ದಿನಾಂಕ :10/01/2021 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 279,337  ಐ.ಪಿ.ಸಿ :-

     ದಿನಾಂಕ: 10/01/2021 ರಂದು ಮದ್ಯಾಹ್ನ 12-45 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ಗಾಯತ್ರಿ ಕೋಂ ಶ್ರೀನಿವಾಸ್, 28 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಹುನೇಗಲ್ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಯ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 08/01/2021 ರಂದು ನಮ್ಮ ಜಮೀನಿನ ಬಳಿ ಕೆಲಸ ಇದ್ದುದರಿಂದ ಮದ್ಯಾಹ್ನ ನನ್ನನ್ನು ನನ್ನ ಗಂಡ ಶ್ರೀನಿವಾಸರವರು ಅವರ ಬಾಬತ್ತು KA-50, L-1070 HERO HONDA CD DELUXE ದ್ವಿಚಕ್ರ ವಾಹನದಲ್ಲಿ ಜಮೀನಿನ ಬಳಿ ಕರೆದುಕೊಂಡು ಬಂದು ಬಿಟ್ಟು ವಾಪಸ್ಸು ಮನೆಗೆ ಹೋದರು. ಮದ್ಯಾಹ್ನ ಸುಮಾರು 2-30 ಗಂಟೆ ಸಮಯದಲ್ಲಿ ನಮ್ಮ ದಾಯಾದಿ ರಮೇಶ್ ಬಿನ್ ಲೇಟ್ ವೆಂಕಟರಾಯಪ್ಪರವರು ನನಗೆ ಪೋನ್ ಮಾಡಿ ನಿಮ್ಮ ಗಂಡ ಶ್ರೀನಿವಾಸರವರು ಜಮೀನಿನ ಕಡೆಯಿಂದ ಗ್ರಾಮದೊಳಗೆ ಬರಲು ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ-ಬಾಗೇಪಲ್ಲಿ ಎನ್.ಹೆಚ್-44 ಟಾರು ರಸ್ತೆಯಲ್ಲಿ ರಸ್ತೆಯ ಎಡಭಾಗ ಅವರ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂದಿನಿಂದ ಅಂದರೆ ಬಾಗೇಪಲ್ಲಿ ಕಡೆಯಿಂದ ಬರುತ್ತಿದ್ದ KA-02, MJ-6922 MARUTI 800 ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸರವರ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ಶ್ರೀನಿವಾಸರವರು ದ್ವಿಚಕ್ರ ವಾಹನದಿಂದ ಪಲ್ಟಿಹೊಡೆದು ರಸ್ತೆಯಲ್ಲಿ ಉರುಳಿಬಿದ್ದು ಹೋದರು. ಆಗ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸುತ್ತಿದ್ದ ನಾನು ಮತ್ತು ವಿಜಯ್ ಕುಮಾರ್ ಬಿನ್ ಮುನಿರಾಜು ರವರು ಹೋಗಿ ಅವರನ್ನು ರಸ್ತೆಯಿಂದ ಮೇಲಕ್ಕೆತ್ತಿ ಉಪಚರಿಸಿ ನೋಡಲಾಗಿ ಶ್ರೀನಿವಾಸರವರಿಗೆ ತಲೆಗೆ, ಮೂಗಿಗೆ, ಎಡಕಾಲಿಗೆ, ಎಡಭಾಗದ ಪಕ್ಕೆಗೆ ರಕ್ತಗಾಯಗಳಾಗಿದ್ದವು. ತಕ್ಷಣ ನಾವುಗಳು ರಸ್ತೆಯಲ್ಲಿ ಬಂದ ಪರಿಚಯದವರ ಯಾವುದೋ ಕಾರಿನಲ್ಲಿ ಶ್ರೀನಿವಾಸರವರನ್ನು ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆ ಬಳಿ ಕರೆದುಕೊಂಡು ಬಂದಿರುವುದಾಗಿ ತಕ್ಷಣ ಬರುವಂತೆ ತಿಳಿಸಿದರು. ಆ ಕೂಡಲೇ ನಾನು, ನಮ್ಮ ಬಾವನ ಮಗ ನವೀನ್ ಕುಮಾರ್ ಬಿನ್ ಮುನಿನಾರಾಯಣಪ್ಪರವರೊಂದಿಗೆ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಯ ಬಳಿ ಬಂದು ನೋಡಿದಾಗ ನನ್ನ ಗಂಡನಿಗೆ ಮೇಲ್ಕಂಡಂತೆ ಗಾಯಗಳಾಗಿದ್ದವು. ಜೀವನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ನನ್ನ ಗಂಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದರು. ಆ ತಕ್ಷಣ ನಾನು ನಮ್ಮ ಸಂಬಂದಿಕರು ನನ್ನ ಗಂಡನನ್ನು ಬೆಂಗಳೂರು ನಗರದ ಬ್ಯಾಟರಾಯನಪುರದ ಬಳಿ ಇರುವ ಪ್ರೊಲೈಪ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುತ್ತೇವೆ. ನಾನು ಗಾಯಾಳು ನನ್ನ ಗಂಡ ಶ್ರೀನಿವಾಸರವರ ಬಳಿ ಇದ್ದು ಉಪಚರಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡುತ್ತಿದ್ದು, ನನ್ನ ಗಂಡನಿಗೆ ಅಪಘಾತ ಮಾಡಿದ KA-02, MJ-6922 MARUTI 800 ಕಾರಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 304A,279 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿನಾಂಕ;-10-01-2021 ರಂದು ಬೆಳಿಗ್ಗೆ  8-30 ಗಂಟೆಗೆ ಪಿರ್ಯಾದುದಾರರಾದ ಕೆ.ಎಂ.ಮಂಜುನಾಥ ಬಿನ್ ಮುನಿಶಾಮಪ್ಪ , ಕುಡುವತಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ , ತನ್ನ ತಂದೆ ಮುನಿಶಾಮಪ್ಪ ಬಿನ್ ಲೇಟ್ ರಾಮಯ್ಯ, 72 ವರ್ಷ, ಮತ್ತು ತನ್ನ ತಾಯಿ ಜಯಮ್ಮ ಇವರಿಗೆ ನಾವು ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳುಗಳಿದ್ದು ಎಲ್ಲರಿಗೂ ಮದುವೆಗಳಾಗಿದ್ದು ಊರಿನಲ್ಲಿ ತನ್ನ ತಮ್ಮ ರಮೇಶ ಆತನ ಪತ್ನಿ ಲಕ್ಷ್ಮೀದೇವಮ್ಮ ತನ್ನ ತಂದೆ-ತಾಯಿಯೊಂದಿಗೆ ಇರುತ್ತಾರೆ. ತನ್ನ ತಂದೆ ಮುನಿಶಾಮಪ್ಪನು ಪ್ರತಿದಿನ ಬೆಳಿಗ್ಗೆಯಿಂದ –ಸಂಜೆಯವರೆಗೂ ಸುತ್ತ ಮುತ್ತ ಕುರಿ ಕಾಯುತ್ತಿದ್ದನು , ದಿನಾಂಕ: 09-01-2021 ರಂದು ತನ್ನ ತಮ್ಮ ರಮೇಶ್ ರಾತ್ರಿ 08-00 ಗಂಟೆಯಲ್ಲಿ ತನಗೆ ಪೋನ್ ಮಾಡಿ ನಮ್ಮ ತಂದೆಗೆ ರಾತ್ರಿ 07-20 ಗಂಟೆ ಸಮದಯದಲ್ಲಿ ಕುಡುವತಿ ಗೇಟ್ ಬಳಿ ಕಾರ್ ಒಂದು ರಸ್ತೆ ಅಫಘಾತದಲ್ಲಿ ತಲೆ ಮತ್ತು ಕಾಲುಗಳಿಗೆ ಗಾಯಗಳಾಗಿ ಕೊನೆ ಉಸಿರುಯಿದ್ದು ಚಿಕ್ಕಬಳ್ಳಾಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆಸ್ಪತ್ರೆ ಸಮೀಪ ರಾತ್ರಿ 07-45 ಗಂಟೆಯಲ್ಲಿ ಮೃತಪಟ್ಟಿರುವನೆಂದು ತಿಳಿಸಿದರು, ತಾನು ಬಂದು ನೋಡಲಾಗಿ ಹೆಣವು ಆಸ್ಪತ್ರೆಯಲ್ಲಿದ್ದು ತಲೆ ಮತ್ತು ಕಾಲುಗಳಿಗೆ ತೀವ್ರವಾದ ಗಾಯಗಳಾಗಿರುತ್ತವೆ. ವಿಚಾರ ತಿಳಿಯಲಾಗಿ ದಿನಾಂಕ: 09-01-2021 ರಂದು ರಾತ್ರಿ 07-20 ಗಂಟೆಯಲ್ಲಿ ಕಾರಹಳ್ಳಿ ಕ್ರಾಸ್ ಕಡೆಯಿಂದ ತಮ್ಮ ತಂದೆ ಮನೆಗೆ ಹೋಗಲು ಕುಡುವತಿಗೆ ನಡೆದುಕೊಂಡು ಬರುತ್ತಿದ್ದಾಗ ನಂದಿ ಕಡೆಯಿಂದ ಎದುರಿಗೆ ಕಾರು ಒಂದನ್ನು ಅದರ ಚಾಲಕನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಹೊಡೆಸಿ ಅಫಘಾತ ಮಾಡಿ ಹೋಗಿದ್ದನ್ನು ನಮ್ಮೂರಿನ ನಾರಾಯಣಸ್ವಾಮಿ , ಕಾಂತರಾಜು ಮತ್ತು ಮಾರೇಗೌಡ ರವರುಗಳು ನೋಡಿ ನನ್ನ ತಮ್ಮ ರಮೇಶನಿಗೆ ಪೋನ್ ಮಾಡಿ ತಿಳಿಸಿದ್ದು ರಮೇಶ್ ಮತ್ತು ಅಲ್ಲಿದ್ದವರು ಉಪಚರಿಸಿ ತಕ್ಷಣ ಆಸ್ಪತ್ರೆಗೆ ಯಾವುದೋ ಆಟೋದಲ್ಲಿ ಸಾಗಿಸಿದ್ದು ಗುಣ ಮುಖನಾಗದೇ ಮೃತಪಟ್ಟಿರುತ್ತಾನೆ ಎಂದು ತಿಳಿಸಿದರು ಅಫಘಾತ ಸ್ಥಳದಲ್ಲಿ ಅಫಘಾತ ಮಾಡಿ ಪರಾರಿಯಾಗಿರುವ ವಾಹನದ ನೊಂದಣಿಯ ಸಂಖ್ಯೆ ಮುರಿದು ಬಿದ್ದದ್ದು ಅದರಲ್ಲಿ KA01 ML ಎಂಬುದು ಸ್ಫಷ್ಟವಾಗಿ ಕಾಣುತ್ತಿದ್ದು ಉಳಿದ ಕೊನೆಯ ಸಂಖ್ಯೆಗಳು ಅಸ್ಫಷ್ಟವಾಗಿ ಮುರಿದಿರುತ್ತದೆ ವಿಚಾರವನ್ನು ನೆಂಟರಿಗೂ ಸಂಬಂದಿಕರುಗಳಿಗೂ ತಿಳಿಸಿ ಬಂದು ದೂರು ಕೊಡಲು ತಡವಾಗಿರುತ್ತೆ. ಈ ದೂರಿನೊಂದಿಗೆ ಅಸ್ಫಷ್ಟವಾಗಿ ಮುರಿದು ಬಿದ್ದಿರುವ ಕಾರಿನ ನೊಂದಣಿ ಸಂಖ್ಯೆಯ ಪ್ಲೇಟ್ ನ್ನು ಹಾಜರುಪಡಿಸುತ್ತಿದ್ದು ತಾವುಗಳು ತನ್ನ ತಂದೆಯ ಸಾವಿಗೆ ಅಪಘಾತ ಮಾಡಿ ಪರಾರಿಯಾಗಿರುವ ಕಾರನ್ನು ಮತ್ತು ಚಾಲಕನನ್ನು ಪತ್ತೆಮಾಡಿ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವರದಿ.