ದಿನಾಂಕ : 09/10/2019ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 326/2019 ಕಲಂ. 323-324-448-504-506 ರೆ/ವಿ 149 ಐ.ಪಿ.ಸಿ:-

     ದಿ: 08-10-2019 ರಂದು ಸಂಜೆ 7:00 ಗಂಟೆ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ  ಗಾಯಾಳುವಿನ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ – ನಾನು ನಮ್ಮ ತಂದೆ ಮುಸ್ತಾಫ ರವರ ಬಾಬತ್ತು ಮನೆಯಲ್ಲಿ ವಾಸವಾಗಿರುತ್ತನೆ.  ಈ ಬಗ್ಗೆ ಅನೇಕ ಬಾರಿ ನಮ್ಮ ಅಣ್ಣ ಮಹಮ್ಮದ್ ಷರೀಫ್ ಬಿ ಲೇಟ್ ಮುಸ್ತಾಫ್ ರವರ ನೀನು ವಾಸವಾಗಿರುವ ಮನೆ ನನಗೆ ಸೇರಿದ್ದು, ಮನೆಯನ್ನು ಬಿಟ್ಟು ನೀನು ಎಲ್ಲಿಗಾದರು ಹೋಗು ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿರುತ್ತಾರೆ. ಆದರೂ ಸಹ ನಾನು ಈ ಬಗ್ಗೆ ಹಿರಿಯನ್ನು ಕರೆಯಿಸಿ ಮಾತನಾಡಿಕೊಂಡಿರುತ್ತೇವೆ.  ಹೀಗಿರುವಾಗ  ಈ ದಿನ ದಿನಾಂಕ: 08-10-2019 ರಂದು ಸಂಜೆ ಸುಮಾರು 5:30 ಗಂಟೆ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ, ನಮ್ಮ ಅಣ್ಣನಾದ 1] ಮಹಮ್ಮದ್ ಷರೀಫ್ ಬಿನ್ ಲೇಟ್ ಮುಸ್ತಾಫ 2] ಶಬಾನ ಕೋಂ ಮಹಮ್ಮದ್ ಷರೀಫ್ 3] ಮುಜಾಹಿದ್ ಬಿನ್ ಮಹಮ್ಮದ್ ಷರೀಫ್ 4] ಆದಿಲ್ ಬಿನ್ ಮಹಮ್ಮದ್ ಷರೀಫ್ 5] ತಾಹೇರಾ ಬೇಗಂ ಕೋಂ ಲೇಟ್ ಮುಸ್ತಾಫ ರವರುಗಳು ನಮ್ಮ ಮನೆಯ ಬಳಿ ಬಂದು ವಿನಾಕಾಣ ನನ್ನ ಮೇಲೆ ಗಲಾಟೆಗೆ ಬಂದು ನನ್ನನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ನಾನು ವಾಸವಾಗಿರುವ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮೇಲ್ಕಂಡ ಎಲ್ಲರೂ ಏಕಾಏಕಿ ನನನ್ನು ಹಿಡಿದುಕೊಂಡು ಕೈಗಳಿಂದ ನನ್ನ ಮೈಮೇಲೆ ಹೊಡೆದು ಮೂಗೇಟು ಮಾಡಿರುತ್ತಾರೆ. ಹಾಗೂ ನನ್ನ ಅಣ್ಣ ಮಹಮ್ಮದ್ ಷರೀಪ್ ರವರು ಇಟ್ಟಿಗೆ ಚೂರನ್ನು ತೆಗೆದುಕೊಂಡು ಬಂದು ನನ್ನ ತಲೆಯ ಮುಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.  ಮುಜಾಹಿದ್ ರವರು ನನ್ನ ಕತ್ತನ್ನು ಹಿಡಿದುಕೊಂಡು ಹೊಟ್ಟೆಗೆ ಹೊಡೆದು, ಪ್ರಾಣಬೆದರಿಕೆಯನ್ನು ಹಾಕಿದ್ದು, ಈ ಬಗ್ಗೆ ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿದೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 327/2019 ಕಲಂ. 323-353-504 ರೆ/ವಿ 34  ಐ.ಪಿ.ಸಿ:-

     ದಿ: 08-10-2019 ರಂದು ರಾತ್ರಿ 10:20 ಗಂಟೆ ಸಮಯದಲ್ಲಿ ಗಾಯಾಳು ಪ್ರತಾಪ್ ಬಿನ್ ಲೇಟ್ ಅಪ್ಪಸ್ವಾಮಿ, 35 ವರ್ಷ, ಚಾಲಕ ವೃತ್ತಿ, KA-40-F-1183 KSRTC ಬಸ್ ಬಾಗೇಪಲ್ಲಿ ಡಿಪೋ ಬ್ಯಾಡ್ಜ್ ನಂ: 5132, ವಾಸ ಲಕ್ಷ್ಮೀಸಾಗರ ಗ್ರಾಮ, ವರ್ಲಕೊಂಡ ಪಂಚಾಯ್ತಿ, ಗುಡಿಬಂಡೆ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ – ನಾನು ಈಗ್ಗೆ ಸುಮಾರು 4 ವರ್ಷಗಳಿಂದ ಬಾಗೇಪಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ.  ನಾನು ಒಂದು ವಾರದಿಂದ ಬಾಗೇಪಲ್ಲಿ – ತಿರುಪತಿ ಮಾರ್ಗ ಸಂಖ್ಯೆ 57 ರಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ.  ದಿ: 08-10-2019 ರಂದು ರಾತ್ರಿ 7:45 ಗಂಟೆ ಸಮಯದಲ್ಲಿ ತಿರುಪತಿಯಿಂದ – ಬಾಗೇಪಲ್ಲಿಗೆ ಬರಲು ಚಿಂತಾಮಣಿ – ಬಾಗೇಪಲ್ಲಿ ರಸ್ತೆಯ ಗುಂಡ್ಲಪಲ್ಲಿ ಕ್ರಾಸ್ ನಲ್ಲಿ KA-40-F-1183 ಬಸ್ ನಲ್ಲಿ ಚಾಲನೆ ಮಾಡುತ್ತಿದ್ದು, ಕಂಡೆಕ್ಟರ್ ಶ್ರೀಮತಿ ಎನ್.ಎಲ್ ತುಳಸಿ ಬ್ಯಾಡ್ಜ್ ನಂ 3568 ರವರು ಚೀಟಿ ನೀಡಿದ್ದರ ಮೇರೆಗೆ ಗುಂಡ್ಲಪಲ್ಲಿ ಕ್ರಾಸ್ ನಲ್ಲಿ ಬಸ್ಸನ್ನು ಪ್ರಯಾಣಿಕರು ಇಳಿಯಲು ನಿಲ್ಲಿಸಿರುತ್ತೇನೆ.  ಆಗ KA-50-EJ-5729 ದ್ವಿಚಕ್ರ ವಾಹನ ಹಿರೋಹೋಂಡಾ ಸ್ಲೆಂಡರ್ ಪ್ಲಸ್ ವಾಹನದ ಸವಾರ ನಮ್ಮ ಬಸ್ಸಿನ ಮುಂದೆ ಅಡ್ಡಲಾಗಿ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನನ್ನನ್ನು ಕುರಿತು ಏನೋ ಬೋಳಿ ಮಗನೆ, ನಮ್ಮ ದ್ವಿಚಕ್ರ ವಾಹನಕ್ಕೆ ಅಡ್ಡಲಾಗಿ ಬಂದು ನಿಲ್ಲಿಸಿದ್ದೀಯಾ, ಕೆಳಕ್ಕೆ ಇಳಿಯೋ ಎಂದು ಅವಾಚ್ಯ ಶಬ್ದಗಳಿಂದ ಬೈದನು, ಅಷ್ಟರಲ್ಲಿ ನಾನು ಬಸ್ಸಿನಿಂದ ಕೆಳಕ್ಕೆ ಇಳಿದು ಬಂದಿದ್ದು, ಸದರಿ ದ್ವಿಚಕ್ರ ವಾಹನ ಸವಾರ ನನ್ನ ಕತ್ತಿನ ಕೆಳಗೆ ಕೈ ಹಾಕಿ ನಿನಗೆಷ್ಟು ದುರಹಂಕಾರ ಎಂದು ಬೈಯ್ದು, ನನ್ನ ಸಮವಸ್ತ್ರವನ್ನು ಹರಿದು ಹಾಕಿ, ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಯಿಂದ ಎಡಕಿವಿಯ ಕೆಳಭಾಗಕ್ಕೆ ಹೊಡೆದಿರುತ್ತಾನೆ.  ಅಷ್ಟರಲ್ಲಿ ಸದರಿ ದ್ವಿಚಕ್ರ ವಾಹನದ ಸವಾರನ ಮನೆಯ ಸದಸ್ಯರು ಬಂದು ನನ್ನನ್ನು ಕುತ್ತಿಗೆ ಹಿಡಿದುಕೊಂಡು, ನನ್ನ ಬಲ ಕೈಯನ್ನು ತಿರುಗಿಸಿ ಹೊಡೆದಿರುತ್ತಾರೆ.  ಅಷ್ಟರಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರು ಜಗಳ ಬಿಡಿಸಿರುತ್ತಾರೆ.  ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ನನ್ನ ಸಮವಸ್ತ್ರವನ್ನು ಹರಿದುಹಾಕಿ ಹೊಡೆದಿರುವ ದ್ವಿಚಕ್ರ ವಾಹನ ಸವಾರನ ಹೆಸರು ಸೋಮಶೇಖರ್ ಗುಂಡ್ಲಪಲ್ಲಿ ಎಂಬುದಾಗಿ ತಿಳಿಯಿತು,  ಈತನ ಮತ್ತು ಇವರ ಕುಟುಂಬ ಸದಸ್ಯರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 328/2019 ಕಲಂ. 15(ಎ) ಕೆ.ಇ ಆಕ್ಟ್:-

     ದಿ: 09-10-2019 ರಂದು ಬೆಳಗ್ಗೆ 11:00 ಗಂಟೆಗೆ ಎ.ಎಸ್.ಐ ಕದರೀಪತಿ ರವರು ಠಾಣೆಗೆ ಹಾಜರಾಗಿ ನೀಡಿದ ವರಧಿ ಸಾರಾಂಶ – ದಿನಾಂಕ; 09.10.2019 ರಂದು ಬೆಳಿಗ್ಗೆ 09-50 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಟಿ.ಬಿ.ಕ್ರಾಸ್ ಸಮೀಪ ಎನ್ ಹೆಚ್ 7 ರಸ್ತೆಯಲ್ಲಿ ಯಾರೋ ಕೆಲವರು ಕುಳಿತುಕೊಂಡು ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ನಾನು, ಹೆಚ್.ಸಿ. 14 ಮುರಳಿ, ಪಿಸಿ 280 ಮುರಳಿ ಹಾಗೂ ಜೀಪ್ ಚಾಲಕ ಎ.ಹೆಚ್.ಸಿ. 34 ಅಲ್ತಾಫ್ ಪಾಷಾ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ; ಕೆಎ.40.ಜಿ.537 ವಾಹನದಲ್ಲಿ ಹೋಗಿ ಬಾಗೇಪಲ್ಲಿ ಪುರದ ಬಸ್ ನಿಲ್ದಾಣದ ಬಳಿ ಇದದ ಪಂಚರನ್ನು ಕರೆದು ವಿಚಾರವನ್ನು ತಿಳಿಸಿ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ಸ್ಥಳಕ್ಕೆ ಬೆಳಿಗ್ಗೆ 10-00 ಗಂಟೆಗೆ ಹೋಗಿ ನೋಡಲಾಗಿ ಯಾರೋ ಕೆಲವರು ಗುಂಪಾಗಿ ಕುಳಿತುಕೊಂಡು ಮದ್ಯಪಾನ ಮಾಡುತ್ತಿದ್ದು, ಅವರುಗಳ ಪೈಕಿ ಒಬ್ಬ ಆಸಾಮಿಯನ್ನು ನಾವುಗಳು ಸುತ್ತುವರೆದು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ಗೋವಿಂದನಾಯ್ಕ್ ಬಿನ್ ಲೇಟ್ ಹನುಮೇನಾಯ್ಕ್, 45 ವರ್ಷ, ಲಂಬಾಣಿ ಜನಾಂಗ, ಹೋಟೆಲ್ ಕೆಲಸ, ವಾಸ 12ನೇ ವಾರ್ಡ್, ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು, ಉಳಿದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋದರು. ನಂತರ ಪಂಚರ ಸಮಕ್ಷಮ ನಾವುಗಳು ಸದರಿ ಸ್ಥಳದಲ್ಲಿ ಪರಿಶೀಲಿಸಲಾಗಿ 90 ML ನ 01 HAYWARDS CHEERS WHISKY 04 ಖಾಲಿ ಟೆಟ್ರಾ ಪಾಕೇಟ್, 01 ಖಾಲಿ ವಾಟರ್ ಬಾಟಲ್, ಮದ್ಯಸೇವನೆ ಮಾಡಿರುವ 04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, ಮದ್ಯ ತುಂಬಿರುವ 90 ಎಂ.ಎಲ್.. HAYWARDS CHEERS WHISKY 12  ಟೆಟ್ರಾ ಪಾಕೇಟ್ ಇದ್ದು, ಒಟ್ಟು 1.080 ಲೀಟರ್ ಮದ್ಯವಿದ್ದು ಇವುಗಳ ಒಟ್ಟು ಬೆಲೆ 363/- ರೂ.ಗಳಾಗಿರುತ್ತೆ. ಸದರಿ ಆಸಾಮಿಯನ್ನು ಕಾನೂನು ಬಾಹಿರವಾಗಿ ಮದ್ಯಪಾನ ಮಾಡಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಮೇಲ್ಕಂಡ ಮಾಲುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಬೆಳಿಗ್ಗೆ 11-00 ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ವರದಿಯನ್ನು ನೀಡಿರುತ್ತೇನೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 120/2019 ಕಲಂ. 399-402 ಐ.ಪಿ.ಸಿ:-

     ದಿನಾಂಕ:08/10/2019 ರಂದು ಬೆಳಿಗ್ಗೆ 08-30 ಗಂಟೆಗೆ ಪಿ.ಎಸ್.ಐ ಶ್ರೀ. ಟಿ.ಎನ್ ಪಾಪಣ್ಣ ಸಾಹೆಬರವರು 4 ಜನ ಆಸಾಮಿಗಳನ್ನು ಮತ್ತು ಅವರಿಂದ ವಶಪಡಿಸಿಕೊಂಡ ಮಾಲುಗಳನ್ನು ಹಾಜರುಪಡಿಸಿ ನೀಡಿದ ವರದಿಯ ಸಾರಾಂಶವೆನೆಂದರೆ, ದಿನಾಂಕ :08/10/2019 ರಂದು  ಬೆಳಿಗ್ಗೆ 05-00 ಗಂಟೆಯ ಸಮಯದಲ್ಲಿ ನನಗೆ ಚಿಂತಾಮಣಿ ತಾಲ್ಲೂಕು ಮುದ್ದಲಹಳ್ಳಿ ಗ್ರಾಮದ ಹೊರ ಹೊಲಯದಲ್ಲಿರುವ ಪೆದ್ದೂರು ಕಡೆ ಹೋಗುವ ಥಾರ್ ರಸ್ತೆಯಲ್ಲಿ ಯಾರೋ 7 ಜನ ಆಸಾಮಿಗಳು ಬೆಳಗಿನ ಮುಸಕಿನ ಜಾವದಲ್ಲಿ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕರಿಂದ ದರೋಡೆ ಹಾಗೂ ಇತರೇ ಸಮಾಜಘಾತಕ ಕೃತ್ಯಗಳನ್ನು ಎಸಗಲು ಹೊಂಚು ಹಾಕಿ ಕುಳಿತಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ ಸದರಿಯವರ ಮೇಲೆ ದಾಳಿ ಮಾಡಿ ವಶಕ್ಕೆ ಪಡೆಯಲು ನಾನು, ಪೊಲೀಸ್  ಸಿಬ್ಬಂದಿಯವರಾದ ಮುಕ್ತಿಯಾರ್ ಪಾಷಾ ಸಿ ಹೆಚ್ ಸಿ – 44 ಶಿವಪ್ಪ ಸಿ ಹೆಚ್ ಸಿ 123, ಶ್ರೀನಾಥ ಸಿ ಹೆಚ್ ಸಿ -143. ವಿಜಯ್ ಕುಮಾರ್ ಸಿಪಿಸಿ-374 ಸಿಪಿಸಿ – 371 ಮುರಳಿ ರವರುಗಳನ್ನು  ಠಾಣೆಯ ಜೀಪ್ ನಲ್ಲಿ ಕರೆದುಕೊಂಡು ಬೆಳಿಗ್ಗೆ 05-30 ಗಂಟೆಯ ಸಮಯಕ್ಕೆ ಮುದ್ದಲಹಳ್ಳಿ ಗ್ರಾಮಕ್ಕೆ ಹೋಗಿ ಮತ್ತೊಮ್ಮೆ ಮಾಹಿತಿಯನ್ನು ಖಚಿತ ಪಡಿಸಿಕೋಂಡು ಪಂಚರನ್ನು ಬರಮಾಡಿಕೊಂಡು ಪಂಚರಿಗೆ ವಿಚಾರವನ್ನು ತಿಳಿಸಿ  ಅವರೊಂದಿಗೆ ಜೀಪ್ ನಲ್ಲಿ ಮುದ್ದಲಹಳ್ಳಿ ಗ್ರಾಮದ  ಹೊರ ಹೊಲಯದಲ್ಲಿರುವ ಪೆದ್ದೂರು ಕಡೆ ಹೋಗುವ ಥಾರ್ ರಸ್ತೆಯ ಬಳಿಗೆ ಹೋಗಿ ನೋಡಲಾಗಿ  ಯಾರೋ 7 ಜನ ಆಸಾಮಿಗಳ ಗುಂಪು ಮಾರಕಾಯುದಗಳನ್ನಿಡಿದುಕೊಂಡಿರುವುದು ಕಂಡು ಬಂದಿದ್ದು, ಆಸಾಮಿಗಳು ಓಡಿ ಹೋಗದಂತೆ   ಎಚ್ಚರಿಕೆ ನೀಡಿದರೂ ಆಸಾಮಿಗಳು ಓಡಿ ಹೋಗಲು ಪ್ರಯತ್ನಿಸಿದ್ದು,  ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಳ್ಳಲು ಸಿಬ್ಬಂದಿಯವರಿಗೆ ನಾನು  ಸೂಚನೆ ನೀಡಿದರ ಮೇರೆಗೆ ಸಿಬ್ಬಂದಿಯವರು ಆಸಾಮಿಗಳನ್ನು ಸುತ್ತುವರೆದಾಗ 7 ಜನ ಆಸಾಮಿಗಳು ಪರಾರಿಯಾಗಲು ಪ್ರಯತ್ನಿಸಿದ್ದು, ಸಿಬ್ಬಂದಿಯವರು ಆಸಾಮಿಗಳನ್ನು ಹಿಂಬಾಲಿಸಿ ಆ ಪೈಕಿ 4 ಜನ ಆಸಾಮಿಗಳನ್ನು ಹಿಡಿದುಕೊಂಡಿದ್ದು. ಉಳಿದ ಇಬ್ಬರು ಆಸಾಮಿಗಳು ಪರಾರಿಯಾಗಿರುತ್ತಾರೆ. 4 ಜನ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ  1) ಇಪರ್ಾನ್ ಪಾಷಾ @ ಇಮ್ರಾನ್ ಬಿನ್ ಪಯಾಜ್,27 ವರ್ಷ,ಮುಸ್ಲಿಮರು, ವೆಲ್ಡಿಂಗ್ ಕೆಲಸ, ವಾಸ: ಕಂಬಲ್ ಪೊಷ್ ದಗರ್ಾದ ಬಳಿ ಶಿವಾಜಿ ನಗರ, ಬೆಂಗಳೂರು. ಮೊ ನಂ:9916779661 2)ಸೈಯದ್ ತನ್ವೀರ್ @ ತನ್ನು ಬಿನ್ ಸೈಯದ್ ಸಲೀಂ,22 ವರ್ಷ, ಮುಸ್ಲಿಮರು, ಎಸಿ ಮಿಷನ್ ಪಿಟ್ಟಿಂಗ್ ಕೆಲಸ, ವಾಸ: ಶಿವೂರ್ ರವರ ಮನೆ ,ಬೇಷ ಗಲ್ಲಿ, ಶಿವಾಜಿ ನಗರ, ಬೆಂಗಳೂರು ನಗರ. ಮೊ ನಂ: 9900390455. 3) ಮೊಹಮದ್ ಜಶೀಂ ಬಿನ್ ಅಬ್ದುಲ್ ಸಲಾಂ 21 ವರ್ಷ, ಮುಸ್ಲಿಮರು, ಹಣ್ಣಿನ ವ್ಯಾಪಾರ, ವಾಸ: ಕಂಬಲ್ ಪೊಷ್ ದಗರ್ಾದ ಹಿಂಭಾಗ, ಶಿವಾಜಿ ನಗರ, ಬೆಂಗಳೂರು. ಮೊ ನಂ:9845769676. 4) ಮೊಹಮದ್ ಅಜಾದ್ ಬಿನ್ ಲೆಟ್ ಮೊಹಮರ್ದ ರಫೀಕ್ , 18 ವರ್ಷ,ಮುಸ್ಲಿಮರು ಬಾಲಾಜಿ ಬಸ್ ನಲ್ಲಿ ಕಲೀನರ್ ಕೆಲಸ, ವಾಸ: ಎಂ ಹೆಚ್ ಪಿ ಎಸ್ ಮಿಲ್ಟ್ರಿ ಶಾಲೆ ಬಳಿ ಮುರಗಮಲ್ಲ ಗ್ರಾಮ ಚಿಂತಾಮಣಿ ತಾಲ್ಲೂಕು ಮೊ ನಂ:8861639808. ಎಂದು ತಿಳಿಸಿದ್ದು, ಓಡಿ ಹೋದ ಆಸಾಮಿಗಳ ಹೆಸರು ಮತ್ತು ವಿಳಾಸ ತಿಳಿಯಲಾಗಿ 5) ಆಂಜಪ್ಪ ಬಿನ್ ಲೇಟ್ ಕರಕಮಾಕನಹಳ್ಳಿ ಪಾಪಣ್ಣ, 58 ವರ್ಷ,ಆದಿ ಕನರ್ಾಟಕ, ವಾಸ; ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 6) ನರಸಿಂಹ ಬಿನ್ ಆಂಜಪ್ಪ.38 ವರ್ಷ, ಆದಿ ಕನರ್ಾಟಕ, ವಾಸ; ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 7) ಮಂಜುನಾಥ ಬಿನ್ ಆಂಜಪ್ಪ,35 ವರ್ಷ, ಆದಿ ಕನರ್ಾಟಕ, ವಾಸ; ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.ಎಂದು ತಿಳಿಸಿದ್ದು, ಪಂಚರ ಸಮಕ್ಷಮ ಅಂಗಶೋಧನೆ ಮಾಡಲಾಗಿ 1) ಇಪರ್ಾನ್ ಪಾಷಾ @ ಇಮ್ರಾನ್ ಬಿನ್ ಪಯಾಜ್ ರವರ ಕೈಯಲ್ಲಿ ಒಂದು ಚಾಕು ಮತ್ತು  ಪ್ಯಾಂಟ್ ಜೇಬಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಕಾರದ ಪುಡಿ ಇರುತ್ತೆ. ಹಾಗೂ ಪ್ಯಾಂಟಿನ ಜೇಬಿನಲ್ಲಿ ನಗದು ಹಣ 6000/- ರೂಗಳಿರುತ್ತೆ. ಹಾಗೂ ಐಟೆಲ್ ಕಂಪನಿಯ ಮೊಬೈಲ್ ಪೋನ್ ಇರುತ್ತೆ. 2)ಸೈಯದ್ ತನ್ವೀರ್ @ ತನ್ನು ಬಿನ್ ಸೈಯದ್ ಸಲೀಂ ರವರ ಕೈಯಲ್ಲಿ ಒಂದು ಚಾಕುವಿರುತ್ತೆ. ಹಾಗೂ ಐಕಾಲ್ ಮೊಬೈಲ್ ಇರುತ್ತೆ. 3) ಮೊಹಮದ್ ಜಶೀಂ ಬಿನ್ ಅಬ್ದುಲ್ ಸಲಾಂ ರವರ ಕೈಯಲ್ಲಿ  ಒಂದು ನೀಲಗಿರಿ ದೊಣ್ಣೆಯಿರುತ್ತೆ. 4) ಮೊಹಮದ್ ಅಜಾದ್ ಬಿನ್ ಲೇಟ್ ಮೊಹಮದ ರಫೀಕ್ ಕೈಯಲ್ಲಿ ಒಂದು ನೀಲಗಿರಿ ದೊಣ್ಣೆ ಮತ್ತು ಪ್ಯಾಂಟಿನ ಜೇಬಿನಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಕಾರದ ಪುಡಿ ಇರುತ್ತೆ. ಹಾಗೂ ಆಸಾಮಿಗಳು ದರೋಡೆ ಮಾಡಲು ದ್ವಿಚಕ್ರವಾಹನಗಳಲ್ಲಿ ಬಂದಿದ್ದು, ರಸ್ತೆಯ ಪಕ್ಕದ ಗಿಡಗಳ ಮರೆಯಲ್ಲಿ ಕೆಎ-03 ಜೆಜೆ -6722 ನೊಂದಣಿ ಸಂಖ್ಯೆಯ ಹೋಂಡಾ ಆಕ್ಟೀವ್ ಕಂಪನಿಯ ದ್ವಿಚಕ್ರವಾಹನ ಮತ್ತು ಕೆಎ-05 ಕೆಪಿ-2769 ನೊಂದಣಿ ಸಂಖ್ಯೆಯ ಸುಜಕಿ ಆಸೆಸ್ 125 ಕಂಪನಿಯ 2 ದ್ವಿಚಕ್ರವಾಹನಗಳಿರುತ್ತೆ.  ಮೇಲ್ಕಂಡ 4 ಜನರನ್ನು ಅವರ ಬಳಿ ಇಟ್ಟುಕೊಂಡಿದ್ದ ಮಾರಕಾಯುಧಗಳಾದ ಚಾಕು, ದೊಣ್ಣೆ, ಕಾರದಪುಡಿಗಳ ಬಗ್ಗೆ ಕೇಳಲಾಗಿ ಸಾರ್ವಜನಿಕರಿಗೆ ಮಾರಕಾಯುಧಗಳನ್ನು ತೊರಿಸಿ ಪ್ರಾಣ ಬೆದರಿಕೆ ಹಾಕಿ  ಸಾರ್ವಜನಿಕರಿಂದ  ಹಣ ಹಾಗೂ ಇತರೆ ಬೆಲೆ ಬಾಳುವ ಆಭರಣಗಳನ್ನು ಮತ್ತು ವಸ್ತುಗಳನ್ನು  ದರೋಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ಅದಕ್ಕೆ ಸಾರ್ವಜನಿಕರು ಅಡ್ಡಿಪಡಿಸಿದಲ್ಲಿ ತಮ್ಮಲ್ಲಿರುವ ಕಾರದ ಪುಡಿ ಎರಚಿ ಮಾರಕಾಯುಧಗಳಿಂದ ಹೊಡೆದು ಪರಾರಿಯಾಗುವ ಸಲುವಾಗಿ ದ್ವಿಚಕ್ರವಾಹನಗಳಲ್ಲಿ ಬಂದು ರಸ್ತೆಯಲ್ಲಿ ಬರುವವರಿಗೆ ವಾಹನಗಳು ಗೊತ್ತಾಗದಂತೆ ರಸ್ತೆಯ ಪಕ್ಕದಲ್ಲಿ ಗಿಡಗಳ ಮರೆಯಲ್ಲಿ ನಿಲ್ಲಿಸಿರುವುದಾಗಿ ತಿಳಿಸಿರುತ್ತಾರೆ.   ಮೇಲ್ಕಂಡ 7 ಜನ ಆಸಾಮಿಗಳು ಸಾರ್ವಜನಿಕರಿಗೆ ಮಾರಕಾಯುಧಗಳನ್ನು ತೊರಿಸಿ ಪ್ರಾಣ ಬೆದರಿಕೆ ಹಾಕಿ  ಸಾರ್ವನಿಕರಿಂದ  ಹಣ ಹಾಗೂ ಇತರೆ ಬೆಲೆ ಬಾಳುವ ಆಭರಣಗಳನ್ನು ಮತ್ತು ವಸ್ತುಗಳನ್ನು  ದರೋಡೆ ಮಾಡಲು ಹೊಂಚು ಹಾಕುತ್ತಿದ್ದರಿಂದ ಮೇಲ್ಕಂಡ ಗುಂಪಿನ 7 ಜನರು ಆಸಾಮಿಗಳನ್ನು ಹಿಂಬಾಲಿಸಲಾಗಿ ಇಬ್ಬರು ಆಸಾಮಿಗಳು ಪರಾರಿಯಾಗಿದ್ದು, ಆ ಪೈಕಿ ಉಳಿದ 4 ಜನರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಬೆಳಿಗ್ಗೆ 06-00 ಗಂಟೆಯಿಂದ 7-30 ಗಂಟೆಯವರೆಗೆ ಪಂಚರ ಸಮಕ್ಷಮ ವಿವರವಾದ ಪಂಚನಾಮೆಯನ್ನು ಮಾಡಿ ಪಂಚನಾಮೆ ಮತ್ತು ವರದಿಯೊಂದಿಗೆ 4 ಜನ ಆಸಾಮಿಗಳನ್ನು ಮತ್ತು ಅವರಿಂದ ವಶಪಡಿಸಿಕೊಂಡ 2 ಚಾಕುಗಳು, 2 ಮರದ ದೊಣ್ಣೆಗಳು , 2 ಮೊಬೈಲ್ ಪೊನ್ ಗಳು ಹಾಗೂ ನಗದು ಹಣ 6000/- ರೂ, ಹಾಗೂ  ಎರಡು ದ್ವಿಚಕ್ರವಾಹನಗಳನ್ನು    ನಿಮ್ಮ ವಶಕ್ಕೆ ನೀಡುತ್ತಿದ್ದು, ಮೇಲ್ಕಂಡ ಆಸಾಮಿಗಳ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಕೊಟ್ಟ ವರದಿಯ ಸಾರಾಂಶವಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 272/2019 ಕಲಂ. 392 ಐ.ಪಿ.ಸಿ:-

     ಪಿರ್ಯಾದಿದಾರರಾದ ಶ್ರೀಮತಿ ಶಾಂತಮ್ಮ ಕೋಂ ವೆಂಕಟರತ್ನಂ ಶೆಟ್ಟಿ.ವೈ.ಕೆ, 78 ವರ್ಷ, ವೈಶ್ಯರು, ಗೃಹಿಣಿ, ವಾಸ ಹಳೆಪೇಟೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 09.10.2019 ರಂದು 6.00 ಗಂಟೆಗೆ ಎಂದಿನಂತೆ ಮನೆಯ ಮುಂಭಾಗ ನೀರು ಮತ್ತು ರಂಗೋಲಿಯನ್ನು ಹಾಕಿ ಮನೆಯ ಓಳಗೆ ಹೋಗಲು ಗೇಟ್ ಬಳಿ ಬಂದು ಗೇಟ್ ತೆಗೆಯುತ್ತಿದ್ದಾಗ ಯಾರೋ ಒಬ್ಬ ಅಸಾಮಿಯು ನನ್ನ ಹಿಂಬದಿಯಿಂದ ಬಂದು ನನ್ನ ಕತ್ತಿನಲ್ಲಿದ್ದ ತಾಳಿ ಸಮೇತ 45 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೊಗಿರುತ್ತಾನೆ ನಂತರ ಕಿರುಚಿಕೊಂಡಾಗ ನಮ್ಮ ಗಂಡ ಮತ್ತು ಪಕ್ಕದ ಮನೆಯವರು ಬರುವಷ್ಟರಲ್ಲಿ ಸದರಿ ಅಸಾಮಿಯು ಓಡಿ ಹೋಗಿರುತ್ತಾನೆ ಸದರಿ ಅಸಾಮಿಯು ಹಸಿರು ಬಣ್ಣದ ಷರ್ಟ್ ಧರಿಸಿರುತ್ತಾನೆ ಗಾಬರಿಯಲ್ಲಿ ನಾನು  ಅವನ ಚಹರೆ ಗುರುತನ್ನು ನಾನು ನೋಡಿರುವುದಿಲ್ಲ ಸದರಿ ಚೈನ್ ನ ಬೆಲೆ ಸುಮಾರು 70 ರಿಂದ 80 ಸಾವಿರ ಆಗಿರುತ್ತೆ ಆದ್ದರಿಂದ ಸದರಿ ಅಸಾಮಿಯನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 422/2019 ಕಲಂ. 380-457 ಐ.ಪಿ.ಸಿ:-

     ದಿನಾಂಕ 08-010-2019 ರಂಧು ಮಧ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ  ಹರೀಶ ಬಿನ್ ನಾರಾಯಣಪ್ಪ, 37 ವರ್ಷ,  ಕುರುಬ ಜನಾಂಗ, ಲಾರಿ ಡ್ರೈವರ್ ವಾಸ ಮೇಳ್ಯಾ ಗ್ರಾಮ,  ಗೌರೀಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂಧರೆ  ದಿನಾಂಕ 06-10-2019 ರಂದು  ನಮ್ಮ ಅತ್ತಿಗೆಯಾದ ಶಾರದ ಎಂಬುವರಿಗೆ ಆರೋಗ್ಯ ಸರಿಯಿಲ್ಲದೇ ಇದ್ದುದರಿಂದ ಬೆಂಗಳೂರಿನಲ್ಲಿ ನ್ಯಾನೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು  ಅವರನ್ನು ನೋಡಿಕೊಂಡು ಬರಲು  ಬೆಂಗಳೂರಿಗೆ ಹೋಗಿದ್ದೆನು.  ಮನೆಯಲ್ಲಿ ನನ್ನ ಹೆಂಡತಿ ಹಾಗು ಮಕ್ಕಳು ಇದ್ದರು. ಈ ದಿನ ದಿನಾಂಕ:08/10/2019 ರಂದು ಬೆಳಿಗ್ಗೆ ಸುಮಾರು 6-00 ಗಂಟೆಯಲ್ಲಿ ನನ್ನ ಹೆಂಡತಿ ರಜನಿ ರವರು ನನ್ನ ಮೊಬೈಲ್ ಗೆ ಕರೆ ಮಾಡಿ, ನಮ್ಮ ಮನೆಯಲ್ಲಿ ಕಳ್ಳತನವಾಗಿರುವ ವಿಚಾರವನ್ನು ತಿಳಿಸಿದಳು.  ನಾನು ಮೇಳ್ಯಾ ಗ್ರಾಮಕ್ಕೆ ಬಂದು ನೋಡಿ ವಿಚಾರಿಸಲಾಗಿ, ತಾನು  ಮನೆಯಲ್ಲಿ ಇಲ್ಲದೇ ಇದ್ದುದರಿಂದ  ತನ್ನ ಹೆಂಡತಿ ರಜನಿ  ದಿನಾಂಕ;07/10/2019 ರಂದು  ರಾತ್ರಿ ಮನೆಗೆ ಬೀಗ ಹಾಕಿಕೊಂಡು,  ಮೇಳ್ಯಾ ಗ್ರಾಮದಲ್ಲೇ ಇರುವ ಪಿರ್ಯಾದಿದಾರರ ತಂದೆ ಎಂ.ಆರ್. ನಾರಾಯಣಪ್ಪರವರ ಮನೆಯಲ್ಲಿ ಮಲಗಲು ಹೋಗಿದ್ದು,  ಬೆಳಿಗ್ಗೆ ಬಂದು ನೋಡಿದಾಗ,  ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಭೀಗವನ್ನು ಕಿತ್ತು ಹಾಕಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ತಿಳಿಸಿದಳು.  ತಾನು   ನೋಡಲಾಗಿ, ಮನೆ ಬೀಗ ಕಿತ್ತು ಹಾಕಿ, ಒಳಗೆ ಇದ್ದ ಬೀರುವಿನ ಹಾಗು ಅದರ ಲಾಕರ್ ನ ಬಾಗಿಲುಗಳನ್ನು ಯಾವುದೋ ಆಯುಧದಿಂದ ಬಲವಂತವಾಗಿ ತೆಗೆದು, ಬೀರುವಿನ ಲಾಕರ್ ನಲ್ಲಿಟ್ಟಿದ್ದ   1). ಎರಡು ಜೊತೆ ಚಿನ್ನ ಓಲೆ, ಹ್ಯಾಂಗಿಂಗ್ಸ್ ತೂಕ 20 ಗ್ರಾಂ.  2) ಎರಡು ಜೊತೆ ಫ್ಯಾನ್ಸಿ ಚಿನ್ನದ ಓಲೆ ತೂಕ  8 ಗ್ರಾಂ. 3) ಐದು ಜೊತೆ  ಚಿಕ್ಕ ಮಕ್ಕಳ ಚಿನ್ನದ ಓಲೆಗಳು   ತೂಕ 12 ಗ್ರಾಂ. 4) ಒಂದು ಜೊತೆ ಮಾಟಿ  2 ಗ್ರಾಂ.  5)  ರಿವರ್ಸ್ ಚೈನ್,ಒಂದು ಜೊತೆ  2 ಗ್ರಾಂ. 5) ಮೂರು ಚಿನ್ನದ ಉಂಗುರಗಳು  ತೂಕ 8 ಗ್ರಾಂ.  6) 5 ಜೊತೆ ಬೆಳ್ಳಿ ಕಾಲು ಚೈನುಗಳು ತೂಕ   250 ಗ್ರಾಂ  ಒಟ್ಟು 52 ಗ್ರಾಂ ಚಿನ್ನದ ಒಡವೆಗಳು ಮತ್ತು 250 ಗ್ರಾಂ ಬೆಳ್ಳಿ ವಸ್ತುಗಳನ್ನು ಹಾಗೂ   7) ಒಂದು ರೇಷ್ಮೆ ಸೀರೆ ಯನ್ನು ಯಾರೋ ಕಳ್ಳರು ದಿನಾಂಕ 07-10-2019 ರ ರಾತ್ರಿ ಕಳವು ಮಾಡಿಕೊಂಡು ಹೋಗಿರುತ್ತಾರೆ.    ಇವುಗಳ  ಒಟ್ಟು ಬೆಲೆ  1,60,000/- ರೂಗಳಾಗಿರುತ್ತೆ. ಕಳವು ಮಾಡಿಕೊಂಡು ಹೋಗಿರುವ  ಕಳ್ಳರನ್ನು ಪತ್ತೆ ಮಾಡಿ,  ಕಳವಾಗಿರುವ ಒಡವೆಗಳು ಹಾಗು ನಗದನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು  ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 423/2019 ಕಲಂ. 380-454-457 ಐ.ಪಿ.ಸಿ:-

     ದಿನಾಂಕ:08/10/2019 ರಂದು 12-30 ಗಂಟೆಗೆ  ಪಿರ್ಯಾದಿದಾರರಾದ ಶ್ರೀಮತಿ   ಸುಗುಣ ಕೋಂ ಪರಮೇಶ್  32 ವರ್ಷ,  ಹಿಂದೂ ಸಾದರು, ಜಾಕಿ ಗಾರ್ಮೆಂಟ್ಸ್ , ಫ್ಯಾಕ್ಟರಿಯಲ್ಲಿ ಟೈಲರ್ ಕೆಲಸ, ವಾಸ ಮೇಳ್ಯಾ ಗ್ರಾಮ, ಗೌರೀಬಿದನೂರು ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತಾನು  ಗೌರೀಬಿದನೂರು ತಾಲ್ಲೂಕು ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಜಾಕಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿರುತ್ತೇನೆ. ತನ್ನ ಗಂಡ ಪರಮೇಶ್ ರವರು ಆಂದ್ರ ಚೆಕ್ ಪೋಸ್ಟ್ ಬಳಿ ಇರುವ ವಿಪ್ರೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ.   ದಿನಾಂಕ: 06/10/2019 ರಿಂದ ರಜೆಗಳು ಇದ್ದುದರಿಂದ ದಿನಾಂಕ:06/10/2019 ರಂದು  ನಮ್ಮ ಮನೆಗೆ ಬೀಗ ಹಾಕಿಕೊಂಡು, ತನ್ನ ಗಂಡ  ಸ್ವಂತ ಊರಾದ ಮಡಕಶಿರಾ ತಾಲ್ಲೂಕು, ದಾಸೇಗೌಡನಹಳ್ಳಿಗೆ ಹೋಗಿದ್ದರು. ತಾನು ತನ್ನ ಮಕ್ಕಳೊಂದಿಗೆ ಬೆಂಗಳೂರು ವಿಜಯನಗರ ಮೂಡಲಪಾಳ್ಯದಲ್ಲಿರುವ ನಮ್ಮ ಅಣ್ಣನಾದ ಸುಧಾಕರವರ ಮನೆಗೆ ದಸರಾ ಹಬ್ಬಕ್ಕೆಂದು ಹೋಗಿದ್ದೆವು. ನಮ್ಮ ಮನೆಯಲ್ಲಿ ಯಾರೂ ಇರಲಿಲ್ಲ.  ಈ ದಿನ ದಿನಾಂಕ:08/10/2019 ರಂದು ಬೆಳಿಗ್ಗೆ ಸುಮಾರು 7-00 ಗಂಟೆಯಲ್ಲಿ ಮೇಳ್ಯಾ ಗ್ರಾಮದಲ್ಲಿ ನಮ್ಮ ಮನೆ ಮುಂದೆ ಇರುವ ನಮ್ಮ ಚಿಕ್ಕಪ್ಪನಾದ ಪುಟ್ಟರಾಜು ರವರು ನನ್ನ ಮೊಬೈಲ್ ಗೆ ಫೋನ್ ಮಾಡಿ,  ನಮ್ಮ ಮನೆಯಲ್ಲಿ  ಕಳ್ಳತನವಾಗಿರುವ ವಿಚಾರ ತಿಳಿಸಿದ್ದು ತಾನು ಬೆಂಗಳೂರಿನಿಂದ ಬಂದು ನೋಡಲಾಗಿ,  ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಕಿತ್ತು ಹಾಕಿ, ಒಳಗೆ ಬೀರುಗಳ ಬಾಗಿಲುಗಳು ಹಾಗು ಅದರಲ್ಲಿರುವ ಲಾಕರ್ ಗಳ ಬಾಗಿಲುಗಳನ್ನು ಯಾವುದೋ ಆಯುಧದಿಂದ ಬಲವಂತವಾಗಿ ತೆಗೆದು, ಲಾಕರ್ ನಲ್ಲಿಟ್ಟಿದ್ದ  1) ಒಂದು ಜೊತೆ  ಚಿನ್ನದ ಓಲೆ ಜುಮುಕಿ ತೂಕ 8  ಗ್ರಾಂ. 2)  ಒಂದು ಜೊತೆ ಬಿಳೀ ಕಲ್ಲಿನ ಓಲೆ ತೂಕ ಸುಮಾರು 4 ಗ್ರಾಂ  3) ಒಂದು ಜೊತೆ ಚಿನ್ನದ ಚಿಕ್ಕ ಕಿವಿ ಗುಂಡುಗಳು ತೂಕ ಸುಮಾರು 2 ಗ್ರಾಂ. 4) 12 ಚಿನ್ನದ ಚೈನ್ ಪೀಸ್ ಗಳು ತೂಕ ಸುಮಾರು 6 ಗ್ರಾಂ.  5)  ಒಂದು ಜೊತೆ ಚಿನ್ನದ ದೊಡ್ಡ ಕಿವಿ ಗುಂಡುಗಳು ತೂಕ ಸುಮಾರು 3 ಗ್ರಾಂ. 6) ಒಂದು ಜೊತೆ ಚಿನ್ನದ  ಓಲೆ  ಹ್ಯಾಂಗಿಂಗ್ಸ್  ತೂಕ 6 ಗ್ರಾಂ.  7) ಚಿಕ್ಕ ಉಂಗುರ 2 ಗ್ರಾಂ.ಮತ್ತು  8)  ಹುಂಡಿಯಲ್ಲಿನ ಸುಮಾರು 20 ಸಾವಿರ ರೂ ನಗದು ಹಣವನ್ನು  ಯಾರೋ ಕಳ್ಳರು ಕಳುವು ಮಾಡಿರುತ್ತಾರೆ. ಒಟ್ಟು 90,000/-  ಬೆಲೆ ಬಾಳುವುದಾಗಿರುತ್ತೆ. ಕಳ್ಳತನ ಮಾಡಿಕೊಂಡು ಹೋಗಿರುವ  ಕಳ್ಳರನ್ನು ಪತ್ತೆ ಮಾಡಿ,  ಕಳವಾಗಿರುವ ಒಡವೆಗಳು ಹಾಗು ನಗದನ್ನು ಪತ್ತೆ ಮಾಡಿ ಹಾಗು ಕಳವು ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 424/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ;08/10/2019 ರಂದು ಮಧ್ಯಾಹ್ನ 2-30 ಗಂಟೆಯಲ್ಲಿ  ಗೌರೀಬಿದನೂರು ತಾಲ್ಲೂಕು, ಹೊಸೂರು ಗ್ರಾಮದ ಆನಂದ ಬಿನ್ ಅಂಜಿನಪ್ಪ, 38 ವರ್ಷ ವಯಸ್ಸು,  ಉಪ್ಪಾರ ಜನಾಂಗ,  ಎಂಬುವವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:01/10/2019 ರಮದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಪಿರ್ಯಾದಿ ಮನೆಯ ಹತ್ತಿರ ಬಂದಾಗ,  ತನ್ನ ದೊಡ್ಡಪ್ಪನ ಮಗನಾದ  ನಾಗರಾಜ ಎಂಬುವವನು ನಮ್ಮ ಮನೆಯಿಂದ ಬೂಸ ಮೂಟೆಗಳನ್ನು ಕೇಳದೇ ತೆಗೆದುಕೊಂಡು ಹೋಗುತ್ತಿದ್ದದಾಗ, ಅದನ್ನು ನೋಡಿ,  ಏಕಾಏಕಿ  ನನ್ನ ಮೇಲೆ  ಅವರು , ಮಕ್ಕಳಾದ ಕುಮಾರ್,  ಅನಿಲ್  ಬಂದು ದೊಣ್ಣೆಯಿಂದ  ಹೊಡೆದು, ನನ್ನ ಎಡಕೈ ಮೂಳೆ ಮುರಿಯುವ ಹಾಗೆ ಹಲ್ಲೆ ಮಾಡಿ,   ಅವಾಚ್ಯಶಬ್ದಗಳಿಂದ ಬೈಯ್ದು, ಪ್ರಾಣ ಬೆದರಿಕೆ ಹಾಕಿರುತ್ತಾರೆಂದು  ದೂರಿನ ಸಾರಾಂಶವಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 425/2019 ಕಲಂ. 143-147-323-324-341-504-506 ರೆ/ವಿ 149 ಐ.ಪಿ.ಸಿ:-

     ದಿನಾಂಕ 09-10-2019 ರಂದು 01-30 ಗಂಟೆಗೆ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಿಂದ  ಬಂದ ಮೇಮೋ ಪಡೆದು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು  ಶ್ರೀಧರ ಬಿನ್ ನಂಜುಂಡಪ್ಪ , 26 ವರ್ಷ, ಒಕ್ಕಲಿಗರು, ಬಾಳೆ ಎಲೆ ವ್ಯಾಪಾರ, ವಾಸ ಹಳೇ ಉಪ್ಪಾರಹಳ್ಳಿ , ಹೊಸೂರು ಹೋಬಳಿ, ಗೌರಿಬಿದನೂರು ತಾಲ್ಲೂಕುರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂಧರೆ  ತನಗೆ ಮತ್ತು  ವಸಂತ ಬಿನ್ ಲಕ್ಷ್ಮೀಪತಿ ಎಂಬುವರ ನಡುವೆ ಹಳೇ ದ್ವೇಷವಿದ್ದು, ದಿನಾಂಕ 08-09-2019 ರಂದು ಸಂಜೆ 06-00  ಗಂಟೆಯಲ್ಲಿ  ಕಾಚಮಾಚೇನಹಳ್ಳಿ ಗ್ರಾಮದ ಬಳಿ ಇರುವ  ಜಮೀನಿಗೆ ಹೋಗಿ  ರಾತ್ರಿ 08-30 ಗಂಟೆಯಲ್ಲಿ ವಾಪಸ್ ಮನೆಗೆ ಹೋಗಲು ಹಳೇ ಉಪ್ಪಾರಹಳ್ಳಿಯಲ್ಲಿ ಕಾಚಮಾಚೇನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಜಗುಲಿ ಕಟ್ಟೆಯ ಬಳಿ ಹೋಗುತ್ತಿದ್ದಾಗ  ವಸಂತ, ಹರೀಶ, ವೆಂಕಟರೆಡ್ಡಿ @ ಜಂಗ್ಲೀ ರೆಡ್ಡಿ, ಗಿರೀಶ, ರಾಮಿರೆಡ್ಡಿ, ಶಿವಕುಮಾರ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ  ಮಚ್ಚು, ದೊಣ್ಣೆಗಳು ಮತ್ತು ರಾಡ್ ಗಳನ್ನು ಹಿಡಿದುಕೊಂಡು  ರಸ್ತೆಯಲ್ಲಿ ಅಡ್ಡಗಟ್ಟಿ ಏನೋ  ಬೋಳಿ ಮಗನೇ, ನೀನು ರಮೇಶನ ಜೊತೆಯಲ್ಲಿ ಓಡಾಡುತ್ತೀಯೇನೋ, ಏನೋ ಈ ರೋಡ್ ನಲ್ಲಿ ಓಡಾಡುತ್ತಿದ್ದಿಯಾ, ಈಗ ನೀನು ಒಂಟಿಯಾಗಿ ಸಿಕ್ಕಿದ್ದೀಯಾ, ಬಾರೋ ನನ್ನಮಗನೇ ಎಂದು  ಅವಾಚ್ಯ ಶಬ್ದಗಳಿಂದ  ಬೈದು, ವಸಂತ ಮಚ್ಚಿನಿಂದ ಬಲಗೈಗೆ ಹೊಡೆದು ರಕ್ತಗಾಯವನ್ನು, ಹರೀಶ ದೊಣ್ಣೆಯಿಂದ ಬಲಗಾಲಿಗೆ , ವೆಂಕಟರೆಡ್ಡಿ ದೊಣ್ಣೆಯಿಂದ ಎಡಗಾಲಿಗೆ ಹೊಡೆದು ಕೈಯಿಂದ ಹೊಟ್ಟೆಗೆ ಗುದ್ದಿದ್ದು, , ರಾಮಿರೆಡ್ಡಿ  ರಾಡಿನಿಂದ ಮೈಮೇಲೆ ಹೊಡೆದು ನೋವುಂಟು ಮಾಡಿದ್ದು, ಶಿವಕುಮಾರ ಕೈಗಳಿಂದ  ಹೊಡೆದು ನೋವುಂಟು ಮಾಡಿ  ಇನ್ನೊಂದು ಸಾರಿ ರಮೇಶನ ಜೊತೆಯಲ್ಲಿ ಓಡಾಡಿದರೆ ನಿನ್ನನ್ನು ಸಾಯಿಸದೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿರುವುದಾಗಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 02-00 ಗಂಟೆಗೆ ವಾಪಸ್ ಬಂದು ಪ್ರಕರಣವನ್ನು ದಾಖಲಿಸಿರುವುದು.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 326/2019 ಕಲಂ. 143-147-323-324-504-506 ರೆ/ವಿ 149 ಐ.ಪಿ.ಸಿ:-

     ದಿನಾಂಕ 08/10/2019 ರಂದು ಸಂಜೆ 18-30 ಘಂಟೆಯಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಮಂಜುನಾಥ ರವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ: 08/10/2019 ರಂದು ದಸರಾ ಹಬ್ಬದ ಪ್ರಯುಕ್ತ ತಾನು, ತನ್ನ ಬಾಮೈದ ಲಕ್ಷ್ಮಿನರಿಸಂಹ, ತನ್ನ ಮಾವ ಮುದ್ದಪ್ಪ ರವರು ತಮ್ಮ ಎತ್ತಿನ ಬಂಡಿಯನ್ನು ಕಟ್ಟಿಕೊಂಡು ಬೀಚಗಾನಹಳ್ಳಿ ಗ್ರಾಮದಲ್ಲಿ ಮೇರವಣಿಗೆ ಮಾಡಲು ಹೋಗುತ್ತಿರುವಾಗ ಬಿಚಗಾನಹಳ್ಳಿ ಗ್ರಾಮ ಸರ್ಕಾರಿ ಆಸ್ಪತ್ರೆಯ ಬಳಿ ಎತ್ತಿನ ಬಂಡಿಯನ್ನು ಓಡಿಸಿಕೊಂಡು ಬರುತ್ತೀರುವಾಗ ಬೀಚಗಾನಹಳ್ಳಿ ಗ್ರಾಮದ 1)ಶ್ರೀಕಾಂತ ಬಿನ್ ಬಲರಾಮಪ್ಪ, 25 ವರ್ಷ, 2) ಸುರೇಶ ಬಿನ್ ಬಲರಾಮಪ್ಪ, 22 ವರ್ಷ, 3) ಶ್ರೀಧರ ಬಿನ್ ಗೋವಾ ನಾರಾಯಣಸ್ವಾಮಿ, 30 ವರ್ಷ, ರವರಗಳು ತಮ್ಮ ದ್ವಿಚಕ್ರ ವಾಹನವನ್ನು ಶಬ್ದ ಮಾಡಿಕೊಂಡು ಬರುತ್ತಿದ್ದರು , ತಾನು ನಿಧಾನವಾಗಿ ಹೋಗಿ ಎತ್ತುಗಳು ಬೆದರುತ್ತವೆ ಎಂದು ಹೇಳಿದಕ್ಕೇ ಮೇಲ್ಕಂಡವರು  ನಿನ್ನಮ್ಮನು ನಾವು ಹಾಗೆಯೇ  ಓಡಿಸುವುದು ಎಂದು ಹೇಳಿ ಹೋರಟು ಹೋದರು. ನಂತರ ಸಂಜೆ 5-00 ಘಂಟೆಯ ಸಮಯದಲ್ಲಿ ತಾನು ಬಿಚಗಾನಹಳ್ಳಿ ಗ್ರಾಮದ ಸೂರಿ ರವರ ಚಿಲ್ಲರೆ ಅಂಗಡಿ ಬಳಿ ಬರುತ್ತೀರುವಾಗ ಮೇಲ್ಕಂಡ 1) ಶ್ರೀಕಾಂತ 2) ಸುರೇಶ 3) ಶ್ರೀಧರ, 4) ಅನಿಲ್ ಬಿನ್ ಬೂಸಾ ನಾರಾಯಣಸ್ವಾಮಿ, 30 ವರ್ಷ, 5) ಸುನಿಲ್ ಬಿನ್ ಬೂಸಾ ನಾರಾಯನ ಸ್ವಾಮಿ, 6) ವಿನಯ್ ಬಿನ್ ಗೋವ ನಾರಾಯಣಸ್ವಾಮಿ ಮತ್ತು ಶ್ರೀನಾಥ ಬಿನ್ ಗೋಪಾಲಪ್ಪ, ರವರಗಳು ಗುಂಪು ಕಟ್ಟಿಕೊಂಡು ಬಂದು ಏನು ನನ್ನ ಮಗನೇ ದಸರಾ ಹಬ್ಬಕ್ಕೆ ಮೆರೆವಣಿಗೆ ಮಾಡಲು ನಮ್ಮ ಗ್ರಾಮಕ್ಕೆ ಬಂದು ನಮ್ಮನೇ ನಿಧಾನವಾಗಿ ಹೋಗು ಎಂದು ಹೇಳುತ್ತೀಯಾ ಸುಳೇ ಮಗನೇ, ಲೋಪರ್ ನನ್ನ ಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಎಲ್ಲಾರು  ತನ್ನನ್ನು ಹಿಡಿಕೊಂಡು ಕೆಳಗೆ ಬೀಳಿಸಿ ಕೈಗಳಿಂದ ಹೋಡೆದು ಕಾಲುಗಳಿಂದ ಒದ್ದರು, ನಂತರ ತಮ್ಮ ಮಾವ ಗಲಾಟೆಯನ್ನು ಬಿಡಿಸಿ ತನ್ನನ್ನು ಕರೆದುಕೊಂಡು ಹೋಗುತ್ತೀರುವಾಗ ಶ್ರೀಕಾಂತ ರವರು ಹಿಂದೆಯಿಂದ ಬಂದು ತನ್ನ ತಲೆಗೆ ಕಲ್ಲುನಿಂದ ಹೊಡೆದು ರಕ್ತ ಗಾಯವನ್ನು ಮಾಡಿ, ನಿನ್ನನ್ನು ಸಾಯಿಸದೇ ಬಿಡಲ್ಲ ಎಂದು ಹೇಳಿದನು. ನಂತರ ತಮ್ಮ ಮಾವ ಮುದ್ದಪ್ಪ ರವರು ಯಾವುದೋ ಆಟೋದಲ್ಲಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಪಡಿಸಿದರು. ಮೇಲ್ಕಂಡ ತನ್ನ ಮೇಲೆ ಗಲಾಟೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣವನ್ನು ದಾಖಲು ಮಾಡಿರುತ್ತೇ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 273/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 08/10/2019 ರಂದು ಸಂಜೆ 5-30 ಗಂಟೆಗೆ ಪಿರ್ಯಾದಿ ಹೆಚ್.ಸಿ 219, ಶ್ರೀನಿವಾಸಮೂರ್ತಿ ರವರು ಮಾಲು, ಮಹಜರ್, ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ 08/10/2019 ರಂದು ಮದ್ಯಾಹ್ನ 3-15 ಗಂಟೆ ಸಮಯದಲ್ಲಿ ತಾನು ತೊಂಡೆಬಾವಿ ಪೊಲೀಸ್ ಹೊರಠಾಣೆಯಲ್ಲಿರುವಾಗ ಪುಲಿಗಾನಹಳ್ಳಿ ಗ್ರಾಮದ ನರಸಿಂಹರಾಜು ಬಿನ್ ವೆಂಕಟೇಶಪ್ಪ ಎಂಬುವರು ಅವರ ಮನೆಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ದ್ವಿ ಚಕ್ರ ವಾಹನಗಳಲ್ಲಿ ಪಂಚರನ್ನು ಕರೆದುಕೊಂಡು ಮದ್ಯಾಹ್ನ 3-45 ಗಂಟೆಗೆ ಪುಲಿಗಾನಹಳ್ಳಿ ಗ್ರಾಮದ ನರಸಿಂಹರಾಜು ರವರ ಮನೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತನ್ನನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹರಾಜು ಬಿನ್ ವೆಂಕಟೇಶಪ್ಪ, 27 ವರ್ಷ, ಆದಿಕರ್ನಾಟಕ ಜನಾಂಗ, ಪುಲಿಗಾನಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಈತನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HAYWARDS CHEERS WISKY ಯ 12 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದರ ಮೇರೆಗೆ ಅಲ್ಲಿಯೆ ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HAYWARDS CHEERS WISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಸಂಜೆ 4-00 ಗಂಟೆಯಿಂದ 5-00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 363 /- ರೂಪಾಯಿಗಳು ಬೆಲೆಬಾಳದ್ದಾಗಿದ್ದು. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ನರಸಿಂಹರಾಜು ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಈತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 342/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 08-10-2019 ರಂದು ಸಂಜೆ 4-00 ಗಂಟೆಯಲ್ಲಿ ಶ್ರೀ. ಮುನಿಕೃಷ್ಣ ಡಿ.ಹೆಚ್.ಸಿ. ಪಿ.ಐ., ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಮ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನ ದಿನಾಂಕ: 08-10-2019 ರಂದು ತಾನು, ಹೆಚ್.ಸಿ-205  ರಮೇಶ್, ಪಿ.ಸಿ-365 ಮಲ್ಲಿಕಾರ್ಜುನ ಮತ್ತು ಎಪಿಸಿ-138 ಮಹಬೂಬ್ ಬಾಷಾ ರವರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅಕ್ರಮಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾಗ ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕು ಗೊರಮಡುಗು ಗ್ರಾಮದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾರೆಂತ ಬಂದ ಮಾಹಿತಿಯ ಮೇರೆಗೆ ದಾಳಿ ಮಾಡಿದ್ದು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ 1) ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, 2) ಎರಡು Bagpiper ಕಂಪನಿಯ 180 ML ನ ಖಾಲಿ ಮದ್ಯದ ಟೆಟ್ರಾ ಪ್ಯಾಕೇಟ್ ಗಳು, 3) ಒಂದು ಲೀಟರ್ ನ ಒಂದು ಖಾಲಿ ಬಾಟಲ್, 4) 180 ML ನ Babpiper Whysky 7 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡು ಮಹಿಳಾ ಆರೋಪಿಯಾದ ಶ್ರೀಮತಿ ಚಿಕ್ಕಲಕ್ಷ್ಮಮ್ಮ ಕೋಂ ಲೇಟ್ ಗುರ್ರಪ್ಪ, 55 ವರ್ಷ, ಭೋವಿ ಜನಾಂಗ, ಕೂಲಿ ಕೆಲಸ, ವಾಸ: ಗೊರಮಡುಗು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರನ್ನು ಮಹಿಳಾ ಸಿಬ್ಬಂಧಿಯಿಲ್ಲದ ಕಾರಣ ಸ್ಥಳದಲ್ಲಿ ಬಿಟ್ಟು ಮಹಜರ್ ಮತ್ತು ಮಾಲಿನೊಂದಿಗೆ ಠಾಣೆಯಲ್ಲಿ ಹಾಜರಾಗಿ ಕಾನೂನು ಕ್ರಮ  ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 343/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 08-10-2019 ರಂದು ಸಂಜೆ 6-00 ಗಂಟೆಯಲ್ಲಿ ಶ್ರೀ. ಮುನಿಕೃಷ್ಣ ಡಿ.ಹೆಚ್.   ಪೊಲೀಸ್ ಇನ್ಸಪೆಕ್ಟರ್  ಡಿ.ಸಿ.ಬಿ/ಸಿಇಎನ್  ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ಜಿಲ್ಲೆ ರವರು ಆರೋಪಿ, ಮದ್ಯದ ಮಾಲು ಮತ್ತು ಮಹಜರ್ ನೊಂದಿಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 08-10-2019 ರಂದು ಸಂಜೆ 4-00 ಗಂಟೆಯಲ್ಲಿ  ತಾನು , ಹೆಚ್.ಸಿ-205  ರಮೇಶ್, ಪಿ.ಸಿ-365  ಮಲ್ಲಿಕಾರ್ಜುನ ಮತ್ತು ಎಪಿಸಿ-138 ಮಹಬೂಬ್ ಪಾಷ  ರವರೊಂದಿಗೆ  ಶಿಡ್ಲಘಟ್ಟ ತಾಲ್ಲುಕು  ಚಿಂತಡಿಪಿ ಗ್ರಾಮದ  ಕಾನೂನು ಬಾಹಿರ ಚಟುವಟಿಕೆಗಳ ಸಂಗ್ರಹಣೆಯಲ್ಲಿದ್ದಾಗ  ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರಗೆ ಚಿಂತಡಿಪಿ ಗ್ರಾಮದ ಮಾರೇಗೌಡ ಬಿನ್ ಲೇಟ್ ಮುನಿಸ್ವಾಮಿ  ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು ಸದರಿ ಮೇಲ್ಕಂಡ ಸ್ಥಳದಲ್ಲಿ ಪಂಚರೊಂದಿಗೆ ದಾಳಿ ಮಾಡಿ ಸ್ಥಳದಲ್ಲಿದ್ದ 1) 180 ML ನ  Bagpaiper Deluxe Whysky ಯ 10 ಮದ್ಯದ ಟೆಟ್ರಾ ಪ್ಯಾಕೇಟ್  2] ಎರಡು ನೀರಿನ ಪ್ಲಾಸ್ಟಿಕ್ ಗ್ಲಾಸ್ ಗಳು,   3] ಒಂದು ಲೀಟರ್ ನ  ಒಂದು ಖಾಲಿ ನೀರಿನ ಪ್ಲಾಸ್ಟಿಕ್ ಬಾಟಲ್ 4]   180 ML ನ  Bagpaiper Deluxe Whysky ಯ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳನ್ನು  ಮುಂದಿನ ಕ್ರಮದ ಬಗ್ಗೆ ಪಂಚಾಯ್ತಿದಾರರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ,  ಮದ್ಯವು ಒಟ್ಟು 1800 ML  ಇದ್ದು ಇದರ ಬೆಲೆ ಒಟ್ಟು 902/- ರೂಗಳಾಗಿರುತ್ತೆ ನಂತರ ಸ್ಥಳದಲ್ಲಿದ್ದ ಅಸಾಮಿಯನ್ನು ವಿಚಾರಿಸಲಾಗಿ ತನ್ನ ಹೆಸರು ಮಾರೇಗೌಡ ಬಿನ್ ಲೇಟ್ ಮುನಿಶಾಮಿಗೌಡ, 65 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ   ವ್ಯಾಪಾರ, ಚಿಂತಡಿಪಿ ಗ್ರಾಮ ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಅಸಾಮಿಯನ್ನು ವಶಕ್ಕೆ ಪಡೆದು ಆರೋಪಿ , ಪಂಚರ ಸಮಕ್ಷಮ ವಶಪಡಿಸಿಕೊಂಡ ಮದ್ಯದ  ಮಾಲನ್ನು  ಮತ್ತು ಅಸಲು ಮಹಜರ್ ಅನ್ನು    ತಮ್ಮ ವಶಕ್ಕೆ ನೀಡುತ್ತಿದ್ದು ಈ ಬಗ್ಗೆ ಕಾನೂನು ಕ್ರಮ  ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 141/2019 ಕಲಂ. 323-324-506 ರೆ/ವಿ 34 ಐ.ಪಿ.ಸಿ:-

     ದಿನಾಂಕ:09.10.2019 ರಂದು ಬೆಳಿಗ್ಗೆ 11:00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನರಸಿಂಹಮೂರ್ತಿ ರವರ ಹೇಳಿಕೆಯನ್ನು  ಪಡೆದು ಠಾಣೆಗೆ 11:30 ಗಂಟೆಗೆ  ವಾಪಸ್ಸು ಬಂದು.ಪ್ರಕರಣ ದಾಖಲು ಮಾಡಿದ ಸಾರಾಂಶವೇನೆಂದರೆ ಗಾಯಾಳು ನರಸಿಂಹಮೂರ್ತಿ ರವರು ದಿನಾಂಕ;09.10.2019 ರಂದು ಸಂಜೆ ಸುಮಾರು 7.30 ಗಂಟೆಯಲ್ಲಿ ಅಂಗಡಿ ಬಾಗಿಲು ಹಾಕಿಕೊಂಡು ಬೈಪಾಸ್ ರಸ್ತೆಯಲ್ಲಿರುವ ಮನೆಯ ಬಳಿ ಹೋಗುತ್ತಿದ್ದಾಗ ಮೇಸ್ತ್ರಿ ಮುನಿರಾಜಪ್ಪ,ಸಂಜಪ್ಪ ,ಮುನಿನಾರಾಯಣಪ್ಪ ಮತ್ತಿತರು ಗುಂಪು ಸೇರಿಕೊಂಡು ಮಾತನಾಡುತ್ತಿದ್ದರು ಆಗ ನಾನು ಮುನಿನಾರಾಯಣಪ್ಪನ ಮಗ ಮೂರ್ತಿ ರವರನ್ನು ಕುರಿತು ಏನು ಸಮಾಚಾರ ಎಂದು ಕೇಳಿದನು ಆಗ  ಮೂರ್ತಿ ನನಗೆ ಮತ್ತು ಮುನಿನಾರಾಯಣಪ್ಪ ರವರಿಗೆ ಜಮೀನಿನ ವಿಚಾರದಲ್ಲಿ ಗಲಾಟೆ ಆಯಿತು ಎಂದು ತಿಳಿಸಿದನು ಆಗ ನಾನು ಆಯಿತು ಎಂದು ಎಲ್ಲರಿಗೂ ಸಮಾದಾನಪಡಿಸಿ ಮನೆಗೆ ಕಳುಹಿಸಿದೆನು ನಂತರ ರಾತ್ರಿ ಸುಮಾರು 8.30 ಗಂಟೆಯಲ್ಲಿ ಮನೆಯಲ್ಲಿ ಕುಳಿತುಕೊಂಡಿದ್ದಾಗ ಕೌನ್ಸಿಲರ್ ಲಕ್ಷಣರವರು ನಮ್ಮ ಮನೆ ಬಳಿ ಬಂದರು ಆಗ ನಾನು ಮತ್ತು ಲಕ್ಷಣ ಮನೆಯ ಹೊರಗಡೆ ಬಂದು ಮಾತಾನಾಡುತ್ತಿದ್ದಾಗ ಸಂಚಪ್ಪ, ಶ್ರೀಕಾಂತ್ ಮತ್ತು ಮೆಸ್ತ್ರಿ ಮುಮಿರಾಜು ರವರುಗಳು ಏಕಾ ಏಕಿ ಬಂದು ತಮ್ಮ ಕೈಯಲ್ಲಿದ್ದ ರಿಪೀಸುಗಳಿಂದ ತಲೆಯ ಮೇಲೆ ಎರಡೂ ಮೊಣಕಾಲುಗಳ ಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿದರು,ನಂತರ ಸಂಚಪ್ಪ ರಿಪೀಸಿನಿಂದ ಎದೆಯ ಮೆಲೆ ಹೊಡೆದನು ಅಷ್ಟರಲ್ಲಿ ನಾನು ಕೆಳಗೆ ಬಿದ್ದು ಹೋದೆನು ಆಗ ಲಕ್ಷಣ ರವರು ಕೈಗಳಿಂದ ಎದೆಯ ಮೇಲೆ ಕತ್ತಿನ ಹಿಂಭಾಗಕ್ಕೆ ಹೊಡೆದು ನೋವುಂಟು ಮಾಡಿದನು.ಅಷ್ಟರಲ್ಲಿ ನನ್ನ ಹೆಂಡತಿ ಪುಷ್ಪಮ್ಮ ರವರು ಬಂದು ಜಗಳ ಬಿಡಸಿದರು.ಇನ್ನೊಮ್ಮೆ  ನಮ್ಮ ತಂಟೆಗೆ ಬಂದರೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋರಟು ಹೋದರು ವಿನಾ ಕಾರಣ ಮೆಲ್ಕಂ ಡ ವರು ನನ್ನ ಮೇಲೆ ಜಗಳಮಾಡಿದ್ದು ಅವರುಗಳ ಮೇಲೆ ಕಾನೂನು  ರೀತ್ಯಾಕ್ರಮಕೈಗೊಳ್ಳಲು ಕೋರಿದ್ದರ ಮೇರೆಗೆ ಪ್ರಕರಣವನ್ನು ದಾಖಲಿಸಿದೆ.