ದಿನಾಂಕ :06/01/2021 ರ ಅಪರಾಧ ಪ್ರಕರಣಗಳು

  1. ಡಿ.ಸಿ.ಬಿ/ಸಿಇಎನ್  ಪೊಲೀಸ್ ಠಾಣೆ ಮೊ.ಸಂ.01/2021  ಕಲಂ. 419,420 ಐ.ಪಿ.ಸಿ & 66(D) INFORMATION TECHNOLOGY  ACT 2000 :-

  ದಿನಾಂಕ: 06/01/2021 ರಂದು ಮಧ್ಯಾಹ್ನ 1.30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಎಸ್, ಕೇಶವ ಮೂರ್ತಿ ಬಿನ್ ಶ್ರೀನಿವಾಸಯ್ಯ. 37 ವರ್ಷ, ಶಿಡ್ಲಘಟ್ಟ ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಮುದ್ರಿತ ದೂರಿನ ಸಾರಾಂಶವೇನೆಂದರೆ, ನನಗೆ ದಿನಾಂಕ:22-09-2020 ರಂದು 9051528780 ಸಂಖ್ಯೆಯ ನಂಬರಿನಿಂದ ಪೋನ್ ಮಾಡಿ ನಿಮಗೆ ರಾಕ್ ಜಾನ್ಸನ್ ಕಂಪನಿಯಿಂದ 10,72225/-ರೂ  ಲಾಟರಿ  ಬಂದಿರುವುದಾಗಿ ತಿಳಿಸಿ ಸದರಿ ಹಣವನ್ನು ಪಡೆಯಲು ನೀವುಗಳು ಮೊದಲು 6500/- ಡಿಪಾಸಿಟ್ ಮಾಡಬೇಕೆಂತ 7477752658 ಸಂಖ್ಯೆಯ ನಂಬರಿನಿಂದ ವಾಟ್ಸಫ್ ನಲ್ಲಿ ಮೆಸೇಜ್ ಮಾಡಿ, ನಂತರ ಇತರೇ ಶೂಲ್ಕಗಳಿಗೆ ಇನ್ನೂ ಹಣ ವರ್ಗಾವಣೆ ಮಾಡಬೇಕೆಂತ ತಿಳಿಸಿದ್ದು, ಇದನ್ನು ನಾನು ನಂಬಿ ನನ್ನ ಹೆಂಡತಿಯಾದ ವೈಶಾಲಿರವರ ಶಿಡ್ಲಘಟ್ಟ ನಗರದಲ್ಲಿರುವ ಕೆನರಾ ಬ್ಯಾಂಕಿನ ಉಳಿತಾಯ ಖಾತೆ ಸಂಖ್ಯೆ 0486101203474 ಗೆ ಲಿಂಕ್ ಆಗಿರುವ 8747989970 ಸಂಖ್ಯೆಯ ಪೋನ್ ಪೇ ಮುಖಾಂತರ ಅವರು ನೀಡಿದ್ದ ಈ ಕೆಳಕಂಡ ಬ್ಯಾಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿರುತ್ತೇನೆ, ಎಸ್.ಬಿ.ಐ ಬ್ಯಾಂಕ್ ಖಾತೆ ಸಂಖ್ಯೆಗಳಾದ  32782519187 ಗೆ 6.500/-ರೂ, ಖಾತೆ ಸಂಖ್ಯೆ 38885958453 ಗೆ 10,700/-ರೂ, ಖಾತೆ ಸಂಖ್ಯೆ 38885958453 ಗೆ 11,000/-ರೂ, ಖಾತೆ ಸಂಖ್ಯೆ 39712744705 ಗೆ 14,500/- ರೂ, ಖಾತೆ ಸಂಖ್ಯೆ 38667287608 ಗೆ 30,000/-ರೂ, ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ 697802010007116  ಗೆ 62,400/-ರೂ, ಕೆನರಾ ಬ್ಯಾಂಕ್ ಬ್ಯಾಂಕ್ ಖಾತೆ ಸಂಖ್ಯೆ 5364101001925 ಗೆ 22,500/-ರೂಗಳನ್ನು ವರ್ಗಾವಣೆ ಮಾಡಿದರೂ ಸಹ ನಿಮ್ಮ ಹಣ ಪಡೆಯಲು ಇನ್ನೂ ಹಣ ಕಟ್ಟಬೇಕು ಎಂಬುದಾಗಿ  ತಿಳಿಸಿದ್ದು, ಆಗ ನನಗೆ ಅನುಮಾನ ಬಂದು ಈ ದಿನ  ಠಾಣೆಗೆ ಬಂದು ದೂರನ್ನು ನೀಡುತ್ತಿರುತ್ತೇನೆ. ಮೇಲ್ಕಂಡ ನಂಬರಿನ  ವ್ಯಕ್ತಿ ರಾಕ್ ಜಾನ್ಸನ್ ಕಂಪನಿಯಿಂದ 10,72,225/-ರೂ  ಲಾಟರಿ  ಬಂದಿರುವುದಾಗಿ  ನಂಬಿಸಿ ಆ ಹಣವನ್ನು ಪಡೆಯಲು ವಿವಿಧ ಶುಲ್ಕಗಳು/ಟ್ಯಾಕ್ಸ್ ಗಳಿಗೆ ಅಂತ  ನನ್ನಿಂದ ಒಟ್ಟು 1,58,000/- ರೂಗಳನ್ನು ಮೇಲ್ಕಂಡ ಖಾತೆಗಳಿಗೆ ಜಮೆ ಮಾಡಿಸಿಕೊಂಡು, ನನಗೆ ಲಾಟರಿ ಹಣವನ್ನು ನೀಡದೆ ಹಾಗೂ ನನ್ನ ಹಣವನ್ನು ನನಗೆ ವಾಪಸ್ಸು ನೀಡದೆ ಮೋಸ ಮಾಡಿರುತ್ತಾನೆ. ಸದರಿ ರಾಕ್ ಜಾನ್ಸನ್ ಕಂಪನಿಯ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಆರೋಪಿಯ ವಿರುದ್ದ ಕಾನೂನು ಕ್ರಮ ಜರಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ.ವ.ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ:06.01.2021 ರಂದು ಬೆಳಿಗ್ಗೆ 9-15 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:06.01.2021 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿ ಏನೆಂದರೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಗಂಗರೆಕಾಲುವೆ ಗ್ರಾಮದ ವಾಸಿ ವೆಂಕಟರವಣಪ್ಪ ಬಿನ್ ಲೇಟ್ ನಾರಾಯಣಪ್ಪ 70 ವರ್ಷ, ಆದಿ ದ್ರಾವಿಡ ಜನಾಂಗ, ರವರು ತಮ್ಮ ಮನೆಯ ಬಳಿ ಯಾವುದೇ ಪರವಾನಗಿ ಇಲ್ಲದೇ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿರುವುದಾಗಿ ತನಗೆ ಖಚಿತ ಮಾಹಿತಿ ಬಂದಿರುತ್ತದೆಂದು ಈ ಬಗ್ಗೆ  ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] , 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2021  ಕಲಂ. 279 ಐ.ಪಿ.ಸಿ:-

  ಈ ದಿನ ದಿನಾಂಕ:05/01/2021 ರಂದು ಸಂಜೆ 6.00 ಗಂಟೆಯಲ್ಲಿ ಅರ್ಜಿದಾರರಾದ ಅಜಯ್ ಕೆ. ಬಿನ್ ಕೆಂಪರೆಡ್ಡಿ ಬಿ. 21 ವರ್ಷ. ವಕ್ಕಲಿಗ ಜನಾಂಗ ಜಿರಾಯ್ತಿ. ವಾಸ: ಬೂರಗಮಾಕಲಹಳ್ಳಿ ಗ್ರಾಮ  ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ.  ತಾನು ಜಿರಾಯ್ತಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ತನ್ನ ಸ್ವಂತ ಮತ್ತು ಕುಟುಂಬದ ನಿರ್ವಹಣೆಯ ಸಲುವಾಗಿ ಓಡಾಟಕ್ಕೆ ಮತ್ತು ವ್ಯವಹರಣೆಯ ಸಲುವಾಗಿ ತಾನು 2018 ನೇ ಸಾಲಿನಲ್ಲಿ ಟಾಟಾ ಇಂಡಿಕಾ ವಿ2 ಎಲ್ ಎಕ್ಸ್ ಕಾರ್ ಸಂಖ್ಯೆ; ಕೆ.ಎ 05; ಎ.ಎಪ್ 0733. ಕಾರನ್ನು ಖರೀದಿಸಿ ನಿರ್ವಹಣೆ ಮಾಡಿಕೊಂಡು ಬಂದಿರುತ್ತೇನೆ. ಹಾಗೂ ಈ ವಾಹನವನ್ನು ಕೋಚಿಮಲ್ ಸಂಸ್ಥೆಯಲ್ಲಿ ಪಶುವೈದ್ಯರನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿಕೊಂಡು ಬರುವ ಕೆಲಸದ ಕಾಂಟ್ರಾರ್ಕ್ಟ್ ಗೆ ಬಿಟ್ಟಿರುತ್ತೇನೆ. ಈ ಕೆಲಸದ ಸಲುವಾಗಿ ದಿನಾಂಕ;03-01-2021 ರಂದು ಸಂಜೆ 05;30 ಗಂಟೆಯ ಸಮಯದಲ್ಲಿ ತನ್ನ ಕಾರಿನ ಚಾಲಕನಾದ ಶ್ರೀ ಮಣಿಕುಮಾರ್ ಬಿನ್ ರೆಡ್ಡಿ ಶಂಕರ್. 30 ವರ್ಷ. ಎಸ್ಸಿ ಜನಾಂಗ ಚಾಲಕ ಕೆಲಸ, ವಾಸ; ವಿನೋಭಾ ಕಾಲೋನಿ ಚಿಂತಾಮಣಿ ನಗರ ರವರು ತನ್ನ ಕೆಲಸವನ್ನು ಮುಗಿಸಿಕೊಂಡು ಚಾಲಕನೋಬ್ಬನೇ ಅಲಂಬಗಿರಿ ದೇವಸ್ಥಾನಕ್ಕೆ ಹೋಗುತ್ತಿದ್ದು ಚಿನ್ನಸಂದ್ರ- ನಿಡಗುರ್ಕಿ ಮಾರ್ಗದ ಮಧ್ಯದ ಸುಲದೇನಹಳ್ಳಿ ಗೇಟ್ ಹತ್ತಿರ ಚಾಲಕ ತನ್ನ ವಾಹನವನ್ನು ವೇಗವಾಗಿ ಚಾಲನೆ ಮಾಡುತ್ತಿದ್ದು ಆಕಸ್ಮೀಕವಾಗಿ ರಸ್ತೆ ಬದಿಯಲ್ಲಿದ್ದ ಕುರಿಗಳು ಅಡ್ಡಬಂದಿದ್ದು ಸದರಿ ಕುರಿಗಳನ್ನು ತಪ್ಪಿಸಲು ಚಾಲಕ ವಾಹನದ ಕಾರನ್ನು ಬಲಕ್ಕೆ ತಿರಗಿಸಿದ್ದು ಕಾರು ವೇಗವಾಗಿ ಚಾಲನೆಯಲ್ಲಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಯ ಬಳಿಯಲ್ಲಿದ್ದ ಹಳ್ಳದಲ್ಲಿ ಬಿದ್ದು ಪಲ್ಟಿ ಹೊಡದಿರುತ್ತದೆ. ಇದರಿಂದ ಕಾರು ಪೂರ್ಣ ಜಖಂಗೊಂಡಿರುತ್ತದೆ. ಆದರೆ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ.  ಅದ್ದರಿಂದ ತನ್ನ ಟಾಟಾ ಇಂಡಿಕಾ ವಿ2 ಎಲ್ ಎಕ್ಸ್ ಕಾರ್ ಸಂಖ್ಯೆ; ಕೆ.ಎ 05; ಎ.ಎಪ್ 0733. ಕಾರಿನ ಚಾಲಕ ತನ್ನ ವಾಹನವನ್ನು ವೇಗವಾಗಿ ಚಾಲನೆ ಮಾಡುವಾಗ ಆಕಸ್ಮಿಕವಾಗಿ ರಸ್ತೆಯಲ್ಲಿ ಕುರಿಗಳು ಅಡ್ಡಬಂದಿದ್ದು ಇವುಗಳನ್ನು ತಪ್ಪಿಸಲು ನಿಯಂತ್ರಣ ತಪ್ಪಿ ಸ್ವ ಅಪಘಾತವಾಗಿ ಪೂರ್ಣ ಜಖಂ ಆಗಿರುತ್ತದೆ. ಅದ್ದರಿಂದ ತಾವು ಪರಿಶೀಲನೆ ಮಾಡಿ ಸೂಕ್ತ ಕಾನೂನು ರೀತಿಯ ಕ್ರಮಗಳನ್ನು ಜರಿಗಿಸಲು ತಮ್ಮಲ್ಲಿ ಕೋರುತ್ತೇನೆ. ಈ ತನ್ನ ದೂರಿನೊಂದಿಗೆ ವಾಹನದ ದಾಖಲೆಗಳ ನಕಲುಗಳನ್ನು ಲಗತ್ತಿಸಿಕೊಂಡಿರುತ್ತೇನೆ. ಹಾಗೂ ನಮಗೆ ಈ ಘಟನೆಯ ಬಗ್ಗೆ ಮುಂದಿನ ಕ್ರಮಗಳ ಬಗ್ಗೆ ಕಾನೂನು ಮಾಹಿತಿ ಕಡಿಮೆ ಇದ್ದರಿಂದ ವಿಚಾರ ಮಾಡಿ ತಿಳಿದುಕೊಂಡು ಈ ದಿನ ಠಾಣೆಯಲ್ಲಿ ತಡವಾಗಿ ದೂರು ನೀಡಿರುತ್ತಾರೆ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2021  ಕಲಂ. 279,337  ಐ.ಪಿ.ಸಿ:-

  ಈ ಮೂಲಕ ತಮ್ಮಲ್ಲಿ ದೂರು ನೀಡುವುದೇನೆಂದರೆ, ನನಗೆ ದಿನಾಂಕ:23/03/2003 ರಂದು ಚಿಂತಾಮಣಿ ತಾಲ್ಲೂಕು ಕೈವಾರ ಗ್ರಾಮ ಸುಬ್ಬಯ್ಯ ರವರ ಮಗನಾದ ರಮೇಶ್ ಎಂಬುವರೊಂದಿಗೆ ವಿವಾಹವಾಗಿದ್ದು, ಒಂದು 14 ವರ್ಷದ ಹೆಣ್ಣು ಮಗು ಇರುತ್ತೆ. ಮದುವೆಯ ನಂತರ ಕೆಲವು ವರ್ಷಗಳ ಕಾಲ ನನ್ನನ್ನು ಚೆನ್ನಾಗಿ ಹೆಯಂತೆ ನನ್ನ ಮತ್ತು ಮಗಳನ್ನು ಸಾಕಿಕೊಳ್ಳುವುದಾಗಿ ಹೇಳಿ ಒಪ್ಪಿಕೊಂಡಿದ್ದರಿಂದ ನಾನು ಸದರಿ ಕೇಸನ್ನು ವಜಾ ಮಾಡಿಸಿಕೊಂಡಿರುತ್ತೇನೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.05/2021  ಕಲಂ. 279,337,304(A)  ಐ.ಪಿ.ಸಿ:-

  ದಿನಾಂಕ 06/01/2021 ರಂದು ಬೆಳಿಗ್ಗೆ 8-30 ಗಂಟೆಗೆ ಪಿರ್ಯಾದಿ ಶ್ರೀಮತಿ ಗಾಯತ್ರಿ ಕೋಂ ನಾರಾಯಣಸ್ವಾಮಿ, 29 ವರ್ಷ, ಆದಿ ದ್ರಾವಿಡ, ಗೃಹಿಣಿ, ವಾಸ ಯಲ್ಲೋಡು ಗ್ರಾಮ,ಗುಡಿಬಂಡೆ ತಾಲ್ಲೂಕು, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ತನಗೆ ಈಗ್ಗೆ ಸುಮಾರು 09 ವರ್ಷಗಳ ಹಿಂದೆ ಎಲ್ಲೋಡು ಗ್ರಾಮದ ವಾಸಿ ನಾರಾಯಣಸ್ವಾಮಿ ಬಿನ್ ಲೇಟ್ ಗಂಗಪ್ಪ, 35 ವರ್ಷ, ಆದಿ ದ್ರಾವಿಡ ಜನಾಂಗ, ಆಟೋ ಚಾಲಕ ರವರೊಂದಿಗೆ ಮದುವೆಯಾಗಿದ್ದು ನಮಗೆ 04 ವರ್ಷದ ಒಂದು  ಗಂಡು ಮಗು ಸಹ ಇರುತ್ತೆ. ತನ್ನ  ಗಂಡನ ತಂಗಿ ಸರೋಜಮ್ಮ ರವರನ್ನು ಡಿಪಾಳ್ಯ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿದ್ದು ಸದರಿಯವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಭೇಟಿ ಮಾಡಲು ದಿನಾಂಕ:05/01/2021 ರಂದು ಸಂಜೆ 4-00 ಗಂಟೆ ಸಮಯದಲ್ಲಿ ತಾನು ತನ್ನ ಗಂಡ ನಾರಾಯಣಸ್ವಾಮಿ, ತನ್ನ ಮಗ ಅಖಿಲ್, ನಮ್ಮ  ಗ್ರಾಮದ ವಾಸಿ ಆದಿಮೂರ್ತಿ ರವರು ತಮ್ಮ ಬಾಬತ್ತು ಕೆ.ಎ-36, ಎ-7224 ಆಟೋವಾಹನದಲ್ಲಿ ತನ್ನ ಗಂಡ ಚಾಲನೆ ಮಾಡಿಕೊಂಡು ಎಲ್ಲೋಡು ಗ್ರಾಮ ಬಿಟ್ಟು ಡಿ ಪಾಳ್ಯ ಗ್ರಾಮಕ್ಕೆ ಹೋಗಲು ಗೌರೀಬಿದನೂರು ತಾಲ್ಲೂಕು ಮಲ್ಲೇನಹಳ್ಳಿ ಕ್ರಾಸ್ ನಿಂದ ಸ್ವಲ್ಪ ಮುಂದೆ ಗೌರೀಬಿದನೂರು ರಸ್ತೆ ಮಾರ್ಗವಾಗಿ ಸಾಯಂಕಾಲ ಸುಮಾರು 4-30 ಗಂಟೆ ಸಮಯದಲ್ಲಿ ಬರುತ್ತಿದ್ದಾಗ ತನ್ನ ಗಂಡ ಆಟೋವನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಆಟೋ ರಿಕ್ಷಾವು ನಿಯಂತ್ರಣ ತಪ್ಪಿ ಬಲಗಡೆ ಮುಗುಚಿ ಬಿದ್ದ ಪರಿಣಾಮ ತನ್ನ ಗಂಡನ ಬಲ ಕಿವಿಯ ಬಳಿ, ಎಡ ಬುಜದ ಮೇಲೆ, ಎಡ ತೊಡೆ ಮೇಲೆ ಹಾಗೂ ಬಲ ಕಾಲಿಗೆ ರಕ್ತಗಾಯಗಳಾಗಿದ್ದು ತನ್ನ ಮಗನ ತಲೆಯ ಹಣೆಯ ಮೇಲೆ ಹಾಗೂ ಕಾಲುಗಳಿಗೆ ರಕ್ತ ಗಾಯಗಳಾಗಿರುತ್ತೆ. ಆಟೋದಲ್ಲಿದ್ದ ತನಗೆ ಮತ್ತು ನಮ್ಮ ಗ್ರಾಮದ ವಾಸಿ ಆದಿಮೂರ್ತಿ ರವರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಗಾಯಗೊಂಡಿದ್ದ ತನ್ನ ಗಂಡ ನಾರಾಯಣಸ್ವಾಮಿ ಹಾಗೂ ಮಗ ಅಖಿಲ್ ರವರನ್ನು  ಯಾವುದೋ ಆಟೋದಲ್ಲಿ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲೆನ್ಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ತನ್ನ ಗಂಡ ನಾರಾಯಣಸ್ವಾಮಿ ರವರನ್ನು  ರಾತ್ರಿ ಸುಮಾರು  7-30 ಗಂಟೆ ಸಮಯಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:05/01/2021 ರಂದು ರಾತ್ರಿ ಸುಮಾರು 8-15 ಗಂಟೆಗೆ ತನ್ನ ಗಂಡ ನಾರಾಯಣಸ್ವಾಮಿ ರವರು ಮೃತಪಟ್ಟಿರುತ್ತಾರೆಂದು ವೈದ್ಯರು ತಿಳಿಸಿರುತ್ತಾರೆ. ತನ್ನ ಗಂಡನಿಗೆ ಆಗಿದ್ದ ಗಾಯಗಳಿಗೆ ಚಿಕಿತ್ಸೆ ಪಡಿಸಲು ಜೊತೆಯಲ್ಲಿ ನಾನೊಬ್ಬಳೇ ಹೋಗಿದ್ದರಿಂದ ಹಾಗೂ ರಾತ್ರಿ ಠಾಣೆಗೆ ಬರಲು ವಾಹನಗಳ ಸೌಲಭ್ಯ ಇಲ್ಲದೇ ಇದ್ದಿದ್ದರಿಂದ ತನ್ನ ತಮ್ಮನಿಗೆ ವಿಚಾರವನ್ನು ತಿಳಿಸಿ, ಈಗ ತಡವಾಗಿ ಬಂದು ದೂರನ್ನು ನೀಡುತ್ತಿದ್ದೇನೆ, ಮೃತ ದೇಹವು ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿದ್ದು ಮುಂದಿನ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರುತ್ತೇನೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.03/2021  ಕಲಂ. 279,337  ಐ.ಪಿ.ಸಿ:-

  ದಿನಾಂಕ 05/01/2021 ರಂದು ಸಂಜೆ 6:15 ಗಂಟೆಯಲ್ಲಿ ಪಿರ್ಯಾದಿ ದಸ್ತಗಿರ್ ಬಿನ್ ಶೇಕ್ ಲೇಟ್ ಮಹಬೂಬ್, ರವರು ತನ್ನ ಅಳಿಯನಾದ ಮನ್ಸೂರ್ ರವರ ಮೂಲಕ ಕಳುಹಿಸಿ ಕೊಟ್ಟ ದೂರಿನ ಸಾರಾಂಶವೇನೆಂದರೆ, ದಿನಾಂಕ 01/01/2021 ರಂದು ಬೆಳಿಗ್ಗೆ ಸುಮಾರು 5:30 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಎತ್ತಿನ ಗಾಡಿಗೆ ಎತ್ತುಗಳನ್ನು ಕಟ್ಟಿಕೊಂಡು ಗೌರಿಬಿದನೂರಿಗೆ ಹೋಗಲು ಚಿಕ್ಕಬಳ್ಳಾಪುರ ರಸ್ತೆಯ ಹಿರೇಬಿದನೂರು KSRTC ಡಿಪೋ ಮುಂಭಾಗದ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ನಂಬರ್ KA-05-MU-4887 ಬಲೆನೊ ಕಾರನ್ನು ಚಾಲಕ ಹರೀಶ್ ಎಂಬುವನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ತನ್ನ ಎತ್ತಿನ ಗಾಡಿಗೆ ರಭಸವಾಗಿ ಡಿಕ್ಕಿ ಹೊಡೆದ ಕಾರಣ ತನ್ನ ಬಲಕೈ ಗೆ ತರಚಿದ ರಕ್ತಗಾಯವಾಗಿ ತಲೆಯ ಹಿಂಭಾಗಕ್ಕೆ ಊತದ ಗಾಯವಾಯಿತು. ಹಾಗೂ ತನ್ನ ಎತ್ತಿನ ಗಾಡಿ ಜಖಂಗೊಂಡಿದ್ದು ಎತ್ತುಗಳು ಸಹ ಗಾಯಗೊಂಡಿರುತ್ತವೆ. ಗಾಯಗೊಂಡ ತನ್ನನ್ನು ತನ್ನ ಅಳಿಯ ಮನ್ಸೂರ್ ಖಾನ್ ರವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಕೆ.ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿರುತ್ತಾರೆ. ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಈ ದಿನ ತಡವಾಗಿ ದೂರು ನೀಡುತ್ತಿದ್ದು ಅಪಘಾತಪಡಿಸಿದ KA-05-MU-4887 ಕಾರಿನ ಚಾಲಕ ಹರೀಶ್ ರವರ ಮೇಲೆ ಕಾನೂನು ಕ್ರಮ ಜುರುಗಿಸಲು ಕೋರಿ ನೀಡಿದ ದೂರನ್ನು ಪಡೆದು ಪ್ರಕರಣ ದಾಖಲಿಸಿರುತ್ತೇನೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.04/2021  ಕಲಂ. 279,337,338 ಐ.ಪಿ.ಸಿ:-

  ದಿನಾಂಕ; 06/01/2021 ರಂದು ಸರ್ಕಾರಿ ಗಾಯಾಳು ರಾಮಾಂಜಿನಪ್ಪರವರ ಹೇಳಿಕೆಯನ್ನು ಪಡೆದಿದ್ದರ ಸಂಕ್ಷಿಪ್ತ ಸಾರಾಂಶವೇನೆಂದರೆ, ತಾನು ಈ ದಿನ ದಿನಾಂಕ: 06/01/2021 ರಂದು ಸಂಜೆ 04-00 ಗಂಟೆಯಲ್ಲಿ ತನ್ನ ಬಾಬತ್ತು ದ್ವಿಚಕ್ರವಾಹನ  ಸಂಖ್ಯೆ KA-52-J-0232  ರ UNICON  ದ್ವಿಚಕ್ರವಾಹನದಲ್ಲಿ ಫೈರ್ ಇಂಜಿನ್ ಆಫೀಸ್ ಬಳಿ ಇರುವ ನಿಜಾಮ್ ರವರ ಬಳಿಗೆ ಹೋಗಲು ದರ್ಗಾದ ಬಳಿ ಇರುವ ಹಿರೇಬಿದನೂರು ಬೈಪಾಸ್ ರಸ್ತೆ ಯಲ್ಲಿ ತನ್ನ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಹಿಂದೂಪುರದ ಕಡೆ ಯಿಂದ ಒಂದು ಕಾರನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆದ ಪರಿಣಾಮ ತಾನು ದ್ವಿಚಕ್ರ ವಾಹನದೊಂದಿಗೆ ಕೆಳಗೆ ಬಿದ್ದು ಹೋಗಿ ತನ್ನ ಎಡಕಾಲು ಮೂಳೆ ಮುರಿದುಹೋಗಿರುತ್ತದೆ.  ಹಾಗೂ ಎಡಕಣ್ಣಿನ ಉಬ್ಬಿನ ಮೇಲ್ಬಾಗದ ಹಣೆಯ ಮೇಲೆ ರಕ್ತಗಾಯವಾಗಿರುತ್ತದೆ.  ತನಗೆ ಅಪಘಾತ ವುಂಟು ಮಾಡಿದ ಕಾರ್ ನಂಬರ್ KA-22-N-2109 ಆಗಿದ್ದು, ಆತನ ಹಸರು ಮುಸಾವೀರ್ ಪಾಷ ಬಿನ್ ಮಹಮದ್ ಇಕ್ಬಾಲ್ ಆಗಿರುತ್ತಾರೆ.  ತನಗೆ ಅಪಘಾತವುಂಟು ಮಾಡಿದ ಕಾರಿನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.03/2021 ಕಲಂ. 279,337  ಐ.ಪಿ.ಸಿ:-

  ದಿನಾಂಕ 05/01/2021 ರಂದು ಸಂಜೆ 5-30 ಗಂಟೆಗೆ ಪಿರ್ಯಾಧಿ ಗಿರೀಶ ಬಿ.ಡಿ. ಬಿನ್ ಬಿ.ಹೆಚ್. ದೇವರಾಜು   ಬಾಳಗಂಚಿ ಗ್ರಾಮ, ಹಿರೆಸಾವೆ ಹೋಬಳಿ   ಚೆನ್ನರಾಯಪಟ್ಟಣ  ತಾಲ್ಲೂಕು, ಹಾಸನ ಜಿಲ್ಲೆ ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ದಿನಾಂಕ 04/01/2021 ರಂದು ಬೆಳಗಿನಜಾವ ಸುಮಾರು 5-30 ಗಂಟೆಯ ಸಮಯದಲ್ಲಿ ತಾನು ತಮ್ಮ ಗ್ರಾಮದಲ್ಲಿರುವಾಗ ತನ್ನ ತಮ್ಮ ಪ್ರದೀಪ್ ಕುಮಾರ್ ಬಿನ್ ಬಿ.ಹೆಚ್. ದೇವರಾಜು, 33 ವರ್ಷ ರವರಿಗೆ ದಿನಾಂಕ 04/01/2020 ರಂದು ಬೆಳಗಿನ ಜಾವ ಸುಮಾರು 1-30  ಗಂಟೆಯ ಸಮಯದಲ್ಲಿ ಜಿಕ್ಕಬಳ್ಳಾಪುರ ತಾಲ್ಲೂಕಿನ ಬಂಡಹಳ್ಳಿ ಕ್ರಾಸ್ ಹತ್ತಿರ ಎನ್.ಹೆಚ್. 44 ರ ರಸ್ತೆಯಲ್ಲಿ ರಸ್ತೆ ಅಪಘಾತವಾಗಿದ್ದು, ಬೆಂಗಳೂರುನ ನಾಗರಬಾವಿಯ ಯುನಿಟಿ ಲೈಫ್ ಲೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವಿಷಯ ತಿಳಿಯಿತು ಆದ್ದರಿಂದ ನಾನು ತಕ್ಷಣ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಷಯ ನಿಜವಾಗಿತ್ತು. ನನ್ನ ತಮ್ಮ ಪ್ರದೀಪ್ ಕುಮಾರ್ ರವರ ಬಲಕಾಲಿಗೆ ರಕ್ತಗಾಯ ಪಕ್ಕೆಯ ಬಲಭಾಗಕ್ಕೆ ಮೂಗೇಟು ಆಗಿತ್ತು. ವಿಚಾರಣೆ ಮಾಡಲಾಗಿ ತನ್ನ ತಮ್ಮನ ಬಾಬತ್ತು ಕೆಎ20-ಸಿ-8892 ರ ಕ್ಯಾಂಟರ್ ವಾಹನದಲ್ಲಿ ಬಾಳೆಕಾಯಿ ಲೋಡು ಮಾಡಿಕೊಂಡು ಬರಲು ಆಂದ್ರ ಪ್ರದೇಶದ ಪುಲವೆಂದಲಗೆ ಹೋಗಲು ಚಿಕ್ಕಬಳ್ಳಾಪುರ ಮಾರ್ಗವಾಗಿ ಮೇಲ್ಕಂಡ ಸ್ಥಳದಲ್ಲಿ ತನ್ನ ತಮ್ಮ ಪ್ರದೀಪ್ ಕುಮಾರ್ ಬಿನ್ ಬಿ.ಹೆಚ್. ದೇವರಾಜು ರವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಹೈದ್ರಬಾದ್ ಕಡೆಯಿಂದ ಬಂದ ಕೆಎ51-ಎಬಿ-2042 ರ ಕಂಟೈನರ್ ವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಯಾವುದೇ ಸೂಚನೆಗಳನ್ನು ನೀಡದೇ ಯುಟರ್ನ್ ಮಾಡಿದ್ದರಿಂದ ತನ್ನ ತಮ್ಮ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮೇಲ್ಕಂಡ ವಾಹನವು ಕೆಎ51-ಎಬಿ-2042 ರ ಕಂಟೈನರ್ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ತನ್ನ ತಮ್ಮನಿಗೆ ಮೇಲ್ಕಂಡಂತೆ ಗಾಯಗಳಾಗಿದ್ದು, ಆಗ ನಮ್ಮ ವಾಹನದ ಹಿಂದಗಡೆಯಿಂದ ಮತ್ತೊಂದು ವಾಹನವನ್ನು ಚಾಲನೆ ಮಾಡಿಕೊಂಡು ಬಂದ ನನ್ನ ತಮ್ಮನ ಸೇಹಿತ ಚಂದ್ರಶೇಖರ್ ರವರು ಸ್ಥಳದಲ್ಲಿ ಉಪಚರಿಸಿ ಚಿಕಿತ್ಸೆಗಾಗಿ ಅಲ್ಲಿಗೆ ಬಂದ ಹೈವೇ ಪೆಟ್ರೋಲ್ ಪೊಲೀಸ್ ವಾಹನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಷಯ ತಿಳಿದು ಅಲ್ಲಿಗೆ ಬಂದ ನಮ್ಮ ಕಂಪನಿಯ ನಾಗರಾಜ ಬಿನ್ ಹನುಮಂತ, 24 ವರ್ಷ, ನೌಬಾದ್, ಬೀದರ್ ಟೌನ್ ರವರು ಬೆಂಗಳೂರುನ ನಾಗರಬಾವಿಯ ಯುನಿಟಿ ಲೈಫ್ ಲೈನ್ ಆಸ್ಪತ್ರೆಯಲ್ಲಿ ದಾಖಲು ಮಾಡಿರುವ ವಿಚಾರ ತಿಳಿಯಿತು. ಆದ್ದರಿಂದ ರಸ್ತೆ ಅಪಘಾತ ಉಂಟುಪಡಿಸಿದ ಕೆಎ51-ಎಬಿ-2042 ರ ಕಂಟೈನರ್ ವಾಹನದ ಚಾಲಕ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸ ಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. ಮನುಷ್ಯ ಕಾಣೆ:-

  ದಿನಾಂಕ:06-01-2021 ರಂದು ಸಂಜೆ 5-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ  ಸುರೇಶ್ ಪಿ.ವಿ ಬಿನ್ ವೆಂಕಟರವಣಪ್ಪ, 27 ವರ್ಷ, ಬೋವಿ ಜನಾಂಗ, ವಕೀಲ ವೃತ್ತಿ, ಪೆದ್ದರೆಡ್ಡಿಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, ತನ್ನ ತಂದೆಯಾದ ವೆಂಕಟರವಣಪ್ಪ ಬಿನ್ ಲೇಟ್ ರಾಮಪ್ಪರವರಿಗೆ ಸುಮಾರು 60 ವರ್ಷ ವಯಸ್ಸಾಗಿದ್ದು, ಅವರಿಗೆ ಮಾತು ಬರುವುದಿಲ್ಲಾ ಹಾಗೂ ಮಾನಸಿಕ ತೊಂದರೆಯಿಂದ ಚಿಕಿತ್ಸೆಗೆ ಒಳಪಟ್ಟಿದ್ದರು ಹಾಗೂ ಯಾರನ್ನೂ ಮಾತನಾಡುವುದಿಲ್ಲಾ. ಪ್ರತಿ ದಿನ ತನ್ನ ತಂದೆ ತಮ್ಮ ಬೋರ್ ವೆಲ್ ಹತ್ತಿರ ಹೋಗಿ ಬರುತ್ತಿದ್ದರು. ನಿನ್ನೆ ದಿನಾಂಕ:05-01-2021 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ ಕಲ್ಲಿಪಲ್ಲಿ ಬಸ್ ಹತ್ತಿದ್ದಾನೆ ಆ ಸಮಯಕ್ಕೆ ಯಾರೂ ನೋಡದ ಕಾರಣ ಬಾಗೇಪಲ್ಲಿಗೆ ಹೋಗಿ ಬಸ್ ಸ್ಟ್ಯಾಂಡ್ ನಲ್ಲಿ ಇಳಿದುಕೊಂಡಿದ್ದಾನೆ ಎಂದು ಬಸ್ ಕಂಡಕ್ಟರ್ ಮೂಲಕ ಮಾಹಿತಿಯನ್ನು ಪಡೆದುಕೊಂಡಿದ್ದು, ತಮ್ಮ ತಂದೆಯವರನ್ನು ಹಲವು ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲಾ. ಕಾಣೆಯಾಗಿರುವ ತಮ್ಮ ತಂದೆಯವರನ್ನು ಪತ್ತೆ ಮಾಡಿಕೊಡಲು ಕೋರಿರುವುದಾಗಿರುತ್ತೆ.