ದಿನಾಂಕ :09/08/2020 ರ ಅಪರಾಧ ಪ್ರಕರಣಗಳು

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.66/2020 ಕಲಂ. 448,323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ08/08/2020 ರಂದು  ಸಂಜೆ  17-00 ಗಂಟೆಗೆ ಹೆಚ್ ಸಿ107  ರವರು ಚಿಂತಾಮಣಿ  ಸರ್ಕಾರಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ  ಗಾಯಾಳು   ಶ್ರೀಮತಿ  ಹರಿತ ಕೋಂ ಕಮಲಾಕರರೆಡ್ಡಿ   30 ವರ್ಷ ವಕ್ಕಲಿಗರು   ಗೃಹಣಿ      ವಾಸ: ಗೌನಿಚೆರುವಪಲ್ಲಿ   ಗ್ರಾಮ,ಚಿಂತಾಮಣಿ  ತಾಲ್ಲೂಕು   ಮೊ ನಂ:  9945370255  ರವರು   ನೀಡಿದ   ಹೇಳಿಕೆಯನ್ನು ಪಡೆದುಕೊಂಡು ಬಂದು  ಹಾಜರುಪಡಿಸಿದ ಹೇಳಿಕೆಯ  ಸಾರಾಂಶವೇನೆಂದರೆ, ನಾನು ಮತ್ತು  ನನ್ನ ಗಂಡನಾದ ಕಮಲಾಕರರೆಡ್ಡಿ  ಎಂಬುವರು ಈ ಮೆಲ್ಕಂಡ ವಿಳಾಸದಲ್ಲಿ ಜಿರಾಯ್ತಿಂದ  ಜೀವನ ಮಾಡಿಕೊಂಡಿದ್ದು  ದಿನಾಂಕ: 07/08/2020  ರಂದು ಯಾರೋ ನಮ್ಮ ಜಮೀನಿನಲ್ಲಿ ತೊಗರಿ ಬೆಳೆಯನ್ನು ಕುರಿಗಳನ್ನು ಬಿಟ್ಟು ನಾಶಪಡಿಸಿರುತ್ತಾರೆ ನಾನು ಈ ದಿನ  ಸಾಯಾಂಕಾಲ  ನಮ್ಮ ಮನೆಯ ಬಳಿ ಬೈದು ಕೊಳ್ಳುತ್ತಿದ್ದಾಗ ನಮ್ಮ ಭಾವನಾದ ಶಿವಶಂಕರೆಡ್ಡಿ ಎಂಬುವರ ಮಗ ಕೇಳಿಸಿಕೊಂಡು ನಮ್ಮ ಭಾವನಿಗೆ ತಿಳಿಸಿದ್ದು ಎಲ್ಲಿಯೇ ಹೋಗಿದ್ದ ನಮ್ಮ ಭಾವ ಶಿವಶಂಕರರೆಡ್ಡಿ ಎಂಬುವರು  ರಾತ್ರಿ 11-00 ಗಂಟೆಯಲ್ಲಿ ಬಂದು ನಮ್ಮ ಮನೆಯೊಳಗೆ ನುಗ್ಗಿ ಏಕಾಏಕಿ ಯಾಗಿ   ನನ್ನನ್ನು ಲೋಪರ್ ಮುಂಡೆ ನಿನ್ನನ್ನು ಇವತ್ತು ಬಿಡುವುದಿಲ್ಲ ಎಂದು ಹೇಳಿ ಕೈಯಲ್ಲಿದ್ದ ಕಬ್ಬಿಣದ ರಾಡ್ ನಿಂದ ನನ್ನ ತಲೆಯ ಬಲಭಾಗಕ್ಕೆ  ಹೊಡೆದು ರಕ್ತಗಾಯಪಡಿಸಿರುತ್ತಾರೆ. ಅಷ್ಟರಲ್ಲಿ ಅಡ್ಡ ಬಂದ ನನ್ನ ಗಂಡನಿಗೆ ಅಮರಮ್ಮ ಕೋಂ ಶಿವಶಂಕರರೆಡ್ಡಿ ಎಂಬುವರು ನೀಲಗಿರಿ ದೊಣ್ಣೆಯಿಂದ ನನ್ನ ಗಂಡನ ಎಡಗಾಲಿಗೆ ಹೊಡೆದು ಮೂಗೇಟು ಉಂಟುಮಾಡಿ ನಿಮ್ಮನ್ನು ಇವತ್ತು ಬಿಡುವುದಿಲ್ಲ ಸಾಯಿಸುತ್ತೇನೆ. ಎಂದು ಕೈಗಳಿಂದ ಗುದ್ದಿ ಕಾಲಿನಿಂದ ಒದ್ದೆಯುತ್ತಿದ್ದಾಗ ನಮ್ಮ  ಗ್ರಾಮದ ರಾಮರೆಡ್ಡಿ ಬಿನ್ ಸುಬ್ಬರೆಡ್ಡಿ ಮತ್ತು ಬಾಸ್ಕರ್ ಬಿನ್ ಲೇಟ್  ಚಿಕ್ಕವೆಂಕಟರವಣಪ್ಪ ಬುವರ ಅವರಿಂದ ಬಿಡಿಸಿ ನಮ್ಮನ್ನು ಯಾವುದೇ ವಾಹನದಲ್ಲಿ  ಚಿಂತಾಮಣಿ  ಸರ್ಕಾರಿ  ಆಸ್ಪತ್ರೆಗೆ ಕಳುಹಿಸಿರುತ್ತಾರೆ ನಮ್ಮ ಮೇಲೆ ವಿನಾಕಾರಣ ಗಲಾಟೆ  ಮಾಡಿ  ನಮಗೆ ಹೊಡೆದಿರುವವರ  ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ಕೊಡಬೇಕುಂದು ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.109/2020 ಕಲಂ. 379 ಐ.ಪಿ.ಸಿ :-

          ದಿ:09.08.2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಅಭಿಶೇಕ್ ಕೆ ಆರ್ ಬಿನ್ ರಾಮಕೃಷ್ಣಪ್ಪರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ: 18/02/2019 ರಂದು KA-40, ED-7943 ನೊಂದಣಿ ಸಂಖ್ಯೆಯ ಕಪ್ಪು ಬಣ್ಣದ ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನವನ್ನು ಚಿಕ್ಕಬಳ್ಳಾಪುರ ನಗರದ ಬಜಾಜ್ ಷೋ ರೂಂ ನಲ್ಲಿ ಕೊಂಡುಕೊಂಡಿದ್ದು, ದಿನಾಂಕ: 09/07/2020 ರಂದು ಸಂಜೆ ಸುಮಾರು 5-00 ಗಂಟೆಗೆ ತನ್ನ ಸ್ನೇಹಿತ ಕೆ.ಎಲ್. ನವೀನ್ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರೋಣ ಬಾ ಎಂದು ಕರೆದಿದ್ದು, ನವೀನ್ ಬಳಿ ದ್ವಿಚಕ್ರ ವಾಹನ ಇದ್ದುದರಿಂದ ಎರಡೂ ದ್ವಿಚಕ್ರ ವಾಹನದಲ್ಲಿ ಏಕೆ ಹೋಗುವುದು ಎಂದು ತಮ್ಮ ಗ್ರಾಮದಿಂದ ವಡ್ಡರೇ ಪಾಳ್ಯ ಗೇಟ್ ಬಳಿ ಬಂದು ಆವಲಗುರ್ಕಿ ಗ್ರಾಮದ ಮುನಿಯಪ್ಪರವರ ದ್ರಾಕ್ಷಿ ತೋಟದ ಬಳಿ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ತಾನು ನವೀನ ಇಬ್ಬರೂ ಚಿಕ್ಕಬಳ್ಳಾಪುರ ಟೌನ್ ಗೆ ಬಂದು ನವೀನನ ಕೆಲಸ ಮುಗಿದ ಮೇಲೆ ವಾಪಸ್ಸು ಸಂಜೆ ಸುಮಾರು 6-30 ಗಂಟೆಗೆ ವಡ್ಡರೇ ಪಾಳ್ಯ ಗೇಟ್  ಬಳಿ ಬರುವಷ್ಟರಲ್ಲಿ ತಾನು ನಿಲ್ಲಿಸಿದ್ದ ತನ್ನ KA-40, ED-7943 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ಇರಲಿಲ್ಲವೆಂದು ತಾನು ಗಾಬರಿಯಿಂದ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲವೆಂದು ಯಾರೋ ಕಳ್ಳರು ಸಂಜೆ 5-00 ರಿಂದ 6-30 ಗಂಟೆ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಾನು ದ್ವಿಚಕ್ರ ವಾಹನವನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರನ್ನು ನೀಡುತ್ತಿದ್ದು, ತನ್ನ KA-40, ED-7943 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ದ್ವಿ ಚಕ್ರ ವಾಹನವನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.31/2020 ಕಲಂ. 279,337 ಐ.ಪಿ.ಸಿ & 134 ಐ.ಎಂ.ವಿ ಆಕ್ಟ್ :-

          ದಿನಾಂಕ:-09/08/2020 ರಂದು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ. ಮುನೀಂದ್ರ ಕೆ.ಎಂ ಬಿನ್ ಲೇಟ್ ದೊಡ್ಡವೆಂಕಟಪ್ಪ 40 ವರ್ಷ, ವಕ್ಕಲಿಗರು, ಜಿರಾಯ್ತಿ, ಚಿಕ್ಕಕಾಡಿಗೇನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೆ ದಿನಾಂಕ:-09/08/2020 ರಂದು ತನ್ನ KA02EB3836ರ ಬಜಾಜ್ ಚೇತಕ್ ದ್ವಿಚಕ್ರ ವಾಹನದಲ್ಲಿ ತಮ್ಮ ಗ್ರಾಮದಿಂದ ಚೊಕ್ಕಹಳ್ಳಿ ಗ್ರಾಮದ ಮೂಲಕ ಚಿಕ್ಕಬಳ್ಳಾಪುರ ನಗರದ ಕೆವಿ ಕ್ಯಾಂಪಸ್ ಬಳಿ ಇರುವ ಹೂವಿನ ಮಾರುಕಟ್ಟೆಗೆ ಹೋಗಿ ಹೂವನ್ನು ಮಾರಿಕೊಂಡು ಬರಲು ಬೆಳಿಗ್ಗೆ 8:00 ಗಂಟೆಯ ಸಮಯದಲ್ಲಿ ಚಿಕ್ಕಬಳ್ಳಾಪುರ – ಬೆಂಗಳೂರು ಎನ್.ಹೆಚ್-44 ಹೈವೇ ರಸ್ತೆಯ ಚೋಕ್ಕಹಳ್ಳಿ ಯೂ ಟರ್ನ ಬಳಿ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ರಸ್ತೆ ಕಡೆಯಿಂದ ಬಂದ KA03JX0607 ರ ದ್ವಿ ಚಕ್ರವಾಹನದ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೋಡೆಸಿದ ಪರಿಣಾಮ ವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ಎರಡೂ ವಾಹನಗಳು ಜಕಂಗೊಂಡು ತನಗೆ ಹಣೆಗೆ, ತಲೆಗೆ, ಎಡಭುಜ, ಎಡಪಾದ, ಮೋಣ ಕೈಗೆ ರಕ್ತಗಾಯಗಳಾಗಿದ್ದು, ಸದರಿ ಅಪಘಾತ ಪಡೆಸಿದ ದ್ವಿಚಕ್ರ ವಾಹನದ ಸವಾರ ಹಾಗೂ ಹಿಂಬದಿಯ ಸವಾರಳಿಗೂ ಸಹ ಗಾಯಗಳಾಗಿದ್ದು, ಸದರಿ ಸವಾರ ಹಾಗೂ ಹಿಂಬದಿ ಸವಾರಳು ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು, ಅಲ್ಲಿನ ಸ್ಥಳೀಯರು ತನ್ನನ್ನು ಉಪಚರಿಸಿ ಅಲ್ಲಿಗೆ ಬಂದ ತಮ್ಮ ಅಣ್ಣ ಶ್ರೀ ಪಿ.ಕೃಷ್ಣಪ್ಪ ಬಿನ್ ಲೇಟ್ ಚಿಕ್ಕಪಿಳ್ಳಪ್ಪ 65 ವರ್ಷ, ಚಿಕ್ಕಕಾಡಿಗೇನಹಳ್ಳಿ ರವರು ತನ್ನನ್ನು ಅಲ್ಲಿಯೇ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಸರ್ಕಾರಿ  ಆಸ್ಪತ್ರೆಗೆ ಸೇರಿಸಿದ್ದು ಸದರಿ ಅಪಘಾತ ಪಡೆಸಿದ KA03JX0607 ರ  ದ್ವಿಚಕ ವಾಹನದ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ಹೇಳಿಕೆಯ ದೂರಿನ ಮೇರೆಗೆ ದಿನಾಂಕ:-09/08/2020 ರಂದು ಬೆಳಿಗ್ಗೆ 11:15 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.200/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 09/08/2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯ ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಪಿಸಿ 205 ರವರು ಈ ಪ್ರತಿನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ 21-06-2020 ರಂದು ರಾತ್ರಿ 9-00  ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  05 ಜನ ಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ ಇವರಿಗೆ ದಿನಾಂಕ: 21/06/2020 ರಂದು ಸಂಜೆ 7-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ವೈಚಕೂರ್ಲಹಳ್ಳಿ  ಗ್ರಾಮದ ಬಳಿ ಇರುವ ಅಶ್ವತ್ಥಕಟ್ಟೆಯ ಬಳಿ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ತಾನು ಮತ್ತು  ಸಿಬ್ಬಂದಿಯವರಾದ ಪಿ.ಸಿ-33 ಕೃಷ್ಣ,  ಪಿ.ಸಿ-208 ತಿಪ್ಪೇಸ್ವಾಮಿ,  ಪಿಸಿ – 317 ಮಧುಕುಮಾರ್,  ಪಿ, ಪಿ.ಸಿ-518 ಆನಂದ , ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ವೈಚಕೂರ್ಲಹಳ್ಳಿ ಗ್ರಾಮ ರಾತ್ರಿ 7-30  ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದಲ್ಲಿ 05 ಜನರು ಗುಂಪಾಗಿ ಕುಳಿತುಕೊಂಡು ಟಾರ್ಚ್ ಬೆಳಕಿನಲ್ಲಿ  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು   ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1) ಕೃಷ್ಣಪ್ಪ ಬಿನ್ ನಲ್ಲ ನರಸಪ್ಪ, 55  ವರ್ಷ, ನಾಯಕ,  ಜನಾಂಗ, ವೈಚಕೂರ್ಲಹಳ್ಳಿ ಗ್ರಾಮ , ಗೌರೀಬಿದನೂರು ತಾಲ್ಲೂಕು  , 2) ಬಸವರಾಜು ಬಿನ್ ಯಳೆಯಪ್ಪ,  41 ವರ್ಷ, ವಕ್ಕಲಿಗರು, ಆಟೋ ಚಾಲಕ,  ವಾಸ ವೈಚಕೂರ್ಲಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು , 3)  ರಾಘವೇಂದ್ರ ಬಿನ್ ವೆಂಕಟಪ್ಪ,  36 ವರ್ಷ, ಕುರುಬ  ಜನಾಂಗ, ಜಿರಾಯ್ತಿ, ,ವಾಸ  ವೈಚಕೂರ್ಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. 4)   ನರಸಿಂಹ ರೆಡ್ಡಿ ಬಿನ್ ಅಶ್ವತ್ಥಪ್ಪ, 40 ವರ್ಷ, ವಕ್ಕಲಿಗರು, ಮೆಕಾನಿಕ್ ಕೆಲಸ, ವಾಸ  ವೈಚಕೂರ್ಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. 5) ಸಜ್ಜಪ್ಪ ಬಿನ್ ರಂಗಪ್ಪ, 47 ವರ್ಷ, ಪ್ಪಾರರು, ಜಿರಾಯ್ತಿ, ವಾಸ  ವೈಚಕೂರ್ಲಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು, ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  2270/-ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  ರಾತ್ರಿ 7-30  ಗಂಟೆಯಿಂದ 8-30  ಗಂಟೆಯವರೆಗೆ ಟಾರ್ಚ್ ಬೆಳಕಿನಲ್ಲಿ  ಪಂಚನಾಮೆ  ಕ್ರಮ ಜರುಗಿಸಿ 2270/-ರೂ ಹಣ ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ ರಾತ್ರಿ 9-00   ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ  ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.201/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ 09/08/2020 ರಂದು ಬೆಳಗ್ಗೆ 10-30 ಗಂಟೆಯಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯ ಕರ್ತವ್ಯ ಪಿಸಿ 205 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ 05-07-2020 ರಂದು ಬೆಳಿಗ್ಗೆ 11-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎನ್,ಮೋಹನ್  ಪಿ.ಎಸ್.ಐ. ರವರು ಠಾಣೆಗೆ ಹಾಜರಾಗಿ  ಆಸಾಮಿ, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 05-07-2020 ರಂದು  09-30 ಗಂಟೆಯಲ್ಲಿ ನಾನು  ಹೊಸೂರು ಹೊರಠಾಣೆ ವ್ಯಾಪ್ತಿಯಲ್ಲಿ  ಹೆಚ್.ಸಿ. 10 ಶ್ರೀರಾಮಯ್ಯ, ಪಿ.ಸಿ. 33 ಕೃಷ್ಣಪ್ಪರವರೊಂದಿಗೆ ಲಾಕ್ ಡೌನ್ ಪ್ರಯುಕ್ತ ಗಸ್ತು ಕರ್ತವ್ಯವನ್ನು ಮಾಡುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ಹೊಸೂರು ಗ್ರಾಮದಲ್ಲಿ ಹೊಸೂರು- ಹಕ್ಕಿ-ಪಿಕ್ಕಿ ಕಾಲೋನಿ ರಸ್ತೆಯಲ್ಲಿರುವ ಸರ್ಕಾರಿ ಪ್ರೈಮರಿ ಸ್ಕೂಲ್ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂಕಿ – ಸಂಖ್ಯೆಗಳಿಂದ  ಅಕ್ರಮ ಮಟ್ಕಾ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ವರ್ತಮಾನದ ಮೇರೆಗೆ  ಪಂಚರನ್ನು ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ. 10 ಶ್ರೀರಾಮಯ್ಯ, ಪಿ.ಸಿ. 33 ಕೃಷ್ಣಪ್ಪರವರೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ.-281 ರಲ್ಲಿ ಗೌರಿಬಿದನೂರು ತಾಲ್ಲೂಕು ಹೊಸೂರು ಗ್ರಾಮದಲ್ಲಿ ಹೊಸೂರು- ಹಕ್ಕಿ-ಪಿಕ್ಕಿ ಕಾಲೋನಿ ರಸ್ತೆಯಲ್ಲಿರುವ ಸರ್ಕಾರಿ ಪ್ರೈಮರಿ ಸ್ಕೂಲ್ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ  ಹೋಗಿ  ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಮರೆಯಲ್ಲಿ  ನಿಂತು  ನೋಡಲಾಗಿ  ಗೌರಿಬಿದನೂರು ತಾಲ್ಲೂಕು ಹೊಸೂರು ಗ್ರಾಮದಲ್ಲಿ ಹೊಸೂರು- ಹಕ್ಕಿ-ಪಿಕ್ಕಿ ಕಾಲೋನಿ ರಸ್ತೆಯಲ್ಲಿರುವ ಸರ್ಕಾರಿ ಪ್ರೈಮರಿ ಸ್ಕೂಲ್ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ  ಯಾರೋ ಇಬ್ಬರು ಆಸಾಮಿಗಳು ನಿಂತಿದ್ದು ಒಬ್ಬ ಆಸಾಮಿಯು ತನ್ನ ಕೈಯಲ್ಲಿ ಒಂದು ಚೀಟಿಯಲ್ಲಿ  ಬರೆಯುತ್ತಾ, 1 ರೂ.ಗೆ 70 ರೂಪಾಯಿಗಳು ಕೊಡುತ್ತೇನೆ, ಹಣವನ್ನು ಕಟ್ಟಿ ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಕೂಗುತ್ತಿದ್ದು ಇನ್ನೊಬ್ಬ ಅಂಕಿಗಳನ್ನು ಬರೆಯಿಸುತ್ತಿದ್ದು ಸದರಿ ಆಸಾಮಿಗಳು ಅಕ್ರಮ ಮಟ್ಕಾ ಜೂಜಾಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ  ದಾಳಿ ಮಾಡಿ  ಆಸಾಮಿಗಳನ್ನು ಹಿಡಿದುಕೊಂಡು ಬರೆಯುತ್ತಿದ್ದವನ ಹೆಸರು ವಿಳಾಸ ಕೇಳಲಾಗಿ 1) ನರಸಿಂಹ ಮೂರ್ತಿ @ ಟೈಲ್ಸ್ ಮೂರ್ತಿ ಬಿನ್ ಲೇಟ್ ನರಸಿಂಹಪ್ಪ, 40 ವರ್ಷ, ಆದಿ ದ್ರಾವಿಡ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ  ಅಂಬೇಡ್ಕರ್  ಕಾಲೋನಿ, ಹೊಸೂರು ಗ್ರಾಮ ,ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಆಸಾಮಿಯ ಎಡಗೈಯಲ್ಲಿ ಇದ್ದ ಚೀಟಿಯನ್ನು ನೋಡಲಾಗಿ  ಅಂಕಿ- ಸಂಖ್ಯೆಗಳನ್ನು ಬರೆದಿದ್ದು ಆಸಾಮಿಯು ಮಟ್ಕಾ ಜೂಜಾಟವನ್ನು ಆಡುತ್ತಿರುವುದಾಗಿ ತಿಳಿಸಿದ್ದು, ಆಸಾಮಿಯ ಬಳಿ ಪಣಕ್ಕಿಟ್ಟಿದ್ದ ಮತ್ತು ಸಾರ್ವಜನಿಕರು ಕಟ್ಟಿದ್ದ  ಹಣವನ್ನು ಎಣಿಸಲಾಗಿ 630/- ರೂ.ಗಳಿರುತ್ತೆ. ಇನ್ನೊಬ್ಬನ ಹೆಸರು ಕೇಳಲಾಗಿ ತನ್ನ ಹೆಸರು ವೆಂಕಟೇಶ ಬಿನ್ ಲೇಟ್ ವೆಂಕಟರೋಣಪ್ಪ, 45 ವರ್ಷ, ಆದಿ ಕರ್ನಾಟಕ, ಡ್ರೈವರ್ ಕೆಲಸ, ವಾಸ  ಮಹೇಶ್ವರಮ್ಮ ದೇವಸ್ಥಾನ ರಸ್ತೆ, ಅಂಬೇಡ್ಕರ್ ಕಾಲೋನಿ, ಹೊಸೂರು ಗ್ರಾಮ, ಎಂದು ತಿಳಿಸಿದನು. ಆಸಾಮಿಗಳಿಂದ ಪಣಕ್ಕಿಟ್ಟಿದ್ದ 630/- ರೂ.ನಗದು ಹಣ, ಒಂದು ಮಟ್ಕಾ ಚೀಟಿಯನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಪಂಚನಾಮೆಯನ್ನು 10-00 ಗಂಟೆಯಿಂದ 11-00 ಗಂಟೆಯವರೆಗೆ ಜರುಗಿಸಿದ್ದು ಆಸಾಮಿಗಳು, ಮಾಲು ಮತ್ತು ಪಂಚನಾಮೆಯೊಂದಿಗೆ 11-45 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು ಆರೋಪಿ, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆಸಾಮಿಗಳ ವಿರುದ್ದ ಕಲಂ 78(1)(3) ಕೆ.ಪಿ.ಆಕ್ಟ್ ರೀತ್ಯಾ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.202/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ:09/08/2020 ರಂದು ಬೆಳಿಗ್ಗೆ 11;35 ಗಂಟೆಗೆ ಘನ ನ್ಯಾಯಾಲಯದ  ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಸಿಬ್ಬಂದಿ ಪಿಸಿ-205 ರವರು ಈ ಪ್ರತಿಯನ್ನು ನೀಡಿದ್ದು,ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.ದಿನಾಂಕ:13/07/2020 ರಂದು ಸಂಜೆ 6;00 ಗಂಟೆ ಯಲ್ಲಿ ನಾನು ನಗರಗೆರೆ ಹೊರಠಾಣಾ ವ್ಯಾಪ್ತಿಯಲ್ಲಿ ಹೆಚ್ ಸಿ-20 ಶ್ರೀನಿವಾಸರೆರಡ್ಡಿ,ಪಿಸಿ-512 ರಾಜಶೇಖರ್,ಪಿಸಿ-518 ಆನಂದ್ ,ಪಿಸಿ-426 ಲೋಹಿತ್,ಪಿಸಿ-455 ಅಶ್ವತ್ಥ್ ರವರರೊಂದಿಗೆ ಗಸ್ತು ಕರ್ತವ್ಯ ಮಾಡುತ್ತಿದ್ದಾಗ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ನರಸಾಪುರ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಆಸಾಮಿಗಳು ಅಕ್ರಮ ಅಂದರ್-ಬಾಹರ್ ಜೂಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ಈ ಮೇಲ್ಕಂಡ ಸಿಬ್ಬಂದಿಯೊಂದಿಗೆ ಸರ್ಕಾರಿ ವಾಹನ ಸಂಖ್ಯೆ ಕೆಎ-40 ಜಿ-281 ರಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಐದು ಜನ ಆಸಾಮಿಗಳು ಗುಂಪಾಗಿ ಕುಳಿತುಕೊಂಡಿದ್ದು,ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದರೂ,ಆಸಾಮಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಕ್ರಮವಾಗಿ ಜೂಜಾಟವನ್ನು ಆಡುತ್ತಿರುವುದು ಖಚಿತಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸಿಬ್ದಂದಿಯವರು ಆಸಾಮಿಗಳನ್ನು ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ 1) ನಾರಾಯಣಪ್ಪ ಬಿನ್ ರಾಮಪ್ಪ 32 ವರ್ಷ,ನಾಯಕರು,ಕೂಲಿಕೆಲಸ,ಉಚ್ಚೋದನಹಳ್ಳಿ ಗ್ರಾಮ,ಗೌರಿಬಿದನೂರು ತಾಲ್ಲೂಕು.2) ಸಿದ್ದಲಿಂಗಪ್ಪ ಬಿನ್ ಹನುಮಪ್ಪ,60 ವರ್ಷ ,ಭೋವಿ ಜನಾಂಗ,ಕೂಲಿಕೆಲಸ,ನರಸಾಪುರ ಗ್ರಾಮ,ಗೌರಿಬಿದನೂರು ತಾಲ್ಲೂಕು,3) ರಮೇಶ ಬಿನ್ ಅಶ್ವತ್ಥಪ್ಪ 48 ವರ್ಷ,ಗೊಲ್ಲರು,ಜಿರಾಯ್ತಿ,ನರಸಾಪುರ ಗ್ರಾಮ ಗೌರಿಬಿದನೂರು ತಾಲ್ಲೂಕು ,4) ನಾರಾಯಣಸ್ವಾಮಿ ಬಿನ್ ಅಕ್ಕಲಪ್ಪ 36 ವರ್ಷ,ಭೋವಿ ಜನಾಂಗ,ಜಿರಾಯ್ತಿ,ನರಸಾಪುರ ಗ್ರಾಮ ಗೌರಿಬಿದನೂರು ತಾಲ್ಲೂಕು.5) ಅಶ್ವತ್ಥಪ್ಪ ಬಿನ್ ಗಂಗಪ್ಪ 45 ವರ್ಷ,ನಾಯಕರು ,ಜಿರಾಯ್ತಿ,ನರಸಾಪುರ,ಗೌರಿಬಿದನೂನರು ತಾಲ್ಲೂಕು. ಎಂದು ತಿಳಿಸಿದರು ,ಸ್ಥಳದಲ್ಲಿ ಪಣಕ್ಕಿಟ್ಟಿದ್ದ 22,200/- ನಗದು ಹಣ ,52 ಇಸ್ಫೀಟ್ ಎಲೆಗಳನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡು ಪಂಚನಾಮೆಯನ್ನು 18:30  ಗಂಟೆಯಿಂದ 19:30 ಗಂಟೆಯವರೆಗೆ ಸರ್ಕಾರಿ ವಾಹನದ ಲೈಟ್ ಬೆಳಕಿನಲ್ಲಿ ಜರುಗಿಸಿದ್ದು,5 ಜನ ಆಸಾಮಿಗಳು,ಮಾಲು ಮತ್ತು ಪಂಚನಾಮೆಯೊಂದಿಗೆ 20:00 ಗಂಟೆಗೆ ಠಾಣೆಗೆ ವಾಪಸ್ಸು ಬಂದಿದ್ದು,ಆರೋಪಿಗಳು ಪಂಚನಾಮೆ ಮತ್ತು ಮಾಲನ್ನು ಸಹ ನೀಡುತ್ತಿದ್ದು,ಆಸಾಮಿಗಳ ವಿರುದ್ದ ಕಲಂ:87 ಕೆಪಿ ಆಕ್ಟ್ ರೀತ್ಯಾ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.182/2020 ಕಲಂ. 32,34 ಕೆ.ಇ ಆಕ್ಟ್:-

          ದಿನಾಂಕ:08/08/2020 ರಂದು ಸಂಜೆ 5-30 ಗಂಟೆಗೆ ಮಾನ್ಯ ರವಿಶಂಕರ್ ಕೆ ಪೊಲೀಸ್ ಉಪಾಧಿಕ್ಷಕರು ಚಿಕ್ಕಬಳ್ಳಾಪುರ ಉಪ ವಿಭಾಗ ರವರು ಮಾಲು ಮಹಜರ್ ಮತ್ತು ಆರೋಪಿತಳೊಂದಿಗೆ  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ:08/08/2020 ರಂದು ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಗ್ರಾಮದ ಕಡೆ ಮದ್ಯಾಹ್ನ 3-00 ಗಂಟೆಯ ಸಮಯದಲ್ಲಿ ಗಸ್ತಿನಲ್ಲಿ ಇದ್ದಾಗ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಮಂಚೇನಹಳ್ಳಿ ಬಸ್ ನಿಲ್ದಾಣದಲ್ಲಿದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು ತಮ್ಮ ಕಛೇರಿಯ ಸಿಬ್ಬಂದಿಯಾದ ಹೆಚ್.ಸಿ.205 ರಮೇಶ್, ಪಿ.ಸಿ.286 ಗೌತಮ್ ಹಾಗೂ ಜೀಪ್ ಚಾಲಕ ಎ.ಪಿ.ಸಿ. 119 ಅಶೋಕ್ ರವರು ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಬಂದು ಮಹಿಳಾ ಸಿಬ್ಬಂದಿಯಾದ ಮ.ಪಿ.ಸಿ.248 ಶ್ವೇತಾ ರವರನ್ನು ಕರೆದುಕೊಂಡು ನಾವು ಮತ್ತು ಪಂಚಾಯ್ತಿದಾರರು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40ಜಿ-1555 ರಲ್ಲಿ ಬಂದ ಬಾತ್ಮಿಯಂತೆ ಮಂಚೇನಹಳ್ಳಿ ಗ್ರಾಮದ ಕೆಳಗಿನಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಇರುವ ಶ್ರೀಮತಿ ಸುನೀತಾ ಕೊಂ ನರಸಿಂಹಮೂರ್ತಿ, 45 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ ವಾಸ ಕೆಳಗಿನಪೇಟೆ, ಮಂಚೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರ ಬಾಬತ್ತು ಚಿಲ್ಲರೆ ಅಂಗಡಿಯಲ್ಲಿ ಹೋಗಿ ದಾಳಿ ಮಾಡಲಾಗಿ ಆರೋಪಿತೆ ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯಲ್ಲಿ ದಾಸ್ತಾನು ಮಾಡಿಕೊಂಡಿದ್ದ ಮದ್ಯದ ಪಾಕೇಟ್ ಗಳನ್ನು 1) 90ML Haywards Cheers Wisky 38 Tetra Pockets 2) 90 ML Original Choice Whisky 13 Tetra ಪಾಕೇಟ್ ಗಳು ಇರುತ್ತೆ. ಒಟ್ಟು ಮಧ್ಯ 4.590ML ನಷ್ಟಿದ್ದು, ಇದರ ಬೆಲೆ ಒಟ್ಟು 1750/- ರೂಪಾಯಿಗಳಾಗಿರುತ್ತೆ. ಸದರಿ ಮಾಲುಗಳನ್ನು ಮುಂದಿನ ಕ್ರಮಕ್ಕೆ ಪಂಚನಾಮೆಯ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಆರೋಪಿತಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಹಿಳಾ ಸಿಬ್ಬಂದಿಯೊಂದಿಗೆ ವಶಕ್ಕೆ ಪಡೆದುಕೊಂಡು ಬಂದು ಅಮಾನತ್ತು ಪಡಿಸಿಕೊಂಡಿರುವ ಮಾಲುಗಳನ್ನು ಮತ್ತು ಆರೋಪಿತೆ ಶ್ರೀಮತಿ ಸುನೀತರವರನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿ ನೀಡಿದ ದೂರು.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.54/2020 ಕಲಂ. 323,504 ಐ.ಪಿ.ಸಿ:-

          ದಿನಾಂಕ:08/08/2020 ರಂದು ಬೆಳಿಗ್ಗೆ 10:20 ಗಂಟೆಯಲ್ಲಿ ಸರ್ಕಾರಿ ಆಸ್ಪತ್ರೆ ಚಿಕ್ಕಬಳ್ಳಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸುರೇಶ್ ಬಿನ್ ಲೇಟ್ ಮುನಿಸ್ವಾಮಿ, 28 ವರ್ಷ, ಉಪ್ಪಾರ ಬಲಜಿಗರು, ಕೂಲಿ ಕೆಲಸ, ವಾಸ: ಕಂದವಾರ, ಚಿಕ್ಕಬಳ್ಳಾಪುರ ನಗರ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ದಿನಾಂಕ:07/08/2 020 ರಂದು ರಾತ್ರಿ ಸುಮಾರು 7:00 ಗಂಟೆಯಲ್ಲಿ ತಾನು ಮತ್ತು ತಮ್ಮೂರಿನ ತನ್ನ ಸ್ನೇಹಿತ ರಂಜಿತ್ ಬಿನ ರಾಮಾಂಜಿ, ಬಲಜಿಗರು ಇಬ್ಬರು ಸೊಲಾಲಪ್ಪದಿನ್ನೆಯ ಮಂಜುನಾಥ ವೈನ್ಸ್ನಲ್ಲಿ ಪುಲ್ ಬಾಟಲ್ ವಿಸ್ಕಿ, ನೀರು ಇತ್ಯಾದಿ ತೆಗೆದುಕೊಂಡು ಜಡಲತಿಮ್ಮನಹಳ್ಳಿ ರೈಲ್ವೆ ಲೈನ್ ಬದಿ ಕುಳಿತು ಇಬ್ಬರು ಪುಲ್ಆಗಿ ಮದ್ಯಪಾನ ಮಾಡುತ್ತಿದೇವು ಆಗ ರಂಜಿತ್ ರವರ ಅಣ್ಣ ಶ್ರವಣ್ ರವರು ಹುಡುಕಿಕೊಂಡು ತಮ್ಮ ಬಳಿ ಬಂದು ರಾತ್ರಿ 8:30 ಗಂಟೆಯಲ್ಲಿ ರಂಜಿತ್ ರವರನ್ನು ಶ್ರವಣ್ ರವರು ಕೈಯಿಂದ 4 ಏಟು ಹಾಕಿ ಈ ವಯಸ್ಸಿಗೆ ಕುಡಿಯುತ್ತಿದ್ದಿಯಾ ಎಂದು ದಂಡಿಸಿದಾಗ ರಂಜಿತ್ ರವರು ಕತ್ತಲಲ್ಲಿ ಓಡಿ ಹೋದನು. ತನಗೆ ಅಮಲು ಜಾಸ್ತಿಯಾಗಿ ಅಲ್ಲೇ ಇದ್ದು ತನ್ನನ್ನು ಕುರಿತು ನಿನ್ನಮ್ಮನೇ ಕೇಯ ನಮ್ಮವನನ್ನು ಕುಡಿಯಲು ಕರೆತಂದು ಕೆಡಿಸುತ್ತಿದ್ದಿಯಾ ಎಂದು ಕಾಲಿನಿಂದ ತನ್ನ ಎಡ ತೊಡೆಗೆ ಒದ್ದನು. ತನಗೆ ಮೊದಲೇ ಎಡಕಾಲು ಶಸ್ತ್ರಚಿಕಿತ್ಸೆಯಾಗಿ ರಾಡ್ ಹಾಕಿದ್ದು ನೋವು ಜಾಸ್ತಿಯಾಗಿ ಬಿದ್ದುಕೊಂಡೇನು. ರಾತ್ರಿಯೆಲ್ಲಾ ತಾನು ಅಲ್ಲೇ ಬಿದ್ದಿದ್ದು ಬೆಳಿಗ್ಗೆ 08/08/2020 ರಂದು ಬೆಳಿಗ್ಗೆ 08:30 ಗಂಟೆಯಲ್ಲಿ ತನ್ನ ತಾಯಿ ಪಾರ್ವತಮ್ಮ, ತಮ್ಮ ಅಕ್ಕ ಸರಸ್ವತಮ್ಮ, ಬಾವ ಮಧು ಮತ್ತು ಮುನಿರಾಜು ಬಿನ್ ಕೃಷ್ಣಪ್ಪ ರವರುಗಳು ಹುಡಿಕಿಕೊಂಡು ಬಂದು ತನ್ನನ್ನು ಪತ್ತೆಮಾಡಿ ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಸೇರಿಸಿರುತ್ತಾರೆ. ಆದ್ದರಿಂದ ತನಗೆ ಹಿಂದೆ ಕಾಲಿನಲ್ಲಿ ಹಾಕಿದ್ದ ರಾಡ್ ಮುರಿದಿರುವುದಾಗಿ ವೈದ್ಯರು ತಿಳಿಸಿದ್ದು ನೋವಿನಿಂದ ನರಳುತ್ತಿದ್ದೇನೆ. ಆದ್ದರಿಂದ ಸದರಿ ಶ್ರವಣ್ ರವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂ:122/2020 ರೀತ್ಯಾ ಪ್ರಕರಣ ದಾಖಲಿಸಿಕೊಂಡು ಈ ಅರ್ಜಿಯಲ್ಲಿರುವ ಅಂಶಗಳು ಅಸಂಜ್ಞೆಯ ಅಪರಾಧ ಆಗಿರುವುದರಿಂದ ಎದರು ಅರ್ಜಿದಾರರ ವಿರುದ್ದ ಕಲಂ: 323, 504 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಘನ ನ್ಯಾಯಾಲಯದಲ್ಲಿ ಅನುಮತಿ ಪಡೆದುಕೊಂಡು ದಿನಾಂಕ:08/08/2020 ರಂದು ಸಂಜೆ 6:30 ಗಂಟೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 380,454 ಐ.ಪಿ.ಸಿ:-

          ದಿನಾಂಕ:09/08/2020 ರಂದು ಮದ್ಯಾಹ್ನ 01-00 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ನೀಡಿದ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:29/07/2020 ನಾನು ಮತ್ತು ನನ್ನ ಹೆಂಡತಿ ಕುರಿಗಳನ್ನು ಮೆಯಿಸಲು ಹೋಗಿದ್ದು ನನ್ನ ಮಗ ಗಂಗಾಧರ ಮನೆಯಲ್ಲಿದ್ದ ಇದೇ ದಿನ ಮದ್ಯಾಹ್ನ 12-10 ಗಂಟೆಯ ಸಮಯದಲ್ಲಿ ನಮ್ಮ ಗ್ರಾಮದ ವಾಸಿ ಹರೀಶ ಬಿನ್ ಗುರ್ರಪ್ಪಗಾರಿ ವೆಂಕಟರವಣಪ್ಪ ರವರು ಮನೆಯ ಬಳಿ ಬಂದು ನನ್ನ ಮಗನಿಗೆ ಎಸ್,ಎಸ್,ಎಲ್,ಸಿ ಪರೀಕ್ಷೆ ಪಲಿತಾಂಶ ಬಂದಿದ್ದು ನಿನ್ನ ಪೋನಿನಲ್ಲಿ ನೆಟ್ ಇದೆಯಾ ಎಂತಾ ಕೇಳಿದ್ದು ನನ್ನ ಮಗ ಇಲ್ಲ ಎಂದು ಹೇಳಿದ ಕಾರಣ ನನ್ನ ಮೊಬೈಲ್ ನಿನ್ನ ಮನೆಯಲ್ಲಿ ಚಾರ್ಜ್ ಗೆ ಹಾಕಿಕೊಳ್ಳುತ್ತೇನೆ, ಎಂದು ಹೇಳಿ ನನ್ನ ಮಗ ಗಂಗಾಧರನ ಕೈಗೆ 30 ರೂಪಾಯಿಗಳನ್ನು ಕೊಟ್ಟು ಅಂಗಡಿಗೆ ಹೋಗಿ ಕಡಲೇಪುರಿ ತೆಗೆದುಕೊಂಡು ಬರುವಂತೆ ಹೇಳಿ ಕಳುಹಿಸಿದ್ದು, ನಂತರ ನನ್ನ ಮಗ ಅಂಗಡಿಗೆ ಹೋಗಿ ಕಡಲೇಪುರಿ ತಂದು ಕೊಟ್ಟಾಗ ನನಗೆ ಬೇಡ ನೀನೇ ತಿಂದುಕೋ ಎಂದು ಹೇಳಿ ಕಳುಹಿಸಿರುತ್ತಾನೆ, ದಿನಾಂಕ:31/07/2020 ರಂದು  ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮನೆಯ ಬೀರುವಿನಲ್ಲಿರುವ ಒಡವೆಗಳನ್ನು ಪೂಜೆಗೆ ಇಡಲು ತೆರೆದಾಗ ಬೀರುವಿನಲ್ಲಿ ಒಡವೆಗಳು ಕಾಣಿಸಿರುವುದಿಲ್ಲ ನನ್ನ ಮಗನನ್ನು ವಿಚಾರಿಸಿದಾಗ ಹರೀಶ ನಮ್ಮ ಮನಗೆ ಬಂದು ಹೋಗಿರುವ ವಿಚಾರವನ್ನು ತಿಳಿಸಿರುತ್ತಾನೆ, ಬೀರುವಿನಲ್ಲಿದ್ದ ಬಂಗಾರದ ನಕ್ಲೆಸ್, ಕೊರಳ ಚೈನ್ ಉಂಗುರ, ಮಾಟಿಗಳು, ಮತ್ತು ಓಲೆ, ಮುಂತಾದವುಗಳು ಸೇರಿ ಒಟ್ಟು ಸುಮಾರು 80 ಗ್ರಾಂ ತೂಕದ ಚಿನ್ನಾಭರಣಗಳು ಕಳುವಾಗಿರುತ್ತೆ, ಸದರಿ ಚಿನ್ನಾಭರಣಗಳ ಅಂದಾಜು ಬೆಲೆ ಸುಮಾರು 280000/-(ಎರಡು ಲಕ್ಷ ಎಂಭತ್ತು ಸಾವಿರ ರೂ ಆಗಿರುತ್ತೆ,) ಒಡವೆಗಳು ಕಳ್ಳತನ ಆಗಿರುವ ವಿಚಾರದಲ್ಲಿ ಹರೀಶನ ಮೇಲೆ ಅನುಮಾನವಿರುತ್ತದೆ, ನಾವು ನಮ್ಮ ಮನೆಯಲ್ಲಿ ಹುಡುಕಾಡುತ್ತಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು ಮೇಲ್ಕಂಡ ಹರೀಶನ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಕಳುವಾಗಿರುವ ಚಿನ್ನಾಭರಣಗಳನ್ನು ಪತ್ತೆಮಾಡಿಕೊಡಲು ನೀಡಿದ ದೂರಿನ ಮೇರೆಗೆ ಠಾಣಾ ಮೊಸಂ 49/2020 ಕಲಂ 454,380 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ,

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.216/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 08-08-2020 ರಂದು ಸಂಜೆ 5.00 ಗಂಟೆ ಸಮಯದಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಾರಪ್ಪನಹಳ್ಳಿ ಗ್ರಾಮದ ಸಮೀಪದ ಸಕರ್ಾರಿ ಜಾಗದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸದರಿ ಸ್ಥಳದ ಮೇಲೆ ದಾಳಿ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕಾಗಿ ಕೋರಿ ಮನವಿ ಪತ್ರವನ್ನು ಸಿಪಿಸಿ-90 ರಾಜಕುಮಾರ ರವರ ಮುಖಾಂತರ ಸಲ್ಲಿಸಿಕೊಂಡಿದ್ದು ಸಂಜೆ 5.40 ಗಂಟೆಯಲ್ಲಿ ಅನುಮತಿಯನ್ನು ಘನ ನ್ಯಾಯಾದೀಶರು ಅನುಮತಿಯನ್ನು ನೀಡಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.217/2020 ಕಲಂ. 380,457 ಐ.ಪಿ.ಸಿ:-

          ದಿನಾಂಕ:09-08-2020 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿದಾರರಾದ   ಶ್ರೀ.ನಾಗರಾಜ ಬಿನ್ ಮುನಿನಾರಾಯಣಪ್ಪ, 50 ವರ್ಷ, ಮಡಿವಾಳರು, ವಾಸ ಹಿತ್ತಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು,  ತನ್ನ   ಮಕ್ಕಳು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದು, ತನ್ನ  ಹೆಂಡತಿ ನಾಗರತ್ನಮ್ಮ ರವರು ತನ್ನ ಮಕ್ಕಳೊಂದಿಗೆ ಬೆಂಗಳೂರಿನಲ್ಲಿಯೇ ವಾಸವಾಗಿರುತ್ತಾರೆ.  ದಿನಾಂಕ:12/06/2020 ರಂದು  ಸಂಜೆ ಸುಮಾರು 5-00 ಗಂಟೆಗೆ  ತಾನು ತಮ್ಮ ಮನೆಗೆ ಬೀಗವನ್ನು ಹಾಕಿಕೊಂಡು ಬೆಂಗಳೂರಿನಲ್ಲಿರುವ ತನ್ನ ಮಕ್ಕಳ ಮನೆಗೆ ಹೋಗಿ ತನ್ನ ಮಕ್ಕಳನ್ನು ಮಾತನಾಡಿಸಿಕೊಂಡು  ದಿನಾಂಕ:13/06/2020 ರಂದು ಬೆಳಗಿನ ಸಮಯ 01-45 ಗಂಟೆಗೆ ತಮ್ಮ ಮನೆಯ ಬಳಿ ಬಂದು ನೋಡಲಾಗಿ ತಮ್ಮ ಮನೆಯ ಬಾಗಿಲು ಮುರಿದಿರುವುದು ಕಂಡು ಬಂದಿದ್ದು, ನಂತರ ತಾನು ಗಾಬರಿಗೊಂಡು ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಕಬೋರ್ಡ್ ನಲ್ಲಿನ ಬಾಗಿಲುಗಳು ಮುರಿದಿದ್ದು, ಕಬೋರ್ಡ್ ನಲ್ಲಿ ನೋಡಲಾಗಿ ಸುಮಾರು 82,500 ರೂ ಬೆಲೆ ಬಾಳುವ 16 ಗ್ರಾಂ ತೂಕದ 5 ಬಂಗಾರದ ಉಂಗುರಗಳು ಮತ್ತು 17 ಗ್ರಾಂ ತೂಕದ ಬಂಗಾರದ ಬ್ರಾಸ್ ಲೆಟ್ ಹಾಗೂ 70,000 ರೂ ನಗದು ಹಣ ಇರಲಿಲ್ಲ. (ಒಟ್ಟು 1,52,500 ರೂ.) ದಿನಾಂಕ:12/06/2020 ರಂದು ರಾತ್ರಿ  ತಾನು ಮನೆಯಲ್ಲಿ ಇಲ್ಲದೆ ಇರುವಾಗ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯೊಳಗೆ ಕಬೋರ್ಡ್ ನ ಡ್ರಾ ಗಳನ್ನು ಮುರಿದು ಅದರಲ್ಲಿ ಇಟ್ಟಿದ್ದ ಮೇಲ್ಕಂಡ ಹಣ ಮತ್ತು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ತಾನು ಈ ಕಳ್ಳತನದ ಬಗ್ಗೆ ಬೆಂಗಳೂರಿನಲ್ಲಿರುವ ತನ್ನ ಮಕ್ಕಳು ಹಾಗೂ ತನ್ನ ಹೆಂಡತಿಗೆ ವಿಚಾರ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಈ ಕಳ್ಳತನದ ವಿಚಾರದಲ್ಲಿ ತಮ್ಮ ಗ್ರಾಮದ ವಾಸಿಗಳಾದ 1) ಲಕ್ಷ್ಮೀದೇವಮ್ಮ ಕೋಂ ಮುನಿಕೃಷ್ಣಪ್ಪ, 2) ಸುಬ್ರಮಣಿ ಬಿನ್ ಮುನಿಕೃಷ್ಣಪ್ಪ, 3) ದೇವರಾಜ ಬಿನ್ ದೊಡ್ಡ ಮುನಿಯಪ್ಪ, 4) ರಮೇಶ ಬಿನ್ ಮುನಿಕೃಷ್ಣಪ್ಪ ರವರುಗಳ ಮೇಲೆ ಅನುಮಾನ ಇರುತ್ತೆ. ಆದ್ದರಿಂದ ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರಗೆ  ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.91/2020 ಕಲಂ.406,420 ಐ.ಪಿ.ಸಿ:-

          ದಿನಾಂಕ.08.08.2020 ರಂದು ರಾತ್ರಿ 19.00 ಗಂಟೆಗೆ ಪಿರ್ಯಾದಿ ಶ್ರೀಮತಿ. ನಗೀನಾತಾಜ್ ಕೊಂ ಮಹಬೂಬ್ ಖಾನ್, ರಹಮತ್ ನಗರ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ತಾನು ನನ್ನ ಗಂಡನೊಂದಿಗೆ ರೇಷ್ಮೇ ಕೂಲಿ ಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ಈಗ್ಗೆ ಸುಮಾರು 5-6 ತಿಂಗಳ ಹಿಂದೆ ಶಿಡ್ಲಘಟ್ಟ ಟೌನ್ ಧರ್ಮಸ್ಥಳ ಸಂಘದಲ್ಲಿ ಕೆಲಸ ಮಾಡುತ್ತಿದ್ದ ಶಿಡ್ಲಘಟ್ಟ ಟೌನ್ 1ನೇ ವಾರ್ಡು ಸಿ.ಆರ್. ಲೇಔಟ್ ವಾಸಿ ಶ್ರೀಮತಿ. ಪಹೀಂ ಉನ್ನೀಸಾ ಕೊಂ ಇಮಾಮ್ ಪಾಷ ಎಂಬುವರು ಎಂಬುವರು ನಮ್ಮ ಬಳಿ ಬಂದು ಶಿಡ್ಲಘಟ್ಟದಲ್ಲಿ ಸಿ.ಆರ್. ಲೇಔಟ್ ನಲ್ಲಿ ವಾಸವಾಗಿರುವ ಸರ್ಕಲ್ ಇನ್ಸ್ ಪೆಕ್ಟರ್ ರವರ ಹೆಂಡತಿ ಸವಿತಾ ಎಂಬುವರು ಬಂದಿದ್ದಾರೆ ಅವರು ದಕ್ಷಾಯಣಿ ಮತ್ತು ರತ್ನಮ್ಮ ಎಂಬುವರ ಮುಖಾಂತರ ನನಗೆ ಪರಿಚಯವಾಗಿರುತ್ತಾಳೆ. ದೇವನಹಳ್ಳಿ ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಬಡ್ಡಿ ರಹಿತ 1 ಲಕ್ಷ ರೂ ಸಾಲ ಕೊಡಿಸಿಕೊಡುತ್ತಾಳೆಂದು ನಮ್ಮಲ್ಲಿ ತಿಳಿಸಿರುತ್ತಾಳೆ. ಪ್ರತಿಯೊಬ್ಬರೂ ಅರ್ಜಿ ಖರ್ಚಿಗಾಗಿ 1300/-ರೂ ಕೊಡಬೇಕೆಂದು ಕೇಳಿದಾಗ ನಾನು ನನ್ನ ಸ್ನೇಹಿತರಾದ ಮುಬೀನಾ ತಾಜ್ ಕೊಂ ಸಮೀವುಲ್ಲಾ ಇಲಾಹಿನಗರ, ಹಸೀನಾತಾಜ್ ಕೊಂ ಮಹಬೂಬ್, ರಹಮತ್ ನಗರ ಹಾಗೂ ಶಿಡ್ಲಘಟ್ಟ ನಗರದಲ್ಲಿ ಇನ್ನೂ ಸುಮಾರು 530 ಜನರ ಮೇಲ್ಪಟ್ಟು ಜನರು ನಿಜವೆಂದು ನಂಬಿ ಪ್ರತಿಯೊಬ್ಬರ ತಲಾ 1300/-ರೂಗಳಂತೆ ಪಡೆದುಕೊಂಡು ಒಟ್ಟು 6,89,000/-ರೂ ಹಣ ಪಹೀಂ ಉನ್ನೀಸಾ ರವರಿಗೆ ಕೊಟ್ಟಿದ್ದು, ಪಹೀಂಉನ್ನಿಸಾ ರವರು ನಮ್ಮ ಎಲ್ಲರ ಹಣವನ್ನು ಸವಿತಾ ರವರಿಗೆ  ನೀಡಿರುತ್ತಾಳೆ. ನಾವು ಹಣ ಕೊಟ್ಟ ಮೇಲೆ 2-3 ತಿಂಗಳು ಕಳೆದರೂ ಸವಿತಾ ರವರು ನಮಗೆ ಹೆಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಸಾಲ ಕೊಡಿಸಿದೆ ದಿನಗಳು ಕಳೆಯುತ್ತಿದ್ದು, ನಾವು ಕೇಳಿದಾಗ ಒಂದು ವಾರದಲ್ಲಿ ಆಗುತ್ತೆಂತ ತಿಳಿಸುತ್ತಿದ್ದವಳು ಏಕಾಏಕಿ ದಿನಾಂಕ.10.06.2020 ರಂದು ಸವಿತಾ ರವರು ವಾಸವಾಗಿದ್ದ ಮನೆಯಿಂದ ಪರಾರಿಯಾಗಿರುತ್ತಾಳೆ. ಈ ವಿಚಾರ ತಿಳಿದು ನಾವು ನಮ್ಮಿಂದ ಹಣ ಪಡೆದುಕೊಂಡಿರುವ ಪಹೀಂ ಉನ್ನೀಸಾ ರವರನ್ನು ವಿಚಾರ ಮಾಡಿದಾಗ ಪಹೀಂ ಉನ್ನೀಸಾ ರವರು  ನನಗೂ ಸವಿತಾ ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ ಈಕೆ ನನಗೆ ಸಹ ಮೋಸ ಮಾಡಿ ಸಾಲ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಸಾಲ ಕೊಡಿಸದೆ ನನಗೆ ತಿಳಿಸದೆ ರಾತ್ರೋ ರಾತ್ರಿ ಮನೆ ಖಾಲಿ ಮಾಡಿಕೊಂಡು ಹೊರಟು ಹೋಗಿರುತ್ತಾಳೆ. ಆಕೆಯ ಮೊಬೈಲ್ ನಂ. 7338130139 ಮತ್ತು 7899250139 ನಂಬರಿಗೆ ಕರೆ ಮಾಡಿದರೆ ಸ್ವೀಚ್ ಆಪ್ ಮಾಡಿರುತ್ತಾಳೆ. ನಾನು ಸಹ ಹುಡುಕಾಡುತ್ತಿದ್ದು ಸಿಕ್ಕಿರುವುದಿಲ್ಲ ಎಂದು ತಿಳಿಸಿರುತ್ತಾಳೆ. ಸವಿತಾ ರವರ ಊರು ಚಿಕ್ಕಬಳ್ಳಾಪುರ ತಾಲ್ಲೂಕು ಕಣಿತಹಳ್ಳಿ ಗ್ರಾಮ ಎಂದು ತಿಳಿದು ಬಂದಿರುತ್ತೆ. ನಾವು ಸಹ ಅವರ ಊರಿಗೆ ಹೋಗಿ ವಿಚಾರ ಮಾಡಿದಾಗ ಅಲ್ಲಿಯೂ ಸಿಕ್ಕಿರುವುದಿಲ್ಲ. ಈಕೆಯ ಜೊತೆ ಇನ್ನೂ ಕೆಲವರು ಬಾಗಿಯಾಗಿರುವುದಾಗಿ ತಿಳಿದು ಬಂದಿರುತ್ತೆ. ಆದ್ದರಿಂದ ಪಹೀಂ ಉನ್ನೀಸಾ ಮತ್ತು ನಮಗೆ ಚಿಕ್ಕಬಳ್ಳಾಪುರ ತಾಲ್ಲೂಕು ಕಣಿತಹಳ್ಳಿ ಗ್ರಾಮದ ಸವಿತಾ ಎಂಬುವರು ತಾನು ಸರ್ಕಲ್ ಇನ್ಸ್ ಪೆಕ್ಟರ್ ರವರ ಹೆಂಡತಿ ಎಂದು ಪರಿಚಯ ಮಾಡಿಕೊಂಡು ಪಹೀಂ ಉನ್ನೀಸಾ ಮತ್ತು ನಮಗೆ ಬ್ಯಾಂಕಿನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮೋಸದಿಂದ ನಮ್ಮಿಂದ ಹಣವನ್ನು ಪಡೆದು ಪರಾರಿಯಾಗಿರುವ ಸವಿತಾ ಮತ್ತು ಆಕೆಯ ಜೊತೆ ಸಹಕರಿಸಿದವವರನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಿ ನಮಗೆ ನ್ಯಾಯಾ ದೊರಕಿಸಿಕೊಡಲು ಈ ದಿನ ತಡವಾಗಿ ಕೊಟ್ಟ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.