ದಿನಾಂಕ :11/10/2020 ರ ಅಪರಾಧ ಪ್ರಕರಣಗಳು

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ:11/10/2020 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ವೆಂಕಟರವಣಪ್ಪ ಆದ ನಾನು ಮದ್ಯಾಹ್ನ 14-00 ಗಂಟೆಯಲ್ಲಿ ದಿನ್ನಮಿಂದಹಳ್ಳಿ ಗ್ರಾಮದಲ್ಲಿ ಹಗಲು ಗ್ರಾಮ ಗಸ್ತಿನ ಗಸ್ತು ಉಸ್ತುವಾರಿ  ಕರ್ತವ್ಯದಲ್ಲಿದ್ದಾಗ ದಿನ್ನಮಿಂದಹಳ್ಳಿ ಗ್ರಾಮದ ವಾಸಿ ಶಂಕರರೆಡ್ಡಿ  ಡಿ.ಆರ್ ಬಿನ್ ಲೇಟ್ ಡಿ.ವಿ ರಾಮಚಂದ್ರರೆಡ್ಡಿ, ರವರು ಆತನ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ದಿನ್ನಮಿಂದಹಳ್ಳಿ ಗ್ರಾಮದಲ್ಲಿ ನನ್ನೊಂದಿಗೆ ಗಸ್ತಿನ ಕರ್ತವ್ಯದಲ್ಲಿದ್ದ ಸಿ ಪಿ .ಸಿ – 387 ಅನಿಲ್ ಕುಮಾರ್  ರವರನ್ನು ಹಾಗೂ ಪಂಚರನ್ನು ಕರೆದುಕೊಂಡು 14-15 ಗಂಟೆಗೆ ಅಂಗಡಿಯ ಬಳಿಗೆ ಹೋಗಿ ನೋಡಲಾಗಿ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ಶಂಕರರೆಡ್ಡಿ  ಡಿ. ಆರ್ ಬಿನ್ ಲೇಟ್ ಡಿ ವಿ ರಾಮಚಂದ್ರರೆಡ್ಡಿ, 42 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ; ದಿನ್ನಮಿಂದಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ:9902140907. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಮದ್ಯಾಹ್ನ 14-20  ಗಂಟೆಯಿಂದ 15-00 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1 ಲೀಟರ್ 350 ಎಂ.ಎಲ್ ನ 526 ರೂಗಳ ಬೆಲೆ ಬಾಳುವ ಹೈವಾರ್ಡ್ಸ್ ವಿ`ಸ್ಕಿ 90 ಎಂ.ಎಲ್ ನ 15 ಟೆಟ್ರಾ ಪ್ಯಾಕೇಟ್ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾರ್ಡ್ಸ್ ವಿಸ್ಕಿ 90 ಎಂ.ಎಲ್ ನ 5 ಖಾಲಿ ಟೆಟ್ರಾ ಪ್ಯಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ ಮದ್ಯಾಹ್ನ  15-30 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:99/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ.73/2020 ಕಲಂ: 379 ಐ.ಪಿ.ಸಿ:-

          ದಿನಾಂಕ:10/10/2020 ರಂದು ಸಂಜೆ 18:30 ಗಂಟೆಗೆ  ಪಿರ್ಯಾಧಿದಾರರಾದ  ಮಹೇಶ್ ಬಿನ್ ಲೇಟ್ ವೆಂಕಟರಾಯಪ್ಪ ರವರು ಠಾಣೆಗೆ ಹಾಜರಾಗಿ  ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು ಈ ಹಿಂದೆ ಚಿಂತಾಮಣಿ ತಾಲ್ಲೂಕು ತುಳುವನೂರು ಗ್ರಾಮದಿಂದ ಬಂದು ಬಾಗೇಪಲ್ಲಿ ತಾಲ್ಲೂಕು ಪೋಲನಾಯಕನಹಳ್ಳಿ ಗ್ರಾಮದಲ್ಲಿ ಡ್ರೈವರ್ ಕೆಲಸ  ಮತ್ತು ಪಿ.ಎಂ.ಎಸ್.ಆರ್ ಶಾಮಿಯಾನ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:18/01/2020 ರಂದು ಚಿಂತಾಮಣಿ ನಗರದ ವಿನಾಯಕ ಮೋಟಾರ್ಸ್ ನಲ್ಲಿ ಕೆಎ-67-ಇ-7788 ಪ್ಯಾಶನ್ ಪ್ರೋ  I 3 S ದ್ವಿ ಚಕ್ರವಾಹನವನ್ನು ಖರೀದಿ ಮಾಡಿ ನನ್ನ ಸ್ವಂತ ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುತ್ತೇನೆ. ದಿನಾಂಕ:18-03-2020 ರಂದು ಬೆಳಗ್ಗೆ ಸುಮಾರು 9-00 ಗಂಟೆಯ ಸಮಯದಲ್ಲಿ ಪೋಲನಾಯಕನಹಳ್ಳಿಯಲ್ಲಿರುವ ಪಿ.ಎಂ.ಎಸ್.ಆರ್ ಸೌಂಡ್ ಸಿಸ್ಟಮ್ ಅಂಗಡಿಯ ಪಕ್ಕದಲ್ಲಿ  ನನ್ನ ಬಾಬತ್ತು ಕೆಎ-67-ಇ-7788 ಪ್ಯಾಶನ್ ಪ್ರೋ  I 3 S  ದ್ವಿ ಚಕ್ರ ವಾಹನವನ್ನು ನಿಲ್ಲಿಸಿ  ಬೀಗ ಹಾಕಿಕೊಂಡು ಪಕ್ಕದ ಗ್ರಾಮವಾದ ಬೂಡಿದಗಡ್ಡಪಲ್ಲಿ ಗ್ರಾಮದಲ್ಲಿ ಯಾರದೋ ಮಧುವೆ ಕಾರ್ಯಕ್ರಮವಿದ್ದು ಸದರಿ ಕಾರ್ಯಕ್ರಮಕ್ಕೆ ಶಾಮಿಯಾನವನ್ನು ಹಾಕಲು ಹೋಗಿದ್ದು ನಂತರ ಇದೇ ದಿನ ಮಧ್ಯಾಹ್ನ12-00 ಗಂಟೆಗೆ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಅಂಗಡಿಯ ಬಳಿ ಬಂದು ತಿಮ್ಮಸಂದ್ರ ಗ್ರಾಮಕ್ಕೆ ಹೋಗಲೂ ದ್ವಿ ಚಕ್ರ ವಾಹನದ ಕಡೆ ನೋಡಲಾಗಿ ನನ್ನ ದ್ವಿ ಚಕ್ರ ವಾಹನ  ಕಾಣಲಿಲ್ಲ. ಸುತ್ತಮುತ್ತಲೆಲ್ಲಾ ಹುಡುಕಾಡಲಾಗಿ ಎಲ್ಲಿಯೂ ನನ್ನ  ದ್ವಿ ಚಕ್ರ ವಾಹನ ಪತ್ತೆಯಾಗಲಿಲ್ಲ ಯಾರೋ ಕಳ್ಳರು ನನ್ನ ಬಾಬತ್ತು ಕೆಎ-67-ಇ-7788 ಪ್ಯಾಶನ್ ಪ್ರೋ  I 3 S ನ್ನು ಬೀಗ ಮುರಿದು ಕಳ್ಳತನ ಮಾಡಿಕೊಂಡು  ಹೋಗಿರುತ್ತಾರೆ.  ಇದರೊಂದಿಗೆ ಈ ದ್ವಿಚಕ್ರ ವಾಹನಕ್ಕೆ ಸಂಬಂದಪಟ್ಟಂತೆ ನನ್ನ ಬಳಿ ಇರುವ ದಾಖಲಾತಿಗಳ ನಕಲುಗಳನ್ನು ಲಗತ್ತಿಸಿಕೊಂಡಿರುತ್ತೇನೆ. ಇದೂವರೆವಿಗೂ ನನ್ನ ಬಾಬತ್ತು ದ್ವಿ ಚಕ್ರ ವಾಹನವನ್ನು ಅಕ್ಕಪಕ್ಕದ ಗ್ರಾಮಗಳಲ್ಲಿ ಹಾಗೂ ನಮಗೆ ಪರಿಚಯಸ್ಥರ ಗ್ರಾಮಗಳಲ್ಲಿ ಹುಡುಕಾಡುತ್ತಿದ್ದ ಕಾರಣ ಈ ದಿನ  ದಿನಾಂಕ:10/10/2020 ರಂದು ಸಂಜೆ 18-00 ಗಂಟೆಗೆ  ಚೇಳೂರು ಪೊಲೀಸ್ ಠಾಣೆಗೆ ತಡವಾಗಿ ಹಾಜರಾಗಿ ಗಣಕಯಂತ್ರ ಮುದ್ರಿತ ದೂರನ್ನು ನೀಡುತ್ತಿದ್ದು  ದಯವಿಟ್ಟು ನನ್ನ  ಬಾಬತ್ತು ದ್ವಿ ಚಕ್ರ ವಾಹನವನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ, ಕಳುವಾಗಿರುವ ನನ್ನ ಕೆಎ-67-ಇ-7788 ಪ್ಯಾಶನ್ ಪ್ರೋ  I 3 S ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರನ್ನು ಪಡೆದು ಠಾಣಾ ಮೊಸಂ:73/2020 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.143/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿ:11.10.2020 ರಂದು ಬೆಳಿಗ್ಗೆ 10.05 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿ:11.10.2020 ರಂದು ಬೆಳಿಗ್ಗೆ 10.00 ಗಂಟೆ ಸಮಯದಲ್ಲಿ ಪಿ.ಎಸ್.ಐ ಸಾಹೇಬರು ಠಾಣೆಯಲ್ಲಿದ್ದಾಗ ಬಂದ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಗಂಗರೇಕಾಲು ಗ್ರಾಮದ ವಾಸಿ ನಾಗರಾಜು ಬಿನ್ ಬಸವರಾಜು 45 ವರ್ಷ ಲಿಂಗಾಯಿತರು ಚಿಲ್ಲರೆ ಅಂಗಡಿ ವ್ಯಾಪಾರರವರ ಚಿಲ್ಲರೆ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.138/2020 ಕಲಂ: 392 ಐ.ಪಿ.ಸಿ:-

          ದಿನಾಂಕ:10/10/2020 ರಂದು ಪಿರ್ಯಾದಿದಾರರಾದ ಶ್ರೀಮತಿ ವೈ.ಎಸ್ ಸುಕನ್ಯ ಕೋಂ ಲೇಟ್ ವೈ.ವಿ ಸುಬ್ಬರಾಜು, 70 ವರ್ಷ, ವೈಶ್ಯರು, ವಾಸ ಹಂಸ ಡಿಶ್ ರೋಡ್, ವೆಂಕಟೇಶ್ವರ ಬಡಾವಣೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಾನು ದಿನಾಂಕ:10/10/2020 ರಂದು ಮದ್ಯಾಹ್ನ ಸುಮಾರು 1-30 ಗಂಟೆ ಸಮಯದಲ್ಲಿ  ನಮ್ಮ ಮನೆಯಲ್ಲಿದ್ದ ದೇವರ ಪೂಜೆ ಮಾಡಿ ತೆಗೆದಿಟ್ಟ ಹೂವನ್ನು ನಮ್ಮ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ಪಕ್ಕದಲ್ಲಿ ಬಿಸಾಡುತ್ತಿದ್ದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ಬಂದು ನನ್ನ ಕತ್ತಿನಲ್ಲಿ ಹಾಕಿಕೊಂಡಿದ್ದ ಸುಮಾರು 40 ಗ್ರಾಂ ಬಂಗಾರದ ಚೈನನ್ನು ಕಿತ್ತುಕೊಂಡು ಹೊರಟು ಹೋಗಿರುತ್ತಾನೆ. ಆತನ ವಯಸ್ಸು ಸುಮಾರು 35-40 ವರ್ಷ ಆಗಿರುತ್ತೆ. ನನಗೆ ವಯಸ್ಸಾಗಿದ್ದ ಕಾರಣ ದ್ವಿಚಕ್ರ ವಾಹನದ ಸಂಖ್ಯೆ ಕಾಣಿಸಿರುವುದಿಲ್ಲ. ನನ್ನ ಕತ್ತಿನಲ್ಲಿದ್ದ ಬಂಗಾರದ ಚೈನ್ ಬೆಲೆ ಸುಮಾರು 80,000 ರೂಗಳಾಗಿರುತ್ತೆ. ಆದ್ದರಿಂದ ನನ್ನ ಕತ್ತಿನಲ್ಲಿದ್ದ ಬಂಗಾರದ ಚೈನನ್ನು ಕಿತ್ತುಕೊಂಡು ಹೋಗಿರುವ ಅಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.266/2020 ಕಲಂ: 3,25(1-B)(a) ARMS ACT, 1959:-

          ದಿನಾಂಕ:10/10/2020 ರಂದು ಬೆಳಿಗ್ಗೆ 4-30 ಗಂಟೆ ಸಮಯದಲ್ಲಿ  ಪಿ.ಎಸ್.ಐ ಶ್ರೀ  ಮೋಹನ್ ಎನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,    ದಿನಾಂಕ:09/10/2020 ರಂದು  ಗೌರೀಬಿದನೂರು ವೃತ್ತ ಸರಹದ್ದಿನಲ್ಲಿ ರಾತ್ರಿ ಗಸ್ತು ಕರ್ತವ್ಯವಿದ್ದು, ಅದರಂತೆ ನಾನು, ಅಪರಾಧ ಪತ್ತೆ ಕಾರ್ಯದ ಸಿಬ್ಬಂದಿಯವರಾದ ಹೆಚ್.ಸಿ.20 ಶ್ರೀನಿವಾಸರೆಡ್ಡಿ, ಹೆಚ್.ಸಿ.10 ಶ್ರೀರಾಮಪ್ಪ, ಪಿ.ಸಿ.455, ಅಶ್ವತ್ಥ ಡಿ.ಎನ್. ಪಿ.ಸಿ.518 ಆನಂದ, ಪಿ.ಸಿ.512 ರಾಜಶೇಖರ, ಜೀಪ್ ಚಾಲಕ ಗಂಗುಲಪ್ಪರವರೊಂದಿಗೆ, ಕೆ.ಎ.40.ಜಿ.281 ಸರ್ಕಾರಿ ಜೀಪಿನಲ್ಲಿ,  ದಿನಾಂಕ;09/10/2020 ರಂದು ರಾತ್ರಿ 10-00 ಗಂಟೆಗೆ ರಾತ್ರಿ ಗಸ್ತನ್ನು ಪ್ರಾರಂಬಿಸಿ,  ತೊಂಡೇಬಾವಿ, ಅಲ್ಲೀಪುರ, ನಾಚಕುಂಟೆ, ಸೋಮಶೆಟ್ಟಿಹಳ್ಳಿ, ಹೊಸೂರು,  ಗೆದರೆ,  ಕೆಂಕರೆ, ನಾರಸಿಂಹನಹಳ್ಳಿ, ಬೊಮ್ಮಸಂದ್ರ, ವೇದಲವೇಣಿ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು, ದಿನಾಂಕ: 10/10/2020 ರಂದು ಬೆಳಗಿನ ಜಾವ 4-00 ಗಂಟೆ ಸಮಯದಲ್ಲಿ  ವೇದಲವೇಣಿ ಬಿಟ್ಟು, ಗೌರೀಬಿದನೂರು ಕಡೆಗೆ ಬರಲು  ವೇದಲವೇಣಿ, ಮಿನಿವಿಧಾನಸೌಧ ನಡುವೆ ರಸ್ತೆಯಲ್ಲಿ  ಬರುತ್ತಿದ್ದಾಗ,  ಯಾರೋ ಒಬ್ಬ ಆಸಾಮಿಯು ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದು, ಈತನ ಕೈಯಲ್ಲಿ ಬಂದೂಕು ಇದ್ದು,  ನಾವು ಹತ್ತಿರ ಬರುತ್ತಿದ್ದಂತೆ ಪೊಲೀಸ್ ಜೀಪನ್ನು ಕಂಡು, ಹೊಲಗಳಲ್ಲಿ ಓಡಿಹೋಗಲು ಪ್ರಯತ್ನಿಸಿದಾಗ, ಪೊಲೀಸ್ ಸಿಬ್ಬಂದಿಯವರು ಸದರಿ ಆಸಾಮಿಯನ್ನು    ಹಿಂಬಾಲಿಸಿ ಸುತ್ತುವರೆದು ಹಿಡಿದುಕೊಂಡಿದ್ದು, ಸದರಿ ಆಸಾಮಿಯ ಹೆಸರು ವಿಳಾಸ  ಕೇಳಲಾಗಿ, ತನ್ನ ಹೆಸರು ಶಶಿಕುಮಾರ್  @ ಶಶಿ ಬಿನ್ ಗಂಗಾಧರಪ್ಪ, 27 ವರ್ಷ, ನಾಯಕ ಜನಾಂಗ, ಡ್ರೈವರ್ ಕೆಲಸ,  ವಾಸ ಜಿ.ಬೊಮ್ಮಸಂದ್ರ  ಗ್ರಾಮ, ಗೌರೀಬಿದನೂರು ತಾಲ್ಲೂಕು,  ಎಂದು ತಿಳಿಸಿದ್ದು,  ಈತನ ಬಳಿ  ಇದ್ದ  ಬಂದೂಕನ್ನು ಪರಿಶೀಲಿಸಲಾಗಿ, ಇದು ಎಸ್.ಬಿ.ಎಂ.ಎಲ್. ನಾಡ ಬಂದೂಕು   ಆಗಿರುತ್ತೆ. ಹಾಗು ಈತನ  ಬಳಿ  ಒಂದು ಸಿಲ್ವರ್ ತರಹದ ಚಿಕ್ಕ ಬಾಟಲ್ ಇದ್ದು, ಪರಿಶೀಲಿಸಿದಾಗ, ಅದರಲ್ಲಿ ಬಂದೂಕಿಗೆ ಕೂರುವ ಸಣ್ಣ ಸಣ್ಣ ಸೀಸದ ತರಹದ ತುಂಡುಗಳು ಇರುತ್ತವೆ. ಅವೇಳೆಯಲ್ಲಿ ಬಂದೂಕು ಹಿಡಿದು ಹೋಗಲು ಕಾರಣ ಕೇಳಿದಾಗ,ತಾನು ಜಮೀನುಗಳಿಗೆ ಕಾವಲಿಗೆ ಹೋಗುತ್ತಿದ್ದುದಾಗಿ ತಿಳಿಸಿರುತ್ತಾನೆ. ಹಾಗು  ಬಂದೂಕನ್ನು ಹಾಗು ಬಂದೂಕಿಗೆ ಕೂರುವ ಸೀಸದ ತರಹದ ಗುಂಡುಗಳನ್ನು ಇಟ್ಟುಕೊಳ್ಳಲು   ಪರವಾನಿಗೆ ಇದೆಯೇ ಎಂದು ಕೇಳಲಾಗಿ, ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ.  ಸದರಿ ಆಸಾಮಿಯನ್ನು ಬಂದೂಕು ಮತ್ತು ಸೀಸದ ತರಹದ ತುಂಡುಗಳಿರುವ ಬಾಟಲ್ ನೊಂದಿಗೆ  ಮುಂದಿನ ಕ್ರಮಕ್ಕಾಗಿ ವಶಕ್ಕೆ  ತೆಗೆದು ಕೊಂಡು ಠಾಣೆಗೆ ಬೆಳಗಿನ ಜಾವ  4-30 ಗಂಟೆಗೆ ವಾಪಸ್ಸು ಬಂದು  ಕಲಂ 3,25(1B)(a) Arms Act.1959 ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡು  ಮುಂದಿನ ಕ್ರಮವನ್ನು ಜರುಗಿಸುವಂತೆ ಸೂಚಿದ ಮೇರೆಗೆ ಪ್ರಕರಣವನ್ನು ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.267/2020 ಕಲಂ: 279,337 ಐ.ಪಿ.ಸಿ:-

          ದಿನಾಂಕ:10/10/2020  ರಂದು ಸಂಜೆ 19-00 ಗಂಟೆಗೆ ಪಿರ್ಯಾದಿದಾರರಾದ ನಾಗಮ್ಮ ಕೋಂ ಲೇಟ್ ನಂಜಪ್ಪ, 49 ವರ್ಷ, ನಾಯಕರು, ಗೃಹಿಣಿ, ವಾಸ ಕುಡಮಲಕುಂಟೆ ಗ್ರಾಮ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:09/10/2020 ರಂದು ಸಂಜೆ  6-00 ಗಂಟೆ ಸಮಯದಲ್ಲಿ ಕುಡಮಲಕುಂಟೆ ಗೇಟ್ ಬಳಿ ಪಿರ್ಯಾದಿದಾರರ ಮಗ ರಾಮಕೃಷ್ಣ ಬಿನ್ ಲೇಟ್ ನಂಜಪ್ಪ, 30 ವರ್ಷ,ಕುಡಮಲಕುಂಟೆ ಗ್ರಾಮ ರವರು ಮನೆ ರಿಪೇರಿ ಮಾಡಿಸಲು ಹೋದಾಗ ಹಿಂದೂಪುರ ಕಡೆಯಿಂದ ಯಾವುದೋ ಒಂದು ಆಟೋ ಅತಿ ವೇಗವಾಗಿ ಬಂದು ಪಿರ್ಯಾದಿದಾರರ ಮಗನಿಗೆ ಗುದ್ದಿ ತಲೆಗೆ ಮತ್ತು ಎಡಕೈಗೆ ಮೊಣಕೈಗೆ ಹಾಗೂ ಬಲ ಕಾಲು ಮೊಣಕಾಲಿಗೆ  ಗಾಯಗಳಾಗಿದ್ದು, ಸದರಿ ಆಟೋ ನಾಗರೆಡ್ಡಿ ಬಡಾವಣೆ ಆಟೋ ಎಂಬುದಾಗಿ ತಿಳಿದಿದ್ದು ಅದರ ಸಂಖ್ಯೆ KA-43 , 7782  ಆಟೋ ರಿಕ್ಷಾ ಆಗಿರುತ್ತದೆ. ಅಪಘಾತ ಮಾಡಿದ ಆಟೋನವರೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಪಿರ್ಯಾದಿದಾರರ ಮಗನನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆಂದು ಸಂಜೀವರಾಯಪ್ಪ, ಮತ್ತು ಚಿಕ್ಕಪ್ಪನವರಾದ ಕೃಷ್ಣಪ್ಪ ಎಂಬುವರು ಪಿರ್ಯಾದಿದಾರರಿಗೆ ತಿಳಿಸಿದ್ದು, ಅಪಘಾತವಾದ ಪಿರ್ಯಾದಿದಾರರ ಮಗನ ಹೆಂಡತಿ ಹೇಮಾವತಿ ತಂಗಿ, ಪಾರ್ವತಮ್ಮ ರವರಿಗೆ ಗೌರೀಬಿದನೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು. ಪಿರ್ಯಾದಿದಾರರ ಮಗನಿಗೆ ತೀವ್ರತರವಾದ ಗಾಯಗಳಾಗಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಪಿರ್ಯಾದಿದಾರರ ಸೊಸೆ ಜೊತೆಯಲ್ಲಿ ಹೋಗಿರುತ್ತಾರೆ. ಪಿರ್ಯಾದಿದಾರರ ಮಗನಿಗೆ ಅತಿವೇಗವಾಗಿ ಬಂದು ಗಾಯಪಡಿಸಿ ಅಪಘಾತವನ್ನುಂಟು ಮಾಡಿದ ಆಟೋ ಚಾಲಕನ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.163/2020 ಕಲಂ: 15(A),32(3) ಕೆ.ಪಿ ಆಕ್ಟ್:-

          ಪ್ರಸನ್ನಕುಮಾರ್  PSI ಗೌರಿಬಿದನೂರು ನಗರ ಪೊಲೀಸ್ ಠಾಣೆ ಆದ ನಾನು ದಿನಾಂಕ: 10-10-2020 ರಂದು ಮದ್ಯಾಹ್ನ 12:00 ಗಂಟೆಯಲ್ಲಿ ನಗರದ ಎಂ.ಜಿ ವೃತ್ತದಲ್ಲಿ ಇರುವಾಗ ನನಗೆ ನಗರದ ಮಧುಗಿರಿ ರಸ್ತೆಯ ರೈಲ್ವೆ ಬ್ರಿಡ್ಜ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಹೆಚ್.ಸಿ 214 ಲೋಕೇಶ್ ಹಾಗೂ ಪಿ.ಸಿ 282 ರಮೇಶ್ ರವರನ್ನು ಹಾಗೂ  ಪಂಚಾಯ್ತಿದಾರರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಜೀಪ್ ನಿಲ್ಲಿಸಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿದ್ದು ಕಂಡುಬಂದಿದ್ದು ಪಂಚರ ಸಮಕ್ಷಮ ಅವನನ್ನು ಸುತ್ತುವರೆದು ಓಡಿಹೋಗದಂತೆ ತಿಳಿಸಿದಾಗ ಮದ್ಯಪಾನ ಮಾಡುತ್ತಿದ್ದವರು ಅಲ್ಲಿಂದ ಓಡಿಹೋಗಿದ್ದು ಸ್ಥಳಾವಕಾಶ ಮಾಡಿಕೊಟ್ಟಿರುವ ಆಸಾಮಿಯನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ಆತನು ತನ್ನ ಹೆಸರು ನಾಗರಾಜು ಬಿನ್ ನಾರಾಯಣಪ್ಪ, 48 ವರ್ಷ, ಕೋನಾಪುರ, ಈಡಿಗರು, ಕಸಬ ಹೋಬಳಿ, ಗೌರಿಬಿದನೂರು ತಾಲ್ಲೂಕು ಫೋ: 9845916728 ಎಂದು ತಿಳಿಸಿದ್ದು ಅವನಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಡಲು ಪರವಾನಗೆ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರವಾನಗಿ ಇಲ್ಲವೆಂದು ತಿಳಿಸಿದನು ನಂತರ ಸ್ಥಳದಲ್ಲಿ Heywards Cheers Whisky 90 ML ನ 14 ಟೆಟ್ರಾಪಾಕೆಟ್ ಗಳು, 3 ಖಾಲಿ Heywards Cheers Tetra Pocket ಗಳು ಹಾಗೂ 3 ಪೇಪರ್ ಲೋಟಗಳು ಇದ್ದು ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 35.13 ರೂಪಾಯಿಗಳು ಆಗಿದ್ದು ಅವುಗಳ ಒಟ್ಟು ಬೆಲೆ 491.82 ರೂಪಾಯಿಗಳಾಗಿರುತ್ತೆ.  ಎಲ್ಲವನ್ನು ಪಂಚನಾಮೆಯ ಮೂಲಕ ವಶಕ್ಕೆ ಪಡೆದು ಆರೋಪಿ ಹಾಗೂ ಮಾಲಿನೊಂದಿಗೆ ಮದ್ಯಾಹ್ನ 1:30 ಗಂಟೆಯಲ್ಲಿ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಕ್ಕಾಗಿ ಠಾಣಾದಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.164/2020 ಕಲಂ: 279,304(A) ಐ.ಪಿ.ಸಿ:-

          ದಿನಾಂಕ;11/10/2020 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ  ದಿನಾಂಕ;10/10/2020 ರಂದು ರಾತ್ರಿ 10-15 ಗಂಟೆಯಲ್ಲಿ ತಾನು ತಮ್ಮ ಮನೆಯಲ್ಲಿ ಇದ್ದಾಗ ತನಗೆ ತಮ್ಮ ಚಿಕ್ಕಪ್ಪರವರಾದ ಶಿವ್ಪಪ್ಪ  ರವರು ಪೋನ್ ಮಾಡಿ ನಿಮ್ಮತಾಯಿಗೆ ವೆಟರ್ ನರಿ ಆ್ಪತ್ರೆಯ ಮುಂಭಾಗ ಅಪಘಾತವಾಗಿದ್ದು ಅವರನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ತಿಳಿಸಿದರು. ನಂತರ ತಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರಗೆ ಹೋಗಿ ನೋಡಿದಾಗ ತನ್ನ ತಾಯಿ ಅಪಘಾತದಿಂದ ಮೃತ ಪಟ್ಟಿರುತ್ತಾರೆ. ನಂತರ ವಿಚಾರ ತಿಳಿಯಲಾಗಿ ದಿನಾಂಕ 10/10/2020 ರಂದು ರಾತ್ರಿ 9-30 ಗಂಟೆಯಲ್ಲಿ ತನ್ನ ತಾಯಿ ಮುದ್ದಮ್ಮ ರವರು ತಮ್ಮ ಮನೆಯಿಂದ ಬೆಂಗಳೂರು ವೃತ್ತದಲ್ಲಿರುವ ಅಂಗಡಿಯಲ್ಲಿ ಏನೋ ತರಲು ಬೆಂಗಳೂರು –ಗೌರಿಬಿದನೂರು ರಸ್ತೆಯಲ್ಲಿ ಸರ್ಕಾರಿ ಪಶು ಆಸ್ಪತ್ರೆಯ ಮುಂಬಾಗ ನಡೆದುಕೊಂಡು ಹೋಗುತ್ತಿದ್ದಾಗ KA-40-EB 0059 ಹೋಂಡಾ ಶೈನ್ ದ್ವಿಚಕ್ರ ವಾಹನದ ಚಾಲಕ ತನ್ನ ದ್ವಿಚಕ್ರ ವಾಹನವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು  ಬಂದು ತನ್ನ ತಾಯಿಗೆ ಅಪಘಾತಪಡಿಸಿದ ಪರಿಣಾಮ ತನ್ನ ತಾಯಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಆದ್ದರಿಂದ ಅತಿವೇಗ ಮತ್ತು ಅಜಾರೂಕತೆಯಿಂದ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಬಂದು ತನ್ನ ತಾಯಿ ಮುದ್ದಮ್ಮ ರವರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣವಾದ  KA-40-EB 0059 ಹೋಂಡಾ ಶೈನ್  ದ್ವಿಚಕ್ರ ವಾಹನದ ಚಾಲಕ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ .

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.172/2020 ಕಲಂ: 379 ಐ.ಪಿ.ಸಿ:-

          ದಿನಾಂಕ 10/10/2020 ರಂದು ಸಂಜೆ 4-15 ಗಂಟೆಗೆ ಪಿರ್ಯಾಧಿ ಶರತ್ ಬಿನ್ ನಾರಾಯಣಸ್ವಾಮಿ, ಪೊಲೀಸ್ ಕ್ವಾಟ್ರಸ್, ಬಾಗೇಪಲ್ಲಿ ಟೌನ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಪೆರೆಸಂದ್ರ ಕ್ರಾಸ್ ನಲ್ಲಿ ತಮ್ಮ ಬಾಬತ್ತು ಪ್ರಿಂಟಿಂಗ್ ಪ್ರೆಸ್ ಅಂಗಡಿಯ  ಬಾಗಿಲನ್ನು  ದಿನಾಂಕ 07/10/2020 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ಹಾಕಿಕೊಂಡು ಅಂಗಡಿಯ ಮುಂದೆ ತನ್ನ ಬಾಬತ್ತು ಸುಮಾರು 38000/- ರೂ ಬೆಲೆ ಬಾಳುವ ಕೆಎ05-ಜೆಎಲ್-3769 ರ ಡಿಯೋ ಕಂಪನಿಯ ದ್ವಿಚಕ್ರವಾಹನವನ್ನು ನಿಲ್ಲಿಸಿ ಕೆಲಸದ ನಿಮಿತ್ತೆ ಬೆಂಗಳೂರುಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ರಾತ್ರಿ ಸುಮಾರು 9-00 ಸಮಯದಲ್ಲಿ ಪೆರೆಸಂದ್ರ ಕ್ರಾಸ್ ಗೆ ಬಂದು ತಮ್ಮ ಅಂಗಡಿಬಳಿ ಬಂದು ನೋಡಲಾಗಿ ತಾನು ನಿಲ್ಲಿಸಿದ್ದ ಜಾಗದಲ್ಲಿ ದ್ವಿಚಕ್ರವಾಹನ ಇರಲಿಲ್ಲ.       ಸದರಿ ದ್ವಿಚಕ್ರವಾಹನವನ್ನು ದಿನಾಂಕ 07/10/2020 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಿಂದ ದಿನಾಂಕ 07/10/2020 ರಂದು ರಾತ್ರಿ ಸುಮಾರು 9-00 ಗಂಟೆಯ ಸಮಯದ ಮಧ್ಯ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ದಿನದ ವರೆಗೆ ಹುಡುಕಾಡಿ ಪತ್ತೆಯಾಗದೇ ಇದ್ದುದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು, ತನ್ನ ಬಾಬತ್ತು ಕೆಎ05-ಜೆಎಲ್-3769 ರ ಡಿಯೋ ಕಂಪನಿಯ ದ್ವಿಚಕ್ರವಾಹನವನ್ನು ಕಳ್ಳತನ ಮಾಡಿಕೊಂಡು ಹೋದವರನ್ನು ಪತ್ತೆ ಮಾಡಿ ಅವರ ಮೇಲೆ ಕಾನೂನಿನ ರೀತ್ಯಾ ಕ್ರಮ ಕೈಗೊಂಡು ತನ್ನ ಬಾಬತ್ತು ಕೆಎ05-ಜೆಎಲ್-3769 ರ ಡಿಯೋ ಕಂಪನಿಯ ದ್ವಿಚಕ್ರವಾಹನವನ್ನು ಪತ್ತೆ ಮಾಡಿ ಕೊಡ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.114/2020 ಕಲಂ: 324,504 ಐ.ಪಿ.ಸಿ:-

          ದಿನಾಂಕ 11-10-2020 ರಂದು ಬೆಳಗ್ಗೆ 10.00 ಗಂಟೆಗೆ ಹೆಚ್.ಸಿ -110 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಎಸ್.ಎನ್ ಶ್ರೀನಾಥ ಬಿನ್ ನಾರಾಯಣಸ್ವಾಮಿ, 32 ವರ್ಷ, ಆದಿ ಕರ್ನಾಟಕ, ಜನಾಂಗ, ಜಿರಾಯ್ತಿ, ವಾಸ ಶೆಟ್ಟಿನಾಯಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ, ದಿನಾಂಕ 10/10/2020 ರಂದು ಮಧ್ಯಾಹ್ನ ಸುಮಾರು 01.00 ಗಂಟೆ ಸಮಯದಲ್ಲಿ ತಾನು ಮನೆ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಮನೆಯ ಬಳಿ ತನ್ನ ತಂಗಿ ಜೋರಾಗಿ ಕೂಗಿದ ಸದ್ದು ಕೇಳಿ ಮನೆ ಬಳಿ ಬಂದು ನೋಡಲಾಗಿ ತನ್ನ ತಂಗಿಯನ್ನು ತನ್ನ ಬಾವಮೈದನಾದ ಸುಧಾಕರ ರವರು ಕುಡಿದು ಬಂದು ತನ್ನ ತಂಗಿಯನ್ನು ಹೊಡೆಯುತ್ತಿದ್ದು ಏಕೆ ತನ್ನ ತಂಗಿಯನ್ನು ಹೊಡೆಯುತ್ತಿರುವುದು ಎಂದು ಸುಧಾಕರ ರವರಿಗೆ ಕೇಳಿದ್ದಕ್ಕೆ ನನ್ನ ಹೆಂಡತಿಯನ್ನು ನಾನು ಹೊಡೆಯುತ್ತೀನಿ ನೀನು ಯಾರು ಕೇಳುವುದಕ್ಕೆ  ನನ್ನ ಮಗನೇ ಎಂದು ಬೈದು ಪಕ್ಕದಲ್ಲಿದ್ದ ದೊಣ್ಣೆಯಿಂದ ತನ್ನ ಎಡ ಭಾಗದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು, ಆಗ ತಾನು ತಾನು ಕೆಲಕ್ಕೆ ಬಿದ್ದು ಕೂಗಿಕೊಂಡಾಗ ತನ್ನ ಅಕ್ಕ ರವರು ಬಂದು ಉಪಚರಿಸಿ ಅಂಬ್ಯೂಲೇನ್ಸ್ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಮೇಲ್ಕಂಡ ಸುಧಾಕರ ರವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆಯ ಸಾರಾಂಶವಾಗಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.115/2020 ಕಲಂ: 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ 11-10-2020 ರಂದು ಬೆಳಗ್ಗೆ 10.30 ಗಂಟೆಗೆ ಹೆಚ್.ಸಿ -110 ರವರು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಸುಧಾಕರ ಬಿನ್ ಶ್ರೀನಿವಾಸ , 30 ವರ್ಷ, ಆದಿ ಕರ್ನಾಟಕ, ಜನಾಂಗ, ಚಾಲಕ ವೃತ್ತಿ, ವಾಸ ಶೆಟ್ಟಿನಾಯಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ, ತಾನು ತಮ್ಮ ಗ್ರಾಮದ ಶ್ರೀನಾಥ ರವರ ತಂಗಿಯನ್ನು ಮದುವೆಯಾಗಿರುತ್ತೇನೆ. ಈಗೀರುವಾಗ ತಾನು 15 ದಿನಗಳು ಡ್ರೈವರ್ ಕೆಲಸಕ್ಕೆ ಹೋಗಿ ಈ ದಿನ ದಿನಾಂಕ 10-10-2020 ರಂದು ಮದ್ಯಾಹ್ನ 01.00 ಗಂಟೆಗೆ ತನ್ನ ಮಕ್ಕಳನ್ನು ಮಾತನಾಡಿಸಲು ಗ್ರಾಮಕ್ಕೆ ಬಂದಾಗ ತನ್ನ ಹೆಂಡತಿ ತನ್ನ ಮಕ್ಕಳನ್ನು ಮಾತನಾಡಿಸಲು ಬೀಡದಿದ್ದಾಗ  ಈ ಬಗ್ಗೆ ಕೇಳಿದ್ದಕ್ಕೆ ನಿನ್ನ ತಾಯಿಯ ಹತ್ತಿರ ಮಾತನಾಡಿಕೋ ಹೋಗು ಎಂದು ಬೈಯುತ್ತಿದ್ದಾಗ ತಾನು ಏಕೆ ಈಗೆ ಮಾತನಾಡುತ್ತಿದ್ದೀಯಾ ಎಂದು ಬೈಯುತ್ತಿದ್ದಾಗ ತನ್ನ ಹೆಂಡತಿ ಅಣ್ಣನಾದ ಶ್ರೀನಾಥ ರವರು ಬಂದು ಏಕಾಏಕಿ ಏನೋ ನನ್ನ ಮಗನೇ ನನ್ನ ತಂಗಿಯನ್ನ ಬೈಯುತ್ತಿರುವುದು ಎಂದು ತನ್ನ ಕೈಯಲ್ಲಿದ್ದ ರಾಡಿನಿಂದ ತನ್ನ ಬಲ ಭುಜಕ್ಕೆ ಹೊಡೆದು ಮೂಗೇಟು ಉಂಟುಮಾಡಿ ನಂತರ ತನ್ನ ಕತ್ತಿಗೆ ಚುಚ್ಚಲು ಬಂದಾಗ ತಾನು ತಪ್ಪಿಸಿಕೊಂಡಾಗ ತರಚಿದ ಗಾಯವಾಗಿರುತ್ತೆ. ಶ್ರೀನಾಥನ ತಂದೆ ನಾರಾಯಣಸ್ವಾಮಿ ರವರು ಬಂದು ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ಮೂಗೇಟು ಉಂಟು ಮಾಡಿರುತ್ತಾನೆ. ನಂತರ ತನ್ನ ತಾಯಿಯೊಂದಿಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರು ಹೇಳಿಕೆ ಸಾರಾಂಶವಾಗಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.71/2020 ಕಲಂ: 323,324 ರೆ/ವಿ 34 ಐ.ಪಿ.ಸಿ:-

          ದಿನಾಂಕ:10/10/2020 ರಂದು ಸಂಜೆ 05-15 ಗಂಟೆಗೆ ಪಿರ್ಯಾದುದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ನನ್ನ ಗಂಡನ ಬಗ್ಗೆ ದಿನಾಂಕ:08/10/2020 ರಂದು ಪಿರ್ಯಾದಿ ಕೊಟ್ಟು ನನ್ನ ಗಂಡನನ್ನು ಠಾಣೆಗೆ ಕರೆಯಿಸಿ ಬುದ್ದಿವಾದ ಹೇಳಿ ನನ್ನ ಮೇಲೆ ಗಲಾಟೆ ಮಾಡದೇ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಒಪ್ಪಿಕೊಂಡು ಹೋಗಿ ನಿನ್ನೆ ದಿನಾಂಕ:09/10/2020 ರಮದು ರಾತ್ರಿ ಸುಮಾರು 07-30 ರ ಸಮಯದಲ್ಲಿ ನನ್ನ ಗಂಡ ಕೋಳ್ಳ ರಾಮಾಂಜಿ ಮನೆಯ ಮುಂದೆ ಬಂದು ನನ್ನನ್ನು ನೀನು ಬೆಳಗ್ಗೆ ಯಿಂದ ಯಾರ ಹತ್ತಿರ ಹೋಗಿದ್ದೆ ಅಂತ ಬಂದವನೆ ನನ್ನ ಮೇಲೆ ಬಿದ್ದು ನನ್ನ ಜುಟ್ಟು ಹಿಡಿದುಕೊಂಡು ಸಿಕ್ಕಾಪಟ್ಟೆ ಹೊಡೆಯುತ್ತಿದ್ದರೆ ನನ್ನ ಮಗ ಪವನ್ ಬಂದು ಯಾಕಪ್ಪಾ ಅಮ್ಮನನ್ನು ಹೊಡೆಯುತ್ತಿದ್ದೀಯಾ ಅಂತ ಕೇಳಿ ನಿನಗೆ ಯಾರು ಹೇಳಿದ್ದು ಅಂತ ಕೇಳಿದರೆ ನನ್ನ ಅಕ್ಕ ಭಾರತಮ್ಮ ಹೇಳಿದ್ದು ಅಂತಿದ್ದ ಅಷ್ಟರಲ್ಲಿ ರಾಮು ಬಿನ್ ಲೇಟ್ ನರಸಿಂಹಯ್ಯ ಬಾರತಮ್ಮ ಲೇಟ್ ಸುಧಾಕೆ ರವರು ಬಂದು ಇವರ ಜೊತೆಗೆ ನನ್ನ ಗಂಡ ಸೇರಿಕೊಂಡು ಮೂವರು ನನ್ನ ಮೇಲೆ ಬಿದ್ದು ಸಿಕ್ಕಾಪಟ್ಟೆ ಹೊಡೆದು ಬಾರತಮ್ಮಳು ಹಿಟ್ಟು ಕಲಕುವ ಕಟ್ಟಿಗೆಯಿಂದ ಸಿಕ್ಕಾಪಟ್ಟೆ ಹೊಡೆದು ರಾಮು ಇಬ್ಬರು ರಕ್ತ ಬರುವ ಹಾಗೆ ಹೊಡೆದರು ನನ್ನ ಎಡಗೈ ಮುಂಗೈ ನಲ್ಲಿ ಗಾಯವಾಗಿ ರಕ್ತ ಬಂದಿರುತ್ತೆ, ಹಾಗೇ ಬೆನ್ನು ಸೊಂಟದ ಕಡೆ ಮೂಗೇಟುಗಳು ಬಿದ್ದಿರುತ್ತೆ, ಏಟು ಬಿದ್ದ ಜಾಗದಲ್ಲಿ ರಕ್ತ ಹೆಪ್ಪು ಕಟ್ಟಿರುತ್ತೆ, ಆ ಸಮಯದಲ್ಲಿ  ನನಗೆ ಲೋ ಬಿ.ಪಿ ಯಾಗಿ ಕೆಳಗೆ ಬಿದ್ದುಬಿಟ್ಟೆ ಆಗ ಮೂವರು ನನ್ನನ್ನು ಬಿಟ್ಟು ಹೊರಟು ಹೋದರು ಆಗ ನನ್ನ ಮಗ ಪವನ್  ಕಾರು ತಂದು ಅದರಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗ ಹೋದರು ಅಲ್ಲಿ ಆಗಲ್ಲಾ ಅಂದರು ಅಲ್ಲಿಂದ ಚಿಕ್ಕಬಳ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನೋಡಿ ಅಡ್ಮಿಟ್ ಮಾಡಿಕೊಂಡು ರಾತ್ರಿಯೆಲ್ಲಾ ಅಲ್ಲಿದ್ದು ಬೆಳಗ್ಗೆ ಆಸದ್ಪತ್ರೆಯಿಮದ ಬಂದೆವು ನಾವು ಗಲಾಟೆಯಾದಾಗ ರಾಮು ಎಂಬುವವರು ಭಾರತಮ್ಮ ನನ್ನ ಗಂಡ ಮೂವರು ಮನೆಗೆ ಬೀಗ ಹಾಕಿ ನಮ್ಮನ್ನು ಹೊರಗೆ ಬಿಟ್ಟಿದ್ದಾರೆ ತಾವಂದಿರು ದಯಪಾಲಿಸಿ ಮೇಲ್ಕಂಡವರನ್ನು ಕರೆಸಿ ವಿಚಾರಣೆ ಮಾಡಿಸಿ ಕಾನೂನು ಕ್ರಮ ಜರುಗಿಸಲು ಕೋರಿ.