ದಿನಾಂಕ : 07/10/2019ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 320/2019 ಕಲಂ.78(3) ಕೆ.ಪಿ. ಆಕ್ಟ್:-

     ದಿನಾಂಕ:05.10.2019 ರಂದು ಮದ್ಯಾಹ್ನ 3-30 ಗಂಟೆಗೆ ಚಿಕ್ಕಬಳ್ಳಾಫುರ ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:05.10.2019 ರಂದು  ಮದ್ಯಾಹ್ನ 2-00 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ ಬಾಗೇಪಲ್ಲಿ ಪುರದ ಗೂಳೂರು ವೃತ್ತದಲ್ಲಿರುವ ಮಾರುತಿ ಹೇರ್ ಡ್ರಸಸ್ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಸಿಹೆಚ್ಸಿ-85 ನರಸಿಂಹ, ಹೆಚ್.ಸಿ. 208 ಗಿರೀಶ ರವರೊಂದಿಗೆ  ಸರ್ಕಾರಿ ಜೀಫ್ ಸಂಖ್ಯೆ ಕೆಎ-40,ಜಿ-270 ಜೀಫ್ ನಲ್ಲಿ ಹೋಗಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚಾಯ್ತಿದಾರರು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ  ವಿವಿಧ ಅಂಕಿಗಳಿಗೆ  ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ ಒಂದು ರೂಗೆ 70 ರೂ ಕೊಡುವುದಾಗಿ  ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ಖಚಿತ   ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ  ವಶಕ್ಕೆ ಪಡೆದು ಆತನ ಬಳಿ ಇದ್ದ  ವಿವಿಧ ನಂಬರ್ಗಳಿಗೆ ವಿವಿಧ ಮೊತ್ತ ಬರೆದಿರುವ  ವಿವಿಧ ಅಂಕಿಗಳ 1 ಮಟ್ಕಾ ಚೀಟಿ,  ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ  2030/- ರೂಗಳನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು  ವಿಳಾಸವನ್ನು ಕೇಳಲಾಗಿ  ರಾಮಚಂದ್ರಪ್ಪ ಬಿನ್ ಲೇಟ್ ನರಸಿಂಹಪ್ಪ, 53 ವರ್ಷ, ಭಜಂತ್ರಿ ಜನಾಂಗ, ಕುಲಕಸುಬು, ವಾಸ 1ನೇ ವಾರ್ಡ, ವಾಲ್ಮೀಕಿ ನಗರ ಬಾಗೇಪಲ್ಲಿ ಟೌನ್ ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಹಣದ ಬಗ್ಗೆ ವಿಚಾರಿಸಲಾಗಿ ಮಟ್ಕಾ ಚೀಟಿ ಮತ್ತು ಹಣವನ್ನು ಬಾಗೇಪಲ್ಲಿ ನಗರದ 5ನೇ ವಾಡಿನ ಶಿವಪ್ಪ @ ಬಿ.ಜೆ.ಪಿ. ಶಿವಪ್ಪ, 5ನೇ ವಾರ್ಡ ರವರಿಗೆ ನೀಡುವುದಾಗಿ ತಿಳಿಸಿದ್ದು, ಸದರಿ ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 3-30 ಗಂಟೆಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಬಗ್ಗೆ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪಡೆದು ಠಾಣೆಯ ಎನ್.ಸಿ.ಆರ್ ಸಂಖ್ಯೆ: 282/2019 ರಂತೆ ಪ್ರಕರಣ ದಾಖಲಿಸಿರುತ್ತೆ.  ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡ ಕಾರಣ ಮೇಲ್ಕಂಡ ಆರೋಪಿತನ ವಿರುದ್ದ  ಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈಗೊಳ್ಳಲು ಅನುಮತಿ ನೀಡಲು ತಮ್ಮಲ್ಲಿ ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.   ದಿನಾಂಕ:06.10.2019 ರಂದು ಮದ್ಯಾಹ್ನ 1.30 ಗಂಟೆಗೆ ನ್ಯಾಯಾಲಯದ ಪಿಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ ವರಧಿಯನ್ನು ಪಡೆದುಕೊಂಡು ಮೇಲ್ಕಂಡ ಕಲಂ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 321/2019 ಕಲಂ.78(3) ಕೆ.ಪಿ. ಆಕ್ಟ್:-

     ದಿನಾಂಕ:05.10.2019 ರಂದು ಸಂಜೆ 6-45 ಗಂಟೆಗೆ ಚಿಕ್ಕಬಳ್ಳಾಫುರ ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:05.10.2019 ರಂದು  ಸಂಜೆ 5-00 ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದಾಗ ಬಾಗೇಪಲ್ಲಿ  ತಾಲ್ಲೂಕು ಗೂಳೂರು ಹೋಬಳಿ ಮಾರ್ಗಾನುಕುಂಟೆ ಗ್ರಾಮದಲ್ಲಿ  ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಸಿಹೆಚ್ಸಿ-205 ರಮೇಶ, ಹೆಚ್.ಸಿ. 71 ಸುಬ್ರಮಣಿ ಮತ್ತು ಪಿಸಿ-535  ಶ್ರೀನಿವಾಸ ರವರೊಂದಿಗೆ  ಸರ್ಕಾರಿ ಜೀಫ್ ಸಂಖ್ಯೆ ಕೆಎ-40,ಜಿ-270 ಜೀಫ್ ನಲ್ಲಿ ಹೋಗಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚಾಯ್ತಿದಾರರು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ  ವಿವಿಧ ಅಂಕಿಗಳಿಗೆ  ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ ಒಂದು ರೂಗೆ 70 ರೂ ಕೊಡುವುದಾಗಿ  ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ  ವಶಕ್ಕೆ ಪಡೆದು ಆತನ ಬಳಿ ಇದ್ದ  ವಿವಿಧ ನಂಬರ್ಗಳಿಗೆ ವಿವಿಧ ಮೊತ್ತ ಬರೆದಿರುವ  ವಿವಿಧ ಅಂಕಿಗಳ 1 ಮಟ್ಕಾ ಚೀಟಿ,  ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ  1150/- ರೂಗಳನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು  ವಿಳಾಸವನ್ನು ಕೇಳಲಾಗಿ ಪಿ.ಎಸ್ ವೆಂಕಟರಾಮಪ್ಪ ಬಿನ್ ಲೇಟ್ ಸುಬ್ಬರಾಯಪ್ಪ,55 ವರ್ಷ,ಬಲಜಿಗರು, ಜಿರಾಯ್ತಿ, ವಾಸ:ಮಾರ್ಗಾನುಕುಂಟೆ ಗ್ರಾಮ ಗೂಳೂರು ಹೋಬಳಿ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 6-45 ಗಂಟೆಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಬಗ್ಗೆ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪಡೆದು ಠಾಣೆಯ ಎನ್.ಸಿ.ಆರ್ ಸಂಖ್ಯೆ: 283/2019 ರಂತೆ ಪ್ರಕರಣ ದಾಖಲಿಸಿರುತ್ತೆ. ದಿನಾಂಕ:06.10.2019 ರಂದು ಮದ್ಯಾಹ್ನ 3.15 ಗಂಟೆಗೆ ನ್ಯಾಯಾಲಯದ ಪಿಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ ವರಧಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ. 322/2019 ಕಲಂ.78(3) ಕೆ.ಪಿ. ಆಕ್ಟ್:-

     ದಿನಾಂಕ:05.10.2019 ರಂದು ಸಂಜೆ 7-40ಗಂಟೆಗೆ ಚಿಕ್ಕಬಳ್ಳಾಫುರ ಡಿಸಿಬಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ದಿನಾಂಕ:05.10.2019 ರಂದು  ಸಂಜೆ 6-30 ಗಂಟೆ ಸಮಯದಲ್ಲಿ ಗಸ್ತಿನಲ್ಲಿದ್ದಾಗ ಬಾಗೇಪಲ್ಲಿ ತಾಲ್ಲೂಕು ಗೂಳೂರು ಹೋಬಳಿ ನಲ್ಲಪ್ಪರೆಡ್ಡಿಪಲ್ಲಿ ಗ್ರಾಮದಲ್ಲಿ  ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ಕೊಡುವುದಾಗಿ ಕೂಗುತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ನಾನು ಮತ್ತು ನಮ್ಮ ಠಾಣೆಯ ಸಿಬ್ಬಂದಿ ಸಿಹೆಚ್ಸಿ-205  ರಮೇಶ, ಹೆಚ್.ಸಿ. 71 ಸುಬ್ರಮಣಿ ಮತ್ತು ಪಿಸಿ-535  ಶ್ರೀನಿವಾಸ ರವರೊಂದಿಗೆ  ಸರ್ಕಾರಿ ಜೀಫ್ ಸಂಖ್ಯೆ ಕೆಎ-40,ಜಿ-270 ಜೀಫ್ ನಲ್ಲಿ ಹೋಗಿ ಬಾಗೇಪಲ್ಲಿ ಪುರದ ಗೂಳೂರು ವೃತ್ತದ ಬಳಿ ಇದ್ದ ಪಂಚಾಯ್ತಿದಾರರನ್ನು ಬರಮಾಡಿಕೊಂಡು  ಅವರಿಗೆ ಮಾಹಿತಿಯನ್ನು ತಿಳಿಸಿ ದಾಳಿ ಮಾಡಲು ಪಂಚರಾಗಿ ಬಂದು ಪಂಚನಾಮೆಗೆ ಸಹಕರಿಸಲು ಕೋರಿದ್ದರ ಮೇರೆಗೆ ಅವರುಗಳು ಒಪ್ಪಿಕೊಂಡಿದ್ದು, ಅದರಂತೆ ನಾವು ಮತ್ತು ಪಂಚಾಯ್ತಿದಾರರು ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಒಬ್ಬ ಆಸಾಮಿಯು  ಸಾರ್ವಜನಿಕರಿಗೆ  ವಿವಿಧ ಅಂಕಿಗಳಿಗೆ  ವಿವಿಧ ಮೊತ್ತ ಬರೆದುಕೊಡುವುದು ಮತ್ತು ಸಾರ್ವಜನಿಕರನ್ನು ಕೂಗಿ ಒಂದು ರೂಗೆ 70 ರೂ ಕೊಡುವುದಾಗಿ  ಕೂಗುತ್ತ ಮಟ್ಕಾ ಚೀಟಿಗಳನ್ನು ಬರೆಯುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ  ವಶಕ್ಕೆ ಪಡೆದು ಆತನ ಬಳಿ ಇದ್ದ  ವಿವಿಧ ನಂಬರ್ಗಳಿಗೆ ವಿವಿಧ ಮೊತ್ತ ಬರೆದಿರುವ  ವಿವಿಧ ಅಂಕಿಗಳ 1 ಮಟ್ಕಾ ಚೀಟಿ,  ಒಂದು ಬಾಲ್ ಪೆನ್ ಹಾಗೂ ಆತನ ಬಳಿ ಇದ್ದ  1050/- ರೂಗಳನ್ನು ವಶಕ್ಕೆ ಪಡೆದು ಆತನ ಹೆಸರು ಮತ್ತು  ವಿಳಾಸವನ್ನು ಕೇಳಲಾಗಿ ಕೃಷ್ಣಪ್ಪ ಬಿನ್ ವೆಂಕಟರಾಯಪ್ಪ, 45 ವರ್ಷ, ನಾಯಕರು, ಜಿರಾಯ್ತಿ ವಾಸ:ನಲ್ಲಪ್ಪರೆಡ್ಡಿಪಲ್ಲಿ ಗ್ರಾಮ ಗೂಳೂರು ಹೋಬಳಿ ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು ಸದರಿ ಆಸಾಮಿಯನ್ನು ವಶಕ್ಕೆ ಪಡೆದು ಸದರಿ ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 7-40 ಗಂಟೆಗೆ  ಠಾಣೆಗೆ ಹಾಜರಾಗಿ ಮುಂದಿನ ಕ್ರಮದ ಬಗ್ಗೆ ಠಾಣಾಧಿಕಾರಿಗಳಿಗೆ ನೀಡಿದ ವರದಿಯನ್ನು ಪಡೆದು ಠಾಣೆಯ ಎನ್.ಸಿ.ಆರ್ ಸಂಖ್ಯೆ: 284/2019 ರಂತೆ ಪ್ರಕರಣ ದಾಖಲಿಸಿರುತ್ತೆ. ಅಸಂಜ್ಞೆಯ ಪ್ರಕರಣ ದಾಖಲಿಸಿಕೊಂಡ ಕಾರಣ ಮೇಲ್ಕಂಡ ಆರೋಪಿತನ ವಿರುದ್ದ  ಸಂಜ್ಞೆಯ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈಗೊಳ್ಳಲು ಅನುಮತಿ ನೀಡಲು ತಮ್ಮಲ್ಲಿ ಕೋರಿ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿರುತ್ತೆ.ದಿನಾಂಕ:06.10.2019 ರಂದು ಮದ್ಯಾಹ್ನ 4.00 ಗಂಟೆಗೆ ನ್ಯಾಯಾಲಯದ ಪಿಸಿ 235 ರವರು ನ್ಯಾಯಾಲಯದ ಅನುಮತಿಯನ್ನು ಪಡೆದು ಠಾಣೆಗೆ ತಂದು ಹಾಜರುಪಡಿಸಿದ ವರಧಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 285/2019 ಕಲಂ.279-337-304(ಎ) ಐ.ಪಿ.ಸಿ:-

     ದಿನಾಂಕ:-07/10/2019 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:06/10/2019 ರಂದು ಬೆಳಿಗ್ಗೆತನ್ನ ಅಣ್ಣನ ಮಗ  ಲೊಕೇಶ ಮತ್ತು ಅವರ ಹೆಂಡತಿ ಶ್ರೀಮತಿ ಪವಿತ್ರಾರವರು ಅವರ ಬಾಬತ್ತು ಕೆಎ.40.ಯು.3830 ನೊಂದಣೆ ಸಂಖ್ಯೆಯ ಟಿ.ವಿ.ಎಸ್. ಎಕ್ಸ್ ಎಲ್ ಹೆವಿಡ್ಯೂಟಿ ದ್ವಿಚಕ್ರವಾಹನದಲ್ಲಿ  ತಮ್ಮ ಗ್ರಾಮದಲ್ಲಿ ಕುಳಿತು ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಲೊಕೇಶರವರು ಸವಾರಿ ಮಾಡಿಕೊಂಡು ಬಂದರು  ಸಂಜೆ ಸುಮಾರು  4.15 ಗಂಟೆಗೆ   ತಾನು ತಮ್ಮ ಗ್ರಾಮದಲ್ಲಿದ್ದಾಗ  ಚಿಕ್ಕಬಳ್ಳಾಪುರ ತಾಲ್ಲೂಕು ಆವಲಗುರ್ಕಿ ಗ್ರಾಮದ ಬಳಿ  ದ್ವಿಚಕ್ರವಾಹನದ ಅಪಘಾತದಲ್ಲಿ ಲೊಕೇಶ ಮರಣ ಹೊಂದಿದ್ದು ಪವಿತ್ರಾ ರವರಿಗೆ ರಕ್ತಗಾಯಗಳಾಗಿದ್ದು ಹೆಣವನ್ನು ಮತ್ತು ಗಾಯಾಳು ಪವಿತ್ರಾ ರವರನ್ನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿಕೊಂಡು ಹೋಗಿರುತ್ತಾರೆಂದು ಬಂದ ಪೋನ್ ಕರೆಯ ಮೇರೆಗೆ ತಾನು ತನ್ನ ಮಗ ಹರೀಶ ಮತ್ತು ಸಂಬಂದಿಕರು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಲಾಗಿ ಲೊಕೇಶ ಮರಣ ಹೊಂದಿದ್ದು ಅವರ ತಲೆಯ ಮೇಲೆ ತೀವ್ರತರವಾದ ರಕ್ತಗಾಯಗಳಾಗಿದ್ದು ಪವಿತ್ರಾರವರ ಮುಖದ ಮೇಲೆ ಮತ್ತು ಇತರೆ ಕಡೆ ದೇಹದ ಮೇಲೆ ರಕ್ತಗಾಯಗಳಾಗಿದ್ದವು  ಪವಿತ್ರಾರವರಿಗೆ ವಿಚಾರ ಮಾಡಲಾಗಿ ಚಿಕ್ಕಬಳ್ಳಾಪುರದಲ್ಲಿ ಕೆಲಸ ಮುಗಿಸಿಕೊಂಡು ತಮ್ಮ ಬಾಬತ್ತು ಕೆಎ.40.ಯು.3830 ನೊಂದಣೆ ಸಂಖ್ಯೆಯ ಟಿ.ವಿ.ಎಸ್. ಎಕ್ಸ್ ಎಲ್ ಹೆವಿಡ್ಯೂಟಿ ದ್ವಿಚಕ್ರವಾಹನದಲ್ಲಿ ತಾನು ತನ್ನ ಗಂಡ ಲೊಕೇಶರವರು ಕುಳಿತು ಚಿಕ್ಕಬಳ್ಳಾಪುರದಿಂದ ತನ್ನ ಗಂಡ  ದ್ವಿಚಕ್ರವಾಹನವನ್ನು ಸವಾರಿ ಮಾಡಿಕೊಂಡು  ಚಿಕ್ಕಬಳ್ಳಾಪುರದಿಂದ ಕೇತೇನಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಾ ಸಂಜೆ  ಸುಮಾರು 4.00 ಗಂಟೆಗೆ ಆವಲಗುಕರ್ಿ ಗ್ರಾಮದ ಸಕರ್ಾರಿ ಶಾಲೆಯ ಬಳಿ ಹೋದಾಗ  ಮಳೆ ಹನಿಗಳು ಬೀಳುತಿದ್ದರಿಂದ ದ್ವಿಚಕ್ರವಾಹನವನ್ನು ಅತಿವೇಗವಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ  ಎದುರುಗಡೆಯಿಂದ  ನಾಯಿ ಬಂದಿದ್ದರಿಂದ ಅದನ್ನು ತಪ್ಪಿಸಲು ದ್ವಿಚಕ್ರವಾಹನ  ಪಕ್ಕಕ್ಕೆ ತಿರುಗಿಸಿದಾಗ ದ್ವಿಚಕ್ರವಾಹನ ನನ್ನ ಗಂಡನ ಹತೋಟಿಗೆ ಬಾರದೆ ರಸ್ತೆಯ ಬದಿಯಿರುವ ಹಳದಲ್ಲಿ  ದ್ವಿಚಕ್ರವಾಹನ ಸಮೇತ ನಾವಿಬ್ಬರು ಬಿದ್ದು ಅಪಘಾತವಾಗಿ ದ್ವಿಚಕ್ರವಾಹನ ಜಖಂಗೊಂಡು ತನ್ನ ಗಂಡ ಲೊಕೇಶರವರ ತಲೆಗೆ ತೀವ್ರತರವಾದ ರಕ್ತಗಾಯವಾಗಿ ಸ್ಥಳದಲ್ಲೇ ಮರಣ ಹೊಂದಿದರು ತನ್ನ ಮುಖದ ಮೇಲೆ, ದೇಹದ ಮೇಲೆ ರಕ್ತಗಾಯಗಳಾದವೆಂದು ಹೇಳಿದರು. ಪವಿತ್ರಾರವರ ದೇಹದ ಮೇಲೆ ರಕ್ತಗಾಯಗಳಾಗಿರುತ್ತೆ, ಮೃತನ ಸಾವಿಗೆ ಆತನೇ ಕಾರಣನಾಗಿರುತ್ತಾನೆ ಮೃತನ ಹೆಣ ಚಿಕ್ಕಬಳ್ಳಾಪುರ  ಸರ್ಕಾರಿ  ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರುತ್ತೆ ತಾವು ಈ ಬಗ್ಗೆ  ಕಾನೂನು ಕ್ರಮ ಕೈಗೊಳ್ಳಲು ಕೋರುತ್ತೇ ತನ್ನ ಅಣ್ಣನ ಮಗ ಲೊಕೇಶ ರವರು ಮರಣ ಹೊಂದಿರುವ ಬಗ್ಗೆ   ಸಂಬಂದಿಕರಿಗೆ ತಿಳಿಸಿ ಈ ದಿನ ತಡವಾಗಿ ಪೊಲೀಸ್ ಠಾಣೆಯಲ್ಲಿ ದೂರಿನ ಮೇರೆಗೆ ಪ್ರ .ವ. ವರದಿ

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 271/2019 ಕಲಂ. 78(3) ಕೆ.ಪಿ. ಆಕ್ಟ್:-

     ದಿನಾಂಕ:05/10/2019 ರಂದು ಸಂಜೆ 5-10 ಗಂಟೆಗೆ ಚಿಕ್ಕಬಳ್ಳಾಪುರ DCB/CEN  ಪೊಲೀಸ್ ಠಾಣೆಯ .ಹೆಚ್ ಸಿ 198 ಮಂಜುನಾಥ ಮತ್ತು ಸಿ.ಪಿ.ಸಿ 365 ಮಲ್ಲಿಕಾರ್ಜನ ರವರು ಠಾಣೆಗೆ ಹಾಜರಾಗಿ ತಾವು ದಿ: 05/10/2019 ರಂದು ಶ್ರೀ  ಡಿ .ಹೆಚ್ ಮುನಿಕೃಷ್ಣ  ಪಿ.ಐ ರವರ  ಆದೇಶದಂತೆ  ಚಿಂತಾಮಣಿ ತಾಲ್ಲೂಕುನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆಗೆ ನೇಮಕಗೊಂಡು ಅದರಂತೆ ಚಿಂತಾಮಣಿ ನಗರದ ಆದರ್ಶ ಚಿತ್ರಮಂದಿರದ ಮುಂಭಾಗ ಗಸ್ತು ಮಾಡುತ್ತಿದ್ದಾಗ ಸಂಜೆ 4-30 ಗಂಟೆ ಸಮಯದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯಂತೆ ಆದರ್ಶ ಚಿತ್ರಮಂದಿರದ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜೂಜು ನಡೆಯುತ್ತಿರುವುದಾಗಿ ಮಾಹಿತಿ ಬಂದಿದ್ದು , ಅದರಂತೆ ಪಂಚರೊಂದಿಗೆ ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಿ ಮಟ್ಕಾ ಚೀಟಿ ಬರೆಯುತ್ತಿದ್ದ ಅ ಸಾಮಿಯಾದ  ರಾಜೇಂದ್ರ ಬಿನ್ ಕನ್ನಾ, 31 ವರ್ಷ, ಎಸ್.ಸಿ ಜನಾಂಗ, ಆಟೋ ಚಾಲಕ, ವಾರ್ಡ ನಂ 27 ಶಾಂತಿನಗರ , ಚಿಂತಾಮಣಿ  ಹಾಗೂ ಸಾರ್ವಜನಿಕರಿಂದ ಮಟ್ಕಾ ಬರೆಯಲು ಪಡೆದಿದ್ದ 1020 ರೂಗಳನ್ನು ಮತ್ತು ಮಟ್ಕಾ  ಚೀಟಿಯನ್ನು , ಒಂದು ಪೆನ್ನುನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದ ಅಸಾಮಿಯನ್ನು ಮತ್ತು ಮಾಲು ಮತ್ತು ಪಂಚನಾಮೆಯನ್ನು ಮುಂದಿನ ಕ್ರಮ ಜರುಗಿಸಲು ನೀಡಿದ ವರದಿಯನ್ನು ಪಡೆದು, ಇದು ಅಂಜ್ಞೇಯ ಅಪರಾಧ ವಾಗಿರುವುದರಿಂದ ಘನ ನ್ಯಾಯಾಲಯದ ಅನುಮತಿಯನ್ನು ಪಡೆಯಲು ಠಾಣಾ NCR NO 231/2019 ರಂತೆ ದಾಖಲಿಸಿ ಘನ ನ್ಯಾಯಾಲಯದ ಅನುಮತಿಯನ್ನು ಪಡೆದ ನಂತರ ಪ್ರ ವ ವರದಿಯನ್ನು ದಾಖಲಿಸಿರುತ್ತೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 421/2019 ಕಲಂ. 15(ಎ), 32(3) ಕೆ.ಇ. ಆಕ್ಟ್:-

     ದಿನಾಂಕ 06/10/2019 ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಎನ್.ಮೋಹನ್  ಆದ ನಾನು    ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ದಿನಾಂಕ:06/10/19 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಗಂಟೆಯ ಸಮಯದಲ್ಲಿ  ನನಗೆ  ಗೌರಿಬಿದನೂರು ತಾಲ್ಲೂಕು ಕಸಬಾ ಹೋಬಳಿ, ಚಂದನದೂರು ಗ್ರಾಮದಲ್ಲಿ ಯಾರೋ ತನ್ನ  ಅಂಗಡಿ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಪಂಚಾಯ್ತಿದಾರರನ್ನು ಕರೆಸಿಕೊಂಡು, ಅವರಿಗೆ ವಿಷಯ ತಿಳಿಸಿ, ಪೊಲೀಸರಿಗೆ ಸಹಕರಿಸುವಂತೆ ಕೇಳಲಾಗಿ ಅವರು ಒಪ್ಪಿಕೊಂಡ ನಂತರ ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ.179 ಶಿವಶೇಖರ್ ಹಾಗು ಪಿ.ಸಿ.105 ನವೀನ್ ಕುಮಾರ್ ರವರೊಂದಿಗೆ  ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ  ಚಂದನದೂರು ಗ್ರಾಮಕ್ಕೆ ಹೋಗಿ  ಮಾಹಿತಿ ಇದ್ದ ಸ್ಥಳಕ್ಕೆ   ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಒಂದು ಅಂಗಡಿಯ  ಮುಂದೆ ಖಾಲಿ ಜಾಗದಲ್ಲಿ ಯಾರೋ  ಒಬ್ಬ ವ್ಯಕ್ತಿ  ತನ್ನ  ಅಂಗಡಿಯ ಮುಂದೆ ಚೀಲವನ್ನು ಹಿಡಿದುಕೊಂಡು, ನಿಂತಿದ್ದು, ಅಂಗಡಿಯ ಮುಂದೆ ಕುಳಿತಿದ್ದ 3 ಜನರಿಗೆ  ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಿಂದ ಮದ್ಯದ ಪಾಕೆಟ್ಗಳನ್ನು ತೆಗೆದುಕೊಡುತ್ತಿದ್ದು,  ಸದರಿ ವ್ಯಕ್ತಿಗಳು ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ  ವರು ಓಡಿಹೋಗಿದ್ದು, ಚೀಲ ಹಿಡಿದು ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ವ್ಯಕ್ತಿಯನ್ನು ಸುತ್ತುವರೆದು ಹಿಡಿದುಕೊಂಡು, ಆತನ ಹೆಸರು ವಿಳಾಸ ಕೇಳಲಾಗಿ, ತನ್ನ ಹೆಸರು ಸುಬ್ರಮಣಿ ಬಿನ್ ಲೇಟ್ ನಾರಾಯಣಸ್ವಾಮಿ, 60 ವರ್ಷ, ಭಜಂತ್ರಿ ಜನಾಂಗ, ಚಂದನದೂರು ಗ್ರಾಮ, ಗೌರೀಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು, ಆತನ ಕೈಯಲ್ಲಿದ್ದ  ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ  90 ML. ಸಾಮರ್ಥ್ಯದ  12 HAYWARDS CHEERS WHISKY ಯ ಮಧ್ಯದ ಟೆಟ್ರಾ ಪಾಕೆಟ್ ಗಳು  ಇದ್ದವು.  ಇವುಗಳ ಒಟ್ಟು  ಬೆಲೆ 455/- ರೂ.ಗಳಾಗಿದ್ದು, ಒಟ್ಟು ಸಾಮರ್ಥ್ಯ 1 ಲೀ. 350 ಎಂ.ಎಲ್. ಆಗಿರುತ್ತೆ. ಸ್ಥಳದಲ್ಲಿ 03  ಖಾಲಿ ಪೇಪರ್ ಗ್ಲಾಸ್ ಗಳು,  3 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು.  ಸದರಿ ಆಸಾಮಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ  ಸಂಜೆ 4-30 ರಿಂದ 5-00  ಗಂಟೆಯವರೆಗೆ   ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು  ಹಾಗು  ಸ್ಥಳದಲ್ಲಿ ದೊರೆತ ಮಾಲುಗಳನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 5-45 ಗಂಟೆಗೆ  ವಾಪಸ್ಸು ಬಂದು,   ಆರೋಪಿ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಠಾಣಾಧಿಕಾರಿಗೆ ಸೂಚಿಸಿರುತ್ತೇನೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 338/2019 ಕಲಂ. 15(ಎ), 32(3) ಕೆ.ಇ. ಆಕ್ಟ್:-

     ದಿನಾಂಕ: 06-10-2019 ರಂದು ಸಂಜೆ 4-30 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಕುಂದಲಗುರ್ಕಿ ಗ್ರಾಮದಲ್ಲಿ ಚಾಂದ್ ಪಾಷಾ ಬಿನ್ ಲೇಟ್ ಚೋಟು ಸಾಬಿ ಎಂಬುವರ ಚಿಲ್ಲರೆ ಅಂಗಡಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-11 ರವರೊಂದಿಗೆ ಕೆಎ-40-ಜಿ-357 ಸರ್ಕಾರಿ ಜೀಪಿನಲ್ಲಿ ಕುಂದಲಗುರ್ಕಿ ಗ್ರಾಮಕ್ಕೆ ಸಂಜೆ 4.45 ಗಂಟೆಗೆ ಬೇಟಿ ನೀಡಿ ಸಿಪಿಸಿ-11 ರವರ ಮುಖಾಂತರ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಚಾಂದ್ ಪಾಷಾ ಬಿನ್ ಲೇಟ್ ಚೋಟು ಸಾಬಿ ರವರ ಅಂಗಡಿ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಕೆ.ಎನ್. ಚಾಂದ್ ಪಾಷಾ ಬಿನ್ ಲೇಟ್ ಚೋಟು ಸಾಬಿ, 42 ವರ್ಷ, ಮುಸ್ಲಿಂ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ: ಕುಂದಲಗುರ್ಕಿ  ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ 90 Ml ನ Haywards Cheers Whisky 11 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 333.00 ರೂಗಳಾಗಿರುತ್ತೆ (ಮುನ್ನೂರ ಮುವತ್ತ ಮೂರು ರೂಪಾಯಿಗಳು ಮಾತ್ರ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಎರಡು ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Cheers Whisky 90 Ml ನ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಸಂಜೆ 5-00 ಗಂಟೆಯಿಂದ 5-45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಸಂಜೆ 6-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 338/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 339/2019 ಕಲಂ. 279-304(ಎ) ಐ.ಪಿ.ಸಿ:-

     ದಿನಾಂಕ 07/10/2019 ರಂದು ಬೆಳಿಗ್ಗೆ 7-00 ಗಂಟೆಗೆ ಪಿರ್ಯಾದಿದಾರರಾದ ಮಹಬೂಬ್ ಪಾಷ ಬಿನ್ ಸೈಯದ್ ಅನ್ವರ್ ಸಾಬ್, ಸುಮಾರು 42 ವರ್ಷ,ಮುಸ್ಲಿಂ ಜನಾಂಗ,ವ್ಯಾಪಾರ, ವಾಸ: ವಾರ್ಡ ನಂ 20, ಮೆಹಬೂಬ್ ನಗರ, ಶಿಡ್ಲಘಟ್ಟ ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ: 07-10-2019 ರಂದು ಬೆಳಿಗ್ಗೆ 5-45 ಗಂಟೆಯಲ್ಲಿ ಶಿಡ್ಲಘಟ್ಟದಿಂದ ತನ್ನ ಸ್ವಂತ ಕೆಲಸದ ನಿಮಿತ್ತ ಚಿಂತಾಮಣಿ ನಗರದಲ್ಲಿರುವ ತನ್ನ ಅಣ್ಣ ಮಹ್ಮದ್ ಮೂಜೀಬ್ ರವರ ಮನೆಗೆ ಹೋಗಿ ಬರಲು ತನ್ನ ದ್ವಿಚಕ್ರವಾಹನದಲ್ಲಿ ಬೆಳಿಗ್ಗೆ 6-00 ಗಂಟೆಯಲ್ಲಿ ವೈ-ಹುಣಸೇನಹಳ್ಳಿ ಬಳಿ ಇರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾಗ ಅದೇ ಸಮಯಕ್ಕೆ ಕೆಎ-40 ಎಕ್ಸ್-5745 ಹೊಂಡಾ ಆಕ್ಟೀವಾ ದ್ವಿಚಕ್ರವಾಹನದಲ್ಲಿ ತನಗೆ ಪರಿಚವಿರುವ ಶಿಡ್ಲಘಟ್ಟ ಟೌನ್ ವಾಸಿ ವಕೀಲರಾದ ನೌಶದ್ಆಲಿ ರವರು ಬಂದು ತನ್ನನ್ನು ಮಾತನಾಡಿಸಿಕೊಂಡು ಬಂಕ್ ನಲ್ಲಿ  ಪೆಟ್ರೋಲ್ ಹಾಕಿಸಿಕೊಂಡು ಪುಂಗನೂರು ಬಳಿ ಇರುವ ಉಪ್ಪರಪಲ್ಲಿಗೆ ಹೋಗುವುದಾಗಿ ಹೇಳಿ ತಾನು ಅಲ್ಲಿಯೇ ಇದ್ದಾಗ ನೌಶದ್ಆಲಿ ರವರು ದ್ವಿಚಕ್ರವಾಹನದಲ್ಲಿ   ಪೆಟ್ರೋಲ್ ಬಂಕ್ ನಿಂದ ಸುಮಾರು 50 ಮೀಟರ್ ದೂರದ ಶಿಡ್ಲಘಟ್ಟ-ಚಿಂತಾಮಣಿ ರಸ್ತೆಯ ಎಡಬದಿಯಲ್ಲಿಯೇ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಚಿಂತಾಮಣಿ ಕಡೆಯಿಂದ ಕೆಎ-45-3918 ಟಾಟಾ ಏಸ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿಡ್ಲಘಟ್ಟ ಕಡೆಯಿಂದ ರಸ್ತೆಯ ಎಡಬದಿಯಲ್ಲಿಯೇ ನೌಶದ್ ಆಲಿ ರವರು ಹೋಗುತ್ತಿದ್ದ ಕೆಎ-40 ಎಕ್ಸ್-5745 ಹೊಂಡಾ ಆಕ್ಟೀವ ದ್ವಿಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ಎರಡು ವಾಹನಗಳು ರಸ್ತೆಯ ಪಕ್ಕದಲ್ಲಿರುವ ಇಳಿಜಾರಿನ ನೀಲಗಿರಿ ತೋಪಿನಲ್ಲಿ ಪಲ್ಟಿ ಹೊಡೆದು ಬಿದ್ದುಹೋಗಿ ಎರಡು ವಾಹನಗಳು  ಜಖಂಗೊಂಡಿದ್ದು ಆಗ ತಾನು ಮತ್ತು ಅಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಬಿನ್ ರಾಮಪ್ಪ ರವರು ಸೇರಿ ತಕ್ಷಣ ಹೋಗಿ ನೋಡಲಾಗಿ ನೌಶದ್ ಆಲಿ ರಸ್ತೆಯ ಪಕ್ಕದ ನೀಲಗಿರಿ ತೋಪಿನಲ್ಲಿ ಬಿದ್ದುಹೋಗಿದ್ದು ನೌಶದ್ಆಲಿ ರವರಿಗೆ ಹಣೆಯ ಮೇಲೆ ರಕ್ತಗಾಯ, ಮೂಗಿನಲ್ಲಿ ಮತ್ತು ಎಡ ಕಿವಿಯಲ್ಲಿ  ರಕ್ತ ಬಂದಿದ್ದು, ಎಡ ಮೊಣಕಾಲಿನ ಬಳಿ ರಕ್ತಗಾಯವಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದನು ಟಾಟಾ ಏಸ್ ಚಾಲಕ ಸ್ಥಳದಿಂದ ಪರಾರಿಯಾಗಿರುತ್ತಾನೆ. ಸದರಿ ವಿಚಾರವನ್ನು ಆತನ ಹೆಂಡತಿ ತಾಜೂನ್ನಿಸಾ ಮತ್ತು ಅಳಿಯನಾದ ಶಾಬೂದ್ದೀನ್ ರವರಿಗೆ ದೂರವಾಣಿ ಕರೆ ಮಾಡಿ ವಿಚಾರವನ್ನು ತಿಳಿಸಿರುತ್ತೇನೆ. ಕೆಎ-45-3918 ಟಾಟಾ ಏಸ್ ವಾಹನವನ್ನು ಅದರ ಚಾಲಕ ಚಿಂತಾಮಣಿ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಶಿಡ್ಲಘಟ್ಟ ಕಡೆಯಿಂದ ರಸ್ತೆಯ ಎಡಬದಿಯಲ್ಲಿಯೇ ಬರುತ್ತಿದ್ದು ನೌಶದ್ಆಲಿ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ನೌಶದ್ಆಲಿ ರವರಿಗೆ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಪಘಾತವುಂಟು ಮಾಡಿದ ಕೆಎ-45-3918 ಟಾಟಾ ಏಸ್ ಚಾಲಕನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೊಟ್ಟ ದೂರು.