ದಿನಾಂಕ : 05/10/2019ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 119/2019 ಕಲಂ.279-304(ಎ) ಐ.ಪಿ.ಸಿ:-

     ದಿನಾಂಕ 04/10/2019 ರಂದು ಪಿರ್ಯಾದಿದಾರರಾದ ಶ್ರೀ ಗಂಗಪ್ಪ ಬಿನ್ ಲೇಟ್ ಗುಜ್ಜಪ್ಪ, ಐ ಕುರುಪ್ಪಲ್ಲಿ ಗ್ರಾಮ ಚಿಂತಾಮಣಿ ತಾಲ್ಲೂಕುರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ. ತಾನು ಮತ್ತು ತನ್ನ ತಮ್ಮನಾದ ಚಿನ್ನಗಂಗಪ್ಪರವರು ಖಾಸಾ ಅಣ್ಣ ತಮ್ಮಂದಿರಾಗಿದ್ದು ನನ್ನ ತಮ್ಮನಾದ ಚಿನ್ನ ಗಂಗಪ್ಪರವರಿಗೆ ಇಬ್ಬರೂ ಗಂಡು ಮಕ್ಕಳು ಒಂದು ಹೆಣ್ಣು ಮಗು ಆಗಿದ್ದು ಆ ಪೈಕಿ ಒಂದನೇ ಸುರೇಶ ಮತ್ತು ಮಗಳಾದ ಸುಜಾತಗೆ ಮದುವೆಯಾಗಿದ್ದು 2ನೇ ಮಗನಾದ ಹರೀಶನಿಗೆ 28 ವರ್ಷ ವಯಸ್ಸಾಗಿದ್ದು ಮದುವೆ ಇಲ್ಲವಾಗಿದ್ದು ಲಾರಿ ಚಾಲಕನಾಗಿ ಜೀವನ ಮಾಡಿಕೊಳ್ಳುತ್ತಿದ್ದು  ದಿನಾಂಕ 07/09/2019 ರಂದು ್ಲ ಮನೆ ಕಟ್ಟಲು ಸಿಮೆಂಟ್ ಬೇಕಾಗಿದ್ದು ಅವರ ಬಾಬತ್ತು ಕೆಎ 50 ಕೆ 670 ಹಿರೋ ಹೊಂಡಾ ದ್ವಿ ಚಕ್ರ ವಾಹನದಲ್ಲಿ ಯಗವಕೋಟೆಗೆ ಹೋಗಿ ಸಿಮೆಂಟ್ ಖರೀದಿ ಮಾಡಿ ಪುನಃ ವಾಪಸ್ಸು ಊರಿಗೆ ಬರಲು ಅದೇ ದ್ವಿ ಚಕ್ರ ವಾಹನದಲ್ಲಿ ಯರ್ರಯ್ಯಗಾರಹಳ್ಳಿ ಕಾಲೋನಿ ಮನೆಗಳ ಬಳಿ ಸಂಜೆ ಸುಮಾರು 05.00 ಗಂಟೆಯಲ್ಲಿ ದ್ವಿ ಚಕ್ರ ವಾಹನವನ್ನು ತಾನೆ ಸವಾರಿ ಮಾಡಿಕೊಂಡು ಅತಿ ವೇಗ ಮತ್ತು ಅಜಾಗರುಕತೆಯಿಂದ ಸವಾರಿ ಮಾಡಿಕೊಂಡು ಬಂದು ಟಾರ್ ರಸ್ತೆಯ ಎಡ ಬದಿಯಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ದ್ವಿ ಚಕ್ರ ವಾಹನದ ಮುಂಭಾಗ ಪೂತರ್ಿ ಜಖಂಗೊಂಡು ನನ್ನ ತಮ್ಮನ ಮಗ ಹರೀಶನಿಗೆ ತಲೆಗೆ ತೀವ್ರವಾದ ರಕ್ತ ಗಾಯವಾಗಿ ಪ್ರಜ್ಙಾ ಹೀನನಾಗಿದ್ದ ವಿಚಾರವನ್ನು ಯರ್ರಯ್ಯಗಾರಹಳ್ಳಿ ವಾಸಿ ಶ್ಯಾಮಣ್ಣರವರು ದೂರವಾಣಿ ಮೂಲಕ ನನ್ನ ತಮ್ಮನ ಒಂದನೇ ಮಗ ಸುರೇಶ್ ರವರಿಗೆ ತಿಳಿಸಿದ್ದರ ಮೇರೆಗೆ ನಮ್ಮ ಗ್ರಾಮದಿಂದ ನನ್ನ ತಮ್ಮನ ಒಂದನೇ ಮಗ ಸುರೇಶ ರವರು ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ಆ ತಕ್ಷಣ ಯಾರೋ ಕರೆಸಿದ್ದ ಸಕರ್ಾರಿ 108 ಅಂಬುಲೇನ್ಸ್ ನಲ್ಲಿ ಕೋಲಾರದ ಆರ್ ಎಲ್ ಜಾಲಪ್ಪ ಆಸ್ವತ್ರೆಗೆ ಎತ್ತಿಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು ಅಲ್ಲಿನ ವೈಧ್ಯರ ಪರಿಶೀಲಿಸಿ ಅವರು ನೀಡಿದ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ 08/09/2019 ರಂದು ಬೆಂಗಳೂರಿನ ಪಲ್ಸ್ ಆಸ್ವತ್ರೆಗೆ ಚಿಕಿತ್ಸೆಗಾಗಿ ಸೇರಿಸಿದ್ದು ಅಲ್ಲಿಯು ಸಹ ಗುಣ ಮುಖನಾಗದೇ ಹೆಚ್ಚಿನ ಚಿಕಿತ್ಸೆಗೆ ದಿನಾಂಕ 13/09/2019 ರಂದು ವಿಕ್ಟೋರಿಯಾ ಆಸ್ವತ್ರೆಗೆ ಸೇರಿಸಿ ಇಲ್ಲಿಯವರೆವಿಗೂ ಚಿಕಿತ್ಸೆ ಪಡಿಸಿರುತ್ತಾರೆ ಆದರೆ ಚಿಕಿತ್ಸೆ ಪಲಕಾರಿಯಾಗದೇ ಈ ದಿನ ದಿನಾಂಕ 04/10/2019 ರಂದು ಸಂಜೆ ಸುಮಾರು 04.25 ಗಂಟೆಯ ಸಮಯದಲ್ಲಿ ವಿಕ್ಟೋರಿಯಾ ಆಸ್ವತೆಯಲ್ಲಿದ್ದ ಗಾಯಾಳು ಹರೀಶ ಬಿನ್ ಚಿನ್ನಗಂಗಪ್ಪ ರವರು ಮೃತ ಪಟ್ಟಿದ್ದು ಮೃತ ದೇಹವು ವಿಕ್ಟೋರಿಯಾ ಆಸ್ವತ್ರೆಯ ಶವಗಾರದಲ್ಲಿ ಇಟ್ಟಿರುತ್ತಾರೆ ಆದ್ದರಿಂದ ತಾವು ಈ ಬಗ್ಗೆ ಸೂಕ್ತವಾದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುವುದಾಗಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 282/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 04/10/2019 ರಂದು ಸಂಜೆ 04.40  ಗಂಟೆ ಸಮಯದಲ್ಲಿ ಪಿ ಎಸ್ ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 04/10/2019 ರಂದು ಸಂಜೆ 04.30 ಗಂಟೆಯಲ್ಲಿ ತಾನು ಠಾಣೆಯಲ್ಲಿದ್ದಾಗ ತನಗೆ ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಸಾಮಸೇನಹಳ್ಳಿ ಗ್ರಾಮದ ಅಂಜಿನಮ್ಮ ಕೋಂ ಲೇಟ್ ಕದಿರಪ್ಪ, 45 ವರ್ಷ, ನಾಯಕರು, ಕೂಲಿಕೆಲಸ, ಸಾಮಸೇನಹಳ್ಳಿ ಗ್ರಾಮ ರವರು, ಅವರ ಚಿಲ್ಲರೆ ಅಂಗಡಿ ಬಳಿ ಯಾವುದೇ ಪರವಾನಗಿ ಇಲ್ಲದೆ ಮಧ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ ಈ ಬಗ್ಗೆ ಆಸಾಮಿಯ ವಿರುದ್ದ ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಲು ಸೂಚಿಸಿದ ಮೇರೆಗೆ ಈ ಪ್ರ ವ ವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 283/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 04/10/2019 ರಂದು 6.40  ಗಂಟೆಸಸಮಯದಲ್ಲಿ ಪಿ ಎಸ್ ಐ   ಸಾಹೇಬರು ಸೂಚಿಸಿದ ವರದಿಯ ಸಾರಾಂಶವೇನೆಂದರೆ ದಿನಾಂಕ;-09-2019 ರಂದು ಸಂಜೆ-6.30 ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನುಗುತಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ಪಾಪಣ್ಣ. 40ವರ್ಷ,ಬಲಿಜಿಗರು. ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಎಂಬುವರು ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ  ಈ ಬಗ್ಗೆ ಅಸಾಮಿಯ ವಿರುದ್ದ  ಕಲಂ; 15(ಎ) 32(3)ಕೆ,ಇ,ಆಕ್ಟ್ ರೀತ್ಯಾ  ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ  ಪ್ರವವರದಿ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 284/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 04/10/2019 ರಂದು ರಾತ್ರಿ 20.40  ಗಂಟೆಸಸಮಯದಲ್ಲಿ ಪಿ ಎಸ್ ಐ   ಸಾಹೇಬರು ಸೂಚಿಸಿದ ವರದಿಯ ಸಾರಾಂಶವೇನೆಂದರೆ ದಿನಾಂಕ;04-10-2019 ರಂದು ರಾತ್ರಿ ಗಂಟೆಯಲ್ಲಿ ನಾನು ಠಾಣೆಯಲ್ಲಿದ್ದಾಗ ನನಗೆ ಬಂದ ಖಚಿತ ಮಾಹಿತಿ ಏನೆಂದರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ನಲ್ಲಕದಿರೇನಹಳ್ಳಿಗ್ರಾಮದ ಮುನಿಕೃಷ್ಣಪ್ಪ ಬಿನ್ ಬೊಮ್ಮಯ್ಯ. 45ವರ್ಷ,ಗೊಲ್ಲರು. ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ಜಿಲ್ಲೆ ಎಂಬುವರು ಚಿಲ್ಲರೆ ಅಂಗಡಿಯ ಬಳಿ ಯಾವುದೇ ಪರವಾನಗಿ ಇಲ್ಲದೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿರುವುದಾಗಿ ನನಗೆ ಖಚಿತ ಮಾಹಿತಿ ಬಂದಿರುತ್ತದೆ  ಈ ಬಗ್ಗೆ ಅಸಾಮಿಯ ವಿರುದ್ದ  ಕಲಂ; 15(ಎ) 32(3)ಕೆ,ಇ,ಆಕ್ಟ್ ರೀತ್ಯಾ  ಆಸಾಮಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲು ಸೂಚಿಸಿದ  ಪ್ರ.ವ.ವರದಿ.

  1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 372/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 05/10/2019 ರಂದು ಮದ್ಯಾಹ್ನ 1.45 ಗಂಟೆಗೆ ಡಿ.ಸಿ.ಬಿ ಪೊಲೀಸ್ ಠಾಣೆಯ CHC-198 ಮಂಜುನಾಥ ರವರು ಮಾಲು, ಅಮಾನತ್ತು ಪಂಚನಾಮೆ ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 05/10/2019 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಸಿ.ಬಿ/ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಐ ಮುನಿಕೃಷ್ಣ.ಡಿ.ಹೆಚ್ ರವರ ಆದೇಶದಂತೆ ತಾನು ಹಾಗೂ CPC-365 ಮಲ್ಲಿಕಾರ್ಜುನ ರವರು ಚಿಂತಾಮಣಿ ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆಗಳ ಪತ್ತೆಯ ಕಾರ್ಯದಲ್ಲಿದ್ದಾಗ ಚಿಂತಾಮಣಿ ತಾಲ್ಲೂಕು, ವಿರೋಪಾಕ್ಷಪುರ ಗ್ರಾಮದ ಕೃಷ್ಣಮೂರ್ತಿ ಬಿನ್ ಬೀಮಣ್ಣ ರವರು ತಮ್ಮ ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಪಂಚರನ್ನು ಬರಮಾಡಿಕೊಂಡು ಕೃಷ್ಣಮೂರ್ತಿ ಬಿನ್ ಬೀಮಣ್ಣ ರವರ ಮನೆಯ ಬಳಿ ದಾಳಿ ಮಾಡಲಾಗಿ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದು, ಸ್ಥಳದಲ್ಲಿದ್ದ ಆಸಾಮಿಯನ್ನು ವಶಕ್ಕೆ ಪಡೆದು ವಿಚಾರಮಾಡಲಾಗಿ ಕೃಷ್ಣಮೂರ್ತಿ ಬಿನ್ ಬೀಮಣ್ಣ, 20 ವರ್ಷ, ಕುರುಬರು, ಕಾರ್ ಪೆಂಟರ್ ಕೆಲಸ, ವಿರೋಪಾಕ್ಷಪುರ ಗ್ರಾಮ, ಚಿಂತಾಮಣಿ ತಾಲ್ಲೂಕು ಎಂದು ತಿಳಿಸಿದ್ದು ನಂತರ ಸ್ಥಳದಲ್ಲಿದ್ದ 1).90 ಎಂ.ಎಲ್ HAYWARDS CHEERS WHISKY ಕಂಪನಿಯ 20 ಟೆಟ್ರಾ ಪಾಕೆಟ್ ಗಳು , 2).90 ಎಂ.ಎಲ್ HAYWARDS CHEERS WHISKY ಕಂಪನಿಯ ಎರಡು ಖಾಲಿ ಟೆಟ್ರಾ ಪಾಕೆಟ್ ಗಳು, 3). ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು, 4).ಒಂದು ಲೀಟರ್ ನ ಒಂದು ಖಾಲಿ ವಾಟರ್ ಬಾಟೆಲ್ ಗಳನ್ನು ಪಂಚರ ಸಮಕ್ಷಮ ಮದ್ಯಾಹ್ನ 12.00 ಗಂಟೆಯಿಂದ 1.00 ಗಂಟೆಯವರೆಗೆ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು, ಯಾವುದೇ ಪರವಾನಿಗೆ ಇಲ್ಲದೆ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಆಸಾಮಿ ಕೃಷ್ಣಮೂರ್ತಿ ಬಿನ್ ಬೀಮಣ್ಣ ರವರನ್ನು ವಶಕ್ಕೆ ಪಡೆದು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಾಗಿರುತ್ತೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ. 269/2019 ಕಲಂ.379 ಐ.ಪಿ.ಸಿ:-

     ದಿನಾಂಕ: 04/10/2019 ರಂದು ಸಂಜೆ 4-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಜಮೀರ್ ಬಿನ್ ಲೇಟ್ ಚೋಟುಸಾಬ್  ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ತಾನು ಆಟೋ ಚಾಲಕ ನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 04/10/2019 ರಂದು ಸಂಜೆ 4-00 ಗಂಟೆಗೆ ತಾನು ತನ್ನ ಸ್ವಂತ ಕೆಲಸದ ನಿಮಿತ್ತ ಆಂದ್ರಪ್ರದೇಶದ ಮದನಪಲ್ಲಿ ನಗರಕ್ಕೆ ಹೋಗಲು ಚಿಂತಾಮಣಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಿದ್ದು, ನಂತರ ಮದನಪಲ್ಲಿಗೆ ಹೋಗುವ ಬಸ್ ಇದೇ ದಿನ ಸಂಜೆ 4-15 ಗಂಟೆಯ ಸಮಯಕ್ಕೆ ಬಂದಾಗ ಜಾಸ್ತಿಜನ ಪ್ರಯಾಣಿಕರಿದ್ದು ಪ್ರಯಾಣಿಕರು ಬಸ್ ನೊಳಗೆ ಹತ್ತಲು ನೂಕು ನುಗ್ಗುಲು ಉಂಟಾಗಿದ್ದು ತಾನು ಸಹ ಬಸ್ ಗೆ ಹತ್ತಲು ಬಾಗಿಲು ಬಳಿ ಹೋದಾಗ ತನ್ನ ಹಿಂದುಗಡೆ ಪ್ರಯಾಣಿಕರು ಜಾಸ್ತಿಯಿದ್ದು ಆಗ ಯಾರೋ ತನ್ನ ಪ್ಯಾಂಟ್ ನ ಎಡಭಾಗದ ಜೇಬಿಗೆ ಕೈ ಹಾಕಿದ್ದು ಕೂಡಲೆ ತಾನು ಹಿಂದುರುಗಿ ನೋಡುವಷ್ಟರಲ್ಲಿ ತನ್ನ ಹಿಂದುಗಡೆಯೇ ಇದ್ದ ಒಬ್ಬ ಮಹಿಳೆಯು ತನ್ನ ಪ್ಯಾಂಟ್ ಜೇಬಿಗೆ ಕೈ ಹಾಕಿ ಜೇಬಿನಲ್ಲಿದ್ದ 1500 ರೂಗಳ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಓಡಿಹೋಗಲು ಪ್ರಯತ್ನಿಸಿದ್ದು ತಾನು ಕೂಡಲೇ ಕಿರುಚಿಕೊಂಡು ಆಕೆಯನ್ನು ತಾನು ಮತ್ತು ಅಲ್ಲಿಯೇ ಇದ್ದ ನೂರ್ ಅಹಮದ್, ಅಲ್ಲಿಯೇ ಬಸ್ ನಿಲ್ದಾಣದಲ್ಲಿ ಸೌತೆಕಾಯಿ ವ್ಯಾಪಾರ ಮಾಡುತ್ತಿದ್ದ ನಾಗರಾಜ್ ಮತ್ತು ಇತರರು ಓಡಿಹೋಗಿ ಆಕೆಯನ್ನು ಹಿಡಿದುಕೊಂಡಿದ್ದು ನಂತರ ಪೊಲೀಸ್ ಠಾಣೆಗೆ ಕರೆಮಾಡಿ ವಿಷಯ ತಿಳಿಸಿದ್ದು ಕೂಡಲೆ ಪೊಲೀಸರು ಸ್ಥಳಕ್ಕೆ ಬಂದಿದ್ದು ತಮ್ಮ ಸಮಕ್ಷಮ  ಆಕೆಯ ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಕುಮಾರಿ @ ಮೇರಿ @ ಮೌನಿಕ ಕೋಂ ರಾಜೇಶ್ , 20 ವರ್ಷ, ಎರಕಲ ಜನಾಂಗ, ಕೂಲಿ ಕೆಲಸ ವಾಸ ಬಿಡಕಿ ಗ್ರಾಮ, ಕಡಪ ನಗರದಿಂದ ಸುಮಾರು 12 ಕಿಲೋಮೀಟರ್  ಕಡಪ ಜಿಲ್ಲೆ(ಆಂಧ್ರಪ್ರದೇಶ) ರಾಜ್ಯ ಎಂದು ತಿಳಿಸಿದ್ದು ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಆದ್ದರಿಂದ ತನ್ನ ಜೇಬಿಗೆ ಕೈಹಾಕಿ ಜೇಬಿನಲ್ಲಿದ್ದ ತನ್ನಬಾಬತ್ತು 1500 ರೂಗಳ  ನಗದು ಹಣವನ್ನು ಕಳ್ಳತನ ಮಾಡಿದ ಕುಮಾರಿ @  ಮೇರಿ  @ ಮೌನಿಕ ಕೋಂ ರಾಜೇಶ್ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿರುತ್ತಾರೆ.

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 420/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಎನ್.ಮೋಹನ್  ಆದ ನಾನು    ಠಾಣಾಧಿಕಾರಿಗಳಿಗೆ ಸೂಚಿಸುವುದೇನೆಂದರೆ, ಈ ದಿನ ದಿನಾಂಕ:05/10/19 ರಂದು ಬೆಳಿಗ್ಗೆ 10-00 ಗಂಟೆಯ ಸಮಯದಲ್ಲಿ  ನನಗೆ  ಗೌರಿಬಿದನೂರು ತಾಲ್ಲೂಕು ಹುಣಸೇನಹಳ್ಳಿ ಗ್ರಾಮದಲ್ಲಿ ಯಾರೋ ತನ್ನ  ಮನೆ ಬಳಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ ಮೇರೆಗೆ ಪೊಲೀಸ್ ಸಿಬ್ಬಂದಿಯವರಾದ ಪಿ.ಸಿ.302 ಕುಮಾರ್ ನಾಯಕ ಮಹಿಳಾ ಪಿ.ಸಿ.247 ಕುಮಾರಿ ಸೌಮ್ಯ ರವರನ್ನು ಕರೆದುಕೊಂಡು    ಸರ್ಕಾರಿ ಜೀಪ್ ಸಂಖ್ಯೆ:ಕೆ.ಎ-40, ಜಿ-281 ರಲ್ಲಿ  ಹುಣಸೇನಹಳ್ಳಿ ಗ್ರಾಮಕ್ಕೆ ಹೋಗಿ, ಅಲ್ಲಿ ಪಂಚರನ್ನು ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ, ಪೊಲೀಸರಿಗೆ ಸಹಕರಿಸುವಂತೆ ಕೇಳಲಾಗಿ ಅವರು ಒಪ್ಪಿಕೊಂಡ ನಂತರ  ಪಂಚರೊಂದಿಗೆ ಮಾಹಿತಿ ಇದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಮನೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಯಾರೋ  ಒಬ್ಬ ಮಹಿಳೆ  ಮನೆಯ ಮುಂದೆ ನಿಂತು ಚೀಲವನ್ನು ಹಿಡಿದುಕೊಂಡು, ಅದರಿಂದ ಮದ್ಯದ ಪಾಕೆಟ್ಗಳನ್ನು ತೆಗೆದು, ಅಲ್ಲೇ ಕುಳಿತಿದ್ದ ಇಬ್ಬರು ವ್ಯಕ್ತಿಗಳಿಗೆ ತೆಗೆದುಕೊಡುತ್ತಿದ್ದು,  ಆ ಇಬ್ಬರು ವ್ಯಕ್ತಿಗಳು ಮಧ್ಯಪಾನ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು ನಾವು ಅವರ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮಧ್ಯಪಾನ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಓಡಿಹೋಗಿದ್ದು, ಚೀಲ ಹಿಡಿದು ಮಧ್ಯದ ಪಾಕೆಟ್ ಗಳನ್ನು ಕೊಡುತ್ತಿದ್ದ ಮಹಿಳೆಯನ್ನು ಮ.ಪಿ.ಸಿ.247 ಸೌಮ್ಯ ರವರು ಹಿಡಿದುಕೊಂಡು, ಆಕೆಯ  ಹೆಸರು ವಿಳಾಸ ಕೇಳಲಾಗಿ ಆಕೆ ತನ್ನ ಹೆಸರು ಶ್ಯಾಮಲ ಕೋಂ ರಾಮು 38 ವರ್ಷ, ನಾಯಕ ಜನಾಂಗ, ಹುಣಸೇನಹಳ್ಳಿ ಗ್ರಾಮ ಗೌರೀಬಿದನೂರು ತಾಲ್ಲೂಕು ಎಂದು ತಿಳಿಸಿದ್ದು, ಈಕೆಯ ಬಳಿ  ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ  90 ML. ಸಾಮರ್ಥ್ಯದ  16 HAYWARDS CHEERS WHISKY ಯ ಮಧ್ಯದ ಟೆಟ್ರಾ ಪಾಕೆಟ್ ಗಳು  ಇದ್ದವು.  ಇವುಗಳ ಒಟ್ಟು  ಬೆಲೆ 485/- ರೂ.ಗಳಾಗಿದ್ದು, ಒಟ್ಟು ಸಾಮರ್ಥ್ಯ 1 ಲೀ. 440 ಎಂ.ಎಲ್. ಆಗಿರುತ್ತೆ. ಸ್ಥಳದಲ್ಲಿ 02  ಖಾಲಿ ಪೇಪರ್ ಗ್ಲಾಸ್ ಗಳು,  2 ಖಾಲಿ ಟೆಟ್ರಾ ಪಾಕೆಟ್ ಗಳು ಬಿದ್ದಿದ್ದವು.  ಸದರಿಯವರಿಗೆ ಇವುಗಳನ್ನು ಮಾರಲು ಹಾಗು ಕುಡಿಯಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿ ಇದೆಯಾ ಎಂದು ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದರಿಂದ ಸ್ಥಳದಲ್ಲಿ  ಬೆಳಿಗ್ಗೆ 11-00 ರಿಂದ 11-30 ಗಂಟೆಯವರೆಗೆ    ಪಂಚರ ಸಮಕ್ಷಮದಲ್ಲಿ ಪಂಚನಾಮೆ ಕ್ರಮ ಜರುಗಿಸಿ, ಮುಂದಿನ ಕ್ರಮಕ್ಕಾಗಿ ಆರೋಪಿಯನ್ನು  ಹಾಗು  ಸ್ಥಳದಲ್ಲಿ ದೊರೆತ ಮಾಲುಗಳನ್ನು ವಶಪಡಿಸಿಕೊಂಡು, ಠಾಣೆಗೆ ಮಧ್ಯಾಹ್ನ 12-30 ಗಂಟೆಗೆ  ವಾಪಸ್ಸು ಬಂದು,  ಆರೋಪಿ ವಿರುದ್ಧ ಕಲಂ: 15[ಎ], 32 ಕ್ಲಾಸ್ [3] ಕೆ.ಇ.ಆಕ್ಟ್ – 1965 ರೀತ್ಯಾ ಸ್ವತಃ ಪ್ರಕರಣವನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲು ಠಾಣಾಧಿಕಾರಿಗೆ ಸೂಚಿಸಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 324/2019 ಕಲಂ. 87 ಕೆ.ಪಿ  ಆಕ್ಟ್:-

     ದಿನಾಂಕ:05/10/2019 ರಂದು ನ್ಯಾಯಾಲಯದ ಪಿಸಿ 89 ರವರು ಘನ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಹಾಜರುಪಸಿದ ವರದಿ ದೂರಿನ ಸಾರಾಂಶವೇನೆಂದರೆ  ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಭಾರದಲ್ಲಿರುವ ಪೊಲೀಸ್ ಇನ್ಸ್ ಪೆಕ್ಟರ್ ಹನುಮಂತರಾಯಪ್ಪ  ರವರು ದಿನಾಂಕ:04-10-2019 ರಂದು ಸಂಜೆ 5-30 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಠಾಣಾ ಸಿಬ್ಬಂದಿಯಾದ ಸಿ,ಪಿ,ಸಿ- 378 ಶ್ರೀನಿವಾಸ ರವರು ನನಗೆ ಪೋನ್ ಮಾಡಿ ಚಿಕ್ಕಬಳ್ಳಾಪುರ ತಾಲೂಕಿನ ಉಪ್ಪಕುಂಟಹಳ್ಳಿ ಗ್ರಾಮ ಪಕ್ಕದಲ್ಲಿರುವ ಗುಟ್ಟೆಯಲ್ಲಿರುವ ಹೊಂಗೆ ಮರದ  ಕೇಳಗೆ ಕೆಲವರು ಕಾನೂನು ಬಾಹಿರವಾಗಿ ಜೂಜಾಟ ಆಡುತ್ತಿದ್ದು ಸ್ಥಳದಲ್ಲಿ ಕಂಡ ಭಾತ್ಮಿದಾರರು ನನಗೆ ಮಾಹಿತಿ ನೀಡಿದ್ದಾರೆಂದು ತಿಳಿಸಿದರ ಮಾಹಿತಿ ಮೇರೆಗೆ, ನಾನು ಠಾಣಾ ಸಿಬ್ಬಂದಿಯಾದ ಸಿ.ಪಿ.ಸಿ-416 ವಾಸು, ಸಿ,ಪಿ,ಸಿ-188 ರಾಥೋಡ್ & ಸಿ,ಪಿ,ಸಿ-198 ನಾಗೇಶ್, ರವರನ್ನು ಕರೆದುಕೊಂಡು ಮಾಹಿತಿ ನೀಡಿದ ಸಿಬ್ಬಂದಿಯಾದ ಸಿ,ಪಿ,ಸಿ-378 ಶ್ರಿನಿವಾಸ ರವರು ಇದ್ದಲ್ಲಿಗೆ ಹೋಗಿ ಸದರಿಯವರನ್ನು  ಕರೆದುಕೊಂಡು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ,ಎಚ್,ಸಿ-43 ವೆಂಕಟಚಲ ರವರೊಂದಿಗೆ ಸಂಜೆ 6-00 ಗಂಟೆಗೆ ಉಪ್ಪಕುಂಟಹಳ್ಳಿ ಗ್ರಾಮಕ್ಕೆ ಹೋಗಿ, ಪಂಚರನ್ನು ಬರಮಾಡಿಕೊಂಡು ಉಪ್ಪಕುಂಟಹಳ್ಳೀ ಗ್ರಾಮದ ಪಕ್ಕದಲ್ಲಿರುವ ಗುಟ್ಟೆಯ ಸ್ವಲ್ಪ ದೂರದ ಮರೆಯಲ್ಲಿ ಜೀಪ್ ನ್ನು ನಿಲ್ಲಿಸಿ ನಿಂತು ನೋಡಲಾಗಿ, ಕೆಲ ಮಂದಿ ಗುಂಪಾಗಿ ಕುಳಿತುಕೊಂಡು ಅಂದರ್-100 ಬಾಹರ್-100 ಎಂದು ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸದರಿಯವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ಧಾಳಿ ಮಾಡಿದಾಗ, ಜೂಜಾಟ ಆಡುತ್ತಿದ್ದವರನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ 1) ಆದಿನಾರಾಯಣಪ್ಪ ಬಿನ್ ಲೇಟ್ ನಾರಾಯಣಪ್ಪ, 57 ವರ್ಷ, ಬೋವಿ ಜನಾಂಗ, ಕೂಲಿ ಕೆಲಸ, ವಾಸ: ಉಪ್ಪಕುಂಟಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲೂಕು, 2) ಮಹೇಂದ್ರ ಬಿನ್ ಬಾಬುರೆಡ್ಡಿ, 22 ವರ್ಷ, ವಕ್ಕಲಿಗರು, ಡ್ರೈವರ್, ವಾಸ: ಕೊಮ್ಮಲಮರಿ ಗ್ರಾಮ,  ಚಿಕ್ಕಬಳ್ಳಾಪುರ ತಾಲ್ಲೂಕು 3) ನವೀನ್ ಬಿನ್ ವೆಂಕಟೆಶಪ್ಪ, 32 ವರ್ಷ, ಬೊವಿ ಜನಾಂಗ, ಕೂಲಿ ಕೆಲಸ, ವಾಸ: ಉಪ್ಪಕುಂಟಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಎಂದು ತಿಳಿಸಿರುತ್ತಾರೆ. ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಜೂಜಾಟದಲ್ಲಿ ಬಳಸಿದ ರೂ 1030/- ಹಣ & ಒಂದು ನ್ಯೂಸ್ ಪೇಪರ್, 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಸಂಜೆ 6-15 ಗಂಟೆಯಿಂದ ರಾತ್ರಿ 7-00 ಗಂಟೆಯಲ್ಲಿ ಜರುಗಿಸಿದ ಧಾಳಿ ಪಂಚನಾಮೆ ಕಾಲದಲ್ಲಿ ಅಮಾನತ್ತುಪಡಿಸಿಕೊಂಡಿರುತ್ತೆ. ಮೇಲ್ಕಂಡ ಆರೋಪಿತರನ್ನು & ಮಾಲುಗಳನ್ನು ಅಸಲು ಪಂಚನಾಮೆಯೊಂದಿಗೆ ರಾತ್ರಿ 7-30 ಗಂಟೆಯಲ್ಲಿ ಹಾಜರುಪಡಿಸುತ್ತಿದ್ದು, ಸದರಿ ಆರೋಪಿತನ ವಿರುದ್ದ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿರುತ್ತೆ.