ದಿನಾಂಕ :08/09/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.217/2020 ಕಲಂ. 279,337 ಐ.ಪಿ.ಸಿ & 177,187 ಐ.ಎಂ.ವಿ ಆಕ್ಟ್:-

            ದಿ:08-09-2020 ರಂದು ಬೆಳಗ್ಗೆ 9:00 ಗಂಟೆಗೆ ಹೆಚ್.ಸಿ 14 ಮುರಳಿ ರವರು ಜೀವನ್ ಆಸ್ಪತ್ರೆಯಲ್ಲಿ ಗಾಯಾಳು ಸೈಯ್ಯದ್ ಷಫೀ ಬಿನ್ ಚಾಂದ್ ಬಾಷಾ, 32 ವರ್ಷ, ಮುಸ್ಲಿಂಮರು, Texport Syndicate Garments ನಲ್ಲಿ ಕೆಲಸ, ವಾಸ ಚಿನ್ನಪ್ಪರೆಡ್ಡಿಪಲ್ಲಿ, ಚಿಲಮತ್ತೂರು ಮಂಡಲಂ, ಹಿಂದೂಪುರ ತಾಲ್ಲೂಕು, ಆಂಧ್ರಪ್ರದೇಶ, ಹಾಲಿ ವಾಸ: 15 ನೇ ವಾರ್ಡ್, ರಾಮಪ್ಪ ರವರ ಬಾಡಿಗೆ ಮನೆ, ಬಾಗೇಪಲ್ಲಿ ಪುರ ರವರ ಹೇಳಿಕೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಬೆಳಗ್ಗೆ  10:30 ಗಂಟೆಗೆ ಹಾಜರುಪಡಿಸಿದ್ದರ  ಸಾರಾಂಶ – ದಿ: 07-09-2020 ರಂದು ಬೆಳಗ್ಗೆ 8:30 ಗಂಟೆಗೆ ಎಂದಿನಂತೆ ಕೋಡೂರು ತೋಪು, ಎನ್.ಹೆಚ್ -44 ರಸ್ತೆಯ ಬಳಿ ಇರುವ Texport Syndicate Garments ನಲ್ಲಿ ಕೆಲಸಕ್ಕೆ ಹೋಗಿ ರಾತ್ರಿ ಸುಮಾರು 8:45 ಗಂಟೆಗೆ ಕೆಲಸ ಮುಗಿಸಿಕೊಂಡು ನನ್ನ ಬಾಬತ್ತು AP 02-BB-4274 HONDA SHINE ದ್ವಿಚಕ್ರ ವಾಹನದಲ್ಲಿ NH 44 ಬಾಗೇಪಲ್ಲಿ ಟೋಲ್ ಪ್ಲಾಜಾ ನಂತರ ಜ.ಚ.ನಿ ಕಾಲೇಜ್ ನಿಂದ ಸ್ವಲ್ಪ ಮುಂದೆ ರಸ್ತೆಯ ಎಡಭಾಗದಲ್ಲಿ ಹೋಗುತ್ತಿದ್ದಾಗ, ಆ ಸಮಯದಲ್ಲಿ ಮಳೆ ಬೀಳುತ್ತಿದ್ದು, ಯಾವುದೋ ಕಂಟೈನರ್ ವಾಹನದ ಚಾಲಕ ಯಾವುದೇ ಸೂಚನೆಯನ್ನು ನೀಡದೆ ನಿರ್ಲಕ್ಷ್ಯತೆಯಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಹಿಂದಕ್ಕೆ ರಿವರ್ಸ್ ಬಂದು, ಹಿಂದೆ ಬರುತ್ತಿದ್ದ ನನಗೆ ಡಿಕ್ಕಿ ಹೊಡೆದ ಪರಿಣಾಮ ನಾನು ದ್ವಿಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದ್ದು ಹೋದೆನು, ಅಪಘಾತದಲ್ಲಿ ದ್ವಿಚಕ್ರ ವಾಹನ ಜಕಂಗೊಂಡು ನನಗೆ ಎರಡು ತುಟಿ, ಗಡ್ಡ, ಮೂಗು, ಎರಡೂ ಮೊಣಕೈಗಳಿಗೆ ರಕ್ತಗಾಯಗಳಾಗಿದ್ದು, ಮೇಲ್ಭಾಗದ ಎರಡು ಹಲ್ಲುಗಳು ಮುರಿದಿರುತ್ತೆ.  ಅಪಘಾತ ಮಾಡಿದ ಕಂಟೈನರ್ ವಾಹನವನ್ನು ನಿಲ್ಲಿಸಿದೆ ಹೊರಟು ಹೋದನು.  ಸ್ಥಳದಲ್ಲಿದ್ದ ನನಗೆ ಪರಿಚಯಸ್ಥರಾದ ಅಯ್ಯಪ್ಪ, ಬಾಲಾಜಿ ರವರುಗಳು ಬಂದು ಗಾಯಗೊಂಡಿದ್ದ ನನ್ನನ್ನು ಉಪಚರಿಸಿದರು.  ನಂತರ ನಮ್ಮ ಕಂಪೆನಿಯ ವಾಹನದಲ್ಲಿ ಚಿಕಿತ್ಸೆಗಾಗಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಅದರಂತೆ ದಾಖಲಾಗಿರುತ್ತೇನೆ.  ಯಾವುದೇ ಸೂಚನೆಯನ್ನು ನೀಡದೆ ಕಂಟೈನರ್ ವಾಹನವನ್ನು ಹಿಂದಕ್ಕೆ ರಿವರ್ಸ್ ಬಂದು ನನಗೆ ಅಪಘಾತ ಮಾಡಿ ವಾಹನವನ್ನು ನಿಲ್ಲಿಸದೆ ಹೊರಟುಹೋಗಿರುವ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ, ಎಂದು ನೀಡಿದ ಹೇಳಿಕೆ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.218/2020 ಕಲಂ. 32,34,11 ಕೆ.ಇ ಆಕ್ಟ್:-

          ದಿ:08-09-2020 ರಂದು ಮದ್ಯಾಹ್ನ 2:00 ಗಂಟೆಗೆ ಪಿ.ಎಸ್.ಐ ಸಾಹೇಬರವರು ಠಾಣೆಗೆ ಹಾಜರಾಗಿ ನಿಡಿದ ವರಧಿಯನ್ನು ಪಡೆದುಕೊಂಡಿದ್ದರ ಸಾರಾಂಶ –   ದಿನಾಂಕ:08/09/2020 ರಂದು  ಮದ್ಯಾಹ್ನ 12.15 ಗಂಟೆ ಸಮಯದಲ್ಲಿ ಗೂಳೂರು ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ, ಯಾರೋ ಒಬ್ಬ ಆಸಾಮಿ ಗೂಳೂರು ಗ್ರಾಮದ ಕೆರೆಯ ಕಟ್ಟೆಯ ಟಾರ್ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ  ಅಕ್ರಮವಾಗಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಬೀಟ್ ಪೊಲೀಸ್ ಹೆಚ್ ಸಿ 212 ಶ್ರೀನಾಥ್ ರವರಿಗೆ ಬಂದ ಮಾಹಿತಿಯ ಮೇರೆಗೆ ನಾನು ಸಿಬ್ಬಂದಿಗಳಾದ ಹೆಚ್.ಸಿ 103 ಶಂಕರರೆಡ್ಡಿ, ಹೆಚ್.ಸಿ-212 ಶ್ರೀನಾಥ  ಪಿಸಿ 76 ಸುರೇಶ್ ಮತ್ತು ಎ.ಹೆಚ್.ಸಿ 34 ಅಲ್ತಾಫ್ ಪಾಷಾ ರವರೊಂದಿಗೆ ಮತ್ತು ಗೂಳೂರು ಗ್ರಾಮ ಬಸ್ ನಿಲ್ದಾಣದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ದಾಳಿ ವಿಚಾರವನ್ನು ತಿಳಿಸಿ, ಸರ್ಕಾರಿ ಜೀಪ್ ಸಂಖ್ಯೆ ಕೆಎ-40-ಜಿ-537 ರಲ್ಲಿ ಮೇಲ್ಕಂಡ ಸ್ಥಳಕ್ಕೆ ಮದ್ಯಾಹ್ನ 12.30 ಗಂಟೆಗೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ ದ್ವಿಚಕ್ರವಾಹನದಲ್ಲಿ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಏನೋ ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂದಿದ್ದು, ಪಂಚರ ಸಮಕ್ಷಮ  ಪರಿಶೀಲಿಸಲಾಗಿ ಸದರಿ ಪ್ಲಾಸ್ಟೀಕ್ ಬ್ಯಾಗ್ ನಲ್ಲಿ HAYWARDS CHEERS WHISKY ಕಂಪನಿಯ 180 ಎಂ.ಎಲ್. ನ 12 ಟೆಟ್ರಾ ಪ್ಯಾಕೆಟ್ ಗಳು ಮತ್ತು HAYWARDS CHEERS WHISKY 90 ಎಂ.ಎಲ್. ನ 80 ಟೆಟ್ರಾ ಪ್ಯಾಕೆಟ್ ಗಳು ಒಟ್ಟು 9.360 ಲೀಟರ್ ಮದ್ಯವಿದ್ದು, ಇದರ ಬೆಲೆ ಸುಮಾರು 3,653.52/- ರೂ ಬೆಲೆಬಾಳುವುದಾಗಿರುತ್ತೆ. ವಾಹನದ ನೊಂದಣಿ ಸಂಖ್ಯೆ ಎಪಿ-04-ಎಎನ್-4494 ಟಿ.ವಿ.ಎಸ್.ಸ್ಟಾರ್ ಸಿಟಿ ಸ್ಪೋಟ್ ದ್ವಿಚಕ್ರವಾಹನವಾಗಿರುತ್ತೆ. ಸದರಿ ಆಸಾಮಿಯ ಹೆಸರು ವಿಳಾಸ ಕೇಳಲಾಗಿ ಮಂಜುನಾಥ ಬಿನ್ ಲೇಟ್ ಚಿನ್ನವೆಂಕಟರಾಮಪ್ಪ, 32 ವರ್ಷ, ನಾಯಕರು, ಟಾಕ್ಟರ್ ಚಾಲಕ ವೃತ್ತಿ, ವಾಸ ಮಾರ್ಗಾನಕುಂಟೆ ಗ್ರಾಮ, ಗೂಳೂರು ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಮದ್ಯವನ್ನು ಸಾಗಾಣೀಕೆ ಮಾಡಲು ಯಾವುದಾದರೂ ಪರವಾನಗಿ ಇದಯೇ ಎಂದು ಕೇಳಲಾಗಿ ನನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ಮೇಲ್ಕಂಡ ಟೆಟ್ರಾ ಪ್ಯಾಕೆಟ್ ಗಳು ಮತ್ತು ದ್ವಿಚಕ್ರವಾಹನವನ್ನು ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಮದ್ಯಾಹ್ನ 2.00 ಗಂಟೆಗೆ ಬಂದು ಅಸಲು ದಾಳಿ ಪಂಚನಾಮೆ, ಮಾಲು ಆರೋಪಿ ಮತ್ತು ವರಧಿಯನ್ನು ಠಾಣೆಯಲ್ಲಿ ಹಾಜರುಪಡಿಸುತ್ತಿದ್ದು, ಆಸಾಮಿಯ ವಿರುದ್ದ ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ, ಎಂದು ನೀಡಿದ ದೂರು.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.85/2020 ಕಲಂ. 32,34,43(ಎ)  ಕೆ.ಇ ಆಕ್ಟ್:-

          ಈ ದಿನ ದಿನಾಂಕ 07/09/2020 ರಂದು ರಾತ್ರಿ 9-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಹೆಚ್.ಸಿ 38 ರವರು ಠಾಣೆಗೆ ಹಾಜರಾಗಿ ಇಬ್ಬರು ಆರೋಪಿಗಳು ಮದ್ಯ ಹಾಗೂ ನಂ ಕೆಎ 40 ಎಂ 9438 ಕಾರಿನೊಂದಿಗೆ ನೀಡಿದ ದೂರಿನ ಸಾರಂಶವೇನೆಂದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪಿ.ಐ ಶ್ರೀ.ರಾಜಣ್ಣ ರವರು ಈ ದಿನ ದಿನಾಂಕ 07/09/2020 ರಂದು ಹೆಚ್.ಸಿ 38 ಶ್ರೀ.ಮಂಜುನಾಥ ಮತ್ತು ಹೆಚ್.ಸಿ 198 ಮಂಜುನಾಥ ವಿ ರವರನ್ನು ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಬೆಳಿಗಿನ ಹಾಜರಾತಿಯಲ್ಲಿ ನೇಮಕಮಾಡಿ ಕಳುಹಿಸಿಕೊಟ್ಟಿದ್ದು ಅದರಂತೆ ತಾವು ಚಿಂತಾಮಣಿ ಟೌನ್ ನಲ್ಲಿ ಓಡಾಡಿ ನಂತರ ಸಂಜೆ ಮುರುಗಮಲ್ಲ, ಚಿಕ್ಕಕರಕಮಾಕಲಹಳ್ಳಿ, ದೊಡ್ಡಕರಕಮಾಕಲಹಳ್ಳಿ, ನಂದಿಗಾನಹಳ್ಳಿ, ನಿಮ್ಮಕಾಯಲಹಳ್ಳಿ ಮುಂತಾದ ಕಡೆಗಳಲ್ಲಿ ಗಸ್ತುಮಾಡಿಕೊಂಡು ಮುದ್ದಲಹಳ್ಳಿ ಗ್ರಾಮದ ಬಳಿಗೆ ಸಂಜೆ 7-30 ಗಂಟೆಯ ಸಮಯದಲ್ಲಿ ಬಂದಾಗ ಯಾವುದೋ ಒಂದು ಓಮ್ನಿ ವಾಹನವನ್ನು ಅದರ ಚಾಲಕ ಅನುಮಾನಸ್ಪದವಾಗಿ ಓಡಿಸಿಕೊಂಡು ಹೋಗುತ್ತಿದ್ದನ್ನು ಕಂಡ ತಾವು ಸದರಿ ಕಾರ್ ನ್ನು ನಿಲ್ಲಿಸಿ ಸದರಿ ಕಾರ್ ನಲ್ಲಿ ಪರಿಶೀಲಿಸಲಾಗಿ ಮದ್ಯದ ಬಾಕ್ಸ್ ಗಳು ಇದದ್ದು ಕಂಡು ಬಂದಿದ್ದು ಸದರಿ ಕಾರಿನಲ್ಲಿ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಇದ್ದು ಚಾಲಕನ ಹೆಸರು ವಿಳಾಸವನ್ನು ವಿಚಾರಿಸಲಾಗಿ ಸುರೇಶ ಬಿನ್ ಲೇಟ್ ಮುನಿಶಾಮಿರೆಡ್ಡಿ, 42ವರ್ಷ, ಒಕ್ಕಲಿಗರು, ಜಿರಾಯ್ತಿ, ದೊಡ್ಡಬೊಮ್ಮನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ಮತ್ತೊಬ್ಬ ವ್ಯಕ್ತಿಯನ್ನು ವಿಚಾರಿಸಲಾಗಿ ಆತನ ಹೆಸರು ಮಂಜುನಾಥ ಬಿನ್ ನಂಜುಂಡಯ್ಯ, 33ವರ್ಷ, ಬಲಜಿಗರು, ಚಿಂತಾಮಣಿಯ ಗುಪ್ತ ಬಾರ್ ನಲ್ಲಿ ಕೆಲಸ, ವಾಸ ಇಡ್ಲಿಪಾಳ್ಯ, ಚಿಂತಾಮಣಿ ನಗರ ಎಂತ ತಿಳಿಸಿದ್ದು ಸದರಿಯವರು ಮದ್ಯವನ್ನು ಸಾಗಾಣಿಕೆಮಾಡಲು ಯಾವುದಾದರು ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂತಲೂ ನಾವು ಮದ್ಯವನ್ನು ಹಳ್ಳಿಗಳಲ್ಲಿ ಅಂಗಡಿಗಳಿಗೆ ಸರಬರಾಜು ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರ ಮೇರೆಗೆ ಕಾರ್ ನಲ್ಲಿ ಇದ್ದ ಮದ್ಯವನ್ನು ಪರಿಶೀಲಿಸಲಾಗಿ 650 ಎಂ.ಎಲ್ ನ 5 ಟುಬರ್ಗ್ ಬಾಟಲಿಗಳು, 650 ಎಂ.ಎಲ್ ನ 7 ಕಿಂಗ್ ಪಿಷರ್ ಬೀರ್ ಬಾಟಲಿಗಳು, 330 ಎಂ.ಎಲ್ ನ 18 ಕಿಂಗ್ ಪಿಷರ್ ಬೀರ್ ನ ಟಿನ್ ಗಳು, 180 ಎಂ.ಎಲ್ ನ 33 ಬ್ಯಾಗ್ ಪೆಪರ್  ಟೆಟ್ರಾಪಾಕೆಟ್ ಗಳು, 180 ಎಂ.ಎಲ್.ನ 57 ಓಲ್ಡ್ ತವರನ್ ಟೆಟ್ರಾ ಪ್ಯಾಕೆಟ್ ಗಳು, 90 ಎಂ.ಎಲ್ ನ 535 ಹೈವಾರ್ಡ್ಸ್ ಟೆಟ್ರಾ ಪ್ಯಾಕೆಟ್ ಗಳು, 180 ಎಂ.ಎಲ್ ನ 48 ಹೈವಾರ್ಡ್ಸ್ ಟೆಟ್ರಾ ಪ್ಯಾಕೆಟ್ ಗಳು, 180 ಎಂ.ಎಲ್ ನ 3 ಎಂ.ಹೆಚ್.ಬಿ ಬಾಟೆಲ್ ಗಳು, 180 ಎಂ.ಎಲ್.ನ 5 ಇಂಪಿರಿಯಲ್ ಬ್ಲೂ ಮದ್ಯದ ಬಾಟಲಿಗಳು, 180 ಎಂ.ಎಲ್ ನ 5 ಓಲ್ಡ್ ಅಡ್ಮಿರಲ್ ವಿಯಸ್ ಓಪಿ ಬ್ರಾಂದಿಯ ಟೆಟ್ರಾ ಪ್ಯಾಕೆಟ್ ಗಳು ಇದ್ದು. ಅದರಿಯವರು ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆಮಾಡುತ್ತಿರುವುದು ಕಂಡು ಬಂದಿದ್ದರ ಮೇರೆಗೆ ಕಾರ್ ನ್ನು ಪರಿಶೀಲಿಸಲಾಗಿ ನಂ ಕೆಎ 40 ಎಂ 9438 ನೊಂದಣಿ ಸಂಖ್ಯೆಯ ಮಾರುತಿ ಓಮ್ನಿ ಕಾರ್ ಆಗಿದ್ದು ಸದರಿ ವಾಹನವನ್ನು, ವಾಹನದಲ್ಲಿದ್ದ ಮದ್ಯವನ್ನು ಹಾಗೂ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆಮಾಡುತ್ತಿದ್ದ ವ್ಯಕ್ತಿಗಳನ್ನು ರಾತ್ರಿ 9-00 ಗಂಟೆಗೆ ಠಾಣೆಗೆ ಕರೆತಂದು ನೀಡಿರುವ ದೂರಾಗಿರುತ್ತೆ.

 1. ಸಿ.ಇ.ಎನ್ ಪೊಲೀಸ್ ಠಾಣೆ ಮೊ.ಸಂ.10/2020 ಕಲಂ. 420 ಐ.ಪಿ.ಸಿ & 66(ಡಿ) ಐ.ಟಿ ಆಕ್ಟ್:-

          ದಿನಾಂಕ:8/9/2020 ರಂದು ಪಿರ್ಯಾದಿ ಅನೀಲ್ ಕೆ ಎಸ್ ಬಿನ್ ಸೂರಪ್ಪ,22 ವರ್ಷ, ಒಕ್ಕಲಿಗರು, ಜಿರಾಯ್ತಿ ಕೆಲಸ ವಾಸ ಕಾಚಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ,ಮೊ ಸಂಖ್ಯೆ:8197039173 ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಾನು ದಿನಾಂಕ:4/9/2020 ರಂದು ಸಂಜೆ ಸುಮಾರು 05-00 ಗಂಟೆಯ ಸಮಯದಲ್ಲಿ ನಮ್ಮ ಮನೆಯಲ್ಲಿ ಇದ್ದಾಗ ತನ್ನ ಮೊಬೈಲ್ ನಲ್ಲಿ ಬ್ರೌಸ್ ಮಾಡುತ್ತಿದ್ದಾಗ ಓ ಎಲ್ ಎಕ್ಸ್ ಆಯಪ್ ನಲ್ಲಿ ಮಿಲ್ಟ್ರೀಯಲ್ಲಿನ ವ್ಯಕ್ತಿ ಒಂದು ಹೀರೋ ಸ್ಪಲೆಂಡರ್ ಫ್ಲಸ್ ದ್ವಿಚಕ್ರವಾಹವನ್ನು  35,000/- ರೂಗಳಿಗೆ ಮಾರಾಟ ಮಾಡುತ್ತಿರುವುದಾಗಿ ಹಾಕಿ ಅದರ ಪಕ್ಕದಲ್ಲ್ಲಿಯೆ ಮೊಬೈಲ್ ನಂಬರ್  9178243183 ನ್ನು ಹಾಕಿದ್ದರು. ನಾನು ಖರೀದಿಸೋಣವೆಂತ  ಸದರಿ ಸಂಖ್ಯೆಗೆ ಕರೆ ಮಾಡಿ ಅವರೊಂದಿಗೆ ಮಾತಾಡಿ 29,000/- ರೂಗಳಿಗೆ ಅಂತಿಮವಾಗಿ ವ್ಯವಹಾರವನ್ನು ಕುದಿರಿಸಿಕೊಂಡೆನು. ಅವರು ಮೊದಲ ಭಾರಿ ಟ್ರಾನ್ಸ್ ಪೋರ್ಟ ಚಾರ್ಜ 3100/- ರೂಗಳನ್ನು ಕಳುಹಿಸಲು ತಿಳಿಸಿದ. ನಾನು ಮಿಲ್ಟ್ರೀಯಲ್ಲಿ ಇರುವ ಸೈನಿಕರು ಸುಳ್ಳು ಹೇಳುವುದಿಲ್ಲವೆಂತ ನಂಬಿ ನನ್ನ ಗಂಜಿಗುಂಟೆ ಕೆನರ ಬ್ಯಾಂಕ್ ಅಕೌಂಟ್ ನಂ:0368108006589 ಸಂಖ್ಯೆಯಿಂದ ತನ್ನ ಗೂಗಲ್ ಫೇ ಅಕೌಂಟ್ ನಂಬರ್ 8197039173 ರಿಂದ ಅವನ ಕಳುಹಿಸಿದ ಗೂಗಲ್ ಫೇ ಖಾತೆ ನಂ:8822323045 ಖಾತೆಗೆ ಮೊದಲು 3,100/- ರೂಗಳನ್ನು ಕಳುಹಿಸಿದೆ. ನಂತರ ಜಿ ಎಸ್ ಟಿ ಅಂತ 13,000/- ರೂಗಳನ್ನು ಕಳುಹಿಸಲು ಕಳುಹಿಸಲು ತಿಳಿಸಿದ್ದು, ಸದರಿ ಮೊತ್ತವನ್ನು ಕಳುಹಿಸಿದೆ. ನಂತರ ಪುನಃ ಮೊ ಸಂ:8260505856 ನಿಂದ ಕರೆ ಮಾಡಿ ನಾನು ಕೊರಿಯರ್ ಹುಡಗ ಎಂತ ನಿಮಗೆ ವಾಹನವನ್ನು ತಂದಿರುತ್ತೇನೆ.ನೀವು 12,900/- ರೂಗಳನ್ನು ಕಳಹಿಸಿದರೆ ನಮಗೆ ಎನ್ ಓ ಸಿ ಬಂದರೆ ನಿಮಗೆ ಡಿಲವರಿ ನೀಡುತ್ತೇನೆ. ಎಂತ ತಿಳಿಸಿದ ನಾನು ನಿಜ ಇರಬಹುದೆಂತ ನಂಬಿ 12,900/- ರೂಗಳನ್ನು ಅವನು ಕಳುಹಿಸಿದ ಗೂಗಲ್ ಫೇ ಖಾತೆ ನಂ:8725069396 ರ ಖಾತೆಗೆ ಕಳುಹಿಸಿದೆ.ನಂತರ ಪುನಃ ಕರೆ ಮಾಡಿ ನೀವು 15,000/- ರೂ ಕಳುಹಿಸು ನಿಮ್ಮ ಹೆಚ್ಚುವರಿ ಹಣವನ್ನು ನಿಮಗೆ ಗಾಡಿಯನ್ನು ಡಿಲವರಿ ನೀಡುವ ಸಮಯದಲ್ಲಿ ವಾಪಸ್ಸು ನಿಮಗೆ ನೀಡಲಾಗುತ್ತದೆಂತ ತಿಳಿಸಿದ ನಾನು ಈಗಾಗಲೆ ಕಳುಹಿಸಿರುವ 29,000/- ರೂಗಳ ಹಣ ವಾಪಸ್ಸು ಬರುವುದಿಲ್ಲವೆಂತ ತಿಳದು ನಾನು ಒಂದು ಭಾರಿ 8000/- & 5000/- ರೂಗಳಂತೆ ಒಟ್ಟು  13,000/ ರೂಗಳನ್ನು ಕಳುಹಿಸಿರುತ್ತೇನೆ, ನಂತರ ಪುನಃ ಕರೆ ಮಾಡಿ 3100/- ಕಳುಹಿಸು ನೀವು ಕಳುಹಿಸಿದ್ದು ಹಣ ಎಕ್ಸಫೆಂಡ್ ಆಗಿದೆ ಎಂತ ತಿಳಿಸಿದ ನನಗೆ ಅನುಮಾನ ಬಂದು ನಾನು ಹಣ ಹಾಕಲಿಲ್ಲ.ಇವರು ನನಗೆ ವಂಚಿಸುತ್ತಿರುತ್ತಾರೆಂತ ತಿಳಿಯಿತು.. ಆದ ಕಾರಣ ನನಗೆ ದ್ವಿಚಕ್ರವಾಹವನ್ನು ಕೊಡುತ್ತೇನೆಂದು ನನ್ನಿಂದ ಒಟ್ಟು 42,000/- ರೂಗಳನ್ನು ಪಡೆದು ವಾಹನವನ್ನು ಕೊಡದೆ ಮತ್ತು ಹಣವನ್ನು ವಾಪಸ್ಸು ನೀಡದೆ ವಂಚಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರು.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.52/2020 ಕಲಂ. 379 ಐ.ಪಿ.ಸಿ :-

          ದಿನಾಂಕ:07-09-2020 ರಂದು ರಾತ್ರಿ 9.30  ಗಂಟೆಗೆ ಪಿರ್ಯಾದಿದಾರರಾದ ಶ್ರೀ ಕೆ.ಟಿ. ಚಂದ್ರೇಗೌಡ ಬಿನ್ ಲೇಟ್ ಕೆ.ಎಂ. ತಮ್ಮಯ್ಯ, 64 ವರ್ಷ, ಕುರುಬರು, ವ್ಯಾಪಾರ, ವಾಸ; ವಾರ್ಡ್ ನಂ: 29, ಚಾಮರಾಜಪೇಟೆ, ಚಿಕ್ಕಬಳ್ಳಾಪುರ ನಗರ. ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಚಿಕ್ಕಬಳ್ಳಾಪುರ ನಗರದ ಕೆ.ಇ.ಬಿ ಕಚೇರಿ ಕಾಂಪೌಂಡ್ ಹಿಂಭಾಗದಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಖಾತೆ ನಂ: 802/739 ರಲ್ಲಿದ್ದ ಜಾಗದಲ್ಲಿ 15 ಅಡಿ ಉದ್ದ, 19 ಅಡಿ ಅಗಲದಲ್ಲಿ ಅಂಗಡಿಯನ್ನು ಮಾಡುವ ಉದ್ದೇಶದಿಂದ ರೇಖುಗಳಿಂದ ಶೆಡ್ ಅನ್ನು ಕಟ್ಟಿಕೊಂಡಿದ್ದು, ದಿನಾಂಕ; 29-08-2020 ರಂದು ಬೆಳಗ್ಗೆ ಸುಮಾರು 8.00 ಗಂಟೆ ಸಮಯದಲ್ಲಿ ತಮ್ಮ ಅಂಗಡಿಯ ಪಕ್ಕದಲ್ಲಿ ಇರುವ ಮುಜಾಯಿದ್ ರವರು ಪೋನ್ ಮಾಡಿ, ನಿಮ್ಮ ಶೆಡ್ ನಲ್ಲಿ ರೇಖುಗಳನ್ನು ಯಾರೋ ಕಳುವು ಮಾಡಿರುವುದಾಗಿ ತಿಳಿಸಿದ್ದು, ಅದರಂತೆ ತಾನು ಅಂಗಡಿ ಬಳಿ ಹೋಗಿ ನೋಡಲಾಗಿ ತನ್ನ ಅಂಗಡಿಯ ಶೆಡ್ ನಲ್ಲಿ 12 ಶೀಟ್ ಕಬ್ಬಿಣದ ಆಲ್ಪಾಶೀಟ್(ರೇಖುಗಳು) ಇದರ ಬೆಲೆ ಸುಮಾರು 20,000/- ರೂಗಳು ಹಾಗೂ 20 ಅಡಿ ಉದ್ದದ 12 ಹ್ಯಾಂಗಲ್ ಗಳು ಇದರ ಬೆಲೆ ಸುಮಾರು 15,000/- ರೂಗಳು, ಒಟ್ಟು ಇದರ ಅಂದಾಜು ಬೆಲೆ ಸುಮಾರು 35,000/- ರೂಗಳಾಗಿರುತ್ತೆ. ದಿನಾಂಕ-27/08/2020 ರಿಂದ 29/08/2020 ರ ರಾತ್ರಿ ಯಾವೂದೋ ಸಮಯದಲ್ಲಿ ಕಳ್ಳತನ ಮಾಡಿರಬಹುದು.  ತನಗೆ  ತಮ್ಮ ಅಂಗಡಿಯ ಪಕ್ಕದಲ್ಲಿ ವಾಸವಾಗಿರುವ ಕೆಂಪರಾಜು.ಕೆ.ಟಿ ಬಿನ್ ಲೇಟ್ ತಮ್ಮಯ್ಯ ಎಂಬುವರ ಮೇಲೆ ಅನುಮಾನ ಇರುತ್ತೆ. ಈಗಾಗಲೇ ತನಗೂ ಮತ್ತು ಕೆಂಪರಾಜು ರವರಿಗೆ ಕೋರ್ಟ್ ನಲ್ಲಿ ಈ ಜಾಗದ ವಿಚಾರವಾಗಿ ದಾವೆ ಹೂಡಿದ್ದು, ವಿಚಾರಣೆಯಲ್ಲಿರುತ್ತೆ. ಕಳುವಾಗಿರುವ ಆಲ್ಪಾಶೀಟ್ ಗಳು ಹಾಗೂ ಹ್ಯಾಂಗಲ್ ಗಳನ್ನು ತಮಗೆ ಗೊತ್ತಿರುವ ಗುಜರಿ ಅಂಗಡಿಗಳು, ಇತರೆ ಕಡೆ ಹುಡುಕಾಡುತ್ತಿದ್ದರಿಂದ ಈ ದಿನ ತಡವಾಗಿ ಬಂದು ದೂರು ನೀಡಿರುತ್ತೇನೆ. ಆದ್ದರಿಂದ ನನ್ನ ಅಂಗಡಿಯ ಶೆಡ್ನಲ್ಲಿ ಕಳುವಾಗಿರುವ ಆಲ್ಪಾಶೀಟ್ ಗಳು ಹಾಗೂ ಹ್ಯಾಂಗಲ್ ಗಳನ್ನು ಪತ್ತೆ ಮಾಡಿ, ಕಳ್ಳತನ ಮಾಡಿರುವ ಆರೋಪಿತರ ವಿರುದ್ದ ಕಾನೂನು ರೀತ್ಯಾ ಕ್ರಮಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಈ ಪ್ರ.ವ.ವ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.40-2020 ಕಲಂ.279,304(ಎ) ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ:-08/09/2020 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ತ್ರಿಯಂಬಕ ಸಿ ಎಸ್ ಬಿನ್ ಲೇಟ್ ಸಿ ವಿ ಶಂಕರ್ ರಾವ್ 57 ವರ್ಷ, ಬ್ರಾಹ್ಮಿಣ್ ಜನಾಂಗ, ವಕೀಲ ವೃತಿ, ವಾರ್ಡ್-12, ಕೋಟೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ.  ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ತಮ್ಮ ಅಣ್ಣನಾದ ಶ್ರೀ ಜಗದೀಶ ಸಿ ಎಸ್ ಬಿನ್ ಲೇಟ್ ಸಿ ವಿ ಶಂಕರ್ ರಾವ್ 68 ವರ್ಷ, ಬ್ರಾಹ್ಮಿಣ್ ಜನಾಂಗ, ವಾರ್ಡ್-12, ಕೋಟೆ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ದಿನಾಂಕ:-08/09/2020 ರಂದು ಪ್ರತಿದಿನದಂತೆ ವಾಕಿಂಗ್ ಹೋಗಲು ಮನೆಯಿಂದ ಬೆಳಿಗ್ಗೆ ಸುಮಾರು 04-30 ಗಂಟೆಯ ಸಮಯದಲ್ಲಿ ಬೆಂಗಳೂರು – ಚಿಕ್ಕಬಳ್ಳಾಪುರ ಎನ್.ಎಚ್-44 ಬಿ.ಬಿ ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದಾಗ ಯಾವುದೋ ವಾಹನ ಚಾಲಕ/ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ತಮ್ಮ ಅಣ್ಣ  ಜಗದೀಶ ಸಿ ಎಸ್ ರವರಿಗೆ ಡಿಕ್ಕಿ ಹೊಡೆಸಿ ವಾಹನ ಸಮೇತ ಸ್ಥಳದಿಂದ ಹೊರಟು ಹೋಗಿದ್ದರ ಪರಿಣಾಮ ರಸ್ತೆಯಲ್ಲಿ ಬಿದ್ದಾಗ ಮೂಗಿನಲ್ಲಿ ರಕ್ತ ಬಂದು , ತಲೆಗೆ, ಬಲ ಹಣೆ, ಎಡ ಹಣೆ, ಎರಡೂ ಮೊಣಕಾಲುಗಳಿಗೆ ಹಾಗೂ ಬೆನ್ನಿಗೆ ಗಾಯಗಳಾಗಿರುವುದಾಗಿ ಅಲ್ಲಿನ ಸ್ಥಳೀಯರು ಉಪಚರಿಸಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಗಾಯಾಳು ತಮ್ಮ ಅಣ್ಣ ಜಗದೀಶ ಸಿ ಎಸ್ ರವರನ್ನು ಮನೆಗೆ ಕರೆದುಕೊಂಡು ಬಂದಿದ್ದು, ತಮ್ಮ ಅಣ್ಣನವರಿಗೆ ಹೆಚ್ಚಿನ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್ ಮಾಡಿಸಲು ಬೆಳಿಗ್ಗೆ 09-30 ಕ್ಕೆ ಬರುವುದಾಗಿ ತಿಳಿಸಿದ್ದರಿಂದ ಆ ನಂತರ ತಾವು ಕಾಲಾವಕಾಶ ಇದ್ದುದ್ದರಿಂದ ಮನೆಗೆ ಕರೆದುಕೊಂಡು ಹೋಗಿರುತ್ತೇವೆ ಮನೆಯಲ್ಲಿ ಸದರಿ ಗಾಯಾಳು ಜಗದೀಶ ಸಿ ಎಸ್ ರವರು ಅಶ್ವಸ್ಥರಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ನಗರದ ಜೀವನ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯ ಮಧ್ಯದಲ್ಲಿಯೇ ಮೃತ ಪಟ್ಟಿರುತ್ತಾರೆ. ಸದರಿ ಅಪಘಾತ ಪಡಿಸಿ ಹೊರಟು ಹೋಗಿರುವ ಯಾವುದೋ ವಾಹನ ಚಾಲಕ/ಸವಾರನನನ್ನು ಪತ್ತೇ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಲಿಖಿತ ದೂರಿನ ಮೇರೆಗೆ ದಿನಾಂಕ:-08/09/2020 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.104/2020 ಕಲಂ. 20B NARCOTIC DRUGS AND PSYCHOTROPIC SUBSTANCES ACT, 1985 :-

          ದಿನಾಂಕ:07/09/2020 ರಂದು ಮಧ್ಯಾಹ್ನ 4.00 ಗಂಟೆಗೆ ಠಾಣಾ ಹೆಚ್ ಸಿ 90 ಚಂದ್ರಕುಮಾರ್ ರವರ ಮುಖೇನ ಮಾನ್ಯ ಪಿಐ ಸಾಹೇಬರು ಕಳುಹಿಸಿಕೊಟ್ಟಿರುವ ವರದಿಯ ಸಾರಾಂಶವೆನೆಂದರೆ ದಿನಾಂಕ:07/09/2020 ರಂದು 3-30 ಗಂಟೆಯಲ್ಲಿ ಪಿ.ಐ.ಜೆ.ಎನ್.ಆನಂದಕುಮಾರ್ ಪೊಲೀಸ್ ನಿರೀಕ್ಷಕರು ಆದ ನನಗೆ ಠಾಣೆಯಲ್ಲಿದ್ದಾಗ ಬಾತ್ಮಿದಾರರಿಂದ ಬಂದ ಮಾಹಿತಿ ಏನೆಂದರೇ, ಯಾರೋ ಮೂರು ಜನರು ಚಿಂತಾಮಣಿ ಟೌನ್ ರಾಮಕುಂಟೆ ರಸ್ತೆಯ ಪಕ್ಕದಲ್ಲಿ ಒಂದು ಕಾರನ್ನು ನಿಲ್ಲಿಸಿಕೊಂಡು ಗಾಂಜಾ ಮಾರಾಟದ ಬಗ್ಗೆ ವ್ಯವಹಾರ ಮಾಡುತ್ತಿದ್ದಾರೆಂದು ಮಾಹಿತಿ ಬಂದಿದ್ದು, ಕೂಡಲೇ ಸದರಿ ವಿಚಾರವನ್ನು ಠಾಣಾ ದಿನಚರಿಯಲ್ಲಿ ನಮೂದು ಮಾಡಿ ನಂತರ ಮೇಲಾಧಿಕಾರಿಗಳಲ್ಲಿ ಮಾಹಿತಿಯನ್ನು ತಿಳಿಸಿ,  ಠಾಣೆಯಲ್ಲಿ ಇದ್ದ ಪಿ.ಎಸ್.ಐ-ಕಾಸು-1, ನಾರಾಯಣಸ್ವಾಮಿ, ಪ್ರೋಬೆಷನರಿ ಪಿ.ಎಸ್.ಐ ಸತೀಶ್.ಕೆ, ಹಾಗು ಸಿಬ್ಬಂದಿಯವರಾದ ಹೆಚ್.ಸಿ-81, 126, 90 ಮಹಿಳಾ ಹೆಚ್.ಸಿ-168 ಪಿಸಿ-539, ಪಿ.ಸಿ-426 ರವರನ್ನು ಠಾಣೆಗೆ ಒದಗಿಸಿರುವ ಸರ್ಕಾರಿ ಜೀಪ್ ಸಂಖ್ಯೆ: ಕೆಎ-40-ಜಿ-356 ಮತ್ತು ಕೆ.ಎ-07-ಜಿ-188 ರಲ್ಲಿ ಕರೆದುಕೊಂಡು ಚಿಂತಾಮಣಿ ರಾಮಕುಂಟೆ ರಸ್ತೆಯಲ್ಲಿ ಹೋಗುತ್ತಿರುವಾಗ ರಾಮಕುಂಟೆ ರಸ್ತೆಯಿಂದ ಚೇಳೂರು ರಸ್ತೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ಒಂದು ಕಾರು ನಿಲ್ಲಿಸಿದ್ದು, ಒಬ್ಬ ವ್ಯಕ್ತಿ ಕಾರಿನ ಹೊರಗಡೆ ನಿಂತುಕೊಂಡಿದ್ದು ಇಬ್ಬರು ಕಾರಿನ ಒಳಗೆ ಮಾತನಾಡುತ್ತಿದ್ದು ಸದರಿ ಕಾರಿನ ಬಳಿ  ನಾವು ಹೋದ ಕೂಡಲೇ ಒಬ್ಬ ವ್ಯಕ್ತಿ ಓಡಿ ಹೋಗಿರುತ್ತಾನೆ ನಾನು ಮತ್ತು ಸಿಬ್ಬಂದಿಗಳು ಕಾರಿನಲ್ಲಿದ್ದವರನ್ನು  ಹೆಸರು ವಿಳಾಸ ಕೇಳಲಾಗಿ ಇಬ್ಬರು ಸಮರ್ಪಕವಾಗಿ ಉತ್ತರವನ್ನು ನೀಡದೇ ತಡಬಡಾಯಿಸಿದ್ದು, ನಂತರ ಇಬ್ಬರನ್ನು ವಿಚಾರ ಮಾಡಿ ಕಾರಿನ ಹಿಂಭಾಗದ ಸೀಟಿನ ಮೇಲೆ 3 ಬ್ಯಾಗ್ ಗಳು ಇದ್ದು, ಸದರಿ ಬ್ಯಾಗುಗಳಲ್ಲಿ ಏನಿದೆ ಎಂದು ಕೇಳಲಾಗಿ ಸಮರ್ಪಕವಾಗಿ ಉತ್ತರ ನೀಡದೇ ಇದ್ದುದರಿಂದ ನಾವು ಬ್ಯಾಗ್ ಗಳನ್ನು ಪರಿಶೀಲಿಸಲಾಗಿ ಅದರಲ್ಲಿ ಮೇಲ್ನೋಟಕ್ಕೆ ಗಾಂಜಾ ಇರುವುದು ಕಂಡುಬಂದಿರುತ್ತೆ. ನಂತರ ಕಾರನ್ನು ಪರಿಶೀಲಿಸಿದ್ದು, ಇಂಡಿಗೋ ಕಂಪನಿಯ ಕಾರು ಆಗಿದ್ದು ಇದರ ಮುಂಭಾಗ ಮತ್ತು ಹಿಂಭಾಗ ಎಪಿ-29-ಎಹೆಚ್-9210 ಎಂಬ ನೊಂದಣೆ ಸಂಖ್ಯೆ ಇರುತ್ತದೆ ನಂತರ ವಶಕ್ಕೆ ಪಡೆದುಕೊಂಡಿದ್ದ ಅಸಾಮಿಗಳ ಹೆಸರು ವಿಳಾಸವನ್ನು ಕೇಳಲಾಗಿ ಶಂಕರ ಬಿನ್ ವೆಂಕಟರವಣಪ್ಪ, 33 ವರ್ಷ, ಅವುಲ ಜನಾಂಗ, ಕೂಲಿ ಕೆಲಸ ವಾಸ ಗುಂಟಪಲ್ಲಿ ಗ್ರಾಮ, ಟಿ.ಸದುಂ ಮಂಡಲಂ, ತಂಬಾಳ್ಳಪಲ್ಲಿ ತಾಲ್ಲೂಕು, ಚಿತ್ತೂರು ಜಿಲ್ಲೆ, ಸ್ವಂತ ಸ್ಥಳ ಇಂದ್ರಮ್ಮ ಕಾಲೋನಿ, ಬಿ.ಕೊತ್ತಕೋಟ ಟೌನ್ ಎಂಬುದಾಗಿ ತಿಳಿಸಿದ್ದು, ಮತ್ತೊಬ್ಬನ ಹೆಸರು ವಿಳಾಸ ಕೇಳಲಾಗಿ ಶಬಾಜ್ ಬಿನ್ ಹಯಾತ್ ಪಾಷ,26 ವರ್ಷ, ಮುಸ್ಲಿಂ ಜನಾಂಗ, ರೇಷ್ಮೆ ಕೆಲಸ, ಶಿಡ್ಲಘಟ್ಟ ಬೈಪಾಸ್ ರಸ್ತೆ, ಮಹಮದಿ ಮಸೀದಿ ಬಳಿ ವಾಸ, ಶಿಡ್ಲಘಟ್ಟ ಟೌನ್ ಎಂದು ತಿಳಿಸಿದ್ದು, ಓಡಿ ಹೋದವನ ಬಗ್ಗೆ ವಿಚಾರಿಸಲಾಗಿ ಬಾಗೇಪಲ್ಲಿ ತಾಲ್ಲೂಕು ಮುದ್ದಲಪಲ್ಲಿ ಗ್ರಾಮದ ವಾಸಿ ರಾಜು ಎಂದು ತಿಳಿಸಿದ್ದು ತಮ್ಮೊಂದಿಗಿದ್ದ ಗಾಂಜಾ ಸುಮಾರು 32 ಕೆ.ಜಿ ಇರಬಹುದೆಂದು ತಿಳಿಸಿರುತ್ತಾರೆ ಶಂಕರ್ ಮತ್ತು ರಾಜು ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಶಬಾಜ್  ರವರು ಖರೀದಿ ಮಾಡಲು  ಬಂದಿರುವುದಾಗಿ ತಿಳಿಸಿರುತ್ತಾರೆ ಈ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಠಾಣಾ ಸಿಬ್ಬಂದಿ ಹೆಚ್ ಸಿ 90 ಚಂದ್ರಕುಮಾರ್ ರವರ ಮುಖೇನ ವರದಿಯನ್ನು ಕಳುಹಿಸಿಕೊಟ್ಟಿರುವ ವರದಿಯನ್ನು ಪಡೆದು ಆರೋಪಿಗಳ ವಿರುದ್ದ  ಠಾಣಾ ಮೊ ಸಂ: 104/2020 ಕಲಂ: 20(ಬಿ)ಎನ್.ಡಿ.ಪಿ.ಎಸ್ ಆಕ್ಟ್-1985 ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.105/2020 ಕಲಂ. 78(3) ಕೆ.ಪಿ ಆಕ್ಟ್:-

          ದಿನಾಂಕ:07/09/2020 ರಂದು ಘನ ನ್ಯಾಯಾಲಯದ ಪಿಸಿ 509 ರವರು ಸಂಜೆ 7:45 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿ ಪ್ರತಿಯನ್ನು ಹಾಜರುಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ ನಾನು  ಹಾಗೂ ಹೆಚ್.ಸಿ 37 ಮಂಜುನಾಥ ಮತ್ತು ಪಿಸಿ 93 ಸಂತೋಷ್ ರವರು ಕೆಎ 40 ಜಿ 61 ರಕ್ಷಕ್ ಜೀಪ್ ನಲ್ಲಿ  ಚಿಂತಾಮಣಿ ನಗರದ ಬೆಂಗಳೂರು ವೃತ್ತ, ಪ್ಲವರ್ ವೃತ್ತ, ಚೇಳೂರು ವೃತ್ತದ ಕಡೆಗಳಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 6-15 ಗಂಟೆಗೆ ಗಾಂಧಿನಗರದ ಕಡೆ ಹೋಗುವ ರಸ್ತೆಯ ಆಟೋ ನಿಲ್ದಾಣದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವುದಾಗಿ ಖಚಿತ ಮಾಹಿತಿ ಬಂದಿದ್ದು, ನಾವು ಚೇಳೂರು ವೃತ್ತದ ಬಳಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಗಾಂಧಿನಗರದ ಕಡೆ ಹೋಗುವ ರಸ್ತೆಯಲ್ಲಿರುವ ಆಟೋ ನಿಲ್ದಾಣದ ಬಳಿ ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಜೀಪ್ ನಲ್ಲಿ ಕರೆದುಕೊಂಡು ಹೋಗಿ ಜೀಪ್ ನ್ನು ನಿಲ್ಲಿಸಿ    ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಗಾಂಧಿನಗರದ ಕಡೆ ಹೋಗುವ ಆಟೋ ನಿಲ್ದಾಣದ ಮುಂಭಾಗ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ಅಸಾಮಿಯು ರಸ್ತೆಯ ಬದಿಯಲ್ಲಿ ನಿಂತುಕೊಂಡು ಜನರನ್ನು ಗುಂಪು ಸೇರಿಸಿಕೊಂಡು 1 ರೂಗೆ 80 ರೂ ಎಂದು ಕೂಗುತ್ತಾ ಸಾರ್ವಜನಿಕರಿಗೆ ಹಣ ಕಟ್ಟುವಂತೆ ಪ್ರೇರೆಪಿಸಿ ಮಟ್ಕಾ ಚೀಟಿ ಬರೆಯುತ್ತಿದ್ದು ನಾವು ಪಂಚರೊಂದಿಗೆ ಸುತ್ತುವರೆದು ದಾಳಿ ಮಾಡುವಷ್ಟರಲ್ಲಿ ಅಲ್ಲಿದ್ದ ಜನರೆಲ್ಲಾ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ಅಸಾಮಿಯನ್ನು ಹಿಡಿದು ಆತನ ಹೆಸರು ಮತ್ತು ವಿಳಾಸ ಕೇಳಲಾಗಿ ತನ್ನ ಹೆಸರು ಶ್ರೀಧರ್ ಬಿನ್ ನಾಗರಾಜ್,21 ವರ್ಷ, ಕಾರ್ ಚಾಲಕ, ವಾಸ ಅಶ್ರಯ ಬಡಾವಣೆ, ಚಿಂತಾಮಣಿ ನಗರ ಎಂದು ತಿಳಿಸಿದ್ದು, ಆತನನ್ನು ಅಂಗ ಶೋಧನೆ ಮಾಡಲಾಗಿ  2460/-ರೂ ನಗದು ಹಣ ಇದ್ದು ಸದರಿ ಹಣದ ಬಗ್ಗೆ ಕೇಳಲಾಗಿ ಇದು ಸಾರ್ವಜನಿಕರಿಂದ ಮಟ್ಕಾ ಬರೆದು ಸಂಪಾದಿಸಿರುವ ಹಣವೆಂತ ತಿಳಿಸಿದ್ದು ಪಂಚಾಯ್ತಿದಾರರ ಸಮಕ್ಷಮದಲ್ಲಿ ಪಂಚನಾಮೆಯ ಮೂಲಕ ಹಣ, ಒಂದು ಪೆನ್ನು, ಮಟ್ಕಾ ಚೀಟಿಯನ್ನು ಅಮಾನತ್ತು ಪಡಿಸಿಕೊಂಡು ಮಾಲು ಆಸಾಮಿ ಪಂಚನಾಮೆಯೊಂದಿಗೆ ಸಂಜೆ 7-00 ಗಂಟೆಗೆ ಠಾಣೆಗೆ ಹಾಜಾರಾಗಿ ನೀಡಿದ ವರದಿಯ ಮೇರೆಗೆ ಇದು ಆಸಂಜ್ಷೇಯ ಅಪರಾಧವಾಗಿರು.ವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆಯಲು ಠಾಣಾ ಎನ್ ಸಿ ಆರ್ ಸಂ: 142/2020 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದ ನಂತರ ಮೊ ಸಂ: 105/2020 ಕಲಂ : 78(3) ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.232/2020 ಕಲಂ. 32,34 ಕೆ.ಇ  ಆಕ್ಟ್:-

          ದಿನಾಂಕ 07/09/2020 ರಂದು ಪಿರ್ಯಾದಿದಾರಾದ ಶ್ರೀ ರಾಜಣ್ಣ, ಪಿಐ, ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ಈ ದಿನ ನಾನು ನಮ್ಮ ಠಾಣಾ ಸಿಬ್ಬಂದಿಯೊಂದಿಗೆ ದ್ವಿಚಕ್ರ ವಾಹನಗಳಲ್ಲಿ ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಸಂಗ್ರಹಣೆಗಾಗಿ ಮಧ್ಯಾಹ್ನ 3-00 ಗಂಟೆಗೆ ಜಗರೆಡ್ಡಿಹಳ್ಳಿ ಗ್ರಾಮದ ಕಡೆ ಗಸ್ತುನಲ್ಲಿದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಪಂಚರನ್ನು ಬರಮಾಡಿಕೊಂಡು ತಾಲ್ಲೂಕಿನ ದೇವಗಾನಹಳ್ಳಿ ಗ್ರಾಮದ ವಾಸಿ ಹನುಮಂತಪ್ಪ ಬಿನ್ ಲೇಟ್ ರಾಮಪ್ಪ ,35 ವರ್ಷ, ಉ ಪ್ಪಾರ ಜನಾಂಗ, ಚಿಲ್ಲರೆ ಅಂಗಡಿ  ವ್ಯಾಪಾರ ರವರ ಬಾಬತ್ತು ಚಿಲ್ಲರೆ ಅಂಗಡಿಯ ಮೇಲೆ ದಾಳಿ ಮಾಡಿ ಯಾವುದೇ ಪರವಾನಗಿ ಇಲ್ಲದೆ ಅಂಗಡಿಯಲ್ಲಿ  ಮಧ್ಯವನ್ನು ದಾಸ್ತಾನು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು ಈ ಸಂಬಂದ ದಾಳಿ ಮಾಡಿ ಅಂಗಡಿಯಲ್ಲಿದ್ದ 1)  ಒಂದು ಅರಿಶಿಣ ಬಣ್ಣದ ಪ್ಲಾಸ್ಟಿಕ್ ಚೀಲ ಹಾಗೂ ಅದರಲ್ಲಿದ್ದ 2) 180 ಎಂಎಲ್  OLD TAVERN ವಿಸ್ಕಿ ಕಂಪನಿಯ ಮಧ್ಯ ತುಂಬಿರುವ 10 ಟೆಟ್ರಾ ಪಾಕೇಟ್ ಗಳು 3) HAYWARDS  ಚಿಯರ್ಸ್ ವಿಸ್ಕಿ ಕಂಪನಿಯ ಮಧ್ಯೆ ತುಂಬಿರುವ 90 ಎಲ್ ನ 94 ಟೆಟ್ರಾ ಪಾಕೇಟ್ಗಳನ್ನು ಪಂಚರ ಸಮಕ್ಷಮ ಪಂಚನಾಮೆಮೂಲಕ ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡಿರುತ್ತೆ. ನಂತರ ಸದರಿ ಮಾಲುಗಳ ಪೈಕಿ 02 OLD TAVERN  ವಿಸ್ಕಿಯ 180  ಎಂ ಎಲ್  ನ ಮಧ್ಯ ತುಂಬಿದ ಟೆಟ್ರಾ ಪಾಕೃಟ್ ಗಳನ್ನು ಹಾಗೂ  90 ಎಂ ಎಲ್ HAYWARDS CHEERS WHISKY ಯ  24  ಟೆಟ್ರಾ ಪಾಕೇಟ್ ಗಳನ್ನು ಪರೀಕ್ಷೀಸುವ ಸಲುವಾಗಿ   ಅಲಾಯಿದೆಯಾಗಿ ಒಂದು ಒಂದು ಬಳಿ ಚೀಲದಲ್ಲಿ ಹಾಕಿ ‘N’ ಎಂಬ ಅಕ್ಷರದಿಂದ ಸೀಲು ಮಾಡಿರುತ್ತೆ.ಆರೋಪಿಯು ಮಾಲನ್ನು ಪರಿಶೀಲಿಸುತ್ತಿದ್ದಾಗ ಸ್ಥಳದಿಂದ ಪರಾರಿಯಾಗಿರುತ್ತಾನೆ, ಸ್ಥಳದಲ್ಲಿ ವಶಪಡಿಸಿಕೊಂಡ ಮಾಲುಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದಲ್ಲಿ ಯಾವುದೇ ಪರವಾನಗಿ ಇಲ್ಲಿದೆ ಮದ್ಯವನ್ನು  ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಹನುಂತಪ್ಪ ರವರ ವಿರುದ್ದ ಮುಂದಿನ ಕ್ರಮ ಕೈಗೊಳ್ಳಲು ಕೋರಿ ದೂರು.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.128/2020 ಕಲಂ. 78(3) ಕೆ.ಪಿ  ಆಕ್ಟ್:-

          ದಿನಾಂಕ 07/09/2020 ರಂದು ಸಂಜೆ 6:00 ಗಂಟೆಯಲ್ಲಿ ನ್ಯಾಯಾಲಯದ ಪಿ.ಸಿ ರಂಗನಾಥ ರವರು ಹಾಜರುಪಡಿಸಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ದಿನಾಂಕ: 01/09/2020 ರಂದು ಮದ್ಯಾಹ್ನ 3-00 ಗಂಟೆ ಯಲ್ಲಿ ಹೆಚ್.ಸಿ. 214 ರವರಿಗೆ ಗೌರಿಬಿದನೂರು ನಗರದ ನದಿಗಡ್ಡೆ ಆಂಜಿನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಮಟ್ಕಾ ಜೂಜಾಟವಾಡುತ್ತಿರುವುದಾಗಿ ಬಂದು ಮಾಹಿತಿ ಮೇರೆಗೆ ಕೂಡಲೇ ನಾನು ಪಂಚ ರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಪಂಚರನ್ನು ಬರಮಾಡಿಕೊಂಡು ಮರೆಯಲ್ಲಿ ನಿಂತು ನೋಡಲಾಗಿ ನದಿಗಡ್ಡೆ ಆಂಜಿನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಯಾರೋ ಒಬ್ಬ 1/- ರೂಪಾಯಿಗೆ 70/- ರೂಪಾಯಿಗಳನ್ನು ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಿರುವುದು ಕಂಡುಬಂದಿದ್ದು. ನಾವು ಪಂಚರ ಸಮ್ಮುಖದಲ್ಲಿ ಆತನನ್ನು ಹಿಡಿದುಕೊಂಡಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ  ತನ್ನ ಹೆಸರು ಸತ್ತರ್ ಬಿನ್ ಸಲ್ಲಾಂಸಾಬ್, 40 ವರ್ಷ, ಗಾರೆ ಕೆಲಸ, ಮುಸ್ಲಿಂ ಜನಾಂಗ, ವಾಸ ನದಿಗಡ್ಡೆ, ಗೌರಿಬಿದನೂರು ನಗರ ಎಂದು ತಿಳಿಸಿದ್ದು, ಅವರಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರ ಬಳಿ ಯಾವುದೇ ಪರವಾನಗಿ ಇಲ್ಲದೇ ಇದ್ದು, ಆರೋಪಿಯ ಬಳಿ ಒಂದು ಮಟ್ಕಾ ಚೀಟಿ ಹಾಗೂ ಒಂದು ಪೆನ್ನು ಮತ್ತು ನಗದು ಹಣ 800 – ರೂಪಾಯಿಗಳು  ಇದ್ದು,  ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದ್ದು, ಸಂಜೆ  04-00  ಗಂಟೆಯಿಂದ  05-00 ಗಂಟೆ ಯವರೆಗೆ ಪಂಚನಾಮೆಯನ್ನು ಸ್ಥಳದಲ್ಲಿಯೆ ಠಾಣೆಗೆ ಒದಗಿಸಿರುವ ಲ್ಯಾಪ್ ಟ್ಯಾಪ್ ನಲ್ಲಿ ಟೈಪ್ ಮಾಡಿ ಆರೋಪಿ ಹಾಗೂ ಮಾಲಿನೊದಿಗೆ ಸಂಜೆ 5-30  ಗಂಟೆಗೆ ಠಾಣೆಗೆ ವಾಪಸ್ಸು ಬಂದು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಎನ್.ಸಿ.ಆರ್ ನ್ನು ದಾಖಲು ಮಾಡಿರುತ್ತೇನೆ ನಂತರ ಈ ದಿನ ಪ್ರಕರಣವನದನು ದಾಖಲು ಮಾಡಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.129/2020 ಕಲಂ. 78(3) ಕೆ.ಪಿ  ಆಕ್ಟ್:-

          ದಿನಾಂಕ 07/09/2020 ರಂದು ನ್ಯಾಯಾಲಯದ ಪಿ.ಸಿ ರಂಗನಾಥ ರವರು ನೀಡಿದ ನ್ಯಾಯಾಲಯದ ಅನುಮತಿ ಪತ್ರದ ಸಾರಾಂಶವೇನೆಂದರೆ, ಶರತ್ ಕುಮಾರ್ PSI DCB-CEN ಪೊಲೀಸ್ ಠಾಣೆ ರವರು ದಿನಾಂಕ 04/09/2020 ರಂದು ಹಾಗೂ ತಮ್ಮ ಠಾಣೆಯ ಸಿಬ್ಬಂದಿಯವರು ದಿನಾಂಕ:04-09-2020 ರಂದು ಗೌರಿಬಿದನೂರು ತಾಲ್ಲುಕಿನ ಗಸ್ತಿನಲ್ಲಿದ್ದಾಗ ಬಾತ್ಮೀದಾರರಿಮದ ಬಂದ ಖಚಿತ ಮಾಹಿತಿಯಂತೆ ಪಂಚರನ್ನು ಬರಮಾಡಿಕೊಂಡು ಗೌರಿಬಿದನೂರು ನಗರದ BH ರಸ್ತೆಯಲ್ಲಿ ಮಹೇಶ್ವರಿ ಬಾರ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹೀರ ಮಟ್ಕಾ ಅಂಕಿಗಳನ್ನು ಬರೆಯುತ್ತಿದ್ದ ಮಂಜುನಾಥ ಬಿನ್ ಲೇಟ್ ರಾಜಪ್ಪ, 42 ವರ್ಷ, ಬಲಜಿಗರು, ಗಾರೆ ಕೆಲಸ ಮುದುಗೆರೆ ಗ್ರಾಮ ರವರನ್ನು ವಶಕ್ಕೆ ಪಡೆದುಕೊಂಡು 1) ಒಂದು ಮಟ್ಕಾ ಚೀಟಿ, 2) ಒಂದು ಬಾಲ್ ಪಾಯಿಂಟ್ ಪೆನ್ನು ಮತ್ತು 3) ನಗದು ಹಣ 1220 ರೂಪಾಯಿಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿದ್ದವನನ್ನು ಠಾಣೆಗೆ ಕರೆದುಕೊಂಡು ಬಂದು ನೀಡಿದ ವರದಿಯನ್ನು ಪಡೆದು ರಾತ್ರಿ ಪೊಲೀಸ್ ತಂತ್ರಾಂಶ ಕೆಲಸ ನಿರ್ವಹಿಸದ ಕಾರಣ ದಿನಾಂಕ 05/09/2020 ರಂದು ಠಾಣಾ ಎನ್.ಸಿ.ಆರ್ ದಾಖಲಿಸಿದ್ದು ಈ ದಿನ ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.130/2020 ಕಲಂ. 32,34 ಕೆ.ಇ  ಆಕ್ಟ್:-

          ದಿನಾಂಕ 07/09/2020 ರಂದು ರಾತ್ರಿ 9:00 ಗಂಟೆಯಲ್ಲಿ DCB-CEN ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ರಾಜಣ್ಣ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ನಾನು ನಮ್ಮ ಠಾಣಾ ಸಿಬ್ಬಂದಿಯೊಂದಿಗೆ ಗೌರಿಬಿದನೂರು ತಾಲ್ಲೂಕಿನಲ್ಲಿ ಸರ್ಕಾರಿ ವಾಹನ ಸಂಖ್ಯೆ KA-40-G-270 ರಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 6:30 ಗಂಟೆ ಸಮಯದಲ್ಲಿ ಗೌರಿಬಿದನೂರು ನಗರದ ನಾಗಾರೆಡ್ಡಿ ಬಡಾವಣೆಯ ಸಿ.ಎಲ್ ಕೃಷ್ಣಮೂರ್ತಿ ಬಿನ್ ಲೇಟ್ ಚಿಕ್ಕಲಿಂಗಯ್ಯ, 42 ವರ್ಷ, ಕುರುಬರು, ಜಿರಾಯ್ತಿ ರವರು ತಮ್ಮ ಮನೆಯಲ್ಲಿ ಮದ್ಯವನ್ನು ದಾಸ್ತಾನು ಮಾಡಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ಪಂಚಾಯ್ತಿದಾರರನ್ನು ಕರೆದುಕೊಂಡು ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿದ್ದ 1) 5 ಬಿಳಿ ಪ್ಲಾಸ್ಟಿಕ್ ಚೀಲಗಳು, ಚೀಲಗಳಲ್ಲಿದ್ದ 2) Haywards Whisky 90 ML ನ 63 ಟೆಟ್ರಾ ಪಾಕೆಟ್ ಗಳು, 3) Originl Choice ಕಂಪನಿಯ 90 ಎಂ.ಎಲ್ ನ 47 ಟೆಟ್ರಾ ಪಾಕೆಟ್ ಗಳು, 4) Kingfisher Premier ನ 650 ಎಂ.ಎಲ್ ನ 13 ಬಿಯರ್ ಬಾಟಲ್ ಗಳು, 5) Bagpiper 180 ಎಂ.ಎಲ್ ನ 10 ಟೆಟ್ರಾ ಪಾಕೆಟ್ ಗಳು, 6) Mc Dowells 180 ಎಂ.ಎಲ್ ನ 8 ಬಾಟಲ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ವಶಕ್ಕೆ ಪಡೆದುಕೊಂಡು ಅವುಗಳಲ್ಲಿ ಪ್ರಯೋಗಾಲಯಕ್ಕೆ 12 ಮದ್ಯ ತುಂಬಿದ Haywards 90 ಎಂ.ಎಲ್ ಪಾಕೆಟ್ ಗಳು, 12 Original choice 90 ಎಂ.ಎಲ್  ಮದ್ಯ ತುಂಬಿದ ಪಾಕೆಟ್ ಗಳು, Bagpiper 180 ಎಂ.ಎಲ್ ನ ಮದ್ಯ ತುಂಬಿದ 1 ಪಾಕೆಟ್, Mcdowells ನ 180 ಎಂ.ಎಲ್ ನ 1 ಬಾಟಲ್ ಹಾಗೂ 650 ಎಂ.ಎಲ್ ನ Kingfisher ನ 1 ಬಾಟಲ್ ನ್ನು ಪ್ರತ್ಯೇಕವಾಗಿ ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು N ಎಂಬ ಅಕ್ಷರದಿಂದ ಅರಗನ್ನು ಹಾಕಿ ಸೀಲು ಮಾಡಿರುತ್ತೆ. ಅಮಾನತ್ತುಪಡಿಸಿಕೊಂಡಿರುವ ಒಟ್ಟು ಮದ್ಯದ ಪ್ರಮಾಣ 21 ಲೀಟರ್ 590 ಎಂ.ಎಲ್ ಇದ್ದು ಇದರ ಒಟ್ಟು ಬೆಲೆ 8176 ರೂ ಗಳಾಗಿರುತ್ತೆ. ಆರೋಪಿ ಮತ್ತು ಮಾಲನ್ನು ಠಾಣೆಗೆ ಹಾಜರುಪಡಿಸಿ ನೀಡಿದ ವರದಿಯನ್ನು ಪಡೆದು ಪ್ರಕರಣ ದಾಖಲಿಸಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.131/2020 ಕಲಂ. 15(A),32(3) ಕೆ.ಇ  ಆಕ್ಟ್:-

          ದಿನಾಂಕ 08/09/2020 ರಂದು ಬೆಳಿಗ್ಗೆ 9:00 ಗಂಟೆಯಲ್ಲಿ ರವಿ ಎಸ್ ವೃತ್ತ ನಿರೀಕ್ಷಕರು ಗೌರಿಬಿದನೂರು ರವರು ಮಾಲು ಮತ್ತು ಆರೋಪಿಯೊಂದಿಗೆ ಠಾನೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ಈ ದಿನ ಬೆಳಿಗ್ಗೆ 7:00 ಗಂಟೆಯಲ್ಲಿ ಗೌರಿಬಿದನೂರು ನಗರದ ಗಸ್ತಿನಲ್ಲಿದ್ದಾಗ ಗೌರಿಬಿದನೂರು ನಗರದ ಹೊರವಲಯದ B-H ರಸ್ತೆಗೆ ಹೊಂದಿಕೊಂಡಿರುವ ನದಿಯ ಪಕ್ಕದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ನಾನು ಮತ್ತು ನಮ್ಮ ಸಿಬ್ಬಂದಿ ಹೆಚ್.ಸಿ 224 ವೆಂಕಟೇಶ್ ರವರು ಪಂಚಾಯ್ತಿದಾರರನ್ನು ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿದಾಗ ಮದ್ಯಪಾನ ಮಾಡುತ್ತಿದ್ದವರು ಸ್ಥಳದಿಂದ ಓಡಿಹೋಗಿದ್ದು ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಓಡಿಹೋಗದಂತೆ ತಿಳಿಸಿ ಹಿಡಿದುಕೊಂಡು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಚೌಡಪ್ಪ ಬಿನ್ ಲೇಟ್ ಪೂಜಾರಿ ತಿಪ್ಪಯ್ಯ, 60 ವರ್ಷ, ನೇಯ್ಗೆ ಜನಾಂಗ, ಮದ್ದರೆಡ್ಡಿಪಲ್ಲಿ ಹಿಂದೂಪುರ ಟೌನ್ ಅನಂತಪುರ ಜಿಲ್ಲೆ ಇವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ 1) 180 ಎಂ.ಎಲ್ ನ Old Tovern Whisky 11 Tetra Pocket, 2) 1 ಲೀಟರ್ ಖಾಲಿ ವಾಟರ್ ಬಾಟಲ್, 3) 1 ಖಾಲಿ ಟೆಟ್ರಾ ಪಾಕೆಟ್ ಮತ್ತು 4) 2 ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ನೀಡಿದ ವರದಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿರುತ್ತೇನೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.147/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ:07/09/2020 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಪಿರ್ಯಾದಿದಾರರಾದ ಗೊವಿಂದಪ್ಪ ಬಿನ್ ವೆಂಕಟಸ್ವಾಮಿ, 46 ವರ್ಷ, ಈಡಿಗರು, ಆಟೋ ಚಾಲಕ, ವಾಸ: ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಸುಮಾರು 3 ವರ್ಷಗಳ ಹಿಂದೆ ಕೆ,ಎ 40 ಎ, 5514 ನೊಂದಣಿ ಸಂಖ್ಯೆ ಪ್ಯಾಸೆಂಜ್ ಬಜಾಜ್ ಆಟೋವನ್ನು ಖರೀದಿಸಿ ಜನರನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಿದ್ದು ಅದರಿಂದ ಬಂದ ಸಂಪಾದನೆಯಿಂದ ಜೀವನ ನಡೆಸುತ್ತಿದ್ದು. ಅದರಂತೆ ದಿನಾಂಕ:04/09/2020 ರಂದು ಬೆಳಿಗ್ಗೆ 10.35 ಗಂಟೆ ಸಮಯದಲ್ಲಿ ದಿನ್ನಹಳ್ಳಿ ಕ್ರಾಸ್ ಬಳಿ ಪ್ರಯಾಣಿಕರಾದ 1)ಗಂಗಾಧರಪ್ಪ ಬಿನ್ ಲೇಟ್ ಸುಬ್ಬಣ್ಣ 42 ವರ್ಷ, ನಾಯಕ, ಕೂಲಿ ಕೆಲಸ ಬೀಚಗಾನಹಳ್ಳಿ ಗ್ರಾಮ 2) ರವಿ ಬಿನ್ ಶ್ರೀರಾಮಪ್ಪ 25 ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ ಬೀಚಗಾನಹಳ್ಳಿ ಗ್ರಾಮದವರನ್ನು ತನ್ನ ಆಟೋವಿನಲ್ಲಿ ಹತ್ತಿಸಿಕೊಂಡು ಬೀಚಗಾನಹಳ್ಳಿ ಗ್ರಾಮಕ್ಕೆ ಬರುತ್ತಿರುವಾಗ ದಿನ್ನಹಳ್ಳಿ ಗ್ರಾಮದಿಂದ ಬೀಚಗಾನಹಳ್ಳಿ ಕ್ರಾಸ್ ನ ರಸ್ತೆಯ ಮದ್ಯೆ ಬೀಚಗಾನಹಳ್ಳಿ ಕ್ರಾಸ್ ನಿಂದ ಎದರುಗಡೆ ಹೊಸ ಟಾಟಾ ಏಸ್ ವಾಹನ ಇದರ ಮೇಲೆ ಟೆಂಪರ್ ವರಿ ರಿಜಿಸ್ಟ್ರೇಷನ್ ನಂಬರ್ ಕೆ,ಎ 01 ಟಿ,ಸಿ 109 ಎಂದು ಇರುವ ವಾಹನ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ಮೇಲ್ಕಂಡ ಆಟೋ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ ಪರಿಣಾಮ ಆಟೋ ಪಲ್ಟಿ ಹೊಡೆದು ಅದರಲ್ಲಿದ್ದ ತನಗೆ ಬೆನ್ನಿಗೆ, ಬಲ ಕೈಗೆ , ಬಲ ಕಣ್ಣಿನ ಬಳಿ ರಕ್ತಗಾಯಗಳಾಗಿ ಗಂಗಾಧರಪ್ಪ ರವರಿಗೆ ಬಲ ಕಾಲಿನ ತೊಡೆಯ ಬಳಿ ಊತಗಾಯವಾಗಿ, ಮೂಗಿನ ಬಳಿ ರಕ್ತಗಾಯವಾಗಿರುತ್ತೆ ರವಿ ರವರಿಗೆ ಬಲ ಕೈ ಮುಂಗೈ ಬಳಿ, ಬಲ ಕಿವಿ ಬಳಿ, ತಲೆಯ ಹಿಂಭಾಗ ಬೆನ್ನಿಗೆ ರಕ್ತಗಾಯಗಳಾಗಿರುತ್ತೆ. ತನ್ನ ಬಾಬತ್ತು ಕೆ,ಎ 40 ಎ, 5514 ನೊಂದಣಿ ಸಂಖ್ಯೆ ಪ್ಯಾಸೆಂಜರ್ ಬಜಾಜ್ ಆಟೋ ಪೂರ್ತಿಯಾಗಿ ಜಖಂಗೊಂಡಿರುತ್ತೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸಾರ್ವಜನಿಕರು ಅಂಬ್ಯೂಲೆನ್ಸ್ ನಲ್ಲಿ ತಮ್ಮಗಳನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು ನಂತರ ತಾನು ಚಿಕಿತ್ಸೆ ಪಡೆದುಕೊಂಡು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ಮೇಲ್ಕಂಡಂತೆ ಅಪಘಾತ ಪಡಿಸಿದ ಹೊಸ ಟಾಟಾ ಏಸ್ ವಾಹನ ಇದರ ಮೇಲೆ ಟೆಂಪರ್ ವರಿ ರಿಜಿಸ್ಟ್ರೇಷನ್ ನಂಬರ್ ಕೆ,ಎ 01 ಟಿ,ಸಿ 109 ಎಂದು ಇರುವ ವಾಹನ ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮವನ್ನು ಜರುಗಿಸಲು ಕೋರಿ ನೀಡಿದ ದೂರನ್ನು ಪಡೆದು ದಾಖಲಿಸಿರುತ್ತೆ.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.98/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ 08/09/2020 ರಂದು ಮಧ್ಯಾಹ್ನ 2-30 ಗಂಟೆಗೆ ಸಿ.ಹೆಚ್.ಸಿ-38 ಮಂಜುನಾಥ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರದ ರವರು  ಮಾಲು, ಮಹಜರ್ ಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿ ಸಾರಾಂಶವೇನೆಂದರೆ, ತನಗೆ ಹಾಗೂ ಸಿ.ಹೆಚ್.ಸಿ-198 ಮಂಜುನಾಥ ರವರಿಗೆ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪುರ ಇನ್ಸ್ ಪೆಕ್ಟರ್ ಶ್ರೀ ಎಂ..ರಾಜಣ್ಣ ರವರು ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆ  ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ನಾವುಗಳು ಚಿಂತಾಮಣಿ ತಾಲ್ಲೂಕಿನ ಮಿಟ್ಟಪಲ್ಲಿ ಗ್ರಾಮದಲ್ಲಿ ಭೆಳಿಗ್ಗೆ 11: 15 ಗಂಟೆ ಸಮಯದಲ್ಲಿ ಗಸ್ತು ಮಾಡುತ್ತಿದ್ದಾಗ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರೊಂದಿಗೆ ಮಿಟ್ಟಹಳ್ಳಿ ಗ್ರಾಮದ ನಾಗನಂದ ಬಿನ್ ಲೇಟ್ ಬೀಡಪ್ಪ ರವರ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಸ್ಥಳದಲ್ಲಿ ದಾಳಿ ಮಾಡಿದಾಗ ಸ್ಥಳದಲ್ಲಿದ್ದ ಜನರು ಓಡಿಹೋಗಿದ್ದು ಸ್ಥಳದಲ್ಲಿ ಪರಿಶೀಲಿಸಲಾಗಿ 1) HAYWARDS CHEERS WHISKY ಯ 90 ML ನ ಮಧ್ಯ ತುಂಬಿದ 16  ಟೆಟ್ರಾ ಪ್ಯಾಕೆಟ್ ಗಳು  2) BAGPIPER DELUXE WHISKY ಯ ಮಧ್ಯ ತುಂಬಿದ 180 ML  ಟೆಟ್ರಾ ಪ್ಯಾಕೆಟ್ ಗಳು 4 ಇದ್ದು, 3)  ಒಂದು ಲೀಟರ್ ಖಾಲಿ ವಾಟರ್ ಬಾಟಲ್ 4) HAYWARDS CHEERS WHISKY ಯ 90 ML ನ 2 ಖಾಲಿ ಟೆಟ್ರಾ ಪ್ಯಾಕೆಟ್ ಗಳು   ಇರುತ್ತೆ. ವಶಪಡಿಸಿಕೊಂಡ ಮಧ್ಯವು 2.160 ML ಇದ್ದು ಇದರ ಬೆಲೆ 987 ರೂ ಗಳಾಗಿರುತ್ತೆ. ಮೇಲ್ಕಂಡ ಮಾಲನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ನಂತರ ಸಾರ್ವಜನಿಕ ಸ್ಥಳಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟು ಓಡಿಹೋದ ಆಸಾಮಿಯ  ಬಗ್ಗೆ ಭಾತ್ಮಿದಾರರಲ್ಲಿ ವಿಚಾರಿಸಲಾಗಿ ನಾಗನಂದ ಬಿನ್ ಲೇಟ್ ಬೀಡಪ್ಪ, 43 ವರ್ಷ, ಕುರುಬರು, ಮಿಟ್ಟಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿದು ಬಂದಿರುತ್ತೆ. ಸದರಿಯವರ ಮೇಲೆ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ವರದಿ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.245/2020 ಕಲಂ. 307,504,506 ಐ.ಪಿ.ಸಿ:-

          ದಿನಾಂಕ: 07-09-2020 ರಂದು ರಾತ್ರಿ 10.00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋ ವನ್ನು ಪಡೆದು ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಅಜಯ್ ಬಿನ್ ರಾಜಣ್ಣ, ಸುಮಾರು 24 ವರ್ಷ, ವಕ್ಕಲಿಗರು, ಜಿರಾಯ್ತಿ, ವಾರ್ಡ್ ನಂ. 03, ಕೆ.ಕೆ. ಪೇಟೆ, ಶಿಡ್ಲಘಟ್ಟ ನಗರ ರವರ ಹೇಳಿಕೆಯನ್ನು ಪಡೆದು ರಾತ್ರಿ 11.00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತಾನು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು ತನ್ನ ತಂದೆ-ತಾಯಿಗೆ ತಾವು ಇಬ್ಬರು ಮಕ್ಕಳಿದ್ದು 1ನೇ ತನ್ನ ಅಕ್ಕ ಅರ್ಚನ, 2ನೇ ಅಜಯ್ ಆದ ತಾನಾಗಿದ್ದು ತನ್ನ  ಅಕ್ಕನಿಗೆ ಮದುವೆಯಾಗಿದ್ದು ತನಗೆ ಇನ್ನೂ ಮದುವೆಯಾಗಿರುವುದಿಲ್ಲ. ಈಗಿರುವಲ್ಲಿ ದಿನಾಂಕ:06-09-2020 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ತಾನು ಚೌಡಸಂದ್ರ ಗೇಟ್ ನಲ್ಲಿರುವ ತಮ್ಮ ಸಂಬಂಧಿಕರಾದ ನವೀನ್ ರವರನ್ನು ಮಾತನಾಡಿಸಿಡಿಕೊಂಡು ಬರಲು ತನ್ನ ದ್ವಿಚಕ್ರ ವಾಹನದಲ್ಲಿ ಹೋಗಿದ್ದು ಮದ್ಯಾಹ್ನ 2.00 ಗಂಟೆಯಲ್ಲಿ ನವೀನ್ ರವರ ಹೋಟಲ್ ಬಳಿಯಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಹಂಡಿಗನಾಳ ಗ್ರಾಮದ ತನ್ನ ಸ್ನೇಹಿತನಾದ ರವಿ ಬಂದು ತನ್ನನ್ನು ಮಾತನಾಡಿಸಿದ್ದು ಆಗ ರವಿ ತನ್ನ ಬಳಿ ದ್ವಿಚಕ್ರ ವಾಹನ ಇಲ್ಲ, ತನ್ನನ್ನು ಹಂಡಿಗನಾಳ ಗ್ರಾಮಕ್ಕೆ ಡ್ರಾಪ್ ಮಾಡು ಎಂದು ಕೇಳಿದ್ದು ಆಗ ತಾನು ಇಲ್ಲಿ ತನಗೆ ಕೆಲಸ ಇದೆ ನೀನು ಹೋಗು ಎಂದು ಹೇಳಿದಾಗ ರವಿ ಏ ನನ್ನ ಮಗನೆ ನಿನ್ನದೆ ಏನೋ ಗಾಡಿ ಇರೋದು ಎಂದು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಏ ಲೋಪರ್ ನನ್ನ ಮಗನೆ ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ. ಹೀಗಿರುವಲ್ಲಿ ಈ ದಿನ ದಿನಾಂಕ: 07-09-2020 ರಂದು ತಾನು ಕೆಲಸದ ನಿಮಿತ್ತ ತನ್ನ ದ್ವಿಚಕ್ರ ವಾಹನದಲ್ಲಿ ಮೇಲೂರು ಗ್ರಾಮಕ್ಕೆ ಹೋಗಿ ಮತ್ತೆ ವಾಪಸ್ಸು ಶಿಡ್ಲಘಟ್ಟಕ್ಕೆ ಬರಲು ಸಂಜೆ 6.00 ಗಂಟೆಯಲ್ಲಿ ಹಂಡಿಗನಾಳ ಗ್ರಾಮದ ಸರ್ಕಾರಿ ಶಾಲೆಯ ಬಳಿ ಬರುತ್ತಿದ್ದಾಗ ಆಗ ಅಲ್ಲಿಯೇ ಇದ್ದ ರವಿ ತನ್ನನ್ನು ಮಾತನಾಡಿಸಿದ್ದು ಆಗ ತಾನು ಮಾತನಾಡುತ್ತಿದ್ದಾಗ ಏನೋ ಮಗನೆ ನೀನು ನನಗೆ ನೆನ್ನೆ ಡ್ರಾಪ್ ಮಾಡಿಲ್ಲ ಎಂದು ಏಕಾ ಏಕಿ ತನ್ನ ಮೇಲೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಆತನ ಬಳಿ ಇದ್ದ ಚಾಕುವಿನಿಂದ ತನ್ನನ್ನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕತ್ತಿನ ಎಡಭಾಗದಲ್ಲಿ ಕೊಯ್ದು ಹೊಟ್ಟೆಗೆ, ಬೆನ್ನಿಗೆ,  ಎದೆಯ ಭಾಗಕ್ಕೆ, ಎಡಕೈಗೆ ಬಲವಾಗಿ ಚುಚ್ಚಿ ರಕ್ತಗಾಯವುಂಟುಮಾಡಿರುತ್ತಾನೆ. ಆಗ ಅಲ್ಲಿಯೇ ಇದ್ದ ಹಂಡಿಗನಾಳ ಗ್ರಾಮದ ತನ್ನ ಸ್ನೇಹಿತನಾದ ಮಧು ಬಂದು ತನ್ನನ್ನು ಉಪಚರಿಸಿ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು ಬಂದು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು ತನ್ನನು ಕೊಲೆ ಮಾಡುವ ಉದ್ದೇಶದಿಂದ ತನ್ನ ಮೇಲೆ ಹಲ್ಲೆ ಮಾಡಿದ ರವಿ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ.ಸಂ. 245/2020 ಕಲಂ 307, 504, 506 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.