ದಿನಾಂಕ : 09/07/2019ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ. ಮೊ.ಸಂ: 174/2019 ಕಲಂ: 380-454  ಐ.ಪಿ.ಸಿ:-

          ದಿ: 08-07-2019 ರಂದು ಸಂಜೆ 6:45 ಗಂಟೆಗೆ ಪಿರ್ಯಾಧಿದಾರರಾದ ಎಮ್.ನಾರಾಯಣಸ್ವಾಮಿ ಬಿನ್ ದೊಡ್ಡ ಮಾರಪ್ಪ, 42 ವರ್ಷ, ಒಕ್ಕಲಿಗರು, ಪ್ರಾಥಮಿಕ ಶಾಲಾ ಶಿಕ್ಷಕರು, ವಾಸ:2 ನೇ ಬ್ಲಾಕ್ ಕೊತ್ತಪಲ್ಲಿ, 7 ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ- ನಾನು ಮಾರ್ಗಾನುಕುಂಟೆ ಜಿ.ಹೆಚ್.ಪಿ.ಎಸ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು, ನನ್ನ ಹೆಂಡತಿ ಶೈಲಜಾ ರವರು ಯಂಗ್ ಇಂಡಿಯಾ ಶಾಲೆಯ ಬಳಿ ಇರುವ ನಮ್ಮದೇ ಆದ ಬಟ್ಟೆ ಅಂಗಡಿಯನ್ನು ನಡೆಸುತ್ತಿರುತ್ತಾರೆ.  ನಮ್ಮ ಇಬ್ಬರು ಮಕ್ಕಳು ಯಂಗ್ ಇಂಡಿಯಾ ಶಾಲೆಯಲ್ಲಿ ಓದುತ್ತಿರುತ್ತಾರೆ.  ನಾವು ಎಂದಿನಂತೆ ದಿ:08-07-2019 ರಂದು  ಬೆಳಗ್ಗೆ 10:30 ಗಂಟೆಗೆ ಮನೆ ಬಾಗಿಲಿಗೆ ಬೀಗವನ್ನುಹಾಕಿಕೊಂಡು ನಮ್ಮ ನಮ್ಮ ಕೆಲಸಗಳಿಗೆ ಹೋಗಿ ಬರುತ್ತಿರುತ್ತೇವೆ.  ಸಂಜೆ ಸುಮಾರು 4:30 ಗಂಟೆಗೆ ನನ್ನ ಹೆಂಡತಿ ಮತ್ತು ಮಕ್ಕಳು ಎಂದಿನಂತೆ ಮನೆಗೆ ಹೋದಾಗ ಮನೆಯ ಬಾಗಿಲು ತೆರೆದ ರೀತಿಯಲ್ಲಿ ಇರುವುದನ್ನು ನೋಡಿ ಮನೆಯ ಒಳಗೆ ಹೋಗಿ ನೋಡಲಾಗಿ, ರೂಮ್ ನಲ್ಲಿರುವ ಬೀರುವಿನ ಬಾಗಿಲು ಸಹ ತೆರೆದಿದ್ದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ, ನನ್ನ ಹೆಂಡತಿ ನನಗೆ ದೂರವಾಣಿ ಮೂಲಕ ಮನೆಯಲ್ಲಿ ಕಳ್ಳತನವಾಗಿದೆ ಎಂದು ವಿಚಾರವನ್ನು ತಿಳಿಸಿದ ಮೇರೆಗೆ ನಾನು ಸಂಜೆ 5:00 ಗಂಟೆಗೆ ಮನೆಯ ಬಳಿ ಬಂದು ನೋಡಲಾಗಿ, ನನ್ನ ಮನೆಯ ಬಾಗಿಲಿನ ಬೀಗ ಮತ್ತು ರೂಮ್ ನಲ್ಲಿರುವ ಬೀರುವಿನ ಬಾಗಿಲನ್ನು ಯಾರೋ ಕಳ್ಳರು ಕಿತ್ತುಹಾಕಿ ಮನೆಯ ಬೀರುವಿನಲ್ಲಿದ್ದ 1] ಒಂದು ಚಿನ್ನದ ಲಾಂಗ್ ಚೈನ್-60 ಗ್ರಾಮ, 2] ಒಂದು ಚಿನ್ನದ ನೆಕ್ಲೆಸ್-45 ಗ್ರಾಮ್, 3] ಎರಡು ಚಿನ್ನದ ಬಳೆಗಳು-35 ಗ್ರಾಮ್, 4] ಎರಡು ಚಿನ್ನದ ಉಂಗುರುಗಳು-12 ಗ್ರಾಮ್, 5] ಮೂರು ಜೊತೆ ಚಿನ್ನದ ಓಲೆ ಮತ್ತು ಜುಮಕಿ-30 ಗ್ರಾಮ್ ಮತ್ತು ಹಣ ರೂ 78,000/- ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ನಿಜವಾಗಿರುತ್ತದೆ.  ಈ ಕಳ್ಳತನವು ಈ ದಿನ ಬೆಳಗ್ಗೆ 10:30 ರಿಂದ ಸಂಜೆ 4:30 ಗಂಟೆ ಒಳಗಡೆ ನಾವು ಇಲ್ಲದ ಸಮಯದಲ್ಲಿ ನಡೆದಿದ್ದು, ಕಳ್ಳತನವಾಗಿರುವ ಚಿನ್ನದ ಒಡವೆಗಳು, ಹಣವನ್ನು ಮತ್ತು ಕಳ್ಳತನ ಮಾಡಿರುವ ವ್ಯಕ್ತಿಯನ್ನುಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಕಳ್ಳತನವಾಗಿರುವ ಚಿನ್ನದ ಆಭರಣಗಳ ಒಟ್ಟು ಮೌಲ್ಯ ರೂ 3,64,000/-ರೂಗಳಾಗಿರುತ್ತದೆ, ಎಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 174/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ;08-07-2019 ರಂದು ಸಂಜೆ 19;00 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ  ರೆಣುಮಾಕಲಹಳ್ಳಿ ಗ್ರಾಮದ ರಮಾದೇವಿ ಬಿನ್ ಲೇಟ್ ಚನ್ನರಾಯಪ್ಪ, 35ವರ್ಷ, ವಕ್ಕಲಿಗರು, ವ್ಯಾಪಾರ ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಎಂಬುವರು ತನ್ನ ಚಿಲ್ಲರೆ ಅಂಗಡಿಯ  ಬಳಿ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ.  ಈ ಬಗ್ಗೆ ಅಸಾಮಿಯ ವಿರುದ್ದ ಕಲಂ; 15 (ಎ) 32 (3) ಕೆ,ಇ,ಆಕ್ಟ್ ರೀತ್ಯಾ  ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಸಿದ ಪ್ರ.ವ.ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 246/2019 ಕಲಂ: 87 ಕೆ.ಪಿ. ಆಕ್ಟ್:-

          ಘನ ನ್ಯಾಯಾಲಯದಲ್ಲಿ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಆರ್.ಜಗದೀಶ್ ರೆಡ್ಡಿ ಆದ ನಾನು ನಿವೇಧಿಸಿಕೊಳ್ಳುವುದೇನೆಂದರೆ, ಈ ದಿನ ದಿನಾಂಕ 08/07/2019 ರಂದು ಸಂಜೆ 4-45 ಗಂಟೆ ಸಮಯದಲ್ಲಿ ತನಗೆ ಯಾರೋ ಸಾರ್ವಜನಿಕರಿಂದ ದೊಡ್ಡಹಳ್ಳಿ ಗ್ರಾಮದ ಕೆರೆಯಂಗಳದಲ್ಲಿ ಯಾರೋ ಆಸಾಮಿಗಳು ಅಕ್ರಮವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಸಿಕ್ಕಿದ್ದು ನಂತರ ತಾನು ಠಾಣೆಯ ಸಿಬ್ಬಂದಿರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-326 ರಲ್ಲಿ ದೊಡ್ಡಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿ ಆಸಾಮಿಗಳು ಇಸ್ಪೀಟ್ ಜೂಜಾಟವಾಡುತ್ತಿದ್ದು ಒಬ್ಬ ಆಸಾಮಿಯು ಇಸ್ಪೀಟ್ ಎಲೆಗಳನ್ನು ಹಾಕುತ್ತಿದ್ದು ಒಬ್ಬ ಆಸಾಮಿಯು ಅಂದರ್ 100 ರೂ ಎಂತಲೂ, ಮತ್ತೊಬ್ಬ ಆಸಾಮಿಯು ಬಾಹರ್ 100 ರೂ ಎಂತಲೂ ಉಳಿದವರು ಸಹ ಅಂದರ್-ಬಾಹರ್ ಎಂದು ಹಣವನ್ನು ಪಣವಾಗಿ ಕಟ್ಟಿ ಕೂಗಾಡಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿರುವುದು ಖಚಿತವಾದ ಮೇಲೆ ನಾವು ಸದರಿ ಆಸಾಮಿಗಳನ್ನು ಸುತ್ತುವರೆದು ಯಾರೂ ಓಡಬಾರದೆಂದು ಸೂಚನೆ  ನೀಡಿದರೂ ಸಹ ಒಬ್ಬ ಆಸಾಮಿ ಓಡಿಹೋಗಿದ್ದು ಸ್ಥಳದಲ್ಲಿ 3 ಜನ ಆಸಾಮಿಗಳನ್ನು ಸಿಕ್ಕಿ ಬಿದ್ದಿದ್ದು ಅವರನ್ನು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲಾಗಿ  1) ದೇವಪ್ಪ ಬಿನ್ ಕೃಷ್ಣಪ್ಪ, 52 ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ದೇವರಮಳ್ಳೂರು ಗ್ರಾಮ ಶಿಡ್ಲಘಟ್ಟ ತಾಲ್ಲೂಕು 2) ಮಹಮದ್ ಖಾನ್ ಬಿನ್ ಬಾಬುಖಾನ್, 31 ವರ್ಷ, ಕ್ಲೀನರ್ ಕೆಲಸ, ಟಿಪ್ಪು ನಗರ, ಚಿಂತಾಮಣಿ ನಗರ 3) ಪ್ರಶಾಂತ್ ಬಿನ್ ಶ್ರೀನಿವಾಸಪ್ಪ, 26 ವರ್ಷ, ನಾಯಕರು, ಜಿರಾಯ್ತಿ, ಚಿನ್ನಸಂದ್ರ ಗ್ರಾಮ ಎಂದು ತಿಳಿಸಿದ್ದು ಓಡಿ ಹೋದ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ನಾಗೇಶ ಬಿನ್ ಶ್ರೀನಿವಾಸಪ್ಪ, 27 ವರ್ಷ. ನಾಯಕರು, ಜಿರಾಯ್ತಿ, ಚಿನ್ನಸಂದ್ರ ಗ್ರಾಮ ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಇಸ್ಪೀಟ್ ಜೂಜಾಟದ ಸ್ಥಳದಲ್ಲಿ ಪರಿಶೀಲಿಸಲಾಗಿ ಚೆಲ್ಲಾ ಪಿಲ್ಲಿಯಾಗಿ ಇಸ್ಪೀಟ್ ಎಲೆಗಳು ಮತ್ತು ಹಣ ಬಿದ್ದಿದ್ದು ಇಸ್ಪೀಟ್ ಎಲೆಗಳನ್ನು ಎಣಿಕೆ ಮಾಡಲಾಗಿ 52 ಇಸ್ಪೀಟ್ ಎಲೆಗಳಿದ್ದು, ಹಣವನ್ನು ತೆಗೆದು ಎಣಿಕೆ ಮಾಡಲಾಗಿ 2860-00 ರೂ ಹಣ ಇದ್ದು, ಹಾಗೂ ಅಲ್ಲಿ ಜೂಜಾಡಲು ತಂದಿದ್ದ ಕೆಎ 04 ಹೆಚ್ ಆರ್ 2266 ನೊಂದಣಿ ಸಂಖ್ಯೆಯ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನ ಇರುತ್ತೆ.  ಸದರಿ ಆಸಾಮಿಗಳು ಸರ್ಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಅಂದರ್ ಬಾಹರ್-ಇಸ್ಪೀಟ್ ಜೂಜಾಟವಾಡುತ್ತಿದ್ದ ಕಾರಣ ಮೇಲ್ಕಂಡ 52 ಇಸ್ಪೀಟ್ ಎಲೆಗಳನ್ನು, 2860-00 ರೂ ನಗದು ಹಣವನ್ನು, ಒಂದು ಪ್ಲಾಸ್ಟಿಕ್ ಚೀಲವನ್ನು  ಮದ್ಯಾಹ್ನ 17-00 ಗಂಟೆಯಿಂದ 18-00 ಗಂಟೆಯವರೆಗೆ ದಾಳಿ ಪಂಚನಾಮೆ ಮೂಲಕ ಅಮಾನತ್ತು ಪಡಿಸಿಕೊಂಡು ಸಂಜೆ 18-15 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಗಳ ವಿರುದ್ದ ಠಾಣಾ ಮೊಸಂ-246/2019 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೇನೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 260/2019 ಕಲಂ: 279-337 ಐ.ಪಿ.ಸಿ:-

          ದಿನಾಂಕ 08/07/2019 ರಂದು ಗಾಯಾಳು ಮದನ್ ಮೋಹನ್ ನಾಯಕ ಬಿನ್ ಆಂಜಿನಪ್ಪ, ಚಿಂಚೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು, ರವರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೇ, ಈ ದಿನ ಕೆಲಸದ ನಿಮಿತ್ತ ನಮ್ಮ ಗ್ರಾಮದ ವಾಸಿ ನರಸಿಂಹಮೂರ್ತಿ ಬಿನ್ ಲೇಟ್ ನರಸಿಂಹಯ್ಯ ರವರ ಬಾಬತ್ತು ದ್ವಿಚಕ್ರ ವಾಹನ KA 40 EB 6595 CD DELUX ದ್ವಿಚಕ್ರ ವಾಹನದಲ್ಲಿ ಕೆಲಸದ ನಿಮಿತ್ತ ಗೌರಿಬಿದನೂರಿಗೆ ಬಂದು ನಂತರ ನಾನು ಮತ್ತು ನರಸಿಂಹಮೂರ್ತಿ ರವರು ಗ್ರಾಮಕ್ಕೆ ವಾಪಸ್ಸು ಹೋಗಲು ಮದ್ಯಾನ್ಹ 1-45 ರ ಸಮಯದಲ್ಲಿ ಕಲ್ಲಂತರಾಯನಕೋಟೆ ಗುಟ್ಟೆ ಬಿಟ್ಟು ಬೈಚಾಪುರ ಕ್ರಾಸ್ ನ ಬಳಿ KA 40 EB 6595 CD DELUX ದ್ವಿಚಕ್ರ ವಾನದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ದ್ವಿಚಕ್ರ ವಾಹನದ ನಂಬರ್ KA 05 KM 2448 HONDA SHINE ರ ವಾಹನದ ಸವಾರ ಅತಿಮೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು  ನರಸಿಂಹಮೂರ್ತಿ ಓಡಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ನರಸಿಂಹಮೂರ್ತಿ ಮತ್ತು ನಾನು ನೆಲಕ್ಕೆ ಬಿದ್ದು ಹೋಗಿ ನರಸಿಂಹ ಮೂರ್ತಿಗೆ ಬಲಗಾಲು ಮತ್ತು ತಲೆಗೆ ರಕ್ತಗಾಯವಾಗಿರುತ್ತೆ. ಹಿಂದೆ ಕುಳಿತಿದ್ದ ನನಗೆ ಮೂಗೇಟು ಉಂಟಾಗಿರುತ್ತದೆ ಆದ್ದರಿಂದ KA 05 KM 2448 HONDA SHINE ರ ದ್ವಿಚಕ್ರ ವಾಹನ ಸವಾರದಾರನ ಮೇಲೆ ಕ್ರಮ ಜರುಗಿಸಲು ಕೋರಿ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ. ಮೊ.ಸಂ: 261/2019 ಕಲಂ: 379  ಐ.ಪಿ.ಸಿ:-

          ದಿನಾಂಕ 09/07/2019 ರಂದು ಗೌರಿಬಿದನೂರು ಗ್ರಾಮಾತರ ಠಾಣೆಯ ಹೆಚ್.ಸಿ.10 ಶ್ರೀರಾಮಯ್ಯ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೇ, ಈ ದಿನ ದಿನಾಂಕ:09/07/2019 ರಂದು ಬೆಳಿಗ್ಗೆ 7-00 ಗಂಟೆಯಲ್ಲಿ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಹೊಸೂರು ಹೊರಠಾಣೆಯ ಕರ್ತವ್ಯದಲ್ಲಿದ್ದಾಗ,  ಹೊಸೂರು ಹೋಬಳಿ, ಗುಂಡೇನಹಳ್ಳಿ ಕೆರೆಯಲ್ಲಿ ಯಾರೋ ಟ್ರ್ತಾಕ್ಟರ್ ಗೆ ಮರಳು ತುಂಬುತ್ತಿರುವುದಾಗಿ ಮಾಹಿತಿ ಬಂದಿದ್ದು  ನಾನು ಹಾಗು ಪಿ.ಸಿ.460 ಶೇಖ್ ಸನಾವುಲ್ಲಾ ರವರು ಬೆಳಿಗ್ಗೆ 08-00 ಗಂಟೆ ಸಮಯಕ್ಕೆ ಗುಂಡೇನಹಳ್ಳಿ ಕೆರೆಯ ಅಂಗಳಕ್ಕೆ ಹೋದಾಗ, ಯಾರೋ ಟ್ರ್ಯಾಕ್ಟರ್ಗೆ ಮರಳನ್ನು ತುಂಬಿಸುತ್ತಿದ್ದು, ನಾನು ಹಾಗು ಶೇಖ್ ಸನಾವುಲ್ಲಾ ಅವರುಗಳ ಬಳಿಗೆ ಹೋಗುತ್ತಿದ್ಧಾಗ, ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ದೂರದಿಂದಲೇ ಗಮನಿಸಿದ ಮರಳನ್ನು ತುಂಬಿಸುತ್ತಿದ್ದವರು  ಟ್ರ್ಯಾಕ್ಟರ್ ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾರೆ.  ನಂತರ ಟ್ರ್ಯಾಕ್ಟರ್ ಇದ್ದ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ,  ಟ್ರ್ಯಾಕ್ಟರ್ ಇಂಜಿನ್ ಮೇಲೆ KA-43-658 ನೊಂದಣಿ ಸಂಖ್ಯೆ ಇದ್ದು, ಇದು BALWAN-400 ಕಂಪನಿಯದ್ದಾಗಿರುತ್ತೆ.  ಇದರ ಟ್ರ್ಯಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ.  ಟ್ರ್ಯಾಲಿಯಲ್ಲಿ ಬಾಡಿಲೆವೆಲ್ ಗೆ ಮರಳು ತುಂಬಿಸಲಾಗಿರುತ್ತೆ. ಸದರಿ ಆಸಾಮಿಗಳು ಮರಳನ್ನು ಟ್ರ್ಯಾಕ್ಟರ್ ಗೆ ತುಂಬಿ ಕಳವು ಮಾಡುತ್ತಿದ್ದು. ಸದರಿ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಗ್ರಾಮಸ್ಥರ ಸಹಾಯದಿಂದ ಠಾಣೆಯ ಬಳಿಗೆ ತಂದು  ಹಾಜರ್ಪಡಿಸಿರುತ್ತೇನೆ.  ಟ್ರ್ಯಾಕ್ಟರ್ ಚಾಲಕ ಹಾಗು ಮಾಲೀಕನ  ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಮುಂದಿನ ಕ್ರಮ ಜರುಗಿಸಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ. ಮೊ.ಸಂ: 187/2019 ಕಲಂ: 15(ಎ),32(3) ಕೆ.ಇ. ಆಕ್ಟ್:-

          ದಿನಾಂಕ:08-07-2019 ರಂದು  ಸುನೀಲ್ ಕುಮಾರ್  ಪೊಲೀಸ್ ಇನ್ಸ್ಪೆಕ್ಟರ್, ಗುಡಿಬಂಡೆ ಪೊಲೀಸ್ ಠಾಣೆ ರವರು ಸೂಚಿಸುವುದೇನೆಂದರೆ, ಈ ದಿನ ದಿನಾಂಕ:08/07/2019 ರಂದು ಸಂಜೆ 5-00 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಹೋಬಳಿ ಭೋಗೇನಹಳ್ಳಿ ಗ್ರಾಮದಲ್ಲಿ ಸುಬ್ಬಣ್ಣ ಬಿನ್ ಕೊಲ್ಲಾಪುರಪ್ಪ ರವರು ಅವರ ಮನೆಯ ಬಳಿ  ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಲೈಸನ್ಸ್ ಇಲ್ಲದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ತಾನು ಮತ್ತು ಜೊತೆಯಲ್ಲಿದ್ದ ಸಿ.ಪಿ.ಸಿ-378 ಶ್ರೀನಿವಾಸ ರವರು ಕೆ.ಎ-40 ಜಿ-1888 ಸರ್ಕಾರಿ ಜೀಪಿನಲ್ಲಿ ಚಾಲಕ ಎ.ಹೆಚ್.ಸಿ.43 ವೆಂಕಟಾಚಲಪತಿ ರವರೊಂದಿಗೆ ಭೋಗೇನಹಳ್ಳಿ ಗ್ರಾಮಕ್ಕೆ ಸಂಜೆ 5-30 ಗಂಟೆಗೆ ಹೋಗಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚಾಯ್ತಿದಾರರೊಂದಿಗೆ ಸುಬ್ಬಣ್ಣ ರವರ ಮನೆಯ ಬಳಿಯಿಂದ  ಸ್ವಲ್ಪ ದೂರದಲ್ಲಿ ಸರ್ಕಾರಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳವಾದ ಸುಬ್ಬಣ್ಣ ರವರ ಮನೆಯ ಬಳಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುಮತಿ ನೀಡಿ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸದರಿ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದು ಕಂಡುಬಂದಿದ್ದು, ಸದರಿ ಸ್ಥಳಕ್ಕೆ ತಾವುಗಳು ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ತಮ್ಮಗಳನ್ನು ನೋಡಿ ಅಲ್ಲಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರವ ಸದರಿ ಮನೆಯ ಮಾಲೀಕರ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಸುಬ್ಬಣ್ಣ ಬಿನ್ ಕೊಲ್ಲಾಪುರಪ್ಪ 65 ವರ್ಷ ಬೆಸ್ತ ಜನಾಂಗ ಜಿರಾಯ್ತಿ ವಾಸ ಭೋಗೇನಹಳ್ಳಿ  ಗ್ರಾಮ, ಸೋಮೇನಹಳ್ಳಿ ಹೋಬಳಿ ಗುಡಿಬಂಡೆ ತಾಲ್ಲೂಕು ಎಂತ ತಿಳಿಸಿದ್ದು, ಮದ್ಯಪಾನ ಮಾಡಲು ಅನುಮತಿ ಪಡೆದಿರುವ ಲೈಸನ್ಸ್ ತೋರಿಸುವಂತೆ ಕೇಳಲಾಗಿ ಸದರಿಯವರು ಯಾವುದೇ ರೀತಿಯ ಲೈಸನ್ಸ್ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ಸದರಿ ಸ್ಥಳದಲ್ಲಿ ಹೈವಾಡ್ಸರ್್ ಚೀರ್ಸ್ ಕಂಪನಿಯ 90 ಎಂ.ಎಲ್ ಸಾಮಥ್ರ್ಯದ 11 ವಿಸ್ಕಿ ಟೆಟ್ರಾ ಪ್ಯಾಕೇಟ್ಗಳು ಇದ್ದವು, 2 ಖಾಲಿ ಟೆಟ್ರಾ ಪ್ಯಾಕೇಟ್ಗಳು ಬಿದ್ದಿದ್ದು, 2 ಪ್ಲಾಸ್ಟಿಕ್ ಗ್ಲಾಸುಗಳಲ್ಲಿ ಮದ್ಯವನ್ನು ಕುಡಿದು ಬಿಸಾಹಾಕಿದ್ದು, ಪಕ್ಕದಲ್ಲಿಯೇ ಪ್ಲಾಸ್ಟಿಕ್ ವಾಟರ್ ಬಾಟಲ್ ಇದ್ದು, ಅದರಲ್ಲಿದ್ದ ನೀರು ಕೆಳಗಡೆಗೆ ಚೆಲ್ಲಿತ್ತು, ಮದ್ಯವಿರು ಪ್ಯಾಕೇಟ್ ಗಳ ಒಟ್ಟು ಬೆಲೆ 352=00 ರೂಗಳು (990 ಎಂ.ಎಲ್) ಆಗಿರುತ್ತದೆ. ಸದರಿ ಮೇಲ್ಕಂಡ 11 ಮದ್ಯದ ಟೆಟ್ರಾ ಪ್ಯಾಕೇಟ್ಗಳನ್ನು, 2 ಖಾಲಿ ಟೆಟ್ರಾ ಪ್ಯಾಕೆಟ್ ಗಳನ್ನು  ಹಾಗೂ 2 ಪ್ಲಾಸ್ಟಿಕ್ ಗ್ಲಾಸುಗಳು, ಒಂದು ಪ್ಲಾಸ್ಟಿಕ್ ಬಾಟಲ್ನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಸಂಜೆ 05-45 ಗಂಟೆಯಿಂದ ಸಂಜೆ 6-30 ಘಂಟೆಯವರೆಗೆ ಪಂಚನಾಮೆ ಜರುಗಿಸಿ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ. ಮೇಲ್ಕಂಡ ಸುಬ್ಬಣ್ಣ ಬಿನ್ ಕೊಲ್ಲಾಪುರಪ್ಪ ರವರನ್ನು ವಶಕ್ಕೆ ಪಡೆದುಕೊಂಡು ರಾತ್ರಿ 7-30 ಘಂಟೆಗೆ ಠಾಣೆಗೆ ಬಂದು ಮೇಲ್ಕಂಡ ಆರೋಪಿ, ಮಾಲುಗಳು ಹಾಗೂ ಅಸಲು ಪಂಚನಾಮೆಯನ್ನು ಮುಂದಿನ ಕ್ರಮದ ಬಗ್ಗೆ ನೀಡುತ್ತಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದ ದೂರು ಆಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ. ಮೊ.ಸಂ: 159/2019 ಕಲಂ: 323-447-504 ರೆ/ವಿ 34 ಐ.ಪಿ.ಸಿ:-

          ದಿನಾಂಕ:08/07/2019 ರಂದು ಪಿರ್ಯಾದಿದಾರರಾದ ಶ್ರೀ ಸತೀಶ್ ಕುಮಾರ್ ಬಿನ್ ಎಂ.ಎನ್.ರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಇದೇ ಗೌರಿಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ಕೋತ್ತೂರು ಗ್ರಾಂದ ಸರ್ವೆ ನಂ 90/11 ರ ಜಮೀನಿನ ಮಾಲಿಕರಾದ ನಾವು ಸರ್ವೆ  ಅಧಿಕಾರಿಗಳನ್ನು ಕರೆದು ದಿನಾಂಕ:08/07/2019 ರಂದು ಸರ್ವೆ ಮಾಡಿಸುತ್ತಿದ್ದಾಗ ಮದ್ಯಾಹ್ನ ಸುಮಾರು 2-00 ಗಂಟೆಯ ಸಮಯದಲ್ಲಿ ನಮ್ಮ  ಜಮೀನಿನ ಪಕ್ಕದಲ್ಲಿ ವಾಸವಾಗಿರುವ ಶಾಂತರಾಮ್ ಸಿಂಗ್ ಮತ್ತು ಜಯಕುಮಾರಿ ಮತ್ತು ಇತರೆ ಎರಡು ಜನ ಹೆಣ್ಣು ಮಕ್ಕಳು ವಿನಾ ಕಾರಣ ತನ್ನ ಮತ್ತು ತನ್ನ ಸ್ನೇಹಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದು ಹಾಗೂ ಬಾಯಿಯಿಂದ ಕಚ್ಚಿ ಗಾಯಗೊಳಿಸಿ ನಮ್ಮ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ಮಾಡಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.