ದಿನಾಂಕ :07/07/2020 ರ ಅಪರಾಧ ಪ್ರಕರಣಗಳು

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 55/2020 ಕಲಂ. 341,34,504,323 ಐಪಿಸಿ :-

     ದಿನಾಂಕ: 06/07/2020 ರಂದು  ಮದ್ಯಾಹ್ನ 13-15 ಗಂಟೆಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ವೆಂಕಟರೆಡ್ಡಿ ಬಿನ್ ಲೇಟ್ ತಿಮ್ಮರೆಡ್ಡಿ, 55 ವರ್ಷ, ವಕ್ಕಲಿಗರು, ವ್ಯವಸಾಯ ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ:8867823276 ರವರು  ನೀಡಿದ ಹೇಳೀಕೆಯ ದೂರಿನ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ.  ನಮ್ಮ ತಂದೆ ಲೇಟ್ ತಿಮ್ಮಾರೆಡ್ಡಿ, ತಾಯಿ ರಾಮಕ್ಕರವರಿಗೆ 4 ಜನ ಮಕ್ಕಳಿದ್ದು, 1 ನೇ ನಾನು ವೆಂಕಟರೆಡ್ಡಿ 2 ನೇ ಲೇಟ್ ರಾಜಶೇಖರ ರೆಡ್ಡಿ, 3 ನೇ ಬೈರೆಡ್ಡಿ, 4 ನೇ ಚಿನ್ನಪ್ಪರೆಡ್ಡಿ, ರವರಾಗಿರುತ್ತೇವೆ. ನಮ್ಮ  ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಮತ್ತು ನನ್ನ ತಮ್ಮ ಬೈರೆಡ್ಡಿ ರವರಿಗೆ  ತಕರಾರುಗಳಿರುತ್ತೆ. ನಾನು ನನ್ನ ಪಿತ್ರಾರ್ಜಿತ  ಜಮೀನಿನಲ್ಲಿ  ಕೊಂಡ ಬೇವಿನ ಗಿಡಗಳನ್ನು ನೆಟ್ಟಿರುತ್ತೇನೆ.  ದಿನಾಂಕ:05/07/2020 ರಂದು ಸಂಜೆ 6-00 ಗಂಟೆಯ ಸಮಯದಲ್ಲಿ ನಾನು ಜಮೀನಿನ ಬಳಿಗೆ ಹೋಗಿ ಕೊಂಡ ಬೇವಿನ ಗಿಡಗಳನ್ನು ನೊಡಿದಾಗ ಗಿಡಗಳನ್ನು ಯಾರೋ ಬೆಳೆಯದಂತೆ ಅಲುಗಾಡಿಸಿ ಮೇಲಕ್ಕೆ ಕಿತ್ತಿರುವುದು ಕಂಡು ಬಂದಿದ್ದು, ನಾನು ಯಾರೋ ಗಿಡಗಳನ್ನು ಕಿತ್ತಿರುವುದು ಎಂದು ನನ್ನ ಪತ್ನಿ ಅನಸೂಯಮ್ಮ ರವರನ್ನು ಕೇಳುತ್ತಿದ್ದಾಗ ನನ್ನ ತಮ್ಮ ಬೈರೆಡ್ಡಿ ಅದನ್ನು ಕೇಳಿಸಿಕೊಂಡು ಮನಸ್ಸಿನಲ್ಲಿಟ್ಟುಕೊಂಡು ದ್ವೇಷದಿಂದ ನಿನ್ನೆ ದಿನ ದಿನಾಂಕ:05/07/2020 ರಂದು ರಾತ್ರಿ 10-00 ಗಂಟೆಯ ಸಮಯದಲ್ಲಿ ನನ್ನ ತಮ್ಮ ಬೈರೆಡ್ಡಿ, ಆತನ ಹೆಂಡತಿ ಆದಿಲಕ್ಷ್ಮಮ್ಮ ಹಾಗೂ ಆತನ ಮಗ ತಿಮ್ಮಾರೆಡ್ಡಿ ರವರುಗಳು ನಮ್ಮ ಮನೆಯ ಬಳಿಗೆ ಬಂದು ನನ್ನನ್ನು ಕುರಿತು ಲೋಪರ್ ಸೂಳೆ ನನ್ನಮಗನೇ ನನಗೆ ಜಮೀನಿನಲ್ಲಿ ಭಾಗ ಕೊಡದೇ ಬೈಯುತ್ತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಮೈಮೇಲೆ ಹೊಡೆದು ಕಾಲಿನಿಂದ ಒದ್ದಿರುತ್ತಾನೆ.ಅಡ್ಡ ಬಂದ ನನ್ನ ಪತ್ನಿ ಅನಸೂಯಮ್ಮಗೆ ಆದಿ ಲಕ್ಷ್ಮಮ್ಮ ಕೈಗಳಿಂದ ಹೊಡೆದು ಕೆಳಗೆ ಬೀಳಿಸಿ ಕಾಲುಗಳಿಂದ ಒದ್ದು ಮೂಗೆಟುಂಟುಮಾಡಿರುತ್ತಾಳೆ. ತಿಮ್ಮಾರೆಡ್ಡಿ ನನ್ನ ಬೆನ್ನಿಗೆ ಗುದ್ದಿ, ನಾನು ಎಲ್ಲಿ ಹೋಗದಂತೆ ಅಡ್ಡಗಟ್ಟಿ ನೆಲದ ಮೇಲೆ ಬೀಳಿಸಿ ಕಾಲುಗಳಿಂದ ಒದ್ದು ಮೂಗೇಟುಂಟುಮಾಡಿರುತ್ತಾನೆ. ಅಷ್ಟರಲ್ಲಿ ಸ್ಥಳಕ್ಕೆ ಬಂದ ನಮ್ಮ ಗ್ರಾಮದ ಶ್ರೀರಾಮರೆಡ್ಡಿ ಬಿನ್ ನಾರಾಯಣಪ್ಪ, ಹಾಗೂ ವೆಂಕಟರೆಡ್ಡಿ ಬಿನ್ ಶ್ರಿರಾಮರೆಡ್ಡಿ,  ರವರುಗಳು ನಮಗೆ ಜಗಳ ಬಿಡಿಸಿರುತ್ತಾರೆ. ನಂತರ ನಮಗೆ ಮೈಕೈ ನೋವು ಜಾಸ್ತಿಯಾಗಿದ್ದರಿಂದ  ಈ ದಿನ ದಿನಾಂಕ:06/07/2020 ರಂದು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ  ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆ. ಆದ್ದರಿಂದ ಮೇಲ್ಕಂಢವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 56/2020 ಕಲಂ. 506,341,34,504,323, 324 ಐಪಿಸಿ :-

     ದಿನಾಂಕ: 06/07/2020 ರಂದು  ಮದ್ಯಾಹ್ನ 15-30 ಗಂಟೆಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಕೆ ಟಿ ಬೈರೆಡ್ಡಿ  ಬಿನ್ ಲೇಟ್ ತಿಮ್ಮರೆಡ್ಡಿ, 52 ವರ್ಷ, ವಕ್ಕಲಿಗರು, ವ್ಯವಸಾಯ ವಾಸ: ಕೋನಾಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ ನಂ:6363245478 ರವರು  ನೀಡಿದ ಹೇಳೀಕೆಯ ದೂರಿನ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ.  ನಮ್ಮ ತಂದೆ ಲೇಟ್ ತಿಮ್ಮಾರೆಡ್ಡಿ ಹಾಗೂ ತಾಯಿ ರಾಮಕ್ಕ ರವರಿಗೆ 4 ಜನ ಮಕ್ಕಳಿದ್ದು, 1 ನೇ ವೆಂಕಟರೆಡ್ಡಿ 2 ನೇ ಲೇಟ್ ರಾಜಶೇಖರ ರೆಡ್ಡಿ, 3 ನೇ ನಾನು  ಬೈರೆಡ್ಡಿ, 4 ನೇ ಚಿನ್ನಪ್ಪರೆಡ್ಡಿ, ರವರಾಗಿರುತ್ತೇವೆ. ನಮ್ಮ  ಪಿತ್ರಾರ್ಜಿತ ಆಸ್ತಿಯಲ್ಲಿ ನನಗೂ ಮತ್ತು ನನ್ನ ಅಣ್ಣ ಕೆ ಟಿ ವೆಂಕಟರೆಡ್ಡಿ ರವರಿಗೆ  ನಮ್ಮ  ಪಿತ್ರಾರ್ಜಿತ ಆಸ್ತಿಯಲ್ಲಿ ವಿಭಾಗಗಳ ವಿಚಾರದಲ್ಲಿ ಮುಂಚೆಯಿಂದಲು ಮನಸ್ತಾಪಗಳಿರುತ್ತೆ. ಹೀಗಿರುವಲ್ಲಿ  ದಿನಾಂಕ:06/07/2020 ರಂದು ಬೆಳಿಗ್ಗೆ 10-15 ಗಂಟೆಯ ಸಮಯದಲ್ಲಿ ನಾನು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ನನ್ನ ಅಣ್ಣ ಕೆ ಟಿ ವೆಂಕಟರೆಡ್ಡಿ ಮತ್ತು ಆತನ ಪತ್ನಿ ಅನಸೂಯಮ್ಮ ರವರು ಬಂದು ನನ್ನನ್ನು ಕುರಿತು ನಮ್ಮ ಜಮೀನಿನಲ್ಲಿ ಏಕೆ ಕುರಿಗಳನ್ನು ಮೇಯಿಸುತ್ತಿರುವುದು ಬೋಳಿಮಗನೇ , ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ನಾನು ಇದು ನನ್ನ ಜಮೀನು ಎಂದು ಹೇಳಿದ್ದಕ್ಕೆ ಕೆ ಟಿ ವೆಂಕಟರೆಡ್ಡಿ ನನ್ನನ್ನು ಮುಂದಕ್ಕೆ ಹೋಗದಂತೆ ಅಡ್ಡಗಟ್ಟಿ ಕೈಗಳೀಂದ ಮೈಮೇಲೆ , ಬೆನ್ನಿನ ಮೇಲೆ ಹೊಡೆದು ನೋವುಂಟು ಮಾಡಿ ನನ್ನನ್ನು ಕೆಳಗೆ ಬೀಳಿಸಿದ್ದು, ಆತನ ಹೆಂಡತಿ ಅನಸೂಯಮ್ಮ ಕಾಲಿನಿಂದ ನನ್ನ ಬೆನ್ನಿಗೆ ಒದ್ದು ಕೈಗಳಿಂದ ತಲೆಗೆ ಗುದ್ದಿದಳು, ಕೆ ಟಿ ವೆಂಕಟರೆಡ್ಡಿ ಅಲ್ಲಿಯೇ ಬಿದ್ದಿದ್ದ ಕೋಲಿನಿಂದ ನನ್ನ ಸೊಂಟಕ್ಕೆ ಹೊಡೆದು  ಗಾಯಪಡಿಸಿರುತ್ತಾನೆ. ಕೆ ಟಿ ವೆಂಕಟರೆಡ್ಡಿ ಮಗ ಅದೇ ಕೋಲಿನಿಂದ ನನ್ನ ಕೈಗಳಿಗೆ ಮತ್ತು ಕಾಲುಗಳಿಗೆ ಹೊಡೆದು ಗಾಯಪಡಿಸಿರುತ್ತಾನೆ.   3 ಜನ ಸೇರಿ ಈ ನನ್ನ ಮಗನನ್ನು ಸಾಯಿಸಿಬಿಡೋಣವೆಂದು ಪ್ರಾಣ ಬೆದರಿಕೆ ಹಾಕಿದಾಗ ನಾನು ನೋವಿನಿಂದ ಕಿರುಚಿಕೊಂಡಿದ್ದು ಅಷ್ಟರಲ್ಲಿ ಮನೆಯಲ್ಲಿದ್ದ ನನ್ನ ಪತ್ನಿ ಆದಿ ಲಕ್ಷ್ಮಮ್ಮ ಮತ್ತು ನಮ್ಮ ಗ್ರಾಮದ ಲಚ್ಚಿರೆಡ್ಡಿ ಬಿನ್ ಪೆದ್ದ ವೆಂಕಟಪ್ಪ, ಶ್ರಿರಾಮರೆಡ್ಡಿ ಬಿನ್ ಲೇಟ್ ನಾರಾಯಣಪ್ಪ ರವರು ಬಂದು ಅವರಿಂದ ನಮ್ಮನ್ನು ಬಿಡಿಸಿರುತ್ತಾರೆ. ನಂತರ ನನ್ನನ್ನು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ  ದಾಖಲುಪಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಢವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

 1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 57/2020 ಕಲಂ. 506,341,34,504,323,324 ಐಪಿಸಿ :-

     ದಿನಾಂಕ: 06/07/2020 ರಂದು  ಮದ್ಯಾಹ್ನ 16-30 ಗಂಟೆಗೆ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು  ಕೃಷ್ಣಾರೆಡ್ಡಿ ಬಿನ್ ಲೇಟ್ ವೆಂಕಟರಾಯಪ್ಪ 58 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಜುಂಜುನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ :8970010994 ರವರು ನೀಡಿದ ಹೇಳೀಕೆಯ ದೂರಿನ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ಗ್ರಾಮದಲ್ಲಿ  ನನ್ನ ಬಾಬತ್ತು ಪಿತ್ರಾರ್ಜಿತ ಜಮೀನಿದ್ದು,  ಸರ್ವೆನಂ: 52(2), 52(3), 52(4)  ರಲ್ಲಿ ಸುಮಾರು 1 ½ ಎಕರೆ ಜಮೀನಿದ್ದು ಸದರಿ ಜಮೀನನ್ನು ನಾನು ಉಳುಮೆಮಾಡುತ್ತಿರುತ್ತೇನೆ. ಸದರಿ ಜಮೀನು ನನ್ನ ಹೆಸರಿನಲ್ಲಿ ಮತ್ತು ನನ್ನ ತಮ್ಮ ನಾರಾಯಣಸ್ವಾಮಿ ರವರ ಹೆಸರಿನಲ್ಲಿ ಜಂಟಿ ಖಾತೆಯಿರುತ್ತೆ. ಸದರಿ ಜಮೀನಿನ ವಿಚಾರವಾಗಿ ನನಗೂ ಮತ್ತು  ನನ್ನ ಚಿಕ್ಕಪ್ಪನ ಮಗ ಸಿ ವೆಂಕಟರೆಡ್ಡಿ  ಆತನ ತಮ್ಮ ಸೀತಾರಾಮರೆಡ್ಡಿ ಈತನ ಅಣ್ಣ ಶ್ರೀರಾಮರೆಡ್ಡಿ ರವರುಗಳಿಗೆ ತಕರಾರುಗಳಿದ್ದು ಈ ಬಗ್ಗೆ ಚಿಂತಾಮಣಿ ನ್ಯಾಯಾಲಯದಲ್ಲಿ ದಾವೆಯಿದ್ದು,  ಓ ಎಸ್ 148/2019 ರಂತೆ ಕೇಸು ನಡೆಯುತ್ತಿರುತ್ತೆ.   ಸದರಿ  ನನ್ನ ಬಾಬತ್ತು ಜಮೀನಿನಲ್ಲಿ ದಿನಾಂಕ: 06/07/2020 ರಂದು ಬೆಳಿಗ್ಗೆ  ಸುಮಾರು  10-30 ಗಂಟೆಯಲ್ಲಿ  ನಾನು , ನನ್ನ ತಮ್ಮ ನಾರಾಯಣಸ್ವಾಮಿ, ನನ್ನ ಮಗ ಅನಿಲ್ ಕುಮಾರ್ ಉಳುಮೆ ಮಾಡುತ್ತಿದ್ದಾಗ, ನನ್ನ ಚಿಕ್ಕಪ್ಪನ ಮಗ ಸಿ ವೆಂಕಟರೆಡ್ಡಿ ಆತನ ತಮ್ಮ ಸೀತಾರಾಮರೆಡ್ಡಿ ಮತ್ತು ಸೀತಾರಾಮರೆಡ್ಡಿ ರವರ ಮಗ ಅಬಿಲಾಶ್ ಹಾಗೂ ಈತನ ತಮ್ಮ ಬಾಬುರೆಡ್ಡಿರವರುಗಳು ಬಂದು ನಮ್ಮನ್ನು ಅಡ್ಡಗಟ್ಟಿ ಉಳುಮೆ ಮಾಡದಂತೆ ತಡೆದು ಆ ಪೈಕಿ ಸಿ ವೆಂಕಟರೆಡ್ಡಿ ಬೋಳಿ ನನ್ನ ಮಕ್ಕಳು ನಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದೀರಾ ನಿಮಗೆ ಎಷ್ಟು ದೈರ್ಯ ಎಂದು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ನನ್ನ ಬೆನ್ನಿಗೆ ಗುದ್ದಿ ನೋವುಂಟು ಮಾಡಿರುತ್ತಾನೆ. ಸೀತಾರಾಮರೆಡ್ಡಿ ಅಲ್ಲಿಯೇ ಬಿದ್ದಿದ್ದ ಕೋಲಿನಿಂದ ನನ್ನ ಕೈಗಳಿಗೆ ಕಾಲುಗಳಿಗೆ ಹೊಡೆದು ನೋವುಂಟು ಮಾಡಿರುತ್ತಾರೆ. ಅಬಿಲಾಷನು ನನ್ನ ತಮ್ಮ ನಾರಾಯಣಸ್ವಾಮಿ ರವರಿಗೆ ಅದೆ ಕೋಲಿನಿಂದ ಹೊಡೆದು ಮೂಗೇಟುಂಟು ಮಾಡಿ ಬಾಯಿಯ ಹಲ್ಲುಗಳಿಂದ ಎಡ ಕೈ ಮುಂಗೈಗೆ ಕಚ್ಚಿ ಗಾಯಪಡಸಿರುತ್ತಾನೆ.  ಬಾಬುರೆಡ್ಡಿ ನನ್ನ ಮಗ ಅನಿಲ್ ಕುಮಾರ್ ರವರ ಬಲ ಹಣೆಗೆ ಕೈಯಿಂದ ಗುದ್ದಿ ಮೂಗೇಟುಂಟು ಮಾಡಿರುತ್ತಾರೆ. ಎಲ್ಲರೂ ಸೇರಿ ಈ ನನ್ನ ಮಕ್ಕಳನ್ನು ಸಾಯಿಸಿಬಿಡೋಣವೆಂದು ಪ್ರಾಣ ಬೆದರಿಕೆ ಹಾಕಿದಾಗ ನಾವು ನೋವಿನಿಂದ ಕಿರುಚಿಕೊಂಡಿದ್ದು, ಅಷ್ಟರಲ್ಲಿ ಸ್ಥಳಕ್ಕೆ ಬಂದ ಬಿ ಆನಂದ ಬಿನ್ ಬೈಯಣ್ಣ ಹಾಗೂ  ಮದ್ದಿರೆಡ್ಡಿ ಬಿನ್ ಬೈಯಣ್ಣ ರವರುಗಳು ಬಂದು ನಮ್ಮನ್ನು ಅವರುಗಳಿಂದ ಪಾರುಮಾಡಿ ಗಾಯಗೊಂಡಿದ್ದ ನಮ್ಮನ್ನು ಬಟ್ಲಹಳ್ಳಿ  ಸರ್ಕಾರಿ  ಆಸ್ಪತ್ರೆ ಕರೆದು ಕೊಂಡು  ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ.  ಆದ್ದರಿಂದ  ಮೇಲ್ಕಂಡವರ 4 ಜನರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೊಟ್ಟ  ಹೇಳಿಕೆಯ ದೂರಿನ ಸಾರಾಂಶವಾಗಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.92/2020 ಕಲಂ. 87 ಕೆ.ಪಿ ಆಕ್ಟ್ :-

     ದಿ:06.07.2020 ರಂದು ರಾತ್ರಿ 11-00 ಗಂಟೆಗೆ ಮಾನ್ಯ ಸಿ.ಪಿ.ಐ ಸಾಹೇಬರು ನೀಡಿದ ಜ್ಞಾಪನದ ಸಾರಾಂಶವೇನೆಂದರೆ ದಿನಾಂಕ:06/07/2020 ರಂದು ಸಂಜೆ 5-00 ಗಂಟೆಯಲ್ಲಿ ನನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು, ಆವಲಹಳ್ಳಿ ಪಕ್ಕದಲ್ಲಿರುವ ಬಲಜಿಗರ ಪಡೆ ಅರಣ್ಯ ಪ್ರದೇಶದ ವೈಕಣ್ಲಮ್ಮ ದೇವಸ್ಥಾನದ ಪಕ್ಕದ ಅಡುಗೆ ಕೋಣೆಯ ಹಿಂದೆ ಸುಮಾರು ಆಸಾಮಿಗಳು ಗುಂಪು ಸೇರಿಕೊಂಡು ಸಾರ್ವಜನಿಕ ರಸ್ತೆಗೆ ಹತ್ತಿರವಾಗಿ ಹಣವನ್ನು ಪಣವಾಗಿ ಕಟ್ಟಿ ಅಂದರ್-ಬಾಹರ್ ಎಂಬ ಇಸ್ಪೀಟು ಜೂಜಾಟ ವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಮಾಹಿತಿಯಂತೆ ಸದರಿ ಜೂಜಾಟದ ಮೇಲೆ ದಾಳಿ ಮಾಡುವುದಕ್ಕಾಗಿ ಕಛೇರಿಗೆ ಪಂಚಾಯ್ತಿದಾರರನ್ನು ಕರೆಯಿಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿದ್ದು, ನಂತರ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ(ಪ್ರಭಾರ) ಓಂಪ್ರಕಾಶ್ ಗೌಡ, ಸಿಬ್ಬಂದಿಯವರಾದ ಹೆಚ್.ಸಿ-114 ರವಿಕುಮಾರ್, ಹೆಚ್.ಸಿ-241 ಮಂಜುನಾಥ, ಹೆಚ್.ಸಿ-248 ಪ್ರವೀಣ್ ಕುಮಾರ್, ಹೆಚ್.ಸಿ-229 ನಾಗೇಶ್, ಹೆಚ್.ಸಿ-38 ಸುರೇಶ್, ಸಿಪಿಸಿ-245 ವಿಜಯ್ ಕುಮಾರ್, ಸಿಪಿಸಿ-264 ನರಸಿಂಹಮೂರ್ತಿ, ಸಿಪಿಸಿ-   ಬಾಲಾಜಿ, ರವರೊಂದಿಗೆ ಇಲಾಖೆಯಿಂದ ಒದಗಿಸಿರುವ ನಂ: ಕೆ.ಎ-40-ಜಿ-538, ಹಾಗೂ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಕೆ.ಎ-40-ಜಿ-567 ರ ವಾಹನಗಳಲ್ಲಿ ಹತ್ತಿಕೊಂಡು ಅಣಕನೂರು-ಅಡವಿಗೊಲ್ಲವಾರಹಳ್ಳಿ ಮಾರ್ಗವಾಗಿ ಆವಲಹಳ್ಳಿ ಗ್ರಾಮದ ಬಳಿಗೆ ಹೋಗಿ ಬಲಜಿಗರ ಪಡೆ ಅರಣ್ಯ ಪ್ರದೇಶದೊಳಗೆ ಹೋಗಿ ವಾಹನಗಳನ್ನು ಸ್ವಲ್ಪ ದೂರದಲ್ಲಿಯೇ ನಿಲ್ಲಿಸಿ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಮರಗಳ ಮರೆಯಲ್ಲಿ ಸ್ವಲ್ಪ ದೂರ ನಡೆದುಕೊಂಡು ಹೋಗಿ ನೋಡಲಾಗಿ ಸುಮಾರು ಜನರು ಸೇರಿಕೊಂಡು ಹಣವನ್ನು ಪಣವಾಗಿ ಕಟ್ಟಿ ಅಂದರ್-ಬಾಹರ್ ಜೂಜಾಟವಾಡುತ್ತಿದ್ದು, ಪಂಚರ ಸಮ್ಮುಖದಲ್ಲಿ ಸಿಬ್ಬಂದಿಯವರು ದಾಳಿ ಮಾಡಿ ಆಸಾಮಿಗಳನ್ನು ಹಿಡಿದುಕೊಂಡು ನನ್ನ ಮುಂದೆ ಹಾಜರುಪಡಿಸಿದ್ದು, ಅವರ ಹೆಸರು/ವಿಳಾಸಗಳನ್ನು ಕೇಳಿದಾಗ 1)ಹರೀಶ್ ಬಿನ್ ನರಸಿಂಹಪ್ಪ, 30 ವರ್ಷ, ಮಡಿವಾಳ ಜನಾಂಗ, ಶಿಕ್ಷಕ ವೃತ್ತಿ, ವಾಸ: ಕಣಜೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 2)ರಘು ಬಿನ್ ಶ್ರೀನಿವಾಸ, 35 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ನುಗುತಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 3)ಮಲ್ಲಿಕಾರ್ಜುನ ಬಿನ್ ದೊಡ್ಡಪಿಳ್ಳಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಜಾತವಾರ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 4)ರವೀಂದ್ರ ಬಿನ್ ಮುನಿರಾಜಪ್ಪ, 41 ವರ್ಷ, ನಾಯಕ ಜನಾಂಗ, ಜಿರಾಯಿತಿ, ವಾಸ: ಎಲೇಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. 5)ವೇಣು ಬಿನ್ ಮುನೇಗೌಡ, 34 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ಮಂಚನಬೆಲೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು. ಎಂದು ತಿಳಿಸಿದ್ದು, ಸ್ಥಳದಿಂದ ಓಡಿಹೋದ ಆಸಾಮಿಯ ಬಗ್ಗೆ ವಿಚಾರ ಮಾಡಿದಾಗ 6)ಅಶೋಕ ಬಿನ್ ಮುನಿಯಪ್ಪ, 40 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ: ವರದಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿದುಬಂದಿರುತ್ತೆ. ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿ ಪರಿಶೀಲಿಸಲಾಗಿ ಪಣವಾಗಿ ಕಟ್ಟಿದ್ದ ಒಟ್ಟು ಹಣ 20,000/- ರೂಪಾಯಿಗಳು ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಪ್ಲಾಸ್ಟಿಕ್ ಚೀಲ ಮತ್ತು ಐದು ವಿವಿಧ ಕಂಪನಿಯ ಮೊಬೈಲ್ ಗಳನ್ನು ರಾತ್ರಿ 9-45 ಗಂಟೆಯಿಂದ ರಾತ್ರಿ 10-45 ಗಂಟೆಯವರೆಗೆ ಪಂಚರ ಸಮ್ಮುಖದಲ್ಲಿ ಪಂಚನಾಮೆ ಮುಖಾಂತರ ಅಮಾನತ್ತು ಪಡಿಸಿಕೊಂಡಿರುವುದಾಗಿ ಮೇಲ್ಕಂಡ ಆರೋಪಿಗಳು ಹಾಗೂ ಮಾಲುಗಳನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು, ಆರೋಪಿಗಳ ವಿರುದ್ದ ಕಲಂ, 87 ಕೆ.ಪಿ ಆಕ್ಟ್ ರೀತ್ಯಾ ಕಾನೂನು ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಿ ನೀಡಿದ ಜ್ಞಾಪನವನ್ನು ಪಡೆದು ಠಾಣಾ ಮೊ ಸಂ 92/2020 ಕಲಂ 87 ಕೆ ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.31/2020 ಕಲಂ. 504,506,34 ಐ.ಪಿ.ಸಿ & 3(1)(r),3(1)(s) SC AND THE ST (PREVENTION OF ATTROCITIES) ACT:-

          ದಿನಾಂಕ-06/07/2020 ರಂದು ಸಂಜೆ 05:30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಲೀಲಾವತಿ ಎನ್,ಎಮ್ ಕೋಂ ರಮೇಶ್ ,30 ವರ್ಷ,ಪರಿಶಿಷ್ಟ ಜಾತಿ ವಾರ್ಡ್ ನಂ-09 ಚಾಮರಾಜ ಪೇಟೆ ಚಿಕ್ಕಬಳ್ಳಾಪುರ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ತಾನು ಚಿಕ್ಕಬಳ್ಳಾಪುರ ನಗರದಲ್ಲಿ ಬ್ಯೂಟಿಷಿಯನ್ ಕೆಲಸ ಮಾಡಿಕೊಂಡಿದ್ದು ತನಗೆ ಮೈಲಪ್ಪನಹಳ್ಳಿ ಗ್ರಾಮದ ಶಿಲ್ಪಾ ಎಂಬುವವರುಯ ಸುಮಾರು ಎರಡು ವರ್ಷಗಳಿಂದ ಪರಿಚಯವಿದ್ದು ಇಬ್ಬರು ಸ್ನೇಹಿತರಾಗಿದ್ದು ಹವ್ಯಾಸವಾಗಿ TIK-TOK ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದು ಹೀಗುರುವಾಗ ಕೆಲವು ದಿನಗಳ ಹಿಂದೆ ಶಿಲ್ಪಾರವರು ತಾನು ಮಾಡಿದ ಕೆಲವು ವೀಡಿಯೋಗಳನ್ನು ತಿರುಚಿ ಅದಕ್ಕೆ ಕೆಟ್ಟ ಅರ್ಥ ಬರುವಂತೆ TIK-TOK ತಯಾರಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಈ ವಿಚಾರವನ್ನು ಕೇಳಿದ್ದಕ್ಕೆ ತಾನು ಮಾಡಿಲ್ಲ ತನ್ನ ತಂಟೆಗೆ ಬಂದರೆ ಇದರಲ್ಲಿ ಬಾಗಿಯಾಗಿರುವವರನ್ನು ಸುಮ್ಮನೇ ಬಿಡುವುದಿಲ್ಲ ಮೀಡಿಯಾ ಮುಂದೆ ಎಳೆದು ಒಬ್ಬೋಬ್ಬರನ್ನು ಜುಟ್ಟು ಹಿಡಿದುಕೊಂಡು ಹೊಡೆಯುತ್ತೇನೆಂದು ಬೈದಿದ್ದು ಈ ವಿಚಾರದಲ್ಲಿ ತನಗೆ ಅವಮಾನವಾಗಿದ್ದರಿಂದ ದಿನಾಂಕ-23/06/2020 ರಂದು ಚಿಕ್ಕಬಳ್ಳಾಫುರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಪೊಲೀಸರು ಅದೇ ದಿನ ಕರೆಸಿಕೊಂಡು ವಿಚಾರಣೆ ಮಾಡಿದ್ದು ವಿಚಾರಣೆ ಮುಗಿದು ಸಂಜೆ 4:00 ಗಂಟೆಗೆ ಠಾನೆಯಿಂದ ಹೊರಗೆ ಬಂದಾಗ ರಸ್ತೆಯಲ್ಲಿ ಶಿಲ್ಪಾ ತನ್ನನ್ನು ಕುರಿತು “ಈ ಮಾದಿಗ ಮುಂಡೆಗಳೇ ಯೋಗ್ಯತೆನೆ ಇಷ್ಟು ಈ ಸೂಳೆ ಮುಂಡೆಗಳಿಗೆ ಎಷ್ಟು ಮಾಡಿದರು ನಮಗೆ ಕಚ್ಚಕ್ಕೆ ಬರುತ್ತವೆ ಮಾದಿಗ ಜಾತಿನೇ ಇಷ್ಟು ನೀವು ಕೇಸು ವಾಪಸ್ ತೆಗೆದುಕೊಂಡಿಲ್ಲ ಅಂದರೆ ಸಾಯಿಸುತ್ತೇನೆ ಲೇ ಮಾದಿಗ ಮುಂಡೆ ನಿನಗೆ ಲಾರಿ ಡ್ರೈವರ್ ಗಳನ್ನು ಬಿಡುತ್ತೀನಿ,ಹಂದಿಗಳನ್ನು ಬಿಡುತ್ತೀನಿ,ಲೋಫರ್ ಮುಂಡೆ ನಿಮ್ಮದು ಕೀಳು ಜಾತಿ ನನ್ನದು ಏನ್ ಕಿತ್ಕೋತ್ತಿಯೋ ಕಿತ್ಕೋ ನಿನ್ ಕೈಯಲ್ಲಿ ಏನ್ ಆಗೋದಿಲ್ಲ ಕೇಸು ವಾಪಸ್ ತೆಗೆದುಕೊಂಡಿಲ್ಲ ಅಂದರೆ ಸೈಬರ್ ಠಾಣೆ ಮುಂದೆ ಜುಟ್ಟು ಹಿಡಿದುಕೊಂಡು ಮಿಡೀಯಾ ಮುಂದೆನೆ ಹೊಡಿತೀನಿ ಲೇ ತರ್ಡ್ ಕ್ಲಾಸ್ ಮುಂಡೆ ಎಷ್ಟೇ ನಿನ್ನ ದುರಂಹಕಾರ” ಎಂದು ಕೆಟ್ಟದಾಗಿ ಬೈದು ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿ ತನಗೆ ಸಾರ್ವಜನಿಕರ ಮುಂದೆ ಅವಮಾನ ಮಾಡಿದ್ದು ಅವರ ಮಾವ ವೆಂಕಟಸ್ವಾಮಿರವರು ಇವು ಮಾದಿಗ ನಾಯಿಗಳು ಎಂದು ಬೈದು ಚಿಕ್ಕಬಳ್ಳಾಪುರದಲ್ಲಿ ಹೇಗೆ ಓಡಾಡುತ್ತಾಳೋ ನೋಡ್ತಿನಿ ಎಂದು ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದು ಅಷ್ಟರಲ್ಲಿ ಅಲ್ಲೇ ಇದ್ದ ವಾಪಸಂದ್ರ ಮಮತಾ,ಕೊತ್ತನೂರು ಮುನಿಯಪ್ಪ,ನಕ್ಕಲಕುಂಟೆ ಬರ್ಕತ್,ಕುಡುವತಿ ಪೂಜಪ್ಪ ಹಾಗೂ ಇತರರು ಜಗಳ ಬಿಡಿಸಿದರು ಈ ವಿಚಾರವಾಗಿ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಯಾವುದೇ ರಾಜಿ ಮಾಡದಿದ್ದ ಕಾರಣ  ಈ ದಿನ ದಿನಾಂಕ-6/07/2020 ರಂದು ಠಾಣೆಗೆ ಬಂದು ದೂರನ್ನು ಕೊಟ್ಟಿದ್ದು ಶಿಲ್ಪಾ ಮತ್ತು ಅವರ ಮಾವ ವೆಂಕಟಸ್ವಾಮಿ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.25/2020 ಕಲಂ. 279,337 ಐ.ಪಿ.ಸಿ & 134 INDIAN MOTOR VEHICLES ACT:-

          ದಿನಾಂಕ:-06/07/2020 ರಂದು ಮಧ್ಯಾಹ್ನ 2-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಧುಕರ್ ಎನ್ ಬಿನ್ ನಾರಾಯಣಸ್ವಾಮಿ ಕೆ 40 ವರ್ಷ, ವಕ್ಕಲಿಗರು, ಜಿರಾಯ್ತಿ, ತಾಂಡ್ರಮರದಹಳ್ಳಿ ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ತಮ್ಮ ಚಿಕ್ಕಮ್ಮನ ಮಗನಾದ ಭುವನ್ ಗೌಡ ಬಿನ್ ಅಶ್ವತ್ಥಪ್ಪ 22 ವರ್ಷ, ವಕ್ಕಲಿಗರು, ಜಿರಾಯ್ತಿ, ಅಂದಾರ್ಲಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ರವರು ದಿನಾಂಕ:-06/07/2020 ರಂದು ತಮ್ಮ ಗ್ರಾಮದಿಂದ ಚಿಕ್ಕಬಳ್ಳಾಪುರ ನಗರದ ಹೂವಿನ ಮಾರುಕಟ್ಟೆಗೆ ಹೋಗಿ ಹೂವುಗಳನ್ನು ಮಾರಿಕೊಂಡು ಬರಲು ತಮ್ಮ ತಂದೆಯ ಬಾಬತ್ತು KA-40-U-8906 ರ ಹೊಂಡಾ ಆಕ್ಟೀವಾ ಸ್ಕೂಟಿ ದ್ವಿಚಕ್ರವಾಹನದಲ್ಲಿ ಚಿಕ್ಕಬಳ್ಳಾಪುರ ನಗರದ ಕೆ.ವಿ.ಕ್ಯಾಂಪಸ್ ಬಳಿಯ ಖಾಲಿ ಮೈದಾನದಲ್ಲಿರುವ ತಾತ್ಕಾಲಿಕ ಹೂವಿನ ಮಾರುಕಟ್ಟೆಗೆ ಹೋಗಿ ಹೂವುಗಳನ್ನು ಮಾರಿಕೊಂಡು ವಾಪಸ್ಸು ಗ್ರಾಮಕ್ಕೆ ಬರಲು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಮಾರುಕಟ್ಟೆಯ ಓಳಗೆ ದ್ವಿಚಕ್ರವಾಹನವನ್ನು ತಿರುಗಿಸುತ್ತಿದ್ದಾಗ ಹಿಂದಿನಿಂದ ಬಂದ KA-51-C-1105 ರ ಟಾಟಾ ಏಸಿ ಚಾಲಕ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನವನ್ನು ತಿರುಗಿಸುತ್ತಿದ್ದ ತಮ್ಮ ಚಿಕ್ಕಮ್ಮನ ಮಗನಾದ ಭುವನ್ ಗೌಡ ರವರ KA-40-U-8906 ರ ಹೊಂಡಾ ಆಕ್ಟೀವಾ ಸ್ಕೂಟಿ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ಭುವನ್ ಗೌಡ ರವರು ದ್ವಿಚಕ್ರವಾಹನ ಸಮೇತ ಕೆಳಗೆ ಬಿದ್ದಾಗ ವಾಹನ ಜಕಂಗೊಂಡು ಭುವನ್ ಗೌಡ ರವರಿಗೆ ಬಲಕಾಲಿಗೆ ರಕ್ತ ಗಾಯವಾಗಿದ್ದು, ಅಲ್ಲಿನ ಸ್ಥಳೀಯರು ಗಾಯಾಳುವನ್ನು ಉಪಚರಿಸಿ ಅಲ್ಲಿಗೆ ಬಂದ ಯಾವುದೋ ಕಾರಿನಲ್ಲಿ ಚಿಕಿತ್ಸೆಗಾಗಿ ಜೀವನ್ ಆಸ್ಪತ್ರೆಗೆ ಸೇರಿಸುತ್ತಿರುವುದಾಗಿ ತನಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದು, ಚಿಕ್ಕಬಳ್ಳಾಪುರ ಟೌನ್ ನಲ್ಲಿಯೇ ಇದ್ದ ತಾನು ತಕ್ಷಣ ಜೀವನ್ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು ಗಾಯಾಳು ಭುವನ್ ಗೌಡ ರವರಿಗೆ ಹೆಚ್ಚಿನ ಗಾಯವಾಗಿದ್ದರಿಂದ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಡೆಸ್ಟಾರ್ ಆಸ್ಪತ್ರೆಗೆ ಕಳುಹಿಸಿದ್ದು, ಸದರಿ ಅಪಘಾತ ಪಡಿಸಿದ KA-51-C-1105 ರ ಟಾಟಾ ಏಸಿ ಚಾಲಕನ ಬಗ್ಗೆ ತಿಳಿಯಲಾಗಿ ಸದರಿ ಚಾಲಕ ವಾಹನವನ್ನು ಅಪಘಾತವಾದ ಸ್ಥಳದಲ್ಲಿಯೇ ಬಿಟ್ಟು ಹೊರಟು ಹೋಗಿರುವುದಾಗಿ ತಿಳಿದುಬಂದಿದ್ದು, ಸದರಿ ಅಪಘಾತ ಪಡಿಸಿ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಹೊರಟು ಹೋದ KA-51-C-1105 ರ ಟಾಟಾ ಏಸಿ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಬೆರಳಚ್ಚು ದೂರಿನ ಮೇರೆಗೆ ದಿನಾಂಕ:-06/07/2020 ರಂದು ಮಧ್ಯಾಹ್ನ 2-00 ಗಂಟೆಗೆ ಪ್ರಕರಣ ದಾಖಲಿಸಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.259/2020 ಕಲಂ. 143,147,148,323,324,504,506,149 ಐ.ಪಿ.ಸಿ & 3(1)(f),3(1)(r),3(1)(s)  The SC & ST (Prevention of Atrocities) Amendment Act 2015:-

          ದಿನಾಂಕ 06-07-2020 ರಂದು ಸಂಜೆ 6-30 ಗಂಟೆಗೆ ದೇವಮ್ಮ ಕೋಂ ಶ್ರೀರಾಮಪ್ಪ, 50ವರ್ಷ, ನಾಯಕರು, ಮನೆಗೆಲಸ, ವಾಸ:ದ್ವಾರಪ್ಪಲ್ಲಿ ಗ್ರಾಮ  ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ತಾನು ನಾಯಕ ಜನಾಂಗಕ್ಕೆ ಸೇರಿರುತ್ತೇನೆ. ತಮ್ಮ ಜಮೀನು ಮತ್ತು ಇದೇ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದ ವೆಂಕಟರೆಡ್ಡಿ ಬಿನ್ ಕೋನಪ್ಪರವರ ಜಮೀನು ತಮ್ಮ ಗ್ರಾಮದ ಸಮೀಪ ಅಕ್ಕಪಕ್ಕದಲ್ಲಿರುತ್ತೆ. ತಮ್ಮ ಗಂಡನ ಅಣ್ಣ ತಮ್ಮಂದಿರು ಜಮೀನುಗಳನ್ನು ವಿಭಾಗ ಮಾಡಿಕೊಳ್ಳಲು ಈಗ್ಗೆ ಸುಮಾರು 6 ತಿಂಗಳ ಹಿಂದೆ ತಮ್ಮ ಜಮೀನುಗಳನ್ನು ಸರ್ವೆ ಮಾಡಿಸಿದಾಗ ತಮ್ಮ ಪಕ್ಕದಲ್ಲಿರುವ ವೆಂಕಟರೆಡ್ಡಿರವರ ಜಮೀನಿನಲ್ಲಿ 4 ಅಡಿ ಜಮೀನು ಬಂದಿರುತ್ತದೆ. ನಂತರ ತಾವು ಮೇಲ್ಕಂಡ ಸರ್ವೆ ಅಧಿಕಾರಿಗಳು ಹದ್ದು ಬಸ್ತು ನಿಗದಿಪಡಿಸಿದ ಸ್ಥಳದಲ್ಲಿ ತಾವು ಕಲ್ಲುಗಳನ್ನು ನೆಟ್ಟಿರುತ್ತೇವೆ. ದಿನಾಂಕ:02-07-2020 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದ ವೆಂಕಟರವಣಪ್ಪ ಬಿನ್ ವೆಂಕಟಪ್ಪ ರವರ ಟಮೋಟ ತೋಟದಲ್ಲಿ ಟಮೋಟವನ್ನು ಕೀಳುತ್ತಿದ್ದಾಗ ಅಲ್ಲಿಯೇ ಸ್ವಲ್ಪ ದೂರದಲ್ಲಿರುವ ತಮ್ಮ ಜಮೀನಿನಲ್ಲಿ ಯಾವುದೋ ಜೆಸಿಬಿ ಕೆಲಸ ಮಾಡುತ್ತಿದ್ದು, ತಕ್ಷಣ ತಾನು ಸ್ಥಳಕ್ಕೆ ಹೋಗಿ ನೋಡಲಾಗಿ ಶೆಟ್ಟಿಹಳ್ಳಿ ಗ್ರಾಮದ ಸವರ್ಣಿಯ ವಕ್ಕಲಿಗ ಜನಾಂಗಕ್ಕೆ ಸೇರಿದ ವೆಂಕಟರೆಡ್ಡಿ ಬಿನ್ ಕೋನಪ್ಪ ಎಂಬುವವರು ಜೆಸಿಬಿಯಿಂದ ಈ ಹಿಂದೆ ನೆಟ್ಟಿದ್ದ ಕಲ್ಲುಗಳನ್ನು ಕಿತ್ತು ನಮ್ಮ ಜಮೀನಿನಲ್ಲಿ ಹಾಕುತ್ತಿದ್ದು, ತಾನು ವೆಂಕಟರೆಡ್ಡಿರವರನ್ನು ಕುರಿತು ಏಕೆ ಸರ್ವೆ ಮಾಡಿಸಿ ನೆಟ್ಟಿರುವ ಕಲ್ಲುಗಳನ್ನು ಕಿತ್ತು ಹಾಕಿದ್ದು, ಎಂದು ಕೇಳಿದಾಗ ಮೇಲ್ಕಂಡ ವೆಂಕಟರೆಡ್ಡಿರವರು ಇದು ತಮ್ಮ ಜಮೀನು ಈ ಜಮೀನಿನ ತಂಟೆಗೆ ಬಂದರೆ ನಿನ್ನನ್ನು ಇಲ್ಲಿಯೇ ಊತು ಹಾಕುತ್ತೇನೆ ಬೇವರ್ಷಿ ಮುಂಡೆ ಎಂದು ಅವಾಚ್ಯ ಶಬ್ದಗಳಿಂದ ಬೈದು ವೆಂಕಟರೆಡ್ಡಿರವರು ಅಲ್ಲಿಯೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ಎಡಭಾಗದ ಸೊಂಟಕ್ಕೆ ಹೊಡೆದು ಮೂಗೇಟು ಉಂಟು ಮಾಡಿರುತ್ತಾನೆ. ಅಷ್ಟರಲ್ಲಿ ಶೆಟ್ಟಿಹಳ್ಳಿ ಗ್ರಾಮದ ಸವರ್ಣಿಯ  ವಕ್ಕಲಿಗ ಜನಾಂಗಕ್ಕೆ ಸೇರಿದ ಸುಬ್ರಮಣಿ ಬಿನ್ ಚಿಕ್ಕನರಸಪ್ಪ, ಅಶೋಕರೆಡ್ಡಿ ಬಿನ್ ರಾಮಚಂದ್ರಪ್ಪ, ರಮೇಶ್ ರೆಡ್ಡಿ ಬಿನ್ ಲಕ್ಷ್ಮಣ್ಣ, ನವನೀತ್ ಕುಮಾರ್ ಬಿನ್ ಸುಬ್ರಮಣಿ ಮತ್ತು ರವಿರೆಡ್ಡಿ ಬಿನ್ ಲೇಟ್ ಬೈರೆಡ್ಡಿ ಎಂಬುವವರು  ಅಕ್ರಮ ಗುಂಪು ಕಟ್ಟಿಕೊಂಡು ಬಂದು ತನ್ನನ್ನು ಕುರಿತು ಈ ಬಾಯಿ ಮುಂಡನಿ ಈ ಪೊದ್ದು ಇಡಕೂಡದು ಎಂದು ತನ್ನ ಜಾತಿಯ ಬಗ್ಗೆ ನಿಂದನೆ ಮಾಡಿ ಸುಬ್ರಮಣಿ ಮತ್ತು ಅಶೋಕರೆಡ್ಡಿರವರು ಕೈಗಳಿಂದ ತನ್ನ ಮೈಮೇಲೆ ಹೊಡೆದು ಮೈಕೈ ನೋವುಂಟು ಮಾಡಿರುತ್ತಾರೆ. ಆಗ ತನ್ನ ಭಾವನ ಮಗನಾದ ತಮ್ಮ ಗ್ರಾಮದ ಮಧು ಬಿನ್ ಕದಿರಪ್ಪ ಎಂಬುವವರು ಜಗಳ ಬಿಡಿಸಲು ಬಂದಾಗ ರಮೇಶ್ ರೆಡ್ಡಿ, ನವನೀತ್ ಕುಮಾರ್ ಮತ್ತು ರವಿರೆಡ್ಡಿರವರು ಕೈಗಳಿಂದ ಮಧು ರವರ ಮೈಮೇಲೆ ಹೊಡೆದು ಮೈಕೈ ನೋವುಂಟು ಮಾಡಿರುತ್ತಾರೆ. ಹಾಗೂ ಇನ್ನೊಂದು ಸಲ ತಮ್ಮ ತಂಟೆಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತನ್ನ ಮೈಧುನ ಮಗನಾದ ನರೇಶ ಬಿನ್ ಕದಿರಪ್ಪ ಮತ್ತು ಗಂಗಾಧರ ಬಿನ್ ಲೇಟ್ ನರಸಿಂಹಪ್ಪರವರು ಬಂದು ಜಗಳವನ್ನು ಬಿಡಿಸಿರುತ್ತಾರೆ. ನಂತರ ತನ್ನ ಗಂಡ ಶ್ರೀರಾಮಪ್ಪರವರು ತನ್ನನ್ನು ಹಾಗೂ ಮಧು ರವರನ್ನು ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿ ಮನೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಗಲಾಟೆಯ ಬಗ್ಗೆ ತಮ್ಮ ಗ್ರಾಮದ ಹಿರಿಯರು ರಾಜಿ-ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ ತಾನು ಇಲ್ಲಿಯವರೆಗೂ ಠಾಣೆಯಲ್ಲಿ ದೂರನ್ನು ನೀಡದೇ ಇದ್ದು, ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರು ಇಲ್ಲಿಯವರೆಗೂ ರಾಜಿ-ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಗಲಾಟೆ ಮಾಡಿ ಜಾತಿ ನಿಂದನೆ ಮಾಡಿದ ಮೇಲ್ಕಂಡವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.260/2020 ಕಲಂ. 143,147,148,323,324,504,506,149 ಐ.ಪಿ.ಸಿ:-

     ದಿನಾಂಕ 06-07-2020 ರಂದು ರಾತ್ರಿ 8-15 ಗಂಟೆಗೆ ಅಶೋಕ ಬಿನ್ ರಾಮಚಂದ್ರರೆಡ್ಡಿ, 35 ವರ್ಷ, ವಕ್ಕಲಿಗರು, ಜಿರಾಯ್ತಿ ಮತ್ತು ಗಾರೆಕೆಲಸ, ವಾಸ: ಶೆಟ್ಟಿಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಹಾಲಿವಾಸ :ಚಂದಾಪುರ, ಬೆಂಗಳೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಗಾರೆಕೆಲಸ ಮಾಡಿಕೊಂಡಿರುತ್ತೇನೆ. ತಾನು ಆಗಾಗ್ಗೆ ತಮ್ಮ ಗ್ರಾಮಕ್ಕೆ ಬಂದು ಹೋಗುತ್ತಿರುತ್ತೇನೆ. ದಿನಾಂಕ:01-07-2020 ರಂದು ತಾನು ಚಂದಾಪುರದಿಂದ ತಮ್ಮ ಗ್ರಾಮಕ್ಕೆ ಬಂದಿರುತ್ತೇನೆ. ತಮ್ಮ ಜಮೀನನ್ನು ಸಮತಟ್ಟು ಮಾಡಲು ಜೆಸಿಬಿ ಬೇಕಾಗಿದ್ದರಿಂದ ವಿಚಾರ ಮಾಡಲಾಗಿ ದಿನಾಂಕ:02-07-2020 ರಂದು ಜೆಸಿಬಿ ದ್ವಾರಪ್ಪಲ್ಲಿ ಗ್ರಾಮದ ಬಳಿಯಿರುವ ವೆಂಕಟರೆಡ್ಡಿ ರವರ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಚಾರ ತಿಳಿದು ಬೆಳಿಗ್ಗೆ ಸುಮಾರು 10-00 ಗಂಟೆಯ ಸಮಯದಲ್ಲಿ ತಾನು ಮತ್ತು ತಮ್ಮ ಗ್ರಾಮದ ನವನೀತ್ ಕುಮಾರ್ ಬಿನ್ ಸುಬ್ರಮಣ್ಯರೆಡ್ಡಿ ರವರು ದ್ವಾರಪ್ಪಲ್ಲಿ ಗ್ರಾಮದ ಬಳಿಯಿರುವ ವೆಂಕಟರೆಡ್ಡಿ ರವರ ಜಮೀನಿನ ಬಳಿ ಹೋದಾಗ ಮೇಲ್ಕಂಡ ವೆಂಕಟರೆಡ್ಡಿ ಬಿನ್ ಕೋನಪ್ಪರವರ ಜಮೀನಿನ ಬಳಿ ಹೋದಾಗ ಮೇಲ್ಕಂಡ ವೆಂಕಟರೆಡ್ಡಿರವರ ಕಡೆಯವರಿಗೂ ಹಾಗೂ ದ್ವಾರಪ್ಪಲ್ಲಿ ಗ್ರಾಮದ ದೇವಮ್ಮ ಕೋಂ ಶ್ರೀರಾಮಪ್ಪ ರವರ ಕಡೆಯವರಿಗೂ ಜಮೀನಿನ ವಿಚಾರದಲ್ಲಿ ಗಲಾಟೆಗಳಾಗುತ್ತಿದ್ದು, ತಾನು ಜಗಳ ಬಿಡಿಸಲು ಹೋದಾಗ ದೇವಮ್ಮ ಕೋಂ ಶ್ರೀರಾಮಪ್ಪ, ನರೇಶ ಬಿನ್ ಕದಿರಪ್ಪ, ಗಂಗಾಧರ ಬಿನ್ ಲೇಟ್ ನರಸಿಂಹಪ್ಪ, ಮಧು ಬಿನ್ ಕದಿರಪ್ಪ ಮತ್ತು ಮೂರ್ತಿ ಬಿನ್ ಲೇಟ್ ನರಸಿಂಹಪ್ಪ ರವರು ಅಕ್ರಮ ಗುಂಪು ಕಟ್ಟಿಕೊಂಡು ತನ್ನ ಮೇಲೆ ಜಗಳ ತೆಗೆದು ಆ ಪೈಕಿ ನರೇಶ ಎಂಬುವವನು ದೊಣ್ಣೆಯಿಂದ ತನ್ನ ಎಡಭುಜಕ್ಕೆ ಹೊಡೆದು ಗಾಯವನ್ನುಂಟು ಮಾಡಿರುತ್ತಾನೆ. ಆಗ ತನ್ನ ಜೊತೆಯಲ್ಲಿದ್ದ ನವನೀತ್ ಕುಮಾರ್ ಮತ್ತು ತಮ್ಮ ಗ್ರಾಮದ ಶ್ರೀನಾಥ ರೆಡ್ಡಿ ಬಿನ್ ವೆಂಕಟರೆಡ್ಡಿರವರು ಜಗಳ ಬಿಡಿಸಲು ಬಂದಾಗ ಗಂಗಾಧರ ಮತ್ತು ಮಧು ರವರು ಕೈಗಳಿಂದ ಅವರ ಮೈಕೈ ಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ದೇವಮ್ಮ ಮತ್ತು ಮೂರ್ತಿ ರವರು ತಮ್ಮನ್ನು ಕುರಿತು ಇನ್ನೊಂದು ಸಲ ನೀವು ವೆಂಕಟರೆಡ್ಡಿ ರವರ ಸಪೋರ್ಟ್ಗೆ ಬಂದರೆ ನಿಮ್ಮನ್ನು ಬಿಡುವುದಿಲ್ಲ ಬೋಳಿ ನನ್ನ ಮಕ್ಕಳೇ ಸಾಯಿಸಿ ಬಿಡುತ್ತೇವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಗೆಂಗಿರೆಡ್ಡಿ ಬಿನ್ ವೆಂಕಟಪ್ಪ, ರವಿರೆಡ್ಡಿ ಬಿನ್ ಲೇಟ್ ಭೈರೆಡ್ಡಿರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಅದೇ ದಿನ ತಾನು, ನವನೀತ್ ಕುಮಾರ್ ಮತ್ತು ಶ್ರೀನಾಥರೆಡ್ಡಿರವರು ಯಾವುದೋ ವಾಹನದಲ್ಲಿ ಚಿಕಿತ್ಸೆಗಾಗಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡು ಮನೆಗೆ ಹೋಗಿರುತ್ತೇವೆ. ಈ ಗಲಾಟೆಯ ಬಗ್ಗೆ ತಮ್ಮ ಗ್ರಾಮದ ಹಿರಿಯರು ರಾಜಿ-ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ ತಾವು ಇಲ್ಲಿಯವರೆಗೂ ಠಾಣೆಯಲ್ಲಿ ದೂರನ್ನು ನೀಡದೇ ಇದ್ದು, ತಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರು ಇಲ್ಲಿಯವರೆಗೂ ರಾಜಿ-ಪಂಚಾಯ್ತಿಗೆ ಬಾರದ ಕಾರಣ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಮೇಲೆ ಗಲಾಟೆ ಮಾಡಿದ ಮೇಲ್ಕಂಡವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.169/2020 ಕಲಂ. 304(ಎ) ಐ.ಪಿ.ಸಿ:-

     ದಿನಾಂಕ 06-07-2020 ರಂದು 19-00 ಗಂಟೆಗೆ  ಪಿರ್ಯಾದಿದಾರರಾದ  ರಾಜಣ್ಣ ಬಿನ್ ಲೇಟ್ ಲಕ್ಷ್ಮಯ್ಯ, 50 ವರ್ಷ, ಬಲಜಿಗರು, ಕೂಲಿ ಕೆಲಸ, ವಾಸ  ರೈಲ್ವೇ ಸ್ಟೇಷನ್ ಹತ್ತಿರ, ಮುತ್ತೂರು, 6 ನೇ ವಾರ್ಡ್, ದೊಡ್ಡಬಳ್ಳಾಪುರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ  ತನಗೆ 4ಜನ ಮಕ್ಕಳಿದ್ದು, 1 ನೇ ನೇತ್ರಾವತಿ, 2 ನೇ ಶಬರಿ, 3 ನೇ ಗೋಪಾಲ. 4 ನೇ ಮಾನಸ ಗಿರುತ್ತಾರೆ. ನನ್ನ ಮಗನಾದ  ಗೋಪಾಲ ಬಿನ್ ರಾಜಣ್ಣ, 22 ವರ್ಷ, ಬಲಜಿಗರು ರವರು ದೊಡ್ಡಬಳ್ಳಾಪುರದ ಟೆಲಿಪೋನ್ ಎಕ್ಸ್ ಚೇಂಜ್  ಬಳಿ ಸಾಧೀಕ್ ಪಾಶ ಬಿನ್ ಸೈಯದ್ ಅನ್ಸರ್ ರವರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿರುತ್ತಾನೆ.   ದಿನಾಂಕ 06-07-2020 ರಂದು  ಸಂಜೆ 05-00 ಗಂಟೆಯಲ್ಲಿ ಸಾಧಿಕ್ ಪಾಶರವರು ಪೋನ್  ಮಾಡಿ ನಿಮ್ಮ ಮಗ  ಗೋಪಾಲನನ್ನು ಗೌರಿಬಿದನೂರಿನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದೇವೆ  ಎಂದು ತಿಳಿಸಿದರು. ನಾನು ಗೌರಿಬಿದನೂರಿಗೆ ಬಂದು ನಾನು ಮತ್ತು ನನ್ನ ತಮ್ಮ ಶ್ರೀನಿವಾಸ  ಇಬ್ಬರು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಬಂದು ನೋಡಿದಾಗ  ನನ್ನ ಮಗ ಮೃತಪಟ್ಟಿದ್ದನು. ನಂತರ ವಿಚಾರ ತಿಳಿಯಲಾಗಿ  ನನ್ನ ಮಗ  ಗೋಪಾಲ ಈಗ್ಗೆ 1 ತಿಂಗಳಿಂದ  ದೊಡ್ಡಬಳ್ಳಾಪುರದ  ಸಾಧೀಕ್ ಪಾಶರವರ ಗೋಡೌನ್ ನಲ್ಲಿ  ಅಡುಗೆ ಕೆಲಸ ಮಾಡಿಕೊಂಡಿದ್ದು  ಇಡಗೂರಿನಲ್ಲಿ  ಇರುವ  ಕುಮಾರ್ ರವರ ಇಟ್ಟಿಗೆ ಗೂಡಿನ ಮೇಲಿದ್ದ ಶೀಟ್ ಗಳನ್ನು  ಇಳಿಸಲು  ಮೇಸ್ತ್ರಿ ಜಾವೀದ್ ಪಾಶರವರು  ನನ್ನ ಮಗ ಗೋಪಾಲ. ವಿನಯ್ ಮತ್ತು ಪ್ರಜ್ವಲ್ ರವರನ್ನು ಕರೆದುಕೊಂಡು  ಬಂದಿದ್ದು  ಕಬ್ಬಿಣದ ಶೀಟ್ ಗಳನ್ನು  ಮಧ್ಯಾಹ್ನ 02-45 ಗಂಟೆಯಲ್ಲಿ ಇಳಿಸುವಾಗ  ಕಬ್ಬೀಣದ ಶೀಟ್ ವಿದ್ಯತ್ ಲೈನಿಗೆ ತಾಗಿ  ಕರೆಂಟ್ ಶಾಕ್ ಹೊಡೆದಿರುವುದಾಗಿ ತಿಳಿಸಿದರು.    ಸಾಧೀಕ್ ಪಾಶ ಬಿನ್ ಸೈಯದ್ ಅನ್ಸರ್, ಮೇಸ್ತ್ರಿ ಜಾವೀದ್ ಪಾಶ ಬಿನ್ ಸೈಯದ್ ಅನ್ಸರ್ ಮತ್ತು ಇಟ್ಟಿಗೆ ಗೂಡಿನ ಮಾಲೀಕ ಇಡಗೂರಿನ ಕುಮಾರ್ ರವರು ಯಾವುದೇ ಎಚ್ಚರಿಕೆ ಕ್ರಮಗಳನ್ನು  ಕೈಗೊಳ್ಳದೆ ಇದ್ದು  ಗೋಪಾಲ ಮತ್ತು ಪ್ರಜ್ವಲ್ ಇಬ್ಬರು ಕಬ್ಬಿಣದ ಶೀಟ್ ಗಳನ್ನು  ಕೆಳಗಿಳಿಸುವಾಗ  ಕಬ್ಬೀಣದ ಶೀಟ್ ವಿದ್ಯುತ್ ಲೈನಿಗೆ ತಾಗಿ  ಗೋಪಾಲನಿಗೆ ಕರೆಂಟ್ ಶಾಕ್ ಹೊಡೆದಿದ್ದು  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಮೃತನ ಸಾವಿಗೆ ಮೇಲ್ಕಂಡವರ ನಿರ್ಲಕ್ಷವೇ ಕಾರಣವಾಗಿರುತ್ತೆ. ಮುಂದಿನ ಕ್ರಮ ಜರುಗಿಸಲು ಕೋರಿ  ನೀಡಿದ ದೂರಾಗಿರುತ್ತೆ.

 1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.170/2020 ಕಲಂ.279,304(ಎ) ಐ.ಪಿ.ಸಿ:-

     ದಿನಾಂಕ 07/07/2020 ರಂದು ಪಿರ್ಯಾಧಿದಾರರಾದ ಸಮೀಉಲ್ಲಾ ಖಾನ್ ಬಿನ್ ಲೇಟ್ ಅಬ್ದುಲ್ ಖಾನ್ ,54 ವರ್ಷ, ಆಜಾದ್ ನಗರ ,ಗೌರಿಬಿದನೂರು ಟೌನ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ- ದಿನಾಂಕ 06/07/2020 ರಂದು ಸಂಜೆ ಷಫೀಉಲ್ಲಾಖಾಲನ್ ನಮ್ಮ ತಾಯಿಯನ್ನುನೋಡಿಕೊಂಡು ಹೋಗಲು ಬೆಂಗಳೂರಿನಿಂದ ,ಗೌರಿಬಿದನೂರಿಗೆ ಬಂದಿದ್ದು ಈದಿನ ದಿನಾಂಕ 07/07/2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ವಾಪಸ್ಸು ಬೆಂಗಳೂರಿಗೆ ಹೋಗಲು ತಾನು ಬಂದಿದ್ದ KA-53-Y-6985 ದ್ವಿಚಕ್ರವಾಹನದಲ್ಲಿ ಮನೆಯಿಂದ ಹೋಗಿದ್ದನು ನಂತರ ಸುಮಾರು 11-15 ಗಂಟೆಯಲ್ಲಿ ಅಸ್ಲಾಂಪಾಷ ಬಿನ್ ಸಯ್ಯದ್ ಅಬ್ದುಲ್ ರಜ್ಹಾಕ್ ಸಾಬ್ ಎಂಬುವರು ಪೋನ್ ಮೂಲಕ ಗೌರಿಬಿದನೂರು ಹೊರವಲಯದಲ್ಲಿರುವ ಹೊಸ ತಾಲ್ಲೂಕು ಕಛೇರಿ ಸಮೀಪ ಷಫೀಉಲ್ಲಾಖಾನ್ ಅಪಘಾತವಾಗಿ ಮೃತಪಟ್ಟಿರುವುದಾಗಿ ಮೃತದೇಹವನ್ನು ಗೌರಿಬಿದನೂರು ಸರ್ಕಾರಿ ಆಸ್ವತ್ರೆಗೆ ಸಾಗಿಸುತ್ತಿರುವುದಾಗಿ ತಿಳಿಸಿದರು ನಾವು ವಿಚಾರ ತಿಳಿದು ಗೌರಿಬಿದನೂರು ಸರ್ಕಾರಿ ಆಸ್ವತ್ರೆ ಬಳಿಗೆ ಬಂದು ನೋಡಲಾಗಿ ಷಫೀಉಲ್ಲಾಖಾನ್ ಗೆ ಬಲಕಾಲು, ಎಡಕೈ, ಎದೆ ,ಗಡ್ಡಕ್ಕೆ ಗಾಯಗಳಾಗಿ ಮೃತಪಟ್ಟಿದ್ದನು ವಿಚಾರಿಸಲಾಗಿ ಈ ದಿನ ದಿನಾಂಕ 07/07/2020 ರಂದು KA-53-Y-6985 ದ್ವಿಚಕ್ರವಾಹನದಲ್ಲಿ ಗೌರಿಬಿದನೂರಿನಿಂದ ಬೆಂಗಳೂರಿಗೆ ಹೋಗಲು ಹೊಸ ತಾಲ್ಲೂಕು ಕಛೇರಿ ಮುಂದೆ ಷಪೀಉಲ್ಲಾ ಖಾನ್ ಹೋಗುತ್ತಿದ್ದಾಗ ಬೆಳಿಗ್ಗೆ ಸುಮಾರು 10-45ಗಂಟೆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ KL 02 AB 3472(407) ಟೆಂಪೂ ಚಾಲಕ ತನ್ನ ಟೆಂಪೊ ವಾಹನವನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿಕೊಮಡು ಬಂದು ಷಫೀಉಲ್ಲಾಖಾನ್ ಚಾಲನೆ ಮಾಡುತ್ತಿದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ನನ್ನ ತಮ್ಮನಿಗೆ  ಈ ಮೇಲ್ಕಂಡಂತೆ ಗಾಯಗಳಾಗಿ ಮೃತ ಪಟ್ಟಿರುವುದಾಗಿ  ತಿಳಿದುಬಂದಿರುತ್ತೆ. ಅಪಘಾತಕ್ಕೆ ಕಾರಣವಾದ ವಾಹನದ ಚಾಲಕನ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲ ಆದ್ದರಿಂದ  ಈ ಅಪಘಾತಕ್ಕೆ ಕಾರಣವಾದ K.L 02 AB 3472 ವಾಹನದ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ದೂರು.

 1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.75/2020 ಕಲಂ. 323,324,504,506,34 ಐ.ಪಿ.ಸಿ:-

     ದಿನಾಂಕ 07-07-2020 ರಂದು ಬೆಳಗ್ಗೆ 10.00 ಗಂಟೆಗೆ ಪಿರ್ಯಾಧಿದಾರರಾದ ಬಿ.ಎಂ ಮುನಿವೆಂಕಟಪ್ಪ ಬಿನ್ ಬಿ ಮುನಿಚೌಡಪ್ಪ, 50 ವರ್ಷ, ಬೋವಿ ಜನಾಂಗ, ಜಿರಾಯ್ತಿ, ಬಂಡಕೋಟೆ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ದಿನಾಂಕ 01-07-2020 ರಂದು ಸಂಜೆ 05.00 ಗಂಟೆ ಸಮಯದಲ್ಲಿ ತನ್ನ ಜಮೀನಿನ ಹತ್ತಿರ ಹೋಗಿ ಬರುತ್ತಿದ್ದಾಗ ತಮ್ಮ ಗ್ರಾಮದ ವಾಸಿಯಾದ ಚಂದ್ರಕುಮಾರ್ ಬಿನ್ ಬಿ.ಆರ್ ವೆಂಕಟರವಣಪ್ಪ ಹಾಗೂ ಆತನ ತಮ್ಮ ಶ್ರೀಕಾಂತ್ ಎಂಬುವವರು ಹಳೇ ದ್ವೇಶದಿಂದ ತನ್ನನ್ನು ಅವಾಚ್ಯ ಶಬ್ದಗಳಿಂದ ಬೈದು ಕಾಲಿನಿಂದ ಒದ್ದು ನೀನು ಜೀವಂತವಾಗಿದ್ದರೆ  ನಮಗೆ ತೊಂದರೆ ಎಂದು ನಿನ್ನ ಪ್ರಾಣ ತೆಗೆಯುತ್ತೇವೆ ಎಂದು ಪ್ರಾಣ ಬೆದರಿಕೆ ಹಾಕಿ ದೊಣ್ಣೆಯಿಂದ ತನ್ನ ಕಾಲಿಗೆ ಮತ್ತು ತಲೆಗೆ ಹೊಡೆದು ಗಾಯಪಡಿಸಿ ಕತ್ತು ಹಿಸುಕಿರುತ್ತಾರೆ. ಆ ಸಮಯದಲ್ಲಿ ತಮ್ಮ ಗ್ರಾಮದ ಚೌಡರೆಡ್ಡಿ ಮತ್ತು ಸೀನಪ್ಪ ರವರು ಬಂದು ಜಗಳ ಬಿಡಿಸಿರುತ್ತಾರೆ. ನಂತರ ಗ್ರಾಮಸ್ಥರು ನ್ಯಾಯ ಪಂಚಾಯ್ತಿ ಮಾಡುವ ಬಗ್ಗೆ ತಿಳಿಸಿದ್ದರಿಂದ ತಡವಾಗಿ ಠಾಣೆಗೆ ಹಾಜರಾಗಿ ದಿನಾಂಕ 07-07-2020 ರಂದು ಬೆಳಗ್ಗೆ 10.00 ಗಂಟೆಗೆ ದೂರು ನೀಡುತ್ತಿದ್ದು, ಈ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಸಾರಾಂಶವಾಗಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.158/2020 ಕಲಂ. 379 ಐ.ಪಿ.ಸಿ:-

     ದಿನಾಂಕ:06/07/2020 ರಂದು ಪಿರ್ಯಾದಿದಾರರಾದ ಶ್ರೀ ನರಸಿಂಹಮೂರ್ತಿ ಬಿನ್ ರಾಮಾಂಜಿನಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನಾನು ಈಗ್ಗೆ ಸುಮಾರು 5 ವರ್ಷಗಳಿಂದ ನಂ: 28, 6 ನೇ ಕ್ರಾಸ್, 1ನೇ ಮೈನ್, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034 ನ ನಿಸಾಕಂಪೆನಿಯಲ್ಲಿ ಪೆಟ್ರೋಲಿಂಗ್ ಸೂಪರ್ ವೈಸರ್ ಗಿ ಕೆಲಸವನ್ನು ನಿರ್ವಹಿಸುತ್ತಿದ್ದು, ನಾನು ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಂಬಂಧಿಸಿದ ಇಂಡಸ್ ಟವರ್ ಕಂಪೆನಿಗೆ ಸೇರಿರುವ ಮೊಬೈಲ್ ಟವರ್ ಗಳಿಗೆ ಪೆಟ್ರೋಲಿಂಗ್ ಮಾಡುತ್ತಿರುತ್ತೇನೆ. ಹಿಗೀರುವಲ್ಲಿ ದಿನಾಂಕ: 04/07/2020 ರಂದು ರಾತ್ರಿ ನಾನು ಮತ್ತು ನಮ್ಮ ಗಾರ್ಡ್ ರಾಜು ರವರು ಕಂಪೆನಿಗೆ ಸೇರಿದ ಕಾರಿನಲ್ಲಿ ಚಿಕ್ಕಬಳ್ಳಾಪುರ ಟೌನ್ ನಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದಾಗ ರಾತ್ರಿ ಸುಮಾರು 11-15 ಗಂಟೆಯಲ್ಲಿ ಗೌರಿಬಿದನೂರು ತಾಲ್ಲೂಕು, ಮಂಚೇನಹಳ್ಳಿ ಗ್ರಾಮದಲ್ಲಿನ ಇಂಡಸ್ ಕಂಪೆನಿಗೆ ಸೇರಿದ ಗೌಡಗೆರೆ ಗ್ರಾಮದ ಸರ್ವೆ ನಂ: 884 ನ ಆನಂದ ರವರ ಜಾಗದಲ್ಲಿ ಹಾಕಿರುವ ಮೊಬೈಲ್ ಟವರ್ ನಲ್ಲಿ ಯಾರೋ ರಾತ್ರಿ ವೇಳೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಟವರ್ ನ ಜಾಗದ ಮಾಲೀಕರಾದ ಆನಂದ್ ರವರು ನನಗೆ ಕರೆಮಾಡಿ ತಿಳಿಸಿದ್ದು ತಕ್ಷಣ ಪೆಟ್ರೋಲಿಂಗ್ ನಲ್ಲಿದ್ದ ನಾನು ರಾತ್ರಿ ಸುಮಾರು 11-45 ಸ್ಥಳಕ್ಕೆ ಬಂದು ನೋಡಲಾಗಿ ಐಡಿಯಾ ಕಂಪೆನಿಯ ಇಂಜಿನಿಯರ್ ಸಂಜೀವ್ ಗುರುಂಗ್ ಬಿನ್ ಭರತ್ ಗುರಂಗ್, 34 ವರ್ಷ ರವರು ಮತ್ತು ಅವನ ಅಸಿಸ್ಟೆಂಟ್ ಪಾಂಡವ್ ಬೆಹರಾ ಬಿನ್ ಏಕಾದಶಿ ಬೆಹರಾ, 28 ವರ್ಷ ರವರು ಆನಂದ್ ರವರ ಜಾಗದಲ್ಲಿ ಹಾಕಿರುವ ಮೊಬೈಲ್ ಟವರ್ ನಲ್ಲಿನ ಐಡಿಯಾ ಕಂಪೆನಿಯ RF ಕೇಬಲ್ ನ್ನು ಕತ್ತರಿಸುತ್ತಿದ್ದು ನಮ್ಮನ್ನು ನೋಡಿ ಸದರಿ ಅಸಾಮಿಗಳು ಕತ್ತರಿಸಿದ್ದ RF ಕೇಬಲ್ ನ ಸಮೇತ ಓಡಿ ಹೋಗಿದ್ದು, ಪರಿಶೀಲಿಸಲಾಗಿ ಸುಮಾರು 3 ಸಾವಿರ ರೂ ಬೆಲೆ ಬಾಳುವ RF ಕೇಬಲ್ ನ್ನು ಮೇಲ್ಕಂಡ ಕಳ್ಳರು ಕಳ್ಳತನ ಮಾಡಿರುತ್ತಾರೆ. ನಾನು ಸದರಿ ವಿಚಾರವನ್ನು ನಮ್ಮ ಕಂಪೆನಿಯ ಮೇಲಾಧಿಕಾರಿಗಳಿಗೆ ತಿಳಿಸಿ ಈ ದಿನ ದಿನಾಂಕ: 06/07/2020 ರಂದು ತಡವಾಗಿ ದೂರು ನೀಡುತ್ತಿದ್ದು ಸದರಿಯವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.