ದಿನಾಂಕ :08/01/2021 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.01/2021  ಕಲಂ. 78(3) ಕೆ.ಪಿ ಆಕ್ಟ್ :-

     ದಿನಾಂಕ 07/01/2020 ರಂದು ರಾತ್ರಿ 8-20 ಗಂಟೆಯಲ್ಲಿ  ಶ್ರೀ ಜಿ.ಕೆ ಸುನೀಲ್ ಕುಮಾರ್, ಪಿ.ಎಸ್.ಐ, ಬಾಗೇಪಲ್ಲಿ ಪೊಲೀಸ್ ಠಾಣೆ ರವರು ಸೂಚಿಸಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ:07-01-2021 ರಂದು ರಾತ್ರಿ 7-00 ಗಂಟೆಗೆ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಟೌನ್ ಗೂಳೂರು ಸರ್ಕಲ್ ನ ಬಸ್ ನಿಲ್ದಾಣದ ಬಳಿ  ಯಾರೋ ಒಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ, ಕಾನೂನು ಬಾಹಿರವಾಗಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ಬಾಗೇಪಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿಸಿ-280 ಮುರಳಿ, ಪಿಸಿ-214 ಅಶೋಕ ರವರೊಂದಿಗೆ ಸರ್ಕಾರಿ ಜೀಫ್ ಸಂಖ್ಯೆ ಕೆಎ-40-ಜಿ-537 ರಲ್ಲಿ ಚಾಲಕ ಎಹೆಚ್.ಸಿ-34 ಅಲ್ತಾಫ್ ಪಾಷಾ ರವರೊಂದಿಗೆ ಜೀಪಿನಲ್ಲಿ  ಮೇಲ್ಕಂಡ ಸ್ಥಳಕ್ಕೆ ಬಂದಿದ್ದು, ಅಲ್ಲಿಯೇ ಇದ್ದ ಪಂಚರುಗಳನ್ನು ಬರಮಾಡಿಕೊಂಡು ವಿಚಾರವನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವುಗಳು ಮತ್ತು ಪಂಚರು ರಾತ್ರಿ 7-15 ಗಂಟೆಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿ, ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ವಿವಿಧ ಅಂಕಿಗಳಿಗೆ ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ 1 ರೂ ಗೆ 70 ರೂ ಕೊಡುವುದಾಗಿ ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ನಾವುಗಳು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ವಶಕ್ಕೆ ಪಡೆದು ಅವರ ಬಳಿ ಇದ್ದ ವಿವಿಧ ನಂಬರ್ ಗಳಿಗೆ ವಿವಿಧ ಮೊತ್ತ ಬರೆದಿರುವ ವಿವಿಧ ಅಂಕಿಗಳ 1 ಮಟ್ಕಾ ಚೀಟಿ, ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ  650/- ರೂಗಳನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1) ನಾರಾಯಣಪ್ಪ ಬಿನ್ ಲೇಟ್ ನಾರೆಪಲ್ಲಿ ವೆಂಕಟಪ್ಪ, 55 ವರ್ಷ, ಆದಿಕರ್ನಾಟಕ ಜನಾಂಗ, ಅಂಬೇಡ್ಕರ್ ಕಾಲೋನಿ, 13ನೇ ವಾರ್ಡ, ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು, ಸದರಿಯವರಿಗೆ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿಗಳನ್ನು ಬರೆಯಲು ಯಾವುದಾದರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿರುತ್ತಾರೆ. ಪಂಚರ ಸಮಕ್ಷಮ ಮೇಲ್ಕಂಡ ಮಾಲುಗಳನ್ನು ಪಂಚನಾಮೆ ಮೂಲಕ ವಶಕ್ಕೆ ಪಡೆದು ಮಾಲು ಮತ್ತು ಆರೋಪಿಯೊಂದಿಗೆ ರಾತ್ರಿ 8-15  ಗಂಟೆಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಜರುಗಿಸಲು ನೀಡಿದ  ದೂರಿನ ಮೇರೆಗೆ ಠಾಣೆಯಲ್ಲಿ ಎನ್.ಸಿ.ಆರ್ 09/2021 ರಂತೆ ದಾಖಲಿಸಿಕೊಂಡಿರುತ್ತೆ. ಇದು ಅಸಂಜ್ಞೇಯ ಪ್ರಕರಣವಾಗಿದ್ದು, ಮೇಲ್ಕಂಡ ಆಸಾಮಿಯ ವಿರುದ್ದ ಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕೈಗೊಳ್ಳಲು ಅನುಮತಿಯನ್ನು ನೀಡಲು ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ. ದಿ: 08-01-2021 ರಂದು ಘನ ನ್ಯಾಯಾಲಯದ ಪಿ.ಸಿ  235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 87  ಕೆ.ಪಿ ಆಕ್ಟ್ :-

     ಘನ ನ್ಯಾಯಾಲಯದಲ್ಲಿ  ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಶ್ರೀ ಟಿ ಎನ್  ಪಾಪಣ್ಣ   ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಆದ ನಾನು ನಿವೇದಿಸಿಕೊಳ್ಳುವುದೇನೆಂದರೆ ಈ ದಿನ ದಿನಾಂಕ: 07/01/2021 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಟ್ಲಹಳ್ಳಿ ಪೊಲೀಸ್  ಠಾಣೆಯ ಸರಹದ್ದಿನ  ಮುದ್ದಲಹಳ್ಳಿ ಗ್ರಾಮದ ಕಾಲೋನಿಯ ಬಳಿ ಯಾರೋ ಕೆಲವರು ಕಾನೂನು ಬಾಹಿರವಾಗಿ ಕೋಳಿಪಂದ್ಯ ಜೂಜಾಟ ಆಡುತ್ತಿರುವುದಾಗಿ ಖಚಿತ ವರ್ತಮಾನ ಬಂದಿದ್ದು ನಾನು ಠಾಣೆಯ ಸಿಬ್ಬಂದಿಯವರಾದ  ಹೆಚ್ ಸಿ-36 ವಿಜಯ್ ಕುಮಾರ್, ಹೆಚ್ ಸಿ- 139 ಶ್ರೀನಾಥ, ಹೆಚ್ ಸಿ 176 ಮುನಿರಾಜು ಹೆಚ್.ಸಿ-98 ಶ್ರೀನಿವಾಸ ಪಿಸಿ- 396 ರಮೇಶ್ ಕಂಪ್ಲಿ, ಪಿಸಿ 291 ಗಂಗಾಧರ ಪಿಸಿ 289 ಸತೀಶ್ ಹಾಗೂ ಜೀಪ್ ಚಾಲಕ ಎಪಿಸಿ 65 ವೆಂಕಟೇಶ್ ರವರುಗಳನ್ನು  ಕರೆದುಕೊಂಡು ಮುದ್ದಲಹಳ್ಳಿ ಗ್ರಾಮಕ್ಕೆ ಬೆಳಿಗ್ಗೆ 11-30 ಗಂಟೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಮುದ್ದಲಹಳ್ಳಿ  ಗ್ರಾಮದ ಕಾಲೋನಿಯ ಬಳಿ ಸ್ವಲ್ಪ ದೂರದಲ್ಲಿ ಸರ್ಕಾರಿ ಜೀಪ್ ನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಕಾಲೋನಿಯ ಬಳಿಗೆ ನಡೆದುಕೊಂಡು ಹೋಗಿ ಅಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಮುದ್ದಲಹಳ್ಳಿ ಗ್ರಾಮದ ಕಾಲೋನಿಯ ಪೂರ್ವದ ಕಡೆಗೆ ಇರುವ ಖಾಲಿ ಜಾಗದಲ್ಲಿ ಯಾರೋ ಕೆಲವು ಜನರು ಗುಂಪಾಗಿ ಸೇರಿದ್ದು  ಗುಂಪಿನ ಮಧ್ಯದಲ್ಲಿ ಕೋಳಿಗಳು ಇದ್ದು ಗುಂಪಿನಲ್ಲಿದ್ದವರು ನನ್ನ ಕೋಳಿ ಗೆಲ್ಲುತ್ತೆ 100 ರೂ, ಮತ್ತೊಬ್ಬ ಅವರ ಕೋಳಿ ಗೆಲ್ಲುತ್ತೆ 200 ರೂ. ಎಂದು ಜೋರಾಗಿ ಮಾತನಾಡಿಕೊಳ್ಳುತ್ತಿದ್ದು ಸದರಿಯವರು ಕೋಳಿ ಪಂದ್ಯದ ಜೂಜಾಟವಾಡುತ್ತಿರುವುದು ಖಚಿತವಾಗಿದ್ದರ ಮೇರೆಗೆ ನಾನು ನನ್ನೊಂದಿಗೆ ಬಂದಿದ್ದ ಸಿಬ್ಬಂದಿ ಮತ್ತು ಪಂಚಾಯ್ತಿದಾರರೊಂದಿಗೆ ಸದರಿ ಗುಂಪನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆಯನ್ನು ನೀಡಿದರೂ ಸಹ ಗುಂಪಿನಲ್ಲಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜೂಜಾಡುತ್ತಿದ್ದವರು ಕೋಳಿ ಹುಂಜಗಳನ್ನು ಹಾಗೂ ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣವನ್ನು ಅಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಸದರಿ ಗುಂಪಿನಲ್ಲಿದ್ದವರ ಪೈಕಿ ಇಬ್ಬರನ್ನು ವಶಕ್ಕೆ ಪಡೆದುಕೋಂಡಿದ್ದು, ಅವರುಗಳ  ಹೆಸರು ಮತ್ತು ವಿಳಾಸ ಕೇಳಲಾಗಿ 1) ಮೇಸ್ತ್ರೀ ಪೂಜಪ್ಪ ಬಿನ್ ಕದಿರಪ್ಪ 45 ವರ್ಷ ಆದಿಕನರ್ಾಟಕ ಜನಾಂಗ, ಗಾರೆಕೆಲಸ, ವಾಸ ಮುದ್ದಲಹಳ್ಳಿ  ಗ್ರಾಮ,  ಚಿಂತಾಮಣಿ  ತಾಲ್ಲೂಕು, ಮೊ ನಂ: 8861829311 2) ಶ್ರೀ.ಮುನಿರಾಜು ಬಿನ್ ವೆಂಕಟರವಣಪ್ಪ, 30ವರ್ಷ, ಆದಿ ಕರ್ನಾಟಕ ಜನಾಂಗ, ಕೂಲಿ ಕೆಲಸ, ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ.ಸಂ 9844919548 ಎಂತ ತಿಳಿಸಿದ್ದು ಸ್ಥಳದಿಂದ ಓಡಿ ಹೋದವರ ಹೆಸರು ವಿಳಾಸಗಳನ್ನು ವಿಚಾರಿಸಲಾಗಿ 1) ಶ್ರೀ.ಕದಿರಪ್ಪ ಬಿನ್ ಲೇಟ ಸತ್ಯಪ್ಪ, 65ವರ್ಷ, ಆದಿ ಕನರ್ಾಟಕ ಜನಾಂಗ, ಜಿರಾಯ್ತಿ, ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 2) ಶ್ರೀನಿವಾಸ ಬಿನ್ ಮುನಿನಾರಾಯಣಪ್ಪ, 40ವರ್ಷ, ದೋಬಿ ಜನಾಂಗ, ಜಿರಾಯ್ತಿ, ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು 3) ನಾಗರಾಜು ಬಿನ್ ವೆಂಕಟಪ್ಪ, 55ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು, 4)ನಟರಾಜ್ ಬಿನ್ ನಾರಾಯಣಸ್ವಾಮಿ, 30ವರ್ಷ, ನಾಯಕರು, ಜಿರಾಯ್ತಿ, ಮುದ್ದಲಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ  ಸ್ಥಳದಲ್ಲಿ ಪಂಚರ ಸಮಕ್ಷಮ ಪರಿಶೀಲಿಸಲಾಗಿ ಸ್ಥಳದಲ್ಲಿ ಸದರಿಯವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ ಇದ್ದು,  ಪಂಚರ  ಸಮಕ್ಷಮ ಎಣಿಕೆ ಮಾಡಲಾಗಿ   1200/- ರೂ ನಗದು ಹಣ ಇದ್ದು, ಎರಡು ಜೀವಂತ ಕೊಳಿ ಹುಂಜಗಳು ಮತ್ತು ಒಂದು ದ್ವಿಚಕ್ರ ವಾಹನವಿದ್ದು ಸದರಿ ದ್ವಿಚಕ್ರ ವಾಹನವನ್ನು ಪರಿಶೀಲಿಸಲಾಗಿ ನಂ ಕೆಎ 07 ಎಲ್ 6925 ಹೀರೋ ಹೋಂಡಾ ವಾಹನವಾಗಿದ್ದು ಸದರಿಯವುಗಳನ್ನು ಈ ಕೇಸಿನ ಮುಂದಿನ ಕ್ರಮಕ್ಕಾಗಿ  ಬೆಳಿಗ್ಗೆ 11-45  ರಿಂದ ಮಧ್ಯಾಹ್ನ 12-45 ಗಂಟೆವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ  ಅಮಾನತ್ತು ಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆಪಡೆದುಕೊಂಡು ನಂತರ ಠಾಣೆಗೆ ಮಧ್ಯಾಹ್ನ 2-15 ಗಂಟೆಗೆ ಹಾಜರಾಗಿ ಸ್ವತಃ ಠಾಣೆಯ ಎನ್.ಸಿ.ಆರ್ ನಂ: 04/2021 ರಂತೆ ದಾಖಲಿಸಿಕೊಂಡು ನಂತರ ಬಟ್ಲಹಳ್ಳಿ ಪೊಲೀಸ್ ಠಾಣೆಯ ಎನ್.ಸಿ.ಆರ್ ಸಂಖ್ಯೆ: 04/2021 ಪ್ರಕರಣದಲ್ಲಿ ಅಕ್ರಮವಾಗಿ ಕೋಳಿಪಂದ್ಯ ಜೂಜಾಟ ಆಡುತ್ತಿದ್ದ ಆರೋಪಿಗಳ ವಿರುದ್ದ ಸಂಜ್ಞೇಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಅನುಮತಿಯನ್ನು ನೀಡಬೇಕಾಗಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಹೆಚ್ ಸಿ 107 ಮುಸ್ತಪ ರವರ ಮೂಲಕ ರವಾನಿಸಿಕೊಂಡು ಘನ ನ್ಯಾಯಾಲಯದಿಂದ ಸಂಜೆ 4-00 ಗಂಟೆಗೆ  ಠಾಣೆಯ ಎನ್ ಸಿ ಆರ್ ನಂ:04/2021 ರಲ್ಲಿ  ಆರೋಪಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿಕೋಳ್ಳಲು ಅನುಮತಿಯನ್ನು ಪಡೆದುಕೊಂಡು ಸಂಜೆ 5-00 ಗಂಟೆಗೆ ಠಾಣಾ ಮೊ ಸಂಖ್ಯೆ: 02/2021 ಕಲಂ:87 ಕೆ ಪಿ ಆಕ್ಟ್ (ಕೋಳಿ ಜೂಜಾಟ ಪಂದ್ಯ )ರೀತ್ಯಾ ಪ್ರಕರಣ ದಾಖಲು ಮಾಡಿಕೋಂಡಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 15(A),32(3)  ಕೆ.ಇ ಆಕ್ಟ್ :-

     ದಿನಾಂಕ: 08/01/2021 ರಂದು ಬಟ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ ಪಾಪಣ್ಣ  ಆದ ನಾನು  ಸಿಬ್ಬಂದಿ ಹೆಚ್.ಸಿ – 36 ವಿಜಯಕುಮಾರ್  ರವರೊಂದಿಗೆ  ಬೆಳಿಗ್ಗೆ 11-00 ಗಂಟೆಯಲ್ಲಿ ಸೀತಾರಾಮಪುರ  ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ  ಸೀತರಾಮಪುರ ದ ವಾಸಿ ವೆಂಕಟೇಶ ಬಿನ್ ಲೇಟ್ ಮಲ್ಲಪ್ಪ   ರವರು ಆತನ ಚಿಲ್ಲರೆ ಅಂಗಡಿಯ  ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ಮಾಹಿತಿ ಬಂದಿದ್ದರ ಮೇರೆಗೆ, ನಾನು ಸೀತಾರಾಮಪುರ  ಗ್ರಾಮದಲ್ಲಿ ಪಂಚರನ್ನು ಕರೆದುಕೊಂಡು 11-15 ಗಂಟೆಗೆ ಅಂಗಡಿ ಯ  ಬಳಿಗೆ ಹೋಗಿ ನೋಡಲಾಗಿ ಅಂಗಡಿಯ   ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು, ಸ್ಥಳದಲ್ಲಿದ್ದ ಗ್ರಾಹಕರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು, ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮದ್ಯದ ಪ್ಯಾಕೇಟ್ಗಳು ಮತ್ತು ಮದ್ಯದ ಖಾಲಿ ಪ್ಯಾಕೇಟ್ಗಳು, ನೀರಿನ ಖಾಲಿ ಬಾಟೆಲ್ ಹಾಗೂ ಪ್ಲಾಸ್ಟಿಕ್ ಲೋಟಗಳು  ಸ್ಥಳದಲ್ಲಿ ಬಿದ್ದಿರುವುದು ಕಂಡು ಬಂದಿರುತ್ತೆ. ಅಂಗಡಿಯಲ್ಲಿದ್ದ ಆಸಾಮಿಯ ಹೆಸರು ಮತ್ತು ವಿಳಾಸ ಕೇಳಲಾಗಿ ವೆಂಕಟೇಶ್ ಬಿನ್ ಲೇಟ್ ಮಲ್ಲಪ್ಪ 55 ವರ್ಷ ಬೋವಿ ಜನಾಂಗ ಚಿಲ್ಲರೆ ಅಂಗಡಿ ವ್ಯಾಪಾರ   ವಾಸ: ಸೀತಾರಾಮಪುರ   ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ:8277441445. ಎಂದು ತಿಳಿಸಿದ್ದು, ಈತನು  ಮದ್ಯದ ಪ್ಯಾಕೇಟ್ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ಪರವಾನಗಿಯನ್ನು ಹೊಂದಿದ್ದಾನೇಯೇ ಎಂಬುದರ  ಬಗ್ಗೆ ವಿಚಾರಿಸಲಾಗಿ  ಯಾವುದೇ ಪರವಾನಗಿ ಹೊಂದಿರುವುದಿಲ್ಲವೆಂದು  ತಿಳಿಸಿರುತ್ತಾನೆ.  ನಂತರ ಪಂಚರ ಸಮಕ್ಷಮ ಬೆಳಿಗ್ಗೆ 11-30  ಗಂಟೆಯಿಂದ ಮಧ್ಯಾಹ್ನ 12-30 ಗಂಟೆಯವರೆಗೆ ಪಂಚನಾಮೆ ಕ್ರಮ ಕೈಗೊಂಡು ಪಂಚನಾಮೆಯ ಕಾಲದಲ್ಲಿ ಸ್ಥಳದಲ್ಲಿದ್ದ  ಒಟ್ಟು 1.080 ಎಂ.ಎಲ್ ನ 421.56. ರೂಗಳ ಬೆಲೆ ಬಾಳುವ ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 12 ಟೆಟ್ರಾ ಪ್ಯಾಕೇಟ್ ಗಳು,( 1 ಪಾಕೆಟ್ ಬೆಲೆ 35.13 ರೂಗಳು) ಮತ್ತು ಹೈವಾಡ್ಸ್ ವಿಸ್ಕಿ  90 ಎಂ.ಎಲ್ ನ 2 ಖಾಲಿ ಟೆಟ್ರಾ ಪಾಕೇಟ್ ಗಳು ಹಾಗೂ 2 ಪ್ಲಾಸ್ಟೀಕ್ ಲೋಟಗಳು ಹಾಗೂ 1 ಖಾಲಿ ವಾಟರ್ ಬಾಟೆಲ್ ನ್ನು ಅಮಾನತ್ತುಪಡಿಸಿಕೊಂಡು ಆಸಾಮಿಯನ್ನು ವಶಕ್ಕೆ ಪಡೆದುಕೋಂಡು ಠಾಣೆಗೆ  ಮಧ್ಯಾಹ್ನ 12-45 ಗಂಟೆಗೆ ವಾಪಸ್ಸು ಬಂದು ಠಾಣೆಯ ಮೊ,ಸಂಖ್ಯೆ:03/2020 ಕಲಂ:15(A) 32(3) KE ACT ರೀತ್ಯಾ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 279,337 ಐ.ಪಿ.ಸಿ :-

     ದಿನಾಂಕ:08.01.2021 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರರಾದ ನಾರಾಯಣಸ್ವಾಮಿ ಬಿನ್ ಆದಿನಾರಾಯಣಪ್ಪರವರು ಠಾಣೆಗೆ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಕೆಎ 40 ಎ 9981 ನೊಂದಣಿ ಸಂಖ್ಯೆಯ ಮಹಿಂದ್ರಾ ಬೊಲೇರೋ ಪಿಕಪ್ ವಾಹನವನ್ನು ಹೊಂದಿದ್ದು, ಸದರಿ ವಾಹನಕ್ಕೆ ಚಾಲಕನಾಗಿ ಹರಿ ಕುಮಾರ್ ಆರ್ ವಿ ಬಿನ್ ವೆಂಕಟರವಣರವರನ್ನು ನೇಮಿಸಿಕೊಂಡಿದ್ದು, ಕಾರ್ತಿಕ್ ಬಿನ್ ರಾಮಚಂದ್ರಪ್ಪರವರನ್ನು ಕ್ಲೀನರ್ ಆಗಿ ನೇಮಿಸಿಕೊಂಡಿದ್ದು ತಮ್ಮ ಬೊಲೇರೋ ಪಿಕಪ್ ವಾಹನಕ್ಕೆ ದಿ:06.01.2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಎ.ಪಿ.ಎಂ.ಸಿ ಮಾರ್ಕೇಟ್ ನಲ್ಲಿ ಟಮೋಟೋ ಲೋಡ್ ಮಾಡಿಕೊಂಡು ಬೆಂಗಳೂರಿನ ಯಶವಂತಪುರ ಮಾರ್ಕೇಟ್ ಗೆ ತೆಗೆದುಕೊಂಡು ಹೋಗಿ ಅನ್ ಲೋಡ್ ಮಾಡಿಕೊಂಡು ದಿ:07.01.2021 ರಂದು ಬೆಳಗಿನ ಜಾವ 4-30 ಗಂಟೆ ಸಮಯದಲ್ಲಿ ಎನ್ ಹೆಚ್ 44 ಬೆಂಗಳೂರು- ಹೈದರಾಬಾದ್ ರಸ್ತೆಯ ದೊಡ್ಡಪೈಲಗುರ್ಕಿ ಹಂಪ್ಸ್ ಬಳಿ ಬರುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಕೆಎ 05 ಎಂ ಎಸ್ 9996 ನೊಂದಣಿ ಸಂಖ್ಯೆಯ ಹುಂಡೈ ಗ್ರಾಂಡ್ ಐ10 ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಮ್ಮ ಬೊಲೇರೋ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆಸಿದ್ದರ ಪರಿಣಾಮ ತನ್ನ ವಾಹನದ ಹಿಂಭಾಗ ಬಂಪರ್ , ಸ್ಟೆಪ್ನಿ , ಡೀಸಲ್ ಟ್ಯಾಂಕ್ ಕಟ್ಟಾ ಜಖಂಗೊಂಡಿದ್ದು, ಕಾರಿಗೂ ಸಹ ಮುಂಭಾಗ ಪೂರ್ತಿ ಜಖಂಗೊಂಡಿದ್ದು, ಕಾರಿನಲ್ಲಿದ್ದ 4 ಜನರಿಗೆ ಗಾಯಗಳಾಗಿರುತ್ತದೆಂದು ಅಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಮ್ಮ ಚಾಲಕ ತನಗೆ ಫೋನ್ ಮಾಡಿ ತಿಳಿಸಿದ್ದು, ತಕ್ಷಣ ತಾನು ಬಂದು ನೋಡಲಾಗಿ ನಿಜವಾಗಿದ್ದು, ತನಗೆ ಸ್ವಂತ ಕೆಲಸ ಇದ್ದುದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಈ ಅಪಘಾತಕ್ಕೆ ಕಾರಣನಾದ ಕೆಎ 05 ಎಂ ಎಸ್ 9996 ನೊಂದಣಿ ಸಂಖ್ಯೆಯ ಹುಂಡೈ ಗ್ರಾಂಡ್ ಐ10 ಕಾರಿನ ಚಾಲಕನ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.07/2021  ಕಲಂ. 353,504,506,34  ಐ.ಪಿ.ಸಿ :-

     ದಿನಾಂಕ:07/01/2021 ರಂದು ಸಂಜೆ 6.00 ಗಂಟೆಯಲ್ಲಿ ಪಿರ್ಯಾದಿದಾರರಾದ ಕೆ.ಎಂ.ಶ್ರೀನಿವಾಸಪ್ಪ ಸಿ.ಪಿ.ಐ ಚಿಂತಾಮಣಿ ಗ್ರಾಮಾಂತರ ವೃತ್ತ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ   ತಾನು ಚಿಂತಾಮಣಿ ಗ್ರಾಮಾಂತರ ಠಾಣೆ ಮೊ.ಸಂ:06/2020 ಕಲಂ:498(ಎ),114,323,341, 504,506,ರೆ/ವಿ 34 ಐ.ಪಿ.ಸಿ ಮತ್ತು 3 & 4 ಡಿ.ಪಿ ಕಾಯ್ದೆ ಕೇಸಿನಲ್ಲಿ ಕೃತ್ಯ ನಡೆದ ಸ್ಥಳದ ಪಂಚನಾಮೆ ಕ್ರಮ ಕೈಗೊಳ್ಳಲು ಮತ್ತು ತನಿಖೆಗಾಗಿ, ಕೇಸಿನ ಪಿರ್ಯಾದುದಾರರಾದ ಶ್ರೀಮತಿ ಸ್ನೇಹ ಕೋಂ ಕೃಷ್ಣಾರೆಡ್ಡಿ, ಸಿಬ್ಬಂದಿಯವರಾದ ಎ.ಎಸ್.ಐ ನಾಗೇಂದ್ರ ಪ್ರಸಾದ್ ಮತ್ತು ಮಹಿಳಾ ಪೇದೆ ಲಕ್ಷ್ಮಿ, ಜೀಪಿನ ಚಾಲಕ ವೇಣುಗೋಪಾಲ್ ಎ.ಹೆಚ್.ಸಿ 39 ರವರುಗಳೊಂದಿಗೆ ಪೊಲೀಸ್ ಜೀಪ್ ಸಂಖ್ಯೆ ಕೆ.ಎ.40. ಜಿ. 540 ರಲ್ಲಿ ಚಿಂತಾಮಣಿ (ತಾ) ಮುನಗನಹಳ್ಳಿ ಗ್ರಾಮಕ್ಕೆ ಹೋಗಿದ್ದು, ಸದರಿ ಗ್ರಾಮದಲ್ಲಿ  ಕೃತ್ಯ ನಡೆದ ಸ್ಥಳದ ಮನೆಯನ್ನು ಪಿರ್ಯಾದಿ ಸ್ನೇಹ ರವರು ತೋರಿಸಿ, ಇದೇ ಮನೆಯಲ್ಲಿಯೇ ತನಗೆ ತನ್ನ ಗಂಡ ಕೃಷ್ಣಾರೆಡ್ಡಿ, ಅತ್ತೆ ರತ್ನಮ್ಮ, ಕೃಷ್ಣಾರೆಡ್ಡಿ ಅಕ್ಕ ಮಂಜುಳ, ಹಾಗೂ ಈಕೆಯ ಗಂಡ ಸತೀಶ ರವರುಗಳು ವರದಕ್ಷಿಣೆ ಹಣ ತರುವ ವಿಚಾರದಲ್ಲಿ ತನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿರುವುದಾಗಿ, ತಿಳಿಸಿದ್ದು, ಸದರಿ ಮನೆಯ ಬಳಿಗೆ ಪಂಚರಾದ ಅದೇ ಗ್ರಾಮದ ನಾಗರಾಜು ಮತ್ತು ಕೃಷ್ಣಮೂರ್ತಿ ರವರನ್ನು ಕರೆಯಿಸಿಕೊಂಡು ಅವರ ಸಮಕ್ಷಮ ಮನೆಯ ಪಂಚನಾಮೆ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದು, ಆ ಸಮಯಕ್ಕೆ ಚಿಂತಾಮಣಿಯ ಸಾಂತ್ವನ ಕೇಂದ್ರದ ,ಮೇಲ್ವಿಚಾರಕರಾದ ವರಲಕ್ಷ್ಮಮ್ಮ ಹಾಗೂ ಯಶೋಧಮ್ಮ ರವರುಗಳು ಸಹ ಅಲ್ಲಿಗೆ ಬಂದರು. ಪರಿಶೀಲಿಸಲಾಗಿ, ಮನೆಗೆ ಬೀಗ ಹಾಕಿದ್ದು, ಮನೆಯ ಬಾಗಿಲನ್ನು ತೆರೆಯುವಂತೆ ಅಲ್ಲಿಯೇ ಇದ್ದ ರತ್ನಮ್ಮ ಕೋಂ ನಾರಾಯಣಸ್ವಾಮಿ ರವರಿಗೆ ಕೇಸಿನ ವಿವರಗಳನ್ನು ತಿಳಿಸಿ,  ಪಂಚನಾಮೆಗೆ ಸಹಕರಿಸುವಂತೆ, ಹೇಳಲಾಗಿ, ನಾನು ಬಾಗಿಲು ತೆಗೆಯುವುದಿಲ್ಲ, ನೀವು ಏನು ಬೇಕಾದರೂ ಮಾಡಿಕೊಳ್ಳಿ, ನಿಮಗೆ ಮಾನ ಮರ್ಯಾದೆ ಇಲ್ಲ, ಸ್ನೇಹಳನ್ನು ಹಿಂದಿಟ್ಟುಕೊಂಡು ಬಂದಿದ್ದೀರಾ, ಪೊಲೀಸರು ಮೋಸಗಾರರು ಎಂಬುದಾಗಿ, ಕೆಟ್ಟ ಮಾತುಗಳಿಂದ ಬೈದಳು. ನಂತರ ಅಲ್ಲಿಗೆ ಬಂದ ರತ್ನಮ್ಮಳ ಗಂಡ ನಾರಾಯಣಸ್ವಾಮಿ ಹೆಂಡತಿಗೆ ಪೊಲೀಸರು ಅವರ ಕರ್ತವ್ಯ ಅವರು ಮಾಡಿಕೊಳ್ಳಲಿ ಬಾಗಿಲು ತೆಗೆಯುವಂತೆ ಹೇಳಿದರೂ ಸಹ ಆಕೆಯು ಕೇಳಲಿಲ್ಲ. ಆ ಸಮಯಕ್ಕೆ ಅಲ್ಲಿಗೆ ಒಬ್ಬ ಆಸಾಮಿ ಬಂದಿದ್ದು, ಯಾರು ನೀವು? ಏತಕ್ಕೆ ಬಂದಿದ್ದೀರಿ, ಏನು ಕೇಸು? ಎಂಬುದಾಗಿ, ದರ್ಪದಿಂದ  ಏರು ದ್ವನಿಯಲ್ಲಿ, ಕೇಳಿದ, ಅದಕ್ಕೆ ತಾನು ಕೇಸಿನ ವಿವರಗಳನ್ನು ತಿಳಿಸಿದೆ. ಆತನು, ನೀವು ಏನು ಬೇಕಾದರೂ ಬರೆದುಕೊಳ್ಳಿ, ನಾವು ಬಾಗಿಲು ತೆಗೆಯುವುದಿಲ್ಲ. ಬೇವರ್ಸಿ ನನ್ನ ಮಕ್ಕಳಾ, ನಿಮ್ಮ ಕೈನಲ್ಲಿ ಏನಾಗುತ್ತೋ ಮಾಡಿಕೊಳ್ಳಿ, ಎಂದು ಕೆಟ್ಟ ಮಾತುಗಳಿಂದ ಬೈದು, ಇಲ್ಲಿಂದ ಮೊದಲು ಹೊರಟು ಹೋಗಿ, ಹೋಗದಿದ್ದರೆ, ನಿಮ್ಮನ್ನು ಒಂದು ಗತಿ ಕಾಣಿಸುತ್ತೇನೆ. ಎಂಬುದಾಗಿ ಕೂಗಾಡಿದ. ಆತನಿಗೆ ಕೇಸಿನ ಬಗ್ಗೆ ಹೇಳಿದರೂ ಸಹ ಆತ ಕೂಗಾಡುತ್ತಲೇ ಇದ್ದ, ಈತನು ದೊಡ್ಡಗಂಜೂರು ಗ್ರಾಮದ ವಾಸಿಯಾದ ಪ್ರಕಾಶ ಬಿನ್ ಜಯಣ್ಣ ಎಂಬುವನಾಗಿದ್ದು, ಈ ಹಿಂದೆ ಈತನ ವಿರುದ್ದ ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ 36/2020 ಕಲಂ 323,342, 498(ಎ), 504, 506 ರೆ/ವಿ 34 ಐ.ಪಿ.ಸಿ ಮತ್ತು ಸೆಕ್ಷನ್ 3 & 4 ಡಿ.ಪಿ ಕಾಯ್ದೆ ಕೇಸಿನಲ್ಲಿ ಆರೋಪಿಯಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತೆ. ನಾವು ಮನೆಯಿಂದ ಸ್ವಲ್ಪ ಮುಂದೆ ರಸ್ತೆಗೆ ಬರುವಷ್ಟರಲ್ಲಿ ಅಲ್ಲಿಗೆ ಕಾರಿನಲ್ಲಿ ಮೇಲ್ಕಂಡ ಕೇಸಿನ ಆರೋಪಿ ಕೃಷ್ಣಾರೆಡ್ಡಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಅಲ್ಲಿಗೆ ಬಂದಿದ್ದು, ತಮ್ಮ ಬಳಿಯಿದ್ದ ಮೊಬೈಲ್ ಫೋನ್ ನ್ನು ತೆಗೆದುಕೊಂಡು, ದೌರ್ಜನ್ಯ ಮಾಡಲು ಬಂದಿದ್ದೀರಾ, ಏನು ಕೆಲಸ ನಿಮಗೆ, ಬೋಳಿ ಮಕ್ಕಳಾ, ಪೊಲೀಸರಾ ನೀವು? ಎಂಬುದಾಗಿ ಕೂಗಾಡುತ್ತಾ ಬಂದಿದ್ದು, ಅವರಿಗಳಿಗೂ ಸಹ ನಾವು ಕೇಸಿನ ತನಿಖೆಗಾಗಿ ಬಂದಿದ್ದು, ತನಿಖೆಗೆ ಸಹಕರಿಸುತ್ತಿಲ್ಲವೆಂದು, ತಿಳಿಸಿದರೂ ಸಹ ನಿಮ್ಮ ವಿರುದ್ದ ಕೇಸು ಹಾಕುತ್ತೇವೆ. ನಮ್ಮ ಮನೆಯ ಬಳಿ ಬರಲು ನಿಮಗೇನು ಹಕ್ಕಿದೆ, ಮಾನವ ಹಕ್ಕುಗಳ ಆಯೋಗಕ್ಕೆ ನಿಮ್ಮ ಮೇಲೆ ದೂರು ನೀಡುತ್ತೇವೆ. ನಿಮ್ಮನ್ನೇ ಜೈಲಿಗೆ ಹಾಕಿಸುತ್ತೇವೆ. ಎಂಬುದಾಗಿ, ನಮ್ಮನ್ನು  ಕೆಟ್ಟ ಮಾತುಗಳಿಂದ ಬೈದರು. ಅಲ್ಲಿನ ಗ್ರಾಮಸ್ಥರಾದ ಲಕ್ಷ್ಮಣರೆಡ್ಡಿ ರವರ ಮಗ ಚೌಡರೆಡ್ಡಿ, ನಾರಾಯಣಸ್ವಾಮಿ ಮಗ ವರುಣ್, ಲಕ್ಷ್ಮಿನಾರಾಯಣರೆಡ್ಡಿ ರವರ ಮಗನಾದ ಆಂಜನೇಯರೆಡ್ಡಿ, ಪಾಪಣ್ಣನ ಮಗ ವೆಂಕಟೇಶ, ಹಾಗೂ ನಮ್ಮೊಂದಿಗೆ ಪಂಚರಾಗಿದ್ದ ನಾಗರಾಜ ಮತ್ತು ಕೃಷ್ಣಮೂರ್ತಿ ರವರುಗಳು ಸಹ ಮೇಲ್ಕಂಡವರಿಗೆ ಬುದ್ದಿವಾದ ಹೇಳಿದರೂ ಸಹ ಅವರು ಕೇಳದೇ ಕೆಟ್ಟ ಮಾತುಗಳಿಂದ ಕೂಗಾಡುತ್ತಿದ್ದರು. ನಮ್ಮೊಂದಿಗಿದ್ದ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯವರಿಗೂ ಸಹ ಕೆಟ್ಟದಾಗಿ, ಬೈದರು, ಕೃಷ್ಣಾರೆಡ್ಡಿ ರವರ ಜೊತೆ ಬಂದಿದ್ದ ಆಸಾಮಿಗಳು ಸಿಂಗ ಸಂದ್ರ ಗ್ರಾಮದ ಸತೀಶ ಹಾಗೂ ಆತನ ಇನ್ನೊಬ್ಬ ಸ್ನೇಹಿತ ಆತನ ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ. ಈ ಮೇಲ್ಕಂಡ ಆರೋಪಿಗಳಾದ ಪ್ರಕಾಶ, ರತ್ನಮ್ಮ, ಕೃಷ್ಣಾರೆಡ್ಡಿ, ಸಿಂಗಸಂದ್ರದ ಸತೀಶ ಹಾಗೂ ಈತನ ಸ್ನೇಹಿತ ಮತ್ತು ಇತರರು ಸೇರಿ, ನಾವು ಮೇಲ್ಕಂಡ ಕೇಸಿನಲ್ಲಿ ತನಿಖೆ ನಿರ್ವಹಿಸಲು, ಹಾಗೂ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿರುತ್ತಾರೆ. ಈ ಘಟನೆಯು ಮಧ್ಯಾಹ್ನ ಸುಮಾರು 2-30 ಗಂಟೆಯಿಂದ 3-00 ಗಂಟೆಯ ವರೆಗೂ ನಡೆದಿರುತ್ತೆ.  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.08/2021  ಕಲಂ. 143,341,323,149 ಐ.ಪಿ.ಸಿ :-

     ದಿನಾಂಕ:07/01/2021 ರಂದು ಸಂಜೆ 6.30 ಗಂಟೆಯಲ್ಲಿ ನ್ಯಾಯಾಲಯದ ಸಿ.ಪಿ.ಸಿ 339 ಕರಿಯಪ್ಪ ರವರು ಘನ ನ್ಯಾಯಾಲಯದ ಅನುಮತಿಯನ್ನು ತಂದು ಹಾಜರ್ಪಡಿಸಿದ ಮನವಿಯ ಸಾರಾಂಧಶವೆನೆಂದರೆ ದಿನಾಂಕ 06/01/2021 ರಂದು ಚಿಂತಾಮಣಿ ಸರ್ಕಾರಿ ಅಸ್ವತ್ರೆಯಲ್ಲಿ ಗಾಯಾಳು ಶಿವಣ್ಣ ಬಿನ್ ಮುನಿಯಪ್ಪ 28 ವರ್ಷ, ಕೂಲಿಕೆಲಸ, ನಾಯಕ ಜನಾಂಗ, ಕೇತನಾಯಕನಹಳ್ಳಿ ಗ್ರಾಮ ರವರ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ಇದೇ ದಿನ ಸಂಜೆ 6-30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಮುನಿಕದಿರಪ್ಪ, ನರಸಿಂಹಪ್ಪ ರವರು ತಿಪ್ಪೆ ವಿಚಾರಕ್ಕೆ  ಮಾತಿಗೆ ಮಾತು ಬೆಳೆಸಿಕೊಂಡಿದ್ದರು ಅಗ ತಾನು ತನ್ನ ಸ್ವಂತ ಜೆಸಿಬಿ ಯನ್ನು ತೆಗೆದುಕೊಂಡು ಮುನಿಕದಿರಪ್ಪ ರವರ ತಿಪ್ಪೆ ಗೊಬ್ಬರವನ್ನು ಟ್ರಾಕ್ಟರ್ ಗೆ ತುಂಬಿಸಲು ಹೋಗಿದ್ದಾಗ ಅದೇ ಸಮಯದಲ್ಲಿ ತಮ್ಮ ಗ್ರಾಮದ ನರಸಿಂಹಪ್ಪ ಬಿನ್ ಪಿಳ್ಳ ಕದಿರಪ್ಪ ರವರು ಅಡ್ಡಿಪಡಿಸಿದ್ದು ಅಗ ಅಲ್ಲಿಗೆ ಬಂದ ತಮ್ಮ ಊರಿನವರಾದ ನರಸಿಂಹಪ್ಪ, ಮೂರ್ತಿ, ರಾಮಕೃಷ್ಣ, ಆಶೋಕ, ಟೈಲರ್ ನರಸಿಂಹಪ್ಪ ರವರು  ಗಲಾಟೆ  ಮಾಡಿದರು ಆಪೈಕಿ ನರಸಿಂಹ ಮತ್ತು ಮೂರ್ತಿ ರವರು ಕೈಗಳಿಂದ ಕುತ್ತಿಗೆಯನ್ನು ಹಿಡಿದುಕೊಂಡು ಹೊಡೆದರು. ತನ್ನನ್ನು ಬಿಡಿಸಲು ಬಂದ ಲಕ್ಷ್ಮಣ ರವರಿಗೂ ಟೈಲರ್ ನರಸಿಂಹಪ್ಪ ರವರು ತನ್ನ ಕೈಯಿಂದ  ಬಲ ಎದೆಗೆ ಜೋರಾಗಿ ಹೊಡೆದರು. ನಂತರ ಎಡ ಕಣ್ಣಿಗೆ ತರಚಿದ ಗಾಯಮಾಡಿರುತ್ತಾರೆ ತನಗೆ ಮತ್ತು ತನ್ನ ತಮ್ಮನಿಗೆ ನೋವುಂಟು ಮಾಡಿದ ಮೇಲ್ಕಂಡವರನ್ನು  ಠಾಣೆಗೆ ಕರೆಸಿ ಬಂದೋಬಸ್ತ್ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಮೇಲ್ಕಂಡ ಉಲ್ಲೇಖದ ರೀತ್ಯಾ ಎನ್.ಸಿ.ಆರ್ ದಾಖಲಿಸಿಕೊಂಡಿರುತ್ತೆ. ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದು, ಕಲಂ:143-341-323 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲು ಘನ ನ್ಯಾಯಾಲಯದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ..

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.09/2021  ಕಲಂ. 279  ಐ.ಪಿ.ಸಿ :-

     ದಿನಾಂಕ:08/012021 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಾದ ಸಿದ್ದಪ್ಪ ಬಿನ್ ಲೇಟ್ ಗಂಗಣ್ಣ ಸೋಂಪುರ ಗ್ರಾಮ, ಮದೂಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:07/01/2021 ರಂದು  ತಾನು ಮತ್ತು ತನ್ನ ಸಂಬಂಧಿಕರು ತಮ್ಮ ಗ್ರಾಮದಿಂದ ಪ್ರವಾಸದ ನಿಮಿತ್ತ ತಿರುಪತಿಗೆ ಹೋಗಲು ತಮ್ಮ ವಾಹನ ಸಂಖ್ಯೆ ಕೆ.ಎ 05 ಎಂ.ಆರ್ 7733  ಎರಿಟಿಗ ಕಾರಿನಲ್ಲಿ ರಾತ್ರಿ 08.30 ಗಂಟೆಯಲ್ಲಿ ಚಿಂತಾಮಣಿ ತಾಲ್ಲೂಕು ಸೋರಪಲ್ಲಿ ಗೇಟ್ ಬಳಿ ಹೋಗುತ್ತಿದ್ದಾಗ ಹಿಂದುಗಡೆಯಿಂದ ಕೆ.ಎ 40 9996 ಇಂಡಿಕಾ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿದ್ದರ ಪರಿಣಾಮ ಕಾರಿನ ಹಿಂಭಾಗ ಜಕ್ಕಂ ಆಗಿರುತ್ತದೆ. ಆದ್ದರಿಂದ ತನ್ನ ಕಾರಿಗೆ ಅಪಘಾತವನ್ನುಂಟುಮಾಡಿದ  ಕೆ.ಎ 40 9996 ಇಂಡಿಕಾ ಕಾರಿನ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿರುತ್ತಾರೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.02/2021  ಕಲಂ. ಮನುಷ್ಯ ಕಾಣೆ :-

     ದಿನಾಂಕ 07/01/2021ರಂದು ಪಿರ್ಯಾದುದಾರರಾದ ಅಶಾ ಕೋಂ ರಾಮೇಗೌಡ, 32 ವರ್ಷ, ವಕ್ಕಲಿಗರು, ಅಂಜನಿ ಬಡಾವಣೆ, ಚಿಂತಾಮಣಿ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಈಗ್ಗೆ  ಸುಮಾರು 12 ವರ್ಷಗಳ ಹಿಂದೆ  ಚಿಂತಾಮಣಿ ತಾಲ್ಲೂಕು ಹೆಬ್ಬರಿ ಗ್ರಾಮದ ವಾಸಿ  ಹೆಚ್.ಆರ್ ನಾರಾಯಣರೆಡ್ಡಿ ರವರ ಮಗನಾದ ರಾಮೇಗೌಡ ( ರವಿ) ಎಂಬುವರೊಂದಿಗೆ ಮದುವೆಯಾಗಿರುತ್ತೆ. ನಾವು ಈಗ್ಗೆ ಸುಮಾರು 06 ವರ್ಷಗಳಿಂದ ಚಿಂತಾಮಣಿ ನಗರದ ಅಂಜನಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ  ನಾನು ಹಾಗೂ ನನ್ನ ಗಂಡ ವಾಸವಾಗಿರುತ್ತೇವೆ. ನನ್ನ ಗಂಡ ನಾದ ರಾಮೇಗೌಡ ರವರು ಗಜಾನನ ವೃತ್ತದ ಬಳಿ ಡಿ.ಟಿ.ಹೆಚ್ ಅಂಗಡಿಯನ್ನು ಇಟ್ಟುಕೊಂಡಿದ್ದು ಅಂಗಡಿಯ ವ್ಯಾಪಾರಕ್ಕಾಗಿ  ಚಿಂತಾಮಣಿ ನಗರದ ಕೆ.ಆರ್ ಬಡಾವಣೆಯ  ವಾಸಿಯಾದ ಮಂಜು ಸ್ವಾಮಿ ರವರ ಬಳಿ  ಸಾಲವನ್ನು ಪಡೆದುಕೊಂಡಿದ್ದು ಈ ಸಾಲದ ಹಣಕ್ಕೆ ಬದಲಾಗಿ  ಮಂಜುಸ್ವಾಮಿ ರವರು  ನಮ್ಮ ಅತ್ತೆ ಜ್ಯೋತಮ್ಮ ರವರ ಹೆಸರಿನಲ್ಲಿದ್ದ ಹೆಬ್ಬರಿ ಬಳಿಯ ಒಂದು ಎಕರೆ ಜಮೀನನ್ನು ಅವರ ಹೆಸರಿಗೆ ಕ್ರಯ ಮಾಡಿಸಿಕೊಂಡಿರುತ್ತಾರೆ.  ಇದಲ್ಲದೆ ವಿಜಯ್, ಚಿಂತಾಮಣಿ ನಗರ ರವರ ಬಳಿಯೂ ಸಹ   ನನ್ನ ಗಂಡ ಸಾಲವನ್ನು ಪಡೆದುಕೊಂಡಿದ್ದು ಇದಕ್ಕೆ  ವಿಜಯ್  ರವರು ನನ್ನ ಗಂಡನ ಅಂಗಡಿಗೆ ಬೀಗವನ್ನು ಹಾಕಿಕೊಂಡಿರುತ್ತಾರೆ. ಇದರಿಂದ ನನ್ನ ಗಂಡ ಮನಸ್ಸಿಗೆ ಬೇಜಾರು ಮಾಡಿಕೊಂಡಿರುತ್ತಾರೆ.  ಹೀಗಿರುವಾಗ ದಿನಾಂಕ 02/01/2021 ರಂದು ಮದ್ಯಾಹ್ನ 12-00 ಗಂಟೆಗೆ  ನನ್ನ ಗಂಡನಾದ ರಾಮೇಗೌಡ ರವರು  ಮನೆಯಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಪುನಃ  ರಾತ್ರಿಯಾದರು ಮನೆಗೆ ವಾಪಸ್ಸು ಬರದೇ ಇದ್ದಾಗ ನಾವು ಗಾಬರಿಯಾಗಿ ಅಂಗಡಿಯ ಬಳಿ ಹೋಗಿ ನೋಡಲಾಗಿ ಅಂಗಡಿ ಬಾಗಿಲು ಹಾಕಿದ್ದು ಸುತ್ತಮುತ್ತಲು ಹಾಗೂ ನಮ್ಮ ನೆಂಟರ ಮನೆಗಳಲ್ಲಿ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ. ನನ್ನ ಗಂಡ ತನ್ನ ಮೊಬೈಲ್ ಗಳನ್ನು ಮನೆಯಲ್ಲಿಯೇ ಇಟ್ಟು ಹೋಗಿರುತ್ತಾರೆ. ಇದುವರೆಗೂ ನನ್ನ ಗಂಡನನ್ನು ಹುಡುಕಾಡಿಕೊಂಡಿದ್ದರಿಂದ  ಈ ದಿನ ತಡವಾಗಿ ದೂರು ನೀಡುತ್ತಿರುತ್ತೇನೆ.   ಆದ್ದರಿಂದ ಸಾಲಬಾಧೆಯಿಂದ ಮನಸ್ಸಿಗೆ ಬೇಜಾರುಮಾಡಿಕೊಂಡು ಕಾಣೆಯಾದ ನನ್ನ ಗಂಡನನ್ನು ಪತ್ತೆ ಮಾಡಿಕೊಡಲು ಕೋರಿ ದೂರು.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.07/2021 ಕಲಂ. 279,304(A) ಐ.ಪಿ.ಸಿ:-

     ದಿನಾಂಕ:07-01-2021 ರಂದು ಮದ್ಯಾಹ್ನ:2-15 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀದೇವಮ್ಮ  ಕೋಂ. ವೆಂಕಟೇಶಪ್ಪ  40 ವರ್ಷ ಬೋವಿ ಜನಾಂಗ  ಕೂಲಿ ಕೆಲಸ ವಾಸ ಬೊಯಿನಹಳ್ಳಿ ಗ್ರಾಮ  ಮಂಡಿಕಲ್ಲು ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು  ಪೊ:8904679429 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನಂದರೆ: ತನ್ನ ಗಂಡನಾದ ವೆಂಕಟೇಶಪ್ಪ ಬಿನ್ ಲೇಟ್ ಯರ್ರಪ್ಪ ಸುಮಾರು 45 ವರ್ಷ ಬೋವಿ  ಜನಾಂಗ ಜಿರಾಯ್ತಿ ವಾಸ ಬೋಯಿನಹಳ್ಳಿ ಗ್ರಾಮ ಮಂಡಿಕಲ್ಲು ಹೋಬಳಿ ಚಿಕ್ಕಬಳ್ಳಾಪುರ ತಾಲ್ಲೂಕು ರವರು ತಮ್ಮ ಬಾಬ್ತು ಕೆ.ಎ-40 ಇಇ-7094 ನೊಂದಣಿ ಸಂಖ್ಯೆಯ ಹೊಂಡ ಡಿಯೋ ದ್ವಿ ಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಅದೇ ದ್ವಿ ಚಕ್ರವಾಹನದಲ್ಲಿ ಹಿಂದೆ ತಮ್ಮ ಗ್ರಾಮದ ವಾಸಿಯಾದ ತಮ್ಮ ಜನಾಂಗದ ವೆಂಕಟಪತಿ ರವರ ಮಗನಾದ ಸುಮಾರು 13 ವರ್ಷ ವಯಸ್ಸಿನ ಗೌತಮ್  ರವರನ್ನು ಕುಳ್ಳಿರಿಸಿಕೊಂಡು ಕೆಲಸದ ನಿಮಿತ್ತ ತಮ್ಮ ಗ್ರಾಮದಿಂದ ದಿನಾಂಕ:02-01-2021 ರಂದು ಬೆಳಗ್ಗೆ ಪೆರೇಸಂದ್ರ ಕ್ರಾಸ್ ಗೆ ಹೋಗಿದ್ದು ನಂತರ ತನ್ನ ಗಂಡನ ಜೊತೆಯಲ್ಲಿ ಹೋಗಿದ್ದ  ಗೌತಮ್ ರವರು ಹಿಂದೆ ಕುಳಿತುಕೊಂಡು ಚಿಕ್ಕಬಳ್ಳಾಪುರ ತಾಲ್ಲೂಕು ಪೆರೇಸಂದ್ರ ಕ್ರಾಸ್ ನ ಗುಡಿಬಂಡೆ ರಸ್ತೆಯಲ್ಲಿರುವ ಹೆಚ್.ಪಿ.ಪೆಟ್ರೋಲ್ ಬಂಕ್ ಮುಂದೆ ರಸ್ತೆಯಲ್ಲಿ  ಗುಡಿಬಂಡೆ ಕಡೆ ಹೋಗುತ್ತಿದ್ದಾಗ ಅದೇ ದಿನ  ಬೆಳಗ್ಗೆ ಸುಮಾರು 9-30 ಗಂಟೆಯಲ್ಲಿ ಗುಡಿಬಂಡೆ ಕಡೆಯಿಂದ ಎದುರುಗಡೆಯಿಂದ ಬಂದ ಕೆ.ಎ-43 ಎ-0594 ನೊಂದಣಿ ಸಂಖ್ಯೆಯ  ಭರತ್ ಬೆಂಜ್ ಟಿಪ್ಪರ್ ವಾಹನದ ಚಾಲಕ ತನ್ನ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಬಂದು ತನ್ನ ಗಂಡ  ವೆಂಕಟೇಶಪ್ಪ ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ ಪರಿಣಾಮ ದ್ವಿ ಚಕ್ರವಾಹನ ಜಖಂ ಗೊಂಡು ತನ್ನ ಗಂಡ  ವೆಂಕಟೇಶಪ್ಪ ರವರಿಗೆ ತಲೆಗೆ. ಮೂಗು. ಕುತ್ತಿಗೆಗೆ  ರಕ್ತಗಾಯಗಳಾಗಿ ಗೌತಮ್ ರವರಿಗೆ ಯಾವುದೇ ಗಾಯಗಳಾಗದೇ ಇದ್ದು ನಂತರ ಗೌತಮ್ ರವರು ಅಂಬ್ಯೂಲೇನ್ಸ ವಾಹನಕ್ಕೆ ಪೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಗಾಯಗೊಂಡಿದ್ದ ತನ್ನ ಗಂಡ ವೆಂಕಟೇಶಪ್ಪ ರವರನ್ನು ಚಿಕತ್ಸೆಗಾಗಿ ಅಂಬ್ಯೂಲೆನ್ಸ್ ವಾಹನದಲ್ಲಿ  ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರವ ಬಗ್ಗೆ ತಿಳಿಸಿದ್ದು ನಂತರ ತಾನು  ವಿಚಾರ ತಿಳಿದುಕೊಂಡು ತಾನು ಚಿಕ್ಕಬಳ್ಳಾಪುರ ಜಿಲ್ಲಾ ಅಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ನಂತರ ಗಾಯಗೊಂಡಿದ್ದ ತನ್ನ ಗಂಡ ವೆಂಕಟೇಶಪ್ಪ ರವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕತ್ಸೆಯನ್ನು ನೀಡಿಸಿ ಅಲ್ಲಿನ ವೈದ್ಯರ ಸಲಹೆ ಮೇರಿಗೆ ಹೆಚ್ಚಿನ ಚಿಕತ್ಸೆಯ ಬಗ್ಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ಬೆಂಗಳೂರಿನ ಮಮತ  ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆಯನ್ನು ನೀಡಿಸಿ ಅಲ್ಲಿಂದ  ದಿನಾಂಕ:07-01-2021 ರಂದು  ವಾಪಸ್ಸು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಚಿಕತ್ಸೆಗಾಗಿ ಕರೆದುಕೊಂಡು ಬರುತ್ತಿದ್ದಾಗ  ತನ್ನ ಗಂಡ  ವೆಂಕಟೇಶಪ್ಪ ರವರು ದಿನಾಂಕ:07-01-2021 ರಂದು  ಬೆಳಗಿನ ಸುಮಾರು 2-30 ಗಂಟೆಯಲ್ಲಿ ದೇವನಹಳ್ಳಿ ಬಳಿ ಮಾರ್ಗ ಮದ್ಯ ಚಿಕತ್ಸೆ ಫಲಕಾರಿಯಾಗದೇ ಮೇಲ್ಕಂಡ ಅಪಘಾತದಲ್ಲಿ ಆದ ಗಾಯಗಳ ದೆಸೆಯಿಂದ ಮೃತಪಟ್ಟಿದ್ದು ತನ್ನ ಗಂಡ ವೆಂಕಟೇಶಪ್ಪ ರವರ ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿದ್ದು ತನ್ನ ಗಂಡನಿಗೆ  ಚಿಕತ್ಸೆಯನ್ನು ನೀಡಿಸಲು ತಾನು ಜೊತೆಯಲ್ಲಿದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿದ್ದು ತನ್ನ ಗಂಡನಿಗೆ ಅಪಘಾತಪಡಿಸಿದ ಮೇಲ್ಕಂಡ ಕೆ.ಎ-43 ಎ-0594 ನೊಂದಣಿ ಸಂಖ್ಯೆಯ  ಭರತ್ ಬೆಂಜ್ ಟಿಪ್ಪರ್ ವಾಹನ ಮತ್ತು ಅದರ  ಚಾಲಕನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 447,324,504,506,34 ಐ.ಪಿ.ಸಿ:-

     ದಿನಾಂಕ: 06-01-2021 ರಂದು ಸಂಜೆ 5.30 ಗಂಟೆಯಲ್ಲಿ ನ್ಯಾಯಾಲಯದ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಪಿಸಿ-90 ರಾಜಕುಮಾರ ರವರು ಘನ ನ್ಯಾಯಾಲಯದಿಂದ ಸಾದರಾದ ಪಿಸಿಆರ್ ನಂ. 53/2020 ರ ದೂರನ್ನು ಪಡೆದುಕೊಂಡು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀಮತಿ ಮುನಿಯಮ್ಮ ಕೋಂ ಹೆಚ್.ಎಂ. ಚಿಕ್ಕಮುನಿಯಪ್ಪ, 66 ವರ್ಷ, ಹೊಸಪೇಟೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಅನುಭವದಲ್ಲಿರುವ ಹೊಸಪೇಟೆ ಸರ್ವೆ ನಂ. 329/1, 103, 308/1, 329/1, 344 ಮತ್ತು 372 ರ ಜಮೀನುಗಳು ದಿನಾಂಕ: 09-06-1986 ರಲ್ಲಿ ತಹಶೀಲ್ದಾರ್, ಶಿಡ್ಲಘಟ್ಟ ತಾಲ್ಲೂಕು ರವರು ಹೆಚ್.ಒ.ಎ.ಎನ್.ಜಿ.ಟಿ (ಆರ್) 47/1977-78 ರಲ್ಲಿ ಶ್ರೀ ಈರಪ್ಪ ಬಿನ್ ನಾರಾಯಣಪ್ಪ ರವರಿಗೆ ಮಂಜೂರಾಗಿದ್ದು, ಅಂದಿನಿಂದಲೂ ಸಹ ಈರಪ್ಪ ಬಿನ್ ನಾರಾಯಣಪ್ಪ ರವರು ಅನುಭವದಲ್ಲಿರುತ್ತಾರೆ. ಈರಪ್ಪ ರವರು ಕೃಷಿ ಮಾಡಲು ಸಾದ್ಯವಾಗದ ಕಾರಣ ಈರಪ್ಪ ರವರ ಸಹೋದರ ಸಂಬಂಧಿಯಾದ ಫಿರ್ಯಾದಿದಾರರ ಗಂಡನಾದ ಶ್ರೀ ಹೆಚ್.ಎಂ. ಚಿಕ್ಕಮುನಿಯಪ್ಪ ಬಿನ್ ಮುನಿಶಾಮಪ್ಪ ರವರೆ ಉಸ್ತುವಾರಿಯನ್ನು ನೋಡಿಕೊಂಡು ಬರುತ್ತಿದ್ದು, ಸದರಿ ಜಮೀನಿನ ದಾಖಲೆಗಳು ಈಗ್ಗೆ 6 ವರ್ಷಗಳ ಹಿಂದೆ ಚಿಕ್ಕಮುನಿಯಪ್ಪ ಮತ್ತು ಈರಪ್ಪ ರವರ ಹೆಸರಿನಲ್ಲಿ ಜಂಟಿಯಾಗಿ ಬರುತ್ತಿರುತ್ತದೆ. ದಿನಾಂಕ: 04-07-2020 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಹೊಸಪೇಟೆ ಗ್ರಾಮದ ಸರ್ವೆ ನಂ. 329/1 ರ ಜಮೀನಿನಲ್ಲಿ ಫಿರ್ಯಾದಿದಾರರು ಕೂಲಿಯಾಳುಗಳೊಂದಿಗೆ ಬಿತ್ತನೆ ಕೆಲಸ ಮಾಡುತ್ತಿದ್ದಾಗ ಆರೋಪಿಗಳು ಸದರಿ ಜಮೀನಿನ ಒಳಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಮತ್ತು ಕೂಲಿಯಾಳುಗಳನ್ನು ಜಮೀನಿನಿಂದ ಹೊರಗೆ ಹಾಕಲು ಪ್ರಯತ್ನ ಪಟ್ಟು ಹಲ್ಲೆ ಮಾಡಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರು.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.06/2021 ಕಲಂ. 143,147,447,323,504,506,149 ಐ.ಪಿ.ಸಿ:-

     ದಿನಾಂಕ:07-01-2021 ರಂದು ಸಂಜೆ 5.45 ಗಂಟೆಯಲ್ಲಿ ಶಿಡ್ಲಘಟ್ಟ ನ್ಯಾಯಾಲಯದ ಕರ್ತವ್ಯಕ್ಕೆ ನೇಮಕವಾಗಿದ್ದ ಸಿಪಿಸಿ-90 ರಾಜಕುಮಾರ ರವರು ತಾಲ್ಲೂಕು ಕಾನೂನು ಸೇವಾ ಸಮಿತಿ(ತಾಲ್ಲೂಕು ನ್ಯಾಯಾಲಯದ ಆವರಣ ಶಿಡ್ಲಘಟ್ಟ) ಯಿಂದ  ದೂರಿನ ಪ್ರತಿಯನ್ನು  ಪಡೆದುಕೊಂಡು ಬಂದು ಠಾಣೆಯಲ್ಲಿ ಹಾಜರುಪಡಿಸಿದ್ದರ  ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀಮತಿ ಭದ್ರಮ್ಮ ಕೋಂ ಲೇಟ್ ಕೃಷ್ಣಪ್ಪ , ಸುಮಾರು 55, ಕುಂಬಾರ ಜನಾಂಗ, ಜಿರಾಯ್ತಿ, ಭಕ್ತರಹಳ್ಳಿ ಗ್ರಾಮ, ಜಂಗಮಕೋಟೆ ಹೋಬಳಿ,  ಶಿಡ್ಲಘಟ್ಟ ತಾಲ್ಲೂಕು ರವರು ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು, ಹೀಗಿರುವಲ್ಲಿ ತನಗೆ ಸೇರಿದ ತನ್ನ ಸ್ವಾಧೀನಾನುಭವದಲ್ಲಿರುವ ತನ್ನ ಹಕ್ಕಿಬಾಧ್ಯತೆಗೆ ಒಳಪಟ್ಟಿರುವ ತನ್ನ ಹೆಸರಿನಲ್ಲಿರುವ ಎಂ.ಆರ್ ನಂ ಹೆಚ್ 60/2016-17 ದಿನಾಂಕ:4-5-2017 ರಂತೆ ಖಾತೆ ಸಹಾ ಇರುವ ಭಕ್ತರಹಳ್ಳಿ ಗ್ರಾಮದ ಸವರ್ೆ ನಂ 493/2 ವಿಸ್ತೀರ್ಣ 0-17.08.00 ಗುಂಟೆ 0-60 ಪೈಸೆ ಆಕಾರವುಳ್ಳ ಪೂರಾ ಜಮೀನು ಚಕ್ಕುಬಂದಿ ಪೂರ್ವಕ್ಕೆ:ಭಜಂತ್ರಿ ನಾರಾಯಣಸ್ವಾಮಿ ರವರ ಜಮೀನು, ಪಶ್ಚಿಮಕ್ಕೆ:ಎಂ.ಅಶ್ವತ್ಥಪ್ಪನ ಜಮೀನು ಉತ್ತರಕ್ಕೆ: ಸರ್ಕಾರಿ ಕಾಲುವೆ ದಕ್ಷಣಕ್ಕೆ: ಸರ್ಕಾರಿ ಕಾಲುವೆ ಈ ಚಕ್ಕುಬಂದಿ ಮಧ್ಯೆ ಇರುವ 0-17.08.00 ಗುಂಟೆ ಜಮೀನು ತನ್ನ ಗಂಡನಾದ ಎಂ.ಕೃಷ್ಣಪ್ಪ ಬಿನ್ ಲೇಟ್ ಮುನಿಶಾಮಪ್ಪ ರವರಿಗೆ ಸದರಿ ಕುಟುಂಬದಲ್ಲಿ ದಿನಾಂಕ:21-08-2000 ರಂದು ಮಾಡಿಕೊಂಡ ವಿಭಾಗಪತ್ರದಂತೆ ಬಂದಿರುವ ಸ್ವತ್ತಾಗಿದ್ದು ಸದರಿ ಪತ್ರವು ಶಿಡ್ಲಘಟ್ಟ ಉಪ ನೊಂದಣಾಧಿಕಾರಿಗಳವರ ಕಛರಿಯಲ್ಲಿ 1ನೇ ಪುಸ್ತಕದ 919/200-1 ನೇ ಸಂಖ್ಯೆಯಾಗಿ ನೊಂದಣಿಯಾಗಿದ್ದು ತದನಂತರ ಸಂಬಂದಪಟ್ಟ ಕಂದಾಯ ಇಲಾಖೆಯವರು ಮುಂದಿನ ಕಾನೂನು ಕ್ರಮವನ್ನು ಅನುಸರಿಸಿದ ನಂತರ ಸದರಿ ಸ್ವತ್ತುನ್ನು ಅನುಭವಿಸುತ್ತಾ ಬಂದಿರುತ್ತೇನೆ ಸದರಿ ಸ್ವತ್ತಿಗೆ ಸಂಬಂದಿಸಿದಂತೆ ತಾಲ್ಲೂಕು ಸವರ್ೇಯರ್ ರವರು ಸ್ಥಳಕ್ಕೆ ಬಂದು ಹದ್ದುಬಸ್ತು ಮಾಡಿ ಅಳತೆಯ ಸ್ಕೆಚ್ ಸಹಾ ತಯಾರಿಸಿದ್ದು, ತನ್ನ ಸ್ವತ್ತಿಗೆ ಸ್ಕೆಚ್ಚಿನಲ್ಲಿ ತೋರಿಸಿರುವಂತೆ ನಂ:1, ನಂ.2,ನಂ3, ನಂ4, ನಂ.5,ನಂ.6 ರಂತೆ ಬಾಂದುಕಲ್ಲುಗಳನ್ನು ಸಹಾ ಸ್ಥಾಪಿಸಿರುವುದು ಸರಿಯಷ್ಠೆ, ಹೀಗಿರುವಲ್ಲಿ ದಿನಾಂಕ:2-01-2021 ರಂದು ಬೆಳಿಗ್ಗೆ ಸುಮಾರು 10-00 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ನಿವಾಸಿಗಳಾದ 1] ಗುರುಮೂರ್ತಿ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ, 2] ಮಂಜುನಾಥ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ, 3] ಹರೀಶ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ 4] ಅಮರೇಶ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ,5]ಕುಮಾರ್ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ, 6]ರಾಮೂರ್ತಿ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ 7] ಲಕ್ಷ್ಮಣ ಬಿನ್ ಲೇಟ್ ಎಂ.ಕೆ.ನಾರಾಯಣಸ್ವಾಮಿ, 8] ರಮೇಶ ಬಿನ್ ಲೇಟ್ ಎಂ.ಕೆ.ಅಶ್ವತ್ಥಪ್ಪ, 9]ಚಂದ್ರಶೇಖರ್ ಬಿನ್ ಲೇಟ್ ಎಂ.ಕೆ.ಅಶ್ವತ್ಥಪ್ಪ ರವರುಗಳು ಏಕಾ ಏಕಿಯಾಗಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ತಮ್ಮ ಜಮೀನಿನೊಳಕ್ಕೆ ಅಕ್ರಮ ಪ್ರವೇಶ ಮಾಡಿ , ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ , ಕೈಯಲ್ಲಿ ಗಡಾರಿ ಸನಿಕೆ, ಬಾಂಡ್ಲಿ ಇತ್ಯಾದಿ ಮಾರಕಾಸ್ತ್ರಗಳನ್ನು ಹಿಡಿದು ತನ್ನ ಜಮೀನಿ ಉತ್ತರದ ಕಡೆಯ ನಂ 1 ಮತ್ತು 6 ರ ಬಾಂದುಕಲ್ಲುಗಳನ್ನು ಕಿತ್ತುಹಾಕಿ ಪೂರ್ವ ಮತ್ತು ಪಶ್ಚಿಮಾಭಿಮುಖವಾಗಿ ಓಡಾಡಲು ಉತ್ತರ-ದಕ್ಷಣ ಸುಮಾರು 8 ಅಡಿಗಳ ರಸ್ತೆಯನ್ನು ಅಕ್ರಮವಾಗಿ ನಿರ್ಮಿಸುವ ಸಲುವಾಗಿ ಸದರಿ ಆರೋಪಿಗಳು ಪ್ರಯತ್ನಿಸುತ್ತಿದ್ದಾಗ ತಾನು ಅಡ್ಡ ಹೋಗಿ ತಡೆದಾಗ ಆರೋಪಿಗಳು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ತನ್ನನ್ನು ಹಿಂದಕ್ಕೆ ತಳ್ಳಿರುತ್ತಾರೆ , ಅ ಸಮಯದಲ್ಲಿ ಅಡ್ಡ ಬಂದ ತನ್ನ ಮಗನಾದ ನಾರಾಯಣಸ್ವಾಮಿ .ಬಿ.ಕೆ ಬಿನ್ ಲೇಟ್ ಕೃಷ್ಣಪ್ಪ ರವರನ್ನು ಸಹಾ ಹಿಂದಕ್ಕೆ ತಳ್ಳಿ ಸದರಿಯವರು ತನ್ನ ಮಗನ ಬೆನ್ನಿಗೆ ಗುದ್ದಿ ಗಲ್ಲಾಪಟ್ಟಿ ಹಿಡಿದು ಎಳೆದಾಡಿ ಕಾಲಿನಿಂದ ಒದ್ದಿರುತ್ತಾರೆ ಈ ಘಟನೆಯಿಂದ ತಾನು ಬಹಳ ಭಯಭೀತಳಾಗಿರುತ್ತಾರೆ, ಈ ಘಟನೆ ನಡೆಯುವ ಸಂದರ್ಭದಲ್ಲಿ ಶೆಟ್ಟಿಹಳ್ಳಿ ಗ್ರಾಮದ ನಿವಾಸಿಯಾದ ನಾರಾಯಣಸ್ವಾಮಿ ಹಾಗೂ ತಮ್ಮ ಗ್ರಾಮದ ನಿವಾಸಿಯಾದ ಈಶ್ವರಚಾರಿ ಬಿನ್ ಲೇಟ್ ಬುಚ್ಚಾಚಾರಿ ರವರುಗಳು ಮಧ್ಯೆ ಪ್ರವೇಶಿಸಿ ಉಭಯತ್ರರಿಗೂ ಸಮಾಧಾನಪಡಿಸಿ ಕಳುಹಿಸಿರುತ್ತಾರೆ ಅದ್ದರಿಂದ ಮೇಲ್ಕಂಡ ಆರೋಪಿಗಳನ್ನು ಠಾಣೆಗೆ ಕರೆಯಿಸಿ ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ತೆಗೆದುಕೊಂಡು ತನಗೆ ಹಾಗೂ ತನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕಲ್ಪಿಸಿಕೊಟ್ಟು ಸದರಿ ಆರೋಪಿಗಳಿಂದ ತಮಗೆ ಮತ್ತು ತಮ್ಮ ಸ್ವತ್ತಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಹಾಗೂ ಅಕ್ರಮವಾಗಿ ರಸ್ತೆ ನಿರ್ಮಿಸಲು ಪ್ರಯತ್ನಿಸಿರುವ ಆರೋಪಿಗಳಿಗೆ ಸೂಕ್ತ ಬುದ್ದಿವಾದ ಹೇಳಿ ತಮಗೆ ಸೂಕ್ತ ಬಂದೋಬಸ್ತು ಕಲ್ಪಿಸಿಕೊಡಬೇಕಾಗಿ  ಇದ್ದ ದೂರಿನ ಸಾರಾಂಶದ ಮೇರಗೆ ಠಾಣಾ ಮೊ.ಸಂ 06/2020 ಕಲಂ 143,147,447,323,504,506 ರೆ/ವಿ 149 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.