ದಿನಾಂಕ :09/01/2021 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.02/2021  ಕಲಂ. 379 ಐ.ಪಿ.ಸಿ :-

     ದಿ: 08-01-2021 ರಂದು ಮದ್ಯಾಹ್ನ 3:45 ಗಂಟೆಗೆ ಪಿರ್ಯಾಧಿದಾರರಾದ ಪ್ರಮೋದ ಬಿನ್ ಸೀನು, 30 ವರ್ಷ, ಬಲಜಿಗರು, ವ್ಯಾಪಾರ, ಏಟಿಗಡ್ಡಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ನಾನು ವ್ಯಾಪಾರದಿಂದ ಜೀವನ ಮಾಡಿಕೊಂಡಿರುತ್ತೇನೆ, ನನ್ನ ಬಾಬತ್ತು ವಾಹನ ಸಂಖ್ಯೆ: KA-42-Q-4939,ಇಂಜನ್ ನಂಬರ್: JF39E0071644, ಚಾಸಿಸ್ ನಂಬರ್:ME4JF391JC8071617, ಹೋಂಡಾ ಕಂಪೆನಿಯ ಡಿಯೋ ದ್ವಿಚಕ್ರ ವಾಹನವಿದ್ದು, ದಿ: 05-01-2021 ರಂದು ನಾನು ಊರಿಗೆ ಹೋಗಿದ್ದಾಗ, ನನ್ನ ದ್ವಿಚಕ್ರ ವಾಹನವನ್ನು ಕೆ.ಇ.ಬಿ ಆಫೀಸ್ ಒಳಗೆ ನಿಲ್ಲಿಸಿ ಹೋಗಿದ್ದು, ಸಂಜೆ 7 ಗಂಟೆಗೆ ಬಂದು ನೋಡಲಾಗಿ ನನ್ನ ವಾಹನ ಅಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ನನ್ನ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.  ಆದ್ದರಿಂದ ತಾವು ಮುಂದಿನ ಕ್ರಮ ಜರುಗಿಸಿ ನನ್ನ ಸುಮಾರು 30 ಸಾವಿರ ಬೆಲೆಬಾಳುವ ವಾಹನವನ್ನು ಪತ್ತೆ ಮಾಡಿಕೊಡಬೇಕಾಗಿ ಕೋರುತ್ತೇನೆ ಎಂದು ದೂರು.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್ :-

     ದಿ: 08-01-2021 ರಂದು ಪಿರ್ಯಾಧಿದಾರರಾದ ಎಸ್.ಗೋವರ್ಧನ್ ಬಿನ್ ಶ್ರೀರಾಮಪ್ಪ, 34 ವರ್ಷ, ಬಲಜಿಗರು, ಕದಿರನ್ನಗಾರಿಪಲ್ಲಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ದಿ: 07-01-2021 ರಂದು ರಾತ್ರಿ ಸುಮಾರು 7:30 ರ ಸಮಯದಲ್ಲಿ ನಮ್ಮ ಚಿಕ್ಕಪ್ಪ ನವರಾದ ರಾಜಗೋಪಾಲ ಬಿನ್ ಮರಿಯಪ್ಪ ಎಂಬುವವರು ರಾ.ಹೆ 44 ರಲ್ಲಿ ಹಿಂದೂಪುರದಿಂದ ನಮ್ಮ ಸ್ವಂತ ಊರಾದ ಕದಿರನ್ನಗಾರಿಪಲ್ಲಿಗೆ ವಾಹನ ಸಂಖ್ಯೆ: KA-40-X-3298 [HEAVY DUTY] ರಲ್ಲಿ ಬರುತ್ತಿದ್ದಾಗ, ಟೋಲ್ ಪ್ಲಾಜಾ ಬಳಿ ಬಾಗೇಪಲ್ಲಿ ಕಡೆಯಿಂದ KA-05-EZ-296 ದ್ವಿಚಕ್ರ ವಾಹನದಲ್ಲಿ ತಪ್ಪು ದಿಕ್ಕಿನಲ್ಲಿ ಏಕಮುಖವಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ ನಮ್ಮ ಚಿಕ್ಕಪ್ಪನ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರ, ನಮ್ಮ ಚಿಕ್ಕಪ್ಪನನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತೇವೆ. ನಮ್ಮ ಚಿಕ್ಕಪ್ಪನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿರುವ ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ಬೈರೇಪಲ್ಲಿಯ ರವಿಕುಮಾರ್ ಮತ್ತು ವೆಂಕಟೇಶ್ ಎಂದು ತಿಳಿದುಬಂದಿದೆ, ಆದ್ದರಿಂದ ತಾವುಗಳು ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಪ್ರಾರ್ಥನೆ ಎಂದು ದೂರು.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.08/2021 ಕಲಂ.406,420 ಐ.ಪಿ.ಸಿ :-

     ದಿನಾಂಕ: 09/01/2021 ರಂದು ಸಂಜೆ 6-30 ಗಂಟೆಯಲ್ಲಿ  ಪಿರ್ಯಾದಿ  ವಿ. ಗೋಪಿ ಬಿನ್ ವೆಂಕಟರೋಣಪ್ಪ ತಮ್ಮನಾಯಕನಹಳ್ಳಿ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,ತಾನು ಚಿಕ್ಕಬಳ್ಳಾಪುರ ದಲ್ಲಿರುವ  ಮಹೀಂದ್ರಾ ಪೈನ್ಯಾನ್ಸ್ ನಲ್ಲಿ  2020 ನೇ ಸಾಲಿನ  ಪೆಬ್ರವರಿ ಮಾಹೆಯಲ್ಲಿ  ಟಯೋಟಾ ಕೀಯೋಸ್ಕ ಮೋಟಾರ್  ಕಂಪನಿಯ  ಇನ್ನೋವಾ ಕ್ರಿಸ್ಟಾ  ನಂಬರ್: KA-03-AE-2236   Chasis No. MBJJB8EM2015134550217  &  Engine No. 2GDA072363 ಕಾರನ್ನು  ರೂ, 13.92.000/- ರೂಪಾಯಿಗಳಿಗೆ ಕಂತುಗಳ  ಪ್ರಕಾರ 48 ತಿಂಗಳುಗಳಿಗೆ, ಮಾಹೆಯಾನ 28,800/- ಕಂತು ಕಟ್ಟುವ ಬಗ್ಗೆ  ಪೈನ್ಯಾನ್ಸ್  ಮಾಡಿಸಿಕೊಂಡು  ವಾಹನದ  ದಾಖಲಾತಿಗಳನ್ನು ತನ್ನ  ಹೆಸರಿಗೆ  ಚಿಕ್ಕಬಳ್ಳಾಪುರ   RTO  ಕಛೇರಿಗೆ ತನ್ನ ಹೆಸರಿಗೆ  ವರ್ಗಾಯಿಸಿ ಕೊಂಡಿದ್ದು ಸದರಿ  ವಾಹನವನ್ನು  ಬಾಡಿಗೆಗೆ ಓಡಿಸಿಕೊಂಡಿದ್ದು, ಹೋದ ವರ್ಷ  ಕರೋನ ಖಾಯಿಲೆಯಿಂದ   ಬಾಡಿಗೆಗಳು ಸಿಗದೇ  ಇದ್ದುದರಿಂದ ತಾನು ಪೈನ್ಯಾನ್ಸನಲ್ಲಿ ಕಂತುಗಳನ್ನು  ಕಟ್ಟಲು  ಸಾದ್ಯವಾಗದೇ ಇದ್ದು  ಈ ವಾಹನವನ್ನು  ಯಾರಿಗಾದರೂ ಮಾರಾಟ ಮಾಡೋಣವೆಂದು  ಮಾರಾಟಕ್ಕೆ ಇಟ್ಟಿದ್ದೆನು.  ದಿನಾಂಕ: 03/06/2020 ರಂದು ಹಾಸನ ಜಿಲ್ಲೆ  ಚೀರನಹಳ್ಳಿ  ಗ್ರಾಮದ ವಾಸಿ ಸಿ.ಕೆ. ಸಂತೋಷ್ 23ವರ್ಷ ಹಾಲಿ ವಾಸ: ಮನೆ ನಂಬರ್: 41 ಜೈ ಮಾರುತಿ ಲೇಔಟ್ ನಾಗಸಂದ್ರ ಪೋಸ್ಟ್. ಅಂಚೆಪಾಳ್ಯ ಬೆಂಗಳೂರು 560073 ರವರು ತನ್ನ  ಬಾಬತ್ತು  ಇನ್ನೋವಾ ಕ್ರಿಸ್ಟಾ  ಕಾರು ನಂಬರ್: KA-03-AE-2236 ನ್ನು  ಕಾರಿನ ಮೇಲೆ ಬಾಕಿ ಇರುವ ಸಾಲವನ್ನು ತಾನೇ ತೀರಿಸಿಕೊಳ್ಳುವವುದಾಗಿ  ಒಪ್ಪಿಕೊಂಡು  ತನಗೆ  ನಗದಾಗಿ 3,82,000/- ರೂಪಾಯಿಗಳನ್ನು ನೀಡಿ  ಕರಾರು ಪತ್ರ  ಮಾಡಿಕೊಂಡು ವಾಹನವನ್ನು ಆತನ ವಶಕ್ಕೆ ತೆಗೆದುಕೊಂಡು ಓಡಿಸಿಕೊಂಡಿದ್ದನು. ದಿನಾಂಕ: 30/11/2020 ರಂದು  ತಾನು  ಚಿಕ್ಕಬಳ್ಳಾಪುರ ತಾಲ್ಲೂಕು  ಹುನೇಗಲ್ ಗ್ರಾಮದಲ್ಲಿರುವ   ತನ್ನ ದೊಡ್ಡಪ್ಪನ ಮಗನಾದ  ಬಾಲಕೃಷ್ಣ  ಬಿನ್ ಲೇಟ್ ಆವುಲಪ್ಪ ರವರ  ಮನೆಗೆ ಹೋಗಿದ್ದಾಗ ಸಂತೋಷನಿಗೆ ಪರಿಚಯವಾಗಿದ್ದ  ಬೆಂಗಳೂರಿನ   ಉತ್ತರ ತಾಲ್ಲೂಕಿನ  ಮನೋರಾಯನಪಾಳ್ಯದ  ಮನೆ ನಂಬರ್: 1176, 1ನೇ ಕ್ರಾಸ್. ಬಿಲಾಲ್ ಮಸೀದಿ ಹತ್ತಿರ ವಾಸಿ ಇಂದದುಲ್ಲಾಖಾನ್  ಬಿನ್ ಅಮೀರುಲ್ಲಾ ಖಾನ್ ಎಂಬುವನು ಬಂದು ವಾಹನವನ್ನು ನೋಡಿ ತಾನು ತೆಗೆದುಕೊಳ್ಳುವುದಾಗಿ ಹೇಳಿ, ಪೈನ್ಯಾನ್ಸ್ ನಲ್ಲಿರುವ ಸಾಲದ ಹಣ 9.00.000/- ರೂಪಾಯಿಗಳನ್ನು ತಾನೇ ತೀರಿಸುವುದಾಗಿ ಹಾಗೂ ತನಗೆ 2.50.000/-ರೂಪಾಯಿಗಳನ್ನು ಕೋಡುವುದಾಗಿ  ತನಗೂ ಮತ್ತು ಸಂತೋಷನಿಗೆ  ನಂಬಿಸಿ  ವಾಹನವನ್ನು ತೆಗೆದುಕೊಂಡು  ಹೋಗಿದ್ದು  ನಂತರ ಅಂದಿನಿಂದ ಇದುವರೆವಿಗೂ ನಾವು  ಆಸಾಮಿಯನ್ನು  ಹುಡುಕಾಡುತ್ತಿದ್ದು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ಆಸಾಮಿಯ  ಮೊಬೈಲ್  ನಂಬರ್: 9845127804 ಕ್ಕೆ ಕರೆ ಮಾಡಿ ವಿಚಾರಿಸಿದಾಗ  ಇಂದು  ಮತ್ತು ನಾಳೆ ಕಂತುಗಳನ್ನು ಕಟ್ಟುವುದಾಗಿ ಮತ್ತು  ಹಣವನ್ನು ಕೊಡುವುದಾಗಿ ಹೇಳುತ್ತಿದ್ದು ಇದುವರೆವಿಗೂ  ನಮಗೇ ವಾಹನವನ್ನು  ಹಿಂದಿರುಗಿಸದೇ,  ಪೈನ್ಯಾನ್ಸ್ ನಲ್ಲಿ ಕಂತುಗಳನ್ನು  ಕಟ್ಟದೇ  ಮೋಸ ಮಾಡಿರುತ್ತಾನೆ. ಸದರಿ  ಆಸಾಮಿಯನ್ನು  ಮತ್ತು  ವಾಹನವನ್ನು  ಪತ್ತೆ ಮಾಡಿ ಕಾನೂನು  ರೀತ್ಯಾ ಕ್ರಮ ಜರುಗಿಸಬೇಕಾಗಿ ತಮ್ಮಲ್ಲಿ ಕೋರಿ  ನೀಡಿದ ದೂರಿನ  ಮೇರೆಗೆ ಈ ಪ್ರ.ವ.ವರದಿ.

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:-08/01/2021 ರಂದು ರಾತ್ರಿ 21-00 ಗಂಟೆಗೆ ಪಿರ್ಯಾಧಿದಾರರಾದ ಶ್ರೀಮತಿ ಚಂದ್ರಕಲಾ ಕೋಂ ಹರಿನಾಥ 35 ವರ್ಷ, ನಾಯಕರು, ಗೃಹಿಣಿ, ನಾಗವಾರ ರಿಂಗ್ ರಸ್ತೆ,      ಕರಿಯಣ್ಣ ಬಡಾವಣೆ, ಹೆಬ್ಬಾಳ, ಆರ್.ಟಿ ನಗರ ಅಂಚೆ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ರವರು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ ತನ್ನ ಗಂಡ ಹರಿನಾಥ ಬಿನ್ ರಾಮದಾಸ್ 45 ವರ್ಷ, ಚಾಲಕ ವೃತ್ತಿ, ರವರು ದಿನಾಂಕ:-08/01/2020 ರಂದು ಮಧ್ಯಾಹ್ನ 12-00 ಗಂಟೆಗೆ ಅವರ ಸ್ವಂತ ಗ್ರಾಮವಾದ ಪರಗಿ ಗ್ರಾಮ, ಹಿಂಧೂಪುರ ತಾಲ್ಲೂಕು, ಅನಂತಪುರ ಜಿಲ್ಲೆ ಗೆ ಹೋಗಿ ಬರುವುದಾಗಿ ಹೇಳಿ ಪಿರ್ಯಾಧಿರವರ ಅಕ್ಕನ ಬಾಬತ್ತು KA-04-JP-3489 ರ ಹೋಂಡಾ ಆಕ್ಟೀವಾ ಸ್ಕೂಟಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಮನೆಯಿಂದ ಹೋಗಿದ್ದು, ಅದೇ ದಿನ ಸಂಜೆ ಸುಮಾರು 4-00 ಗಂಟೆಯ ಸಮಯದಲ್ಲಿ ಯಾರೋ ಮೊಬೈಲ್ ಮೂಲಕ ಕರೆ ಮಾಡಿ ನಿಮ್ಮ ಗಂಡ ಹರಿನಾಥ ರವರಿಗೆ ಚಿಕ್ಕಬಳ್ಳಾಪುರದ ಬಳಿ ಅಪಘಾತವಾಗಿ ಕಾಲಿಗೆ ಗಾಯವಾಗಿದ್ದು ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸುತ್ತಿರುವುದಾಗಿ ತಿಳಿಸಿದ್ದು, ತಾನು ಹೆಬ್ಬಾಳದಿಂದ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ವಿಷಯ ನಿಜವಾಗಿದ್ದು, ತನ್ನ ಗಂಡನಾದ ಹರಿನಾಥ ರವರನ್ನು ಅಪಘಾತ ಬಗ್ಗೆ ವಿಚಾರಿಸಲಾಗಿ ದಿನಾಂಕ:-08/01/2020 ರಂದು ಮಧ್ಯಾಹ್ನ ಸುಮಾರು 3-30 ಗಂಟೆಯ ಸಮಯದಲ್ಲಿ ತಮ್ಮ ಊರಿಗೆ ಹೋಗಲು KA-04-JP-3489 ರ ಹೋಂಡಾ ಆಕ್ಟೀವಾ ಸ್ಕೂಟಿ ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬೆಂಗಳೂರು – ಬಾಗೇಪಲ್ಲಿ ಎನ್.ಎಚ್-44 ಹೈವೇ ರಸ್ತೆಯ ಮಂಚನಬಲೆ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ AP-03-TC-0826 ರ ಕ್ಯಾಂಟರ್ ವಾಹನದ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ತಾನು ಠಾರ್ ರಸ್ತೆಯಲ್ಲಿ ಬಿದ್ದಾಗ ತನಗೆ ಬಲ ಕಾಲಿನ ತೊಡೆಗೆ ಹಾಗೂ ಬಲ ಮೊಣಕಾಲಿನ ಕೆಳಭಾಗದಲ್ಲಿ ರಕ್ತ ಗಾಯಗಳಾಗಿದ್ದು ಅಲ್ಲಿನ ಸ್ಥಳೀಯರು ತನ್ನನ್ನು ಉಪಚರಿಸಿ 108 ಆಂಬ್ಯೂಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ ಎಂತ ತಿಳಿಸಿದ್ದು, ಸದರಿ ಅಪಘಾತ ಪಡಿಸಿದ AP-03-TC-0826 ರ ಕ್ಯಾಂಟರ್ ವಾಹನದ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಚಂದ್ರಶೇಖರ್ ಬಿನ್ ಆಂಜಿನಪ್ಪ 29 ವರ್ಷ, ಸೇವಾಮಂದಿರ ಗ್ರಾಮ, ಪೆನುಗೊಂಡ ತಾಲ್ಲೂಕು, ಅನಂತಪುರ ಜಿಲ್ಲೆ ಎಂತ ತಿಳಿದುಬಂದಿದ್ದು ಸದರಿ ಅಪಘಾತಪಡಿಸಿದ ಕ್ಯಾಂಟರ್ ವಾಹನದ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಗಣಕೀಕೃತ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 323,324,504,34 ಐ.ಪಿ.ಸಿ :-

     ದಿನಾಂಕ:08/01/2021 ರಂದು ಪಿರ್ಯಾದಿದಾರರಾದ ಎನ್.ರಾಮಕೃಷ್ಣ ಬಿನ್ ನರಸಿಂಹಪ್ಪ, 38 ವರ್ಷ, ನಾಯಕರು, ವ್ಯವಸಾಯ, ವಾಸ:-ಕೇತನಾಯಕನಹಳ್ಳಿ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಾನು ಈಗ್ಗೆ ಸುಮಾರು 5 ವರ್ಷಗಳಿಂದ ಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಅದ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ನಮ್ಮ ಗ್ರಾಮದಲ್ಲಿನ ಸರ್ಕಾರಿ ಚರಂಡಿಯನ್ನು ನಮ್ಮ ಗ್ರಾಮದ ಲಕ್ಷ್ಮಣ ಎಂಬುವರ ಜೆ.ಸಿ.ಬಿ ಯಿಂದ ಕೀಳುತ್ತಿದ್ದಾಗ ತಾನು ಅಲ್ಲಿಗೆ ಹೋಗಿ ಏಕೆ ಚರಂಡಿಯನ್ನು ಈ ರೀತಿ ಕೀಳುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಲಕ್ಷ್ಮಣ ಬಿನ್ ಹನುಮಂತಪ್ಪ, ಶಿವಪ್ಪ ಬಿನ್ ಮುನಿಯಪ್ಪ, ರಾಮಪ್ಪ ಬಿನ್ ದೊಡ್ಡ ಮುನಿಶಾಮಿ, ಅನಿಲ್ ಬಿನ್ ರಾಮಪ್ಪ ರವರುಗಳು ತನ್ನ ಮೇಲೆ ಗಲಾಟೆ ಮಾಡಿ “ಏ ಲೋಪರ್ ನನ್ನ ಮಗನೆ ನಿನ್ನ ಜಮಾನ ಮುಗಿಯಿತು ನೀನು ಯಾವನೋ ಕೇಳುವುದಕ್ಕೆ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನನ್ನು ಕೈಗಳಿಂದ ಹೊಡೆಯುತ್ತಿದ್ದಾಗ ವಿಷಯ ತಿಳಿದು ಸ್ಥಳಕ್ಕೆ ಬಂದ ತನ್ನ ತಮ್ಮ ಮೂರ್ತಿ, ವೆಂಕಟೇಶ್, ದೊಡ್ಡಪ್ಪನ ಮಗ ನರಸಿಂಹಪ್ಪ ಬಿನ್ ಪಿಲ್ಲನಾರಾಯಣಪ್ಪ, ಮತ್ತು ಚಿಕ್ಕಮ್ಮ ಮುನಿಯಮ್ಮ ರವರನ್ನು ಸಹ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು, ಅಡ್ಡ ಬಂದ ತನ್ನ ತಾಯಿ ರಾಮಾಂಜಮ್ಮ ಮತ್ತು ಚಿಕ್ಕಮ್ಮ ಮುನಿಯಮ್ಮನಿಗೆ ಲಕ್ಷ್ಮಣ ಬಿನ್ ಹನುಮಂತಪ್ಪ ಮತ್ತು ಶಿವಪ್ಪ ಬಿನ್ ಮುನಿಯಪ್ಪ ಎಂಬುವನು ದೊಣ್ಣೆಯಿಂದ ಹೊಡೆದಿದ್ದು, ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತೆ. ಆದ್ದರಿಂದ ಮೇಲ್ಕಂಡವರನ್ನು ಠಾಣೆಗೆ ಕರೆಸಿ ನನ್ನ ಮತ್ತು ನನ್ನ ಕುಟುಂಬದ ತಂಟೆ ತಕರಾರಿಗೆ ಬಾರದಂತೆ ಸೂಕ್ತ ಬಂದೋಬಸ್ಥ್ ಮಾಡಬೇಕಾಗಿ ತಮ್ಮಲ್ಲಿ ಕೋರಿದ್ದರ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಸದರಿ ಪ್ರಕರಣವು ಸಂಜ್ಙೆಯ ಪ್ರಕರಣವಾಗಿದ್ದು ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.09/2021 ಕಲಂ. 143,147,188,269,323,504,341,506,149 ಐ.ಪಿ.ಸಿ, 51(b) THE DISASTER MANAGEMENT ACT, 2005 & 3 EPIDEMIC DISEASES ACT, 1897 :-

     ದಿನಾಂಕ:08/01/2020 ರಂದು ಮದ್ಯಾಹ್ನ 14-15 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಶ್ರೀ ಮಂಜುನಾಥ  35 ವರ್ಷ, ವಕೀಲರು ವಾಸ:ಪೆರೇಸಂದ್ರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:07/01/2021 ರಂದು ಸುಮಾರು 2-20 ಗಂಟೆ ಸಮಯಲ್ಲಿ  ತಾನು ಊಟವನ್ನು ಮಾಡಿ ಎಂದಿನಂತೆ ಗುಡಿಬಂಡೆ ಪಟ್ಟಣದಿಂದ ಘನ ನ್ಯಾಯಾಲಯದ ಕಲಾಪಗಳಲ್ಲಿ ತನ್ನ ಕಕ್ಷಿದಾರರ ಪರವಾಗಿ ಪಾಲ್ಗೊಳ್ಳಲು ತನ್ನ ಕೆ,ಎ 53 ಪಿ 4754  ನೊಂದಣಿ ಸಂಖ್ಯೆಯ ಕಾರಿನಲ್ಲಿ ಗುಡಿಬಂಡೆ ಪಟ್ಟಣದ ಕೆ,ಸ್,ಆರ್,ಟಿ,ಸಿ ಬಸ್ ನಿಲ್ದಾಣದ ಬಳಿ ಬರುತ್ತಿರುವಾಗ  ಅಕ್ರಮ ಗುಂಪೊಂದು ಸೇರಿಕೊಂಡು ರಸ್ತೆಗೆ ಅಡ್ಡಲಾಗಿ ಯಾವುದೇ ವಾಹನಗಳನ್ನು ಬಿಡದೇ ಸಾರ್ವಜನಿಕರಿಗೆ ತೊಂದರೆ ಮಾಡುತ್ತಾ ಯಾವುದೋ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದಾಗ ತಾನು ಘನ ನ್ಯಾಯಾಯಾಲಯದ ಕಲಾಫಗಳಿಗೆ ಬಾಗವಹಿಸಲು ಹೋಗಬೇಕೆಂದು ಸದರಿರವರನ್ನು ಕೋರಿಕೊಂಢಾಗ ತನ್ನ ಮೇಲೆ ಏಕಏಕಿ ಅಲ್ಲಿ ಇದ್ದ ಹಲವು ಬಂದಿ ನಾವು ಮುಂಖಡರು ಎಂದು ಹೇಳಿಕೊಂಡು ತನ್ನನ್ನು ಸದರಿ ಸ್ಥಳದಿಂದ ಹೋಗಲು ಅವಕಾಶ ಮಾಡದೇ ಅವಾಚ್ಯ  ಶಬ್ದಗಳಿಂದ  ಮನಬಂದಂತೆ ಬೈದು ತನ್ನ ಕಾರನ್ನು ಅಡ್ಡಗಟ್ಟಿ ಈ ಸ್ಥಳದಲ್ಲಿ ತನ್ನ ಸಹುದ್ಯೋಗಿ ವಕೀಲ ಬೀಚಗಾನಹಳ್ಳಿ ಬಿ,ಆರ್ ಮಹೇಶ್ ರವರು ಸಹ ಈ ಸಂಬಂಧ ಸದರಿ ರವರನ್ನು ವಿನಂತಿ ಮಾಡಿದರೂ ಯಾವುದೇ ಪ್ರಯೋಜನವಾಗದಿದ್ದು ಸದರಿ ಗುಂಪಿನ ನಾಯಕತ್ವ ವಹಿಸಿದ್ದ ತಿಮ್ಮಯ್ಯಗಾರಹಳ್ಳಿ ಕೃಷ್ನೇಗೌಡ, ಗುಡಿಬಂಡೆ ಪಟ್ಟಣದ ರಿಯಾಜ್ ಪಾಷ, ಇಸ್ಮೀಯಿಲ್ ಅಜಾದ್ ಅಲಿಯಾಸ್ ಬಾಬು, ಕಡೇಹಳ್ಳಿ ಆದಿರೆಡ್ಡಿ, ಯರ್ರಲಕ್ಕೇನಹಳ್ಳಿ ಮಂಜುನಾಥ, ಬ್ರಹ್ಮಣರಹಳ್ಳಿ ಗ್ರಾಮದ ಮೂರ್ತಿ ರವರು ಸೇರಿದಂತೆ ಸ್ಥಳದಲ್ಲಿದ್ದ ಹಲವು ಮಂದಿ ಏಕೇಕಿ ತನ್ನ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣ ಬೆದರಿಕೆ ಹಾಕಿ ನೀನು ಗುಂಜೂರು ಶ್ರೀನಿವಾಸರೆಡ್ಡಿ ಏಜೆಂಟನೇ ? ಎಂದು ವಕೀಲನಾದ ತನ್ನನ್ನು ಕಾರಿನಿಂದ ಳೆದು ಅವನ್ನನ್ನು ಮುಗಿಸಿಬಿಡೋಣ  ಎಂದು ತಿಮ್ಮಯ್ಯಗಾರಹಳ್ಳಿ ಕೃಷ್ಣೇಗೌಡ  ಕೂಗಾಡಿ, ಯರ್ರಲಕ್ಕೇನಹಳ್ಳಿ ಮಂಜುನಾಥ ತನ್ನ ಕಾರಿನ ಮೇಲೆ, ಜೋರಾಗಿ ಕೈಗಳಿಂದ ಗುದ್ದಿ ತನ್ನ ಮೇಲೆ ಹಲ್ಲೇ ಮಾಡಿ ದಮಕಿ ಹಾಕಿ ರಿಯಾಜ್ ಪಾಷ ರವರು ತನ್ನನ್ನು ಕೀಳಾಗಿ ನಿಂದಿಸಿ. ಪ್ರಾಣ ಬೆದರಿಕೆ ಹಾಕಿದ್ದು ಇಸ್ಮಾಯಿಲ್ ಅಜಾದ್ ರವರು ಲೌಡಿಕೇ ಬಾಲ್  ಲಾ ಅಂಡರ್ ನಾವೇ ಕಳ್ಳ ನನ್ನ ಮಗನೇ ಎಂದು ತನ್ನನ್ನು ನಿಂದಿಸಿದ್ದು ಆರೋಪಿಗಳಿ ತನ್ನನ್ನು ಸಾಕಷ್ಟು ಸಾರ್ವಜನಿಕವಾಗಿ   ಮಾನಹಾನಿ ಮಾಡಿ ತನ್ನ ವಕೀಲ ವೃತ್ತಿಯ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ತಾನು ಈ ಎಲ್ಲಾ ವಿಚಾರವನ್ನು ಗುಡಿಬಂಡೆ ವಕೀಲರ ಸಂಘದ ಎಲ್ಲಾ ಪಧಾಧಿಕಾರಿಗಳೊಂದಿಗೆ ಚರ್ಚಿಸಿ ಈ ದಿನ ತಾನು ಠಾಣೆಯಲ್ಲಿ ತಡವಾಗಿ ಮೇಲ್ಕಂಡವರ ವಿರುದ್ದ ಕರ್ನಾಟಕ ಸಾಂಕ್ರಾಮಿಕ ಅದ್ಯಾದೇಶ 2020, ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆ, 2005 ಹಾಗೂ ಸದರಿ ಆಸಾಮಿಗಳು ಮಾಡಿರುವ ಕೃತ್ಯವು ಘನ ಸರ್ವೋಚ್ಚ ನ್ಯಾಯಾಲಯವು  SUO MOTU WRIT PETITION (CIVIL) NO 7/2020 ರಲ್ಲಿ ನೀಡಿರುವ ಮಾರ್ಗಸೂಚಿ ಹಾಗೂ ಗೃಹ ವ್ಯವಹಾರಗಳ ಸಚಿವಾಲಯ  ಕಾನೂನುಗಳ ರೀತ್ಯಾ ಕ್ರಮ ಕೈಗಳ್ಳಲು ನೀಡಿದ ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.10/2021 ಕಲಂ. 341,504 ಐ.ಪಿ.ಸಿ:-

     ದಿನಾಂಕ:08/01/2021 ರಂದು ಮದ್ಯಾಹ್ನ 15.30 ಗಂಟೆ ಸಮಯದಲ್ಲಿ ಪಿರ್ಯಾದಿ ರಮೇಶ್ ಬಿನ್ ನಾರಾಯಣಪ್ಪ 25 ವರ್ಷ, ವಾಸ ಬಾಲೇನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 07.01.2021 ರಂದು ಗುರುವಾರ ಮದ್ಯಾಹ್ನ 1.30 ರಿಂದ 2 ಗಂಟೆ ಸಮಯದಲ್ಲಿ ತಾವು ಜನಪ್ರಿಯ ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ ರವರ ವಿರುದ್ಧ ಗುಂಜುರು ಶ್ರೀನಿವಾಸರೆಡ್ಡಿ ಬೆಂಬಲಿಗರಾದ ಚೆಳೂರಿನ ಮಧುಸುಧನರೆಡ್ಡಿ ರವರು ಶಾಸಕರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಾಗ ಶಾಸಕರ ಬೆಂಬಲಿಗರು ಮತ್ತು ಕಾಂಗ್ರೇಸ್ ಕಾರ್ಯ ಕರ್ತರು ಸಾಂಕೇತವಾಗಿ ರಸ್ತೆ ತಡೆದು ಪ್ರತಿಭಟನೆಯನ್ನು ಅಂಬಿಕೊಂಡಿದ್ದು ಈ ವೇಳೆಯಲ್ಲಿ ಮಂಜುನಾಥ (ವಕೀಲ)ರವರು ತಮ್ಮ ವಾಹನದಲ್ಲಿ ಬಂದು ಪ್ರತಿಭಟನಾಕಾರರ ಮುಂದೆ ಬಂದು ಕಾರಿನ ಹಾರನ್ ಒಡೆದು ಕಾರಿನಿಂದ ಏಕಾಏಕಿ ಇಳಿದು ತಮ್ಮ ಕಾರ್ಯಕರ್ತರು ಮೇಲೆ ಹಾಗೂ ಸಾರ್ವಜನಿಕರ ಮೇಲೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಧಮಕಿ ಹಾಕಿ ನಿಂದಿಸಿ ಪ್ರತಿಭಟನಾಕಾರರನ್ನು ಅಡ್ಡಗಟ್ಟಿ ನಿಂಧಿಸಿ ಮುಂದಾದಾಗ ಪ್ರತಿಭಟನಾಕಾರರು ಮಂಜುನಾಥ ರವರನ್ನು ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವೆ. ಹೋರೆತು ಯಾರಿಗೂ ತೊಂದರೆ ನೀಡುತ್ತಿಲ್ಲ್ ಒಂದು ವೇಳೆನಾವು ತಪ್ಪು ಮಾಡಿದ್ದರೆ ನಮ್ಮ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ ನೀವು ಯಾಕೆ ನಮಗೆ ಹಾಗೂ ಪ್ರತಿಭಟನಾಕಾರರನ್ನು ಅಡ್ಡಗಟ್ಟುತ್ತಿರಿ ಎಂದು ಹೇಳಿದಾಗ ಮಂಜುನಾಥ ರವರು ಸಾಂಕೇತಿಕ ಪ್ರತಿಭಟನಾಕಾರರನ್ನು ಅಡ್ಡಗಟ್ಟಿ ಹಾಗೂ ಶಾಸಕರ ಅಭಿಮಾನಿಗಳ ಬಗ್ಗೆ ಅವಹೇಳನವಾಗಿ ಮಾತನಾಡಿ ಪ್ರತಿಭಟನಾಕಾರರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮಕಿ ಹಾಕಿರುತ್ತಾರೆ. ಆದ್ದರಿಂದ ಮಂಜುನಾಥ ರವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.11/2021 ಕಲಂ. 279,304(A) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ:9-01-2021 ರಂದು ಮದ್ಯಾಹ್ನ:12-30 ಗಂಟೆಯಲ್ಲಿ ಪಿರ್ಯಾದಿದಾರರಾದ ಪುಲಿಕಂಟಿ ಶ್ರೀರಾಮರೆಡ್ಡಿ ಬಿನ್ ಲೇಟ್ ಅಶ್ವಥರೆಡ್ಡಿ 53 ವರ್ಷ ರೆಡ್ಡಿ ಜನಾಂಗ ಜಿರಾಯ್ತಿ ವಾಸ ಪೆದ್ದವಡಗೂರು ಗ್ರಾಮ ಮತ್ತು ಮಂಡಲ್ ಅನಂತಪುರ ಜಿಲ್ಲೆ ಆಂದ್ರಪ್ರದೇಶ್ ರಾಜ್ಯ ಪೊ:9908847686 ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಂಶವೇನೆಂದರೆ: ತನ್ನ ಮಗನಾದ ಮಗನಾದ ಪುಲಿಕಂಟಿ ಪ್ರಕಾಶ 28 ವರ್ಷ ಸಾಪ್ಟವೇರ್ ಇಂಜನಿಯರ್ ಕೆಲಸ ರವರು ಈಗ್ಗೆ ಸುಮಾರು 8 ತಿಂಗಳಿಂದ ಬೆಂಗಳೂರಿನಲ್ಲಿ ಸಾಪ್ಟವೇರ್ ಇಂಜನಿಯರ್ ಕೆಲಸ ಮಾಡಿಕೊಂಡಿದ್ದು ಆತನಿಗೆ ಈಗ್ಗೆ ಸುಮಾರು 2 ತಿಂಗಳ ಹಿಂದೆ ತೇಜಶ್ವಿನಿ ಎಂಬುವರೊಂದಿಗೆ ಮದುವೆಯಾಗಿರುತ್ತೆ ದಿನಾಂಕ:08-01-2021 ರಂದು ರಾತ್ರಿ ಸುಮಾರು 8-00 ಗಂಟೆಯಲ್ಲಿ ತನ್ನ ಮಗನಾದ ಪ್ರಕಾಶ್ ರವರು ತನಗೆ ಪೋನ್ ಮಾಡಿ  ಬೆಂಗಳೂರಿನಿಂದ ತಮ್ಮ ಊರಿಗೆ ನಾಳೆ ಬರುವುದಾಗಿ ತಿಳಿಸಿದ್ದು ನಂತರ ಈ ದಿನ ದಿನಾಂಕ:09-01-2021 ರಂದು ಬೆಳಗ್ಗೆ ಸುಮಾರು 7-00 ಗಂಟೆಯಲ್ಲಿ ಕನರ್ಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಯಾರೋ ಅಂಬ್ಯೂಲೇನ್ಸ್ ರವರು ತನಗೆ ಪೋನ್ ಮಾಡಿ ನಿಮ್ಮ ಮಗ ಪ್ರಕಾಶ ರವರು ಈ ದಿನ ದಿನಾಂಕ:09-01-2021 ರಂದು ಬೆಳಗ್ಗೆ ಸುಮಾರು 6-30 ಗಂಟೆಯಿಂದ  6-45 ಗಂಟೆಯಲ್ಲಿ ಎ.ಪಿ-39 ಎಫ್.ಕೆ-4725 ನೊಂದಣಿ ಸಂಖ್ಯೆಯ ಜಾವ ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬೆಂಗಳೂರು ಕಡೆಯಿಂದ ಹೈದರಬಾದ್ ಕಡೆ ಹೋಗುವ ಎನ್.ಹೆಚ್-44 ರಸ್ತೆಯಲ್ಲಿ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಬುಶೆಟ್ಟಿಹಳ್ಳಿ ಕ್ರಾಸ್ ಹತ್ತಿರ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಪ್ರಕಾಶ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡ  ಎ.ಪಿ-39 ಎಫ್.ಕೆ-4725 ನೊಂದಣಿ ಸಂಖ್ಯೆಯ ಜಾವ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋದ  ಪರಿಣಾಮ ದ್ವಿ ಚಕ್ರವಾಹನ ಜಖಂಗೊಂಡು ಪ್ರಕಾಶ್ ರವರಿಗೆ ಕಾಲಿಗೆ ಮತ್ತು ಮುಖಕ್ಕೆ ರಕ್ತಗಾಯಗಳಾಗಿ ಗಾಯಗೊಂಡಿದ್ದ ಪ್ರಕಾಶ ರವರನ್ನು ಚಿಕತ್ಸೆಗಾಗಿ ಅಂಬ್ಯೂಲೇನ್ಸ್ ವಾಹನದಲ್ಲಿ ಕರೆದುಕೊಂಡು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಪ್ರಕಾಶ ರವರು ಮೇಲ್ಕಂಡ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಮಾರ್ಗಮದ್ಯ ಮೃತಪಟ್ಟಿರವುದಾಗಿ ಮತ್ತು ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿರವುದಾಗಿ ತಿಳಿಸಿದ್ದು ನಂತರ ತಾನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಮೃತದೇಹವು ತನ್ನ ಮಗನಾದ ಪ್ರಕಾಶ ರವರದ್ದಾಗಿದ್ದು ನಂತರ ತಾನು ಅಪಘಾತ ನಡೆದ ಸ್ಥಳಕ್ಕೆ ಹೋಗಿ ಸ್ಥಳವನ್ನು ನೋಡಿಕೊಂಡು ಬಂದು ದೂರು ನೀಡುತ್ತಿದ್ದು ತನ್ನ ಮಗ ಪುಲಿಕಂಟಿ ಪ್ರಕಾಶ ರವರಿಗೆ ಅಪಘಾತಪಡಿಸಿ ವಾಹನವನ್ನು ಸ್ಥಳದಲ್ಲಿ ನಿಲ್ಲಸದೇ ಹೊರಟು ಹೋದ ವಾಹನ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ:09/01/2021 ರಂದು ಸಂಜೆ 7-30 ಗಂಟೆಗೆ ನ್ಯಾಯಾಲಯದ ಸಿಬ್ಬಂದಿ ಸಿಪಿಸಿ-174 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದನ್ನು ಪಡೆದು ಪ್ರಕರಣ ದಾಖಲಿಸಿದ್ದರ ಸಾರಾಂಶವೇಂದರೆ, ದಿನಾಂಕ:09/01/2021 ರಂದು ಪಿ.ಎಸ್.ಐ ಶ್ರೀ ಎನ್ ರತ್ನಯ್ಯರವರು ಗಸ್ತಿನಲ್ಲಿದ್ದಾಗ ಸಂಜೆ 4-30 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ಆರ್.ನಲ್ಲಗುಟ್ಲಪಲ್ಲಿ ಗ್ರಾಮದ ಬಸ್ ನಿಲ್ದಾಣದ ರಸ್ತೆಯ ಪೂರ್ವ ದಿಕ್ಕಿಗಿರುವ ಹೊಂಗೆ ಮರದ ಕೆಳಗೆ ಯಾರೋ ಆಸಾಮಿಗಳು ಹಣವನ್ನು ಪಣವನ್ನಾಗಿಟ್ಟುಕೊಂಡು ಆಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರಾದ ಪಿಸಿ-234 ಸುರೇಶ ಕೊಂಡಗೂಳಿ ಪಿಸಿ-119 ಗಿರೀಶ ಪಿಸಿ-436 ನಂದೀಶ್ವರ ನೆಲ್ಕುದ್ರಿ ಪಿಸಿ-181 ಪ್ರಸಾದ್ ಪಿಸಿ-303 ಬಸವರಾಜ ಕುಂಬಾರ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-59 ವಾಹನದಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಆಸಾಮಿಗಳು 100 ರೂ ಅಂದರ್, 100 ರೂ ಬಾಹರ್ ಎಂದು ಕೂಗಿಕೊಂಡು ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ಮೇಲೆ ನಾವು ದಾಳಿ ಮಾಡಲು ಸುತ್ತುವರೆದು ಜೂಜಾಟ ಆಡುತ್ತಿದ್ದವರನ್ನು ಎಲ್ಲಿಯೂ ಕದಲಬೇಡಿ ಎಂದು ಎಚ್ಚರಿಕೆ ನೀಡಿ ಅವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ರವಿಚಂದ್ರರೆಡ್ಡಿ ಬಿನ್ ಪೆದ್ದರಾಮರೆಡ್ಡಿ, 33 ವರ್ಷ, ವಕ್ಕಲಿಗರು,  ಜಿರಾಯ್ತಿ, ವಂಟೀರವಾಂಡ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು. 2) ರವಿ  ಬಿನ್ ವೆಂಕಟರವಣ, 28 ವರ್ಷ, ವಕ್ಕಲಿಗರು, ಜಿರಾಯ್ತಿ, ವಂಟೀರವಾಂಡ್ಲಪ್ಲಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 3) ನರಸಿಂಹಪ್ಪ  ಬಿನ್ ಲೇಟ್ ವೆಂಕಟರವಣಪ್ಪ, 30 ವರ್ಷ, ನಾಯಕರು, ಜಿರಾಯ್ತಿ, ಆರ್.ನಲ್ಲಗುಟ್ಲಪಲ್ಲಿ ಗ್ರಾಮ ಬಾಗೇಪಲ್ಲಿ ತಾಲ್ಲೂಕು 4) ಬೈರೆಡ್ಡಿ ಬಿನ್ ನಾರಾಯಣರೆಡ್ಡಿ, 33 ವರ್ಷ, ವಕ್ಕಲಿಗರು, ಜಿರಾಯ್ತಿ, ವಂಟೀರವಾಂಡ್ಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 5) ಬೈರೆಡ್ಡಿ ಬಿನ್ ಬೈಯ್ಯಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ಮಾಮಿಡಿಮಾಕಲಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು 6) ರವಿ ಬಿನ್ ವೆಂಕಟರಮಣಾರೆಡ್ಡಿ,  45 ವರ್ಷ, ವಕ್ಕಲಿಗರು,  ಜಿರಾಯ್ತಿ, ರಾಮಾನುಪಾಡಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದರು. ನಂತರ ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಗಳನ್ನು ವಶಕ್ಕೆ ಪಡೆದು ಪಣಕ್ಕಿಟ್ಟಿದ್ದ  1200/- ರೂ ನಗದು ಹಣ, ಒಂದು ಹಳೆಯ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 5-00 ರಿಂದ 6-00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಗಳು, ಪಂಚನಾಮೆ ಮತ್ತು ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿದ್ದು, ಮೇಲ್ಕಂಡವರ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿರುವುದ್ದಾಗಿರುತ್ತೆ.