ದಿನಾಂಕ :11/08/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.188/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿ: 10-08-2020 ರಂದು ಮದ್ಯಾಹ್ನ 13:00 ಗಂಟೆಗೆ ಪಿರ್ಯಾಧಿದಾರರಾದ ಜಿ.ನರೇಶ ಬಿನ್ ಗಂಗಪ್ಪ, 24 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಕೊಂಡರೆಡ್ಡಿಪಲ್ಲಿ ಗ್ರಾಮ,  ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ -ದಿನಾಂಕ: 08-08-2020 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ನಾನು ಮತ್ತು ನಮ್ಮ ಗ್ರಾಮದ ವಾಸಿಗಳಾದ ಗಂಗಾಧರ ಬಿನ್ ನರಸಿಂಹಪ್ಪ, 20 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ಮತ್ತು ನಾರೇಪಲ್ಲಿ ಗ್ರಾಮದ ವಾಸಿ ಶಾನು ರವರುಗಳು ಬಾಗೇಪಲ್ಲಿ ಪುರದ ಟಿಬಿ ಕ್ರಾಸ್ ಬಳಿಯಿರುವ ಬಾಬಾ ಕಾಂಡಿಮೆಂಟ್ಸಿ ಮುಂಭಾಗದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಟೀ ಕುಡಿಯುತ್ತಿದ್ದಾಗ ನಮ್ಮ ಗ್ರಾಮದ ವಾಸಿಯಾದ ಲೋಕೇಶ ಮತ್ತು ಬೆಂಗಳೂರಿನ ಬಾಣಸವಾಡಿಯ ವಾಸಿ ಅರುಣ್ ರವರುಗಳು ಬಂದರು.  ಆಗ ನಾನು ಲೊಕೇಶನಿಗೆ ನನ್ನ ಬಳಿ ತೆಗೆದುಕೊಂಡಿರುವ ಸಾಲದ ಹಣವನ್ನು ಕೊಡುವಂತೆ ಕೇಳಿದೆನು. ಅದಕ್ಕೆ ಲೊಕೇಶನು ಯಾವ ಹಣ ಎಂದು ಕೇಳಿದನು. ಅದಕ್ಕೆ ನಾನು ನೀನು ಒಂದು ವಾರದ ಹಿಂದೆ ನನ್ನ ಬಳಿ 50/- ರೂಗಳನ್ನು ಸಾಲವಾಗಿ ತೆಗೆದುಕೊಂಡಿದ್ದೆ. ನನ್ನ 50 ರೂಪಾಯಿಗಳನ್ನು ನನಗೆ ನೀಡುವಂತೆ ಕೇಳಿದೆನು. ಅದಕ್ಕೆ ಲೊಕೇಶನು ಆಯ್ತು ಕೊಡುತ್ತೇನೆಂದು ಹೇಳಿದೆನು. ಆಗ ಲೊಕೇಶನ ಸ್ನೇಹಿತನಾದ ಅರುಣನು ನನ್ನನ್ನು ಕುರಿತು ಏಮನ್ನ ನನ್ನು ಕೊಟ್ಟಾಲ ಅನಿ ಅನುಕುಂಡಾವಂಟ ಎಂದು ಕೇಳಿದನು. ಆಗ ನಾನು ಅರುಣನನ್ನು ಕುರಿತು ನೆನು ಏಮಿಟಿಕಿ ನಿನ್ನಿ ಕೊಟ್ಟಾಲಿ ಮನ ಇದ್ದರಿ ಮದ್ಯ ಎ ಗೊಡವಲು ಲೇವು ಕದ ಎಂದು ಹೇಳಿದೆನು. ಆಗ ಅರುಣನು ಏಕಾಏಕಿ ತಲೆಯಿಂದ ನನ್ನ ಮುಖಕ್ಕೆ ಡಿಕ್ಕಿ ಹೊಡೆದನು. ಆಗ ಅರುಣ್ ಮತ್ತು ಲೊಕೇಶ್ ರವರುಗಳು ಅಲ್ಲಿಂದ ಹೊರಟು ಹೋದರು. ನಾನು ಇಲ್ಲಿಯೇ ಇದ್ದೆ ಆಗ ಸುಮಾರು ಐದು ನಿಮಿಷಗಳ ನಂತರ ನಮ್ಮ ಗ್ರಾಮದ ಶಿವಾ ಬಿನ್ ವೆಂಕಟರಾಯಪ್ಪ ಮತ್ತು ಬಾಣಸವಾಡಿಯ ಅರುಣ ರವರು ಬಂದು ‘ ನಿಯಮ್ಮ ನಿನ್ನಿ ಈ ದಿನಂ ಇಡಿಷೆಲೇದು ನಾ ಕೊಡಕಾ ನಿನ್ನಿ ಚೆಂಪೆಸ್ತಾಂ ರಾ’ ಎಂದು ಶಿವಾ ನನ್ನನ್ನು ಕೈಗಳಿಂದ ಮೈ ಮೇಲೆ ಹೊಡೆದು, ನನ್ನನ್ನು ಹಿಡಿದುಕೊಂಡನು, ಆಗ ಅರುಣನು ಕೈಯಲ್ಲಿದ್ದ ಮಚ್ಚಿನಿಂದ ಎಡಕೈಗೆ, ಎಡಕೈನ ತೋರುಬೆರಳಿಗೆ ಹಾಗೂ ಬಲಕೈನ ಹಸ್ತಕ್ಕೆ ಹೊಡೆದು ರಕ್ತಗಾಯಪಡಿಸಿದನು. ಆಗ ನನ್ನ ಜೊತೆಯಲ್ಲಿದ್ದ ಗಂಗಾಧರ ಮತ್ತು ಶಾನು ರವರುಗಳು ಬಂದು ಜಗಳವನ್ನು ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಉಪಚರಿಸಿ ಯಾವುದೋ ಒಂದು ಆಟೋದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಈ ವಿಚಾರದಲ್ಲಿ ನಮ್ಮ ಗ್ರಾಮದ ಹಿರಿಯರು ರಾಜಿ ಪಂಚಾಯ್ತಿಯನ್ನು ಮಾಡುತ್ತೇವೆಂದು ಹೇಳಿದ್ದು, ರಾಜಿ ಪಂಚಾಯ್ತಿ ಮಾಡದೇ ಇದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡಿರುತ್ತೇನೆ. ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ, ಮಚ್ಚಿನಿಂದ ನನ್ನ ಕೈಗಳಿಗೆ ಹೊಡೆದು ಹಲ್ಲೆ ಮಾಡಿ ಪ್ರಾಣ ಬೆದರಿಕೆಯನ್ನು ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮಜರುಗಿಸಲು ಕೋರುತ್ತೇನೆ, ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.189/2020 ಕಲಂ. 279,337,304(A) ಐ.ಪಿ.ಸಿ :-

          ದಿ: 10-08-2020 ರಂದು 18:30 ಗಂಟೆಗೆ ಪಿರ್ಯಾಧಿದಾರರಾದ ಮುನೇಗೌಡ ಡಿ. ಕೆ. ಬಿನ್ ಕೃಷ್ಣಪ್ಪ, 35 ವರ್ಷ, ಬೋವಿ ಜನಾಂಗ, ವ್ಯವಹಾರ ವೃತ್ತಿ, ದಂಡುದಾಸಕೊಡಗೇಹಳ್ಳಿ ಗ್ರಾಮ, ದೊಡ್ಡಬಳ್ಳಾಪುರ ತಾಲ್ಲೂಕು ಠಾಣೆಗೆ ಹಾಜರಾಗಿ ನೀಡಿದ ದೂರನ ಸಾರಾಂಶ –  ನನ್ನ ಬಾವಮೈದನಾದ ವಿನೋದ ಬಿನ್ ಮಲ್ಲಪ್ಪ, 22 ವರ್ಷ, ದೊಡ್ಡತಮ್ಮನಹಳ್ಳಿ ಗ್ರಾಮ, ದಿಬ್ಬೂರು ಪಂಚಾಯ್ತಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಮತ್ತು ನಮ್ಮ ಸಂಬಂಧಿಕನಾದ ರಾಜಪ್ಪ ಬಿನ್ ಲೇಟ್ ನ್ಯಾತಪ್ಪ, 42 ವರ್ಷ, ಶೆಟ್ಟಿವಾರಹಳ್ಳಿ, ದಿಬ್ಬೂರು ಪಂಚಾಯ್ತಿ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ನಮ್ಮೊಂದಿಗೆ ಇದ್ದರು.  ವಿನೋದ್ ನು ನನ್ನೊಂದಿಗೆ ರೀಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದನು. ದಿನಾಂಕ: 10-08-2020 ರಂದು ಬೆಳಗ್ಗೆ ಸುಮಾರು 11:00 ಗಂಟೆಗೆ ಇಬ್ಬರೂ ನನ್ನ ಬಳಿಗೆ ಬಂದಿದ್ದು, ರಾಜಪ್ಪನು ತನ್ನ ತಂಗಿಯನ್ನು ಬಾಗೇಪಲ್ಲಿ ತಾಲ್ಲೂಕು, ಯಲಂಪಲ್ಲಿ ಗ್ರಾಮದ ಬಳಿ ಇರುವ ನಕ್ಕಲಪಲ್ಲಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು, ನೋಡಿಕೊಂಡು ಬರುತ್ತೇವೆಂದು ಹೇಳಿ, ನನ್ನ ದ್ವಿಚಕ್ರ ವಾಹನ ಸಂಖ್ಯೆ: ಕೆಎ-43-ವಿ-9978 ಹಿರೋ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನದಲ್ಲಿ ಬಂದಿರುತ್ತಾರೆ. ನಂತರ ಮದ್ಯಾಹ್ನ ಸುಮಾರು 3:00 ಗಂಟೆಯಲ್ಲಿ ಮಿಟ್ಟೇಮರಿ ಗ್ರಾಮದ ಗಾಯಿತ್ರಿ [ ಸ್ವಂತ ಗ್ರಾಮ ದೊಡ್ಡತಮ್ಮನಹಳ್ಳಿ] ರವರು ದೊಡ್ಡತಮ್ಮನಹಳ್ಳಿಯಲ್ಲಿರುವ ತನ್ನ ತಮ್ಮ ಅಶೋಕ್ ರವರಿಗೆ ಕರೆ ಮಾಡಿ ವಿನೋದ ಮತ್ತು ರಾಜಪ್ಪ ರವರಿಗೆ ಬಾಗೇಪಲ್ಲಿ ತಾಲ್ಲೂಕು, ಮಿಟ್ಟೇಮರಿ ಗ್ರಾಮದ ಬಳಿ ಮದ್ಯಾಹ್ನ 2:45 ಗಂಟೆಯಲ್ಲಿ ಜೂಳಪಾಳ್ಯ ಕ್ರಾಸ್  ರಸ್ತೆಯಲ್ಲಿ ಅಪಘಾತವಾಗಿ ವಿನೋದ್ ರವರು ಮೃತಪಟ್ಟಿರುವುದಾಗಿ, ರಾಜಪ್ಪ ರವರಿಗೆ ರಕ್ತಗಾಯಗಳಾಗಿದ್ದು, ಬಾಗೇಪಲ್ಲಿ ಸಕರ್ಾರಿ ಆಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಸಾಗಿಸಿರುವುದಾಗಿ ತಿಳಿಸಿದ್ದು, ಸದರಿ ವಿಚಾರವನ್ನ ಅಶೋಕ್ ರವರು ನನಗೆ ಬಂದು ಮಾಹಿತಿ ನೀಡಿದರು. ನಾವುಗಳು ಇದೇ ದಿನ ಸಂಜೆ ಸುಮಾರು 4:30 ಗಂಟೆಗೆ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿನೋದ್ನಿಗೆ ಬಲಗೈಗೆ ಮತ್ತು ಬಲಗಾಲಿಗೆ ಮತ್ತು ತಲೆಗೆ ತೀವ್ರವಾಗಿ ರಕ್ತಗಾಯಗಳಾಗಿದ್ದು ಮೃತಪಟ್ಟಿರುತ್ತಾನೆ.  ರಾಜಪ್ಪನಿಗೆ ಬಲಗಾಲಿಗೆ ಮತ್ತು ಬಲಗೈ ಬೆರಳುಗಳಿಗೆ ರಕ್ತಗಾಯಗಳಾಗಿರುತ್ತದೆ.  ವಿಷಯ ತಿಳಿಯಲಾಗಿ, ವಿನೋದ್ ರವರು ನನ್ನ ಬಾಬತ್ತು ದ್ವಿ ಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹಿಂಭಾಗದಲ್ಲಿ ರಾಜಪ್ಪ ರವರನ್ನು ಕುಳ್ಳರಿಸಿಕೊಂಡು ಬಾಗೇಪಲ್ಲಿ ತಾಲ್ಲೂಕು ನಕ್ಕಲಹಳ್ಳಿ ಗ್ರಾಮಕ್ಕೆ ಹೋಗಲು ದಿಬ್ಬೂರಹಳ್ಳಿ ಮಾರ್ಗವಾಗಿ ಚಿಂತಾಮಣಿ- ಬಾಗೇಪಲ್ಲಿ ರಸ್ತೆಯಲ್ಲಿ ಮಿಟ್ಟೇಮರಿ ಕಡೆಗೆ ಬರುತ್ತಿದ್ದಾಗ, ಜೂಳಪಾಳ್ಯ ಕ್ರಾಸ್ ಬಳಿ ಎದುರುಗಡೆಯಿಂದ ಅಂದರೆ ಬಾಗೇಪಲ್ಲಿ ಕಡೆಯಿಂದ ಎಪಿ-21-ಎಪಿ-9900 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಇವರಿಬ್ಬರೂ ಹೋಗುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರ  ಪರಿಣಾಮ ದ್ವಿಚಕ್ರ ಸಮೇತ ಇಬ್ಬರೂ ಕೆಳಗೆ ಬಿದ್ದು ಹೋಗಿದ್ದು, ವಿನೋದ್ ರವರಿಗೆ ತಲೆಗೆ, ಕಾಲುಗಳಿಗೆ, ಕೈಗಳಿಗೆ ತೀವ್ರ ತರಹದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ರಾಜಪ್ಪ ರವರಿಗೆ ಕಾಲುಗಳಿಗೆ ಮತ್ತು ಕೈಗಳಿಗೆ ಗಾಯಗಳಾಗಿದ್ದು, ತಕ್ಷಣ ಸಾರ್ವಜನಿಕರು ಗಾಯಾಳನ್ನು ಉಪಚರಿಸಿ, ಗಾಯಾಳು ರಾಜಪ್ಪನನ್ನು ಮತ್ತು ಮೃತ ವಿನೋದ್ ರವರನ್ನು  ಅಂಬುಲೆನ್ಸ್ನಲ್ಲಿ ಬಾಗೇಪಲ್ಲಿ ಸಕರ್ಾರಿ ಅಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಯಿತು. ಆದ್ದರಿಂದ ಎಪಿ-21-ಎಪಿ-9900 ಕಾರಿನ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ವಿನೋದ್ ಮತ್ತು ರಾಜಪ್ಪ ರವರು ಬರುತ್ತಿದ್ದ ಕೆಎ-43-ವಿ-9978 ಹಿರೋ ಸ್ಪ್ಲೆಂಡರ್ ಪ್ಲಸ್  ದ್ವಿ ಚಕ್ರ ವಾಹನಕ್ಕೆ  ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರ ಪರಿಣಾಮ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವಿನೋದ್ ರವರು ಮೃತಪಟ್ಟು ರಾಜಪ್ಪರವರಿಗೆ ರಕ್ತಗಾಯಗಳನ್ನು ಉಂಟು ಮಾಡಿದ್ದು, ಮೇಲ್ಕಂಡ ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ದೂರು.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.206/2020 ಕಲಂ. 427,506,504,324 ಐ.ಪಿ.ಸಿ :-

          ದಿನಾಂಕ:10/08/2020 ರಂದು ರಾತ್ರಿ 7-30 ಗಂಟೆಗೆ ಪಿರ್ಯಾದಿ ಶ್ರೀಮತಿ ಎಂ.ಲಕ್ಷ್ಮೀ ಕೋಂ ಬ್ರಹ್ಮರಾಜು, 38 ವರ್ಷ, ವಕ್ಕಲಿಗರು, ಸೋಮಶೆಟ್ಟಿಹಳ್ಳಿ, ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪಿರ್ಯಾದಿ ಹಾಗೂ ಗಂಡ ಬ್ರಹ್ಮರಾಜು ರವರು ಬೆಂಗಳೂರು ವಾಸಿ ನಾಗರಾಜು ರವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ತೋಟದಲ್ಲಿಯೇ ವಾಸವಾಗಿರುತ್ತಾರೆ. ಹೀಗಿರುವಲ್ಲಿ ಸೋಮಶೆಟ್ಟಿಹಳ್ಳಿ ಗ್ರಾಮದ ವಾಸಿ ದಿನೇಶ್ ಬಿನ್ ರಾಮಣ್ಣ ರವರು ಬಾಳೆಗೊನೆಗಳನ್ನು ಕೀಳಲು ಬಂದಾಗ ಪಿರ್ಯಾದಿದಾರರು ತಡೆದಾಗ ದಿನೇಶ್ ನಮ್ಮ ಇಷ್ಟ  ತೋಟ ನಿಮ್ಮದಲ್ಲ ಯಾರದೋ ತೋಟ ನಿಮಗೆ ಸಂಬಂಧವಿಲ್ಲ. ಸುಮ್ಮನೆ ಇರಬೇಕು ಇಲ್ಲವಾದರೆ ಈ ತೋಟವನ್ನೆ ನಾಶ ಮಾಡಿ ನಿಮ್ಮನ್ನು ಸಹ ಸುಮ್ಮನೆ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ದಿನಾಂಕ:04/08/2020 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ತೋಟದ ಗೇಟ್ ಹೊಡೆದು ಹಾಕಿ ತೋಟದ ಮನೆಯ ಮೇಲೆ ಕಲ್ಲು ಎಸೆದು ಮನೆಯ ಸಿಮೆಂಟ್ ಸೀಟು ಹೊಡೆದು ಹಾಕಿ ಪಿರ್ಯಾದಿದಾರರನ್ನು ಸಹ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಗಾಯ ಮಾಡಿರುತ್ತಾರೆಂದು ಹಾಗೂ ಪಿರ್ಯಾದಿದಾರರಿಗೆ ಪ್ರಾಣ ಬೆದರಿಕೆ ಇದ್ದು ದಿನೇಶ್ ಅವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.185/2020 ಕಲಂ. 279 ಐ.ಪಿ.ಸಿ :-

          ದಿನಾಂಕ: 10/08/2020 ರಂದು ಸಂಜೆ 4-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಕಂಠಆರ್ಯ ಬಿನ್ ಕಮಲ್ ಕಿಶೋರ್ ಎಂ ಎ, 28 ವರ್ಷ, ವೈಶ್ಯ ಜನಾಂಗ, ವ್ಯಾಪಾರ, ವಾಸ ಬ್ರಾಹ್ಮಣರ ಬೀದಿ ಕೋಲಾರ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ: 10/08/2020 ರಂದು ನಮ್ಮ ತಂದೆ ಕಮಲ್ ಕಿಶೋರ್ ಎಂ ಎ ರವರ ಬಾಬತ್ತು ಕೆಎ-07-ಎಂ-6251 ನೊಂದಣಿ ಸಂಖ್ಯೆಯ ಮಾರುತಿ ಸುಜುಕಿ ಸಿಯಾಜ್ ಕಾರಿನಲ್ಲಿ ನಮ್ಮ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಭರತ್ ಬಿನ್ ಚೌಡಪ್ಪ ರವರು ಹಾಗೂ ಚಾಲಕ ಚಂದ್ರ ಕೆ ಬಿನ್ ಕೃಷ್ಣಪ್ಪ ರವರು ಕಾರನ್ನು ಚಾಲನೆ ಮಾಡಿಕೊಂಡು ನಮ್ಮ ಅಜ್ಜಿ ಹೇಮಾವತಿ ಕೋಂ ಲೇಟ್ ಎಂ ಜಿ ಅಶ್ವತ್ಥ ರವರನ್ನು ಗೌರಿಬಿದನೂರಿನಲ್ಲಿ ಬಿಟ್ಟು, ಭರತ್ ಮತ್ತು ಚಂದ್ರ ಕೆ ರವರು ಸದರಿ ಕಾರಿನಲ್ಲಿ ವಾಪಸ್ ಕೋಲಾರಕ್ಕೆ ಬರಲು ಗೌರಿಬಿದನೂರು ಚಿಕ್ಕಬಳ್ಳಾಪುರ ಎನ್.ಎಚ್ 234 ರಸ್ತೆಯಲ್ಲಿ ಬರುತ್ತಿರುವಾಗ ಬಿಸಲಹಳ್ಳಿ ಗ್ರಾಮದ ಬಳಿ ಮದ್ಯಾಹ್ನ ಸುಮಾರು 12-45 ಗಂಟೆಯಲ್ಲಿ  ಕಾರಿನ ಚಾಲಕ ಚಂದ್ರ ಕೆ ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬಲಭಾಗದಲ್ಲಿರುವ ಹಳ್ಳಕ್ಕೆ ಬಿಳಿಸಿದ್ದರ ಪರಿಣಾಮ ಕಾರು ಪೂರ್ತಿ ಜಖಂಗೊಂಡು ಕಾರಿನಲ್ಲಿದ್ದ ಭರತ್ ರವರಿಗೆ ಹಾಗೂ ಕಾರಿನ ಚಾಲಕ ಚಂದ್ರು ರವರಿಗೆ ಯಾವುದೇ ರೀತಿಯ ಗಾಯಗಳಾಗದೇ ಇರುವುದಾಗಿ ವಿಚಾರ ತಿಳಿದು ನಾನು ಸಹಾ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಮುಂದಿನ ಕಾನೂನು ರೀತಿಯ ಕ್ರಮ ಜರುಗಿಸಿಕೊಡಬೇಕಾಗಿ ಕೋರಿ ನೀಡಿದ ಪ್ರ.ವ.ವರದಿ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.51/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ:11/08/2020 ರಂದು ಬೆಳಗ್ಗೆ 11-30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:07/08/2020 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ ಯಾರೋ ಆಸಾಮಿ ನನಗೆ ಕರೆಮಾಡಿ ನಿಮ್ಮ ತಂದೆಯವರಿಗೆ ಅಪಘಾತವಾಗಿದೆ ಎಂದು ತಿಳಿಸಿದ್ದು ಅದರಂತೆ ನಾನು ಬಂದು ನೋಡಲಾಗಿ ಜೂಲಪಾಳ್ಯ ರಸ್ತೆಯಿಂದ ಪಾತಪಾಳ್ಯ ಗ್ರಾಮಕ್ಕೆ ರಸ್ತೆಯಲ್ಲಿ ಜಡಮಡಗು ರಸ್ತೆ ಸಮೀಪ ಅಪಘಾತವಾಗಿದ್ದು ವಿಚಾರಿಸಲಾಗಿ ನಮ್ಮ ತಂದೆ ಬಾಬತ್ತು ಕೆಎ-40 ಎಲ್-1303 ದ್ವಿ ಚಕ್ರವಾಹನದಲ್ಲಿ ಹಿಂಬದಿಯಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಕುಳ್ಳರಿಸಿಕೊಂಡು ಜೂಲಪಾಳ್ಯ ಕಡೆಗೆ ಹೋಗುವಾಗ ಜೂಲಪಾಳ್ಯ ಕಡೆಯಿಂದ ಎದುರುಗಡೆ  ಮಂಜುನಾಥ ಬಿನ್ ಗುಡೆ ಮದ್ದಿರೆಡ್ಡಿ ಕೊತ್ತೂರು ಗ್ರಾಮ ರವರು ತನ್ನ ಬಾಬತ್ತು ಕೆಎ-01 ಹೆಚ್ ಕ್ಯೂ-3640 ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಮದು ನ್ಮತಂದೆಯ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನ್ಮಮ ತಂದೆ ರಸ್ತೆ ಮೇಲೆ ಬಿದ್ದು ತಲೆಗೆ ರಕ್ತಗಾಯವಾಗಿದ್ದು ಎಡಗೈಗೆ ಮುರಿದಂತಹ ಗಾಯವಾಗಿರುತ್ತೆ, ಕೂಡಲೇ 108 ಆಂಬುಲೆನ್ಸ್ ಗೆ ಪೋನ್ ಮಾಡಿ ಕರೆಸಿಕೊಂಡು ಅದರಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಲಾಗಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಮಡು ಹೋಗಿದ್ದು ಅಲ್ಲಿಂದ ವೈದ್ಯರ ಸಲಹೆಯ ಮೇರೆಗೆ ಕಿಮ್ಸ್ ಆಸ್ಪತ್ರೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿರುತ್ತೇವೆ, ನ್ಮ ತಂದೆಯವರನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಇರುವ ಕಾರಣ ೀ ದಿನ ತಡವಾಗಿ ಬಂದು ದೂರು ನೀಡಿರುತತೇನೆ, ನ್ಮಮ ತಂದೆಗೆ ಅಪಘಾತಪಡಿಸಿರುವ ಮೇಲ್ಕಂಡ ಮುಂಜುನಾಥನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ,ಸಂ 51/2020 ಕಲಂ 279,337, ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.