ದಿನಾಂಕ :10/08/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.186/2020 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿ: 09-08-2020 ರಂದು ಮದ್ಯಾಹ್ನ 14:15 ಗಂಟೆಗೆ ಪಿರ್ಯಾಧಿದಾರರಾದ ಕೆ.ಬಾಲಾಜಿ ಬಿನ್ ಲೇಟ್ ವೆಂಕಟರಾಮಪ್ಪ, 38 ವರ್ಷ, ತೊಗಟ ಜನಾಂಗ, ಮಗ್ಗದ ಕೆಲಸ, ವಾಸ – 15/59-2859, ವೀವರ್ಸ್ ಕಾಲೋನಿ, ಕಿರಿಕೆರ ಹಿಂದೂಪುರ ಮಂಡಲಂ,  ಅನಂತಪುರ ಜಿಲ್ಲೆ, ಆಂದ್ರಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ನನ್ನ ತಂದೆ ವೆಂಕಟರಾಮಪ್ಪ ತಾಯಿ ಲಕ್ಷ್ಮೀದೇವಮ್ಮ ರವರಿಗೆ 1ನೇ ಕೆ ಬಾಲಾಜಿ ಆದ ನಾನು, 2ನೇ ಕೆ.ಕೇಶವ ಮತ್ತು 3ನೇ ಕೆ.ಶಾಂತಿ ಎಂಬ ಮೂರು ಜನ ಮಕ್ಕಳಿದ್ದೆವು. ನಮ್ಮ ತಂದೆ ಹಾಗೂ ನನ್ನ ತಂಗಿ ಈಗಾಗಲೇ ಮೃತಪಟ್ಟಿರುತ್ತಾರೆ. ನಮ್ಮ ಸ್ವಂತ ಊರು ಆಂದ್ರಪ್ರದೇಶದ ಸೋಮಂದೆಪಲ್ಲಿ ಆಗಿದ್ದು, ನಾನು ಹಿಂದೂಪುರದಲ್ಲಿ ಮದುವೆಯಾಗಿದ್ದು,  ನನ್ನ ಹೆಂಡತಿ ಮಕ್ಕಳೊಂದಿಗೆ ನಾನು ನಮ್ಮ ಮಾವನ ಮನೆಯಲ್ಲಿಯೇ ವಾಸವಾಗಿರುತ್ತೇನೆ. ನನ್ನ ತಮ್ಮನಿಗೆ ಇನ್ನೂ ವಿವಾಹವಾಗಿರುವುದಿಲ್ಲ. ನನ್ನ ತಮ್ಮ ಮತ್ತು ನನ್ನ ತಾಯಿ ಸೋಮಂದೆಪಲ್ಲಿಯ ಗೀತಾನಗರದಲ್ಲಿ ವಾಸವಾಗಿರುತ್ತಾರೆ. ನನ್ನ ತಮ್ಮ ಕೆ.ಕೇಶವ ಮಗ್ಗದ ಕೆಲಸ ಮಾಡಿಕೊಂಡಿದ್ದನು. ದಿನಾಂಕ:09/08/2020 ರಂದು ಮದ್ಯಾಹ್ನ 12:30 ಗಂಟೆಯಲ್ಲಿ ನಮ್ಮ ಗ್ರಾಮದ ಪಿ. ಮಂಜುನಾಥ ರವರು ನನಗೆ ಪೋನ್ ಮಾಡಿ ನಿನ್ನ ತಮ್ಮ ಕೇಶವನಿಗೆ ಬಾಗೇಪಲ್ಲಿಯ ಟಿ.ಬಿ ಕ್ರಾಸ್ ಬಳಿ ಅಪಘಾತವಾಗಿ ಮೃತಪಟ್ಟಿರುವುದಾಗಿ ಯಾರೋ ಪೋನ್ ಮಾಡಿರುವುದಾಗಿ ತಿಳಿಸಿದನು. ಕೂಡಲೇ ನಾನು ಬಾಗೇಪಲ್ಲಿಗೆ ಬಂದು ನೋಡಲಾಗಿ ಲಾಷನ್ನು ಬಾಗೇಪಲ್ಲಿ ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿಯಿತು. ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನನ್ನ ತಮ್ಮನ ಹೆಣವನ್ನು ಇರಿಸಿದ್ದರು. ನನ್ನ ತಮ್ಮನ ತಲೆಯು ಅಪಘಾತದಿಂದ  ಜಜ್ಜಿಹೋಗಿತ್ತು. ಹೊಟ್ಟೆಯ ಮೇಲೆ ಚಕ್ರ ಹರಿದು ತೀವ್ರತರವಾದ ಗಾಯವಾಗಿತ್ತು. ನನ್ನ ತಾಯಿಯನ್ನು ವಿಚಾರ ಮಾಡಲಾಗಿ ಇಂದು ಬೆಳಿಗ್ಗೆ ಸುಮಾರು 8:30 ಗಂಟೆಯಲ್ಲಿ ಕೆಲಸದ ನಿಮಿತ್ತ ಬಾಗೇಪಲ್ಲಿಗೆ ಹೋಗಿ ಬರುವುದಾಗಿ ಹೇಳಿ ಸೋಮಂದೆಪಲ್ಲಿಯಿಂದ ಬಾಗೇಪಲ್ಲಿಗೆ ಬಂದಿದ್ದಾಗಿ  ತಿಳಿಸಿದರು. ನನ್ನ ತಮ್ಮನಾದ ಕೆ. ಕೇಶವ ಕೆಲಸದ ನಿಮಿತ್ತ ಬಾಗೇಪಲ್ಲಿ ಗೆ ಬಂದಾಗ ಬಾಗೇಪಲ್ಲಿಯ ಟಿ.ಬಿ ಕ್ರಾಸ್ ಬಳಿ ಪೂರ್ವದ ಕಡೆಗೆ ಇರುವ ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೆಳಿಗ್ಗೆ ಸುಮಾರು 10:00 ಗಂಟೆಯಲ್ಲಿ ಯಾವುದೋ ವಾಹನದ ಚಾಲಕನು ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಹೊಡೆಸಿ ವಾಹನವನ್ನು ನನ್ನ ತಮ್ಮನ ತಲೆ ಮತ್ತು ಹೊಟ್ಟೆಯ ಮೇಲೆ ಹತ್ತಿಸಿಕೊಂಡು ಹೋದ ಪರಿಣಾಮ ನನ್ನ ತಮ್ಮನ  ತಲೆ ಜಜ್ಜಿ ಹೋಗಿದ್ದು, ಸ್ಥಳದಲ್ಲಿಯೇ ನನ್ನ ತಮ್ಮ ಕೇಶವ ಮೃತಪಟ್ಟಿರುವುದಾಗಿ ತಿಳಿಯಿತು. ವಾಹನದ ಚಾಲಕ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಹೊರಟು ಹೋಗಿರುತ್ತಾನೆ.  ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ತಮ್ಮನಿಗೆ ಅಪಘಾತವನ್ನುಂಟು ಮಾಡಿದ ವಾಹನ ಮತ್ತು ವಾಹನದ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇನೆ, ಎಂದು ನೀಡಿದ ದೂರು.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.187/2020 ಕಲಂ. 78(3) ಕೆ.ಇ ಆಕ್ಟ್:-

          ದಿ: 08-08-2020 ರಂದು ರಾತ್ರಿ 9:30 ಗಂಟೆಗೆ ರೆಡ್ಡಪ್ಪ ಎ.ಎಸ್.ಐ ರವರು ಠಾಣೆಗೆ ಆರೋಪಿ ಮತ್ತು ಮಾಲು, ಅಸಲು ದಾಳಿ ಪಂಚನಾಮೆಯೊಂದಿಗೆ ಹಾಜರಾಗಿ ನೀಡಿದ ವರಧಿಯನ್ನು ಸ್ವೀಕರಿಸಿದ್ದರ ಸಾರಾಂಶ – ದಿನಾಂಕ: 08.08.2020 ರಂದು ರಾತ್ರಿ 08-30 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪುರದ ಗಸ್ತಿನಲ್ಲ್ಲಿದ್ದಾಗ ಬಾಗೇಪಲ್ಲಿ ಪುರದ ಡಿ.ವಿ.ಜಿ. ರಸ್ತೆಯಲ್ಲಿರುವ ವಾಲ್ಮೀಕಿ ನಗರದ ಗಡ್ಡಂ ರಮೇಶ್ ಬಿಲ್ಡಿಂಗ್ ಬಳಿ ಯಾರೋ ಒಬ್ಬ ಆಸಾಮಿ  ಸಾರ್ವಜನಿಕ ಸ್ಥಳದಲ್ಲಿ  1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸಿಪಿಸಿ-214 ಅಶೋಕ್ ರವರು ದ್ವಿಚಕ್ರ ವಾಹನದಲ್ಲಿ ಹೋಗಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ನಾವು ಮತ್ತು ಪಂಚಾಯ್ತಿದಾರರು ರಾತ್ರಿ 08-40 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ  ವಿವಿಧ ಅಂಕಿಗಳಿಗೆ  ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ ಒಂದು ರೂಗೆ 70 ರೂ ಕೊಡುವುದಾಗಿ  ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು  ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ  ಮಟ್ಕಾ ಚೀಟಿಗಳನ್ನು ಬರೆಯುತ್ತಿದ್ದವನನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ  ವಿವಿಧ ನಂಬರ್ಗಳಿಗೆ ವಿವಿಧ ಮೊತ್ತ ಬರೆದಿರುವ  ವಿವಿಧ ಅಂಕಿಗಳ ಒಂದು ಚೀಟಿ  ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ  730/- ರೂಗಳನ್ನು  ವಶಕ್ಕೆ ಪಡೆದು ಆತನ ಹೆಸರು ಮತ್ತು  ವಿಳಾಸವನ್ನು ಕೇಳಲಾಗಿ  ಸಿಕಂದರ್ ಬಿನ್ ಹುಸೇನ್ ಸಾಬ್. 35 ವರ್ಷ, ಮುಸ್ಮೀಮರು, ಆಟೋ ಮೆಕಾನಿಕ್ ಕೆಲಸ, ವಾಸ: ಕಾರಕೂರು ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದು ಆರೋಪಿಯೊಂದಿಗೆ ರಾತ್ರಿ 9-30 ಗಂಟೆಗೆ  ಠಾಣೆಗೆ ಹಾಜರಾಗಿ ಅಸಲು ದಾಳಿ ಪಂಚನಾಮೆ ಮಾಲು ಮತ್ತು ಆರೋಪಿಯನ್ನು ಠಾಣೆಯಲ್ಲಿ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲು ಠಾಣಾಧಿಕಾರಿಗಳಿಗೆ ಸೂಚಿಸಿ ವರದಿಯನ್ನು ನೀಡಿರುತ್ತೇನೆ,ಎಂದು ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ಉಲ್ಲೇಖ ಸಂಖ್ಯೆ: 481/2020 ರೀತ್ಯ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆರೋಪಿತನ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುವ ಸಲುವಾಗಿ ಘನ ನ್ಯಾಯಾಲಯದ ಅನುಮತಿ ನೀಡಲು ಕೋರಿ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 10-08-2020 ರಂದು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.67/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ10/08/2020 ರಂದು  ಚಿಂತಾಮಣಿ  ಸರ್ಕಾರಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳು   ವಿಶ್ವನಾಥ ಬಿನ್ ನರಸಿಂಹಪ್ಪ 33 ವರ್ಷ, ನಾಯಕ ಜನಾಂಗ ಜಿರಾಯ್ತಿ ಪುಲ್ಲಗುಂಡ್ಲಹಳ್ಳಿ  ಗ್ರಾಮ ಚಿಂತಾಮಣಿ  ತಾಲ್ಲೂಕು ಮೊ ನಂ: 6361702288 ರವರು ನೀಡಿದ ಹೇಳಿಕೆಯ ಸಾರಂಶವೇನೆಂದರೆ ತಾನು ಮೇಲ್ಕಂಡ  ವಿಳಾಸದಾರರಾಗಿದು ಜಿರಾಯ್ತಿ  ಮಾಡಿಕೊಂಡು ಜೀವನ ಮಾಡಿಕೊಂಡಿದ್ದು. ತಮಗೂ ಮತ್ತು ತಮ್ಮ ದೊಡ್ಡಪ್ಪನ ಮಗನಾದ ರಮೇಶನಿಗೆ  ಜಮೀನು ವಿಚಾರದಲ್ಲಿ ಈ ಹಿಂದೆ ಬಾಯಿ ಮಾತಿನಲ್ಲಿ  ಗಲಾಟೆಗಳು ಆಗಿದ್ದು ಹೀಗಿರುವಲ್ಲಿ ನೆನ್ನೆ ದಿನ ದಿನಾಂಕ: 09/08/2020 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ  ತಾನು ತಮ್ಮ  ಗ್ರಾಮದ ಮುನಿವೆಂಕಟಪ್ಪ ರವರ ಅಂಗಡಿಯಲ್ಲಿ ಬೆಂಕಿಪೊಟ್ಟಣ ತೆಗೆದು ಕೊಳ್ಳಲು ಹೋಗಿದ್ದಾಗ ತಾನು ಮುನಿವೆಂಕಟಪ್ಪರವನ್ನು ಸಾಲ ಕೇಳಿದಕ್ಕೆ  ಅವರು ಮುನಿವೆಂಕಟಪ್ಪ ಸಾಲ ಕೊಡುವುದಿಲ್ಲವೆಂದು ಹೇಳುತಿದ್ದರು ಆಗ ತಮ್ಮ ದೊಡ್ಡಪ್ಪನ ಮಗನಾದ ರಮೇಶ್ ಬಿನ್ ಮುನಿಶಾಮಪ್ಪ ರವರು  ಅಲ್ಲಿಗೆ ಬಂದು ತನ್ನನ್ನು  ಕುರಿತು ಲೋಪರ್ ನನ್ನ ಮಗನೆ  ನಿನ್ನ ಅಮ್ಮನೇ ಕೇಯ್ಯ ಎಂದು ಅವಾಚ್ಯವಾಗಿ ಬೈದು ಅಲ್ಲಿಯೇ ಬಿದ್ದಿದ್ದ  ಒಂದು ಕಲ್ಲುನ್ನು  ತೆಗೆದು ಕೊಂಡು ತನ್ನ ತಲೆಯ ಹಿಂಭಾಗದಲ್ಲಿ ಹೊಡೆದು ರಕ್ತ ಗಾಯವನ್ನು ಪಡಿಸಿದನು ಗಲಾಟೆಯ  ಶಬ್ದವನ್ನು  ಕೇಳಿಕೊಂಡು ರಮೇಶನ  ಅಣ್ಣನಾದ ಮೂರ್ತಿ ಬಿನ್ ಮುನಿಶಾಮಪ್ಪ  ಸುರೇಶ ಬಿನ್ ಮುನಿಶಾಮಪ್ಪ ನವರು ಅಲ್ಲಿಗೆ ಬಂದು ತನ್ನನ್ನು ಕುರಿತು ಈ ನನ್ನ  ಮಗನನ್ನು  ಸುಮ್ಮನೇ  ಬೀಡಬಾರದೆಂದು  ಅವಾಚ್ಯ ವಾಗಿ ಬೈದು ಮೂರ್ತಿ ರವರು ಅಲ್ಲಿಯೇ ಬಿದ್ದಿದ ಕೋಲನ್ನು  ತೆಗೆದುಕೊಂಡು ನನ್ನ ಎಡ ಮುಂಗಾಲಿನ ಮೇಲೆ ಹೊಡೆದು ಗಾಯ ಪಡಿಸಿದನ್ನು ಸುರೇಶ ರವರು ಕೈಗಳಿಂದ  ತನ್ನ ಮೈ ಕೈಗಳ ಮೇಲೆ ಹೊಡೆದು  ತನ್ನ ಬಟ್ಟೆಗಳನ್ನು ಹರಿದು ಹಾಕಿದರು ನಂತರ ಮೂರು  ಜನ ಸೇರಿಕೊಂಡು  ತನ್ನನ್ನು ಕುರಿತು ಲೋಪರ್  ನನ್ನ ಮಗನೇ ಹೆಚ್ಚಿಗೆ ಮಾತಾನಾಡಿದರೆ ನಿನ್ನನ್ನು ಸಾಯಿಸಿಬಿಡುತ್ತೇವೆಂದು ಪ್ರಾಣ ಬೇದರಿಕೆಯನ್ನು ಹಾಕಿರುವುದಾಗಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.68/2020 ಕಲಂ. 143,147,341,323,324,504,506 ರೆ/ವಿ 149 ಐ.ಪಿ.ಸಿ:-

          ಈ ದಿನ ದಿನಾಂಕ 10/08/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಆಂಜಪ್ಪ ಬಿನ್ ವೆಂಕಟರಾಯಪ್ಪ ರವರು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ  ಹೇಳಿಕೆಯ ಸಾರಂಶವೇನೆಂದರೆ. ತಮ್ಮ ಬಾಬತ್ತು ಜಮೀನುಗಳ ವಿಚಾರವಾಗಿ ತಮಗೂ ಮತ್ತು ತಮ್ಮ ಅಣ್ಣನಾದ ಶ್ರೀರಂಗಯ್ಯ ಮಕ್ಕಳಿಗೆ ಜಮೀನು ವಿಚಾರದಲ್ಲಿ ತಕರಾರುಗಳು ಇರುತ್ತೆ. ಹೀಗಿರುವಲ್ಲಿ ನಾನು ನೆನ್ನೆ ದಿನ ದಿನಾಂಕ 09/08/2020 ರಂದು ಕೆಲಸದ ನಿಮಿತ ಬಟ್ಲಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ಬಂದು ಸಂಜೆ ಸುಮಾರು 7-30 ಗಂಟೆ ಸಮಯದಲ್ಲಿ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಮನೆಗೆ ಹೋಗಲು ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮ ಅಣ್ಣನ ಮಕ್ಕಳಾದ ಎಸ್.ಶ್ರೀನಿವಾಸ ಬಿನ್ ಲೇಟ್ ಶ್ರೀರಂಗಯ್ಯ, ವೆಂಕಟೇಶ್ ಬಾಬು ಬಿನ್ ಲೇಟ್ ಶ್ರೀರಂಗಯ್ಯ, ತಮ್ಮ ಅಣ್ಣನಾದ ನಾಗರಾಜಪ್ಪ ಬಿನ್ ವೆಂಕಟರಾಯಪ್ಪ ಆತನ ಮಗನಾದ ಸೋಮಶೇಖರ್ ಮತ್ತೊಬ್ಬ ಅಣ್ಣನ ಮಗನಾದ ಶ್ರೀನಾಥ ಬಿನ್ ಲಕ್ಷ್ಮಿನಾರಾಯಣ ರವರು ಅಕ್ರಮ ಗುಂಪುಕಟ್ಟಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ತನಗೆ ಅಡ್ಡ ಬಂದು ತನ್ನನ್ನು ಮುಂದೆ ಹೋಗದಂತ್ತೆ ಅಕ್ರಮವಾಗಿ ತಡೆದು ಶ್ರೀನಿವಾಸ್ ರವರು ತನ್ನನ್ನು ಕುರಿತು ಲೋಪರ್ ನನ್ನ ಮಗನೆ ಎಲ್ಲಿಗೆ ನೀನು ಹೋಗಿ ಬರುತ್ತಿರುವುದು ನಮ್ಮ ಮೇಲೆ ಕಂಪ್ಲೇಂಟ್ ಕೊಡಲು ಹೋಗಿದ್ದಾ ಎಂದು ಅವಾಚ್ಯವಾಗಿ ಬೈದು ತನ್ನ ಗಲ್ಲಾಪಟ್ಟಿಯನ್ನು ಹಿಡಿದು ಎಳೆದಾಡಿದನು ವೆಂಕಟೇಶ್ ಬಾಬು ರವರು ಅಲ್ಲಿಯೇ ಬಿದ್ದಿದ್ದ ಒಂದು ದೊಣ್ಣೆಯನ್ನು ತೆಗೆದುಕೊಂಡು ತನ್ನ ಎಡ ದೊಕ್ಕೆಯ ಕೆಳಭಾಗದಲ್ಲಿ ಹೊಡೆದು ಊತಗಾಯವನ್ನು ಉಂಟುಮಾಡಿದರು ಶ್ರೀನಾಥ ರವರು ತನ್ನನ್ನು ಕೈಗಳಿಂದ ಹೊಡೆದು ಕೆಳಕ್ಕೆ ತಳ್ಳಿದ್ದು, ನಾಗರಾಜ ಮತ್ತು ಸೋಮಶೇಖರ್ ರವರು ಕೆಳಗೆ ಬಿದ್ದಿದ್ದ ತನ್ನನ್ನು ಕಾಳುಗಳಿಂದ ಒದ್ದು ಕೈಗಳಿಂದ ಹೊಡೆದರು ನಂತರ ಎಲ್ಲರೂ ಸೇರಿಕೊಂಡು ತನ್ನನ್ನು ಕುರಿತು ಲೋಪರ್ ನನ್ನ ಮಗನೆ ನಿನ್ನಮ್ಮನೇ ಕೇಯ ನನ್ನ ಮಗನೆ ನೀನು ಏನಾದರು ಜಮೀನಿನ ವಿಚಾರದಲ್ಲಿ ತಕರಾರು ಮಾಡಿದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿರುವುದಾಗಿ ನೀಡಿರುವ ಹೇಳಿಕೆಯ ದೂರಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.69/2020 ಕಲಂ. 506,504,323,324 ಐ.ಪಿ.ಸಿ:-

          ದಿನಾಂಕ:10/08/2020 ರಂದು ಮದ್ಯಾಹ್ನ 13-50 ಗಂಟೆಗೆ ಹೆಚ್ ಸಿ 176 ಮುನಿರಾಜು ರವರು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು  ರಮೇಶ್ ಬಿನ್ ಮುನಿಶಾಮಿ, 36 ವರ್ಷ, ನಾಯಕರು, ಕೂಲಿ ಕೆಲಸ, ವಾಸ: ಪುಲ್ಲಗುಂಡ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು. ಮೊ.ನಂ 9686520277 ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ. ನೆನ್ನೆ ದಿನ ದಿನಾಂಕ:09/08/2020 ರಂದು ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯ ಮುಂಭಾಗದಲ್ಲಿ ನಿಂತುಕೊಂಡಿದ್ದಾಗ ತಮ್ಮ ಗ್ರಾಮದ ತಮ್ಮ ಸಂಬಂಧಿಯಾದ ವಿಶ್ವನಾಥ್ ಪಿ ಎನ್ ಬಿನ್ ನರಸಿಂಹಪ್ಪರವರು ನನ್ನನ್ನು ಕುರಿತು ಲೋಪರ್ ನನ್ನ ಮಗನೇ ನಿನ್ನಮ್ಮನೇ ಕೇಯ್ಯ  ರಮೇಶ್ ಬಾರೋ ನನ್ನ ಮಗನೇ ನೀನ್ನನ್ನ ಒಂದೆ ಏಟಿಗೆ ಸಾಯಿಸಿಬಿಡುತ್ತೇನೆ ಎಂದು ಬಯ್ಯತ್ತಿದ್ದು ಆಗ ತಾನು ವಿಶ್ವನಾಥನ ಬಳಿಗೆ ಹೋಗಿ ಯಾಕೆ ಬಯ್ಯುತ್ತಿರುವುದು ಎಂದು ಕೇಳಿದ್ದಕ್ಕೆ ವಿಶ್ವನಾಥ ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲನ್ನು ತೆಗೆದುಕೊಂಡು ತನ್ನ ಗಡ್ಡದ ಮೇಲೆ ಹೊಡೆದು ಗಾಯ ಪಡಿಸಿದನು ಆಗ ತನ್ನ ಹೆಂಡತಿಯಾದ ಲಲಿತ ರವರು ಅಡ್ಡ ಬಂಧಿದ್ದಕ್ಕೆ ಆಕೆಯ ಜುಟ್ಟನ್ನು ಹಿಡಿದು ಎಳೆದಾಡಿ ಆಕೆಯನನ್ನು ಕೈಗಳಿಂದ ಹೊಡೆದನು ನಂತರ ವಿಶ್ವನಾಥ್ ತನ್ನನ್ನು ಕೈಗಳಿಂದ ಮೈ ಕೈ ಮೇಲೆ ಹೊಡೆದು ಕಾಲಿನಿಂದ ಒದ್ದನು ಹಾಗೂ ತನ್ನನ್ನು ಕುರಿತು ಲೋಪರ್ ನನ್ನ ಮಗನೇ ನಿನ್ನಮ್ಮನೇ ಕೇಯ್ಯ ಜಮೀನಿನ ವಿಚಾರದಲ್ಲಿ ಏನಾದರೂ ನೀನು ತಗಾದೇ ತೆಗೆದರೆ ನೀನ್ನನ್ನು ಸಾಯಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆಯನ್ನು ಹಾಕಿದರು ನಮ್ಮ ಗ್ರಾಮದ ವಾಸಿಗಳಾದ ಕಲಾವತಿ ಕೊಂ ಲೇಟ್ ಮಂಜುನಾಥ್, ಸೀತಪ್ಪ ಬಿನ್ ಲೇಟ್ ನಾರೆಪ್ಪ ರವರು ಅಡ್ಡ ಬಂದು ಜಗಳ ಬಿಡಿಸಿದರು ನಂತರ ಗಾಯಗೊಂಡಿದ್ದ ನಾನು ಆಸ್ಪತ್ರೆಗೆ ಹೋಗಲು ವಾಹನ ಇಲ್ಲದೆ ಇದಿದ್ದರಿಂದ  ಈ ದಿನ ಬೆಳಿಗ್ಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ದಾಖಲಾಗಿರುತ್ತೇನೆ ಎಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.110/2020 ಕಲಂ. 87 ಕೆ.ಪಿ ಆಕ್ಟ್:-

          ಈ ದಿನ ದಿನಾಂಕ: 09/08/2020 ರಂದು ಬೆಳಿಗ್ಗೆ 11-00  ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ರಾಮಗಾನಪರ್ತಿ ಗ್ರಾಮದ ಹೊರವಲಯದಲ್ಲಿರುವ ನೀಲಗಿರಿ ತೋಪಿನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು, ಹೆಚ್.ಸಿ-33 ರಾಜೇಶ್, ಹೆಚ್.ಸಿ-38 ಸುರೇಶ್, ಪಿ.ಸಿ-97 ರವಿಕುಮಾರ್, ಪಿ.ಸಿ-118 ಬಾಲಾಜಿ, ಪಿ.ಸಿ-231 ನವೀನ್ ಬಾಬು, ಪಿ.ಸಿ-264 ನರಸಿಂಹಮೂರ್ತಿ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ರಾಮಗಾನಪರ್ತಿ ಗ್ರಾಮದ ಹೊರವಲಯದಲ್ಲಿರುವ ನೀಲಗಿರಿ ತೋಪಿನ ಬಳಿ ಹೋಗಿ ಮರೆಯಲ್ಲಿ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ನೀಲಗಿರಿ ತೋಪಿನೊಳಗೆ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ನೀಲಗಿರಿ ಮರದ ಕೆಳಗೆ ಸುಮಾರು 7-8 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 200/- ರೂ. ಬಾಹರ್ 200/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಶ್ರೀನಿವಾಸ ಬಿನ್ ರಾಮಪ್ಪ, 48 ವರ್ಷ, ಆದಿ ದ್ರಾವಿಡ ಜನಾಂಗ, ಜಿರಾಯ್ತಿ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 2] ಪವನ್ ಕಲ್ಯಾಣ್ ಬಿನ್ ದ್ಯಾವಪ್ಪ, 19 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 3] ಗಣೇಶ್ ಬಿನ್ ರಘು, 18 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿಕೆಲಸ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 4] ಶ್ರೀನಿವಾಸ ಬಿನ್ ಲೇಟ್ ಚಿಕ್ಕವೆಂಕಟರಾಯಪ್ಪ, 33 ವರ್ಷ, ಆದಿ ದ್ರಾಡಿದ ಜನಾಂಗ, ಕೂಲಿಕೆಲಸ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 5] ಯಶ್ವಂತ್ ಬಿನ್ ವೆಂಕಟಪ್ಪ, 21 ವರ್ಷ, ಆದಿ ದ್ರಾವಿಡ ಜನಾಂಗ, ಚಾಲಕ ವೃತ್ತಿ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 6] ಗಜೇಂದ್ರ ಬಿನ್ ಕೃಷ್ಣಪ್ಪ, 21 ವರ್ಷ, ಆದಿ ದ್ರಾವಿಡ ಜನಾಂಗ, ಚಾಲಕ ವೃತ್ತಿ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 7] ಶ್ರೀನಿವಾಸ ಬಿನ್ ಮೋಟಪ್ಪ, 41 ವರ್ಷ, ಆದಿ ದ್ರಾವಿಡ ಜನಾಂಗ, ಕೂಲಿಕೆಲಸ, ರಾಮಗಾನಪರ್ತಿ ಗ್ರಾಮ, ಕಸಬಾ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 1] 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ 2] ನಗದು ಹಣ ಎಣಿಸಲಾಗಿ 2320/-ರೂ. ಗಳಿದ್ದು, ಮೇಲ್ಕಂಡ 7 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 2320/-ರೂ. ನಗದು ಹಣವನ್ನು ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 12-30 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ ಮೇರೆಗೆ ಎನ.ಸಿ.ಆರ್ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ದಾಖಲಿಸಿದ ಪ್ರ.ವ.ವರದಿಯಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.111/2020 ಕಲಂ. 87 ಕೆ.ಪಿ ಆಕ್ಟ್:-

          ಈ ದಿನ ದಿನಾಂಕ: 09/08/2020 ರಂದು ಮದ್ಯಾಹ್ನ 1-30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಮಂಚನಬಲೆ ಗ್ರಾಮದ ಹೊರವಲಯದಲ್ಲಿರುವ ಹುಣಸೇಮರದ ತೋಪಿನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಅರ್ಜಿದಾರರಿಗೆ ಬಂದ ಬಾತ್ಮಿ ಮೇರೆಗೆ ಹೆಚ್.ಸಿ-33 ರಾಜೇಶ್, ಹೆಚ್.ಸಿ-38 ಸುರೇಶ್, ಪಿ.ಸಿ-97 ರವಿಕುಮಾರ್, ಪಿ.ಸಿ-118 ಬಾಲಾಜಿ, ಪಿ.ಸಿ-231 ನವೀನ್ ಬಾಬು, ಪಿ.ಸಿ-264 ನರಸಿಂಹಮೂರ್ತಿ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಮಂಚನಬಲೆ ಗ್ರಾಮದ ಹೊರವಲಯದಲ್ಲಿರುವ ಹುಣಸೇಮರದ ತೋಪಿನ ಬಳಿ ಹೋಗಿ ಮರೆಯಲ್ಲಿ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ನೀಲಗಿರಿ ತೋಪಿನೊಳಗೆ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಹುಣಸೇಮರದ ಕೆಳಗೆ ಸುಮಾರು 5-6 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 500/- ರೂ. ಬಾಹರ್ 500/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಸುಬ್ರಮಣಿ ಬಿನ್ ಲೇಟ್ ಮುನಿಕೃಷ್ಣಪ್ಪ, 44 ವರ್ಷ, ದೋಬಿ ಜನಾಂಗ, ಲೈನ್ ಮ್ಯಾನ್, ವಾಪಸಂದ್ರ, ಚಿಕ್ಕಬಳ್ಳಾಪುರ ಟೌನ್, 2] ಲಕ್ಷ್ಮೀನಾರಾಯಣ ಬಿನ್ ಲೇಟ್ ರಾಮಚಂದ್ರಪ್ಪ, 39 ವರ್ಷ, ವಕ್ಕಲಿಗರು, ಕೂಲಿಕೆಲಸ, ಗರಕರಾಳ್ಳ ಬೀದಿ, ಚಿಕ್ಕಬಳ್ಳಾಪುರ ಟೌನ್, 3] ಮರೇಗೌಡ ಬಿನ್ ಲೇಟ್ ಕೆಂಪಯ್ಯ, 48 ವರ್ಷ, ವಕ್ಕಲಿಗರು, ಜಿರಾಯ್ತಿ, ಅಡವಿಗೊಲ್ಲಾರ ಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4] ನವೀನ್ ಬಿನ್ ಲೇಟ್ ಕೃಷ್ಣಪ್ಪ, 36 ವರ್ಷ, ಬಲಜಿಗರು, ಕೂಲಿಕೆಲಸ, ಗಂಗನಮಿದ್ದೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 5] ಕೃಷ್ಣಮೂರ್ತಿ ಬಿನ್ ಲೇಟ್ ವೆಂಕಟಪ್ಪ ನಾಯ್ಡು, 54 ವರ್ಷ, ಕಮ್ಮನಾಯ್ಡು ಜನಾಂಗ, ವಾಪಸಂದ್ರ, ಚಿಕ್ಕಬಳ್ಳಾಪುರ ತಾಲ್ಲೂಕು, 6] ಶ್ರೀನಿವಾಸ ಬಿನ್ ಲೇಟ್ ಕಾಂತರಾಜ್, 44 ವರ್ಷ, ಬಲಜಿಗರು, ಜಿರಾಯ್ತಿ, ಕಾರ್ಖಾನೆ ಪೇಟೆ, ಚಿಕ್ಕಬಳ್ಳಾಪುರ ತಾಲ್ಲೂಕು. ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 13,200/ -ರೂ. ಗಳಿದ್ದು, ಮೇಲ್ಕಂಡ 6 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 13,200/-ರೂ. ನಗದು ಹಣವನ್ನು ಮದ್ಯಾಹ್ನ 2-00 ಗಂಟೆಯಿಂದ ಮದ್ಯಾಹ್ನ 3-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ ಮೇರೆಗೆ ಎನ.ಸಿ.ಆರ್ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ದಾಖಲಿಸಿದ ಪ್ರ.ವ.ವರದಿಯಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.112/2020 ಕಲಂ. 87 ಕೆ.ಪಿ ಆಕ್ಟ್:-

          ಈ ದಿನ ದಿನಾಂಕ: 09/08/2020 ರಂದು ಸಾಯಂಕಾಲ 4-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಪೂಜನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳದಲ್ಲಿ ಯಾರೋ ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಶ್ರೀ ಚೇತನ್ ಕುಮಾರ್, ಪಿ.ಎಸ್.ಐ ಸಾಹೇಬರವರಿಗೆ ಬಂದ ಬಾತ್ಮಿ ಮೇರೆಗೆ ಸಿಬ್ಬಂದಿಯವರಾದ ಹೆಚ್.ಸಿ-38 ಸುರೇಶ್, ಪಿ.ಸಿ-118 ಬಾಲಾಜಿ, ಪಿ.ಸಿ-231 ನವೀನ್ ಬಾಬು, ಪಿ.ಸಿ-264 ನರಸಿಂಹಮೂರ್ತಿ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-567 ರಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಪೂಜನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆರೆಯ ಅಂಗಳದ ಬಳಿ ಹೋಗಿ ಮರೆಯಲ್ಲಿ ಜೀಪು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪಂಚರು ಮತ್ತು ಸಿಬ್ಬಂದಿಯೊಂದಿಗೆ ನನಗೆ ಮಾಹಿತಿ ಬಂದ ಸ್ಥಳವಾದ ಕೆರೆಯ ಅಂಗಳದೊಳಗೆ ನಡೆದುಕೊಂಡು ಹೋಗಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಹೊಂಗೇಮರದ ಕೆಳಗೆ ಸುಮಾರು 3-4 ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 500/- ರೂ. ಬಾಹರ್ 500/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ಸುಬ್ಬು ಬಿನ್ ನಾರಾಯಣಪ್ಪ, 30 ವರ್ಷ, ಆದಿ ದ್ರಾವಿಡ  ಜನಾಂಗ, ಕಾರ್ಪೆಂಟರ್ ಕೆಲಸ, ಪೂಜನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 2] ಶ್ರೀನಿವಾಸ ಬಿನ ಲೇಟ್ ಮುನಿಯಪ್ಪ, 35 ವರ್ಷ, ಬಲಜಿಗರು, ಜಿರಾಯ್ತಿ, ಪೂಜನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 3] ವೇಣು ಬಿನ್ ವೆಂಕಟರವಣಪ್ಪ, 32 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಪೂಜನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 4] ಶೇಖರ್ ಬಿನ್ ಸೀನಪ್ಪ, 28 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಪೂಜನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳು, ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಎಣಿಸಲಾಗಿ 3,090/ -ರೂ. ಗಳಿದ್ದು, ಮೇಲ್ಕಂಡ 4 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಪಂದ್ಯಕ್ಕೆ ಪಣವಾಗಿಟ್ಟಿದ್ದ 3,090/-ರೂ. ನಗದು ಹಣವನ್ನು ಸಾಯಂಕಾಲ 4-15 ಗಂಟೆಯಿಂದ 5-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕಲಂ:87 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದ ಮೇರೆಗೆ ಎನ.ಸಿ.ಆರ್ ದಾಖಲಿಸಿ ಘನ ನ್ಯಾಯಾಲಯದ ಅನುಮತಿ ಪಡೆದುಕೊಂಡು ದಾಖಲಿಸಿದ ಪ್ರ.ವ.ವರದಿಯಾಗಿರುತ್ತೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.38/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 09.08.2020 ರಂದು ಮದ್ಯಾಹ್ನ 2.45 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ನೀಡಿದ ಮಾಲು, ಆರೋಪಿತರು, ನ್ಯಾಯಾಲಯದಿಂದ ಅನುಮತಿ ಪತ್ರ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ  ದಿನಾಂಕ 09.08.2020 ರಂದು  ಬೆಳಗ್ಗೆ 11.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ  ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಮೈದಾನದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರಾಗಿ  ಚಿಕ್ಕಬಳ್ಳಾಪುರ ನಗರದ ಬಾಪೂಜಿನಗರ ವಾಸಿಗಳಾದ  ನರಸಿಂಹಪ್ಪ, ಮುನಿ ಎಂಬುವವರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಬರುವಂತೆ ಕೋರಿರುತ್ತೆ ಹಾಗೂ  ಸಿಬ್ಬಂಧಿಯಾದ ಜಯಣ್ಣ ಸಿಪಿಸಿ-152,  ಶ್ರೀ ಲಕ್ಷ್ಮಿಕಾಂತ್ ಪಿ.ಸಿ-277, ಶ್ರೀ ಗಂಗಾಧರ ಪಿಸಿ-541, ಶ್ರೀ ಸರ್ದಾರ್, ಪಿ.ಸಿ-35  ಪಿ.ಸಿ-140 ಪ್ರಕಾಶ್,ಶ್ರೀ ಹರೀಶ್ ಪಿಸಿ-428, ಶ್ರೀ ಸಂತೋಷ ಜಕ್ಕಣ್ಣನವರ್ ಪಿ.ಸಿ-332, ರವರುಗಳೊಂದಿಗೆ  ಮದ್ಯಾಹ್ನ 12.30 ಗಂಟೆಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-139  ರಲ್ಲಿ ಠಾಣೆ ಬಿಟ್ಟು ಎಂ.ಜಿರಸ್ತೆ, ಬಿ.ಬಿರಸ್ತೆ, ಮುಖಾಂತರ ರೈಲ್ವೆ ನಿಲ್ದಾಣದ ಬಳಿ ಹೋಗಿ ಜೀಪನ್ನು ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ ರೈಲ್ವೆ ನಿಲ್ದಾಣ ದಿಂದ ಕಾಂಪೌಂಡ್ ಒಳಗೆ ಸುಮಾರು 50 ಮೀಟರ್ ಗಳ ಅಂತರದಲ್ಲಿ  ಖಾಲಿ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ಕಂಡು ಜೂಜಾಟುತ್ತಿದ್ದ 5 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ಇನಾಯತ್ ಪಾಷ ಬಿನ್ ಬಾಬು, 32 ವರ್ಷ, ಮುಸ್ಲಿಂ, ಕ್ಯಾಂಡಿಮೆಂಟ್ ನಲ್ಲಿ ಕೆಲಸ, ವಾಸ; ವಾರ್ಡ್ ನಂ: 21, ನಕ್ಕಲಕುಂಟೆ ಚಿಕ್ಕಬಳ್ಳಾಪುರ ನಗರ. 2) ಮಧು ಬಿನ್ ವೆಂಕಟೇಶಪ್ಪ, 20 ವರ್ಷ,ಪ.ಜಾತಿ, ಕೂಲಿ ಕೆಲಸ, ವಾಸ: ವಾರ್ಡ್  ನಂ: 13, ಭಾಪೂಜಿನಗರ, ಚಿಕ್ಕಬಳ್ಳಾಪುರ ನಗರ. 3) ವಿನೋದ್ ಬನ್ ನಾರಾಯಣಸ್ವಾಮಿ, 25 ವರ್ಷ, ಹಮಾಲಿ ಕೂಲಿ ಕೆಲಸ,ವಾಸ: ವಾರ್ಡ್ ನಂ: 13,ಬಾಪೂಜಿನಗರ, ಚಿಕ್ಕಬಳ್ಳಾಪುರ ನಗರ.  .4) ರಾಜೇಶ್ ಬಿನ್ ವೆಂಕಟರಾಯಪ್ಪ, 29 ವರ್ಷ, ಪ.ಜಾತಿ, ಹಮಾಲಿ ಕೂಲಿ ಕೆಲಸ, ವಾಸ: ವಾರ್ಡ್ ನಂ: 13, ಚಿಕ್ಕಬಳ್ಳಾಪುರ ನಗರ. 5) ಮುನಿರಾಜು ಬಿನ್ ವೆಂಕಟರಾಯಪ್ಪ, 30 ವರ್ಷ, ಪ.ಜಾತಿ, ಹಮಾಲಿ ಕೂಲಿ ಕೆಲಸ, ವಾಸ: ವಾರ್ಡ್ ನಂ; 13, ಭಾಪೂಜಿ ನಗರ, ಚಿಕ್ಕಬಳ್ಳಾಪುರ ನಗರ. ವಾಸಿಗಳಾಗಿದ್ದು ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 640/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 640/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು ಮದ್ಯಾಹ್ನ 1.00 ಗಂಟೆಯಿಂದ 2.00 ಗಂಟೆಯವರೆಗೆ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಮದ್ಯಾಹ್ನ 2.45 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸುತ್ತಿದ್ದು  ಅರೋಪಿಗಳ ವಿರುದ್ದ  ಕಲಂ 87 ಕೆಪಿ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು ಕೋರಿ ಸೂಚಿಸಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.295/2020 ಕಲಂ. 457,380 ಐ.ಪಿ.ಸಿ:-

          ದಿನಾಂಕ: 09/08/2020 ರಂದು ಸಂಜೆ 4.00 ಗಂಟೆಗೆ ಪಿರ್ಯಾಧಿದಾರರಾದ ಕಿಶೋರ್.ಬಿ.ಆರ್ ಬಿನ್ ರಾಮಮೂರ್ತಿ.ಕೆ, 26 ವರ್ಷ, ಬ್ರಾಹ್ಮಣ ಜನಾಂಗ, ಸಾಪ್ಟ್ ವೇರ್ ಇಂಜಿನಿಯರ್ ಕೆಲಸ, ಭಕ್ತರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ತಂದೆ-ತಾಯಿಗೆ 1ನೇ ತನ್ನ ಅಣ್ಣ ಕಿರಣ್.ಬಿ.ಆರ್ ಮತ್ತು 2ನೇ ತಾನು ಆಗಿರುತ್ತೇವೆ. ದಿನಾಂಕ:06/08/2020 ಮತ್ತು ದಿನಾಂಕ:07/08/2020 ರಂದು ಚಿಂತಾಮಣಿ ತಾಲ್ಲೂಕಿನ ಕೋನಕುಂಟ್ಲು ಗ್ರಾಮದ ಶ್ರೀ.ಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ತನ್ನ ಅಣ್ಣ ಕಿರಣ್.ಬಿ.ಆರ್ ರವರ ಮದುವೆ ಕಾರ್ಯವಿದ್ದುದರಿಂದ ತಮ್ಮ ಕುಟುಂಬದವರೆಲ್ಲರೂ ದಿನಾಂಕ:06/08/2020 ರಂದು ಸಂಜೆ ಸು.5.30 ಗಂಟೆಗೆ ತಮ್ಮ ವಾಸದ ಮನೆಗೆ ಬೀಗ ಹಾಕಿ, ಬೀಗದ ಕೀಲಿಕೈಯನ್ನು ತಮಗೆ ತುಂಬಾ ಆತ್ಮೀಯರಾದ ತಮ್ಮ ಪಕ್ಕದ ಮನೆಯ ವಾಸಿ ಶ್ರೀಮತಿ ಸರೋಜಮ್ಮ ಕೋಂ ಲೇಟ್ ಸಗಾಯರಾಜ್ ರವರ ಕೈಗೆ ಕೊಟ್ಟು, ತಮ್ಮ ಮನೆಯ ಕಡೆಗೆ ನೋಡಿಕೊಳ್ಳುವಂತೆ ತಿಳಿಸಿ ಹೋಗಿದ್ದೆವು. ಹೀಗಿರುವಾಗ ಮರುದಿನ ದಿನಾಂಕ:07/08/2020 ರಂದು ಬೆಳಿಗ್ಗೆ ಸು.07-30 ಗಂಟೆಯ ಸಮಯದಲ್ಲಿ ಮೇಲ್ಕಂಡ ಶ್ರೀಮತಿ ಸರೋಜಮ್ಮ ರವರು ತಮ್ಮೊಂದಿಗೆ ಮದುವೆ ಕಾರ್ಯಕ್ಕೆ ಬಂದಿದ್ದ ಅವರ ಮಗ ಬಾಲರಾಜು ರವರಿಗೆ ಪೋನ್ ಮಾಡಿ ತಮ್ಮ ಮನೆಯಲ್ಲಿ ಕಳ್ಳತನವಾಗಿರುವ ವಿಚಾರವನ್ನು ತಿಳಿಸಿದ್ದು, ಇದೇ ವಿಚಾರವನ್ನು ತಮ್ಮೊಂದಿಗೆ ಇದ್ದ ಬಾಲರಾಜು ತಮಗೆ ತಿಳಿಸಿದ. ತಾವೆಲ್ಲರೂ ಆ ಸಮಯದಲ್ಲಿ ತನ್ನ ಅಣ್ಣನ ಮದುವೆ ಕಾರ್ಯದಲ್ಲಿ ನಿರತರಾಗಿದ್ದುದರಿಂದ ತಮ್ಮ ಗ್ರಾಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಂತರ ಅದೇ ದಿನ ಮದುವೆ ಕಾರ್ಯ ಮುಗಿದ ನಂತರ ತಮ್ಮ ಕುಟುಂಬದವರೆಲ್ಲರೂ ಅಲ್ಲಿಯೇ ದೇವಸ್ಥಾನದಲ್ಲಿ ಶಾಸ್ತ್ರಗಳನ್ನು ಮಾಡಿಕೊಂಡಿದ್ದು, ತಾನು ಮಾತ್ರ ಸಂಜೆ ಸು.06-00 ಗಂಟೆಗೆ ತಮ್ಮ ಗ್ರಾಮಕ್ಕೆ ವಾಪಸ್ಸಾಗಿ ನೋಡಲಾಗಿ ತಮ್ಮ ಮನೆಯ ಬಾಗಿಲು ಓಪನ್ ಆಗಿದ್ದು, ಬಾಗಿಲಿನ ಹಿಂಭಾಗದ ಡೋರ್ ಲಾಕನ್ನು ಯಾರೋ ಕಳ್ಳರು ಯಾವುದೋ ಆಯುಧಗಳಿಂದ ಮೀಟಿ ಓಪನ್ ಮಾಡಿರುವುದು ಕಂಡುಬಂತು. ಒಳಗೆ ಪ್ರವೇಶ ಮಾಡಿ ನೋಡಲಾಗಿ ತಮ್ಮ ಮನೆಯ ರೂಂಗಳಲ್ಲಿದ್ದ 03 ಬೀರುಗಳು ಓಪನ್ ಆಗಿದ್ದು, ಅವುಗಳಲ್ಲಿಟ್ಟಿದ್ದ ಬಟ್ಟೆಯೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಈ ಬೀರುಗಳ ಲಾಕರ್ಗಳು ಸಹ ಓಪನ್ ಆಗಿದ್ದು, ಇವುಗಳಲ್ಲಿಟ್ಟಿದ್ದ ಬಂಗಾರದ ವಡವೆಗಳಾದ 1) 25 ಗ್ರಾಂ ತೂಕದ ಒಂದು ನೆಕ್ಲೇಸ್, 2) ಒಟ್ಟು 15 ಗ್ರಾಂ ತೂಕದ ಮೂರು ಉಂಗುರಗಳು, 3) 1.5 ಗ್ರಾಂ ತೂಕದ ಒಂದು ಚಿಕ್ಕ ಉಂಗುರ 4) 1.5 ಗ್ರಾಂ ತೂಕದ ಒಂದು ಮಾಂಗಲ್ಯ, 5) 3 ಗ್ರಾಂ ತೂಕದ ಕಿವಿಯ ಮಾಟಿ 6) ಸು.750 ಗ್ರಾಂ ತೂಕದ ಬೆಳ್ಳಿಯ ಸಾಮಾಗ್ರಿಗಳು 7) ತಾನು ಮತ್ತು ತನ್ನ ಅಣ್ಣ ಕೆಲಸ ಮಾಡುತ್ತಿರುವ ಕಂಪನಿಗಳಿಂದ ತಮಗೆ ನೀಡಿದ್ದ 02 ಲ್ಯಾಪ್ ಟಾಪ್ ಜೊತೆಗೆ 02 ಐಪ್ಯಾಡ್ ಗಳು, 8) ಸು.60,000/- ರೂ ನಗದು ಹಣ ಸೇರಿದಂತೆ ತಮ್ಮ ಜಮೀನಿನ ದಾಖಲೆಗಳನ್ನು ಇಟ್ಟಿದ್ದ ಒಂದು ಬ್ಯಾಗ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಮೇಲ್ಕಂಡ ಮಾಲುಗಳ ಒಟ್ಟು ಬೆಲೆ ಸು.4 ಲಕ್ಷ ರೂ ಆಗಿದ್ದು, ನಗದು ಹಣ ಸೇರಿದಂತೆ ಕಳುವಾಗಿರುವ ಒಟ್ಟು ಬೆಲೆ ಸು.4,60,000/-ರೂಗಳಾಗಿರುತ್ತೆ. ಆದ್ದರಿಂದ ಕಳುವಾಗಿರುವ ಮೇಲ್ಕಂಡವುಗಳನ್ನು ಪತ್ತೆ ಮಾಡಿ, ಕಳ್ಳತನ ಮಾಡಿರುವವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರುತ್ತೇನೆ. ತಾವು ತನ್ನ ಅಣ್ಣನ ಮದುವೆ ಕಾರ್ಯದಲ್ಲಿ ನಿರತರಾಗಿದ್ದರಿಂದ ದೂರನ್ನು ಕೊಡಲು ಸಾಧ್ಯವಾಗದೇ ಇದ್ದು, ಮದುವೆ ಕಾರ್ಯವನ್ನು ಮುಗಿಸಿಕೊಂಡು ಈ ದಿನ ತಡವಾಗಿ ದೂರನ್ನು ನೀಡಿರುತ್ತಾರೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.296/2020 ಕಲಂ. 269,270,271 ಐ.ಪಿ.ಸಿ:-

          ದಿನಾಂಕ: 09/08/2020 ರಂದು ರಾತ್ರಿ 8.40 ಗಂಟೆಗೆ ಡಾ.ಸ್ವಾತಿ, 30 ವರ್ಷ, ತಾಲ್ಲೂಕು ಆರೋಗ್ಯಾಧಿಕಾರಿಗಳು,ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಪ್ರಸ್ತುತ ದೇಶದಾದ್ಯಂತ ಮಾರಣಾಂತಿಕ ಸಾಂಕ್ರಾಮಿಕ ಖಾಯಿಲೆಯಾದ ಕೊರೊನಾ ವೈರಸ್ ಇರುವುದರಿಂದ ಸದರಿ ಕೊರೂನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸರ್ಕಾರವು ಮಸ್ತೇನಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಏರ್ಪಡಿಸಿರುತ್ತೆ. ಸದರಿ ಕೇರ್ ಸೆಂಟರ್ ನಲ್ಲಿ ದಿನಾಂಕ: 05/08/2020 ರಂದು ರಾಘವರೆಡ್ಡಿ ಬಿನ್ ನಾರಾಯಣಸ್ವಾಮಿ, 34 ವರ್ಷ, ವಕ್ಕಲಿಗರು, ಬೂರಗಮಾಕಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಕೊರೋನಾ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಈ ದಿನ ದಿನಾಂಕ: 09/08/2020 ರಂದು ಸಂಜೆ ಸುಮಾರು 6.30 ಗಂಟೆ ಸಮಯದಲ್ಲಿ ಸದರಿ ಕೇರ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕರ್ತವ್ಯ ನಿರತ ವೈದ್ಯಾಧಿಕಾರಿಗಳಾದ ಡಾ.ಪೂರ್ಣಿಮ ಹಾಗೂ ಕವಿತ ರವರು ತನಗೆ ಪೋನ್ ಮಾಡಿ ಈ ದಿನ ಸಂಜೆ 6.15 ಗಂಟೆ ಸಮಯದಲ್ಲಿ ತಮ್ಮ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರಾಘವರೆಡ್ಡಿ ಬಿನ್ ನಾರಾಯಣಸ್ವಾಮಿ ರವರು ಪರಾರಿಯಾಗಿರುವುದಾಗಿ ತಿಳಿಸಿರುತ್ತಾರೆ. ಸದರಿ ವ್ಯಕ್ತಿಯು ಕೊರೋನಾ ಸೋಂಕಿತನಾಗಿದ್ದು ಆತನು ಅಪಾಯಕಾರಿಯಾದ ರೋಗದ ಸೋಂಕನ್ನು ಬೇರೆಯವರಿಗೆ ಹರಡುವ ಸಂಭವವಿರುವುದರಿಂದ ಆತನನ್ನು ಪತ್ತೆ ಮಾಡಿ ಆತನ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.297/2020 ಕಲಂ. 279,304(A) ಐ.ಪಿ.ಸಿ:-

          ದಿನಾಂಕ: 10/08/2020 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾಧಿದಾರರಾದ ಮುನಿಸ್ವಾಮಿ ಬಿನ್ ಲೇಟ್ ವೆಂಕಟರವಣ, 42 ವರ್ಷ, ಬೋವಿ ಜನಾಂಗ, ವ್ಯಾಪಾರ, ನಲ್ಲರಾಳ್ಳಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನ್ನ ಚಿಕ್ಕಪ್ಪನ ಮಗಳಾದ ಶಿವಮಂಗಳ ಕೋಂ ರೆಡ್ಡಪ್ಪ, 30 ವರ್ಷ, ಮನೆಕೆಲಸ, ಗುಡುಮಾರ್ಲಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಅವರ ಬಾಬತ್ತು ಕೆಎ-40 ಎಲ್-2373 ಟಿವಿಎಸ್ ಎಕ್ಸ್ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಅವರ ಮನೆಗೆ ದಿನಸಿ ವಸ್ತುಗಳನ್ನು ತೆಗೆದುಕೊಂಡು ಬರಲು ದಿನಾಂಕ:09/08/2020 ರಂದು ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಚಿಂತಾಮಣಿಗೆ ಬಂದಿರುತ್ತಾರೆ. ಅದೇ ದಿನ ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ಯಾರೋ ಸಾರ್ವಜನಿಕರು ತನಗೆ ಫೋನ್ ಮಾಡಿ ಚಿಂತಾಮಣಿ-ಚೇಳೂರು ರಸ್ತೆಯ ಚೊಕ್ಕರೆಡ್ಡಿಹಳ್ಳಿ ಗೇಟ್ ಬಳಿ ಶಿವಮಂಗಳ ರವರಿಗೆ ರಸ್ತೆ ಅಪಘಾತವಾಗಿದ್ದು, ಗಾಯಗೊಂಡಿದ್ದವರನ್ನು 108 ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ನಂತರ ತಾನು ಮತ್ತು ತನ್ನ ತಮ್ಮನಾದ ಬಾಬುರವರು ನಮ್ಮ ಗ್ರಾಮದಿಂದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ಶಿವಮಂಗಳರವರು ಮಾತನಾಡದ ಸ್ಥಿತಿಯಲ್ಲಿದ್ದು ನಂತರ ಅಪಘಾತದ ಬಗ್ಗೆ ತನಗೆ ಫೋನ್ ಮಾಡಿದ್ದ ಸಾರ್ವಜನಿಕರನ್ನು ಈ ಅಪಘಾತದ ಬಗ್ಗೆ ವಿಚಾರ ಮಾಡಲಾಗಿ ಶಿವಮಂಗಳರವರು ಕೆಎ-40 ಎಲ್-2373 ಟಿವಿಎಸ್ ಎಕ್ಸ್ಎಲ್ ಹೆವಿ ಡ್ಯೂಟಿ ದ್ವಿಚಕ್ರ ವಾಹನದಲ್ಲಿ ಅವರ ಮನೆಗೆ ದಿನಸಿ ವಸ್ತುಗಳನ್ನು ತೆಗೆದುಕೊಂಡು ಮದ್ಯಾಹ್ನ 1.45 ಗಂಟೆ ಸಮಯದಲ್ಲಿ ಚಿಂತಾಮಣಿ-ಚೇಳೂರು ಮುಖ್ಯ ರಸ್ತೆಯ ಚೊಕ್ಕರೆಡ್ಡಿಹಳ್ಳಿ ಗೇಟ್ ಬಳಿ ಅವರ ಬಾಬತ್ತು ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರ ಪರಿಣಾಮ ದ್ವಿಚಕ್ರವಾಹನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಹೋದ ಪರಿಣಾಮ ಶಿವಮಂಗಳರವರ ತಲೆಯ ಹಿಂಬಾಗದಲ್ಲಿ ರಕ್ತಗಾಯಗಳಾಗಿ ಮೂಗು ಮತ್ತು ಬಾಯಿಂದ ರಕ್ತ ಬಂದಿರುವುದಾಗಿ ತಿಳಿಸಿರುತ್ತಾರೆ. ನಂತರ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಗಾಯಗೊಂಡಿದ್ದ ಶಿಮಂಗಳರವರನ್ನು ತಾವು ಅಂಬುಲೆನ್ಸ್ ನಲ್ಲಿ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ನಂತರ ಈ ದಿನ ದಿನಾಂಕ:10/08/2020 ರಂದು ಮುಂಜಾನೆ 12.15 ಗಂಟೆಗೆ ಶಿವಮಂಗಳರವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಮೃತ ಶಿವಮಂಗಳರವರ ಮೃತದೇಹವು ಕಿಮ್ಸ್ ಆಸ್ಪತ್ರೆಯ ಶವಗಾರದಲ್ಲಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.298/2020 ಕಲಂ. 87 ಕೆ.ಪಿ ಆಕ್ಟ್:-

          ಈ ದಿನ ದಿನಾಂಕ: 10/08/2020 ರಂದು ಮದ್ಯಾಹ್ನ 1.00 ಗಂಟೆಗೆ ನ್ಯಾಯಾಲಯ ಕರ್ತವ್ಯದ ಸಿ.ಪಿ.ಸಿ-339 ಕರಿಯಪ್ಪ ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಈ ದಿನ ದಿನಾಂಕ:10/08/2020 ರಂದು ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ, ಠಾಣಾ ಸರಹದ್ದಿಗೆ ಸೇರಿದ ಬಂದಾರ್ಲಹಳ್ಳಿ ಗ್ರಾಮದ ಬಳಿ ಇರುವ ಚೆಕ್ ಡ್ಯಾಂ ಪಕ್ಕದ ಸರ್ಕಾರಿ ಖಾಲಿ ಜಾಗದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಮತ್ತು ಪಂಚರೊಂದಿಗೆ KA-40-G-326 ನಂಬರಿನ ಠಾಣೆಯ ಇಲಾಖಾ ಜೀಪಿನಲ್ಲಿ ಬಂದಾರ್ಲಹಳ್ಳಿ ಗ್ರಾಮದ ಬಳಿ ಇರುವ ಚೆಕ್ ಡ್ಯಾಂ ಪಕ್ಕದ ಸರ್ಕಾರಿ ಖಾಲಿ ಜಾಗದ ಬಳಿಗೆ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ನೋಡಲಾಗಿ ಅಲ್ಲಿ ಸರ್ಕಾರಿ ಜಾಗದಲ್ಲಿ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರಿದು ಓಡಿಹೋಗದಂತೆ ಎಚ್ಚರಿಕೆ ನೀಡಿದರೂ ಸಹ ಆ ಪೈಕಿ ಕೆಲವರು ಓಡಿ ಹೋಗಿದ್ದು, ಉಳಿದಂತೆ ಸ್ಥಳದಲ್ಲಿದ್ದ 09 ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರುಗಳ ಹೆಸರು, ವಿಳಾಸ ಕೇಳಲಾಗಿ 1) ವೇಣುಗೋಪಾಲ್.ಎನ್ ಬಿನ್ ಲೇಟ್ ನಾರಾಯಣಸ್ವಾಮಿ, ಹಿರೇಕಟ್ಟಿಗೇನಹಳ್ಳಿ ಗ್ರಾಮ, 2) ಹರೀಶ್ ಕುಮಾರ್.ಡಿ.ಎಸ್ ಬಿನ್ ಶ್ರೀನಿವಾಸರಾವ್, ಹಿರೇಕಟ್ಟಿಗೇನಹಳ್ಳಿ ಗ್ರಾಮ, 3) ವಿ.ಕಿಶೋರ್ ಬಿನ್ ಲೇಟ್ ವೆಂಕಟರವಣಪ್ಪ, ಅಟ್ಟೂರು ಗ್ರಾಮ, 4) ಕೃಷ್ಣಮೂರ್ತಿ.ಕೆ ಬಿನ್ ಲೇಟ ವೆಂಕಟರಮಣಶೆಟ್ಟಿ, ಮುತುಕದಹಳ್ಳಿ ಗ್ರಾಮ, 5) ಶಶೀಕುಮಾರ್ ಬಿನ್ ನಾರಾಯಣಸ್ವಾಮಿ, ಮಸ್ತೇನಹಳ್ಳಿ ಗ್ರಾಮ, 6) ವೀರಣ್ಣ.ಎಂ ಬಿನ್ ದೊಡ್ಡಮುನಿಶಾಮಿ, ಮಸ್ತೇನಹಳ್ಳಿ ಗ್ರಾಮ, 7) ಕೆ.ಎಂ.ರಘುನಾಥರೆಡ್ಡಿ ಬಿನ್ ಮುನಿವೆಂಕಟರೆಡ್ಡಿ, ಕುಪ್ಪಳ್ಳಿ ಗ್ರಾಮ, ಶ್ರೀನಿವಾಸಪುರ ತಾಲ್ಲೂಕು, 8) ದೇವರಾಜ.ಪಿ.ಎಸ್ ಬಿನ್ ಶ್ರೀರಾಮಪ್ಪ, ಪೆರಮಾಚನಹಳ್ಳಿ ಗ್ರಾಮ, ಮತ್ತು 9) ನಟರಾಜ ಬಿನ್ ವೆಂಕಟರವಣಪ್ಪ, ಜಂಬಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತಲೂ, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ ನರಸಿಂಹರೆಡ್ಡಿ, ಮಡಬಹಳ್ಳಿ ಗ್ರಾಮ, ರತ್ನಪ್ಪ, ಹಿರೇಕಟ್ಟುಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು, ನಂತರ ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ 1) 52 ಇಸ್ಪೀಟ್ ಕಾರ್ಡುಗಳು, 2) 22,210/- ರೂ ನಗದು ಹಣ 3) ಆರೋಪಿಗಳು ಜೂಜಾಟವಾಡಲು ತಂದಿದ್ದ ನೋಂದಣಿ ಸಂಖ್ಯೆ ಕೆಎ-07 ಇಡಿ-3850 ಹೋಂಡಾ ಆಕ್ಟೀವಾ, ಕೆಎ-40 ಇಸಿ-6876 ಬಜಾಜ್ ಸಿಟಿ-100, ಕೆಎ-53 ಇಎನ್-7370 ಹೋಂಡಾ ಆಕ್ಟೀವಾ, ಕೆಎ-03, ಇಇ-6188 ಸುಜುಕಿ ಫಿಯರೋ, ಕೆಎ-51 ಹೆಚ್.ಸಿ-3088 ಬುಲ್ಲೆಟ್, ಕೆಎ-40 ವೈ-6795 ಬಜಾಜ್ ಸಿಟಿ-100 06 ದ್ವಿಚಕ್ರವಾಹನಗಳು ಮತ್ತು ನೋಂದಣಿ ಸಂಖ್ಯೆ ಕೆಎ-50 ಎ-7005 ಸ್ವಿಫ್ಟ್ ಡಿಜೈರ್ ಕಾರ್ ಸ್ಥಳದಲ್ಲಿದ್ದು, ಸದರಿ ಮಾಲುಗಳನ್ನು ಬೆಳಿಗ್ಗೆ 10-00 ರಿಂದ ಬೆಳಿಗ್ಗೆ 11-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯನ್ನು ಕೈಗೊಳ್ಳುವುದರ ಮೂಲಕ ಅಮಾನತ್ತುಪಡಿಸಿಕೊಂಡಿದ್ದು, ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಜೂಜಾಟವಾಡುತ್ತಿದ್ದ ಮೇಲ್ಕಂಡ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ನಂತರ ಪ್ರಕರಣವನ್ನು ದಾಖಲು ಮಾಡಲು ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು, ಘನ ನ್ಯಾಯಾಲಯವು ನಿವೇದನೆಯನ್ನು ಪುರಸ್ಕರಿಸಿ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.203/2020 ಕಲಂ. 78(3)  ಕೆ.ಪಿ ಆಕ್ಟ್:-

          ದಿನಾಂಕ 10/08/2020 ರಂದು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾನೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ:19/06/2020 ರಮದು ಮಧ್ಯಾಹ್ನ 2:00 ಗಂಟೆಯಲ್ಲಿ ಶ್ರೀ ಮೋಹನ್,ಎನ್. ಪಿ,ಎಸ್,ಐ ಗೌರಿಬಿದನೂರು ಗ್ರಾಮಾಂತರ ಠಾಣೆ ರವರು ನೀಡಿದ  ದೂರಿನ ಸಾರಾಂಶವೇನೆಂದರೆ ಇವರಿಗೆ ಇದೇ ದಿನ ಈ ದಿನ  ದಿನಾಂಕ: 19/06/2020 ರಂದು  ಮದ್ಯಾಹ್ನ 12-00  ಗಂಟೆಯಲ್ಲಿ  ನಾನು ಮತ್ತು ಹೆಚ್.ಸಿ. 10 ಶ್ರೀರಾಮಯ್ಯ, ಪಿ.ಸಿ. 179 ಶಿವಶೇಖರ ಚಾಲಕ ಎ.ಹೆಚ್.ಸಿ. 32 ಗಂಗುಲಪ್ಪರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281  ರಲ್ಲಿ  ಹೊಸೂರು ಹೊರಠಾಣೆಯ ವ್ಯಾಪ್ತಿಯಲ್ಲಿ ಗಸ್ತು ಮಾಡುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು  ಕೊಂಡಾಪುರ ಗ್ರಾಮದಲ್ಲಿ ಯಾರೋ ಆಸಾಮಿಯು ಅಂಕಿ ಸಂಖ್ಯೆಗಳನ್ನು  ಬರೆದು ಹಾಗೂ ಸಾರ್ವಜನಿಕರಿಗೆ 1 ರೂಗಳಿಗೆ 70 ರೂಗಳನ್ನು ಕೊಡುತ್ತೇನೆಂದು ಹಣದ ಅಮಿಷವನ್ನು ಒಡ್ಡಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾನೆಂಧು ಬಂದ ಖಚಿತ ವರ್ತಮಾನದ ಮೇರೆಗೆ ನಾನು ಮತ್ತು ಹೆಚ್.ಸಿ. 10 ಶ್ರೀರಾಮಯ್ಯ, ಪಿ.ಸಿ. 179 ಶಿವಶೇಖರ ಚಾಲಕ ಎ.ಹೆಚ್.ಸಿ. 32 ಗಂಗುಲಪ್ಪರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281  ರಲ್ಲಿ  ಕೊಂಡಾಪುರ ಗ್ರಾಮದಲ್ಲಿ  ಗೆದರೆ ಅಲ್ಲಿಪುರ ರಸ್ತೆಯಲ್ಲಿರುವ ಜಗುಲಿಕಟ್ಟೆಯ ಬಳಿಗೆ ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 12-30   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ಗೆದರೆ ಅಲ್ಲಿಪುರ ರಸ್ತೆಯಲ್ಲಿರುವ ಅರಳಿಮರಗಳು ಇರುವ ಜಗುಲಿಕಟ್ಟೆಯ ಬಳಿ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತು  ಸಾರ್ವಜನಿಕರಿಗೆ  ಹಣವನ್ನು ಕಟ್ಟಿ ಅಂಕಿ ಸಂಖ್ಯೆಗಳನ್ನು ಬರೆಯಿಸಿಕೊಂಡು  ಸುಲಭವಾಗಿ  ಹಣ ಸಂಪಾದನೆಯನ್ನು ಮಾಡಿಕೊಳ್ಳಿ, ಬನ್ನಿ  ಅಂಕಿ ಸಂಖ್ಯೆಗಳನ್ನು ಬರೆಯಿಸಿಕೊಳ್ಳಿ ಎಂದು ಕೂಗುತ್ತಿದ್ದು  ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು  ತನ್ನ ಎಡಗೈಯಲ್ಲಿ ಬಿಳಿ ಚೀಟಿಯಲ್ಲಿ  ಏನೋ ಬರೆಯುತ್ತಿದ್ದು  ಆಸಾಮಿಯು ಅಂಕಿ ಸಂಖ್ಯೆಗಳನ್ನು ಬರೆದು ಮಟ್ಕಾ ಜೂಜಾಟವನ್ನು ಆಡುತ್ತಿರುವ ಬಗ್ಗೆ  ಖಚಿತಪಡಿಸಿಕೊಂಡು  ದಾಳಿಮಾಡಿ   ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಕೆ. ಆರ್.ರಾಘವೇಂದ್ರರೆಡ್ಡಿ ಬಿನ್ ರಾಮಕೃಷ್ಣಾ ರೆಡ್ಡಿ,  40  ವರ್ಷ,  ವಕ್ಕಲಿಗರು, ವ್ಯವಸಾಯ,  ಕೊಂಡಾಪುರ ಗ್ರಾಮ, ಹೊಸೂರು ಹೋಬಳಿ , ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಕೈಯಲ್ಲಿ ಏನೆಂದು ಕೇಳಿದಾಗ ತನ್ನ ಕೈಯನ್ನು ಹಿಂದಕ್ಕೆ ಇಟ್ಟುಕೊಂಡಿದ್ದು  ನಂತರ ನೋಡಲಾಗಿ ಬಿಳಿ ಚೀಟಿಯನ್ನು ಹಿಡಿದುಕೊಂಡಿದ್ದು  ಅದರಲ್ಲಿ ಅಂಕಿಗಳನ್ನು  ಬರೆದಿದ್ದು ಏನೆಂದು ಕೇಳಿದಾಗ  ತಾನು  ಮಟ್ಕಾ ಜೂಜಾಟವನ್ನು ಆಡುತ್ತಿದ್ದು ಸಾರ್ವಜನಿಕರಿಂಧ  ಹಣವನ್ನು ಕಟ್ಟಿಸಿಕೊಂಡು  ಅಂಕಿಗಳನ್ನು ಬರೆದುಕೊಡುತ್ತಿದ್ದೇನೆಂಧು ಹೇಳಿದನು. ಆಸಾಮಿಯ ಕೈಯಲ್ಲಿದ್ದ  ಅಂಕಿಗಳನ್ನು ಬರೆದಿರುವ  ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಅನ್ನು ಮತ್ತು ಪಣಕ್ಕಿಟ್ಟಿದ್ದ  ನಗದು ಹಣ 550/- ರೂಗಳನ್ನು  ಹಾಜರುಪಡಿಸಿದ್ದು ಪಂಚರ ಸಮಕ್ಷಮ  ಪಂಚನಾಮೆಯ ಮುಖಾಂತರ  ಅಮಾನತ್ತುಪಡಿಸಿಕೊಮಡು ಪಂಚನಾಮೆಯನ್ನು ಮಧ್ಯಾಹ್ನ 12-30 ಗಂಟೆಯಿಂದ 13-15 ಗಂಟೆಯವರೆಗೆ  ಜರುಗಿಸಿ 13-45 ಗಂಟೆಗೆ ಠಾಣೆಗೆ ವಾಪಸ್  ಬಂದು ಆಸಾಮಿಯನ್ನು ಮಾಲು ಮತ್ತು ಪಂಚನಾಮೆಯನ್ನು  ನೀಡುತ್ತಿದ್ದು  ಆಸಾಮಿಯ ವಿರುದ್ದ   ಕಾನೂನು ಕ್ರಮ  ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.204/2020 ಕಲಂ. 78(3)  ಕೆ.ಪಿ ಆಕ್ಟ್:-

          ದಿನಾಂಕ 10/08/2020 ರಂದು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ:20/06/2020 ರಂದು ರಾತ್ರಿ 10-00  ಗಂಟೆಯಲ್ಲಿ ಪೊಲೀಸ್ ಉಪನಿರೀಕ್ಷಕರಾದ  ಮೋಹನ್ ಎನ್.. ರವರು ಗೌರೀಬಿದನೂರು ಪೊಲೀಸ್ ಗ್ರಾಮಾಂತರ  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,      ಇವರಿಗೆ ದಿನಾಂಕ 20/06/2020 ರಂದು  ರಾತ್ರಿ 8-00 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ಇಡಗೂರು  ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ತಾನು ಹಾಗು ಪ್ರೊಬೆಷನರಿ ಪಿ.ಎಸ್.ಐ  ಸಂಗಪ್ಪ ಮೇಟಿ ಹಾಗೂ ಪೊಲೀಸ್ ಸಿಬ್ಬಂದಿಯವರಾದ  ಹೆಚ್.ಸಿ-136  ನರಸಿಂಹ ಮೂರ್ತಿ  , ಪಿ.ಸಿ. 438 ನರಸಿಂಹ ಮೂರ್ತಿ  , ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ರಾತ್ರಿ 8-30   ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಇಡಗೂರು  ಗ್ರಾಮದ ಬಸ್ ನಿಲ್ದಾಣದ ಬಳಿ  ವಿದ್ಯೂತ್  ದ್ವೀಪದ ಬೆಳಕಿನಲ್ಲಿ  ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ತಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ದಾದಾಪೀರ್ ಬಿನ್ ಸಾಬ್ಜಾನ್,  40 ವರ್ಷ, ಮುಸ್ಲಿಂ, ವ್ಯಾಪಾರ,  ವಾಸ ಇಡಗೂರು ಗ್ರಾಮ , ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1550-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ . ದಾದಾಪೀರ್ ಬಿನ್ ಸಾಬ್ಜಾನ್,  ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1550-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ರಾತ್ರಿ 8-30   ಗಂಟೆಯಿಂದ 9-30 ಗಂಟಯವರೆಗೆ  ವಿದ್ಯೂತ್  ದ್ವೀಪದ ಬೆಳಕಿನಲ್ಲಿ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ರಾತ್ರಿ 10-00  ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.205/2020 ಕಲಂ. 78(3)  ಕೆ.ಪಿ ಆಕ್ಟ್:-

          ದಿನಾಂಕ 10/08/2020 ರಂದು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.ದಿನಾಂಕ 26/07/2020 ರಂದು ಸಂಜೆ5-00   ಗಂಟೆಯಲ್ಲಿ ಪಿರ್ಯಾಧಿದಾರರಾದ ರಾಜಗೋಪಾಲ್ ಹೆಚ್ ಸಿ 192, DCB-CEN ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿ ಸಾರಾಂಶವೇನೆಂದರೆ- ಈ ದಿನ ಗೌರಿಬಿದನೂರು ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಯ ಕರ್ತವ್ಯದಲ್ಲಿದ್ದಾಗ ನಮಗೆ ಬಂದ ಖಚಿತ ಮಾಹಿತಿ ಮೇರೆಗೆ ಕದಿರೇನಹಳ್ಳಿ ಗ್ರಾಮದ ಮಂಜುನಾಥ್ ಬಿನ್ ಲೇಟ್ ಲಕ್ಷ್ಮೀನಾರಾಯಣ, ಮಟ್ಕಾ ಬರೆಯುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ   ಆತನನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 1)ಒಂದು ಮಟ್ಕಾಚೀಟಿ 2) ಒಂದು ಬಾಲ್ ಪಾಯಿಂಟ್ ಪೆನ್ 3)6330/- ರೂ  ಗಳನ್ನು ವಶಪಡಿಸಿಕೊಂಡಿದ್ದು ಮುಂದಿನ ಕ್ರಮಕ್ಕಾಗಿ ನಮ್ಮ ವಶಕ್ಕೆ ನೀಡಿದ್ದು  ಆರೋಪಿತನ ವಿರುದ್ದ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.184/2020 ಕಲಂ. 143,147,148,323,324 ರೆ/ವಿ 149 ಐ.ಪಿ.ಸಿ :-

          ದಿನಾಂಕ 10/08/2020 ರಂದು ಬೆಳಿಗ್ಗೆ 09-45 ಗಂಟೆಗೆ ASI(VR) ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುವಿನ ಹೇಳಿಕೆಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ನಮ್ಮ ಮನೆಯ ಪಕ್ಕದಲ್ಲಿ ಶಿವಾರೆಡ್ಡಿ ಬಿನ್ ಆಶ್ವತ್ಥಪ್ಪ ರವರು ವಾಸವಾಗಿದ್ದು ನಮಗೂ ಅವರಿಗೂ ದನ ಕಟ್ಟುವ ವಿಚಾರದಲ್ಲಿ ಆಗಾಗ ಗಲಾಟೆ ಆಗುತ್ತಿದ್ದು ಈ ಬಗ್ಗೆ ಗ್ರಾಮದಲ್ಲಿ ನ್ಯಾಯ ಪಂಚಾಯ್ತಿ ಸಹಾ ಮಾಡಿದ್ದರು. ನಾನು ಈಗ್ಗೆ ಸುಮಾರು 30 ವರ್ಷಗಳ ಹಿಂದಿನಿಂದಲೂ ದನ ಕರುಗಳನ್ನು ರಸ್ತೆಯ ಪಕ್ಕದಲ್ಲಿ ಸೊಂದಿಯಲ್ಲಿ ಕಟ್ಟುತ್ತಿದ್ದು ಅದರಂತೆ ದಿನಾಂಕ 09/08/2020 ರಂದು ಸಂಜೆ ಹೊಲದ ಬಳಿಯಿಂದ ದನಗಳನ್ನು ಹೊಡೆದುಕೊಂಡು ಬಂದು ಕಟ್ಟಿದಾಗ ಸದರಿ ಗೋವಿಂದರೆಡ್ಡಿ ಬಿನ್ ಲಕ್ಷ್ಮಯ್ಯ ಮತ್ತು ಶಿವಾರೆಡ್ಡಿ ಬಿನ್ ಲೇಟ್ ಅಶ್ವತ್ಥಪ್ಪ ರವರು ಅಲ್ಲಿಗೆ ಬಂದು ಯಾಕೆ ದನ ಕಟ್ಟುತ್ತೀರಾ ಎಂದು ಕೇಳಿದಾಗ ಈಗ ತಾನೇ ಹೊಲದಿಂದ ಬಂದಿದ್ದೇವೆ ಬೇರೆ ಕಡೆ ಕಟ್ಟುತ್ತೇವೆ ಎಂದು ತಿಳಿಸಿದ್ದು ಅಲ್ಲಿಂದ ಹೊರಟು ಹೋದರು. ಮತ್ತೆ ರಾತ್ರಿ ಸುಮಾರು 7-30 ಗಂಟೆಗೆ 1) ಶಿವಾರೆಡ್ಡಿ ಬಿನ್ ಲಕ್ಮಯ್ಯ 50 ವರ್ಷ 2) ಗೋವಿಂದರಡ್ಡಿ ಬಿನ್ ಲಕ್ಷ್ಮಯ್ಯ 45 ವರ್ಷ ವಕ್ಕಲಿಗರು 3) ಲಕ್ಮಿನಾರಾಯಣ ಬಿನ್ ಗೋವಿಂದ ರೆಡ್ಡಿ 22 ವರ್ಷ 4) ಬಾನು ತೇಜಾ ಬಿನ್ ಬೈಯ್ಯಪ್ಪರೆಡ್ಡಿ 21 ವರ್ಷ 5) ಶಿವಾರೆಡ್ಡಿ ಬಿನ್ ಅಶ್ವತ್ಥಪ್ಪ 40 ವರ್ಷ 6) ರತ್ನಮ್ಮ ಕೊಂ ಶಿವಾರೆಡ್ಡಿ 45 ವರ್ಷ 7) ಸುನಂದಮ್ಮ ಕೊಂ ಗೋವಿಂದಪ್ಪ 40 ವರ್ಷ 8) ಉಮಾದೇವಿ ಕೊಂ ಶಿವಾರೆಡ್ಡಿ 40 ವರ್ಷ ಹಾಗೂ 9) ಗಂಗಮ್ಮ ಕೊಂ ಅಶ್ವತ್ಥಪ್ಪ 50 ವರ್ಷ ವಕ್ಕಲಿಗರು ರವರು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ ದೊಣ್ಣೆ ಹಾಗೂ ರಾಡ್ ಗಳನ್ನು ಹಿಡಿದುಕೊಂಡು ನಮ್ಮ ಮನೆಯ ಬಳಿ ಬಂದು ಕಾರದ ಪುಡಿಯನ್ನು ನನ್ನ ಮೇಲೆ ಹಾಕಿ ದೊಣ್ಣೆ ಹಾಗೂ ರಾಡ್ ಗಳಿಂದ ನನ್ನ ಮೈಮೇಲೆ ಹೊಡೆದು ಕಾಲುಗಳಿಂದ ಒದ್ದು ನೆಲದ ಮೇಲೆ ಹಾಕಿ ಉರುಳಾಡಿಸಿದ್ದು ಆಗ ನಾನು ಕಿರುಚಿಕೊಂಡಾಗ ನಮ್ಮ ಮನೆಯ ಬಳಿ ಇದ್ದ ಅನಿಲ್ ಕುಮಾರ್ ಬಿನ್ ಶಿವಾರೆಡ್ಡಿ ರವರು ಅಡ್ಡ ಬಂದು ಯಾಕೋ ಈ ರೀತಿ ಗಲಾಟೆ ಮಾಡಿ ಹೊಡೆಯುತ್ತೀರಾ ಎಂದು ಕೇಳುತ್ತಿದ್ದಂತೆ ಅವರಗೂ ಸಹಾ ಕಾರದ ಪುಡಿ ಹಾಕಿ ಶಿವಾರೆಡ್ಡಿ ದೊಣ್ಣೆಯಿಂದ ಹಾಗೂ ಬಾನುತೇಜಾ ರವರು ರಾಡ್ ನಿಂದ ಹೊಡೆದು ಮೂಗೇಟು ಉಂಟುಮಾಡಿದರು. ಹಾಗೂ ಉಳಿದವರು ದೊಣ್ಣೆಯಿಂದ ಹಾಗೂ ಕೈಗಳಿಂದ ಹೊಡೆದು ಮೂಗೇಟು ಉಂಟು ಮಾಡಿದರು. ನನಗೆ ಸೊಂಟದ ಮೇಲೆ ಹಾಗೂ ಮೈಮೇಲೆ ಹೊಡೆದು ಮೂಗೇಟು ಆಗಿದ್ದು ತಕ್ಷಣ ವೆಂಕಟರಮಣರೆಡ್ಡಿ ಬಿನ್ ನರಸಿಂಹರೆಡ್ಡಿ ರವರು ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು. ಸದರಿ ಮೇಲ್ಕಂಡ ಆರೋಪಿತರು ಯಾವುದೋ ದ್ವೇಷ ಇಟ್ಟುಕೊಂಡು ನಮಗೆ ಹೊಡೆದು ಗಾಯಪಡಿಸಿದವರ ವಿರುದ್ದ ಕನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.50/2020 ಕಲಂ. 506,504,323,324 ಐ.ಪಿ.ಸಿ :-

          ದಿನಾಂಕ:09/08/2020 ರಂದು ರಾತ್ರಿ 11-30 ಗಂಟೆಗೆ ಠಾಣೆಯ ಹೆಚ್, ಸಿ 246 ಅಸ್ಲಾ ಅಹಮದ್ ರವರು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದ ಗಾಯಾಳು ಅಮರನಾರಾಯಣ ರವರ ಹೇಳಿಕೆಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದರ ಹೇಳಿಕೆಯ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಕೂಲಿ ಜೀವನ ಮಾಡಿಕೊಂಡಿರುತ್ತೆನೆ  ನಾನು ನಮ್ಮ ಗ್ರಾಮದ ವಾಸಿ ಯಾದ ಶಂಕೆರಪ್ಪ  ಬಿನ್ ಮುದ್ದಪ್ಪಗಾರಿ ನರಹಿಂಪ್ಪ ರವರಿಗೆ ಸುಮಾರು 3 ವರ್ಷಗಳ ಹಿಂದೆ ಸಾಲವಾಗಿ 12000/-ರೂಗಳನ್ನು ಕೊಟ್ಟಿದ್ದು  ನಂತರ ತುಂಬಾ ದಿನಗಳ ನಂತರ ವಾಪಸ್ಸು ಕೊಡು ಎಂದು ಕೇಳುತ್ತಿದ್ದು ಅವನು ಕೊಡಲಾರದೆ ವಿನಾ ಕಾರಣ ಈ ದಿನ ದಿನಾಂಕ:09-08-2020 ರಂದು ರಾತ್ರಿ 08.00 ಗಂಟೆ ಸಮಯದಲ್ಲಿ ನಮ್ಮ ಗ್ರಾಮದ ಮುಖ್ಯ ರಸ್ತೆಯಲ್ಲಿ ನಾನು ನಮ್ಮ  ಮನೆಯ ಕಡೆ ನಡೆದುಕೊಂಡು ಹೋಗುತ್ತಿರುವಾಗ ಶಂಕರಪ್ಪನು ಚಾಕುವಿನಿಂದ ನನ್ನ ಮೇಲೆ ಹಲ್ಲೇ ಮಾಡಿ ನನ್ನ ಎಡಪಕ್ಕ ಎಲಬುಮೇಲೆ ಗಾಯ ಪಡಿಸಿರುತ್ತಾನೆ ಅದೇ ಸಮಯದಲ್ಲಿ ನನ್ನ ತಾಯಿಯಾದ ಜಯಮ್ಮ ರವರು ಅಡ್ಡ ಬಂದಿದ್ದು ಅವರಿಗೂ ಸಹ ಇಟ್ಟಿಗೆಯಿಂದ ಹೊಡೆದು ಮೂಗೆಟು ಉಂಟುಮಾಡಿರುತ್ತಾನೆ ನಂತರ ನಮ್ಮ ತಂದೆಯವರು ಜಗಳ ಬಿಡಿಸಲು ಬಂದಾಗ ಶಂಕರಪ್ಪ ನಮ್ಮನ್ನು ಏ ಲೋಪರ ನನ್ನ ಮಕ್ಕಳೇ ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಮುಗಿಸಿಬಿಡುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾನೆ, ನಂತರ ನನ್ನ ತಮ್ಮನಾದ ಶ್ರೀನಿವಾಸನು  ಸ್ಥಳಕ್ಕೆ ಬಂದಿದ್ದು ನನಗೆ ರಕ್ತ ಗಾಯವಾದ್ದರಿಂದ ಚಿಕಿತ್ಸಗಾಗಿ ತನ್ನ ದ್ವಿ ಚಕ್ರ ವಾಹನದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ನಾನು ಚಿಕ್ಸಿತ್ಸೆ ಪಡೆಯುತ್ತಿರುತ್ತೆನೆ  ನಮ್ಮ ಮೇಲೆ ಹಲ್ಲೆ ಮಾಡಿ ರಕ್ತಗಾಯಪಡಿಸಿ ಅವಾಚ್ಯ ಶಬ್ದಗಳಿಂದ ಬೈದು  ಪ್ರಾಣ ಬೆದರಿಕೆ ಹಾಕಿರುವ ಶಂಕರಪ್ಪನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 50/2020 ಕಲಂ 323,324,504,506 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.218/2020 ಕಲಂ. 457,380,511 ಐ.ಪಿ.ಸಿ :-

          ದಿನಾಂಕ: 10-08-2020 ರಂದು ಸಂಜೆ 4.00 ಗಂಟೆಯಲ್ಲಿ ಫಿರ್ಯಾದಿದಾರರಾದ ಸೌರಭ್ ಸಿನಃ ಬಿನ್ ಉಜ್ವಲ್ ಕುಮಾರ್, 35 ವರ್ಷ, ಶಾಖಾ ವ್ಯವಸ್ಥಾಪಕರು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಜಂಗಮಕೋಟೆ ಶಾಖೆ, ಶಿಡ್ಲಘಟ್ಟ ತಾಲ್ಲೂಕು ವಾಸ: ಬಾಲಾಜಿ ಗೋಲ್ಡ್ ಸಿಟಿ, ಪಾರಿಜಾತ ಲೇ-ಔಟ್ ಬಳಿ, ಹೊಸಕೋಟೆ, ಬೆಂಗಳೂರು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ: 27-07-2019 ರಿಂದ ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಬ್ರಾಂಚ್ ಮೇನೇಜರ್ ಆಗಿ ಕರ್ತವ್ಯ ಮಾಡುತ್ತಿರುತ್ತೇನೆ. ಜಂಗಮಕೋಟೆ ಶಾಖೆಯ ಬ್ಯಾಂಕ್ ಗೆ ಸಂಬಂಧಪಟ್ಟಂತೆ ಜಂಗಮಕೋಟೆ ಕ್ರಾಸ್ ನಲ್ಲಿ ಒಂದು ಎ.ಟಿ.ಎಂ. ಇರುತ್ತದೆ. ದಿನಾಂಕ: 10-08-2020 ರಂದು ಬೆಳಗಿನ ಜಾವ 2.32 ಗಂಟೆಯಲ್ಲಿ ತಮ್ಮ ಜೋನಲ್ ಕಛೇರಿಯಾದ ಚನ್ನೈನಿಂದ ತನ್ನ ಮೊಬೈಲ್ ಪೋನ್ ಗೆ ಪೋನ್ ಮಾಡಿ ಜಂಗಮಕೋಟೆ ಕ್ರಾಸ್ ನಲ್ಲಿರುವ ಎ.ಟಿ.ಎಂ. ನಲ್ಲಿ ಸಿಸಿ ಟಿವಿ ಕರ್ತವ್ಯ ನಿರ್ವಹಿಸದೆ ಇದ್ದು ಎ.ಟಿ.ಎಂ. ಯಂತ್ರದಿಂದ ವಾರ್ನಿಂಗ್  ಸಿಗ್ನಲ್ ಬರುತ್ತಿದೆ, ಚೆಕ್ ಮಾಡಿ ಎಂದು ತಿಳಿಸಿದ್ದು, ಕೂಡಲೇ ತಾನು ಜಂಗಮಕೋಟೆ ಕ್ರಾಸ್ ನಲ್ಲಿ ವಾಸವಾಗಿರುವ ತಮ್ಮ ಬ್ರಾಂಚ್ ನಲ್ಲಿ ಹೆಡ್ ಕ್ಯಾಷಿಯರ್ ಆಗಿ ಕೆಲಸ ಮಾಡುವ ವಡ್ಡೆರಾಮಾಂಜನೇಯಲು ಬಿನ್ ವೆಂಕಟೇಶ್ವರಲು ರವರಿಗೆ ತಾನು ಪೋನ್ ಮಾಡಿ ಕೂಡಲೇ ಎ.ಟಿ.ಎಂ. ಬಳಿ ಹೋಗಿ ಚೆಕ್ ಮಾಡಲು ತಿಳಿಸಿದ್ದು, ವಡ್ಡೆರಾಮಾಂಜನೇಯಲು ಬೆಳಗಿನ ಜಾವ 3.00 ಗಂಟೆಗೆ ಎ.ಟಿ.ಎಂ. ಬಳಿ ಹೋಗಿ ತನಗೆ ಕರೆ ಮಾಡಿ ತಾನು ಬರುವಷ್ಟರಲ್ಲಿ ಎ.ಟಿ.ಎಂ. ರೂಮ್ ನಲ್ಲಿ ಅಳವಡಿಸಿದ್ದ ಎರಡು ಸಿ.ಸಿ. ಕ್ಯಾಮರಾಗಳು ಕಾಣದೆ ಇದ್ದು ಎ.ಟಿ.ಎಂ. ಸ್ವಲ್ಪ ಡ್ಯಾಮೇಜ್ ಆಗಿರುವುದಾಗಿ ವಿಚಾರ ತಿಳಿಸಿದರು. ತಾನು ಸಹ ಬೆಳಿಗ್ಗೆ 10.00 ಗಂಟೆಗೆ ಜಂಗಮಕೋಟೆ ಕ್ರಾಸ್ ನಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ಸಂಬಂಧಪಟ್ಟ ಎ.ಟಿ.ಎಂ. ಬಳಿ ಬೇಟಿ ಮಾಡಿ ಪರಿಶೀಲಿಸಿದ್ದು, ವಿಚಾರ ನಿಜವಾಗಿರುತ್ತದೆ. ಎ.ಟಿ.ಎಂ.ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳನ್ನು ಹೊಡೆದು ಹಾಕಿ ಕಳ್ಳತನ ಮಾಡಲು ಪ್ರಯತ್ನ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.