ದಿನಾಂಕ :07/09/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.51/2020 ಕಲಂ. 323,324,341,504,506 ರೆ/ವಿ 34 ಐ.ಪಿ.ಸಿ:-

            ದಿನಾಂಕ-06/09/2020 ರಂದು ರಾತ್ರಿ 07:30 ಗಂಟೆಗೆ ಶ್ರೀ ಪಿರ್ಯಾದಿದಾರರಾದ ಶ್ರೀ ಆರ್ ಪ್ರಕಾಶ್ ಬಿನ್ ಲೇಟ್ ರಾಮಕೃಷ್ಣಪ್ಪ 43ವರ್ಷ,ಕುರುಬ ಜನಾಂಗ,ವಾರ್ಡ್ ನಂ-08 ಟಿ,ಜಿ ಟ್ಯಾಂಕ್ ರೋಡ್ ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೆನೆಂದರೆ ತನ್ನ ತಂದೆ-ತಾಯಿಗೆ ನಾವು ಆರು ಜನ ಮಕ್ಕಳಿದ್ದು ತನಗೆ ಮದುವೆಯಾಗಿ 16 ವರ್ಷ ಆಗಿದ್ದು ತನಗೆ ಇಬ್ಬರು ಗಂಡು ಮಕ್ಕಳಿದ್ದು ಮನೆಯಲ್ಲಿ ತನ್ನ ತಾಯಿ ಹಾಗೂ ತಮ್ಮಂದಿರು,ತಂಗಿಯರು ತನ್ನ ಹೆಂಡತಿಗೆ ಕಿರುಕುಳ ಕೊಡುತ್ತಿದ್ದರು ಇದರಿಂದ ಭಿನ್ನಾಭಿಪ್ರಾಯ ಮತ್ತು ಮನಸ್ತಾಪ ಉಂಟಾಗಿ ತಾನು ತನ್ನ ಹೆಂಡತಿ ಮಕ್ಕಳು ಸಮೇತ ಪ್ರತ್ಯೇಕ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದು ಆದರೇ ಕಳೆದ ಒಂದುವರೆ ವರ್ಷದಿಂದ ತನ್ನ ತಾಯಿ ತಮ್ಮಂದಿರು ಹಾಗೂ ತಂಗಿಯರು ತನ್ನ ಗಮನಕ್ಕೆ ಬರದ ಹಾಗೇ ತಮ್ಮಕುಟುಂಬದ ಒಟ್ಟು ಆಸ್ತಿಯಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕೆ ತಕರಾರು ಇದ್ದು ದಿನಾಂಕ-01/09/2020 ರಂದು ರಾತ್ರಿ 10:30 ರ ಸಮಯದಲ್ಲಿ ಚಿಕ್ಕಬಳ್ಳಾಪುರನಗರದ  ಎಂ,ಜಿ ರಸ್ತೆಯ ಮುನಿಸಿಫಲ್ ಕಾಲೇಜ್ ಕಡೆಯಿಂದ ಎಂ,ಜಿ ರಸ್ತೆಯ ದರ್ಗಾ ಬಳಿ ಬಲಕ್ಕೆ ತಿರುಗಿ ತನ್ನ ಮನೆ ಇರುವು ಟಿ,ಜಿ ಟ್ಯಾಂಕ್ ರಸ್ತೆಯಲ್ಲಿ ತಾನು ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡ ಬಂದ ತನ್ನ ತಾಯಿ ಗಂಗಮ್ಮ ತಮ್ಮಂದಿರಾದ ಆರ್,ಸುರೇಶ್ ಮತ್ತು ಆರ್,ರವಿ ರವರು ಏಕಾಏಕಿ ಧಬ ಧಬ ಎಂದು ಕೈಯಲ್ಲಿ ಕಲ್ಲುಗಳಿಂದ ಹಾಗೂ ದೊಣ್ಣೆಯಿಂದ ಹೊಡೆದು ನಂತರ ತನ್ನ ಎದೆ,ಕತ್ತು ಬೆನ್ನಿಗೂ ಗುದ್ದಿ ಗುದ್ದಿ ಹೊಡೆದು ಕೆಳಗೆ ಬೀಳಿಸಿದರು ತನಗೆ ಮಧುಮೇಹ ಹಾಗೂ ಬಿ,ಪಿ ಇರುವ ಕಾರಣ ಉದ್ವೇಗದಿಂದ ತಾನು ಮಾಲಾ ಮಾಲಾ ಎಂದು ಜೋರಾಗಿ ಕಿರುಚಿಕೊಂಡು ರಸ್ತೆಯಲ್ಲಿ ಕುಸಿದು ಬಿಟ್ಟು ತಾನು ಏನಾಯಿತು ಎಂದು ನೋಡುವಷ್ಟರಲ್ಲಿ ತನ್ನ ಹೆಂಡತಿಗೆ ಮತ್ತು ಮಕ್ಕಳಿಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ತನ್ನನ್ನು ಉಪಚರಿಸುತ್ತಿದ್ದಾಗ ಮೇಲ್ಕಂಡ ಮೂವರು ಮತ್ತೇ ಬಂದು ತನ್ನ ಹೆಂಡತಿಯನ್ನು ಸಹ ತಳ್ಳಾಡಿ ಹೊಡೆದಿದ್ದು ಘಟನೆ ನಡೆದ ರಾತ್ರಿ 01:14 ಸಮಯದಲ್ಲಿ ನಗರದ ಠಾಣೆಗೆ ಬೇಟಿ ನೀಡಿ ದೂರು ಕೊಡಲು ಹೋಗಿದ್ದು ತನ್ನ ಅಶ್ವಸ್ಥ ಸ್ಥಿತಿಯನ್ನು ನೋಡಿದ ಪೊಲೀಸರು ಮಾನವೀಯತೆಯಿಂದ ತನಗೆ ಸಮಾಧಾನ ಮಾಡಿ ಮೊದಲು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಾವು ಅಲ್ಲೇ ಬಂದು ದೂರು ಪಡೆಯುತ್ತೇವೆಂದು ತಿಳಿಸಿದರು ದಿನಾಂಕ-02/09/2020 ರಂದು ಬೆಳಿಗ್ಗೆ ನಗರದ  ಜೀವನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಆದರೆ ಬೆನ್ನಿಗೆ ಜೋರಾಗಿ ಬಿದ್ದಿದ್ದ ಕಾರಣ ಬೆನ್ನು ನೋವು ಹಾಗೂ ಭುಜ ಮತ್ತು ಮುಖ ಊದಿಕೊಂಡು ತುಂಬಾ ನೋವು ಹೆಚ್ಚಾದ ಕಾರಣ ಹಾಲೋಪತಿಗಿಂತ ಆರ್ಯುವೇಧ ಚಿಕಿತ್ಸೆಪಡೆದುಕೊಂಡು ಹಾಗೂ ತನಗೆ ಇಲ್ಲಿ ಹಾರೈಕೆ ಮಾಡಲು ಯಾರು ಇಲ್ಲದ ಕಾರಣ ತನ್ನ ಹೆಂಡತಿಯ ತವರು ಮನೆಯಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣಕ್ಕೆ ಶಿಪ್ಟಾಗಿ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೇನೆ ಈ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದ ಕಾರಣ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ತನಗೆ ತನ್ನ ತಾಯಿ ಗಂಗಮ್ಮ ತಮ್ಮಂದಿರಾದ ಆರ್,ಸುರೇಶ್,ಆರ್ ರವಿ ರವರು ತನ್ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ಮಾಡಿರುತ್ತಾರೆ ಇದರಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದ್ದು ಸದರಿ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದರ ಮೇರೆಗೆ ಈ.ಪ್ರ,ವ,ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.323/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:06-09-2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಶ್ರೀಮತಿ ತ್ರಿವೇಣಿ ಕೋಂ ನರಸಿಂಹಪ್ಪರವರ ಹೇಳಿಕೆಯನ್ನು ಪಡೆದು ಸಂಜೆ 5-00 ಗಂಟೆಗೆ ಠಾಣೆಗೆ ವಾಪಸ್ಸಾಗಿ ಪ್ರಕರಣ ದಾಖಲಿಸಿದ್ದರ ಸಾರಾಂಶವೇನೆಂದರೆ, ತನ್ನ ತಂದೆಯವರಿಗೂ ಹಾಗೂ ತಮ್ಮ ಗ್ರಾಮದ ಜಯರಾಮಪ್ಪ ಬಿನ್ ಲೇಟ್ ನಾರಾಯಣಸ್ವಾಮಿರವರಿಗೂ ಜಮೀನಿನ ವಿಚಾರದಲ್ಲಿ ತಕರಾರುಗಳಿದ್ದು, ಈ ವಿಚಾರದಲ್ಲಿ ಜಯರಾಮಪ್ಪರವರು ತನ್ನ ತಂದೆ ಹಾಗೂ ತಮ್ಮ ಕಡೆಯವರ ಮೇಲೆ ಚಿಂತಾಮಣಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ವಿಚಾರಣೆಯಲ್ಲಿರುತ್ತೆ. ದಿನಾಂಕ:04-09-2020 ರಂದು ರಾತ್ರಿ 9-00 ಗಂಟೆಯ ಸಮಯದಲ್ಲಿ ತಾನು ತಮ್ಮ ಮನೆಯ ಪಕ್ಕದಲ್ಲಿರುವ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಮೇಲ್ಕಂಡ ಜಮೀನಿನ ತಕರಾರಿನ ಹಿನ್ನೆಲೆಯಲ್ಲಿ ತಮ್ಮ ಗ್ರಾಮದ ಜಯರಾಮಪ್ಪ ಬಿನ್ ನಾರಾಯಣಪ್ಪ, ರಾಜೇಂದ್ರ ಬಿನ್ ಜಯರಾಮಪ್ಪ, ಮಂಜುಳಾ ಬಿನ್ ಜಯರಾಮಪ್ಪ ಮತ್ತು ಸುಶೀಲಮ್ಮ ಕೋಂ ಜಯರಾಮಪ್ಪರವರು ತಮ್ಮ ಅಂಗಡಿಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಗಳಿಂದ ತನ್ನ ಮೈಮೇಲೆ ಹೊಡೆದು ನೋವುಂಟು ಮಾಡಿ, ದೊಣ್ಣೆಯಿಂದ ಮೈಕೈ ಮೇಲೆ ಹೊಡೆದು ನೋವುಂಟು ಮಾಡಿ, ಆ ಪೈಕಿ ಸುಶೀಲಮ್ಮರವರು ಸೌಟಿನಲ್ಲಿರುವ ಕಾದಿರುವ ಎಣ್ಣೆಯನ್ನು ತನ್ನ ಬಲಗೈನ ಉಂಗುರ ಬೆರಳು ಮತ್ತು ಮಧ್ಯ ಬೆರಳುಗಳಿಗೆ ಹಾಕಿದಾಗ ಸುಟ್ಟ ಗಾಯವಾಗಿರುತ್ತೆ. ಸದರಿ ಆರೋಪಿತರು ತನ್ನನ್ನು ಕುರಿತು ಈ ಹೊತ್ತು ನೀನು ತಪ್ಪಿಸಿಕೊಂಡಿದ್ದೀಯಾ, ನಿನ್ನನ್ನು ಮುಗಿಸದೇ ಬಿಡುವುದಿಲ್ಲವೆಂದು ಪ್ರಾಣಬೆದರಿಕೆಯನ್ನು ಹಾಕಿರುತ್ತಾರೆ. ಈ ಗಲಾಟೆಯ ವಿಚಾರದಲ್ಲಿ ಗ್ರಾಮದ ಹಿರಿಯರು ನ್ಯಾಯ-ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು, ಇದುವರೆಗೂ ಆರೋಪಿತರು ನ್ಯಾಯ-ಪಂಚಾಯ್ತಿಗೆ ಬಾರದ ಕಾರಣ ಹಾಗೂ ತನ್ನ ಕೈಬೆರಳುಗಳಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ಈ ದಿನ ತಡವಾಗಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ತನ್ನ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.324/2020 ಕಲಂ. 323,324,504,506 ಐ.ಪಿ.ಸಿ:-

          ದಿನಾಂಕ 06/09/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ರಾಮಾಂಜಿನಪ್ಪ ಬಿನ್ ನಾರಾಯಣಸ್ವಾಮಿ, 42 ವರ್ಷ, ವಕ್ಕಲಿಗರು, ಜಿರಾಯ್ತಿ, ಕತ್ತರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ವೈದ್ಯಾಧಿಕಾರಿಗಳ ಸಮಕ್ಷಮ ನೀಡಿದ ಹೇಳಿಕೆಯನ್ನು ಪಡೆದು ಸಂಜೆ 7.45 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು ಗಾಯಾಳುಗವಿನ ಹೇಳಿಕೆಯ ಸಾರಾಂಶವೇನೆಂದರೆ, ತಮ್ಮ ಗ್ರಾಮದ ಮಹಮದ್ ಖಾನ್ ಬಿನ್ ಜರೀನಾ ಎಂಬುವನು ಇತ್ತೀಚೆಗೆ ತಮ್ಮ ಗ್ರಾಮದಲ್ಲಿ ಮಟಕಾ ಆಡಿಸುತ್ತಿದ್ದು, ದಿನಾಂಕ 05/02/2020 ರಂದು ಮದ್ಯಾಹ್ನ 1.30 ಗಂಟೆಗೆ ತಾನು ಮಹಮದ್ ಖಾನ್ ರವರಿಗೆ ಮಟ್ಕಾ ಆಡಿಸಬಾರದೆಂದು ಹೇಳಿರುತ್ತೇನೆ. ಈ ದಿನ ದಿನಾಂಕ 06/09/2020 ರಂದು ಸಂಜೆ 5.00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದ ಬಸ್ಸು ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಮೇಲ್ಕಂಡ ಮಹಮದ್ ಖಾನ್ ಎಂಬುವನು ತನ್ನ ಮೇಲೆ ಜಗಳ ತೆಗೆದು, ಅವಾಚ್ಯ ಶಬ್ದಗಳಿಂದ ಬೈದು, ಕಲ್ಲಿನಿಂದ ತನ್ನ ಮುಖದ ಮೇಲೆ ಗುದ್ದಿದ್ದರಿಂದ ತನ್ನ ಮುಖಕ್ಕೆ ಗಾಯಗಳಾಗಿ ಕೆಳಭಾಗದ ಹಲ್ಲುಗಳಿಗೆ ಪೆಟ್ಟಾಗಿರುತ್ತೆ. ನಂತರ ಆತನು ಕೈಗಳಿಂದ ತನ್ನ ಮೈ-ಕೈ ಮೇಲೆ ಹಲ್ಲೆ ಮಾಡಿ ಕಾಲಿನಿಂದ ತನ್ನ ಹೊಟ್ಟೆಯ ಮೇಲೆ ಒದ್ದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾನೆ. ಆದ್ದರಿಂದ ಮೇಲ್ಕಂಡ ಮಹಮದ್ ಖಾನ್ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿರುತ್ತಾರೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.325/2020 ಕಲಂ. 279,337 ಐ.ಪಿ.ಸಿ:-

          ದಿನಾಂಕ: 06/09/2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಶ್ರೀಮತಿ ಲಕ್ಷ್ಮಮ್ಮ ಕೋಂ ಲೇಟ್ ಪಿ.ನಾರಾಯಣಪ್ಪ, 65 ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ಕುರುಬೂರು ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ರಾತ್ರಿ 11.00 ಗಂಟೆಗೆ ಠಾಣೆಗೆ ವಾಪಸ್ಸಾಗಿ ದಾಖಲಿಸಿಕೊಂಡ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 06/09/2020 ರಂದು ಸಂಜೆ 7.30 ಗಂಟೆ ಸಮಯದಲ್ಲಿ ತಾನು ಅಕ್ಕಿಯನ್ನು ಮಿಷಿನ್ ಗೆ ಹಾಕಿಸಿಕೊಂಡು ಬರಲು ತಮ್ಮ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ರಸ್ತೆಯ ಎಡಭಾಗದ ಪುಟ್ ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಗಾಜಲಹಳ್ಳಿ ಕಡೆಯಿಂದ ಬಂದ KA-04 EL-9867 ನೊಂದಣಿ ಸಂಖ್ಯೆಯ ದ್ವಿಚಕ್ರ ವಾಹನದ ಸವಾರ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು, ತಾನು ಕೆಳಗೆ ಬಿದ್ದು ಹೋಗಿ ತನ್ನ ಎಡ ಮೊಣಕಾಲಿನ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಎಡ ಕಾಲಿನ ಪಾದಕ್ಕೆ ತರಚಿದ ಗಾಯಗಳಾಗಿರುತ್ತೆ. ಆದ್ದರಿಂದ ಮೇಲ್ಕಂಡ KA-04 EL-9867 ನೊಂದಣಿ ಸಂಖ್ಯೆ ದ್ವಿಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.326/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ:-

          ದಿನಾಂಕ: 07/09/2020 ರಂದು ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳು ಷೇಕ್ ಮಹಮದ್ ಜಾಫರ್ ಬಿನ್ ಲೇಟ್ ಷೇಕ್ ಮೆಹಬೂಬ್, 28 ವರ್ಷ, ಮುಸ್ಲೀಂ ಜನಾಂಗ, ಆಟೋ ಚಾಲಕ ವೃತ್ತಿ, ಕತ್ತರಿಗುಪ್ಪೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಸಂಜೆ 4.30 ಗಂಟೆಗೆ ಠಾಣೆಗೆ ಹಾಜರಾಗಿ ದಾಖಲಿಸಿಕೊಂಡು ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ತಮ್ಮ ಗ್ರಾಮದ ವಾಸಿಯಾದ ರಾಮಾಂಜಿ ಬಿನ್ ನಾರಾಯಣಸ್ವಾಮಿ ರವರು ಈಗ್ಗೆ ಸುಮಾರು ಎರಡು ವರ್ಷಗಳಿಂದ ತನ್ನ ಪತ್ನಿಯಾದ ಜಬೀನಾ ತಾಜ್ ರವರೊಂದಿಗೆ ಸಲುಗೆಯಿಂದ ಮಾತನಾಡುತ್ತಾ ಆಕೆಯೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುವುದಾಗಿ ತನಗೆ ತಿಳಿದು ಬಂದಿದ್ದು, ದಿನಾಂಕ: 06/09/2020 ರಂದು ತಾನು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಸುಮಾರು 5.00 ಗಂಟೆ ಸಮಯದಲ್ಲಿ ತಮ್ಮ ಮನಗೆ ವಾಪಸ್ ಬಂದಾಗ  ತಮ್ಮ ಮನೆಯಲ್ಲಿ ರಾಮಾಂಜಿ ತಮ್ಮ ಪತ್ನಿಯೊಂದಿಗೆ ಮಾತನಾಡುತ್ತಾ ಮನೆಯ ಬಳಿ ಇದ್ದು, ಆಗ ಅದನ್ನು ಕಂಡ ತಾನು ರಾಮಾಂಜಿಯನ್ನು ಕುರಿತು ನಮ್ಮ ಮನೆಯ ಬಳಿ ನಿನಗೆ ಏನು ಕೆಲಸ, ಎಂದು ಕೇಳಿದಾಗ ರಾಮಾಂಜಿ ನೀನು ಯಾರೋ ನನ್ನನ್ನು ಕೇಳೋಕೆ ಎಂದು ಕೆಟ್ಟ ಮಾತುಗಳಿಂದ ಬೈದು ಜಗಳ ತೆಗೆದಿರುತ್ತಾನೆ. ನಂತರ ರಾಮಾಂಜಿ ಅಲ್ಲಿಯೇ ಇದ್ದ ದೊಣ್ಣೆಯಿಂದ ತನ್ನ ಬಲಕಾಲಿನ ಮೊಣಕಾಲಿಗೆ ಮತ್ತು ಪಾದದ ಬಳಿ ಎರಡು ಏಟುಗಳನ್ನು ಹೊಡೆದು ರಕ್ತಗಾಯವನ್ನುಂಟು ಮಾಡಿರುತ್ತಾನೆ. ಅದೇ ಸಮಯಕ್ಕೆ ಗಲಾಟೆಯ ವಿಚಾರ ತಿಳಿದು ಅಲ್ಲಿಗೆ ಬಂದು ರಾಮಾಂಜಿ ರವರ ಮಕ್ಕಳಾದ ಅನಿಲ್ ಹಾಗೂ ಸುನಿಲ್ ರವರು ತನ್ನನ್ನು ಸುತ್ತುವರೆದು ಕೈಗಳಿಂದ ಮೈ ಮೇಲೆ ಹೊಡೆದಿದ್ದು, ಕಾಲುಗಳಿಂದ ಒದ್ದಿರುತ್ತಾರೆ. ಆತ ತಾನು ಕೆಳಕ್ಕೆ ಬಿದ್ದಾಗ ತನ್ನ ಎರಡೂ ಕೈಗಳ ಮೇಲೆ ಮೂಗೇಟುಗಳಾಗಿ, ಎಡಕೈ ಹೆಬ್ಬೆರಳಿಗೆ ಸ್ವಲ್ಪ ರಕ್ತಗಾಯವಾಗಿರುತ್ತೆ. ತನ್ನ ತಾಯಿ ಹಾಗೂ ತನ್ನ ಪರಿಚಯಸ್ಥರು ಸದರಿ ಗಲಾಟೆಯ ವಿಚಾರವಾಗಿ ಗ್ರಾಮದಲ್ಲಿ ಹಿರಿಯರಿಗೆ ತಿಳಿಸಿ ಮಾತನಾಡೋಣವೆಂದು ತಿಳಿಸಿದ್ದರಿಂದ ಹಾಗೂ ತಮ್ಮ ಕಡೆಯವರು ತನಗೆ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ನೀಡಿದ್ದರಿಂದ ತಾನು ಆಸ್ಪತ್ರೆಯಲ್ಲಿ ದಾಖಲಾಗಿರುವುದಿಲ್ಲ ಮತ್ತು ಪೊಲೀಸ್ ಕಂಪ್ಲೇಂಟ್ ನೀಡಿರುವುದಿಲ್ಲ. ಈ ದಿನ ತನಗಾಗಿರುವ ಗಾಯಗಳಿಂದ ತುಂಬಾ ನೋವುಂಟಾದ್ದರಿಂದ ಈ ದಿನ ತಾನು ಚಿಕಿತ್ಸೆಗಾಗಿ ದಾಖಲಾಗಿ ತನ್ನ ಹೇಳಿಕೆಯನ್ನು ನೀಡುತ್ತಿದ್ದು ತನ್ನ ಮೇಲೆ ಹಲ್ಲೆ ಮಾಡಿ, ಗಾಯಪಡಿಸಿರುವ ಮೇಲ್ಕಂಡ ರಾಮಾಂಜಿ ಹಾಗೂ ಆತನ ಮಕ್ಕಳಾದ ಅನಿಲ್ ಹಾಗೂ ಸುನಿಲ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ಹೇಳಿಕೆಯ ದೂರಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.93/2020 ಕಲಂ. 279 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ: 06/09/2020 ರಂದು ಶ್ರೀ. ಮಧುಸೂಧನ್ ಕೆ.ಎನ್ ಬಿನ್ ನಾರಾಯಣಸ್ವಾಮಿ, 28 ವರ್ಷ, ಒಕ್ಕಲಿಗರು, ಕಾರು ಚಾಲಕನ ಕೆಲಸ, ವಾಸ ಕ್ಯಾಸಗೆರೆ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾನೆಗೆ ಹಾಜರಾಗಿ ನಿಡಿದ ದುರಿನ ಸಾರಾಂಶವೇನೆಂದರೆ,ತಾನು ಮೇಲ್ಕಂಡ ವಿಳಾಸದಾರನಾಗಿದ್ದು ಈಗ್ಗೆ ಸುಮಾರು 5 ವರ್ಷಗಳಿಂದ ಬೆಂಗಳೂರಿನ ಬಿಲ್ಲೇಕಹಳ್ಳಿಯಲ್ಲಿರುವ ಹಾಸನಾಂಭ ಟ್ರವೆಲ್ಸ್ ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತೇನೆ. ಹೀಗಿರುವಲ್ಲಿ ತಾನು ಈಗ್ಗೆ 7 ತಿಂಗಳ ಹಿಂದೆ ಲಾಕ್ ಡೌನ್ ಪ್ರಯುಕ್ತ ಕೆಎ-51-ಡಿ-7812 ಇಟಿಯಾಸ್ ಕಾರನ್ನು ಬೆಂಗಳೂರಿನಿಂದ ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಬಂದಿದ್ದು ಇಲ್ಲಿಯೇ ಬಾಡಿಗೆಗೆ ಓಡಿಸಿಕೊಂಡಿರುತ್ತೇನೆ. ದಿನಾಂಕ: 06/09/2020 ರಂದು ಕೆಲಸ ನಿಮಿತ್ತ ಕೆಎ-51-ಡಿ-7812 ಇಟಿಯಾಸ್ ಕಾರಿನಲ್ಲಿ ತಾನು ಮತ್ತು ಅಲ್ಲಾಬಕಾಶ್ ಬಿನ್ ನೂರ್ ಅಹಮದ್, ಗಂಜಿಗುಂಟೆ ಗ್ರಾಮ ರವರು ಇಬ್ಬರೂ ಸೇರಿ ದಿಬ್ಬೂರಹಳ್ಳಿ ಗ್ರಾಮಕ್ಕೆ ಹೋಗಿ ಪುನಃ ತಮ್ಮ ಗ್ರಾಮಕ್ಕೆ ವಾಪಸ್ಸು ಬರಲು ಬೆಳಿಗ್ಗೆ 5.30 ಗಂಟೆಯ ಸಮಯದಲ್ಲಿ ಚೊಕ್ಕನಹಳ್ಳಿ ಕೋರ್ಲಪತರ್ಿ ರಸ್ತೆಯಲ್ಲಿ ಜಿ.ಕುರುಬರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಬರುತ್ತಿದ್ದಾಗ ಕೋರ್ಲಪತರ್ಿ ಕಡೆಯಿಂದ ಒಂದು ಟಮ್ಯಾಟೋ ಬಾಕ್ಸ್ ತುಂಬಿಕೊಂಡಿದ್ದ 407 ಟೆಂಪೋ ಬಂದಿದ್ದು ಟೆಂಪೋ ಚಾಲಕ ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ಕೆಎ-51-ಡಿ-7812 ಇಟಿಯಾಸ್ ಕಾರಿನ ಮುಂಭಾಗದ ಬಲಭಾಗಕ್ಕೆ ಡಿಕ್ಕಿಹೊಡೆಸಿದ್ದು ಕಾರಿನ ಮುಂಭಾಗ ಜಖಂಗೊಂಡಿರುತ್ತೆ. ಟೆಂಪೋ ಚಾಲಕನು ತನ್ನ ಕಾರಿಗೆ ಡಿಕ್ಕಿ ಹೊಡೆಸಿ ಟೆಂಪೋವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುತ್ತಾನೆ. ಅಫಘಾತವಾದ ಗಾಬರಿಯಲ್ಲಿ ನಾವುಗಳು ಟೆಂಪೋವಿನ ನೊಂದಣಿ ಸಂಖ್ಯೆಯನ್ನು ನೋಡಿರುವುದಿಲ್ಲ. ಕಾರಿನಲ್ಲಿದ್ದ ನಮಗೆ ಯಾವುದೇ ಗಾಯಗಳಾಗದೇ ಇದ್ದು ಕಾರಿನ ಮುಂಭಾಗದ ಬಲಭಾಗ ಪೂತರ್ಿ ಜಖಂ ಗೊಂಡಿರುತ್ತೆ. ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತಾನು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿ ನಿಲ್ಲಿಸದೇ ಹೊರಟು ಹೋದ ಟೆಂಪೋವನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.94/2020 ಕಲಂ. 379,420 ಐ.ಪಿ.ಸಿ :-

          ದಿನಾಂಕ: 06/09/2020 ರಂದು ರಾತ್ರಿ 8.30 ಗಂಟೆಗೆ ಪಿ.ಎಸ್.ಐ ಶ್ರೀ. ನಾರಾಯಣಪ್ಪ, ದಿಬ್ಬೂರಹಳ್ಳಿ ಪೊಲೀಸ್ ಠಾಣೆರವರು ನೀಡಿದ ವರದಿಯ ಸಾರಾಂಶವೇನೆಂದರೆ, ತಾನು ದಿನಾಂಕ:06/09/2020 ರಂದು ಸಂಜೆ ಸುಮಾರು 5.00 ಗಂಟೆ ಸಮಯಕ್ಕೆ ಹೆಚ್.ಸಿ-43 ಶ್ರೀ. ನಾರಾಯಣಪ್ಪರವರನ್ನು ಕರೆದುಕೊಂಡು ಠಾಣೆಗೆ ಒದಗಿಸಿರುವ ಕೆಎ-40-ಜಿ-60 ಜೀಪಿನಲ್ಲಿ ಚಾಲಕನಾದ ಎಪಿಸಿ-94 ಶ್ರೀ.ಬೈರಪ್ಪ ರವರೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತಿಗೆ ಹೋಗಿದ್ದು ಠಾಣಾ ಸರಹದ್ದಿನ ದಿಬ್ಬೂರಹಳ್ಳಿ, ತಿಮ್ಮನಾಯಕನಹಳ್ಳಿ, 11 ನೇ ಮೈಲಿ, ಮುಮ್ಮನಹಳ್ಳಿ, ಜಿ.ಕುರುಬರಹಳ್ಳಿ  ಮುಂತಾದ ಗ್ರಾಮಗಳಲ್ಲಿ ಗಸ್ತು ಮಾಡಿಕೊಂಡು  ಸಂಜೆ 7.00 ಗಂಟೆ ಸಮಯಕ್ಕೆ ಚೊಕ್ಕನಹಳ್ಳಿ ಕ್ರಾಸ್ ಗೆ ಬಂದಾಗ ಗಂಜಿಗುಂಟೆ ಕಡೆಯಿಂದ ಗಂಗಹಳ್ಳಿ ಗ್ರಾಮದ ಕಡೆಗೆ ಮರಳು ತುಂಬಿರುವ ಟ್ರ್ಯಾಕ್ಟರ್ ಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ತನಗೆ ಮಾಹಿತಿ ಬಂದಿದ್ದು 7.10 ಗಂಟೆ  ಸಮಯಕ್ಕೆ ತಾನು ಮತ್ತು ಸಿಬ್ಬಂದಿಯವರು ಜೀಪಿನಲ್ಲಿ ಗಂಗಹಳ್ಳಿ ಗ್ರಾಮಕ್ಕೆ ಬಂದಾಗ ಗಂಜಿಗುಂಟೆ ಗ್ರಾಮದ ಕಡೆಯಿಂದ ಒಂದು ಟ್ರ್ಯಾಕ್ಟರ್ ಬಂದಿದ್ದು ಸದರಿ ಟ್ರ್ಯಾಕ್ಟರ್ ನಲ್ಲಿ ಎಂ ಸ್ಯಾಂಡ್ ತುಂಬಿಸಿದಂತೆ ಕಂಡು ಬಂದಿರುತ್ತೆ. ಸದರೀ ಟ್ರ್ಯಾಕ್ಟರ್ ನ್ನು ನಿಲ್ಲಿಸಲು ಸೂಚಿಸಿ ಟ್ರ್ಯಾಲಿಯಲ್ಲಿ ಪರಿಶೀಲಿಸಲಾಗಿ ಟ್ರ್ಯಾಲಿಯಲ್ಲಿ ಮರಳನ್ನು ತುಂಬಿಸಿದ್ದು ಅದರ ಮೇಲೆ ಮರಳು ಕಾಣದಂತೆ ಸುಮಾರು ಒಂದು ಇಂಚಿನಷ್ಠು ದಪ್ಪ ಎಂ ಸ್ಯಾಂಡ್ ತುಂಬಿರುತ್ತಾರೆ. ಟ್ಟ್ರ್ಯಾಕ್ಟರ್ ಚಾಲಕನ ಹೆಸರು ವಿಳಾಸ ತಿಳಿಯಲಾಗಿ ಅಂಬರೀಶ ಬಿನ್ ಮೂರ್ತಪ್ಪ, 25 ವರ್ಷ, ನಾಯಕರು, ಬ್ರಾಹ್ಮಣರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಮರಳನ್ನು ಸಾಗಿಸುವ ಬಗ್ಗೆ ಪರವಾನಗಿಯನ್ನು ಕೇಳಲಾಗಿ ಇರುವುದಿಲ್ಲವೆಂತ ತಿಳಿಸಿರುತ್ತಾರೆ. ಆರೋಪಿಯು ಯಾವುದೇ ಸರ್ಕಾರಿ ಪರವಾನಗಿ ಪಡೆಯದೇ ಅಕ್ರಮವಾಗಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಸುಮಾರು 3000/- ರೂ ಬೆಲೆ ಬಾಳುವ ಮರಳನ್ನು ಕದ್ದು ಟ್ರ್ಯಾಕ್ಟರ್ ಗೆ ತುಂಬಿಸಿಕೊಂಡು ಅದರ ಮೇಲೆ ಮರಳನ್ನು ಕಾಣಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಂಭಂದಿಸಿದ ಅಧಿಕಾರಿಗಳಿಗೆ ಮೋಸ ಮಾಡುವ ಉದ್ದೇಶದಿಂದ ಮರಳನ್ನು ಮರೆ ಮಾಚಲು ಎಂ ಸ್ಯಾಂಡ್  ತುಂಬಿರುವುದು ಕಂಡು ಬಂದಿರುತ್ತೆ. ಟ್ರ್ಯಾಕ್ಟರ್ ನ್ನು ಪರಿಶೀಲನೆ ಮಾಡಲಾಗಿ ಇಂಜಿನ್ ಮೇಲೆ ಯಾವುದೇ ನೊಂದಣಿ ಸಂಖ್ಯೆ ಇಲ್ಲದೇ ಇದ್ದು ಇಂಜಿನ್ ನಂ S337.1B34332 ಗಿದ್ದು ಚಾಸಿಸ್ ನಂ MEA661E5AL2276318 ಆಗಿರುತ್ತೆ. ಟ್ರ್ಯಾಲಿಯನ್ನು ಪರಿಶೀಲನೆ ಮಾಡಲಾಗಿ ಇದರ ಮೇಲೆ ಯಾವುದೇ ನೊಂದಣಿ ಸಂಖ್ಯೆ ಇಲ್ಲದೇ ನೀಲಿ ಬಣ್ಣದಿಂದ ಕೂಡಿರುತ್ತೆ.  ಮೇಲ್ಕಂಡ  ಚಾಲಕನು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಟ್ರ್ಯಾಕ್ಟರ್ ಗೆ  ಅಧಿಕ ಬೆಲೆಗೆ ಮಾರಾಟ ಮಾಡಲು ತುಂಬಿಸಿಕೊಂಡು ಹಾಗು ಮರಳನ್ನು ಮರೆ ಮಾಚಲು ಮರಳಿನ ಮೇಲೆ ಎಂ. ಸ್ಯಾಂಡ್ ತುಂಬಿಸಿಕೊಂಡು ಸಕ್ಷಮ ಅಧಿಕಾರಿಗಳಿಗೆ ಮೋಸ ಮಾಡಿದ್ದು ಆರೋಪಿ ಮತ್ತು ಟ್ರ್ಯಾಕ್ಟರ್ ನ್ನು ವಶಕ್ಕೆ ನೀಡಿ  ಸದರೀಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.145/2020 ಕಲಂ. 32,34 ಕೆ.ಇ ಆಕ್ಟ್ :-

          ದಿನಾಂಕ:06/09/2020 ರಂದು ಸಂಜೆ 6-15 ಗಂಟೆಗೆ ಚಿಕ್ಕಬಳ್ಳಾಪುರದ ಡಿ.ಸಿ.ಬಿ & ಸಿ.ಇ.ಎನ್ ಪೊಲೀಸ್ ಠಾಣೆಯ ಸಬ್-ಇನ್ಸ್ ಪೆಕ್ಟರ್ ಆದ ಶ್ರೀಮತಿ.ಸರಸ್ವತಮ್ಮ ರವರು ಠಾಣೆಗೆ ಹಾಜರಾಗಿ ನೀಡಿದ ವರದಿ ದೂರಿನ ಸಾರಾಂಶವೇನೆಂದರೆ ತಾನು ಈ ದಿನ ದಿನಾಂಕ:06/09/2020 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಗುಡಿಬಂಡೆ ತಾಲ್ಲೂಕು ಎಲ್ಲೋಡು ಗ್ರಾಮದ ಬಳಿ ಸಿಬ್ಬಂದಿಯವರಾದ ಹೆಚ್.ಸಿ-85 ನರಸಿಂಹ ರವರೊಂದಿಗೆ ಗಸ್ತಿನಲ್ಲಿದ್ದಾಗ, ತಮಗೆ ಬಂದ ಖಚಿತ ಭಾತ್ಮೀ ಮೇರೆಗೆ ಕಂಬಾಲಹಳ್ಳಿ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಪಂಚರೊಂದಿಗೆ ಗುಡಿಬಂಡೆ ತಾಲ್ಲೂಕು ಕಂಬಾಲಹಳ್ಳಿ ಗ್ರಾಮದ ಅಶೋಕ ಬಿನ್ ನಾರಾಯಣಸ್ವಾಮಿ ರವರ ಪೆಟ್ಟಿಗೆ ಅಂಗಡಿ ಬಳಿಗೆ ನಡೆದುಕೊಂಡು ಹೋಗಿ ನೋಡಲಾಗಿ, ಸದರಿ ಪೆಟ್ಟಿಗೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು ಕಂಡು ಬಂದಿದ್ದು, ಪಂಚರ ಸಮಕ್ಷಮ ದಾಳಿ ಮಾಡಿ ಸದರಿ ಸ್ಥಳವನ್ನುಪರಿಶೀಲಿಸಲಾಗಿ ಸದರಿ ಸ್ಥಳದಲ್ಲಿ ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಮಧ್ಯ ಇದ್ದು,  ಸದರಿ ಮದ್ಯದ ಚೀಲಗಳನ್ನು ಪರಿಶೀಲಿಸಲಾಗಿ, 1) Haywards Cheers Whisky 90 ML ಸಾಮರ್ಥ್ಯದ 35.13 ರೂ ಬೆಲೆಯ  ಒಟ್ಟು  5,901 ರೂ ಬೆಲೆ ಬಾಳುವ 168 ಟೆಟ್ರಾ ಪ್ಯಾಕೇಟ್ ಗಳು 2) OldTavern Whisky 180 ML ಸಾಮರ್ಥ್ಯದ 86.75 ರೂ ಬೆಲೆ ಒಟ್ಟು 433/- ರೂಗಳ 5 ಟೆಟ್ರಾ ಪ್ಯಾಕೇಟ್ ಗಳು ಇದ್ದವು. ಸದರಿ ಮಾಲುಗಳಲ್ಲಿನ ಕ್ರ.ಸಂ.180 ML ಸಾಮರ್ಥ್ಯದ ಒಂದು ಟೆಟ್ರಾ ಪ್ಯಾಕೇಟ್ ನ್ನು ಎಫ್.ಎಸ್.ಎಲ್ ರಾಸಾಯನಿಕ ಪರೀಕ್ಷೆಗಾಗಿ ಹಾಗೂ Haywards Cheers Whisky 90 ML ಸಾಮರ್ಥ್ಯದ ಟೆಟ್ರಾ ಪ್ಯಾಕೇಟ್ ಗಳಲ್ಲಿ 28 ಟೆಟ್ರಾ ಪ್ಯಾಕೇಟ್ ಗಳನ್ನು ಎಫ್.ಎಸ್.ಎಲ್ ರಾಸಾಯನಿಕ ಪರೀಕ್ಷೆಗಾಗಿ ಈ ಎರಡು ಮಾಲುಗಳನ್ನು ಅಲಾಯಿದೆ ಅಲಾಯಿದೆಯಾಗಿ ತೆಗೆದು ಬಿಳಿ ಬಟ್ಟೆಯ ಚೀಲದಲ್ಲಿಟ್ಟು ಮೂತಿಯನ್ನು ಕಟ್ಟಿ ಅರಗಿನಿಂದ  P ಎಂಬ  ಇಂಗ್ಲೀಷ್ ಅಕ್ಷರದಿಂದ ಸೀಲು ಮಾಡಿ ಎಫ್.ಎಸ್.ಎಲ್ ಗೆ ಕಳುಹಿಸಿಕೊಡಲು ಪಂಚರ ಸಮಕ್ಷಮಪಂಚನಾಮೆ ಮುಖಾಂತರ   ಸಂಜೆ 4-00 ಗಂಟೆಯಿಂದ 5-00 ಗಂಟೆವರೆಗೂ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡು ಶೇಖರಿಸಲಾಯಿತು. ನಂತರ ಸದರಿ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ಅಶೋಕ ಬಿನ್ ನಾರಾಯಣಸ್ವಾಮಿ, 28 ವರ್ಷ, ಗೊಲ್ಲ ಜನಾಂಗ, ಪೆಟ್ಟಿಗೆ ಅಂಗಡಿ ವ್ಯಾಪಾರ, ವಾಸ:ಕಂಬಾಲಹಳ್ಳಿ ಗ್ರಾಮ, ಕಸಬಾ ಹೋಬಳಿ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿದ್ದು, ಮೇಲ್ಕಂಡ ಮಾಲು ಒಟ್ಟು 16 ಲೀಟರ್ 20 ಎಂ.ಎಲ್ ಆಗಿದ್ದು, ಒಟ್ಟು 6,334/- ರೂಗಳಾಗಿರುತ್ತೆ. ಸದರಿ ಆಸಾಮಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದು ಕಾನೂನು ಬಾಹಿರವಾಗಿದ್ದುದರಿಂದ  ಸದರಿ ಆಸಾಮಿ & ಮಾಲುಗಳನ್ನು ವಶಕ್ಕೆ ಪಡೆದು ಗುಡಿಬಂಡೆ ಪೊಲೀಸ್ ಠಾಣೆಗೆ ಬಂದು ಸಂಜೆ 6-00 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಸಂಜೆ 6-15 ಗಂಟೆಗೆ ಠಾಣಾಧಿಕಾರಿಗಳ ಮುಂದೆ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.