ದಿನಾಂಕ :09/10/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.142/2020 ಕಲಂ: ಮನುಷ್ಯ ಕಾಣೆ:-

     ದಿನಾಂಕ: 09/10/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ತಿಪ್ಪೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಪರ್ಜಾನ ಕೋಂ ಬಾಷ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಸುಮಾರು ವರ್ಷಗಳ ಹಿಂದೆ ಭಾಷ ಬಿನ್ ಲೇಟ್ ಸತ್ತಾರ್  ಸಾಬ್ , 38 ವರ್ಷ,  ರವರನ್ನು ಮದುವೆಯಾಗಿರುತ್ತೇನೆ. ತನಗೆ ಒಬ್ಬ ಗಂಡು ಮತ್ತು ಇಬ್ಬ ಹೆಣ್ಣು ಮಗಳಿದ್ದು ಹಿರಿಯ ಮಗ  ನವಾಜ್  17ವರ್ಷ, ರವರು ಸುಮಾರು 7 ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ಅಯೇಷಾ ಬಿ. ಎಂಬ  21 ವರ್ಷದ ಮಗಳಿರುತ್ತಾಳೆ. ತನ್ನ ಗಂಡನಾದ ಭಾಷ ಬಿನ್ ಲೇಟ್ ಸತ್ತಾರ್  ರವರು ಗಾರೆ ಕೆಲಸ ಮಾಡಿಕೊಂಡಿದ್ದರು.  ತನ್ನ ಗಂಡ ಭಾಷ ರವರು ನಮ್ಮೂರಿನ ಶಿವಣ್ಣ ಎಂಬುವರ ಬಳಿ ಗಾರೆ ಕೆಲಸಕ್ಕಾಗಿ  ಹೋಗುತ್ತಿದ್ದರು.  ದಿನಾಂಕ:06-10-2020 ರಂದು ಬೆಳಿಗ್ಗೆ 9.00 ಗಂಟೆಯಲ್ಲಿ ತನ್ನ ಗಂಡ ಭಾಷ ರವರು ಎಂದಿನಂತೆ ಗಾರೆ ಕೆಲಸಕ್ಕೆ  ಮನೆಯಿಂದ ಹೋದರು. ಆ ದಿನ ಸಂಜೆ ಎಷ್ಟು ಹೊತ್ತಾದರೂ  ಮನೆಗೆ ಬರಲಿಲ್ಲ. ಅಂದಿನಿಂದ ಇಂದಿನ ವರೆಗೆ ತನ್ನ ಗಂಡ ಭಾಷ ರವರ ಬಗ್ಗೆ ನಮ್ಮ ಗ್ರಾಮದಲ್ಲಿ ಅವರು ಕೆಲಸ ಮಾಡುತ್ತಿದ್ದ  ಶಿವಣ್ಣ ರವರಲ್ಲಿ ನಮ್ಮ ನೆಂಟರಿಷ್ಟರಲ್ಲಿ ಮತ್ತು ಇತರೆ ಕಡೆಗಳಲ್ಲಿ   ವಿಚಾರಿಸಿದರೂ ಪತ್ತೆಯಾಗಿರುವುದಿಲ್ಲ. ತನ್ನ ಗಂಡ ಉಪಯೋಗಿಸುತ್ತಿದ್ದ ಮೊಬೈಲ್ ನಂಬರ್ 9353953843 ಆಗಿದ್ದು  ಪೋನ್ ಮನೆಯಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಕಾಣೆಯಾದ ನನ್ನ ಗಂಡ ಶ್ರೀ.ಭಾಷ ರವರ ವಿವರ ಮತ್ತು ಚಹರೆ ಗುರುತುಗಳು ಕೇಳಕಂಡಂತೆ ಇರುತ್ತೆ. 1)  ಶ್ರೀ.ಭಾಷ ಬಿನ್ ಲೇಟ್ ಸತ್ತಾರ್  ಸಾಬ್ 2) ವಯಸ್ಸು ಸುಮಾರು 38ವರ್ಷ,3)  ಎತ್ತರ ಸುಮಾರು 165  ಸೇ,ಮೀಟರ್ 5)  ಕೋಲು ಮುಖ ಸಾದರಣಾ ಮೈಕಟ್ಟು, ಕಪ್ಪು ಮೈ ಬಣ್ಣ ಮೂಗಿನ ಮೇಲೆ ಕಪ್ಪು ಮಚ್ಚ ಇರುತ್ತೆ.6)  ಕಡು ನೀಲಿ ಬಣ್ಣದ  ಪುಲು ಷರಟು,  ಕಾಫೀ ಬಣ್ಣದ ಪ್ಯಾಂಟ್  ಧರಸಿರುತ್ತಾನೆ.   ಈ ಮೇಲ್ಕಂಡ ಚಹರೆಗಳುಳ್ಳ ಕಾಣೆಯಾದ ತನ್ನ ಗಂಡ ಶ್ರೀ.ಭಾಷ ಬಿನ್ ಲೇಟ್ ಸತ್ತಾರ್  ಸಾಬ್  ರವರನ್ನು ಪತ್ತೆಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರ.ವ.ವರದಿ

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.369/2020 ಕಲಂ: 323,324,307,504,506 ರೆ/ವಿ 34 ಐ.ಪಿ.ಸಿ :-

     ದಿನಾಂಕ: 08/10/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ವಿ.ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟಸ್ವಾಮಪ್ಪ, 60 ವರ್ಷ, ಕುರುಬರು, ಜಿರಾಯ್ತಿ, ಚನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಸಂಜೆ 6.30 ಗಂಟೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಗ್ರಾಮ ಠಾಣಾ ಮತ್ತು ಸರ್ವೇ ನಂಬರ್ 1/1 ರ ಜಮೀನಿನ ವಿಚಾರದಲ್ಲಿ ತಮಗೂ ಮತ್ತು ತಮ್ಮ ಗ್ರಾಮದ ಪರಿಶಿಷ್ಠ ಜಾತಿ ಜನಾಂಗಕ್ಕೆ ಸೇರಿದ ಶ್ರೀನಿವಾಸ ಮತ್ತು ಅವರ ಕಡೆಯವರ ನಡುವೆ ವಿವಾದವಿರುತ್ತೆ. ಈ ಸಂಬಂಧ ಆಗಾಗ ತಮ್ಮಗಳ ನಡುವೆ ಸಣ್ಣಪುಟ್ಟ ಜಗಳವಾಗುತ್ತಿತ್ತು. ಈ ವಿವಾದಿತ ಜಮೀನುಗಳ ಸರ್ವೇ ಕಾರ್ಯ ಮಾಡಿಸಲು ಕಾಲೋನಿಯವರು ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಈ ದಿನ ದಿನಾಂಕ: 08/10/2020 ರಂದು ಚಿಂತಾಮಣಿ ತಾಲ್ಲೂಕು ಸರ್ವೇ ಅಧಿಕಾರಿಗಳು ಮೇಲ್ಕಂಡ ವಿವಾದಿತ ಜಮೀನುಗಳನ್ನು ಸರ್ವೇ ಮಾಡಿದ್ದು, ಸದರಿ ಸರ್ವೇ ಕಾರ್ಯದಲ್ಲಿ ವಿವಾದಿತ ಗ್ರಾಮ ಠಾಣಾ ಜಮೀನು ತಮ್ಮ ಪರವಾಗಿ ಬಂದಿದ್ದು ಮದ್ಯಾಹ್ನ ಸುಮಾರು 1.30 ಗಂಟೆಗೆ ಸರ್ವೇ ಕಾರ್ಯ ಮುಗಿದು ಹೋಗಿದ್ದು, ಅಧಿಕಾರಿಗಳು ಅಲ್ಲಿಂದ ಹೊರಟು ಹೋಗಿರುತ್ತಾರೆ. ನಂತರ ಇದೇ ದಿನ ಮದ್ಯಾಹ್ನ 1.45 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿ ಇದ್ದಾಗ ತಮ್ಮ ಗ್ರಾಮದ ಕಾಲೋನಿ ವಾಸಿಗಳಾದ ಶ್ರೀನಿವಾಸ ಬಿನ್ ಮುಳಬಾಗಿಲಪ್ಪ, ಶಶಿಕುಮಾರ್ ಬಿನ್ ದಾಸಪ್ಪ, ಕೃಷ್ಣಪ್ಪ ಬಿನ್ ಲೇಟ್ ಪಿಳ್ಳ ವೆಂಕಟಪ್ಪ ಮತ್ತು ಗಂಗಾಧರ ಬಿನ್ ನಾರಾಯಣಪ್ಪ ರವರುಗಳು ಗುಂಪುಕಟ್ಟಿಕೊಂಡು ತನ್ನಬಳಿ ಬಂದು ಸರ್ವೇ ಕಾರ್ಯದಲ್ಲಿ ವಿವಾದಿತ ಗ್ರಾಮ ಠಾಣಾ ಜಮೀನು ಅವರ ಕೈ ತಪ್ಪಿ ಹೋಗಿ ತಮ್ಮ ಕಡೆ ಬಂದಿರುವುದನ್ನು ಮನಸ್ಸಿನಲ್ಲಿಟ್ಟುಕೊಂಡು ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನನ್ನು ಸುತ್ತುವರೆದು ಆಪೈಕಿ ಶಶಿಕುಮಾರ್, ಕೃಷ್ಣಪ್ಪ ಮತ್ತು ಗಂಗಾಧರ್ ರವರುಗಳು ತನ್ನನ್ನು ಸುತ್ತುವರೆದು ಹಿಡಿದುಕೊಂಡಿದ್ದು, ಶ್ರೀನಿವಾಸ ರವರು ತನ್ನನ್ನು ಕುರಿತು ಲೋಫರ್ ಸೂಳೆ ನನ್ನ ಮಗನೆ ಅನ್ಯಾಯವಾಗಿ ನಮ್ಮ ಜಮೀನನ್ನು ಕಬಳಿಸಿಬಿಟ್ಟಿಯಲ್ಲ ಎಂದು ಅವಾಚ್ಯಶಬ್ದಗಳಿಂದ ಬೈದು, ಈ ದಿನ ನಿನ್ನನ್ನು ಮುಗಿಸಿಬಿಡುತ್ತೇನೆ ಎಂದು ಆತನ ಕೈಯಲ್ಲಿದ್ದ ಮಚ್ಚಿನಿಂದ ತನ್ನ ತೆಲೆಗೆ ಬಲವಾಗಿ ಒಂದು ಏಟನ್ನು ಹೊಡೆದ. ಆಗ ತಾನು ತನ್ನ ಬಲಗೈಯನ್ನು ಅಡ್ಡ ಇಟ್ಟಾಗ ಬಲಗೈ ಮೇಲೆ ತರಚಿದ ಗಾಯವಾಗಿ ತಲೆಗೆ ರಕ್ತಗಾಯವಾಗಿ ತಲೆಯಿಂದ ರಕ್ತಸ್ರಾವವಾಯಿತು. ಆಗ ಶಶಿಕುಮಾರ್, ಕೃಷ್ಣಪ್ಪ, ಗಂಗಾಧರ್ ರವರುಗಳು ತನಗೆ ಕೈಗಳಿಂದ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವನ್ನುಂಟು ಮಾಡಿದರು. ನಂತರ ಶ್ರೀನಿವಾಸ ಆತನ ಕೈಯಲ್ಲಿದ್ದ ಮಚ್ಚನ್ನು ಅಲ್ಲಿಯೇ ಬಿಸಾಡಿ ಈ ದಿನ ತಪ್ಪಿಸಿಕೊಂಡಿದ್ದೀಯಾ, ನಿನ್ನನ್ನು ಮುಗಿಸದೇ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿ ಹೊರಟು ಹೋಗಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.370/2020 ಕಲಂ: 143,147,148,323,324,506  ರೆ/ವಿ 149 ಐ.ಪಿ.ಸಿ & 3(1)(f),3(1)(r),3(1)(s) The SC & ST (Prevention of Atrocities) Amendment Act 2015 :-

     ದಿನಾಂಕ: 08/10/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀನಿವಾಸ ಬಿನ್ ಮುಳವಾಗಿಲಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ಚೆನ್ನಕೇಶವಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 7.00 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿ ತಮ್ಮ ಜನಾಂಗಕ್ಕೆ 28 ನಿವೇಶನಗಳು ಮಂಜೂರಾಗಿದ್ದು, ಸದರಿ ನಿವೇಶನಗಳಲ್ಲಿ ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದು, ಇನ್ನೂ ಕೆಲವರು ಪಾಯ ಹಾಕಿಕೊಂಡಿರುತ್ತಾರೆ. ಉಳಿದ ನಿವೇಶನಗಳು ಖಾಲಿ ಇರುತ್ತೆ. ಈ ನಿವೇಶನಗಳ ಪಕ್ಕದಲ್ಲಿ ತಮ್ಮ ಗ್ರಾಮದ ಸವರ್ಣಿಯ ಕುರುಬ ಜನಾಂಗಕ್ಕೆ ಸೇರಿದ ನಾರಾಯಣಸ್ವಾಮಿ ಬಿನ್ ವೆಂಕಟಸ್ವಾಮಿ, ಬಸವರಾಜ ಬಿನ್ ನಾರೆಪ್ಪ ಮತ್ತು ವಿಜಯಕುಮಾರ್ ಬಿನ್ ನಾರೆಪ್ಪ ರವರುಗಳಿಗೆ ಸಂಬಂದಿಸಿದ ಜಮೀನು ಇರುತ್ತೆ. ಮೇಲ್ಕಂಡ ಮೂರು ಜನರು ತಮ್ಮ ಜನಾಂಗಕ್ಕೆ ಮಂಜೂರಾಗಿದ್ದು ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ತಾವು ತಹಸಿಲ್ದಾರ್, ಇ.ಓ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೇವೆ. ಈ ದಿನ ದಿನಾಂಕ: 08/10/2020 ರಂದು ಬೆಳಿಗ್ಗೆ 11.00 ಗಂಟೆಗೆ ತಾಲ್ಲೂಕು ಭೂ ಮಾಪನ ಅಧಿಕಾರಿಗಳು, ಹಿರೇಕಟ್ಟಿಗೇನಹಳ್ಳಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಇತರರು ಬಂದು ಮೇಲ್ಕಂಡ ಮೂರು ಜನರಿಗೆ ಸೇರಿದ ಸರ್ವೇ ನಂಬರ್ ಗಳ ಜಮೀನನ್ನು ಅಳತೆ ಮಾಡಿ ಹದ್ದು ಬಸ್ತು ನಿಗದಿ ಪಡಿಸಿದ್ದು, ಮದ್ಯಾಹ್ನ ತಹಸಿಲ್ದಾರ್, ಇ.ಓ ಮತ್ತು ಇತರೆ ಅಧಿಕಾರಿಗಳು ಬಂದಿರುತ್ತಾರೆ. ಸದರಿಯರವರು ತಮ್ಮನ್ನು ಹಾಗೂ ನಾರಾಯಣಸ್ವಾಮಿ ರವರ ಕಡೆಯವರನ್ನು ಕರೆಸಿ ಅಳತೆ ಮುಗಿಸಿ ಇನ್ನೆರಡು ದಿನಗಳಲ್ಲಿ ಕಲ್ಲುಗಳನ್ನು ನೆಟ್ಟು ನಿಮ್ಮ ನಿವೇಶನಗಳನ್ನು ಗುರುತಿಸಿ ಕೊಡುತ್ತೇವೆ ಎಂದು ಹೇಳಿದಾಗ ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ಮೇಲ್ಕಂಡ ನಾರಾಯಣಸ್ವಾಮಿ, ಬಸವರಾಜ, ವಿಜಯಕುಮಾರ್, ಮಂಜುನಾಥ ಬಿನ್ ನಾರಾಯಣಸ್ವಾಮಿ, ಅವಿನಾಶ್ ಬಿನ್ ಬಸವರಾಜ್, ಅರವಿಂದ ಬಿನ್ ಬಸವರಾಜ್, ಸುರೇಶ ಬಿನ್ ನಾರಾಯಣಸ್ವಾಮಿ, ಹರೀಶ ಬಿನ್ ಶಿವಣ್ಣ, ನಾಗೇಶ್ ಬಿನ್ ಶಿವಣ್ಣ ಎಂಬುವವರು ಅಕ್ರಮ ಗುಂಪುಕಟ್ಟಿಕೊಂಡು ಬಂದು ಅಲ್ಲಿದ್ದ ತನ್ನ ಮೇಲೆ, ತನ್ನ ಅಣ್ಣ ಕೃಷ್ಣಪ್ಪ ಬಿನ್ ಚಿಕ್ಕ ವೆಂಕಟಪ್ಪ ರವರ ಮೇಲೆ ಜಗಳ ತೆಗೆದು, ಈ ಮಾದಿಗ ನನ್ನ ಮಕ್ಕಳು ನಮ್ಮ ಮೇಲೆ ಅರ್ಜಿಗಳನ್ನು ಹಾಕಿ ಅಳತೆ ಮಾಡಿಸುತ್ತಾರೆ ಇವರನ್ನು ಬಿಡಬಾರದು ಎಂದು ತಮ್ಮ ಜಾತಿಯ ಬಗ್ಗೆ ಬೈದು, ಜಾತಿ ನಿಂದನೆ ಮಾಡಿ ಆ ಪೈಕಿ ಬಸವರಾಜ ಎಂಬುವನು ದೊಣ್ಣೆಯಿಂದ ತನ್ನ ತಲೆ ಮತ್ತು ಎದೆಯ ಮೇಲೆ ಹೊಡೆದು ಊತಗಾಯಪಡಿಸಿದನು. ಹರೀಶ ಕಲ್ಲಿನಿಂದ ತನ್ನ ಅಣ್ಣನ ಬಲಕಾಲಿಗೆ ಹೊಡೆದು ರಕ್ತಗಾಯ ಪಡಿಸಿದ. ಉಳಿದವರು ಕೈಗಳಿಂದ ತಮ್ಮ ಮೈ ಕೈ ಮೇಲೆ ಹೊಡೆದು ನೋವನ್ನುಂಟು ಮಾಡಿ, ಈ ಜಾಗದ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ತಮ್ಮ ಜಾತಿಯ ಬಗ್ಗೆ ಬೈದು, ಹಲ್ಲೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.371/2020 ಕಲಂ: 279,337  ಐ.ಪಿ.ಸಿ:-

     ದಿನಾಂಕ: 09/10/2020 ರಂದು ಬೆಳಿಗ್ಗೆ 10.00 ಗಂಟೆಗೆ ವೆಂಕಟರವಣ ಬಿನ್ ಲೇಟ್ ವೆಂಕಟಪ್ಪ, 62 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ಪೆದ್ದಪಲ್ಲಿ ಗ್ರಾಮ, ತನಕಲ್ಲು ಮಂಡಲಂ, ಕದಿರಿ ತಾಲ್ಲೂಕು, ಅನಂತಪುರ ಜಿಲ್ಲೆ. ಆಂದ್ರ ಪ್ರದೇಶ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಇಬ್ಬರು ಮಕ್ಕಳಿದ್ದು, ಮೊದಲನೆ ಮೇನಕಮ್ಮ ಮತ್ತು ಎರಡನೇ ದಶರಥ ರವರಾಗಿರುತ್ತಾರೆ. ದಶರಥ ರವರಿಗೆ 39 ವರ್ಷ ವಯಸ್ಸಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಹೀಗಿರುವಾಗ ತನ್ನ ಮಗ ದಶರಥ ರವರು ದಿನಾಂಕ 05-10-2020 ರಂದು ಬೆಳಗ್ಗೆ ಬೆಂಗಳೂರಿನಿಂದ ಆತನ ಬಾಬತ್ತು ಕೆಎ 53 ಇಎಲ್ 9745 ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಬಂದಿರುತ್ತಾನೆ. ನಂತರ ಅದೇ ದಿನ ಬೆಂಗಳೂರಿಗೆ ಹೋಗುವ ಸಲುವಾಗಿ ಮದ್ಯಾಹ್ನ 2-30 ಗಂಟೆ ಸಮಯದಲ್ಲಿ ತನ್ನ ಮಗ ಆತನ ಮೇಲ್ಕಂಡ ದ್ವಿಚಕ್ರ ವಾಹನದಲ್ಲಿ ಮನೆಯಿಂದ ತೆರಳಿರುತ್ತಾನೆ. ನಂತರ ಸಂಜೆ 4-45 ಗಂಟೆ ಸಮಯದಲ್ಲಿ ತನ್ನ ಮಗ ಮೋಬೈಲ್ ನಿಂದ ಯಾರೋ ಸಾರ್ವಜನಿಕರು ಪೋನ್ ಮಾಡಿ ನಿನ್ನ ಮಗನಿಗೆ ಚಿಂತಾಮಣಿ ತಾಲ್ಲೂಕು ಚೊಕ್ಕರೆಡ್ಡಿ ಹಳ್ಳಿ ಗ್ರಾಮದ ಬಳಿ ಅಪಘಾತವಾಗಿರುವುದಾಗಿ, ಹಾಗೂ ಆತನನ್ನು ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಆಂಬುಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿರುವುದಾಗಿ ಹೇಳಿದ್ದು ತಾನು ಮತ್ತು ತನ್ನ ಹೆಂಡತಿ ರವಣಮ್ಮ ರವರು ಕೂಡಲೇ ಚಿಂತಾಮಣಿ ಸರ್ಕಾರಿ ಆಸ್ವತ್ರೆಗೆ ಬಂದು ನೋಡಲಾಗಿ ವಿಚಾರ ನಿಜವಾಗಿದ್ದು ತನ್ನ ಮಗನ ಬಾಯಿ ಮತ್ತು ಹಲ್ಲುಗಳಿಗೆ, ಗಡ್ಡದ ಮೇಲೆ ಹಾಗೂ ಎಡ ಹಣೆಯ ಮೇಲೆ ರಕ್ತಗಾಯಗಳಾಗಿರುತ್ತೆ. ನಂತರ ಸದರಿ ಅಫಘಾತದ ಬಗ್ಗೆ ತನ್ನ ಮಗನನ್ನು ವಿಚಾರ ಮಾಡಲಾಗಿ ಆತನು, ತಾನು ತನ್ನ ಬಾಬತ್ತು ಕೆಎ 53 ಇಎಲ್ 9745 ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಬೆಂಗಳೂರಿಗೆ ಹೋಗುವ ಸಲುವಾಗಿ ಸಂಜೆ 4-30 ಗಂಟೆ ಸಮಯದಲ್ಲಿ ಚಿಂತಾಮಣಿ ತಾಲ್ಲೂಕು ಚೊಕ್ಕರೆಡ್ಡಿಹಳ್ಳಿ ಗ್ರಾಮದ ಬಳಿ ಚಿಂತಾಮಣಿ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಚಿಂತಾಮಣಿ ಕಡೆಯಿಂದ ಕೆಎ 40 ವಿ 7905 ಹೊಂಡಾ ಶೈನ್ ದ್ವಿ ಚಕ್ರ ವಾಹನ ಬಂದಿದ್ದು, ಸದರಿ ದ್ವಿ ಚಕ್ರ ವಾಹನದ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಆಗ ತಾನು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ಹೋಗಿರುತ್ತೇನೆ. ತನಗೆ ಬಾಯಿ ಮತ್ತು ಹಲ್ಲುಗಳಿಗೆ, ಗಡ್ಡದ ಮೇಲೆ ಹಾಗೂ ಎಡ ಹಣೆಯ ಮೇಲೆ ರಕ್ತಗಾಯಗಳಾಗಿರುತ್ತೆ. ಹಾಗೂ ತನ್ನ ದ್ವಿ ಚಕ್ರ ವಾಹನ ಜಖಂ ಆಗಿರುತ್ತೆ. ತನ್ನ ಮಗನಿಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ವತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯರು ಚಿಕಿತ್ಸೆ ನೀಡಿ ನಂತರ ಬೆಂಗಳೂರಿನ ಎಲೆಕ್ಟ್ರಾನ್ ಸಿಟಿಯ ಕಾವೇರಿ ಆಸ್ವತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ಹಾಲಿ ತನ್ನ ಮಗ ಕಾವೇರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತಾನೆ. ತಾನು ಇದುವರೆಗೂ ತನ್ನ ಮಗನಿಗೆ ಆಸ್ವತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ತನ್ನ ಮಗನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಮೇಲ್ಕಂಡ ಕೆಎ40 ವಿ7905 ಹೊಂಡಾ ಶೈನ್ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.275/2020 ಕಲಂ: 78 (A)(iii) ಕೆ.ಪಿ ಆಕ್ಟ್:-

     ದಿನಾಂಕ: 08-10-2020 ರಂದು ಸಂಜೆ 7.30 ಗಂಟೆಯಲ್ಲಿ ನಾನು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಾಸರಹಳ್ಳಿ ಗ್ರಾಮದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಘನ ನ್ಯಾಯಾಲಯಕ್ಕೆ ಸದರಿ ಕ್ರಿಕೆಟ್ ಬೆಟ್ಟಿಂಗ್ ಮೇಲೆ ದಾಳಿ ಮಾಡಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿಯನ್ನು ಕೋರಿ ನ್ಯಾಯಾಲಯ ಕರ್ತವ್ಯದ ಕರ್ತವ್ಯದ ಸಿಬ್ಬಂಧಿಯಾದ ಸಿಪಿಸಿ-90 ರವರ ಮುಖಾಂತರ ಸಲ್ಲಿಸಿಕೊಂಡಿದ್ದು, ಸಿಪಿಸಿ-90 ರಾಜಕುಮಾರ್ ರವರು ಘನ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದು ರಾತ್ರಿ 8.00 ಗಂಟೆಗೆ ಹಾಜರುಪಡಿಸಿದ್ದರ ಮೇರೆಗೆ ಠಾಣಾ ಮೊ.ಸಂ. 275/2020 ಕಲಂ 78(ಎ)(3) ಕೆ.ಪಿ. ಅಕ್ಟ್ ರೀತ್ಯಾ ಪ್ರಕರಣದ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.277/2020 ಕಲಂ: 143,147,323,324,504,506 ರೆ/ವಿ 149 ಐ.ಪಿ.ಸಿ:-

     ದಿನಾಂಕ: 08-10-2020 ರಂದು ರಾತ್ರಿ 9.30 ಗಂಟೆಯಲ್ಲಿ ಫಿರ್ಯಾದಿದಾರರಾದ ತಾಜ್ ಪಾಷಾ ಬಿನ್ ಲೇಟ್ ಹುಸೇನ್ ಸಾಬ್, 42 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ವಾಸ: 1ನೇ ಬ್ಲಾಕ್, ಜಂಗಮಕೋಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದಲ್ಲಿರುವ ನಮ್ಮ ಮನೆಯ ಸಮೀಪ ಪಂಚಾಯ್ತಿ ವತಿಯಿಂದ ಒಂದು ನಲ್ಲಿ ಹಾಕಿದ್ದರೂ ಸಹ ಬಾಬಾಜಾನ್ ರವರ ಕುಟುಂಬದವರು ದಿನಾಂಕ: 04-10-2020 ರಂದು ಮದ್ಯಾಹ್ನ 2.30 ಗಂಟೆ ಸಮಯದಲ್ಲಿ ಮತ್ತೊಂದು ನಲ್ಲಿಯನ್ನು ಹಾಕಿಸುತ್ತಿದ್ದು ಈ ವಿಚಾರದಲ್ಲಿ ತಾನು ಬಾಬಾಜಾನ್ ರವರಿಗೆ ಯಾಕೆ ನೀವು ಮತ್ತೊಂದು ನಲ್ಲಿಯನ್ನು ಹಾಕುತ್ತಿದ್ದೀರಿ ಎಂದು ಕೇಳುತ್ತಿದ್ದಂತೆ ಬಾಬಾಜಾನ್ ಬಿನ್ ಅನ್ವರ್ ಬೇಗ್, ತಾಸೀನ ಕೋಂ ಬಾಬಾಜಾನ್, ಅಸ್ಮಿಯಾ ಕೋಂ ಕೌಸರ್, ಮುಸ್ಕಾನ್ ಬಿನ್ ಬಾಬಾಜಾನ್, ಮಹಬೂಬ್ ಜಾನ್ ಕೋಂ ಅನ್ವರ್ ಸಾಬ್, ಅನ್ವರ್ ಸಾಬ್, ಶಬ್ಬೀರ್ ಪಾಷಾ ಮತ್ತು ಶಬಾನಾ ಕೋಂ ಶಬ್ಬೀರ್ ರವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ನಮ್ಮ ಇಷ್ಟ ನಾವು ಎಲ್ಲಿ ಬೇಕಾದರೂ ನಲ್ಲಿಯನ್ನು ಹಾಕಿಸಿಕೊಳ್ಳುತ್ತೇವೆ, ಕೇಳುವುದಕ್ಕೆ ನೀನು ಯಾರೂ ಲೋಪರ್ ನನ್ನ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ನನಗೆ ಮುಖ, ಕೈಗಳಿಗೆ ಬಾಬಾಜಾನ್ ರವರು ಕೈಗಳಿಂದ ಹಾಗೂ ಕಲ್ಲಿನಿಂದ ಹೊಡೆದಿದ್ದು, ತನ್ನ ಹೆಂಡತಿಯಾದ ಸುಹೇಲ್ ತಾಜ್ ರವರಿಗೆ ತಾಸೀನಾ ಕೋಂ ಬಾಬಾಜಾನ್ ರವರು ಕಾಲಿನಲ್ಲಿ ಒದ್ದು, ಕೈಗಳಿಂದ ಮುಖ ಮತ್ತು ಹೊಟ್ಟೆಗೆ ಹೊಡೆದಿರುತ್ತಾರೆ, ನಜ್ಮಾ ತಾಜ್ ಕೋಂ ಇಂತಿಯಾಜ್ ಪಾಷಾ ರವರಿಗೆ ಆಸ್ಮಿಯಾ ಕೋಂ ಕೌಸರ್ ಮತ್ತು ಮಬಬೂಬ್ ಜಾನ್ ಕೋಂ ಅನ್ವರ್ ಸಾಬ್ ರವರು ಕತ್ತು, ಬೆನ್ನು ಮತ್ತು ಹೊಟ್ಟೆಗೆ ಕೈಗಳಿಂದ ಹೊಡೆದಿದ್ದು, ಇಂತಿಯಾಜ್ ಬಿನ್ ಹುಸೇನ್ ಸಾಬ್ ರವರಿಗೆ ಅನ್ವರ್ ಸಾಬ್ ರವರು ಕೈಗಳಿಂದ ಮುಖ ಮತ್ತು ಕೈಗಳಿಗೆ ಹೊಡೆದಿದ್ದು, ಸಲ್ಮಾ ಖಾನಂ ಕೋಂ ನಯಾಜ್ ಪಾಷ ರವರಿಗೆ ಶಬ್ಬೀರ್ ಮತ್ತು ಶಬಾನ ರವರು ಕೈಗಳಿಂದ ಹೊಡೆದು ಗಾಯಗೊಳಿಸಿದ್ದು, ಮೇಲ್ಕಂಡವರೆಲ್ಲರೂ ಸಹ ಇನ್ನು ಮುಂದೆ ನೀವೇನಾದರೂ ನಮ್ಮ ತಂಟೆಗೆ ಬಂದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು, ಆ ಸಮಯದಲ್ಲಿ ನಮ್ಮ ಗ್ರಾಮದ ಸಲ್ಮಾನ್ ಪಾಷಾ ಬಿನ್ ಎಂ.ಕೆ. ಮೌಲಾ ಮತ್ತು ಜೆ.ಕೆ. ಬಾಬಾ ಬಿನ್ ಜೆ.ಕೆ. ಬಾಷಾ ರವರು ಗಲಾಟೆ ಬಿಡಿಸಿರುತ್ತಾರೆ. ನಂತರ ನಾವು ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುತ್ತೇವೆ. ನಮ್ಮ ಗ್ರಾಮದ ಹಿರಿಯರು ಇಬ್ಬರಿಗೂ ರಾಜಿ ಮಾಡುವುದಾಗಿ ಹೇಳಿದ್ದು ಮೇಲ್ಕಂಡವರು ಇದುವರೆಗೂ ರಾಜಿಗೆ ಬರದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ನಲ್ಲಿಯ ವಿಚಾರದಲ್ಲಿ ಗಲಾಟೆ ಮಾಡಿ ನಮ್ಮನ್ನು ಹೊಡೆದು ಗಾಯಗೊಳಿಸಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 272/2020 ಕಲಂ 143, 147, 323, 324, 504, 506 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.108/2020 ಕಲಂ: 78 (A)(vi),87 ಕೆ.ಪಿ ಆಕ್ಟ್:-

     ದಿನಾಂಕ:08-10-2020 ರಂದು ರಾತ್ರಿ 7.15 ಗಂಟೆ ಸಮಯದಲ್ಲಿ ಸತೀಶ್.ಕೆ, ಪಿಎಸ್.ಐ (ಕಾ&ಸು), ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಆದ ನಾನು ಠಾಣಾ ಕರ್ತವ್ಯದಲ್ಲಿದ್ದಾಗ ಬಾತ್ಮಿದಾರರಿಂದ ಶಿಡ್ಲಘಟ್ಟ ನಗರದ 2ನೇ ಕಾರ್ಮಿಕನಗರದಲ್ಲಿರುವ ಇಲ್ಲು @ ಇಲಿಯಾಜ್ ಪಾಷ ರವರ ಕಾಂಡಿಮೆಂಟ್ ಮುಂದೆ ಯಾರೋ ಅಸಾಮಿಗಳು ಸೇರಿಕೊಂಡು ಈ ದಿನ ದುಬೈನಲ್ಲಿ ನಡೆಯುತ್ತಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕ್ರಿಕೆಟ್ ಟೀಮ್ ಗಳ ಮದ್ಯೆ ನಡೆಯುತ್ತಿರುವ ಐಪಿಲ್ ಕ್ರಿಕೆಟ್ ಪಂದ್ಯಕ್ಕೆ ಸಂಬಂದಪಟ್ಟಂತೆ ಎರಡು ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಒಬ್ಬರಿಗೊಬ್ಬರು ಬೆಟ್ಟಿಂಗ್ ಹಣವನ್ನು ಪಣವಾಗಿ ಕಟ್ಟಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಬಂದಿದ್ದು, ಸದರಿ ಸ್ಥಳದ ಮೇಲೆ ದಾಳಿ ಮಾಡಿ ಕ್ರಮ ಜರುಗಿಸಲು ಪಂಚರುಗಳಾದ 1] ಆರೀಪ್ ಖಾನ್ ಬಿನ್ ಲೇಟ್ ಸರ್ದಾರ್ ಖಾನ್,  2ನೇ ಕಾರ್ಮಿಕ ನಗರ, ಶಿಡ್ಲಘಟ್ಟ ಟೌನ್ 2] ಬಾಬಾ ಬಿನ್ ಸೈಯದ್ ಕಲೀಂ, ಅಜಾದ್ ನಗರ, ನಾಸೀರ್ ಮನೆ ಹತ್ತಿರ, ಶಿಡ್ಲಘಟ್ಟ ಟೌನ್ ರವರನ್ನು ಪಂಚರಾಗಿ ಸಹಕರಿಸಲು ಕರೆದುಕೊಂಡು ಹಾಗೂ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.162 ರಾಜಶೇಖರ್, ಪಿ.ಸಿ.128 ಸಂತೋಷ, ಪಿ.ಸಿ.209 ಶಶಿಕುಮಾರ್, ಪಿ.ಸಿ.280 ಶಶಿಕುಮಾರ್ ರವರೊಂದಿಗೆ ರಾತ್ರಿ 8.30 ಗಂಟೆಗೆ ಇಲಿಯಾಜ್ ಪಾಷ ರವರ ಕಾಂಡಿಮೆಂಟ್ ಮುಂದೆ ಕ್ರಿಕೆಟ್ ಬೆಟ್ಟಿಂಗ್ ಅಡುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ 3 ಜನರ ಪೈಕಿ 3 ಜನರನ್ನು ವಶಕ್ಕೆ ಪಡೆದುಕೊಂಡಿದ್ದು, ಅವರ ಹೆಸರು ವಿಳಾಸ ಕೇಳಲಾಗಿ 1] ನವಾಜ್ ಖಾನ್ ಬಿನ್ ಬಿನ್ ಮುನಾವರ್, 2ನೇ ಟಿ.ಎಂ.ಸಿ ಲೇಔಟ್, ಅಜಾದ್ ನಗರ, ಶಿಡ್ಲಘಟ್ಟ ಟೌನ್ ಇವರ ಬಳಿ ವಿವೋ ಕಂಪನಿಯ ಮೊಬೈಲ್ ಪೋನ್ (ನಂ.9986237863) ಇರುತ್ತೆ. 2] ರಫೀಕ್ ಬಿನ್ ಗೌಸ್ ಪೀರ್,  ರಹಮತ್ ನಗರ, ಶಿಡ್ಲಘಟ್ಟ ಟೌನ್ 3] ಇಲಿಯಾಜ್ ಪಾಷ @ ಇಲ್ಲು, ಬಿನ್ ಗೌಸ್ ಪೀರ್, ಅಜಾದ್ ನಗರ, ಅಪ್ಸರ್ ಮನೆ ಹತ್ತಿರ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು ಒಬ್ಬ ಆಸಾಮಿ ಓಡಿ ಹೋಗಿದ್ದು, ಓಡಿ ಹೋದವರ ಹೆಸರು ವಿಳಾಸ ಕೇಳಲಾಗಿ 4] ಆಸೀಪ್, ಅಜಾದ್ ನಗರ, ಶಿಡ್ಲಘಟ್ಟ ಟೌನ್ ಎಂದು ತಿಳಿದು ಬಂದಿರುತ್ತೆ. ಇವರು ನವಾಜ್ ಖಾನ್ ಬಳಿ ಇರುವ ಮೊಬೈಲ್ ಪೋನ್ ಮೂಲಕ ದುಬೈನಲ್ಲಿ ನಡೆಯುತ್ತಿರುವ ಎಸ್.ಆರ್.ಎಚ್ ಮತ್ತು ಪಂಜಾಬ್ ಕ್ರಿಕೆಟ್ ಟೀಂಗಳ ಮದ್ಯೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಎಸ್.ಆರ್.ಎಚ್ ಗೆಲ್ಲುತ್ತೆ 5000/-ರೂ ಎಂತಲೂ ಮತ್ತೊಬ್ಬರು ಪಂಜಾಬ್ ಟೀಂ ಗೆಲ್ಲುತ್ತೆ 5000/-ರೂ ಎಂದು ಹಣವನ್ನು ಪಣಕ್ಕೆ ಕಟ್ಟಿ ಮಾತನಾಡಿಕೊಂಡು ನವಾಜ್ ಖಾನ್ ರವರ ಮೊಬೈಲ್ ಪೋನ್ ನಲ್ಲಿ ಕ್ರಿಕೆಟ್ ಸ್ಕೋರ್ ನೋಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಠದ ಜೂಜಾಟ ಆಡುತ್ತಿರುವುದಾಗಿ ತಿಳಿಸಿರುತ್ತಾರೆ. ಇವರುಗಳ ಬಳಿ ಪಣಕ್ಕೆ ಕಟ್ಟಲು ತಂದಿದ್ದ ಒಟ್ಟು 11,500/-ರೂ ನಗದು ಹಣ, ಹಾಗೂ ನವಾಜ್ ಖಾನ್ ರವರ ಬಳಿ ಇದ್ದ ಒಂದು ವಿವೋ ಕಂಪನಿಯ ಮೊಬೈಲ್ ಪೋನ್ ರಾತ್ರಿ 8.35 ರಿಂದ 9.10 ಗಂಟೆಯವರೆಗೆ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು. ಸ್ಥಳದಲ್ಲಿ ವಶಕ್ಕೆ ಪಡೆದ 03 ಜನ ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲಿನ ಸಮೇತ ಠಾಣೆಗೆ ಹಾಜರುಪಡಿಸಿದ್ದು, ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ರಾತ್ರಿ 9.30 ಗಂಟೆಗೆ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.