು ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತೇವೆ ತಮ್ಮನ್ನು ಹೊಡೆದು ಬೈದು ಪ್ರಾಣ ಬೆದರಿಕೆ ಹಾಕಿದ ಮೇಲ್ಕಂಡ ಮೂರು ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.09/2021  ಕಲಂ. 323,324,427,448,504,506,34  ಐ.ಪಿ.ಸಿ :-

     ದಿನಾಂಕ:11/01/2021 ರಂದು ಸಂಜೆ 17-00 ಗಂಟೆಗೆ ಠಾಣೆಯಲ್ಲಿ ಪಿರ್ಯಾದಿ ಶ್ರೀ ಯಲ್ಲಪ್ಪ ಬಿನ್ ಗಂಗಪ್ಪ, 48 ವರ್ಷ, ಭೋವಿ ಜನಾಂಗ, ಗಾರೆ ಕೆಲಸ, ವಾಸ ಗಂಗಸಂದ್ರ ಗ್ರಾಮ ಗೌರೀಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ:10/01/2021 ರಂದು ರಾತ್ರಿ ಸುಮಾರು 11-45 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಮನೆಯಲ್ಲಿದ್ದಾಗ ಅದೇ ಗ್ರಾಮದ ವಾಸಿಗಳಾದ ವರಲಕ್ಷ್ಮಮ್ಮ,, ಅಶೋಕ ಬಿನ್ ನಾಗರಾಜ, ಸನ್ನಿ @ ಲಕ್ಷ್ಮೀನರಸಿಂಹ ಬಿನ್ ಲೇಟ್ ನಾಗರಾಜ ನಾಯಕ ಜನಾಂಗ, ರವರು ಏಕಾಏಕಿ ಬಂದು ಪಿರ್ಯಾದಿದಾರರ ಮನೆಯ ಬಾಗಿಲನ್ನು ಜಖಂ ಮಾಡಿ, ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಪಿರ್ಯಾದಿದಾರರಿಗೆ ಹಾಗೂ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಈ ನನ್ನ ಮಕ್ಕಳನ್ನು ಪ್ರಾಣ ಸಹಿತ ಬಿಡಬೇಡಿ ಸಾಯಿಸಿ ಎಂದು ಅಶೋಕ ಹೇಳುತ್ತಿದ್ದ, ಸನ್ನಿ ಎಂಬುವನು ಲೋಫರ್ ನನ್ನ ಮಕ್ಕಳ ನೀವು ನಿಮ್ಮ ಮಗ ನಮ್ಮ ಮೇಲೆ ವಿನಾಕಾರಣ ಜಗಳಕ್ಕೆ ಬರುತ್ತೀರ ಎಂದು ಬೈದು ಇಟ್ಟಿಗೆಯಿಂದ ಪಿರ್ಯಾದಿದಾರರ ಎಡ ಭುಜಕ್ಕೆ ಹೊಡೆದು ಗಾಯವನ್ನುಂಟು ಮಾಡಿದ, ಅಶೋಕ ಎಂಬುವನು  ಪಿರ್ಯಾದಿದಾರರ  ಕುತ್ತಿಗೆಯನ್ನು ಹಿಡಿದುಕೊಂಡು  ಕೈಗಳಿಂದ ಪರಚಿ ಗಾಯಪಡಿಸಿದ, ವರಲಕ್ಷ್ಮಮ್ಮ ರವರು ಕೈಗಳಿಂದ ಪಿರ್ಯಾದಿದಾರರ ಪತ್ನಿ ರಾಮಾಂಜಿನಮ್ಮ ರವರಿಗೆ ಹೊಡೆದು ಮೈಕೈ ನೋವನ್ನುಂಟು ಮಾಡಿದರು. ಅಶೋಕ ಹಾಗೂ ಸನ್ನಿ ರವರು ಪಿರ್ಯಾದಿದಾರರ ಮನೆಯಲ್ಲಿದ್ದ ಪ್ಯಾನು, ಟಿ.ವಿ, ಹಾಗೂ ಇತರೆ ವಸ್ತುಗಳನ್ನು ನಾಶ ಪಡಿಸಿರುತ್ತಾರೆ.  ಪಿರ್ಯಾದಿದಾರರು ಕೂಗಿಕೊಂಡಾಗ ಪಕ್ಕದ ಮನೆಯ ವಾಸಿಗಳಾದ ಶಾಮೀರ್ ಬಿನ್ ಇಷಾಕ್ ಖಾನ್, ಹಾಗೂ ಯಶೋಧಮ್ಮ ಕೋಂ ಗುರುಮೂರ್ತಿ ರವರು ಜಗಳ ಬಿಡಿಸಿ ಯಾವುದೋ ಆಟೋದಲ್ಲಿ ಪಿರ್ಯಾದಿದಾರರನ್ನು ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟರುತ್ತಾರೆ. ಪಿರ್ಯಾದಿದಾರರ ಮೇಲೆ ಹಲ್ಲೇ ಮಾಡಿ, ಮನೆಯಲ್ಲಿದ್ದ ಪ್ಯಾನು , ಟಿವಿ, ಹಾಗೂ ಇತರೆ ವಸ್ತುಗಳನ್ನು ದ್ವಂಸ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆರದರಿಕೆ ಹಾಕಿರುವ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.06/2021  ಕಲಂ. 379  ಐ.ಪಿ.ಸಿ :-

     ದಿನಾಂಕ;11/01/2021 ರಂದು 20-10 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತನ್ನ ಬಾಬತ್ತು ಮಹೇಂದ್ರ ಬೊಲೆರೋ ಜೀಪ್ ಅನ್ನು ದಿನಾಂಕ;10/01/2021 ರಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ತಮ್ಮ ಮನೆಯ ಮುಂಭಾಗದಲ್ಲಿ ನಿಲ್ಲಿಸಿ ಲಾಕ್ ಮಾಡಿಕೊಂಡು ಮನೆಯ ಒಳಗಡೆ ಹೋಗಿದ್ದು ಬೆಳಿಗ್ಗೆ ಎದ್ದು ಮನೆಯ ಬಳಿ ನೋಡಲಾಗಿ ವಾಹನವು ಇರುವುದಿಲ್ಲಾ ಯಾರೋ ಕಳ್ಳರು ತನ್ನ ವಾಹನವನ್ನು ಕದ್ದುಯ್ದಿರುತ್ತಾರೆ ತನ್ನ ವಾಹನವನ್ನು 2008 ನೇ ವರ್ಷದ ವಾಹನವಾಗಿದ್ದು ಇದರ ಬೆಲೆಯು ಅಂದಾಜು 200000 (ಎರಡುಲಕ್ಷ ರೂಪಾಯಿಗಳಾಗಿರುತ್ತೆ) ಬೆಲೆಯ ತನ್ನ ವಾಹನವನ್ನು ತಮ್ಮ ಮನೆಯ ಮುಂಭಾಗದಿಂದ ಯಾರೋ ಕಳ್ಳರು ಕಳವು ಮಾಡಿದ್ದು ಮುಂದಿನ ಕಾನೂನು ಕ್ರಮ ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.07/2021  ಕಲಂ. 279,337  ಐ.ಪಿ.ಸಿ :-

     ದಿನಾಂಕ 12/01/2021 ರಂದು ಬೆಳಿಗ್ಗೆ 10:30 ಗಂಟೆಯಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 11/01/2021 ರಂದು ಮದ್ಯಾಹ್ನ 3:00 ಗಂಟೆಯಲ್ಲಿ ಮನೆಯಲ್ಲಿದ್ದಾಗ ತಮ್ಮ ಊರಿನ ಗೊವಿಂದ ಬಿನ್ ವೆಂಕಟೇಶ್ ರವರು ಫೋನ್ ಮಾಡಿ ನಿಮ್ಮ ಅಕ್ಕನವರಾದ ಲಕ್ಷ್ಮಮ್ಮ ಕೋಂ ಬೀರಪ್ಪ ರವರು ತಮ್ಮ ಮಗನಾದ ಮಂಜುನಾಥ ರವರೊಂದಿಗೆ ಕಲ್ಲೂಡಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಸಮೀಪ ಸುಮಾರು 2:30 ಗಂಟೆಯಲ್ಲಿ ಹಿಂದೂಪುರದಿಂದ ಗೌರಿಬಿದನೂರಿನ ಕಡೆ ಬರುವ ರಸ್ತೆ ಬದಿಯಲ್ಲಿ ನಿಂತಿದ್ದಾಗ ನರಸಾಪುರ ಗ್ರಾಮದ ಗಂಗರಾಜು ಬಿನ್ ಲೇಟ್ ಕೃಷ್ಣಪ್ಪ ರವರು ತನ್ನ ಬಾಬತ್ತು KA-40-ED-4282 ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಕ್ಷ್ಮಮ್ಮ ಮತ್ತು ಮಂಜುನಾಥ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ಗಾಯಗಳಾಗಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದರು. ಕೂಡಲೆ ತಾನು ಆಸ್ಪತ್ರೆಗೆ ಹೋಗಿ ನೋಡಲಾಗಿ ಲಕ್ಷ್ಮಮ್ಮ ರವರಿಗೆ ತಲೆಗೆ ಊತದ ಗಾಯವಾಗಿದ್ದು ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು ವಾಂತಿ ಮಾಡಿಕೊಂಡಾಗ ರಕ್ತ ಬಂದಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ತಮ್ಮ ಅಕ್ಕನ ಮಗನಾದ ಮಂಜುನಾಥ ರವರಿಗೆ ಕೆನ್ನೆಯ ಮೇಲೆ ತರಚಿದ ಗಾಯವಾಗಿತ್ತು.  ತಮ್ಮ ಅಕ್ಕ ಲಕ್ಷ್ಮಮ್ಮ ರವರನ್ನು ಕೆ.ಕೆ ಆಸ್ಪತ್ರೆಯಲ್ಲಿ ದಾಖಲು ಮಾಡಿ ಲಕ್ಷ್ಮಮ್ಮ ರವರಿಗೆ ಹೇಳಿಕೆ ಕೊಡಲು ಸಾದ್ಯವಾಗದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ಅಪಘಾತವುಂಟು ಮಾಡಿದ KA-40-ED-4282 Hero Passion ದ್ವಿಚಕ್ರ ವಾಹನ ಸವಾರ ನರಸಾಪುರ ಗ್ರಾಮದ ಗಂಗರಾಜು ಬಿನ್ ಲೇಟ್ ಕೃಷ್ಣಪ್ಪ ರವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ. 279,304(A) ಐ.ಪಿ.ಸಿ :-

     ದಿನಾಂಕ:11-01-2021 ರಂದು ರಾತ್ರಿ:8-15 ಗಂಟೆಯಲ್ಲಿ ಪಿರ್ಯಾದಿದಾರರಾದ  ನರಸಿಂಹಮೂರ್ತಿ ಬಿನ್ ಲೇಟ್ ಕದಿರಪ್ಪ 40 ವರ್ಷ ಆದಿ ದ್ರಾವಿಡ ಜನಾಂಗ ಕೂಲಿ ವಾಸ ಅಲಗುರ್ಕಿ ಗ್ರಾಮ, ಬಶೆಟ್ಟಿಹಳ್ಳಿ ಹೋಬಳಿ, ಶಿಡ್ಲಗಟ್ಟ ತಾಲ್ಲೂಕು ಮೊ:7760664993 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ತನ್ನ ತಮ್ಮನಾದ ಗಂಗುಲಪ್ಪ ಬಿನ್ ಲೇಟ್ ಕದಿರಪ್ಪ 35 ವರ್ಷ ರವರು ಚಾಲಕ ಕೆಲಸ ಮಾಡುತ್ತಿದ್ದು ತಮ್ಮ ಸಂಬಂಧಿಕರು ಚಿಕ್ಕಬಳ್ಳಾಪುರ ತಾಲ್ಲೂಕು ಹೀರೇನಾಗವಲ್ಲಿ ಗ್ರಾಮದಲ್ಲಿದ್ದು ಆಗಾಗ ಹಿರೇನಾಗವಲ್ಲಿ ಗ್ರಾಮಕ್ಕೆ ಬಂದು ಹೋಗುತ್ತಿದ್ದ ಮತ್ತು ಹೀರೇನಾಗವಲ್ಲಿ ಗ್ರಾಮದ ಹತ್ತಿರವಿರುವ ಕ್ರಷರ್ ಲಾರಿಗಳಿಗೆ ಲಾರಿ ಚಾಲಕನಾಗಿ ಹೋಗುತ್ತಿದ್ದ ಮತ್ತು ಆತನಿಗೆ ಕ್ರಷರ್ ನಲ್ಲಿ ಕೆಲಸ ಮಾಡುವ ಲಾರಿ ಚಾಲಕರು ಮತ್ತು ಕೂಲಿ ಕೆಲಸದವರು ಪರಿಚಯವಾಗಿದ್ದರು ಈಗಿರುವಾಗ ತನ್ನ ತಮ್ಮನಾದ ಗಂಗುಲಪ್ಪ ರವರು ದಿನಾಂಕ:10/01/2021 ರಂದು ಬೆಳಿಗ್ಗೆ ಕೆಲಸಕ್ಕೆಂದು ಹೀರೆನಾಗವಲ್ಲಿ ಗ್ರಾಮಕ್ಕೆ ಬಂದಿದ್ದು ನಂತರ ಈ ದಿನ ದಿನಾಂಕ:11/01/2021 ರಂದು ಸಂಜೆ 4-00 ಗಂಟೆಯಲ್ಲಿ ತಮಗೆ ಪರಿಚಯಸ್ಥರಾದ ಶಿಡ್ಲಘಟ್ಟ ತಾಲ್ಲೂಕು ಯರ್ರನಾಗೇನಹಳ್ಳಿ  ಗ್ರಾಮದ ವಾಸಿಗಳಾದ ಮುನಿಕೃಷ್ಣಪ್ಪ ಮತ್ತು ತಿಮ್ಮಣ್ಣ ರವರು ತನಗೆ ಪೋನ್ ಮಾಡಿ ತಿಳಿಸಿದ್ದೇನೆಂದರೆ ಈ ದಿನ ದಿನಾಂಕ:11/01/2021 ರಂದು ಮದ್ಯಾಹ್ನ ಸುಮಾರು 3-30 ಗಂಟೆ ಸಮಯದಲ್ಲಿ ತಾವು ಪೆರೇಸಂದ್ರ ಕ್ರಾಸ್ ನಲ್ಲಿದ್ದಾಗ ಗಂಗುಲಪ್ಪ ಮತ್ತು ಆತನ ಜೋತೆಯಲ್ಲಿ ಕ್ರಷರಲ್ಲಿ  ಕೆಲಸ ಮಾಡುವ ಇನ್ನೋಬ್ಬ ವ್ಯಕ್ತಿ ಕೆ,ಎ-50 ಎಲ್-4761 ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ದ್ವಿ ಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರದ ಕಡೆಗೆ ಹೋಗಿದ್ದು ನಂತರ ತಾವು ಸಹ ಅದೇ ರಸ್ತೆಯಲ್ಲಿ ಅವರ ಹಿಂದೆ ತಮ್ಮ ದ್ವಿಚಕ್ರ ವಾಹನದಲ್ಲಿ ಹೈದಾರಬಾದ್ ಕಡೆಯಿಂದ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಕೆಲಸದ ನಿಮ್ಮಿತ್ತ ಹೋಗುತ್ತಿದ್ದಾಗ ಇದೇ ದಿನ ಮದ್ಯಾಹ್ನ ಸುಮಾರು 3-45 ಗಂಟೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಕೆ,ಎನ್,ಆರ್ ಕನ್ಸಟ್ರಕ್ಷನ್ ಹತ್ತಿರ ಹೈದರಾಬಾದ್ ಕಡೆಯಿಂದ ಬೆಂಗಳೂರು ಕಡೆ ಹೋಗುವ  ಎನ್,ಹೆಚ್-44 ರಸ್ತೆಯಲ್ಲಿ ತಮ್ಮ ಮುಂದೆ ಕೆ,ಎ-50 ಎಲ್-4761 ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ದ್ವಿ ಚಕ್ರವಾಹನದಲ್ಲಿ ಹೋಗುತ್ತಿದ್ದ ಗಂಗುಲಪ್ಪ ಮತ್ತು ಇನ್ನೊಬ್ಬ ವ್ಯಕ್ತಿಗೆ ಅದೇ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಕಡೆ ಹೋಗುತ್ತಿದ್ದ ಕೆ,ಎ-40 ಎ-9828 ನೊಂದಣಿ ಸಂಖ್ಯೆಯ ಟಿಪ್ಪರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಹೊಡೆಯಿಸಿ ಅಪಘಾಪ ಪಡಿಸಿದ ಪರಿಣಾಮ ದ್ವಿಚಕ್ರವಾಹನದಲ್ಲಿದ್ದ ಮೇಲ್ಕಂಡ ಇಬ್ಬರಿಗೂ ತೀವ್ರವಾದ ರಕ್ತಗಾಯಗಳಾಗಿ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದು ದ್ವಿಚಕ್ರವಾಹನ ಜಖಂಗೊಂಡಿದ್ದು ಮೃತ ದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರಿಸಿರುವುದಾಗಿ ತಿಳಿಸಿದ್ದು ನಂತರ ತಾನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಮೃತ ದೇಹವು ತನ್ನ ತಮ್ಮ ಗಂಗುಲಪ್ಪ ರವರದಾಗಿದ್ದು ಈ ಅಪಘಾತದಲ್ಲಿ ತನ್ನ ತಮ್ಮ ಗಂಗುಲಪ್ಪ ರವರ ಜೊತೆಯಲ್ಲಿ ದ್ವಿ ಚಕ್ರ ವಾಹನದಲ್ಲಿ ಬಂದು ಅಪಘಾತದಲ್ಲಿ ಮೃತ ಪಟ್ಟ ಇನ್ನೊಬ್ಬ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿಯಲಾಗಿ ಹಿರೇನಾಗವಲ್ಲಿ ಗ್ರಾಮದ ಹತ್ತಿರ ಕ್ರಷರ್ ನಲ್ಲಿ ಕೆಲಸ ಮಾಡುವ ಸಂಜೀತ್ ಕ್ಯಾಪ್ ಬಿನ್ ರಾಮಚಂದ್ರ ಕ್ಯಾಪ್ ಸುಮಾರು 30 ವರ್ಷ ನಮಿಲೆ ಗ್ರಾಮ, ಪುರ್ಬಾ ಮದಿನಿಪುರ್ ಜಿಲ್ಲೆ ಪಶ್ಚಿಮ ಬಂಗಾಳ ರಾಜ್ಯ ಎಂದು ತಿಳಿಯಿತು, ನಂತರ ತಾನು ಅಫಘಾತ ನಡೆದ ಸ್ಥಳವನ್ನು ನೋಡಿಕೊಂಡು ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡಂತೆ ಅಫಘಾತ ಪಡಿಸಿದ ಕೆ,ಎ-40 ಎ-9828 ನೊಂದಣಿ ಸಂಖ್ಯೆಯ ಟಿಪ್ಪರ್ ವಾಹನ ಮತ್ತು ಅದರ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 279,337,304(A) ಐ.ಪಿ.ಸಿ :-

     ದಿನಾಂಕ: 11/01/2021 ಬೆಳಿಗ್ಗೆ 8-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಹರೀಶ್ ಬಿನ್ ನಾರಾಯಣಪ್ಪ, 28 ವರ್ಷ, ನಾಯಕರು, ಬೇಕರಿಯಲ್ಲಿ ಕೆಲಸ, ವಾಸ ಹೊನ್ನಪ್ಪನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ತಾನು ಗೌರಿಬಿದನೂರಿನ ಕೇಕ್ ಕಾರ್ನರ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 10/01/2021 ರಂದು ನಾನು ಎಂದಿನಂತೆ ಬೇಕರಿ ಕೆಲಸಕ್ಕೆ ಹೋಗಿ ಕೆಲಸವನ್ನು ಮುಗಿಸಿಕೊಂಡು ರಾತ್ರಿ ಸುಮಾರು 10-00 ಗಂಟೆಗೆ ನಮ್ಮ ಗ್ರಾಮಕ್ಕೆ ಹೋಗಲು ಮಂಚೇನಹಳ್ಳಿಗೆ ಬಂದಿದ್ದು ಅಲ್ಲಿ ನಮ್ಮ ಗ್ರಾಮಕ್ಕೆ ಸಮಾರಂಭ ಒಂದಕ್ಕೆ ಬಂದಿದ್ದ ರಾಜಾನಕುಂಟೆಯ ವಾಸಿಯಾದ ರವಿ R ಬಿನ್ ರಾಮಕೃಷ್ಣಪ್ಪ, 24 ವರ್ಷ, ನಾಯಕ ಜನಾಂಗ, ಆಟೋ ಚಾಲಕ ಕೆಲಸ ರವರು ಇದ್ದು ಸದರಿಯವರು ನನ್ನನ್ನು ಅವರ ಜೋತೆಯಲ್ಲಿ AP-02-CG-5741 ನೊಂದಣಿ ಸಂಖ್ಯೆಯ ಅಪಾಚಿ ದ್ವಿ ಚಕ್ರ ವಾಹನದಲ್ಲಿ ಬರುವಂತೆ ತಿಳಿಸಿದ್ದು ಆಗ ನಾನು ನನ್ನ ದ್ವಿ ಚಕ್ರ ವಾಹನವನ್ನು ರವಿ R ರವರ ಜೋತೆಯಲ್ಲಿ ಬಂದಿದ್ದ ಗಂಗರಾಜು ಮತ್ತು ನಾಗರಾಜ ರವರಿಗೆ ನೀಡಿದ  ರವಿ ರವರ ಬಾಬತ್ತು AP-02-CG-5741 ನೊಂದಣಿ ಸಂಖ್ಯೆಯ TVS ಅಪಾಚಿ ದ್ವಿ ಚಕ್ರ ವಾಹನದಲ್ಲಿ ಹಿಂಬದಿ ಕುಳಿತುಕೊಂಡಿದ್ದು ರವಿ R ರವರು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಮಂಚೇನಹಳ್ಳಿಯಿಂದ ನಮ್ಮ ಗ್ರಾಮಕ್ಕೆ ಹೋಗಲು ಎಸ್.ಎಚ್ 94 ರಸ್ತೆಯಲ್ಲಿ ಹೋಗುತ್ತಿರುವಾಗ ರಾತ್ರಿ ಸುಮಾರು 10-30 ಗಂಟೆಯಲ್ಲಿ ರವಿ R ರವರು ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಮ್ಮ ಗ್ರಾಮದ ಶಾಲೆಯಿಂದ ಸ್ವಲ್ಪ ಮುಂಭಾಗ ರಸ್ತೆಯ ಎಡಭಾಗ ಇರುವ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಹೋಗಿ ನನಗೆ ಎಡಭಾಗದ ಭುಜಕ್ಕೆ ಸೊಂಟಕ್ಕೆ ಮೂಗೇಟುಗಳಾಗಿ ರವಿ ರವರಿಗೆ ತಲೆಗೆ ಮುಖಕ್ಕೆ ಮತ್ತು ಎಡಭಾಗದ ಭುಜಕ್ಕೆ ಗಾಯಗಳಾಗಿದ್ದು ಆಗ ನಮ್ಮ ಹಿಂಭಾಗ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ಗಂಗರಾಜ ಮತ್ತು ನಾಗರಾಜ ರವರು ಗಾಯಗೊಂಡಿದ್ದ ನಮ್ಮನ್ನು ಉಪಚರಿಸಿ ಅಲ್ಲಿಗೆ ಬಂದ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ರವಿ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಅಪಘಾತಕ್ಕೆ ಕಾರಣನಾದ ರವಿ R ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 341,447,504,506,34 ಐ.ಪಿ.ಸಿ :-

     ದಿನಾಂಕ:-11/01/2021 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಹೆಚ್.ಎಂ ಚಿಕ್ಕ ಮುನಿಯಪ್ಪ ಬಿನ್ ಲೇಟ್ ಮುನಿಶಾಮಪ್ಪ, 74 ವರ್ಷ, ಆದಿ ಕರ್ನಾಟಕ ಜಿರಾಯ್ತಿ, ವಾಸ-ಹೊಸಪೇಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ, ಹೊಸಪೇಟೆ ಗ್ರಾಮಕ್ಕೆ ಸೇರಿದ ಸರ್ವೇ ನಂ 329/1 ವಿಸ್ತೀರ್ಣ 1 ಎಕರೆ 8 ಗುಂಟೆ ಜಮೀನಿನಲ್ಲಿ ತಾನು ಮತ್ತು ತನ್ನ ಕುಟುಂಬದವರು ಸಂಪೂರ್ಣ ಮಾಲೀಕರಾಗಿ ತಮ್ಮ ಶಾಂತಿಯುತ ಸ್ವಾಧೀನತೆಯನ್ನು ಮುಂದುವರೆಸಿಕೊಂಡು ಬಂದಿರುತ್ತೇವೆ. ಮೇಲ್ಕಂಡ ಜಮೀನಿನ ಜೊತೆ ಸರ್ವೇ ನಂ 103, 241/3, 308/1, 329/1, 344 ಮತ್ತು 372 ರಲ್ಲಿ 1.6 ಹಿಸ್ಸೆ ಜಮೀನಿ ನೀರಗಂಟಿ ಜಮೀನು ಆಗಿದ್ದು, ಈರಪ್ಪ ಬಿನ್ ಲೇಟ್ ನಾರಾಯಣಪ್ಪ ಮತ್ತು ತನ್ನ ಹೆಸರಿಗೆ ಜಂಟಿಯಾಗಿ ಖಾತೆಯಾಗಿರುತ್ತದೆ. ಹಾಗು ಸದರಿ ಜಮೀನಿನ ಕಂದಾಯ ದಾಖಲೆಗಳು ಈರಪ್ಪ ಬಿನ್ ಲೇಟ್ ನಾರಾಯಣಪ್ಪ ಮತ್ತು ತನ್ನ ಹೆಸರಿನಲ್ಲಿ ಜಂಟಿ ಮುಟೇಷನ್ ಖಾತೆಯಾಗಿರುತ್ತದೆ. ಈ ಹಿಂದೆ ತಾನು ಮತ್ತು ತನ್ನ ಕುಟುಂಬದವರು ಮೇಲ್ಕಂಡ ಜಮೀನಿನಲ್ಲಿ ಉಳುಮೆ ಮಾಡಿದ್ದು, ದಿನಾಂಕ 04/07/2020 ರಂದು ಮದ್ಯಾಹ್ನ 12-00 ಗಂಟೆಗೆ ತನ್ನ ಹೆಂಡತಿ ಮುನಿಯಮ್ಮ ಮತ್ತು ಕೂಲಿ ಆಳುಗಳಾದ ನರಸಿಂಹಮೂರ್ತಿ ಬಿನ್ ಲೇಟ್ ವೆಂಕಟಪ್ಪ, ಮುನೆಯ್ಯ ಬಿನ್ ಚಿನ್ನಪ್ಪಯ್ಯ ಇನ್ನಿತರೆಯವರು ಭಿತ್ತನೆ ಬೀಜವನ್ನು ಹಾಕುತ್ತಿದ್ದಾಗ ತಮ್ಮ ಗ್ರಾಮದ ವಾಸಿಗಳು ಹಾಗು ತಮ್ಮ ಜನಾಂಗದವರೇ ಆದ ಹೆಚ್.ಎಂ ಶ್ರೀನಿವಾಸ್ ಬಿನ್ ಲೇಟ್ ಮುನಿ ತಿರುಮಳಪ್ಪ, ಮುದ್ದಮ್ಮ ಕೋಂ ಲೇಟ್ ಗುರ್ರಪ್ಪ, ನಾರಾಯಣಮ್ಮ ಬಿನ್ ಲೇಟ್ ಮುನಿ ತಿರುಮಳಪ್ಪ, ಮೀನಾ ಕೋಂ ಶ್ರೀನಿವಾಸ್ ಹೆಚ.ಎಂ ಮತ್ತು ಇತರೆಯವರು ಗುಂಪುಕಟ್ಟಿಕೊಂಡು ಮೇಲ್ಕಂಡ ಜಮೀನೊಳಗೆ ಬಂದು ತನ್ನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ಬೈದು, ನೀನು ಇಲ್ಲೇ ಇದ್ದರೆ ನಿನ್ನನ್ನು ಮುಗಿಸಿ ಇದೇ ಜಮೀನಿನಲ್ಲಿ ಸಮಾಧಿ ಮಾಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಮೇಲ್ಕಂಡವರ ಮೇಲೆ ಸಿಆರ್ ಸಂಖ್ಯೆ 109/2019 ಕಲಂ 417.420.465.471.209.196.193.120(ಬಿ) ರೀತ್ಯಾ ಕ್ರಿಮಿನಲ್ ಮೊಕದ್ದಮೆ ಸಹ ದಾಖಲಾಗಿರುತ್ತದೆ. ಈ ವಿಷಯದಲ್ಲಿ ದಿನಾಂಕ 04/07/2020 ರಂದು ತನ್ನ ಹೆಂಡತಿಯಾದ ಮುನಿಯಮ್ಮ ರವರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ನೀಡಿದ ದೂರಿನ ಮೇರೆಗೆ ಎನ್.ಸಿ.ಆರ್ ನಂಬರ್-249/2020 ರಂತೆ ಪ್ರಕರಣ ದಾಖಲಾಗಿ ಮೇಲ್ಕಂಡವರನ್ನು ಪೊಲೀಸರು ಕರೆಯಿಸಿ ಬಂದೋ ಬಸ್ತ್ ಸಹ ಮಾಡಿರುತ್ತಾರೆ. ಹೀಗಿರುವಾಗ ಮೇಲ್ಕಂಡ ಜಮೀನುಗಳ ವಿಚಾರ ನ್ಯಾಯಾಲಯದಲ್ಲಿ ಎಂ.ಎ 23/2019 ರಂತೆ ದಾವೆ ನಡೆಯುತ್ತಿದ್ದು, ದಿನಾಂಕ:16.12.2020 ರಂದು ಘನ ನ್ಯಾಯಾಲಯವು ತಮ್ಮ ಸ್ವಾಧೀನದಲ್ಲಿರುವ 3.11 3/4 ಗುಂಟೆ ಜಮೀನನ್ನು ಶಾಂತ ರೀತಿಯಲ್ಲಿ ಅನುಭವಿಸುವುದಕ್ಕೆ ಅಡ್ಡಿಪಡಿಸದಂತೆ ಹಾಗೂ 1000 ರೂ ದಂಡ ವಿಧಿಸಿರುತ್ತೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಮೇಲ್ಕಂಡವರಾದ  1) ಹೆಚ್.ಎಂ ಶ್ರೀನಿವಾಸ್ ಬಿನ್ ಲೇಟ್ ಮುನಿ ತಿರುಮಳಪ್ಪ, 2) ಮುದ್ದಮ್ಮ ಕೋಂ ಲೇಟ್ ಗುರ್ರಪ್ಪ, 3) ನಾರಾಯಣಮ್ಮ ಬಿನ್ ಲೇಟ್ ಮುನಿ ತಿರುಮಳಪ್ಪ, 4) ಮೀನಾ ಕೋಂ ಶ್ರೀನಿವಾಸ್ ಹೆಚ್.ಎಂ ರವರುಗಳು ದಿನಾಂಕ 10/01/2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಹೆಂಡತಿಯು ತಮ್ಮ ಸ್ವಾಧೀನದಲ್ಲಿರುವ ಮೇಲ್ಕಂಡ ಜಮೀನೊಳಗೆ ಅವರೇ ಕಾಯಿ ಕೀಳಲು ಹೋಗುತ್ತಿದ್ದಾಗ  ತಮ್ಮನ್ನು ಅಡ್ಡಗಟ್ಟಿ, ಜಮೀನಿನ ವಿಚಾರದಲ್ಲಿ ತಮ್ಮ ಮೇಲೆ ಗಲಾಟೆಯನ್ನು ಮಾಡಿ ಕೆಟ್ಟ ಮಾತುಗಳಿಂದ ಬೈದು, ನೀವು ಜಮೀನೊಳಗೆ ಹೋದರೆ ನಿಮ್ಮನ್ನು ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿ ತಮ್ಮ ಜಮೀನೊಳಗೆ ಅಕ್ರಮ ಪ್ರವೇಶ ಮಾಡಿ ನಾವು ಬೆಳೆದಂತಹ ಅವರೇ ಕಾಯಿಯನ್ನು ರೂಡಿಸಿಕೊಳ್ಳಲು ಪ್ರಯತ್ನ ಪಟ್ಟಿರುತ್ತಾರೆ. ಈ ವಿಷಯವನ್ನು ತಾನು ತನ್ನ ಮಕ್ಕಳಿಗೆ ತಿಳಿಸಿ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರು.