ದಿನಾಂಕ :06/08/2020 ರ ಅಪರಾಧ ಪ್ರಕರಣಗಳು

  1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.184/2020 ಕಲಂ. 399,402 ಐ.ಪಿ.ಸಿ :-

          ದಿ:05-08-2020 ರಂದು ಮದ್ಯಾಹ್ನ 2:05 ಗಂಟೆಗೆ ಪಿ.ಎಸ್.ಐ ರವರು ಠಾಣೆಯಲ್ಲಿ ನೀಡಿದ ಪಂಚನಾಮೆ, ಮಾಲು, ಆರೋಪಿಗಳು ಮತ್ತು ವರಧಿಯನ್ನು ಸ್ವೀಕರಿಸಿದ್ದ ಸಾರಾಂಶ – ಬಾಗೇಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಜಿ.ಕೆ ಸುನೀಲ್ ಕುಮಾರ್ ಆದ ನಾನು ನಿಮಗೆ  ಸೂಚಿಸುವುದೇನೆಂದರೆ, ಈ ದಿನ ಮದ್ಯಾಹ್ನ  12:00 ಗಂಟೆಗೆ ನಾನು ಠಾಣೆಯಲ್ಲಿರುವಾಗ್ಗೆ, ಬಾಗೇಪಲ್ಲಿ ತಾಲ್ಲೂಕು ಬಾಬುರೆಡ್ಡಿ ರವರ ಇಟ್ಟಿಗೆ ಶೆಡ್ ಮುಂಬಾಗದ  ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಯಾರೋ ಐದು ಜನ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿಕೊಂಡು ಕೈಗಳಲ್ಲಿ ಅಪಾಯಕಾರಿ ಆಯುದಗಳನ್ನು ಹಿಡಿದುಕೊಂಡು,  ರಸ್ತೆಯಲ್ಲಿ ಬರುವ  ಒಂಟಿ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಸಿದ್ದತೆ ಮಾಡಿಕೊಂಡು ಹೊಂಚು ಹಾಕುತ್ತಿರುವುದಾಗಿ ಬಂದ ಬಾತ್ಮೀ ಮೇರೆಗೆ  ಮೇಲಾಧಿಕಾರಿಗಳಿಗೆ ವಿಚಾರವನ್ನು ತಿಳಿಸಿ,ಸದರಿ ಆಸಾಮಿಗಳ ಮೇಲೆ ದಾಳಿ ಮಾಡಲು ಪಂಚಾಯ್ತಿದಾರರನ್ನು ಠಾಣೆಗೆ ಬರಮಾಡಿಕೊಂಡು ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸರ್ಕಾರಿ ಜೀಪ್ ಕೆ.ಎ-40 ಜಿ-537 ವಾಹನದಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ನಾವೆಲ್ಲರೂ ಜೀಪಿನಿಂದ ಕೆಳಗೆ ಇಳಿದು   ಮರೆಯಲ್ಲಿ  ನಿಂತು ನೋಡಲಾಗಿ ಯಾರೋ ಐದು ಜನ ಆಸಾಮಿಗಳು ಒಂದು ಕಾರಿನ ಪಕ್ಕದಲ್ಲಿ ಕೈಯ್ಯಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡು ನಿಂತಿದ್ದು, ರಸ್ತೆಯಲ್ಲಿ ಬರುವ ಒಂಟಿ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡೋಣವೆಂದು ಮಾತನಾಡಿಕೊಳ್ಳುತ್ತಿದ್ದು, ಒಂಟಿಯಾಗಿ ಬರುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾ,  ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಇವರನ್ನು ಸಮವಸ್ತ್ರದಲ್ಲಿದ್ದ ನಾವುಗಳು  ಸುತ್ತುವರಿಯುತ್ತಿದ್ದಂತೆ ಐದು ಜನರೂ ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳನ್ನು ಬೆನ್ನತ್ತಿ ಹಿಡಿದುಕೊಂಡಿದ್ದು, ಆ ಪೈಕಿ ನಾನು ಒಬ್ಬ ಆಸಾಮಿಯನ್ನು ಆತನು ಹಿಡಿದುಕೊಂಡಿದ್ದ ಕಬ್ಬಿಣದ ರಾಡ್ ಸಮೇತವಾಗಿ ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ 1) ಮಂಜೇಶ್ ಕುಮಾರ್ @ ಮಂಜೇಶ್ ಆರ್ ಬಿನ್ ರಾಮಚಂದ್ರಪ್ಪ, 26 ವರ್ಷ, ಆದಿಕರ್ನಾಟಕ ಜನಾಂಗ, ಚಿತ್ರನಟ, ವಾಸ-ವಿಪ್ರೋಗೇಟ್ ಬಳಿ, ಜುನ್ನ ಸಂದ್ರಾ, ಸರ್ಜಾಪುರ ರಸ್ತೆ, ಬೆಂಗಳೂರು. ಸ್ವಂತ ಸ್ಥಳ ನಾಗಚಂದಿರಂ, ಕುಪ್ಪಟಿಚಿನ್ನಪ್ಪರೆಡ್ಡಿ ಪಾಳ್ಯ,ಡೆಂಕಿಣಿಕೋಟೈ ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರಾಜ್ಯ ಎಂತ ತಿಳಿಸಿದ್ದು, ಆಸಾಮಿಯು ತನ್ನ ಕೈಯ್ಯಲ್ಲಿ ಹಿಡಿದುಕೊಂಡಿದ್ದ ಕಬ್ಬಿಣದ ರಾಡನ್ನು ಪರಿಶೀಲಿಸಲಾಗಿ ಸುಮಾರು  3 ಅಡಿ ಉದ್ದದ ಸುಮಾರು ಮೂರುಬೆರಳು ಗಾತ್ರದಷ್ಟು ದಪ್ಪದ ಕಬ್ಬಿಣದ ರಾಡಾಗಿರುತ್ತೆ. ಆಸಾಮಿಯ ಬಳಿ ಇದ್ದ RED ME Y2 ಮೊಬೈಲ್, 740/- ರೂ.ಗಳಿರುತ್ತೆ.  ಮತ್ತೊಬ್ಬ ಆಸಾಮಿಯನ್ನು ಪಿ.ಸಿ 387 ಮೋಹನ್ ಕುಮಾರ್ ರವರು ಆಸಾಮಿ ಹಿಡಿದುಕೊಂಡಿದ್ದ ಲಾಂಗ್ ಸಮೇತವಾಗಿ ಹಿಡಿದುಕೊಂಡು ಬಂದು ಹಾಜರುಪಡಿಸಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 2) ಬಾಲಾಜಿ  ಬಿನ್ ರಾಮಪ್ಪ, 27 ವರ್ಷ, ತಿಗಳರು, ಗ್ರೀನ್ ವಿಷನ್ ಬ್ಯಾಟರಿ ಕಂಪನಿಯಲ್ಲಿ ಎಲೆಕ್ಟ್ರಿಕ್ಲಲ್ ಮೈಂಟೆನೆನ್ಸ್, ವಾಸ- ತಲಿಕೊತ್ತನೂರು ಗ್ರಾಮ, ಡೆಂಕಿಣಿಕೋಟೆ ತಾಲ್ಲೂಕು,ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರಾಜ್ಯ ಎಂತ ತಿಳಿಸಿದ್ದು, ಆತನ ಬಳಿ ಇದ್ದ ಲಾಂಗ್ ಅನ್ನು ಪರಿಶೀಲಿಸಲಾಗಿಸುಮಾರು ಮೂರು ಅಡಿ ಉದ್ದದ ಮುಂದೆ ಬಾಗಿರುವ ಕಬ್ಬಿಣದ ಲಾಂಗ್ ಆಗಿರುತ್ತದೆ. ಆಸಾಮಿಯ ಬಳಿ VIVO ಮೊಬೈಲ್ ಇರುತ್ತೆ. ಇನ್ನೊಬ್ಬ ಆಸಾಮಿಯನ್ನು ಪಿ.ಸಿ 18 ಅರುಣ್ ರವರು ಆಸಾಮಿಯು ಹಿಡಿದುಕೊಂಡಿದ್ದ ದೊಣ್ಣೆಯ ಸಮೇತವಾಗಿ ತಂದು ಹಾಜರುಪಡಿಸಿದ್ದು,ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 3) ಅಭಿಜಿತ್ ಬಿನ್ ನಂಜುಂಡಪ್ಪ, 28 ವರ್ಷ, ಆದಿಕರ್ನಾಟಕಜನಾಂಗ, ವ್ಯಾಪಾರ, ಕಾಚನಾಯಕನಹಳ್ಳಿ ಗ್ರಾಮ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಎಂದು ತಿಳಿಸಿದ್ದು, ದೊಣ್ಣೆಯನ್ನು ಪರಿಶೀಲಿಸಲಾಗಿ ಸುಮಾರು ಮೂರೂವರೆ ಅಡಿ ಉದ್ದವಿರುವ ಹಿಡಿ ಗಾತ್ರದ ದೊಣ್ಣೆಯಾಗಿರುತ್ತದೆ. ಆಸಾಮಿಯ ಬಳಿ VIVO ಮೊಬೈಲ್ ಇತ್ತು.  ನಟರಾಜ ಹೆಚ್.ಸಿ 156 ರವರು ಒಬ್ಬ ಆಸಾಮಿಯನ್ನು ಆತನು ಹಿಡಿದುಕೊಂಡಿದ್ದ ಒಂದು ದೊಣ್ಣೆಯ ಸಮೇತವಾಗಿ ಹಿಡಿದುಕೊಂಡು ಬಂದಿದ್ದು, ಆತನ  ಹೆಸರು ಮತ್ತುವಿಳಾಸವನ್ನು ಕೇಳಲಾಗಿ ತನ್ನ ಹೆಸರು 4) ಶಶಿಧರ್ ಬಿನ್ ಲೇಟ್ ಮುನಿರಾಜು, 24 ವರ್ಷ, ಆದಿಕರ್ನಾಟಕಜನಾಂಗ, ಎಲೆಕ್ಟ್ರಾನಿಕ್ ಸಿಟಿಯ ಅರವಿಂದ್ ಗಾರ್ಮೆಂಟ್ಸ್ ನಲ್ಲಿ ಆಡಿಟರ್, ವಾಸ- #244, ಕೋನಪ್ಪನ ಅಗ್ರಹಾರ,ಪಿಳ್ಳೆಕಮ್ಮ ದೇವಸ್ಥಾನದ ಬಳಿ, ಪ್ರೇಮನಗರ, ಎಲೆಕ್ಟ್ರಾನಿಕ್ ಸಿಟಿ ಪೋಸ್ಟ್, ಬೇಗೂರು ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ  ಎಂದು ತಿಳಿಸಿದ್ದು, ಆಸಾಮಿಯ ಬಳಿಯಿದ್ದ ದೊಣ್ಣೆಯನ್ನು ಪರಿಶೀಲಿಸಲಾಗಿ ಸುಮಾರು 3 ಅಡಿ ಉದ್ದದ ಹಿಡಿ ಗಾತ್ರದ ದೊಣ್ಣೆಯಾಗಿರುತ್ತೆ. I PHONE 6S  ಮೊಬೈಲ್ ಇತ್ತು. ಖಲಂಧರ್ ಹೆಚ್.ಸಿ 209 ರವರು ಒಬ್ಬ ಆಸಾಮಿಯನ್ನು ಹಿಡಿದುಕೊಂಡು ಬಂದಿದ್ದು, ಆತನ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 5) ಮಹೇಶ್ ಕುಮಾರ್ ಬಿನ್ ಶಿವಕುಮಾರ್, 20 ವರ್ಷ, ಲಿಂಗಾಯಿತರು, ಡ್ರೈವರ್, ಕಾಚನಾಯಕನಹಳ್ಳಿ ಗ್ರಾಮ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಂದು ತಿಳಿಸಿದ್ದು, ಆಸಾಮಿಯ ಕೈಯ್ಯಲ್ಲಿ ಖಾರದ ಪುಡಿಯ ಒಂದು ಪ್ಲಾಸ್ಟಿಕ್ ಕವರ್  ಇರುತ್ತೆ. ಆಸಾಮಿಯ ಬಳಿ OPPO ಮೊಬೈಲ್ ಇತ್ತು.  ಸ್ಥಳದಲ್ಲಿದ್ದ  ಕಾರನ್ನು ಪರಿಶೀಲಿಸಲಾಗಿ ಸಿಲ್ವರ್ ಬಣ್ಣದ  ಕೆಎ-53 ಎಂ ಎ-0145 ಇನೋವಾ ಕಾರಾಗಿರುತ್ತೆ. ಇದು ಸುಮಾರು ಐದು ಲಕ್ಷ ರೂ. ಬೆಲೆ ಬಾಳುವುದಾಗಿರುತ್ತೆ.  ಮೇಲ್ಕಂಡ 5 ಜನ ಆಸಾಮಿಗಳನ್ನು  ಅವರುಗಳ ಬಳಿ ಇದ್ದ ಐದು ಮೊಬೈಲ್ ಪೋನ್ ಗಳು, ನಗದು 740/-(ಏಳೂನೂರ ನಲವತ್ತು  ರೂ.)  ಒಂದು ಮೂರು ಅಡಿ ಉದ್ದದ ಮುಂದೆ ಬಾಗಿರುವ ಕಬ್ಬಿಣದ ಲಾಂಗ್, ಸುಮಾರು 3 ಅಡಿ ಉದ್ದದ ಸುಮಾರು ಮೂರು ಬೆರಳು ಗಾತ್ರದಷ್ಟು ದಪ್ಪದ ಒಂದು ಕಬ್ಬಿಣದ ರಾಡು, ಒಂದು ಮೂರೂವರೆ ಅಡಿ ಉದ್ದದ ಹಿಡಿ ಗಾತ್ರದ ದೊಣ್ಣೆ, ಒಂದು ಮೂರು ಅಡಿ ಉದ್ದದ ಹಿಡಿ ಗಾತ್ರದ ದೊಣ್ಣೆ ಮತ್ತು  ಖಾರದ ಪುಡಿಯುಳ್ಳ ಪ್ಲಾಸ್ಟಿಕ್ ಕವರ್ ಅನ್ನು  ಮದ್ಯಾಹ್ನ 12:30 ಗಂಟೆಯಿಂದ 13:30 ಗಂಟೆಯವರೆಗೆ ಜರುಗಿಸಿದ ಪಂಚನಾಮೆಯ ಮೂಲಕ  ವಶಕ್ಕೆ ಪಡೆದುಕೊಂಡು  ಆಸಾಮಿಗಳು, ಪಂಚನಾಮೆ  ಮತ್ತು ಮಾಲನ್ನು ಠಾಣೆಯಲ್ಲಿ 14:00 ಗಂಟೆಗೆ ಹಾಜರುಪಡಿಸುತ್ತಿದ್ದು, ಮುಂದಿನ ಕ್ರಮ ಜರುಗಿಸಲು ಸೂಚಿಸಿದೆ, ಎಂದು ದೂರು.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.126/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ:05/08/2020 ರಂದು ಬೆಳಗಿ ಜಾವ 1-00 ಗಂಟೆ ಸಮಯದಲ್ಲಿ ನ್ಯಾಯಾಲಯದಿಂದ ಪಿ.ಎಸ್.ಐ ಶರತ್ ಕುಮಾರ್ ಡಿಸಿಬಿ-ಸಿಇಎನ್ ಪೊಲೀಸ್ ಠಾಣೆ ಚಿಕ್ಕಬಳ್ಳಾಪಪುರ ರವರು ಗುಡಿಬಂಡೆ ಘನ ನ್ಯಾಯಾಲಯದಿಂದ ಠಾಣಾ. ಎನ್.ಸಿ.ಆರ್ ನಂ:297/2020 ರಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲು ಅನುಮತಿಯನ್ನು ಪಡೆದು ನೀಡಿದ ವರದಿ ದೂರಿನ ಸಾರಾಂಶವೆಂದರೆ ಚಿಕ್ಕಬಳ್ಳಾಪುರ ಜಿಲ್ಲೆ ಡಿಸಿಬಿ-ಸಿಇಎನ್ ಪೊಲೀಸ್ ಸಬ್ಇನ್ಸ್ಪಕ್ಟರ್ ಶರತ್ಕುಮಾರ್ ಬಿ,ಎನ್. ಆದ ತಾನು ಈ ದಿನ ಸಿಬ್ಬಂದಿಯೊಂದಿಗೆ ಗುಡಿಬಂಡೆ ತಾಲ್ಲೂಕಿನ ಕಾನೂನು ಬಹಿರ ಚಟುವಟಿಕೆಗಳ ಬಗ್ಗೆ ಬಗ್ಗೆ ಮಾಹಿತಿಗಾಗಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ಭಾತ್ಮಿದಾರರಿಂದ ಸಂಜೆ 5-00 ಗಂಟೆಗೆ ಗುಡಿಬಂಡೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಾನೂನು ಬಾಹಿರವಾಗಿ ಅಂದರ್-ಬಹರ್ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಖಚಿತ ಮಾಹಿತಿ ಬಮದಿರುತ್ತದೆ.  ನಂತರ ರೇಣುಮಾಕಲಹಳ್ಳಿ ಗ್ರಾಮದ ಬಸ್ಸ್ ನಿಲ್ದಾಣದಲ್ಲಿ ಪಂಚರನ್ನು ಬರಮಾಡಿಕೊಮಡು ಮಾಹಿತಿಯನ್ನು ತಿಳಿಸಿರುತ್ತೆ. ನಂತರ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಇಸ್ಪೀಟು ಜೂಜಾಟ ನಡೆಯುತ್ತಿದ್ದ ಸ್ಥಳಕ್ಕೆ ಸಂಜೆ 6-00 ಗಂಟೆಗೆ ಹೋಗಿ ದಾಳಿ ಮಾಡಿ ಜೂಜಾಟ ಆಡುತ್ತಿದ್ದವರನ್ನು  ತಾನು ಮತ್ತು ಸಿಬ್ಬಂದಿಯವರು ಸುತ್ತುವರೆದು ಹಿಡಿದುಕೊಂಡು ವಶಕ್ಕೆ ಪಡೆದು ಹೆಸರು ಮತ್ತು ವಿಳಾಸವನ್ನು ಕೇಳಲಾಗಿ 1)ಎನ್. ಮೂರ್ತಿ ಬಿನ್ ದೇವೆಂದ್ರಚಾರಿ@ ನಾರಾಯಣಪ್ಪ, 28 ವರ್ಷ, ಬ್ರಾಹ್ಮಣರು, ಕೂಲಿ ಕೆಲಸ, ವಆಸ: ರಾಮಪಟ್ನ ಗ್ರಾಮ, 2) ವಿನಯ್ ಕುಮಾರ್ ಬಿನ್ ಆದಿನಾರಯನಪ್ಪ, 25 ವರ್ಷ, ಪ.ಜಾತಿ.  ಟಾಟಾಏಸ್ ಚಾಲಕ, ದಿನ್ನೇನಹಳ್ಳಿ ಗ್ರಾಮ 3) ರೂಪೇಶ್ ಬಿನ್ ವೆಂಕಟೇಶಪ್ಪ, 25 ವರ್ಷ, ನೇಯ್ಗೆ ಜನಾಂಗ, ದಿನ್ನೇನಹಳ್ಳಿ ಗ್ರಾಮ, 4) ಶಂಕರ್ ಬಿನ್ ದೊಡ್ಡ ವೆಂಕಟರಾಯಪ್ಪ, 22 ವರ್ಷ, ಪ.ಜಾತಿ. ಕೂಲಿ ಕೆಲಸ, ಚಿಕ್ಕನಾರೆಪ್ಪನಹಳ್ಳಿ ಗ್ರಾಮ, 5) ಮಹೇಂದ್ರ ಬಿನ್ ಪಾಪಿರೆಡ್ಡಿ, 23 ವರ್ಷ, ವಕ್ಕಲಿಗರು, ಟಾಟಾಏಸ್ ಚಾಕ, ಕೊಮ್ಮಲಮರಿ ಗ್ರಾಮ, ಎಲ್ಲಾರು ಗುಡಿಬಂಡೆ ತಾಲ್ಲೂಕು, 7) ಹರೀಶ್ ಬಿನ್ ಸಿನಪ್ಪ, 28 ವರ್ಷ, ನಾಯಕರು, ಕಂಬಿ ಕೆಲಸ, ವಾಸ: ಇಂದಿರನಗರ ಗುಡಿಬಂಡೆ ಟೌನ್ 8) ಕುಮಾರ್ ಸ್ವಾಮಿ ಬಿನ್ ಕಾಂತರಾಜು, 23 ವರ್ಷ, ಬಲಜಿಗರು, ಜಿರಾಯ್ತಿ, ಸೊಪ್ಪಿನಪೇಟೆ ಗುಡಿಬಂಡೆ ಟೌನ್ ಎಂದು ತಿಳಿಸಿದ್ದು ಪಂಚರ ಸಮಕ್ಷಮ ಪಂಚನಾಮೆಯನ್ನು ಜರುಗಿಸಿ ಜೂಜಾಟಕ್ಕೆ ಪಣವಾಗಿರಿಸಿದ್ದ 8210/- ರೂಗಳನ್ನು ಹಾಗೂ 52 ಇಸ್ಪೀಟು ಎಲೆಗಳನ್ನು ಒಂದು ಪ್ಲಾಸ್ಟಿಕ್ ಗೋಣಿ ಚೀಲವನ್ನು ಅಮಾನತ್ತುಪಡಿಸಿಕೊಂಡು 08 ಜನ ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ವರದಿಯನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿಕೊಂಡಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.178/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ:05/08/2020 ರಂದು ಪಿರ್ಯಾದಿದಾರರಾದ ಶ್ರೀ ಗಂಗಾಧರಪ್ಪ ಬಿನ್ ಲೇಟ್ ಸತ್ಯಪ್ಪ 60 ವರ್ಷ, ತರಿದಾಳು ಗ್ರಾಮ ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:01/08/2020 ರಂದು ಬೆಳಿಗ್ಗೆ 07-30 ಗಂಟೆಯ ಸಮಯದಲ್ಲಿ ನನ್ನ ಮಗನಾದ ಗಣೇಶ ರವರು ತರಿದಾಳು ಗ್ರಾಮದಿಂದ ಬಸ್ ನಿಲ್ದಾಣದ ಕಡೆಗೆ ಕೆ.ಎ-64, ಕೆ-8834 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ತೊಂಡೇಬಾವಿಯ ಕಡೆಯಿಂದ ಬಂದ ಕೆ.ಎ-06, ಇ,ಎಲ್-0282 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ರಂಜಿತ್ ಎಂಬುವರು ಜೋರಾಗಿ ಬಂದು ನನ್ನ ಮಗನ ದ್ವಿಚಕ್ರ ವಾಹನಕ್ಕೆ ಗುದ್ದಿದ್ದು, ಗುದ್ದಿದ ರಭಸಕ್ಕೆ ನನ್ನ ಮಗನ ಬಲಗಾಲು ತುಂಡಾಗಿದ್ದು, ಅದನ್ನು ತರಿದಾಳು ಗ್ರಾಮದ ನಿವಾಸಿಗಳಾದ ನಾಗರಾಜು ಬಿನ್ ರಾಮಕೃಷ್ಣಪ್ಪ, ಗಂಗಾಧರಪ್ಪ ಬಿನ್ ಲೇಟ್ ಗಂಗಣ್ಣ ರವರು ನೋಡಿ ನಮಗೆ ವಿಷಯ ತಿಳಿಸಿದ್ದು, ತಕ್ಷಣ ನನ್ನ ಮಗನನ್ನು ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ಯಲಹಂಕದಲ್ಲಿರುವ ಶ್ರೂಶೂಷ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲಿಸಿದ್ದು, ನನ್ನ ಮಗನಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಕಾರಣ ತಡವಾಗಿ ಬಂದು ದೂರು ನೀಡುತ್ತಿದ್ದು, ತನ್ನ ಮಗನಿಗೆ ಅಪಘಾತ ಪಡಿಸಿದವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.179/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ: 06/08/2020 ರಂದು 14-30 ಗಂಟೆಗೆ ಪಿರ್ಯಾದಿದಾರರಾದ ಚನ್ನಮ್ಮ ಕೋಂ ಸುಕದೇವಪ್ಪ, 60 ವರ್ಷ, ಲಿಂಗಾಯ್ತರು, ಕೂಲಿ ಕೆಲಸ, ವಾಸ ಪುರ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 04/08/2020 ರಂದು ಸಂಜೆ 7-00 ಗಂಟೆಯ ಸಮಯದಲ್ಲಿ ನನ್ನ ಗಂಡ ಸುಕದೇವಪ್ಪ ಬಿನ್ ಲೇಟ್ ಹುಚ್ಚಪ್ಪ, 70 ವರ್ಷ ರವರು ನಮ್ಮ ಜಮೀನಿನಲ್ಲಿ ಕೆಲಸ ಮಾಡಿಸಲು ಕೂಲಿ ಆಳುಗಳಿಗೆ ಹೇಳಿ ಬರಲು ನಮ್ಮ ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿರುವಾಗ ಎನ್.ಎಚ್ 234 ರಸ್ತೆಯಲ್ಲಿ ಗೌರಿಬಿದನೂರು ಕಡೆಯಿಂದ ಗುಯ್ಯಲಹಳ್ಳಿ ಗ್ರಾಮದ ನವೀನ್ ಬಿನ್ ಲಕ್ಷ್ಮೀಪತಿ, 23 ವರ್ಷ ರವರು ಕೆಎ-40-ವಿ-0720 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನ್ನ ಗಂಡನಿಗೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ನನ್ನ ಗಂಡನಿಗೆ ತಲೆಗೆ, ಮುಖಕ್ಕೆ ಹಾಗೂ ಎರಡು ಕಾಲುಗಳಿಗೆ ಮತ್ತು ಬಲಕೈಗೆ ರಕ್ತಗಾಯಗಳಾಗಿ ಅಪಘಾತಪಡಿಸಿದ ದ್ವಿ ಚಕ್ರ ವಾಹನದ ಸವಾರ ನವೀನ್ ರವರಿಗೂ ಸಹಾ ರಕ್ತಗಾಯಗಳಾಗಿರುವುದಾಗಿ ವಿಚಾರ ತಿಳಿದು ಕೂಡಲೇ ಸ್ಥಳಕ್ಕೆ ಬಂದು ನೋಡಲಾಗಿ ವಿಚಾರ ನಿಜವಾಗಿತ್ತು. ನಾನು ಹಾಗೂ ಗ್ರಾಮಸ್ಥರು ನನ್ನ ಗಂಡನನ್ನು ಉಪಚರಿಸಿ 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ನನ್ನ ಗಂಡನನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಚಿಕಿತ್ಸೆಕೊಡಿಸಿ ಅಲ್ಲಿಂದ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿರುತ್ತೇವೆ. ನನ್ನ ಗಂಡನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು ಅಪಘಾತಪಡಿಸಿದ ಕೆಎ-40-ವಿ-0720 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದ ಸವಾರ ನವೀನ್, ಗುಯ್ಯಲಹಳ್ಳಿ ಗ್ರಾಮ ರವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.