ದಿನಾಂಕ : 06/12/2019ರ ಅಪರಾಧ ಪ್ರಕರಣಗಳು

1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.324/2019 ಕಲಂ. 323-324-504 ರೆ/ವಿ 34 ಐಪಿಸಿ :-
ದಿನಾಂಕ:06/12/2019 ರಂದು ಬೆಳಿಗ್ಗೆ 11-00 ಗಂಟೆಗೆ ಪಿಸಿ 530 ರವರು ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ದಾಖಲಾಗಿದ್ದ ಗಾಯಾಳುವಾದ ಶ್ರೀ ಗಂಗಾಧರಪ್ಪ ಬಿನ್ ಲೇಟ್ ಗಂಗಯ್ಯ ರವರಿಂದ ಹೇಳಿಕೆ ಪಡೆದು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ನಾನು ನಮ್ಮ ಹೊಲದಲ್ಲಿ ಬೆಳೆದಿದ್ದ ಮುಸುಕಿನ ಜೋಳವನ್ನು ಮನೆಗೆ ತಂದು ನಮ್ಮ ಗ್ರಾಮದ ಮುತ್ಯಾಲಮ್ಮ ದೇವಸ್ಥಾನದ ಮುಂಭಾಗ ಒಣಗಲು ಹಾಕಿದ್ದು, ದಿನಾಂಕ:06/12/2019 ರಂದು ಬೆಳಿಗ್ಗೆ ಸುಮಾರು 06-00 ಗಂಟೆಗೆ ನಾನು ಜೋಳ ಹಾಕಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೋ ಹಂದಿಗಳು ಅದನ್ನು ತಿನ್ನುತ್ತಿದ್ದು, ನಾನು ಅದನ್ನು ಅಲ್ಲಿಂದ ಹೊಡೆದು ಓಡಿಸಿದ್ದು, ಈ ವಿಚಾರದಲ್ಲಿ ನಮ್ಮ ಗ್ರಾಮದ ನಾರಾಯಣಪ್ಪ ರವರ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತ ಏಕೆ ನಮ್ಮ ಹಂದಿಗಳನ್ನು ಹೊಡೆಯುತ್ತೀಯಾ ಎಂದು ನನ್ನ ಮೇಲೆ ವಿನಾ ಕಾರಣ ಜಗಳ ತಗೆದು ನನಗೆ ನಾರಾಯಣಪ್ಪ ಮಲ್ಲಿಕಮ್ಮ ಮತ್ತು ನಾರಾಯಣಪ್ಪನ ಮಗನಾದ ಭೀಮ ರವರು ಅವಾಚ್ಯ ಶಬ್ದಗಳಿಂದ ಬೈದು ನನ್ನನ್ನು ಕೈಗಳಿಂದ ಹೊಡೆದಿರುತ್ತಾರೆ. ಆಗ ನಾರಾಯಣಪ್ಪ ರವರು ಅಲ್ಲಿಯೇ ಇದ್ದ ಒಂದು ಹಿಡಿ ಗಾತ್ರದ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಪಡಿಸಿರುತ್ತಾನೆ. ನಾನು ಆಗ ಪ್ರಜ್ಞೆ ತಪ್ಪಿ ಬಿದ್ದಿದ್ದು, ನಮ್ಮ ಮನೆಯವರು ಗಲಾಟೆಯನ್ನು ಬಿಡಿಸಿ ಗಾಯಗೊಂಡಿದ್ದ ನನ್ನನ್ನು ಚಿಕಿತ್ಸೆಗೆ ಮಂಚೇನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿರುತ್ತೇನೆ. ವಿನಾ ಕಾರಣ ಹಂದಿಗಳ ವಿಚಾರದಲ್ಲಿ ನನ್ನ ಮೇಲೆ ಗಲಾಟೆ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.