ದಿನಾಂಕ :06/09/2020 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ಮೊ.ಸಂ.39/2020 ಕಲಂ.279,337 ಐ.ಪಿ.ಸಿ:-

            ದಿನಾಂಕ:-05/09/2020 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹನುಮಂತಪ್ಪ ಬಿನ್ ಲೇಟ್ ಚಿಕ್ಕಮುನಿಯಪ್ಪ 41 ವರ್ಷ, ಪ.ಜಾತಿ (ಆದಿ ಕರ್ನಾಟಕ ಜನಾಂಗ), ಫಾರೆಸ್ಟ್ ವಾಚರ್ ವೃತ್ತಿ, ಗೌಚನಹಳ್ಳಿ ಗ್ರಾಮ, ನಂದಿ ಹೋಬಳಿ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ. ರವರು ಠಾಣೆಗೆ ಹಾಜರಾಗಿ ನೀಡಿದ ಬೆರಳಚ್ಚು ದೂರಿನ ಸಾರಾಂಶವೇನೆಂದರೆ ದಿನಾಂಕ:-03/09/2020 ರಂದು ತನ್ನ ಬಾಬತ್ತು KA-40-ED-6612 ರ ದ್ವಿಚಕ್ರವಾಹನದಲ್ಲಿ ಕೆಲಸಕ್ಕಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಕೆಲಸವನ್ನು ಮುಗಿಸಿಕೊಂಡು ವಾಪಸ್ಸು ಗ್ರಾಮಕ್ಕೆ ಬರಲು ಚಿಕ್ಕಬಳ್ಳಾಪುರ – ನಂದಿ ರಸ್ತೆಯ ಕಂದವಾರ ಗ್ರಾಮದ ಬಸ್ ನಿಲ್ದಾಣದ ಬಳಿ ಸಂಜೆ 7-30 ಗಂಟೆಯ ಸಮಯದಲ್ಲಿ ಬರುತ್ತಿದ್ದಾಗ ಎದುರಿಗೆ ನಂದಿ ಕಡೆಯಿಂದ ಬಂದ KA-40-V-7323 ರ ದ್ವಿಚಕ್ರವಾಹನ ಸವಾರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಮಗ ಮಧು ರವರು ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿಚಕ್ರವಾಹನ ಸಮೇತ ಠಾರ್ ರಸ್ತೆಯಲ್ಲಿ ಬಿದ್ದಾಗ ವಾಹನಗಳು ಜಕಂಗೊಂಡು ತನ್ನ ಮಗ ಮಧು ರವರಿಗೆ ಬಲ ಮೊಣಕಾಲಿನ ಕೆಳಭಾಗ, ಎರಡೂ ಕೈಗಳಿಗೆ ರಕ್ತ ಗಾಯಗಳಾಗಿದ್ದು ಹಾಗೂ ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನಿಗೂ ಸಹಾ ಗಾಯಗಳಾಗಿರುವುದಾಗಿ ಹಾಗೂ ಗಾಯಾಳುಗಳನ್ನು ಉಪಚರಿಸಿ ಚಿಕಿತ್ಸೆಗಾಗಿ ರಸ್ತೆಯಲ್ಲಿ ಬರುತ್ತಿದ್ದ ಯಾವುದೋ ಆಟೋದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸುತ್ತಿರುವುದಾಗಿ ತನಗೆ ಅಲ್ಲಿನ ಸ್ಥಳೀಯರು ಮೊಬೈಲ್ ಕರೆ ಮಾಡಿ ತಿಳಿಸಿದ್ದು, ತಾನು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿದ್ದು, ಸದರಿ ಅಪಘಾತ ಪಡಿಸಿದ ದ್ವಿಚಕ್ರವಾಹನ ಸವಾರನ ಹೆಸರು ಮತ್ತು ವಿಳಾಸ ಕೇಳಲಾಗಿ ಗಣೇಶ ಬಿನ್ ಆದೆಪ್ಪ 40 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ಸುಲ್ತಾನ ಪೇಟೆ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ತನ್ನ ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿಕೊಂಡು ಸದರಿ ಅಪಘಾತ ಪಡಿಸಿದ KA-40-V-7323 ರ ದ್ವಿಚಕ್ರವಾಹನ ಸವಾರನ ಮೇಲೆ ಈ ದಿನ ತಡವಾಗಿ ದಿನಾಂಕ:-05/09/2020 ರಂದು ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ಬೆರಳಚ್ಚು ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

  1. ಚಿಂತಾಮಣಿ ಗ್ರಾಮಾಂತರ  ಪೊಲೀಸ್ ಠಾಣೆ ಮೊ.ಸಂ.321/2020 ಕಲಂ.279,337 ಐ.ಪಿ.ಸಿ & 187 ಐ.ಎಂ.ವಿ ಆಕ್ಟ್:-

          ದಿನಾಂಕ 05-09-2020 ರಂದು ಸಂಜೆ 6-30 ಗಂಟೆಗೆ ಮುನಿವೀರಪ್ಪ ಬಿನ್ ಲೇಟ್ ಸಿದ್ದಪ್ಪ, 70 ವರ್ಷ, ವಕ್ಕಲಿಗರು, ಜಿರಾಯ್ತಿ, ನೆಲಮಾಚನಹಳ್ಳಿ ಗ್ರಾಮ, ಚಿಂತಾಮಣಿ ತಾ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ತಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು, ಜಿರಾಯ್ತಿಯಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:13-08-2020 ರಂದು ಬೆಳಿಗ್ಗೆ 09-00 ಗಂಟೆಯ ಸಮಯದಲ್ಲಿ ತಾನು, ತನ್ನ ಮಗ ಗೆಂಗಿರೆಡ್ಡಿ ಮತ್ತು ತನ್ನ ಹೆಂಡತಿ ವೆಂಕಟಮ್ಮ, 60ವರ್ಷ, ಜಿರಾಯ್ತಿ ರವರು ತಮ್ಮ ಗ್ರಾಮದ ಬಳಿಯಿರುವ ತಮ್ಮ ಜಮೀನಿನ ಬಳಿ ಹೋಗಿ ಜಮೀನಿನಲ್ಲಿ ಕೆಲಸ ಮಾಡಿಕೊಂಡು ತಮ್ಮ ಗ್ರಾಮಕ್ಕೆ ಹೋಗಲು ರಸ್ತೆಯ ಎಡಭಾಗದ ಖಾಲಿ ಜಾಗದಲ್ಲಿ ನಿಂತುಕೊಂಡಿದ್ದಾಗ ಲಕ್ಷ್ಮಿದೇವನಕೋಟೆ ಕಡೆಯಿಂದ ಬಂದ ಕೆಎ-67 0033 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನದ ಚಾಲಕ ಸದರಿ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನ್ನ ಹೆಂಡತಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿದ್ದು, ಅದರ ಪರಿಣಾಮ ತನ್ನ ಹೆಂಡತಿ ಕೆಳಗೆ ಬಿದ್ದು ಹೋಗಿ ಆಕೆಯ ಬಲಗಾಲಿಗೆ, ಸೊಂಟಕ್ಕೆ ಮತ್ತು ಕೈಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ. ಗಾಯಗೊಂಡಿದ್ದ ತನ್ನ ಹೆಂಡತಿಯನ್ನು ತಾನು ಮತ್ತು ತನ್ನ ಮಗ ಗೆಂಗಿರೆಡ್ಡಿ ರವರು ಯಾವುದೋ ವಾಹನದಲ್ಲಿ ಚಿಂತಾಮಣಿ ನಗರದ ಧನುಷ್ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿ ನಂತರ ದಿನಾಂಕ:26-08-2020 ರಂದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿರುತ್ತೇವೆ. ಗಾಯಗೊಂಡಿದ್ದ ತನ್ನ ಹೆಂಡತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡತ್ತಿದ್ದು, ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲಿಸದೇ ಹೊರಟು ಹೋಗಿರುವ ಕೆಎ-67 0033 ನೋಂದಣಿ ಸಂಖ್ಯೆಯ ಟಾಟಾ ಏಸ್ ವಾಹನವನ್ನು ಪತ್ತೆ ಮಾಡಿ ಸದರಿ ವಾಹನದ ಚಾಲಕನ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.322/2020 ಕಲಂ.143,323,448,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ 05-09-2020 ರಂದು ಸಂಜೆ 7-30 ಗಂಟೆಗೆ ಶ್ರೀಮತಿ ಸುಶೀಲಮ್ಮ ಕೊಂ ಜಯರಾಮಪ್ಪ, 65 ವರ್ಷ, ನಾಯಕ ಜನಾಂಗ, ಕೂಲಿ ಕೆಲಸ, ವಾಸ ಬ್ರಾಹ್ಮಣರದಿನ್ನೆ ಗ್ರಾಮ, ಮುನಗನಹಳ್ಳಿ ಗ್ರಾಮ ಪಂಚಾಯ್ತಿ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಮ್ಮ ಅತ್ತೆ-ಮಾವನವರಿಗೆ 09 ಜನ ಮಕ್ಕಳಿದ್ದು, ಈ ಪೈಕಿ ತನ್ನ ಗಂಡ ಜಯರಾಮಪ್ಪ ರವರು 2-ನೇಯವರಾಗಿರುತ್ತಾರೆ. ತನ್ನ ಗಂಡ ಮತ್ತು ಅವರ ಅಣ್ಣ-ತಮ್ಮಂದಿರು ಅವರ ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಚಿಂತಾಮಣಿಯ ಮಾನ್ಯ ನ್ಯಾಯಾಲಯದಲ್ಲಿ ಸಿವಿಲ್ ಕೇಸು ಹಾಕಿಕೊಂಡಿದ್ದು, ಪ್ರಸ್ತುತ ವಿಚಾರಣೆಯಲ್ಲಿರುತ್ತೆ. ತಾನು, ತನ್ನ ಗಂಡ ಮಾತ್ರ ತಮ್ಮ ಗ್ರಾಮದಲ್ಲಿ ವಾಸವಾಗಿದ್ದು, ತಮ್ಮ ಮಕ್ಕಳು ಚಿಂತಾಮಣಿ ಹಾಗೂ ಬೆಂಗಳೂರಿನಲ್ಲಿ ಅವರುಗಳ ಕುಟುಂಬದೊಂದಿಗೆ ವಾಸವಿದ್ದು, ಆಗಾಗ ತಮ್ಮ ಗ್ರಾಮಕ್ಕೆ ಬಂದು ಹೋಗುತ್ತಿರುತ್ತಾರೆ. ಹೀಗಿರುವಾಗ ದಿನಾಂಕ: 04/09/2020 ರಂದು ರಾತ್ರಿ ಸು.11-00 ಗಂಟೆಯ ಸಮಯದಲ್ಲಿ ತಾನು ಮತ್ತು ತನ್ನ ಗಂಡ ತಮ್ಮ ಮನೆಯಲ್ಲಿದ್ದಾಗ, ತನ್ನ ಮೈದಂದಿರಾದ ಕೃಷ್ಣಪ್ಪ, ಪ್ರಭಾಕರ, ಇವರ ಹೆಂಡತಿ ಶಿವಮ್ಮ, ಗಂಗಪ್ಪ ಬಿನ್ ವೆಂಕಟಸ್ವಾಮಿ, ಕೃಷ್ಣಪ್ಪನ ಮಗಳು ತಿಪ್ಪಮ್ಮ ಮತ್ತು ಕೃಷ್ಣಪ್ಪನ ಹೆಂಡತಿ ಮುನಿಯಮ್ಮ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ತಮ್ಮ ಮನೆಯ ಬಳಿಗೆ ಬಂದು ಮನೆಯಲ್ಲಿದ್ದ ತನ್ನನ್ನು ಮತ್ತು ತನ್ನ ಗಂಡ ಜಯರಾಮಪ್ಪರವರನ್ನು ಕುರಿತು ಬೋಳಿ ತನ್ನ ಮಕ್ಕಳೇ ನಿಮ್ಮಮ್ಮನ್ನೇ ಕೇಯ, ನಿಮಗೆ ಆಸ್ತಿಯಲ್ಲಿ ಭಾಗ ಕೊಡಬೇಕಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ತಾನು, ತನ್ನ ಗಂಡ ಮೇಲ್ಕಂಡವರನ್ನು ಕುರಿತು ಏಕೆ ತಮ್ಮ ಮನೆಯ ಬಳಿಗೆ ಬಂದು ಈ ರೀತಿ ಗಲಾಟೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ಮೇಲ್ಕಂಡವರೆಲ್ಲರೂ ತಮ್ಮ ಮನೆಯೊಳಗೆ ನುಗ್ಗಿ ಮನೆಯಲ್ಲಿದ್ದ ತನ್ನ ಗಂಡ ಜಯರಾಮಪ್ಪ ರವರನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಕೈಗಳಿಂದ ಮೈಮೇಲೆ ಹೊಡೆದು, ಕಾಲುಗಳಿಂದ ಒದ್ದಿದ್ದು, ಆಗ ತಾನು ಈ ಬಗ್ಗೆ ಕೇಳಿದಾಗ ತಿಪ್ಪಮ್ಮ, ಮುನಿಯಮ್ಮ ರವರುಗಳು ತನ್ನ ಜುಟ್ಟನ್ನು ಹಿಡಿದು ಎಳೆದಾಡಿ, ಕೈಗಳಿಂದ ತನಗೆ ಮೈಮೇಲೆ ಹೊಡೆದು, ಕಾಲುಗಳಿಂದ ಒದ್ದು ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ಮಂಜುಳ ಕೋಂ ಲೇಟ್ ರವಿಚಂದ್ರ ಮತ್ತು ಚಿನ್ನಪ್ಪಯ್ಯ ಬಿನ್ ತಿಮ್ಮಯ್ಯ ರವರುಗಳು ಬಂದು ಜಗಳ ಬಿಡಿಸಿ ತಮ್ಮನ್ನು ಉಪಚರಿಸಿರುತ್ತಾರೆ. ಅಲ್ಲಿಂದ ಹೋಗುವಾಗ ಮೇಲ್ಕಂಡವರ ಪೈಕಿ ತನ್ನ ಮೈದ ಕೃಷ್ಣಪ್ಪ ತಮ್ಮನ್ನು ಕುರಿತು ಆಸ್ತಿಯ ವಿಚಾರಕ್ಕೆ ಬಂದರೆ ನಿಮ್ಮನ್ನು ಮುಗಿಸಿಬಿಡುತ್ತೇವೆಂತ ಪ್ರಾಣ ಬೆದರಿಕೆಯನ್ನು ಹಾಕಿ ಹೋದ. ನಂತರ ತನಗೆ ಮೈ ಕೈ  ನೋವುಂಟಾದ್ದರಿಂದ ತಾನು ಈ ದಿನ ಬೆಳಿಗ್ಗೆ 08-30 ಗಂಟೆಗೆ ತನ್ನ ಗಂಡನೊಂದಿಗೆ ದ್ವಿಚಕ್ರವಾಹನದಲ್ಲಿ ಚಿಂತಾಮಣಿಗೆ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡು ಬಂದು ಠಾಣೆಯಲ್ಲಿ ದೂರನ್ನು ನೀಡಿರುತ್ತೇನೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿರುತ್ತೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.144/2020 ಕಲಂ.32,34,36(ಎ),38(ಎ) ಕೆ.ಇ ಆಕ್ಟ್ :-

          ದಿನಾಂಕ:06/09/2020 ರಂದು ಮದ್ಯಾಹ್ನ 1-45 ಗಂಟೆ ಸಮಯದಲ್ಲಿ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆದರೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ ಎಂ.ಎನ್ ಆದ ನಾನು ಈ ದಿನ ದಿನಾಂಕ:06/09/2020 ರಂದು ಬೆಳಿಗ್ಗೆ  11-00 ಗಂಟೆಯ ಸಮಯದಲ್ಲಿ ಗುಡಿಬಂಡೆ ತಾಲ್ಲೂಕು ಸೋಮೇನಹಳ್ಳಿ ಗ್ರಾಮದ ಬಳಿ ಸಿಬ್ಬಂದಿಗಳೊಂದಿಗೆ ಕೆಎ40-ಜಿ-1888 ರ ಸರ್ಕಾರಿ ಪೊಲೀಸ್ ಜೀಪಿನಲ್ಲಿ ಗಸ್ತಿನಲ್ಲಿದ್ದಲ್ಲಿದ್ದಾಗ, ಬೀಚಗಾನಹಳ್ಳಿ ಕ್ರಾಸ್ ನ ಬಾರ್ ನಿಂದ  ಯಾರೋ ಒಬ್ಬ ಆಸಾಮಿ ಒಂದು ಮಧ್ಯದ ಪಾಕೆಟ್ ಗಳನ್ನು ರಟ್ಟಿನ ಬಾಕ್ಸ್ ನಲ್ಲಿ ಅಕ್ರಮವಾಗಿ ತುಂಬಿಕೊಂಡು KA43-Q-4200 ರ ನೊಂದಣಿಯ ದ್ವಿ ಚಕ್ರ ವಾಹನದಲ್ಲಿ ಸಾಗಾಣಿಕೆ ಮಾಡಿಕೊಂಡು ಸೋಮೇನಹಳ್ಳಿ  ಕಡೆ ಬರುತ್ತಿರುವುದಾಗಿ  ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಸೋಮೇನಹಳ್ಳಿ ಗ್ರಾಮದಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ದೊಡ್ಡ ನಂಚರ್ಲು ಕ್ರಾಸ್ ಬಳಿ, ಕಾಯುತ್ತಿದ್ದಾಗ , ಬೆಳಿಗ್ಗೆ 11-30 ಗಂಟೆಯಲ್ಲಿ KA43-Q-4200 ರ ನೊಂದಣಿಯ ದ್ವಿ ಚಕ್ರ ವಾಹನದಲ್ಲಿ ಇಬ್ಬರು ಆಸಾಮಿಗಳು ಬಂದಿದ್ದು, ಸದರಿ ದ್ವಿ ಚಕ್ರ ವಾಹನವನ್ನು ತಡೆದು ನಿಲ್ಲಿಸಿ, ಸದರಿ ಆಸಾಮಿಗಳ ಬಳಿಯಿದ್ದ ಎರಡು ರಟ್ಟಿನ ಬಾಕ್ಸ್ ಗಳನ್ನು  ಪರಿಶೀಲನೆ ಮಾಡಲಾಗಿ, ಒಂದರಲ್ಲಿ ಮಧ್ಯವುಳ್ಳ OLD TAVERN WISKY ಯ 180 ML ಸಾಮರ್ಥ್ಯದ 48 ಟೆಟ್ರಾ ಪಾಕೆಟ್ ಗಳಿದ್ದವು, ಇದರ ಒಟ್ಟು ಮದ್ಯ 8 ಲೀಟರ್ 640 ಎಂ.ಎಲ್. ಆಗಿದ್ದು, ಒಂದು ಟೆಟ್ರಾ ಪಾಕೇಟಿನ ಮುಖಬೆಲೆ 86.75 ರೂಗಳಾಗಿರುತ್ತೆ.  ಮತ್ತೊಂದು ರಟ್ಟಿನ ಬಾಕ್ಸ್ ನಲ್ಲಿ KINGFISHER STRONG PREMIUM BEER ನ 650 ML ಸಾಮರ್ಥ್ಯದ 12 ಮದ್ಯದ ಬಾಟಲ್ ಇದರ ಒಟ್ಟು ಮದ್ಯ 7 ಲೀಟರ್ 800 ಎಂ.ಎಲ್. ಆಗಿದ್ದು, ಒಂದು ಬಾಟಲ್ ನ ಮುಖಬೆಲೆ 150 ರೂಗಳಾಗಿರುತ್ತೆ. ಮತ್ತು BAGPIPER DELUXE WHISKY ಯ 180 ML ಸಾಮರ್ಥ್ಯದ 9 ಮದ್ಯದ ಟೆಟ್ರಾ ಪಾಕೆಟ್ ಗಳಿದ್ದವು ಇದರ ಒಟ್ಟು ಮದ್ಯ 1 ಲೀಟರ್ 620 ಎಂ.ಎಲ್. ಆಗಿದ್ದು, ಒಂದು ಟೆಟ್ರಾ ಪಾಕೇಟಿನ ಮುಖಬೆಲೆ 106.23 ರೂಗಳಾಗಿರುತ್ತೆ.ಸದರಿ ಆಸಾಮಿಗಳ ಹೆಸರು ಮತ್ತು ವಿಳಾಸ ಕೇಳಲಾಗಿ  ನಾಗರಾಜ ಬಿನ್ ನಾರಾಯಣಪ್ಪ, 47 ವರ್ಷ ಈಡಿಗ ಜನಾಂಗ , ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಸೋಮೇನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಮತ್ತೊಬ್ಬ ರಾಮಚಂದ್ರ ಬಿನ್ ಗಂಗಾಧರಪ್ಪ 37 ವರ್ಷ, ಈಡಿಗ ಜನಾಂಗ , ಗಾರೆಕೆಲಸ, ವಾಸ ಸೋಮೇನಹಳ್ಳಿ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು, ನಂತರ ಇಷ್ಟು ಪ್ರಮಾಣದ ಮಧ್ಯವನ್ನು ಸಾಗಾಣಿಕೆ ಮಾಡಲು ಇರುವ ಪರವಾನಿಗೆಯನ್ನು ಹಾಜರುಪಡಿಸುವಂತೆ ಕೇಳಲಾಗಿ, ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಕಾನೂನು ಬಾಹಿರವಾಗಿ ಬೀಚಗಾನಹಳ್ಳಿ ಕ್ರಾಸ್ ನ ಮಾರುತಿ ಬಾರ್ ನಲ್ಲಿ ಮದ್ಯವನ್ನು ಖರೀದಿಸಿ ನಮ್ಮ ಗ್ರಾಮದಲ್ಲಿರುವ ತನ್ನ ಚಿಲ್ಲರೆ ಅಂಗಡಿಯಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತಿಳಿಸಿದರು. ಸದರಿ ಆಸಾಮಿಗಳು ಯಾವುದೇ ಪರವಾನಗಿ ಇಲ್ಲದೇ ಕಾನೂನು ಬಾಹಿರವಾಗಿ ಮೇಲ್ಕಂಡ ಮಧ್ಯವನ್ನು  ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದರಿಂದ ನಂತರ ಪಂಚರ ಸಮಕ್ಷಮ ಸ್ಥಳದಲ್ಲಿ ಮೇಲ್ಕಂಡ ಐಟಂನಲ್ಲಿ ಒಂದೊಂದನ್ನು ಅಲಾಯಿದಾಗಿ ಬಿಳಿ ಬಟ್ಟೆ ಚೀಲದಲ್ಲಿಟ್ಟು ಅರಗು ಮಾಡಿ “P” ಎಂಬ ಅಕ್ಷರದಿಂದ ಸೀಲು ಮಾಡಿ ಎಫ್.ಎಸ್.ಎಲ್. ಗೆ ಕಳುಹಿಸಿ ಕೊಡಲು ಶೇಖರಿಸಿರುತ್ತೆ. ಸದರಿ ಮಾಲನ್ನು ಬೆಳಿಗ್ಗೆ 11-45 ಗಂಟೆಯಿಂದ ಮದ್ಯಾಹ್ನ 12-45 ಗಂಟೆವರೆಗೂ ಪಂಚರ ಸಮಕ್ಷಮ ಜರುಗಿಸಿದ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡು ಸದರಿ ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮದ್ಯಾಹ್ನ 1-15 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಸಿದ್ದಪಡಿಸಿ ಮದ್ಯಾಹ್ನ 1-45 ಗಂಟೆಗೆ ಹಾಜರುಪಡಿಸಿ ಸದರಿ ಆರೋಪಿತರ ಅಂದರೆ ಕಾನೂನು ಬಾಹಿರವಾಗಿ ಮದ್ಯವನ್ನು ನೀಡಿದ ಮಾರುತಿ ಬಾರ್ ಮಾಲಿಕ ಮತ್ತು ಕ್ಯಾಷರ್ ಹಾಗೂ ಮದ್ಯವನ್ನು ಸಾಗಾಟ ಮಾಡಿದವರ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲು ಮಾಡಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.97/2020 ಕಲಂ.15(ಎ),32(3) ಕೆ.ಇ ಆಕ್ಟ್ :-

          ದಿನಾಂಕ 06-09-2020 ರಂದು ಮಧ್ಯಾಹ್ನ 03.30 ಗಂಟೆಗೆ ಪಿ.ಎಸ್.ಐ ರವರು ಮಾಲು, ಆರೋಪಿ, ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ದಿನಾಂಕ:-06/09/2020 ರಂದು ತಾನು ಪೊಲೀಸ್ ಠಾಣೆಯಲ್ಲಿದ್ದಾಗ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಗೌಡನಹಳ್ಳಿ ಗ್ರಾಮದಲ್ಲಿ  ಯಾರೋ ಒಬ್ಬ ಆಸಾಮಿ ತನ್ನ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟು ತೊಂದರೆ ಉಂಟು ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲು ಸರ್ಕಾರಿ ವಾಹನ ಸಂಖ್ಯೆ ಕೆಎ 40 ಜಿ 539 ಜೀಪ್ ನಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಸಿಹೆಚ್ ಸಿ-161 ಕೃಷ್ಣಪ್ಪ, ಸಿಪಿಸಿ-101 ಶ್ರೀನಿವಾಸ  ರವರೊಂದಿಗೆ ಗೌಡನಹಳ್ಳಿ ಗ್ರಾಮದ ಬಳಿ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಚಾರವನ್ನು ತಿಳಿಸಿ ಪಂಚರೊಂದಿಗೆ ದಾಳಿ ಮಾಡಿದಾಗ ಯಾರೋ ಒಬ್ಬ ಆಸಾಮಿ ತನ್ನ ಚಿಲ್ಲರೆ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಚಿಲ್ಲರೆ ಅಂಗಡಿ  ಬಳಿ ಸುತ್ತುವರಿದಾಗ ಪೊಲೀಸರನ್ನು  ಕಂಡ ಕೂಡಲೇ ಮದ್ಯ ಸೇವನೆ ಮಾಡುತ್ತಿರುವವರು ಓಡಿಹೋಗಿದ್ದು,  ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟ  ಅಸಾಮಿಯನ್ನು ಹಿಡಿದು ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹಪ್ಪ ಬಿನ್ ಲೇಟ್ ಚೌಡಪ್ಪ, 55 ವರ್ಷ, ವಕ್ಕಲಿಗರು, ಅಂಗಡಿ ವ್ಯಾಪಾರ, ವಾಸ ಗೌಡನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದನು. ಸ್ಥಳದಲ್ಲಿ ಪರಿಶೀಲಿಸಲಾಗಿ ಅಕ್ರಮ ಮಧ್ಯ ಸೇವನೆ ಮಾಡಲು ಬಳಸಿದ್ದ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು, ಖಾಲಿ ಇದ್ದ ಎರಡು  BANGALORE WHISKEY 90 ಎಂ.ಎಲ್ ಟೆಟ್ರಾ ಪ್ಯಾಕೆಟ್ ಗಳಿದ್ದು, ಸ್ಥಳದಲ್ಲಿಯೇ  ಮದ್ಯದ ಟೆಟ್ರಾ ಪ್ಯಾಕೆಟ್ ಗಳು ಇದ್ದು ಪರಿಶೀಲಿಸಲಾಗಿ 90 ಎಂ.ಎಲ್ ನ BANGALORE WHISKEY  ಮಧ್ಯದ 6 ಟೆಟ್ರಾ ಪ್ಯಾಕೆಟ್ ಗಳು ಇದ್ದು, ಒಂದರ ಬೆಲೆ 27.98/- ರೂ  ಆಗಿದ್ದು, 6 ಟೆಟ್ರಾ ಪ್ಯಾಕೆಟ್ ಗಳ ಒಟ್ಟು ಬೆಲೆ 167.88/-ರೂ ಆಗಿರುತ್ತೆ. ಮದ್ಯ ಒಟ್ಟು 540 ಮೀಲಿ ಆಗಿರುತ್ತೆ. ಮಧ್ಯವನ್ನು ಕುಡಿಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಯಾವುದೇ ಪರವಾನಿಗೆ ಇದೆಯೇ ಎಂದು ನರಸಿಂಹಪ್ಪ ನನ್ನು ಕೇಳಲಾಗಿ ಇಲ್ಲವೆಂದು ತಿಳಿಸಿರುತ್ತಾರೆ. ಮೇಲ್ಕಂಡ ಎಲ್ಲಾ ಮಾಲಗಳನ್ನು ಮಧ್ಯಾಹ್ನ 14-00 ರಿಂದ 5-00 ಗಂಟೆಯವರೆಗೆ ಮಹಜರ್ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ.  ಸದರಿ ಮಾಲನ್ನು ಮತ್ತು ಆರೋಪಿ ನರಸಿಂಹಪ್ಪ ರವರನ್ನು ನಿಮ್ಮ ಮುಂದೆ ಈ ನನ್ನ ದೂರಿನೊಂದಿಗೆ ಹಾಜರುಪಡಿಸುತ್ತಿದ್ದು ಈ ಬಗ್ಗೆ ಅಕ್ರಮ ಮದ್ಯ ಕುಡಿಯಲು ಅವಕಾಶ ಮಾಡಿಕೊಟ್ಟ ನರಸಿಂಹಪ್ಪ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ವರದಿ ಸಾರಾಂಶವಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.244/2020 ಕಲಂ.304 ಐ.ಪಿ.ಸಿ :-

          ದಿನಾಂಕ: 05-09-2020 ರಂದು ರಾತ್ರಿ 9.00 ಗಂಟೆಯಲ್ಲಿ ಫಿರ್ಯಾದಿದಾರರಾದ ಶ್ರೀ ಎ.ಎಂ ನಾರಾಯಣಸ್ವಾಮಿ ಬಿನ್ ಮರಿಯಣ್ಣ, 67 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಮುತ್ತೂರು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಯಲ್ಲಿ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ತನಗೆ ಮಹೇಂದ್ರಾ ಮತ್ತು ಶಿವಕುಮಾರ್ ಎಂಬ ಗಂಡು ಮಕ್ಕಳಿದ್ದು, ತನ್ನ ಮಗನಾದ ಮಹೇಂದ್ರ (34 ವರ್ಷ) ರವರು ಜಿರಾಯ್ತಿ ಮಾಡಿಕೊಂಡಿರುತ್ತಾನೆ. ತನ್ನ ಮಗನಿಗೆ ಈಗ್ಗೆ ಸುಮಾರು 4 ವರ್ಷಗಳ ಹಿಂದೆ ದೊಡ್ಡಬಳ್ಳಾಪುರ ತಾಲ್ಲೂಕು ಗೂಳ್ಯ ಗ್ರಾಮದ ವಾಸಿ ಸೌಮ್ಯ ರವರೊಂದಿಗೆ ಮದುವೆಯಾಗಿದ್ದು, ತನ್ನ ಮಗನಿಗೆ ನಿಹಾಲ್ ಗೌಡ ಎಂಬ 3 ವರ್ಷದ ಗಂಡು ಮಗನಿರುತ್ತಾನೆ.  ದಿನಾಂಕ: 10-08-2020 ರಂದು ಮದ್ಯಾಹ್ನ ಸುಮಾರು 12-15 ಗಂಟೆ ಸಮಯದಲ್ಲಿ ತನ್ನ ಮಗನಾದ ಮಹೇಂದ್ರ ರವರು ತಮ್ಮ ತೋಟದಲ್ಲಿ ಕಳೇ ಔಷಧಿಯನ್ನು ಹೊಡೆಯಲೆಂದು ಮನೆಯಿಂದ ಹೋಗಿದ್ದು, ಅದೇ ದಿನ ಮದ್ಯಾಹ್ನ ಸುಮಾರು 12-45 ಗಂಟೆ ಸಮಯದಲ್ಲಿ ನಮ್ಮ ಪಕ್ಕದ ಜಮೀನಿನವರು ಹಾಗು ನಮ್ಮ ಗ್ರಾಮದ ವಾಸಿ ಅನಿಲ್ ಕುಮಾರ್ ಎಂ.ವಿ ಬಿನ್ ವೆಂಕಟೇಶಪ್ಪ ರವರು ತನ್ನ ಮಗನಾದ ಶಿವಕುಮಾರ್ ರವರಿಗೆ ಪೋನ್ ಮಾಡಿ ತನ್ನ ಮಗನಾದ ಮಹೇಂದ್ರಾ ರವರು ತಮ್ಮ ಜಮೀನಿನಲ್ಲಿನ ಕೃಷಿಹೊಂಡಾದ ಬಳಿ ಪ್ರಜ್ಞೆ ತಪ್ಪಿ ಬಿದ್ದು ಹೋಗಿರುವುದಾಗಿ ವಿಷಯ ತಿಳಿಸಿದ್ದು, ಕೂಡಲೇ ತಾನು ಮತ್ತು ತನ್ನ ಮಗನಾದ ಶಿವಕುಮಾರ್ ರವರು ಅಲ್ಲಿಗೆ ಹೋಗಿ ನೋಡಲಾಗಿ ತನ್ನ ಮಗ ಸತ್ತು ಹೋಗಿದ್ದು, ನಂತರ ನಾವು ತನ್ನ ಮಗನ ಶವವನ್ನು ಸಾಗಿಸಿಕೊಂಡು ಬಂದು ನಮ್ಮ ಕುಲ ಪದ್ದತಿಯಂತೆ ನಮ್ಮ ಗ್ರಾಮದ ಸ್ಮಶಾನದಲ್ಲಿ ಶವ ಸಂಸ್ಕಾರವನ್ನು (ಹೂತಿರುವುದು) ಮಾಡಿರುತ್ತೇವೆ.

    ಹೀಗಿರುವಾಗ ವಿಚಾರ ತಿಳಿಯಲಾಗಿ ನಮ್ಮ ಪಕ್ಕದ ಜಮೀನಿನವರಾದ ಅನಿಲ್ ಕುಮಾರ್ ರವರು ತಮ್ಮ ಜಮೀನಿನಲ್ಲಿರುವ ಕೃಷಿ ಹೊಂಡಾದ ಸುತ್ತಲೂ ಕಬ್ಬಿಣದ ಕಂಬಿಯ ಬೇಲಿಯನ್ನು ನಿರ್ಮಾಣ ಮಾಡಿಕೊಂಡು ಅದಕ್ಕೆ ವಿದ್ಯುತ್ ಸಂಪರ್ಕವನ್ನು ಕೊಟ್ಟಿದ್ದು, ತನ್ನ ಮಗನಾದ ಮಹೇಂದ್ರ ರವರು ಔಷಧಿಗೆ ನೀರನ್ನು ಬೆರೆಸಲು ಅವರ ಕೃಷಿಹೊಂಡಾದಲ್ಲಿನ ನೀರನ್ನು ತೆಗೆದುಕೊಳ್ಳಲು ಹೋಗಿ ಮುಳ್ಳುತಂತಿ ತಾಗಿ ತನ್ನ ಮಗನಿಗೆ ವಿದ್ಯುತ್ ಶಾಕ್ ಆಗಿ ಸತ್ತು ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ಮೇಲ್ಕಂಡ ಅನಿಲ್ ಕುಮಾರ್ ರವರು ತನ್ನ ಜಮೀನಿನಲ್ಲಿನ ಕೃಷಿಹೊಂಡಾದ ಸುತ್ತಲೂ ಕಬ್ಬಿಣದ ತಂತಿಗೆ ವಿದ್ಯುತ್ ಸಂಪರ್ಕ ಕೊಟ್ಟರೆ ಅದನ್ನು ಯಾರಾದರೂ ಮನುಷ್ಯರು ಅಥವಾ ಪ್ರಾಣಿಗಳು ಮುಟ್ಟಿದರೆ ಅವರ ಪ್ರಾಣಕ್ಕೆ ಹಾನಿಯಾಗುತ್ತದೆ ಎಂದು ತಿಳಿದಿದ್ದರೂ ಸಹ ಯಾವುದೇ ಮಂಜಾಗ್ರತಾ ಕ್ರಮಗಳನ್ನು ವಹಿಸದೇ, ನಿರ್ಲಕ್ಷತೆಯಿಂದ ಕೃಷಿಹೊಂಡಾದ ಸುತ್ತಲೂ ಇರುವ ಕಬ್ಬಿಣದ ತಂತಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕೊಟ್ಟ ಕಾರಣದಿಂದ ವಿದ್ಯುತ್ ಹರಿಯುತ್ತಿರುವ ಕಬ್ಬಿಣದ ಕಂಬಿಯು ತನ್ನ ಮಗನಿಗೆ ತಾಗಿ ತನ್ನ ಮಗನಾದ ಮಹೇಂದ್ರಾ ರವರು ಮೃತಪಟ್ಟಿರುತ್ತಾನೆ, ಈ ವಿಷಯದ ಬಗ್ಗೆ ತಾನು ನಮ್ಮ ಗ್ರಾಮದ ಹಿರಿಯರೊಂದಿಗೆ ಚರ್ಚಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು, ತನ್ನ ಮಗನ ಸಾವಿಗೆ ಕಾರಣನಾದ ಮೇಲ್ಕಂಡ ಅನಿಲ್ ಕುಮಾರ್ ಎಂ.ವಿ ಬಿನ್ ವೆಂಕಟೇಶಪ್ಪ ರವರ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.