ದಿನಾಂಕ :11/01/2021 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.04/2021 ಕಲಂ. 323,324,504,34 ಐ.ಪಿ.ಸಿ :-

     ದಿ: 10-01-2021 ರಂದು ಮದ್ಯಾಹ್ನ 2:15 ಗಂಟೆಗೆ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ನರಸಿಂಹಪ್ಪ @ ಕದಿರಪ್ಪ ಬಿನ್ ಗಂಗಪ್ಪ, 50 ವರ್ಷ, ಅದಿ ಕರ್ನಾಟಕ ಜನಾಂಗ, ಲಾರಿ ಚಾಲಕ, ವಾಸ ಪರಗೋಡು ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರ ಹೇಳಿಕೆ ಪಡೆದು ಠಾಣೆಗೆ ಮದ್ಯಾಹ್ನ 2:45 ಗಂಟೆಗೆ ಪಡೆದುಕಂಡು ಬಂದಿದ್ದರ ಸಾರಾಂಶ –  ನಾನು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತೇನೆ, ಈಗ್ಗೆ 3 ದಿನಗಳ ಹಿಂದೆ ನಮ್ಮ ಅಂಗಡಿ ಬಳಿ ನನ್ನ ಹೆಂಡತಿಯಾದ ನಾಗಮ್ಮ ರವರನ್ನು ನರಸಿಂಹಮೂರ್ತಿ @ ಬಲರಾಮ್ ರವರು ಬೈದಾಡಿದ್ದು ಆಗ ಗ್ರಾಮಸ್ಥರು ಬುದ್ದಿ ಹೇಳಿ ಕಳುಹಿಸಿರುತ್ತಾರೆ.  ಈ ದಿನ ದಿ: 10-01-2021 ರಂದು ಬೆಳಗ್ಗೆ 9:00 ಗಂಟೆ ಸಮಯದಲ್ಲಿ ನಾನು ನಮ್ಮ ಅಂಗಡಿ ಮುಂಭಾಗ ನಿಂತಿರುವಾಗ ನರಸಿಂಹಮೂರ್ತಿ @ ಬಲರಾಂ ರವರು ನನ್ನನ್ನು ನೋಡಿ ಬೈಯ್ಯುತ್ತಿದ್ದು, ನಾನು ಕೇಳಿದ್ದಕ್ಕೆ ಆತನು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ನನ್ನ ಎಡಕೆನ್ನೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ್ದು, ನಂತರ ಅಲ್ಲಿಯೇ ಇದ್ದ ನರಸಿಂಹಮೂರ್ತಿ ಬಿನ್ ಪೆದ್ದ ಮುನಿಯಪ್ಪ, ಮೂರ್ತಿ ಬಿನ್ ಚಿಕ್ಕ ನರಸಿಂಹಪ್ಪ ರವರು ಬಂದು ಕೈಗಳಿಂದ ನನ್ನ ಮೈಮೇಲೆ ಹೊಡೆದು ನೋವುಂಟು ಮಾಡಿ ನೆಲದ ಮೇಲೆ ತಳ್ಳಿ ನೋವುಂಟು ಮಾಡಿರುತ್ತಾರೆ.  ಅಷ್ಟರಲ್ಲಿ ನಮ್ಮ ಗ್ರಾಮದ ವಾಸಿಗಳಾದ ಸಿ.ವೆಂಕಟೇಶ ಬಿನ್ ಚಿಕ್ಕ ನಾರಾಯಣಪ್ಪ, ನರಸಿಂಹಪ್ಪ ಬಿನ್ ಬಚ್ಚ ನರಸಿಂಹಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿ ಬುದ್ದಿ ಹೇಳಿ ಕಳುಹಿಸಿದರು.  ನಂತರ ನನ್ನ ತಮ್ಮ ಗಂಗರಾಜು ನನ್ನ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿರುತ್ತಾರೆ.  ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರುತ್ತೇನೆ, ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 279,337  ಐ.ಪಿ.ಸಿ :-

     ದಿ: 10-01-2021 ರಂದು ಸಂಜೆ 18:30 ಗಂಟೆಗೆ ಪಿರ್ಯಾಧಿದಾರರಾದ ಬಿ.ವಿ ಹರಿಕೃಷ್ಣ ಬಿನ್ ವೆಂಕಟೇಶ್,    26 ವರ್ಷ, ಆಚಾರಿ ಜನಾಂಗ, ಡೈವರ್ ಕೆಲಸ, ವಾಸ: ಕೆಇಬಿ  ಕಛೇರಿ ಮುಂಭಾಗದ ರಸ್ತೆ, 22 ನೇ ವಾರ್ಡ, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನನ್ನ ಅಣ್ಣನಾದ ಶ್ರೀನಾಥ ಬಿ.ಕೆ ರವರು ದಿನಾಂಕ 09/01/2021 ರಂದು ಚಿಕ್ಕಬಳ್ಳಾಪುರಕ್ಕೆ ಅವರ ತಂಗಿ ಮನೆಗೆ ಹೋಗಿರುತ್ತಾರೆ. ದಿನಾಂಕ 10/01/2021 ರಂದು ಬೆಳಿಗ್ಗೆ ಸುಮಾರು 8-30 ಗಂಟೆಗೆ ನನ್ನ ಅಣ್ಣ ಶ್ರೀನಾಥ ನನಗೆ ಪೋನ್ ಮಾಡಿ ಚಿತ್ರಾವತಿ ಡ್ಯಾಂ ಬಳಿ ಎನ್ ಹೆಚ್ 44 ರಸ್ತೆಯಲ್ಲಿ ತನಗೆ ಅಪಘಾತವಾಗಿದೆ ಎಂದು ತಿಳಿಸಿದ್ದು ತಕ್ಷಣ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ಗಾಯಾಳುವನ್ನು ಆಂಬ್ಯೂಲೆನ್ಸ ನಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇನೆ. ನಂತರ ವಿಚಾರ ಮಾಡಿ ತಿಳಿಯಲಾಗಿ ನನ್ನ ಅಣ್ಣನಾದ ಶ್ರೀನಾಥ ಬಿನ್ ಕೃಷ್ಣಪ್ಪ, 33 ವರ್ಷ ರವರು ದಿನಾಂಕ 10/01/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಯಲ್ಲಿ  ತನ್ನ ಬಾಬತ್ತು ಕೆ.ಎ-40-ಇ.ಇ.-2336 ದ್ವಿ ಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರದಿಂದ  ಹೊರಟು ಬಾಗೇಪಲ್ಲಿಗೆ ಬರಲು ಎನ್ ಹೆಚ್ 44 ರಸ್ತೆಯಲ್ಲಿ ಚಿತ್ರಾವತಿ ಡ್ಯಾಂ ಬಳಿ ಬೆಳಿಗ್ಗೆ ಸುಮಾರು 8-30 ಗಂಟೆಯಲ್ಲಿ ಬರುತ್ತಿರುವಾಗ ಈತನ ಹಿಂದೆ ಬಂದ ಲಾರಿ ನಂ TN-88-B-0129 ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಅಣ್ಣನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶ್ರೀನಾಥನು ದ್ವಿ ಚಕ್ರ ವಾಹನ ಸಮೇತ ಕೆಳಗೆ ಬಿದ್ದಿದ್ದು ಬಲಗೈ ಮೊಣಕೈ ಬಳಿ ಹಾಗೂ ಮೊಣಕೈ ಮೇಲೆ ಮೂಳೆ ಮುರಿದಿದ್ದು, ಮೈ ಕೈಗೆ ತರಚಿದ ಗಾಯಗಳಾಗಿರುತ್ತದೆ. ಹಾಗೂ ಲಾರಿಯು ಸಹ ಬಲಬದಿಗೆ ಉರುಳಿ ಬಿದ್ದಿದ್ದು ಲಾರಿಯಲ್ಲಿದ್ದ ಶರವಣನ್ , ಅಶೋಕ ಕುಮಾರ, ಗಣೇಶನ್ ಎಂಬುವವರಿಗೂ  ಸಹ ಗಾಯಗಳಾಗಿರುತ್ತವೆ  ಆದ್ದರಿಂದ ನನ್ನ ಅಣ್ಣ ಶ್ರೀನಾಥ ರವರು ಚಾಲನೆ ಮಾಡುತ್ತಿದ್ದ K40-E.E.-2336 ದ್ವಿ ಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು TN-88-B-0129 ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿ ಅಪಘಾತವನ್ನುಂಟು ಮಾಡಿದ ಲಾರಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೋರುತ್ತೇನೆ. ಚಾಲಕನ ಹೆಸರು ತಿಳಿಯಬೇಕಾಗಿರುತ್ತೆ, ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 379  ಐ.ಪಿ.ಸಿ :-

     ದಿ: 11-01-2021 ರಂದು 12:35 ಗಂಟೆಗೆ ಪಿರ್ಯಾಧಿದಾರರಾದ ಶಿವಶಂಕರ್, ಜ್ಯೂನಿಯರ್ ಟೆಲಿಕಾಂ ಆಫೀಸರ್, ಭಾರತ್ ಸಂಚಾರ್ ನಿಗಮ ಲಿಮಿಟೆಡ್, ಬಾಗೇಪಲ್ಲಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಾನು ಬಾಗೇಪಲ್ಲಿಯ ವಲಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ಗೆ ಜ್ಯೂನಿಯರ್ ಟೆಲಿಕಾಂ ಆಫೀಸರ್ ಆಗಿ 01 ವರ್ಷದಿಂದ ಕೆಲಸ ನಿರ್ವಹಿಸಿರುತ್ತೇನೆ.  ದಿ: 06-01-2021 ರ ರಾತ್ರಿ ವೇಳೆಯಲ್ಲಿ ಇದೇ ಬಾಗೇಪಲ್ಲಿ ತಾಲ್ಲೂಕು ಗೂಳೂರು ಹೋಬಳಿಯ ತಿಮ್ಮಂಪಲ್ಲಿ ಗ್ರಾಮದ ಹೊವಲಯದಲ್ಲಿರುವ ನಮ್ಮ ಇಲಾಖೆಯ ವತಿಯಿಂದ ನಿರ್ಮಿಸಿರುವ ಮೊಬೈಲ್ ಟವರ್ ಗೆ ಅಳವಡಿಸಿದ್ದ ಸುಮಾರು 90 ಮೀಟರ್ ಉದ್ದದ ಅಂದಾಜು 10,000/- ರೂ ಮೌಲ್ಯದ ಆರ್.ಎಫ್ ಕೇಬಲನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ  ಅಂದರೆ ಟವರ್ ನ ಮೇಲ್ಭಾಗದಿಂದ ಕೆಳಭಾಗದವರೆಗೆ ಕೇಬಲನ್ನು ಯಾವುದೋ ಆಯುಧದಿಂದ ಕಟ್ ಮಾಡಿರುತ್ತಾರೆ.  ಆದ್ದರಿಂದ ಕಳವಾಗಿರುವ ಆರ್.ಎಫ್ ಕೇಬಲನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.  ನಮ್ಮ ಇಲಾಕೆಯ ಮೇಲಾಧಿಕಾರಿಗಳ ಅನುಮತಿ ಪಡೆದು ಈ ದಿನ ತಡವಾಗಿ ಠಾಣೆಯಲ್ಲಿ ದೂರು ನೀಡಿರುತ್ತೇನೆ, ಎಂದು ದೂರು.

  1. ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 419,420  ಐ.ಪಿ.ಸಿ & 66(D) (INFORMATION TECHNOLOGY  ACT 2000 :-

     ದಿನಾಂಕ: 11-01-2021 ರಂದು ಪಿರ್ಯಾದಿದಾರರಾದ ಹರೀಶ್.ಹೆಚ್.ಎಸ್ ಬಿನ್ ಲೇಟ್ ಶ್ರೀನಿವಾಸಪ್ಪ, ಹೆಚ್.ಎ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ನನ್ನ ಬ್ಯಾಂಕಿನ ವ್ಯವಹಾರಗಳಿಗಾಗಿ ಬಾಗೇಪಲ್ಲಿ ನಗರದ ಎಸ್.ಬಿ.ಐ ಬ್ಯಾಂಕಿನಲ್ಲಿ ಖಾತೆ ಸಂಖ್ಯೆ:38629186445 ರಂತೆ ಹೊಂದಿದ್ದು, ಇದಕ್ಕೆ ಸಂಭಂದಿಸಿದಂತೆ ಎಟಿಎಂ ಕಾರ್ಡನ್ನು ಪಡೆದುಕೊಂಡಿರುತ್ತೇನೆ. ಸದರಿ ಬ್ಯಾಂಕ್ ಖಾತೆಗೆ ನನ್ನ ಮೊಬೈಲ್ ದೂರವಾಣಿ ಸಂಖ್ಯೆ 9036364407 ನ್ನು ಜೋಡಣೆ ಮಾಡಿರುತ್ತೇನೆ. ಹಾಗೂ ಇದನ್ನು ನನ್ನ ಓಪೋ ಆಂಡ್ರಾಯ್ಡ್ ಮೊಬೈಲ್ ನಲ್ಲಿ ಹಾಕಿಕೊಂಡು ಬಳಸುತ್ತಿರುತ್ತೇನೆ. ನಾನು ನನ್ನ ವ್ಯವಹಾರಗಳನ್ನು ಪೋನ್ ಪೇ ಮತ್ತು ಗೂಗಲ್ ಪೆ ಆಪ್ ಗಳ ಮೂಲಕ ಮಾಡುತ್ತಿರುತ್ತೇನೆ. ಹೀಗಿರುವಾಗ ಈ ದಿನ ದಿನಾಂಕ:11/01/2021 ರಂದು ಬೆಳಗ್ಗೆ 10-15 ಗಂಟೆಗೆ ಒಂದು ಸಂದೇಶ ಬಂದಿದ್ದು Dear costumer congratulation you have product order from Shop clues Private ltd Company your name to open lucky contest Mahindra XUV 500 car cost rs 14 lakh 80 thousand you have received for more information contact me. mobile help line no.09810729529, 09910586754  HTTP://shopclues.luckydraw.org.in ಎಂತ ಸಂದೇಶ ಬಂದಿದ್ದು ನಂತರ ಸಂಜೀವ್ ಕುಮಾರ್ ಎಂತ ಹೇಳಿ ಮೊ.7365047100 ರಂದ ನನ್ನ ಮೊಬೈಲ್ ಗೆ ಕರೆ ಮಾಡಿ shopclues ಕಂಪನಿಯಿಂದ ಕಾಲ್ ಮಾಡುತ್ತಿರುವುದಾಗಿಯೂ ನಿಮ್ಮ ಮೊಬೈಲ್ ನಂಬರ್ ಗೆ ಲಕ್ಕಿ ಡ್ರಾನಲ್ಲಿ Mahindra XUV 500 car ಬಂದಿದ್ದು ನೀವು ಫಸ್ಟ್ ವಿನ್ನರ್ ಆಗಿರುತ್ತೀರಿ. ನಿಮಗೆ ಕಾರ್ ಡೆಲಿವರಿ ಬೇಕಾದಲ್ಲಿ  8500/- ರಿಜಿಸ್ಟರ್ ಚಾರ್ಜ್  ಕಟ್ಟಬೇಕು ಎಂತ ತಿಳಿಸಿದರು. ಕಾರ್ಡ್ ಬೇಡವೆಂದರೆ ಕಾರಿನ ಮೌಲ್ಯ 14 ಲಕ್ಷ 80 ಸಾವಿರ ಇರುತ್ತೆ. ನಗದು ಬೇಕಾದಲ್ಲಿ 6500/- ರಿಜಿಸ್ಟರ್ ಚಾರ್ಜ್ ಆಗುತ್ತೆ ಎಂತ ಹೇಳಿದ. ನಂತರ ನಾನು ನಗದು ಪಡೆಯಲು ಏನು ಮಾಡಬೇಕು ಎಂತ ಕೇಳಿದಾಗ ಅದಕ್ಕೆ ಅವನು ನೀವು ನಮ್ಮ ಕಂಪನಿಯಲ್ಲಿ ರಿಜಿಸ್ಟರ್ ಆಗಬೇಕು ನಿಮ್ಮ ಖಾತೆಯ ವಿವರಗಳನ್ನು ಕಳುಹಿಸಿಕೊಡಿ ಎಂತ ತಿಳಿಸಿ ವಿಳಾಸ ಮತ್ತು ನಂಬರನ್ನು ಕಳುಹಿಸಿದ. ನಾನು ನನ್ನ ಖಾತೆಯ ವಿವರಗಳನ್ನು ಅವನ ವ್ಯಾಟ್ಸಪ್ ನಂ.8420811526 ಗೆ ಕಳುಹಿಸಿದೆ. ನಂತರ ಸದರಿ ನಂಬರ್ ನಲ್ಲಿ ಕಾರ್ ನ ಫೋಟೋಗಳು ಮತ್ತು ಕಂಪನಿಯ ವಿವರಗಳನ್ನು ಕಳುಹಿಸಿದ. ನಂತರ 6500/- ರಿಜಿಸ್ಟರ್ ಚಾರ್ಜ್ ಮೊತ್ತವನ್ನು ನಮ್ಮ ಎಂ.ಡಿ  ಅಕೌಂಟ್ ಗೆ ಕಳುಹಿಸಿಕೊಡಿ ಎಂತ ಹೇಳಿ ಕೃಷ್ಣಕಾಂತ್  ಅಕೌಂಟ್ ನಂಬರ್ 31664749089,  IFSC:SBIN0009594 ರಂತೆ ನೀಡಿದನು. ಅದರಂತೆ ನಾನು ದಿನಾಂಕ:11/1/2021 ರಂದು 6500/- ರೂಗಳನ್ನು ನನ್ನ ಪೋನ್ ಪೇ ಖಾತೆಯಿಂದ ಮೇಲ್ಕಂಡ ಕೃಷ್ಣಕಾತ್ ರವರ ಖಾತೆಗೆ ಹಾಕಿದೆ. ನಂತರ 10 ನಿಮಿಷ ಕಾಯಿರಿ ನಿಮ್ಮ ಖಾತೆಗೆ 1480000/- ರೂಗಳು ನಿಮ್ಮ ಖಾತೆ ಬರುತ್ತದೆ ಎಂತ ತಿಳಿಸಿದ. ಖಾತೆಗೆ ಹಣ ಬರಲಿಲ್ಲ. ನಂತರ ಸದರಿಯವರು ನನಗೆ ಕರೆ ಮಾಡಿ ನಮ್ಮ ಎಂ.ಡಿ ಮಾತನಾಡುವುದಾಗಿ ತಿಳಿಸಿದ. ನಂತರ ಎಂ.ಡಿ ರವರು ಜಿ.ಎಸ್.ಟಿ 22200/- ರೂ ಕಟ್ಟಬೇಕು ಎಂತ ಹೇಳಿದ. ನಂತರ ಸದರಿ ಮೊತ್ತವನ್ನು ನನ್ನ ಪೋನ್ ಪೇ ಯಿಂದ ಕಳುಹಿಸಿಕೊಟ್ಟಿರುತ್ತೇನೆ.ನಂತರ ನಿಮ್ಮ ಚೆಕ್ ಪ್ರೊಸೆಸ್ ನಲ್ಲಿದ್ದು 10 ನಿಮಿಷಕ್ಕೆ ನಿಮ್ಮ ಖಾತೆಗೆ ಬರುವುದಾಗಿ ತಿಳಿಸಿದ.  ನಂತರ ಸ್ಟೇಟ್ ಟ್ಯಾಕ್ಸ್ 18900/- ಕಟ್ಟಬೇಕು ಎಂತ ತಿಳಿಸಿದ ಸದರಿ ಮೊತ್ತವನ್ನು ಪೋನ್ ಪೇ ನಲ್ಲಿ ನನ್ನ ಮೊಬೈಲ್ ನಿಂದ ಕಳುಹಿಸಿದೆ. ನಂತರ ಸದರಿಯವರು ಪೋನ್ ಮಾಡಿ ನಿಮ್ಮ ಪ್ರೊಸೀಸರ್ ಎಲ್ಲಾ ಮುಗಿದಿದೆ.ನಿಮ್ಮ ಹಣ ನಿಮ್ಮ ಖಾತೆಗೆ ಬರಲಿದೆ ಎಂತ ತಿಳಿಸಿ ನಂತರ ಸೆಕ್ಯೂರಿ ಚಾರ್ಜ್ 74500/- ರೂ ಕಟ್ಟಬೇಕು ಎಂತ ತಿಳಿಸಿದಾಗ ನಾನು ಅನುಮಾನಗೊಂಡು ನಂತರ ಯಾವುದೇ ಹಣವನ್ನು ಕಳುಹಿಸದೇ ಇದ್ದಾಗ ಇದು ನಿಮಗೆ ಫೈನಲ್ ಚಾನ್ಸ್ ಎಂತ ಹೇಳಿ ಮೆಸೇಜ್ ಮಾಡುತ್ತಿದ್ದು ನಾನು ಹಾಕಿದ ಮೊತ್ತವನ್ನು ವಾಪಸ್ಸು ಕೊಡುವಂತೆ ಕೇಳಿದಾಗ ವಾಪಸ್ಸು ಕೊಡಲು ನಿರಾಕರಿಸಿರುತಾರೆ. ಆದ್ದರಿಂದ ನನಗೆ ಲಕ್ಕಿ ಡ್ರಾನಲ್ಲಿ Mahindra XUV 500 car ಬಂದಿದೆ ಎಂತ ತಿಳಿಸಿ ಆಸೆ ಹುಟ್ಟಿಸಿ ನನ್ನಿಂದ ಒಟ್ಟು 47600/-ರೂಪಾಯಿಗಳನ್ನು ನನ್ನಿಂದ ಪಡೆದುಕೊಂಡು ಕಾರು ನೀಡದೇ ಹಣವನ್ನು ವಾಪಸ್ಸು ಕೊಡದೇ ನನಗೆ ವಂಚನೆ ಮಾಡಿದ ಮೇಲ್ಕಂಡವರನ್ನು ಪತ್ತೆ ಮಾಡಿ ನನ್ನ ಹಣವನ್ನು ನನಗೆ ವಾಪಸ್ಸು ಕೋಡಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.12/2021 ಕಲಂ.87 ಕೆ.ಪಿ ಆಕ್ಟ್:-

     ದಿನಾಂಕ: 10/01/2021 ರಂದು ರಾತ್ರಿ 8.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಠಾಣೆಯ CPC-339 ಶ್ರೀ ಕರಿಯಪ್ಪ ರವರು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಯಲ್ಲಿ ಹಾಜರುಪಡಿಸಿದ ಅನುಮತಿಯ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ:10/01/2021 ರಂದು ಸಂಜೆ 4.00 ಗಂಟೆಯ ಸಮಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ನಾರಾಯಣಸ್ವಾಮಿ.ಕೆ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಕೆಂಪದೇನಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರಿ ಕೆರೆಯ ಹಿಂಭಾಗದಲ್ಲಿರುವ ಹುಣಸೇಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟ ಆಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಶ್ರೀ.ಸಂದೀಪ್ ಕುಮಾರ್, ಸಿ.ಹೆಚ್.ಸಿ-41 ಜಗದೀಶ, ಸಿ.ಪಿ.ಸಿ-197 ಅಂಬರೀಶ, ಸಿ.ಪಿ.ಸಿ-239 ಮಣಿಕಂಠ, ಸಿ.ಪಿ.ಸಿ-430 ನರಸಿಂಹಯ್ಯ, ಸಿ.ಪಿ.ಸಿ-339 ಕರಿಯಪ್ಪ ಮತ್ತು ಪಂಚರೊಂದಿಗೆ KA-40 G-326 ನಂಬರಿನ ಠಾಣೆಯ ಸರ್ಕಾರಿ ಜೀಪಿನಲ್ಲಿ ಕೆಂಪದೇನಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರಿ ಕೆರೆಯ ಬಳಿ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಸರ್ಕಾರಿ ಕೆರೆಯ ಹಿಂಭಾಗದಲ್ಲಿರುವ ಹುಣಸೇಮರದ ಕೆಳಗೆ ಕೆಲವರು ಗುಂಪು ಕಟ್ಟಿಕೊಂಡು ಕೋಳಿ ಪಂದ್ಯ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಕೆಲವರು ಕೋಳಿ ಹುಂಜಗಳ ಸಮೇತ ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದ 03 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ಹೆಸರು, ವಿಳಾಸ ಕೇಳಲಾಗಿ 1)ದೇವರಾಜು ಬಿನ್ ವೆಂಕಟಸ್ವಾಮಿ, 32 ವರ್ಷ, ಆದಿ ಕರ್ನಾಟಕ, ಕೂಲಿ ಕೆಲಸ, ಹುಲಗುಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 2)ಚಿಕ್ಕವೆಂಕಟಪ್ಪ ಬಿನ್ ಲೇಟ್ ಚಿಕ್ಕರಾಮಯ್ಯ, 35 ವರ್ಷ, ಬೋವಿ ಜನಾಂಗ, ಆಟೋ ಚಾಲಕ ವೃತ್ತಿ, ನಾರಾಯಣಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 3)ಮಂಜುನಾಥ ಬಿನ್ ವೆಂಕಟರವಣಪ್ಪ, 41 ವರ್ಷ, ಬಲಜಿಗರು, ಗಾರೆ ಕೆಲಸ, ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ಸಿಕ್ಕಿಬಿದ್ದ ಆಸಾಮಿಗಳನ್ನು ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ ಗೊತ್ತಿಲ್ಲ ಎಂತ ತಿಳಿಸಿರುತ್ತಾರೆ. ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಕೋಳಿ ಹುಂಜ, ಪಣಕ್ಕಿಟ್ಟಿದ್ದ 2,560/- ರೂ ನಗದು ಹಣ ದೊರೆತಿರುತ್ತದೆ. ಸದರಿ ಮಾಲುಗಳನ್ನು ಸಂಜೆ 5-00 ರಿಂದ ಸಂಜೆ 6-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಕೋಳಿ ಪಂದ್ಯ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ಕಲಂ 87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಯನ್ನು ಕೋರಿದ್ದು, ಘನ ನ್ಯಾಯಾಲಯವು ಪ್ರಕರಣವನ್ನು ದಾಖಲು ಮಾಡಲು ಅನುಮತಿಯನ್ನು ನೀಡಿರುವುದಾಗಿದ್ದು, ಸದರಿ ಆದೇಶದ ಮೇರೆಗೆ ಪ್ರಕರಣ ದಾಖಲಿಸಿರುವುದಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 279,337,304(A) ಐ.ಪಿ.ಸಿ:-

     ದಿನಾಂಕ: 11/01/2021 ಬೆಳಿಗ್ಗೆ 8-30 ಗಂಟೆಗೆ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳು ಹರೀಶ್ ಬಿನ್ ನಾರಾಯಣಪ್ಪ, 28 ವರ್ಷ, ನಾಯಕರು, ಬೇಕರಿಯಲ್ಲಿ ಕೆಲಸ, ವಾಸ ಹೊನ್ನಪ್ಪನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೆನೆಂದರೆ, ತಾನು ಗೌರಿಬಿದನೂರಿನ ಕೇಕ್ ಕಾರ್ನರ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 10/01/2021 ರಂದು ನಾನು ಎಂದಿನಂತೆ ಬೇಕರಿ ಕೆಲಸಕ್ಕೆ ಹೋಗಿ ಕೆಲಸವನ್ನು ಮುಗಿಸಿಕೊಂಡು ರಾತ್ರಿ ಸುಮಾರು 10-00 ಗಂಟೆಗೆ ನಮ್ಮ ಗ್ರಾಮಕ್ಕೆ ಹೋಗಲು ಮಂಚೇನಹಳ್ಳಿಗೆ ಬಂದಿದ್ದು ಅಲ್ಲಿ ನಮ್ಮ ಗ್ರಾಮಕ್ಕೆ ಸಮಾರಂಭ ಒಂದಕ್ಕೆ ಬಂದಿದ್ದ ರಾಜಾನಕುಂಟೆಯ ವಾಸಿಯಾದ ರವಿ R ಬಿನ್ ರಾಮಕೃಷ್ಣಪ್ಪ, 24 ವರ್ಷ, ನಾಯಕ ಜನಾಂಗ, ಆಟೋ ಚಾಲಕ ಕೆಲಸ ರವರು ಇದ್ದು ಸದರಿಯವರು ನನ್ನನ್ನು ಅವರ ಜೋತೆಯಲ್ಲಿ AP-02-CG-5741 ನೊಂದಣಿ ಸಂಖ್ಯೆಯ ಅಪಾಚಿ ದ್ವಿ ಚಕ್ರ ವಾಹನದಲ್ಲಿ ಬರುವಂತೆ ತಿಳಿಸಿದ್ದು ಆಗ ನಾನು ನನ್ನ ದ್ವಿ ಚಕ್ರ ವಾಹನವನ್ನು ರವಿ R ರವರ ಜೋತೆಯಲ್ಲಿ ಬಂದಿದ್ದ ಗಂಗರಾಜು ಮತ್ತು ನಾಗರಾಜ ರವರಿಗೆ ನೀಡಿದ  ರವಿ ರವರ ಬಾಬತ್ತು AP-02-CG-5741 ನೊಂದಣಿ ಸಂಖ್ಯೆಯ TVS ಅಪಾಚಿ ದ್ವಿ ಚಕ್ರ ವಾಹನದಲ್ಲಿ ಹಿಂಬದಿ ಕುಳಿತುಕೊಂಡಿದ್ದು ರವಿ R ರವರು ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಮಂಚೇನಹಳ್ಳಿಯಿಂದ ನಮ್ಮ ಗ್ರಾಮಕ್ಕೆ ಹೋಗಲು ಎಸ್.ಎಚ್ 94 ರಸ್ತೆಯಲ್ಲಿ ಹೋಗುತ್ತಿರುವಾಗ ರಾತ್ರಿ ಸುಮಾರು 10-30 ಗಂಟೆಯಲ್ಲಿ ರವಿ R ರವರು ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಮ್ಮ ಗ್ರಾಮದ ಶಾಲೆಯಿಂದ ಸ್ವಲ್ಪ ಮುಂಭಾಗ ರಸ್ತೆಯ ಎಡಭಾಗ ಇರುವ ಒಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಹೋಗಿ ನನಗೆ ಎಡಭಾಗದ ಭುಜಕ್ಕೆ ಸೊಂಟಕ್ಕೆ ಮೂಗೇಟುಗಳಾಗಿ ರವಿ ರವರಿಗೆ ತಲೆಗೆ ಮುಖಕ್ಕೆ ಮತ್ತು ಎಡಭಾಗದ ಭುಜಕ್ಕೆ ಗಾಯಗಳಾಗಿದ್ದು ಆಗ ನಮ್ಮ ಹಿಂಭಾಗ ದ್ವಿ ಚಕ್ರ ವಾಹನದಲ್ಲಿ ಬರುತ್ತಿದ್ದ ಗಂಗರಾಜ ಮತ್ತು ನಾಗರಾಜ ರವರು ಗಾಯಗೊಂಡಿದ್ದ ನಮ್ಮನ್ನು ಉಪಚರಿಸಿ ಅಲ್ಲಿಗೆ ಬಂದ 108 ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ರವಿ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಅಪಘಾತಕ್ಕೆ ಕಾರಣನಾದ ರವಿ R ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.