ದಿನಾಂಕ :11/09/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.221/2020 ಕಲಂ:416,417,418,419,420,423,463,464,465,468,470, ರೆ/ವಿ 34  ಐ.ಪಿ.ಸಿ :-

          ದಿ: 10-09-2020 ರಂದು 14:00 ಗಂಟೆ ಸಮಯದಲ್ಲಿ ಪಿ.ಸಿ 235 ರವರು ನೀಡಿದ ಪಿ.ಸಿ.ಆರ್ ದೂರನ್ನು ಠಾಣೆಯಲ್ಲಿ ಸ್ವೀಕರಿಸಿದ್ದರ  ಸಾರಾಂಶ – ಪಿರ್ಯಾಧಿಯಾದ ಶ್ರೀ ಯಾಮನ್ನ ರವರ ತಂದೆ ಇಂಟೆನಕ ಗಂಗಪ್ಪ @ ಗಂಗಪ್ಪ ರವರಿಗೆ ಗೌರಮ್ಮ ರವರು ಮೊದಲನೇ ಪತ್ನಿಯಾಗಿರುತ್ತಾಳೆ. ಆರೋಪಿ 1 ಮತ್ತು 2 ರವರು ಇಂಟೆನಕ ಗಂಗಪ್ಪ @ ಗಂಗಪ್ಪನ ಎರಡನೇ ಹೆಂಡತಿ ಅಕ್ಕುಲಮ್ಮ ರವರ ಮಕ್ಕಳಾಗಿರುತ್ತಾರೆ. ಪಿರ್ಯಾಧಿಯು ಬಾಗೇಪಲ್ಲಿ ತಾಲ್ಲೂಕು, ಗೂಳೂರು ಹೋಬಳಿಯ ಚನ್ನರಾಯನಪಲ್ಲಿ ಗ್ರಾಮದ ಸರ್ವೆ ನಂ:.26/ಪಿ17 ರಲ್ಲಿನ 3-00 ಎಕರೆ ಜಮೀನನ್ನು ರೆವಿನ್ಯೂ ಅಥಾರಿಟಿ/ಲ್ಯಾಂಡ್ ಗ್ರಾಂಟ್ ಕಮಿಟಿ ಗೆ ಫಾರಂ ನಂ:50 ರಲ್ಲಿ ಅರ್ಜಿಯನ್ನು ಸಲ್ಲಿಸಿಕೊಂಡು ಸದರಿಯವರಿಂದ ದಾಖಲೆ ಸಂಖ್ಯೆ:L.N.D.R.U.O[9]/41-3-10/1991-92, D:19-01-1998 ರಲ್ಲಿ ಮಂಜೂರು ಮಾಡಿಸಿಕೊಂಡಿದ್ದು, ರೆವಿನ್ಯೂ ಅಥಾರಿಟಿಯಿಂದ ತನ್ನ ಹೆಸರಿಗೆ ನಂ:26/2001-02 ರಂತೆ ಮ್ಯುಟೇಷನ್ ಮಾಡಿಸಿಕೊಂಡು, ದಾಖಲೆ ಸಂಖ್ಯೆ:L.N.D.R.U.O[9]/41-3-10/1991-92 ಗೆ ದರಖಾಸ್ತುವಿನಂತೆ ಕಿಮ್ಮತ್ತು ವಸೂಲಿ ಮಾಡಿಸಿಕೊಂಡಿದ್ದು, ರೆವಿನ್ಯೂ ಅಥಾರಿಟಿ ರವರು ಅಫಿಷಿಯಲ್ ಮೆಮೋರಾಂಡಮ್ ಅನ್ನು ಸಹ ಪಿರ್ಯಾಧಿಯ ಪರವಾಗಿ ಮಂಜೂರು ಮಾಡಿರುತ್ತಾರೆ.  ತದನಂತರ ಸದರಿ ಸ್ವತ್ತಗೆ ಟ್ಯಾಕ್ಸ್ ಅನ್ನು ಕಟ್ಟುಕೊಂಡು ಪಿರ್ಯಾಧಿದಾರರ ಅನುಭೋಗದಲ್ಲಿರುತ್ತಾರೆ.  ಈ ಬಗ್ಗೆ ಪಿರ್ಯಾಧಿಯು ಸಾಗುವಲಿ ಚೀಟಿ, ಅಫಿಷಿಯಲ್ ಮೆಮೋರಾಂಡಮ್ ಮತ್ತು ಮ್ಯುಟೇಷನ್ ಅನ್ನು ಸಹ ಘನ ನ್ಯಾಯಾಲಯದಲ್ಲಿ ಸಲ್ಲಿಸಿರುತ್ತಾರೆ. ಅಕ್ಕುಲಮ್ಮ ರವರ ಮಕ್ಕಳಾದ ಆರೋಪಿ 1 ಮತ್ತು 2 ರವರಿಗೆ ಮೇಲ್ಕಂಡ ಸ್ವತ್ತಿನಲ್ಲಿ ಯಾವುದೇ ಹಕ್ಕಿಲ್ಲದಿದ್ದರೂ, ಪಿರ್ಯಾಧಿ ಮತ್ತು ಪಿರ್ಯಾಧಿಯ ಹೆಂಡತಿ ಅಕ್ಕಮ್ಮ, ಮಕ್ಕಳಾದ ಸುಮಲತಾ ಮತ್ತು ವೈ.ನರಸಿಂಹಮೂರ್ತಿ ರವರ ಸಹಿಗಳನ್ನು ಹಾಕಿ, ನಕಲಿ ದಾಖಲೆಗಳನ್ನು  ‘ Zubane Vibaga Pathra ‘, D:21-02-2012 ರಂತೆ ಸೃಷ್ಟಿಸಿಕೊಂಡಿರುತ್ತಾರೆ. ಇವರಿಗೆ ಈ ರೀತಿ ಡೀಡ್ ಮಾಡಿಕೊಳ್ಳಲು ಯಾವುದೇ ಹಕ್ಕಿರುವುದಿಲ್ಲ. ಆರೋಪಿ-3 ರವರು ಮೇಲ್ಕಂಡ ದಾಖಲೆಗೆ ಸಾಕ್ಷಿದಾರರಾಗಿದ್ದು, ಆರೋಪಿ-04 ರವರು ಡಾಂಕ್ಯುಮೆಂಟ್ ಅನ್ನು ಡ್ರಾಪ್ಟ್ ಮಾಡಿರುತ್ತಾರೆ.  ಮೇಲ್ಕಂಡ ಆರೋಪಿತರು ಸಮಾನ ಉದ್ದೇಶದಿಂದ ಸದರಿ ಸ್ವತ್ತಿನಲ್ಲಿ ಯಾವುದೇ ಸಂಬಂಧವಿಲ್ಲದಿದ್ದರೂ ಪಿರ್ಯಾಧಿಗೆ ಮೋಸ ಮಾಡಲು ಮತ್ತು ಅವರ ಸ್ವತ್ತನ್ನು ಕಭಳಿಸಲು ಈ ರೀತಿ ಮಾಡಿರುತ್ತಾರೆ. ಪಿರ್ಯಾಧಿ ಮೇಲ್ಕಂಡ ಸ್ವತ್ತನ್ನು ಗೂಳೂರು ಎಸ್.ಬಿ.ಎಮ್ ಬ್ಯಾಂಕ್ ನಲ್ಲಿ ಮಾರ್ಟಿಗೇಜ್ ಮಾಡಿ ಸಾಲವನ್ನು ಸಹ ತೆಗೆದುಕೊಂಡಿರುತ್ತಾರೆ. ಅಲ್ಲದೆ ಗಂಗಾಕಲ್ಯಾಣ ಪ್ಲಾನ್ ನಲ್ಲಿ ಬೋರ್ ವೆಲ್ ಕೊರೆಯಿಸಲು ಅರ್ಜಿಯನ್ನು ಸಹ ಸಲ್ಲಿಸಿಕೊಂಡಿರುತ್ತಾರೆ.  ಸದರಿಯವರು ದಾಖಲೆಗಳನ್ನು ಪರಿಶೀಲಿಸಿ ಮಂಜೂರು ಸಹ ಮಾಡಿರುತ್ತಾರೆ. ಆರೋಪಿ 1&2 ರವರು ನ್ಯಾಯಾಲಯದಲ್ಲಿ ಮೇಲ್ಕಂಡ ಸ್ವತ್ತಿನ ಬಗ್ಗೆ ದಾವೆಯನ್ನು ಹೂಡಿದಾಗ ಪಿರ್ಯಾಧಿಗೆ ಮೇಲ್ಕಂಡ ವಿಚಾರವು ತಿಳಿದುಬಂದಿರುತ್ತದೆ. ಆರೋಪಿತರು ಈ ಕೃತ್ಯದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,  ಠಾಣೆಯಲ್ಲಿ ಎನ್.ಸಿಆರ್: 453/2020 ರಂತೆ ದಾಖಲಿಸಿರುತ್ತಾರೆ, ಮೇಲ್ಕಂಡ ಆರೋಪಿತರು ಕಲಂ: 416, 417, 418, 419, 420, 423, 463, 464, 465, 468, 470 ರೆ/ವಿ 34 ಐ.ಪಿ.ಸಿ ರೀತ್ಯ ಶಿಕ್ಷಾರ್ಹರಾಗಿರುತ್ತಾರೆ, ಇವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಎಂಬಿತ್ಯಾಧಿಯಾಗಿ ಇದ್ದ ದೂರು.   ಹೆಚ್ಚಿನ ಮಾಹಿತಿಗೆ ನ್ಯಾಯಾಲಯದ ಪಿ.ಸಿ.ಆರ್ 29/2020   ಅನ್ನು ಲಗತ್ತಿಸಿಕೊಂಡಿರುತ್ತೆ.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ.64/2020 ಕಲಂ. 188,269,270,271 ಐ.ಪಿ.ಸಿ:-

          ದಿನಾಂಕ:10/09/2020 ರಂದು ಸಂಜೆ 18:00 ಗಂಟೆಗೆ ಪಿರ್ಯಾಧಿದಾರರಾದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಸುರೇಶ್ ಕೆಜಿ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕಯಂತ್ರ ಮುದ್ರಿತ ದೂರಿನ ಸಾರಾಂಶವೇನೆಂದರೆ ನಾನು ಈಗ್ಗೆ 5 ವರ್ಷಗಳಿಂದ ಚೇಳೂರು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ:29/08/2020 ರಂದು  ಚೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಪಿಎನ್ ಆರ್ ಬಡಾವಣೆಯ ವಾಸಿಯಾದ  ಹರೀಶ ಬಿನ್ ಚಂದ್ರಶೇಖರ್ ಎಂಬುವರಿಗೆ ಕೊರೋನಾ ಸೋಂಕು ಧೃಢಪಟ್ಟಿದ್ದರಿಂದ ಸರ್ಕಾರದ ಆದೇಶದಂತೆ ಅದೇ ದಿನ ಸೋಂಕಿತ ವ್ಯಕ್ತಿಯ ಮನೆಗೆ  ಸೀಲ್ ಡೌನ್ ಮಾಡಲಾಗಿದ್ದು, ಸದರಿ ಸೋಂಕಿತ ವ್ಯಕ್ತಿಯ ಜೊತೆಯಲ್ಲಿ ಸಂಪರ್ಕ ಹೊಂದಿದ್ದ  ಪ್ರಾಥಮಿಕ ವ್ಯಕ್ತಿಗಳಾದ 1) ಸೌಜನ್ಯ ಕೊಂ ಹರೀಶ್  2) ದಕ್ಷಿತ ಬಿನ್ ಹರೀಶ್, 3) ಚಂದ್ರಶೇಖರ್ ಬಿನ್ ಚಿನ್ನಪೆದ್ದಪ್ಪ, 4) ಶಂಕರಮ್ಮ ಕೊಂ ಚಂದ್ರಶೇಖರ್, 5)ತುಳಸಮ್ಮ ಕೊಂ ರಾಮಮೋಹನ್  6) ರಾಮಮೋಹನ್ ಬಿನ್ ರಾಮಕೃಷ್ಣ, 40 ವರ್ಷ, ಬಲಜಿಗರು, ಕೂಲಿ ಕೆಲಸ, ಚೇಳೂರು ಗ್ರಾಮ  ರವರನ್ನು ಮನೆಯಲ್ಲಿಯೇ ಇರುವಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ನಾವುಗಳುಸೇರಿಕೊಂಡು ಇವರಿಗೆ ದಿನಾಂಕ:29-08-2020 ರಿಂದ 14 ದಿನಗಳು ಹೊಂ ಕ್ವಾರೈಂಟೈನ್  ನಲ್ಲಿರುವಂತೆ ಸೂಚಿಸಿರುತ್ತೆ. ಹೀಗಿರುವಲ್ಲಿ ದಿನಾಂಕ:10/09/2020 ರಂದು ಸಂಜೆ 5:00  ಗಂಟೆಯಲ್ಲಿ ನಾನು , ಪೊಲೀಸ್ ಸಿಬ್ಬಂದಿ ಹೆಚ್ ಸಿ 149 ಇನಾಯತ್, ಚೇಳೂರು ಪಂಚಾಯಿತಿ ಬಿಲ್ ಕಲೆಕ್ಟರ್ ಮಂಜುನಾಥ ರವರು  ಚೇಳೂರಿನಲ್ಲಿ  Home Quarataine ನಲ್ಲಿರುವ ವ್ಯಕ್ತಿಗಳಾದ 1) ಸೌಜನ್ಯ  2) ದಕ್ಷಿತ 3) ಚಂದ್ರಶೇಖರ್, 4) ಶಂಕರಮ್ಮ, 5)ತುಳಸಮ್ಮ 6) ರಾಮ್ ಮೋಹನ್ ರವರನ್ನು ಚೆಕ್ ಮಾಡಲಾಗಿ ಸೌಜನ್ಯ,ದಕ್ಷಿತ, ಚಂದ್ರಶೇಖರ್, ಶಂಕರಮ್ಮ,ತುಳಸಮ್ಮ ರವರು ಹಾಜರಿದ್ದು ರಾಮ್ ಮೋಹನ್ ಎಂಬುವರು  ಮನೆಯಲ್ಲಿ ಹಾಜರಿಲ್ಲದೇ  ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಸಾಂಕ್ರಾಮಿಕ ಸೊಂಕು ಕೋವಿಡ್-19 ರೋಗ ಇತರೆ ವ್ಯಕ್ತಿಗಳಿಗೆ ಹರಡುವುದೆಂದು ತಿಳಿದಿದ್ದರೂ ಸರ್ಕಾರಿ ಆದೇಶವನ್ನು ಮತ್ತು ಸರ್ಕಾರಿ ಅಧಿಕಾರಿಗಳು ನೀಡಿರುವ ರೋಗ ನಿರೋಧಕ ನಿರ್ಬಂಧ ನಿಯಮಗಳನ್ನು ಪಾಲೀಸದೆ, ಮುಖಗವಚ ಮತ್ತು ಕೊರೋನಾ ಸೋಂಕು ಹರಡದಂತೆ ಇತರೆ ಯಾವುದೇ ಎಚ್ಚರಿಕೆ ಕ್ರಮ ಕೈಗೊಳ್ಳದೆ ನಿಯಮಗಳನ್ನು ಉಲ್ಲಂಘನೆಮಾಡಿ, ಹೋಂ ಕ್ವಾರೆಂಟೈನ್ ನಲ್ಲಿ ಇಲ್ಲದೇ ನಿರ್ಲಕ್ಷ್ಯತನ ತೋರಿರುತ್ತಾರೆ. ಆದ್ದರಿಂದ ಠಾಣೆಗೆ ಹಾಜರಾಗಿ ಮೇಲ್ಕಂಡ ರಾಮಮೋಹನ್ ರವರ  ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊಸಂ:64/2020 ಕಲಂ 188,269,270,271 ಐಪಿಸಿ ರೀತ್ಯ ಪ್ರಕರಣ ದಾಖಲಿಸಿರುತ್ತೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.11/2020 ಕಲಂ. 420 ಐ.ಪಿ.ಸಿ & 66(C),66(D) (INFORMATION TECHNOLOGY ACT 2000:-

          ದಿನಾಂಕ:10/09/2020 ರಂದು ಪಿರ್ಯಾದಿದಾರರಾದ ಚಂದ್ರ ,ಎ,ಎನ್ ಬಿನ್ ನಾರಾಯಣಪ್ಪ, 43 ವರ್ಷ, ಬೋವಿ ಜನಾಂಗ. ಕೂಲಿಕೆಲಸ, ವಾಸ ಅರೂರು ಗ್ರಾಮ, ಚಿಕ್ಕಬಳ್ಳಾಪುರ ತಾಲೂಕು. ಮೊಬೈಲ್ ನಂಬರ್- 9741925475 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಅರೂರು ಗ್ರಾಮದ ಸಿಂಡಿಕೇಟ್ ಬ್ಯಾಂಕಿನಲ್ಲಿ 15822200000160 ಸಂಖ್ಯೆಯ ಉಳಿತಾಯ ಖಾತೆಯನ್ನು ಹೊಂದಿರುತ್ತೇನೆ, ಹಾಗೂ 6522600008223318 ಸಂಖ್ಯೆಯ ಎಟಿಎಮ್ ಕಾರ್ಡನ್ನು ಹೊಂದಿರುತ್ತೇನೆ, ಹಾಗೂ ಪೆರೇಸಂದ್ರ ಗ್ರಾಮದಲ್ಲಿರುವ ಹೀರೋ ಶೋ ರೂಂನಲ್ಲಿ ಪ್ಯಾಷನ್ ಪ್ರೋ ದ್ವಿಚಕ್ರ ವಾಹನವನ್ನು ಲೋನ್ ಮುಖಾಂತರ ಪಡೆದಿರುತ್ತೇನೆ, ಹೀಗಿರುವಲ್ಲಿ ದಿನಾಂಕ:10/09/2020 ರಂದು ಮದ್ಯಾಹ್ನ 4.10 ನಿಮಿಷಕ್ಕೆ ಯಾರೋ ಒಬ್ಬ ಆಸಾಮಿ 8389032631 ಸಂಖ್ಯೆಯ ನಂಬರಿನಿಂದ ಪೋನ್ ಮಾಡಿ ನಾನು ಹೀರೋ ಶೋ ರೂಂ ಹೆಡ್ ಆಫೀಸ್ ನಿಂದ  ಮಾತನಾಡುತ್ತಿರುವುದಾಗಿ ತಿಳಿಸಿ ತನ್ನ ಎಟಿಎಮ್ ಕಾರ್ಡಿನ ನಂಬರನ್ನು ಕೇಳಿದ್ದು ಅದಕ್ಕೆ ತಾನು ಇವರು ಹೀರೋ ಶೋ ರೂಂ ಹೆಡ್ ಆಫೀಸ್ ನವರು ಎಂತ ನಂಬಿ ತನ್ನ ಎಟಿಎಮ್ ಕಾರ್ಡ್ನ ನಂಬರನ್ನು ನೀಡಿರುತ್ತೇನೆ, ನಂತರ ತನ್ನ ಮೊಬೈಲ್ ಗೆ ಬಂದಿದ್ದ ಒಟಿಪಿ ನಂಬರ್ಗಳನ್ನು ಸಹ 3 ಬಾರಿ ಪಡೆದು ತನ್ನ ಖಾತೆಯಿಂದ ಮೂರು ಬಾರಿ ಒಟ್ಟು 48689/-ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡಿರುತ್ತಾನೆ, ಆದ್ದರಿಂದ ತನ್ನ ಖಾತೆಯಲ್ಲಿನ ಹಣವನ್ನು ಯಾರೋ ವ್ಯಕ್ತಿಗಳು ವರ್ಗಾವಣೆ ಮಾಡಿಕೊಂಡಿದ್ದು ಸದರಿ ವ್ಯಕ್ತಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಂಡು ತನ್ನ ಹಣವನ್ನು ತನಗೆ ವಾಪಸ್ಸು ಕೊಡಿಸಬೇಕಂದು ಕೋರಿ ನೀಡಿರುವ ದೂರಾಗಿರುತ್ತದೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.55/2020 ಕಲಂ. ಮನುಷ್ಯ ಕಾಣೆ:-

          ದಿನಾಂಕ: 10-09-2020 ರಂದು ಸಂಜೆ- 4-30 ಗಂಟೆಗೆ ಈ ಕೇಸಿನ ಪಿರ್ಯಾಧಿ ಶ್ರೀಮತಿ ಪೂಜಾ @ ಪಲ್ಲವಿ ಕೊಂ ಪ್ರವೀಣ್ ಅರ್. ರವರು ಠಾಣೆಗೆ ಹಾಜರಾಗಿ ಕೊಟ್ಟ  ದೂರಿನ ಸಾರಾಂಶವೇನೆಂದರೆ,  ತನ್ನ ಸ್ವಂತ ಊರು ಬೆಂಗಳೂರು ಪೂರ್ವ ತಾಲ್ಲೂಕು,  ಬಿದರಹಳ್ಳಿ ಹೋಬಳಿ ರಾಂಪುರ ಗ್ರಾಮವಾಗಿದ್ದು  2016 ನೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ನಗರದ  ಹೆಚ್ ಎಸ್ ಗಾರ್ಡನ್ ವಾಸಿ ರಾಮಚಂದ್ರಪ್ಪ ರವರ ಮಗನಾದ ಪ್ರವೀಣ್ ಅರ್ ಎಂಬುವವನೊಂದಿಗೆ ಮದುವೇಯಾಗಿದ್ದು  ನಮಗೆ ಒಂದು ಹೆಣ್ಣು ಮಗಳಿದ್ದು  ತನ್ನ ಗಂಡ  ಸ್ವಂತವಾಗಿ ಲಾರಿಯನ್ನು ಇಟ್ಟುಕೊಂಡು ಬಾಡಿಗೆಗೆ ಓಡಿಸುತ್ತಿದ್ದ. ದಿನಾಂಕ: 15-08-2020 ರಂದು ಮದ್ಯಾಹ್ನ 12-30 ಗಂಟೆಯಲ್ಲಿ  ತನ್ನ ಲಾರಿಯ  ರಿಪೇರಿಯ ಬಗ್ಗೆ ಬೆಂಗಳೂರಿಗೆ ಹೋಗಿ ಲಾರಿ ಬಿಡಿಬಾಗಗಳನ್ನು ತರುವುದಾಗಿ ಹೋದವನು  ಸಂಜೆಯಾದರೂ ವಾಪಸ್ಸು ಬಾರದೆ ಇದ್ದರಿಂದ ಅತನ ಪೋ: 9844915551, 8660881713. ಗೆ ಪೋನ್ ಮಾಡಿದಾಗ ಸ್ವೀಚ್ ಅಪ್ ಎಂದು ಬರುತ್ತಿದ್ದು  ಅದೇದಿನ ಸಂಜೆ ಪಿರ್ಯಾಧಿಯ ತಂದೆ ತಾಯಿ  ಕರೆ ಮಾಡಿ  ತನ್ನ ತಂಗಿ ಹರ್ಷಿತಾರವರು ಮನೆಯಿಂದ ಕಾಣೆಯಾಗಿದ್ದು  ಎಲ್ಲರೂ ಹುಡುಕುತ್ತಿದ್ದೇವೆ  ಎಂದು ತಿಳಿಸಿದ್ದು  ಅಂದಿನಿಂದಲೂ ತನ್ನ ಸಂಬಂಧಿಕರು ಸ್ನೇಹಿತರು ಇತರೆ ಕಡೆಗಳಲ್ಲಿ  ತನ್ನ ಗಂಡ ಪ್ರವೀಣ್ ರವರನ್ನು ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗದೆ ಇದ್ದು ಈ ಬಗ್ಗೆ ಈ ದಿನ ತಡವಾಗಿ ದೂರನ್ನು ನೀಡುತ್ತಿರುವುದಾಗಿ ಕೊಟ್ಟ ದೂರಾಗಿರುತ್ತದೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.56/2020 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 10/09/2020 ರಂದು ರಾತ್ರಿ 9-45 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆಯ ಸಿ.ಹೆಚ್.ಸಿ 192 ರಾಜಗೋಪಾಲ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ  ಸಾರಾಂಶವೇನೆಂದರೆ ಈ ದಿನ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ನೇಮಿಸಿ ಕಳುಹಿಸಿಕೊಟ್ಟಿದ್ದು ಅದರಂತೆ ನಾವು ದ್ವಿಚಕ್ರ ವಾಹನದಲ್ಲಿ ಚಿಕ್ಕಬಳ್ಳಾಪುರ ನಗರದ ಪ್ರಶಾಂತನಗರ, ಚಿಕ್ಕಬಳ್ಳಾಪುರ ತಾಲ್ಲೂಕಿನ ದಿನ್ನೆಹೊಸಹಳ್ಳಿ, ಸೂಸೆಪಾಳ್ಯ, ಹರಿಹರಪುರ, ಗೇರಹಳ್ಳಿ ಕಡೆ ಗಸ್ತು ಮಾಡಿಕೊಂಡು ರಾತ್ರಿ 7-30 ಗಂಟೆಗೆ ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ಸರ್ಕಲ್ ನಲ್ಲಿ ಗಸ್ತಿನಲ್ಲಿದ್ದಾಗ ಭಾತ್ಮಿದಾರರಿಂದ ಅಡವಿಗೊಲ್ಲಾರಹಳ್ಳಿ ನರಸಿಂಹ ಎಂಬುವವರು ದ್ವಿಚಕ್ರವಾಹನದಲ್ಲಿ ಕಾನೂನು ಬಾಹಿರವಾಗಿ ಮದ್ಯದ  ಟೆಟ್ರಾ ಪಾಕೆಟ್ ಗಳನ್ನು ಸಾಗಿಸಿಕೊಂಡು ಹೋಗುತ್ತಿರುವುದಾಗಿ ಖಚಿತ ಮಾಹಿತಿ ಬಂದಿರುತ್ತದೆ. ಅದರಂತೆ ನಾವು ಮಾಹಿತಿ ಬಂದ ಸ್ಥಳವಾದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬ ಆಸಾಮಿ ದ್ವಿಚಕ್ರವಾಹನದಲ್ಲಿ ನಮ್ಮಿಂದ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದವನು ಹಿಂದೆ  ಸಮವಸ್ತ್ರದಲ್ಲಿ ಬರುತ್ತಿದ್ದ ನಮ್ಮಗಳನ್ನು ದ್ವಿಚಕ್ರ ವಾಹನದ ಬಲಗಡೆಯ ಕನ್ನಡಿಯಲ್ಲಿ ನೋಡಿ ದ್ವಿಚಕ್ರ ವಾಹನ ಮತ್ತು ಒಂದು ಬ್ಯಾಗನ್ನು ಅಲ್ಲೆ ಬಿಟ್ಟು ಓಡಿ ಹೋದನು. ತಕ್ಷಣ ಆಸಾಮಿಯನ್ನು ಹಿಡಿಯಲು ಪ್ರಯತ್ನಿಸಲಾಗಿ ಕತ್ತಲಲ್ಲಿ ಸಿಕ್ಕಿರುವುದಿಲ್ಲ ಆಗ ಸಮಯ 07-40 ಗಂಟೆಯಾಗಿತ್ತು. ನಂತರ ದ್ವಿಚಕ್ರ ವಾಹನದ ಮೇಲಿದ್ದ ಬಟ್ಟೆಯ ಬ್ಯಾಗನ್ನು ಪರಿಶೀಲಿಸಲಾಗಿ ಮದ್ಯ ತುಂಬಿದ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿಯ 90 ಎಂ.ಎಲ್ ನ 90 ಟೆಟ್ರಾ ಪಾಕೆಟ್ ಗಳಿರುತ್ತವೆ. ಸದರಿ ಮದ್ಯದ ಪ್ರಮಾಣ 8 ಲೀಟರ್ 100 ಎಂ.ಎಲ್ ಹಾಗೂ ಅದರ ಒಟ್ಟು ಬೆಲೆ ಸುಮಾರು 3161/- ರೂಪಾಯಿಗಳಾಗಿರುತ್ತೆ. ದ್ವಿಚಕ್ರವಾಹನವನ್ನು ಪರಿಶೀಲಿಸಲಾಗಿ ಅದರ ನೊಂದಣಿ ಸಂಖ್ಯೆ ಕೆಎ-40 ಹೆಚ್-3363 ಟಿ.ವಿ.ಎಸ್ ವಿಕ್ಟರ್ ದ್ವಿಚಕ್ರವಾಹನ ಆಗಿರುತ್ತದೆ. ಕಾನೂನು ಬಾಹಿರವಾಗಿ ಮದ್ಯವನ್ನು ಸಂಗ್ರಹಿಸಿ ಸಾಗಾಣೆ ಮಾಡಿಕೊಂಡು ಹೋಗುತ್ತಿದ್ದ ಆಸಾಮಿಯ ದ್ವಿಚಕ್ರ ವಾಹನ ಮತ್ತು ಮಾಲನ್ನು ತಂದು ನಿಮ್ಮ ವಶಕ್ಕೆ ನೀಡುತ್ತಿದ್ದು ತಪ್ಪಿಸಿಕೊಂಡಿರುವ ಮೇಲ್ಕಂಡ ಆಸಾಮಿ ಅಡವಿಗೊಲ್ಲಾರಹಳ್ಳಿ ನರಸಿಂಹ ರವರನ್ನು ಪತ್ತೆ ಮಾಡಿ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನೀಡಿದ ಮೇರೆಗೆ ಈ ಪ್ರಥಮ ವರ್ತಮಾನ ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.331/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 10-09-2020 ರಂದು ಸಂಜೆ 5-30 ಗಂಟೆಗೆ ಚಂದ್ರಶೇಖರ್.ಎನ್ ಬಿನ್ ನಟರಾಜಪ್ಪ 31 ವರ್ಷ, ಹಂದಿಜ್ಯೋಗಿ ಜನಾಂಗ,  ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗೋಪಸಂದ ಗ್ರಾಮ, ಊಲವಾಡಿ ಅಂಚೆ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:10/09/2020 ರಂದು ಮದ್ಯಾಹ್ನ ಸು.3-30 ಗಂಟೆಯ ಸಮಯದಲ್ಲಿ ತಾನು ಚಿಂತಾಮಣಿ ಟೌನ್ ನಲ್ಲಿರುವ ತಮ್ಮ ಚಿಲ್ಲರೆ ಅಂಗಡಿಯಲ್ಲಿದ್ದಾಗ, ತಮ್ಮ ಚಿಕ್ಕಪ್ಪನ ಮಗನಾದ ಕಿರಣ್ ಎಂಬುವನು ಆತನ ಮೊಬೈಲ್ ನಂಬರ್ ನಿಂದ ತನ್ನ ಮೊಬೈಲ್ ನಂಬರ್ಗೆ ಪೋನ್ ಮಾಡಿ ತಮ್ಮ ದೊಡ್ಡಪ್ಪನವರಾದ ರಾಜಣ್ಣರವರಿಗೆ ಈ ದಿನ ದಿನಾಂಕ:10/09/2020 ರಂದು ಮದ್ಯಾಹ್ನ ಸು.3-20 ಗಂಟೆಯ ಸಮಯದಲ್ಲಿ ಕೋಲಾರ ರಸ್ತೆಯಲ್ಲಿರುವ ಶ್ರೀ.ಆಂಜನೇಯಸ್ವಾಮಿ ದೇವಾಲಯದ ಬಳಿ ಅಪಘಾತ ಆಗಿದೆ ಬೇಗ ಬನ್ನಿ ಎಂದು ಹೇಳಿದರು. ಕೂಡಲೇ ತಾನು, ತಮ್ಮ ದೊಡ್ಡಪ್ಪ ರಾಜಣ್ಣರವರ ಮಕ್ಕಳಾದ ರಘುನಾಥ್, ಶಂಕರ, ನಮ್ಮ ಅಣ್ಣ ಮಂಜುನಾಥ ರವರುಗಳು ತಮ್ಮ ಎರಡು ದ್ವಿಚಕ್ರವಾಹನಗಳಲ್ಲಿ ಅಪಘಾತ ಸಂಭವಿಸಿದ್ದ ಸ್ಥಳಕ್ಕೆ ಹೋದೆವು. ನೋಡಲಾಗಿ ಸಂಗತಿ ನಿಜವಾಗಿದ್ದು, ಸ್ಥಳದಲ್ಲಿ ನೋಂದಣಿ ಸಂಖ್ಯೆ:ಕೆಎ-07ಎ-5756 ರ DOST ವಾಹನ ಸ್ಥಳದಲ್ಲಿತ್ತು. ಅದರ ಚಾಲಕ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ ಪರಾರಿಯಾಗಿದ್ದ. ತಮ್ಮ ದೊಡ್ಡಪ್ಪ ರಾಜಣ್ಣ ರವರಿಗೆ ತಲೆಗೆ ರಕ್ತಗಾಯವಾಗಿದ್ದು, ಸೊಂಟದ ಭಾಗಕ್ಕೆ ತರಚಿದ ಗಾಯಗಳಾಗಿತ್ತು. ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ತಮ್ಮ ದೊಡ್ಡಪ್ಪ ರಾಜಣ್ಣರವರು ಇದೇ ದಿನ ಮದ್ಯಾಹ್ನ ಸು.3-20 ಗಂಟೆಯ ಸಮಯದಲ್ಲಿ ಕೋಲಾರ ರಸ್ತೆಯಲ್ಲಿರುವ ಅವರ ಚಿಲ್ಲರೆ ಅಂಗಡಿಯಿಂದ ಮನೆಗೆ ವಾಪಸ್ಸು ಹೋಗಲೆಂದು ಸು.100 ಮೀಟರ್ ನಷ್ಟು ದೂರದಲ್ಲಿ ರಸ್ತೆಯ ಪುಟ್ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೋಲಾರ ಕಡೆಯಿಂದ ಬಂದ ನೋಂದಣಿ ಸಂಖ್ಯೆ:ಕೆಎ-07ಎ-5756 ರ DOST ವಾಹನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕೆತಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ದೊಡ್ಡಪ್ಪನವರಿಗೆ ಹಿಂಬದಿಯಿಂದ ಅಪಘಾತಪಡಿಸಿದ ಪರಿಣಾಮ ತಮ್ಮ ದೊಡ್ಡಪ್ಪರವರು ರಸ್ತೆಯಲ್ಲಿ ಕೆಳಗೆ ಬಿದ್ದು ಹೋಗಿ ಅವರಿಗೆ ತಲೆಗೆ ರಕ್ತಗಾಯವಾಗಿದ್ದು, ಸೊಂಟದ ಭಾಗಕ್ಕೆ ತರಚಿದ ಗಾಯಗಳಾಗಿರುವುದಾಗಿ ವಿಚಾರ ತಿಳಿಯಿತು. ಮೇಲ್ಕಂಡ ವಾಹನದ ಚಾಲಕನ ಹೆಸರು, ವಿಳಾಸ ತಿಳಿದುಬಂದಿರುವುದಿಲ್ಲ. ಕೂಡಲೇ ನಾವುಗಳು ಗಾಯಾಳು ತಮ್ಮ ದೊಡ್ಡಪ್ಪ ರಾಜಣ್ಣರವರನ್ನು ತಮ್ಮ ಕಾರಿನಲ್ಲಿ ಚಿಂತಾಮಣಿಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲು ಮಾಡಿದೆವು. ಸದರಿ ಆಸ್ಪತ್ರೆಯಲ್ಲಿ ತಮ್ಮ ದೊಡ್ಡಪ್ಪ ನವರಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆಯನ್ನು ನೀಡಿದ್ದರಿಂದ ತಾವು ಗಾಯಾಳು ತಮ್ಮ ದೊಡ್ಡಪ್ಪನನ್ನು ಆಸ್ಪತ್ರೆಯ ಆಂಬ್ಯೂಲೆನ್ಸ್ ವಾಹನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ. ತಮ್ಮ ದೊಡ್ಡಪ್ಪನವರಿಗೆ ಅಪಘಾತಪಡಿಸಿದ ನೋಂದಣಿ ಸಂಖ್ಯೆ:ಕೆಎ-07 ಎ-5756 ರ DOST ವಾಹನ ಚಾಲಕನ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಲು ಕೋರಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.332/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 11-09-2020 ರಂದು ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ನಾಗೇಶ ಬಿನ್ ನಾರಾಯಣಸ್ವಾಮಿ, 33 ವರ್ಷ, ನಾಯಕರು, ಕೂಲಿ ಕೆಲಸ, ಟಿ.ಹೊಸೂರು ಗ್ರಾಮ ಚಿಂತಾಮಣಿ ತಾಲ್ಲೂಕು  ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 1-45 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ 08-09-2020 ರಂದು  ಸಂಜೆ 7-00 ಗಂಟೆ ಸಮಯದಲ್ಲಿ ತಾನು ಕೈವಾರ ಕ್ರಾಸ್ ಮುತ್ತುಕದಹಳ್ಳಿ ರಸ್ತೆಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಮದ್ಯಪಾನ ಮಾಡಲು ಹೋಗಿ  ರೂಂ ನಲ್ಲಿ ಕುಳಿತುಕೊಂಡು ಸಪ್ಲೈಯರ್ ಗೆ ಅರ್ಡ್ ರ್  ಮಾಡಿ ಕುಳಿತುಕೊಂಡಿದ್ದಾಗ ಯಾರೋ ಮೂರು ಜನ  ಅಪರಿಚಿತರು  ಬಂದು ವಿನಾಕಾರಣ ತನ್ನ ಮೇಲೆ ಜಗಳ ತೆಗೆದು  ಆ ಪೈಕಿ ಒಬ್ಬ ವ್ಯಕ್ತಿ ತನ್ನ ಕೈ ಮುಷ್ಟಿಯಿಂದ ತನ್ನ ಮುಖದ ಮೇಲೆ ಗುದ್ದಿ ಊತದ ಗಾಯ ಪಡಿಸಿದ. ಮತ್ತೋಬ್ಬ ವ್ಯಕ್ತಿ ಅಲ್ಲೇ ಇದ್ದ ಬೀರ್ ಬಾಟಲಿಯಿಂದ ತನ್ನ ತಲೆಯ ಮೇಲೆ ಹೊಡೆದು ರಕ್ತ ಗಾಯಪಡಿಸಿದನು. ಮತ್ತೋಬ್ಬನು ಕೈ ಗಳಿಂದ ತನ್ನ ಮೈ ಮೇಲೆ ಹೊಡೆದು ಮೂಗೇಟು ಮಾಡಿದನು. ಆಗ ಬಾರ್ ಸಪ್ಲೈಯರ್ ಮತ್ತು  ಬಾರ್ ನಲ್ಲಿದ್ದವರು ಜಗಳ ಬಿಡಿಸಿದ್ದು ಆಗ ಮೇಲ್ಕಂಡವರು  ತನ್ನ್ನನು ಕುರಿತು ಈ ನನ್ನ ಮಗನನ್ನು ಬಿಡುವುದಿಲ್ಲ.  ಈ ದಿನ ತಪ್ಪಿಸಿಕೊಂಡಿದ್ದಾನೆ ಇವನನ್ನು ಮುಗಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ಅವರು ಕೆಎ40 ಯು3840 ಸ್ಪೆಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ಹೊರಟು ಹೋಗಿರುತ್ತ್ಥಾರೆ. ನಂತರ ವಿಚಾರ ತಿಳಿದು ಸ್ಥಳಕ್ಕೆ  ತನ್ನ ತಂದೆ ತನ್ನನ್ನು ಆಸ್ವತ್ರೆಗೆ ದಾಖಲಿಸಿರುತ್ತಾರೆ. ತನ್ನ ಮೇಲೆ ಹಲ್ಲೆ ಮಾಡಿದವರ ಹೆಸರು ವಿಳಾಸ ವಿಚಾರ ಮಾಡಲಾಗಿ ಸಂತೇಕ್ಲಲಹಳ್ಳಿ ಗ್ರಾಮದ ಆನಂದ ಮತ್ತು ಹರೀಶ್ ಎಂದು ತಿಳಿದು ಬಂದಿರುತ್ತೆ. ಮತ್ತೋಬ್ಬ ವ್ಯಕ್ತಿಯ ಹೆಸರು ವಿಳಾಸ ಗೊತ್ತಿರುವುದಿಲ್ಲ. ತಾನು ಆಸ್ವತ್ತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ದಿನ ತಡವಾಗಿ ಹೇಳಿಕೆ ನೀಡಿರುತ್ತೇನೆ. ಆದ್ದರಿಂದ ತನ್ನ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ.

 1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.95/2020 ಕಲಂ. 15(A),32(3) ಕೆ.ಇ ಆಕ್ಟ್:-

            ದಿನಾಂಕ: 10/09/2020 ರಂದು ಸಂಜೆ 6.00 ಗಂಟೆಗೆ ಶ್ರೀ. ಮಲ್ಲಿಕಾರ್ಜುನ. ಎಸ್,  ಹೆಚ್.ಸಿ- 239   ಡಿಸಿಬಿ/ ಸಿಇಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರರವರು ಠಾಣೆಗೆ ಹಾಜರಾಗಿ ನಿಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:10/09/2020 ರಂದು ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ /ಸಿಇಎನ್ ಪೊಲೀಸ್ ಠಾಣೆಯ ಪಿ.ಐ ರವರಾದ  ಶ್ರೀ ರಾಜಣ್ಣರವರು ಮಲ್ಲಿಕಾರ್ಜುನ ಹೆಚ್.ಸಿ- 239 ಆದ ತನಗೂ ಹಾಗು ಶ್ರೀ ಮಂಜುನಾಥ. ಹೆಚ್.ಸಿ -198 ರವರುಗಳಿಗೆ ಶಿಡ್ಲಘಟ್ಟ ತಾಲ್ಲುಕಿನಲ್ಲಿ ಕಾನೂನು ಬಾಹಿರವಾದ ಚಟುವಟಿಕೆಗಳ ಪತ್ತೆ ಕರ್ತವ್ಯಕ್ಕೆ ನೇಮಕ ಮಾಡಿದ್ದು ಅದರಂತೆ ನಾವು ಈ ದಿನ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಿಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ ಸುಮಾರು 3.30 ಗಂಟೆಯ ಸಮಯದಲ್ಲಿ ಗಸ್ತು ಮಾಡುತ್ತಿದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಬಶೆಟ್ಟಿಹಳ್ಳಿ ಗ್ರಾಮದ ವಾಸಿ  ವೆಂಕಟನಾರಾಯಣಪ್ಪ ಬಿನ್ ಲೇಟ್ ವೆಂಕಟೇಶಪ್ಪ ರವರ ಚಿಲ್ಲರೆ ಅಂಗಡಿಯ ಬಳಿಗೆ ಹೋಗಲಾಗಿ ವೆಂಕಟನಾರಾಯಣಪ್ಪರವರ ಅಂಗಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಮಧ್ಯಪಾನ ಮಾಡುತ್ತಿದ್ದವರು ಹಾಗು ಅಂಗಡಿಯಲ್ಲಿದ್ದ ಆಸಾಮಿಯು ನಮ್ಮನ್ನು ಕಂಡು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ 1) HAYWARDS CHEERS WHISKY  90 ಎಂ.ಎಲ್ ನ ಮಧ್ಯ ತುಂಬಿದ 16 ಟೆಟ್ರಾ ಪ್ಯಾಕೇಟ್ಗಳು, 2) ORIGINAL CHOICE DELUXE WHISKY ಮಧ್ಯ ತುಂಬಿದ 90 ಎಂ.ಎಲ್ ನ 8 ಟೆಟ್ರಾ ಪಾಕೆಟ್ ಗಳು 3) HAYWARDS CHEERS WHISKY 90 ಎಂ.ಎಲ್ ನ 2 ಖಾಲಿ ಟೆಟ್ರಾ ಪ್ಯಾಕೇಟ್ಗಳು 4) 2 ಪ್ಲಾಸ್ಟೀಕ್ ಗ್ಲಾಸ್ ಗಳು 5) 1 ಖಾಲಿ ವಾಟರ್ ಬಾಟೆಲ್ ಗಳು ಇದ್ದು ಒಟ್ಟು 2.160 ಎಂಎಲ್ ಮಧ್ಯ ಇದ್ದು ಇದರ ಒಟ್ಟು ಬೆಲೆ 843 ರೂಗಳಾಗಿರುತ್ತೆ. ಇವುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ  ಅಮಾನತ್ತು ಪಡಿಸಿಕೊಂಡಿರುತ್ತೆ. ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಆಸಾಮಿಯ ಬಗ್ಗೆ ವಿಚಾರ ಮಾಡಲಾಗಿ ವೆಂಕಟನಾರಾಯಣಪ್ಪ ಬಿನ್ ಲೇಟ್ ವೆಂಕಟೇಶಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ಬಶೆಟ್ಟಿಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಮೊ.ನಂ 9880961434 ಎಂತ ತಿಳಿದು ಬಂದಿರುತ್ತೆಂತ ವರದಿಯೊಂದಿಗೆ ಮಾಲು ಮತ್ತು ಪಂಚನಾಮೆಯನ್ನು ಠಾಣೆಯಲ್ಲಿ ಹಾಜರುಪಡಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.236/2020 ಕಲಂ. 323,324,506 ರೆ/ವಿ 34 ಐ.ಪಿ.ಸಿ:-

          ದಿನಾಂಕ 10/09/2020 ರಂದು ಸಂಜೆ 16-00 ಗಂಟೆಗೆ ಪಿರ್ಯಾದಿ ರಾಮರೆಡ್ಡಿ ಬಿನ್ ಲೇಟ್ ಎಳೆತಿಮ್ಮಯ್ಯ, ಹಳೆಉಪ್ಪಾರಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ 18/08/2020 ರಂದು ತನ್ನ ಜಮೀನು ಸರ್ವೇ ನಂಬರ್ 54/4 ರಲ್ಲಿ 36 ಗುಂಟೆಯಲ್ಲಿ ರಾಗಿ ಬಿತ್ತನೆ ಮಾಡುತ್ತಿರುವಾಗ ಸುಮಾರು ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ಪ್ರಕಾಶ್ ಬಿನ್ ತಿಮ್ಮಯ್ಯ ಹಾಗೂ ಅವರ ಮಕ್ಕಳಾದ  ಶ್ರೀನಿವಾಸ ಮತ್ತು ವೆಂಕಟೇಶ್ ರವರು ತನ್ನ ಜಮೀನು ಬಳಿ ಬಂದು  ಕೋಲುಗುದ್ದಲಿ ಮತ್ತು ಕಟ್ಟಿಗೆಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಕಾರಣವೆನೆಂದು ಕೇಳಿದರೆ ಈ ಜಮೀನು ನಮ್ಮದು ನೀನು ಉಳುಮೆ ಮಾಡುತ್ತಿಯ ಎಂಧು ಪ್ರಕಾಶ್ ರವರು ಅವರ ಕೈಯಲ್ಲಿದ್ದ ಕೋಲುಗುದ್ದಲಿಯಿಂದ ಪಿರ್ಯಾದಿ ಕೈಗೆ ಹೊಡೆದು ನಂತರ ಶ್ರೀನಿವಾಸ ರವರು ಕಾಲಿನಿಂದ ಒದ್ದನು ಅಗ ನರಸಿಂಹಮುರ್ತಿ ಎಂಬುವರು ಓಡಿ ಬಂದು ಗಲಾಟೆ ಬಿಡಿಸಿದ್ದನು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿದಾಗ ಬಲಗೈ ಮೂಳೆ ಮುರಿದು ಹೊಗಿರುತ್ತದೆ ಅದ್ದರಿಂದ ಚಿಕಿತ್ಸೆ ಪಡೆದುಕೊಂಡು ತಡವಾಗಿ ಬಂದು ದೂರು ನೀಡುತ್ತಿದ್ದೆನೆ ನನಗೆ ಜೀವ ಬೆದರಿಕೆ ಇದ್ದು  ಈ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.237/2020 ಕಲಂ. 317 ಐ.ಪಿ.ಸಿ:-

          ದಿನಾಂಕ 11/09/2020 ರಂದು  ಬೆಳಿಗ್ಗೆ 10-30 ಗಂಟೆಗೆ ಪಿರ್ಯಾಧಿದಾರರಾದ ಪಾರಿಜಾತ ಬಿನ್ ಜಯಪ್ಪ , 29 ವರ್ಷ, ಈಡಿಗ ಜನಾಂಗ. ಮೇಲ್ವಿಚಾರಕಿ CDPO  ಕಛೇರಿ , ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 10/09/2020 ರಂದು ರಾತ್ರಿ 8-30 ಗಂಟೆಗೆ ಸಮಯದಲ್ಲಿ ಗೌರಿಬಿದನೂರು ತಾಲ್ಲೂಕು, ಚಂದನದೂರು ಗ್ರಾಮದ ಅರಳಿಕಟ್ಟೆ ಬಳಿಯಲ್ಲಿ ಒಂದು ದಿನ ವಯಸ್ಸಿನ ನವಜಾತ ಗಂಡು ಶಿಶುವಿನ ಪೋಷಕರು ಮಗುವನ್ನು ತೊರೆಯುವ   ಉದ್ದೇಶದಿಂದ ಅಪಾಯಕರ ಸ್ಥಿತಿಯಲ್ಲಿ ಬಿಟ್ಟು ಹೋಗಿರುತ್ತಾರೆ ಈ ವಿಚಾರವನ್ನು ಊರಿನ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರಾದ  ರಾಧಮ್ಮ ಮತ್ತು ಅಂಗನವಾಡಿ  ಕಾರ್ಯಕರ್ತೆ ಯವರಾದ ವಿಜಯಮ್ಮರವರು ಮಗುವನ್ನು ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಒಪ್ಪಿಸಿದ್ದು ಮಗುವನ್ನು ನಾವು ಆರೋಗ್ಯ ತಪಾಸಣೆ ಮಾಡಿಸಿ ಸುರಕ್ಷಿತವಾಗಿ ಇಟ್ಟಿರುತ್ತೇವೆ. ಆದ್ದುದರಿಂದ ಅಪಾಯಕರವಾದ ರೀತಿಯಲ್ಲಿ ಮಗುವನ್ನು ಬಿಟ್ಟು ಹೋಗಿರುವ ಅದರ ಪೋಷಕರನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಲು ಕೋರುತ್ತೇನೆ. ಮಗುವನ್ನು ಗೌರಿಬಿದನೂರು ಸರ್ಕಾರಿ ಆಸ್ವತ್ರೆಯಲ್ಲಿ ತಪಾಸಣೆಗಾಗಿ ಒಳಪಡಿಸಿ ಮೇಲಾಧಿಕಾರಿಗಳಿಗೆ  ವಿಚಾರವನ್ನು ತಿಳಿಸಿ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇವೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.151/2020 ಕಲಂ. 269,271  ಐ.ಪಿ.ಸಿ:-

          ದಿನಾಂಕ:10/09/2020 ರಂದು ಠಾಣಾ ಸಿಬ್ಬಂದಿ ಪಿ,ಸಿ-84 ಮುನಿರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:10/09/2020 ರಂದು ಮಾನ್ಯ ಪಿ,ಐ ಸಾಹೇಬರು 19 ನೇ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು 19 ನೇ ಗ್ರಾಮ ಗಸ್ತುಗೆ ಬರುವ ಚಿನ್ನಪ್ಪನಹಳ್ಳಿ ಗ್ರಾಮ, ದೊಡ್ಡಕುರುಬರಹಳ್ಳಿ ಗ್ರಾಮ, ತಟ್ಟಹಳ್ಳಿ, ಮಿಂಚನಹಳ್ಳಿ ಗ್ರಾಮಗಲ್ಲಿ ಗಸ್ತು ಮಾಡಿಕೊಂಡು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ಬೋಗೇನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಯರ್ರಲಕ್ಕೇನಹಳ್ಳಿ ಗ್ರಾಮದ ಸಾರ್ವಜನಿಕರು ತನಗೆ ಕರೆ ಮಾಡಿ ತಮ್ಮ ಗ್ರಾಮದಲ್ಲಿ ಕೊರೊನ ಪಾಸಿಟಿವ್ ಬಂದಿರುವ ಶ್ರೀಮತಿ ಆದಿಲಕ್ಷ್ಮಿ ಕೋಂ ಲಕ್ಷಣ ಪೊನ್ ನಂಬರ್:9249522863 ರವರು ದಿನಾಂಕ:31/08/2020 ರಂದು ಕೊರೊನ ಪಾಸಿಟಿವ್ ಬಂದಿದ್ದು ಸದರಿಯವರು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡು ತಮ್ಮ ಗ್ರಾಮಕ್ಕೆ ಬಂದಿದ್ದು ಸದರಿಯವರನ್ನು ಅವರ ಮನೆಯಲ್ಲಿ 14 ದಿನ ಹೊಂ ಕ್ವರೈಂಟೈನ್ ಮಾಡಿರುತ್ತಾರೆ, ಆದರೆ ಸದರಿಯವರು ಹೋಂ ಕ್ವಾರೈಂಟನ್ ನಲ್ಲಿರದೇ ತಮ್ಮ ಗ್ರಾಮದಲ್ಲಿ ಎಲ್ಲೇಂದರೇ ಅಲ್ಲಿ ಓಡಾಡುತ್ತಿದ್ದಾರೆ, ಎಂದು ತಿಳಿಸಿದರು ನಂತರ ತಾನು ಈ ದಿನ ಮದ್ಯಹ್ನ 3.00 ಗಂಟೆಗೆ ಯರ್ರಲಕ್ಕೇನಹಳ್ಳಿ ಗ್ರಾಮಕ್ಕೆ ಹೋಗಿ ಸದರಿ ಆಸಾಮಿಯಾದ ಶ್ರೀಮತಿ ಆದಿಲಕ್ಷ್ಮಿ ರವರನ್ನು ಅವರ ಮನೆಯಲ್ಲಿ ಚೆಕ್ ಮಾಡಲಾಗಿ ಸದರಿಯವರು ಹೋಂ ಕ್ವಾರೈಂಟನ್ ನಲ್ಲಿ ಇರುವುದಿಲ್ಲ ಸದರಿ ಆಸಾಮಿಯನ್ನು ನಿಗದಿತ ಅವಧಿಯವರೆಗೆ ಹೋಂ ಕ್ವಾರೈಂಟನ್ ನಲ್ಲಿರಲು ತಿಳಿಸಿದ್ದರೂ ಸಹ ಮೇಲ್ಕಂಡ ಆಸಾಮಿಯು ಹೋಂ ಕ್ವಾರೈಂಟನ್ ನಲ್ಲಿ ಇರದೇ ಸಾರ್ವಜನಿಕರಿಗೆ ಕೊವಿಡ್-19 ಸಾಂಕ್ರಮಿಕ ರೋಗವು ಹರಡುವ ಬಗ್ಗೆ ಗೊತ್ತಿದ್ದರು ಸಹ  ನಿರ್ಲಕ್ಷ್ಯತನ  ಮಾಡಿರುತ್ತಾನೆ. ಆದ್ದರಿಂದ ಮೇಲ್ಕಂಡ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.152/2020 ಕಲಂ. 15(ಎ). 32(3) ಕೆ.ಇ ಆಕ್ಟ್:-

          ದಿನಾಂಕ: 11/09/2020 ರಂದು ಮದ್ಯಾಹ್ನ 01-30 ಗಂಟೆಗೆ ಘನ ನ್ಯಾಯಾಲಯದಿಂದ ಸಿ.ಪಿ.ಸಿ-507 ರವರು ಎನ್.ಸಿ. ಆರ್ 336/2020 ರಲ್ಲಿ ಕ್ರಿಮಿನಲ್ ಕೇಸನ್ನು ದಾಖಲು ಮಾಡಲು ನ್ಯಾಯಾಲಯದಿಂದ  ಅನುಮತಿಯನ್ನು ಪಡೆದು ಹಾಜರ ಪಡಿಸಿದ್ದನ್ನು ಪಡೆದುಕೊಂಡಿದರ ಸಾರಾಂಶವೆನೆಂದರೆ ದಿನಾಂಕ:10/09/2020 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಎಂ.ಎನ್ ಆದ ತಾನು ಈ ಮೂಲಕ ನಿಮಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ:10-09-2020 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, ಠಾಣಾ ಸಿಬ್ಬಂದಿ ಸಿ,ಪಿ,ಸಿ-507 ಹನುಮಂತರಾಯಪ್ಪ ರವರು ತನಗೆ ಪೋನ್ ಮಾಡಿ ಗುಡಿಬಂಡೆ ತಾಲೂಕು ಬ್ರಾಹ್ಮಣರಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ದೊಡ್ಡ ಮುನಿಯಪ್ಪ,   ರವರ ಮನೆಯ ಮುಂಭಾಗದಲ್ಲಿರುವ ರಸ್ತೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-84 ಮುನಿರಾಜು ರವರನ್ನು ಕರೆದುಕೊಂಡು ಸರ್ಕಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎಚ್,ಸಿ-43 ವೆಂಕಟಚಲ ರವರೊಂದಿಗೆ ಬ್ರಾಹ್ಮಣರಹಳ್ಳಿ ಗ್ರಾಮಕ್ಕೆ ಸಂಜೆ 4-00 ಗಂಟೆ ಸಮಯಕ್ಕೆ ಹೋಗಿ ಮಾಹಿತಿ ನೀಡಿದ ಸಿಬ್ಬಂದಿಯನ್ನು  ಕರೆದುಕೊಂಡು ಸಂಜೆ 4-05 ಗಂಟೆಯಲ್ಲಿ ಗ್ರಾಮಕ್ಕೆ ಹೋಗಿ ಸರ್ಕಾರಿ ಶಾಲೆಯ ಮುಂದೆ ಇದ್ದ ಪಂಚರನ್ನು ಬರಮಾಡಿಕೊಂಡು ಪಂಚರಿಗೆ ಮಾಹಿತಿಯನ್ನು ತಿಳಿಸಿದ್ದು ದಾಳಿಗೆ ಒಪ್ಪಿಕೊಂಡಿರುತ್ತಾರೆ. ಪಂಚರೊಂದಿಗೆ ಬ್ರಹ್ಮಾಣರಹಳ್ಳಿ ಗ್ರಾಮದ ನರಸಿಂಹಮೂರ್ತಿ ರವರ ಮನೆಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಸಂಜೆ 4-15 ಗಂಟೆಗೆ ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ನರಸಿಂಹಮೂರ್ತಿ ಬಿನ್ ದೊಡ್ಡ ಮುನಿಯಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ: ಬ್ರಾಹ್ಮಾಣರಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು, ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 14 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಂ.ಎಲ್, ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 02 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 01 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 01 ಲೀಟರ್ 260 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*10=491.82/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 4-30 ಗಂಟೆಯಿಂದ 5-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-30 ಗಂಟೆಯಲ್ಲಿ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 6-15 ಗಂಟೆಗೆ ಠಾಣಾಧಿಕಾರಿಗಳಿಗೆ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.102/2020 ಕಲಂ. 143,144,147,148,323,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ 11-09-2020 ರಂದು ಮದ್ಯಾಹ್ನ 01.15 ಗಂಟೆಗೆ ಪಿರ್ಯಾಧಿದಾರರಾದ ಮುನಿಲಕ್ಷ್ಮಮ್ಮ ಕೋಂ ನರಸಿಂಹಪ್ಪ, 45 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಚೊಕ್ಕನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 10-09-2020 ರಂದು ರಾತ್ರಿ 09.00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ತಮ್ಮ ಜಾತಿಗೆ ಸೇರಿದ 1) ನಾರೆಪ್ಪ ಬಿನ್ ಪೆದ್ದಕದಿರಪ್ಪಗಾರಿ ವೆಂಕಟರಾಯಪ್ಪ, 2) ನರಸಿಂಹಪ್ಪ ಬಿನ್ ವೆಂಕಟನರಸಪ್ಪ, 3) ಆಂಜಿ ಬಿನ್ ವೆಂಕಟರಾಯಪ್ಪ, 4) ಈರಪ್ಪ ಬಿನ್ ವೆಂಕಟರಾಯಪ್ಪ, 5) ಕಳಾವತಮ್ಮ ಕೋಂ ನಾರೆಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಮಾರಕಾಸ್ತ್ರಗಳಾದ ಮಚ್ಚು, ದೊಣ್ಣೆ, ರಾಡ್ ಗಳನ್ನು  ಹಿಡಿದುಕೊಂಡು ಬಂದು ದೌರ್ಜನ್ಯವಾಗಿ ತಮ್ಮ ಮನೆ ಬಳಿ ಬಂದು ಮನೆಬಾಗಿಲುಗೆ ಹೊಡೆದು “ಹೇ ಲೋಫರ್ ಮುಂಡೆ, ಸೂಳೆ ಮುಂಡೆ,   ಎಂದು ಅವಾಚ್ಯವಾಗಿ ಬೈದು ತನ್ನನ್ನು ಎಳೆದಾಡಿ ಆ ಜಮೀನಿನ ಒಳಗೆ ಬಂದರೆ ನಿಮ್ಮ ಮನೆಗೆ ಸೀಮೇಎಣ್ಣೆ, ಪೆಟ್ರೋಲ್ ಸುರಿದು ಸುಟ್ಟು ಬೂದಿ ಮಾಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿ ಕಾಲಿನಿಂದ ಒದ್ದು, ನೀವೇನಾದರೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ಇದೇ ಮಾರಾಕಾಸ್ತ್ರಗಳಿಂದ ಕೊಲೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ದೌರ್ಜನ್ಯ ಮಾಡುತ್ತಿದ್ದು, ಸದರಿಯವರ ಮೇಲೆ  ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.58/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ 11-09-2020 ರಂದು ಮದ್ಯಾಹ್ನ 13-15 ಗಂಟೆಗೆ ಆ.ಉ.ನಿ ಸಾಹೇಬರು ದಾಳಿಯಿಂದ ಆರೋಫಿ ಮಾಲು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶವೇನೆಂದರೆ, ಸಾಹೇಬರು ಇಧೇ ದಿನ ಬೆಳಗ್ಗೆ 11-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಅವರಿಗೆ ಬಂದ ಖಚಿತವಾದ ಮಾಹಿತಿ ಎನೆಂದರೆ   ನಶಿಕುಂಟೆ ಗ್ರಾಮದ ಗೇಟಿನ ಬಸ್ ಶೆಲ್ಟರಿನ ಬಳಿ  ಯಾರೋ ಒಬ್ಬ ಆಸಾಮಿ ಅಕ್ರಮವಾಗಿ  ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ಠಾಣೆಯಲ್ಲಿದ್ದ ಸಿಬ್ಬಂದಿಯಾದ ಕರಿಬಸಪ್ಪ ಮತ್ತು  ಶೇಖಪ್ಪ ಗುರಿಕಾರ ಹಾಗೂ ಮಧುರವರೊಂದಿಗೆ  ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-296 ರಲ್ಲಿ ಚಾಲಕ ಪಾರೂಖ್ ರವರೊಂದಿಗೆ  ಹೊರಟು ಕಣಿವೆನಾರಾಯಣಪುರ ಗ್ರಾಮದ ಗೇಟಿನ ಬಳಿ ಇದ್ದಂತಹ  ಪಂಚರನ್ನು ಬರಮಾಡಿಕೊಂಡು  ಅವರುಗಳ ಸಮಕ್ಷಮದಲ್ಲಿ ಬೆಳಗ್ಗೆ 11-30 ಗಂಟೆಗೆ  ನಶಿಕುಂಟೆ ಗ್ರಾಮದ ಗೇಟಿನ ಬಳಿ ಇದ್ದಂತಹ ಬಸ್ ಶೆಲ್ಟರಿನ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯಪಾನ ಸೇವನೆ ಮಾಡುತ್ತಿದ್ದ ಜನರು  ಕುಡಿಯುತ್ತಿದ್ದ  ಲೋಟಗಳನ್ನು  ಬಿಸಾಡಿ ಓಡಿ ಹೋಗಿದ್ದು ಬಸ್ ಶೆಲ್ಟರಿನ ಬಳಿ ಒಬ್ಬ ಆಸಾಮಿಯಿದ್ದು  ಅವನ ಹೆಸರು ವಿಳಾಸವನ್ನು ಕೇಳಲಾಗಿ  ಆನಂದ  ಬಿನ್ ಲೇಟ್ ನಾರಾಯಣಪ್ಪ 46 ವರ್ಷ ವಕ್ಕಲಿಗರು   ಜಿರಾಯ್ತಿ ಮೆಲೆಕೋಟೆ  ಗ್ರಾಮ ,ತೂಬಗೆರೆ  ಹೋಬಳಿ ದೊಡ್ಡಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದ ಇವನ ಪಕ್ಕದಲ್ಲಿಯೆ   ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 180 ML ಸಾಮರ್ಥದ  MC RUM ಯ  ಹೆಸರಿನ  10  ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ  106/-ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1 ಲೀಟರ್ 800 ML ಮದ್ಯವಿದ್ದು ಒಟ್ಟು ಬೆಲೆ 1060 ರೂ ಆಗುತ್ತದೆ.,2) ಸ್ಥಳದಲ್ಲಿ  ಸಾಮರ್ಥದ  MC RUM  ಯ ಹೆಸರಿನ ಮದ್ಯದ 5 ಖಾಲಿ ಟೆಟ್ರಾ ಪ್ಯಾಕೇಟುಗಳು 3) 5 ಖಾಲಿ ಪ್ಲಾಸ್ಟಿಕ್ ಲೋಟಗಳು ಇರುತ್ತವೆ, ಇವುಗಳನ್ನು ತನ್ನ  ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಸ್ಥಳವಾಕಾಶ ಮಾಡಿಕೊಟ್ಟಿರುವ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು   ಸ್ಥಳದಲ್ಲಿದ್ದ ಆನಂದನನ್ನು  ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ  ಬೆಳಗ್ಗೆ 11-40 ಗಂಟೆಯಿಂದ 12-40 ಗಂಟೆ ವರೆವಿಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಶೆಲ್ಟರಿನಲ್ಲಿದ್ದ  ಆನಂದ  ಮತ್ತು  ಸಿಕ್ಕ ಮಾಲುಗಳನ್ನು ನಮ್ಮ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಫಿಯ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ ಮೇರೆಗೆ ಈ ಪ್ರವವರದಿ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.250/2020 ಕಲಂ. 323,324,504,506 ಐ.ಪಿ.ಸಿ:-

          ದಿನಾಂಕ:10-09-2020 ರಂದು  ರಾತ್ರಿ 9-00 ಗಂಟೆಯಲ್ಲಿ  ಫಿರ್ಯಾದಿದಾರರಾದ ಶ್ರೀ. ನಾಗರಾಜ ಬಿನ್ ಮಾರಪ್ಪ,33 ವರ್ಷ,ವಕ್ಕಲಿಗರು, ಜಿರಾಯ್ತಿ,ವಾಸ:ಯಣ್ಣೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ತಮ್ಮ ತಂದೆ ಮಾರಪ್ಪ ತಾಯಿ : ಪಿಳ್ಳಮ್ಮ ಇವರಿಗೆ ತಾವು 5 ಜನ ಮಕ್ಕಳು 1ನೇ ನಾರಾಯಣಮ್ಮ 2 ನೇ ಸುಭ್ರಮಣಿ, 3ನೇ ಸೊಣ್ಣಪ್ಪ,4ನೇ ಚಂದ್ರಕಲಾ ಮತ್ತು 5ನೇ ನಾಗರಾಜ ಆದ ತಾನು ಆಗಿದ್ದು ಎಲ್ಲರಿಗೂ ಮದುವೆಗಳಾಗಿರುತ್ತೆ ತನಗೆ ಇನ್ನೂ ಮದುವೆಯಾಗಿಲ್ಲ ತಮ್ಮ ಗ್ರಾಮದ ಬಳಿ ತಮ್ಮ ತಾಯಿಯಾದ ಶ್ರೀಮತಿ ಪಿಳ್ಳಮ್ಮ ರವರ ಹೆಸರಿನಲ್ಲಿ ಯಣ್ಣೂರು ಗ್ರಾಮದ  ಸರ್ವೆ ನಂ. 28/3 ರ 1-04 ಗುಂಟೆ, 28/ಪಿ11 ರಲ್ಲಿ 2 ಎಕರೆ, 8/ಪಿ22 ರಲ್ಲಿ ಒಂದು ಎಕರೆ ಜಮೀನಿಗಳು ಇರುತ್ತೆ. ಮತ್ತು ತಮ್ಮ ತಂದೆಯ ಹೆಸರಿನಲ್ಲಿ ಹೇಮಾರ್ಲಹಳ್ಳಿ ಗ್ರಾಮದ ಸರ್ವೆ ನಂ. 33/1 ರಲ್ಲಿ 0.16 ಗುಂಟೆ ಮತ್ತು 33/2 ರಲ್ಲಿ 0.36 ಗುಂಟೆ ಜಮೀನಿಗಳಿರುತ್ತೆ. ಎಲ್ಲಾ ಜಮೀನು ತಾವು ಗಂಡು ಮಕ್ಕಳು ಮೂರು ಭಾಗ ಮಾಡಿಕೊಂಡು ಜಿರಾಯ್ತಿ ಮಾಡಿಕೊಂಡಿರುತ್ತೇವೆ. 8/ಪಿ22 ರಲ್ಲಿ ಒಂದು ಎಕರೆ ಜಮೀನಿನಲ್ಲಿ ತಮ್ಮ ತಂದೆ ಕಟ್ಟಿರುವ ಮೂರು ಮನೆಗಳಿದ್ದು  ಸದರಿ ಮನೆಗಳನ್ನು ತಾವು ಮೂರು ಜನ ಭಾಗಗಳನ್ನು ಮಾಡಿಕೊಂಡಿದ್ದು, ಹೇಮಾರ್ಲಹಳ್ಳಿ ಗ್ರಾಮದ ಸರ್ವೆ ನಂ. 17/5 ರಲ್ಲಿ 0.5 ಗುಂಟೆ ಜಮೀನು ತನ್ನ ತಾತನಾದ  ಚನ್ನರಾಯಪ್ಪ ಬಿನ್ ಮುತ್ತಪ್ಪ ರವರ ಹೆಸರಿನಲ್ಲಿದ್ದು ಸದರಿ ಜಮೀನನ್ನು ತನ್ನ ತಂದೆ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡು ನಂತರ ಸದರಿ ಜಮೀನನ್ನು ತನ್ನ ತಂದೆ ತನಗೆ ಮದುವೆಗೆ ಮತ್ತು ಮನೆ ಕಟ್ಟಿಕೊಳ್ಳುವ ವಿಚಾರವಾಗಿ ತನ್ನ ಹೆಸರಿಗೆ ಖಾತೆ ಮಾಡಿಸಿರುತ್ತಾನೆ. ಆಗ ತನ್ನ ಅಣ್ಣನಾದ ಸುಭ್ರಮಣಿ ಸದರಿ ಜಮೀನನಲ್ಲಿ  ತನಗೆ ಭಾಗ ಬರಬೇಕೆಂದು ಆಗಾಗ ತನ್ನ ಮೇಲೆ ಮತ್ತು ತನ್ನ ತಂದೆ-ತಾಯಿಯ ಮೇಲೆ ಗಲಾಟೆ ಮಾಡುತ್ತಿದ್ದನು. ಸದರಿ ಜಮೀನಿಗೆ ಸಂಬಂದಿಸಿದಂತೆ ಎಲ್ಲಾ ದಾಖಲಾತಿಗಳು ತನ್ನ ಹೆಸರಿನಲ್ಲಿರುತ್ತೆ ತನ್ನ ಅಣ್ಣ ಸುಭ್ರಮಣಿ ತನ್ನ ಮೇಲೆ ಮತ್ತು ತನ್ನ ತಂದೆ-ತಾಯಿಯ ಮೇಲೆ ವಿನಾಕಾರಣ ಗಲಾಟೆ ಮಾಡುತ್ತಿದ್ದರಿಂದ ತಾನು ತನ್ನ ಭಾಗಕ್ಕೆ ಬಂದಿದ್ದ ಮನೆಯನ್ನು ಬಿಟ್ಟು ತಮ್ಮ ಗ್ರಾಮದ ಶ್ರೀನಿವಾಸ ಬಿನ್ ರಾಮಯ್ಯ ರವರ ಮನೆಯನ್ನು ಬಾಡಿಗೆಗೆ ಪಡೆದುಕೊಂಡು ಅಲ್ಲಿಯೇ ತನ್ನ ತಂದೆ-ತಾಯಿಯೊಂದಿಗೆ ವಾಸವಾಗಿರುತ್ತೇನೆ ಅಗಾಗ ಅಲ್ಲಿಗೂ ಸಹ ಬಂದು ಗಲಾಟೆ ಮಾಡುತ್ತಿದ್ದನು.ಈಗಿರುವಲ್ಲಿ ದಿನಾಂಕ:29-08-2020 ರಂದು ರಾತ್ರಿ 8.00 ಗಂಟೆಯಲ್ಲಿ ತಾನು ವಾಸವಾಗಿರುವ ಮನೆಯ ಹತ್ತಿರ ಇದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ತನ್ನ ಅಣ್ಣ ಸುಭ್ರಮಣಿ, ಅತ್ತೆಗೆ ಸುಜಾತ ರವರುಗಳು ಸರ್ವೆ ನಂ. 17/5 ಜಮೀನಿನ ವಿಚಾರದಲ್ಲಿಯೇ ತನ್ನ ಮೇಲೆ ಗಲಾಟೆ ಮಾಡಿ  ಅ ಪೈಕಿ  ತನ್ನ ಅಣ್ಣ ಸುಭ್ರಮಣಿ ಏ ಲೋಪರ್ ನನ್ನ ಮಗನೇ ಅ ಜಮೀನಿನಲ್ಲಿ ನನಗೆ ಭಾಗ ಕೊಡು ಎಂದು ಕೆಟ್ಟ ಮಾತುಗಳಿಂದ ಬೈದು ಅಲ್ಲಿಯೇ ಇದ್ದ ಯಾವುದೋ ಒಂದು ದೊಣೆಯನ್ನು ತೆಗೆದುಕೊಂಡು ತನ್ನ ಕೈಗಳಿಗೆ, ಬೆನ್ನಿಗೆ, ಹೊಟ್ಟೆಗೆ ಬಲವಾಗಿ ಹೊಡೆದು ನೋವಿನ ಗಾಯವುಂಟುಮಾಡಿರುತ್ತಾನೆ. ತನ್ನನ್ನು ಬಿಡಿಸಿಕೊಳ್ಳಲು ಬಂದ ತನ್ನ ತಂದೆ ಮಾರಪ್ಪ ಮತ್ತು ತಾಯಿ ಪಿಳ್ಳಮ್ಮ ರವರ ಮೇಲೆ ಸಹ ಅದೇ ದೊಣ್ಣೆಯಿಂದ ಹಲ್ಲೆ ಮಾಡಿ ನೋವಿನ ಗಾಯವುಂಟು ಮಾಡಿರುತ್ತಾನೆ. ತನ್ನ ಅತ್ತಿಗೆ ಸುಜಾತಮ್ಮ ತನ್ನ  ತಾಯಿಯನ್ನು ಕೆಟ್ಟ ಮಾತುಗಳಿಂದ ಬೈದು ಕೈಗಳಿಂದ ಹಲ್ಲೆ ಮಾಡಿರುತ್ತಾಳೆ. ಸದರಿ ಜಮೀನಲ್ಲಿ ನನಗೆ ಸಹ ಭಾಗ ಬರಬೇಕು ಜಮೀನಿನ ವಿಚಾರಕ್ಕೆ ಬಂದರೆ ನಿನ್ನನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಆ ಸಮಯದಲ್ಲಿ ತಮ್ಮ ಗ್ರಾಮದ ಗಿರೀಶ ಬಿನ್ ಬಚ್ಚಣ್ಣ ರವರು ಗಲಾಟೆಯನ್ನು ಬಿಡಿಸಿ ತನ್ನ ಅಣ್ಣನಿಗೆ ಬುದ್ದಿವಾದ ಹೇಳಿರುತ್ತಾನೆ. ತಮಗೆ ಮೂಗೇಟುಗಳಾಗಿದ್ದರಿಂದ ತಾವು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡದುಕೊಂಡಿರುವುದಿಲ್ಲ. ಈ ಹಿಂದೆಯೂ ಸಹ ತಮ್ಮ ಮೇಲೆ ಹಲವಾರು ಬಾರಿ ಹಲ್ಲೆ ಮಾಡಿದ್ದು ತಮ್ಮ ಗ್ರಾಮದಲ್ಲಿ ಈ ಬಗ್ಗೆ ನ್ಯಾಯ ಪಂಚಾಯ್ತಿ ಮಾಡುವುದಾಗಿ ಹೇಳಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ.ಸಂ 250/2020 ಕಲಂ 323,324,504,506 ರೆ/ವಿ 34 ಐ.ಪಿ.ಸಿ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.