ದಿನಾಂಕ :06/07/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 54/2020 ಕಲಂ. 447,323,324,504,506 ರೆ/ವಿ 34 ಐಪಿಸಿ :-

     ದಿನಾಂಕ: 06/072020 ರಂದು ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಿಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳು ಸೀತಾರಾಮರೆಡ್ಡಿ ಬಿನ್ ಲೇಟ್ ಚಿನ್ನಪ್ಪೋಡು 60 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಜುಂಜುನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ಮೊ :9901102737. ರವರು ನೀಡಿದ ಹೇಳೀಕೆಯ ದೂರಿನ ಸಾರಾಂಶವೇನೆಂದರೆ,  ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನಮ್ಮ ಗ್ರಾಮದಲ್ಲಿ  ನನ್ನ ಬಾಬತ್ತು (ಪಿತ್ರಾರ್ಜಿತ ಜಮೀನು) ಸರ್ವೆನಂ: 52  ರಲ್ಲಿ 2 ½ ಎಕರೆ ಜಮೀನಿದ್ದು ಸದರಿ ಜಮೀನು ನನ್ನ ತಂದೆ ಚಿನ್ನಪ್ಪೋಡು ಮತ್ತು ನನ್ನ ದೊಡ್ಡಪ್ಪ ವೆಂಕಟರಾಯಪ್ಪರವರ ಹೆಸರುಗಳಲ್ಲಿ ಜಂಟಿ ಖಾತೆಯಿರುತ್ತೆ. ಸದರಿ ಜಮೀನಿಗೆ ಸಂಬಂದಿಸಿದಂತೆ ಚಿಂತಾಮಣಿ ಸಿವಿಲ್ ನ್ಯಾಯಾಲಯದಲ್ಲಿ ಓ ಎಸ್ 148/2019 ರಂತೆ ಕೇಸು ನಡೆಯುತ್ತಿದ್ದು  ಸದರಿ ಕೇಸು ನ್ಯಾಯಾಲದಲ್ಲಿ  ಇತ್ಯರ್ಥವಾಗುವವರೆಗೆ ಯಾರು ಸಹ ಉಳುಮೆ ಮಾಡಬಾರದೆಂದು ಹಿರಿಯರ ಸಮಕ್ಷಮ ತೀರ್ಮಾನವಾಗಿರುತ್ತೆ. ಆದರೆ ದಿನಾಂಕ: 06/07/2020 ರಂದು ಬೆಳಿಗ್ಗೆ  ಸುಮಾರು  09-30 ಗಂಟೆಯಲ್ಲಿ ಮೇಲ್ಕಂಡ ಜಮೀನಿನಲ್ಲಿ  ನನ್ನ  ದೊಡ್ಡಪ್ಪನಾದ  ಲೇಟ್    ವೆಂಕಟರಾಯಪ್ಪ  ಮಕ್ಕಳಾದ ಬಿ ವಿ ಕೃಷ್ಣರೆಡ್ಡಿ  ಮತ್ತು ಆತನ ತಮ್ಮ ಬಿವಿ ನಾರಾಯಣಸ್ವಾಮಿ  ಹಾಗೂ ಬಿವಿ ನಾರಾಯಣಸ್ವಾಮಿರವರ ಮಗ ಅನಿಲ್ ಕುಮಾರ್ ಮತ್ತು ನಾರಮಾಕಲಹಳ್ಳಿ  ವಾಸಿ ನಾರಾಯಣಸ್ವಾಮಿ ಮಗ  ರಾಜೇಶ್ ರವರು ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು ನಾನು  ಮತ್ತು ನನ್ನ ಮಕ್ಕಳಾದ ಅಭಿಲಾಶ್ ಜೆ ಎಸ್ ಹಾಗೂ ಬಾಬುರೆಡ್ಡಿ ರವರುಗಳು ಹೋಗಿ  ಉಳುಮೆ ಮಾಡಬೇಡಿ ಎಂದು  ಕೇಳಿದ್ದಕ್ಕಕೆ ಮೆಲ್ಕಂಡ 4 ಜನ ನಮ್ಮನ್ನು  ಕುರಿತು ಉಳುಮೆ ಮಾಡಬೇಡಿ ಎಂದು ಹೇಳುವುದಕ್ಕೆ ನೀವು ಯಾರೋ ಬೋಳಿ ಮಕ್ಕಳಿರಾ ಎಂದು ಅವಾಚ್ಯಶಬ್ದಗಳಿಂದ ಬೈದು ಆ ಪೈಕಿ ಬಿ.ವಿ ಕೃಷ್ಣಾರೆಡ್ಡಿ ನನಗೆ ಕೈಗಳಿಂದ ಹೊಡೆದು ಕಾಲಿನಿಂದ  ಒದ್ದನು, ಅಲ್ಲಿಯೇ ಇದ್ದ ಬಿವಿ ನಾರಾಯಾಣಸ್ವಾಮಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ನ  ಹೇರ್   ರ್ಕ್ಲೀನರ್ ಪೈಪ ನಿಂದ  ನನ್ನ  ಎಡಕೈ ಅಂಗೈಗೆ ಹಾಗೂ ಬಲ ಕಣ್ಣಿನ ಭಾಗ ಹೊಡೆದು ರಕ್ತಗಾಯಪಡಿಸಿರುತ್ತಾನೆ . ಬಿಡಿಸಲು ಅಡ್ಡ ಬಂದ ನನ್ನ  ಮಗ ಅಭಿಲಾಷ ರವರಿಗೆ ಅನಿಲ್ ಕುಮಾರ್ ಕೈಗಳಿಂದ ಹೊಡೆದು ಕಾಲಿನಿಂದ ಒದ್ದು ನೋವುಂಟುಮಾಡಿರುತ್ತಾನೆ. ರಾಜೇಶ್ ರವರು ಅಭಿಲಾಷ್ ರವರ ಬೆನ್ನಿಗೆ ಕೈಗಳಿಂದ ಗುದ್ದಿ ನೋವುಂಟು ಮಾಡಿರುತ್ತಾರೆ ಎಲ್ಲರು ಸೇರಿ ನನ್ನನ್ನು ಎಳೆದಾಡಿದಗ ನನ್ನ ಬಲಕಾಲಿನ ಮೊಣಕಾಲಿಗೆ ಮೂಗೇಟಾಗಿರುತ್ತೆ. ಇನ್ನೊಮ್ಮೆ ಜಮೀನಿನ ತಂಟೆಗೆ ಬಂದರೆ ಸಾಯಿಸುತ್ತೆವೆಂದು ನಮಗೆ ಎಲ್ಲರು ಸೇರಿ  ಪ್ರಾಣ ಬೆದರಿಕೆ ಹಾಕಿದಾಗ ಅಷ್ಟರಲ್ಲಿ ಸ್ಥಳಕ್ಕೆ ಬಂದ ನನ್ನ ಅಣ್ಣ ವೆಂಕಟರೆಡ್ಡಿ  ಸ್ಥಳದಲ್ಲಿದ್ದ ನನ್ನ ಮಗ ಬಾಬುರೆಡ್ಡಿ  ರವರು ಅವರಿಂದ ನಮ್ಮನ್ನು  ಪಾರುಮಾಡಿ ಗಾಯಗೊಂಡಿದ್ದ ನಮ್ಮನ್ನು ಬಟ್ಲಹಳ್ಳಿ  ಸರ್ಕಾರಿ  ಆಸ್ಪತ್ರೆ ಕರೆದು ಕೊಂಡು  ಬಂದು ಚಿಕಿತ್ಸೆಗೆ ದಾಖಲಿಸಿರುತ್ತಾರೆ.  ಆದ್ದರಿಂದ  ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೊಟ್ಟ  ಹೇಳಿಕೆಯ ದೂರಿನ ಸಾರಾಂಶವಾಗಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 91/2020 ಕಲಂ. 87 ಕೆ.ಪಿ ಆಕ್ಟ್:-

          ದಿ:05.07.2020 ರಂದು ರಾತ್ರಿ 19-00 ಗಂಟೆಗೆ ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ನಿಡಿದ ವರಧಿಯ ಸಾರಾಂಶವೇನೆಂದರೆ ಈ ದಿನ ದಿನಾಂಕ: 05.07.2020 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಮಾನ್ಯ ಡಿ.ವೈ.ಎಸ್.ಪಿ ಸಾಹೇಬರು ಮತ್ತು ಅವರ ಕಛೇರಿಯ ಸಿಬ್ಬಂದಿಯವರು ರಾಮಚಂದ್ರ ಹೊಸೂರು ಕಡೆ ಗಸ್ತಿನಲ್ಲಿದ್ದಾಗ ಚಿಕ್ಕಬಳ್ಳಾಪುರ ತಾಲ್ಲೂಕು ಹೆಣ್ಣೂರು ಕದಿರೇನಹಳ್ಳಿ ಗ್ರಾಮದಿಂದ ಪಶ್ಚಿಮಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಬಲಿಜಪಡೆ ಅರಣ್ಯ ಪ್ರದೇಶದ ನೀಲಗಿರಿ ತೋಪಿನಲ್ಲಿ  ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟಿನ ಜೂಜಾಟವಾಡುತ್ತಿರುವುದಾಗಿ ಬಂದ ಬಾತ್ಮಿ ಮೇರೆಗೆ ನಾನು ಮತ್ತು ತಮ್ಮ ಕಛೇರಿಯ ಸಿಬ್ಬಂದಿಯವರಾದ ಹೆಚ್ ಸಿ 205 ರಮೆಶ್ , ಹೆಚ್ ಸಿ 17 ಶ್ರೀನಾಥ್ , ಹೆಚ್ ಸಿ 06 ಬಾಬು ಬಿ ಆರ್ ರವರೊಂದಿಗೆ ಪೊಲೀಸ್ ಜೀಪು ಸಂಖ್ಯೆ ಕೆ.ಎ-40, ಜಿ-1555 ರಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಹೆಣ್ಣೂರು ಕದಿರೇನಹಳ್ಳಿ ಗ್ರಾಮದಿಂದ ಪಶ್ಚಿಮಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಬಲಿಜಪಡೆ ಅರಣ್ಯ ಪ್ರದೇಶದ ನೀಲಗಿರಿ ತೋಪಿನ ಬಳಿ ಹೋಗಿ ಮರೆಯಲ್ಲಿ ಜೀಪನ್ನು ನಿಲ್ಲಿಸಿ ಜೀಪಿನಿಂದ ಇಳಿದು ಪಂಚರು ಮತ್ತು ಸಿಬ್ಬಂದಿಯೊಂದಿಗೆ ತಮಗೆ ಮಾಹಿತಿ ಬಂದ ಹೆಣ್ಣೂರು ಕದಿರೇನಹಳ್ಳಿ ಗ್ರಾಮದಿಂದ ಪಶ್ಚಿಮಕ್ಕೆ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಬಲಿಜಪಡೆ ಅರಣ್ಯ ಪ್ರದೇಶದ ನೀಲಗಿರಿ ತೋಪಿನಲ್ಲಿ  ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಜನರು ಗುಂಪು ಸೇರಿದ್ದು, ಗುಂಪಿನಲ್ಲಿದ್ದವರು ಅಂದರ್ 500/- ರೂ. ಬಾಹರ್ 500/- ಎಂದು ಕೂಗುತ್ತಾ ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ ಅಂದರ್ ಬಾಹರ್ ಜೂಜಾಟವಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಅವರನ್ನು ಸುತ್ತುವರೆದು ಓಡಿ ಹೋಗದಂತೆ ಎಚ್ಚರಿಕೆ ನೀಡಿ ಜೂಜಾಟವಾಡುತ್ತಿದ್ದವರನ್ನು ಹಿಡಿದು ಕೊಂಡು ಸದರಿ ಆಸಾಮಿಗಳ ಹೆಸರು ವಿಳಾಸ ಕೇಳಲಾಗಿ 1] ರಾಮಮೂರ್ತಿ ಬಿನ್ ವೆಂಕಟೇಶಪ್ಪ , 38 ವರ್ಷ ಗೊಲ್ಲರು ಸ್ಟೂಡಿಯೋ ಕೆಲಸ ವಾಸ ಹೊನ್ನಪ್ಪನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 2] ನಾಗೇಶ ಬಿನ್ ಮುನಿರಾಮಪ್ಪ 35 ವರ್ಷ ಗೊಲ್ಲರು, ಅಡುಗೆ ಕೆಲಸ ವಾಸ ಹೊನ್ನಪ್ಪನಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು , 3] ರಮೆಶ ಬಿನ್ ಲೇಟ್ ಮುನಿಯಪ್ಪ 40 ವರ್ಷ ನಾಯಕರು ಜಿರಾಯ್ತಿ ಹೆಣ್ಣೂರು ಕದಿರೇನಹಳ್ಳಿ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಜೂಜಾಟ ಸ್ಥಳದಿಂದ ಓಡಿ ಹೋದ ಒಬ್ಬ ಆಸಾಮಿಯ ಹೆಸರು ವಿಳಾಸ ಕೇಳಲಾಗಿ 4] ಮಂಜುನಾಥ ಬಿನ್ ನರಸಿಂಹಪ್ಪ 40 ವರ್ಷ ವಕ್ಕಲಿಗರು ವ್ಯಾಪಾರ ಹೆಣ್ಣೂರು ಕದಿರೇನಹಳ್ಳಿ ಗ್ರಾಮ  ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿದರು. ಜೂಜಾಟವಾಡುತ್ತಿದ್ದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ 52 ಇಸ್ಪೀಟ್ ಎಲೆಗಳನ್ನು ಒಂದು ಪ್ಲಾಸ್ಟಿಕ್ ಚೀಲವನ್ನು ಮತ್ತು ಜೂಜಾಟಕ್ಕೆ ಪಣವಾಗಿಟ್ಟಿದ್ದ ನಗದು ಹಣ ಇದ್ದು,  ಎಣಿಸಲಾಗಿ   15,200/- ರೂ. ನಗದು ಹಣವಿದ್ದು, ಮೇಲ್ಕಂಡ 3 ಜನ ಆಸಾಮಿಗಳು, 52 ಇಸ್ಪೀಟ್ ಎಲೆಗಳು, ಮತ್ತು ಪಂದ್ಯಕ್ಕೆ ಪಣವಾಗಿಟ್ಟಿದ್ದ 15,200/- ರೂಪಾಯಿಗಳು ನಗದು ಹಣವನ್ನು ಸಂಜೆ 5-00 ಗಂಟೆಯಿಂದ 6-00 ಗಂಟೆಯವರೆಗೆ ವಿವರವಾದ ಪಂಚನಾಮೆ ಕೈಗೊಂಡು ವಶಕ್ಕೆ ಪಡೆದುಕೊಂಡಿರುತ್ತೆ. ಮೇಲ್ಕಂಡ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ನೀಡಿದ ವರಧಿಯನ್ನು ಪಡೆದು ಪ್ರಕರಣ ಠಾಣಾ ಎನ್ ಸಿ ಆರ್ ನಂ 141/2020 ರಂತೆ ದಾಖಲಿಸಿಕೊಂಡು ರಾತ್ರಿ 9-00 ಗಂಟೆಗೆ ಘನ ನ್ಯಾಯಾಲಯದ  ಅನುಮತಿಯನ್ನುಪಡೆದು ಪ್ರಕರಣ ದಾಖಲಿಸಿರುತ್ತೆ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 29/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ: 05-07-2020 ರಂದು ಪಿರ್ಯಾದಿದಾರರಾದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಹೊನ್ನೇಗೌಡ ರವರು ದಾಳಿ ಪಂಚನಾಮೆ, ಆರೋಪಿತರು, ಮಾಲು, ಮತ್ತು ನ್ಯಾಯಾಲಯದ ಅನುಮತಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ ದಿನಾಂಕ 05.07.2020 ರಂದು  ಮದ್ಯಾಹ್ನ 02-15 ಗಂಟೆಯಲ್ಲಿ ತಾನು ನಗರದಲ್ಲಿ ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ  ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ಭಾರತಿ ಶಾಲೆಯ  ಪಕ್ಕದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರಾಗಿ  ಚಿಕ್ಕಬಳ್ಳಾಪುರ ನಗರದ ಮುಬಾರಕ್ ಪಾಷಾ ಮತ್ತು ಚೇತನ್ ಅರ್. ಎಂಬುವವರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಸಿಬ್ಬಂಧಿಯಾದ  ಸಿಪಿಸಿ-152 ಜಯಣ್ಣ, ಪಿ.ಸಿ-138, ವಿ. ಮುರಳಿ, ಪಿ.ಸಿ-35 ಸರ್ದಾರ್ ಪಿ.ಸಿ-273 ಆನಂದ್. ಪಿಸಿ-259, ಪರಶುರಾಮ ಬೋವಿ, ಪಿಸಿ-428 ಎಂ. ಹರೀಶ್. ಪಿಸಿ-425, ರವಿ ಶಂಕರಪ್ಪ ಮತ್ತು ಜೀಪ್ ಚಾಲಕ ಎಪಿಸಿ-106 ಹರೀಶ್ ರವರುಗಳೊಂದಿಗೆ  ಮಧ್ಯಾಹ್ನ 03-00 ಗಂಟೆಗೆ ಸರ್ಕಾರಿ ವಾಹನ ಸಂಖ್ಯೆ ಕೆ.ಎ.40-ಜಿ-139 ರಲ್ಲಿ ಠಾಣೆಯನ್ನು ಬಿಟ್ಟು ಎಂಜಿ ರಸ್ತೆ,  ಬಿಬಿ  ರಸ್ತೆಯಲ್ಲಿ ಹೋಗಿ ಭಾರತಿನಗರದ ಭಾರತಿ ಶಾಲೆಯ ಬಳಿ  ಮರೆಯಲ್ಲಿ ನಿಲ್ಲಿಸಿ ಭಾರತಿ ಶಾಲೆಯ ಪಕ್ಕದಲ್ಲಿಂದ  ಭಾರತಿ ಶಾಲೆಯ ಹಿಂಬಾಗಕ್ಕೆ  ಹೋದಾಗ ನಿರ್ಜನ ಪ್ರದೇಶದಲ್ಲಿ ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ಕಂಡು ಜೂಜಾಟುತ್ತಿದ್ದ 4 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಡಿದುಕೊಂಡು ಹಾಜರು ಪಡಿಸಿದ್ದು, ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ಮುಬಾರಕ್  ಬಿನ್ ಸೈಯದ್ ಸರ್ದಾರ್, 25 ವರ್ಷ, ಮುಸ್ಲಿಂ, ಬಟ್ಟೆ ವ್ಯಾಪಾರ,  ವಾರ್ಡ-17, ಅಂಜುಮಾನ್ ಶಾಲೆ ರಸ್ತೆ, ಕೋಟೆ, ಚಿಕ್ಕಬಳ್ಳಾಪುರ ನಗರ, 2. ಸುನ್ನು ಬಿನ್ ರಿಯಾಜ್ 32 ವರ್ಷ, ಟಾಟಾ ಏಸ್ ಡ್ರೈವರ್, ವಾರ್ಡ-18 ಕಂದವಾರ ಬಾಗಿಲು ಚಿಕ್ಕಬಳ್ಳಾಪುರನಗರ. 3. ಮೌಲಾ ಬಿನ್ ಚಾಂದ್ ಪಾಷಾ 32 ವರ್ಷ, ಮುಸ್ಲಿಂ, ಲಾರಿ ಮ್ಯಾಕಾನಿಕ್ ಕೆಲಸ, ಮದರ್ ತೆರೀಸಾ ರಸ್ತೆ, ಇಸ್ಲಾಂಪುರ, ವಾರ್ಡ-12 ಚಿಕ್ಕಬಳ್ಳಾಪುರ ನಗರ. 4. ಮಹಬೂಬ್ ಪಾಷಾ ಬಿನ್ ಅನ್ವರ್ ಪಾಷಾ 28 ವರ್ಷ,  ಮುಸ್ಲಿಂ ವಾರ್ಡ-18, ವಲಸಣ್ಣನಬೀಧಿ ಚಿಕ್ಕಬಳ್ಳಾಪುರ ನಗರದ ವಾಸಿಗಳಾಗಿದ್ದು ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 1730/- ರೂ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ  ಜೂಜಾಟ ಆಡಲು ಉಪಯೋಗಿಸಿದ್ದ ಒಂದು ಬಿಳಿ ಬಣ್ಣದ ಸಿಮೆಂಟ್ ಚೀಲ ಸ್ಥಳದಲ್ಲಿ ಸಿಕ್ಕಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 1730/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಸಿಮೆಂಟ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು  ಮದ್ಯಾಹ್ನ 03. 15 ಗಂಟೆಯಿಂದ 04.00 ಗಂಟೆಯವರೆಗೆ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಹಾಜರಾಗಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ. 30/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 05.07.2020 ರಂದು ಸಂಜೆ 6.30 ಗಂಟೆಗೆ ಚಿಕ್ಕಬಳ್ಳಾಪುರ ನಗರ ಠಾಣೆಯ ಪಿ.ಎಸ್.ಐ ರವರಾದ ಶ್ರೀ ಹೊನ್ನೇಗೌಡ ರವರು ಠಾಣೆಗೆ ಹಾಜರಾಗಿ ವರದಿಯೊಂದಿಗೆ ನೀಡಿದ ನ್ಯಾಯಾಲಯದ ಅನುಮತಿ ಪತ್ರ, ದಾಳಿ ಪಂಚನಾಮೆ, ಮಾಲು, ಆರೋಪಿಗಳನ್ನು ಹಾಜರುಪಡಿಸಿದ್ದರ ಸಾರಾಂಶವೇನೆಂದರೆ ತಾನು  ಮದ್ಯಾಹ್ನ 02-45 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ   ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ಜೈ ಬೀಮ್ ನಗರ ಹಾಸ್ಟಲ್ ಹಿಂಬಾಗದ ಆಟದ ಮೈದಾನದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರಾಗಿ  ಭಗತ್ ಸಿಂಗ್ ನಗರದ ಅರುಣ್ ಕುಮಾರ್ ಎನ್  ಮತ್ತು  ಕಂದವಾರದ ನರೇಂದ್ರಕುಮಾರ್ ಎಲ್ ಎಂಬುವವರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಪಂಚರಾಗಿ ಬರುವಂತೆ ಕೋರಿ ಹಾಗೂ  ಸಿಬ್ಬಂಧಿಯಾದ ವೆಂಕಟೇಶ್ ಹೆಚ್.ಸಿ-153, ಅಶ್ವತ್ತರಾಜು ಹೆಚ್.ಸಿ-131.  ಸಿಪಿಸಿ-152 ಜಯಣ್ಣ, ಪಿ.ಸಿ-138, ವಿ. ಮುರಳಿ, ಪಿಸಿ-541 ಗಂಗಾಧರ, ಪಿ.ಸಿ-35 ಸರ್ದಾರ್ ಪಿ.ಸಿ-273 ಆನಂದ್. ಪಿಸಿ-259, ಪರಶುರಾಮ ಬೋವಿ, ಪಿಸಿ-428 ಎಂ. ಹರೀಶ್. ಪಿಸಿ-425, ರವಿ ಶಂಕರಪ್ಪ ರವರುಗಳೊಂದಿಗೆ  ಸಂಜೆ 04-45 ಗಂಟೆಗೆ ಠಾಣೆಯಿಂದ ನಡೆದುಕೊಂಡು ಮುನ್ಸಿಪಲ್ ಕಾಲೇಜ್ ಅವರಣಕ್ಕೆ ಹೋಗಿ   ಮರೆಯಲ್ಲಿ ನಿಂತು ಜೈಬೀಮ್ ಹಾಸ್ಟಲ್ ನ ಆವರಣದ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ಕಂಡು ಜೂಜಾಟುತ್ತಿದ್ದ 8 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ರವಿ ಬಿನ್ ಲೇಟ್ ಚಲುವರಾಜ್ 27 ವರ್ಷ,  ಬಲಿಜ ಜನಾಂಗ, ಟೆಂಪೋ ಡ್ರೈವರ್, ಸ್ಮಶಾನದ ಬಳಿ, ವಾರ್ಡ-04, ಪ್ರಶಾಂತನಗರ ಚಿಕ್ಕಬಳ್ಳಾಪುರ ನಗರ. 2. ಮುನಿರಾಜ ಬಿನ್ ನರಸಿಂಹಮೂರ್ತಿ, 35 ವರ್ಷ, ಉಪ್ಪಾರ ಜನಾಂಗ, ಡ್ರೈವರ್, ನಂದಿಕ್ರಾಸ್ ಸ್ವಂತ ಊರು, ವಿದುರಾಶ್ವತ್ತ ಗೌರಿಬಿದನೂರು ತಾ||. 3. ವಿ. ಅರುಣ್ ಬಿನ್ ಲೇಟ್ ವೇಣುಗೋಪಾಲ್ 28 ವರ್ಷ, ಈಡಿಗ ಜನಾಂಗ ಕಾರು ಚಾಲಕ ನಿಮ್ಮಕಲಕುಂಟೆ ವಾರ್ಡ-7 ಚಿಕ್ಕಬಳ್ಳಾಪುರ ನಗರ. 4, ಚೇತನ್ ಬಿನ್ ಶ್ರೀನಿವಾಸ 20 ವರ್ಷ ಬಲಿಜ ಜನಾಂಗ ಕಾರು ಚಾಲಕ, ವಾಸ, ಕಂದವಾರಬಾಗಿಲು ವಾರ್ಡ-15 ಚಿಕ್ಕಬಳ್ಳಾಪುರ, 5. ಕಿರಣ್ ಅರ್. ಬಿನ್ ರಾಮಾಂಜಿನಪ್ಪ 28 ವರ್ಷ ಬೋವಿ,ಕಾರು ಚಾಲಕ ಜರಬಂಡಹಳ್ಳಿ ಗ್ರಾಮ ಮಂಚೇನಹಳ್ಳಿ ಗೌರಿಬಿದನೂರು ತಾ|| 6. ಹರೀಶ್ ಬಿನ್ ಲೇಟ್ ರಾಮಚಂದ್ರಪ್ಪ  28 ವರ್ಷ, ಬಲಜಿಗರು ಕಾರುಚಾಲಕ ವೃತ್ತ, ವಾಸ ಕೆಎಸ್ ಅರ್ ಟಿಸಿ ಗ್ಯಾರೆಜ್ ಮುಂಬಾಗ,  ಭಗತ್ ಸಿಂಗ್ ನಗರ ವಾರ್ಡ-2 ಚಿಕ್ಕಬಳ್ಳಾಪುರ ನಗರ. 7. ಚಿರಂಜೀವಿ ಬಿನ್ ವೆಂಕಟೇಶಪ್ಪ 35 ವರ್ಷ ಮಡಿವಾಳ ಜನಾಂಗ ಕಾರುಚಾಲಕವೃತ್ತ, ಹಾಲಿ ವಾಸ ಗಂಗನಮಿದ್ದೆ ವಾರ್ಡ-09, ಚಿಕ್ಕಬಳ್ಳಾಪುರ ನಗರ ಸಂತ: ಮುತ್ಯಾಲಮ್ಮಗುಡಿ ಬೀದಿ ಗುಡಿಬಂಡೆ ಟೌನ್. 8. ಉಮೇಶ್ ಬಿನ್ ನರಸಿಂಹಪ್ಪ  24 ವರ್ಷ, ಅಗಸರುಕಾರು ಚಾಲಕವೃತ್ತಿ, ವಾಸ ಗಂಗೋತ್ರಿ ವಾಟರ್ ಪಿಲ್ಟರ್ ಹತ್ತಿರ ಪ್ರಶಾಂತನಗರ ಚಿಕ್ಕಬಳ್ಳಾಪುರ ನಗರ.  ಸ್ವಂತ ಗಂಗಮ್ಮಗುಡಿ ಸಮೀಪ ವಾರ್ಡ-5 ಬಾಗೇಪಲ್ಲಿ ಟೌನ್.  ವಾಸಿಗಳಾಗಿದ್ದು ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 4730/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 4730/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಸಿಮೆಂಟ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು  ಮದ್ಯಾಹ್ನ 05-00 ಗಂಟೆಯಿಂದ 05.45 ಗಂಟೆಯವರೆಗೆ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 173/2020 ಕಲಂ. 269,271 ಐ.ಪಿ.ಸಿ:-

          ದಿನಾಂಕ:05.07.2020 ರಂದು ಮದ್ಯಾಹ್ನ 14-15 ಗಂಟೆಗೆ  ಪೃಥ್ವಿರಾಜ್.ಜಿ, ಸಿಪಿಸಿ-195 ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ,  ಈ ದಿನ ಬೆಳಿಗ್ಗೆ ಠಾಣಾಧಿಕಾರಿಗಳು ಬೀಟ್ ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಅದರಂತೆ ನಾನು ತೊಟ್ಟಿಬಾವಿ, ಸುಂಡ್ರಹಳ್ಳಿ, ಜಂಗಮಕೋಟೆ ವೃತ್ತ ಗ್ರಾಮಗಳಿಗೆ ಭೇಟಿ ನೀಡಿ ಗಸ್ತು ಮಾಡಿಕೊಂಡು ಮದ್ಯಾಹ್ನ 1-00 ಗಂಟೆಗೆ ಜಂಗಮಕೋಟೆ ಗ್ರಾಮಕ್ಕೆ ಹೋಗಿ ಮಾಹಿತಿಯನ್ನು ಸಂಗ್ರಹಿಸಲಾಗಿ ನನಗೆ ಬಂದ ಮಾಹಿತಿಯ ಮೇರೆಗೆ ಠಾಣಾ ಸರಹದ್ದಿನ  ಶ್ರೀಮತಿ ಬ್ರಮಣಿ ಕೋಂ ಶ್ರೀಹರೀಶ್ ನಾಯಕ್, 27 ವರ್ಷ, ಗೃಹಿಣಿ.ನಾಯಕ ಜನಾಂಗ, ವಾಸ ಗಾಂದಿ ಚೌಕ. 1 ನೇ ಮುಖ್ಯ ರಸ್ತೆ. ಜಂಗಮಕೋಟೆ ಶಿಡ್ಲಘಟ್ಟ ತಾಲ್ಲೂಕು ಪೋ.7624942664 ರವರನ್ನು ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳು ದಿನಾಂಕ:30/06/2020 ರಿಂದ ದಿನಾಂಕ:13/07/2020 ರವರೆವಿಗೂ (Home Quarantine) ನಿವಾಸದಲ್ಲಿ ಇರಲು ಸೂಚನೆಗಳನ್ನು ನೀಡಿ ಹೋಮ್ ಕ್ವಾರಂಟೈನ್ ಬಗ್ಗೆ ಕೈಗೆ ಸೀಲ್ ಮಾಡಿ ಪ್ರತ್ಯಕಗೊಳಿಸುವಿಕೆ (Home Quarantine) ನಿಗಾವಣೆಯಲ್ಲಿರಲು ಆದೇಶ ಮಾಡಿ ಮನೆಗೆ ಕಳುಹಿಸಿಕೊಟ್ಟಿರುತ್ತಾರೆ. ಶ್ರೀಮತಿ ಬ್ರಮಣಿ ಕೋಂ ಶ್ರೀಹರೀಶ್ ನಾಯಕ್ ರವರು ದಿನಾಂಕ:03/07/2020 ರಿಂದ ದಿನಾಂಕ:05/07/2020 ರವರೆಗೆ ಮನುಷ್ಯರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ -19 ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿದೆ ಎಂದು ತಿಳಿದೂ ಸಹ ನಿರ್ಲಕ್ಷ್ಯತನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ (Home Quarantine) ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿರುತ್ತೆ.  ಆದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ  ಕೋರಿ ದೂರಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 174/2020 ಕಲಂ. 269,271 ಐ.ಪಿ.ಸಿ:-

          ದಿನಾಂಕ:05.07.2020 ರಂದು ಸಂಜೆ 4-00 ಗಂಟೆಗೆ   ಪೃಥ್ವಿರಾಜ್.ಜಿ, ಸಿಪಿಸಿ-195 ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ,  ಈ ದಿನ ಬೆಳಿಗ್ಗೆ ಠಾಣಾಧಿಕಾರಿಗಳು ಬೀಟ್ ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ. ಅದರಂತೆ ನಾನು ತೊಟ್ಟಿಬಾವಿ, ಸುಂಡ್ರಹಳ್ಳಿ, ಜಂಗಮಕೋಟೆ ವೃತ್ತ ಗ್ರಾಮಗಳಿಗೆ ಭೇಟಿ ನೀಡಿ ಗಸ್ತು ಮಾಡಿಕೊಂಡು ಮದ್ಯಾಹ್ನ 3-00 ಗಂಟೆಗೆ ಜಂಗಮಕೋಟೆ ಗ್ರಾಮಕ್ಕೆ ಹೋಗಿ ಮಾಹಿತಿಯನ್ನು ಸಂಗ್ರಹಿಸಲಾಗಿ ನನಗೆ ಬಂದ ಮಾಹಿತಿಯ ಮೇರೆಗೆ ಠಾಣಾ ಸರಹದ್ದಿನ  ಶ್ರೀ. ಹರೀಶ್ ನಾಯಕ್ ಬಿನ್ ಮುನಿಕೃಷ್ಣಪ್ಪ, 49 ವರ್ಷ, ನಾಯಕ ಜನಾಂಗ, ವಾಸ ಗಾಂದಿ ಚೌಕ. 1 ನೇ ಮುಖ್ಯ ರಸ್ತೆ. ಜಂಗಮಕೋಟೆ ಶಿಡ್ಲಘಟ್ಟ ತಾಲ್ಲೂಕು ಪೋ.7624945664 ರವರನ್ನು ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳು ದಿನಾಂಕ:30/06/2020 ರಿಂದ ದಿನಾಂಕ:13/07/2020 ರವರೆವಿಗೂ (Home Quarantine) ನಿವಾಸದಲ್ಲಿ ಇರಲು ಸೂಚನೆಗಳನ್ನು ನೀಡಿ ಹೋಮ್ ಕ್ವಾರಂಟೈನ್ ಬಗ್ಗೆ ಕೈಗೆ ಸೀಲ್ ಮಾಡಿ ಪ್ರತ್ಯಕಗೊಳಿಸುವಿಕೆ (Home Quarantine) ನಿಗಾವಣೆಯಲ್ಲಿರಲು ಆದೇಶ ಮಾಡಿ ಮನೆಗೆ ಕಳುಹಿಸಿಕೊಟ್ಟಿರುತ್ತಾರೆ. ಶ್ರೀ. ಹರೀಶ್ ನಾಯಕ್ ಬಿನ್ ಮುನಿಕೃಷ್ಣಪ್ಪ,  ರವರು ದಿನಾಂಕ:03/07/2020 ರಿಂದ ದಿನಾಂಕ:05/07/2020 ರವರೆಗೆ ಮನುಷ್ಯರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ -19 ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿದೆ ಎಂದು ತಿಳಿದೂ ಸಹ ನಿರ್ಲಕ್ಷ್ಯತನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ (Home Quarantine) ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿರುತ್ತೆ.  ಆದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ದೂರಾಗಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 175/2020 ಕಲಂ. 51,54 THE DISASTER MANAGEMENT ACT, 2005 :-

     ದಿನಾಂಕ:-04/07/2020 ರಂದು ಪಿರ್ಯಾದಿದಾರರಾದ ಸೋಮಶೇಖರ್ ರೆಡ್ಡಿ ಪಿ.ವಿ ಬಿನ್ ಜಿ.ವೆಂಕಟರಾಮರೆಡ್ಡಿ, 44 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ-ಪಲ್ಲಿಚೆರ್ಲು ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ 01/07/2020 ರಂದು ನಾಗಮಂಗಲ ಗ್ರಾಮ ಪಂಚಾಯ್ತಿಗೆ ಸಂಬಂಧಿಸಿದ ಕೋವಿಡ್-19 ನಾಗಮಂಗಲ ಎಂಬ ವಾಟ್ಸ್ ಸಪ್ ಗ್ರೂಪ್ ನಲ್ಲಿ ಸದರಿ ಗ್ರೂಪಿನ ಸದಸ್ಯರಾಗಿರುವ ಎಫ್-ಇ-ಎಸ್ (ಎನ್.ಜಿ.ಓ) ಅಶ್ವಿನಿ ಎಂಬುವರು ಪಲಿಚೆರ್ಲು ಗ್ರಾಮದಲ್ಲಿ ಸೋಮಶೇಖರ್ ಎಂಬುವರಿಗೆ ಕರೋನಾ ಸೋಂಕು ಇರುವುದು ಪತ್ತೆಯಾಗಿದೆ ಎಂತ ಹಾಕಿರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ವೇಳೆ ಯಾವುದೇ ವ್ಯಕ್ತಿಯ ಕರೋನಾ ಟೆಸ್ಟ್ ಪಾಸಿಟೀವ್ ಎಂದು ಬಂದರೂ ಕೂಡ ಅವರ ಗೌಪ್ಯತೆಯನ್ನು ಅಂದರೆ ಹೆಸರು ಮತ್ತು ವಿಳಾಸವನ್ನು ಬಹಿರಂಗ ಪಡಿಸಬಾರದೆಂದು ಆದೇಶವಿದ್ದು, ಈ ಬಗ್ಗೆ ಲೋಕ ನೌಕರರು ಆದೇಶವನ್ನು ಹೊರಡಿಸಿದ್ದರು ಸಹ ಮೇಲ್ಕಂಡ ಅಶ್ವಿನಿ ರವರು ಉದ್ದೇಶ ಪೂರ್ವಕವಾಗಿ ನನಗೆ ಕರೋನಾ ಪಾಸಿಟೀವ್ ಇಲ್ಲದೇ ಇದ್ದರೂ ಸಹ ನನಗೆ ಕರೋನಾ ಸೋಂಕು ಇರುವುದಾಗಿ ಹೆಸರು ಸಮೇತ ಹಾಕಿ ನನಗೆ ತೊಂದರೆ ಉಂಟು ಮಾಡಿದ್ದು ಇದು ಅಪರಾಧವಾಗಿರುತ್ತದೆ. ಅಶ್ವಿನಿ ರವರು ಯಾರದೋ ಮಾತುಗಳನ್ನು ಕೇಳಿಕೊಂಡು ಯಾರದೋ ಕುಮ್ಮಕ್ಕಿನಿಂದ ಕೋವಿಂಡ್-19 ನಾಗಮಂಗಲ ಗ್ರೂಪಿನಲ್ಲಿ ಈ ರೀತಿ ಸುಳ್ಳು ಸುದ್ದಿ ಹಾಕಿ ನನಗೆ ತೊಂದರೆ ಉಂಟು ಮಾಡಿದ್ದು ಈ ಸುದ್ದಿಯಿಂದ ನನ್ನ ಕುಟುಂಬಸ್ಥರು ಹಾಗು ನಮ್ಮ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿರುತ್ತಾರೆ. ಸದರಿ ಅಶ್ವಿನಿ ರವರ ಹೆಸರು ವಿಳಾಸ ತಿಳಿಯಲಾಗಿ ಅಶ್ವಿನಿ ಕೋಂ ಚೇತನ್ ಕುಮಾರ್ ಭಕ್ತರಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿದು ಬಂದಿರುತ್ತದೆ. ಆದ್ದರಿಂದ ನನಗೆ ಕೋವಿಡ್-19 ಪಾಸಿಟೀವ್ ಬಂದಿದೆ ಎಂದು ಕೋವಿಡ್-19 ನಾಗಮಂಗಲ ಎಂಬ ವಾಟ್ಸ್ ಸಪ್ ಗ್ರೂಪ್ ನಲ್ಲಿ ಸುಳ್ಳು ಸುದ್ದಿ ಹಾಕಿರುವ ಅಶ್ವಿನಿ ಹಾಗು ಅವರಿಗೆ ಕುಮ್ಮಕ್ಕು ನೀಡಿರುವವರ ಇತತರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕಾಗಿ ಕೊಟ್ಟ ದೂರಿನಂತೆ ಠಾಣಾ ಎನ್.ಸಿ.ಆರ್ ಸಂಖ್ಯೆ 247/2020 ರಂತೆ ದಾಖಲಿಸಿರುತ್ತೆ. ನಂತರ ಎನ್.ಸಿ.ಆರ್ ದೂರಿನಲ್ಲಿನ ಅಂಶಗಳು ಕಲಂ 51,54 DISASTER MANAGEMENT ACT  ರಂತೆ ಸಂಜ್ಞೆಯ ಅಪರಾಧ ಎಂದು ಕಂಡು ಬಂದಿರುವುದರಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.