ದಿನಾಂಕ :07/08/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.185/2020 ಕಲಂ. 143,147,447,504,506 ರೆ/ವಿ 149 ಐ.ಪಿ.ಸಿ :-

          ದಿ: 06-08-2020 ರಂದು ಬೆಳಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ  ಪಿ.ವಿ ಲಕ್ಷ್ಮೀ @ ವಿಜಯ ಲಕ್ಷ್ಮೀ ಕೋಂ ವೈ.ಎನ್ ಮಂಜುನಾಥ ರೆಡ್ಡಿ, 43 ವರ್ಷ, ವಕ್ಕಲಿಗರು, ಗೃಹಿಣಿ, # 25/1, (89/1) 5 ನೇ ಮೈನ್, 2ನೇ ಕ್ರಾಸ್, ಮತ್ತಿಕೆರೆ ಏಕ್ಸ್ ಸ್ಟೇಷನ್, ಬೆಂಗಳೂರು – 54 ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ – ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಕೊಂಡರೆಡ್ಡಿಪಲ್ಲಿ ಗ್ರಾಮದ ಸರ್ವೇ ನಂಬರ್ 41 ರಲ್ಲಿ 1) ಕೆ.ಆದಿನಾರಾಯಣಪ್ಪ ಬಿನ್ ಲೇಟ್ ಕಾಳ್ಳ ಆದಿಮೂರ್ತಿ ರವರ ಬಾಬತ್ತು ಜಮೀನು, 1-26 ಗುಂಟೆ ಖರಾಬು 2 ಗುಂಟೆ, 2) ಮಲ್ಲಪ್ಪ ಬಿನ್ ಲೇಟ್ ಕಾಳ್ಳ ಆದಿಮೂರ್ತಿ ರವರ ಬಾಬತ್ತು 1-12  ¾ ಗುಂಟೆ 1 ಗುಂಟೆ ಖರಾಬು, 3) ಮಲ್ಲಪ್ಪ ಬಿನ್ ಲೇಟ್ ಆದಿಮೂರ್ತಿ ರವರ ಬಾಬತ್ತು  13 ½ ಗುಂಟೆ ಜಮೀನು 4) ಸೋಮಶೇಖರ ಬಿನ್ ಲೇಟ್ ಆದಿಮೂರ್ತಿ ರವರ ಬಾಬತ್ತು 1-26 ಗುಂಟೆ 5 ಗುಂಟೆ ಖರಾಬು ಜಮೀನನ್ನು ಜಮೀನಿನ ಮಾಲೀಕರು ನನ್ನ ಅಣ್ಣನಾದ ಮಂಜುನಾಥ ರೆಡ್ಡಿ ಬಿನ್ ಎ.ವೆಂಕಟರೆಡ್ಡಿ,  ಪುಟ್ಟಪರ್ತಿ ಗ್ರಾಮ, ಕಸಬಾ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ರವರಿಗೆ ಬಾಗೇಪಲ್ಲಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ದಸ್ತಾವೇಜು ಸಂಖ್ಯೆ 1061 / 2006-07 ರಂತೆ  2006  ನೇ ಸಾಲಿನಲ್ಲಿ ಕ್ರಯ ಮಾಡಿಕೊಟ್ಟಿರುತ್ತಾರೆ.  ನಂತರ 2007 ನೇ ಸಾಲಿನಲ್ಲಿ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಕೊಂಡರೆಡ್ಡಿ ಪಲ್ಲಿ ಗ್ರಾಮದ ಸರ್ವೇ ನಂಬರ್ 41 ರ  ಜಮೀನಿನ ಬ್ಲಾಕ್ 2 ರಲ್ಲಿ 1-25 ¾ ಗುಂಟೆ ಜಮೀನು ಖರಾಬು 7 ಗುಂಟೆ ಜಮೀನನ್ನು ಮಾಲೀಕರಾದ ಬಾಗೇಪಲ್ಲಿ ತಾಲ್ಲೂಕು ಕಸಬಾ ಹೋಬಳಿ ಕೊಂಡರೆಡ್ಡಿಪಲ್ಲಿ ಗ್ರಾಮದ ನಂಜುಂಡಪ್ಪ ಬಿನ್ ಲೇಟ್ ಆದಿಮೂರ್ತಿ ರವರು ನನ್ನ ಅಣ್ಣ ಮಂಜುನಾಥ ರೆಡ್ಡಿ ರವರಿಗೆ ಬಾಗೇಪಲ್ಲಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ದಸ್ತಾವೇಜು ಸಂಖ್ಯೆ 2492/2007 ರಂತೆ ಕ್ರಯ ಮಾಡಿಕೊಟ್ಟಿರುತ್ತಾರೆ.ನನ್ನ ಅಣ್ಣ ಮಂಜುನಾಥ ರೆಡ್ಡಿ ರವರು ಮೇಲ್ಕಂಡ ಕೊಂಡರೆಡ್ಡಿಪಲ್ಲಿ ಗ್ರಾಮದ ಸರ್ವೇ ನಂಬರ್ 41 ರ ಒಟ್ಟು 6.24 ಗುಂಟೆ ಜಮೀನಿನ ನಿಗಾವಣೆ ನೋಡಿಕೊಳ್ಳಲು ಹಾಗೂ ವ್ಯವಹಾರಗಳನ್ನು ನೋಡಿಕೊಳ್ಳಲು ದಿನಾಂಕ:21/02/2014 ರಂದು ದಸ್ತಾವೇಜು ಸಂಖ್ಯೆ 126/2014 ರಂತೆ ನನಗೆ ಜಿ.ಪಿ.ಎ ಮಾಡಿಕೊಟ್ಟಿರುತ್ತಾರೆ. ಅಂದಿನಿಂದ ಜಮೀನಿನ ಉಸ್ತುವಾರಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಹೀಗಿರುವಾಗ್ಗೆ ದಿನಾಂಕ:06/08/2020 ರಂದು ಬೆಳಿಗ್ಗೆ ಸುಮಾರು 9:00 ಗಂಟೆಯಲ್ಲಿ ನಾನು ಜಮೀನಿನ ಬಳಿ ಹೋದಾಗ, ಬಾಗೇಪಲ್ಲಿ ಟೌನ್ ನಲ್ಲಿ ವಾಸವಿರುವ ಮಲ್ಲಪ್ಪ ಬಿನ್ ಲೇಟ್ ಕಾಳ್ಳ ಆದಿಮೂರ್ತಿ,ಸೋಮಶೇಖರ್ ಬಿನ್ ಲೇಟ್ ಆದಿಮೂರ್ತಿ, ಅಶ್ವತ್ಥಮ್ಮ ಕೋಂ ಸೋಮಶೇಖರ್, ಅನುಷ ಬಿನ್ ಸೋಮಶೇಖರ್, ಗಿರಿಜ ಬಿನ್ ಸೋಮಶೇಖರ್, ಚಿನ್ನಮ್ಮಯ್ಯ ಕೋಂ ಆವುಲಪ್ಪ, ರಾಜಮ್ಮ ಬಿನ್ ಆದಿನಾರಾಯಣಪ್ಪ, ನಂಜಮ್ಮ ಕೋಂ ಲೇಟ್ ನಂಜುಂಡಪ್ಪ, ಸೋಮಶೇಖರನ ಅಳಿಯ ಸುರೇಶ, ಆದಿನಾರಾಯಣಪ್ಪನ ಅಳಿಯ ಆವುಲಪ್ಪ, ಮುನಿರಾಜು ಬಿನ್ ಗಂಗಪ್ಪ ರವರುಗಳೆಲ್ಲರೂ ಗುಂಪು ಕಟ್ಟಿಕೊಂಡು  ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ, ಉಳುಮೆ ಮಾಡಲು ಬಂದಿರುತ್ತಾರೆ. ನಮ್ಮ ಜಮೀನಿನಲ್ಲಿ ಏಕೆ ಈ ರೀತಿ ಬೆಳೆ ಇಡಲು ಬಂದಿದ್ದೀರೆಂದು ಕೇಳಿದಾಗ, ನಿಮ್ಮಿಂದ ಏನಾಗುತ್ತದೋ ಅದನ್ನು ಮಾಡಿಕೊ ಲೋಫರ್ ಮುಂಡೆ ಇತ್ಯಾದಿಯಾಗಿ ಅವಾಚ್ಯ ಶಬ್ದಗಳಿಂದ ನನಗೆ ಬೈಯ್ದು, ಈ ಜಮೀನಿನ ತಂಟೆಗೆ ಬಂದರೆ, ನಿನಗೆ ಪ್ರಾಣ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆಯನ್ನು ಹಾಕಿ ಗಲಾಟೆ ಮಾಡಿರುತ್ತಾರೆ.  ಸ್ಥಳದಲ್ಲಿದ್ದ ಸದಾಶಿವರೆಡ್ಡಿ ಬಿನ್ ಲೇಟ್ ಆವುಲಕೊಂಡಪ್ಪ, 48 ವರ್ಷ, ವಕ್ಕಲಿಗರು, ಜಿರಾಯ್ತಿ, ಕೊಂಡರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಮತ್ತು   ವೆಂಕಟರಾಮಪ್ಪ ಬಿನ್ ಲೇಟ್ ಆವುಲಕೊಂಡಪ್ಪ, 51 ವರ್ಷ, ಪಟ್ರಜನಾಂಗ, ಜಿರಾಯ್ತಿ, ಕೋರ್ಟ್ ಹಿಂಬಾಗ, 21 ನೇ ವಾರ್ಡ್, ಬಾಗೇಪಲ್ಲಿ ಟೌನ್. ಮೊ:9945969092 ರವರು ಜಗಳವನ್ನು  ಬಿಡಿಸಿರುತ್ತಾರೆ. ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ಇದರೊಂದಿಗೆ ಲಗತ್ತಿಸಿದ್ದು, ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಪ್ರಾಣ ಬೆದರಿಕೆಯನ್ನು ಹಾಕಿರುವ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೊಳ್ಳುತ್ತೇನೆ, ಎಂದು ನೀಡಿದ ದೂರು.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.293/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ: 06/08/2020 ರಂದು ಸಂಜೆ 5-45 ಗಂಟೆಗೆ ಮಾನ್ಯ ನ್ಯಾಯಾಧೀಶರು ಇ-ಮೇಲ್ ಮುಖಾಂತರ ನೀಡಿದ ಅನುಮತಿಯನ್ನು ಪಡೆದು ದಾಖಲಿಸಿಕೊಂಡ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 06-08-2020 ರಂದು ಸಂಜೆ 5-00 ಗಂಟೆಗೆ ಠಾಣೆಯ ಪಿ.ಎಸ್.ಐ ರವರಾದ ನರೇಶ್ ನಾಯ್ಕ್ ಎಸ್ ರವರು ಮಾಲು, ಆರೋಪಿ ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ಮಧ್ಯಾಹ್ನ 3-00 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಚಿನ್ನಸಂದ್ರ ಗ್ರಾಮದ ಸಮೀಪ ಸರ್ಕಾರಿ ಕಾಲುವೆಯಲ್ಲಿರುವ ಹೊಂಗೆ ಮರದ ಕೆಳಗೆ ಯಾರೋ ಕೆಲವರು ಗುಂಪು ಕಟ್ಟಿಕೊಂಡು ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪಿಟ್ ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತಿದ್ದು, ಸದರಿ ಜೂಜಾಟ ಆಡುತ್ತಿದ್ದವರ ಮೇಲೆ ದಾಳಿ ಮಾಡುವ ಸಲುವಾಗಿ ಠಾಣೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರಾದ ಸಿ.ಹೆಚ್.ಸಿ-249 ಸಂದೀಪ್ ಕುಮಾರ್, ಸಿ.ಹೆಚ್.ಸಿ-41 ಜಗದೀಶ, ಸಿಪಿಸಿ-504 ಸತೀಶ, ಸಿಪಿಸಿ-544 ವೆಂಕಟರವಣ, ಸಿ.ಹೆಚ್.ಸಿ-40 ಸೀನಪ್ಪ, ಸಿಪಿಸಿ-464 ಅರುಣ್, ಸಿಪಿಸಿ-534 ನಂದೀಶ್ ಕುಮಾರ್ ಮತ್ತು ಚಾಲಕ ಎ.ಹೆಚ್.ಸಿ-08 ಮುಖೇಶ್ ರವರೊಂದಿಗೆ KA-40 G-326 ನೋಂದಣಿ ಸಂಖ್ಯೆಯ ಸರ್ಕಾರಿ ಜೀಪ್ ನಲ್ಲಿ ಚಿನ್ನಸಂದ್ರ ಗ್ರಾಮದ ಸಮೀಪವಿರುವ ಸರ್ಕಾರಿ ಕಾಲುವೆಯ ಬಳಿ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ ಮರಗಳ ಮರೆಯಲ್ಲಿ ನಿಂತು ನೋಡಲಾಗಿ ಕೆಲವರು ಹೊಂಗೆ ಮರದ ಕೆಳಗೆ ಗುಂಪು ಕಟ್ಟಿಕೊಂಡು 100 ರೂ ಅಂದರ್ 100 ರೂ ಬಾಹರ್ ಎಂದು ಕೂಗಾಡುತ್ತಾ ಇಸ್ಪಿಟ್ ಜೂಜಾಟ ಆಡುತ್ತಿದ್ದು ಸದರಿಯವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿದರೂ ಸಹಾ ಓಡಿ ಹೋಗಲು ಯತ್ನಿಸಿದ್ದು,  ಸದರಿ ಆಸಾಮಿಗಳನ್ನು ಪೊಲೀಸರು ಹಿಡಿದುಕೊಂಡು ಹೆಸರು ವಿಳಾಸ ಕೇಳಳಾಗಿ 1)ಪ್ರಶಾಂತ್ ಬಿನ್ ಶ್ರೀನಿವಾಸ, 26ವರ್ಷ, ನಾಯಕರು, ಟ್ರಾಕ್ಟರ್ ಚಾಲಕ, ವಾಸ: ಚಿನ್ನಸಂದ್ರ ಗ್ರಾಮ,  ಚಿಂತಾಮಣಿ ತಾಲ್ಲೂಕು, 2)ತಜಮುಲ್ ಪಾಷಾ ಬಿನ್ ಇಂತಿಯಾಜ್ ಪಾಷಾ, 28ವರ್ಷ, ಮುಸ್ಲಿಂಜನಾಂಗ, ಟಿ-ಅಂಗಡಿ ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು, 3)ನಾಸಿರ್ ಖಾನ್ ಬಿನ್ ಲೇಟ್ ಫರೀಧ್ ಖಾನ್, 45ವರ್ಷ, ಮುಸ್ಲಿಂಜನಾಂಗ, ಟಿ-ಅಂಗಡಿ ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಮತ್ತು 4)ಮೆಹಬೂಬ್ ಪಾಷಾ ಬಿನ್ ಲೇಟ್ ರಹೀಂಸಾಬ್, 46ವರ್ಷ, ಮುಸ್ಲಿಂಜನಾಂಗ, ಟಿ-ಅಂಗಡಿ ವ್ಯಾಪಾರ, ಚಿನ್ನಸಂದ್ರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿರುತ್ತಾರೆ. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ 52 ಇಸ್ಪಿಟ್ ಎಲೆಗಳು, ಪಣಕ್ಕಿಟ್ಟಿದ್ದ 5,150/- ರೂ ನಗದು ಹಣ ಇರುತ್ತದೆ. ಸದರಿ ಮಾಲುಗಳನ್ನು ಮಧ್ಯಾಹ್ನ 3-30 ರಿಂದ ಸಂಜೆ 4-30 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಮಾಲು, ಆರೋಪಿತರು ಮತ್ತು ಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿದ್ದು, ಕಾನೂನು ಬಾಹಿರವಾಗಿ ಅಂದರ್-ಬಾಹರ್ ಇಸ್ಪಿಟ್ ಜೂಜಾಟವಾಡುತ್ತಿದ್ದ ಆಸಾಮಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿರುವುದರ ಮೇರೆಗೆ ಎನ್.ಸಿ.ಆರ್ ದಾಖಲಿಸಿಕೊಂಡು ನಂತರ ಪ್ರಕರಣವನ್ನು ದಾಖಲು ಮಾಡಲು ಇ-ಮೇಲ್ ಮುಖಾಂತರ ಘನ ನ್ಯಾಯಾಲಯದ ಅನುಮತಿಗಾಗಿ ನಿವೇದಿಸಿಕೊಂಡಿದ್ದು, ಘನ ನ್ಯಾಯಾಲಯವು ನಿವೇದನೆಯನ್ನು ಪುರಸ್ಕರಿಸಿ ಪ್ರಕರಣವನ್ನು ದಾಖಲು ಮಾಡಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.294/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ 06-08-2020 ರಂದು  ಚಿಂತಾಮಣಿ ಸರ್ಕಾರಿ ಆಸ್ವತ್ರೆಯಲ್ಲಿ ಗಾಯಾಳು ಕೃಷ್ಣಪ್ಪ ಬಿನ್ ಲೇಟ್ ನಾರಾಯಣಪ್ಪ, 60 ವರ್ಷ, ಕೊರ್ಲಹಳ್ಳಿ  ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ ಸಂಜೆ 7-20 ಗಂಟೆಗೆ ವಾಪಸ್ಸಾಗಿದ್ದು ಸದರಿ ಹೇಳಿಕೆಯ ಸಾರಾಂಶವೇನೆಂದರೆ ಈ ದಿನ ದಿನಾಂಕ 06-08-2020 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ತಾನು ತಮ್ಮ ಗ್ರಾಮದ ಶ್ರೀನಿವಾಸ ಬಿನ್ ಲೇಟ್ ಚಿನ್ನಪ್ಪ ರವರ ಬೀಡು ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಮೇಲ್ಕಂಡ ಶ್ರೀನಿವಾಸ ಮತ್ತು ಆತನ ಹೆಂಡತಿ ಸಂತೋಷಮ್ಮ ರವರು ಬಂದು ತನ್ನನ್ನು ಕುರಿತು  ಬೋಳಿ ಮಗನೇ  ನಮ್ಮ ಜಮೀನಿನಲ್ಲಿ ಏಕೆ ಕುರಿಗಳನ್ನು ಮೇಯಿಸುತ್ತಿದ್ದಿಯಾ ಎಂದು  ಅವಾಶ್ಚ ಶಬ್ದಗಳಿಂದ ಬೈದು ತನ್ನ ಮೇಲೆ ಜಗಳ ಮಾಡಿ ಆ ಪೈಕಿ ಶ್ರೀನಿವಾಸ ದೊಣ್ಣೆಯಿಂದ ತನ್ನ ತಲೆಯ ಮೇಲೆ  ಎರಡು ಸಲ ಹೊಡೆದು ರಕ್ತಗಾಯ ಪಡಿಸಿದ. ಸಂತೋಷಮ್ಮ ರವರು ಕೈ ಗಳಿಂದ ತನ್ನ ಮೈ ಕೈ ಮೇಲೆ ಹೊಡೆದು, ಕೆಳಕ್ಕೆ ತಳ್ಳಿ, ಕಾಲುಗಳಿಂದ  ಒದ್ದು ನೋವುಂಟು ಮಾಡಿದರು. ಆಗ ತನ್ನ ಹೆಂಡತಿ ಪಿಳ್ಳಮ್ಮ ಮತ್ತು ತನ್ನ ಮಗನಾದ ನಾರಾಯಣಸ್ವಾಮಿ ರವರು ಬಂದು ಜಗಳ  ಬಿಡಿಸಿದರು. ಮೇಲ್ಕಂಡವರು ಅಲ್ಲಿಂದ ಹೋಗುವಾಗ ಈ ದಿನ ನಿನ್ನ ಟೈಂ ಚೆನ್ನಾಗಿದೆ ನಿನ್ನನ್ನು ಮುಗಿಸುವ ವರೆಗೂ  ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.88/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ಪಿರ್ಯಾದಿದಾರರಾದ ರಾಜಶೇಖರ್ ಬಿನ್ ಗೋಪಾಲಕೃಷ್ಣ, 32 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಕೋಟಗಲ್ ಗ್ರಾಮ, ಚಿಂತಾಮಣಿ ನಗರ ರವರು ಠಾಣೆಗ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ   ನಮ್ಮ ತಂದೆಯವರಾದ ಗೋಪಾಲಕೃಷ್ಣ ರವರು ಈಗ್ಗೆ 5-6 ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಇಟ್ಟಿಗೆ ಪ್ಯಾಕ್ಟರಿ ನಡೆಸುತ್ತಿರುತ್ತಾರೆ. ಇದರಿಂದ ನಮ್ಮ ಕುಟುಂಬದವರು ಜೀವನ ಮಾಡುತ್ತಿರುತ್ತೇವೆ. ಹೀಗಿರುವಾಗ 2019 ನೇ  ಸಾಲಿನ ಏಪ್ರಿಲ್ ತಿಂಗಳಲ್ಲಿ ನಮ್ಮ ತಂದೆಯವರಿಗೆ ಪರಿಚಯಸ್ಥರಾದ ಚಿಂತಾಮಣಿ ನಗರದ ಚೌಡರೆಡ್ಡಿಪಾಳ್ಳ ವಾಸಿ ರಾಜು @ ತಿಪ್ಪರಾಜು ಬಿನ್ ವೆಂಕಟೇಶಪ್ಪ ರವರು ಇಟ್ಟಿಗೆ ಪ್ಯಾಕ್ಟರಿಯಲ್ಲಿ ನಿಮ್ಮೊಂದಿಗೆ ಸೇರಿ ವ್ಯವಹಾರ ಮಾಡುತ್ತೇನೆಂದು ಇಬ್ಬರು ತಲಾ ಒಂದು ಲಕ್ಷ ದಂತೆ ಕೂಲಿ ಆಳುಗಳಿಗೆ ಮುಂಗಡವಾಗಿ ನೀಡಿದ್ದು ಇಟ್ಟಿಗೆ ಪ್ಯಾಕ್ಟರಿಯಿಂದ ಬಂದ ಲಾಭದಲ್ಲಿ ಇಬ್ಬರು ಸಮನಾಗಿ ಹಂಚಿಕೊಂಡಿರುತ್ತಾರೆ. ನಂತರ ಎರಡನೇ ಗೂಡಿನ ಇಟ್ಟಿಗೆಗೆ  ರಾಜು ರವರು  ಯಾವುದೇ ಬಂಡವಾಳ ಹಾಕಿರುವುದಿಲ್ಲ. ಆ ಸಮಯದಲ್ಲಿ ನಮ್ಮ ತಂದೆಯವರಿಗೆ ಬ್ರೈನ್ ಸ್ಟ್ರೋಕ್ ಕಾಯಿಲೆ ಆಗಿದ್ದರಿಂದ ಆಸ್ವತ್ರೆಯಲ್ಲಿ ತೋರಿಸುತ್ತಿದ್ದೇವು. ರಾಜು ರವರು ನಾವು ಇಲ್ಲದ ಸಮಯವನ್ನು ನೋಡಿಕೊಂಡು ಗೂಡಿನ ಮೂಕ್ಕಾಲು ಭಾಗ ಇಟ್ಟಿಗೆಗಳನ್ನು ಚಿಂತಾಮಣಿ ನಗರದವರಿಗೆ ಮಾರಾಟ ಮಾಡಿ ಹಣವನ್ನು  ಆತನೇ ತೆಗೆದುಕೊಂಡಿರುತ್ತಾನೆ. ನಂತರ ಮಳೆಯಿಂದಾಗಿ ಉಳಿದ ಕಾಲು ಭಾಗ ಇಟ್ಟಿಗೆಗಳು ನಾಶವಾಗಿರುತ್ತೆ. ದಿನಾಂಕ 04/08/2020 ರಂದು ರಾಜು ರವರು ನಮ್ಮ ಗ್ರಾಮದ ಖದೀರ್ ಬಿನ್ ನಜೀರ್ ಅಹಮದ್, ವೀರಪಲ್ಲಿ ಗ್ರಾಮದ ವೆಂಕಟಸ್ವಾಮಿ ರೆಡ್ಡಿ  ಬಿನ್ ಲೇಟ್ ಅಶ್ವತ್ಥರೆಡ್ಡಿ ರವರು ಹಣದ ವಿಚಾರದಲ್ಲಿ ರಾಜಿ ಪಂಚಾಯ್ತಿ ಮಾಡುವಂತೆ ತಿಳಿಸಿದ್ದು ಅದರಂತೆ ನಮ್ಮ ತಂದೆಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ನಾನು ಹಾಗೂ ನನ್ನ ತಮ್ಮ ಸುಬ್ರಮಣಿ ರವರು ಚಿಂತಾಮಣಿ ನಗರದ ಐ.ಬಿ ಬಳಿ ಬಂದಿದ್ದು ರಾಜು ಹಾಗೂ ಅವನ ಕಡೆಯವರು ಅಲ್ಲಿಯೇ ಇರುತ್ತಾರೆ. ಸಂಜೆ 5-30 ಗಂಟೆ ಸಮಯದಲ್ಲಿ ಹಿರಿಯರು ಪಂಚಾಯ್ತಿ ಮಾಡುವ ಸಮಯದಲ್ಲಿ  ಅಲ್ಲಿಗೆ ಬಂದ ರಾಜು ರವರ ಸ್ನೇಹಿತನಾದ ಚಿಂತಾಮಣಿ ನಗರದ ಅಂಜನಿ ಬಡಾವಣೆಯ ವಾಸಿ ಚಿಂಟು  ಬಿನ್ ಬ್ಯಾಲ ಗೋಪಾಲಪ್ಪರವರು ಏಕಾ ಏಕಿ ನಮ್ಮನ್ನು ಕುರಿತು ಏ ಲೋಪರ್ ನನ್ನ ಮಕ್ಕಳೇ ರಾಜು ರವರ ಹಣ ಕೊಡಕ್ಕೆ  ನಿಮ್ಮ ಕೈಯಲ್ಲಿ ಆಗಲ್ವ ಎಂದು ಕೆಟ್ಟ ಮಾತುಗಳಿಂದ ಬೈದು ಅಲ್ಲಿಯೇ ಇದ್ದ ಕಲ್ಲಿನಿಂದ ನನ್ನ ಬಲಕಣ್ಣಿನ ಮೇಲ್ಬಾಗದ ಹಣೆಗೆ ಹಾಕಿ ರಕ್ತ ಗಾಯ ಮಾಡಿ ಕೈಯಿಂದ ಬಲಕಣ್ಣಿಗೆ ಗುದ್ದಿ ಊತ ಗಾಯವನ್ನುಂಟು ಮಾಡಿರುತ್ತಾನೆಂದ. ನಂತರ ರಾಜು ರವರು ಕಲ್ಲಿನಿಂದ ನನ್ನ ಎಡ ಕೈ ಕಿರು ಬೆರಳಿಗೆ ಹಾಕಿ ರಕ್ತ ಗಾಯ ಮಾಡಿ ನನ್ನನ್ನು ಕೆಳಕ್ಕೆ ತಳ್ಳಿ ಎಡಗಾಲನ್ನು ಹಿಂದಕ್ಕೆ ತಿರುಗಿಸಿ ಊತ ಗಾಯ ಮಾಡಿರುತ್ತಾನೆ. ಜಗಳ ಬಿಡಿಸಲು ಅಡ್ಡ ಬಂದ ನನ್ನ ತಮ್ಮನಾದ ಸುಬ್ರಮಣಿ ರವರಿಗೆ  ರಾಜು ಹಾಗೂ ಚಿಂಟು ರವರು ಕೈಗಳಿಂದ ಮೈಮೇಲೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಷ್ಟರಲ್ಲಿ ಅಲ್ಲಿಯೇ ನಮ್ಮ ಗ್ರಾಮದ ಖದೀರ್, ವೀರಪಲ್ಲಿ ಗ್ರಾಮದ  ವೆಂಕಟಸ್ವಾಮಿರೆಡ್ಡಿ  ಜಗಳ ಬಿಡಿಸಿ ಕಳುಹಿಸಿದರು ಸಹ ರಾಜು ಹಾಗೂ ಚಿಂಟು ರವರು ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ. ನಂತರ ನನ್ನ ತಮ್ಮನಾದ  ಸುಬ್ರಮಣಿ ರವರು  ಗಾಯಗೊಂಡಿದ್ದ ನನ್ನನ್ನು ಯಾವುದೋ ವಾಹನದಲ್ಲಿ ಚಿಂತಾಮಣಿ ಸರ್ಕಾರಿ  ಆಸ್ವತ್ರೆಗೆ ಚಿಕಿತ್ಸೆಗಾಗಿ  ದಾಖಲು ಮಾಡಿರುತ್ತಾರೆ.  ಈ ಬಗ್ಗೆ ನಮ್ಮ ಹಿರಿಯರು  ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಇದುವರೆಗೂ ಮಾತಾನಾಡದೇ ಇರುವುದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುತ್ತೇನೆ. ಆದ್ದರಿಂದ ಮೇಲ್ಕಂಡ ರಾಜು ಹಾಗೂ ಚಿಂಟು ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.191/2020 ಕಲಂ. 15(ಎ), 32(3) ಕೆ.ಇ ಆಕ್ಟ್ :-

          ದಿನಾಂಕ 06/08/2020 ರಂದು ಮದ್ಯಾಹ್ನ 12-00 ಗಂಟೆಗೆ ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ:17/06/2020 ರಂದು ಸಂಜೆ 5-00  ಗಂಟೆಯಲ್ಲಿ ಶ್ರೀ.ಮೋಹನ್.ಎನ್. ಪಿ.ಎಸ್.ಐ  ಗೌರೀಬಿದನೂರು ಗ್ರಾಮಾಂತರ ಠಾಣೆ ರವರು ಠಾಣೆಯಲ್ಲಿ  ನೀಡಿದ ದೂರಿನ ಸಾರಾಂಶವೇನೆಂದರೆ,   ಇವರಿಗೆ  ದಿನ  ದಿನಾಂಕ: 17/06/2020 ರಂದು  ಮದ್ಯಾಹ್ನ 3-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ಬೋಡಬಂಡನಹಳ್ಳಿ  ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಪಿ.ಸಿ-208 ತಿಪ್ಪೆಸ್ವಾಮಿ,   ಪಿ.ಸಿ-518 ಆನಂದ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281  ರಲ್ಲಿ  ಬೋಡಬಂಡನಹಳ್ಳಿ ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 3-30   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ನಟರಾಜ ಬಿನ್  ಅಶ್ವತ್ಥಪ್ಪ,  30 ವರ್ಷ,   ಆದಿ ದ್ರಾವಿಡ, ಕೂಲಿ ಕೆಲಸ,   ಬೋಡಬಂಡನಹಳ್ಳಿ ಗ್ರಾಮ, ನಗೆರೆಗೆರೆ ಹೋಬಳಿ,  ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 20   ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 800 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 702.6/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಮದ್ಯಾಹ್ನ 3-30 ಗಂಟೆಯಿಂದ   4-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಸಂಜೆ 5-00  ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು,ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.192/2020 ಕಲಂ. 15(ಎ), 32(3) ಕೆ.ಇ ಆಕ್ಟ್ :-

          ದಿನಾಂಕ 06/08/2020 ರಂಧು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ ದಿನಾಂಕ 21-06-2020 ರಂದು ಮದ್ಯಾಹ್ನ 2-00  ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  ದೂರಿನ ಸಾರಾಂಶವೇನೆಂದರೆ  ಇವರಿಗೆ ದಿನಾಂಕ: 21/06/2020 ರಂದು  ಮದ್ಯಾಹ್ನ 12-00  ಗಂಟೆಯಲ್ಲಿ  ಗೌರಿಬಿದನೂರು ತಾಲ್ಲೂಕು  ನಕ್ಕಲಹಳ್ಳಿ   ಗ್ರಾಮದಲ್ಲಿ ಯಾರೋ ತನ್ನ ಅಂಗಡಿ ಮುಂದೆ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು  ಸ್ಥಳಾವಕಾಶ  ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ, ಹೆಚ್.ಸಿ-166 ಸಂಪಂಗಿ, ಪಿ.ಸಿ-80 ಶ್ರೀನಾಥ,   ಪಿ.ಸಿ-518 ಆನಂದ  ರವರೊಂದಿಗೆ   ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281  ರಲ್ಲಿ  ನಕ್ಕಲಹಳ್ಳಿ  ಗ್ರಾಮದಲ್ಲಿ  ಹೋಗಿ , ಅಲ್ಲಿ  ಪಂಚಾಯ್ತಿದಾರರನ್ನು ಕರೆದುಕೊಂಡು  ಮಾಹಿತಿ ಇದ್ದ  ಸ್ಥಳಕ್ಕೆ  ಮದ್ಯಾಹ್ನ 12-30   ಗಂಟೆಗೆ   ನಡೆದುಕೊಂಡು  ಹೋಗಿ   ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಒಬ್ಬ ವ್ಯಕ್ತಿ  ತನ್ನ ಅಂಗಡಿಯ ಮುಂದೆ  ಪ್ಲಾಸ್ಟಿಕ್  ಚೀಲವನ್ನು  ಹಿಡಿದುಕೊಂಡು , ಅದರಲ್ಲಿದ್ದ ಮದ್ಯದ ಪಾಕೆಟ್ ಗಳನ್ನು ಅಂಗಡಿ ಮುಂದೆ  ಕುಳಿತಿದ್ದ  ಇಬ್ಬರು ವ್ಯಕ್ತಿಗಳಿಗೆ  ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್  ‍ಗ್ಲಾಸ್ ಗಳಲ್ಲಿ ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು  ಮಧ್ಯಪಾನ ಮಾಡುತ್ತಿದ್ದವರು  ಓಡಿಹೋಗಿರುತ್ತಾರೆ.  ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ  ವ್ಯಕ್ತಿಯನ್ನು ಹಿಡಿದುಕೊಂಡು ಆಸಾಮಿಯ ಹೆಸರು ವಿಳಾಸ ಕೇಳಲಾಗಿ,  ತನ್ನ ಹೆಸರು   ಬಾಲಪ್ಪ ಬಿನ್ ನಾಗರಾಜಪ್ಪ,  42  ವರ್ಷ,   ಅಂಗಡಿ ವ್ಯಾಪಾರ ,  ಈಡಿಗರು,   ವಾಸ   ನಕ್ಕಲಹಳ್ಳಿ ಗ್ರಾಮ, ನಗೆರೆಗೆರೆ ಹೋಬಳಿ,  ಗೌರಿಬಿದನೂರು ತಾಲ್ಲೂಕು  ಎಂದು ತಿಳಿಸಿದ್ದು,  ಸ್ಥಳದಲ್ಲಿ ಬಿಸಾಡಿದ್ದ ಪ್ಲಾಸ್ಟಿಕ್ ಚೀಲವನ್ನು    ಪರಿಶೀಲಿಸಲಾಗಿ,  ಅದರಲ್ಲಿ   90 ಎಂ.ಎಲ್.ಸಾಮರ್ಥ್ಯದ HAY WARDS CHEERS  WHISKY ಯ 20   ಟೆಟ್ರಾ ಪಾಕೆಟ್ ಗಳು ಇದ್ದು,   ಇವುಗಳ ಒಟ್ಟು ಸಾಮರ್ಥ್ಯ  1 ಲೀಟರ್ 800 ಎಂ.ಎಲ್. ಆಗಿರುತ್ತೆ. ಇವುಗಳ ಒಟ್ಟು ಬೆಲೆ 702.6/- ರೂ.ಗಳಾಗಿರುತ್ತೆ.  ಸ್ಥಳದಲ್ಲಿ 4 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, 90 ಎಂ.ಎಲ್ ಸಾಮರ್ಥ್ಯದ HAY WARDS CHEERS  WHISKY ಯ 04 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು. ಸದರಿ ವ್ಯಕ್ತಿಗೆ ಇದನ್ನು ಮಾರಲು ಹಾಗು ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡಲು  ಯಾವುದೇ ಪರವಾನಗಿ  ಇಲ್ಲವೆಂದು ತಿಳಿದುಬಂದಿರುತ್ತೆ. ಆದ್ದರಿಂದ   ಸ್ಥಳದಲ್ಲಿ ಮದ್ಯಾಹ್ನ 12-30 ಗಂಟೆಯಿಂದ   1-30  ಗಂಟೆಯವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆ   ಕ್ರಮ ಜರುಗಿಸಿ  ಸ್ಥಳದಲ್ಲಿ ದೊರೆತ   90 ಎಂ.ಎಲ್ ಸಾಮರ್ಥ್ಯದ HAYWARDS CHEERS  WHISKY ಯ 20  ಟೆಟ್ರಾ ಪಾಕೆಟ್ ಗಳು, ಒಂದು ಪ್ಲಾಸ್ಟಿಕ್ ಚೀಲ, ಸ್ಥಳದಲ್ಲಿ ಬಿದ್ದಿದ್ದ  04 ಖಾಲಿ ಪ್ಲಾಸ್ಟಿಕ್ ಗ್ಲಾಸ್ ಗಳು, HAY WARDS CHEERS  WHISKY ಯ  4 ಖಾಲಿ  ಟೆಟ್ರಾ ಪಾಕೆಟ್ ಗಳನ್ನು  ಮುಂದಿನ ಕ್ರಮಕ್ಕಾಗಿ ವಶಪಡಿಸಿಕೊಂಡು, ಮದ್ಯಾಹ್ನ 2-00 ಗಂಟೆಗೆ  ಠಾಣೆಗೆ ವಾಪಸ್ಸು ಬಂದಿದ್ದು,   ಈ ಮೆಮೋನೊಂದಿಗೆ  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಯ ವಿರುದ್ಧ  ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ –1965 ರೀತ್ಯಾ ಪ್ರಕರಣವನ್ನು ದಾಖಲು ಮಾಡಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.193/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ 06/08/2020 ರಂದು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ ದಿನಾಂಕ 21-06-2020 ರಂದು ಸಂಜೆ 7-00  ಗಂಟೆಗೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಮಾನ್ಯ ಪಿ.ಎಸ್.ಐ. ಎನ್. ಮೋಹನ್ ರವರು ಠಾಣೆಗೆ ಹಾಜರಾಗಿ  03 ಜನ ಸಾಮಿಗಳು, ಮಾಲು ಮತ್ತು ಪಂಚನಾಮೆಯನ್ನು ಹಾಜರುಪಡಿಸಿ ನೀಡಿದ  ದೂರಿನ ಸಾರಾಂಶವೇನೆಂದರೆ ಇವರಿಗೆ ದಿನಾಂಕ: 21/06/2020 ರಂದು ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ ಗೌರಿಬಿದನೂರು ತಾಲ್ಲೂಕು ತೋಕಲಹಳ್ಳಿ ಗ್ರಾಮದ ಬಳಿ ಇರುವ ಅಶ್ವತ್ಥಕಟ್ಟೆಯ ಬಳಿ ಯಾರೋ ಆಸಾಮಿಗಳು  ಹಣವನ್ನು ಪಣವಾಗಿಟ್ಟು ಇಸ್ಪೀಟ್  ಎಲೆಗಳಿಂದ  ಅಕ್ರಮ ಜೂಜಾಟವನ್ನು  ಆಡುತ್ತಿದ್ದಾರೆಂದು  ಖಚಿತವಾದ ಮಾಹಿತಿ ಬಂದ ಮೇರೆಗೆ  ನಾನು ಮತ್ತು  ಸಿಬ್ಬಂದಿಯವರಾದ ಪಿ.ಸಿ-302 ಕುಮಾರ್ ನಾಯಕ್ , ಪಿ.ಸಿ-208 ತಿಪ್ಪೇಸ್ವಾಮಿ,  ಪಿಸಿ – 512 ರಾಜಶೇಖರ, ಪಿ, ಪಿ.ಸಿ-518 ಆನಂದ , ಪಿ.ಸಿ-310 ಮೈಲಾರಪ್ಪ,  ,ಮಪಿಸಿ 247 ಸೌಮ್ಯ ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40, ಜಿ-281 ರಲ್ಲಿ  ತೋಕಲಹಳ್ಳಿ ಗ್ರಾಮ ಸಂಜೆ 5-30 ಗಂಟೆಗೆ ಹೋಗಿ  ಸ್ವಲ್ಪ ದೂರದಲ್ಲಿ   ಸರ್ಕಾರಿ ವಾಹನವನ್ನು ನಿಲ್ಲಿಸಿ   ಮರೆಯಲ್ಲಿ ನಿಂತು ನೋಡಲಾಗಿ  ಗ್ರಾಮದಲ್ಲಿ 03 ಜನರು ಗುಂಪಾಗಿ ಕುಳಿತುಕೊಂಡು  ಅಂದರ್ ಗೆ 100 ರೂ, ಬಾಹರ್ ಗೆ 100 ರೂ  ಎಂದು ಕೂಗುತ್ತಿದ್ದು ಆಸಾಮಿಗಳು ಜೂಜಾಟವನ್ನು ಆಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು  ಪಂಚರ ಸಮಕ್ಷಮದಲ್ಲಿ  ನಾನು ಮತ್ತು ಸಿಬ್ಬಂದಿಯವರು  ದಾಳಿ ಮಾಡಿ ಸುತ್ತುವರೆದು   ಕುಳಿತಿದ್ದವರನ್ನು  ಹಿಡಿದುಕೊಂಡು ವಿಚಾರಿಸಲಾಗಿ 1) ರವಿ ಬಿನ್ ರಾಮಪ್ಪ , 44 ವರ್ಷ, ಗೊಲ್ಲ ಜನಾಂಗ, , ತೋಕಲಹಳ್ಳಿ ಗ್ರಾಮ , ಗೌರೀಬಿದನೂರು ತಾಲ್ಲೂಕು  , 2) ರಾಮಕೃಷ್ಣ ಬಿನ್ ರಂಗಪ್ಪ,  46 ವರ್ಷ, ನೇಯ್ಗೆ ಜನಾಂಗ , ಜಿರಾಯ್ತಿ, ವಾಸ ತೋಕಲಹಳ್ಳಿ  ಗ್ರಾಮ, ಗೌರಿಬಿದನೂರು ತಾಲ್ಲೂಕು , 3)  ರಾಮಾಂಜಿ ಬಿನ್ ನರಸಿಂಹಪ್ಪ,  40 ವರ್ಷ, ನಾಯಕ  ಜನಾಂಗ, ಜಿರಾಯ್ತಿ , ಬೋಡಬಂಡನಹಳ್ಳಿ ಗ್ರಾಮ ಗೌರಿಬಿದನೂರು ತಾಲ್ಲೂಕು. ಎಂದು ತಿಳಿಸಿದ್ದು,ಸ್ಥಳದಲ್ಲಿ ಬಿದ್ದಿದ್ದ ಪಣಕ್ಕಿಟ್ಟಿದ್ದ ಹಣ  ಎಣಿಸಲಾಗಿ  4800/-ರೂ ಹಣ , 52 ಸ್ಪೀಟ್ ಎಲೆಗಳು ಇರುತ್ತೆ.  ಸ್ಥಳದಲ್ಲಿ  ಸಂಜೆ 5-30   ಗಂಟೆಯಿಂದ 6-30  ಗಂಟೆಯವರೆಗೆ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡು, ಠಾಣೆಗೆ ಸಂಜೆ 7-00   ಗಂಟೆಗೆ  ವಾಪಸ್ಸು ಬಂದಿದ್ದು,  ಆರೋಪಿಗಳು, ಪಂಚನಾಮೆ ಮತ್ತು  ಮಾಲನ್ನು ಸಹ ನೀಡುತ್ತಿದ್ದು, ಆರೋಪಿಗಳ ವಿರುದ್ಧ  ಕಾನೂನು ರೀತ್ಯಾ ಕ್ರಮ  ಕೈಗೊಂಡು ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.127/2020 ಕಲಂ. 279,337,427 ಐ.ಪಿ.ಸಿ :-

          ದಿನಾಂಕ:06/08/2020 ರಂದು ಪಿರ್ಯಾದಿದಾರರಾದ ಗೋಪಾಲರೆಡ್ಡಿ ಬಿನ್ ಮಾರಪ್ಪ 39 ವರ್ಷ ವಕ್ಕಲಿಗರು  ಜಿರಾಯ್ತಿ ವಾಸ-ಗಂಧಂನಾಗೇನಹಳ್ಳಿ ಗ್ರಾಮ,ಗುಡಿಬಂಡೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ:ತಾನು ತನ್ನ ಭಾವಮೈದನಾದ ಶಿವಾನಂದ ಬಿನ್ ನಾಗರಾಜು ಹಾಗೂ ಅದೆನ್ನಗಾರಹಳ್ಳಿ ಗ್ರಾಮದ ವಾಸಿಯಾದ ಸೋಮು ರವರು ಯಾವುದೋ ಕೆಲಸದ ಮೇಲೆ ದಿನಾಂಕ:06/08/2020 ರಂದು ಸುಮಾರು 12.30 ಗಂಟೆಯ ಸಮಯದಲ್ಲಿ ಶಿವಾನಂದರವರಿಗೆ ಸೇರಿದ KA-40 EA-9425 ಸ್ಪ್ಲೇಂಡರ್ ಪ್ಲಾಸ್ ದ್ವಿ ಚಕ್ರ ವಾಹನದಲ್ಲಿ ಪೆರೇರಂದ್ರ ಕಡೆಯಿಂದ ಅದೆನ್ನಗಾರಹಳ್ಳಿ ಕಡೆಗೆ ಬರುತ್ತಿದ್ದಾಗ ಕಮ್ಮಗಾನಹಳ್ಳಿ ಕ್ರಾಸ್ ಹತ್ತಿರ ಎದುರುಗಡೆಯಿಂದ ಬರುತ್ತಿದ್ದ KA-03 MD-8109 ನೋಂದಣಿ ಸಂಖ್ಯೆಯ ಕಾರು ಚಾಲಕನು  ಗುಡಿಬಂಡೆ ಕಡೆಯಿಂದ ಅತೀ ವೇಗಆಗಿ ಮತ್ತು ಅಜಾಗರೂಕತೆಯಿಂದ  ತನ್ನ ಕಾರನ್ನು  ಚಾಲನೆ ಮಾಡಿಕೊಂಡು ಬಂದು  ತನ್ನ ಭಾಮೈದನ ದ್ವಿ ಚಕ್ರ ವಾಹನಕ್ಕೆ ಡಿಕ್ಕಿಹೊಡೆಸಿದ  ಪರಿಣಾಮ ತನ್ನ ಭಾಮೈದನ ದ್ವಿ ಚಕ್ರ ವಾಹನ ಜಖಂಗೊಂಡು  ತನ್ನ ಭಾಮೈದನ ಬಲ ಖಾಲು ಮುರಿದಿರುತ್ತದೆ. ಹಾಗೂ ಜೊತೆಯಲ್ಲಿದ್ದ ಸೋಮು ರವರಿಗೆ  ಎರಡು ಕಾಲುಗಳು ಮುರಿದಿದ್ದು ನಂತರ ಕಾರು ಚಾಲಕನು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೋಡಿ ಹೋಗಿರುತ್ತಾನೆ.  ನಂತರ ತನ್ನ ಭಾಮೈದನಾದ ಶಿವಾನಂದ ಹಾಗೂ ಜೊತೆಯಲ್ಲಿದ್ದ ಸೋಮುರವರನ್ನು 108 ಅಂಬುಲೈನ್ಸ್ ನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ  ಹೋಗಿ ದಾಖಲಿಸಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದು ತನ್ನ ಭಾಮೈದ ಶಿವಾನಂದ ಮತ್ತು ಸೋಮು ರವರಿಗೆ  ಮತ್ತು ವಿದ್ಯುತ್ ಕಂಬಕ್ಕೆ  ಡಿಕ್ಕಿ ಹೊಡೆಯಿಸಿದ  ಮೇಲ್ಕಂಡ ಕಾರು ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ  ಪ್ರಕರಣವನ್ನು ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.211/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ;06/08/2020 ರಂದು ಮದ್ಯಾಹ್ನ 3;00 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೇಮೂ ಪಡೆದು ಅಸ್ಪತ್ರೆಗೆ ಬೇಟಿ ನೀಡಿದ್ದು ಗಾಯಳು ಶ್ರೀಕೃಷ್ಣಪ್ಪ ಬಿನ್ ಬೊಮ್ಮಣ್ಣ, ಸುಮಾರು 38 ವರ್ಷ, ಗೊಲ್ಲರು. ಜಿರಾಯ್ತಿ ಕೆಲಸ. ಹುಜಗೂರು ಗ್ರಾಮ. ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೆನೆಂದರೆ, ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು. ತಮ್ಮ ಮನೆಯ ಪಕ್ಕದಲ್ಲಿ ತಮ್ಮ ಬಾಬತ್ತು ಒಂದು ಖಾಲಿ ನೀವೇಶನ ಇದ್ದು ಸದರಿ ಖಾಲಿ ನಿವೇಶನ  ತನ್ನ ತಂದೆಯ ಹೆಸರುನಲ್ಲಿರುತ್ತೆ. ಈಗಿರುವಲ್ಲಿ ತಮ್ಮ ಪಕ್ಕದ ಮನೆಯ ವಾಸಿಯಾದ ಮುನಿಸೊಣ್ಣಪ್ಪ ರವರ ಕುಟುಂಬದವರು ಸದರಿ ಖಾಲಿ ನಿವೇಶದಲ್ಲಿ ನಮಗೆ ಸ್ವಲ್ಪ ಬರುತ್ತೆ ಎಂದು ಆಗಾಗ ತಮ್ಮ ಮೇಲೆ ಗಲಾಟೆ ಮಾಡುತ್ತಿದ್ದರು,ಇದೇ ವಿಚಾರವಾಗಿ ಈಗ್ಗೆ ಸುಮಾರು ಒಂದು ವಾರದ ಹಿಂದೆ ಗಲಾಟೆಯಗಿದ್ದು ಸದರಿ ವಿಚಾರವಾಗಿ ಗ್ರಾಮದಲ್ಲಿ ಹಿರಿಯರು ಸೇರಿ ರಾಜೀ ಪಂಚಾಯ್ತಿ ಮಾಡಿರುತ್ತಾರೆ.ಈಗಿರುವಲ್ಲಿ ದಿನಾಂಕ;06/08/2020 ರಂದು ಬೆಳಗ್ಗೆ 11-15 ಗಂಟೆಯಲ್ಲಿ ತಾನು ಮತ್ತು ತನ್ನ ಅಣ್ಣ ದೇವರಾಜ ತಮ್ಮ ಮನೆಯ ಬಳಿ ಇದ್ದಾಗ ಆದೇ ಸಮಯಕ್ಕೆ ಅಲ್ಲಯೇ ಇದ್ದ ತಮ್ಮ ಪಕ್ಕದ ಮನೆಯ ವಾಸಿಗಳಾದ ನಾರಾಯಣ ಸ್ವಾಮಿ ಬಿನ್ ಲೇಟ್ ಆಂಜಿನಪ್ಪ, ಮುನಿಸೊಣ್ಣಪ್ಪ ಬಿನ್ ಲೇಟ್ ಆಂಜಿನಪ್ಪ, ಜಯಲಕ್ಷ್ಮಮ್ಮ ಕೋಂ ಮುನಿಸೊಣ್ಣಪ್ಪ, ಆನಂದಪ್ಪ ಬಿನ್ ಲೇಟ್ ಆಂಜಿನಪ್ಪ ರವರಗಳು ಬಂದು ಆದೇ ಖಾಲಿ ನೀವೇಶನದ ವಿಚಾರವಾಗಿ ಏಕಾ ಏಕಿ ತಮ್ಮ ಮೇಲೆ ಗಲಾಟೆ ಮಾಡಿ ಏ ಲೋಫರ್ ನನ್ನ ಮಕ್ಕಳೆ’ ಎಂದು ಅವಾಚ್ಯ ಶಬ್ದಗಳಿಂದ ಬೈದು ಆ ಪೈಕಿ ನಾರಾಯಣಸ್ವಾಮಿ ತನ್ನ ಮನೆಯಿಂದ ಕಬ್ಬಿಣದ ಮಚ್ಚನ್ನು ಎತ್ತಿಕೊಂಡು ಬಂದು ತನ್ನ ತಲೆಯ ಹಿಂಭಾಗಕ್ಕೆ ಹಾಕಿ ರಕ್ತಗಾಯವುಂಟುಮಾಡಿರುತ್ತಾನೆ.ನಂತರ ಮುನಿಸೊಣ್ಣಪ್ಪ ಯಾವುದೂ ಒಂದು ದೊಣ್ಣೆಯಿಂದ ಬೆನ್ನಿಗೆ ಹೊಡೆದಿರುತ್ತಾನೆ.ನಂತರ ನಾರಾಯಣಸ್ವಾಮಿ ಆದೇ ದೊಣ್ಣೆಯಿಂದ ತನ್ನ ಅಣ್ಣ ದೇವರಾಜ ರವರ ಮೇಲೆ ಸಹ ಹಲ್ಲೆ ಮಾಡಿರುತ್ತಾನೆ.ಆಗ ತಮ್ಮನ್ನ ಬಿಡಿಸಿಕೊಳ್ಳಲು ಬಂದ ತಮ್ಮ ಗ್ರಾಮದ ವಾಸಿ ಮಂಜುನಾಥ ಬಿನ್ ಲಕ್ಷ್ಮಯ್ಯ ರವರ ಮೇಲೆ ಸಹ ಕೈಗಳಿಂದ ಹಲ್ಲೆ ಮಾಡಿರುತ್ತಾರೆ. ಆ ಸೈಟಿನಲ್ಲಿ ನಮಗೂ ಸ್ಪಲ್ಪ ಬರಬೇಕು  ಆ ವಿಚಾರವಾಗಿ ನಿವೇನಾದರು ಮಾತನಾಡಿದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಹರೀಶ ಬಿನ್ ಗುಂಡಪ್ಪ , ಬಸವರಾಜು ಬಿನ್ ನಾರಾಯಣಸ್ವಾಮಿ ರವರು ಗಲಾಟೆಯನ್ನು ಬಿಡಿಸಿರುತ್ತಾರೆ.ನಂತರ ತಾವು ಯಾವುದೂ ಒಂದು ವಾಹನದಲ್ಲಿ ಬಂದು ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು. ತಮ್ಮ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ಸಂಜೆ 4:00 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಠಾಣಾ ಮೊ.ಸಂ.211/2020 ಕಲಂ: 323.324.504.506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.212/2020 ಕಲಂ. 307,323,341,504,506,120B,143 ರೆ/ವಿ 149 ಐ.ಪಿ.ಸಿ :-

          ದಿನಾಂಕ: 06-08-2020 ರಂದು ಸಂಜೆ 5.30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಕಾನ್ಸ್ಟೇಬಲ್ ಸಿಪಿಸಿ-90 ರವರು ಹಾಜರುಪಡಿಸಿದ ನ್ಯಾಯಾಲಯದಿಂದ ಸಾದರಾದ ದೂರಿನ ಸಾರಾಂಶವೇನೆಂದರೆ, ಫಿರ್ಯಾದಿದಾರರಾದ ಶ್ರೀ. ಡಿ.ಮಹದೇವ್ ಬಿನ್ ದೇವರಾಜ್, 47 ವರ್ಷ, ಮಂಡಿಬೆಲೆ ರಸ್ತೆ, ವಿಜಯಪುರ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರು ತನ್ನ ಬಾಬತ್ತು ವಿಜಯಪುರ ಬೈಪಾಸ್ ರಸ್ತೆಯಲ್ಲಿರುವ ಬುಡಾನ್ ಪಾಳ್ಯ ಗ್ರಾಮದ ಸರ್ವೆ ನಂ. 17/8 ರಲ್ಲಿ ನಂದಿನಿ ಎಂಟರ್ ಪ್ರೈಸಸ್ ಎಂಬ ನೀರು ಶುದ್ದೀಕರಣ ಘಟಕವನ್ನು 2013 ರಲ್ಲಿ ಪ್ರಾರಂಭಿಸಿ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನು ಪಡೆದುಕೊಂಡಿರುತ್ತಾರೆ, ನಂತರ ಫಿರ್ಯಾದಿದಾರರ ದೂರದ ಸಂಬಂದಿ ಹಾಗೂ ಆರೋಪಿತನ ಮಗ 2018 ನೇ ಸಾಲಿನಲ್ಲಿ ತನ್ನ ನಂದಿನಿ ಎಂಟರ್ ಪ್ರೈಸಸ್ ನ ಪಾಲುದಾರರಾಗಿ ವ್ಯವಹಾರ ಮಾಡಲು ಅನುಮತಿಯನ್ನು ಕೋರಿರುತ್ತಾರೆ ಹಾಗೂ ಕಂಪನಿಯ ಹೆಸರನ್ನು ಟಾಕ್ವ ಪುಡ್ & ಬೆವರೇಜಸ್ ಎಂಬುದಾಗಿ ಬದಲಾವಣೆ ಮಾಡಲು ಕೋರಿದ್ದು, ಅದರಂತೆ ತಾನು ಕಂಪನಿಯ ಹೆಸರನ್ನು ದಿನಾಂಕ: 09-08-2018 ರಂದು ಬದಲಾವಣೆ ಮಾಡಿದ್ದು ಅಂದಿನಿಂದಲೂ ಸಹ ಆರೋಪಿ ಅಶ್ವತ್ಥನಾರಯಣ ರವರು ಫಿರ್ಯಾದಿದಾರರ ಮೇಲುಸ್ತುವಾರಿಯಲ್ಲಿ ಕಂಪನಿಯನ್ನು ನೋಡಿಕೊಳ್ಳುತ್ತಿದ್ದು ವ್ಯಾಪಾರದ ಪೂರ್ತಿ ಹಣವನ್ನು ಆರೋಪಿ ಲೆಡ್ಜರ್ ಪುಸ್ತಕದಲ್ಲಿ ಸಹಿ ಮಾಡಿ ಪಡೆದುಕೊಂಡು ಹೋಗುತ್ತಿದ್ದರು, ದಿನಾಂಕ: 11-02-2019 ರಿಂದ 04-06-2019 ರ ವ್ಯಾಪಾರದ ಹಣವನ್ನು 72,61,141-00 ರೂಗಳ ಹಣವನ್ನು ಆರೋಪಿತನೇ ಪಡೆದುಕೊಂಡಿದ್ದು. ಫೆಬ್ರವರಿ ಮಾಹೆಯಲ್ಲಿ ಆರೋಪಿತನ ಮಗನು ಫಿರ್ಯಾದಿದಾರರಿಗೆ ಯಾವುದೇ ಮಾಹಿತಿಯನ್ನು ನೀಡದೆ ವಿದೇಶಕ್ಕೆ ಹೊರಟು ಹೋಗಿದ್ದು, ಸದರಿ ಹಣವನ್ನು ಸೆಟಲ್ ಮೆಂಟ್ ಮಾಡಿಕೊಳ್ಳಲು ಆರೋಪಿತನನ್ನು ಕರೆದರೂ ಸಹ ಬಂದಿರುವುದಿಲ್ಲ.  ಹೀಗಿರುವಲ್ಲಿ ದಿನಾಂಕ: 01-07-2020 ರಂದು ಸಂಜೆ ಸುಮಾರು 6.30 ಗಂಟೆಯಿ ದ 7.00 ಗಂಟೆಯ ಮದ್ಯದಲ್ಲಿ ತಾನು ಪ್ಯಾಕ್ಟರಿಯಿಂದ ಮನೆಗೆ ಬರುವ ಸಲುವಾಗಿ ತನ್ನ ಬಾಬತ್ತು ನಂ. ಕೆಎ-43-ಎಂ-8604 ಕಾರಿನಲ್ಲಿ ಕುಮಾರ್ ಪ್ಯಾಮಿಲಿ ಡಾಬಾದ ಬಳಿ ಬೈ ಪಾಸ್ ರಸ್ತೆಯಲ್ಲಿ ಬರುತ್ತಿದ್ದಾಗ ಆರೋಪಿತನು ಇತರೆ 3 ಜನ ಅಪರಿಚಿತ ವ್ಯಕ್ತಿಗಳೊಂದಿಗೆ ಆರೋಪಿತನ ಬಾಬತ್ತು ನಂ. ಕೆಎ-40-ಎಂ-8622 ಕಾರಿನಲ್ಲಿ ಬಂದು ಫಿರ್ಯಾದಿದಾರರ ಕಾರಿಗೆ ಅಡ್ಡಗಟ್ಟಿ ಆರೋಪಿತನು ಮತ್ತು ಆತನೊಂದಿಗೆ ಬಂದಿದ್ದ 3 ಜನ ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರನ್ನು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ಅಶ್ವತ್ಥನಾರಾಯಣ ರವರು ಫಿರ್ಯಾದಿದಾರರ ಹೊಟ್ಟೆಯ ಎಡಭಾಗಕ್ಕೆ ಚಾಕುವಿನಿಂದ ತಿವಿದು ಕೊಲೆ ಮಾಡಲು ಪ್ರಯತ್ನಿಸಿದ್ದು ಆರೋಪಿಯೊಂದಿಗೆ ಇದ್ದ 3 ಜನ ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರನ್ನು ಕಾಲುಗಳಿಂದ ಒದ್ದು ಗಾಯಗಳನ್ನುಂಟುಮಾಡಿದ್ದು ಆ ಸಮಯದಲ್ಲಿ ಪ್ರತಾಪ್ ಬಿನ್ ಮುನಿರಾಜಪ್ಪ ಹಾಗೂ ಚಂದ್ರು ಬಿನ್ ಲಕ್ಷ್ಮಿನರಸಿಂಹಪ್ಪ ರವರು ಜಗಳ ಬಿಡಿಸಿದ್ದು ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವುದಾಗಿ ಮೇಲ್ಕಂಡವರ ವಿರುದ್ದ ತನಿಖೆ ಮಾಡಿ ವರದಿ ಮಾಡಲು ಘನ ನ್ಯಾಯಾಲಯ ಆದೇಶ ಮಾಡಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತದೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.213/2020 ಕಲಂ. 323,427,447,504,506 ರೆ/ವಿ 34 ಐ.ಪಿ.ಸಿ & 3(1)(f),3(1)(r),3(1)(s) The SC & ST (Prevention of Atrocities) Amendment Act 2015:-

          ದಿನಾಂಕ: 06-08-2020 ರಂದು ರಾತ್ರಿ 10-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ ಸಂತೋಷ್ ಕುಮಾರ್ ಬಿನ್ ಕೆ.ಎನ್. ಆಂಜಿನಪ್ಪ, 34 ವರ್ಷ, ನಾಯಕರು, ಕುಂದಲಗುರ್ಕಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಶಿಡ್ಲಘಟ್ಟ ತಾಲ್ಲೂಕು ಕಸಬಾ ಹೋಬಳಿ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಗ್ರಾಮ ಠಾಣಾ ಸ್ವತ್ತಿನಲ್ಲಿ ನಾವುಗಳು ಸುಮಾರು 50 ವರ್ಷಗಳಿಂದಲೂ ಅನುಭವದಲ್ಲಿರುತ್ತೇವೆ ಹಾಗೂ ನಾವು ಮನೆ ಕಟ್ಟಿಕೊಳ್ಳಲು ಪಂಚಾಯ್ತಿಯಿಂದ ಮನೆ ಮಂಜೂರು ಸಹಾ ಮಾಡಿ ಪಾಯ ಹಾಕಿರುವುದಕ್ಕೆ ರೂ. 25,000/- ಸಾವಿರ ರೂಪಾಯಿಗಳ ಚೆಕ್ಕನ್ನು ಸಹ ಕೊಟ್ಟಿರುತ್ತಾರೆ. ಹೀಗಿರುವಲ್ಲಿ ಇದೇ ಕುಂದಲಗುರ್ಕಿ ಗ್ರಾಮದ ಒಕ್ಕಲಿಗ ಜಾತಿಗೆ ಸೇರಿದ ನಾರಾಯಣರೆಡ್ಡಿ ಬಿನ್ ಹನುಮಂತಪ್ಪ ಮತ್ತು ಪ್ರಮೀಳಮ್ಮ ಕೋಂ ನಾರಾಯಣರೆಡ್ಡಿ, ಮಮತಮ್ಮ ಕೋಂ ನಾರಾಯಣರೆಡ್ಡಿ. ಡಿ.ಆರ್ ನಾರಾಯಣರೆಡ್ಡಿ ಬಿನ್ ರಾಮಪ್ಪ, ದೊಣ್ಣಹಳ್ಳಿ ಕುಟುಂಬದವರು ಸೇರಿ ತಮ್ಮ ಮನೆ ಪಾಯವನ್ನು ಕಿತ್ತು ಹಾಕಿರುತ್ತಾರೆ. ನಂತರ ದಿನಾಂಕ: 14-05-2020 ರಂದು ಬೆಳೆಗ್ಗೆ ಸುಮಾರು 8.00 ಗಂಟೆ ಸಮಯದಲ್ಲಿ ಮೇಲ್ಕಂಡ ಜಾಗಕ್ಕೆ ಹೋಗಿ ನಾರಾಯಣರೆಡ್ಡಿ ರವರನ್ನು ವಿಚಾರಿಸಿದಾಗ ತಾನೇ ಪಾಯವನ್ನು ಕಿತ್ತು ಹಾಕಿದ್ದು ಈ ಜಾಗಕ್ಕೆ ಹಣ ಕೊಟ್ಟು ಕೊಂಡುಕೊಂಡಿರುತ್ತೇನೆ, ಹಣ ನಿಮ್ಮ ತಂದೆ ಮತ್ತು ನಿಮ್ಮ ಅಣ್ಣನಿಗೆ ಕೊಟ್ಟಿರುತ್ತೇನೆ ಇನ್ನು ಮುಂದೆ ಈ ಜಾಗಕ್ಕೆ ಏನಾದರೂ ಬಂದರೆ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಹೇಳಿದನು, ನಂತರ ಅವರ ಕುಟುಂಬದವರು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿನ್ನಮ್ಮನೇ ಕೇಯಾ, ನಾಯಕ ಜಾತಿನೇ ಕೇಯಾ, ಏ ಕುಂಟೆ ನನ್ನ ಮಗನೇ ನೀನು ಒಂದು ಕಾಲಿನಲ್ಲಿ ನಡಿಯುತ್ತಿದ್ದಿಯ ಆ ಕಾಲೂ ಸಹ ಕತ್ತಿರಿಸಿ ಬಿಡುತ್ತೇನೆ ನೀನು ಎಂದಿಗೂ ನಡೆದಾಡುವುದಕ್ಕೆ ಆಗದಂತೆ ಮಾಡುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ತನ್ನ ತಲೆಕೂದಲನ್ನು ಹಿಡಿದು ಎಳೆದಾಡಿ ಮುಖಕ್ಕೆ ಉಗುಳಿ ಆ ಜಾಗದಿಂದ ಎಳೆದು ಆಚೆ ಹಾಕಿದರು, ಜಾಗ ನನ್ನದು ನಮ್ಮ ತಂದೆ ತಾಯಿ ಮನೆ ಕಟ್ಟಿಕೊಳ್ಳಲು ಬಿಟ್ಟಕೊಟ್ಟಿದ್ದರು ಆ ಜಾಗದಲ್ಲಿ ಸುಮಾರು ರೂ. 1,30,000/-ಗಳನ್ನು ಖರ್ಚು ಮಾಡಿ ಹಾಕಿದ್ದ ಪಾಯವನ್ನು ನಾಶಪಡಿಸಿರುತ್ತಾರೆ. ಈ ಮೇಲ್ಕಂಡ ವಿಷಯದಲ್ಲಿ ಗಲಾಟೆ ನಡೆಯುತ್ತಿದ್ದಾಗ ಇದೇ ಗ್ರಾಮದ ಚನ್ನಕೇಶವರೆಡ್ಡಿ ಬಿನ್ ಮುನಿವೆಂಕಟಪ್ಪ, ದೇವರಾಜ ಬಿನ್ ರಂಗಪ್ಪ, ಮಣಿಕಂಠ ಬಿನ್ ಬ್ರಹ್ಮಾಚಾರಿ ಆದ ಇವರುಗಳು ಈ ಗಲಾಟೆಯನ್ನು ನೋಡಿ ಬಿಡಿಸಿರುತ್ತಾರೆ, ಇದರ ಬಗ್ಗೆ ಊರಿನ ಗ್ರಾಮಸ್ಥರು ಹಿರಿಯ ಮುಖಂಡರು ಸೇರಿ ನ್ಯಾಯ ಮಾಡುತ್ತೇವೆಂದು ತಿಳಿಸಿದ್ದಕ್ಕೆ ಈ ದೂರನ್ನು ತಡವಾಗಿ ಕೊಡುತ್ತಿದ್ದು, ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರಿಗಿಸಿಸಬೇಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಮೊ.ಸಂ. 213/2020 ಕಲಂ 323, 427, 447, 504, 506 ರೆ/ವಿ 34 ಐಪಿಸಿ ಮತ್ತು ಕಲಂ 3(1)(ಎಫ್), 3(1)(ಆರ್), 3(1)(ಎಸ್) The SC & ST (Prevention of Atrocities) Amendment Act-2015 ಆಕ್ಟ್ ರೀತ್ಯ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.214/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:06-08-2020 ರಂದು ರಾತ್ರಿ 10-00 ಗಂಟೆಯಲ್ಲಿ ಶಿಡ್ಲಘಟ್ಟ ಸರ್ಕಾರಿ ಅಸ್ಪತ್ರೆಯಿಂದ ಬಂದ ಮೇಮೂ ಪಡೆದು ಅಸ್ಪತ್ರೆಗೆ ಬೇಟಿ ನೀಡಿದ್ದು ಗಾಯಳು ಮುನಿಸೊಣ್ಣಪ್ಪ ಬಿನ್ ಲೇಟ್ ಆಂಜಿನಪ್ಪ,ಸುಮಾರು 48 ವರ್ಷ, ವಕ್ಕಲಿಗರು, ಜಿರಾಯ್ತಿ ಕೆಲಸ. ಹುಜಗೂರು ಗ್ರಾಮ. ಶಿಡ್ಲಘಟ್ಟ ತಾಲ್ಲೂಕು ರವರು ನೀಡಿದ ಹೇಳಿಕೆಯ ದೂರಿನ ಸಾರಾಂಶವೆನೆಂದರೆ, ತಾನು ಜಿರಾಯ್ತಿ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು. ತಮ್ಮ ಮನೆಯ ಪಕ್ಕದಲ್ಲಿ ತಮ್ಮ ಗ್ರಾಮದ ಕೃಷ್ಣಪ್ಪ ಬಿನ್ ಬೊಮ್ಮಣ್ಣ ರವರ ಮನೆ ಇದ್ದು, ತಮ್ಮ ಮನೆಯ ಮುಂದೆ ತಮ್ಮ ಬಾಬತ್ತು ಖಾಲಿ ಜಾಗ  ಇದ್ದು ಸದರಿ ಖಾಲಿ ಜಾಗದಲ್ಲಿ ತಮ್ಮ ಮನೆಯ ಮೇಲಿಂದ ಬರುತ್ತಿದ್ದ ಮಳೆ ನೀರು ಹೋಗಲು ಕಾಲುವೆ ಮಾಡಿದ್ದು, ಈಗಿರುವಲ್ಲಿ ಸದರಿ ಜಾಗ ನಮ್ಮದು ಅಲ್ಲಿ ನೀರು ಬಿಡಬೇಡಿ ಎಂದು ಕೃಷ್ಣಪ್ಪ ರವರು ಮತ್ತು ಅವರ ಕುಟುಂಬದವರು ಆಗಾಗ  ತಮ್ಮ ಮೇಲೆ ಗಲಾಟೆ ಮಾಡುತ್ತಿದ್ದರು, ಈಗಿರುವಲ್ಲಿ ದಿನಾಂಕ: 06-08-2020 ರಂದು ಬೆಳಿಗ್ಗೆ 11-30 ಗಂಟೆಯಲ್ಲಿ ತಾನು ಮತ್ತು ತನ್ನ ಹೆಂಡತಿ ಜಯಲಕ್ಷ್ಮೀ ರವರು ತಮ್ಮ ಮನೆಯ ಹತ್ತಿರ ಇದ್ದಾಗ ಅದೇ ಸಮಯದಲ್ಲಿ ಅಲ್ಲಿಯೇ ಇದ್ದ ತಮ್ಮ ಪಕ್ಕದ ಮನೆಯ ವಾಸಿಗಳಾದ ಕೃಷ್ಣಪ್ಪ ಬಿನ್ ಬೊಮ್ಮಣ್ಣ, ಸುಭ್ರಮಣಿ ಬಿನ್ ಬೊಮ್ಮಣ್ಣ, ಬೊಮ್ಮಣ್ಣ ಬಿನ್ ಜೂಲಪ್ಪ ಮತ್ತು ಸುವರ್ಣಮ್ಮ ಕೋಂ  ಕೃಷ್ಣಪ್ಪ ರವರುಗಳು  ನಮ್ಮ ಜಮೀನಿನಲ್ಲಿ ನಿಮ್ಮ ಮನೆಯ ಮೇಲಿನ ನೀರು ಬಿಡಬೇಡಿ ಎಂದು ಏಕಾ ಏಕಿ  ತಮ್ಮ ಮೇಲೆ ಗಲಾಟೆ ಮಾಡಿ ಲೋಪರ್ ನನ್ನ ಮಕ್ಕಳೆ ಎಂದು ಅವಾಚ್ಯಶಬ್ದಗಳಿಂದ ಬೈದು ಅ ಪೈಕಿ ಕೃಷ್ಣಪ್ಪ ಅಲ್ಲಿಯೇ  ಇದ್ದ ಯಾವುದೋ ಒಂದು ದೊಣ್ಣೆಯನ್ನು ಎತ್ತಿಕೊಂಡು ಬಂದು ದೊಣೆಯಿಂದ ಎದೆಗೆ , ಬೆನ್ನಿಗೆ ಹೊಡೆದು ನೋವಿನ ಗಾಯವುಂಟುಮಾಡಿರುತ್ತಾನೆ, ನಂತರ ಉಳಿದವರು ಕೈಗಳಿಂದ ತನ್ನ ಮೇಲೆ ಹಲ್ಲೆ ಮಾಡಿರುತ್ತಾರೆ, ತನ್ನನ್ನು ಬಿಡಿಸಿಕೊಳ್ಳಲು ಬಂದ ತನ್ನ ಹೆಂಡತಿ ಜಯಲಕ್ಷ್ಮೀ ರವರಿಗೆ ಸುವರ್ಣಮ್ಮ  ಅದೇ ದೊಣ್ಣೆಯಿಂದ ತನ್ನ ಎಡಕೈಗೆ, ಎಡಭಾಗದ ಹಣೆಗೆ ಹೊಡೆದು ನೋವಿನ ಗಾಯವುಂಟುಮಾಡಿರುತ್ತಾಳೆ. ಮತ್ತೆ ಅ ಜಮೀನಿನ ತಂಟೆಗೆ ಬಂದರೆ ನಿಮ್ಮನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ, ಸದರಿ ವಿಚಾರವನ್ನು ಗ್ರಾಮದ ಹಿರಿಯರಿಗೆ ತಿಳಿಸೋಣವೆಂದು ಸುಮ್ಮನಾಗಿದ್ದೇವು, ನಂತರ ಇದೇ ದಿನ ರಾತ್ರಿ 8-00 ಗಂಟೆಯಲ್ಲಿ ಮತ್ತೆ ದೇವರಾಜ ಬಿನ್ ಕಾಮಯ್ಯ , ಸುಭ್ರಮಣಿ ಬಿನ್ ಬೊಮ್ಮಣ್ಣ ರವರುಗಳು ತಮ್ಮ ಮನೆಯ ಬಳಿ ಬಂದು ಮತ್ತೆ ತನ್ನ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾರೆ ನಂತರ ತಾನು ಮತ್ತು ತನ್ನ ಹೆಂಡತಿ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಗಲಾಟೆಯನ್ನು ತಮ್ಮ ಗ್ರಾಮದ ಲಕ್ಷ್ಮೀನಾರಾಯಣ ಬಿನ್ ವೆಂಕಟರಾಯಪ್ಪ ಮತ್ತು ರಾಮಚಂದ್ರ ಬಿನ್ ಮುನಿಯಪ್ಪ ರವರುಗಳ ಬಿಡಿಸಿರುತ್ತಾರೆ, ಅದ್ದರಿಂದ ತಮ್ಮ ಮೇಲೆ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆಯ ದೂರಿನ ಮೇರೆಗೆ ರಾತ್ರಿ 11:00 ಗಂಟೆಗೆ ವಾಪಸ್ಸು ಠಾಣೆಗೆ ಬಂದು ಠಾಣಾ ಮೊ.ಸಂ.214/2020 ಕಲಂ 323, 324, 504, 506 ರೆ/ವಿ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೆ.