ದಿನಾಂಕ : 10/12/2019ರ ಅಪರಾಧ ಪ್ರಕರಣಗಳು

1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.398/2019 ಕಲಂ. 143-147-323-447-504-506 ರೆ/ವಿ 149 ಐಪಿಸಿ :-
ದಿ: 10-12-2019 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾಧಿದಾರರಾದ ಸಿ.ಎನ್ ಕೊಂಡಪ್ಪ ಬಿನ್ ಗೊರ್ಲನಾರಾಯಣಪ್ಪ, 64 ವರ್ಷ, ಗೊಲ್ಲರು, ಬಿ.ಎಂ.ಟಿ.ಸಿ ನಿವೃತ್ತ ನೌಕರರು, ವಾಸ- 4ನೇ ಕ್ರಾಸ್, 8 ನೇ ಮುಖ್ಯರಸ್ತೆ, ದುರ್ಗಲಮ್ಮ ಬಡಾವಣೆ, ಲಗ್ಗೆರೆ 3ನೇ ಹಂತ, ಬೆಂಗಳೂರು – 560058, ಸ್ವಂತ ಸ್ಥಳ – ಚಿನ್ನಒಬಯ್ಯಗಾರಿಪಲ್ಲಿ ಗ್ರಾಮ, ಮಿಟ್ಟೇಮರಿ ಹೋಬಳಿ ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಾನು ನಮ್ಮ ಸ್ವಂತ ಗ್ರಾಮವಾದ ಚಿನ್ನಒಬಯ್ಯಗಾರಿಪಲ್ಲಿ ಗ್ರಾಮದ ಸರ್ವೇ ನಂ. 2/6 ರಲ್ಲಿ 18 ¾ ಗುಂಟೆ ಜಮೀನನನ್ನು ಶಿಡ್ಗಘಟ್ಟ ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜಿನಪ್ಪ ರವರಿಂದ ದಿನಾಂಕ:06/07/2018 ರಂದು ಕ್ರಯಕ್ಕೆ ಪಡೆದುಕೊಂಡಿರುತ್ತೇನೆ. ಜಮೀನಿನ ದಾಖಲಾತಿಗಳೆಲ್ಲವೂ ನನ್ನ ಹೆಸರಿನಲ್ಲಿ ಇರುತ್ತವೆ. ಈ ಜಮೀನಿನನಲ್ಲಿ ನಾನು ರಾಗಿ ಬೆಳೆಯನ್ನು ಬೆಳೆದಿರುತ್ತೇನೆ. ನಮ್ಮ ಗ್ರಾಮದ ಅಶ್ವತ್ಥನಾರಾಯಣಗೌಡ ರವರು ನಿವೃತ್ತ ನೌಕರನಾಗಿದ್ದ ನನ್ನನ್ನು ಆಗಾಗ ಹಣ ಸಾಲವನ್ನು ಕೇಳುತ್ತಿದ್ದು, ನಾನು ನನ್ನ ಬಳಿ ಇಲ್ಲವೆಂದು ಹೇಳಿದ್ದಕ್ಕೆ ನನ್ನ ಮೇಲೆ ದ್ವೇಷವನ್ನು ಸಾಧಿಸುತ್ತಿದ್ದನು. ದಿನಾಂಕ:23/011/2019 ರಂದು ನಾನು ಜಮೀನಿನಲ್ಲಿ ಬೆಳೆದಿರುವ ರಾಗಿ ಬೆಳೆಯನ್ನು ಕಟಾವು ಮಾಡಲು ದ್ಯಾವಮ್ಮ ಕೋಂ ಆಂಜಿನಪ್ಪ, ಚಿನ್ನಒಬಯ್ಯಗಾರಿಪಲ್ಲಿ ಇತರೆ ಕೂಲಿಯವರೊಂದಿಗೆ ಹೋದಾಗ ಬೆಳಿಗ್ಗೆ ಸುಮಾರು 10:00 ಗಂಟೆಯಲ್ಲಿ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದ ನಮ್ಮ ಗ್ರಾಮದ ಅಶ್ವತ್ಥನಾರಾಯಣಗೌಡ ಬಿನ್ ಎಂ.ಸಿ ನರಸಿಂಹಯ್ಯ, ರವರು ನನ್ನ ತಮ್ಮನಾದ ವೆಂಕಟರಾಜು ಆತನ ಹೆಂಡತಿ ನಾನೆಮ್ಮ ಮಗಳಾದ ಆಶಾ ನನ್ನ ಮತ್ತೊಬ್ಬ ತಮ್ಮನಾದ ಕೃಷ್ಣಪ್ಪ, ಆತನ ಹೆಂಡತಿ ಪಾರ್ವತಮ್ಮ ರವರೊಂದಿಗೆ ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಜಮೀನಿನನಲ್ಲಿ ಅಕ್ರಮ ಪ್ರವೇಶ ಮಾಡಿ ನಾನು ರಾಗಿ ಬೆಳೆಯನ್ನು ಕಟಾವು ಮಾಡಲು ಅಡ್ಡಿಪಡಿಸಿರುತ್ತಾರೆ. ಅಲ್ಲದೆ ಅಶ್ವತ್ಥನಾರಾಯಣಗೌಡ ರವರು ಕೈಗಳಿಂದ ಹೊಡೆದಿರುತ್ತಾರೆ. ಎಲ್ಲರೂ ನನಗೆ ನಿನ್ನಮ್ಮನ್, ಬೋಳಿ ನನ್ನ ಮಗನೇ ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ಬೈಯ್ದು, ನೀನು ಬೆಳೆ ಕಟಾವು ಮಾಡಲು ಬಂದರೆ ಅಥವಾ ಇನ್ನೊಮ್ಮೆ ಊರಿಗೆ ಬಂದರೆ, ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಪ್ರಾಣಬೆದರಿಕೆಯನ್ನು ಹಾಕಿ ಗಲಾಟೆ ಮಾಡಿದರು. ಪಕ್ಕದ ಜಮೀನಿನ ಶ್ರೀನಿವಾಸ ಬಿನ್ ಸತ್ಯನಾರಾಯಣಪ್ಪ ರವರು ಗಲಾಟೆಯನ್ನು ಬಿಡಿಸಿರುತ್ತಾರೆ. ನಮ್ಮ ಗ್ರಾಮದ ಹಿರಿಯರು ರಾಜಿ ಪಂಚಾಯ್ತಿ ಮಾಡೋಣವೆಂದು ಹೇಳಿದ್ದರಿಂದ ನಾನು ಸುಮ್ಮನಿದ್ದು, ಅವರು ರಾಜಿಗೆ ಬಾರದ ಕಾರಣ ತಡವಾಗಿ ದೂರನ್ನು ನೀಡುತ್ತಿದ್ದು, ನಮ್ಮ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ನನಗೆ ಕೈಗಳಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಪ್ರಾಣ ಬೆದರಿಕೆ ಹಾಕಿರುವ ಅಶ್ವತ್ಥನಾರಾಯಣಗೌಡ, ವೆಂಕಟರಾಜು, ನಾನೆಮ್ಮ, ಆಶಾ, ಕೃಷ್ಣಪ್ಪ ಮತ್ತು ಪಾರ್ವತಮ್ಮ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಸಿಬೇಕಾಗಿ ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.337/2019 ಕಲಂ. 279-337 ಐಪಿಸಿ :-
ದಿನಾಂಕ:09/12/2019 ರಂದು ಸಂಜೆ 5.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:08/12/2019 ರಂದು ತಮ್ಮ ಗ್ರಾಮದಲ್ಲಿ ವಾಸವಿರುವ ತನ್ನ ದೊಡ್ಡಪ್ಪನಾದ ಮಗನಾದ ದೊಡ್ಡಗಿತ್ತಪ್ಪನ ಮಗ ಅಂದರೆ ತನ್ನ ಅಣ್ಣ ವೆಂಕಟಸ್ವಾಮಿರವರು ಅವರ ಕೆಲಸದ ನಿಮ್ಮಿತ್ತ ರೆಡ್ಡಿಗೊಲ್ಲವಾರಹಳ್ಳಿಗೆ ಹೋಗಿ ಸಂಜೆ 6.30 ಗಂಟೆಗೆ ಬಸ್ಸಿನಲ್ಲಿ ಬಂದು ತಮ್ಮ ಗ್ರಾಮದ ಗೇಟಿನಲ್ಲಿ ಕೆಳಗಿಳಿದು ಹೈದ್ರಾಬಾದ್ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಎನ್.ಹೆಚ್.7 ರಸ್ತೆಯಲ್ಲಿ ಪೂರ್ವದ ಕಡೆಯಿಂದ ಪಶ್ಚಿಮದ ಕಡೆ ಮನೆಗೆ ಹೋಗಲು ನಡೆದುಕೊಂಡು ರಸ್ತೆ ದಾಟುತ್ತಿದ್ದಾಗ TS.13.EK.9020 ನಂಬರಿನ ಕಾರನ್ನು ಬೆಂಗಳೂರು ಕಡೆಯಿಂದ ಪರೇಸಂದ್ರದ ಕಡೆಗೆ ಹೋಗಲು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ತನ್ನ ಅಣ್ಣ ವೆಂಕಟಸ್ವಾಮಿರವರಿಗೆ ಅಪಘಾತ ಮಾಡಿದ ಪರಿಣಾಮ ವೆಂಕಟಸ್ವಾಮಿರವರ ಎಡಕೈ ಮೇಲೆ, ಎಡದೊಕ್ಕೆಯ ಮೇಲೆ ಊದಿದ ಗಾಯಗಳು ಮತ್ತು ತಲೆಯ ಮೇಲೆ ಮತ್ತು ಇತರೆ ಕಡೆಗಳಲ್ಲಿ ರಕ್ತಗಾಯಗಳಾಗಿರುತ್ತೆ ಅಪಘಾತ ಮಾಡಿದ ಸದರಿ ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.456/2019 ಕಲಂ. 323-341-504-506 ಐಪಿಸಿ :-
ದಿನಾಂಕ 09/12/2019 ರಂದು ಸಂಜೆ 7.30 ಗಂಟೆಗೆ ಪಿರ್ಯಾದಿದಾರರಾದ ಎಸ್.ವಿ.ವೆಂಕಟರಾಮಪ್ಪ ಬಿನ್ ಲೇಟ್ ವೆಂಕಟೇಶಪ್ಪ, 48 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ಸೀಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಅಣ್ಣನ ಮಗನಾದ ಮಧುಸೂದನ್ ಬಿನ್ ಲೇಟ್ ಮುನಿವೆಂಕಟರಾಮಪ್ಪ ಎಂಬುವನು ತಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಕಮಿಟಿಯ ಉಪಾದ್ಯಕ್ಷರಾಗಿರುತ್ತಾರೆ. ಈ ದಿನ ದಿನಾಂಕ 09/12/2019 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ನಿಲ್ಲಿಸಿದ್ದ ತನ್ನ ಬಾಬ್ತು ದ್ವಿಚಕ್ರ ವಾಹನದಲ್ಲಿ ಕುಳಿತಿದ್ದಾಗ, ತನ್ನ ಅಣ್ಣನ ಮಗನಾದ ಮಧುಸೂದನ್ ಎಬುವನು ಬಂದು ತನ್ನನ್ನು ಕುರಿತು ತಾನು ಶಾಲೆಯ ಎಸ್.ಡಿ.ಎಂ.ಸಿ ಕಮಿಟಿಯ ಉಪಾದ್ಯಕ್ಷನಾಗಿರುತ್ತೇನೆ. ನೀನು ಯಾರೂ ಶಾಲೆಯ ವಿಚಾರದಲ್ಲಿ ತಲೆ ಹಾಕುವುದಕ್ಕೆ ನಿನ್ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೇನೋ ಬೋಳಿ ನನ್ನ ಮಗನೇ ಎಂದು ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನ್ನ ಮೈ-ಮೇಲೆ ಹೊಡೆದು ನೋವುಂಟು ಮಾಡಿರುತ್ತಾನೆ. ಆಗ ತನ್ನ ಅಣ್ಣನಾದ ನಾರಾಯಣಸ್ವಾಮಿ ರವರು ಅಡ್ಡ ಬಂದು ಜಗಳ ಬಿಡಿಸಿರುತ್ತಾರೆ. ತಾನು ಮಧುಸೂದನ್ ರವರನ್ನು ಕುರಿತು ನಿನ್ನ ಮೇಲೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತೇನೆ ಎಂದು ತಿಳಿಸಿ ನಮ್ಮ ಗೇಟ್ ಗೆ ಹೋಗಲು ತಮ್ಮ ಮನೆಯಿಂದ ಸ್ವಲ್ವ ದೂರದಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಮೇಲ್ಕಂಡ ಮಧುಸೂದನ್ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನನ್ನ ಮಗನೇ ನೀನು ಪೊಲೀಸ್ ಕಂಪ್ಲೈಂಟ್ ನೀಡಿದರೆ ನಿನ್ನನ್ನು ಸಾಯಿಸಿಬಿಡುತ್ತೇನೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಆದ್ದರಿಂದ ಮೇಲ್ಕಂಡ ಮಧುಸೂದನ್ ರವರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.
4. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.227/2019 ಕಲಂ. 323-324 ರೆ/ವಿ 34 ಐಪಿಸಿ :-
ದಿನಾಂಕ 09/12/2019 ರಂದು ರಾತ್ರಿ 09:00 ಗಂಟೆ ಸಮಯದಲ್ಲಿ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದಲ್ಲಿ ನಮ್ಮ ಕುಟುಂಬಸ್ಥರೊಂದಿಗೆ ವಾಸವಾಗಿರುತ್ತೇನೆ. ದಿನಾಂಕ: 08-12-2019 ರಂದು ಗಿಡಗಳು ಕೀಳುವ ವಿಚಾರದಲ್ಲಿ ನನಗೂ ಮತ್ತು ಸಾಲರ್ ಮತ್ತು ರೂಮಾನ್ ಮತ್ತಿತರೆಯವರಿಗೂ ಜಗಳವಾಗಿ ಈ ಬಗ್ಗೆ ಠಾಣೆಯಲ್ಲಿ ಎನ್.ಸಿ.ಆರ್ ದೂರು ದಾಖಲಿಸಿರುತ್ತದೆ. ನಾನು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಸದರಿ ದೂರು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ದಿನ ದಿನಾಂಕ:09-12-2019 ರಂದು ರಾತ್ರಿ ಆಸ್ಪತ್ರೆಯಲ್ಲಿ ಊಟ ಮಾಡಲು ಸಾಧ್ಯವಿಲ್ಲದ ಕಾರಣ, ರಾತ್ರಿ ಸುಮಾರು 8:30 ಗಂಟೆ ಸಮಯದಲ್ಲಿ ಊಟಮಾಡಿಕೊಂಡು ಹೋಗಲು ಮನೆಯ ಬಳಿ ಬಂದಿದ್ದು, ಆ ಸಮಯದಲ್ಲಿ ದಿನಾಂಕ:08-12-2019 ರಂದು ನಡೆದ ಗಲಾಟೆಯ ವಿಚಾರವಾಗಿ ಠಾಣೆಯಲ್ಲಿ ದೂರು ನೀಡುತ್ತಿಯಾ ಎಂದು ನಮ್ಮ ಏರಿಯಾದ ನಿವಾಸಿಗಳಾದ ಸಾಲಾರ್ ಖಾನ್ ಬಿನ್ ಲೇಟ್ ಇಬ್ರಾಹಿಂ ಖಾನ್ ಮತ್ತು ಅವರ ಮಕ್ಕಳಾದ ರೂಮಾನ್ ಖಾನ್ ಬಿನ್ ಸಾಲಾರ್ ಖಾನ್, ಸಲ್ಮಾನ್ ಖಾನ್ ಬಿನ್ ಸಾಲಾರ್ ಖಾನ್ ಹಾಗೂ ಶ್ರೀಮತಿ ರಕಿಭಾ ಕೊಂ ರೂಮಾನ್ ಖಾನ್ ರವರು ಏಕಾ ಏಕಿ ಜಗಳ ತೆಗೆದು ನನಗೆ ಕೈಗಳಿಂದ ಹೊಡೆಯುತ್ತಿದ್ದಾಗ, ಜಗಳ ಬಿಡಿಸಲು ಬಂದ ನನ್ನ ತಂಗಿಯರಾದ ಶ್ರೀಮತಿ ಅಷರ್ಿಯ ಖಾನಂ ಕೊಂ ರೋಷನ್ ಮತ್ತು ಶ್ರೀಮತಿ ನಾಜೀಯ ಖಾನಂ ಕೊಂ ಚಾಂದ್ ಪಾಷ ರವರಿಗೂ ಸಹ ಕೈಗಳಿಂದ ಹೊಡೆದು ಮೂಗೇಟು ಉಂಟಾಗಿದ್ದು, ಸದರಿಯವರು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ನನಗೆ ಹೊಟ್ಟೆಗೆ ಹಾಗೂ ಬಾಯಿಗೆ ಹೊಡೆದಿದ್ದು, ತುಟಿಯ ಬಾಗದಲ್ಲಿ ರಕ್ತ ಗಾಯ ಉಂಟಾಗಿರುತ್ತದೆ. ನಾನು ಕೂಡಲೇ ಠಾಣೆಗೆ ಹಾಜರಾಗಿ ದೂರು ನೀಡಿದ್ದು, ಮೇಲ್ಕಂಡ ನಾಲ್ಕು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆಂದು ನೀಡಿದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.
5. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.400/2019 ಕಲಂ. 323-324-504-506 ರೆ/ವಿ 149 ಐಪಿಸಿ :-
ದಿನಾಂಕ: 10-12-2019 ಬೆಳಿಗ್ಗೆ 7.35 ಗಂಟೆಯಲ್ಲಿ ದೇವನಹಳ್ಳಿ ಪೊಲೀಸ್ ಠಾಣೆಯಿಂದ ಬಂದ ಮಾಹಿತಿಯ ಮೇರೆಗೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿದ್ದ ಮೆಮೋ ಪಡೆದು ದೇವನಹಳ್ಳಿ ಮಾನಸ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ರಾಜಶೇಖರ ಬಿನ್ ಜಿ.ಟಿ. ನಾರಾಯಣಸ್ವಾಮಿ, ಗಂಗಾಪುರ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರ ಹೇಳಿಕೆ ಪಡೆದು ಬೆಳಿಗ್ಗೆ 9.45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿದ್ದರ ಸಾರಂಶವೇನೆಂದರೆ, ಗಾಯಾಳು ರಾಜಶೇಖರ ರವರು ದಿನಾಂಕ: 09-12-2019 ರಂದು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ ತಾಲ್ಲೂಕು ತಾದೂರು ಗ್ರಾಮದ ವಾಸಿಯಾದ ರಘು ರವರ ಬಳಿ ಮಾತನಾಡಲು ಬೆಳಿಗ್ಗೆ ಸುಮಾರು 10.00 ಗಂಟೆಯ ಸಮಯದಲ್ಲಿ ತನ್ನ ಬಾಬತ್ತು ಎಪಿ-20-ಎಎ-5625 ಮಾರುತಿ ಕಾರಿನಲ್ಲಿ ಹೋಗುತ್ತಿದ್ದಾಗ ಕುಂದಲಗುರ್ಕಿ ಗ್ರಾಮದ ಚಂದ್ರಶೇಖರ್ ಬಿನ್ ಆನಂದರೆಡ್ಡಿ ರವರು ಸಹ ಅವರ ಕಾರಿನಲ್ಲಿ ತನ್ನ ಮುಂದೆ ಹೋಗುತ್ತಿದ್ದು ತಾದೂರು ಗ್ರಾಮದಿಂದ ಸುಮಾರು 2 ಪರ್ಲಾಂಗ್ ದೂರದಲ್ಲಿರುವ ಲೇ-ಔಟ್ ಬಳಿ ಅವರ ಕಾರನ್ನು ನಿಲ್ಲಿಸದರು, ತಾನು ಸಹ ಅವರ ಹಿಂದೆ ಸುಮಾರು 30-40 ಅಡಿಗಳ ಅಂತರದಲ್ಲಿ ನಿಲ್ಲಿಸಿ ತಾನು ಕಾರ ಡೋರ್ ನ್ನು ತೆಗೆದು ಕೆಳಗಡೆ ಇಳಿಯುತ್ತಿದ್ದಂತೆ ತನ್ನ ಕಾರಿನ ಹಿಂಬದಿಯಿಂದ ಯಾವುದೋ ಒಂದು ಮಾರುತಿ ಓಮ್ನಿಕಾರಿನಲ್ಲಿ ಸುಮಾರು 4 ರಿಂದ 5 ಜನರು ತನ್ನ ಬಳಿ ಬಂದು ಏನೋ ಲೋಪರ್ ನನ್ನ ಮಗನೇ ನಿನ್ನದು ಜಾಸ್ತಿ ಆಯಿತು ಅಂತ ಅವರ ಕಾರಿನಲ್ಲಿದ್ದ ಕಬ್ಬಿಣದ ರಾಡಿನಿಂದ ತನ್ನ ಎಡ ಬುಜಕ್ಕೆ ಎಡ ಕಾಲಿಗೆ ಹಾಗೂ ಎರಡೂ ಕಾಲುಗಳಿಗೆ ಮತ್ತು ಎರಡೂ ಪಾದಗಳಿಗೆ ಹೊಡೆದು ರಕ್ತಗಾಯ ಹಾಗೂ ಮೂಗೇಟುಗಳುಂಟುಮಾಡಿದರು, ಬೆನ್ನಿಗೆ ರಾಡಿನಿಂದ ಹೊಡೆದು ಮೂಗೇಟು ಮಾಡಿದರು, ತಲೆಗೆ ಕೈಗಳಿಂದ ಹೊಡೆದು ಮೂಗೇಟು ಮಾಡಿದರು, ಅದೇ ಸಮಯಕ್ಕೆ ಚಂದ್ರಶೇಖರ್ ಮತ್ತು ತಾದೂರು ಗ್ರಾಮದ ರಘು ರವರು ಬಂದು ಬಿಡಿಸಿದರು, ನಂತರ ನನ್ನನ್ನು ಅಲ್ಲಿಯೇ ಬಿಟ್ಟು ನಿನ್ನನ್ನು ಮುಗಿಸಿಬಿಡುತ್ತೇವೆಂದು ಹೇಳಿ ಹೊರಟು ಹೋದರು, ಅವರ ವಿಳಾಸ ಗೊತ್ತಿರುವುದಿಲ್ಲ ಹಾಗೂ ಅವರ ಬಂದಿದ್ದ ಓಮ್ನಿ ಕಾರಿನ ನಂಬರ್ ಸಹ ತಿಳಿಯಲು ಆಗಲಿಲ್ಲ, ತನ್ನನ್ನು ಹೊಡೆದು ಬೈದು ಪ್ರಾಣ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.