ದಿನಾಂಕ :10/09/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.220/2020 ಕಲಂ. 143,144,147,323,504,506 ರೆ/ವಿ 34  ಐ.ಪಿ.ಸಿ :-

            ದಿ: 10-09-2020 ರಂದು ಪಿ.ಸಿ 235 ರವರು ಠಾಣೆಗೆ ಹಾಜರುಪಡಿಸಿದ ಪಿ.ಸಿ.ಆರ್ ದೂರನ್ನು ಸ್ವೀಕರಿಸಿದ್ದರ ಸಾರಾಂಶ – The property bearing survey number 54 totallly measuring 72.06 acres belonged to the government.  The complainant and his father Venkatarayappa are the unauthorizedly cultivation the property out of which to an extent of 3.00 acres from losst 40-50 years.  Originally the said land was Gomala the complainants family ripened the waste land in to cultivable land by removing the stones from th hilly region and converted in to proper condition, thereby they are converted as the agricultural land.  They are the unauthorized occupants by cultivating the land illegally, without the prayer permission of the government.  Recently, the complainant have been applied Form No 57 for grant of the said land who they are unauthorizedly occupied, before the land grant committee on 14-01-2019 by paying fee of Rs. 100/- on the same day.  The copy of the Form No 57, fee receipt and the acknowledgement here to enclosed for the kind perusal of this Hon’ble court to establish the complainants possession over the property who enjoyed unauthorizedly.

     The accused persons are totally strangers, having no manner of nterest over the property, which is cultivated by the Complainant.  They are all, with an ulterior motive, to knock of the property, all of a sudden, on 07-08-2020 in the early morning colluded with each other, entered in to the land with JCB Vehicle and trying to remove the trees grown in the land, and damage the agricultural crop.  Immediately, the complainant trying to resist the illegal activites of the accused, but the accused persons assembled unlawfully, assaulted with deadly weapons, and deformed with filthy language and insult, thereby the complainant had hurt grievously by threatening the accused. Immediately, the complainant have approached the jurisdictional police station and lodge a complaint against the accused.  Due to political pressure the said police have not taken any action against the accused and as such the accused are powerful, influential, having huge men and politicla power.  The sitting political leaders supported to the accused.  Therefore, after receiving the complaint the said police have been given NCR No 472/2020 to the complainant.  In these facts and circumstances, there is no other go, approached the complainant before this Hon’ble Court, for appropriate order.

    The complainant here with produces the NCR 472/2020 dated 07-08-2020 R.T.C apllication Form No 57, Fee receipt and Acknowledgement photo’s and CD before this Hon’ble Court.

    The accused are therefore liable to punish under section 143, 144, 147, 323, 504 and 506 read with section 34 of Indian Penal Code. Wherefore the complaint prays that this Hon’ble court may be pleased to register the complaint, and refer the matter to the police sub-inspector, Bagepalli Police Station, Bagepalli, to enquire into the matter in accordance with law against the accused No 1 to 4 and punish them for the offences punishable under section 143, 144, 147, 323, 504 and 506 read with section 34 of IPC and grant any such other relief’s may deem fit to in the circumstances of this case in the interest of justice. ಎಂದು ದೂರು.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.87/2020 ಕಲಂ. 269,270 ಐ.ಪಿ.ಸಿ :-

          ದಿನಾಂಕ 10/09/2020 ರಂದು ಬೆಳಿಗ್ಗೆ 11-45 ಗಂಟೆಗೆ ಫಿರ್ಯಾಧಿದಾರರಾದ ಶ್ರೀ.ವಿಜಯ್ ಕುಮಾರ್.ಬಿ ಸಿ.ಹೆಚ್.ಸಿ-36 ರವರು ನೀಡಿದ ವರದಿಯ ಸಾರಾಂಶವೇನೆಂದರೆ ತಾನು ಬಟ್ಲಹಳ್ಳಿ ಪೊಲೀಸ್ ಈಗ್ಗೆ ಸುಮಾರು  2 ವರ್ಷಗಳಿಂದ ಗುಪ್ತಮಾಹಿತಿ ಸಂಗ್ರಹಣೆ ಕರ್ತವ್ಯ ನಿರ್ವಹಿಸುತ್ತಿದ್ದು ಹೀಗಿರುವಲ್ಲಿ ಈ ದಿನ ದಿನಾಂಕ 10/09/2020 ರಂದು ನಾನು ಠಾಣಾ ವ್ಯಾಪ್ತಿಯಲ್ಲಿ ಗುಪ್ತಮಾಹಿತಿಯ ಸಂಗ್ರಹಣೆಗಾಗಿ  ಯಗವಕೋಟೆ, ಕೊತ್ತುಡ್ಯ, ದಿನ್ನಮಿಂದಹಳ್ಳಿ ಮುಂತಾದ ಕಡೆಗಳಲ್ಲಿ ಗಸ್ತುಮಾಡಿಕೊಂಡು ಕಾನಗಮಾಕಲಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹೋದಾಗ ಕಾನಗಮಾಕಲಹಳ್ಳಿ ಗ್ರಾಮದ ವಾಸಿಯಾದ ಕೋನಪ್ಪರೆಡ್ಡಿ ಬಿನ್ ಲೇಟ್ ವೆಂಕಟಪ್ಪ, 70ವರ್ಷ, ಒಕ್ಕಲಿಗರು, ಜಿರಾಯ್ತಿ ರವರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿರುವುದಾಗಿ ಬಾತ್ಮಿದಾರರಿಂದ ತಿಳಿದು ಬಂದಿದ್ದು ನಂತರ ಕೋನಪ್ಪರೆಡ್ಡಿ ರವರ ಮನೆಯ ಬಳಿಗೆ ಹೋಗಿ ನೋಡಲಾಗಿ ಕೋನಪ್ಪ  ರೆಡ್ಡಿ ರವರು ಮನೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇರದೆ ಎಲ್ಲಿಯೋ ಬೇರೆ ಗ್ರಾಮಕ್ಕೆ ಹೋಗಿರುವುದಾಗಿ ವಿಚಾರ ತಿಳಿದು ಬಂದಿರುತ್ತೆ. ಸದರಿ ವ್ಯಕ್ತಿಯಗೆ ದಿನಾಂಕ 31/08/2020  ರಂದು ಕೋವಿಡ್ 19 ಪಾಸಿಟಿವ್ ವರದಿ ಬಂದಿದ್ದು ಮಸ್ತೇನಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ದಿನಾಂಕ: 05/09/2020 ರಂದು ಮನೆಗೆ ವಾಪಸ್ಸಾಗಿರುತ್ತಾರೆ ಅದರಂತೆ ತಾಲ್ಲೂಕು ಆರೋಗ್ಯಧಿಕಾರಿಗಳು  ಇವರಿಗೆ ದಿನಾಂಕ 14/09/2020 ರ ವರೆಗೂ ಮನೆಯಲ್ಲಿಯೇ ಹೋಂ ಕ್ವಾರೆಂಟೆನ್ ಇರಲು ಆದೇಶಿಸಿರುತ್ತಾರೆ. ಆದರೆ ಕೋನಪ್ಪರೆಡ್ಡಿ ರವರಿಗೆ ಮನೆಯಿಂದ ಹೊರ ಬರದಂತೆ ತಿಳಿಸಿದರೂ ಸಹ ದಿನಾಂಕ:10/09/2020 ರಂದು ನಾನು ಕಾನಗಮಾಕಲಹಳ್ಳಿ ಗ್ರಾಮಕ್ಕೆ ಗುಪ್ತಮಾಹಿತಿಯ ಸಂಗ್ರಹಣೆಗಾಗಿ ಹೋಗಿದ್ದಾಗ ಕೋನಪ್ಪ ರೆಡ್ಡಿ ರವರು ಮನೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇರದೆ ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವುದಾಗಿ ಮಾಹಿತಿ ತಿಳಿದುಬಂದಿರುತ್ತೆ.   ಸದರಿಯವರಿಗೆ ಕೋರೋನ ಸಾಂಕ್ರಾಮಿಕ ಖಾಯಿಲೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವಿರುವುದಾಗಿ ತಿಳಿದಿದ್ದರೂ ಸಹ ಅವರ ಮನೆಯ ಮುಂದೆ ಬೀದಿಯಲ್ಲಿ ಮತ್ತು ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ನಿರ್ಲಕ್ಷ್ಯತೆ ಮಾಡಿರುತ್ತಾರೆ ಹಾಗೂ ಈ ದಿನ ದಿನಾಂಕ 10/09/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಸದರಿ ಆಸಾಮಿಯನ್ನು ಮನೆಯಲ್ಲಿ ಚೆಕ್ ಮಾಡಲಾಗಿ ಮನೆಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇರುವುದಿಲ್ಲ ಆದ್ದರಿಂದ ನಾನು ಬೆಳಿಗ್ಗೆ 11-45 ಗಂಟೆಗೆ ಠಾಣೆಗೆ ವಾಪಸ್ ಬಂದು ಕೋನಪ್ಪರೆಡ್ಡಿ ರವರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ವರದಿಯಾಗಿದೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.122/2020 ಕಲಂ. 269,271  ಐ.ಪಿ.ಸಿ :-

          ದಿ:10.09.2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಠಾಣೆಯ ಪಿ ಸಿ 260 ಮುತ್ತಪ್ಪ ನಿಗರಿ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ ಈ ದಿನ ದಿ:10.09.2020 ರಂದು ಬೆಳಿಗ್ಗೆ ಹಾಜರಾತಿಯಲ್ಲಿ ಪಿ.ಎಸ್.ಐ ಸಾಹೇಬರು ಹಗಲು ಗಸ್ತು ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದು, ನೇಮಕದಂತೆ ತಾನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ತಾಂಡ್ರಮರದಹಳ್ಳಿ , ಈತಮಾಕಲಹಳ್ಳಿ , ಅಡವಿಗೊಲ್ಲವಾರಹಳ್ಳಿ ಮತ್ತು ಇತರೆ ಕಡೆಗಳಲ್ಲಿ ಗಸ್ತು ಮಾಡುತ್ತಿದ್ದಾಗ ಸಂಜೆ ತನಗೆ ಬಂದ ಮಾಹಿತಿ ಮೇರೆಗೆ ಅಡವಿಗೊಲ್ಲವಾರಹಳ್ಳಿ ಗ್ರಾಮದ ವಾಸಿ ದಿನೇಶ್ ಬಿನ್ ಚಿಕ್ಕನರಸಿಂಹಪ್ಪ , 25 ವರ್ಷ, ಪ.ಜಾತಿ ಜಿರಾಯ್ತಿ ರವರಿಗೆ ಆರೋಗ್ಯ ಇಲಾಖೆಯವರು ಕೋವಿಡ್-19 ಸಾಂಕ್ರಾಮಿಕ ರೋಗದ ಸಂಬಂಧ ದಿ:09.09.2020 ರವರೆಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರಲು ಸೂಕ್ತ ತಿಳುವಳಿಕೆಗಳನ್ನು ನೀಡಿ ನಿಗಾವಣೆಯಲ್ಲಿರಲು ಆದೇಶ ಮಾಡಿದ್ದು, ಸದರಿ ದಿನೇಶ್ ಬಿನ್ ಚಿಕ್ಕನರಸಿಂಹಪ್ಪರವರು ದಿ:04.09.2020 , 05.09.2020 , 07.09.2020 ಮತ್ತು 08.09.2020 ರಂದು ಹೋಂ ಕ್ವಾರಂಟೈನ್ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ಸದರಿ ವ್ಯಕ್ತಿಯ ಮೊಬೈಲ್ ನಂಬರ್ 9663953363 ಎಂಬುದಾಗಿ ತಿಳಿದು ಬಂದಿದ್ದು, ದಿನೇಶ್ ರವರು ಮಾನವ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸಾಂಕ್ರಾಮಿಕ ರೋಗ ಸೊಂಕು ಹರಡುವ ಸಂಭವವಿದೆ ಎಂದು ತಿಳಿದೂ ಉದ್ದೇಶ ಪೂರ್ವಕವಾಗಿ ಸಾರ್ವಜನಿಕರಿಗೆ ಭಯವನ್ನುಂಟು ಮಾಡಲು ಕಾರಣನಾಗಿ  ಹೋಂ ಕ್ವಾರಂಟೈನ್ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿದ್ದು, ಸದರಿಯವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.54/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ: 09.09.2020  ರಂದು ಸಂಜೆ 04:45 ಗಂಟೆಗೆ ಪಿರ್ಯಾದಿದಾರರಾದ ಚಿಕ್ಕಬಳ್ಳಾಪುರ ನಗರ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಶ್ರೀ ಹೊನ್ನೇಗೌಡ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ದೂರಿನ ಸಾರಾಂಶವೆನೆಂದರೆ ತಾನು ಮದ್ಯಾಹ್ನ 2.30 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರದಲ್ಲಿರುವ ಇಂಡಿಯನ್ ಪಬ್ಲಿಕ್ ಸ್ಕೂಲ್ ಬಳಿ ಕೆರೆ ಅಂಗಳದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರಾಗಿ  ಚಿಕ್ಕಬಳ್ಳಾಪುರ ನಗರದ ವಾಸಿ ವಿನಯ್, ಪೆರೇಸಂದ್ರದ ವಾಸಿ ಗಜೇಂದ್ರ ಪಿ,ಸಿ ಎಂಬುವವರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಬರುವಂತೆ ಕೋರಿರುತ್ತೆ ಹಾಗೂ ಸಿಬ್ಬಂಧಿಯಾದ ಹೆಚ್.ಸಿ-84 ಶ್ರೀ ವೆಂಕಟೇಶಪ್ಪ,ಜಯಣ್ಣ ಸಿಪಿಸಿ-152, ಪಿ.ಸಿ-259 ಪರಶುರಾಮ ಬೋಯಿ, ಪಿ.ಸಿ-142 ಶ್ರೀ ಅಶೋಕ,  ಚಾಲಕ ಎ.ಪಿ.ಸಿ-140 ಶ್ರೀ ನಂದೀಶ್ ರವರುಗಳೊಂದಿಗೆ  ಮದ್ಯಾಹ್ನ 3.00 ಗಂಟೆಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-139  ರಲ್ಲಿ ಠಾಣೆ ಬಿಟ್ಟು ಸರ್ಕಾರಿ ಆಸ್ಪತ್ರೆ, ಸಾಧಮಠ ರಸ್ತೆ, ಬುದ್ದ ಸರ್ಕಲ್,ಗಂಗನಮಿದ್ದೆ ರಸ್ತೆ ಮುಖಾಂತರ ಬಾಪೂಜಿನಗರದಲ್ಲಿರುವ ಇಂಡಿಯನ್ ಪಬ್ಲಿಕ್ ಸ್ಕೂಲ್ ಬಳಿ ಹೋಗಿ ಜೀಪನ್ನು ನಿಲ್ಲಿಸಿ ಪಶ್ಚಿಮದ ಕಡೆಗೆ ಸ್ವಲ್ಪ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಕೆರೆ ಅಂಗಳದ ಖಾಲಿ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ನೋಡಿ ಜೂಜಾಟುತ್ತಿದ್ದ 4 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಡಿದುಕೊಂಡು ತನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ಶಿವಕುಮಾರ @ ಶಿವ ಬಿನ್ ಗಂಗಾಧರಪ್ಪ, 21 ವರ್ಷ, ಪ.ಜಾತಿ, ಕಂಬಿಕೆಲಸ, ವಾಸ; ವಾರ್ಡ್ ನಂ: 13, ಬಾಪೂಜಿನಗರ ಚಿಕ್ಕಬಳ್ಳಾಪುರ.2) ಪ್ರವೀಣ ಬಿನ್ ಶ್ರೀರಾಮ, 23 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ; 13 ನೇ ವಾರ್ಡ್ ಬಾಪೂಜಿನಗರ, ಚಿಕ್ಕಬಳ್ಳಾಪುರ ನಗರ. 3) ಲೋಕೇಶ ಬಿನ್ ನಾರಾಯಣಪ್ಪ, 23 ವರ್ಷ, ಗಾರೆಕೆಲಸ, ವಾಸ: ವಾರ್ಡ್ ನಂ: 13, ಚಿಕ್ಕಬಳ್ಳಾಪುರ ನಗರ. 4) ನಿಖಿಲ್ ಬಿನ್ ಗೋಪಾಲ,19 ವರ್ಷ, ಪ.ಜಾತಿ, ಕೂಲಿ ಕೆಲಸ, ವಾಸ: ವಾರ್ಡ್ ನಂ:13, ಬಾಪೂಜಿ ನಗರ, ಚಿಕ್ಕಬಳ್ಳಾಪುರ ನಗರ.  ವಾಸಿಗಳಾಗಿದ್ದು ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 1730/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 1730/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು ಮದ್ಯಾಹ್ನ 3.15 ಗಂಟೆಯಿಂದ ಸಂಜೆ 4.15 ಗಂಟೆಯವರೆಗೆ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಸಂಜೆ 4.30 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸಿದ್ದರ ಮೇರೆಗೆ ಈ ಪ್ರ,ವ,ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.329/2020 ಕಲಂ. 269,270 ಐ.ಪಿ.ಸಿ:-

          ದಿನಾಂಕ 09-09-2020 ರಂದು ಸಂಜೆ 7-00 ಗಂಟೆಗೆ ಸಿಪಿಸಿ 185 ಶ್ರೀನಿವಾಸ ಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 09-09-2020 ರಂದು ತನಗೆ ಠಾಣಾ ವ್ಯಾಪ್ತಿಯ 32 ಬೀಟ್ ಕತ್ಯರ್ವಕ್ಕೆ ನೇಮಿಸಿದ್ದು ಅದರಂತೆ ತಾನು ತನ್ನ ಬೀಟ್ ವ್ಯಾಪ್ತಿಯ ಕೊಂಗನಹಳ್ಳಿ ಗ್ರಾಮಕ್ಕೆ ಹೋಗಿದ್ದು ಈ ಸಮಯದಲ್ಲಿ ಸದರಿ ಗ್ರಾಮದ ಹರೀಶ್ ಬಿನ್ ಸುಬ್ಬಣ್ಣ, 36 ವರ್ಷ, ಕೊಂಗನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, ಫೋನ್ ನಂ-9845150967 ರವರು ಕೋವಿದ್ ರೋಗದ ಸಂಬಂದ ಹಿನ್ನಲೆಯಲ್ಲಿ ಈತನು ರೋಗಿಯ ಪ್ರಾಥಮಿಕ ಸಂಪರ್ಕ ವ್ಯಕ್ತಿಯಾಗಿದ್ದು ಹೋಂ ಕ್ವಾರಂಟೈನ್ನಲ್ಲಿ ಇರಬೇಕಾಗಿರುತ್ತೆ ಆದರೆ ಕಾನೂನು ಉಲ್ಲಂಘಿಸಿ ಮನೆಯಿಂದ ಹೊರ ಹೋಗಿರುವುದಾಗಿ ಮಾಹಿತಿ ಬಂದಿದ್ದು, ನಂತರ ನಾನು ಅವರ ಮನೆಗೆ ಹೋಗಿ ನೋಡಲಾಗಿ ಆತನು ಮನೆಯಲ್ಲಿ ಇರಲಿಲ್ಲ. ನಂತರ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗಿ ಈತನು ಬೆಂಗಳೂರು ಜಿಲ್ಲೆ ಹೊಸಕೊಟೆ ನಗರದ Silver Spork Limit Unit ನಲ್ಲಿ ಕೆಲಸ ಮಾಡುತ್ತಿದ್ದು. ಸದರಿ ಕೈಗಾರಿಕೆಯಲ್ಲಿ ಕೆಲಸ ಮಾಡುವ 03 ಉದ್ಯೋಗಿಗಳಿಗೆ ಕೊರೋನಾ ಖಾಯಿಲೆ ಬಂದಿದ್ದು, ಮೇಲ್ಕಂಡ ಹರೀಶ್ ರವರು ಸದರಿ ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ವ್ಯಕ್ತಿಯಾಗಿದ್ದು, ವೈದ್ಯರು ಕೋವಿಡ್-19 ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದಿದ್ದರಿಂದ ಈತನಿಗೆ ದಿನಾಂಕ:09-09-2020 ರ ವರೆಗೂ ಹೋಮ್ ಕ್ವಾರಂಟೈನ್ನಲ್ಲಿರುವಂತೆ ಸೂಚನೆಗಳನ್ನು ನೀಡಿ ಕೈಗೆ ಸೀಲ್ ಮಾಡಿ ಪ್ರತ್ಯೇಕಗೊಳಿಸುವಿಕೆ (Home Quarntine) ನಿಗಾವಣೆಯಲ್ಲಿರಲು ಆದೇಶ ಮಾಡಿ ಮನೆಗೆ ಕಳುಹಿಸಿಟ್ಟಿರುತ್ತಾರೆ. ಮನುಷ್ಯರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿದೆ ಎಂದು ತಿಳಿದು ಸಹ ಹರೀಶ್ ಬಿನ್ ಸುಬ್ಬಣ್ಣ ರವರು ನಿರ್ಲಕ್ಷ್ಯತನದಿಂದ ದಿನಾಂಕ:08-09-2020 ರಂದು ಬೆಳಿಗ್ಗೆ 09-00 ರಿಂದ ಸಂಜೆ 6-00 ಗಂಟೆಯವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿರುತ್ತೆ. ಆದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.106/2020 ಕಲಂ. 269,270 ಐ.ಪಿ.ಸಿ:-

          ದಿನಾಂಕ: 09/09/2020 ರಂದು ರಾತ್ರಿ 8:30 ಗಂಟೆಗೆ  ಪಿರ್ಯಾದಿದಾರರಾದ ಸನಾವುಲ್ಲಾ ಹೆಚ್ ಸಿ 108 ರವರು ಠಾಣೆಗೆ ಹಾಜರಾಗಿ ವರದಿಯ ಸಾರಾಂಶವೆನೆಂದರೆ  ದಿನಾಂಕ: 09/09/2020 ರಂದು ಮಾನ್ಯ ಪಿ. ಐ  ಸಾಹೇಬರು ತನಗೆ 11 ನೇ ಬೀಟ್ ನ ವಿಶೇಷ ಗಸ್ತಿಗೆ ನೇಮಿಸಿದ್ದು, ಕೊರೊನಾ ಸಾಂಕ್ರಾಮಿಕ ರೋಗ (ಕೋವಿಡ್ 19) ಖಾಯಿಲೆ ಹರಡದಂತೆ ಯಾರೂ ಸಾರ್ವಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾದಂತೆ ಹಾಗೂ ಯಾರಾದರೂ ಹೊಸಬರು ಬಂದಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದು, ಅದರಂತೆ ತಾನು ಕೆ.ಆರ್ ಬಡಾವಣೆ ಕಡೆ ಸಂಜೆ 6:30 ಗಂಟೆಯ ಸಮಯದಲ್ಲಿ ಅಮಾನುಲ್ಲಾ ರವರು ಅವರ ಮನೆಯ ಮುಂದೆ ರಸ್ತೆಯಲ್ಲಿ ಮತ್ತು ನಗರದ ಇತರೆ ಕಡೆ ಬೇರೆ ದಿನಗಳಲ್ಲಿಯೋ ಸಹ ಸಾರ್ವಜನಿಕ ರಸ್ತೆಯಲ್ಲಿ ಓಡಾಡುತ್ತಿರುವುದಾಗಿ ಕಂಡುಬಂದಿರುತ್ತೆ. ಕೆ.ಆರ್ ಬಡಾವಣೆಯ ವಾಸಿ ಅಮಾನುಲ್ಲಾ ಷರೀಪ್  ಬಿನ್ ಅಬ್ದುಲ್ ರೂಪ್, 50 ವರ್ಷ, ಮುಸ್ಲಿಂ ಜನಾಂಗ, ಕೆ.ಆರ್ ಬಡಾವಣೆ,  ಚಿಂತಾಮಣಿ ನಗರ ರವರಿಗೆ ದಿನಾಂಕ: 31.08.2020 ರಂದು ಕೋವಿಡ್ ಪರೀಕ್ಷೆ ಮಾಡಿಸಿದ್ದು ನಂತರ ಸದರಿಯವರಿಗೆ ಕೋವಿಡ್ ಪರೀಕ್ಷೆಯ ವರದಿಯು ಪಾಸಿಟಿವ್ ಎಂತ ಬಂದಿದ್ದು, ನಂತರ ಸದರಿಯವರನ್ನು ಮಸ್ತೇನಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ದಿನಾಂಕ: 06/09/2020 ರಂದು ಮನೆಗೆ ವಾಪಾಸ್ಸಾಗಿರುತ್ತಾರೆ. ಅದರಂತೆ ತಾಲ್ಲೂಕು  ಆರೋಗ್ಯಧಿಕಾರಿಗಳು ಇವರಿಗೆ ಮನೆಯಲ್ಲಿಯೇ ಹೋಂ ಕ್ವಾರೆಂಟೆನ್ ಇರಲು ಆದೇಶಿಸಿರುತ್ತಾರೆ. ಆದರೆ  ಅಮಾನುಲ್ಲಾ ರವರಿಗೆ ಮನೆಯಿಂದ ಹೊರ ಬರದಂತೆ ತಿಳಿಸಿದರೂ ಸಹ ದಿನಾಂಲ: 09/09/2020 ರಂದು ಕೆ.ಆರ್ ಬಡಾವಣೆಯ ಬೀದಿಗಳಲ್ಲಿ ವಿನಾಃ ಕಾರಣ ಓಡಾಡಿರುವುದು (ಜಿಯೋ ಇನ್ ಪೇಂಚನ್ ವೈಲೇಷನ್ ) ಕಂಡುಬಂದಿರುತ್ತೆ. ಸದರಿಯವರಿಗೆ ಕೊರೊನಾ ಸಾಂಕ್ರಾಮಿಕ ಖಾಯಿಲೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕುನ್ನು ಹರಡುವ ಸಂಭವಿರುವುದಾಗಿ ತಿಳಿದಿದ್ದರೂ ಸಹ ಅವರ ಮನೆಯ ಮುಂದೆ ಬೀದಿಯಲ್ಲಿ ಮತ್ತು ನಗರದ ವಿವಿಧ ಕಡೆಗಳಲ್ಲಿ ಓಡಾಡಿ ನಿರ್ಲಕ್ಷ್ಯತೆ ಮಾಡಿರುತ್ತಾರೆ. ಆದ್ದರಿಂದ ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂ 106/2020 ಕಲಂ 269,270 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.107/2020 ಕಲಂ. 269,270 ಐ.ಪಿ.ಸಿ:-

          ದಿನಾಂಕ: 09/09/2020 ರಂದು ರಾತ್ರಿ 8:45 ಗಂಟೆಗೆ  ಪಿರ್ಯಾದಿದಾರರಾದ ಮುಕ್ತಿಯಾರ್ ಪಾಷ ,  ಎ ಎಸ್ ಐ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೆನೆಂದರೆ  ದಿನಾಂಕ: 09/09/2020 ರಂದು ಮಾನ್ಯ ಪಿ. ಐ  ಸಾಹೇಬರು ತನಗೆ ರಕ್ಷಕ್ ವಾಹನದಲ್ಲಿ  ವಿಶೇಷ ಗಸ್ತಿಗೆ ನೇಮಿಸಿದ್ದು, ಕೊರೊನಾ ಸಾಂಕ್ರಾಮಿಕ ರೋಗ (ಕೋವಿಡ್ 19) ಖಾಯಿಲೆ ಹರಡದಂತೆ ಯಾರೂ ಸಾರ್ವಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾದಂತೆ ಹಾಗೂ ಯಾರಾದರೂ ಹೊಸಬರು ಬಂದಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದು, ಅದರಂತೆ ತಾನು ಅಶ್ವಿನಿ ಬಡಾವಣೆ ಕಡೆ ರಾತ್ರಿ 8:10 ಗಂಟೆಯ ಸಮಯದಲ್ಲಿ ದೇವಮ್ಮ  ರವರು ಅವರ ಮನೆಯ ಮುಂದೆ ರಸ್ತೆಯಲ್ಲಿ ಮತ್ತು ನಗರದ ಇತರೆ ಕಡೆ ಬೇರೆ ದಿನಗಳಲ್ಲಿಯೋ ಸಹ ಸಾರ್ವಜನಿಕ ರಸ್ತೆಯಲ್ಲಿ ಓಡಾಡುತ್ತಿರುವುದಾಗಿ ಕಂಡುಬಂದಿರುತ್ತೆ. ಅಶ್ವಿನಿ ಬಡಾವಣೆಯ ವಾಸಿ ದೇವಮ್ಮ ಕೋಂ ಶ್ರೀನಿವಾಸರೆಡ್ಡಿ, 45 ವರ್ಷ, ವಕ್ಕಲಿಗರು, ಗೃಹಿಣಿ, ಅಶ್ವಿನಿ ಬಡಾವಣೆ,  ಚಿಂತಾಮಣಿ ನಗರ ರವರಿಗೆ ದಿನಾಂಕ: 29.08.2020 ರಂದು ಕೋವಿಡ್ ಪರೀಕ್ಷೆ ಮಾಡಿಸಿದ್ದು ನಂತರ ದಿ: 01/09/2020 ರಂದು ಸದರಿಯವರಿಗೆ ಕೋವಿಡ್ ಪರೀಕ್ಷೆಯ ವರದಿಯು ಪಾಸಿಟಿವ್ ಎಂತ ಬಂದಿದ್ದು, ನಂತರ ಸದರಿಯವರನ್ನು ಮಸ್ತೇನಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ದಿನಾಂಕ: 07/09/2020 ರಂದು ಮನೆಗೆ ವಾಪಾಸ್ಸಾಗಿರುತ್ತಾರೆ. ಅದರಂತೆ ತಾಲ್ಲೂಕು  ಆರೋಗ್ಯಧಿಕಾರಿಗಳು ಇವರಿಗೆ ಮನೆಯಲ್ಲಿಯೇ ಹೋಂ ಕ್ವಾರೆಂಟೆನ್ ಇರಲು ಆದೇಶಿಸಿರುತ್ತಾರೆ. ಆದರೆ  ದೇವಮ್ಮ ರವರಿಗೆ ಮನೆಯಿಂದ ಹೊರ ಬರದಂತೆ ತಿಳಿಸಿದರೂ ಸಹ ದಿನಾಂಕ: 09/09/2020 ರಂದು ಅಶ್ವಿನಿ ಬಡಾವಣೆಯ ಬೀದಿಗಳಲ್ಲಿ ವಿನಾಃ ಕಾರಣ ಓಡಾಡಿರುವುದು (ಜಿಯೋ ಇನ್ ಪೇಂಚನ್ ವೈಲೇಷನ್ ) ಕಂಡುಬಂದಿರುತ್ತೆ. ಸದರಿಯವರಿಗೆ ಕೊರೊನಾ ಸಾಂಕ್ರಾಮಿಕ ಖಾಯಿಲೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕುನ್ನು ಹರಡುವ ಸಂಭವಿರುವುದಾಗಿ ತಿಳಿದಿದ್ದರೂ ಸಹ ಅವರ ಮನೆಯ ಮುಂದೆ ಬೀದಿಯಲ್ಲಿ ಮತ್ತು ನಗರದ ವಿವಿಧ ಕಡೆಗಳಲ್ಲಿ ಓಡಾಡಿ ನಿರ್ಲಕ್ಷ್ಯತೆ ಮಾಡಿರುತ್ತಾರೆ. ಆದ್ದರಿಂದ ಸದರಿಯವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ವರದಿಯನ್ನು ಪಡೆದು ಠಾಣಾ ಮೊ.ಸಂ: 107/2020  ಕಲಂ 269, 270 ಐಪಿಸಿ ರೀತ್ಯಾ  ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.108/2020 ಕಲಂ. 15(ಎ), 32(3) ಕೆ.ಇ ಆಕ್ಟ್:-

          ದಿನಾಂಕ:10/09/2020 ರಂದು  ಪಿರ್ಯಾದಿದಾರರಾ ಮಂಜುನಾತ್ ಸಿ ಹೆಚ್ ಸಿ 38 ಡಿಸಿಬಿ ಸಿಇಎನ್ ಪೊಲೀಸ್ ಠಾಣೆ ರವರು  ಠಾಣೆ ಹಾಜರಾಗಿ ಮಾಲು ಮತ್ತು ಆರೋಪಿ, ಪಂಚನಾಮೆಯೊಂದಿಗೆ ನೀಡಿದು ದೂರಿನ ಸಾರಾಂಶವೆನೆಂದರೆ ಬೆಳಿಗ್ಗೆ 12-30 ಗಂಟೆಗೆ CHC 38  ಮಂಜುನಾಥ್ ,DCB/CEN ಪೊಲೀಸ್ ಠಾಣೆ,  ಚಿಕ್ಕಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ವರದಿದಿನಾಂಕ: 10.09.2020 ರಂದು    ಪಿಐ ಶ್ರೀ ರಾಜಣ್ಣ ರವರ ಆದೇಶದಂತೆ ನಾನು ಮತ್ತು  ಸಿ ಹೆಚ್ ಸಿ 198 ಮಂಜುನಾಥ ರವರುಗಳಿಗೆ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಪತ್ತೆಕಾರ್ಯಕ್ಕೆ ನೇಮಿಸಿದ್ದು, ಅದರಂತೆ ಈ ದಿನ ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚಿಂತಾಮಣಿ ನಗರದ ಬೆಂಗಳೂರು ರಸ್ತೆ, ಎನ್.ಆರ್ ಬಡಾವಣೆ ಕಡೆ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಕೆ.ಇ.ಬಿ ಕಛೇರಿ ರಸ್ತೆಯ ಮುಂಭಾಗದಲ್ಲಿರುವ ಸ್ನೇಹ ರೆಡ್ಡಿ ಮಿಲ್ಟ್ರೀ ಹೋಟಲ್ ಮುಂಭಾಗ ರಸ್ತೆಯಲ್ಲಿ ಅಕ್ರಮವಾಗಿ ಮಧ್ಯಪಾನ ಮಾಡಲು ಸಾರ್ವಜನಿಕ ಸ್ಥಳದಲ್ಲಿ ಅನುವುಮಾಡಿಕೊಟ್ಟಿದ್ದ ಅಸಾಮಿಯ ಮೇಲೆ ಪಂಚರೊಂದಿಗೆ ದಾಳಿ ಮಾಡಿ ಹೆಸರು ಮತ್ತು ವಿಳಾಸ ಕೇಳಲಾಗಿ ರಾಮಚಂದ್ರಪ್ಪ ಬಿನ್ ಲೇಟ್ ಚಿಕ್ಕವೆಂಕಟರಾ್ಯಪ್ಪ, 50 ವರ್ಷ, ಕುರುಬ ಜನಾಂಗ, ಮಿಲ್ಟ್ರಿ ಹೋಟಲ್ ನಲ್ಲಿ ಕೆಲಸ, ಗುಡುಮಾರಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿದ್ದ 1) BAGPIPER DELUXE WHISKEY ಯ ಮದ್ಯ ತುಂಬಿದ 180 ML  ನ 05    ಟೆಟ್ರಾ ಪ್ಯಾಕೆಟ್ ಗಳು 2 ) OLD TAVERN WHISKEY ಯ ಮದ್ಯ ತುಂಬಿದ 180 ML  ನ  03    ಟೆಟ್ರಾ ಪ್ಯಾಕೆಟ್ ಗಳು 3) OLD TAVERN WHISKEY ಮದ್ಯ ತುಂಬಿದ 90 ML  ನ   05   ಟೆಟ್ರಾ ಪ್ಯಾಕೆಟ್ ಗಳು 4) BAGPIPER DELUXE WHISKEY ಯ ಮದ್ಯ ತುಂಬಿದ 90 ML  ನ  05    ಟೆಟ್ರಾ ಪ್ಯಾಕೆಟ್ ಗಳು 5) ಐದು ಪ್ಲಾಸ್ಟೀಕ್ ಗ್ಲಾಸುಗಳು 6) ಎರಡು ನೀರಿನ ಬಾಟಲ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ವಶಪಡಿಸಿಕೊಂಡ ಮಾಲು ಒಟ್ಟು 2 ಲೀ 340 ಎಂ.ಎಲ್ ಇದ್ದು, ಅದರ ಬೆಲೆ 1399.01 ರೂ ಗಳಾಗಿರುತ್ತದೆ. ಯಾವುದೇ ಪರವಾನಿಗೆ ಪಡೆಯದೆ ತನ್ನ ಹೋಟೆಲ್ ಮುಂಭಾಗದ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಅಸಾಮಿ, ಮಾಲುನ್ನು ಮತ್ತು ಅಸಲು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯನ್ನು ಪಡೆದು ಪ್ರ ವ ವರದಿಯನ್ನು ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.234/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಕ 09/09/2020 ರಂಧು ಮದ್ಯಹ್ನ 2-00 ಗಂಟೆಗೆ ಪಿರ್ಯಾದಿ ಶ್ರೀಮತಿ ವರಲಕ್ಷ್ಮೀ ಕೋಂ ಬಾಬು, 38 ವರ್ಷ, ಆದಿಕರ್ನಾಟಕ ಜನಾಂಗ, ಮುನಿಫಲ್ ಕಛೇರಿಯಲ್ಲಿ ಕೆಲಸ, ಸಂತೆ ಮೈದನ ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ :07/09/2020 ರಂದು ಬೆಳಿಗ್ಗೆ 10-00  ಗಂಟೆ ಸಮಯದಲ್ಲಿ ಸ್ವಂತ ಕೆಲಸದ ನಿಮಿತ್ತ ಗುಡಿಬಂಡೆ ಟೌನಿಗೆ ಹೋಗಿದ್ದರು. ಈ ದಿನ  ಸಂಜೆ ಸುಮಾರು 5-30 ಗಂಟೆ ಸಮಯದಲ್ಲಿ ನನಗೆ ಪರಿಚಯ ಇರುವ ಹುಲಿಕುಂಟೆ ಗ್ರಾಮದ ವಾಸಿ  ಗಂಗರಾಜು ಬಿನ್ ಹನುಮಂತರಾಯಪ್ಪ  ರವರು ನನಗೆ ಕರೆ ಮಾಡಿ ನಿಮ್ಮ ಗಂಡ ಬಾಬು ರವರಿಗೆ ಗೌರಿಬಿದನೂರು ತಾಲ್ಲುಕು ವಾಟದಹೊಸಹಳ್ಳಿ ಕ್ರಾಸ್ ಬಳಿ ಇರುವ ಹುಲಿಕುಂಟೆ ಕ್ರಾಸ್ ನಲ್ಲಿ ಅಪಘಾತ ಆಗಿರುವುದಾಗಿ , ನಿಮ್ಮ ಗಂಡನನ್ನು ಯಾವುದೋ ಆಂಬುಲೆನ್ಸ್ ನಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು  ಎಂದು ತಿಳಿಸಿದರು. ನಾನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡನಿಗೆ ಅಪಘಾತ ಆಗಿರುವುದು ನಿಜವಾಗಿರುತ್ತೆ. ವಿಚಾರಿಸಲಾಗಿ ನನ್ನ ಗಂಡ ತನ್ನ ಬಾಬತ್ತು  ಕೆ.ಎ-04-ಜೆ.ಸಿ-3945 ನೊಂದಣಿ ಸಂಖ್ಯೆಯ ಬಜಾಜ್ ಸಿ.ಟಿ -100   ದ್ವಿ ಚಕ್ರ ವಾಹನದಲ್ಲಿ  ದಿನಾಂಕ 07/09/2020 ರಂದು ಗುಡಿಬಂಡೆ ಟೌನ ನಲ್ಲಿ ಕೆಲಸ ಮುಗಿಸಿಕೊಂಡು  ವಾಪಸ್ಸು ಗೌರಿಬಿದನೂರು ಟೌನಿಗೆ ಬರಲು ಸಂಜೆ ಸುಮಾರು4-50 ಗಂಟೆ ಸಮಯದಲ್ಲಿ  ಗೌರಿಬಿದನೂರು ತಾಲ್ಲುಕು ವಾಟದಹೊಸಹಳ್ಳಿ ಕ್ರಾಸ್ ಬಳಿ ಇರುವ ಹುಲಿಕುಂಟೆ ಕ್ರಾಸ್ ನಲ್ಲಿ ಬರುತ್ತಿದ್ದಾಗ ಎದರು ಗಡೆಯಿಂದ ಯಾವುದೋ ಒಂದು ನಾಲ್ಕು ಚಕ್ರದ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಗಂಡನು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕೆ ಹೊಡೆಯಿಸಿ ಅಪಘಾತ ಪಡಿಸಿದ ಪರಿಣಾಮ ನನ್ನ ಗಂಡನಿಗೆ ಬಲ ಮೊಣಕಾಲಿಗೆ ತೀರ್ವ ಸ್ವರೂಪದ ರಕ್ತಗಾಯ,  ಬಲಗೈ ರಕ್ತಗಾಯವಾಗಿದ್ದು, ಮತ್ತು ಇತರ ಕಡೆ ತರಚಿದ ಗಾಯಗಳಾಗಿರುತ್ತೆ. ನಂತರ ಗಾಯಗೊಂಡಿದ್ದ ನನ್ನ ಗಂಡನನ್ನು ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ  ತಂದು ದಾಖಲು ಮಾಡಿರುತ್ತಾರೆ. ಅಪಘಾತ ಪಡಿಸಿದ ನಾಲ್ಕು ಚಕ್ರದ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿ ನಿಲಿಸದೇ ಹೊರಟು ಹೋಗಿರುತ್ತಾರೆ.  ಸದರಿ ನಾಲ್ಕು ಚಕ್ರದ ವಾಹನದ ನೊಂದಣಿ ಸಂಖ್ಯೆ ತಿಳಿದಿರುವುದಿಲ್ಲ. ನಂತರ ವೈದ್ಯರ ಸಲಹೆ ಮೇರೆಗೆ  ಬೆಂಗಳೂರು ಪ್ರೋ ಲೈಫ್ ಆಸ್ಪತ್ರೆಯಲ್ಲಿ ಚಿಕಿತೆಗಾಗಿ ದಾಖಲು ಮಾಡಿದ್ದು, ನನ್ನ ಗಂಡನನ್ನು ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿದ್ದರಿಂದ  ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ನನ್ನ ಗಂಡನನ್ನು ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ನೊಂದಣಿ ಸಂಖ್ಯೆ ಗೊತ್ತಿಲ್ಲದ ನಾಲ್ಕು ಚಕ್ರದ ವಾಹನದ ಚಾಲಕ ಮತ್ತು  ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿದೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.235/2020 ಕಲಂ. 269,270 ಐ.ಪಿ.ಸಿ :-

          ದಿನಾಂಕ:10/09/2020 ರಂದು ಬೆಳಿಗ್ಗೆ 09-00 ಗಂಟೆಗೆ ಪಿ.ಸಿ-80 ಶ್ರೀನಾಥರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 10-09-2020 ರಂದು  ಬೆಳಿಗ್ಗೆ  ಸುಮಾರು  7 -00 ಗಂಟೆಯಲ್ಲಿ  ನಾನು  ಹೊಸೂರು ಹೊರಠಾಣೆಯಲ್ಲಿ ಕರ್ತವ್ಯವನ್ನು  ಮಾಡುತ್ತಿದ್ದು  ಕೋಟಾಲದಿನ್ನೇ, ಮುದುಗೆರೆ, ಕಾದಲವೇಣಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು  ಬೆಳಿಗ್ಗೆ 08-00 ಗಂಟೆಯಲ್ಲಿ ವೈಜಕೂರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗಸ್ತು ಮಾಡುತ್ತಿದ್ದಾಗ  ಬಂದ ಖಚಿತ ಮಾಹಿತಿಯ ಮೇರೆಗೆ ವೈಜಕೂರಹಳ್ಳಿ ಗ್ರಾಮದ  ಪ್ರಕಾಶ ಬಿನ್  ಕೃಷ್ಣಪ್ಪ, 29 ವರ್ಷ, ಬೋವಿ ಜನಾಂಗ, ರವರಿಗೆ  ಕೋವಿಡ್ -19  ಸೋಂಕು ಬಂದಿದ್ದು  ಆಸ್ಪತ್ರೆಯಿಂದ  ಬಿಡುಗಡೆ ಗೊಂಡಿದ್ದು  ಸದರಿಯವರಿಗೆ ಮನೆಯಲ್ಲಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಬೇಕೆಂದು ಸೂಚನೆಯನ್ನು ಆರೋಗ್ಯ  ಇಲಾಖೆಯವರು ನೀಡಿದ್ದರೂ ಸಹಾ ದಿನಾಂಕ 04-09-2020 ರಂದು ಬೆಳಿಗ್ಗೆ 09-00 ಗಂಟೆಗೆ ಬಂದಿದ್ದು  11-00 ಗಂಟೆಗೆ ಗ್ರಾಮದಿಂದ ಹೋಗಿರುತ್ತಾರೆಂದು ವಿಚಾರ ತಿಳಿಯಿತು. ಗ್ರಾಮದಲ್ಲಿ ಪ್ರಕಾಶ ಬಿನ್ ಕೃಷ್ಣಪ್ಪ, 29 ವರ್ಷ, ಬೋವಿ ಜನಾಂಗ,ವ್ಯವಸಾಯ, ವಾಸ  ವೈಜಕೂರಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ಮೊಬೈಲ್ ನಂ. 9741416192 ರವರು ಓಡಾಡಿರುತ್ತಾರೆ.  ಗ್ರಾಮದಲ್ಲಿ ಕೋವಿಡ್-19 ಕೊರೋನಾ ವೈರಸ್ ಹರಡುತ್ತದೆಯೆಂದು ತಿಳಿದಿದ್ದರೂ ಸಹಾ ಮನೆಯಲ್ಲಿರದೆ ಊರಲ್ಲಿ ಓಡಾಡಿ ಆರೋಗ್ಯ ಇಲಾಖೆಯವರು ನೀಡಿರುವ ಸೂಚನೆಗಳನ್ನು ಉಲ್ಲಘನೆ ಮಾಡಿದ್ದು ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿರುವ ವರದಿಯ ಮೇರೆಗೆ ಠಾಣಾ ಮೊ.ಸಂ.211/2020 ಕಲಂ.269,271 ಐಪಿಸಿ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.132/2020 ಕಲಂ.78(3) ಕೆ.ಪಿ ಆಕ್ಟ್:-

          ದಿನಾಂಕ 09/09/2020 ರಂದು ಸಂಜೆ 5:00 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 06/09/2020 ರಂದು ಮದ್ಯಾಹ್ನ 1:15 ಗಂಟೆಯಲ್ಲಿ DCB-CEN ಪೊಲೀಸ್ ಠಾಣೆಯ ಹೆಚ್.ಸಿ 192 ರಾಜಗೋಪಾಲ್  ರವರು ತಾನು ಮತ್ತು ಪಿ.ಸಿ 535 ಶ್ರೀನಿವಾಸ ರವರು ಗೌರಿಬಿದನೂರಿನ ಗಸ್ತಿನಲ್ಲಿದ್ದಾಗ ನಗರದ ಪೀರುಸಾಬ್ ಗಲ್ಲಿಯಲ್ಲಿ ಯಾರೋ ಆಸಾಮಿ ಮಟ್ಕಾ ಜುಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಪಂಚರನ್ನು ಕರೆದುಕೊಂಡು ಹೋಗಿ ಮಟ್ಕಾ ಜೂಜಾಟವಾಡುತ್ತಿದ್ದವನನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ರಾಮಲಿಂಗಯ್ಯ ಬಿನ್ ಮೈಲಾರಪ್ಪ, 49 ವರ್ಷ, ಕುರುಬರು, ಕಾಚಮಾಚೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಆತನನ್ನು ಪರಿಶೀಲನೆ ಮಾಡಲಾಗಿ ಆತನ ಬಳಿ 630 ರೂಪಾಯಿಗಳು ಇದ್ದು ಹಣದ ಬಗ್ಗೆ ವಿಚಾರಿಸಲಾಗಿ ಹಣವು ಮಟ್ಕಾ ಜೂಜಾಟವಾಡುವ ವ್ಯಕ್ತಿಗಳಿಂದ ಪಡೆದ ಹಣ ಎಂದು ತಿಳಿಸಿದ್ದು ಆಸಾಮಿಯನ್ನು ವಶಕ್ಕೆ ಪಡೆದು ವರದಿಯನ್ನು ನೀಡಿದ ಮೇರೆಗೆ ಠಾಣಾ ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ಪ್ರಕರಣ ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.133/2020 ಕಲಂ.78(3) ಕೆ.ಪಿ ಆಕ್ಟ್:-

          ದಿನಾಂಕ ದಿನಾಂಕ 06/09/2020 ರಂದು ಮದ್ಯಾಹ್ನ 2:15 ಗಂಟೆಯಲ್ಲಿ DCB-CEN ಪೊಲೀಸ್ ಠಾಣೆಯ ಹೆಚ್.ಸಿ 192 ರಾಜಗೋಪಾಲ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂಧರೆ, ತಾನು ಮತ್ತು ಪಿ.ಸಿ 535 ಶ್ರೀನಿವಾಸ ರವರು ಗೌರಿಬಿದನೂರಿನ ಗಸ್ತಿನಲ್ಲಿದ್ದಾಗ ಎಂ.ಜಿ ವೃತ್ತದ ದುರ್ಗಾ ಪೋಟೋ ವರ್ಕ್ಸ ಮುಂಭಾಗ ಯಾರೋ ಆಸಾಮಿ ಮಟ್ಕಾ ಜುಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಪಂಚರನ್ನು ಕರೆದುಕೊಂಡು ಹೋಗಿ ಮಟ್ಕಾ ಜೂಜಾಟವಾಡುತ್ತಿದ್ದವನನ್ನು ಹಿಡಿದುಕೊಂಡು ಹೆಸರು ವಿಳಾಸವನ್ನು ಕೇಳಲಾಗಿ ಗಂಗಾದರಪ್ಪ @ ಸತೀಶ ಬಿನ್ ದಾಳಪ್ಪ, 48 ವರ್ಷ, ಪ.ಜಾತಿ ತಿಂಡ್ಲೂರು ಗ್ರಾಮ, ಮಧುಗಿರಿ ತಾಲ್ಲೂಕು ಎಂದು ತಿಳಿಸಿದ್ದು ಆತನನ್ನು ಪರಿಶೀಲನೆ ಮಾಡಲಾಗಿ ಆತನ ಬಳಿ 760 ರೂಪಾಯಿಗಳು ಇದ್ದು ಹಣದ ಬಗ್ಗೆ ವಿಚಾರಿಸಲಾಗಿ ಹಣವು ಮಟ್ಕಾ ಜೂಜಾಟವಾಡುವ ವ್ಯಕ್ತಿಗಳಿಂದ ಪಡೆದ ಹಣ ಎಂದು ತಿಳಿಸಿದ್ದು ಆಸಾಮಿಯನ್ನು ವಶಕ್ಕೆ ಪಡೆದು ವರದಿಯನ್ನು ನೀಡಿದ ಮೇರೆಗೆ ಠಾಣಾ ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ಪ್ರಕರಣವನ್ನು ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.134/2020 ಕಲಂ.78(3) ಕೆ.ಪಿ ಆಕ್ಟ್:-

          ದಿನಾಂಕ 09/09/2020 ರಂದು ಸಂಜೆ 6:00 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ 06/09/2020 ರಂದು ಲೊಕೇಶ್ ಹೆಚ್.ಸಿ. 214 ಗೌರಿಬಿದನೂರು ನಗರ ಪೊಲೀಸ್ ಠಾಣೆ  ರವರು ಮದ್ಯಾಹ್ನ 2-45 ಗಂಟೆಗೆ ತಾನು ಮತ್ತು ಹೆಚ್.ಸಿ. 244 ರವರು ಗಸ್ತಿನಲ್ಲಿದ್ದಾಗ ಗೌರಿಬಿದನೂರು ನಗರದ ಕೋಟೆ ಬಳಿ ಐ.ಟಿ.ಎ ಕಾಲೇಜಿನ ಬಳಿ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದು ಮಾಹಿತಿ ಮೇರೆಗೆ ಕೂಡಲೇ ನಾನು ಪಂಚರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಮರೆಯಲ್ಲಿ ನಿಂತು ನೋಡಲಾಗಿ ಐ.ಟಿ.ಎ ಕಾಲೇಜಿನ ಬಳಿ  ಯಾರೋ ಒಬ್ಬ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು. ನಾವು ಪಂಚರ ಸಮ್ಮುಖದಲ್ಲಿ ಆತನನ್ನು ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ತನ್ನ ಹೆಸರು ಮಂಜುನಾಥ ಬಿನ್ ವೇಣು ಗೋಪಾಲ್ , 30 ವರ್ಷ, ವ್ಯಾಪಾರ, ಬಲಜಿಗರು, ಕೋಟೆ, ಗೌರಿಬಿದನೂರು ನಗರ ಪೊ.ನಂ. 9902857559 ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೇ ಪರವಾನಗಿ ಇಲ್ಲದೇ ಇದ್ದು, ಆರೋಪಿಯ ಬಳಿ ಒಂದು ಮಟ್ಕಾ ಚೀಟಿ ಹಾಗೂ ಒಂದು ಪೆನ್ನು ಮತ್ತು ನಗದು ಹಣ 620- ರೂಪಾಯಿಗಳು  ಇದ್ದು,  ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಸಂಜೆ  3-00  ಗಂಟೆಯಿಂದ  04-00 ಗಂಟೆ ಯವರೆಗೆ ಪಂಚನಾಮೆಯನ್ನು ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊದಿಗೆ ಸಂಜೆ 04-30  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ನೀಡಿದ  ವರದಿಯನ್ನು ವರದಿಯನ್ನು ಪಡೆದು ಎನ್.ಸಿ.ಆರ್. ದಾಖಲು ಮಾಡಿದ್ದು ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.135/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ: 09/09/2020 ರಂದು ಸಂಜೆ 6-30 ಗಂಟೆಗೆ ಪಿ.ಎಸ್.ಐ. ರವರು ಆರೋಪಿ ಮತ್ತು ಮಾಲಿನೊಂದಿಗೆ ನೀಡಿದ ವರದಿಯನ್ನು ಪಡೆದಿದ್ದರ ಸಾರಾಂಶ ವೇನೆಂದರೆ,  ಚಂದ್ರಕಲಾ ಆದ ನಾನು ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು. ದಿನಾಂಕ 09/09/2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಠಾಣೆ ಯಲ್ಲಿದ್ದಾಗ, ಗೌರಿಬಿದನೂರು ಗುಂಡಾಪುರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟು ಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾ ವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು, ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಸಿಬ್ಬಂದಿಯಾದ ಲೋಕೇಶ್ ಹೆಚ್ ಸಿ 214, ಲಕ್ಷ್ಮೀನಾರಾಯಣ ಪಿ.ಸಿ. 17 ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ ಗುಂಡಾಪುರ ಬಳಿ  ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಯಾರೋ ಓಬ್ಬ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಮಾರಾಟ ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿ ಕೊಟ್ಟಿ ರುವುದು ಕಂಡು ಬಂದಿದ್ದು ಆಲ್ಲಿಗೆ ಹೋಗಿ ಆತನಿಗೆ ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ತಾನು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು ,ಆತನನ್ನು ಸಿಬ್ಬಂದಿಯ ಮುಖಾಂತರ ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಈರಪ್ಪ ಬಿನ್ ಲೇಟ್ ಓಬಳಪ್ಪ, 45 ವರ್ಷ, ಈಡಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಗುಂಡಾಪುರ ಗ್ರಾಮ, ಗೌರಿಬಿದನೂರು ಟೌನ್. ಎಂತ ತಿಳಿಸಿ ರುತ್ತಾನೆ.ಸ್ಥಳದಲ್ಲಿ 1)HAYWARDS CHEERS WHISKY ಎಂದು ನಮೂದಿಸಿರುವ 90 ಎಂ.ಎಲ್ ನ 15 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 04 ಖಾಲಿಯಾಗಿದ್ದು, ಸ್ಥಳದಲ್ಲಿ 4 ಪೇಪರ್ ಲೋಟಗಳು ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 30.32/-ರೂಪಾಯಿಗಳು ಆಗಿದ್ದು, ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ 333.52/- ರೂಪಾಯಿಗಳು ಆಗಿರುತ್ತೆ.ಅವುಗಳೆಲ್ಲವನ್ನು ಪಂಚರ ಸಮಕ್ಷಮ  ಸಂಜೆ 05-15 ಗಂಟೆಯಿಂದ 06-00 ಗಂಟೆಯವರೆಗೆ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡಿದ ಪಂಚ ನಾಮೆಯ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಸಂಜೆ 6-30 ಗಂಟೆಗೆ ವಾಪಸ್ಸಾಗಿದ್ದು, ಮುಂದಿನ ಕ್ರಮ ಕೈಗೊಳ್ಳಬೇಕೆಂಬ ಆದೇಶದಂತೆ ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.136/2020 ಕಲಂ. 269,271 ಐ.ಪಿ.ಸಿ:-

          ದಿನಾಂಕ: 10/09/2020 ರಂದು ಬೆಳಿಗ್ಗೆ 8-30 ಗಂಟೆಗೆ ಪಿಸಿ 104 ನರಸಿಂಹಮೂರ್ತಿರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ಸಿ. 104 ನರಸಿಂಹಮೂರ್ತಿ ಆದ ನಾನು  ನಿವೇದಿಸಿಕೊಳ್ಳುವುದೇನೆಂದರೆ, ದಿನಾಂಕ: 10/09/2020 ರಂದು ನಾನು ಠಾಣಾಪಹರೆ ಕರ್ತವ್ಯವನ್ನು ಮುಗಿಸಿಕೊಂಡು ವಿಶ್ರಾಂತಿಗಾಗಿ ಮನೆಗೆ ಹೋಗು ತ್ತಿರುವಾಗ ಹಳೆಆರ್.ಟಿ.ಓ. ಚೆಕ್ ಪೋಸ್ಟ್ ಬಳಿ ನಾಗರಾಜ ಬಿನ್ ರಾಜೇಂದ್ರಪ್ರಸಾದ್ ಕಲ್ಲಂತರಾಯನ ಗುಟ್ಟೆ ಗೌರಿಬಿದನೂರು ನಗರದವರು ತಿರುಗಾಡುತ್ತಿದ್ದರು. ನಾಗರಾಜರವರಿಗೆ ದಿನಾಂಕ: 30/08/2020 ರಂದು  ಕೋವಿಡ್ 19 ಪರೀಕ್ಷೆಗೆ ಒಳಪಡಿಸಿ ಕೊರೊನಾ ಖಾಯಿಲ್ ಪಾಸಿಟಿವ್ ಬಂದ ಕಾರಣ ಸರ್ಕಾರದ ಆದೇಶದಂತೆ 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದ್ದು ಅದರಂತೆ ಸದರಿ ವ್ಯಕ್ತಿಯು ಹೋಂ ಕ್ವಾರೆಂಟೈನ್ ನಲ್ಲಿ ಇರದೇ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮಾರಣಾಂತಿಕ ಕಾಯಿಲೆಯಾದ ಕೋವಿಡ್-19 ಸೋಂಕು ಹರಡುತ್ತದೆ ಎಂದು ಗೊತ್ತಿದ್ದರೂ ಸಹ  ಮನೆಯಿಂದ ಬೇರೆ ಕಡೆ ಗೌರಿಬಿದನೂರು ನಗರದಲ್ಲಿ ಓಡಾಡಲು ಹೋಗಿರುತ್ತಾರೆ. ಸದರಿ ವ್ಯಕ್ತಿಯು ಸರ್ಕಾರದ ಆದೇಶದಂತೆ 14 ದಿನಗಳ ಕಾಲ ಹೋಂ ಕ್ವಾರೆಂಟೈನ್ ನಲ್ಲಿ ಇರಬೇಕಾದ ಅವಶ್ಯಕತೆ ಇರುತ್ತದೆ, ಆದರೆ ಇವರು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದರಿಂದ ಇವರಿಂದ ಕೋವಿಡ್-19 ಮಾರಣಾಂತಿಕ ಖಾಯಿಲೆಯು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಇವರ ಮೇಲೆ ಸರ್ಕಾರದ ಆದೇಶದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.149/2020 ಕಲಂ. 269,271 ಐ.ಪಿ.ಸಿ:-

          ದಿನಾಂಕ:9/9/2020 ರಂದು ಪಿರ್ಯಾದಿ ಠಾಣಾ ಸಿಬ್ಬಂದಿ ಸಿ,ಪಿ,ಸಿ-84 ಮುನಿರಾಜು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ದಿನಾಂಕ:09/09/2020 ರಂದು ಮಾನ್ಯ ಪಿ,ಐ ಸಾಹೇಬರು 19 ನೇ ಗ್ರಾಮ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು 19 ನೇ ಗ್ರಾಮ ಗಸ್ತುಗೆ ಬರುವ ಚಿನ್ನಪ್ಪನಹಳ್ಳಿ ಗ್ರಾಮ, ದೊಡ್ಡಕುರುಬರಹಳ್ಳಿ ಗ್ರಾಮ, ತಟ್ಟಹಳ್ಳಿ, ಬೋಗೇನಹಳ್ಳಿ ಗ್ರಾಮಗಲ್ಲಿ ಗಸ್ತು ಮಾಡಿಕೊಂಡು ಮದ್ಯಹ್ನ 2.30 ಗಂಟೆ ಸಮಯದಲ್ಲಿ  ಮಿಂಚನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಯರ್ರಲಕ್ಕೇನಹಳ್ಳಿ ಗ್ರಾಮದ ಸಾರ್ವಜನಿಕರು ತನಗೆ ಕರೆ ಮಾಡಿ ತಮ್ಮ ಗ್ರಾಮದಲ್ಲಿ ಕೊರೊನ ಪಾಸಿಟಿವ್ ಬಂದಿರುವ ಶ್ರೀಮತಿ ರತ್ನಮ್ಮ ಕೋಂ ಅಕ್ಕಲಪ್ಪ  35 ವರ್ಷ, ಒಕ್ಕಲಿಗರು ರವರು ದಿನಾಂಕ:02/09/2020 ರಂದು ಕೊರೊನ ಪಾಸಿಟಿವ್ ಬಂದಿದ್ದು ಸದರಿಯವರು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದುಕೊಂಡು ತಮ್ಮ ಗ್ರಾಮಕ್ಕೆ ಬಂದಿದ್ದು ಸದರಿಯವರನ್ನು ಅವರ ಮನೆಯಲ್ಲಿ 14 ದಿನ ಹೊಂ ಕ್ವರೈಂಟೈನ್ ಮಾಡಿರುತ್ತಾರೆ, ಆದರೆ ಸದರಿಯವರು ಹೋಂ ಕ್ವಾರೈಂಟನ್ ನಲ್ಲಿರದೇ  ತಮ್ಮ ಗ್ರಾಮದಲ್ಲಿ ಎಲ್ಲೇಂದರೇ ಅಲ್ಲಿ ಓಡಾಡುತ್ತಿದ್ದಾರೆ, ಎಂದು ತಿಳಿಸಿದರು ನಂತರ ತಾನು ಮದ್ಯಹ್ನ 3.00 ಗಂಟೆಗೆ ಯರ್ರಲಕ್ಕೇನಹಳ್ಳಿ ಗ್ರಾಮಕ್ಕೆ ಹೋಗಿ ಸದರಿ ಆಸಾಮಿಯಾದ ಶ್ರೀಮತಿ ರತ್ನಮ್ಮ ಕೋಂ ಅಕ್ಕಲಪ್ಪ 35 ವರ್ಷ, ರವರನ್ನು ಅವರ ಮನೆಯಲ್ಲಿ ಚೆಕ್ ಮಾಡಲಾಗಿ ಸದರಿಯವರು ಹೋಂ ಕ್ವಾರೈಂಟನ್ ನಲ್ಲಿ ಇರುವುದಿಲ್ಲ ಸದರಿ ಆಸಾಮಿಯನ್ನು ನಿಗದಿತ ಅವಧಿಯವರೆಗೆ ಹೋಂ ಕ್ವಾರೈಂಟನ್ ನಲ್ಲಿರಲು ತಿಳಿಸಿದ್ದರೂ ಸಹ ಮೇಲ್ಕಂಡ ಆಸಾಮಿಯು ಹೋಂ ಕ್ವಾರೈಂಟನ್ ನಲ್ಲಿ ಇರದೇ ಸಾರ್ವಜನಿಕರಿಗೆ ಕೊವಿಡ್-19 ಸಾಂಕ್ರಮಿಕ ರೋಗವು ಹರಡುವ ಬಗ್ಗೆ ಗೊತ್ತಿದ್ದರು ಸಹ ನಿರ್ಲಕ್ಷ್ಯತನ ಮಾಡಿರುತ್ತಾನೆ. ಆದ್ದರಿಂದ ಮೇಲ್ಕಂಡ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.150/2020 ಕಲಂ. 269,271 ಐ.ಪಿ.ಸಿ:-

          ದಿನಾಂಕ:9/9/2020 ರಂದು ಪಿರ್ಯಾದಿ ಠಾಣಾ ಸಿಬ್ಬಂದಿ ಸಿ,ಪಿ,ಸಿ-85 ಸುನೀಲ್ ಕುಮಾರ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ದಿನಾಂಕ:09/09/2020 ರಂದು ಮಾನ್ಯ ಪಿ,ಐ ಸಾಹೇಬರು ಗುಡಿಬಂಡೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಗ್ರಾಮಗಳ ಕಡೆ ಕರೋನಾ ಸಾಂಕ್ರಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕರ್ತವ್ಯಕ್ಕೆ ನೇಮಿಸಿದ್ದು ಅದರಂತೆ ತಾನು ಎಲ್ಲೋಡು ಗ್ರಾಮ, ಕಡೇಹಳ್ಳಿ ಗ್ರಾಮ, ನಿಲುಕುಂಬ, ಯರ್ರಹಳ್ಳಿ, ಕಂಬಾಲಹಳ್ಳಿ, ಚೌಟಕುಂಟಹಳ್ಳಿ ಗ್ರಾಮಗಲ್ಲಿ ಗಸ್ತು ಮಾಡಿಕೊಂಡು ಮದ್ಯಹ್ನ 3.30 ಗಂಟೆ ಸಮಯದಲ್ಲಿ ಚೌಟಕುಂಟಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ನರಸಾಪುರ ಗ್ರಾಮದ ಸಾರ್ವಜನಿಕರು ತನಗೆ ಕರೆ ಮಾಡಿ ತಮ್ಮ ಗ್ರಾಮದಲ್ಲಿ ಕೊರೊನ ಪಾಸಿಟಿವ್ ಬಂದಿರುವ ಶ್ರೀ ಹನುಮಂತರೆಡ್ಡಿ ಬಿನ್ ಚಿಕ್ಕನಾರಾಯಣರೆಡ್ಡಿ, ರವರು ದಿನಾಂಕ:28/08/2020 ರಂದು ಕೊರೊನ ಪಾಸಿಟಿವ್ ಬಂದಿದ್ದು ಸದರಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ತಮ್ಮ ಗ್ರಾಮಕ್ಕೆ ಬಂದಿದ್ದು ಸದರಿಯವರನ್ನು ಅವರ ಮನೆಯಲ್ಲಿ 14 ದಿನ ಹೊಂ ಕ್ವರೈಂಟೈನ್ ಮಾಡಿರುತ್ತಾರೆ, ಆದರೆ ಸದರಿಯವರು ಹೋಂ ಕ್ವಾರೈಂಟನ್ ನಲ್ಲಿರದೇ ತಮ್ಮ ಗ್ರಾಮದಲ್ಲಿ ಎಲ್ಲೇಂದರೇ ಅಲ್ಲಿ ಓಡಾಡುತ್ತಿದ್ದಾರೆ, ಎಂದು ತಿಳಿಸಿದರು ನಂತರ ತಾನು ಮದ್ಯಹ್ನ 4.00 ಗಂಟೆಗೆ ನರಸಾಪುರ ಗ್ರಾಮಕ್ಕೆ ಹೋಗಿ ಸದರಿ ಆಸಾಮಿಯಾದ ಶ್ರೀ ಹನುಮಂತರೆಡ್ಡಿ ಬಿನ್ ಚಿಕ್ಕನಾರಾಯಣರೆಡ್ಡಿ, ರವರನ್ನು ಅವರ ಮನೆಯಲ್ಲಿ ಚೆಕ್ ಮಾಡಲಾಗಿ ಸದರಿಯವರು ಹೋಂ ಕ್ವಾರೈಂಟನ್ ನಲ್ಲಿ ಇರುವುದಿಲ್ಲ ಸದರಿ ಆಸಾಮಿಯನ್ನು ನಿಗದಿತ ಅವಧಿಯವರೆಗೆ ಹೋಂ ಕ್ವಾರೈಂಟನ್ ನಲ್ಲಿರಲು ತಿಳಿಸಿದ್ದರೂ ಸಹ ಮೇಲ್ಕಂಡ ಆಸಾಮಿಯು ಹೋಂ ಕ್ವಾರೈಂಟನ್ ನಲ್ಲಿ ಇರದೇ ಸಾರ್ವಜನಿಕರಿಗೆ ಕೊವಿಡ್-19 ಸಾಂಕ್ರಮಿಕ ರೋಗವು ಹರಡುವ ಬಗ್ಗೆ ಗೊತ್ತಿದ್ದರು ಸಹ ನಿರ್ಲಕ್ಷ್ಯತನ ಮಾಡಿರುತ್ತಾನೆ. ಆದ್ದರಿಂದ ಮೇಲ್ಕಂಡ ಆಸಾಮಿಯ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.101/2020 ಕಲಂ. 323,448,504,506 ಐ.ಪಿ.ಸಿ:-

          ದಿನಾಂಕ 10-09-2020 ರಂದು ಮಧ್ಯಾಹ್ನ 01.45 ಗಂಟೆಗೆ ಪಿರ್ಯಾಧಿದಾರರಾದ ಮಂಜುಳ ಕೋಂ ಕ್ರಿಷ್ಣಪ್ಪ, 43 ವರ್ಷ, ಬಲಜಿಗರು, ಜಿರಾಯ್ತಿ, ವಾಸ ನಂದನಹೋಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 10-09-2020 ರಂದು ಬೆಳಗ್ಗೆ ಸುಮಾರು 09.00 ಗಂಟೆ ಸಮಯದಲ್ಲಿ ತಾನು ಬಚ್ಚಲು ಮನೆ ತೊಟ್ಟಿಯಲ್ಲಿ ನೀರು ಎತ್ತಿಕೊಳ್ಳುತ್ತಿರುವಾಗ ಕೆ.ವಿ ಲಲಿತ ಎಂಬುವವರು ಏಕಾಏಕಿ ಬಚ್ಚಲು ಮನೆಯೊಳಗೆ ನುಗ್ಗಿ ಇದು ನನಗೆ ಸಂಬಂದಪಟ್ಟಿದ್ದು ನೀನು ಬಚ್ಚಲು ಮನೆ ಒಳಗೆ ಬರಬಾರದೆಂದು ಹೇಳಿ ತನ್ನ ಜುಟ್ಟು ಹಿಡದು ಎಳೆದಾಡಿ ಕೈಗಳಿಂದ ಮೈಮೇಲೆ ಹೊಡೆದು, ಕಾಲುಗಳಿಂದ ಒದ್ದು ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತನ್ನ ಮಗಳಾದ ಪ್ರಿಯಾಂಕಾ ರವರು ಅಡ್ಡ ಬರಲಾಗಿ ಅವರನ್ನು ಸಹ ಹೊಡೆದರು. ತಾನು ಮನೆಮುಂದೆ ಹೋಗುತ್ತಿದ್ದಾಗ ಮತ್ತೆ ತನ್ನ ಮನೆ ಒಳಗೆ ನುಗ್ಗಿ ಅಡಿಗೆ ಸಾಮಾನುಗಳು ಹೊರೆಗೆ ಬೀಸಾಡಿ ಈ ಮನೆಯಲ್ಲಿ ನೀನು ಇರಬಾರದು ಇದ್ದರೇ ನಿಮ್ಮನ್ನು ಸಾಯಿಸುತ್ತೇನೆ ನಿನಗೆ ಭಾಗ ಬರಬೇಕಾಗಿದ್ದರೇ ಕೋರ್ಟ್ ನಲ್ಲಿ ತೆಗೆದುಕೋ ನೀನು ಇಲ್ಲಿ ಇರಬಾರದು ಎಂದು ಹೇಳಿ ಮನೆಗೆ ಒಳಗೆ ನುಗ್ಗಿ ಮನೆಯಲ್ಲಿ ಇರುವ ಸಾಮಾನುಗಳನ್ನು ಹೊಡೆದು ಹಾಕಿ ಹೇ ಸೂಳೆಮುಂಡೆ, ಅಲ್ಕಾಮುಂಡೆ ಎಂದು ಬೈದು ಜೀವ ಬೆದರಿಕೆ ಹಾಕಿದ್ದು, ನಂತರ ತಮ್ಮ ಗ್ರಾಮದ ರೆಡ್ಡಿ ಮತ್ತು ಚಲಪತಿ ರವರು ಬಂದು ಜಗಳ ಬಿಡಿಸಿದರು. ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಸಾರಾಂಶವಾಗಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.60/2020 ಕಲಂ. 20(ಬಿ) NARCOTIC DRUGS & PSYCHOTROPIC SUBSTANCES ACT, 1985 :-

          ದಿನಾಂಕ:09-09-2020 ರಂದು ರಾತ್ರೀ 07-00 ಗಂಟೆಗೆ ಮಾನ್ಯ ಡಿ,ವೈ,ಎಸ್,ಪಿ ಚಿಕ್ಕ ಬಳ್ಳಾಪುರ ಉಪ ವಿಭಾಗ ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:09-09-2020 ರಂದು ಚಿಕ್ಕಬಳ್ಳಪುರ ಉಫ ವಿಭಾಗದ ಡಿ,ವೈ,ಎಸ್,ಪಿ  ಕೆ, ರವಿಶಂಕರ್ ಆದ ನಾನು ಬಾಗೇಪಲ್ಲಿ ಪೊಲೀಸ್ ಠಾಣೆಯ ಮೊ,ಸಂ 214/2020 ಎಸ್,ಸಿ/ಎಸ್,ಟಿ ಪ್ರಕರಣದಲ್ಲಿ ತನಿಖೆಗಾಗಿ ಬಾಗೇಪಲ್ಲಿಯಲ್ಲಿ ಇದ್ದಾಗ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ನಡುಂಪಲ್ಲಿ ಕ್ರಾಸ್ ನಲ್ಲಿ ಮಾದಕ ವಸ್ತುವಾದ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡಲು ದ್ವಿ ಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡಿಕೊಂಡು ಹೋಗುತ್ತಿರುವುದಾಗಿ  ಬಂದ ಖಚಿತ ಬಾತ್ಮೀ ಮೇರೆಗೆ ನಾನು ಕೂಡಲೇ ಮಾನ್ಯ ಎಸ್,ಪಿ ಸಾಹೇಬರಿಗೆ ವಿಚಾರ ತಿಳಿಸಿ ದಾಳಿ ಮಾಡಲು ಮೌಖಿಕವಾಗಿ ಅನುಮತಿಯನ್ನು ಪಡೆದುಕೊಂಡಿರುತ್ತೇನೆ, ನಂತರ ಮದ್ಯಾಹ್ನ ಸುಮಾರು 03-00 ಗಂಟೆಗೆ  ಮೇಲ್ಕಂಡ ಮಾಹಿತಿಯ ಆದಾರದ ಮೇರೆಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40 ಜಿ-1555 ರಲ್ಲಿ ನಮ್ಮ ಕಛೇರಿಯ ಸಿಬ್ಬಂದಿಯಾದ ಸಿ.ಹೆಚ್.ಸಿ-205 ರಮೇಶ .ಸಿ.ಹೆಚ್.ಸಿ-06 ಬಾಬು ಸಿ.ಪಿ.ಸಿ-286 ಗೌತಮ್ ಮತ್ತು ಜೀಪ್ ಚಾಲಕ ಎ.ಪಿ.ಸಿ.119 ಅಶೋಕ ರವರೊಂದಿಗೆ ಮಿಟ್ಟೆಮರಿ ಗ್ರಾಮಕ್ಕೆ ಹೋಗಿ ಅಲ್ಲಿ ಬಸ್ ನಿಲ್ದಾಣದಲ್ಲಿದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ಮೇಲ್ಕಂಡ ವಿಚಾರ ತಿಳಿಸಿ ಹಾಗೂ ಬಸ್ ಸ್ಯಾಂಡ್ನಲ್ಲಿರುವ ಮಾನಸ ಆಗ್ರೋ ಟ್ರೇಡರ್ಸ್ ಮಾಲೀಕ ಬೈರಾರೆಡ್ಡಿ ರವರಿಂದ ಡಿಜಿಟಲ್ ತೂಕದ ಸ್ಕೇಲನ್ನು ಪಡೆದು ನಾನು ಪಂಚಾಯ್ತಿದಾರರು ಹಾಗೂ ಸಿಬ್ಬಂದಿಯವರೊಂದಿಗೆ ನಡುಂಪಲ್ಲಿ ಕ್ರಾಸ್ ಬಳಿ ಹೋಗಿ ರಸ್ತೆಯಲ್ಲಿ ಕಾಯುತ್ತಿದ್ದಾಗ ಸಂಜೆ ಸುಮಾರು 4-00 ಗಂಟೆ ಸಮಯದಲ್ಲಿ ಪೈಪಾಳ್ಯ ಗ್ರಾಮದ ರಸ್ತೆಯ ಕಡೆಯಿಂದ ದ್ವಿ ಚಕ್ರ ವಾಹನ ಸಂಖ್ಯೆ ಕೆಎ-02 ಹೆಚ್,ಜಿ-4148 ಕೆಂಪು ಬಣ್ಣದ ಪಲ್ಸರ್ ದ್ವಿ ಚಕ್ರ ವಾಹನದಲ್ಲಿ ಇಬ್ಬರು ಆಸಾಮಿಗಳು ಬರುತ್ತಿದ್ದು ಅವರನ್ನು ತಡೆದು ನಿಲ್ಲಿಸಲಾಗಿ ಮದ್ಯದಲ್ಲಿ ಒಂದು ತುಂಬಿದ ಪ್ಲಾಸ್ಟಿಕ್ ಚೀಲ ಇದ್ದು ಅನುಮಾನಪಟ್ಟು ಬಿಚ್ಚಿ ನೋಡಲಾಗಿ ಅದರಲ್ಲಿ ಗಾಂಜಾ ಸೊಪ್ಪು ಕಂಡು ಬಂದಿರುತ್ತೆ, ಈ ಬಗ್ಗೆ ವಿಚಾರ ಮಾಡಲಾಗಿ ಹಿಂಬಾಗದಲ್ಲಿ ಕುಳಿತಿದ್ದ ನರೇಂದ್ರ ರವರು ತಾನು ತಮ್ಮ ಜಮೀನಿನಲ್ಲಿ ಬೆಳೆದು ಎಲ್ಲಿಯಾದರೂ ಮಾರಾಟ ಮಾಡಲೆಂದು ಸಾಗಾಣಿಕೆ ಮಾಡಿಕೊಂಡು ಹೋಗಿತ್ತಿರುತ್ತೇವೆಂದು ತಿಳಿಸಿದ್ದು ಇದು ಕಾನೂನು ಬಾಹಿರವಾಗಿರುವುದರಿಂದ ಅವರ ಹೆಸರು ವಿಳಾಸ ಕೇಳಲಾಗಿ  1) ಸಂತೋಷ @ ಶಿವು @ ಲೊಡ್ಡ ಬಿನ್ ರಾಮಣ್ಣ 22 ವರ್ಷ ನಾಯಕರು ಜಿರಾಯ್ತಿ ವಡಿಗೆರೆ ಗ್ರಾಮ ಬಾಗೇಪಲ್ಲಿ ತಾಲ್ಲೂಕು 2) ನರೇಂದ್ರ ಬಿನ್ ನಂಜುಂಡಪ್ಪ 27 ವರ್ಷ ಗೊಲ್ಲ ಜನಾಂಗ ಜಿರಾಯ್ತೀ ಪೈಪಾಳ್ಯ ಗ್ರಾಮ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾರೆ, ದ್ವಿ ಚಕ್ರ ವಾಹನ ಪರಿಶೀಲಿಸಲಾಗಿ ಕೆಎ-02 ಹೆಚ್,ಜಿ-4148 ಕೆಂಪು ಬಣ್ಣದ ಪಲ್ಸರ್ ದ್ವಿ ಚಕ್ರ ವಾಹನವಾಗಿದ್ದು ಸದರಿ ದ್ವಿ ಚಕ್ರ ವಾಹನ ಚಾಲನೆ ಮಾಡುತ್ತಿದ್ದ ಸಂತೋಷನು ದ್ವಿ ಚಕ್ರ ವಾಹನ ತನ್ನದೆಂದು ತಿಳಿಸಿರುತ್ತಾನೆ, ಸದರಿ ಪ್ಲಾಸ್ಟಿಕ್ ಚೀಲದಲ್ಲಿ ಇದ್ದ ಗಾಂಜಾವನ್ನು ನಾವು ಜೀಪಿನಲ್ಲಿ ತೆಗೆದುಕೊಂಡು ಹೋಗಿದ್ದ ಡಿಜಿಟಲ್ ಸ್ಕೇಲಿನಲ್ಲಿ ಪಂಚಾಯ್ತಿದಾರರ ಸಮಕ್ಷಮ ತೂಕ ಮಾಡಲಾಗಿ 02 ಕೆಜಿ 130 ಗ್ರಾಂ ಎಲೆ ಹೂವು ಬೀಜ ಕಾಂಡದಿಂದ ಕೂಡಿದ ಗಾಂಜಾ ಸೊಪ್ಪು ಇರುತ್ತೆ. ಸದರಿ ಮಾಲುಗಳನ್ನು ಮತ್ತು ದ್ವಿ ಚಕ್ರ ವಾಹನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ   ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿತರನ್ನು ವಶಕ್ಕೆ ಪಡೆದುಕೊಂಡಿರುತ್ತೆಸದರಿ ಮೇಲ್ಕಂಡ ಇಬ್ಬರು ಆರೋಪಿತರನ್ನು ಮತ್ತು ಅಮಾನತ್ತುಪಡಿಸಿಕೊಂಡಿರುವ ಮಾಲುಗಳನ್ನುಮತ್ತು ಅಸಲು ಪಂಚನಾಮೆಯನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು ಕಾನೂನು ರೀತ್ಯಾ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಂಡು ಸಂಬಂದಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡು ವರದಿ ಮಾಡಲು ಸೂಚಿಸಿದರ ಮೇರೆಗೆ ಠಾಣಾ ಮೊ,ಸಂ 60/2020 ಕಲಂ 20(ಬಿ) ಎನ್,ಡಿ,ಪಿ,ಎಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.98/2020 ಕಲಂ. 269 ಐ.ಪಿ.ಸಿ:-

          ದಿನಾಂಕ.10.09.2020 ರಂದು ಬೆಳಿಗ್ಗೆ 10.30 ಗಂಟೆಗೆ ಹೆಚ್.ಸಿ.162 ರವರು ಠಾಣೆಗೆ ಹಾಜರಾಗಿ ತಾನು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕರ್ತವ್ಯಗಳು ನಿರ್ವಹಿಸುತ್ತಿದ್ದು, ದಿನಾಂಕ:10-09-2020 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾಧಿಕಾರಿಗಳು ನನಗೆ ಗುಪ್ತ ಮಾಹಿತಿ ಸಂಗ್ರಹಿಸುವ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ವಿಶೇಷವಾಗಿ ಕೊರೋನ ಸಾಂಕ್ರಮಿಕ ರೋಗ (ಕೋವಿಡ್-2019) ಖಾಯಿಲೆ ಹರಡದಂತೆ ಯಾರೂ ಸಾರ್ವಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾದಂತೆ ಹಾಗೂ ಯಾರಾದರೂ ಹೊಸಬರು ಬಂದಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದರು, ಠಾಣಾಧಿಕಾರಿಗಳ ಆದೇಶದಂತೆ ಈ ದಿನ ಬೆಳಿಗ್ಗೆ 10-00 ಗಂಟೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್  ಸ್ಟ್ಯಾಂಡ್, ಸಂತೆ ಬೀದಿ, ಅಶೋಕ ರಸ್ತೆ ಇತ್ಯಾದಿ ಕಡೆಗಳಲ್ಲಿ ಹೋಗಿ ಬಾತ್ಮೀದಾರರಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಶಿಡ್ಲಘಟ್ಟ ಕಡದನಕುಂಟೆ ವಾಸಿ ಶಹತಾಜ್ ಎಂಬುವರು ಇವರ ಮೊಬೈಲ್ ನಂ.9036507866 ಆಗಿದ್ದು, ಸದರಿಯವರು ದಿನಾಂಕ.04.09.2020 ರಂದು ಕೋವಿಡ್-19 ಪರೀಕ್ಷೆಗೆ ಓಳಗಾಗಿದ್ದು, ಇವರಿಗೆ ಕೋವಿಡ್-19 ಪಾಸಿಟೀವ್ ವರದಿ ಬಂದಿರುವುದಾಗಿ ಸದರಿಯವರಿಗೆ ಹೊಂ ಕ್ವಾರೈಂಟೈನ್ ಇರಲು ಸಂಬಂದಪಟ್ಟ ವೈದ್ಯರು ತಿಳಿಸಿದ್ದು, ಅದರೆ ಇವರು ಹೊಂ ಕ್ವಾರೈಂಟೈನ್ ಇಲ್ಲದೆ ದಿನಾಂಕ.06.09.2020 ರಂದು ಶಿಡ್ಲಘಟ್ಟ ನಗರದಲ್ಲಿ ಬಂದು ಓಡಾಡಿಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು, ಸದರಿಯವರು ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವಿರುವುದಾಗಿ ತಿಳಿದಿದ್ದರೂ ಸಹ ಅವರ ಮನೆಯಲ್ಲಿ ಹೋಂ ಕ್ವಾರೈಂಟೈನ್ ಇರದೆ ಅವರ ಮನೆಯಿಂದ ಶಿಡ್ಲಘಟ್ಟ ನಗರಕ್ಕೆ ಬಂದು ಹೋಗಿ ನಿರ್ಲಕ್ಷ್ಯತೆ ಮಾಡಿರುತ್ತಾರೆಂತ ತಿಳಿದು ಬಂದಿದ್ದು,  ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ವರದಿಯ ಮೇರೆಗೆ ಠಾಣಾ ಮೊ.ಸಂ.98/2020 ಕಲಂ.269 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ. 269 ಐ.ಪಿ.ಸಿ:-

          ದಿನಾಂಕ.10.09.2020 ರಂದು ಬೆಳಿಗ್ಗೆ 11.30 ಗಂಟೆಗೆ ಹೆಚ್.ಸಿ-162 ರವರು ಠಾಣೆಗೆ ಹಾಜರಾಗಿ ತಾನು ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕರ್ತವ್ಯಗಳು ನಿರ್ವಹಿಸುತ್ತಿದ್ದು, ದಿನಾಂಕ:10-09-2020 ರಂದು ಬೆಳಿಗ್ಗೆ 08-00 ಗಂಟೆಗೆ ಠಾಣಾಧಿಕಾರಿಗಳು ನನಗೆ ಗುಪ್ತ ಮಾಹಿತಿ ಸಂಗ್ರಹಿಸುವ ಗಸ್ತು ಕರ್ತವ್ಯಕ್ಕೆ ನೇಮಿಸಿದ್ದು, ವಿಶೇಷವಾಗಿ ಕೊರೋನ ಸಾಂಕ್ರಮಿಕ ರೋಗ (ಕೋವಿಡ್-2019) ಖಾಯಿಲೆ ಹರಡದಂತೆ ಯಾರೂ ಸಾರ್ವಜನಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾದಂತೆ ಹಾಗೂ ಯಾರಾದರೂ ಹೊಸಬರು ಬಂದಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದರು, ಠಾಣಾಧಿಕಾರಿಗಳ ಆದೇಶದಂತೆ ಈ ದಿನ ಬೆಳಿಗ್ಗೆ 11-00 ಗಂಟೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸ್ ಸ್ಟ್ಯಾಂಡ್, ಸಂತೆ ಬೀದಿ, ಅಶೋಕ ರಸ್ತೆ ಇತ್ಯಾದಿ ಕಡೆಗಳಲ್ಲಿ ಹೋಗಿ ಬಾತ್ಮೀದಾರರಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಬೆಂಗಳೂರು ನಗರ ಹೆಬ್ಬಾಳ ಶ್ರೀರಾಮಪುರದ ವಾಸಿ ಶ್ರೀಮತಿ. ಭಾಗ್ಯಮ್ಮ ಕೊಂ ವೆಂಕಟರಾಯಪ್ಪ, ಎಂಬುವರ ಇವರ ಮೊಬೈಲ್ ನಂ.6362197811 ಆಗಿದ್ದು, ಸದರಿಯವರು ದಿನಾಂಕ.04.09.2020 ರಂದು ಕೋವಿಡ್-19 ಪರೀಕ್ಷೆಗೆ ಓಳಗಾಗಿದ್ದು, ಇವರಿಗೆ ಕೋವಿಡ್-19 ಪಾಸಿಟೀವ್ ವರದಿ ಬಂದಿರುವುದಾಗಿ ದಿನಾಂಕ.04.09.2020 ರಿಂದ 11.09.2020 ರವರೆಗೆ ಹೊಂ ಕ್ವಾರೈಂಟೈನ್ ಇರಲು ಸಂಬಂದಪಟ್ಟ ವೈದ್ಯರು ತಿಳಿಸಿದ್ದು, ಅದರೆ ಇವರು ಹೊಂ ಕ್ವಾರೈಂಟೈನ್ ಇಲ್ಲದೆ ದಿನಾಂಕ.08.09.2020 ರಂದು ಬೆಂಗಳೂರು ಶ್ರೀರಾಮಪುರದಿಂದ ಶಿಡ್ಲಘಟ್ಟ ನಗರದಲ್ಲಿ ಬಂದು ಓಡಾಡಿಕೊಂಡು ಹೋಗಿರುವುದಾಗಿ ತಿಳಿದು ಬಂದಿದ್ದು, ಸದರಿಯವರು ಕೋವಿಡ್-19 ಸಾಂಕ್ರಾಮಿಕ ಖಾಯಿಲೆ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವಿರುವುದಾಗಿ ತಿಳಿದಿದ್ದರೂ ಸಹ ಅವರ ಮನೆಯಲ್ಲಿ ಹೊಂ ಕ್ವಾರೈಂಟೈನ್ ಇರದೆ ಬೆಂಗಳೂರುನಿಂದ ಶಿಡ್ಲಘಟ್ಟ ನಗರಕ್ಕೆ ಬಂದು ಹೋಗಿ ನಿರ್ಲಕ್ಷ್ಯತೆ ಮಾಡಿರುತ್ತಾರೆಂತ ತಿಳಿದು ಬಂದಿದ್ದು, ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೊಟ್ಟ ವರದಿಯ ಮೇರೆಗೆ ಠಾಣಾ ಮೊ.ಸಂ.99/2020 ಕಲಂ.269 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.