ದಿನಾಂಕ : 08/12/2019ರ ಅಪರಾಧ ಪ್ರಕರಣಗಳು

1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.73/2019 ಕಲಂ. 279-338 ಐಪಿಸಿ & 187 ಐ.ಎಂ.ವಿ ಆಕ್ಟ್ :-
ದಿನಾಂಕ:07/12/2019 ರಂದು ಸಂಜೆ 4:00 ಗಂಟೆಯ ಸಮಯದಲ್ಲಿ ಪಿರ್ಯಾದಿ ಶ್ರೀ ಮಂಜುನಾಥ ಎ.ವಿ. ಬಿನ್ ವೆಂಕಟೇಶಪ್ಪ 32 ವರ್ಷ, ಬಲಜಿಗರು, ಗಾರೆ ಕೆಲಸ, ವಾಸ ವಾರ್ಡ ನಂ 27, ದೊಡ್ಡಭಜನೆ ಮನೆ ರಸ್ತೆ, ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ, ತನ್ನ ಮಗನಾದ ಆಕ್ಷಯ ಎಂ 12 ವರ್ಷ, ರವರು ನ್ಯೂ ಹ್ಯಾರೀಜನ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ದಿನ ದಿನಾಂಕ:-07/12/2019 ರಂದು ಶನಿವಾರ ಬೆಳಿಗ್ಗೆ 08-45 ಗಂಟೆ ಸಮಯದಲ್ಲಿ ತಾನೇ ತನ್ನ ಮಗನನ್ನು ಶಾಲೆಯಲ್ಲಿ ಬಿಟ್ಟು ಬಂದಿರುತ್ತೇನೆ, ಈ ದಿನ ಶನಿವಾರವಾಗಿದ್ದರಿಂದ ಬೆಳಿಗ್ಗೆ 11-45 ಗಂಟೆಗೆ ಶಾಲೆಯನ್ನು ಬಿಟ್ಟಿರುತ್ತಾರೆ, ತಾನು ತಮ್ಮ ಮನೆಯ ಬಳಿ ಗಾರೆ ಕೆಲಸವನ್ನು ಮಾಡುತ್ತಿದ್ದಾಗ, ನ್ಯೂ ಹ್ಯಾರೀಜನ್ ಶಾಲೆಯಿಂದ ಶಿಕ್ಷಕರು ದೂರವಾಣಿ ಕರೆ ಮಾಡಿ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ರಸ್ತೆಯನ್ನು ದಾಟುತ್ತಿದ್ದಾಗ ಚದಲಪುರದ ಕಡೆಯಿಂದ ಬಂದ ಕೆಎ-40-ಇಇ-0018 ಕೆಟಿಎಂ ದ್ವಿ ಚಕ್ರವಾಹನ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಮಗನಿಗೆ ಮದ್ಯಾಹ್ನ 12-00 ಗಂಟೆಗೆ ಸಮಯದಲ್ಲಿ ಅಪಘಾತ ಮಾಡಿ ಹೊರಟು ಹೋಗಿರುತ್ತಾನೆ, ತಮ್ಮ ಮಗನನ್ನು ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ವತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿ ತಿಳಿಸಿದ್ದು, ತಾನು ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ವೈದ್ಯರನ್ನು ವಿಚಾರ ಮಾಡಲಾಗಿ, ತಮ್ಮ ಮಗನಿಗೆ ಬಲಗೈ ಮೊಣಕೈ ಬಳಿ ಮತ್ತು ಬಲಗಾಲು ಪಾದದ ಮೇಲ್ಬಾಗದಲ್ಲಿ ಮೂಳೆಗೆ ತೀವ್ರತರವಾದ ಗಾಯವಾಗಿರುವುದಾಗಿ ತಿಳಿಸಿದ್ದು, ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ತಿಳಿಸಿರುತ್ತಾರೆ. ಅದ್ದರಿಂದ ಅಪಘಾತ ಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೋರಟುಹೋದ ಕೆಎ-40-ಇಇ-0018 ಕೆಟಿಎಂ ದ್ವಿಚಕ್ರ ವಾಹನ ಸವಾರನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರನ ಮೇರಿಗೆ ಪ್ರಕರಣ ದಾಖಲಿಸಿರುತ್ತೆ.
2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.455/2019 ಕಲಂ. 279-338 ಐಪಿಸಿ :-
ದಿನಾಂಕ 08/12/2019 ರಂದು ಮದ್ಯಾಹ್ನ 1.00 ಗಂಟೆಗೆ ಪಿರ್ಯಾದಿದಾರರಾದ ಟಿ.ವೆಂಕಟೇಶಪ್ಪ ಬಿನ್ ಲೇಟ್ ಚಿಕ್ಕತಮ್ಮಣ್ಣ, 62 ವರ್ಷ, ರಾಳ್ಳಕುಂಟೆ ಗ್ರಾಮ, ಹಿಂಡಿಗನಾಳ ಅಂಚೆ, ಸೂಲಿಬೆಲೆ ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ತನಗೆ ಆರ್.ವಿ.ಹರೀಶ್ ಮತ್ತು ಆರ್.ವಿ.ಪ್ರಶಾಂತ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ತನ್ನ ಎರಡನೇ ಮಗನಾದ ಆರ್.ವಿ ಪ್ರಶಾಂತ್ ತನ್ನ ಬಾಬತ್ತು ಹೀರೋ ಸ್ಲೆಂಡರ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-53 ಇಪಿ-8178 ರ ಮೇಲೆ ದಿನಾಂಕ 07/12/2019 ರಂದು ಸಂಜೆ ಸುಮಾರು 5.30 ರ ಸಮಯದಲ್ಲಿ ತಮ್ಮ ಗ್ರಾಮದಿಂದ ತನ್ನ ತಂಗಿಯ ಊರಾದ ಚಿಂತಾಮಣಿ ತಾಲ್ಲೂಕಿನ ಮೈಲಾಪುರ ಗ್ರಾಮಕ್ಕೆ ಹೋಗಲು ಹೊಸಕೋಟೆ-ಚಿಂತಾಮಣಿ ನಗರದ ಮುಖ್ಯ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಸಂಜೆ 6.10 ಗಂಟೆಗೆ ತಳಗವಾರ ಕ್ರಾಸ್ ಬಳಿ ಬರುತ್ತಿದ್ದಾಗ, ಚಿಂತಾಮಣಿ ಕಡೆಯಿಂದ ಬರುತ್ತಿದ್ದ ಕಾರು VOKSWAGEN ಕಾರಿನ ಸಂಖ್ಯೆ ಕೆಎ-02 ಎಂಹೆಚ್-6899 ರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಎದುರುಗಡೆ ಬರುತ್ತಿದ್ದಂತಹ ತನ್ನ ಮಗನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತನ್ನ ಮಗ ಕೆಳಕ್ಕೆ ಬಿದ್ದು ತನ್ನ ಮಗನ ತಲೆಯ ಹಿಂಬದಿ ಬಲಭಾಗಕ್ಕೆ, ಬಲಕಿವಿಗೆ ತೀವ್ರ ಸ್ವರೂಪದ ರಕ್ತ ಗಾಯಗಳಾಗಿರುತ್ತೆ. ಬಲ ಮುಂಗೈ ಮುರಿದು ಹೋಗಿರುತ್ತದೆ. ಸದರಿ ವಿಚಾರವನ್ನು ತನಗೆ ತಿಳಿಸಿದ ವ್ಯಕ್ತಿ ತಳಗವಾರ ಗ್ರಾಮದ ಮಂಜುನಾಥ ಎಂಬುವರು ಪೋನ್ ಮಾಡಿ ತಿಳಿಸಿದರು. ತಕ್ಷಣ ತಾನು ಸ್ಥಳಕ್ಕೆ ಬಂದು ನೋಡಲಾಗಿ ತನ್ನ ಮಗನನ್ನು ಆಂಬುಲೆನ್ಸ್ ವಾಹನದಲ್ಲಿ ಕೈವಾರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು, ಅಲ್ಲಿನ ವೈದ್ಯರ ಸಲಹೆ ಮೇರೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಮಾಡಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ ರಾತ್ರಿ ಸುಮಾರು 8.30 ಗಂಟೆಯಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿರುತ್ತೇವೆ. ಸದರಿ ಅಪಘಾತಕ್ಕೆ ಕಾರಣವಾದ ಕೆಎ-02 ಎಂಹೆಚ್-6899 VOKSWAGEN ಕಾರಿನ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ದೂರು.
3. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.455/2019 ಕಲಂ. 379 ಐಪಿಸಿ :-
ಪಿರ್ಯಾದಿದಾರರಾದ ವೆಂಕಟೇಶ್ ಬಿನ್ ಚಂದ್ರಶೇಖರ್,ವಾರ್ಡ್ ನಂ-19, ಬಂಬೂಬಜಾರ್, ಚಿಂತಾಮಣಿ ನಗರ ರವರು ಠಾಣೆಗೆ ಹಾಜರರಾಗಿ ನೀಡಿದ ದೂರಿನ ಸಾರಾಂಶವೆನೆಂಧರೆ ನಾನು ಚಿಂತಾಮಣಿ ನಗರದ ಟಿಪ್ಪು ನಗರದಲ್ಲಿ ಓಂ ಶಕ್ತಿ ಚಾಟ್ಸ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೆ. ನಾನು ಸುಮಾರು 06 ತಿಂಗಳ ಹಿಂದೆ ನಾನು ಚಿಂತಾಮಣಿ ನಗರದ ಕೃಷ್ಣ ಮೋಟರ್ಸ್ ನಲ್ಲಿ KA-67-E-3957 ನಂಬರಿನ TVS XL-100 I-TOUCH START (CHASSIS NO: MD621HP17K1B25816/ ENGIN NO: CPIBK1226985 ಬಣ್ಣ- MOSS GREEN) ಸುಮಾರು 43000 ಸಾವರ ಬೆಳೆಬಾಳುವ ದ್ವೀಚಕ್ರ ವಾಹನವನ್ನು ಖರೀದಿ ಮಾಡಿರುತ್ತೆನೆ ನಾನು ಎಂದಿನಂತೆ ದಿನಾಂಕ: 05.12.2019 ರಂದು ರಾತ್ರಿ 10.00 ಗಂಟೆಗೆ ಟಿಪ್ಪು ನಗರದಲ್ಲಿರುವ ಓಂ ಶಕ್ತಿ ಚಾಟ್ಸ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಯ ಬಳಿ ನನ್ನ ದ್ವೀಚಕ್ರ ವಾಹನವನ್ನು ನಿಲ್ಲಿಸಿ ಮನೆಗೆ ಹೋಗಿ ಮಲಗಿರುತ್ತೆನೆ ನಂತರ ದಿನಾಂಕ : 06.12.2019 ರಂದು ಬೆಳಿಗ್ಗೆ 6.30 ಗಂಟೆಗೆ ಎದ್ದು ನೋಡಲಾಗಿ ನನ್ನ ದ್ವೀಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ. ಆದ್ದರಿಂದ ಕಳವು ಆಗಿರುವ ನನ್ನ ದ್ವೀಚಕ್ರ ವಾಹನವನ್ನು ಹುಡುಕಿಕೊಡಬೇಕಾಗಿ ಕೋರಿ ನೀಡಿದ ದೂರಾಗಿರುತ್ತೆ.
4. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.504/2019 ಕಲಂ. 279-337 ಐಪಿಸಿ :-
ದಿನಾಂಕ 07/12/2019 ರಂದು ಸಂಜೆ 15-45 ಗಂಟೆಗೆ ಪಿರ್ಯಾಧಿದಾರರಾದ ನಾಗರತ್ನಮ್ಮ ಕೋಂ ಕೃಷ್ಣಾರೆಡ್ಡಿ 42 ವರ್ಷ, ವಕ್ಕಲಿಗರು ಕೆಂಕರೆ ಗ್ರಾಮ ಗೌರಿಬಿದನೂರು ತಾಲ್ಲೂಕು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 06/12/2019 ರಂದು ಬೆಳಿಗ್ಗೆ ನನ್ನ ಗಂಡ ಕೂಲಿ ಕೆಲಸಕ್ಕೆಂದು ಕೊಂಡಾಪುರದ ಕಡೆಗೆ KA-01-EJ 1168 ದ್ವಿಚಕ್ರ ವಾಹನದಲ್ಲಿ ಹೋಗಿದ್ದು ನಂತರ ರಾತ್ರಿ ಸುಮಾರು 7-00 ಗಂಟೆಯಲ್ಲಿ ನನ್ನ ಗಂಡ ನಮ್ಮ ಮನೆ ಬಳಿ ಇರುವ ರಂಗಪ್ಪ ಬಿನ್ ರಾಮಯ್ಯ ನಾಯಕ ಜನಾಂಗ ರವರಿಗೆ ಪೋನ್ ಮಾಡಿ ತನಗೆ 07-00 ಗಂಟೆಯಲ್ಲಿ ಕೆಂಕರೆ ಗೇಟ್ ಬಳಿ ಯಾವುದೊ ದ್ವಿಚಕ್ರ ವಾಹನದ ಸವಾರ ಅಪಘಾತ ಮಾಡಿದ್ದು ತನಗೆ ನಡೆಯಲು ಆಗುತ್ತಿಲ್ಲವೆಂದು ಕೂಡಲೇ ಸ್ಥಳಕ್ಕೆ ಬರುವಂತೆ ತಿಳಿಸಿದ್ದು ಈ ವಿಚಾರ ನಮಗೆ ರಂಗಪ್ಪನಿಂದ ತಿಳಿದು ಬಂದು ನಾವೆಲ್ಲಾ ಕೆಂಕರೆ ಗೇಟ್ ಬಳಿಗೆ ಹೋದಾಗ ಅಲ್ಲಿ ಅಪಘಾತಕ್ಕೆ ಒಳಗಾಗಿದ್ದ ನನ್ನ ಗಂಡನ ದ್ವಿಚಕ್ರ ವಾಹನ ಸಂಖ್ಯೆ KA-01 EJ 1168 ದ್ವಿಚಕ್ರ ವಾಹನವು ಸ್ಥಳದಲ್ಲೇ ಬಿದ್ದಿದ್ದು ಈ ವಾಹನದ ಮುಂಭಾಗದ ಹೆಡ್ ಲೈಟ್ ಹಾಗೂ ಮುಂಭಾಗದ ಚಕ್ರ ಜಖಂ ಆಗಿರುತ್ತೆ. ಸ್ಥಳದಲ್ಲಿ ನನ್ನ ಗಂಡ ಕೃಷ್ಣಾರೆಡ್ಡಿ ಅವರು ಇರಲಿಲ್ಲ ನಾವು ಯಾವುದಾದರೂ ಆಸ್ವತ್ರೆಗೆ ಹೋಗಿರಬಹುದೆಂದು ಎಲ್ಲಾ ಕಡೆ ಆಸ್ವತ್ರೆಗಳಲ್ಲಿ ಹುಡುಕಾಡಿದರೂ ಸಹ ಗಾಯಗೊಂಡಿರುವ ನನ್ನ ಗಂಡ ಇದುವರೆಗೂ ಸಿಕ್ಕಿರುವುದಿಲ್ಲ ಯಾರೋ ವ್ಯಕ್ತಿಗಳು ಅವರ ದ್ವಿಚಕ್ರ ವಾಹನವನ್ನು ಅತಿ ವೇಗ ಹಾಗೂ ಅಜಾಗರೂ ಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ನನ್ನ ಗಂಡನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ್ದರಿಂದ ನನ್ನ ಗಂಡನ ಗಾಯಗೊಂಡಿದ್ದರು ನನ್ನ ಗಂಡನನ್ನು ಅವರೆ ಚಿಕಿತ್ಸೆಗೆ ಕರೆದುಕೊಂಡು ಹೋಗಿರಬಹುದಾಗಿರುತ್ತೆ ಈ ಬಗ್ಗೆ ನನಗೆ ಅನುಮಾನವಿರುತ್ತೆ. ಆದ್ದರಿಂದ ಅಪಘಾತ ಮಾಡಿರುವ ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸ ಬೇಕಾಗಿ ಕೋರಿ ದೂರು.