ದಿನಾಂಕ :09/09/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.219/2020 ಕಲಂ. 392  ಐ.ಪಿ.ಸಿ :-

            ದಿ: 08-09-2020 ರಂದು 14:30 ಗಂಟೆ ಸಮಯದಲ್ಲಿ ಪಿರ್ಯಾಧಿದಾರರಾದ ಶ್ರೀಮತಿ ಸುಕನ್ಯ ಕೋಂ ಸಾಯಿನಾಥರೆಡ್ಡಿ, 30 ವರ್ಷ, ರೆಡ್ಡಿ ಜನಾಂಗ, ಗೃಹಿಣಿ, ವಾಸ ಪೆದ್ದನಪಲ್ಲಿ ಗ್ರಾಮ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಅನಂತಪುರ ಜಿಲ್ಲೆ, ಹಾಲಿವಾಸ ವೆಂಕಟರಮಣಪ್ಪ ರವರ ಮನೆ, ಏಟಿಗಡ್ಡಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ –  ನನಗೆ ಈಗ್ಗೆ ಸುಮಾರು 10 ವರ್ಷಗಳ ಹಿಂದೆ ಆಂದ್ರಪ್ರದೇಶ ರಾಜ್ಯದ, ಹಿಂದೂಪುರ ತಾಲ್ಲೂಕಿನ ಪೆದ್ದನಪಲ್ಲಿ ಗ್ರಾಮದ ವಾಸಿಯಾದ ಶ್ರೀ ಹನುಮಂತರೆಡ್ಡಿ ರವರ ಮಗನಾದ ಸಾಯಿನಾಥರೆಡ್ಡಿ ರವರೊಂದಿಗೆ ಮದುವೆಯಾಗಿದ್ದು, ನನಗೆ ಒಂದು ಹೆಣ್ಣು ಮಗುವಿರುತ್ತೆ. ಮದುವೆಯಾದ ಕೆಲವು ದಿನಗಳ ನಂತರ ನಾನು ಮತ್ತು ನನ್ನ ಗಂಡ ಸಂಸಾರ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ದೆವು. ಕೊವೀಡ್-19 ಖಾಯಿಲೆ ಹಿನ್ನೆಲೆಯಿಂದ ಈಗ್ಗೆ ಸುಮಾರು 4 ತಿಂಗಳ ಹಿಂದೆ ನಾನು ಮತ್ತು ನನ್ನ ಗಂಡ ಸಂಸಾರ ಸಮೇತ ಬಾಗೇಪಲ್ಲಿ ತಾಲ್ಲೂಕಿನ ಏಟಿಗಡ್ಡಪಲ್ಲಿ ಗ್ರಾಮದ ವಾಸಿಯಾದ ವೆಂಕಟರವಣಪ್ಪ ರವರ ಮನೆಯನ್ನು ಲೀಜ್ ಗೆ ತೆಗೆದುಕೊಂಡು ವಾಸವಾಗಿರುತ್ತೇವೆ. ನನ್ನ ಗಂಡ ಅವರ ಸ್ವಂತ ಗ್ರಾಮದ ಕಡೆ ಜಮೀನು ವ್ಯಾಪಾರ ಮಾಡಿಕೊಂಡಿದ್ದು, ನಾಳೆ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದ್ದು, ನನ್ನ ಗಂಡ ನನಗೆ ಬಾಗೇಪಲ್ಲಿಯ ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ ಹೋಗಿ 1,30,000/- ರೂಗಳನ್ನು ಡ್ರಾ ಮಾಡಿಕೊಂಡು ಬರುವಂತೆ ತಿಳಿಸಿದರು. ಅದರಂತೆ ನಾನು ನಮ್ಮ ಮನೆಯನ್ನು ಬೀಗ ಹಾಕಿಕೊಂಡು ಮನೆಯ ಬೀಗದ ಕೀ ಹಾಗೂ ನನ್ನ ಸ್ಯಾಮಸಂಗ್ ಮೊಬೈಲ್ ಮತ್ತು ಸಿಮ್ ನಂಬರ್-9686982730 ಅನ್ನು ನನ್ನ ಪರ್ಸಿನಲ್ಲಿಟ್ಟುಕೊಂಡು ದಿನಾಂಕ: 08-09-2020 ರಂದು ಬೆಳಿಗ್ಗೆ ಸುಮಾರು 11-50 ಗಂಟೆ ಸಮಯದಲ್ಲಿ ಮನೆಯನ್ನು ಬಿಟ್ಟು ನಡೆದುಕೊಂಡು ಇಂಡಿಯನ್ ಓವರ್ ಸೀಸ್ ಬ್ಯಾಂಕಿಗೆ ಹೋಗಿ ಬ್ಯಾಂಕಿನಲ್ಲಿ 1,30,000/- ರೂಗಳನ್ನು ಡ್ರಾ ಮಾಡಿಕೊಂಡು ಸದರಿ ಹಣವನ್ನು ನನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಮನೆಗೆ ಹೋಗಲು ಇದೇ ದಿನ ಮದ್ಯಾಹ್ನ ಸುಮಾರು 1-28 ಗಂಟೆ ಸಮಯದಲ್ಲಿ ಬ್ಯಾಂಕನ್ನು ಬಿಟ್ಟು ಡಿವಿಜಿ ರಸ್ತೆಯಲ್ಲಿ ನಡೆದುಕೊಂಡು ಎಸ್.ಆರ್ ಪೆಟ್ರೋಲ್ ಬಂಕಿನ ಪಕ್ಕದಲ್ಲಿರುವ ಭವಾನಿ ಸೆರಾಮಿಕ್ಸ್ ಅಂಗಡಿಯ ಪಕ್ಕದಲ್ಲಿರುವ ಮಣ್ಣಿನ ರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಸುಮಾರು 25-30 ವರ್ಷ ವಯಸುಳ್ಳ ಯಾರೋ ಇಬ್ಬರು ಅಪರಿಚಿತರು ಮುಖಕ್ಕೆ ಮಾಸ್ಕನ್ನು ಹಾಕಿಕೊಂಡು, ಯಾವುದೋ ನೊಂದಣಿ ಸಂಖ್ಯೆ ಇಲ್ಲದ ಬಜಾಜ್ ಡಿಸ್ಕವರಿ ದ್ವಿಚಕ್ರ ವಾಹನದಲ್ಲಿ ಎದುರುಗಡೆಯಿಂದ ಬಂದು ನನ್ನ ಬಳಿ ಇದ್ದ ಹಣದ ಬ್ಯಾಗನ್ನು ಕಿತ್ತುಕೊಂಡರು. ನಾನು ಕೂಗಿ ಕೊಳ್ಳುವಷ್ಟರಲ್ಲಿ ದ್ವಿಚಕ್ರ ವಾಹನದಲ್ಲಿದ್ದವರು ಅಲ್ಲಿಂದ ಜೋರಾಗಿ ದ್ವಿಚಕ್ರ ವಾಹನದಲ್ಲಿ ಹೊರಟು ಹೋದರು. ನಾನು ಕೂಡಲೇ ಹಿಂದೆ ಬರುತ್ತಿದ್ದ ಯಾವುದೋ ಒಂದು ದ್ವಿಚಕ್ರ ವಾಹನವನ್ನು ಹತ್ತಿಕೊಂಡು ಅವರನ್ನು ಹಿಂಬಾಲಿಸಿದೆವು, ಅವರು ಅಷ್ಟರಲ್ಲಿ ದ್ವಿಚಕ್ರ ವಾಹನದಲ್ಲಿ ಬಾಗೇಪಲ್ಲಿ ಟೌನಿನ ಕಡೆಗೆ ಜೋರಾಗಿ ಹೊರಟು ಹೋದರು. ಕೂಡಲೇ ನಾನು ಈ ವಿಚಾರವನ್ನು ನಮ್ಮ ಮನೆಯವರಿಗೆ ತಿಳಿಸಿರುತ್ತೇನೆ. ಯಾರೋ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ನನ್ನ ಬ್ಯಾಗ್ ನಲ್ಲಿದ್ದ ಒಂದು ಸ್ಯಾಮ್ ಸಂಗ್ ಮೊಬೈಲ್ ಅನ್ನು ಮತ್ತು 1,30,000/- ರೂ ನಗದು ಹಣವನ್ನು ಕಿತ್ತುಕೊಂಡು ಹೋಗಿರುವ ಆಸಾಮಿಗಳನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮಕೈಗೊಳ್ಳಲು ಕೋರುತ್ತೇನೆ, ಎಂದು ದೂರು.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.86/2020 ಕಲಂ. 20(ಬಿ) NARCOTIC DRUGS AND PSYCHOTROPIC SUBSTANCES ACT, 1985 :-

          ದಿನಾಂಕ: 09/9/2020 ರಂದು ಬೆಳಿಗ್ಗೆ 10-15 ಗಂಟೆಗೆ ಪಿಎಸ್ ಐ ಬಟ್ಲಹಳ್ಳಿ  ಸಾಹೇಬರು  ಹೆಚ್ ಸಿ 36 ರವರ ಮುಖಾಂತರ ಕಳುಹಿಸಿಕೊಟ್ಟು ದೂರಿನ ಸಾರಾಂಶವೇನೆಂದರೆ,  ದಿನಾಂಕ 09/09/2020 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ರವರಾದ ಶ್ರೀ.ಟಿ.ಎನ್.ಪಾಪಣ್ಣ ರವರಿಗೆ ಈ ದಿನ ದಿನಾಂಕ 09/09/2020 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಕೊತ್ತಪಲ್ಲಿ ಯಿಂದ ನಿಮ್ಮಕಾಯಿಲಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ನೀರಿನ ತೊಟ್ಟಿಯ ಬಳಿ ಯಾರೋ ಒಬ್ಬ ಆಸಾಮಿಯು ಅಕ್ರಮವಾಗಿ ಗ್ರಾಹಕರಿಗೆ ಗಾಂಜಾವನ್ನು ಮಾರಾಟಮಾಡುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದ್ದು ಸದರಿ ಮಾಹಿತಿಯನ್ನು ಪಿ.ಎಸ್.ಐ ರವರು ಠಾಣೆಯ ದಿನಚರಿಯಲ್ಲಿ ನಮೂದುಮಾಡಿ ನಂತರ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಎ.ಎಸ್.ಐ ವೆಂಕಟರವಣಪ್ಪ, ಹೆಚ್.ಸಿ 139 ಶ್ರೀ.ಶ್ರೀನಾಥ.ಎಂ.ಪಿ, ಹೆಚ್.ಸಿ 36 ಶ್ರೀ.ವಿಜಯ್ಕುಮಾರ್ ಬಿ ರವರೊಂದಿಗೆ ಸಕರ್ಾರಿ ಜೀಪ್ ಸಂಖ್ಯೆ ಕೆಎ 40 ಜಿ 62 ರಲ್ಲಿ ಬೆಳಿಗ್ಗೆ 9-10 ಗಂಟೆಗೆ ಠಾಣೆಯನ್ನು ಬಿಟ್ಟು ಕೊತ್ತಪಲ್ಲಿಯಿಂದ ನಿಮ್ಮಕಾಯಲಹಳ್ಳಿಗೆ ಹೋಗುವ ರಸ್ತೆಯ ಮಾರ್ಗದಲ್ಲಿ ಇರುವ ನೀರಿನ ತೊಟ್ಟಿಯ ಬಳಿಗೆ ಬೆಳಿಗ್ಗೆ 9-30 ಗಂಟೆಗೆ ಹೋಗುವಷ್ಟರಲ್ಲಿ ಅಲ್ಲಿ ಇದ್ದ ಯಾರೋ ಒಬ್ಬ ಆಸಾಮಿಯು ಪೊಲೀಸ್ ಜೀಪ್ನ್ನು ನೋಡಿ ಆತನ ಕೈಯಲ್ಲಿದ್ದ ಯಾವುದೋ ಒಂದು ಸಣ್ಣ ಬ್ಯಾಗ್ ನೊಂದಿಗೆ ಓಡಿ ಹೋಗಲು ಪ್ರಯತ್ನಿಸಿದ್ದು ಆಗ ಪಿ.ಎಸ್.ಐ ರವರ ಜೊತೆಯಲ್ಲಿದ್ದ ಸಿಬ್ಬಂದಿಯವರ ಸಹಾಯದಿಂದ ಸದರಿ ವ್ಯಕ್ತಿಯನ್ನು ಹಿಡಿದುಕೊಂಡು ಸದರಿ ವ್ಯಕ್ತಿಯ ಹೆಸರು ವಿಳಾಸವನ್ನು ವಿಚಾರಿಸಲಾಗಿ ತನ್ನ ಹೆಸರು ನಾರಾಯಣಸ್ವಾಮಿ ಬಿನ್ ಲೇಟ್ ವೆಂಕಟರೆಡ್ಡಿ, 50ವರ್ಷ, ಒಕ್ಕಲಿಗರು, ಮೈಕ್ ಸೆಟ್ ಬಾಡಿಗೆ ವ್ಯಾಪಾರ, ವಾಸ ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯನ್ನು ಕುರಿತು ಪೋಲೀಸ್ ಜೀಪ್ನ್ನು ನೋಡಿ ಓಡಿ ಹೋಗಿದ್ದು ಯಾಕೆ ಎಂದು ಪ್ರಶ್ನಿಸಲಾಗಿ ಸದರಿ ಆಸಾಮಿಯು ನಾನು ಗಾಂಜಾವನ್ನು ಗ್ರಾಹಕರಿಗೆ ಮಾರಾಟಮಾಡಲು ಬಂದಿದ್ದರಿಂದ ಓಡಿ ಹೋದೆನೆಂತ ತಿಳಿಸಿದ್ದು. ನಂತರ ಗಾಂಜಾ ಬಗ್ಗೆ ಮಾಹಿತಿ ಕೇಳಲಾಗಿ ತನಗೆ ಬಾಗೇಪಲ್ಲಿ ತಾಲ್ಲೂಕು ಮುದ್ದಲಹಳ್ಳಿ ಗ್ರಾಮದ ರಾಜು ಎಂಬುವರು ಪರಿಚಯವಿದ್ದು ಆಗಾಗ ನಮ್ಮ ಗ್ರಾಮಕ್ಕೆ ಬಂದು ಗಾಂಜಾವನ್ನು ಮಾರಾಟಮಾಡಿ ಹೋಗುತ್ತಿದ್ದು ಅದನ್ನು ನಾನು ಗ್ರಾಹಕರಿಗೆ ಮಾರಾಟಮಾಡುತ್ತಿದ್ದೆ ಈ ದಿನ ಗಾಂಜಾವನ್ನು ಗ್ರಾಹಕರಿಗೆ ಮಾರಾಟಮಾಡಲು ಇಲ್ಲಿಗೆ ಬಂದಿದ್ದಾಗ ಪೊಲೀಸ್ ಜೀಪು ಬಂದಿದ್ದನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿರುವುದಾಗಿ ಹಾಗೂ ತನ್ನ ಬಳಿ ಇರುವ ಬ್ಯಾಗ್ನಲ್ಲಿ ಈಗ ಸುಮಾರು 150-200 ಗ್ರಾಂ ತೂಕದ ಗಾಂಜಾ ಇರುವುದಾಗಿ ತಿಳಿಸಿದ್ದು ಸದರಿ ಆರೋಪಿಯನ್ನು ಮತ್ತು ಆತನ ಬಳಿ ಇರುವ ಮಾಲಿನೊಂದಿಗೆ ಪಿ.ಎಸ್.ಐ ರವರು ತನ್ನ ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ವಶಕ್ಕೆ ಪಡೆದುಕೊಂಡಿದ್ದು ಈ ಬಗ್ಗೆ ಮುಂದಿನ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಕೋರಿ ಈ ದೂರನ್ನು ಠಾಣೆಯ ಹೆಚ್.ಸಿ 36 ರವರ ಜೊತೆಯಲ್ಲಿ ಕಳುಹಿಸಿದ್ದು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕಾಗಿ ಸೂಚಿಸಿ ಕಳುಹಿಸಿದ್ದ ದೂರಿನ ಸಾರಾಂಶವಾಗಿರುತ್ತದೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.53/2020 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ 08/09/2020 ರಂದು ಮಧ್ಯಾಹ್ನ 3-15 ಗಂಟೆಗೆ ಶ್ರೀ ಹೊನ್ನೆಗೌಡ.ಎಂ.ಪಿ ಪಿ ಎಸ್ ಐ ಸಾಹೆಬರು ನೀಡಿದ ವರದಿಯ ದೂರಿನ ಸಾರಾಂಶವೇನೆಂದರೆ ತಾನು ಈ ದಿನ ಠಾಣೆಯಲ್ಲಿದ್ದಾಗ ಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ನಗರದ ವೇಣುಗೋಪಾಲಸ್ವಾಮಿ ದೇವಾಸ್ಥಾದ ರಸ್ತೆಯಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯದ ಪ್ಯಾಕೇಟ್ ಗಳನ್ನು ಮಾರಾಟ ಮಾಡುವ ಸಲುವಾಗಿ ಬೈಕ್ ನಲ್ಲಿ ಸಾಗಾಣಿಕೆ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದರ ಮೇರೆಗೆ  , ಪಿ ಎಸ್ ಐ ಸಾಹೇಬರು ನೀಡಿದ ವರದಿಯ ದೂರನ್ನು ಪಡೆದು ಕಲಂ 32.34 ಕೆ.ಇ ರಿತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು ಸೂಚಿಸಿದ್ದರ ಮೇರೆಗೆ ಈ ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.327/2020 ಕಲಂ. 20(ಬಿ) NARCOTIC DRUGS AND PSYCHOTROPIC SUBSTANCES ACT, 1985 :-

          ದಿನಾಂಕ: 08/09/2020 ರಂದು ಸಂಜೆ 5.30 ಗಂಟೆಗೆ ಚಿಂತಾಮಣಿ ಗ್ರಾಮಾಂತರ ವೃತ್ತದ ಸಿ.ಪಿ.ಐ ಶ್ರೀ ಕೆ.ಎಂ.ಶ್ರೀನಿವಾಸಪ್ಪ ರವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಸಿ.ಪಿ.ಸಿ-430 ನರಸಿಂಹಪ್ಪ ರವರೊಂದಿಗೆ ಕಳುಹಿಸಿಕೊಟ್ಟ ವರದಿಯ ಸಾರಾಂಶವೇನೆಂದರೆ, ಈ ದಿನ ದಿನಾಂಕ: 08/09/2020 ರಂದು ಸಂಜೆ 4.00 ಗಂಟೆ ಸಮಯದಲ್ಲಿ ತಾನು, ಚಿಂತಾಮಣಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ ಶ್ರೀ ನರೇಶ್ ನಾಯ್ಕ್, ಸಿಬ್ಬಂದಿಯಾದ ಸಿ.ಹೆಚ್.ಸಿ-41 ಜಗದೀಶ್, ಸಿ.ಪಿ.ಸಿ-544 ವೆಂಕಟರವಣ, ಸಿ.ಪಿ.ಸಿ-430 ನರಸಿಂಹಪ್ಪ ರವರೊಂದಿಗೆ ಸಂಜೆ ಗಸ್ತು ಕರ್ತವ್ಯದಲ್ಲಿದ್ದಾಗ ಚಿಂತಾಮಣಿ ತಾಲ್ಲೂಕು, ಮುತ್ತಕದಹಳ್ಳಿ ಗ್ರಾಮದ ಶ್ರೀಧರಾಚಾರ್ ಬಿನ್ ಶ್ರೀನಿವಾಸಚಾರ್, 56 ವರ್ಷ, ವೈಷ್ಣವ ಜನಾಂಗ, ಅರ್ಚಕರ ಕೆಲಸ ರವರ ಮನೆಯಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ತಿಳಿದು ಬಂದಿದ್ದು, ಸದರಿ ಆಸಾಮಿಯು ಗಾಂಜಾವನ್ನು ಎಲ್ಲಿಯಾದರೂ ಮಾರಾಟ ಮಾಡುವ ಸಂಶಯ ಇದ್ದು, ತಕ್ಷಣ ತಾನು ಸಿಬ್ಬಂದಿಯೊಂದಿಗೆ ಮುತ್ತಕದಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ ಶ್ರೀಧರಾಚಾರ್ ರವರ ಮನೆಯಲ್ಲಿದ್ದ ಶ್ರೀಧರಾಚಾರ್ ರವರನ್ನು ಸಂಜೆ 4.15 ಗಂಟೆಯಲ್ಲಿ ವಶಕ್ಕೆ ಪಡೆದು ವಿಚಾರ ಮಾಡಲಾಗಿ ಸದರಿ ಆಸಾಮಿಯು ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡು ಸುಮಾರು 1 ಕೆ.ಜಿ ಗೂ ಮೇಲ್ಪಟ್ಟು ಇರಬಹುದೆಂತಲೂ, ಈ ಗಾಂಜಾವನ್ನು ತನಗೆ ಆಂದ್ರಪ್ರದೇಶದ ರಾಜಾ @ ಶಂಕರ ಮತ್ತು ಆವುಲರೆಡ್ಡಿ ಎಂಬುವವರು ತಂದು ಕೊಡುತ್ತಿರುವುದಾಗಿ ತಿಳಿಸಿದ್ದು, ತಾನು ಸ್ಥಳದಲ್ಲಿಯೇ ಲ್ಯಾಪ್ ಟ್ಯಾಪ್ ಮೂಲಕ ವರದಿ ತಯಾರಿಸಿ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿ, ವರದಿಯನ್ನು ಸಿ.ಪಿ.ಸಿ-430 ರವರ ಮೂಲಕ ಠಾಣೆಗೆ ಕಳುಹಿಸಿಕೊಟ್ಟಿರುವುದಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.328/2020 ಕಲಂ. 279,337,304(A) ಐ.ಪಿ.ಸಿ:-

          ದಿನಾಂಕ: 09/09/2020 ರಂದು ಬೆಳಿಗ್ಗೆ 09.00 ಗಂಟೆಗೆ ಮಹಮದ್ ಜಾಫರ್@ಮುನ್ನಾ ಬಿನ್ ಮುಜೀಬ್ ಪಾಷಾ, 19 ವರ್ಷ, ವಿದ್ಯಾರ್ಥಿ, ಮುಸ್ಲಿಂಜನಾಂಗ, ಗದ್ವಾಲ್ ಪೇಟೆ, ರೈಲ್ವೇ ಸ್ಟೇಷನ್ ರಸ್ತೆ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 08/09/2020 ರಂದು ರಾತ್ರಿ 9:00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಸ್ನೇಹಿತನಾದ ಚಿಂತಾಮಣಿ ನಗರದ ಗದ್ವಾಲ್ ಪೇಟೆಯ ವಾಸಿ ಮಹಮದ್ ನವಾಜ್ ಬಿನ್ ಖಾದರ್ ವಲಿ, 20ವರ್ಷ, ವಿದ್ಯಾರ್ಥಿ, ಮುಸ್ಲಿಂಜನಾಂಗ ರವರು ಕೆಲಸದ ನಿಮಿತ್ತ ಮಹಮದ್ ನವಾಜ್ರವರ ಬಾಬತ್ತು ಕೆಎ-02 ಹೆಚ್.ಯು-7031 ನೋಂದಣಿ ಸಂಖ್ಯೆಯ ಹೋಂಡಾ ಡಿಯೋ ದ್ವಿಚಕ್ರವಾಹನದಲ್ಲಿ ಚಿನ್ನಸಂದ್ರ ಗ್ರಾಮಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ಸು ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ಚಿಂತಾಮಣಿ ಕಡೆಗೆ ಬರುತ್ತಿದ್ದಾಗ ರಾತ್ರಿ 10:20 ಗಂಟೆಯ ಸಮಯದಲ್ಲಿ ಚಿನ್ನಸಂದ್ರ ಸರ್ಕಾರಿ ಅಸ್ಪತ್ರೆಯ ಮುಂದೆ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಮಹಮದ್ ನವಾಜ್ರವರು ದ್ವಿಚಕ್ರವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು, ಅದರ ಪರಿಣಾಮ ದ್ವಿಚಕ್ರವಾಹನ ಆತನ ನಿಯಂತ್ರಣ ತಪ್ಪಿ ದ್ವಿಚಕ್ರವಾಹನದ ಸಮೇತ ತಾವು ಕೆಳಗೆ ಬಿದ್ದು ಹೋಗಿ ದ್ವಿಚಕ್ರವಾಹನವನ್ನು ಚಾಲನೆ ಮಾಡುತ್ತಿದ್ದ ಮಹಮದ್ ನವಾಜ್ ರವರಿಗೆ ತಲೆಗೆ ರಕ್ತಗಾಯಗಳಾಗಿ ಮೂಗು ಮತ್ತು ಕಿವಿಯಲ್ಲಿ ರಕ್ತಸ್ರಾವವಾಗಿರುತ್ತದೆ. ಹಿಂಬದಿಯಲ್ಲಿ ಕುಳಿತಿದ್ದ ತನಗೆ ಬಲ ಮುಂಗೈಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡಿದ್ದ ಮಹಮದ್ ನವಾಜ್ ರವರನ್ನು ತಾನು ಮತ್ತು ರಸ್ತೆಯಲ್ಲಿ ಬರುತ್ತಿದ್ದ ಚಿಂತಾಮಣಿ ನಗರದ ನೆಕ್ಕುಂದಿಪೇಟೆಯ ವಾಸಿ ಇಲಿಯಾಜ್ ರವರು ಉಪಚರಿಸಿ ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ವೈದ್ಯಾಧಿಕಾರಿಗಳು ಪ್ರಥಮ ಚಿಕಿತ್ಸೆಯನ್ನು ನೀಡಿರುತ್ತಾರೆ. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 08/09/2020 ರಂದು ರಾತ್ರಿ 11:10 ಗಂಟೆಯ ಸಮಯದಲ್ಲಿ ಮಹಮದ್ ನವಾಜ್ ರವರು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಮಹಮದ್ ನವಾಜ್ ರವರ ಮೃತದೇಹವು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶವಾಗರಾದಲ್ಲಿದ್ದು, ಈ ಬಗ್ಗೆ ಸ್ಥಳಕ್ಕೆ ಬಂದು ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.233/2020 ಕಲಂ. 279  ಐ.ಪಿ.ಸಿ:-

          ದಿನಾಂಕ 09/09/2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ಶ್ರೀನಿವಾಸ್ ಬಿನ್ ಲಕ್ಷ್ಮೀಪತಿ, 30ವರ್ಷ, ಗೊಲ್ಲ ಜನಾಂಗ, ಕ್ಯಾಂಟರ್ ವಾಹನ ಚಾಲಕ, ಕುರೂಡಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವನೇಂದರೆ ದಿನಾಂಕ 08/09/2020 ರಂದು ಪಿರ್ಯಾದಿದಾರರು  ಹೋಸಕೋಟೆಯ ಐಟಿಸಿ ಕಂಪನಿಯಿಂದ   KA-09-A-7495 ಕ್ಯಾಂಟರ್ ವಾಹನದಲ್ಲಿ ಬಿಸ್ಕತ್ ನ್ನು ಲೋಡ್ ಮಾಡಿಕೊಂಡು ಗೌರಿಬಿದನೂರು ಮಾರ್ಗವಾಗಿ ಹಿಂದುಪುರಕ್ಕೆ  ಹೋಗುತ್ತಿದ್ದಾಗ ಚಿಕ್ಕಕುರುಗೋಡು ರೈಲ್ವೇ ಗೇಟ್ ಬಳಿ ಸುಮಾರು 11-00  ಸಮಯದಲ್ಲಿ ತನ್ನ ಕ್ಯಾಂಟರ್  KA-09-A-7495 ವಾಹನಕ್ಕೆ 2 ಕುರಿಗಳು ಅಡ್ಡಬಂದ ಕಾರಣ ತಕ್ಷಣ ಬ್ರೇಕ್ ಹಾಕಿದ್ದು ಹಿಂದೆಯಿಂದ ಬರುತ್ತಿದ್ದ ಬಾರತ್ ಬೆಂಜ್ ಟ್ಯಾಂಕರ್ ಲಾರಿ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಕ್ಯಾಂಟರ್ ಹಿಂಬದಿಯ ಡೋರ್ ಜಖಂ ಅಗಿದ್ದು ಪಿರ್ಯಾದಿಗೆ ಯಾವುದೇ ಪ್ರಾಣಪಯವಾಗಿರುವುದಿಲ್ಲ ತನ್ನ ಕ್ಯಾಂಟರ್ ಗೆ ಡಿಕ್ಕಿ ಹೊಡೆದ  ಲಾರಿಯ ಮುಂದಿನ ಕ್ಯಾಬೀನ್ ಇಂಜಿನ್ ಭಾಗ ಪೂರ್ತಿ ಜಖಂ ಆಗಿರುತ್ತೆ ನಂತರ ಡಿಕ್ಕಿ ಹೊಡೆದ ಲಾರಿಯ ನಂಬರ್ ಮತ್ತು ಚಾಲಕನ ಹೆಸರು ತಿಳಿಯಲಾಗಿ KA-13-C-8028 ಚಾಲಕ ಹೆಸರು ಫಯಾಜ್ ಅಹ್ಮದ್ ಬಿನ್ ಬಾಷಾ, ಹಾಸನ ಎಂದು ತಿಳಿಸಿದ್ದು  ಈ ಚಾಲಕ ಅತೀವೇಗ ಮತ್ತು ಅಜಾಗರೂಕತೆಯೇ ಕಾರಣವಾಗಿದ್ದು , ಈ ವಿಷಯವನ್ನು ತನ್ನ ಮಾಲೀಕನಿಗೆ ತಿಳಿಸಿ ದೂರನ್ನು ತಡವಾಗಿ ನೀಡಿರುತ್ತೇನೆ. ಈ ಮೇಲ್ಕಂಡ ಲಾರಿ ಚಾಲಕ ಮತ್ತು ವಾಹನದ  ವಿರುದ್ದ ಕ್ರಮ ಕೈಗೊಳ್ಲಲು ಕೋರಿ ದೂರು.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.148/2020 ಕಲಂ. 20(ಎ) NARCOTIC DRUGS AND PSYCHOTROPIC SUBSTANCES ACT, 1985:-

          ದಿನಾಂಕ:09/09/2020 ರಂದು ಬೆಳಗಿನ ಜಾವ 12-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಮಂಜುನಾಥ. ಎಂ.ಎನ್. ಪೊಲೀಸ್ ಇನ್ಸ್ ಪೆಕ್ಟರ್ ಗುಡಿಬಂಡೆ ಪೊಲೀಸ್ ಠಾಣೆ ರವರು ನೀಡಿದ ದೂರಿನ ಸಾರಾಂಶವೆನೆಂದರೆ ಗುಡಿಬಂಡೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ ಎಂ.ಎನ್. ಆದ ತಾನು ತಮಗೆ ತಿಳಿಯ ಪಡಿಸುವುದೇನೆಂದರೆ, ತಾನು ಈ ದಿನ ದಿನಾಂಕ 08/09/2020 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ ಠಾಣೆಯಲ್ಲಿರುವಾಗ ಚಿಕ್ಕಬಳ್ಳಾಪುರ ತಾಲ್ಲೂಕು ವಕ್ರಹಳ್ಳಿ ಗ್ರಾಮದ ದಾಸಪ್ಪ ಬಿನ್ ಲೇಟ್ ನರಸಿಂಹಪ್ಪ ರವರು ತಮ್ಮ ಮನೆಯ ಪಕ್ಕ ಜಮೀನಿನಲ್ಲಿ ಕಾಕಡ ಹೂವಿನಗಿಡಗಳಲ್ಲಿ ಗಾಂಜಾಗಿಡಗಳನ್ನು ಬೆಳಸಿರುತ್ತಾನೆಂತ ಬಂದ ಮಾಹಿತಿ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಸದರಿ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ, ಗೆಜೆಟೆಡ್ ಅಧಿಕಾರಿಗಳಾದ  ಚಿಕ್ಕಬಳ್ಳಾಪುರ ಅಬಕಾರಿ ಡಿವೈ.ಎಸ್.ಪಿ ಶ್ರೀ ಎಸ್.ಆರ್.ವಿಶ್ವನಾಥ ಬಾಬು ರವರಿಗೆ ದಾಳಿ ಸಮಯದಲ್ಲಿ ಉಪಸ್ಥಿತಿಯಾಗಿರಲು ಕೋರಿ ಮನವಿಯನ್ನು ಮಾಡಿಕೊಂಡು ಹಾಗೂ ದಾಳಿಯ ಸಮಯದಲ್ಲಿ ಪಂಚಾಯ್ತಿದಾರರಾಗಿ ಬರಲು ಮಂಡಿಕಲ್ಲು ಕಂದಾಯ ನಿರೀಕ್ಷಕರಾದ ಶ್ರೀ ಜಯರಾಮ್ ಮತ್ತು  ಅಬಕಾರಿ ನಿರೀಕ್ಷಕರಾದ ಶ್ರೀ ಶಂಕರ್ ಪ್ರಸಾದ್ ಹಾಗೂ ಸರ್ಕಾರಿ ಫ್ರೌಢ ಶಾಲೆ ಪೆರೇಸಂದ್ರದ ಮುಖ್ಯೋಪಾಧ್ಯಯರಾದ ಶ್ರೀ ಕೃಷ್ಣಮೂರ್ತಿ ರವರಿಗೆ ಮಾಹಿತಿಯನ್ನು ಪೋನ್ ಮುಖಾಂತರ ತಿಳಿಸಿ ಕಮ್ಮಗುಟ್ಟಹಳ್ಳಿ ಕ್ರಾಸ್ ಬಳಿ ಬರಲು ತಿಳಿಸಿ, ಠಾಣಾ ಸಿಬ್ಬಂದಿಗಳಾದ ಹೆಚ್.ಸಿ 102 ಶ್ರೀ ಆನಂದ, ಹೆಚ್.ಸಿ 23 ಕುಮಾರ್ ನಾಯಕ, ಸಿ.ಹೆಚ್.ಸಿ-250 ಶ್ರೀನಾಥ, ಪಿಸಿ 507 ಹನುಮಂತರಾಯಪ್ಪ , ಜೀಪ್ ಚಾಲಕ ಎಎಹ್.ಸಿ 43 ವೆಂಕಟಾಚಲ ರವರೊಂದಿಗೆ ಸಂಜೆ 6-45 ಗಂಟೆಗೆ ಠಾಣೆಯನ್ನು ಬಿಟ್ಟು ಕೆಎ40-ಜಿ-1888 ರ ಸರ್ಕಾರಿ ಪೊಲೀಸ್ ಜೀಪಿನಲ್ಲಿ ಕಮ್ಮಗುಟ್ಟಹಳ್ಳಿ ಕ್ರಾಸ್ ಗೆ ಹೋಗಿದ್ದು, ಅಲ್ಲಿ ರಾತ್ರಿ 8-45 ಗಂಟೆಗೆ ಚಿಕ್ಕಬಳ್ಳಾಪುರ ಅಬಕಾರಿ ಡಿವೈ.ಎಸ್.ಪಿ ಶ್ರೀ ಎಸ್.ಆರ್.ವಿಶ್ವನಾಥ ಬಾಬು, ಮಂಡಿಕಲ್ಲು ಕಂದಾಯ ನಿರೀಕ್ಷಕರಾದ ಶ್ರೀ ಜಯರಾಮ್ ಮತ್ತು  ಅಬಕಾರಿ ನಿರೀಕ್ಷಕರಾದ ಶ್ರೀ ಶಂಕರ್ ಪ್ರಸಾದ್ ಹಾಗೂ ಸರ್ಕಾರಿ ಫ್ರೌಢ ಶಾಲೆ ಪೆರೇಸಂದ್ರದ ಮುಖ್ಯೋಪಾಧ್ಯಯರಾದ ಶ್ರೀ ಕೃಷ್ಣಮೂರ್ತಿ ರವರು ಬಂದಿದ್ದು, ಪಂಚರಿಗೆ ನೋಟಿಸ್ ಜಾರಿ ಮಾಡಿ ಅವರುಗಳೊಂದಿಗೆ ಮಾಹಿತಿಯಂತೆ ತೂಕದ ಯಂತ್ರವನ್ನು ತಗೆದುಕೊಂಡು ರಾತ್ರಿ 9-00 ಗಂಟೆಗೆ ಚಿಕ್ಕಬಳ್ಳಾಪುರ ತಾಲ್ಲೂಕು ವಕ್ರಹಳ್ಳಿ ಗ್ರಾಮಕ್ಕೆ ಹೋಗಿ ಆರೋಪಿ ತನ್ನ ಮನೆಯ ಬಳಿ ಕಾಕಡ ಹೂವಿನ ಗಿಡಗಳ ಜೊತೆ ಗಾಂಜಾದ ಗಿಡಗಳನ್ನು ಬೆಳೆಸಿರುವುದು  ಖಾತ್ರಿ ಪಡಿಸಿಕೊಂಡು, ಅಲ್ಲಿಯೇ ಮನೆಯ ಬಳಿದ್ದ ಆಸಾಮಿಯನ್ನು ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಸುತ್ತುವರೆದು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ದಾಸಪ್ಪ ಬಿನ್ ಲೇಟ್ ನರಸಿಂಹಪ್ಪ, 65 ವರ್ಷ, ನಾಯಕ ಜನಾಂಗ, ಜಿರಾಯ್ತಿ, ವಕ್ರಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದನು. ಸದರಿ ಗಾಂಜಾ ಗಿಡಗಳನ್ನು ಬೆಳಸಿದ್ದ ಅಸಾಮಿಯನ್ನು  ಕುರಿತು ಗಾಂಜಾ ಗಿಡಗಳನ್ನು ಏತಕ್ಕೆ ಬೆಳಸಿದ್ದು ಎಂದು ವಿಚಾರಿಸಲಾಗಿ ಸದರಿ ಗಾಂಜಾದ ಗಿಡಗಳನ್ನು ಬೆಳಸಿ ಕೆಲವರಿಗೆ ಹಣಕ್ಕೆ ಮಾರಾಟ ಮಾಡುತ್ತಿರುತ್ತೇನೆ ಎಂದು ತಿಳಿಸಿದನು. ಆದ್ದರಿಂದ ಸದರಿ 2 ಗಾಂಜಾ ಗಿಡಗಳನ್ನು ಪಂಚಾಯ್ತಿದಾರರ ಸಮಕ್ಷಮ ಮತ್ತು ಗೆಜೆಟೆಡ್ ಅಧಿಕಾರಿಗಳ ಸಮ್ಮುಖದಲ್ಲಿ ಬೇರುಸಮೇತ ಕೀಳಿಸಿ ತೂಕ ಮಾಡಿದಾಗ ಒಟ್ಟು ಕಾಂಡ ಸಮೇತ ಗಾಂಜ ಸೊಪ್ಪು  ಒಟ್ಟು ತೂಕ 3 ಕೆಜಿ 535  ಗ್ರಾಂ ಗಾಂಜಾ ಗಿಡಗಳಲ್ಲಿ  ಮತ್ತು ಸೊಪ್ಪಿನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಲುವಾಗಿ ಮಾದರಿಗಾಗಿ 150 ಗ್ರಾಂ.ನಷ್ಟು ಗಾಂಜಾ ಗಿಡಗಳನ್ನು ಮತ್ತು ಸೊಪ್ಪನ್ನು  ತಿಳಿ ಬಿಳಿ ಪ್ಲಾಸ್ಟೀಕ್ ಕವರನಲ್ಲಿ ಹಾಕಿ ನಂತರ ಬಳಿ ಬಟ್ಟೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಭದ್ರಪಡಿಸಲಾಯಿತು. ಉಳಿದ ಗಾಂಜಾ ಗಿಡಗಳನ್ನು ಮತ್ತು ಸೊಪ್ಪನ್ನು  ಮತ್ತೊಂದು ತಿಳಿ ಪ್ಲಾಸ್ಟೀಕ್ ಕವರನಲ್ಲಿ ಹಾಕಿ ನಂತರ ಬಳಿ ಬಟ್ಟೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಭದ್ರಪಡಿಸಲಾಯಿತು. ನಂತರ ಇವುಗಳಿಗೆ ಅರಗಿನ ಸಹಾಯದಿಂದ ‘P’ ಎಂಬ ಅಕ್ಷರ ಇರುವ ಸೀಲಿನಿಂದ ಮೊಹರು ಮಾಡಿ ಸದರಿ ಚೀಲಕ್ಕೆ ಪಂಚರ ಮತ್ತು ಸಹಿಯನ್ನು ಒಳಗೊಂಡ ಚೀಟಿಯನ್ನು ಅಂಟಿಸಲಾಯಿತು. ಸದರಿ ಚೀಲಗಳಿಗೆ ಕ್ರಮವಾಗಿ ಕ್ರಮ.ಸಂಖ್ಯೆ:01 ಮತ್ತು ಕ್ರಮ.ಸಂಖ್ಯೆ:02 ಎಂತ ನೀಡಲಾಯಿತು.  ಆರೋಪಿಯಿಂದ ವಶಪಡಿಸಿಕೊಂಡ ಮಾದಕ ವಸ್ತುವಾದ ಎಲೆ ಮತ್ತು ಕಾಂಡವನ್ನೊಳಗೊಂಡ ಗಾಂಜಾದ ಗಿಡಗಳ ಒಟ್ಟು ತೂಕ ಸುಮಾರು 3 ಕೆಜಿ 535  ಗ್ರಾಂ ಇದ್ದು ಇದರ ಬೆಲೆ ಸುಮಾರು 45000/-ರೂಪಾಯಿಗಳಾಗಬಹುದೆಂದು ಪಂಚಾಯ್ತಿದಾರರು ಅಂದಾಜಿಸಲಾಯಿತು. ರಾತ್ರಿ 9-30 ಗಂಟೆಯಿಂದ ರಾತ್ರಿ 11-30 ಗಂಟೆಯ ವರೆಗೆ ಪಂಚನಾಮೆಯನ್ನು ಆರೋಪಿಯ ಮನೆಯಲ್ಲಿದ್ದ ವಿದ್ಯುತ್ ದೀಪದ ಬೆಳಕಿನಲ್ಲಿ ಜರುಗಿಸಿ ಪಂಚನಾಮೆ ಮೂಲಕ ಮಾಲನ್ನು ಅಮಾನತ್ತು ಪಡಿಸಿಕೊಂಡು ಠಾಣೆಗೆ ರಾತ್ರಿ 12-00 ಗಂಟೆಗೆ ಆರೋಪಿ ಮತ್ತು ಮಾಲಿನೊಂದಿಗೆ ಬಂದು ದೂರನ್ನು ಸಿದ್ದಪಡಿಸಿ ಈ ದಿನ ದಿನಾಂಕ 09/09/2020 ರಂದು ಬೆಳಗಿನಜಾವ 12-30 ಗಂಟೆಗೆ ನೀಡುತ್ತಿದ್ದು, ಆರೋಪಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.99/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 08/09/2020 ರಂದು ಸಂಜೆ 6-15 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀ ರಂಜನ್ ಕುಮಾರ್ ರವರು ಮಾಲು, ಆರೋಪಿತರು ಹಾಗೂ ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ: ದಿನಾಂಕ 08/09/2020 ರಂದು ಮಧ್ಯಾಹ್ನ 3-45 ಗಂಟೆ ಸಮಯದಲ್ಲಿ ಪಿ.ಎಸ್.ಐ ರವರಿಗೆ  ಬಂದ ಖಚಿತ ಮಾಹಿತಿ ಮೇರೆಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ರಂಗೇನಹಳ್ಳಿ ಸರ್ಕಾರಿ ಬೆಟ್ಟದ ತಪ್ಪಲಿನ ಬಂಡೆ ಮೇಲೆ ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಲು  ಸರ್ಕಾರಿ ವಾಹನ ಸಂಖ್ಯೆ ಕೆಎ-40-ಜಿ-539 ವಾಹನದಲ್ಲಿ ಪಿ.ಎಸ್.ಐ ರವರು ಠಾಣಾ ಸಿಬ್ಬಂದಿಯವರಾದ ಸಿಹೆಚ್ಸಿ-161 ಕೃಷ್ಣಪ್ಪ, ಸಿಹೆಚ್ಸಿ-56 ಅಶ್ವಥಪ್ಪ, ಸಿಪಿಸಿ-484 ವಿ.ಎಸ್.ಶಿವಣ್ಣ, ಚಾಲಕನಾದ ಎಪಿಸಿ-163 ಅಯ್ ರಾಜ್ ರವರೊಂದಿಗೆ ನಂದನಹೊಸಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿದ್ದವರನ್ನು ಪಂಚಾಯ್ತಿದಾರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ರಂಗೇನಹಳ್ಳಿ ಸರ್ಕಾರಿ  ಬೆಟ್ಟದ ತಪ್ಪಲಿನ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ವಾಹನದಿಂದ ಇಳಿದು  ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಬೆಟ್ಟದ ತಪ್ಪಲ್ಲಿನ ಗಿಡಗಳ ಮಧ್ಯದಲ್ಲಿರುವ ಬಂಡೆ ಮೇಲೆ  ಯಾರೋ ಕೆಲವರು ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ 100 ರೂ ಅಂದರ್ 150 ರೂ ಬಾಹರ್ ಎಂದು ಅಂದರ್ ಬಾಹರ್ ಇಸ್ಟೀಟು ಜೂಜಾಟವಾಡುತ್ತಿದ್ದು, ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ  ಹಾಗೂ ಹಣವನ್ನು ಅಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು  ಹೆಸರು ಮತ್ತು ವಿಳಾಸ ಕೇಳಲಾಗಿ 1) ರವಿಕುಮಾರ್ ಬಿನ್ ರಾಮದಾಸ್, 35 ವರ್ಷ, ಆದಿ ಕರ್ನಾಟಕ ಜನಾಂಗ, ಜಿರಾಯ್ತಿ, ವಾಸ ವೆಂಕಟಗಿರಿಕೋಟೆ, ಚಿಂತಾಮಣಿ ಟೌನ್.  2) ಪ್ರಸಾದ್ ಬಿನ್ ಚಿಕ್ಕನರಸಿಂಹಪ್ಪ, 40 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ವಾಸ ಎ.ಕೆ. ಕಾಲೋನಿ, ವೆಂಕಟಗಿರಿ ಕೋಟೆ, ಚಿಂತಾಮಣಿ ನಗರ 3) ಬಾಬು ಬಿನ್ ಶ್ರೀರಾಮಪ್ಪ, 30 ವರ್ಷ, ವಕ್ಕಲಿಗರು, ಕೂಲಿ ಕೆಲಸ, ವಾಸ ಕೂತಪ್ಪನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಎಂದು ತಿಳಿಸಿದರು. ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಸದರಿಯವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ ಇದ್ದು,  ಪಂಚರ  ಸಮಕ್ಷಮ ಪರಿಶೀಲಿಸಲಾಗಿ 2350/- ರೂ ನಗದು ಹಣ ಇದ್ದು, 52 ಇಸ್ಟೀಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರ್ ಇದ್ದು, ಸದರಿ ಮಾಲುಗಳನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಸಂಜೆ 4-30 ರಿಂದ 5-30 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 112/2020 ರಂತೆ ದಾಖಲು ಮಾಡಿಕೊಂಡು ಘನ ನ್ಯಾಯಾಲಯದಲ್ಲಿ ಇ-ಮೇಲ್ ಮುಖಾಂತರ ಅನುಮತಿ ಪಡೆದು  ಸಂಜೆ 7-15 ಗಂಟೆಗೆ ಠಾಣಾ ಮೊ.ಸಂ 99/2020 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.246/2020 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:08-09-2020 ರಂದು ಮದ್ಯಾಹ್ನ 3-00 ಗಂಟೆಯಲ್ಲಿ  ಪಿರ್ಯಾದಿದಾರರಾದ ಶ್ರೀಮತಿ ಯಶೋಧಮ್ಮ ಎಲ್ ಕೋಂ ನಾರಾಯಣ ,  51 ವರ್ಷ, ಗೊಲ್ಲರು, ಗೃಹಿಣಿ, ಉಗನವಾಡಿ ಗ್ರಾಮ ,  ದೇವನಹಳ್ಳಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತನ್ನ ಗಂಡ ನಾರಾಯಣ , ತಮಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ತನ್ನ ಮಗಳಿಗೆ ಮದುವೆಯಾಗಿ ಅವರ ಗಂಡನ ಮನೆಯಲ್ಲಿ ಇರುತ್ತಾಳೆ. ತನ್ನ ಮಗನಾದ ನಿರಂಜನ್ ಎನ್ 31 ವರ್ಷ ರವರು ಸುಮಾರು 6 ವರ್ಷಗಳಿಂದ ಶಿಡ್ಲಘಟ್ಟ ತಾಲ್ಲೂಕು ಪಿಂಡಿಪಾಪನಹಳ್ಳಿ ಗ್ರಾಮದ ಬಳಿ ಇರುವ ಏರ್ ಪೋರ್ಟ್  ಟವರ್ ನಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡುತಿದ್ದು ಪ್ರತಿ ದಿನ ತಮ್ಮ ಗ್ರಾಮದಿಂದ ಕೆಲಸಕ್ಕೆ ಹೋಗಿ ಮನೆಗೆ ವಾಪಸ್ಸು ಬರುತಿದ್ದ ಎಂದಿನಂತೆ ದಿನಾಂಕ:06.09.2020 ರಂದು ಬೆಳಿಗ್ಗೆ 8-45 ಗಂಟೆಯಲ್ಲಿ ಕೆಎ.43.ಎಸ್.0379 ದ್ವಿಚಕ್ರವಾಹನದಲ್ಲಿ ಕೆಲಸಕ್ಕೆ ಹೋಗಲು ಹೋಗಿರುತ್ತಾನೆ. ವಿಚಾರ ತಿಳಿದುಕೊಳ್ಳಲಾಗಿ ತನ್ನ ಮಗ ಕೆಎ.43.ಎಸ್.0379 ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 10-00 ಗಂಟೆಯಲ್ಲಿ ಹಂಡಿಗನಾಳ- ಕೇಶವಾಪುರದ ಮದ್ಯ ಇರುವ ಕೆರೆ ಕಟ್ಟೆಯ ಮೇಲೆ ತನ್ನ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಹೋಗುವಾಗ ಹಿಂಬಂದಿಯಿಂದ ಬರುತಿದ್ದ ಯಾವುದೋ ಒಂದು ಕಾರಿನ ಚಾಲಕ ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂಬದಿಯಿಂದ ದ್ವಿಚಕ್ರವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ತನ್ನ ಮಗ ದ್ವಿಚಕ್ರವಾಹನ ಸಮೇತ ರಸ್ತೆಯಲ್ಲಿ ಬಿದ್ದು ಹೋಗಿ ಎಡಕಾಲಿಗೆ ರಕ್ತಗಾಯವಾಗಿ ದ್ವಿಚಕ್ರವಾಹನ ಜಖಂಗೊಂಡಿರುತ್ತೆ. ಸದರಿ ಕಾರಿನ ಚಾಲಕನು ತನ್ನ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ನಂತರ  ರಸ್ತೆಯಲ್ಲಿ ಹೋಗುತಿದ್ದು ಯಾರೋ ಸಾರ್ವಜನಿಕರು ತನ್ನ ಮಗನನ್ನು ಉಪಚರಿಸಿ ಅಂಬೂಲೇನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಆರ್.ಎಂ.ವಿ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತನಗೆ ಕರೆ ಮಾಡಿ ತನ್ನ ಮಗನಾದ ನಿರಂಜನ್ ರವರಿಗೆ ಅಪಘಾತವಾಗಿರುವುದಾಗಿ ತಿಳಿಸಿದ್ದು ತಾನು ಅಸ್ಪತ್ರೆಗೆ ಹೋಗಿ ತನ್ನ ಮಗನ ಬಳಿ ಅಪಘಾತದ ಬಗ್ಗೆ ವಿಷಯವನ್ನು ತಿಳಿದುಕೊಂಡು ತನ್ನ ಮಗನಿಗೆ ಅಸ್ಪತ್ರೆಯಲ್ಲಿ ಉಪಚರಿಸಿಕೊಂಡು ಈ ದಿನ ತಡವಾಗಿ ಬಂದು ದೂರು ನೀಡುತಿದ್ದು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕೆಎ.43.ಎಸ್.0379 ದ್ವಿ ಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ತನ್ನ ಮಗ ನಿರಂಜನ್ ರವರಿಗೆ ಗಾಯಗಳನ್ನುಂಟು ಮಾಡಿ ಕಾರನ್ನು ನಿಲ್ಲಿಸದೇ ಪರಾರಿಯಾಗಿರುವ ಕಾರಿನ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರಗೆ ಠಾಣಾ ಮೊ ಸಂ:246/2020 ಕಲಂ 279,337 ಐ.ಪಿ.ಸಿ ಮತ್ತು ಕಲಂ 187 ಐ.ಎಂ.ವಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.247/2020 ಕಲಂ. 143,323,447,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ: 08-09-2020 ರಂದು ಫಿರ್ಯಾದಿದಾರರಾದ ಅಂಬರೀಶ ಬಿನ್ ಮುನಿನಾರಾಯಣಪ್ಪ, 36 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಮಳಮಾಚನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಹೌಸ್ ಲಿಸ್ಟ್ ನಂ. 995 ರ ಪೂರ್ವ ಪಶ್ಚಿಮ 50 ಅಡಿ ಉತ್ತರ ದಕ್ಷಿಣ 40 ಅಡಿಗಳ ಖಾಲಿ ಜಾಗವು 2013-14ನೇ ಸಾಲಿನಲ್ಲಿ ತನ್ನ ಹೆಸರಿಗೆ ಗ್ರಾಮ ಪಂಚಾಯ್ತಿ ವತಿಯಿಂದ ಮಂಜೂರಾಗಿದ್ದು ನಾವೆ ಅನುಭವದಲ್ಲಿರುತ್ತೇವೆ. ಸದರಿ ಖಾಲಿ ಜಾಗದಲ್ಲಿ ತಿಪ್ಪೆಯನ್ನು ಹಾಗೂ ರೇಷ್ಮೆ ಕಡ್ಡಿಯನ್ನು ಹಾಕಿರುತ್ತೇವೆ. ಹೀಗಿದ್ದು ದಿನಾಂಕ: 03-09-2020 ರಂದು ಬೆಳಿಗ್ಗೆ 11.00 ಗಂಟೆಯಲ್ಲಿ ತಮ್ಮ ಗ್ರಾಮದ ವಾಸಿಗಳಾದ ಮುನಿಕೃಷ್ಣ ಬಿನ್ ಬ್ಯಾಟರಾಯಪ್ಪ, ಮುನಿರಾಜು ಬಿನ್ ಬ್ಯಾಟರಾಯಪ್ಪ, ಲಕ್ಷ್ಮಮ್ಮ ಕೋಂ ಮುನಿಕೃಷ್ಣಪ್ಪ, ಶ್ರೀಧರ ಬಿನ್ ಮುನಿಕೃಷ್ಣಪ್ಪ, ಬೀರೇಶ ಬಿನ್ ಮುನಿಕೃಷ್ಣಪ್ಪ, ಲಕ್ಷ್ಮಮ್ಮ ಕೋಂ ಮುನಿರಾಜು, ರತ್ನಮ್ಮ ಕೋಂ ಚಂದ್ರಶೇಖರ್, ನವೀನ್ ಬಿನ್ ಚಂದ್ರಶೇಖರ್ ರವರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಗ್ರಾಮ ಪಂಚಾಯ್ತಿಯಿಂದ ತನ್ನ ಹೆಸರಿಗೆ ಮಂಜೂರಾಗಿರುವ ಹೌಸ್ ಲಿಸ್ಟ್ ನಂ. 995 ರ ಖಾಲಿ ಜಾಗದ ಒಳಗೆ ಅಕ್ರಮ ಪ್ರವೇಶ ಮಾಡಿ ನಾವು ಹಾಕಿದ್ದ ರೇಷ್ಮೆ ಕಡ್ಡಿಗಳಿಗೆ ಬೆಂಕಿ ಹಾಕಿದ್ದು ಏಕೆ ನಾವು ಹಾಕಿರುವ ತಿಪ್ಪೆಯನ್ನು ಕೆಡವಲು ಹಾಗೂ ರೇಷ್ಮೆ ಕಡ್ಡಿಗಳಿಗೆ ಬೆಂಕಿ ಹಾಕಲು ಪ್ರಯತ್ನಿಸಿದ್ದು ಆಗ ತಾನು ಅವರಿಗೆ ತಮ್ಮ ಜಾಗದಲ್ಲಿರುವ ತಿಪ್ಪೆಯನ್ನು ಏಕೆ ಕೆಡವುತ್ತಿದ್ದರೀ ಎಂದು ಕೇಳಿದ್ದಕ್ಕೆ, ಈ ಜಾಗ ನಮಗೆ ಸೇರಿದ್ದು ನಮ್ಮ ಜಾಗವನ್ನು ಏನಾದರೂ ಮಾಡಿಕೊಳ್ಳುತ್ತೇವೆ, ನೀನು ಯಾರು ಕೇಳುವುದಕ್ಕೆ ಎಂದು ಹೇಳಿ ಏ ಲೋಪರ್ ನನ್ನ ಮಗನೆ ಎಂದು ಬೈದಿದ್ದು, ಆ ಪೈಕಿ ಬೀರೇಶ, ಶ್ರೀಧರ್, ನವೀನ್ ರವರುಗಳು ಕೈಗಳಲ್ಲಿ ಹೊಡೆದು ನನಗೆ ಮೂಗೇಟುಗಳನ್ನುಂಟುಮಾಡಿದ್ದು ಈ ವಿಚಾರದಲ್ಲಿ ನೀನೇನಾದರೂ ಪೊಲೀಸ್ ಕಂಪ್ಲೆಂಟ್ ಕೊಟ್ಟರೆ ನಿನ್ನನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು ಆ ಸಮಯದಲ್ಲಿ ನಮ್ಮ ಗ್ರಾಮದ ರಾಮಾಂಜಿನಪ್ಪ ಬಿನ್ ಚಿಕ್ಕಪ್ಪಯ್ಯ ಮತ್ತು ಮಂಜುನಾಥ ಬಿನ್ ಬ್ಯಾಟರಾಯಪ್ಪ ರವರು ಬಂದು ಅವರಿಗೆ ಬುದ್ದಿವಾದ ಹೇಳಿ ಕಳುಹಿಸಿದ್ದು ಈ ವಿಚಾರದಲ್ಲಿ ತಮ್ಮ ಗ್ರಾಮದಲ್ಲಿ ಪಂಚಾಯ್ತಿ ಮಾಡುವುದಾಗಿ ಹೇಳಿದ್ದು, ಮೇಲ್ಕಂಡವರು ಇದುವರೆಗೂ ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.248/2020 ಕಲಂ. 457,380 ಐ.ಪಿ.ಸಿ:-

          ದಿನಾಂಕ: 09-09-2020 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಫಿರ್ಯಾದಿದಾರರಾದ ವಿಶ್ವನಾಥ ಕೆ ಬಿನ್ ವೀರಣ್ಣ, 27 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಹಂಡಿಗನಾಳ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತಾನು ಜಿರಾಯ್ತಿಯ ಜೊತೆಗೆ ತಮ್ಮ ಗ್ರಾಮದ ಶ್ರೀ ಕೆಂಪಣ್ಣ ಸ್ವಾಮಿ ಶ್ರೀ ವೀರಣ್ಣಸ್ವಾಮಿ ದೇವಾಲಯದ ಅರ್ಚಕರಾಗಿ ಕೆಲಸ ಮಾಡುತ್ತಿರುತ್ತೇನೆ. ಪ್ರತಿ ದಿನ ಬೆಳಿಗ್ಗೆ 7.30 ಗಂಟೆಗೆ ದೇವಾಲಯದ ಬಾಗಿಲನ್ನು ತೆಗೆದು ಪೂಜಾ ಕಾರ್ಯಗಳನ್ನು ನಿರ್ವಹಿಸಿ ಬಾಗಿಲನ್ನು ಹಾಕಿ ನಂತರ ಸಂಜೆ ಕತ್ತಲಾದ ನಂತರ ದೇವಾಲಯದ ಬಾಗಿಲನ್ನು ತೆಗೆದು ದೀಪ ಬೆಳಗಿಸಿ ವಿದ್ಯುತ್ ಲೈಟ್ ಆನ್ ಮಾಡಿ ಬಾಗಿಲನ್ನು ಹಾಕುತ್ತೇವೆ. ಪ್ರತಿ ಸೋಮವಾರ ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯ ವರೆಗೆ ದೇವಾಲಯದ ಬಾಗಿಲು ತೆಗೆದು ಪೂಜಾ ಕಾರ್ಯಗಳನ್ನು ನಿರ್ವಹಿಸುತ್ತೇವೆ. ದೇವಾಲಯದ ಬೀಗದ ಕೀಗಳು ನಮ್ಮ ಬಳಿಯೇ ಇರುತ್ತದೆ. ನಾನು ನಮ್ಮ ತಂದೆ ವೀರಣ್ಣ ಮತ್ತು ನಮ್ಮ ತಾಯಿಯಾದ ಶ್ರೀಮತಿ ಅಶ್ವತ್ಥಮ್ಮ ರವರು ದೇವಾಲಯದ ಆವರಣದಲ್ಲಿರುವ ಮನೆಯಲ್ಲಿ ವಾಸವಾಗಿರುತ್ತೇವೆ. ದಿನಾಂಕ: 08-09-2020 ರಂದು ಬೆಳಿಗ್ಗೆ 6.00 ಗಂಟೆಗೆ ದೇವಾಲಯದ ಬಾಗಿಲು ತೆಗೆದು 9.00 ಗಂಟೆಗೆ ಬಾಗಿಲನ್ನು ಹಾಕಿದ್ದು ನಂತರ ಸಂಜೆ 6.00 ಗಂಟೆಗೆ ಬಾಗಿಲನ್ನು ತೆಗೆದು ದೀಪ ಬೆಳಗಿಸಿ ವಿದ್ಯುತ್ ಲೈಟ್ ಆನ್ ಮಾಡಿ ಪುನಃ ಬಾಗಿಲನ್ನು ಹಾಕಿ ಬೀಗವನ್ನು ನಮ್ಮ ಮನೆಯಲ್ಲಿಯೇ ಇಟ್ಟು ರಾತ್ರಿ 10.00 ಗಂಟೆಗೆ ಮಲಗಿಕೊಂಡಿರುತ್ತೇನೆ. ನಂತರ ಎಂದಿನಂತೆ ಬೆಳಿಗ್ಗೆ ಸುಮಾರು 6.00 ಗಂಟೆಗೆ ದೇವಾಲಯದ ಬಾಗಿಲನ್ನು ತೆಗೆದು ಪೂಜೆ ಮಾಡೋಣವೆಂದು ಹೋದಾಗ ದೇವಾಲಯದ ಮುಖ್ಯ ದ್ವಾರವನ್ನು ಯಾರೋ ಕಿತ್ತು ಹಾಕಿದ್ದು ಬಾಗಿಲನ ಬಳಿಯೇ ಎರಡು ಕಬ್ಬಿಣದ ಹಾರೆಗಳು ಇದ್ದವು ಸದರಿ ಹಾರೆಗಳು ನಮ್ಮ ಮನೆಯ ಮೆಟ್ಟಿಲಿನ ಕೆಳಗೆ ಇಟ್ಟಿದ್ದ ಹಾರೆಗಳಾಗಿರುತ್ತವೆ. ಯಾರೋ ಕಳ್ಳರು ರಾತ್ರಿ 10.00 ಗಂಟೆಯಿಂದ ಬೆಳಗಿನ ಜಾವ 6.00 ಗಂಟೆ ಮದ್ಯದಲ್ಲಿ ದೇವಾಲಯದ ಬಾಗಿಲನ್ನು ಕಬ್ಬಿಣದ ಹಾರೆಗಳಿಂದ ಮೀಟಿ ಬೀಗವನ್ನು ಕಿತ್ತು ಹಾಕಿ ದೇವಾಲಯದ ಒಳಗೆ ಪ್ರವೇಶ ಮಾಡಿ ದೇವಾಲಯದಲ್ಲಿದ್ದ ಶ್ರೀ ಪಾರ್ವತಿ ದೇವಿಯ 3 ಗ್ರಾಂ ತೂಕದ ಬಂಗಾರದ ತಾಳಿ, 1ಕೆ.ಜಿ. ತೂಕದ ಬೆಳ್ಳಿ ತಟ್ಟೆ, 400 ಗ್ರಾಂ ತೂಕದ ಪಾರ್ವತಿ ದೇವಿಯ ಕಿರೀಟ, 900 ಗ್ರಾಂ ತೂಕದ ಬೆಳ್ಳಿಯ ಆಶಿವರ್ಾದ ಚಟಾರಿ, 10 ಗ್ರಾಂ ತೂಕದ ಬೆಳ್ಳಿಯ ಕಾಸಿನ ಸರ ಮತ್ತು 500 ಗ್ರಾಂ ತೂಕದ ಬೆಳ್ಳಿಯ ತೀರ್ಥದ ಬಟ್ಟಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಡಿವಿಆರ್ ನ್ನು ಸಹ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಒಟ್ಟು 3 ಗ್ರಾಂ ಬಂಗಾರ ಹಾಗೂ 2.810 ಕೆ.ಜಿ ತೂಕದ ಬೆಳ್ಳಿ ವಡವೆಗಳ ಒಟ್ಟು ಮೌಲ್ಯ 1,83,000-00 (ಒಂದು ಲಕ್ಷ ಎಂಬತ್ತ ಮೂರು ಸಾವಿರ ರೂಪಾಯಿಗಳಾಗಿರುತ್ತೆ) ಉಳಿದಂತೆ ದೇವಾಲಯದಲ್ಲಿನ ಶ್ರೀ.ಕೆಂಪಣ್ಣ ಶ್ರೀ.ವೀರಣ್ಣಸ್ವಾಮಿ ವಿಗ್ರಹಗಳಿಗೆ ಅಳವಡಿಸಿದ್ದ ಬೆಳ್ಳಿಯ ಕಿರೀಟಗಳು, ಪಾದುಕೆಗಳು, ಒಂದು ಬೆಳ್ಳಿಯ ತಟ್ಟೆ, ಅಭಿಷೇಕದ ಬಟ್ಟಲು, ಶ್ರೀ.ಪಾರ್ವತಿದೇವಿಯ ಮುಖವಾಡ ಹಾಗೂ ಇತರೆ ವಸ್ತುಗಳು ದೇವಾಲಯದಲ್ಲಿಯೇ ಇರುತ್ತದೆ. ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ವಸ್ತುಗಳನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.