ದಿನಾಂಕ :08/08/2020 ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.89/2020 ಕಲಂ. 506,504,323,324 ಐ.ಪಿ.ಸಿ :-

          ಪಿರ್ಯಾದಿದಾರರಾದ ತಿಪ್ಪರಾಜು ಬಿನ್ ವೆಂಕಟೇಶ್. ಬಿ.ಎನ್ , ವಾರ್ಡ್ ನಂ:17, ಚೌಡರೆಡ್ಡಿ ಪಾಳ್ಯ, ಚಿಂತಾಮಣಿ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮದ ವಾಸಿಯಾದ ಗೋಪಾಲಕೃಷ್ಣ  ರವರ ಹೆಸರಿನಲ್ಲಿ 10.00 ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ನಾವಿಬ್ಬರೂ ಇಬ್ಬರೂ ಸೇರಿ ಇಟ್ಟಿಗೆ ಕಾರ್ಖಾನೆಯನ್ನು ದಿನಾಂಕ: 15.04.2019 ರಂದು ಸ್ಥಾಪಿಸಿದ್ದು ಸದರಿ ಇಟ್ಟಿಗೆ ಕಾರ್ಖಾನೆಗೆ ಅಡ್ವಾನ್ಸ್ ಆಗಿ ಹಾಗೂ ಮಣ್ಣಿಗೆ, ದಿನಗೂಲಿ ಮುಂಚಿತವಾಗಿ ಈಗ್ಗೆ ಓಟ್ಟು 5,80,000 ರೂಗಳನ್ನು ಗೋಪಾಲಕೃಷ್ಣ ಎಂಬುವವರಿಗೆ ನೀಡಿರುತ್ತೆನೆ. ಸದರಿ ಇಟ್ಟಿಗೆ ಕಾರ್ಖಾನೆಯನ್ನು ಎಡರು ತಿಂಗಳು  ನಾವಿಬ್ಬರೂ ಒಟ್ಟಿಗೆ ನಡೆಸಿಕೊಂಡು ಹೋಗುತ್ತಿದ್ದೇವು ನಂತರ ನಮ್ಮ ತಂದೆಯವರು ಆನಾರೋಗ್ಯದ ಕಾರಣ  ನಾನು ಕಾರ್ಖಾನೆಗೆ ಹೋಗಿ ಬರಲು ಸಾಧ್ಯಾವಾಗುತ್ತಿರಲಿಲ್ಲ ಇನ್ನೂ ಮುಂದೆ ನಾನು ಮೇಲ್ಕಂಡ ರವರಿಂದ ಪಾಲುದಾರಿಗೆ ಮುಂದುವರೆಸಲು ಇಷ್ಟವಿಲ್ಲದ ಕಾರಣ ನಾನು ನೀಡಿರುವ ಒಟ್ಟು 5,80,000 ರೂಗಳನ್ನು ನನಗೆ ವಾಪಸ್ಸುನೀಡುವಂತೆ  ದಿನಾಂಕ: 04.08.2020 ರಂದು ಚಿಂತಾಮಣಿ ನಗರದ ಐಬಿಯಲ್ಲಿ ಪಂಚಾಯ್ತಿ ಮಾಡಲು ದೊಡ್ಡ ಮನುಷ್ಯರಾದ ಕದೀರ್ ಮತ್ತು ವೆಂಕಟಶಾಮಿರೆಡ್ಡಿ ಎಂಬುವವರ ಸಮಕ್ಷಮದಲ್ಲಿ ನನಗೆ ಆಗಿರುವ ತೊಂದರೆಯನ್ನು ಹೇಳಿಕೊಂಡು ಹಣವನ್ನು ಕೇಳಿದಾಗ ಮೇಲ್ಕಂಡರವರನ್ನು ನನ್ನ ಮಾತನ್ನು ಗೌರವಿಸದೆ ನನ್ನನ್ನು ಹೀನಾಯವಾಗಿ ನಿಂದನೆ ಮಾಡಿ ಒಬ್ಬಂಟಿಗನಾದ ನನ್ನಮೇಲೆ ಹಲ್ಲೆ ಮಾಡಿ ನನಗೆ ಕಲ್ಲುಗಳಿಂದ ಮತ್ತು ದೊಣ್ಣೆಯಿಂದ ಹೊಡೆದು ತೀವ್ರವಾಗಿ ರಕ್ತ ಗಾಯಗಳನ್ನು ಉಂಟು ಮಾಡಿರುತ್ತಾರೆ ನಂತರ ನಾನು ನನ್ನ ಕುಟುಂಬ ವೈದ್ಯರಿಂದ ಸಲಹೆ ಪಡೆದು ಕೋವಿಡ್ ಕೊರೊನಾ ಹಾವಳಿಯಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುತ್ತೆನೆ.ಗೋಪಾಕೃಷ್ಣ ರವರ ಎರಡನೇ ಸುಬ್ರಮಣಿ ಎಂಬಾತನು ನಾನು ಲಾಯರ್ ನಾನು ನಿನಗೆ ಹಣವನ್ನು 3,00,000 ಲಕ್ಷ ರೂಪಾಯಿಗಳನ್ನು ಮಾತ್ರ ವಾಪಸ್ಸು ಕೊಡುತ್ತೆನೆ ಒಂದು ಒಂದು ವೇಳೆ ನೀನು ಒಪ್ಪದಿದ್ದಲ್ಲಿ ನಿನ್ನ ಮೇಲೆ ಕ್ರೀಮಿನಲ್ ಕೇಸ್ ಹಾಕಿ ಹೆಚ್ಚುವರಿಯಾಗಿ ನಿನ್ನಿಂದಲೇ ರೂ 5,00,000 ರೂಪಾಯಿಗಳನ್ನು ವಸೂಲಿ ಮಾಡುತ್ತೆನೆಂದು ಕೊಲೆ ಬೆದರಿಕೆ ಹಾಕಿತ್ತಿರುತ್ತಾನೆ ಆದ್ದರಿಂದ ತಾವುಗಳು ಮೇಲ್ಕಂಡ ಆರೋಪಿಗಳ ವಿರುದ್ದ ಅಗತ್ಯ ಕಾನೂನು ಕ್ರಮ ಜರುಗಿಸಿ ಕಾರ್ಖಾನೆಗೆ ನಾನು ನೀಡಿರುವ ಮೂಲ ಬಂಡವಾಳವನ್ನು ವಾಪಸ್ಸು ಕೊಡಿಸಿಕೊಟ್ಟು ನನಗೆ ರಕ್ಷಣೆ ನೀಡಬೇಕಾಗಿ ನಮ್ಮಲ್ಲಿ ಬೇಡಿಕೊಳ್ಳುತ್ತೆನೆ ಪಂಚಾಯ್ತಿ ಮಾಡಿದ ಸಮಯದಲ್ಲಿ ನನ್ನ ಮೇಲೆ ತೀವ್ರವಾದ ಹಲ್ಲೆ ಮಾಡಿ ನಾನು ರಕ್ತ ಗಾಯಗಳಿಂದ ನೆಲದ ಮೇಲೆ ಬಿದ್ದಿರುವಾಗ ರಕ್ಷಣೆಗಾಗಿ ನನ್ನ ಸ್ನೇಹಿತನಾದ ಸುಮಂತ್(ಚಿಂಟು) ಎಂಬುವವರನ್ನು ಕರೆಸಿಕೊಂಡು ರಕ್ಷಣೆ ಪಡೆದು ಹೆಚ್ಚಿನ ಪ್ರಾಣಾಪಾಯದಿಂದ ಪರಾಗಿರುತ್ತೆನೆ ನಾನು ಗಲಾಟೆ ನಡೆದ ದಿನದಂದು ಪಿರ್ಯಾದು ನೀಡಲು ಸಾಧ್ಯಾವಾದೆ ವೈದ್ಯರು ಸಲಹೆಯಂತೆ ವಿಶ್ರಾಂತಿ ಪಡೆದು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ನೀಡಿರುತ್ತೆನೆ ಆದ್ದರಿಂದ ನನ್ನ ಮೇಲೆ ಹಲ್ಲೆ ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.77/2020 ಕಲಂ. 379,420 ಐ.ಪಿ.ಸಿ :-

          ದಿನಾಂಕ 07/08/2020 ರಂದು ಶಿಡ್ಲಘಟ್ಟ ವೃತ್ತ ನಿರೀಕ್ಷಕರಾದ  ಕೆ. ಸುರೇಶ್ ರವರು ಮರಳು ತುಂಬಿದ ಟ್ರಾಕ್ಟರ್ ಮತ್ತು ಚಾಲಕನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನಂದರೆ, ದಿನಾಂಕ 07/08/2020 ರಂದು ಸಂಜೆ 6.30 ಗಂಟೆಯಲ್ಲಿ  ತಾನು ತನ್ನ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ, ದಿಬ್ಬೂರಹಳ್ಳಿ ಠಾಣಾ ಸರಹದ್ದು ಕನಪ್ಪನಹಳ್ಳಿ ಪಕ್ಕದ ಸರ್ಕಾರಿ ಹಳ್ಳದಲ್ಲಿ ಅಂದರೆ ಬಂಡೆಮ್ಮನ ಕೆರೆಯಲ್ಲಿ ಯಾರೋ ಅಕ್ರಮವಾಗಿ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೇ, ಮರಳನ್ನು ತುಂಬುತ್ತಿರುವ ಬಗ್ಗೆ ಖಚಿತ ಮಾಹಿತಿಯನ್ನು ಬಾತ್ಮಿದಾರರು ನೀಡಿದ್ದು, ಅದರಂತೆ ತಾನು ತನ್ನ ಚಾಲಕ ನಾಗೇಶ್ ಹೆಚ್.ಸಿ-3 ರವರನ್ನು ಕರೆದುಕೊಂಡು ಸರ್ಕಾರಿ ಜೀಪ್ ಸಂಖ್ಯೆ ಕೆ.ಎ-40 ಜಿ 1666 ರ ವಾಹನದಲ್ಲಿ ಸುಮಾರು ಸಂಜೆ  7.00 ಸಮಯದಲ್ಲಿ ಕನ್ನಪನಹಳ್ಳಿ ಗ್ರಾಮದ ರಸ್ತೆಯಿಂದ ಕನಪ್ಪನಹಳ್ಳಿ ಬಂಡೆಮ್ಮ ಕೆರೆಗೆ ಹೋಗುವ ರಸ್ತೆಯ ಕಡೆಗೆ ತಿರುಗಿಸಿಕೊಂಡು ಸ್ವಲ್ಪ ಮುಂದೆ ಹೋಗುತ್ತಿದ್ದಂತೆ, ಎದುರುಗಡೆಯಿಂದ ಒಂದು ಟ್ರಾಕ್ಟರ್ ಅಡ್ಡ ಬಂದಿದ್ದು, ಸದರಿ ಟ್ರಾಕ್ಟರ್ ನ್ನು ನಿಲ್ಲಿಸವಂತೆ ಸೂಚನೆ ನೀಡಿದ್ದು, ಅದರ ಚಾಲಕ ಮತ್ತು ಅದರಲ್ಲಿದ್ದ ಇನ್ನೊಬ್ಬನ್ನು ಇಳಿದು ಓಡಿ ಹೋಗಿದ್ದು, ತಾನು ಕೂಡಲೆ ಟ್ರಾಕ್ಟರ್ ಚಾಲಕನನ್ನು ಹಿಂಬಾಲಿಸಿ ಹಿಡಿದುಕೊಂಡಿದ್ದು, ಟ್ರಾಕ್ಟರ್ನ್ನು ಪರಿಶೀಲಿಸಲಾಗಿ ಟ್ರಾಕ್ಟರ್ ಒಳಗಡೆ ಸುಮಾರು 2000/- ರೂ ಕ್ಕೂ ಹೆಚ್ಚು ಬೆಲೆ ಬಾಳುವ ಮೆರಳನ್ನು ಆರೋಪಿಗಳು ಬಂಡೆಮ್ಮನ ಕೆರೆಯಲ್ಲಿ ಯಾವುದೇ ಸರ್ಕಾರಿ ಪರವಾನಗಿ ಪಡೆಯದೇ ಅಕ್ರಮವಾಗಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಮರಳನ್ನು ಕದ್ದು, ಟ್ರಾಕ್ಟರ್ ಗೆ ತುಂಬಿಕೊಂಡಿದ್ದು, ಅದರ ಮೇಲೆ ಮರಳು ಕಾಣದಂತೆ ಪೊಲೀಸ್ ಅಧಿಕಾರಿಗಳಿಗೆ/ ರೆವಿನ್ಯೂ ಅಧಿಕಾರಿಗಳಿಗೆ/ ಪಂಚಾಯ್ತಿ ಅಧಿಕಾರಿಗಳಿಗೆ/ ಮಾಹಿತಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಮರಳನ್ನು ಮರೆ ಮಾಚಲು ಎಂ ಸ್ಯಾಂಡ್ ತುಂಬಿಕೊಂಡಿರುವುದು ಕಂಡು ಬಂದಿರುತ್ತದೆ. ಸದರಿ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ ನಾರಾಯಣಸ್ವಾಮಿ ಬಿನ್ ನರಸಿಂಹಪ್ಪ, 37 ವರ್ಷ, ನಾಯಕರು, ಟ್ರಾಕ್ಟರ್, ಚಾಲಕ ವೃತ್ತಿ, ಕನಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿದ್ದು, ಟ್ರಾಕ್ಟರ್ ನಿಂದ ಇಳಿದು ಓಡಿ ಹೋದ ಮತ್ತೊಬ್ಬನ ಹೆಸರು ಮತ್ತು ವಿಳಾಸ ಕೇಳಲಾಗಿ ಈ ಟ್ರ್ಯಾಕ್ಟರ್  ಮಾಲೀಕ ಶಿವಪ್ಪ @ ಭವಾನಿ ಬಿನ್ ಶ್ರೀರಾಮಪ್ಪ, 31 ವರ್ಷ, ನಾಯಕರು, ಮರಳು ವ್ಯಾಪಾರ, ಕನ್ನಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿರುತ್ತದೆ. ಹಾಗೂ ವಾಹನದ ನೊಂದಣಿ ಸಂಖ್ಯೆಯನ್ನು ಪರಿಶೀಲಿಸಲಾಗಿ ಟ್ರಾಕ್ಟರ್ ಇಂಜನ್ ಮೇಲೆ ಯಾವುದೇ ನೊಂದಣಿ ಸಂಖ್ಯೆ ನಮೂದಿಸದೇ ಇದ್ದು, ಇಂಜನ್ ಸಂಖ್ಯೆ ಎಸ್324ಬಿ 23389 ಆಗಿದ್ದು, ನಂತರ ಟ್ರಾಲಿಯನ್ನು ಪರಿಶೀಲಿಸಲಾಗಿ ಟ್ರಾಲಿ ನಂ ಕೆ.ಎ-5 ಎಂದು ಕಾಣುತ್ತಿದ್ದು ಮುಂದಿನ ಸಂಖ್ಯೆಯನ್ನು ಅಳಿಸಿ ಹಾಕಲಾಗಿರುತ್ತದೆ. ಮುಂದುವರೆದು ಟಿ-07 ಎಂದು ಕಾಣುತ್ತಿದ್ದು ಮುಂದಿನ ಎರಡು ಸಂಖ್ಯಗಳು ಅಳಸಿ ಹಾಕಲಾಗಿರುತ್ತದೆ. ಚಾಸ್ಸಿ ನಂ 236438 ಎಂದು ನಮೂದಾಗಿರುತ್ತದೆ. ಮೇಲ್ಕಂಡ ಚಾಲಕ ಮತ್ತು ಮಾಲೀಕನು ಅಕ್ರಮವಾಗಿ ಮರಳನ್ನು ಕಳವು ಮಾಡಿ ಟ್ರಾಕ್ಟರ್ ಗೆ ತುಂಬಿಕೊಂಡು ಅಧಿಕ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಹಾಗೂ ಮರಳನ್ನು ಮರೆ ಮಾಚಲು ಅದರ ಮೇಲೆ ಎಂ,ಸ್ಯಾಂಡ್ ತುಂಬಿ ಸಕ್ಷಮ ಅಧೀಕಾರಿಗಳಿಗೆ ಮೋಸ ಮಾಡಿದ್ದು, ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುಲು ಸೂಚಿಸಿ  ಮರಳು ತುಂಬಿದ ಟ್ರಾಕ್ಟರ್ ಮತ್ತು ಚಾಲಕನನ್ನು ವಶಕ್ಕೆ ನೀಡಿರುವುದಾಗಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.196/2020 ಕಲಂ. 379 ಐ.ಪಿ.ಸಿ :-

          ದಿನಾಂಕ 08-08-2020 ರಂದು ಬೆಳಿಗ್ಗೆ 8-00 ಗಂಟೆಸಮಯದಲ್ಲಿ  ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಮೋಹನ್ .ಎನ್.   ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ದಿನಾಂಕ 08-08-2020 ರಂದು ಬೆಳಿಗ್ಗೆ  6-00 ಸಮಯದಲ್ಲಿ  ಗೌರೀಬಿದನೂರು ತಾಲ್ಲೂಕು, ಗಂಗಸಂದ್ರ ಗ್ರಾಮದ ಕೆರೆಯ ಅಂಗಳದಲ್ಲಿ ಯಾರೋ ಅಕ್ರಮವಾಗಿ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು ಕಳ್ಳತನವಾಗಿ ತುಂಬುತ್ತಿರುವ  ಬಗ್ಗೆ ಮಾಹಿತಿ ಬಂದ  ಮೇರೆಗೆ ತಾನು ಮತ್ತು  ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂಧಿಯಾದ ಪಿ.ಸಿ-518  ಆನಂದ , ಪಿ.ಸಿ-381 ಜಗದೀಶ, ಪಿ.ಸಿ-115 ಕೆಂಪರಾಜು, ಹಾಗು ಪಿ.ಸಿ-426 ಲೋಹಿತ್  ರವರೊಂದಿಗೆ  ಗಂಗಸಂದ್ರ ಗ್ರಾಮದ ಕೆರೆಯ ಅಂಗಳಕ್ಕೆ ಹೋದಾಗ, ಯಾರೋ  ಟ್ರ್ಯಾಕ್ಟರ್ ಗೆ ಮರಳನ್ನು ತುಂಬಿಸುತ್ತಿದ್ದು, ನಮ್ಮನ್ನು ಮತ್ತು ಪೊಲೀಸ್ ಜೀಪನ್ನು ದೂರದಿಂದಲೇ ನೋಡಿ, ಮರಳು ತುಂಬಿರುವ ಟ್ರ್ಯಾಕ್ಟರ್ ನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾರೆ. ನಂತರ ಟ್ರ್ಯಾಕ್ಟರ್ ಬಳಿ ಹೋಗಿ ಪರಿಶೀಲಿಸಿ ನೋಡಲಾಗಿ ಅದು ಮಹೇಂದ್ರ-475 DI ಕಂಪನಿಯ ಟ್ರ್ಯಾಕ್ಟರ್ ಆಗಿರುತ್ತೆ.  ಟ್ರ್ಯಾಕ್ಟರ್ ನ  ಇಂಜಿನ್ ಗೆ  ಎ.ಪಿ-21-ಎಸ್-5441   ನೊಂದಣಿ ಸಂಖ್ಯೆ ಬರೆದಿರುತ್ತೆ.   ಟ್ರ್ಯಾಲಿಗೆ  ನೊಂದಣಿ ಸಂಖ್ಯೆ  ಇರುವುದಿಲ್ಲ.  ಟ್ರ್ಯಾಲಿಯಲ್ಲಿ ಬಾಡಿ ಲೆವೆಲ್ ಗೆ ಮರಳು ತುಂಬಿರುತ್ತೆ.  ಮರಳು ತೆಗೆದು ಸಾಗಾಣಿಕೆಯನ್ನು  ಮಾಡಲು  ಸರ್ಕಾರ ನಿಷೇದಿಸಿದ್ದರೂ ಸಹಾ  ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯಲ್ಲಿ ಅದರ ಮಾಲೀಕ ಹಾಗು ಚಾಲಕ ಯಾವುದೇ ಪರವಾನಗಿ ಇಲ್ಲದೇ ಕಳ್ಳತನವಾಗಿ ಖನಿಜ ಸಂಪತ್ತಾದ ಮರಳನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ  ಅಕ್ರಮವಾಗಿ ಮರಳು ಕಳವು  ಮಾಡಿರುತ್ತಾರೆ. ಮರಳು ತುಂಬಿದ  ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯನ್ನು ಬೆಳಿಗ್ಗೆ 6-30 ರಿಂದ 7-30 ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು,  ಠಾಣೆಗೆ ಬೆಳಿಗ್ಗೆ 8-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದು, ಮೇಲ್ಕಂಡ ಟ್ರ್ಯಾಕ್ಟರ್ ಮತ್ತು ಟ್ರ್ಯಾಲಿಯ ಮಾಲೀಕನ ಮತ್ತು ಚಾಲಕ ಮೇಲೆ ಕಲಂ: 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.197/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ 08/08/2020 ರಂದು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ 22-06-2020 ರಂದು ಸಂಜೆ 5-15  ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  06 ಜನ ಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ ಇವರಿಗೆ ದಿನಾಂಕ: 22/06/2020 ರಂದು ಮದ್ಯಾಹ್ನ 2-30  ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಹಳೇಮಣಿವಾಲ ಗ್ರಾಮದ ಬಳಿ ಇರುವ ಕೆರೆಕಟ್ಟೆಯ ಅಂಗಳದಲ್ಲಿ  ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರಾದ ಪಿ.ಸಿ-302 ಕುಮಾರ್ ನಾಯಕ್ , ಪಿ.ಸಿ-208 ತಿಪ್ಪೇಸ್ವಾಮಿ,  ಪಿಸಿ – 512 ರಾಜಶೇಖರ, ಪಿ, ಪಿ.ಸಿ-518 ಆನಂದ , ಪಿ.ಸಿ-80 ಶ್ರೀನಾಥ,  ಪಿ.ಸಿ- 426 ಲೋಹಿತ್, ಪಿ.ಸಿ-381 ಜಗದೀಶ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ಹಳೇಮಣಿವಾಲ ಗ್ರಾಮ ಮದ್ಯಾಹ್ನ 3-15  ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದಲ್ಲಿ 06 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು   ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1) ನರಸಿಂಹ ಮೂರ್ತಿ ಬಿನ್ ದೊಡ್ಡಕದಿರಪ್ಪ,  30 ವರ್ಷ, ಎಸ್.ಸಿ ಜನಾಂಗ, ಜಿರಾಯ್ತಿ, , ಹಳೇಮಣಿವಾಲ ಗ್ರಾಮ , ಗೌರೀಬಿದನೂರು ತಾಲ್ಲೂಕು  , 2) ಚಂದ್ರಶೇಖರ್ ಬಿನ್ ಗಂಗಪ್ಪ,  36 ವರ್ಷ, ನಾಯಕ ಜನಾಂಗ , ಜಿರಾಯ್ತಿ, ವಾಸ ಹಳೇಮಣಿವಾಲ ಗ್ರಾಮ, ಗೌರಿಬಿದನೂರು ತಾಲ್ಲೂಕು , 3)  ನರಸಿಂಹ ಮೂರ್ತಿ ಬಿನ್ ಚಿಕ್ಕಗಂಗಪ್ಪ,  37 ವರ್ಷ, ಎಸ್.ಸಿ ಜನಾಂಗ, ಜಿರಾಯ್ತಿ, , ಹಳೇಮಣಿವಾಲ ಗ್ರಾಮ , ಗೌರೀಬಿದನೂರು ತಾಲ್ಲೂಕು . 4)  ಈಶ್ವರಪ್ಪ ಬಿನ್ ಗಂಗಪ್ಪ, 40 ವರ್ಷ,  ನಾಯಕ ಜನಾಂಗ , ಜಿರಾಯ್ತಿ, ವಾಸ ಹಳೇಮಣಿವಾಲ ಗ್ರಾಮ, ಗೌರಿಬಿದನೂರು ತಾಲ್ಲೂಕು. 5)  ವೆಂಕಟೇಶಪ್ಪ ಬಿನ್ ನಾರಾಯಣಪ್ಪ, 61 ವರ್ಷ, ನಾಯಕ ಜನಾಂಗ , ಜಿರಾಯ್ತಿ, ವಾಸ ಹಳೇಮಣಿವಾಲ ಗ್ರಾಮ, ಗೌರಿಬಿದನೂರು ತಾಲ್ಲೂಕು. 6) ಅಂಜಿನಪ್ಪ ಬಿನ್ ಸಂಜೀವಪ್ಪ, 57 ವರ್ಷ, ಎಸ್.ಸಿ ಜನಾಂಗ, ಜಿರಾಯ್ತಿ, , ಹಳೇಮಣಿವಾಲ ಗ್ರಾಮ , ಗೌರೀಬಿದನೂರು ತಾಲ್ಲೂಕು . ಎಂದು ತಿಳಿಸಿದ್ದು,ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  3340/-ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  ಮದ್ಯಾಹ್ನ 3-30   ಗಂಟೆಯಿಂದ 4-30  ಗಂಟೆಯವರೆಗೆ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 5-15   ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ  ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.198/2020 ಕಲಂ. 78(3) ಕೆ.ಪಿ ಆಕ್ಟ್ :-

          ದಿನಾಂಕ:08/08/2020 ರಂದು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ,ದಿನಾಂಕ:03/08/2020 ರಂದು ಸಂಜೆ 4-45   ಗಂಟೆಗೆ ಪಿರ್ಯಾದಿದಾರರಾದ ಕೃಷ್ಣಪ್ಪ ಹೆಚ್.ಸಿ-80, ಡಿ.ಸಿ.ಬಿ, ಸಿ.ಇ.ಎನ್ ಪೊಲೀಸ್ ಠಾಣೆ, ಚಿಕ್ಕಬಳ್ಳಾಪುರ ರವರು ಠಾಣೆಗೆ  ಹಾಜರಾಗಿ ಮಾಲು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:02/08/2020 ರಂದು ನಮ್ಮ ಪಿ.ಐ ಸಾಹೇಬರ ಆದೇಶದಂತೆ ಗೌರಿಬಿದನೂರು ಗುಡಿಬಂಡೆ ತಾಲ್ಲೂಕುಗಳಲ್ಲಿ ಕಾನೂನು ಭಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆಗಾಗಿ ಗುಡಿಬಂಡೆ ತಾಲ್ಲೂಕು ಮಾಚಹಳ್ಳಿ, ಗರುಡಾಚಾರ್ಲಹಳ್ಳಿ ಇತ್ಯಾದಿ ಗ್ರಾಮಗಳ ಕಡೆ ಗಸ್ತು ಮಾಡಿಕೊಂಡು ಮದ್ಯಾಹ್ನ-1-45 ಗಂಟೆಗೆ ಯಲ್ಲೋಡು ಗ್ರಾಮದ ಬಸ್ ನಿಲ್ದಾಣಕ್ಕೆ ಬಂದಾಗ ಬಾತ್ಮಿದಾರರಿಂದ ಜಿಂಕವಾರಪಲ್ಲಿ ಗ್ರಾಮದ ನಾರಾಯಣಸ್ವಾಮಿ ಎಂಬುವರು ಕಾನೂನು ಬಾಹಿರವಾಗಿ ಮಟ್ಕಾ ಅಂಕಿಗಳನ್ನು ಸಾರ್ವಜನಿಕರಿಗೆ ಬರೆದುಕೊಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ತಾಲ್ಲೂಕು ನಗರಗೆರೆ ಹೋಬಳಿ ಜಿಂಕಲವಾರಪಲ್ಲಿ ಗ್ರಾಮಕ್ಕೆ ಪಂಚರೊಂದಿಗೆ ಗ್ರಾಮದ ನಾರಾಯಣಸ್ವಾಮಿ ರವರ ಮನೆಯ ಹತ್ತಿರ ಹೋದಾಗ ಆಸಾಮಿ ನಮ್ಮಗಳನ್ನು ನೋಡಿ ಆತನ ಬಳಿ ಇದ್ದ ವಸ್ತುಗಳನ್ನು ಅಲ್ಲೇ ಬಿಸಾಡಿ ಓಡಿಹೋಗಿದ್ದು, ನಂತರ ಸ್ಥಳದಲ್ಲಿ ಪರಿಶೀಲಿಸಲಾಗಿ ಒಂದು ಮಟ್ಕಾ ಚೀಟಿ, ಒಂದು ಬಾಲ್ ಪಾಯಿಂಟ್ ಪೆನ್ನು, ಒಂದು ಕವರಿದ್ದು, ಕವರನ್ನು ಪರಿಶೀಲನೆ ಮಾಡಿದಾಗ ಅದರಲ್ಲಿ 5,130/- ರೂಗಳು ಇದ್ದು ಅವುಗಳನ್ನು ಪಂಚರ ಸಮಕ್ಷಮ ಮುಂದಿನ ಕ್ರಮಕ್ಕಾಗಿ ಅಮಾನತ್ತುಪಡಿಸಿಕೊಂಡು ನಂತರ ಆಸಾಮಿಯನ್ನು ಹುಡುಕಾಡಲಾಗಿ ಸಿಕ್ಕಿರುವುದಿಲ್ಲವಾದ್ದರಿಂದ ಈ ದಿನ ದಿನಾಂಕ:03/08/2020 ರಂದು ತಡವಾಗಿ ಮೇಲ್ಕಂಡ ಮಾಲುಗಳ ಸಮೇತ ಠಾಣೆಗೆ ಹಾಜರಾಗಿ ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿಯ ವಿರುದ್ದ ಕಲಂ.78(1), 78 ಕ್ಲಾಸ್ (3) ಕೆ.ಪಿ ಆಕ್ಟ್ ರೀತ್ಯ ಪ್ರಕರಣ ದಾಖಲು ಮಾಡಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.199/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ 21-06-2020 ರಂದು ಸಂಜೆ 5-00  ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  06 ಜನ ಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ ಇವರಿಗೆ  ದಿನಾಂಕ: 21/06/2020 ರಂದು ಮಧ್ಯಾಹ್ನ 3-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ಚನ್ನೇನಹಳ್ಳಿ ಗ್ರಾಮದ ಬಳಿ ಇರುವ ಅಶ್ವತ್ಥಕಟ್ಟೆಯ ಬಳಿ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ತಾನು  ಮತ್ತು  ಸಿಬ್ಬಂದಿಯವರಾದ ಪಿ.ಸಿ-205 ಮೋಹನ್ ಪಿ.ಸಿ-208 ತಿಪ್ಪೇಸ್ವಾಮಿ,  ಪಿ.ಸಿ-426 ಲೋಹಿತ್ ಪಿಸಿ -429 ಶ್ರೀಶೈಲ್ ಪವಾರ್ ,ಪಿಸಿ 381 ಜಗದೀಶ್, ಪಿ.ಸಿ-518 ಆನಂದ , ಪಿ.ಸಿ-310 ಮೈಲಾರಪ್ಪ,  ,ಮಪಿಸಿ 247 ಸೌಮ್ಯ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ಚನ್ನೇನಹಳ್ಳಿ ಗ್ರಾಮ ಮಧ್ಯಹ್ನ  3-30 ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದಲ್ಲಿ 06 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು   ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1) ನಂದೀಶ್ ಬಿನ್ ಆನಂದಪ್ಪ,37 ವರ್ಷ, ಕುರುಬರು , ಚನ್ನೇನಹಳ್ಳಿ  ಗ್ರಾಮ , ಗೌರೀಬಿದನೂರು ತಾಲ್ಲೂಕು  , 2) ಕೃಷ್ಣಪ್ಪ ಬಿನ್ ನರಸಪ್ಪ, 43 ವರ್ಷ, ಮಡಿವಾಳ ಜನಾಂಗ , ಚನ್ನೇನಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು , 3)  ಆವುಲಪ್ಪ ಬಿನ್ ಲೇಟ್ ಲಕ್ಷ್ಮೀಪತಿ ,55 ವರ್ಷ, ಮಡಿವಾಳ ಜನಾಂಗ, ಜಿರಾಯ್ತಿ , ಚನ್ನೇನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು.4) ಜನಾರ್ದನ ಬಿನ್ ಗೋಪಾಲ ,25 ವರ್ಷ, ಕುರುಬ ಜನಾಂಗ, ಕೆ.ಟಿ ಹಳ್ಳಿ ಗ್ರಾಮ,ಗೌರಿಬಿನೂರು ತಾಲ್ಲೂಕು,5) ಶ್ರೀನಿವಾಸ ಬಿನ್ ಕೃಷ್ಣಪ್ಪ, 34 ವರ್ಷ, ಕುರುಬರು, ಜಿರಾಯ್ತಿ , ಚನ್ನೇನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು,6) ನರಸಿಂಹಮೂರ್ತಿ ಬಿನ್ ರಂಗಪ್ಪ, 45 ವರ್ಷ,ಜಿರಾಯ್ತಿ , ಉಪ್ಪಾರ ಜನಾಂಗ,ಕೆ.ಟಿ ಹಳ್ಳಿ ಗ್ರಾಮ,ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು,ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  3350/-ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  ಮಧ್ಯಾಹ್ನ  3-30 ಗಂಟೆಯಿಂದ 4-30  ಗಂಟೆಯವರೆಗೆ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 5-00   ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ ವಿರುದ್ದ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದು ದಿನಾಂಕ:08/08/2020 ರಂದು ಮದ್ಯಾಹ್ನ 14-00 ಗಂಟೆಗೆ ಪ್ರಕರಣ ದಾಖಲು ಮಾಡಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.180/2020 ಕಲಂ. 143,147,148,323,324,427,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ:07/08/2020 ರಂದು ಪಿರ್ಯಾದಿದಾರರಾದ ಶ್ರೀ ಟಿ.ಡಿ.ಮಂಜುನಾಥ ಬಿನ್ ಲೇಟ್ ದೊಡ್ಡಪ್ಪಯ್ಯ 35 ವರ್ಷ, ಆದಿದ್ರಾವಿಡ ಜನಾಂಗ, ಬಿಎಂಟಿಸಿ ಚಾಲಕ ತಿಪ್ಪಗಾನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಮಗೂ ಮತ್ತು ನಮ್ಮ ಚಿಕ್ಕಪ್ಪ ರವರಿಗೆ ಜಮೀನಿನ ವಿಚಾರದಲ್ಲಿ ವೈಷಮ್ಯವಿದ್ದು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು, ದಿನಾಂಕ:07/08/2020 ರಂದು ನಾನು ಮತ್ತು ನನ್ನ ಅಣ್ಣ ನಾರಾಯಣಸ್ವಾಮಿ ಬಿನ್ ಲೇಟ್ ದೊಡ್ಡಪ್ಪಯ್ಯ ರವರು ನಮ್ಮ ಮನೆಯ ಮುಂದೆ ಇದ್ದು, ಬೆಳಿಗ್ಗೆ 10-00 ಗಂಟೆಗೆ ನಾನು ನನ್ನ ಮಗನನ್ನು ಆಟವಾಡಿಸುತ್ತಿದ್ದಾಗ ನಮ್ಮ ಗ್ರಾಮದ ನನ್ನ ಚಿಕ್ಕಪ್ಪಂದಿರು ಹಾಗೂ ಮಕ್ಕಳು ಹಳೆಯ ದ್ವೇಷದಿಂದ ಏಕಾಏಕಿ ಕೈಗಳಲ್ಲಿ ದೊಣ್ಣೆ ಮಚ್ಚು ಮತ್ತು ರಾಡುಗಳನ್ನು ಹಿಡಿದುಕೊಂಡು ಬಂದು ನೀನು ಜಮೀನು ನಮಗೆ ಬಿಡದಿದ್ದರೆ ಬಿಡುವುದಿಲ್ಲ ನಮ್ಮದು ಜಮೀನು ನೀನು ನಮ್ಮ ಜಮೀನುಗಳಿಗೆ ಬರಬೇಡ ಬಂದರೆ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆಯನ್ನು ಹಾಕಿ 1) ವೆಂಕಟೇಶ ಬಿನ್ ಲೇಟ್ ವೆಂಕಟರವಣಪ್ಪ, 2) ಗಂಗಮ್ಮ ಕೊಂ ಲೇಟ್ ವೆಂಕಟರವಣಪ್ಪ, 3) ಗಂಗಾಧರ ಬಿನ್ ಚಿಕ್ಕಪ್ಪಯ್ಯ, 4) ಚಿಕ್ಕಪ್ಪಯ್ಯ ಬಿನ್ ಲೇಟ್ ವೆಂಕಟಪ್ಪ, 5) ಅನಿತ ಕೊಂ ಗಂಗಾಧರ, 6) ರಾಮಕುಮಾರ್ ಬಿನ್ ಲೇಟ್ ಗಮಗಾಧರಯ್ಯ, 7) ಗೋವಿಂದರಾಜು ಬಿನ್ ಲೇಟ್ ಗಂಗಾಧರಯ್ಯ, 8) ಜಾನಕಮ್ಮ ಕೊಂ ಗೋವಿಂದರಾಜು, 9) ವೆಂಕಟೇಶಪ್ಪ ಬಿನ್ ಲೇಟ್ ವೆಂಕಟಪ್ಪ, 10) ಪುನಿತ್ ಕುಮಾರ್ ಬಿನ್ ವೆಂಕಟೇಶಪ್ಪ, 11) ನರಸಮ್ಮ ಕೊಂ ವೆಂಕಟೇಶಪ್ಪ, 12) ಮುನಿರಾಜು ಬಿನ್ ವೆಂಕಟೇಶಪ್ಪ, 13) ಪ್ರಸಾದ್ ಬಿನ್ ಚಿಕ್ಕಗಂಗಪ್ಪ, 14) ಚಿಕ್ಕಗಂಗಪ್ಪ ಬಿನ್ ಲೇಟ್ ವೆಂಕಟೇಶಪ್ಪ, 15) ಪವಿತ್ರ ಬಿನ್ ಚಿಕ್ಕಗಂಗಪ್ಪ, 16) ರಾಮಕೃಷ್ಣಪ್ಪ, ಬಿನ್ ವೆಂಕಟಪ್ಪ, 17) ಗಂಗರತ್ನಮ್ಮ ಕೊಂ ರಾಮಕೃಷ್ಣಪ್ಪ, 18) ಚರಣ ಬಿನ್ ರಾಮಕೃಷ್ಣಪ್ಪ, ರವರುಗಳು ನಮ್ಮನ್ನು ಬೈದು ಮುನಿರಾಜು ಪುನಿತ್ ಕುಮಾರ್ ರವರು ದೊಣ್ಣೆಗಳಿಂದ ಹೊಡೆದು ವೆಂಕಟೇಶ ರವರು ಒಂದು ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು, ಗೊವಿಂದ ರಾಜು ಮತ್ತು ರಾಮ್ ಕುಮಾರ್ ರವರು ದೊಣ್ಣೆಗಳಿಂದ ನನ್ನ ಅಣ್ಣ ನಾರಾಯಣಸ್ವಾಮಿ ರವರಿಗೆ ತಲೆಗೆ ಹೊಡೆದು ರಕ್ತಗಾಯಪಡಿಸಿ ಉಳಿದವರೆಲ್ಲರೂ ಸೇರಿಕೊಂಡು ನಮ್ಮನ್ನು ಕೈಗಳಿಂದ ಹೊಡೆದು ಮನೆ ಮುಂದೆ ನಿಲ್ಲಿಸಿದ್ದ ನನ್ನ ಕೆ.ಎ-51, ಎಂ-8873 ಟಾಟಾ ಇಂಡಿಕಾ ಕಾರಿನ ಗಾಜುಗಳನ್ನು ಹೊಡೆದು ಜಖಂಗೊಳಿಸಿದ್ದು, ನಂತರ ಅವರಿಂದ ನಾವು ಬಿಡಿಸಿಕೊಂಡು 108 ಅಂಬ್ಯೂಲೇನ್ಸ್ ನಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ನಮ್ಮ ಅಣ್ಣನಿಗೆ ತಲೆಗೆ ಗಾಯವಾಗಿದ್ದರಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು, ನಮ್ಮನ್ನು ಹೊಡೆದು ಗಾಯಪಡಿಸಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.181/2020 ಕಲಂ. 143,147,148,323,324,341,427,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ: 08/08/2020 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿದಾರರಾದ ಗಂಗಾಧರ ಬಿನ್ ಚಿಕ್ಕಪ್ಪಯ್ಯ, 40 ವರ್ಷ, ಎಸ್.ಸಿ ಜನಾಂಗ, ತಿಪ್ಪಗಾನಹಳ್ಳಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ನನ್ನ ದೊಡ್ಡಪ್ಪನ ಮಕ್ಕಳಾದ ನಾರಾಯಣಸ್ವಾಮಿ TD ಬಿನ್ ಲೇಟ್ ದೊಡ್ಡಪ್ಪಯ್ಯ, ಮಂಜುನಾಥ TD binf ಲೇಟ್ ದೊಡ್ಡಪ್ಪಯ್ಯ (KSRTC ಕಂಡಕ್ಟರ್) ಮತ್ತು ಇವನ ಹೆಂಡತಿಯಾದ ದಿವ್ಯ ಕೋಂ ಮಂಜುನಾಥ್ ಇವರು ತುಂಬ ವರ್ಷಗಳಿಂದ ಆಸ್ತಿಯ ವಿಚಾರಕ್ಕೆ ಜಗಳವಾಗುತ್ತಿತ್ತು ಅಂದರೆ ನಮ್ಮ ಜಮೀನೆಲ್ಲಾ ಜಂಟಿಯಲ್ಲಿದ್ದು ಯಾರಿಗೂ ಸರಿಯಾಗಿ ವಿಭಾಗವಾಗದಿರದ ಕಾರಣ ವಿಭಾಗ ಆಗುವವರೆಗೂ ಯಾರೂ ಉಳುಮೆ ಮಾಡಬಾರದೆಂದು ಎಲ್ಲರಿಗೂ ಮಾತುಕತೆಯಾಗಿದ್ದು ಅದನ್ನು ಮೀರಿ ನನ್ನ ದೊಡ್ಡಪ್ಪನ ಮಕ್ಕಳು ಜಮೀನಿನಲ್ಲಿ ಉಳುಮೆ ಮಾಡುತ್ತಿರುತ್ತಾರೆ ಅದಕ್ಕೆ ನಾನು ವಿಭಾಗ ಆಗುವವರೆಗೂ ಹುಳುಮೆ ಮಾಡಬಾರದೆಂದು ಎಂದು ಹೇಳಿದಕ್ಕೆ ಅವರು ದಿ: 07/08/2020 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ನಾನು ಹೂವುಗಳನ್ನು ತೆಗೆದುಕೊಂಡು ಗೌರಿಬಿದನೂರಿನ ಮಾರ್ಕೆಟಿಗೆ ಹಾಕಲು ಹೋಗುತ್ತಿದ್ದಾಗ ಮಂಜುನಾಥ್ ರವರ ಮನೆಯ ಮುಂದೆ ಹೋಗುತ್ತಿದ್ದಾಗ ಮಂಜುನಾಥ ಬಿನ್ ದೊಡ್ಡಪ್ಪಯ್ಯ, ದಿವ್ಯ ಕೋಂ ಮಂಜುನಾಥ, ನಾರಾಯಣಸ್ವಾಮಿ ಬಿನ್ ದೊಡ್ಡಪ್ಪಯ್ಯ, ಕಲಾವತಿ ಕೋಂ ನಾರಾಯಣಸ್ವಾಮಿ, ಶ್ರೀನಿವಾಸ ಬಿನ್ ದೊಡ್ಡಪ್ಪಯ್ಯ, ಪಾರ್ವತಿ ಕೋಂ ಶ್ರೀನಿವಾಸ ರವರು ಅಕ್ರಮ ಗುಂಪುಕಟ್ಟಿಕೊಂಡು ನನ್ನ ದ್ವಿ ಚಕ್ರ ವಾಹನವನ್ನು ಅಡ್ಡಗಟ್ಟಿ ಜಮೀನಿನ ವಿಚಾರವಾಗಿ ಜಗಳ ತೆಗೆದು ಕೆಟ್ಟಪದಗಳಿಂದ ನಿಂದಿಸಿ ಮಂಜುನಾಥ್ ರವರು ಒಂದು ರಾಡ್ ನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿ ನಾರಾಯಣಸ್ವಾಮಿ ಮತ್ತು ಶ್ರೀನಿವಾಸ ರವರು ದೊಣ್ಣೆಯಿಂದ ನನ್ನ ಎಡಭುಜಕ್ಕೆ ಮತ್ತು ಮುಖಕ್ಕೆ ಹಾಗೂ ಮೈಮೇಲೆ ಹೊಡೆದಿದ್ದು ಗಾಯಗಳಾಗಿರುತ್ತದೆ ದಿವ್ಯ ರವರು ಒಂದು ಚಾಕುವಿನಿಂದ ನನಗೆ ಚುಚ್ಚಲು ಬಂದಾಗ ಎಡಕಾಲಿಗೆ ತಗುಲಿ ರಕ್ತಗಾಯವಾಗಿರುತ್ತದೆ ಕಲಾವತಿ ಮತ್ತು ಪಾರ್ವತಿ ರವರು ಕೈಗಳಿಂದ ಮೈಮೇಲೆ ಹೊಡೆದು ಮೂಗೇಟುಗಳನ್ನುಂಟು ಮಾಡಿ ಎಲ್ಲರೂ ಸೇರಿ ನನಗೆ ನಿನ್ನ ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಮಂಜುನಾಥ ಮತ್ತು ನಾರಾಯಣಸ್ವಾಮಿ ರವರು ನನ್ನ ದ್ವಿ ಚಕ್ರ ವಾಹನದ ಮುಂಭಾಗ ಮತ್ತು ಮೀರರ್ ನ್ನು ದೊಣ್ಣೆಯಿಂದ ಜಖಂಗೊಳಿಸಿ ನಾನು ಒಬ್ಬ ಅಂಗವಿಕಲನಾಗಿದ್ದು ಹಲ್ಲೆ ಮಾಡಿದ್ದು ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಪ್ರ.ವ.ವರದಿ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.53/2020 ಕಲಂ. 379 ಐ.ಪಿ.ಸಿ & 86,87 (KARNATAKA FOREST ACT 1963) :-

          ದಿನಾಂಕ:08/08/2020 ರಂದು ಬೆಳಿಗ್ಗೆ 11:20 ಗಂಟೆಗೆ ಎಸ್.ಜೆ.ಸಿ.ಐ.ಟಿ ಕಾಲೇಜಿನ ವ್ಯವಸ್ಥಾಪಕರಾದ ಶ್ರೀ. ಜಿ.ಆರ್ ರಂಗಸ್ವಾಮಿ ರವರು ದೂರನ್ನು ಕಾಲೇಜಿನ ಎಸ್.ಡಿ.ಸಿ ನಾಗೇಶ್ ರವರ ಮುಖಾಂತರ ಕಳುಹಿಸಿಕೊಟ್ಟ ದೂರಿನ ಸಾರಾಂಶವೇನೆಂದರೆ ಎಸ್.ಜೆ.ಸಿ ತಾಂತ್ರಿಕ ಮಹಾವಿದ್ಯಾಲಯ, ಚಿಕ್ಕಬಳ್ಳಾಪುರದ ಆವರಣದಲ್ಲಿ ದಿನಾಂಕ:07/08/2020 ರ ಮದ್ಯರಾತ್ರಿ ಯಾರೋ ದುಷ್ಕರ್ಮಿಗಳು 5 ಶ್ರೀಗಂಧದ ಮರಗಳನ್ನು ಕಡಿದು ಅವುಗಳನ್ನು ಸಾಗಿಸಿಕೊಂಡು ಹೋಗಿರುತ್ತಾರೆ. ಅಲ್ಲದೆ ಇನ್ನು 10 ಮರಗಳನ್ನು ಕಡಿಯಲು ಪ್ರಯತ್ನಿಸಿ ಕೊಂಡೊಯ್ಯಲು ವಿಫಲರಾಗಿರುತ್ತಾರೆ. ಆದ್ದರಿಂದ ತಾವುಗಳು ದಯಮಾಡಿ ಇದರ ಕುರಿತಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಈ ಪ್ರ.ವ.ವರದಿ.