ದಿನಾಂಕ :05/08/2020 ರ ಅಪರಾಧ ಪ್ರಕರಣಗಳು

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.50/2020 ಕಲಂ. 324,427,447,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ:04/08/2020 ರಂದು ಸಂಜೆ:17:45 ಗಂಟೆಗೆ ನ್ಯಾಯಾಲಯ ಪೇದೆಯಾದ  ಸಿಪಿಸಿ 07 ವಿದ್ಯಾಧರ ರವರು ಘನ ನ್ಯಾಯಾಲಯದಿಂದ ಎನ್.ಸಿ.ಆರ್ 49/2020 ಪ್ರಕರಣವನ್ನು ಐಪಿಸಿ ಪ್ರಕರಣವನ್ನಾಗಿ ದಾಖಲಿಸಿ ತನಿಖೆಕೈಗೊಳ್ಳಲು ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಆದೇಶ ಪ್ರತಿಯ ಸಾರಾಂಶವೇನೆಂದರೆ ದಿನಾಂಕ:31/07/2020 ರಂದು ಮಧ್ಯಾಹ್ನ 15-00 ಗಂಟೆಗೆ ಪಿರ್ಯಾದಿದಾರರಾದ ಕೆ.ಆರ್ ಸುಧಾಕರ್ ರೆಡ್ಡಿ ಬಿನ್ ಕೆ,ಎಂ ರಾಮರೆಡ್ಡಿ ವಾಸ: ಮದ್ದಿರೆಡ್ಡಿ ಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲಲ್ಲೂಕು ರವರ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ, ನಾನು, ದಿನಾಂಕ:31/07/2020 ರಂದು ಮಧ್ಯಾಹ್ನ ಸುಮಾರು 1-00 ಗಂಟೆ ಸಮಯದಲ್ಲಿ ನಾನು ನಮ್ಮ ಮನೆಯ ಮಹಡಿ ಮೇಲಿನ ಕೋಣೆಯಲ್ಲಿ ಮಲಗಿದ್ದಾಗ ಯಾರೋ ನಮ್ಮ ಮನೆಯ ಗೋಡೆ ಹೊಡೆಯುತ್ತಿದ್ದ ಶಬ್ದ ಕೇಳಿ ಕೋಣೆಯಿಂದ ಹೊರಗೆ ಬಂದು ನೋಡಲಾಗಿ ನಮ್ಮ ಗ್ರಾಮದವರೇ ಆದ 1) ಕೆ.ಆರ್ ಶ್ರೀನಿವಾಸರೆಡ್ಡಿ ಬಿನ್ ಲೇಟ್ ರಾಮಚಂದ್ರ ರೆಡ್ಡಿ 2) ಕೆ.ಎಸ್. ಮಿಥುನ್ ರೆಡ್ಡಿ ಬಿನ್ ಕೆ.ಆರ್ ಶ್ರೀನಿವಾಸರೆಡ್ಡಿ ಮತ್ತು 3) ಸಿಂಧು ಗಣೇಶ್ ರೆಡ್ಡಿ ಬಿನ್ ಕೆ.ಆರ್ ಶ್ರೀನಿವಾಸ ರೆಡ್ಡಿ ಎಂಬುವವರು ಕಬ್ಬಿಣದ ಸನಿಕೆಯಿಂದ ನಮ್ಮ ಮನೆಯ ಮೇಲೆ ನಿರ್ಮಿಸಿದ್ದ ತಡೆ ಗೋಡೆಯನ್ನು ಹೊಡೆದು ಹಾಕುತ್ತಿದ್ದರು. ಆಗ ನಾನು ಯಾಕೆ? ನಮ್ಮ ಮನೆಯ ಗೋಡೆ ಹೊಡೆದು ಹಾಕುತ್ತಿದ್ದೀರಿ? ಎಂದು ಪ್ರಶ್ನೀಸಿದಾಗ “ ಲೇ ನಿನ್ಯಾರು ನಮ್ಮನ್ನು ಕೇಳುವುದಕ್ಕೆ ನಿನ್ನನ್ನೂ ಹೊಡೆದು ಸಾಯಿಸುತ್ತೇವೆ” ಎಂದು  ನಮ್ಮ  ಮನೆಯ ಮೇಲೆ ನಾವು ಹಾಕಿದ್ದ ಸ್ರಾಫ್ ನಲ್ಲಿದ್ದ  ಕಬ್ಬಿಣದ ರಾಡ್ ನಿಂದ  ನನ್ನ ಮೇಲೆ ದಾಳಿ ಮಾಡಿದರು ಆಗ ನಾನು ಕಿರುಚಿಕೊಂಡಾಗ ನಮ್ಮ ಮನೆಯಲ್ಲಿಯೇ ಇದ್ದ  ನನ್ನ ತಮ್ಮ ಕೆ,ಆರ್ ಮನೋಹರ್ ರೆಡ್ಡಿ ನನಗೆ ರಕ್ಷಣೆ ನೀಡಲು ಬಂದಾಗ ಆತನ ಮೇಲೆಯೂ ದಾಳಿ ಮಾಡಿದರು ಆಗ ಈ ಗಲಾಟೆ ಶಬ್ದ ಕೇಳಿ ನೆರೆಹೊರೆಯವರು ಸಮಾಧಾನ ಪಡಿಸಿ ವಾಪಸ್ಸು  ಕಳುಹಿಸಿದರು. ನಾನು ಹಾಲಿ ಬಾಗೇಪಲ್ಲಿ ತಾಲ್ಲೂಕು, ತಾಲ್ಲೂಕು ಪಂಚಾಯ್ತಿ ಸದಸ್ಯ ನಾಗಿರುತ್ತೇನೆ. ರಾಜಕೀಯವಾಗಿ ನನ್ನ ಎಳಿಗೆಯನ್ನು ಮತ್ತು ಆರ್ಥಿಕವಾಗಿ ನಮ್ಮ ಕುಟುಂಬದ ಏಳಿಗೆಯನ್ನು  ಸಹಿಸಲಾಗದೇ ಮೇಲ್ಕಂಡವರು ಹಳೆಯ ವೈಕ್ಷಮ್ಯಗಳಿಂದ  ವಿನಾ ಕಾರಣ  ನಮ್ಮ ಕುಟುಂಬದವರ ಮೇಲೆ ಆಗಾಗ ದೌರ್ಜನ್ಯ ಮಾಡಿ ಪ್ರಾಣ ಬೆದರಿಕೆ  ಹಾಕುತ್ತಿರುತ್ತಾರೆ. ಈಗಾಗಲೇ ಈ ಬಗ್ಗೆ ಇದೇ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರನ್ನು ದಾಖಲಿಸಲಾಗಿದೆ. ಆದ್ದರಿಂದ ತಾವಂದಿರು ಮೇಲ್ಕಂಡವರ ಮೇಲೆ ಸೂಕ್ತ ಕ್ರಮ ಕೈಗೊಂಡು ನನಗೂ ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕೋರಿ ನೀಡಿದ ದೂರಿನ ಮೇರೆಗೆ  ಪಡೆದು ಠಾಣಾ ಎನ್ ಸಿ ಆರ್  49/2020 ರೀತ್ಯಾ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈಗೊಂಡಿದ್ದು ದಿನಾಂಕ:04/08/2020 ರಂದು  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣಾ ಮೊಸಂ:50/2020 ಕಲಂ: 447,427,324,504,506 ರೆ-ವಿ 34 ಐ.ಪಿ.ಸಿ  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಚೇಳೂರು ಪೊಲೀಸ್ ಠಾಣೆ ಮೊ.ಸಂ.51/2020 ಕಲಂ. 143,147,323,324,447,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ:04/08/2020 ರಂದು ಸಂಜೆ:18:00 ಗಂಟೆಗೆ ನ್ಯಾಯಾಲಯ ಪೇದೆಯಾದ  ಸಿಪಿಸಿ 07 ವಿದ್ಯಾಧರ ರವರು ಘನ ನ್ಯಾಯಾಲಯದಿಂದ ಎನ್.ಸಿ.ಆರ್ 50/2020 ಪ್ರಕರಣವನ್ನು ಐಪಿಸಿ ಪ್ರಕರಣವನ್ನಾಗಿ ದಾಖಲಿಸಿ ತನಿಖೆಕೈಗೊಳ್ಳಲು ಅನುಮತಿಯನ್ನು ಪಡೆದು ತಂದು ಹಾಜರುಪಡಿಸಿದ ಆದೇಶ ಪ್ರತಿಯ ಸಾರಾಂಶವೇನೆಂದರೆ ದಿನಾಂಕ 01-08-2020 ರಂದು ಪಿರ್ಯಾದಿದಾರರಾದ ಎಮ್ ಆರ್ ಶ್ರೀನಿವಾಸರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ನಮ್ಮ ತಂದೆ ಕೆ.ಎಂ ರಾಮಚಂದ್ರರೆಡ್ಡಿ ರವರ ಖಾತೆ  ನಮ್ಮ ಅನುಭವದ ಸ್ವತ್ತು ಮದ್ದಿರೆಡ್ಡಿಪಲ್ಲಿ ಹೆಚ್.ಎಲ್ ನಂ 44 ರಲ್ಲಿ ಪೂರ್ವ-ಪಶ್ಚಿಮ 52 ಅಡಿ ಉತ್ತರ –ದಕ್ಷೀಣ 78 ಅಡಿಗಳ ಮಹಡಿ ಮನೆಯಿದ್ದು  ಇದೇ ಮನೆಯನ್ನು ರಿಪೇರಿ ಮಾಡಿಸಿ ಸರಿಯಾಗಿ ಕಟ್ಟಿಕೊಳ್ಳಲು ತಾರೀಖು:-31/07/2020 ರಂದು ಶುಕ್ರವಾರ ದಿನ ಮಧ್ಯಾಹ್ನ 2-00 ಗಂಟೆಯ ಸಮಯದಲ್ಲಿ ಮನೆ ಹೊಡೆಯುತ್ತಿದ್ದಾಗ ಇದೇ ಗ್ರಾಮದ ವಾಸಿಯಾದ  1) ಕೆ.ಎಂ ರಾಮಿ ರೆಡ್ಡಿ ಬಿನ್ ಲೇಟ್ ಮಾರಪ್ಪ ರೆಡ್ಡಿ 2) ಕೆ.ಆರ್ ಸುಧಾಕರ್ ರೆಡ್ಡಿ ಬಿನ್ ಕೆ.ಎಂ ರಾಮಿ ರೆಡ್ಡಿ 3) ಕೆ.ಆರ್. ಮನೋಹರ ರೆಡ್ಡಿ ಬಿನ್ ಕೆ.ಆರ್ ರಾಮಿರೆಡ್ಡಿ 4) ಟಿ.ಆರ್ ಪದ್ಮವತಮ್ಮ ಕೊಂ ಕೆ.ಎಂ ರಾಮರೆಡ್ಡಿ,  5) ಹೇಮಾವತಿ ಕೊಂ ಕೆ.ಆರ್ ಸುಧಾಕರ್ ರೆಡ್ಡಿ ರವರುಗಳು ಗುಂಪು ಕಟ್ಟಿಕೊಂಡು ಬಂದು ಗೋಡೆ ಹೊಡೆಯಬಾರದು ಎಂದು ತಗಾದೇ ತೆಗೆದು ನಾನಾ ಅವಾಚ್ಯ ಶಬ್ದ ಮಾತುಗಳಿಂದ  ಬೈಯ್ದು ಹೆಂಗಸರು ಕಾರದ ಪುಡಿ ಹಾಕಿದ್ದಾರೆ. ಮನೋಹರ್ ರೆಡ್ಡಿ ಕೆ.ಆರ್ ಎಂಬುವವರು ಬಂದು ಡಬಲ್ ಬ್ಯಾರಲ್ ಬಂದೂಕು  ಎತ್ತಿಕೊಂಡು ಬಂದು ಸಾಯಿಸುವುದಾಗಿ ಬೆದರಿಸಿ ನಿಮೆಗೆ ಎಲ್ಲಿ ಕಾಣಿಸಿದರೆ ಅಲ್ಲೆ ಸಾಯಿಸುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ, ನಮಗೆ  ಹಲ್ಲೆ ನಡೆಸಿದ್ದು  ಇವರಿಂದಲೇ ನಮ್ಮ ಕುಟುಂಬದಲ್ಲಿ ಪ್ರಾಣ ಹಾನಿ  ಸಂಭವಿಸಿದರೆ ಇವರೇ ಹೊಣೆಗಾರರು ಆಗಿರುತ್ತಾರೆ. ಇಂದು ಸಂಜೆ  5-00 ಗಂಟೆಯಲ್ಲಿ ಕೆ.ಎಂ ರಾಮಿರೆಡ್ಡಿ ಅಣ್ಣ ಕೆ.ಎಂ ಕೃಷ್ಣಾರೆಡ್ಡಿ  ಮಗನಾದ ಕೆ. ರಾಜಶೇಖರ್  ರೆಡ್ಡಿ ಎಂಬುವವರು ಕಾಲಿನಿಂದ  ಬಾಗಿಲಿಗೆ ಒದ್ದು  ಪ್ರಾಣ ಭಯ ಹುಟ್ಟಿಸಿರುತ್ತಾನೆ ಮತ್ತು ಬಾರ್ ನಲ್ಲಿ ಭಾಗ ನೀಡದೇ ಇದ್ದು ಓ.ಎಸ್ ನಂ:388/2019 ಕೇಸು ಬಾಗೇಪಲ್ಲಿ  ಜೆ.ಎಂ.ಎಫ್.ಸಿ ಕೋರ್ಟ್ ನಲ್ಲೊ ನಡೆಯುತ್ತಿದೆ. ಒಟ್ಟು ಕುಟುಂಬದಲ್ಲಿ ಆಸ್ತಿಯಲ್ಲಿ ಭಾಗ ಪರಿಷ್ಕಾರ ಮಾಡಿರುವುದಿಲ್ಲ. ಆದ್ದರಿಂದ ನಮಗೆ ರಕ್ಷಣೆ ನೀಡಿ ಇವರ ಮೇಲೆ ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಠಾಣಾ ಎನ್.ಸಿ.ಆರ್ ನಂಬರ್: 50/2020 ರಂತೆ ಪ್ರಕರಣ ದಾಖಲಿಸಿಕೊಂಡು  ತನಿಖೆಯನ್ನು ಕೈಗೊಂಡಿದ್ದು ದಿನಾಂಕ:04/08/2020 ರಂದು  ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಠಾಣಾ ಮೊಸಂ:51/2020 ಕಲಂ: 143,147,447,323,324,504,506 ರೆ-ವಿ 149 ಐ.ಪಿ.ಸಿ  ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.108/2020 ಕಲಂ. 379 ಐ.ಪಿ.ಸಿ :-

          ದಿ:04.08.2020 ರಂದು ಪಿರ್ಯಾದಿ ಅಸೀಪು ವೆಂಕಟರಾವ್ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿ:02.08.2020 ರಂದು ರಾತ್ರಿ 19-30 ರಲ್ಲಿ 4 ಮಂದಿ ಚಾಲಕರು ಕಂಪನಿಯ ಒಳಗಡೆ ಬಂದಿದ್ದು, ಅವರ ಹೆಸರುಗಳು ಸುರೇಶ , ವೆಂಕಟರೆಡ್ಡಿ , ನವೀನ್ ಮತ್ತು ಹರೀಶ ಇವರುಗಳು ಲೋಡ್ ಆಗಿ ನಿಂತಿದ್ದ ಗಾಡಿ ನಂಬರ್ ಕೆಎ 20 ಎ 9356 ನಿಂದ ಕೆಲವು ಸಾಮಾನುಗಳನ್ನು ಕದ್ದು ಕೆಎ 09 ಎ 4372 ಗೆ ಕದ್ದು ಸಾಗಿಸಿರುತ್ತಾರೆಂದು ಇವುಗಳ ಅಂದಾಜು ಮೊತ್ತ 45000/- ರೂಪಾಯಿಗಳಾಗಿರುತ್ತೆಂದು ಸದರಿ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.86/2020 ಕಲಂ. 143,323,324,504,506 ರೆ/ವಿ 149 ಐ.ಪಿ.ಸಿ :-

          ದಿನಾಂಕ 04/08/2020 ರಂದು ಮದ್ಯಾಹ್ನ 3.00 ಗಂಟೆ ಸಮಯದಲ್ಲಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪ್ಯಾರಿಜಾನ್ ಕೋಂ ಅಬ್ದಲ್ ಖಾದರ್ ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ದಿನಾಂಕ 01/08/2020 ರಂದು ರಾತ್ರಿ ಗಾಂದಿನಗರದ ಕಲ್ಲುಮಗ ಕಲಂದರ್ ಮತ್ತುಮೈಸೂರ್ ಮುನ್ನಾ ರವರ ನಡುವೆ ಸಣ್ಣ ಗಲಾಟೆ ವಿಚಾರದಲ್ಲಿ ಮಾಪೀರ್ ರವರು ತನ್ನ ಅಕ್ಕ ಬಲ್ಕೀಜ್ ಬೇಗಂ ರವರನ್ನು ಕಾರಣವಿಲ್ಲದೇ ಲೋಪರ್ ಮುಮಡೆ, ರಂಡೇ ಮುಂಡೆ,ಮೊದಲಾದ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈದೇ ವಿಚಾರದಲ್ಲಿ ಈ ದಿನ ದಿನಾಂಕ 04/08/2020 ರಂದು ಬೆಳಗ್ಗೆ 9.00 ಗಂಟೆ ಸಮಯದಲ್ಗಲಿ ತನ್ನ ಅಕ್ಕ ಮಾಪೀರ್ ಮನೆಯ ಹತ್ತಿರ ಹೋಗಿ ಮಾಪೀರ್ ನನ್ನು ಯಾಕೆ ಸಂಬಂದವಿಲ್ಲದೇ ವಿನಾ ಕಾರಣ ಬೈಯುತ್ತಿದ್ದಿರಾ ಎಂತ ಕೇಳುವಷ್ಟರಲ್ಲಿ ಮಾಪೀರ್ ರವರು ನನ್ನನ್ನು ಲೋಪರ್ ಮುಂಡೆ, ನೀನು ಯಾರೇ, ನನ್ನನ್ನು ಕೇಳುವುದಕ್ಕೆ, ಅಂತ ಬೈದು ನನ್ನನ್ನು ದೊಣ್ಣೆಯಿಂದ ಹೊಡೆದು ಮೂಗೇಟು ಉಂಟು ಮಾಡಿ ಹೊಡೆಯುತ್ತಿದ್ದಾಗ ಅಡ್ಡ ಬಂದ ತನ್ನ ಅಕ್ಕ ಬಲ್ಕೀಜ್ ಬೆಗಂಳನ್ನು ಮಾಪೀರ್ ಪಕ್ಕದಲ್ಲಿದ್ದ ಕಲೀಂ  ರಿಹಾನಾ, ಶಬಾನಾ, ಶಾಬಲ್ , ಮನ್ಸೂದ್ , ಅಕ್ರಂ ಗುಣ್ಣು. ರವರೆಲ್ಲರು ಸೇರಿ, ತನ್ನ ಅಕ್ಕಳನ್ನು ಎಳೆದುಕೊಂಡು ಬಂದು ರಿಹಾನ ರವರು ಆಕೆಯ ಬಟ್ಟೆಗಳನ್ನು ಹರಿದು ಹಾಕಿ ಹಲ್ಲೆ ಮಾಡಿರುತ್ತಾರೆ. ರೇಷ್ಮಾ ಮತ್ತು ರಿಹಾನಾರವರು ನಮ್ಮ ಅಕ್ಕನ ಕೂದಲನ್ನು ಹಿಡಿದು ಎಳೆದಾಡಿ ಕೆಳಗೆ ತಳ್ಳಿ ಅಲ್ಲಿಯೇ ಇದ್ದ ಚೂಪಾದ ಕೋಲನ್ನು ತೆಗೆದುಕೊಂಡು ತನ್ನ ಅಕ್ಕನ ಕೈಗಳಿಗೆ ಹೊಡೆದು ರಕ್ತಗಾಯ ಉಂಟು  ಮಾಡಿ ಎಲ್ಲಾ ಆರೋಪಿಗಳಿ ಸೇರಿ ನಮ್ಮನ್ನು ಕುರಿತು ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಮ್ಮ ಮೇಲೆ ಗಲಾಟೆ ಮಾಡಿ ಹಲ್ಲೆ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರ ಜರುಗಿಸಬೇಕೆಂದು ಕೋರುತ್ತೇನೆ.

  1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.87/2020 ಕಲಂ. 323,324,504,506 ರೆ/ವಿ 34 ಐ.ಪಿ.ಸಿ :-

          ದಿನಾಂಕ 04/08/2020 ರಂದು ಸಂಜೆ 5,10 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಶಬಾನಾ ತಾಜ್ ಬಿನ್ ಸೈಯದ್ ಪ್ಯಾರೂ, ರವರು ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ತಾನು ತನ್ನ ಗಂಡ ಮತ್ತು ಮಕ್ಕಳೊಂದಿಗೆ  ಕೂಲಿಕೆಲಸದಿಂದ ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ 01/08/2020 ರಂದು ಶನಿವಾರ ಕಲಂದರ್ ಮತ್ತು ಜಬೀ ರವರ ನಡುವೆ ಸಣ್ಣಪುಟ್ಟ ಗಲಾಟೆಯಾಗಿದ್ದು, ಈ ವಿಚಾರದಲ್ಲಿ ಈ ದಿನ ದಿನಾಂಕ 04/08/2020 ರಂದು ಮದ್ಯಾಹ್ನ 2.00 ಗಂಟೆ ಸಮಯದಲ್ಲಿ ನಮ್ಮ ತಂದೆ ಮೆಹಬೂಬ್ ಪೀರ್ ರವರನ್ನು ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಬಲ್ಕೀಜ್ ರವರು ನಸ್ರೀನ್ ಸದ್ದಾಂ, ಸಲ್ಮಾನ್, ರವರು ನಮ್ಮ ಮನೆಯ ಹತ್ತಿ ಬಂದು ನೀನು ಯಾರೋ ದೊಡ್ಡ ಮನುಷ್ಯ ಲೋಪರ್ ನನ್ನ ಮಗನೇ ನ್ಯಾಯ ಮಾಡುತ್ತಿಯಾ , ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು, ಆಗ ತಾನು ಅಡ್ಡ ಹೋಗಿದ್ದಕ್ಕೆ, ಬಲ್ಕೀಜಾ ಬೇಗಂ ಮತ್ತು ನಸ್ರೀನ್ ರವರು ಯಾಕೆ ನಮ್ಮ ತಂದೆಯನ್ನು ಬೈಯುತ್ತಿರುವುದು, ಅವರು ಗಾಂದಿನಗರದ ಮಸೀದಿಗೆ ಅದ್ಯಕ್ಷರು, ಅವರು ಸುಳ್ಳು ಹೇಳುವುದಿಲ್ಲೆಂತ ಹೇಳುವಷ್ಟ ಸಲಿಂ,ಸದ್ದಾಂ ರವರು ತನ್ನನ್ನು ಕುರಿತು ಲೋಪರ್ ಮುಂಡೆ ನೀವು ಯಾವ ದೊಡ್ಡ ಮನುಷ್ಯರು, ಎಂತ ಕೆಟ್ಟ ಮಾತುಗಳಿಮದ ಬೈದು ಅಲ್ಲಿಯೇ ಇದ್ದ ದೊಣ್ಣೆಯಿಮದ ತನ್ನನ್ನು ಹೊಡೆಯುತ್ತಿದ್ದಾಗ ಅಡ್ಡ ಬಂದ ಆಶ್ರಪ್ ರವರನ್ನು ಕೆಳಗೆ ತಳ್ಳಿ ಬಲ್ಕೀಜ್ ರವರು ಅಲ್ಲಿಯೇ ಇದ್ದ ದೊಣ್ಣೆಯಿಂದ ಹೊಡೆದು ಮೂಗೇಟು ಉಂಟು ಮಾಡಿರುತ್ತಾರೆ.ಸದ್ದಾಮ ರವರು ದೊಣ್ಣೆಯನ್ನು ತೋರಿಸಿ ಸಾಯಿಸುತ್ತೇವೆಂತ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ  ಕಾನೂನು ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂತ ನೀಡಿದ ಹೇಳಿಕೆಯಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ.75/2020 ಕಲಂ. 15(A),32(3) ಕೆ.ಇ ಆಕ್ಟ್:-

          ದಿನಾಂಕ:04-08-2020 ರಂದು ಸಂಜೆ 06-00 ಗಂಟೆಗೆ ಶ್ರೀ ಮಲ್ಲಿಕಾರ್ಜುನ CHC- 239 ರವರು ಠಾಣೆಗೆ ಹಾಜರಾಗಿ ಆರೋಪಿ, ಮಾಲು ಹಾಗೂ ಮಹಜರ್ ನೊಂದಿಗೆ ನೀಡಿದ ವರಧಿಯ ಸಾರಾಂಶವೇನೆಂದರೆ,   ಚಿಕ್ಕಬಳ್ಳಾಫುರ ಜಿಲ್ಲೆಯ DCB/CEN ಪೊಲೀಸ್ ಠಾಣೆಯ PI ಶ್ರೀ ರಾಜಣ್ಣ ರವರ ಆದೇಶದಂತೆ ತನಗೆ ಹಾಗೂ CHC-198 ರವರುಗಳಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಪತ್ತೆ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ ಈ ದಿನ ಸಂಜೆ ಸುಮಾರು 04-15 ಗಂಟೆಯ ಸಮಯದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಬಾತ್ಮೀದಾರರಿಂದ ಬಂದಂತಹ ಖಚಿತ ಮಾಹಿತಿ ಮೇರೆಗೆ ಪಂಚರೊಂದಿಗೆ ಬೈಯಪ್ಪನಹಳ್ಳಿ ಗ್ರಾಮದ ನಾರಾಯಣಸ್ವಾಮಿ ಬಿನ್ ವೆಂಕಟರವಣಪ್ಪ ರವರ ಚಿಲ್ಲರೆ ಅಂಗಡಿ ಮೇಲೆ ದಾಳಿ ಮಾಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಜನರು ಓಡಿ ಹೋಗಿದ್ದು ಸ್ಥಳದಲ್ಲಿ ಪರಿಶೀಲಸಲಾಗಿ 1) 90 ML HAYWARDS CHEERS WHISKY 10 TETRA PACKETS 2) 180 ML BAGPIPER DELUXE WHISKY 5 TETRA PACKETS 3)TWO PLASTICK GLASS 4) ONE LITER EMPTY WATER BATEL 5) EMPTY 90 ML HAYWARDS CHEERS WHISKY 2 TETRA PACKETS ಗಳು ಇದರ ಒಟ್ಟು ಮೌಲ್ಯ 882/- ರೂಗಳಾಗಿರುತ್ತೆ. ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಮೇಲ್ಕಂಡ ಮದ್ಯದ ಪಾಕೆಟ್ ಗಳನ್ನು ವಶಕ್ಕೆ ಪಡೆದುಕೊಂಡು ಸ್ಥಳದಲ್ಲಿದ್ದ ನಾರಾಯಣಸ್ವಾಮಿ ಬಿನ್ ವೆಂಕಟರವರಣಪ್ಪ , 40 ವರ್ಷ, ವಕ್ಕಲಿಗರು, ಚಿಲ್ಲರೆ ಅಂಗಡಿ ವ್ಯಾಪಾರ, ಬೈಯಪ್ಪನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ರವರನ್ನು ವಶಕ್ಕೆ ಪಡೆದಿದ್ದು ವಶಪಡಿಸಿಕೊಂಡ ಮಾಲನ್ನು ಮತ್ತು ಆಸಾಮಿಯನ್ನು ಠಾಣೆಯಲ್ಲಿ ಹಾಜರುಪಡಿಸಿ ಕಾನೂನು ರೀತ್ಯಾ ಕ್ರಮ ಜರುಗಸಲು ನೀಡಿರುವ ವರಧಿಯಾಗಿರುತ್ತೆ.

  1. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ.82/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 04/08/2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶ್ರೀ ರಂಜನ್ ಕುಮಾರ್ ರವರಿಗೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ಸರಹದ್ದು ಕಟ್ಟಿಗೇನಹಳ್ಳಿ ಸಕರ್ಾರಿ ಅರಣ್ಯದಲ್ಲಿ  ಯಾರೋ ಕೆಲವರು ಕಾನೂನು ಬಾಹಿರವಾಗಿ ಇಸ್ಟೀಟು ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನ ಮೇರೆಗೆ ದಾಳಿ ಮಾಡಲು  ಠಾಣೆಯಲ್ಲಿದ್ದ ಎ.ಎಸ್.ಐ ಶ್ರೀನಿವಾಸಗೌಡ ರವರಿಗೆ ನೇಮಿಸಿ ಕಳುಹಿಸಿದ್ದು, ಅದರಂತೆ ಸದರಿ ಇಸ್ಪೀಟ್ ಜೂಜಾಟ ದಂಧೆಯ ಮೇಲೆ ದಾಳಿ ಮಾಡುವ ಸಲುವಾಗಿ ಎ.ಎಸ್.ಐ ಶ್ರೀನಿವಾಸಗೌಡ ರವರು ಪಂಚಾಯ್ತಿದಾರನ್ನು ಬರಮಾಡಿಕೊಂಡು ಅವರಿಗೆ ವಿಚಾರ ತಿಳಿಸಿ ಅವರೊಂದಿಗೆ ಖಾಸಗಿ ಟಾಟಾ ಏಸ್ ವಾಹನದಲ್ಲಿ ಠಾಣಾ ಸಿಬ್ಬಂದಿಯವರಾದ ಸಿಹೆಚ್ಸಿ-161 ಕೃಷ್ಣಪ್ಪ, ಸಿಹೆಚ್ಸಿ-99 ರಾಮನಾಥರೆಡ್ಡಿ, ಸಿಪಿಸಿ-101 ಶ್ರೀನಿವಾಸ ರವರೊಂದಿಗೆ ಬೆಂಗಳೂರು ರಾಜಣ್ಣ ರವರ ಜಮೀನಿನ ಸಮೀಪದ ಕಟ್ಟಿಗೇನಹಳ್ಳಿ ಸಕರ್ಾರಿ ಅರಣ್ಯದ ಬಳಿ ಹೋಗಿ ವಾಹನವನ್ನು ಮರೆಯಲ್ಲಿ ನಿಲ್ಲಿಸಿ ವಾಹನದಿಂದ ಇಳಿದು  ನೋಡಲಾಗಿ ಅಲ್ಲಿನ ಮರದ ಕೆಳಗೆ ಯಾರೋ ಕೆಲವರು ಹಣವನ್ನು ಪಣವಾಗಿಟ್ಟು ಕಾನೂನು ಬಾಹಿರವಾಗಿ 100 ರೂ ಅಂದರ್ 100 ರೂ ಬಾಹರ್ ಎಂದು ಅಕ್ರಮ ಇಸ್ಟೀಟು ಜೂಜಾಟವಾಡುತ್ತಿದ್ದು, ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲಾಗಿ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಜೂಜಾಡುತ್ತಿದ್ದ ಸದರಿಯವರು ಇಸ್ಟೀಟ್ ಎಲೆ  ಹಾಗೂ ಹಣವನ್ನು ಅಲ್ಲಿಯೇ ಬಿಸಾಡಿ ಓಡಲು ಪ್ರಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು  ಹೆಸರು ಮತ್ತು ವಿಳಾಸ ಕೇಳಲಾಗಿ 1) ರವಿ ಬಿನ್ ನರಸಿಂಹಪ್ಪ, 30 ವರ್ಷ, ಬಲಜಿಗರು, ಚಾಲಕ ವೃತ್ತಿ, ವಾಸ ಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು.  2) ಮಂಜುನಾಥ ಬಿನ್ ಜಯರಾಮಪ್ಪ, 22 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. 3) ಮಲ್ಲಿಕಾಜರ್ುನ ಬಿನ್ ಮದ್ದಿರೆಡ್ಡಿ, 30 ವರ್ಷ, ವಕ್ಕಲಿಗರು, ಜಿರಾಯ್ತಿ, ವಾಸ ಕಟ್ಟಿಗೇನಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು  ಎಂದು ತಿಳಿಸಿದರು. ಸ್ಥಳದಲ್ಲಿ ಪರಿಶೀಲಿಸಲಾಗಿ ಸ್ಥಳದಲ್ಲಿ ಸದರಿಯವರು ಜೂಜಾಟವಾಡಲು ಪಣವಾಗಿಟ್ಟಿದ್ದ ಹಣ ಇದ್ದು,  ಪಂಚರ  ಸಮಕ್ಷಮ ಪರಿಶೀಲಿಸಲಾಗಿ 1500/- ರೂ ನಗದು ಹಣ ಇದ್ದು, 52 ಇಸ್ಟೀಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರ್ ಇದ್ದು, ಸದರಿ ಮಾಲುಗಳನ್ನು ಈ ಕೇಸಿನ ಮುಂದಿನ ನಡಾವಳಿಗಾಗಿ ಅಮಾನತ್ತುಪಡಿಸಿಕೊಂಡು ಸ್ಥಳದಲ್ಲಿಯೇ ಬೆಳಿಗ್ಗೆ 11-30 ರಿಂದ 12-30 ಗಂಟೆ ವರೆಗೆ ಪಂಚನಾಮೆ ಕ್ರಮ ಜರುಗಿಸಿ ಆರೋಪಿತರು, ಮಾಲು ಮತ್ತು ಮಹಜರ್ ನೊಂದಿಗೆ ಠಾಣೆಗೆ ಹಾಜರಾಗಿದ್ದು, ಆರೋಪಿತರು, ಮಾಲು ಹಾಗೂ ಮಹಜರ್ ನ್ನು ಮುಂದಿನ ಕ್ರಮಕ್ಕಾಗಿ ತಮ್ಮಲ್ಲಿ ನೀಡುತ್ತಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿದ್ದರ ಮೇರೆಗೆ ಠಾಣಾ ಎನ್.ಸಿ.ಆರ್ ಸಂಖ್ಯೆ: 93/2020 ರಂತೆ ದಾಖಲು ಮಾಡಿಕೊಂಡು ಘನ ನ್ಯಾಯಾಲಯಕ್ಕೆ ಇ-ಮೇಲ್ ಮುಖಾಂತರ ರವಾನಿಸಿಕೊಂಡು ಸಂಜೆ 16-45 ಗಂಟೆ ಘನ ನ್ಯಾಯಾಲಯದಿಂದ ಇ-ಮೇಲ್ ಮುಖಾಂತರ ಅನುಮತಿ ಪಡೆದು ಠಾಣಾ ಮೊ.ಸಂ 82/2020 ಕಲಂ 87 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.