ದಿನಾಂಕ : 06/10/2019ರ ಅಪರಾಧ ಪ್ರಕರಣಗಳು

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 373/2019 ಕಲಂ.323-341-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ:05/10/2019 ರಂದು ಮದ್ಯಾಹ್ನ 3-00 ಗಂಟೆಗೆ ಶ್ರೀ.ನಾರಾಯಣಪ್ಪ ಬಿನ್ ಗೋಪಾಲಪ್ಪ, 50 ವರ್ಷ, ಗೊಲ್ಲರು, ಜಿರಾಯ್ತಿ, ಮಾದರಕಲ್ಲು ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಈ ಹಿಂದೆ ಸುಮಾರು 15 ವರ್ಷಗಳ ಹಿಂದೆ ಮುನಿನರಸಮ್ಮ ಎಂಬುವರೊಂದಿಗೆ ಮದುವೆಯಾಗಿದ್ದು, 1 ನೇ ಸೌಮ್ಯ, 2 ನೇ ಚೈತ್ರ, 3 ನೇ ಸತೀಶ ಎಂಬ 3 ಜನ ಮಕ್ಕಳಿದ್ದರು. ತನ್ನ ಹೆಂಡತಿ ಮುನಿನರಸಮ್ಮ ಹೀಗ್ಗೆ ಸುಮಾರು 10 ವರ್ಷಗಳ ಹಿಂದೆ ಅನಾರೋಗ್ಯದ ನಿಮಿತ್ತ ಮೃತಪಟ್ಟಿರುತ್ತಾರೆ. ನಂತರ ಶಿಡ್ಲಘಟ್ಟ ತಾಲ್ಲೂಕು ಚಿಕ್ಕದಾಸೇನಹಳ್ಳಿ ಗ್ರಾಮದ ವಾಸಿ ಸುನಂದಮ್ಮ ರವರನ್ನು ಮದುವೆಯಾಗಿದ್ದು, ತಮಗೆ ಮನೋಜ್ ಎಂಬ ಮಗನಿರುತ್ತಾನೆ.  ನಂತರ ತನ್ನ ಹೆಂಡತಿ ಸುನಂದಮ್ಮ ತನ್ನೊಂದಿಗೆ ಸಂಸಾರದಲ್ಲಿ ಗಲಾಟೆ ಮಾಡಿಕೊಂಡು ಆಕೆಯ ತಾಯಿ ಮನೆಗೆ ಚಿಕ್ಕದಾಸೇನಹಳ್ಳಿ ಗ್ರಾಮಕ್ಕೆ ಹೋಗಿರುತ್ತಾಳೆ. ದಿನಾಂಕ:05/10/2019 ರಂದು ಬೆಳಿಗ್ಗೆ ಸುಮಾರು 8-30 ಗಂಟೆಯಲ್ಲಿ ತಾನು ತಮ್ಮ ಗ್ರಾಮದಲ್ಲಿರುವ ಬ್ಯಾಲಹಳ್ಳಿ ಗೇಟಿನಲ್ಲಿ ನಿಂತಿದ್ದಾಗ ತನ್ನ ಹೆಂಡತಿ ಸುನಂದಮ್ಮ ಹಾಗೂ ಶಿಡ್ಲಘಟ್ಟ ತಾಲ್ಲೂಕು, ಚಿಕ್ಕದಾಸೇನಹಳ್ಳಿ ಗ್ರಾಮದ ವಾಸಿಗಳಾದ ತನ್ನ ಹೆಂಡತಿ ಸುನಂದಮ್ಮ ರವರ ತಮ್ಮನಾದ ನರಸಿಂಹಗೌಡ ಬಿನ್ ಮುನಿಸ್ವಾಮಿ, ನವೀನ್ ಬಿನ್ ಚಂದ್ರಪ್ಪ ಮತ್ತು ಬ್ಯಾಲಹಳ್ಳಿ ಗ್ರಾಮದ ವೆಂಕಟೇಶ ಬಿನ್ ಮುದ್ದಪ್ಪ ರವರುಗಳು ಬಂದು ಏಕೋದ್ದೇಶದಿಂದ ತನ್ನ ಮೇಲೆ ಗಲಾಟೆ ಮಾಡಿ ಆ ಪೈಕಿ ನರಸಿಂಹಗೌಡ ರವರು ತನ್ನನ್ನು ಯಾಕೋ ಅಲಕಾ ನನ್ಮಗನೇ ನನ್ನ ಅಕ್ಕ ಸುನಂದಮ್ಮ ನನ್ನು ಮನೆಯಿಂದ ಓಡಿಸಿದ್ದೀಯಾ, ಸಂಸಾರ ಮಾಡೋದಕ್ಕೆ ತಾಕತ್ ಇಲ್ಲವಾ ನಿನಗೇ ಬೋಳಿ ನನ್ನ ಮಗನೇ ಎಂತ ಕೆಟ್ಟಮಾತುಗಳಿಂದ ಬೈದು ನಾಲ್ಕೂ ಜನರೂ ತನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಕೈಗಳಿಂದ ತನ್ನ ಬೆನ್ನಿಗೆ ಮೈ ಮೇಲೆ ಹೊಡೆದು ಕಾಲುಗಳಿಂದ ಹೊದ್ದಿರುತ್ತಾರೆ. ನರಸಿಂಹಗೌಡ ರವರು ತನ್ನನ್ನು ನನ್ನ ಅಕ್ಕ ಸುನಂದಮ್ಮ ರವರೊಂದಿಗೆ ಸಂಸಾರ ಮಾಡದಿದ್ದರೆ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡಂತೆ ತನ್ನ ಮೇಲೆ ಗಲಾಟೆ ಮಾಡಿ, ಹಲ್ಲೆ ಮಾಡಿರುವ ಮೇಲ್ಕಂಡವರ ವಿರುದ್ದ ಕಾನೂನಿನ  ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 270/2019 ಕಲಂ.304(ಎ) ಐ.ಪಿ.ಸಿ:-

     ದಿನಾಂಕ: 06/10/2019 ರಂದು ಮದ್ಯಾಹ್ನ 2-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಬೇಬಿ ವೈ ಬಿ ಕೋಂ ಸುನಿಲ್  ಎಂ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ತಂದೆಗೆ ತಾನು ಮತ್ತು ತನ್ನ ತಮ್ಮ ಶ್ರೀನಿವಾಸ್ ಎಂಬ ಇಬ್ಬರು ಮಕ್ಕಳಿದ್ದು, ತನಗೆ ಈಗ್ಗೆ ಸುಮಾರು 5 ವರ್ಷಗಳ ಹಿಂದೆ ವೇಮಗಲ್ ಹೋಬಳಿ ವಳೇರಹಳ್ಳಿ ಗ್ರಾಮದ ಸುನಿಲ್ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ತಮ್ಮ ದಾಂಪತ್ಯದಲ್ಲಿ ಇಬ್ಬರು ಮಕ್ಕಳಾಗಿದ್ದು, ಹಾಲಿ ನನಗೆ 5 ತಿಂಗಳ ಹೆಣ್ಣು ಮಗುವಿದ್ದು, ಮಗುವಿನ ಆರೈಕೆ ಸಲುವಾಗಿ ತವರು ಮನೆಯಲ್ಲಿರುತ್ತೇನೆ. ತಮ್ಮ ತಂದೆ ಪ್ರಕಾಶ್ ರವರಿಗೆ ಸುಮಾರು 45 ವರ್ಷ ವಯಸ್ಸಾಗಿದ್ದು, ಅವರಿಗೆ ಸುಮಾರು ಒಂದು ವರ್ಷದಿಂದ ಸಕ್ಕರೆ ಖಾಯಿಲೆ ಇದ್ದು, ಮಾತ್ರೆಗಳನ್ನು ತಿನ್ನುತ್ತಿದ್ದರು. ಹೀಗಿರುವಲ್ಲಿ ದಿನಾಂಕ:06/10/2019 ರಂದು ಬೆಳಿಗ್ಗೆ 7-00 ತಮ್ಮ ತಂದೆಯವರಿಗೆ ಮೈ ಕೈ ನೋವು ಜಾಸ್ತಿ ಆಗಿದೆ ವಾಸು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ್ದು, ನಂತರ ತಮ್ಮ ತಂದೆ ವಾಸು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಿಸಿಕೊಂಡು 9-00 ಗಂಟೆಗೆ ವಾಪಸ್ಸು ಬಂದು ತಿಂಡಿ ಮಾಡಿಕೊಂಡು ಪುನ: ವಾಸು ಆಸ್ಪತ್ರೆಗೆ ಹೋಗಿ ಚಿಕಿತ್ಸೆಪಡಿಸಿಕೊಂಡು ಬರುವುದಾಗಿ ಹೇಳಿ ಹೋದರು.  ನಂತರ ಇದೇ ದಿನ ಸುಮಾರು 12-45 ಗಂಟೆಗೆ ಯಾರೋ ಒಬ್ಬ ವ್ಯಕ್ತಿ ತಮ್ಮ ಮನೆಯ ಬಳಿಗೆ ಬಂದು ವಾಸು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ರವರಿಗೆ ತುಂಬಾ ಸಿರಿಯಿಸ್ ಆಗಿದೆ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ಹೇಳಿ ಹೊರಟು ಹೋದರು. ನಂತರ ತಾನು ಮತ್ತು ತಮ್ಮ ತಾಯಿ ಪದ್ಮಾವತಮ್ಮ ರವರು ಕೂಡಲೇ ವಾಸು ಕ್ಲೀನಿಕ್ ಬಳಿ ಹೋಗಿ ನೋಡಲಾಗಿ ತಮ್ಮ ತಂದೆ ಪ್ರಕಾಶ್ ರವರನ್ನು ಬೆಡ್ ಮೇಲೆ ಮಲಗಿಸಿದ್ದರು. ನಂತರ ಆಸ್ಪತ್ರೆಯಲ್ಲಿನ ಸಿಬ್ಬಂದಿಯನ್ನು ವಿಚಾರ ಮಾಡಲಾಗಿ ವೈದ್ಯರು ಮತ್ತು ನರ್ಸ ತಮ್ಮ ತಂದೆ ಪ್ರಕಾಶ್ ರವರಿಗೆ ಬೆಳಿಗ್ಗೆ ಯಾವುದೋ ಇಂಜೆಕ್ಷನ್ ಕೊಟ್ಟ ನಂತರ ವೈಬರೇಷನ್ ಆಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತೆ. ತಮ್ಮ ತಂದೆಯವರ ಸಾವಿಗೆ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮಾಡಿ ವೈದ್ಯರ ಮತ್ತು ಸಿಬ್ಬಂದಿಯವರ ನಿರ್ಲಕ್ಷ್ಯದಿಂದ ಮೃತಪಟ್ಟಿರುತ್ತಾರೆ. ತಮಗೆ ದಿಕ್ಕು ತೋಚದೇ ಇದ್ದು ವಾಸು ಕಿನ್ಲಿಕ್ ಬಳಿ ಇದ್ದ ಅಂಬುಲೇನ್ಸ್ನಲ್ಲಿ ತಮ್ಮ ತಂದೆಯವರ ಮೃತ ದೇಹವನ್ನು ಮನೆಯ ಬಳಿಗೆ ತೆಗೆದುಕೊಂಡು ಹೋಗಿರುತ್ತೇವೆ.  ಆದ್ದರಿಂದ ತಮ್ಮ ತಂದೆಯವರ ಸಾವಿಗೆ ಕಾರಣರಾಗಿರುವ ವಾಸು ಕ್ಲಿನಿಕ್ ವೈದ್ಯರು ಮತ್ತು ಸಿಬ್ಬಂದಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.176/2019 ಕಲಂ.279-337 ಐ.ಪಿ.ಸಿ:-

     ದಿನಾಂಕ 06-09-2019 ರಂದು ಮದ್ಯಾಹ್ನ 14-45 ಗಂಟೆಗೆ ಪಿರ್ಯಾದಿಯಾದ  ಮಧು ಬಿನ್ ನಂಜೇಗೌಡ  ಮಡಕುಹೊಸಹಳ್ಳಿ ಗ್ರಾಮ ರವರು ಠಾಣೆಗೆ  ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಇದೇ ದಿನ ಬೆಳಗ್ಗೆ ತಾನು ಹಾಗೂ ತನ್ನ ಗೆಳೆಯನಾದ  ರಘು ಬಿನ್ ವೆಂಕಟರವಣಪ್ಪ ರವರು ರಘು ರವರ ಬಾಬತ್ತು KA-40-ED-4199 ನೊಂದಣಿಯ ಪಲ್ಸರ್ ದ್ವಿಚಕ್ರ ವಾಹನದಲ್ಲಿ  ಹಿಂಬದಿಯಲ್ಲಿ ಕುಳಿತುಕೊಂಡು ಕಾರಹಳ್ಳಿ ಕ್ರಾಸಿಗೆ ಬರಲು ಬೆಳಗ್ಗೆ 10-45 ಗಂಟೆಯ ಸಮಯದಲ್ಲಿ  ನಂದಿ ಬೆಟ್ಟದ ರಸ್ತೆಯ ಹುಕ್ಕಾ ಬಾರ್ ಮುಂಬಾಗ ಬರುತ್ತಿದ್ದಾಗ ನಮ್ಮ ಮುಂದೆ ಒಂದು ದ್ವಿಚಕ್ರ ವಾಹನ ಸಂಖ್ಯೆ KA-04-JS-5055 R15 ದ್ವಿಚಕ್ರ ವಾಹನದ ಸವಾರ ತನ್ನ ವಾಹನವನ್ನು ತಾವುದೇ ಮುನ್ಸೂಚನೆ ನೀಡದೆ ಸಡನ್ನಾಗಿ ಅತಿವೇಗ ಮತ್ತು ಅಜಾಗರೂಕತೆಯಿಂದ  ತನ್ನ ವಾಹನವನ್ನು  ಎಡಬಾಗದಿಂದ  ಬಲಬಾಗಕ್ಕೆ  ಹುಕ್ಕಾ ಬಾರ್ ನ ಕಡೆ ತಿರುಗಿಸಿದ್ದು  ನಾನು ಕುಳಿತಿದ್ದ  ದ್ವಿಚಕ್ರ ವಾಹನವನ್ನು ಚಾಲನೆ ಮಾಡುತ್ತಿದ್ದ ರಘು ರವರು ಆತನ ದ್ವಿಚಕ್ರ ವಾಹನಕ್ಕೆ ತಗುಲಿಸಿದ್ದು ದ್ವಿಚಕ್ರ ವಾಹನದ ಸಮೇತಾ  ನಾವಿಬ್ಬರೂ ರಸ್ತೆಯ ಮೇಲೆ ಬಿದ್ದು ಹೋಗಿ ನನಗೆ ಮೈ ಕೈಗಳಿಗೆ ಸಣ್ಣ–ಪುಟ್ಟ ಗಾಯಗಳಾಗಿದ್ದು ರಘು ರವರಗೆ ತಲೆಗೆ ಗಾಯವಾಗಿ ಪ್ರಜ್ಞೆ ತಪ್ಪಿರುತ್ತದೆ.ಸ್ಥಳಕ್ಕೆ ಬಂದ ನಮ್ಮ ಬಾವ ಆನಂದ ರವರ ಜೊತೆಯಲ್ಲಿ ದೇವನಹಳ್ಳಿಯ ಮಾನಸ ಆಸ್ಪತ್ರಗೆ ಹೋಗಿ ಚಿಕಿತ್ಸೆಗಾಗಿ ದಾಖಲಾಗಿದ್ದು ನಮಗೆ ಅಪಫಾತ ಪಡಿಸಿದ ದ್ವಿಚಕ್ರ ವಾಹನದ ಸವಾರನ ಹೆಸರು ವಿಳಾಸ ತಿಳಿಯಧೇ ಇದ್ದು ನಮಗೆ ಅಪಘಾತ ವುಂಟಾಗಲು ಕಾರಣನನಾದ KA-04-JS-5055 R15 ದ್ವಿಚಕ್ರ ವಾಹನದ ಸವಾರನ ವಿರುದ್ದ  ಕಾನೂನು ರೀತ್ಯಾ ಕ್ರಮವನ್ನು ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರವವರದಿ,

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.336/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 06-10-2019 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಕೊತ್ತನೂರು ಗ್ರಾಮದಲ್ಲಿ ನಾರಾಯಣಸ್ವಾಮಿ ಬಿನ್ ದೊಡ್ಡವೆಂಕಟರಾಯಪ್ಪ ಎಂಬುವರು ಅವರ ಮನೆಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-379 ಮಂಜುನಾಥ ರವರೊಂದಿಗೆ ಸರ್ಕಾರಿ ಕೆಎ-40-ಜಿ-357 ಜೀಪಿನಲ್ಲಿ ಕೊತ್ತನೂರು ಗ್ರಾಮಕ್ಕೆ ಮದ್ಯಾಹ್ನ 12.15  ಗಂಟೆಗೆ ಬೇಟಿ ನೀಡಿ ಸಿಪಿಸಿ-379 ಮಂಜುನಾಥ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ನಾರಾಯಣಸ್ವಾಮಿ ಬಿನ್ ದೊಡ್ಡವೆಂಕಟರಾಯಪ್ಪ ರವರ ಮನೆಯ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಕೆ.ಎನ್. ನಾರಾಯಣಸ್ವಾಮಿ ಬಿನ್ ದೊಡ್ಡವೆಂಕಟರಾಯಪ್ಪ, 52 ವರ್ಷ, ಆದಿ ಕರ್ನಾಟಕ, ಕೂಲಿಕೆಲಸ, ವಾಸ: ಕೊತ್ತನೂರು  ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿಸಿದ್ದು ಸದರಿ ಆಸಾಮಿಯ ಬಳಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ 90 Ml ನ Haywards Cheers Whisky 9 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 272-00 ರೂಗಳಾಗಿರುತ್ತೆ (ಇನ್ನೂರ ಎಪ್ಪತ್ತೆರಡು ರೂಪಾಯಿಗಳು ಮಾತ್ರ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಎರಡು ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Cheers Whisky 90 Ml ನ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಮದ್ಯಾಹ್ನ 12-30 ಗಂಟೆಯಿಂದ 1-15 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 1-30 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 336/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.337/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 06-10-2019 ರಂದು ಮದ್ಯಾಹ್ನ 2-45 ಗಂಟೆಯಲ್ಲಿ ಪೊಲೀಸ್ ಠಾಣೆಯಲ್ಲಿದ್ದಾಗ ಕೊತ್ತನೂರು ಗ್ರಾಮದಲ್ಲಿ ಪದ್ಮಮ್ಮ ಕೋಂ ಮುನಿರಾಜು ಎಂಬುವರು ಅವರ ಚಿಲ್ಲರೆ ಅಂಗಡಿ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳಾವಕಾಶವನ್ನು ಮಾಡಿ ಕೊಟ್ಟಿರುವುದಾಗಿ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಕೂಡಲೇ ಸಿಬ್ಬಂದಿಯವರಾದ ಸಿಪಿಸಿ-27 ಸರ್ವೆಶ ರವರೊಂದಿಗೆ ಸರ್ಕಾರಿ ಕೆಎ-40-ಜಿ-357 ಜೀಪಿನಲ್ಲಿ ಕೊತ್ತನೂರು ಗ್ರಾಮಕ್ಕೆ ಮದ್ಯಾಹ್ನ 3.00 ಗಂಟೆಗೆ ಬೇಟಿ ನೀಡಿ ಸಿಪಿಸಿ-27 ಸರ್ವೆಶ ರವರ ಮೂಲಕ ಇಬ್ಬರು ಪಂಚರನ್ನು ಬರಮಾಡಿಕೊಂಡು ಅವರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಿ ಪಂಚಾಯ್ತಿದಾರರೊಂದಿಗೆ ಮತ್ತು ಸಿಬ್ಬಂಧಿಯೊಂದಿಗೆ ಪದ್ಮಮ್ಮ ಕೋಂ ಮುನಿರಾಜು ರವರ ಮನೆಯ ಬಳಿ ಹೋಗುವಷ್ಟರಲ್ಲಿ ಮದ್ಯಪಾನ ಮಾಡುತ್ತಿದ್ದ ಆಸಾಮಿಗಳು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಓಡಿ ಹೋಗಿದ್ದು ಆ ಪೈಕಿ ಮದ್ಯ ಮಾರಾಟ ಮಾಡುತ್ತಿದ್ದ ಆಸಾಮಿಯು ಸಹ ಸ್ಥಳದಿಂದ ಪರಾರಿಯಾಗಿದ್ದು ಆಕೆಯ ಹೆಸರು ವಿಳಾಸವನ್ನು ಪಂಚಾಯ್ತಿದಾರರಿಂದ ತಿಳಿಲಯಲಾಗಿ ಶ್ರೀಮತಿ ಪದ್ಮಮ್ಮ ಕೋಂ ಮುನಿರಾಜು, 45 ವರ್ಷ, ನಾಯಕರು, ಚಿಲ್ಲರೆ ಅಂಗಡಿ ವ್ಯಾಪಾರ, ಕೊತ್ತನೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂತ ತಿಳಿದು ಬಂದಿದ್ದು ಸ್ಥಳದಲ್ಲಿ ಒಂದು ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರ್ ಇದ್ದು ಪರಿಶೀಲಿಸಲಾಗಿ 90 Ml ನ Haywards Cheers Whisky 9 ಟೆಟ್ರಾ ಪ್ಯಾಕೆಟ್ ಗಳಿದ್ದು ಪ್ರತಿಯೊಂದರ ಬೆಲೆ Rs. 30.32 ರೂಗಳಾಗಿದ್ದು ಒಟ್ಟು Rs. 272-00 ರೂಗಳಾಗಿರುತ್ತೆ (ಇನ್ನೂರ ಎಪ್ಪತ್ತೆರಡು ರೂಪಾಯಿಗಳು ಮಾತ್ರ) ಹಾಗೂ ಸ್ಥಳದಲ್ಲಿ ಪರಿಶೀಲಿಸಲಾಗಿ ಎರಡು ಖಾಲಿ ಪ್ಲಾಸ್ಟಿಕ್ ಲೋಟಗಳು, ಎರಡು ಖಾಲಿ ವಾಟರ್ ಪ್ಯಾಕೇಟ್ ಗಳು ಹಾಗೂ Haywards Cheers Whisky 90 Ml ನ 2 ಖಾಲಿ ಟೆಟ್ರಾ ಪ್ಯಾಕೇಟ್ ಗಳಿದ್ದು ಮದ್ಯಾಹ್ನ 3-00 ಗಂಟೆಯಿಂದ 3-45 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಆರೋಪಿಯೊಂದಿಗೆ ಮದ್ಯಾಹ್ನ 4-00 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಆರೋಪಿಯ ವಿರುದ್ದ ಠಾಣಾ ಮೊ.ಸಂ 337/2019 ಕಲಂ 15(ಎ), 32(3) ಕೆ.ಇ. ಆಕ್ಟ್ ರೀತ್ಯಾ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.