ದಿನಾಂಕ : 08/10/2019ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 323/2019 ಕಲಂ. 380-457 ಐ.ಪಿ.ಸಿ:-

     ದಿನಾಂಕ:07/10/2019 ರಂದು ಮದ್ಯಾಹ್ನ 1:00 ಗಂಟೆಗೆ ಪಿರ್ಯಾದಿ ಗೋವಿಂದರಾಜು ಬಿನ್ ಗೋವಿಂದಪ್ಪ, 36 ವರ್ಷ, ವಕ್ಕಲಿಗರು, ಬ್ಲೂಮ್ಸ್ ಕಾಲೇಜಿನಲ್ಲಿ ಲೆಕ್ಚರರ್, 8ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:06-10-2019 ರಂದು ಬೆಳಿಗ್ಗೆ 9-00 ಗಂಟೆಗೆ ನನ್ನ ಪತ್ನಿ ಯವರ ಊರಾದ ಮಡಕಶಿರ ತಾಲ್ಲೂಕು ಇರಿಗೇನಹಳ್ಳಿ ಗ್ರಾಮಕ್ಕೆ ಮನೆಗೆ ಬೀಗ ಹಾಕಿಕೊಂಡು  ಹೋಗಿರುತ್ತೇವೆ. ಅದರಂತೆ ದಿನಾಂಕ: 07-10-2019 ರಂದು ಬೆಳಗ್ಗೆ 06.00 ಗಂಟೆಗೆ ನನಗೆ ಪಕ್ಕದ ಮನೆಯವರಾದ ಜಲಾ ಮಂಜುನಾಥ ರವರು ಅವರ ಪೋನ್ನಿಂದ ಕರೆ ಮಾಡಿ ನಿಮ್ಮ ವಾಸದ  ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್ಲಾಕ್ ಮುರಿದಿದ್ದು ಬಾಗಿಲು ತೆರೆದುಕೊಂಡಿರುತ್ತದೆಂದು ತಿಳಿಸಿರುತ್ತಾರೆ ನಮ್ಮ ವಾಸದ ಮನೆಯ ಬಳಿ ಬಂದು ನೋಡಲಾಗಿ ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್ಲಾಕನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಕಿತ್ತುಹಾಕಿರುತ್ತಾರೆ. ಮನೆಯಲ್ಲಿ ಹೋಗಿ ನೋಡಲಾಗಿ ಮನೆಯಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು, ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪೆಲ್ಲಿಯಾಗಿ ಕೆಳಗೆ ಬಿದ್ದಿರುತ್ತೇ. ಬೀರುವನ್ನು ನೋಡಲಾಗಿ ಮಕ್ಕಳ ಎರಡು ಚಿನ್ನದ ಚೈನುಗಳು ಸುಮಾರು 12 ಗ್ರಾಂ,ಒಂದು ಜೊತೆ ಚಿನ್ನದ ಹ್ಯಾಂಗಿಗ್ಸ್ ಸುಮಾರು 09.50 ಗ್ರಾಂ, ಒಂದು ಜೊತೆ ಚಿನ್ನದ ಪ್ಯಾನ್ಸಿ ಓಲೆ ಸುಮಾರು 07 ಗ್ರಾಂ,ಮಕ್ಕಳ ಎರಡು ಚಿನ್ನದ ಉಂಗುರಗಳು ಸುಮಾರು 03.50 ಗ್ರಾಂ,ದೊಡ್ಡವರ ಒಂದು  ಚಿನ್ನದ ಉಂಗುರ ಸುಮಾರು 07 ಗ್ರಾಂ ಒಟ್ಟು ಸುಮಾರು 39 ಗ್ರಾಂ ತೂಕದ ಚಿನ್ನದ ವಡವೆಗಳು ಅಂದಾಜು 24,000/- ರೂ ಬೆಲೆ ಬಾಳುವ ಬಂಗಾರದ ವಡವೆಗಳು ಇರುವುದಿಲ್ಲ. ಮೇಲ್ಕಂಡ ವಡವೆಗಳನ್ನು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ನಮ್ಮ ಬಾಬತ್ತು ಬಂಗಾರದ ವಡವೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಾಗಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 324/2019 ಕಲಂ. 380-457 ಐ.ಪಿ.ಸಿ:-

     ದಿನಾಂಕ:07/10/2019 ರಂದು ಮದ್ಯಾಹ್ನ 1:30 ಗಂಟೆಗೆ ಪಿರ್ಯಾದಿ ಮಂಜುನಾಥ ಬಿನ್ ರಂಗಯ್ಯ, 34 ವರ್ಷ, ಭಜಂತ್ರಿ ಜನಾಂಗ, ವಿವೇಕಾನಂದ ಕಾಲೇಜಿನಲ್ಲಿ ಲೆಕ್ಚರರ್, 8ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:06-10-2019 ರಂದು ಸಾಯಂಕಾಲ 04-30 ಗಂಟೆಗೆ ನನ್ನ ಪತ್ನಿ ಯವರ ಊರಾದ ಕೋಲಾರ ಟೌನ್ಗೆ ಮನೆಗೆ ಬೀಗ ಹಾಕಿಕೊಂಡು  ಹೋಗಿರುತ್ತೆವೆ.  ದಿನಾಂಕ: 07-10-2019 ರಂದು ಬೆಳಗ್ಗೆ 07.00 ಗಂಟೆಗೆ ನನಗೆ ನಮ್ಮ ಮನೆಯ ಮುಂಬಾಗದಲ್ಲಿರುವ  ಜಲಾ ಮಂಜುನಾಥ ರವರು ಅವರ ಪೋನ್ನಿಂದ ಕರೆ ಮಾಡಿ ನಿಮ್ಮ ವಾಸದ  ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್ಲಾಕ್ ಮುರಿದಿದ್ದು ಬಾಗಿಲು ತೆರೆದುಕೊಂಡಿರುತ್ತದೆಂದು ತಿಳಿಸಿರುತ್ತಾರೆ ನಮ್ಮ ವಾಸದ ಮನೆಯ ಬಳಿ ಬಂದು ನೋಡಲಾಗಿ ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್ಲಾಕನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಕಿತ್ತುಹಾಕಿರುತ್ತಾರೆ. ಮನೆಯಲ್ಲಿ ಹೋಗಿ ನೋಡಲಾಗಿ ಮನೆಯಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು, ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪೆಲ್ಲಿಯಾಗಿ ಕೆಳಗೆ ಬಿದ್ದಿರುತ್ತೇ. ಬೀರುವನ್ನು ನೋಡಲಾಗಿ ಒಂದು ಚಿನ್ನದ ನಕ್ಲೆಸ್  ಸುಮಾರು 24 ಗ್ರಾಂ, ಒಂದು ಚಿನ್ನದ ಬ್ರಾಸ್ಲೆಟ್ ಸುಮಾರು 11 ಗ್ರಾಂ, ಎರಡು ಜೊತೆ ಚಿನ್ನದ  ಓಲೆಗಳು ಸುಮಾರು  19 ಗ್ರಾಂ, ಒಂದು ಚಿನ್ನದ ಉಂಗುರ ಸುಮಾರು 03.00 ಗ್ರಾಂ, ಒಂದು ಚಿನ್ನದ ಡಾಲರ್ ಸುಮಾರು 04 ಗ್ರಾಂ ಒಟ್ಟು ಸುಮಾರು 61 ಗ್ರಾಂ ತೂಕದ ಬಂಗಾರದ ವಡವೆಗಳು ಮತ್ತು ಮೂರು ಜೊತೆ ಬೆಳ್ಳಿಯ ಕುಂಕುಮ ಭರಣಿಗಳು ಸುಮಾರು 90 ಗ್ರಾಂ, ಒಂದು ಜೂತೆ ಬೆಳ್ಳಿಯ ಕಾಲು ಚೈನ್ ಸುಮಾರು 120 ಗ್ರಾಂ ಸದರಿ ಚಿನ್ನ ಮತ್ತು ಬೆಳ್ಳಿಯ  ವಡವೆಗಳ ಅಂದಾಜು 95,100/- ರೂ ಆಗಿರುತ್ತೆ.  ಮೇಲ್ಕಂಡ ವಡವೆಗಳನ್ನು ಯಾರೋ ಕಳ್ಳರು ರಾತ್ರಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ನಮ್ಮ ಬಾಬತ್ತು ಬಂಗಾರದ ಹಾಗೂ ಬೆಳ್ಳಿಯ ವಡವೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಾಗಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 325/2019 ಕಲಂ. 380-457 ಐ.ಪಿ.ಸಿ:-

     ದಿನಾಂಕ:07.10.2019 ರಂದು  ಮದ್ಯಾಹ್ನ 2-30 ಗಂಟೆಗೆ  ಪಿರ್ಯಾದಿದಾರರಾದ  ಸದಾಶಿವ ಆರ್.ಎಲ್ ಬಿನ್ ಲಕ್ಷ್ಮನm  54 ವರ್ಷ, ಬಲಜಿಗರು, ಜಿರಾಯ್ತಿ , 8ನೇ ವಾರ್ಡ್, ಬಾಗೇಪಲ್ಲಿ ಟೌನ್ ರವರು  ಠಾಣೆಗೆ ಹಾಜರಾಗಿ  ನೀಡಿದ ದೂರಿನ ಸಾರಾಂಶವೇನೆಂದರೆ , ದಿನಾಂಕ:06-10-2019 ರಂದು ಬೆಳಗ್ಗೆ 06-05 ಗಂಟೆಗೆ ತಿರುಪತಿಗೆ ಮನೆಗೆ ಬೀಗ ಹಾಕಿಕೊಂಡು  ಹೋಗಿರುತ್ತೆವೆ. ಅದರಂತೆ ದಿನಾಂಕ: 07-10-2019 ರಂದು ಬೆಳಗ್ಗೆ 07-30. ಗಂಟೆಗೆ ನನಗೆ ನಮ್ಮ ಸ್ಹೇಹಿತ ಹನುಮಂತ ರೆಡ್ಡಿ ರವರು ಅವರ ಪೋನ್ನಿಂದ ಕರೆ ಮಾಡಿ ನಿಮ್ಮ ವಾಸದ  ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್ಲಾಕ್ ಮುರಿದಿದ್ದು ಬಾಗಿಲು ತೆರೆದುಕೊಂಡಿರುತ್ತದೆಂದು ತಿಳಿಸಿರುತ್ತಾರೆ ನಮ್ಮ ವಾಸದ ಮನೆಯ ಬಳಿ ಬಂದು ನೋಡಲಾಗಿ ಮನೆಯ ಬಾಗಿಲಿಗೆ ಅಳವಡಿಸಿದ್ದ ಡೋರ್ಲಾಕನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಕಿತ್ತುಹಾಕಿರುತ್ತಾರೆ. ಮನೆಯಲ್ಲಿ ಹೋಗಿ ನೋಡಲಾಗಿ ಮನೆಯಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು, ಅದರಲ್ಲಿದ್ದ ಬಟ್ಟೆಗಳು ಚೆಲ್ಲಾಪೆಲ್ಲಿಯಾಗಿ ಕೆಳಗೆ ಬಿದ್ದಿರುತ್ತೇ. ಬೀರುವನ್ನು ನೋಡಲಾಗಿ ಎರಡು ಜೊತೆ ಚಿನ್ನದ  ಓಲೆಗಳು ಸುಮಾರು  12 ಗ್ರಾಂ, ಮತ್ತು ದೇವರ ಮನೆಯಲ್ಲಿ ಹೋಗಿ ನೋಡಲಾಗಿ ಕುಂಕುಮ ಮತ್ತು ಹರಶಿನವನ್ನು ಚೆಲ್ಲಾಡಿದ್ದು ದೇವರ ಮನೆಯಲ್ಲಿದ್ದ ಒಂದು ಬೆಳ್ಳಿಯ ತಟ್ಟೆ ಸುಮಾರು 450 ಗ್ರಾಂ, ಒಂದು ಬೆಳ್ಳಿಯ ಚೋಂಬು ಸುಮಾರು 350 ಗ್ರಾಂ,ಒಂದು ಜೂತೆ ಬೆಳ್ಳಿಯ ದ್ವೀಪಗಳು ಸುಮಾರು 20 ಗ್ರಾಂ,ಎರಡು ಜೂತೆ ಬೆಳ್ಳಿಯ ಕುಂಕುನ ಬಟ್ಟಲು ಸುಮಾರು 80 ಗ್ರಾಂ,ಒಂದು ಬೆಳ್ಳಿಯ ಅಕ್ಷತೆ ಬಟ್ಟಲು ಸುಮಾರು 50 ಗ್ರಾಂ ಸದರಿ ಚಿನ್ನ ಮತ್ತು ಬೆಳ್ಳಿ ವಡವೆಗಳ ಅಂದಾಜು 41,750/- ರೂ ಬೆಲೆ ಬಾಳುವ ವಡವೆಗಳು ಇರುವುದಿಲ್ಲ. ಮೇಲ್ಕಂಡ ವಡವೆಗಳನ್ನು ಯಾರೋ ಕಳ್ಳರು  ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ನಮ್ಮ ಬಾಬತ್ತು ಬಂಗಾರದ ಹಾಗೂ ಬೆಳ್ಳಿಯ ವಡವೆಗಳನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಾಗಿರುತ್ತದೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 375/2019 ಕಲಂ. 96(ಬಿ) ಕೆ.ಪಿ ಆಕ್ಟ್:-

     ದಿನಾಂಕ 08-10-2019 ರಂದು ಮುಂಜಾನೆ 5-00 ಗಂಟೆಗೆ ಠಾಣೆಯ ಎ.ಎಸ್.ಐ ಅಶ್ವಥನಾರಾಯಣ  ರವರು ಮಾಲು ಮತ್ತು ಆರೋಪಿಗಳೊಂದಿಗೆ ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ:07-10-2019 ರಂದು ರಾತ್ರಿ 9-00 ಗಂಟೆಯಲ್ಲಿ ಪಿ.ಎಸ್.ಐ ರವರು ತನಗೆ ಮತ್ತು ಹೆಚ್.ಜಿ-159 ಕೃಷ್ಣಪ್ಪರವರಿಗೆ ರಾತ್ರಿ ಗಸ್ತು ಕರ್ತವ್ಯಕ್ಕೆ ನೇಮಕ ಮಾಡಿ ಕಳುಹಿಸಿದ್ದು, ಅದರಂತೆ ತಾವು ಠಾಣಾ ಸರಹದ್ದಿನ ಕನ್ನಂಪಲ್ಲಿ, ಕಟಮಾಚನಹಳ್ಳಿ, ಕುರುಟಹಳ್ಳಿ, ಕಾಚಹಳ್ಳಿ ಇತ್ಯಾದಿ ಕಡೆಗಳಲ್ಲಿ ಹೋಗಿ ಗಸ್ತು ಮಾಡಿಕೊಂಡು ಈ ದಿನ ದಿನಾಂಕ:08-10-2019 ರಂದು ಮುಂಜಾನೆ 04-30 ಗಂಟೆಯಲ್ಲಿ ಮೈಲಾಂಡ್ಲಹಳ್ಳಿ ಗೇಟ್ ಬಳಿ ಹೋದಾಗ ಯಾರೋ ಇಬ್ಬರು ಆಸಾಮಿಗಳು ಮೈಲಾಂಡ್ಲಹಳ್ಳಿ ಗೇಟ್ ನಲ್ಲಿರುವ ರೇಷ್ಮೆ ಬೆಳೆಗಾರರ ಸೂಪರ್ ಮಾರ್ಕೆಟ್ ನ ಬಾಗಿಲ ಮುಂದೆ ತಮ್ಮ ಕೈಗಳಲ್ಲಿ ಕಬ್ಬಿಣದ ರಾಡ್ ಗಳನ್ನು ಹಿಡಿದುಕೊಂಡು ನಿಂತುಕೊಂಡಿದ್ದು, ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸದರಿ ಆಸಾಮಿಗಳು ತಮ್ಮ ಇರುವಿಕೆಯನ್ನು ಮರೆಮಾಚಿಕೊಳ್ಳಲು ಯತ್ನಿಸಿದ್ದು, ನಾವು ಸದರಿ ಆಸಾಮಿಗಳ ಬಳಿ ಹೋಗುತ್ತಿದ್ದಂತೆ ಅವರು ಓಡಿ ಹೋಗಲು ಪ್ರಯತ್ನಿಸಿದ್ದು, ಸದರಿ ಆಸಾಮಿಗಳನ್ನು ನಾವು ಬೆನ್ನಟ್ಟಿ ಹಿಡಿದುಕೊಂಡು ಹೆಸರು ವಿಳಾಸ ಕೇಳಲಾಗಿ ತಡವರಿಸಿಕೊಂಡು 1)ರವಿ@ ಟಿ.ಸಿ ಬಾಬು ಬಿನ್ ಸೆಂಚು ಮುನಿರೆಡ್ಡಿ, 39ವರ್ಷ, ವಕ್ಕಲಿಗರು, ಅಡಿಗೆಬಟ್ಟರು, ನೆಡಿಯಂ ಗ್ರಾಮ, ಪಲ್ಲಿಪಟ್ಟು ತಾಲ್ಲೂಕು, ತಿರುವಲ್ಲುವಾರ್ ಜಿಲ್ಲೆ, ತಮಿಳುನಾಡು ರಾಜ್ಯ, 2)ಮಂಜುನಾಥ ಬಿನ್ ಈರಪ್ಪ, 36ವರ್ಷ, ಕುರುಬರು, ಗಾರೆಕೆಲಸ, ಹೊಗರಿ ಗ್ರಾಮ, ಅರಹಳ್ಳಿ ಅಂಚೆ, ಕೋಲಾರ ತಾಲ್ಲೂಕು ಮತ್ತುಜಿಲ್ಲೆ, ಹಾಲಿ ವಾಸ:ಕಡನಮರಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಗಳನ್ನು ಅವೇಳೆಯಲ್ಲಿ ಆ ಸ್ಥಳದಲ್ಲಿರಲು ಮತ್ತು ತಮ್ಮ ಕೈಗಳಲ್ಲಿರುವ ಕಬ್ಬಿಣದ ರಾಡ್ಗಳ ಬಗ್ಗೆ ಕೇಳಲಾಗಿ ಸಮಂಜಸವಾದ ಉತ್ತರವನ್ನು ನೀಡದೇ ಇದ್ದು, ಸದರಿ ಆಸಾಮಿಗಳು ಯಾವುದೋ ಕಳ್ಳತನವನ್ನು ಮಾಡಲು ಅಥವಾ ಯಾವುದೋ ಸಂಜ್ಙೆಯ ಕೃತ್ಯವನ್ನೆಸಗಲು ಹೊಂಚು ಹಾಕುತ್ತಿರುವುದಾಗಿ ಕಂಡು ಬಂದಿದ್ದು, ಸದರಿ ಆಸಾಮಿಗಳನ್ನು ನಾವು ವಶಕ್ಕೆ ಪಡೆದುಕೊಂಡು ಮುಂಜಾನೆ 05-00  ಗಂಟೆಗೆ ಠಾಣೆಗೆ ಕರೆದುಕೊಂಡು ಬಂದು ತಮ್ಮ ಮುಂದೆ ಹಾಜರುಪಡಿಸುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 325/2019 ಕಲಂ. 279-337-304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

     ದಿನಾಂಕ: 07/10/2019 ರಂದು ರಾತ್ರಿ 11.00 ಗಂಟೆ ಸಮಯದಲ್ಲಿ ಪಿರ್ಯಾಧಿದಾರರಾದ ಇಮ್ರಾನ್ ಖಾನ್ ಬಿನ್ ಶಫೀಪುಲ್ಲಾ ಖಾನ್ 26 ವರ್ಷ ಮುಸ್ಲೀಂ ಜನಾಂಗ ವಾಸ: ಈದ್ಗ ಹಿಂಭಾಗ ಪ್ರಶಾಂತ ನಗರ ಚಿಕ್ಕಬಳ್ಳಾಪುರ ರವರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 07/10/2019 ರಂದು ತನ್ನ ತಂದೆ  ಎನ್,ಆರ್ ಶಪೀವುಲ್ಲಾ ಖಾನ್  56 ವರ್ಷ ರವರು ತಮ್ಮ  ಬಾಬತ್ತು ಕೆ.ಎ 05 ಜೆ.ಎಸ್ 7579 ನೊಂದಣಿಯ ಹೊಂಡಾ ಶೈನ್ ದ್ವಿ ಚಕ್ರ ವಾಹನದಲ್ಲಿ ತಮ್ಮ ಅಕ್ಕನ ಮಗಳಾದ ಸಾನಿಯಾ ಬಿನ್ ಇಸ್ಮಾಯಿಲ್ 18 ರಿಂದ 20 ವರ್ಷ ರವರನ್ನು ಹಿಂಬಂದಿ ಕುಳ್ಳರಿಸಿಕೊಂಡು ಬಾಗೇಪಲ್ಲಿಯಿಂದ 5.45 ಗಂಟೆಗೆ ಬಿಟ್ಟಿದ್ದು ಚಿಕ್ಕಬಳ್ಳಾಪುರದ ಕಡೆ ಬರುವಾಗ ಪೆರೇಸಂದ್ರ ಬ್ರಿಡ್ಜ್ ಬಳಿ NH-7 ರಸ್ತೆಯಲ್ಲಿ ಸಂಜೆ 6. ಗಂಟೆ 35 ನಿಮಿಷದಲ್ಲಿ ಹಿಂಬಂದಿಯಿಂದ ಯಾವುದೋ ವಾಹನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ತಮ್ಮ ತಂದೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹೊರಟು ಹೋಗಿದ್ದು ಆಗ ಯಾರೋ ಸಾರ್ವಜನಿಕರು ತನ್ನ ಪೋನ್ ನಂಬರಿಗೆ ತಮ್ಮ ಅಪ್ಪ ಪೋನ್ ನಿಂದ ವಿಚಾರ ತಿಳಿಸಿದ್ದು ನಂತರ ಅಪಘಾತದಲ್ಲಿ ಗಾಯಗೊಂಡಿದ್ದ ತಮ್ಮ ತಂದೆಯನ್ನು ತಮ್ಮ ಅಕ್ಕನ ಮಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದು ಅಷ್ಟರಲ್ಲಿ ತಾನು ಹೋಗಿ ನೋಡಲಾಗಿ ತಮ್ಮ ತಂದೆಯವರಿಗೆ ತಲೆಗೆ ತೀವ್ರಗಾಯಗಳಾಗಿದ್ದು ಆಸ್ಪತ್ರೆಗೆ ಬರುವಾಗ ಮಾರ್ಗ ಮದ್ಯೆ ಅಪಘಾತದಲ್ಲಾದ ಗಾಯಗಳಿಂದ ತೀರು ಹೋಗಿರುವುದಾಗಿ ವಿಚಾರ ತಿಳಿಯಿತು ತಮ್ಮ ಅಕ್ಕನ ಮಗಳಿಗೆ ದೇಹದ ಮೇಲೆ ಹೊಟ್ಟೆಯ ಮೇಲೆ ಮತ್ತು ಭುಜ ಮತ್ತು ನಡುವಿನ ಭಾಗದಲ್ಲಿ ಗಾಯಗಳಾಗಿದ್ದು ಮಾತಾಡುತ್ತಿರಲಿಲ್ಲ. ಆದ್ದರಿಂದ ಮೃತವಾಗಿರುವ ತಮ್ಮ ತಂದೆಯ ಮೃತ ದೇಹ ಜಿಲ್ಲಾ ಆಸ್ಪತ್ರೆಯಲ್ಲಿದ್ದು ಮೇಲ್ಕಂಡಂತೆ ಅಪಘಾತ ಪಡಿಸಿದ ವಾಹನವನ್ನು ಮತ್ತು ಚಾಲಕನನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 272/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:08/10/2019 ರಂದು ಪಿರ್ಯಾದಿದಾರರಾದ ಶ್ರೀ ಎಸ್.ರವಿ ಸಿಪಿಐ ಗೌರಿಬಿದನೂರು ವೃತ್ತ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 08/10/2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ನಾನು ವೃತ್ತ ಕಛೇರಿಯಲ್ಲಿರುವಾಗ ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದು ತೊಂಡೆಬಾವಿ ಹೋಬಳಿ, ಮಿಂಡೇನಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ಮರಿಯಪ್ಪ ಎಂಬುವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಜೀಪ್ ಚಾಲಕ ಎಪಿಸಿ-133, ಹೇಮಂತ್ ರವರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ ಕೆಎ40-ಜಿ-222 ರಲ್ಲಿ ತೊಂಡೆಬಾವಿ ಪೊಲೀಸ್ ಹೊರ ಠಾಣೆಯ ಬಳಿ ಬಂದು ಹೊರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ , ಹೆಚ್.ಸಿ 219, ಶ್ರೀನಿವಾಸಮೂರ್ತಿ, ಪಿಸಿ-100, ಮಹೇಶ ಮತ್ತು ಪಿಸಿ 336 ಉಮೇಶ ಬಿ ಶಿರಶ್ಯಾಡ ರವರೊಂದಿಗೆ ಪಂಚರನ್ನು ಕರೆದುಕೊಂಡು ಮೇಲ್ಕಂಡ ಸರ್ಕಾರಿ ಜೀಪ್ ನಲ್ಲಿ ಬೆಳಿಗ್ಗೆ 11-45 ಗಂಟೆಗೆ ಮಿಂಡೇನಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ಮರಿಯಪ್ಪ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಸ್ವಲ್ಪ ದೂರದಿಂದಲೇ ಜೀಪನ್ನು ಗಮನಿಸಿ ಅಲ್ಲಿ ಮಧ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟೇಶ್ ಬಿನ್ ಮರಿಯಪ್ಪ, 55 ವರ್ಷ, ಗೊಲ್ಲರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಮಿಂಡೇನಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಈತನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HAYWARDS CHEERS WISKY ಯ 15 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದರ ಮೇರೆಗೆ ಅಲ್ಲಿಯೆ ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HAYWARDS CHEERS WISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಮಾದ್ಯಾಹ್ನ 12-00 ಗಂಟೆಯಿಂದ 1-00 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 454/- ರೂಪಾಯಿಗಳು ಬೆಲೆಬಾಳದ್ದಾಗಿದ್ದು. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ವೆಂಕಟೇಶ್ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಈತನ ಮೇಲೆ ಕಲಂ: 15(ಎ), 32 (3) KE ACT ರೀತ್ಯ ಪ್ರಕರಣವನ್ನು ದಾಖಲಿಸಲು ಸೂಚಿಸಿರುತ್ತದೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ. 177/2019 ಕಲಂ. 279-337 ಐ.ಪಿ.ಸಿ:-

     ದಿನಾಂಕ 08-10-2019 ರಂದು  ಬೆಳಗ್ಗೆ 11-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗ ಬೇಟಿ ನೀಡಿ ಅಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಗಾಯಾಳು ಗಣೇಶ ರವರ ಹೇಳಿಕೆಯನ್ನು ವೈದ್ಯರ ಸಮಕ್ಷಮ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನಾಂಕ;07-10-2019 ರಂದು   ಪಿರ್ಯಾದಿ  ಹಾಗೂ ಅವನ ಸ್ನೇಹಿತ  ಕೃಷ್ಣಪ್ಪ ಬಿನ್ ಮುನೆಪ್ಪ ರವರು  ಪಿರ್ಯಾದಿಯ ಬಾಬತ್ತು KA-40-V-4306 ನೊಂದಣಿಯ ಹಿರೋ ಸ್ಪೈಂಡರ್  ವಾಹನದಲ್ಲಿ ಚಿಕ್ಕಕಾಡಿಗೇನಹಳ್ಳಿ ಗ್ರಾಮಕ್ಕೆ ಹೋಗಲು  ಬೆಳಗ್ಗೆ 9-00 ಗಂಟೆಯ ಸಮಯದಲ್ಲಿ  ಅಗಲಗುರ್ಕಿ ಗ್ರಾಮದ ವೇಣೊಗೋಪಾಲ್ ರವರ ಎಸ್ಟೇಟ್  ಬಳಿ ಹೋಗುತ್ತಿದ್ದಾಗ ಚಿಕ್ಕಕಾಡಿಗೇನಹಳ್ಳಿ ಗ್ರಾಮದ ಕಡೆಯಿಂದ KA-40-V-0322 ನೊಂದಣಿಯ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನದಲ್ಲಿ ಅದರ ಸವಾರ ಮುನಿಕೃಷ್ಣಪ್ಪನು  ತನ್ನ ವಾಹನದಲ್ಲಿ ಹೂವಿನ ಮೂಟೆಯನ್ನು ಹಾಕಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ದ್ವಿಚಕ್ರ ವಾಹನಕ್ಕೆ ಮುಖಾ-ಮುಖಿ ಡಿಕ್ಕಿ ಹೊಡೆಯಿಸಿದ ಪರಿಣಾಮ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಪಿರ್ಯಾದಿ ಮತ್ತು ಹಿಂಬದಿಯಲ್ಲಿ ಕುಳಿತಿದ್ದ ಕೃಷ್ಣಪ್ಪನಿಗೂ ರಕ್ತಗಾಯಗಳಾಗಿದ್ದು ,ನಮಗೆ ಡಿಕ್ಕಿ ಹೊಡೆಯಿಸಿದ ದ್ವಿಚಕ್ರ ವಾಹನ ಸವಾರ ಮುನಿಕೃಷ್ಣಪ್ಪನಿಗೂ ಸಹಃ ಗಾಯಗಳಾಧವು, ಅಷ್ಟರೊಳಗೆ ಚೀಡಚಿಕ್ಕನಹಳ್ಳಿಯ ತಮ್ಮೇಗೌಡ, ಶಿವಪ್ಪ ರವರು ಬಂದು ಕಾರಿನಲ್ಲಿ ನಮ್ಮನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದು  ಅಪಘಾತದ ಬಗ್ಗೆ ರಾಜಿ ಮಾಡಿಕೊಳ್ಳೋಣವೆಂದು ಹೇಳಿದ್ದಕ್ಕೆ ದೂರು ಕೊಡದೇ ಇದ್ದು ಅಪಘಾತ ಪಡಿಸಿದ ವ್ಯಕ್ತಿ  ರಾಜಿಗೆ ಬಾರದ ಕಾರಣ ಈ ದಿನ ತಡವಾಗಿ  ದೂರನ್ನು ನೀಡುತ್ತಿದ್ದು ಅಪಘಾತ ಪಡಿಸಿದ KA-40-V0322 ನೊಂದಣಿಯ ದ್ವಿಚಕ್ರ ವಾಹನ ಸವಾರ ಮುನಿಕೃಷ್ಣಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು ಮದ್ಯಾಹ್ನ 12-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿಕೊಂಡಿರುತ್ತೆ,

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 93/2019 ಕಲಂ. 323-324 ರೆ/ವಿ 34 ಐ.ಪಿ.ಸಿ:-

     ದಿನಾಂಕ: 07/10/2019 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು  ನಾರಾಯಣಪ್ಪ ಬಿನ್ ಪಿಲ್ಲಿ ವೆಂಕಟರಾಯಪ್ಪ ರವರ ಹೇಳಿಕೆಯನ್ನು ಎ.ಎಸ್.ಐ ವೆಂಕಟರವಣಪ್ಪ ರವರು ಪಡೆದುಕೊಂಡು ರಾತ್ರಿ 09-00 ಗಂಟೆಗೆ ಠಾಣೆಗೆ ತಂದು ಹಾಜರ್ಪಡಿಸಿದ್ದರ ಸಾರಾಶವೇನೆಂದರೆ, ಈ ದಿನ ಬೆಳಗ್ಗೆ ಸುಮಾರು 10-30 ಗಂಟೆಯ ಸಮಯದಲ್ಲಿ ನಾನು ಮತ್ತು ನನ್ನ ಮಗಳಾದ ಸುಮಂಗಳ ಮತ್ತು ಕೂಲಿಯವರೊಂದಿಗೆ ನಮ್ಮ ಗ್ರಾಮದಲ್ಲಿ ನನ್ನ ನಿವೆಶನದಲ್ಲಿ ಪಾಯ ಕೆಲಸ ಮಾಡುತ್ತಿದ್ದಾಗ ಅದೇ ವೇಳೆಗೆ ನಮ್ಮ ಗ್ರಾಮದ ವಾಸಿಗಳಾದ ಚೌಡಪ್ಪ ಬಿನ್ ರಾಮನ್ನ ಮತ್ತು ಆತನ ಹೆಂಡತಿ, ನಾವು ಪಾಯ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ನೀವು ಪಾಯ ಹಾಕುತ್ತಿರುವ ಜಾಗದಲ್ಲಿ ನಾವು ಓಡಾಡಲು ದಾರಿ ಬಿಡಿ ಎಂದು ಜಗಳ ತೆಗೆದು ನಮ್ಮ ಪಾಯದ ಕಲ್ಲುಗಳನ್ನು ಪಕ್ಕಕ್ಕೆ ತೆಗೆದು ಹಾಕಿದರು, ಆಗ ನಾನು ಪಂಚಾಯ್ತೀಯವರು ಅಳತೆ ಮಾಡಿಕೊಟ್ಟಿದ್ದಾರೆ ಅದರ ಪ್ರಕಾರ ಪಾಯ ಹಾಕುತ್ತಿದ್ದೇನೆ ಎಂದು ಹೇಳಿದೆ ಅದಕ್ಕೆ ಸುಮ್ಮನಾಗದೆ, ಚೌಡಪ್ಪ ಎಂಬುವವನು  ಅಲ್ಲಿಯೇ ಬಿದ್ದಿದ್ದ ಒಂದು ಕಲ್ಲಿನಿಂದ ನನ್ನ ತಲೆಯ ಹಿಂಬಾಗದಲ್ಲಿ ಹೊಡೆದು ಗಾಯಪಡಿಸಿದ ಅಷ್ಟರಲ್ಲಿ ಸದರಿ ಗಲಾಟೆಯನ್ನು ನಮ್ಮ ಗ್ರಾಮದ ವಾಸಿಗಳಾದ ಗಂಗರಾಯಪ್ಪ ಬಿನ್ ಬಡಗಂಗಪ್ಪ, ಶ್ರೀನಿವಾಸ ಎಂಬುವವರು ಅಡ್ಡ ಬಂದು ಜಗಳ ಬಿಡಿಸಿ ಕಳುಹಿಸಿರುತ್ತಾರೆ, ಗಾಯಗೊಂಡಿದ್ದ ನನ್ನನ್ನು ನನ್ನ ಮಗ ತಿರುಮಲೇಶ್ ಎಂಬುವವನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ ಆದ್ದರಿಂದ ನನ್ನ ಮೇಲೆ ಗಲಾಟೆ ಮಾಡಿದ ಚೌಡಪ್ಪ ಮತ್ತು ಆತನ ಹೆಂಡತಿ ಬಾರತಿ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 93/2019 ಕಲಂ 323,324,34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 341/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 07-10-2019 ರಂದು ರಾತ್ರಿ 8.00 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಕಾಕಚೊಕ್ಕಂಡಹಳ್ಳಿ ಗ್ರಾಮದಲ್ಲಿ ಎಂ. ಚಿಕ್ಕಮುನಿಯಪ್ಪ ಬಿನ್ ದೊಡ್ಡಮುನಿತಮ್ಮಣ್ಣ ಎಂಬುವರ ಚಿಲ್ಲರೆ ಅಂಗಡಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-233 ಮಂಜೇಶ್ ರವರೊಂದಿಗೆ ಕೆಎ-40-ಜಿ-357 ಸರ್ಕಾರಿ ಜೀಪಿನಲ್ಲಿ ಕಾಕಚೊಕ್ಕಂಡಹಳ್ಳಿ ಗ್ರಾಮಕ್ಕೆ ರಾತ್ರಿ 8.15 ಗಂಟೆಗೆ ಬೇಟಿ ನೀಡಿ ಸಿಪಿಸಿ-233 ಮಂಜೇಶ್ ರವರ ಮುಖಾಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಎಂ. ಚಿಕ್ಕಮುನಿಯಪ್ಪ ಬಿನ್ ದೊಡ್ಡಮುನಿತಮ್ಮಣ್ಣ ರವರ ಅಂಗಡಿ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಎಂ. ಚಿಕ್ಕಮುನಿಯಪ್ಪ ಬಿನ್ ದೊಡ್ಡಮುನಿತಮ್ಮಣ್ಣ, 55 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಕಾಕಚೊಕ್ಕಂಡಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ 90 Ml ನ Haywards Punch Fine Whisky 22 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 667.00 ರೂಗಳಾಗಿರುತ್ತೆ (ಆರುನೂರು ಅರವತ್ತೇಳು ರೂಪಾಯಿಗಳು ಮಾತ್ರ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಎರಡು ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Punch Fine Whisky 90 Ml ನ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಸದರಿ ಮಾಲನ್ನು ರಾತ್ರಿ 8.30 ಗಂಟೆಯಿಂದ 9-15 ಗಂಟೆಯ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 9-45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 341/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.