ದಿನಾಂಕ :05/07/2020 ರ ಅಪರಾಧ ಪ್ರಕರಣಗಳು

  1. ಬಟ್ಲಹಳ್ಳಿ ಪೊಲೀಸ್ ಠಾಣೆ ಮೊ.ಸಂ. 53/2020 ಕಲಂ. 323,324, 341, 504,506 ಐಪಿಸಿ :-

    ದಿನಾಂಕ:04/07/2020 ರಂದು ಸಂಜೆ 17-00 ಗಂಟೆಯ ಸಮಯದಲ್ಲಿ  ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಶೋಭಾ ಕೊಂ ಶಿವಕುಮಾರ್, 28 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾಸ: ಮಾದಮಂಗಲ ಗ್ರಾಮ, ಚಿಂತಾಮಣಿ ತಾಲ್ಲೂಕು ಸ್ವಂತ ಸ್ಥಳ: ಆಲಂಬಗಿರಿ ಹೊಸಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು. ಮೊ ನಂ: 8970362762 ರವರು ನೀಡಿದ ಹೇಳಿಕೆಯ ದೂರನ್ನು ಪಡೆದುಕೊಂಡು ಬಂದಿದ್ದರ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ. ನನಗೆ ಸಂಸಾರದಲ್ಲಿ ಅನ್ಯೂನ್ಯ ಇಲ್ಲದೇ ಇದುದ್ದರಿಂದ ನಾನು ಮತ್ತು ನನ್ನ ಮಕ್ಕಳಾದ ಸಿಂದೂ ಮತ್ತು ನಂದೀಶ್ ರವರೊಂದಿಗೆ ಈಗ್ಗೆ 6 ವರ್ಷಗಳ ಹಿಂದೆ ನಮ್ಮ ಅಕ್ಕ ಅಕ್ಕಯ್ಯಮ್ಮ ರವರ ಗಂಡನ ಮನೆಯಾದ ಮಾದಮಂಗಲ ಗ್ರಾಮಕ್ಕೆ ಬಂದು ನಮ್ಮ ಅಕ್ಕನ ಮನೆಯಲ್ಲಿ ವಾಸವಾಗಿರುತ್ತೇವೆ. ದಿನಾಂಕ:04/07/2020 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ನಾನು ಮತ್ತು ನಮ್ಮ ಅತ್ತೆ ಟೊಮೆಟೋ ಕೀಳುವ ಕೂಲಿಕೆಲಸಕ್ಕೆ ರಮೇಶ್ ರವರ ತೋಟಕ್ಕೆ ಹೋಗಲು ನಮ್ಮ ಗ್ರಾಮದ ವೆಂಕಟರಾಯಪ್ಪ ರವರ ಜಮೀನಿನ ಬಳಿ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ನಮ್ಮ ಗ್ರಾಮದ ವಾಸಿ ರೆಡ್ಡಪ್ಪ ಬಿನ್ ವೆಂಕಟರವಣಪ್ಪ ರವರು ನಮ್ಮ ಎದುರಿಗೆ ನಡೆದುಕೊಂಡು ಬರುತ್ತಿದ್ದು, ನನ್ನನ್ನು ಅಡ್ಡಗಟ್ಟಿ ಏಕಾಏಕಿ ನನ್ನನ್ನು ಕುರಿತು  ನೀನು ಯಾರೋ ಮಾತನ್ನು ಕೇಳಿಕೊಂಡು ನನ್ನನ್ನು ಮಾತನಾಡುವುದಿಲ್ಲ  ಬೋಳಿ ಮುಂಡೆ  ನಿಮ್ಮನ್ನೆ ಕೇಯ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ನಾನು ಏಕೆ ನನ್ನನ್ನು ಬೈಯುತ್ತಿರುವುದು ಎಂದು ಕೇಳಿದ್ದಕ್ಕೆ ಕೈಗಳಿಂದ ನನ್ನ ಕೆನ್ನೆಗೆ ಹೊಡೆದು ಕೋಲಿನಿಂದ ನನ್ನ ಬೆನ್ನಿಗೆ ಕಾಲುಗಳಿಗೆ ಹೊಟ್ಟೆಗೆ ಹೊಡೆದು ಗಾಯಪಡಿಸಿರುತ್ತಾನೆ. ಇನ್ನು ಮುಂದೆ ನೀನು ನನ್ನನ್ನು ಮಾತನಾಡದಿದ್ದರೆ ನಿನ್ನನ್ನು ಸಾಯಿಸುತ್ತೆನೆಂದು ಪ್ರಾಣ ಬೆದರಿಕೆ ಹಾಕಿದನು ಅಷ್ಟರಲ್ಲಿ ನನ್ನ ಹಿಂದೆ ಬರುತ್ತಿದ್ದ ನನ್ನ ಅಕ್ಕನ ಮಗ ಮುರಳಿ ರವರು ಅಡ್ಡ ಬಂದಾಗ ರೆಡ್ಡಪ್ಪ ಮುರಳಿರವರಿಗೆ ಕೋಲಿನಿಂದ ಎಡ ಮೊಣಕಾಲಿಗೆ, ಬಲಕೈಗೆ ಹೊಡೆದು  ಗಾಯಪಡಿಸಿದನು ನಾವು ನೋವಿನಿಂದ ಕಿರುಚಿಕೊಂಡಾಗ ನನ್ನ ಅತ್ತೆ ಚೌಡಮ್ಮ ಕೊಂ ಲೇಟ್ ಚೌಡಪ್ಪ ಮತ್ತು ರಮೇಶ ಬಿನ್ ಗೊರ್ಲಪ್ಪ ರವರ ನಮಗೆ ಜಗಳ ಬಿಡಿಸಿ ನನ್ನನ್ನು ಮತ್ತು ನನ್ನ ಅಕ್ಕನ ಮಗ ಮುರಳಿ ರವರನ್ನು ಚಿಕಿತ್ಸೆಗಾಗಿ ಬಟ್ಲಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ಆದ್ದರಿಂದ ಮೇಲ್ಕಂಡ ರೆಡ್ಡಪ್ಪ ರವರ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಬೇಕಾಗಿ ಕೋರಿ ಕೊಟ್ಟ ದೂರಿನ ಸಾರಾಂಶವಾಗಿರುತ್ತೆ.

  1. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಮೊ.ಸಂ. 68/2020 ಕಲಂ. 323,324,504,506 ರೆ/ವಿ 34 ಐಪಿಸಿ :-

    ದಿನಾಂಕ:05-07-2020 ರಂದು ಮದ್ಯಾಹ್ನ 03-00 ಗಂಟೆಗೆ ಹೆಚ್.ಸಿ-119 ರವರು ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳಾದ ಗಂಗರಾಜು ಬಿನ್ ಬಿ.ಎಲ್. ಶ್ರೀನಿವಾಸ ಮೂರ್ತಿ,27 ವರ್ಷ, ನಾಯಕರು, ಜಿರಾಯ್ತಿ ಹೆಗ್ಗೇನಹಳ್ಳಿ ಗ್ರಾಮ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು ರವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಯಲ್ಲಿ ಹಾಜರುಪಡಿಸಿದ್ದ ಹೇಳಿಕೆಯ ಸಾರಾಂಶವೇನೆಂದರೆ,  ದಿನಾಂಕ:04-07-2020 ರಂದು ಮಳೆ ಬಿದ್ದಿದರಿಂದ ಬಶೆಟ್ಟಿಹಳ್ಳಿಯಲ್ಲಿರುವ ತಮ್ಮ ಬಾಬತ್ತು ಜಮೀನನ್ನು ಉಳುಮೆ ಮಾಡಿಸಲು ಸಂಜೆ ಸುಮಾರು 04-30 ಗಂಟೆಗೆ ತಮ್ಮ ಜಮೀನಿನ ಬಳಿಗೆ ಬಂದಿರುತ್ತೇನೆ. ಆದರೆ ಯಾರೋ ತಮ್ಮ ಜಮೀನನ್ನು ಉಳುಮೆ ಮಾಡಿಸಿದ್ದರು. ಆಗ ಅಲ್ಲೇ ಇದ್ದ ತನ್ನ ದೊಡ್ಡಪ್ಪ ದ್ಯಾವಪ್ಪ ಬಿನ್ ಲೇಟ್ ಲಕ್ಷ್ಮಯ್ಯ ರವರನ್ನು ಕೇಳಿದ್ದಕ್ಕೆ ತನ್ನ ದೊಡ್ಡಪ್ಪ ನಿನ್ನಮ್ಮನ್ನೇ ಕ್ಯಾಯಾ, ಸೂಳೆ ನನ್ನ ಮಗನೇ ಯಾವುದು ನಿನ್ನ ಜಮೀನು ಇದು ನನ್ನದು ಅದಕ್ಕೆ ಉಳುಮೆ ನಾನೇ ಮಾಡಿಸಿದ್ದೇನೆಂದು ಕೆಟ್ಟಕೆಟ್ಟಾಗಿ ಬೈದಿರುತ್ತಾನೆ. ಆಗ ತಾನು ಏಕೆ ದೊಡ್ಡಪ್ಪ ಕೆಟ್ಟದಾಗಿ ಬೈಯ್ಯುತ್ತೀಯಾ ಎಂದು ಕೇಳಿದ್ದಕ್ಕೆ ತನ್ನ ದೊಡ್ಡಪ್ಪ ಅಲ್ಲೇ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ತನ್ನ ಕಡೆ ಎಸೆದಿರುತ್ತಾನೆ. ಆಗ ತಾನು ತಪ್ಪಿಸಿಕೊಂಡು ತನ್ನ ದೊಡ್ಡಪ್ಪನ ಕಡೆ ಹೋದಾಗ ಅಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ದೊಡ್ಡಪ್ಪನ ಮಗ ಗಂಗಾಧರ, ಲಕ್ಷ್ಮೀಪತಿ ಹಾಗೂ ಸೊಸೆ ವಿಮಲಾ ರವರುಗಳು ಬಂದು ತನ್ನನ್ನು ಹಿಡಿದುಕೊಂಡು ಕೆಟ್ಟಕೆಟ್ಟದಾಗಿ ಬೈದು ಕೈಗಳಿಂದ ನಾಲ್ಕು ಜನರು ಮೈ ಮೇಲೆಲ್ಲಾ ಹೊಡೆದು ಹೊಟ್ಟೆಗೆ ಗುದ್ದಿ ನೋವುಂಟು ಮಾಡಿರುತ್ತಾರೆ. ನಂತರ ತನ್ನ ದೊಡ್ಡಪ್ಪ ಕಲ್ಲಿನಿಂದ ತನ್ನ ಬಲಕಾಲಿನ ಮೊಣಕಾಲಿನಿಂದ ಕೆಳಗೆ ಹೊಡೆದು ಗಾಯಪಡಿಸಿರುತ್ತಾನೆ. ಗಂಗಾಧರ ಕಲ್ಲಿನಿಂದ ತನ್ನ ಎಡಭಾಗದ ಕಿವಿಯ ಮೇಲ್ಬಾಗದ ತಲೆಗೆ ಹೊಡೆದು ಗಾಯಪಡಿಸಿರುತ್ತಾನೆ. ಗಲಾಟೆಯ ವಿಚಾರದಲ್ಲಿ ಅಡ್ಡ ಬಂದಾಗ ಗಂಗಾಧರ ಬಿನ್ ಚಿಕ್ಕಪ್ಪ ನನ್ನು ಹಿಡಿದುಕೊಂಡಿರುತ್ತಾನೆ. ಆಗ ದ್ಯಾವಪ್ಪ ಕಲ್ಲಿನಿಂದ ತನ್ನ ಚಿಕ್ಕಪ್ಪನ ಎಡಭಾಗದ ಕಿವಿಯ ಮೇಲ್ಬಾಗದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಎಲ್ಲರೂ ಕೈಗಳಿಂದ ತನ್ನ ಚಿಕ್ಕಪ್ಪನನ್ನು ಹೊಡೆದು ತಮ್ಮನ್ನು ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆಗ ತನ್ನ ತಂದೆ ಹಾಗೂ ತನ್ನ ಇನ್ನೋಬ್ಬ ಚಿಕ್ಕಪ್ಪ ಶ್ರೀನಿವಾಸ ರವರು ಬಂದು ಗಲಾಟೆಯನ್ನು ಬಿಡಿಸಿರುತ್ತಾರೆ. ತನಗೆ ಹಾಗೂ ತನ್ನ ಚಿಕ್ಕಪ್ಪನಿಗೆ ಗಾಯಗಳಾಗಿದ್ದರಿಂದ ಚಿಕಿತ್ಸೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆ ಬಂದು ದಾಖಲಾಗಿರುತ್ತೇನೆ. ಆದ್ದರಿಂದ ತಮ್ಮ ಮೇಲೆ ಗಲಾಟೆ ಮಾಡಿದ್ದವರ ಮೇಲೆ ಕಾನೂನು ರೀತ್ಯಾ ಕ್ರಮಜರುಗಿಸಲು ನೀಡಿರುವ ಹೇಳಿಕೆಯ ದೂರಾಗಿರುತ್ತೆ.

  1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 86/2020 ಕಲಂ. 78(3) ಕೆ.ಪಿ. ಆಕ್ಟ್ :–

    ದಿನಾಂಕ: 05/07/2020 ರಂದು ಬೆಳಿಗ್ಗೆ 9-30 ಗಂಟೆಗೆ ನ್ಯಾಯಾಲಯ ಕರ್ತವ್ಯದ ಪಿ.ಸಿ. 546 ರಂಗನಾಥಕುಮಾರ್ ರವರು ನ್ಯಾಯಲಯದಿಂದ ತಂದ ನೀಡಿದ ಮಾಹಿತಿ ಪತ್ರದ ಸಾರಾಂಶವೇನೆಂದರೆ, ರವಿಕುಮಾರ್, ಹೆಚ್.ಸಿ.235 ರವರು ದಿನಾಂಕ:02.07.2020 ರಂದು ಸಂಜೆ 6.45 ಗಂಟೆಗೆ ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ, ರವಿಕುಮಾರ್, ಹೆಚ್.ಸಿ.235 ರವರು ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ,  ದಿನಾಂಕ: 02.07.2020 ರಂದು ಸಂಜೆ 5.30 ಗಂಟೆಯಲ್ಲಿ  ನಗರದ ಎಂ.ಜಿ.ವೃತ್ತದಲ್ಲಿ ಇರುವಾಗ ನಗರದ ನದಿಗಡ್ಡೆಯಲ್ಲಿ ಯಾರೋ ಒಬ್ಬ ಆಸಾಮಿ ಮಟ್ಕಾ ಜೂಜಾಟ ವಾಡುತ್ತಿರುವುದಾಗಿ ಮಾಹಿತಿ ಬಂದಿದ್ದು ಕೂಡಲೇ ನಾನು ಪಿ.ಎಸ್.ಐ.ರವರಿಗೆ ಮಾಹಿತಿ ನೀಡಿ ಅನುಮತಿಯನ್ನು ಪಡೆದು ಎಂ.ಜಿ.ವೃತ್ತದಲ್ಲಿದ್ದ ಗಿರೀಶ್, ಪಿ.ಸಿ.542 ರವರ ಜೊತೆಯಲ್ಲಿ ನದಿಗಡ್ಡೆಗೆ ಹೋಗಿ ಅಲ್ಲಿ ಪಂಚಾಯ್ತಿದಾರರನ್ನು ಕರೆದುಕೊಂಡು ಸ್ವಲ್ಪ ದೂರ ನಡೆದುಕೊಂಡು ಹೊಸದಾಗಿ ನಿರ್ಮಿಸಿರುವ ಬ್ರಿಡ್ಜ್ ಬಳಿ ಹೋಗಿ ನೊಡಲಾಗಿ ಯಾರೋ ಆಸಾಮಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ 1/- ರೂ.ಗೆ 70/- ರೂ.ಗಳನ್ನು ಕೊಡುವುದಾಗಿ ಕೂಗಾಡುತ್ತಿರುವುದು ಕಂಡುಬಂದಿತು. ನಾನು ಮತ್ತು ಗಿರೀಶ್ ಪಿ.ಸಿ.542 ರವರು ಪಂಚರ ಸಮ್ಮುಖದಲ್ಲಿ ಸುತ್ತುವರೆದು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸವನ್ನು  ಕೇಳಲಾಗಿ ಮಾರುತಿ.ಜಿ.ಟಿ. ಬಿನ್ ತಿಮ್ಮಯ್ಯ, 28 ವರ್ಷ, ಬಲಜಿಗರು, ವಿನಾಯಕ ನಗರ ಗೌರಿಬಿದನೂರು ನಗರ ಫೋ.ನಂ.9632114980 ಎಂದು ತಿಳಿದ್ದು, ಅವನಿಗೆ ಮಟ್ಕಾ ಜೂಜಾಟವಾಡುವುದಕ್ಕೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು. ಆ ಸಮಯದಲ್ಲಿ ಆ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಒಂದು ಮಟ್ಕಾ ಚೀಟಿ ಬರೆಯುವ ಪುಸ್ತಕ, ಒಂದು ಬಾಲ್ ಪಾಯಿಂಟ್ ಪೆನ್ ಮತ್ತು ನಗದು ಹಣ 1,110/- ರೂಪಾಯಿಗಳು ಇದ್ದು, ಹಣದ ಬಗ್ಗೆ ವಿಚಾರ ಮಾಡಲಾಗಿ ಮಟ್ಕಾ ಜೂಜಾಟದಿಂದ ಬಂದ ಹಣ ಎಂದು ತಿಳಿಸಿದನು. ನಂತರ ಆರೋಪಿಯನ್ನು ವಶಕ್ಕೆ ಪಡೆದು ಪಂಚನಾಮೆ ಜರುಗಿಸಿ ಆರೋಪಿ ಹಾಗೂ ಮಾಲಿನಿಂದಿಗೆ ಸಂಜೆ 6.45 ಗಂಟೆಗೆ ಠಾಣೆಗೆ ವಾಪಸ್ಸು ಬಂದು ಕ್ರಮ ಕೈಗೊಳ್ಳುವುದಾಗಿ ವರದಿಯನ್ನು ನೀಡಿದ್ದು, ಸದರಿ ವರದಿಯ ಮೇರೆಗೆ ಠಾಣಾ ಎನ್.ಸಿ.ಆರ್.ನಂ.191/2020 ರಂತೆ ಎನ್.ಸಿ.ಆರ್ ದಾಖಲು ಮಾಡಿ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಪ್ರಕರಣವನ್ನು ದಾಖಲು ಮಾಡಿರುತ್ತೇನೆ.

  1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 113/2020 ಕಲಂ. 160 ಐಪಿಸಿ :-

    ದಿನಾಂಕ 03/07/2020 ರಂದು ರಾತ್ರಿ 8-00 ಗಂಟೆಗೆ ಪಿರ್ಯಾಧಿ ಗುಡಿಬಂಡೆ ಪೊಲೀಸ್ ಠಾಣೆಯ ಹೆಚ್.ಸಿ-77 ಶಂಕರಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ,  ದಿನಾಂಕ 03/07/2020 ರಂದು ರಾತ್ರಿ ಸುಮಾರು 6-50 ಗಂಟೆಯ ಸಮಯದಲ್ಲಿ ತಾನು ಮತ್ತು ಪಿ.ಎಸ್.ಐ. ಶ್ರೀ ಪ್ರತಾಪ್. ಹೋಂಗಾರ್ಡ್ ನಂ 445 ಜಿಕ್ರಿಯಾ ರವರು ಪೆರೆಸಂದ್ರ ಪೊಲೀಸ್ ಹೊರ ಠಾಣೆಯ ಬಳಿದ್ದಾಗ ಕಮ್ಮಗಾನಹಳ್ಳಿ ಗ್ರಾಮದ ಮಂಜು ಮತ್ತು ಮುತ್ತಕದಹಳ್ಳಿ  ಶ್ರೀನಿವಾಸ ಎಂಬುವರು ತಮಗೆ ಕರೆ ಮಾಡಿ ಕೆಲವರು ಅಂಜನಾದ್ರಿ ಕಾಲೇಜು ಮುಂಭಾಗ ಪೆರೆಸಂದ್ರ-ಗುಡಿಬಂಡೆಗೆ ಹೋಗುವ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ದೊಣ್ಣೆಗಳಿಂದ ಹೊಡೆದಾಡುಕೊಳ್ಳುತ್ತಾ  ಸಾರ್ವಜನಿಕರಿಗೆ ಭಯ-ಭೀತಿ ಉಂಟು ಮಾಡುತ್ತಿರುವುದಾಗಿ ತಿಳಿಸಿದ್ದು, ಆಗ ತಾವುಗಳು ರಾತ್ರಿ ಸುಮಾರು 7-00 ಗಂಟೆಗೆ ಅಲ್ಲಿಗೆ ಹೋದಾಗ ಒಬ್ಬರಿಗೊಬ್ಬರು ದೊಣ್ಣೆಗಳಿಂದ ಹೊಡೆದಾಡುಕೊಳ್ಳುತ್ತಿದ್ದರು. ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಕೆಲವರು ಸ್ಥಳದಿಂದ ಓಡಿ ಹೋಗಿದ್ದು, ಅಲ್ಲಿದ್ದವರನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ 1) ರವಿ ಬಿನ್ ಯಾಮಣ್ಣ, 27 ವರ್ಷ, ವಕ್ಕಲಿಗರು, ಜಿರಾಯ್ತಿ, ದೇವಸ್ಥಾನದ ಹೊಸಹಳ್ಳಿ ಚಿಕ್ಕಬಳ್ಳಾಪುರ ತಾಲ್ಲೂಕು, ಶೇಖರ್ ಬಿನ್ ವೀರಪ್ಪ, 29 ವರ್ಷ, ವಕ್ಕಲಿಗರು, ಜಿರಾಯ್ತಿ, ದೇವಸ್ಥಾನದ ಹೊಸಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕು, 3) ರಾಜೇಶ ಬಿನ್ ಕೃಷ್ಣಪ್ಪ, 28 ವರ್ಷ, ಚಾಲಕ, ಹುನೇಗಲ್, ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 4)ದಿಲೀಪ್ ಬಿನ್  ಲೋಕೇಶ, 20 ವರ್ಷ, ಅಕ್ಕಸಾಲಿಗ ಜನಾಂಗ, ಬಿ.ಇ ವಿದ್ಯಾರ್ಥಿ, ಅರೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 5)  ಚೆನ್ನಕೇಶವ ಬಿನ್ ನರಸಿಂಹಪ್ಪ, 26 ವರ್ಷ, ಆದಿದ್ರಾವಿಡ ಜನಾಂಗ, ತುಮಕಲಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, ಓಡಿ ಹೋದವರ ಹೆಸರು ಮತ್ತು ವಿಳಾಸ ಕೇಳಲಾಗಿ 1) ಗೋವರ್ಧನ ಬಿನ್ ಗೋಪಾಲಪ್ಪ, 20 ವರ್ಷ, ಬಲಜಿಗರು, ಮುತ್ತಕದಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 2) ಸಾಯಿ ಬಿನ್ ನಾಯ್ಡು 21 ವರ್ಷ, ಪೆರೇಸಂದ್ರ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 3) ನವೀನ್ ಬಿನ್ ಗಜೇಂದ್ರಚಾರಿ 21 ವರ್ಷ, ಪೆರೆಸಂದ್ರ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 4) ಪ್ರದೀಪ್ ಬಿನ್ ಶ್ರೀನಿವರ್ಷ, 20 ವರ್ಷ, ಟೆಂಪೋಚಾಲಕ ಕಮ್ಮಗಾನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು, 5) ಗಿರೀಶ ಬಿನ್ ರಾಮಚಂದ್ರ, 27 ವರ್ಷ, ಅರೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು, 6) ಗೌತಮ್ ಬಿನ್ ಶ್ರೀನಿವಾಸರೆಡ್ಡಿ, 26 ವರ್ಷ, ವಕ್ಕಲಿಗರು, ಕಮ್ಮಗುಟ್ಟಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು,7) ಗಣೇಶ ಬಿನ್ ಭೈರೆಡ್ಡಿ, 25 ವರ್ಷ, ಅರೂರು ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದರು. ವಿಚಾರಣೆ ಮಾಡಲಾಗಿ ಈ ಹಿಂದೆ ಕ್ರಿಕೇಟ್ ಆಟವಾಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದು, ಇದೇ ವಿಚಾರವಾಗಿ ಈ ದಿನ ಕುಡಿದು ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡೆವು ಎಂದು ತಿಳಿಸಿದರು. ಮೇಲ್ಕಂಡ ಆರೋಪಿಗಳು ವಿನಾ ಕಾರಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬರಿಗೊಬ್ಬರು ದೊಣ್ಣೆಗಳಿಂದ ಹೊಡೆದಾಡುಕೊಳ್ಳುತ್ತಾ ಸಾರ್ವಜನಿಕರಿಗೆ ಭಯ-ಭೀತಿ ಉಂಟು ಮಾಡುತ್ತಿದ್ದು, ಸದರಿ ರವರನ್ನು ಹಾಜರುಪಡಿಸುತ್ತಿದ್ದು, ಸದರಿಯವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 154/2020 ಕಲಂ. 87 ಕೆ.ಪಿ. ಆಕ್ಟ್ :-

    ದಿನಾಂಕ: 04/07/2020 ರಂದು ಸಂಜೆ 6-30 ಗಂಟೆಗೆ ಪಿರ್ಯಾದಿದಾರರಾದ ಡಿಸಿಬಿ/ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀಮತಿ ಸರಸ್ವತಮ್ಮ ರವರು ಮಾಲು, ಮಹಜರ್ ಹಾಗೂ ಆರೋಪಿಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಈದಿನ ನಾನು ಮತ್ತು ಸಿಬ್ಬಂದಿಯವರು ಗೌರಿಬಿದನೂರು ತಾಲ್ಲೂಕಿನಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಣೆ ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ 3,30 ಗಂಟೆ ಸಮಯದಲ್ಲಿ ಬಿಸಲಹಳ್ಳಿ ಗ್ರಾಮದ ಕಡೆ ಗಸ್ತಿನಲ್ಲಿದ್ದಾಗ ತಾಲ್ಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ದೊಡ್ಡ ಬೀರಮಂಗಲ ಗ್ರಾಮದ ಕ್ರಾಸ್ ನಿಂದ ಸುಮಾರು 500 ಮೀಟರ್ ಪೂರ್ವಕ್ಕೆ ಇರುವ ಕರಿಗುಟ್ಟೆ ಯಲ್ಲಿ ಯಾರೋ ಕೆಲವರು ಕಾನೂನು ಬಾಹೀರವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಜೂಜಾಟದ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿಯಲ್ಲಿ 4 ಜನ ಆರೋಪಿತರು ಸಿಕ್ಕಿಬಿದ್ದಿರುತ್ತಾರೆ, (ಸಿಬ್ಬಂದಿಯವರ ಹೆಸರು ಮತ್ತು ಆರೋಪಿತರ ಹೆಸರುಗಳನ್ನು ಪಂಚನಾಮೆಯಲ್ಲಿ ವಿವರವಾಗಿ ನಮೂದಿಸಿರುತ್ತೆ) ನಂತರ ಸ್ಥಳದಲ್ಲಿ ಜೂಜಾಟಕ್ಕೆ ಬಳಸಿದ್ದ 1) 52 ಇಸ್ಪೀಟು ಎಲೆಗಳು 2)ಒಂದು ಪ್ಲಾಸ್ಟಿಕ್ ಪೇಪರ್ 3) ಹಾಗೂ ಪಣಕ್ಕೆ ಹಾಕಿದ್ದ 5,100/-ರೂಪಾಯಿಗಳನ್ನು ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡಿರುತ್ತೆ, ಜೂಜಾಟದ ಸ್ಥಳದಲ್ಲಿ ಸಿಕ್ಕಿಬಿದ್ದ ಆರೋಪಿತರನ್ನು ಮತ್ತು ಮಾಲನ್ನು ನಿಮ್ಮ ವಶಕ್ಕೆ ನೀಡುತ್ತಿದ್ದು  ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಪ್ರ.ವ.ವರದಿ.

  1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ. 155/2020 ಕಲಂ. 279,337 ಐಪಿಸಿ :-

    ದಿನಾಂಕ: 05/07/2020 ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ನಾಗೇಶ್ ಎ ಬಿನ್ ಅಶ್ವತ್ಥರೆಡ್ಡಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ದಿನಾಂಕ: 04/07/2020 ರಂದು ನಮ್ಮ ಅತ್ತೆ ಮಗ ಶಿವರಾಜ್ ಕೆ ಎನ್ ಬಿನ್ ಲೇಟ್ ನಾಗರಾಜ್, 29 ವರ್ಷ, ಖಾಸಗಿ ಕಂಪೆನಿಯಲ್ಲಿ ಕೆಲಸ, ವಾಸ ಕಾದಲವೇಣಿ ಗ್ರಾಮ, ಗೌರಿಬಿದನೂರು ತಾಲ್ಲೂಕು ರವರು ತನ್ನ ಬಾಬತ್ತು KA-14-EM-8655 ನೊಂದಣಿ ಸಂಖ್ಯೆಯ ಹಿರೋ ಸ್ಪ್ಲೆಂಡರ್ ಪ್ಲಸ್ ದ್ವಿ ಚಕ್ರ ವಾಹನದಲ್ಲಿ ಕಾದಲವೇಣಿ ಗ್ರಾಮದಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಗ್ರಾಮಕ್ಕೆ ಬರಲು ಸದರಿ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಿಕೊಂಡು ಎಸ್.ಎಚ್-9 ರಸ್ತೆಯಲ್ಲಿ ರಾತ್ರಿ ಸುಮಾರು 7-30 ಗಂಟೆಯಲ್ಲಿ ತೊಂಡೆಬಾವಿ ರೈಲ್ವೇಸ್ಟೇಷನ್ ನ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಬರುತ್ತಿರುವಾಗ ಎದುರುಗಡೆಯಿಂದ ಅಂದರೆ ಗೌರಿಬಿದನೂರು ಕಡೆಯಿಂದ KA-20-S-7371 ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನದ ಸವಾರ ದ್ವಿ ಚಕ್ರ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಮ್ಮ ಅತ್ತೆ ಮಗ ಶಿವರಾಜ್ ಕೆ ಎಸ್ ರವರು ಚಾಲನೆ ಮಾಡಿಕೊಂಡು ಬರುತ್ತಿದ್ದ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿ ಅಪಘಾತಪಡಿಸಿದ್ದರ ಪರಿಣಾಮ ದ್ವಿ ಚಕ್ರ ವಾಹನ ಜಖಂಗೊಂಡು ಶಿವರಾಜ್ ರವರ ಮೂಗಿಗೆ, ಕಣ್ಣಿನ ಬಳಿ, ತುಟಿಗೆ ಹಾಗೂ ಹಣೆಗೆ ಮತ್ತು ಎಡಕಾಲಿಗೆ ರಕ್ತಗಾಯಗಳಾಗಿ ಅಪಘಾತಪಡಿಸಿದ ದ್ವಿ ಚಕ್ರ ವಾಹನದ ಸವಾರನಿಗೂ ಸಹಾ ರಕ್ತಗಾಯಗಳಾಗಿದ್ದು, ಗಾಯಾಳುಗಳನ್ನು ಅಲ್ಲಿದ್ದ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವಾಹನದಲ್ಲಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ವಿಚಾರ ತಿಳಿದು ನಾನು ಸಹಾ ಆಸ್ಪತ್ರೆಗೆ ಹೋಗಿ ನೋಡಲಾಗಿ ವಿಚಾರ ನಿಜವಾಗಿದ್ದು ವೈದ್ಯರ ಸಲಹೆಯ ಮೇರೆಗೆ ಗಾಯಾಳು ಶಿವರಾಜ್ ರವರನ್ನು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಿ ಈದಿನ ತಡವಾಗಿ ದೂರು ನೀಡುತ್ತಿದ್ದು. ಈ ಅಪಘಾತಕ್ಕೆ ಕಾರಣವಾದ KA-20-S-7371 ನೊಂದಣಿ ಸಂಖ್ಯೆಯ ಪಲ್ಸರ್ ದ್ವಿ ಚಕ್ರ ವಾಹನದ ಸವಾರನ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕಾಗಿ ಕೋರಿ ಪ್ರ.ವ.ವರದಿ.

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ. 44/2020 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-

    ದಿನಾಂಕ:04/07/2020 ರಂದು ಸಂಜೆ 04-30 ಗಂಟೆಗೆ ಪಿಎಸ್ಐ ಪಾತಪಾಳ್ಯ ಪೊಲೀಸ್ ಠಾಣೆರವರು ಠಾಣೆಗೆ ಬಂದು ನೀಡಿದ ವರದಿಯ ಸಾರಾಂಶವೇನೆಂದರೆ  ದಿನಾಂಕ:04/07/2020 ರಂದು ಮದ್ಯಾಹ್ನ  ಸುಮಾರು 03-00 ಗಂಟೆಗೆ ಪಾತಪಾಳ್ಯ ಪೊಲೀಸ್ ಠಾಣಾ ಸರಹದ್ದು ರಾಚವಾರಪಲ್ಲಿ ಗ್ರಾಮದ ಬಳಿ ಗಸ್ತಿನಲ್ಲಿದ್ದಾಗ ರಾಚವಾರಪಲ್ಲಿ ಗ್ರಾಮದಲ್ಲಿ ಮನೆಯ ಮುಂಬಾಗದ ಖಾಲಿ ಜಾಗದಲ್ಲಿ ಯಾರೋ ಆಸಾಮಿ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಸರ್ಕಾರಿ ಜೀಪಿನ ಸಂಖ್ಯೆ ಕೆ,ಎ-40 ಜಿ-92 ರಲ್ಲಿ ರಾಚವಾರಪಲ್ಲಿ ಗ್ರಾಮದ ಮನೆಯ  ಮುಂಬಾಗದ ಖಾಲಿ ಜಾಗದ ಬಳಿಗೆ ಹೋಗಲಾಗಿ ನಾವು ಹೋಗಿದ್ದ  ಜೀಪನ್ನು ನೋಡಿ ಮನೆಯ ಮುಂಬಾಗದ ಬಳಿ ಖಾಲಿ ಜಾಗದಲ್ಲಿದ್ದ  ಯಾರೋ ಒಬ್ಬರು  ಓಡಿ ಹೋಗಿದ್ದು  ಮನೆಯ  ಬಳಿ ಖಾಲಿ ಜಾಗದಲ್ಲಿ ಒಬ್ಬ ಆಸಾಮಿ ಇದ್ದು ಆತನ ಹೆಸರು ವಿಳಾಸ ಕೇಳಲಾಗಿ  ಗಂಗಾಧರ ಬಿನ್ ನರಸಿಂಹಪ್ಪ 35 ವರ್ಷ, ಆದಿ ಕರ್ನಾಟಕ ಜನಾಂಗ, ವ್ಯಾಪಾರ ರಾಚವಾರಪಲ್ಲಿ ಗ್ರಾಮ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು  ಸದರಿ ಸ್ಥಳದಲ್ಲಿ ನಾವು ಪರಿಶೀಲಿಸಲಾಗಿ  90 ಮಿ,ಲೀಟರ್ ನ  12  ಹೈ ವಾರ್ಡ್ಸ್  ವಿಸ್ಕಿ ಮದ್ಯದ ಟೆಟ್ರಾ ಪಾಕಟೆ ಗಳು (ಸುಮಾರು  420/- ರೂ ಬೆಲೆ ಬಾಳುವುದಾಗಿರುತ್ತೆ,) ಮತ್ತು 01 ಲೀಟರ್ ನ 01 ನೀರಿನ ಖಾಲಿ ಬಾಟಲ್ ಮತ್ತು 01 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ ಖಾಲಿ 90 ಮಿ,ಲೀಟರ್ ನ  01  ಹೈ ವಾರ್ಡ್ಸ್ ವಿಸ್ಕಿ ಟೆಟ್ರಾ ಪಾಕೆಟ್  ಇದ್ದು ಸ್ಥಳದಲ್ಲಿದ್ದ ಮೇಲ್ಕಂಡ ಆಸಾಮಿಯನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ಯಾವುದೇ ಪರವಾನಗಿಯನ್ನು ಪಡೆದಿಲ್ಲವೆಂದು ತಿಳಿಸಿರುತ್ತಾನೆ, ಸದರಿ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು  ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಆಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಅಮಾನತ್ತು ಪಡಿಸಿದ ಮಾಲುಗಳೊಂದಿಗೆ ಠಾಣೆಗೆ ವಾಪ್ಪಸ್ಸಾಗಿ ಮೇಲ್ಕಂಡವನ ವಿರುದ್ದ ಮುಂದಿನ ಕ್ರಮ ಜರುಗಿಸಲು ಕೋರಿ ನೀಡಿದ ವರದಿಯ ಮೇರೆಗೆ ಠಾಣಾ ಮೊ,ಸಂ  44/2020  ಕಲಂ 15(ಎ) 32(3) ಕೆ,ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

  1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 172/2020 ಕಲಂ. 269,271 ಐಪಿಸಿ :-

    ದಿನಾಂಕ:05.07.2020 ರಂದು ಬೆಳಿಗ್ಗೆ 11-00 ಗಂಟೆಗೆ ಪೃಥ್ವಿರಾಜ್.ಜಿ, ಸಿಪಿಸಿ-195 ರವರು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶವೇನೆಂದರೆ,  ಈ ದಿನ ಬೆಳಿಗ್ಗೆ ಠಾಣಾಧಿಕಾರಿಗಳು ಬೀಟ್ ಕರ್ತವ್ಯಕ್ಕೆ ನೇಮಕ ಮಾಡಿರುತ್ತಾರೆ.   ಅದರಂತೆ ನಾನು ಜಂಗಮಕೋಟೆ, ತೊಟ್ಟಿಬಾವಿ, ಸುಂಡ್ರಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗಸ್ತು ಮಾಡಿಕೊಂಡು ಬೆಳಿಗ್ಗೆ 10-00 ಗಂಟೆಗೆ ಜಂಗಮಕೋಟೆ ವೃತ್ತಕ್ಕೆ ಹೋಗಿ ಮಾಹಿತಿಯನ್ನು ಸಂಗ್ರಹಿಸಲಾಗಿ ನನಗೆ ಬಂದ ಮಾಹಿತಿಯ ಮೇರೆಗೆ ಠಾಣಾ ಸರಹದ್ದಿನ  ಲೋಕೇಶ ಬಿನ್ ರಾಜಣ್ಣ, 22 ವರ್ಷ, ಕುರುಬರು, ವಾಸ ಜ್ಞಾನ ಜ್ಯೋತಿ ಶಾಲೆ ಬಳಿ ಜಂಗಮಕೋಟೆ ಕ್ರಾಸ್ ಶಿಡ್ಲಘಟ್ಟ ತಾಲ್ಲೂಕು ಪೋ.8970785881 ರವರನ್ನು ಶಿಡ್ಲಘಟ್ಟ ತಾಲ್ಲೂಕು ಆರೋಗ್ಯಾಧಿಕಾರಿಗಳು ದಿನಾಂಕ:30/06/2020 ರಂದು ಕೋವೀಡ್-19 ಪರೀಕ್ಷೆಗೆ ಒಳಪಡಿಸಿ ದಿನಾಂಕ:30/06/2020 ರಿಂದ ದಿನಾಂಕ:13/07/2020 ರವರೆವಿಗೂ (Home Quarantine) ನಿವಾಸದಲ್ಲಿ ಇರಲು ಸೂಚನೆಗಳನ್ನು ನೀಡಿ ಹೋಮ್ ಕ್ವಾರಂಟೈನ್ ಬಗ್ಗೆ ಕೈಗೆ ಸೀಲ್ ಮಾಡಿ ಪ್ರತ್ಯಕಗೊಳಿಸುವಿಕೆ (Home Quarantine) ನಿಗಾವಣೆಯಲ್ಲಿರಲು ಆದೇಶ ಮಾಡಿ ಮನೆಗೆ ಕಳುಹಿಸಿಕೊಟ್ಟಿರುತ್ತಾರೆ. ಲೋಕೇಶ ಬಿನ್ ರಾಜಣ್ಣ, ರವರು ದಿನಾಂಕ:04/07/2020 ರಂದು ಮತ್ತು ದಿನಾಂಕ:05/07/2020 ರಂದು  ಮನುಷ್ಯರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್ -19 ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿದೆ ಎಂದು ತಿಳಿದೂ ಸಹ ನಿರ್ಲಕ್ಷ್ಯತನದಿಂದ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ (Home Quarantine) ಸರ್ಕಾರದ ಆದೇಶವನ್ನು ಉಲ್ಲಂಘಿಸಿರುತ್ತಾರೆಂದು ತಿಳಿದು ಬಂದಿರುತ್ತೆ.   ಆದ್ದರಿಂದ ಸದರಿ ವ್ಯಕ್ತಿಯ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕಾಗಿ ಕೋರಿ ದೂರಾಗಿರುತ್ತೆ.