ದಿನಾಂಕ :08/10/2020 ರ ಅಪರಾಧ ಪ್ರಕರಣಗಳು

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.141/2020 ಕಲಂ: 279,337 ಐ.ಪಿ.ಸಿ:-

     ದಿನಾಂಕ: 08/10/2020 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದುದಾರರಾದ ಎಂ.ಮುನಿಕೃಷ್ಣ ಬಿನ್ ಲೇಟ್ ಮುನಿಶಾಮಪ್ಪ, ಗಿಡ್ನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ನನ್ನ ಹೆಂಡತಿ ಕೂಲಿಕೆಲಸ ಮಾಡಿಕೊಂಡು ಜೀವನ ನಡೆಸುತ್ತಿರುತ್ತೇವೆ. ನನಗೆ ಯೋಗೇಶ್ ಗೌಡ ಎಂಬ 7 ವರ್ಷದ ಒಬ್ಬನೇ ಗಂಡು ಮಗನಿದ್ದು, 2 ನೇ ತರಗತಿ ವ್ಯಾಸಾಂಗ ಮಾಡುತ್ತಿರುತ್ತಾನೆ. ದಿನಾಂಕ: 03/10/2020 ರಂದು ನಾನು ಕೂಲಿಕೆಲಸಕ್ಕೆ ಹೋಗಿದ್ದು, ನನ್ನ ಹೆಂಡತಿ ಸಹಾ ನನ್ನ ಮಗನನ್ನು ಜೊತೆಯಲ್ಲಿ ಕರೆದುಕೊಂಡು ನಮ್ಮ ಗ್ರಾಮದಲ್ಲಿಯೇ ಕೂಲಿಕೆಲಸಕ್ಕೆ ಹೋಗಿದ್ದಳು. ಸಂಜೆ ಸುಮಾರು 4-30 ಗಂಟೆಗೆ ನನ್ನ ಹೆಂಡತಿ ನನಗೆ ಪೋನ್ ಮಾಡಿ ಈಗ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ನಾನು ಮತ್ತು ಯೋಗೇಶ್ ಗೌಡ ಇಬ್ಬರೂ ನಮ್ಮ ಗ್ರಾಮದ ಗೇಟ್ ಬಳಿ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಟಾರು ರಸ್ತೆಯನ್ನು ದಾಟುತ್ತಿದ್ಧಾಗ ಚಿಕ್ಕಬಳ್ಳಾಪುರದ ಕಡೆಯಿಂದ ಬರುತ್ತಿದ್ದ KA-40, X-4322 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಹೊಡೆಸಿದ ಪರಿಣಾಮ ನನ್ನ ಮಗನ ಬಲಕಾಲ ತೊಡೆಗೆ ಊತಗಾಯವಾಗಿದ್ದು, ಹಣೆಗೆ ರಕ್ತಗಾಯವಾಗಿದ್ದು, ಯೋಗೇಶ್ ಗೌಡನನ್ನು ನನ್ನ ತಮ್ಮ ಅಶೋಕ್ ಬಿನ್ ಮುನಿಶಾಮಪ್ಪರವರು ಯಾವುದೋ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುತ್ತಿರುವುದಾಗಿ ತಿಳಿಸಿದಳು. ತಕ್ಷಣ ನಾನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಬಂದು ನೋಡಲಾಗಿ ನನ್ನ ಮಗನಿಗೆ ಬಲಕಾಲ ತೊಡೆಗೆ ಊತಗಾಯವಾಗಿದ್ದು, ಹಣೆಗೆ ರಕ್ತಗಾಯವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ನನ್ನ ಮಗನ ಬಲಕಾಲ ತೊಡೆಯ ಮೂಳೆ ಮುರಿದಿರುವುದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರುನಗರದ ಸಂಜಯಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನಾನು ನನ್ನ ಮಗನನ್ನು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತಿರುತ್ತೇನೆ. ನನ್ನ ಮಗನನ್ನು ನೋಡಿಕೊಳ್ಳುವವರು ಯಾರೂ ಇಲ್ಲದೇ ಇದ್ದುದರಿಂದ ನಾನು ಆತನನ್ನು ನೋಡಿಕೊಂಡಿದ್ದು, ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮಗನಿಗೆ ಅಪಘಾತವನ್ನುಂಟು ಮಾಡಿದ KA-40, X-4322 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ಕ್ರಮ ಜರುಗಿಸಲುಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.367/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 07/10/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ನರಸಿಂಹಮೂರ್ತಿ ಬಿನ್ ಲೇಟ್ ನಾಗರಾಜ, 36 ವರ್ಷ, ಆಟೋ ಚಾಲಕ, ಬುಡಗಜಂಗಮ ಜನಾಂಗ, ಮಸಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 2.30 ಗಂಟೆಗೆ ವಾಪಸ್ ಬಂದಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ತಂದೆಯಾದ ನಾಗರಾಜು ರವರು ಈಗ್ಗೆ ಒಂದು ವರ್ಷದ ಹಿಂದೆ ತೀರಿಕೊಂಡಿರುತ್ತಾರೆ. ತನ್ನ ತಂದೆಯವರಿಗೆ ಇಬ್ಬರು ಹೆಂಡತಿಯರಿದ್ದು ಮೊದಲನೇ ಹೆಂಡತಿ ತನ್ನ ತಾಯಿ ಭಾಗ್ಯಮ್ಮ ರವರಾಗಿದ್ದು, ಎರಡನೇ ಹೆಂಡತಿ ಲಕ್ಷ್ಮಿದೇವಮ್ಮ ರವರಾಗಿರುತ್ತಾರೆ. ಹಾಲಿ ತಾವು ಬೇರೆ ಬೇರೆಯಾಗಿ ವಾಸವಾಗಿದ್ದು, ತಮ್ಮ ತಂದೆಯ ಆಸ್ತಿ ಇನ್ನೂ ಭಾಗವಾಗಿರುವುದಿಲ್ಲ. ಸದರಿ ಆಸ್ತಿಯನ್ನು ಭಾಗ ಮಾಡಿಕೊಳ್ಳುವ ಸಲುವಾಗಿ ಈ ದಿನ ದಿನಾಂಕ: 07/10/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಮ್ಮ ಮನೆಯ ಬಳಿ ನ್ಯಾಯ ಪಂಚಾಯ್ತಿ ಮಾಡುತ್ತಿದ್ದಾಗ ಆಸ್ತಿ ಭಾಗಗಳ ವಿಚಾರವಾಗಿ ಮೇಲ್ಕಂಡ ಲಕ್ಷ್ಮಿದೇವಮ್ಮ, ಆಕೆಯ ತಮ್ಮ ಮಂಜುನಾಥ, ಮಂಜುನಾಥ ರವರ ಹೆಂಡತಿ(ಹೆಸರು ಗೊತ್ತಿರುವುದಿಲ್ಲ) ರವರು ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯಶಬ್ದಗಳಿಂದ ಬೈದು, ಆ ಪೈಕಿ ಮಂಜುನಾಥ ರವರು ಕೈಗಳಿಂದ ಮೈ ಮೇಲೆ ಹೊಡೆದು ಅಲ್ಲಿಯೇ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ತನ್ನ ತಲೆಗೆ ಹೊಡೆದಯ ರಕ್ತಗಾಯಪಡಿಸಿದನು. ಅಷ್ಠರಲ್ಲಿ ತನ್ನ ಹೆಂಡತಿ ಸುಜಾತ ರವರು ಗಲಾಟೆ ಬಿಡಿಸಲು ಅಡ್ಡ ಬಂದಿದ್ದು. ಅವರಿಗೆ ಲಕ್ಷ್ಮಿದೇವಮ್ಮ ಮತ್ತು ಮಂಜುನಾಥ ರವರ ಹೆಂಡತಿ ಕೈಗಳಿಂದ ಮೈ ಮೇಲೆ ಹೊಡೆದು ನೋವನ್ನುಂಟು ಮಾಡಿದರು. ನಂತರ ಮೇಲ್ಕಂಡವರು ಅಲ್ಲಿಂದ ಹೋಗುವಾಗ ಇನ್ನೊಂದು ಸಲ ಆಸ್ತಿಯ ಭಾಗಕ್ಕೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.368/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 07/10/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಲಕ್ಷ್ಮಿದೇವಮ್ಮ ಕೋಂ ಲೇಟ್ ನಾಗರಾಜ, 45 ವರ್ಷ, ಕೂಲಿಕೆಲಸ, ಬುಡಗಜಂಗಮ ಜನಾಂಗ, ಮಸಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಮದ್ಯಾಹ್ನ 3.00 ಗಂಟೆಗೆ ವಾಪಸ್ ಬಂದಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ತನ್ನ ಗಂಡನಾದ ನಾಗರಾಜ ರವರು ಈಗ್ಗೆ ಒಂದು ವರ್ಷದ ಹಿಂದೆ ತೀರಿಕೊಂಡಿರುತ್ತಾರೆ. ತನ್ನ ಗಂಡನಿಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿ ಭಾಗ್ಯಮ್ಮ ರವರಾಗಿದ್ದು, ಎರಡನೇ ಹೆಂಡತಿ ತಾನಾಗಿರುತ್ತೇನೆ. ತಾನು ಮತ್ತು ಭಾಗ್ಯಮ್ಮ ರವರು ಬೇರೆ ಬೇರೆಯಾಗಿ ವಾಸವಾಗಿದ್ದು ತನ್ನ ಗಂಡನ ಆಸ್ತಿ ಇನ್ನೂ ಭಾಗಗಳಾಗಿರುವುದಿಲ್ಲ. ಸದರಿ ಆಸ್ತಿಯನ್ನು ಭಾಗ ಮಾಡುವ ಸಲುವಾಗಿ ಈ ದಿನ ದಿನಾಂಕ: 07/10/2020 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ತಮ್ಮ ಮನೆಯ ಬಳಿ ನ್ಯಾಯ ಪಂಚಾಯ್ತಿ ಇದ್ದು, ತಾನು, ತನ್ನ ತಮ್ಮ ಮಂಜುನಾಥ ಮತ್ತು ಮಂಜುನಾಥ ರವರ ಹೆಂಡತಿ ಜಯಶ್ರೀ ರವರು ಇದ್ದು, ಭಾಗ್ಯಮ್ಮ ರವರ ಕಡೆಯಿಂದ ಆಕೆಯ ಮಗ ನರಸಿಂಹಮೂರ್ತಿ ಹಾಗೂ ಆತನ ಹೆಂಡತಿ ಸುಜಾತ ರವರು ಬಂದಿರುತ್ತಾರೆ. ಈ ಸಮಯದಲ್ಲಿ ನರಸಿಂಹಮೂರ್ತಿ ತನ್ನನ್ನು ಕುರಿತು ಲೇ ಲೋಫರ್ ಮುಂಡೆ, ಏಕೆ ನಿನ್ನ ತವರು ಮನೆಯವರನ್ನು ಕರೆಸಿದ್ದೀಯಾ ಎಂದು ಅವಾಚ್ಯಶಬ್ದಗಳಿಂದ ಬೈದಿದ್ದು, ಆಗ ತನ್ನ ತಮ್ಮ ಮಂಜುನಾಥ ಮತ್ತು ಆತನ ಹೆಂಡತಿ ಜಯಶ್ರೀ ರವರು ಅಡ್ಡ ಬಂದಿದ್ದು, ಆಗ ನರಸಿಂಹಮೂರ್ತಿ ರವರು ಕೈಗಳಿಂದ ಮಂಜುನಾಥ ರವರ ಮೈ ಮೇಲೆ ಹೊಡೆದು, ಅಲ್ಲಿಯೇ ಬಿದ್ದಿದ್ದ ನೀಲಗಿರಿ ದೊಣ್ಣೆಯಿಂದ ಆತನ ತಲೆಗೆ ಹೊಡೆದು ರಕ್ತ ಗಾಯ ಪಡಿಸಿದನು. ಸುಜಾತ ರವರು ತನಗೆ ಹಾಗೂ ಜಯಶ್ರೀ ರವರಿಗೆ ಕೈಗಳಿಂದ ಮೈ ಮೇಲೆ ಹೊಡೆದುನೋವನ್ನುಂಟು ಮಾಡಿದರು. ನಂತರ ಮೇಲ್ಕಂಡವರು ಅಲ್ಲಿಂದ ಹೋಗುವಾಗ ಇನ್ನೊಂದು ಸಲ ಆಸ್ತಿಯ ಭಾಗಕ್ಕೆ ಬಂದರೆ ನಿಮ್ಮನ್ನು ಪ್ರಾಣಸಹಿತ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.261/2020 ಕಲಂ: 87 ಕೆ.ಪಿ ಆಕ್ಟ್:-

     ದಿನಾಂಕ 07/10/2020 ರಂದು ಬೆಳಿಗ್ಗೆ 1-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಪಿಸಿ 205 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ 02/09/2020 ರಂಧು ನಾಗರಾಜು, ಎ.ಎಸ್.ಐ ಗೌರೀಬಿದನೂರು ಗ್ರಾಮಾಂತರ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೆನೆಂದರೆ  ಈ ದಿನ  ದಿನಾಂಕ: 02/09/2020 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ಕಚೇರಿಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಗೆದರೆ ನಾರಾಸಿಂಹನಹಳ್ಳಿ ಗ್ರಾಮಗಳ ಮಧ್ಯೆ ಇರುವ ಸಾರ್ವಜನಿಕ ಸ್ಥಳವಾದ ಬೀರಪ್ಪನ ದೇವಸ್ಥಾನದ ಬಳಿ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಅಂದರ್ ಬಾಹರ್ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು ಸಿಬ್ಬಂದಿಯವರಾದ ಪಿ.ಸಿ-80 ಶ್ರೀನಾಥ,  ಪಿ.ಸಿ-33, ಕೃಷ್ಣ, ಪಿಸಿ- 512 ರಾಜಶೇಖರ, ಹೆಚ್.ಸಿ-20 ಶ್ರೀನಿವಾಸ ರೆಡ್ಡಿ, ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ಗೆದರೆ ಗ್ರಾಮಕ್ಕೆ ಮದ್ಯಾಹ್ನ 12-15 ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ ಸರ್ಕಾರಿ ವಾಹನವನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ  ಗೆದರೆ ನಾರಸಿಂಹನಹಳ್ಳಿ ಮಧ್ಯೆ ಬೀರಪ್ಪನ ದೇವಸ್ಥಾನದ ಹತ್ತಿರ 07 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು ಕುಳಿತಿದ್ದವರನ್ನು ಹಿಡಿಯಲು ಪ್ರಯತ್ನಿಸಿದಾಗ ಇಬ್ಬರು ಆಸಾಮಿಗಳನ್ನು ಹಿಡಿದುಕೊಂಡಿದ್ದು ಉಳಿದವರು ಅಲ್ಲಿಂದ ಓಡಿ ಹೋದರು ಹಿಡಿದುಕೊಂಡವರ ಹೆಸರು ವಿಳಾಸ ಕೇಳಾಗಿ 1) ರಾಜಣ್ಣ ಬಿನ್ ಲೇಟ್ ಸುಬ್ಬರಾಯಪ್ಪ, 52 ವರ್ಷ,ವಕ್ಕಲಿಗರು, ಗೆದರೆ ಗ್ರಾಮ, ಗೌರೀಬಿದನೂರು ತಾಲ್ಲೂಕು, 2) ರಾಜೇಶ್ ಬಿನ್ ಲೇಟ್ ನರಸಿಂಹಪ್ಪ, 40 ವರ್ಷ, ಬಲಜಿಗರು, ಸೂಗೂರು ಗ್ರಾಮ ಹಿಂದೂಪುರ ತಾಲ್ಲೂಕು ಎಂದು ತಿಳಿಸಿದ್ದು ಅಲ್ಲಿಂದ ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ದಸ್ತು ಬಿನ್ ಮಾಬೂಸಾಭಿ, 40 ವರ್ಷ, ಮುಸ್ಲಿಂ ಜನಾಂಗ, ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು, 2)ಮಂಜುನಾಥ ಬಿನ್ ಆಶ್ವತ್ಥರೆಡ್ಡಿ, 35 ವರ್ಷ, ವಕ್ಕಲಿಗರು, ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು. 3)ಅಬ್ದುಲ್ ಬಿನ್ ದಲಾಲ್ ಸಾಬಿ 32 ವರ್ಷ, ಮುಸ್ಲಿಂ ಜನಾಂಗ, ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು, 4) ರಾಮಣ್ಣ ಬಿನ್ ರಾಮಯ್ಯ, 52 ವರ್ಷ, ವಕ್ಕಲಿಗರು, ಗೆದರೆ ಗ್ರಾಮ, ಗೌರಿಬಿದನೂರು ತಾಲ್ಲೂಕು, 5) ಗೋಪಿ ಬಿನ್ ನರಸಿಂಹಮೂರ್ತಿ, 36 ವರ್ಷ, ಬಲಜಿಗರು, ಬೊಮ್ಮಸಂದ್ರ ಗ್ರಾಮ, ಗೌರಿಬಿದನೂರು ತಾಲ್ಲೂಕು ಆಗಿರುತ್ತೆಂದು ತಿಳಿಸಿದರು. ಸ್ಥಳದಲ್ಲಿ ನೋಡಲಾಗಿ ನಗದು ಹಣ ಮತ್ತು ಇಸ್ಪೀಟು ಎಲೆಗಳು ಬಿದ್ದಿರುತ್ತೆ. ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  2,350/- ರೂ ನಗದು ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  12-30 ಗಂಟೆಯಿಂದ 1-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ 1) 2350/- ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು, ಮಾಲು ಪಂಚನಾಮೆ ಮತ್ತು ಇಬ್ಬರು  ಆಸಾಮಿಗಳೊಂದಿಗೆ  ಠಾಣೆಗೆ     ಮದ್ಯಾಹ್ನ 2-15  ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಲಂ. 87 ಕೆಪಿ ಆಕ್ಟ್ ರೀತ್ಯ ಕಾನೂನು ಕ್ರಮ  ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.262/2020 ಕಲಂ: 15(ಎ) ಕೆ.ಇ ಆಕ್ಟ್:-

     ದಿನಾಂಕ 07/10/2020 ರಂದು ಬೆಳಿಗ್ಗೆ 2-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಪಿಸಿ 205 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ಗೌರೀಬಿದನೂರು ಪೊಲೀಸ್ ವೃತ್ತ ನಿರೀಕ್ಷಕನಾದ ಶ್ರೀ ರವಿ.ಎಸ್. ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ: 08/09/2020 ರಂದು ಸಂಜೆ 6-00  ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು  ಹೊಸೂರು ಹೋಬಳಿ, ಮರಳೂರು ಗ್ರಾಮದಲ್ಲಿ ಈಡಿಗರ ಜನಾಂಗದ ಸುಮಾರು 60 ವರ್ಷ, ವಯಸ್ಸಿನ ಅಂಜಿನಪ್ಪ ಬಿನ್ ಲೇಟ್ ಹನುಮಂತಪ್ಪ, ಎಂಬುವರು ಅವರ  ಅಂಗಡಿಯ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮರಳೂರು ಗ್ರಾಮದ ಬೀಟ್ ಸಿಬ್ಬಂದಿಯಾದ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಮ.ಹೆಚ್.ಸಿ.07, ಶ್ರೀಮತಿ ಅನಿತರವರಿಗೆ ಮಾಹಿತಿ ಬಂದಿದ್ದು, ಸದರಿ ಬೀಟ್ ಸಿಬ್ಬಂದಿ ಮಹಿಳಾ ಹೆಚ್.ಸಿ. 07. ಶ್ರೀಮತಿ ಅನಿತರವರು  ಕಛೇರಿಯಲ್ಲಿದ್ದ ನನಗೆ ಮಾಹಿತಿಯನ್ನು ತಿಳಿಸಿದ್ದು ನಾನು ಸಿಬ್ಬಂದಿಯವರಾದ  ಹೆಚ್.ಸಿ. 224,ವೆಂಕಟೇಶ್ ಮತ್ತು ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-1222 ರಲ್ಲಿ  ಮರಳೂರು ಗ್ರಾಮಕ್ಕೆ ಹೋಗಿ ಜೀಪು  ನಿಲ್ಲಿಸಿ,  ಎಲ್ಲರೂ ಜೀಪಿನಿಂದ ಇಳಿದು ಮಾಹಿತಿ ಇದ್ದ  ಸ್ಥಳಕ್ಕೆ   ನಡೆದುಕೊಂಡು ಹೋಗಿ  ಮರೆಯಲ್ಲಿ ನಿಂತು ನೋಡಲಾಗಿ, ಮರಳೂರು ಗ್ರಾಮದ ಆಟೋ ನಿಲ್ದಾಣದ ಬಳಿ ಇರುವ ಅಂಜಿನಪ್ಪ ಬಿನ್ ಲೇಟ್ ಹನುಮಂತಪ್ಪನವರ ಅಂಗಡಿಯ ಮುಂದೆ ಅಂಜಿನಪ್ಪ ಪ್ಲಾಸ್ಟೀಕ್ ಬ್ಯಾಗನ್ನು ಹಿಡಿದುಕೊಂಡಿದ್ದು,  ಇತರೇ ಇಬ್ಬರು ಜನರು ಕುಳಿತಿದ್ದರು. ಅವರಿಗೆ ಅಂಜಿನಪ್ಪ ಪ್ಲಾಸ್ಟಿಕ್ ಬ್ಯಾಗ್ ನಿಂದ  ಮದ್ಯದ ಪ್ಯಾಕೇಟ್ ಗಳನ್ನು ತೆಗೆದುಕೊಡುತ್ತಿದ್ದು, ಆ ಇಬ್ಬರು ಜನರು  ಪ್ಲಾಸ್ಟಿಕ್ ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದನ್ನು ಖಚಿತಪಡಿಸಿಕೊಂಡು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದು,  ಅಂಜಿನಪ್ಪ ಸಹ ಪ್ಲಾಸ್ಟೀಕ್ ಬ್ಯಾಗನ್ನು ಬಿಸಾಡಿ  ಓಡಿ ಹೋಗಲು ಪ್ರಯತ್ನಿಸಿದವನನ್ನು ಹಿಡಿದು ಕೊಂಡು, ಪ್ಲಾಸ್ಟಿಕ್ ಬ್ಯಾಗ್ ನ್ನು ಪರಿಶೀಲಿಸಲಾಗಿ,  ಅದರಲ್ಲಿ   90  ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 21 ಟೆಟ್ರಾ ಪಾಕೆಟ್ ಗಳು ಇದ್ದವು. ಇವುಗಳ ಒಟ್ಟು ಸಾಮರ್ಥ್ಯ 1 ಲೀ 890  ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 737.73/- ರೂ.ಗಳಾಗಿರುತ್ತೆ. ಸ್ಥಳದಲ್ಲಿ 02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 2  ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಅಂಜಿನಪ್ಪನನ್ನು ಮದ್ಯ ಮಾರಾಟ ಮಾಡಲು, ಮದ್ಯವನ್ನು ಸೇವಿಸಲು ಸ್ಥಳಾವಕಾಶ ಮಾಡಿಕೊಡಲು  ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾನೆ.  ನಂತರ  ಸ್ಥಳದಲ್ಲಿ ಸಂಜೆ 6-15 ಗಂಟೆಯಿಂದ ರಿಂದ 7-00 ಗಂಟೆಯವರೆಗೆ ಕೃತಕ ದೀಪದ ಬೆಳಕಿನಲ್ಲಿ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ,  ಮುಂದಿನ ಕ್ರಮಕ್ಕಾಗಿ ಸ್ಥಳದಲ್ಲಿ ದೊರೆತ 90 ಎಂ.ಎಲ್  ಸಾಮರ್ಥ್ಯದ HAY WARDS CHEERS  WHISKY ಯ 21  ಟೆಟ್ರಾ  ಪಾಕೆಟ್ ಗಳು, ಪ್ಲಾಸ್ಟಿಕ್ ಬ್ಯಾಗ್, ಸ್ಥಳದಲ್ಲಿ ಬಿದ್ದಿದ್ದ  02 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  02 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ವಶಪಡಿಸಿಕೊಂಡು, ಠಾಣೆಗೆ ರಾತ್ರಿ 7-15  ಗಂಟೆಗೆ  ವಾಪಸ್ಸು ಆರೋಪಿ ಅಂಜಿನಪ್ಪ ಮತ್ತು ಮಾಲಿನೊಂದಿಗೆ ಬಂದು,  ಮುಂದಿನ ಕ್ರಮಕ್ಕಾಗಿ  ಆರೋಪಿ ಮತ್ತು ಮಾಲನ್ನು ಈ ಮೆಮೋದೊಂದಿಗೆ  ನೀಡುತ್ತಿದ್ದು, ಘನ ನ್ಯಾಯಾಲಯದಿಂದ  ಅನುಮತಿ ಪಡದುಕೊಂಡು ಆರೋಪಿಯ ವಿರುದ್ಧ  ಕಲಂ: 15 [ಎ], ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿ ಕ್ರಮ ಕೈಗೊಳ್ಳಲು ಸೂಚಿಸಿರುತ್ತೇನೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.263/2020 ಕಲಂ: 78(I),78(III) ಕೆ.ಪಿ ಆಕ್ಟ್:-

     ದಿನಾಂಕ 08/10/2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಪಿಸಿ 381 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ:15/08/2020 ರಂದು ರಾತ್ರಿ  7-30    ಗಂಟೆಯಲ್ಲಿ ಶ್ರೀ.ಮೋಹನ್ .ಎನ್ ಪಿ.ಎಸ್.ಐ , ಗೌರೀಬಿದನೂರು ಗ್ರಾಮಾಂತರ ಠಾಣೆ ರವರು  ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,  ಇವರಿಗೆ ಇವರಿಗೆ ಸಂಜೆ 5-00 ಗಂಟೆಯಲ್ಲಿ ಗಂಟೆಯಲ್ಲಿ ಬಂದ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿ ಹಾಗು ಪಂಚಾಯ್ತಿದಾರರರೊಂದಿಗೆ ಗೌರೀಬಿದನೂರು ತಾಲ್ಲೂಕು, ವೆಳಪಿ  ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ. 80 ಶ್ರೀನಾಥ್ ಮತ್ತು ಪಿ.ಸಿ-512 ರಾಜಶೇಖರ್    ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಸಂಜೆ 5- 30 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ಆಸಾಮಿಯು  ವೆಳಪಿ  ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ರವರ ಮನೆಯ ಮುಂದೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಸಂಜೀವರಾಯಪ್ಪ @ ಪವನ್ ಬಿನ್ ಲೇಟ್ ಚಿಕ್ಕಪ್ಪಯ್ಯ,  42 ವರ್ಷ, , ನಾಯಕರು, ಜಿರಾಯ್ತಿ,   ವಾಸ ವೆಳಪಿ ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 1050-00 ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಸಂಜೀವರಾಯಪ್ಪ @ ಪವನ್ ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 1050-00 ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಸಂಜೆ 6-00   ಗಂಟೆಯಿಂದ 7-00  ಗಂಟಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ರಾತ್ರಿ 7-30    ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ಸೂಚಿಸಿ  ಕಾನೂನು ಕ್ರಮ  ಕೈಗೊಂಡು ಪ್ರಕರಣ ದಾಶಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.264/2020 ಕಲಂ: 78(I),78(III) ಕೆ.ಪಿ ಆಕ್ಟ್:-

     ದಿನಾಂಕ 08/10/2020 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಪಿಸಿ 381 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ಗೌರೀಬಿದನೂರು ಪೊಲೀಸ್ ಠಾಣೆಯ, ಪೊಲೀಸ್ ಉಪನಿರೀಕ್ಷಕರಾದ  ಮೋಹನ್ ಎನ್.ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 21/08/2020 ರಂದು ಸಂಜೆ 17-00 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ನಗರಗೆರೆ  ಹೋಬಳಿ, ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ   ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ208 ತಿಪ್ಪೇಸ್ವಾಮಿ, ಪಿಸಿ 426 ಲೋಹಿತ್ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಸಂಜೆ 17-30 ಗಂಟೆಗೆ ಹೋಗಿ, ಅಲ್ಲಿ ಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,  ಮರೆಯಲ್ಲಿ ನಿಂತು ನೋಡಲಾಗಿ,  ಯೋರೋ ಒಬ್ಬ ವಾಟದಹೊಸಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ   ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ  ಒಂದು ರೂಪಾಯಿಗೆ  ಎಪ್ಪತ್ತು ರೂಪಾಯಿ ಕೊಡುವುದಾಗಿ ಹಣದ ಆಮಿಷವನ್ನು ತೋರಿಸಿ, ಹಣ ಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು  ನಾನು ಮತ್ತು ಪೊಲೀಸ್ ಸಿಬ್ಬಂದಿಯವರು  ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ, ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ  ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ಪ್ರತಾಪ್ ಬಿನ್ ಹನುಮಂತಪ್ಪ , ನಾಯಕ ಜನಾಂಗ, ವ್ಯಾಪಾರ , ವಾಸ ನಗರಗೆರೆ ಗ್ರಾಮ, ಗೌರೀಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 330/- ರೂಗಳು,  ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿ ಪ್ರತಾಪ್ ಬಿನ್ ಹನುಮಂತಪ್ಪ,ಹಾಗು ಈತನ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 330/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಸಂಜೆ 17-30 ರಿಂದ 18-30  ಗಂಟೆ ಯವರೆಗೆ  ಪಂಚನಾಮೆ ಕ್ರಮ ಜರುಗಿಸಿ  ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ  ರಾತ್ರಿ   19-45 ಗಂಟೆಗೆ  ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಿ ಪ್ರಕರಣ ದಾಶಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.265/2020 ಕಲಂ: 78(I),78(III) ಕೆ.ಪಿ ಆಕ್ಟ್:-

     ದಿನಾಂಕ 08/10/2020 ರಂದು ಬೆಳಿಗ್ಗೆ 12-30 ಗಂಟೆ ಸಮಯದಲ್ಲಿ ಘನ ನ್ಯಾಯಾಲಯದ ಆದೇಶವನ್ನು ನ್ಯಾಯಾಲಯದ ಕರ್ತವ್ಯದ ಪಿಸಿ 381 ರವರು ಈ ಪ್ರತಿಯನ್ನು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ಗೌರೀಬಿದನೂರು ಪೊಲೀಸ್ ಠಾಣೆಯ, ನಾಗರಾಜ್ ಎ.ಎಸ್.ಐ ಆದ ನಾನು ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ 23/07/2020 ರಂದು ಬೆಳಿಗ್ಗ 9-30 ಗಂಟೆಯಲ್ಲಿ ಗೌರೀಬಿದನೂರು ತಾಲ್ಲೂಕು, ನಗರಗೆರೆ ಬಸ್ ನಿಲ್ದಾಣದ ಬಳಿ ಯಾರೋ  ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ನಾನು ಹಾಗು ಪೊಲೀಸ್ ಸಿಬ್ಬಂದಿಯವರಾದ ಪಿಸಿ 512 ರಾಜಶೇಖರ್ ಪಿ ಸಿ 208 ತಿಪ್ಪೇಸ್ವಾಮಿ ,ಪಿಸಿ 426 ಲೋಹಿತ್ ಹಾಗು ಪಂಚರೊಂದಿಗೆ ಸರ್ಕಾರಿ ಜೀಪ್ ನಂ. ಕೆ.ಎ.40-ಜಿ.281 ರಲ್ಲಿ ಗ್ರಾಮಕ್ಕೆ ಬೆಳಿಗ್ಗೆ 10-30 ಗಂಟೆಗೆ ಹೋಗಿ,ಅಲ್ಲಿಮಾಹಿತಿ ಇದ್ದ ಸ್ಥಳಕ್ಕೆ ಹೋಗಿ,ಮರೆಯಲ್ಲಿ ನಿಂತು ನೋಡಲಾಗಿ, ಯೋರೋ ಒಬ್ಬ ಆಸಾಮಿ ನಗರಗೆರೆ  ಬಸ್ ನಿಲ್ದಾಣದ   ಬಳಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಪ್ಪತ್ತುರೂಪಾಯಿ ಕೊಡುವುದಾಗಿಹಣದ ಆಮಿಷವನ್ನು ತೋರಿಸಿ, ಹಣಪಡೆದುಕೊಂಡು ಮಟ್ಕಾ ಚೀಟಿ ಬರೆದುಕೊಡುತ್ತಿರುವುದು ಖಚಿತ ಪಡಿಸಿಕೊಂಡು ನಾನು ಮತ್ತು ಪೊಲೀಸ್ ಸಿಬ್ಬಂದಿಯವರು ಸದರಿ ಆಸಾಮಿಗಳನ್ನು ಸುತ್ತುವರೆದು ಹಿಡಿದುಕೊಳ್ಳಲು ಹೋದಾಗ,ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಸದರಿ ಆಸಾಮಿಯನ್ನು ಸುತ್ತುವರೆದು ಹಿಡಿದುಕೊಂಡು,ಆತನ ಹೆಸರು ವಿಳಾಸ ಕೇಳಲಾಗಿ  ತನ್ನ ಹೆಸರು ವೆಂಕಟೇಶ್ ಬಿನ್  ಶಿವಪ್ಪ , 22 ವರ್ಷ, ಜಿರಾಯ್ತಿ , ಆದಿಕರ್ನಾಟಕ ಜನಾಂಗ, ನಗರಗೆರೆ ಗ್ರಾಮ ,ಗೌರೀಬಿದನೂರು ತಾಲ್ಲೂಕು    ಎಂದು ತಿಳಿಸಿದ್ದು,  ಆತನ ಬಳಿ ಪರಿಶೀಲಿಸಲಾಗಿ  ನಗದು ಹಣ 110/- ರೂಗಳು,ಒಂದು ಮಟ್ಕಾ ಅಂಕಿಗಳು ಬರೆದಿರುವ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ ಇದ್ದು, ಈತನನ್ನು ವಿಚಾರ ಮಾಡಿದಾಗ, ತಾನು ಮಟ್ಕಾ ಜೂಜಾಟವಾಡುತ್ತಿದ್ದುದನ್ನು ಒಪ್ಪಿಕೊಂಡಿರುತ್ತಾನೆ. ನಂತರ ಸದರಿ ಆರೋಪಿಗಳು ಹಾಗೂ ಅವರ ಬಳಿ ಇದ್ದ ಮಟ್ಕಾ ಅಂಕಿಗಳನ್ನು ಬರೆದರುವ ಒಂದು ಚೀಟಿ,  ಒಂದು ಬಾಲ್ ಪಾಯಿಂಟ್ ಪೆನ್  ಮತ್ತು 110/- ರೂ ನಗದು ಹಣವನ್ನು ಪಂಚರ ಸಮಕ್ಷಮದಲ್ಲಿ ಬೆಳಿಗ್ಗೆ 10-30 ಗಂಟೆಯಿಂದ  11-30 ಗಂಟೆ ಯವರೆಗೆ  ಪಂಚನಾಮೆ ಕ್ರಮ ಜರುಗಿಸಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಠಾಣೆಗೆ ಸಂಜೆ 12-30 ಗಂಟೆಗೆ ಬಂದು  ಮುಂದಿನ ಕ್ರಮಕ್ಕಾಗಿ ನಿಮ್ಮ ವಶಕ್ಕೆ ನೀಡುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.161/2020 ಕಲಂ: 78(III) ಕೆ.ಪಿ ಆಕ್ಟ್:-

     ದಿನಾಂಕ 07/10/2020 ರಂದು ಸಂಜೆ 6:00 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ:02/10/2020 ರಂದು ಬೆಳಿಗ್ಗೆ  10-00  ಗಂಟೆಗೆ ಲೋಕೇಶ್ ಸಿ.ಹೆಚ್ ಸಿ -214 ರವರು ನಗರದ ಎಂ.ಜಿ ವೃತ್ತದಲ್ಲಿ ಇರುವಾಗ ತನಗೆ ನಗರದ ಸಂತೇಮೈದಾನದ ಬ್ರಿಡ್ಜ್ ನ ಬಳಿಯ ರಸ್ತೆಯಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ನಾನು ಮತ್ತು ಹೆಚ್.ಸಿ.-244, ಪಿ.ಸಿ.-282  ರವರೊಂದಿಗೆ ಎಂ.ಜಿ ವೃತ್ತದಲ್ಲಿದ್ದ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಯಾರೋ ಆಸಾಮಿ ಸಂತೇಮೈದಾನದ ಬ್ರಿಡ್ಜ್ ನ ಬಳಿಯ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ಅವನನ್ನು ಸುತ್ತುವರಿದು ಹಿಡಿದುಕೊಂಡು, ಅವನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ಗುಲ್ಜಾರ್ ಜಿ ವಿ ಬಿನ್ ಲೇಟ್ ಭಾಷ .27 ವರ್ಷ,ಕೂಲಿ ಕೆಲಸ ವಾಸ;ಸಂತೇ ಮೈದಾನ ಗೌರೀಬಿದನೂರು ಟೌನ್ ಎಂದು ತಿಳಿಸಿದ್ದು, ಅವನಿಗೆ ಮಟ್ಕಾ ಜೂಜಾಟ ವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೆ ಪರ ವಾನಗಿ ಇಲ್ಲವೆಂದು ತಿಳಿಸಿದನು ಅವನ ಬಳಿ ಒಂದು ಮಟ್ಕಾಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು ನಗದು ಹಣ 3800   ರೂಪಾಯಿಗಳು  ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟ ದಿಂದ ಬಂದ ಹಣ ಎಂದು ತಿಳಿಸಿದನು ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನೊಂದಿಗೆ ಬೆಳಿಗ್ಗೆ  11:00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳು ವುದಕ್ಕಾಗಿ ನೀಡಿದ ವರಧಿಯನ್ನು ಪಡೆದು ಎನ್ ಸಿ ಆರ್ ದಾಖಲಿಸಿದ್ದು ಈ ದಿನ ಪ್ರಕರಣ ದಾಖಲಿಸಿರುತ್ತೇನೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.227/2020 ಕಲಂ: 279,304(A) ಐ.ಪಿ.ಸಿ:-

     ದಿನಾಂಕ:08/10/2020 ರಂದು ಪಿರ್ಯಾದಿದಾರರಾದ ನಬೂವತ್ ಅಲಿ ಬಿನ್ ತಾಲೇಬ್ ಅಲೀ, 42 ವರ್ಷ, ಮುಸ್ಲಿಂ ಜನಾಂಗ, ಕಾರ್ಪೆಂಟರ್ ಕೆಲಸ, ವಾಸ ಅಲ್ಲೀಪುರ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಢಿದ ದೂರಿನ ಸಾರಾಂಶವೇನೆಂದರೆ ನಿನ್ನೆ ದಿನಾಂಕ: 07/10/2020 ರಂದು ಬೆಳಿಗ್ಗೆ ಸುಮಾರು 11-30 ಗಂಟೆಯಲ್ಲಿ ನಮ್ಮ ಗ್ರಾಮದ ನಮ್ಮ ಮಾವನ ಮಗನಾದ ಬಾಬು ಬಿನ್ ಅಲೀ ಬೇಗ್, 50 ವರ್ಷ, ಗಾರೆ ಕೆಲಸ ರವರು ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗಲು ತೊಂಡೆಬಾವಿ ಮಧುಗಿರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲ್ಲೀಪುರ ಗ್ರಾಮದ ಇಂಡಿಯನ್ ಗ್ಯಾಸ್ ಅಂಗಡಿಯ ಬಳಿ ರಸ್ತೆ ದಾಟುತ್ತಿದ್ದ ನಮ್ಮ ಮಾವನ ಮಗನಾದ ಬಾಬು ರವರಿಗೆ ತೊಂಡೆಬಾವಿ ಕಡೆಯಿಂದ ಬಂದ KA-43-W-6393 ಹೊಂಡಾ ಶೈನ್ ದ್ವಿ ಚಕ್ರ ವಾಹನದ ಸವಾರ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಾಬು ರವರಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ಬಾಬು ರವರ ತಲೆಗೆ ಗಾಯಗಳಾಗಿರುವುದಾಗಿ ತಿಳಿದು ನಾನು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ನಾನು ಹಾಗೂ ಅಲ್ಲಿದ್ದ ಸಾರ್ವಜನಿಕರು ಗಾಯಗೊಂಡಿದ್ದ ನಮ್ಮ ಮಾವನ ಮಗನಾದ ಬಾಬು ರವರನ್ನು ಉಪಚರಿಸಿ ಚಿಕಿತ್ಸೆಗಾಗಿ ಅಲ್ಲೀಪುರದ ಐಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಗೌರಿಬಿದನೂರು ಮಾನಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಬಾಬು ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಲಹಂಕದ ನಾರ್ಥ್ ಸಿಟಿ ಮೆಡಿಕಲ್ ಕೇರ್ ಗೆ ಕಳುಹಿಸಿಕೊಟ್ಟಿರುತ್ತಾರೆ ಅಲ್ಲಿ ಬಾಬು ರವರಿಗೆ ಚಿಕಿತ್ಸೆಕೊಡಿಸಿ ಬಾಬು ರವನ್ನು ಅವರ ಮನೆಗೆ ಕರೆದುಕೊಂಡು ಬಂದಿದ್ದು ನಮ್ಮ ಮಾವನ ಮಗನಾದ ಬಾಬು ರವರು ದ್ವಿ ಚಕ್ರ ವಾಹನದ ಅಪಘಾತದಲ್ಲಿ ಆದ ಗಾಯಗಳ ದೆಶೆಯಿಂದ ಈ ದಿನ ದಿನಾಂಕ: 08/10/2020 ರಂದು ಬೆಳಿಗ್ಗೆ ಸುಮಾರು 8-00 ಗಂಟೆಯಲ್ಲಿ ತಮ್ಮ ಮನೆಯಲ್ಲಿ ಮೃತಪಟ್ಟಿರುತ್ತಾರೆ. ಈ ಅಪಘಾತಕ್ಕೆ KA-43-W-6393 ಹೊಂಡಾ ಶೈನ್ ದ್ವಿ ಚಕ್ರ ವಾಹನದ ಸವಾರ ಕಾರಣನಾಗಿದ್ದು, ಸದರಿ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.273/2020 ಕಲಂ: 323,341,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 05-10-2020 ರಂದು ಸಂಜೆ 5.00 ಗಂಟೆಯಲ್ಲಿ ಫಿರ್ಯಾದಿದಾರರಾದ ಕೆ.ಎಂ. ಬಚ್ಚರೆಡ್ಡಿ ಬಿನ್ ಲೇಟ್ ಮುನಿಸೊಣ್ಣಪ್ಪ,47 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಮಲ್ಲಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನ್ನದು ಸ್ವಂತ ಸ್ಥಳ ಕೆಂಪನಹಳ್ಳಿ ಗ್ರಾಮವಾಗಿದ್ದು ತಾನು ಮಲ್ಲಹಳ್ಳಿ ಬಳಿಯಿರುವ ತೋಟದಲ್ಲಿ ಮನೆಯನ್ನು ಕಟ್ಟಿಕೊಂಡು ಅಲ್ಲಿಯೇ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ತಾನು ಈಗ್ಗೆ 8 ವರ್ಷಗಳ ಹಿಂದೆ ಕೆಂಪನಹಳ್ಳಿ ಗ್ರಾಮದ ಶ್ರೀನಿವಾಸ ಬಿನ್ ಲೇಟ್ ಮುನಿಯಪ್ಪ ರವರ ಕಡೆಯಿಂದ ಕೈಬದಲಿಗೆ 2 ಲಕ್ಷ ಹಣ ತೆಗೆದುಕೊಂಡಿದ್ದು ಈ ವಿಚಾರದಲ್ಲಿ ತಮಗೆ ಮತ್ತು ಶ್ರೀನಿವಾಸ ರವರಿಗೆ ವಿವಾದಗಳಿರುತ್ತದೆ. ಹೀಗಿದ್ದು ಈಗ್ಗೆ 4 ತಿಂಗಳ ಹಿಂದೆ ಅಂದರೆ ದಿನಾಂಕ: 06-06-2020 ರಂದು ಸಂಜೆ 6.00 ಗಂಟೆ ಸಮಯದಲ್ಲಿ ತಾನು ತಮ್ಮ ಮನೆಯ ಬಳಿಯಿದ್ದಾಗ ಶ್ರೀನಿವಾಸ್, ಆತನ ತಮ್ಮನಾದ ಆಂಜನೇಯರೆಡ್ಡಿ ಬಿನ್ ಮುನಿಯಪ್ಪ ಮತ್ತು ಆತನ ಅಣ್ಣನಾದ ರಾಜಗೋಪಾಲ್ ಬಿನ್ ಮುನಿಯಪ್ಪ ರವರು ತಮ್ಮ ಮನೆಯ ಬಳಿ ಬಂದು ತನ್ನನ್ನು ಕೈಗಳಿಂದ ಹೊಡೆದು ಗಲಾಟೆ ಮಾಡಿದ್ದು ಆ ಸಮಯದಲ್ಲಿ ತಾನು ಶಿಡ್ಲಘಟ್ಟ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಎನ್.ಸಿ.ಆರ್. ದಾಖಲಾಗಿರುತ್ತದೆ. ಹೀಗಿದ್ದು ದಿನಾಂಕ: 27-09-2020 ರಂದು ಸಂಜೆ 5.00 ಗಂಟೆಯಲ್ಲಿ ತಾನು ಅಬ್ಲೂಡು ಗ್ರಾಮದಿಂದ ತಮ್ಮ ಮನೆಗೆ ಹೋಗುತ್ತಿದ್ದಾಗ ತಮ್ಮ ಮನೆಯ ಸಮೀಪ ಶ್ರೀನಿವಾಸ, ಆಂಜನೇಯರೆಡ್ಡಿ ಮತ್ತು ರಾಜಗೋಪಾಲ್ ರವರುಗಳು ತನ್ನನ್ನು ಅಡ್ಡ ಹಾಕಿ ಏನೋ ಲೋಪರ್ ನನ್ನ ಮಗನೆ ನಿನ್ನದು ಜಾಸ್ತಿ ಆಯಿತು, ಇನ್ನು ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿದ್ದು ಹಳೆ ವೈಷ್ಯಮ್ಯದ ವಿಚಾರದಲ್ಲಿ ತನ್ನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇನೆ. ಈ ವಿಚಾರದಲ್ಲಿ ನಮ್ಮ ಗ್ರಾಮದ ಹಿರಿಯರು ಪಂಚಾಯ್ತಿ ಮಾಡುವುದಾಗಿ ಹೇಳಿದ್ದು ಮೇಲ್ಕಂಡವರು ಪಂಚಾಯ್ತಿಗೆ ಬಾರದ ಕಾರಣ ತಡವಾಗಿ ದೂರನ್ನು ನೀಡಿರುತ್ತೇನೆಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 273/2020 ಕಲಂ 323, 341, 504, 506 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.274/2020 ಕಲಂ: 323,324,504,506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 08-10-2020 ರಂದು ಮದ್ಯಾಹ್ನ 13.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀಮತಿ ಸೌಮ್ಯ ಎಂ.ಎನ್. ಕೋಂ ದೇವರಾಜ, 32 ವರ್ಷ, ತಿಗಳರು, ಗೃಹಿಣಿ, ವಾಸ: ಮೇಲೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ತಾನು ಈಗ್ಗೆ 12 ವರ್ಷಗಳ ಹಿಂದೆ ಶಿಡ್ಲಘಟ್ಟ ತಾಲ್ಲೂಕು ವರದನಯಾಕನಹಳ್ಳಿ ಗ್ರಾಮದ ದೇವರಾಜ ಬಿನ್ ಗಂಗಪ್ಪ ಎಂಬವರನ್ನು ಮದುವೆಯಾಗಿದ್ದು, ಮದುವೆಯಾದ ನಂತರ 2 ವರ್ಷಗಳ ಕಾಲ ದೇವನಹಳ್ಳಿ ಸಮೀಪ ಇರುವ ಕನ್ನಮಂಗಲದಲ್ಲಿ ವಾಸವಾಗಿದ್ದು ಈಗ್ಗೆ 10 ವರ್ಷಗಳ ಹಿಂದೆ ನಮ್ಮ ತಾಯಿಗೆ ಆರೋಗ್ಯ ಸರಿ ಇಲ್ಲದೆ ಇದ್ದ ಸಮಯದಲ್ಲಿ ನಮ್ಮ ತಂದೆಯವರು ತನ್ನನ್ನು ಕರೆದುಕೊಂಡು ಬಂದಿದ್ದು, ಅಂದಿನಿಂದಲೂ ತಾನು ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮೇಲೂರು ಗ್ರಾಮದ ತಮ್ಮ ತಂದೆಯವರ ಮನೆಯಲ್ಲಿ ವಾಸವಾಗಿರುತ್ತೇವೆ. ಹೀಗಿದ್ದು ದಿನಾಂಕ: 07-10-2020 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ತಾನು, ತನ್ನ ಮಕ್ಕಳಾದ 11 ವರ್ಷ ವಯಸ್ಸಿನ ದನುಷ್ ಮತ್ತು 9 ವರ್ಷ ವಯಸ್ಸಿನ ಹೇಮಶ್ರೀ ರವರು ತಮ್ಮ ಮನೆಯ ಸಮೀಪ ಇರುವ ನಮ್ಮ ಮಟನ್ ಅಂಗಡಿ ಸಮೀಪ ಇದ್ದಾಗ ತಮ್ಮ ತಂದೆ ನಾರಾಯಣಸ್ವಾಮಿ ಬಿನ್ ಮುನಿವೆಂಕಟಪ್ಪ ಮತ್ತು ಶ್ರೀಮತಿ ಲಲಿತಮ್ಮ ಕೋಂ ಗೋಪಿನಾಥ್ ರವರು ಅಂಗಡಿ ಬಳಿ ಬಂದು ಏನೇ ಯಾವಾಗಲೂ ಮನೆಯಲ್ಲಿ ಕುಳಿತುಕೊಂಡು ಇರುತ್ತೀಯ, ಮನೆ ಕೆಲಸ ಮಾಡುವುದಿಲ್ಲ ಲೋಪರ್ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು, ತನಗೆ ಲಲಿತಮ್ಮ ಮತ್ತು ತಮ್ಮ ತಂದೆ ನಾರಾಯಣಸ್ವಾಮಿ ರವರು ಕೈಗಗಳಿಂದ ಹಾಗೂ ಕೋಲಿನಿಂದ ಬೆನ್ನಿಗೆ, ಕೈಗಳಿಗೆ ಮತ್ತು ಮೈ ಮೇಲೆ ಹೊಡೆದಿದ್ದು ತನ್ನ ಮಗನಿಗೂ ಸಹ ಕೈಗಳಿಂದ ಹೊಡೆದು, ನೀನು ಯಾವೋಳೆ ಇಲ್ಲಿ ಇರಲು ಎಲ್ಲಿಯಾದರೂ ಹೋಗು ಮೊದಲು ಮನೆ ಕಾಲಿ ಮಾಡು, ಇನ್ನು ಮುಂದೆ ನೀನೇನಾದರೂ ನಮ್ಮ ಮನೆಯಲ್ಲಿ ಇದ್ದರೆ ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಪ್ರಾಣ ಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ತಮ್ಮ ತಂದೆ ನಾರಾಯಣಸ್ವಾಮಿ ಮತ್ತು ಲಲಿತಮ್ಮ ರವರು ತಮ್ಮ ಮೇಲೆ ಗಲಾಟೆ ಮಾಡುತ್ತಿದ್ದಾಗ ಮಳ್ಳೂರು ಗ್ರಾಮದ ತಿರುಮಲೇಶ ಬಿನ್ ಲೇಟ್ ಚನ್ನಕೃಷ್ಣಪ್ಪ ಮತ್ತು ಬೆಳ್ಳುಟ್ಟಿ ಗ್ರಾಮದ ಮಂಜುನಾಥ ಬಿನ್ ಮುನಿಯಪ್ಪ ರವರುಗಳು ಗಲಾಟೆ ಬಿಡಿಸಿದ್ದು ತಾನು ಹಾಗೂ ತನ್ನ ಮಗ ದನುಷ್ ರವರು ಯಾವುದೋ ವಾಹನದಲ್ಲಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತೇನೆ. ಗಲಾಟೆ ವಿಚಾರದಲ್ಲಿ ತಮ್ಮ ಮನೆಯ ಹಿರಿಯರು ರಾಜಿ ಮಾಡುವುದಾಗಿ ಹೇಳಿದ್ದು ಇದುವರೆಗೂ ರಾಜಿ ಮಾಡದೆ ಇದ್ದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡ ನಾರಾಯಣಸ್ವಾಮಿ ಮತ್ತು ಲಲಿತಮ್ಮ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 274/2020 ಕಲಂ 323, 324, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.