ದಿನಾಂಕ :07/01/2021 ರ ಅಪರಾಧ ಪ್ರಕರಣಗಳು

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.05/2021  ಕಲಂ. 279,304(A) ಐ.ಪಿ.ಸಿ :-

     ದಿ:07.01.2021 ರಂದು ಬೆಳಿಗ್ಗೆ 11-00 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಕಛೇರಿಯಿಂದ ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಆಂದ್ರಪ್ರದೇಶದ ಅನಂತಪುರ ಜಿಲ್ಲೆ 2 ಟೌನ್ ಪೊಲೀಸ್ ಠಾಣೆಯ ಮೊ ಸಂ 499/2020 ಕಲಂ 304[ಎ] ಐಪಿಸಿ ಪ್ರಕರಣದ ಕಡತವನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ಪಿರ್ಯಾದಿ ಕೊಂಡಪ್ಪಗಾರಿ ರತ್ನಮ್ಮ ಕೋಂ ಲೇಟ್ ಶಂಕರಪ್ಪರವರ ಮಗನಾದ ಮಂಜುನಾಥ @ ಮಂಜುರವರು ದಿ:09.11.2020 ರಂದು ಚಿಕ್ಕಬಳ್ಳಾಪುರ ತಾಲ್ಲೂಕು ಶೆಟ್ಟಿಗೆರೆ ಗ್ರಾಮದಲ್ಲಿ ವಾಸವಾಗಿರುವ ತನ್ನ ಸೋದರ ಅತ್ತೆ ರತ್ನಮ್ಮರವರ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಕೆಎ 03 ಇ ಕೆ 9578 ದ್ವಿ ಚಕ್ರ ವಾಹನದಲ್ಲಿ ಹೋಗಿದ್ದು, ರಾತ್ರಿ 8-15 ಗಂಟೆ ಸಮಯದಲ್ಲಿ ಶೆಟ್ಟಿಗೆರೆ ಗ್ರಾಮದಿಂದ ತಮ್ಮ ನಾದಿನಿ ರತ್ನಮ್ಮರವರು ತನಗೆ ಫೋನ್ ಮಾಡಿ ನಿಮ್ಮ ಮಗ ಮಂಜುನಾಥ ರಾತ್ರಿ 7-45 ಗಂಟೆ ಸಮಯದಲ್ಲಿ ನಮ್ಮ ಮನೆಯಿಂದ ನಿಮ್ಮ ಊರಿಗೆ ಬರಲು ಬರುತ್ತಿದ್ದಾಗ ಮಾರ್ಗಮದ್ಯದಲ್ಲಿ ಶೆಟ್ಟಿಗೆರೆ ಕ್ರಾಸ್ ಬಳಿ ಅತಿವೇಗ & ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಹೋಗಿರುತ್ತಾರೆಂದು ನಮ್ಮ ಗ್ರಾಮಸ್ಥರು ನನಗೆ ತಿಳಿಸಿದ್ದು, ನಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದು, ತಕ್ಷಣ ನಾನು ಮತ್ತು ನನ್ನ ಮಗ ಮಧು ಚಿಕ್ಕಬಳ್ಳಾಪುರ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಮಗ ಮಂಜುನಾಥನಿಗೆ ತಲೆಗೆ & ಎಡಕೈ ಗೆ ರಕ್ತ ಗಾಯಗಳಾಗಿದ್ದು, ನಾವು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಿಂದೂಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿ ಅಲ್ಲಿಂದ ದಿ:11.11.2020 ರಂದು 1.38 ಗಂಟೆಗೆ ಅನಂತಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು,  ಚಿಕಿತ್ಸೆ ಫಲಕಾರಿಯಾಗದೇ ದಿ:12.11.2020 ಬೆಳಿಗ್ಗೆ 3.45 ಗಂಟೆಗೆ ಮೃತಪಟ್ಟಿರುತ್ತಾರೆಂದು ಇದ್ದುದರ ಮೇರೆಗೆ ಈ ಪ್ರ ವ ವರಧಿ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.06/2021  ಕಲಂ. 379 ಐ.ಪಿ.ಸಿ :-

     ದಿನಾಂಕ: 07/01/2021 ರಂದು ಮದ್ಯಾಹ್ನ 1-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಎಸ್.ಪ್ರಮೋದ್ ಬಿನ್ ಶ್ರೀನಿವಾಸ, 35 ವರ್ಷ, ನಾಯರ್ ಜನಾಂಗ, ಎಸ್.ಕೆ.ಎಂ. ಅನಿಮಲ್ ಪೀಡ್ಸ್ & ಪುಡ್ಸ್ ಇಂಡಿಯಾ ಪ್ರೈ. ಲಿ ಕಂಪನಿಯಲ್ಲಿ ಕೆಲಸ, ವಾಸ: ನಂ-652, ನೇತಾಜಿ ಪಾರ್ಕ್ ಎದುರು, ಸರ್ದಾರ್ ವಲ್ಲಭ ಬಾಯಿ ನಗರ, ಆಲನಹಳ್ಳಿ, ಮೈಸೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ದಿನಾಂಕ: 26/08/2019 ರಂದು ಆಟೋ ಕನ್ಸಲ್ಟೆಂಟ್ ರವರಿಂದ ಬೆಂಗಳೂರು ವಾಸಿ ಸೈಯ್ಯದ್ ಅಬ್ದುಲ್ ರಹೀಂರವರ KA-51, A-1852 ನೊಂದಣಿ ಸಂಖ್ಯೆಯ ಐಚರ್ ಕ್ಯಾಂಟರ್ ವಾಹನವನ್ನು ಕೊಂಡುಕೊಂಡಿದ್ದೆನು. ಕ್ಯಾಂಟರ್ ವಾಹನಕ್ಕೆ ಸುನಿಲ್ ಕುಮಾರ್ ಬಿನ್ ಸುಕುಮಾರ್, ಯಾದವನಾಡು ಗ್ರಾಮ, ಕುಶಾಲನಗರ ತಾಲ್ಲೂಕು ರವರನ್ನು ಡ್ರೈವರ್ ಆಗಿ ಕೆಲಸಕ್ಕೆ ಇಟ್ಟುಕೊಂಡಿದ್ದೆನು. ನಾನು ಕ್ಯಾಂಟರ್ ವಾಹನ ಕೊಂಡುಕೊಂಡಾಗಿನಿಂದ ನಮ್ಮ ಕ್ಯಾಂಟರ್ ವಾಹನದಲ್ಲಿ ನಮ್ಮ ಡ್ರೈವರ್ ಸುನಿಲ್ ಕುಮಾರ್ ರವರು ಬೆಂಗಳೂರು ನಗರದ ಬೇಗೂರು ಬಳಿ ಇರುವ ನ್ಯೂಟ್ರೀ ಫೀಡ್ ಮಿಲ್ ನಿಂದ ಕೋಳಿ ಪೀಡ್ ನ್ನು ತೆಗೆದುಕೊಂಡು ಬಂದು ಚಿಕ್ಕಬಳ್ಳಾಪುರದಲ್ಲಿರುವ ಇಂಡಿಯನ್ ಆಗ್ರೋ ಪುಡ್ಸ್ ಲಿಮಿಟೆಡ್ ಕಂಪನಿಗೆ ಸೇರುವ ಕೋಳಿ ಫಾರಂಗಳಿಗೆ ಕೋಳಿ ಫೀಡ್ ಗಳನ್ನು ಸಪ್ಲೆ ಮಾಡುತ್ತಿದ್ದರು. ನಮ್ಮ ಡ್ರೈವರ್ ಸುನಿಲ್ ಕುಮಾರ್ ವಾಸವಿರಲು ನಾನು ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ಎನ್.ಹೆಚ್-44 ರಸ್ತೆಯ ಪಕ್ಕದಲ್ಲಿರುವ ವೆಂಕಟೇಶ್ ರವರ ಮನೆಯಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದೆನು. ದಿನಾಂಕ: 03/01/2021 ರಂದು ಡ್ರೈವರ್ ಸುನಿಲ್ ಕುಮಾರ್ ರವರು ಬೆಂಗಳೂರಿನಿಂದ ಕೋಳಿ ಪೀಡ್ ನ್ನು ತಂದು ಚಿಕ್ಕಬಳ್ಳಾಪುರದ ಕೋಳಿ ಫಾರಂ ಗಳಿಗೆ ನೀಡಿದ್ದು, ಯಾವುದೇ ಲೋಡ್ ಇಲ್ಲದೇ ಇದ್ದುದರಿಂದ ದಿನಾಂಕ: 05/01/2021 ರಂದು ಮದ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಕ್ಯಾಂಟರ್ ವಾಹನವನ್ನು ಡ್ರೈವರ್ ವಾಸವಾಗಿದ್ದ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವುದಾಗಿ ನನಗೆ ಪೋನ್ ಮಾಡಿದ್ದರು. ದಿನಾಂಕ: 06/01/2021 ರಂದು ಬೆಳಿಗ್ಗೆ ಸುಮಾರು 7-45 ಗಂಟೆ ಸಮಯದಲ್ಲಿ ನಮ್ಮ ಕ್ಯಾಂಟರ್ ಡ್ರೈವರ್ ನನಗೆ ಪುನಃ ಪೋನ್ ಮಾಡಿ ನೆನ್ನೆ ಮದ್ಯಾಹ್ನ ನಾನು ನಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ನಮ್ಮ KA-51, A-1852 ನೊಂದಣಿ ಸಂಖ್ಯೆಯ ಐಚರ್ ಕ್ಯಾಂಟರ್ ವಾಹನ ರಾತ್ರಿ ಊಟ ಮಾಡಲು ಮನೆಯಿಂದ ಹೊರಗೆ ಬಂದಾಗ ಸಹಾ ರಸ್ತೆಯ ಪಕ್ಕದಲ್ಲಿದ್ದುದು ಈ ದಿನ ದಿನಾಂಕ: 06/01/2021 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರದಲ್ಲಿರುವ ಇಂಡಿಯನ್ ಆಗ್ರೋ ಪುಡ್ಸ್ ಲಿಮಿಟೆಡ್ ಕಂಪನಿಯವರು ಲೋಡ್ ಇರುವುದಾಗಿ ನನಗೆ ಪೋನ್ ಮಾಡಿದ್ದರಿಂದ ನಾನು ರೆಡಿಯಾಗಿ ಲೋಡ್ ಗೆ ಕ್ಯಾಂಟರ್ ವಾಹನವನ್ನು ತೆಗೆದುಕೊಂಡು ಹೋಗಲು ಮನೆಯಿಂದ ಹೊರಗೆ ಬಂದು ನೋಡಿದಾಗ ನಾನು ನಿಲ್ಲಿಸಿದ್ದ ಸ್ಥಳದಲ್ಲಿ ನಮ್ಮ ಕ್ಯಾಂಟರ್ ವಾಹನ ಇಲ್ಲ. ಎಂದು ತಿಳಿಸಿದರು. ಆ ಕೂಡಲೇ ನಾನು ಚಿಕ್ಕಬಳ್ಳಾಪುರದಲ್ಲಿರುವ ನಮ್ಮ ಸ್ನೇಹಿತರಾದ ರಘುರಾಮರೆಡ್ಡಿ ಬಿನ್ ಆವುಲಕೊಂಡಾರೆಡ್ಡಿ, ಮುಸ್ಟೂರು ರವರಿಗೆ ವಿಚಾರ ತಿಳಿಸಿ ನಮ್ಮ ಡ್ರೈವರ್ ಜೊತೆಗೆ ಹುಡುಕಲು ಹೇಳಿ ನಾನು ಚಿಕ್ಕಬಳ್ಳಾಪುರಕ್ಕೆ ಬಂದು ಎಲ್ಲಾ ಕಡೆಗಳಲ್ಲಿ ಹುಡುಕಾಡಲಾಗಿ ಎಲ್ಲಿಯೂ ಇದುವರೆವಿಗೂ ಪತ್ತೆಯಾಗಿರುವುದಿಲ್ಲ. ನನ್ನ ಬಾಬತ್ತು 3,80,000/- ರೂ.ಗಳು ಬೆಲೆಬಾಳುವ KA-51, A-1852 ನೊಂದಣಿ ಸಂಖ್ಯೆಯ ಐಚರ್ ಕ್ಯಾಂಟರ್ ವಾಹನವನ್ನು ದಿನಾಂಕ: 05/01/2021 ರಂದು ರಾತ್ರಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ನನ್ನ ಕ್ಯಾಂಟರ್ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.01/2021  ಕಲಂ. 447,504,506,34  ಐ.ಪಿ.ಸಿ :-

     ದಿನಾಂಕ: 07/01/2021 ರಂದು ಮದ್ಯಾಹ್ನ 12:30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸಮೂರ್ತಿ ಕೆ ಎಸ್ ಬಿನ್ ಲೇಟ್ ಕೃಷ್ಣಮೂರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 10/09/2012 ರಂದು ಮೂಲ ಮಾಲೀಕರಾದ  ಎಸ್.ವಿ ವೆಂಕಟೇಶಪ್ಪ ನವರ ಕಡೆಯಿಂದ ಚಿಂತಾಮಣಿ ನಗರ ಚೌಡರೆಡ್ಡಿಪಾಳ್ಯ ಸೇರಿರುವ ಖಾತೆ ಸಂಖ್ಯೆ 2389/2200 ರ ವಿಸ್ತೀರ್ಣ ಪೂರ್ವ ಪಶ್ಚಿಮ 15 ಅಡಿಗಳು ಉತ್ತರ ದಕ್ಷಿಣ 60 ಅಡಿಗಳು ಸ್ವತ್ತುನ್ನು ಕ್ರಯಕ್ಕೆ ಪಡೆದು ಕ್ರಯಪತ್ರ ತನ್ನ ಹೆಂಡತಿಯಾದ ಜಿ.ಪಿ ರಮಾದೇವಿ ರವರ ಹೆಸರಿಗೆ ನೊಂದಾಯಿಸಿರುತ್ತೇನೆ, ಸದರಿ ಸ್ವತ್ತಿಗೆ ಸಂಬಂಧಪಟ್ಟ ಹಾಗೆ ನಗರಸಭೆಯಲ್ಲಿ ಖಾತೆ ಮತ್ತು ಇ ಸ್ವತ್ತು ಸಹ ಆಗಿದ್ದು, ಸದರಿ ಸ್ವತ್ತಿನಲ್ಲಿ ವಾಸದ ಮನೆ ನಿರ್ಮಿಸವ ಸಲುವಾಗಿ ನಗರಸಭೆಯಿಂದ ಕಟ್ಟಡದ ಪರವಾನಿಗೆಯನ್ನು ಪಡೆದುಕೊಂಡು ಪಾಯ ಹಾಕುತ್ತಿದ್ದಾಗ ಚಿಂತಾಮಣಿ ನಗರಸಭೆಯ ಕೌನ್ಸಿಲರ್ ರಾದ ಕೃಷ್ಣಮೂರ್ತಿ ಅಲಿಯಾಸ್ ಕಿರಿಕ್ ಕೃಷ್ಣ ಬಿನ್ ಲೇಟ್ ಲಕ್ಷಣ್  ಮೂರ್ತಿ ಹಾಗೂ ದ್ವಾರಸಂದ್ರ ಗ್ರಾಮದ ವಾಸಿ ಮುನಿವೆಂಕಟಪ್ಪ ಬಿನ್ ಲೇಟ್ ಚಿಕ್ಕಪೊಡು ಎಂಬುವವರು ತಾವು ಕಟ್ಟಡ ನಿರ್ಮಿಸುತ್ತಿರುವ ಸ್ಥಳಕ್ಕೆ ಬಂದು ಸದರಿ ಸ್ವತ್ತಿನಲ್ಲಿ ಅಕ್ರಮದೊಂದಿಗೆ ಅಕ್ರಮ ಪ್ರವೇಶ ಮಾಡಿ ಹಾಗೂ ತಮ್ಮನ್ನು ಅವಾಚ್ಯ ಪದಗಳಿಂದ ಬೈಗುಳ ಮಾಡಿ ಮನೆ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಸದರಿ ಪಾಯದಿಂದ ಹೊರಗೆಳೆದು ಹಾಕುವುದು ಮಾಡುತ್ತಿದ್ದರಿಂದ ತಾವು ಪಾಯಮಾತ್ರ ಹಾಕಿ ಕೆಲಸವನ್ನು ಸದರಿಯವರ ಆಡಚಣೆಯಿಂದ ನಿಲುಗಡೆ ಮಾಡಿರುತ್ತೇವೆ. ಹೀಗಿರುವಾಗ ದಿ: 06/01/2021 ರಂದು ತಾನು ತನ್ನ ತಂಗಿ ಕೆ. ಪದ್ಮ ಎಂಬುವವರು ಸದರಿ ಪಾಯ ಬಳಿ ನೀರು ಹಾಯಿಸಲು ಹೋಗಿದ್ದು ಈ ವೇಳೆಯಲ್ಲಿ ಸದರಿ ಮೇಲ್ಕಂಡ ಕೃಷ್ನಪ್ಪ ಮತ್ತು ಮುನಿವೆಂಕಟಪ್ಪ ರವರು ನೀರು ಹಾಕುತ್ತಿದ್ದನ್ನು ತಡೆಗಟ್ಟಿ ನೀವು ಇಲ್ಲಿ ಬರಬಾರದು ನಿವೇನಾದರೂ ಇಲ್ಲಿ ಬಂದು ಕೆಲಸ ಮಾಡಿದ್ದಲ್ಲಿ ನಿಮ್ಮ ಪ್ರಾಣ ಹೋಗುವುದು , ಸಾಯಿಸಿಬಿಡುತ್ತೇವೆ ಎಂದು ಪ್ರಾಣಬೆದರಿಕೆ ಹಾಕಿ ತನ್ನ ಮತ್ತು ತಮ್ಮ ಮಗಳನ್ನು ಮೇಲ್ಕಂಡ ಪಾಯದಿಂದ ತಮ್ಮನ್ನು ತಳ್ಳಿರುತ್ತಾರೆ. ತಾನು ಅಂಗವಿಕಲನಾಗಿದ್ದು ಆದ್ದರಿಂದ ಸದರಿ ಮೇಲ್ಕಂಡ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದ್ದರ  ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.04/2021  ಕಲಂ. 279,337,338 ಐ.ಪಿ.ಸಿ :-

     ದಿನಾಂಕ; 06/01/2021 ರಂದು ಸರ್ಕಾರಿ ಗಾಯಾಳು ರಾಮಾಂಜಿನಪ್ಪರವರ ಹೇಳಿಕೆಯನ್ನು ಪಡೆದಿದ್ದರ ಸಂಕ್ಷಿಪ್ತ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ: 06/01/2021 ರಂದು ಸಂಜೆ 04-00 ಗಂಟೆಯಲ್ಲಿ ತನ್ನ ಬಾಬತ್ತು ದ್ವಿಚಕ್ರವಾಹನ  ಸಂಖ್ಯೆ KA-52-J-0232  ರ UNICON  ದ್ವಿಚಕ್ರವಾಹನದಲ್ಲಿ ಫೈರ್ ಇಂಜಿನ್ ಆಫೀಸ್ ಬಳಿ ಇರುವ ನಿಜಾಮ್ ರವರ ಬಳಿಗೆ ಹೋಗಲು ದರ್ಗಾದ ಬಳಿ ಇರುವ ಹಿರೇಬಿದನೂರು ಬೈಪಾಸ್ ರಸ್ತೆ ಯಲ್ಲಿ ತನ್ನ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಹಿಂದೂಪುರದ ಕಡೆ ಯಿಂದ ಒಂದು ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆದ ಪರಿಣಾಮ ತಾನು ದ್ವಿಚಕ್ರ ವಾಹನದೊಂದಿಗೆ ಕೆಳಗೆ ಬಿದ್ದು ಹೋಗಿ ತನ್ನ ಎಡಕಾಲು ಮೂಳೆ ಮುರಿದುಹೋಗಿರುತ್ತದೆ.  ಹಾಗೂ ಎಡಕಣ್ಣಿನ ಉಬ್ಬಿನ ಮೇಲ್ಬಾಗದ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ.  ತನಗೆ ಅಪಘಾತ ವುಂಟು ಮಾಡಿದ ಕಾರ್ ನಂಬರ್ KA-22-N-2109 ಆಗಿದ್ದು, ಆತನ ಹಸರು ಮುಸಾವೀರ್ ಪಾಷ ಬಿನ್ ಮಹಮದ್ ಇಕ್ಬಾಲ್ ಆಗಿರುತ್ತಾರೆ.  ತನಗೆ ಅಪಘಾತವುಂಟು ಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.05/2021  ಕಲಂ. 279,337 ಐ.ಪಿ.ಸಿ :-

     ದಿನಾಂಕ: 06/01/2021 ರಂದು ರಾತ್ರಿ 07-15 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 31/12/2020 ರಂದು ರಾತ್ರಿ ಸುಮಾರು 10-20 ಗಂಟೆ ಸಮಯದಲ್ಲಿ ತನ್ನ ಭಾವನರಾದ ಶಿವಶಂಕರ ಕೆ. ಬಿನ್ ಕೊಡಪಣ್ಣರವರ ಬಾಬತ್ತು KA 02 JD 3853 ಸ್ಪೆಂಡರ್ ಪ್ಲಸ್ ಪ್ರೋ ದ್ವಿಚಕ್ರವಾಹನದಲ್ಲಿ  ಕಲ್ಲೂಡಿ ಬಳಿ ಹಿಂದೂಪುರ ರಸ್ತೆಯಲ್ಲಿ ಬರುತ್ತಿದ್ದಾಗ KA 43 K 5642  ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಅಪಘಾತವುಂಟಾಗಿರುತ್ತದೆ.  ಆದ್ದರಿಂದ ತನ್ನ ಭಾವನಾದ ಶಿವಶಂಕರ ಕೆ ರವರಿಗೆ ಅಪಘಾತವುಂಟು ಮಾಡಿದ KA 43 K 5642  ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನಹೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.04/2021  ಕಲಂ. 279,337 ಐ.ಪಿ.ಸಿ :-

     ದಿನಾಂಕ:06/01/2021 ರಂದು ಸಂಜೆ 05-00 ಗಂಟೆಗೆ ಪಿರ್ಯಾದಿದಾರರಾದ ಬಿ.ಜಿ. ಆಶ್ವತ್ಥನಾರಾಯಣ ಬಿನ್ ಗಡಿದಮಪ್ಪ, 57 ವರ್ಷ, ಬಲಜಿಗರು, ಜಿರಾಯ್ತಿ, ವಾಸ: ಗೂಳೂರು ಗ್ರಾಮ, ಬಾಗೇಪಲ್ಲಿ ತಾಲ್ಲೂಕು ರವರು ಠಾಣೆಗ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:03/01/2021 ರಂದು ಮದ್ಯಾಹ್ನ 2-00 ರಿಂದ 3-00 ಗಂಟೆಯಲ್ಲಿ ಸಮಯದಲ್ಲಿ ತಾನು ಕೆಲಸದ ನಿಮಿತ್ತ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸಂಖ್ಯೆ ಕೆ.ಎ-51 ಇಕೆ-0938 ರ ವಾಹನಕ್ಕೆ ಹಿಂಬದಿಯ ವಾಹನ ಮಾರುತಿ ಸುಜುಕಿ ಕಂಪನಿಯ ಸೆಲಾರಿಯ ವಾಹನ ಸಂಖ್ಯೆ ಕೆಎ-51 ಎಂಕೆ3-911 ವಾಹನದ ಚಾಲಕ ಅತಿವವೇಗ ಹಾಗೂ ಆಜಾಗರೂಕತೆಯಿಂದ ಚಾಲನೆಯಿಂದಾಗಿ ನನ್ನ ಮಗನಿಗೆ ಹಿಂಬಂದಿಯಿಂದ ಬಂದು ಅಪಘಾತ ಮಾಡಿರುತ್ತಾರೆ, ನನ್ನ ಮಗನಿಗೆ ಅಪಘಾತವಾಗಿ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿರುವುದರಿಂದ ದೂರು ದಾಖಲಿಸಿರುವುದು ತಡವಾಗಿರುತ್ತೆ. ಈ ಅಪಘಾತದಿಂದ ನನ್ನ ಮಗನಾದ ಕಾರ್ತಿಕ್ ಎಂಬುವರಿಗೆ ಎಡಗೈ ಮುರಿದಿರುತ್ತೆ, ಎಡಗಾಲು ಸೊಂಟದ ಭಾಗ ಹಾಗೂ ಬೆನ್ನಿಗೂ ಬಲವಾದ ಪೆಟ್ಟು ಆಗಿರುತ್ತೆ. ನನ್ನ ಮಗ ಚಲಾಯಿಸುತ್ತಿದ್ದ ದ್ವಿ ಚಕ್ರ ವಾಹನ ಪಲ್ಸರ್ ಗಾಡಿಯು ಪೂರ್ಣವಾಗಿ ಜಖಂಗೊಂಡಿರುತ್ತೆ. ನನ್ನ ಮಗ ಖಾಸಲಿ ಕಂಪನಿಯಲ್ಲಿ ಕೆಲಸ ನಿರ್ವಸುತ್ತಿದ್ದು ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿರುತ್ತೆ. ದಯವಿಟ್ಟು ನನ್ನ ಮಗನಿಗೆ ಹಾಗೂ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಟಬೇಕಾಗಿ ತಮ್ಮಲ್ಲಿ ವಿನಂತಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲು ಮಾಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.05/2021  ಕಲಂ. 87 ಕೆ.ಪಿ ಆಕ್ಟ್ :-

     ದಿನಾಂಕ:07/01/2021 ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ನ್ಯಾಯಾಲಯದ ಪಿ,ಸಿ-89 ರವರು ಘನ ನ್ಯಾಯಾಲಯದಲ್ಲಿ ಎನ್ ಸಿ ಆರ್ ನಂ:02/2021 ರಲ್ಲಿ ಕ್ರಿಮಿನಲ್ ಪ್ರಕರಣದಾಖಲಿಸಲು ಅನಮತಿ ಪಡೆದುಕೊಂಡು ಬಂದು ಹಾಜರ್ ಪಡಿಸಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02/01/2021 ರಂದು ಪಿ,ಎಸ್,ಐ ಸಾಹೇಬರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಬ್ ಇನ್ಸಪೆಕ್ಟರ್ ಶ್ರೀ ಗೋಪಾಲರೆಡ್ಡಿ ರವರು ದಿನ ದಿನಾಂಕ:02-01-2021 ರಂದು ಮದ್ಯಹ್ನ 3-45 ಗಂಟೆಯಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿದ್ದಾಗ ಗುಡಿಬಂಡೆ ಪೊಲೀಸ್ ಠಾಣೆಯ 16 ನೇ ಬೀಟ್ ಸಿಬ್ಬಂದಿ ರಮೇಶ್ ಸಿ,ಪಿ,ಸಿ-408 ರವರು ತನಗೆ ಪೋನ್ ಮಾಡಿ ಈ ದಿನ ದಿನಾಂಕ:02/01/2021 ರಂದು ತಾನು ಬೀಚಗಾನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ ಬೀಚಗಾನಹಳ್ಳಿ ಗ್ರಾಮದ ಸಾರ್ವಜನಿಕ ಸ್ಥಳವಾದ ಸರ್ಕಾರಿ ಶಾಲೆಯ ಆವರಣದಲ್ಲಿ ಕೆಲವರು ಕಾನೂನು ಬಾಹಿರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ತನಗೆ ಮಾಹಿತಿ ನೀಡಿದರ ಮೇರೆಗೆ, ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-84 ಮುನಿರಾಜು ಸಿ,ಎಚ್,ಸಿ-102 ಆನಂದ, ರವರನ್ನು ಕರೆಯಿಸಿಕೊಂಡು ಸಿಬ್ಬಂದಿಯವರಿಗೆ ಮಾಹಿತಿಯನ್ನು ತಿಳಿಸಿ ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-58 ರಲ್ಲಿ ಚಾಲಕ ಎ,ಪಿ,ಸಿ-05 ಮದುಕುಮಾರ್ ರವರೊಂದಿಗೆ ಸಂಜೆ 4-00 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣೆಯಿಂದ ಬಿಟ್ಟು ಸಂಜೆ 4.30 ಗಂಟೆಗೆ ಬೀಚಗಾನಹಳ್ಳಿ ಗ್ರಾಮಕ್ಕೆ ಹೋಗಿ, ಗ್ರಾಮದಲ್ಲಿದ್ದ ಸಿ,ಪಿ,ಸಿ-408 ರಮೇಶ್ ರವರನ್ನು ಕರೆದುಕೊಂಡು ಹಾಗೂ ಬೀಚಗಾನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯಿದ್ದ ಪಂಚರನ್ನು ಬರಮಾಡಿಕೊಂಡು ಬೀಚಗಾನಹಳ್ಳಿ ಗ್ರಾಮದ ಸಕರ್ಾರಿ ಶಾಲೆಯ ಆವರಣದಿಂದ ಸ್ವಲ್ಪ ದೂರದಲ್ಲಿ ಜೀಪ್ ನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-200 ಬಾಹರ್-200 ಎಂದು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಸಂಜೆ 4.50 ಗಂಟೆಗೆ ದಾಳಿ ಮಾಡಿದಾಗ, ಜೂಜಾಟವನ್ನು ಆಡುತ್ತಿದ್ದವರು ಓಡಿ ಹೋಗಿದ್ದು ಓಡಿ ಹೋದವರ  ಪೈಕಿ ನಾವುಗಳು ಕೆಲವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1)ಭರತ್ ಬಿನ್ ಮಹದೇವಪ್ಪ. 21 ವರ್ಷ, ಲಿಂಗಾಯಿತ ಜನಾಂಗ, ಲಾರಿ ಚಾಲಕ, ವಾಸ: ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು, 2) ಅನಿಲ್ ಕುಮಾರ್  ಬಿನ್ ನಾರಾಯಣಸ್ವಾಮಿ 24 ವರ್ಷ, ನಾಯಕರು ಜನಾಂಗ, ಲಾರಿ ಚಾಲಕ ವಾಸ: ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು ನಂತರ ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 3)ಹರೀಶ್ ಕುಮಾರ್ ಬಿನ್ ಗಂಗಾಧರಪ್ಪ 24 ವರ್ಷ, ನಾಯಕ ಜನಾಂಗ, ಲಾರಿ ಚಾಲಕ ವಾಸ: ಬೀಚಗಾನಹಳ್ಳಿ ಗ್ರಾಮ ಗುಡಿಬಂಡೆ ತಾಲ್ಲೂಕು 4) ಶ್ರೀಧರ ಬಿನ್ ನಾರಾಯಣಸ್ವಾಮಿ 26 ವರ್ಷ, ನಾಯಕ ಜನಾಂಗ, ಲಾರಿ ಚಾಲಕ ವಾಸ: ಬೀಚಗಾನಹಳ್ಳಿ ಗ್ರಾಮ, ಗುಡಿಬಂಡೆ ತಾಲ್ಲೂಕು ಎಂದು ತಿಳಿಸಿರುತ್ತಾರೆ. ನಂತರ ಪಂಚರ ಸಮಕ್ಷಮ ವಶದಲ್ಲಿ ಆಸಾಮಿಗಳನ್ನು ಪರಿಶೀಲನೆ ಮಾಡಲಾಗಿ 1) ಭರತ್ ಬಳಿ 260 ರೂ 2) ಅನಿಲ್ ಕುಮಾರ್ ರವರ ಬಳಿ 430/- ರೂ ಇದ್ದು ಒಟ್ಟು ಲೆಕ್ಕ ಮಾಡಲಾಗಿ 690/- ರೂ ಗಳಿದ್ದು ಸ್ಥಳದಲ್ಲಿ 52 ಇಸ್ಪೀಟ್ ಎಲೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ನಂತರ ಜೂಜಾಟಕ್ಕೆ ಪಣಕ್ಕೆ ಇಟ್ಟಿದ್ದ 690/- ರೂ & 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 5-15 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 6-30 ಗಂಟೆಗೆ ಬಂದು ವರದಿಯನ್ನು ಸಿದ್ದಪಡಿಸಿ ಸಂಜೆ 7-00 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ವಿರುದ್ದ ಮುಂದಿನ ಕಾನೂನು ಕ್ರಮ  ಕೈಗೊಳ್ಳಲು ಸೂಚಿಸಿದ ಮೇರೆಗೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.06/2021  ಕಲಂ. 15(A),32(3) ಕೆ.ಇ  ಆಕ್ಟ್ :-

     ದಿನಾಂಕ:07/01/2021 ರಂದು ಬೆಳಿಗ್ಗೆ 11-15 ಗಂಟೆಯಲ್ಲಿ ನ್ಯಾಯಾಲಯದ ಪಿ,ಸಿ-89 ರವರು ಘನ ನ್ಯಾಯಾಲಯದಲ್ಲಿ ಎನ್ ಸಿ ಆರ್ ನಂ:07/2021 ರಲ್ಲಿ ಕ್ರಿಮಿನಲ್ ಪ್ರಕರಣದಾಖಲಿಸಲು ಅನಮತಿ ಪಡೆದುಕೊಂಡು ಬಂದು ಹಾಜರ್ ಪಡಿಸಿದ ದೂರಿನ ಸಾರಾಂಶವೆನೆಂದರೆ ದಿನಾಂಕ:05-01-2021 ರಂದು ಮದ್ಯಾಹ್ನ 03-00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ, ಸಿ,ಪಿ,ಸಿ-408 ರಮೇಶ್ ರವರು ಪೋನ್ ಮಾಡಿ ಗುಡಿಬಂಡೆ ತಾಲೂಕು ಬೀಚಗಾನಹಳ್ಳಿ ಗ್ರಾಮದ ನರಸಿಂಹಮೂರ್ತಿ ಬಿನ್ ಲೇಟ್ ನರಸಿಂಹಪ್ಪ, ರವರ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ತಾನು ಸರ್ಕಾರಿ ಜೀಪ್ ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಹೆಚ್,ಸಿ-43 ವೆಂಕಟಾಚಲ ರವರೊಂದಿಗೆ ಸಿಬ್ಬಂದಿಯಾದ ಸಿಪಿಸಿ-85 ಸುನಿಲ್ ಕುಮಾರ್ ರವರನ್ನು ಕರೆದುಕೊಂಡು ಸದರಿ ಗ್ರಾಮಕ್ಕೆ ಮದ್ಯಾಹ್ನ 03-30 ಗಂಟೆಗೆ ಸ್ಥಳಕ್ಕೆ ಹೋಗಿ ಗ್ರಾಮದಲ್ಲಿದ್ದ ಸಿಬ್ಬಂದಿ ಸಿ,ಪಿ,ಸಿ-408 ರಮೇಶ್ ರವರನ್ನು ಕರೆದುಕೊಂಡು ಗ್ರಾಮದಲ್ಲಿನ ಬಸ್ ನಿಲ್ದಾಣದ ಬಳಿ ಇದ್ದ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ತಾವು ನರಸಿಂಹಮೂರ್ತಿ ರವರ ಮನೆಯ ಬಳಿಯಿಂದ ಸ್ವಲ್ಪ ಮರೆಯಲ್ಲಿ ನಿಂತು ನೋಡಲಾಗಿ, ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ತಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ತಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ, ನರಸಿಂಹಮೂರ್ತಿ ಬಿನ್ ಲೇಟ್ ನರಸಿಂಹಪ್ಪ, 42 ವರ್ಷ, ಈಡಿಗ ಜನಾಂಗ, ಕೂಲಿ ಕೆಲಸ ವಾಸ-ಬೀಚಗಾನಹಳ್ಳಿ ಗ್ರಾಮ ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 12 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಹೈ ವಾರ್ಡ್ಸ ಕಂಪನಿಯ ಚೀರ್ಸ್ ವಿಸ್ಕಿ 90 ಎಮ್, ಎಲ್, ಅಳತೆಯ 02 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 02 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 80 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 35.13*12=421.56 ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಮದ್ಯಾಹ್ನ 3-45 ಗಂಟೆಯಿಂದ 4-30 ಗಂಟೆಯವರೆಗೆ ಪಂಚನಾಮೆ ಮೂಲಕ ಮಾಲನ್ನು  ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಸಂಜೆ 5-00 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸಂಜೆ 5-15 ಗಂಟೆಗೆ ವರದಿಯನ್ನು ಸಿದ್ದಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಪ್ರಕರಣವನ್ನು ದಾಖಲಿಸಿರುತ್ತೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.05/2021 ಕಲಂ. 78(1)(A)(iv)(vi) ಕೆ.ಪಿ  ಆಕ್ಟ್ :-

     ದಿನಾಂಕ:06/01/2020 ರಂದು ಸಂಜೆ 6-30 ಗಂಟೆಗೆ ಠಾಣಾ ಹೆಚ್.ಸಿ.137 ಮಂಜುನಾಥ ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ: 06/01/2020 ರಂದು ಸಂಜೆ 4-30 ಗಂಟೆಗೆ ಪಿ.ಎಸ್.ಐ ಲಕ್ಷ್ಮೀನಾರಾಯಣ ರವರು  ಮಾಲು, ಮಹಜರ್ ಹಾಗೂ ಆರೋಪಿಯೊಂದಿಗೆ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 06/01/2021 ರಂದು 2-00 ಗಂಟೆಯಲ್ಲಿ  ನನಗೆ ಬಂದ ಖಚಿತ ಬಾತ್ಮೀಯ ಮೇರೆಗೆ ನಾನು ಮತ್ತು ಪಿ.ಸಿ 537 ಆನಂದಕುಮಾರ್ ಪಿ.ಸಿ – 336 ಉಮೇಶ ಮತ್ತು ಜೀಪ್ ಚಾಲಕ ಎಪಿಸಿ-120 ನಟೇಶ್ ರವರು ಜೀಪ್ ಸಂಖ್ಯೆ-ಕೆ.ಎ-40 ಜಿ-395 ರಲ್ಲಿ ಗೌರೀಬಿದನೂರು ತಾಲ್ಲೂಕು ತೊಂಡೇಬಾವಿ ಹೋಬಳಿ ತರಿದಾಳು ಗ್ರಾಮದಲ್ಲಿ  ಯಾರೋ ಒಬ್ಬ ಅಸಾಮಿ ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕ ಚೀಟಿ ಬರೆದು ಕೊಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಜೊತೆಯಲ್ಲಿದ್ದ  ಪೊಲೀಸರು ಮತ್ತು ಪಂಚರೊಂದಿಗೆ ಜೀಪಿನಲ್ಲಿ ಹೋಗಿ ಜೀಪನ್ನು  ಸ್ವಲ್ಪ ದೂರದಲ್ಲಿ ನಿಲ್ಲಿಸಿ ಸೂಕ್ಷ್ಮವಾಗಿ ಗಮನಿಸಲಾಗಿ ಯಾರೋ ಒಬ್ಬ ಅಸಾಮಿ ಸಾರ್ವಜನಿಕವಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ 70/-ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸುತ್ತಾ ಮಟ್ಕ ಚೀಟಿ ಬರೆದುಕೊಡುತ್ತಿದ್ದನು, ಮಟ್ಕಾ ಜೂಜಾಟವಾಡುತ್ತಿದ್ದುದ್ದನ್ನು ಖಚಿತ ಪಡಿಸಿಕೊಂಡು ನಾವು ಪಂಚರೊಂದಿಗೆ ಸದರಿ ಅಸಾಮಿಯ ಮೇಲೆ ದಾಳಿ ಮಾಡಿ ಸದರಿ ಆಸಾಮಿಯನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಅನಂದಪ್ಪ ಬಿನ್ ಲೇ. ನಂಜುಂಡಪ್ಪ 80 ವರ್ಷ,  ಕುಂಭಾರ ಜನಾಂಗ ತರಿದಾಳು ಗ್ರಾಮ ತೊಂಡೇಬಾವಿ ಹೋಬಳಿ ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈತನನ್ನು ವಿಚಾರಣೆ ಮಾಡಲಾಗಿ ಸಾರ್ವಜನಿಕರಿಗೆ ಒಂದು ರೂಪಾಯಿಗೆ ನಂಬರ್ ಹೊಡೆದರೆ 70 ರೂಪಾಯಿಗಳು ಕೊಡುತ್ತಿರುವುದಾಗಿ ಆಮೀಷ ತೋರಿಸಿ ಮಟ್ಕಾ ಚೀಟಿ ಬರೆದುಕೊಟ್ಟು ಹಣವನ್ನು ಪಡೆದುಕೊಳ್ಳುತ್ತಿದ್ದೆನು ಎಂದು ತಿಳಿಸಿದನು. ಪಂಚನಾಮೆಯ ಮೂಲಕ  ತನ್ನ ಬಳಿ ದೊರೆತ ಮಟ್ಕಾ ಚೀಟಿ ಬರೆದುಕೊಟ್ಟು ಬಂದಂತಹ ನಗದು ಹಣ ರೂ. 2340/- ( ಎರಡುಸಾವಿರದ ಮುನ್ನೂರ ನಲವತ್ತು ರೂಪಾಯಿಗಳು ಮಾತ್ರ.)  ನೀಲಿ ಬಣ್ಣದ ಒಂದು ಬಾಲ್ ಪೆನ್ನನ್ನು ಸಂಜೆ 4-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ಪಂಚರ ಸಮಕ್ಷಮ ಪಂಚನಾಮೆ ಕ್ರಮ ಜರುಗಿಸಿ ಮಾಲನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು ಮುಂದಿನ ಕ್ರಮಕ್ಕಾಗಿ ಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ 08/2021 ರಂತೆ ದಾಖಲಿಸಿ ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಮೇಲ್ಕಂಡ ಕಲಂ ರೀತ್ಯ ಪ್ರಕರಣ ದಾಖಲಿಸಿರುತ್ತದೆ.

 1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 15(A),32(3) ಕೆ.ಇ  ಆಕ್ಟ್ :-

     ದಿನಾಂಕ ;06-01-2021 ರಂದು ಸಂಜೆ 18-00 ಘಂಟೆಗೆ ಆ,ಉ.ನಿ ರವರು  ದಾಳಿಯಿಂದ ಠಾಣೆಗೆ ಪಂಚನಾಮೆ. ಆರೋಪಿ ಮತ್ತು ಮಾಲಿನೊಂದಿಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶ ವೇನೆಂದರೆ ಸಾಹೇಬರು ರಂದು ಸಂಜೆ 16-00 ಗಂಟೆ ಸಮಯದಲ್ಲಿ  ಸಾಹೇಬರು  ಠಾಣೆಯಲ್ಲಿದ್ದಾಗ ಅವರಿಗೆ ಬಂದ ಖಚಿತವಾದ ಮಾಹಿತಿ ಏನೆಂದರೆ ಅರಸನಹಳ್ಳಿ ಗ್ರಾಮದ ವಾಸಿ ಕದಿರಪ್ಪ ಬಿನ್ ಲೇಟ್ ಮುನಿಯಪ್ಪ ರವರು ತನ್ನ ಮನೆಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಿಕೊಳ್ಳಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ಠಾಣೆಯಲ್ಲಿದ್ದ ಸಿಬ್ಬಂದಿಯಾದ ಪಿಸಿ 207 ನವೀನ್ ಮತ್ತು ಮಂಜುನಾಥ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆಎ-40-ಜಿ-1555 ರ ಚಾಲಕ ಪಾರೂಖ್ ನೊಂದಿಗೆ ಠಾಣೆಯನ್ನು ಬಿಟ್ಟು ಸಂಜೆ 16-30 ಗಂಟೆಗೆ  ಅರಸನಹಳ್ಳಿ ಗ್ರಾಮಕ್ಕೆ  ಹೋಗಿ ಅಲ್ಲಿದ್ದ ಪಂಚರನ್ನು  ಬರಮಾಡಿಕೊಂಡು  ಅವರ ಸಮಕ್ಷಮ  ಸಂಜೆ 16-40 ಗಂಟೆಗೆ ಕದಿರಪ್ಪ ಬಿನ್ ಲೇಟ್ ಮುನಿಯಪ್ಪ ರವರ ಬಾಬತ್ತು ಮನೆಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು ಮನೆಯಲ್ಲಿದ್ದವನ  ಹೆಸರು ವಿಳಾಸವನ್ನು ಕೇಳಲಾಗಿ  ಕದಿರಪ್ಪ ಬಿನ್ ಲೇಟ್ ಮುನಿಯಪ್ಪ 50 ವರ್ಷ ಪಜಾತಿ ಜಿರಾಯ್ತಿ ಅರಸನಹಳ್ಳಿ  ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಇವನ  ಮನೆಯ ಮುಂದೆ  ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 20 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1800 ML ಮದ್ಯವಿದ್ದು ಒಟ್ಟು ಬೆಲೆ 702.60/- ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಇವುಗಳನ್ನು ತನ್ನ ಮನೆಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಮನೆಯ ಮಾಲೀಕ ಕದಿರಪ್ಪ ಬಿನ್ ಲೇಟ್ ಮುನಿಯಪ್ಪ ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ  ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 16-45 ಗಂಟೆಯಿಂದ 17-30 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ ಟೆಟ್ರಾ ಪ್ಯಾಕೇಟುಗಳನ್ನು ಮತ್ತು  ಮನೆಯ ಮಾಲೀಕ ಕದಿರಪ್ಪ ಬಿನ್ ಲೇಟ್ ಮುನಿಯಪ್ಪ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು ಸೂಚಿಸಿದಜ್ಞಾಪನದ ಮೇರೆಗೆ ಈ ಪ್ರವವರದಿ,

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.01/2021 ಕಲಂ. 379 ಐ.ಪಿ.ಸಿ :-

     ದಿನಾಂಕ:07-01-2021 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಸುಬಾಷ್ ಹೆಚ್.ಬಿ  ಜೋಡಿಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತಾನು ಸುಮಾರು 09 ತಿಂಗಳಿಂದ ಶಿಡ್ಲಘಟ್ಟ ಮಯೂರ ಸರ್ಕಲ್ ಸಮೀಪ ವಿರುವ ಗ್ರಾಮೀಣ ಕೂಟ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿ ದಿನ ನಮ್ಮೂರಿನಿಂದ ಬಂದು ಹೋಗುತ್ತಿದ್ದು ದಿನಾಂಕ:16-09-2020 ರಂದು ಕೆಲಸಕ್ಕೆ ಬಂದು ಆ ದಿನ ರಾತ್ರಿ ಕೆಲಸ ಇದ್ದುದರಿಂದ ತನ್ನ ದ್ವಿಚಕ್ರವಾಹನ ರಾತ್ರಿ ಸುಮಾರು 9-00 ಗಂಟೆಯಲ್ಲಿ ಕಛೇರಿ ಮುಂದೆ ನಿಲ್ಲಿಸಿ ಕಛೇರಿಯಲ್ಲಿ ಮಲಗಿಕೊಂಡಿದ್ದು ಮಾರನೇ ದಿನ ಬೆಳಿಗ್ಗೆ 06-45 ಗಂಟೆಗೆ ಬಂದು ನೋಡಿದಾಗ ತನ್ನ ದ್ವಿಚಕ್ರವಾಹನ ನಂ.KA.07.S.7004 ಬಜಾಜ್ ಡಿಸ್ಕವರಿ ವಾಹನ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 30,000/- ರೂ ಆಗಿರುತ್ತೆ. ಈ ದ್ವಿಚಕ್ರವಾಹನವನ್ನು ಒಂದು ವರ್ಷದ ಹಿಂದೆ ಕೋಲಾರ ತಾಲ್ಲೂಕು ಅನಿಲ್ ಕುಮಾರ್ ರವರಿಂದ ತೆಗೆದುಕೊಂಡಿದ್ದು, ನನ್ನ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುವುದಿಲ್ಲ ಕಳುವಾದ ದ್ವಿಚಕ್ರವಾಹನವನ್ನು ಹುಡುಕಾಡುತ್ತಿದ್ದು, ಸಿಗದ ಕಾರಣ ಈ ದಿನ ಠಾಣೆಗೆ ತಡವಾಗಿ ದೂರು ನೀಡುತ್ತಿದ್ದು ಕಳುವಾದ ದ್ವಿಚಕ್ರವಾಹನವನ್ನು ಪತ್ತೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಈ ಪ್ರಕರಣ ದಾಖಲಿಸಿರುತ್ತೆ.