ದಿನಾಂಕ :10/10/2020 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.136/2020 ಕಲಂ: 379 ಐ.ಪಿ.ಸಿ:-

          ದಿನಾಂಕ: 09/10/2020 ರಂದು ಪಿರ್ಯಾದಿದಾರರಾದ ಶಫೀವುಲ್ಲಾ ಬಿನ್ ಅಫೀಸ್ ಖಾನ್, 40 ವರ್ಷ, ಮುಸ್ಲಿಂ ಜನಾಂಗ, ಹಾದಿಗೆರೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ,  ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೆನೆ. ನಾನು ಆದಿಗೆರೆ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆನೆ. ನನ್ನ ಜಮೀನಿನಲ್ಲಿ ಟಮೋಟ ಬೆಳೆಯನ್ನು ಬೆಳೆದಿದ್ದು ದಿನಾಂಕ: 08/09/2020 ರಂದು ಚಿಂತಾಮಣಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಗೆ ಟೆಂಪೋದಲ್ಲಿ ಹಾಕಿ ಕಳುಹಿಸಿ ನಂತರ ನಾನು ನನ್ನ  ಹೆಸರಿನಲ್ಲಿರುವ ಕೆಎ-40-ಎಲ್-2365 ಸ್ಲ್ಪೇಂಡರ್ ಫ್ಲಸ್ (ಇಂಜಿನ್ ಸಂ: HA10EA9HH70572 ಚಾಸ್ಸೀನ್ ಸಂ: MBLHA10EJ9HH19312)  ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ 9-30 ಗಂಟೆಗೆ ಎಪಿಎಂಸಿ ಮಾರುಕಟ್ಟೆಗೆ ಬಂದು ದ್ವಿಚಕ್ರ ವಾಹನವನ್ನು ಗಾಂಧಿನಗರ ಕಡೆ ಹೋಗುವ ರಸ್ತೆಯ ಪುಟ್ ಪಾತ್ ನಲ್ಲಿ ನಿಲ್ಲಿಸಿ ಮಾರುಕಟ್ಟೆ ಒಳಗೆ ಹೋಗಿರುತ್ತೆನೆ. ನಂತರ ಬೆಳಗ್ಗೆ 10-30 ಗಂಟೆಗೆ ಬಂದು ನನ್ನ ದ್ವಿಚಕ್ರ ವಾಹನವನ್ನು ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ ಇರುವುದಿಲ್ಲ. ನಾನು ಗಾಬರಿಯಾಗಿ ಸುತ್ತು ಮುತ್ತಲೂ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ನನ್ನ ದ್ವಿಚಕ್ರ ವಾಹನದ ಬೆಲೆ ಸುಮಾರು 30,000 ರೂ ಆಗಿರುತ್ತೆ. ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ನನ್ನ ದ್ವಿಚಕ್ರ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ತಡವಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.137/2020 ಕಲಂ: 379 ಐ.ಪಿ.ಸಿ:-

          ದಿನಾಂಕ: 09/10/2020 ರಂದು ರಾತ್ರಿ 21:00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ . ತಾನು ತಿಪ್ಪನಹಳ್ಳಿ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆನೆ. ತನ್ನ ಜಮೀನಿನಲ್ಲಿ ಟಮೋಟ ಬೆಳೆಯನ್ನು ಬೆಳೆದಿದ್ದು ದಿನಾಂಕ: 19/09/2020 ರಂದು ಚಿಂತಾಮಣಿ ನಗರದ ಎ.ಪಿ.ಎಂ.ಸಿ ಮಾರುಕಟ್ಟೆಗೆ ಟೆಂಪೋದಲ್ಲಿ ಹಾಕಿ ಕಳುಹಿಸಿ ನಂತರ ತಾನು ತಮ್ಮ ಗ್ರಾಮದಿಂದ ತನ್ನ ಬಾಬತ್ತು ಹೆಸರಿನಲ್ಲಿರುವ ಕೆಎ-40-ಕ್ಯೂ-7235 ಹಿರೋ ಹೊಂಡಾ ಪ್ಯಾಷನ್ ಪ್ರೋ (ಇಂಜಿನ್ ಸಂ:HA10EDBHE05234 ಚಾಸ್ಸೀನ್ ಸಂ: MBLHA10EWBHE05080)  ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ 9-30 ಗಂಟೆಗೆ ಎಪಿಎಂಸಿ ಮಾರುಕಟ್ಟೆಗೆ ಬಂದು ದ್ವಿಚಕ್ರ ವಾಹನವನ್ನು ಗಾಂಧಿನಗರ ಕಡೆ ಹೋಗುವ ರಸ್ತೆಯ ಪುಟ್ ಪಾತ್ ನಲ್ಲಿ ನಿಲ್ಲಿಸಿ ಮಾರುಕಟ್ಟೆ ಒಳಗೆ ಹೋಗಿರುತ್ತೆನೆ. ನಂತರ ಬೆಳಿಗ್ಗೆ 11-00 ಗಂಟೆಗೆ ಬಂದು ತನ್ನ ದ್ವಿಚಕ್ರ ವಾಹನವನ್ನು ನೋಡಲಾಗಿ ತಾನು ನಿಲ್ಲಿಸಿದ ಸ್ಥಳದಲ್ಲಿ ಇರುವುದಿಲ್ಲ. ತಾನು ಗಾಬರಿಯಾಗಿ ಸುತ್ತು ಮುತ್ತಲೂ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ತನ್ನ ದ್ವಿಚಕ್ರ ವಾಹನದ ಬೆಲೆ ಸುಮಾರು 30,000 ರೂ ಆಗಿರುತ್ತೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದ ಕಾರಣ ತನ್ನ ದ್ವಿಚಕ್ರ ವಾಹನ ಮತ್ತು ಕಳುವು ಮಾಡಿಕೊಂಡು ಹೋದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.111/2020 ಕಲಂ: 506,504,323,324 ರೆ/ವಿ 34 ಐ.ಪಿ.ಸಿ:-

          ದಿನಾಂಕ:10-10-2020 ರಂದು ಬೆಳಗ್ಗೆ 09-00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಹೆಚ್.ಸಿ 119 ರವರು ಗಾಯಾಳು ಸುರೇಶ ರವರ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಮನೆಯ ಮುಂದೆ ಸರ್ಕಾರಿ ರಸ್ತೆಯಿದ್ದು, ಅದರಾಚೆ ತಮ್ಮ ಗ್ರಾಮದ ರಾಧಮ್ಮ ರವರ ಮನೆ ಮತ್ತು ಖಾಲಿ ಜಾಗವಿರುತ್ತದೆ. ದಿನಾಂಕ:08/10/2020 ರಂದು ರಾಧಮ್ಮ ರವರು ಅವರ ಖಾಲಿ ಜಾಗ ಮತ್ತು ರಸ್ತೆಯಲ್ಲಿ ಕಾಂಪೌಂಡನ್ನು ನಿರ್ಮಿಸಿರುತ್ತಾರೆ. ಆಗ ತಾವು ಹೋಗಿ ನೀವು ರಸ್ತೆಯಲ್ಲಿ ಕಾಂಪೌಂಡ್ ನಿರ್ಮಿಸಿದರೆ ತಾವು ಓಡಾಡುವುದು ಹೇಗೆ ಎಂದು ಹೇಳಿ ಅವರು ನಿರ್ಮಿಸುತ್ತಿದ್ದ ಕಾಂಪೌಂಡನ್ನು ನಿಲ್ಲಿಸಿರುತ್ತೇವೆ. ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಟು ದಿನಾಂಕ:09/10/2020 ರಂದು ಮದ್ಯಾಹ್ನ 02-00 ಗಂಟೆಯಲ್ಲಿ ರಾಧಮ್ಮ ಕೊಂ ಮುನಿಯಪ್ಪ, ದ್ಯಾವಪ್ಪ ಬಿನ್ ಪಿಳ್ಳವೆಂಕಟಪ್ಪ, ನರಸಿಂಹಮೂರ್ತಿ ಬಿನ್ ಪಿಳ್ಳವೆಂಕಟಪ್ಪ, ಶಿವಪ್ಪ ಬಿನ್ ಪಿಳ್ಳಸೀನಪ್ಪ ರವರುಗಳು ಮುಂಡೇಳಾ ನಿಮ್ಮ ಗಂಡಂದಿರನ್ನು ಕರೆಸಿ ಎಲ್ಲಿ ಹೋಗಿದ್ದಾರೆ. ಅವರುಗಳು ಎಂದು ಕೇಟ್ಟಕೆಟ್ಟಾಗಿ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಆಗ ತಾನು ನೀವು ಕಾಂಪೌಂಡ್ ನ್ನ ನಿಮ್ಮ ಜಾಗದಲ್ಲಿ ನಿರ್ಮಿಸಿಕೊಳ್ಳಿ ರಸ್ತೆಯಲ್ಲಿ ನಿರ್ಮಿಸಿದರೆ ತಾವು ಓಡಾಡುವುದು ಹೇಗೆ ಎಂದು ಕೇಳಿದ್ದಕ್ಕೆ ನರಸಿಂಹಮೂರ್ತಿ ಮತ್ತು ದ್ಯಾವಪ್ಪ ರವರುಗಳು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ಗೋಡೆಗೆ ತನ್ನನ್ನು ತಳ್ಳಿ ತನ್ನ ಬಲಗೈ ಮತ್ತು ಭುಜಕ್ಕೆ ನೋವುಂಟು ಮಾಡಿರುತ್ತಾರೆ.  ನಂತರ ತನ್ನನ್ನು ಕೆಳಗೆ ಬೀಳಿಸಿ ಕಾಲುಗಳಿಂದ ತನ್ನ ಎದೆಗೆ ಮತ್ತು ಗಂಟಲಿಗೆ ಒದ್ದು ನೋವುಂಟು ಮಾಡಿರುತ್ತಾರೆ. ತನ್ನ ತಂಗಿ ಲಲಿತಗೆ ರಾಧಮ್ಮ ಮತ್ತು ನರಸಿಂಹಮೂರ್ತಿ ಕೈಗಳಿಂದ ಎಡಗಡೆ ಕಿವಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ತನ್ನ ಅತ್ತೆ ಮುನಿಯಮ್ಮನಿಗೆ ರಾಧಮ್ಮ ದೊಣ್ಣೆಯಿಂದ ಎಡಭುಜಕ್ಕೆ ಮತ್ತು ಬಲಮೊಣಕಾಲಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ನಂತರ ಶಿವಪ್ಪ ಮತ್ತು ದ್ಯಾವಪ್ಪ ರವರು ತನ್ನ ತಂದೆ ಓಬಣ್ಣ ರವರನ್ನು ಕೈಗಳಿಂದ ಹೊಡೆದು ನೋವುಂಟು ಮಾಡಿರುತ್ತಾರೆ. ಆಗ ತಮ್ಮ ಗ್ರಾಮದ ಸತೀಶ ಬಿನ್ ವೆಂಕಟರೆಡ್ಡಿರವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ಆಗ ಮೇಲ್ಕಂಡವರು ಮತ್ತೇನಾದರೂ ನಮ್ಮ ಕಾಂಪೌಂಡ್ ವಿಚಾರಕ್ಕೆ ಬಂದರೆ ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ.  ಗಲಾಟೆ ಸಮಯದಲ್ಲಿ ತನ್ನ ಅತ್ತೆಯ ಕತ್ತಿನಲ್ಲಿದ್ದ ತಾಳಿಯ ಕರಿಮಣಿ ಸರವನ್ನು ಕಿತ್ತಾಕಿರುತ್ತಾರೆ. ತಮಗೆ ಮೈ ಕೈ ನೋವುಗಳು ಜಾಸ್ತಿಯಾದ್ದರಿಂದ ಚಿಕಿತ್ಸೆಗಾಗಿ 108 ಅಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.162/2020 ಕಲಂ: 15(A),32(3) ಕೆ.ಇ ಆಕ್ಟ್:-

          ದಿನಾಂಕ;09/10/2020 ರಂದು ಠಾಣಾ ಹೆಚ್ ಸಿ 214 ರವರು ನೀಡಿದ ದೂರಿನ ಸಾರಾಂಶವೇನಂಧರೆ ಹಚ್ ಸಿ-214 ಲೋಕೇಶ್ ಆದ ತಾನು ಗೌರೀಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಗುಪ್ತದಳ ಮಾಹಿತಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ದಿನ ದಿನಾಂಕ’09/10/2020 ರಂದು ಸಂಜೆ 4-15 ಗಂಟೆಗೆ ಬೆಂಗಳೂರು ವೃತ್ತದಲ್ಲಿ ಇದ್ದಾಗ ಗೌರಿಬಿದನೂರು ನಗರದ ಆನಂದ ಪುರದ  ಗೇಟ್ ನ ಬಳಿ ಯಾರೋ ಒಬ್ಬ ಆಸಾಮಿಯು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ  ಪಿ ಎಸ್ ಐ ಸಾಹೇಬರಿಗೆ ಮಾಹಿತಿ ತಿಳಿಸಿ ಅನುಮತಿಯನ್ನು ಪಡೆದು ಪಿಸಿ-282 ರಮೇಶ್  ರವರೊಂದಿಗೆ ಮಾದನಹಳ್ಳಿ ಬಳಿ  ಪಂಚರನ್ನು ಬರ ಮಾಡಿಕೊಂಡು   ಆನಂದ ಪುರದ ಗೇಟ್ಗೆ ಸ್ವಲ್ಪ ದೂರ ನಡೆದು ಕೊಂಡು ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ ಕೆಲವರು ಸಾರ್ವಜನಿಕ ಸ್ಥಳದಲ್ಲಿ  ಮದ್ಯೆ ಸೇವನೆ ಮಾಡುತ್ತಿದ್ದು ಕಂಡು ಬಂದಿದ್ದು ಪಂಚರ ಸಮಕ್ಷಮ ಅವರನ್ನು ಸುತ್ತುವರೆದು ಮದ್ಯಪಾನ ಮಾಡುತ್ತಿದ್ದವರಿಗೆ ಓಡಿ ಹೋಗದಂತೆ ತಿಳಿಸಿದಾಗ ಮದ್ಯಪಾನ ಮಾಡುತ್ತಿದ್ದವರು ಅಲ್ಲಿಂದ ಓಡಿ ಹೋಗಿದ್ದು ಸ್ಥಳಾವಕಾಶ ಮಾಡಿಕೊಟ್ಟಿರುವ ಅಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಪ್ರಕಾಶ್ .ಜಿ. ಬಿನ್  ಲೇಟ್ ಗಂಗಪ್ಪ.42 ವರ್ಷ.ಆದಿ ಕರ್ನಾಟಕ.ಕೂಲಿ ಕೆಲಸ.ವಾಸ;ಆನಂದ ಪುರ ಗೌರಿಬಿದನೂರು ಟೌನ್ ಅತನಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಯಾವುದಾದರೂ ಪರವಾನಿಗೆ ಇದೇಯೇ ಎಂದು ಕೇಳಲಾಗಿ ಆತನು ಯಾವುದೇ ಪರವಾನಿಗೆ ಇಲ್ಲವೆಂದು ತಿಳಸಿದ್ದು ನಂತರ ಪಂಚರ ಸಮಕ್ಷಮ ಸ್ಥಳವನ್ನು ಪರಶೀಲಿಸಲಾಗಿ 90 ಮ್ ಎಲ್ ನ ಹೈರ್ವಾಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 14 ಟೆಟ್ರಾ ಪಾಕೆಟ್ ಗಳು .ಮತ್ತು 90 ಮ್ ಎಲ್ ನ ಹೈರ್ವಾಡ್ಸ್ ಚಿಯರ್ಸ್ ವಿಸ್ಕಿ ಕಂಪನಿಯ 4 ಖಾಲಿ ಪಾಕೆಟ್ಗ ಗಳು ಮತ್ತು ನಾಲ್ಕು ಪ್ಲಾಸ್ಟಿಕ್ ಗ್ಲಾಸುಗಳು ಮತ್ತು ಒಂದು ಲೀಟರ್ ಸಾಮರ್ಥ್ಯ ದ ಒಂದು ಲೀಟರ್ ವಾಟರ್ ಬಾಟಲ್ ಇರುತ್ತೆ .ಮಧ್ಯವಿರುವ  ಒಂದೊಂದು ಪಾಕೆಟ್ನ ಮೇಲೆ 35.13 ರೂಪಾಯಿಗಳಿದ್ದು .ಇದರ ಒಟ್ಟು ಬೆಲೆ 491.82 ರೂಪಾಯಿಗಳಾಗಿದ್ದು ಮತ್ತು ಒಟ್ಟು ದ್ರವ್ಯ ಪ್ರಮಾಣ ಒಂದು ಲೀಟರ್ ಎರಡು ನೂರ ಅರವತ್ತು ಆಗಿರುತ್ತೆ ಎಲ್ಲವನ್ನು ಪಂಚರ ಸಮಕ್ಷಮ  ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲಿನೊಂದಿಗೆ ಈ ದಿನ ಸಂಜೆ 5-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ  ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿದ ವರದಿಯನ್ನುಪಡೆದು ಪ್ರಕರಣ   ದಾಖಲಿಸಿಕೊಂಡಿರುತ್ತೆ.