ದಿನಾಂಕ : 05/04/2020 ರ ಅಪರಾಧ ಪ್ರಕರಣಗಳು

1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 46/2020 ಕಲಂ. 429,270 ಐಪಿಸಿ ಮತ್ತು ಸೆಕ್ಷನ್ 25(1AA),27(1)(A) INDIAN ARMS ACT, 1959 & ಸೆಕ್ಷನ್ 51 WILD LIFE (PROTECTION) ACT, 1972 & ಸೆಕ್ಷನ್ 87 ಕೆ.ಪಿ. ಆಕ್ಟ್ :-
ದಿನಾಂಕ:05/04/2020 ರಂದು ಬೆಳಿಗ್ಗೆ 6.00 ಗಂಟೆಗೆ ಠಾಣೆಗೆ ಬಂದು ವಶಕ್ಕೆ ಪಡೆದ ಾರೋಪಿಗಳು ಮಾಲು ಸಮೇತ ನೀಡಿದ ಜ್ಞಾಪನಾ ಪತ್ರ ನಿಈಡಿದ್ದರ ಸಾರಾಂಶವೇನೆಂದರೆ ದಿನಾಂಕ:04-04-2020 ರಂದು ಚಿಕ್ಕಬಳ್ಳಾಪುರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಕೆ ರವಿಶಂಕರ್ ಆದ ನಾನು ನನಗೆ ಒದಗಿಸಲಾಗಿರುವ ಬೊಲೆರೋ ಜೀಪ್ ಸಂಖ್ಯೆ: ಕೆ.ಎ-40-ಜಿ-1555 ಜೀಪಿನಲ್ಲಿ ನನ್ನ ಕಛೇರಿಯ ಸಿಬ್ಬಂದಿಯವರಾದ ಹೆಚ್.ಸಿ.-17 ಶ್ರೀನಾಥ.ವಿ, ಪಿ.ಸಿ-403 ಶ್ರೀ ಬಾಬು ಮತ್ತು ಚಾಲಕ ಎ.ಪಿ.ಸಿ-119 ಅಶೋಕ ರವರುಗಳೊಂದಿಗೆ ಚಿಕ್ಕಬಳ್ಳಾಪುರ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ದಿನಾಂಕ:04/05-04-2020 ರಂದು ರಾತ್ರಿ ಸುಮಾರು 1:00 ಗಂಟೆ ಸಮಯದಲ್ಲಿ ಯಾರೋ ಒಬ್ಬ ಭಾತ್ಮಿದಾರರು ವಿಚಾರ ತಿಳಿಸಿದ್ದೇನೆಂದರೇ ತಾನು ಮೊಟ್ಲೂರು ಗ್ರಾಮದ ಕಡೆಯಿಂದ ಚಿಕ್ಕಬಳ್ಳಾಪುರ-ಗೌರಿಬಿದನೂರು ಪುರ ರಸ್ತೆ ಪಕ್ಕದಲ್ಲಿ ಇರುವ ತೋಟದ ಕಡೆಗೆ ಹೋಗುತ್ತಿದ್ದಾಗ ಜಕ್ಕಲಮಡಗು ಕ್ರಾಸ್ ಸಮೀಪ ಇರುವ ಮಧುಸೂಧನ್ ರವರ ಜಮೀನಿನ ಬಳಿ ಬಂದೂಕಿನಿಂದ ಸುಟ್ಟ ಶಬ್ದ ಕೇಳಿ ಸ್ವಲ್ಪ ಹತ್ತಿರ ಹೋಗಿ ಟಾಚರ್್ ಹೋಗಿ ನೋಡಲಾಗಿ ನಲ್ಲಕದಿರೇನಹಳ್ಳಿ ಗ್ರಾಮದ ವಾಸಿ ವೆಂಕಟೇಶ ರವರ ತಮ್ಮ ದಯಾನಂದ ಎಂಬುವರು ಬಂದೂಕಿನಿಂದ ಕಾಡು ಹಂದಿಯನ್ನು ಸುಟ್ಟು ಅಲ್ಲಿಯೇ ಪಕ್ಕದಲ್ಲಿ ಇರುವ ಮಧುಸೂಧನ್ ರವರ ಫಾರ್ಮ ಹೌಸ್ಗೆ ತೆಗೆದುಕೊಂಡು ಹೋದರೆಂದು ರಾತ್ರಿ ಸುಮಾರು 1:45 ಗಂಟೆಗೆ ನನಗೆ ಮಾಹಿತಿ ತಿಳಿಸಿದರು. ಕೂಡಲೇ ನಾನು ಚಿಕ್ಕಬಳ್ಳಾಪುರ ನಗರದ ರಾತ್ರಿ ಗಸ್ತಿನಲ್ಲಿದ್ದ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಓಂಪ್ರಕಾಶ್ ಗೌಡ ರವರಿಗೆ ಮೇಲ್ಕಂಡ ಮಾಹಿತಿಯನ್ನು ತಿಳಿಸಿ ಅವರನ್ನು ಮತ್ತು ಪಂಚರನ್ನು ಕರೆದುಕೊಂಡು ಬೆಳಗಿನ ಜಾವ ಸುಮಾರು 2:45 ಗಂಟೆಗೆ ಜಕ್ಕಲಮಡಗು ಕ್ರಾಸ್ ಸಮೀಪದ ಮಧುಸೂಧನ್ ರವರ ಫಾರ್ಮ ಹೌಸ್ ಬಳಿಗೆ ಹೋಗಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿ ಫಾರ್ಮ ಹೌಸ್ ಮುಂಭಾಗ ಮಾಂಸವನ್ನು ಕತ್ತರಿಸುತ್ತಿದ್ದು ಇನ್ನೂ ಸುಮಾರು 4-5 ಜನರು ಲೈಟ್ ಬೆಳಕಿನಲ್ಲಿ ಕುಳಿತುಕೊಂಡು ಅಂದರ್ ಬಾಹರ್ ಇಸ್ಪೀಟು ಜೂಜಾಟವನ್ನು ಆಡುತ್ತಿದ್ದುದ್ದು ಕಂಡು ಬಂದಿತು. ಅದನ್ನು ಕಂಡು ನಾನು, ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಅಲ್ಲಿಗೆ ಹೋಗಿ ದಾಳಿ ಮಾಡುತ್ತಿದ್ದಂತೆ ಇಸ್ಪೀಟು ಆಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಿದ್ದು ಸಿಬ್ಬಂದಿಯವರ ಸಹಾಯದಿಂದ ಮೂರು ಜನರನ್ನು ಹಿಡಿದುಕೊಂಡಿದ್ದು ಅವರುಗಳ ಹೆಸರು ಮತ್ತು ವಿಳಾಸವನ್ನು ಕೇಳಲಾಗಿ ಮಧು @ ಮಧುಸೂಧನ್ ಬಿನ್ ಲೇಟ್ ಚಂದ್ರಶೇಖರ್, 46 ವರ್ಷ, ವ್ಯಾಪಾರ, ವಾಸ ನಂ 39, 4ನೇ ಕ್ರಾಸ್, ನಾಗದೇನಹಳ್ಳಿ, ಕೆಂಗೇರಿ, ಬೆಂಗಳೂರು-56 ಎಂತಲೂ ಮತ್ತೊಬ್ಬ ಆಸಾಮಿ ದೇವರಾಜ ಬಿನ್ ಮುತ್ತುರಾಯಪ್ಪ, 46 ವರ್ಷ, ಜಿರಾಯ್ತಿ, ಕೊರಚರು, ಮೊಟ್ಲೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಮತ್ತು ವೆಂಕಟೇಶ ಬಿನ್ ಲೇಟ್ ಸಿಂಗಾಲಪ್ಪ, 48 ವರ್ಷ, ಕೊರಚರು, ಮೊಟ್ಲೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಯಿತು. ನಂತರ ಓಡಿ ಹೋದವರ ಹೆಸರು ತಿಳಿಯಲಾಗಿ ದಯಾನಂದ ಬಿನ್ ಲೇಟ್ ಚಿಕ್ಕಹನುಮೇಗೌಡ, 41 ವರ್ಷ, ವಕ್ಕಲಿಗರು, ನಲ್ಲಕದಿರೇನಹಳ್ಳಿ ಗ್ರಾಮ ಎಂಬುದಾಗಿ ತಿಳಿಯಿತು. ನಂತರ ಸ್ಥಳದಲ್ಲಿ ಇಸ್ಪೀಟು ಜೂಜಾಟವಾಡಲು ಉಪಯೋಗಿಸುತ್ತಿದ್ದ 52 ಇಸ್ಪೀಟು ಎಲೆಗಳು, ಒಂದು ನೋಟ್ ಬುಕ್, ಒಂದು ಬೆಂಕಿ ಪಟ್ಟಣ, ಒಂದು ಕ್ಯಾಂಡಲ್, ಜೂಜಾಟವಾಡಲು ಪಣವಾಗಿಟ್ಟಿದ್ದ 2920/- ರೂಗಳ ಹಣವನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತೆ. ನಂತರ ಸ್ಥಳದಲ್ಲಿ ಪರಿಶೀಲನೆ ಮಾಡಲಾಗಿ ಮನೆಯ ಮುಂಭಾಗದಲ್ಲಿ ಒಂದು ಟೇಬಲ್, ಮಾಂಸವನ್ನು ಕತ್ತರಿಸಲು ಉಪಯೋಗಿಸಿದ ಮರದ ತುಂಡು, ಮಾಂಸವನ್ನು ಕತ್ತರಿಸಲು ಉಪಯೋಗಿಸಿದ ಎರಡು ಕಬ್ಬಿಣದ ಮಚ್ಚುಗಳು, ಮಾಂಸವನ್ನು ಕೊಯ್ಯಲು ಉಪಯೋಗಿಸಿದ ಕಬ್ಬಿಣದ ಎರಡು ಚೂರಿಗಳು ಇದ್ದವು. ಈ ಸಂಬಂಧ ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರ ಮಾಡಿದಾಗ ದಿನಾಂಕ:04-04-2020 ರಂದು ನಲ್ಲಕದಿರೇನಹಳ್ಳಿ ಗ್ರಾಮದ ಭರಣಿ ವೆಂಕಟೇಶ ರವರಿಗೆ ಸಂಬಂಧಿಸಿದ ಡಿ.ಬಿ.ಬಿ.ಎಲ್. ಬಂದೂಕು ಹಾಗೂ ಅದಕ್ಕೆ ಉಪಯೋಗಿಸುವ ಕಾಟ್ರೇಜ್ ಗಳನ್ನು ತಂದು ರಾತ್ರಿ ಸುಮಾರು 11:30 ಗಂಟೆ ಸಮಯಕ್ಕೆ ಮಧುಸೂಧನ್ ರವರ ಜಮೀನಿನ ಪಕ್ಕದ ಕಾಡಿನಲ್ಲಿ ದಯಾನಂದ ರವರು ಕಾಡು ಹಂದಿಯನ್ನು ಬೇಟೆಯಾಡಿ ಸಾಯಿಸಿ ತಂದು ಅದನ್ನು ಮನೆಯ ಮುಂದೆ ಸುಟ್ಟು ಕತ್ತರಿಸಿದ ಮಾಂಸವನ್ನು ಪಾತ್ರೆಯಲ್ಲಿ ಹಾಕಿ ಮನೆಯಲ್ಲಿ ಇಟ್ಟಿರುವುದಾಗಿ ಬೇಟೆಯಾಡಲು ಉಪಯೋಗಿಸಿದ ಬಂದೂಕನ್ನು ಫಾರ್ಮ ಹೌಸ್ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿ ತೋರಿಸಿದ್ದು ಪರಿಶೀಲನೆ ಮಾಡಲಾಗಿ ಒಂದು ಪಾತ್ರೆಯಲ್ಲಿ ಇಟ್ಟಿದ್ದ ಮಾಂಸವನ್ನು ಪರಿಶೀಲನೆ ಮಾಡಲಾಗಿ ಅದು ಸುಮಾರು 10-12 ಕೆ.ಜಿ.ಯಷ್ಟು ಇರುತ್ತದೆ. ಫಾರಂ ಹೌಸ್ ಮುಂಭಾಗದಲ್ಲಿ ಮಾಂಸವನ್ನು ಕತ್ತರಿಸಲು ಉಪಯೋಗಿಸಿದ್ದ ಮರದ ತುಂಡನ್ನು ಅಲ್ಲಿಯೇ ಬಿಟ್ಟಿರುತ್ತೆಅದರ ಪಕ್ಕದಲ್ಲಿಯೇ ಇದ್ದ ಬಂದೂಕನ್ನು ಪರಿಶೀಲನೆ ಮಾಡಲಾಗಿ ಅದು ಡಿ.ಬಿ.ಬಿ.ಎಲ್ ಬಂದೂಕು ಆಗಿದ್ದು ಅದರ ಪಕ್ಕದಲ್ಲಿ ಎರಡು ಕಾಟ್ರೇಜ್ ಗಳು ಬಿದ್ದಿದ್ದು ಪರಿಶೀಲನೆ ಮಾಡಲಾಗಿ ಅದರಲ್ಲಿ ಒಂದು ಫೈಯರ್ ಆಗಿದ್ದು ಮತ್ತೊಂದು ಜೀವಂತ ಕಾಟ್ರೇಜ್ ಆಗಿರುತ್ತದೆ. ಮಾಂಸವನ್ನು ಕತ್ತಿರಿಸಿದ ಸ್ಥಳದಲ್ಲಿ ದೊರೆತ ರಕ್ತ ಮಿಶ್ರಿತ ಮಣ್ಣನ್ನು ಮತ್ತು ಮಾದರಿ ಮಣ್ಣನ್ನು ಪ್ರತ್ಯೇಕವಾಗಿ ಎಲ್ಲವನ್ನು ಸಂಗ್ರಹಣೆ ಮಾಡಿಕೊಂಡಿರುತ್ತೆ. ಸದರಿ ಮಾಂಸವನ್ನು ಹಾಗೂ ಬಂದೂಕನ್ನು ಸಾಗಾಣಿಕೆ ಮಾಡಲು ಫಾರ್ಮಹೌಸ್ ಬಳಿ ಒಂದು ಕಾರನ್ನು ನಿಲ್ಲಿಸಿದ್ದಾಗಿ ತಿಳಿಸಿದ್ದರ ಮೇರೆಗೆ ಅದನ್ನು ಪರಿಶೀಲನೆ ಮಾಡಲಾಗಿ ಕೆ.ಎ.-40-ಎ-6430 ನೊಂದಣಿ ಸಂಖ್ಯೆ ಸ್ವೀಫ್ಟ್ ವಿಡಿಐ ಸಿಮೆಂಟ್ ಬಣ್ಣದ ಕಾರು ಆಗಿರುತ್ತದೆ. ಈ ಮೇಲ್ಕಂಡ ಎಲ್ಲಾ ವಸ್ತುಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಪ್ರತ್ಯೇಕವಾಗಿ ಅಮಾನತ್ತುಪಡಿಸಿಕೊಂಡಿದ್ದು ವಸ್ತುಗಳು ಈ ಕೆಳಕಂಡಂತೆ ಇರುತ್ತವೆ. 1)ಡಿ.ಬಿ.ಬಿ.ಎಲ್ ಬಂದೂಕು 2)ಬೇಟೆಯಾಡಲು ಬಳಸಿದ ಒಂದು ಕಾಟ್ರೇಜ್ 3)ಒಂದು ಜೀವಂತ ಇರುವ ಕಾಟ್ರೇಜ್,4 )ಎರಡು ಮಚ್ಚುಗಳು. 5)ಎರಡು ಕಬ್ಬಿಣದ ಚೂರಿಗಳು 6)ಮಾಂಸವನ್ನು ಕತ್ತರಿಸಿದ ಸ್ಥಳದಲ್ಲಿ ಸಂಗ್ರಹಿಸಿದ ರಕ್ತ ಮಿಶ್ರಿತ ಮಣ್ಣು.7)ಮಾದರಿ ಮಣ್ಣು 8)ಸುಮಾರು 10-12 ಕೆ.ಜಿ ಇರುವ ಕಾಡು ಹಂದಿಯ ಮಾಂಸ9)52 ಇಸ್ಪೀಟು ಎಲೆಗಳು.10)ಒಂದು ನೋಟ್ ಬುಕ್ 11)ಒಂದು ಬೆಂಕಿ ಪೊಟ್ಟಣ. 12)ಒಂದು ಮೇಣದ ಬತ್ತಿ, 13)2920/- ರೂ ನಗದು ಹಣ.
14)ಒಂದು ಕೆ.ಎ.-40-ಎ-6430 ಒಂದು ಸ್ವೀಫ್ಟ್ ವಿಡಿಐ ಕಾರು. ಈ ಪೈಕಿ ಮೇಲ್ಕಂಡ ಕ್ರ.ಸಂ. 1 ರಿಂದ 7 ರನ್ನು ಪ್ರತ್ಯೇಕ ವಾಗಿ ಬಿಳಿ ಬಟ್ಟೆ ಚೀಲದಲ್ಲಿಟ್ಟು ಹೊಲೆದು ಅರಗು ಮಾಡಿ C ಎಂಬ ಅಕ್ಷರದಿಂದ ಸೀಲು ಮಾಡಿತ್ತೆ. ಉಳಿದ ಕ್ರ.ಸಂ. 9 ರಿಂದ 14 ರನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ. ಕ್ರ ಸಂ 8 ಅನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲಾಗುವುದು.
ಆರೋಪಿಗಳು ಕೋವಿಡ್-19ಕರ್ಪ್ಯೂ ಜಾರಿಯಲ್ಲಿದ್ದ ಸಮಯದಲ್ಲಿ ಅಕ್ರಮ ಗುಂಪು ಸೇರಿ ಯಾವುದೇ ಚಟುವಟಿಕೆಗಳನ್ನು ನಡೆಸಬಾರದೆಂದು ತಿಳಿದಿದ್ದರು ಸಹ ಉದ್ದೇಶಪೂರ್ವಕವಾಗಿ ರಾತ್ರಿ ಸಮಯದಲ್ಲಿ ವನ್ಯಜೀವಿಯನ್ನು ಬೇಟೆಯಾಡುವ ಹಾಗೂ ಕಾಡಿಗೆ ಹೋಗುವ ಸಂಬಂಧ ಯಾವುದೇ ಪರವಾನಿಗೆ ಅಥವಾ ಅನುಮತಿ ಇಲ್ಲದೇ ಇದ್ದರೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಮೇಲ್ಕಂಡ ವ್ಯಕ್ತಿಗಳು ಆತ್ಮರಕ್ಷಣೆಗಾಗಿ ಪರವಾನಿಗೆ ಪಡೆದು ತಮ್ಮಲ್ಲಿ ಇಟ್ಟುಕೊಂಡಿರುವ ಡಿ.ಬಿ.ಬಿ.ಎಲ್. ಬಂದೂಕನ್ನು ಅಕ್ರಮವಾಗಿ ವನ್ಯಜೀವಿಗಳ ಬೇಟೆಗಾಗಿ ಉಪಯೋಗಿಸಿರುತ್ತಾರೆ. ಅದೇ ರೀತಿ ಗುಂಪು ಸೇರದಂತೆ ಸರ್ಕಾರದ ಆದೇಶವಿದ್ದರೂ ಮೇಲ್ಕಂಡ ಆಸಾಮಿಗಳು ಅಕ್ರಮವಾಗಿ ಗುಂಪು ಸೇರಿ ಕೋವಿಡ್-19 ರ ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಕೊರೊನ ಸೋಂಕನ್ನು ಹರಡಲು ಪ್ರಯತ್ನಿಸುತ್ತಾ ಕಾನೂನು ಬಾಹಿರ ಚಟುವಟಿಕೆಯಾದ ಅಂದರ್ ಬಾಹರ್ ಇಸ್ಪೀಟು ಜೂಜಾಟವನ್ನು ಆಡುತ್ತಾ ಹಾಗೂ ವನ್ಯಜೀವಿಯನ್ನ ಅವರ ಬಂದೂಕಿನಲ್ಲಿ ಬೇಟೆಯಾಡಿ ಕಾನೂನು ಉಲ್ಲಂಘನೆ ಮಾಡಿರುತ್ತಾರೆ. ಮೇಲ್ಕಂಡಂತೆ ತನಿಖಾ ಕಾಲದಲ್ಲಿ ಕಂಡು ಬಂದಿರುವಂತೆ ಈಗಾಗಲೇ ಅಮಾನತ್ತು ಪಡಿಸಲಾದ ಕಾಡು ಹಂದಿಯ ಮಾಂಸವು ವನ್ಯಜೀವಿಯ ಸಂರಕ್ಷಣೆ ಕಾಯ್ದೆಯಡಿಗೆ ಸಂಬಂಧಪಟ್ಟಿ ರುವುದರಿಂದ ಕೂಡಲೇ ಅಮಾನತ್ತು ಪಡಿಸಲಾದ ಮಾಂಸವನ್ನು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾನೂನು ಕ್ರಮಕ್ಕಾಗಿ ನೀಡಿ ಕ್ರಮ ಕೈಗೊಳ್ಳಲು ಮನವಿ ಪತ್ರವನ್ನು ಸಲ್ಲಿಸಿಕೊಂಡಿರುತ್ತೆ. ಉಳಿದಂತೆ ಮೇಲ್ಕಂಡ ವ್ಯಕ್ತಿಗಳು ಕಾನೂನು ಉಲ್ಲಂಘಿಸಿ ಅಂದರ್ ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದ ಬಗ್ಗೆ ಮತ್ತು ಕಾಡು ಹಂದಿಯನ್ನು ಬೇಟೆಯಾಡಲು ಡಿ.ಬಿ.ಬಿ.ಎಲ್ ಬಂದೂಕನ್ನು ಉಪಯೋಗಿಸಿದ ಬಗ್ಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ಪಿ.ಎಸ್.ಐ ಚಿಕ್ಕಬಳ್ಳಾಪುರ (ಗ್ರಾ) ಠಾಣೆ ರವರಿಗೆ ಸೂಚಿಸುತ್ತಾ ಅಮಾನತ್ತು ಪಡಿಸಲಾದ ಮೇಲ್ಕಂಡ ಕ್ರ.ಸಂ. 1 ರಿಂದ 14 ರವರೆಗಿನ ಮಾಲುಗಳನ್ನು, ಸ್ಥಳದಲ್ಲಿ ವಶಕ್ಕೆ ಪಡೆದ 3 ಜನ ಆರೋಪಿಗಳನ್ನು, ಸ್ಥಳದಲ್ಲಿ ಕೈಗೊಂಡ ಪಂಚನಾಮೆಯನ್ನು ಕ್ರಮ ಕೈಗೊಳ್ಳಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುತ್ತೆ.
2. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 155/2020 ಕಲಂ. 323,324,504,506 ರೆ/ವಿ 34 ಐಪಿಸಿ :-
ದಿನಾಂಕ 04-04-2020 ರಂದು ರಾತ್ರಿ 8-45 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಿಂದ ಗಾಯಾಳು ಶ್ರೀಮತಿ ಲಕ್ಷ್ಮೀದೇವಮ್ಮ ಕೊಂ ಬಯಣ್ಣ, 40 ವರ್ಷ, ಗೊಲ್ಲರು, ಜಿರಾಯ್ತಿ, ಕರಡಿಗುಟ್ಟ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನ ದಿನಾಂಕ 04-04-2020 ರಂದು ಸಂಜೆ 4-45 ಗಂಟೆ ಸಮಯದಲ್ಲಿ ತಾನು ಮತ್ತು ತನ್ನ ಗಂಡ ಬಯಣ್ಣ ರವರು ತಮ್ಮ ಜಮೀನಿನ ಬಳಿ ಇದ್ದಾಗ ತಮ್ಮ ಗ್ರಾಮದ ಸತೀಶ ಬಿನ್ ಮುನಿನಾರಾಯಣಪ್ಪ, ನರಸಿಂಹ ಮೂರ್ತಿ ಬಿನ್ ಮುನಿನಾರಾಯಣಪ್ಪ, ನರಸಿಂಹ ಮೂರ್ತಿ ಬಿನ್ ವೆಂಕಟೇಶಪ್ಪ ರವರು ನಮ್ಮ ಜಮೀನಿನ ಪಕ್ಕದಲ್ಲಿರುವ ಖರಾಬು ಜಮೀನಿನಲ್ಲಿ ಟ್ರಾಕ್ಟರ್ ಗೆ ಮಣ್ಣನ್ನು ತುಂಬಿಸಲು ಬಂದಿದ್ದು ತಾನು ಮತ್ತು ತನ್ನ ಗಂಡ ಸದರಿ ಸ್ಥಳಕ್ಕೆ ಹೋಗಿ ಮೇಲ್ಕಂಡವರನ್ನು ಕುರಿತು ಏಕೆ ತಮ್ಮ ಜಮೀನಿನ ಪಕ್ಕದಲ್ಲಿ ಮಣ್ಣನ್ನು ತೆಗೆಯುತ್ತಿರುವುದು ಎಂದು ಕೇಳಿದ್ದು ಮೇಲ್ಕಂಡವರು ಸಮಾನ ಉದ್ದೇಶದಿಂದ ತಮ್ಮ ಮೇಲೆ ಜಗಳ ತೆಗೆದು ಅವಾಶ್ಚ ಶಬ್ದಗಳಿಂದ ಬೈದು ಕೈಗಳಿಂದ ತನ್ನ ಗಂಡನನ್ನು ಎಳೆದಾಡಿ ಕೈಗಳಿಂದ ಮೈ ಮೇಲೆ ಹೊಡೆದು ಕಾಲುಗಳಿಂದ ಒದ್ದು ನೋವುಂಟು ಮಾಡಿರುತ್ತಾರೆ. ಆಗ ತಾನು ಜಗಳ ಬಿಡಿಸಲು ಅಡ್ಡ ಹೋಗಿದ್ದು ಸತೀಶ ರವರು ತನ್ನ ಕೈ ಯಲ್ಲಿದ್ದ ಸನಿಕೆಯಿಂದ ತನ್ನ ಹಣೆಗೆ ಹೊಡೆದು ರಕ್ತಗಾಯವನ್ನುಂಟು ಮಾಡಿದ. ನರಸಿಂಹ ಮೂರ್ತಿ ಬಿನ್ ಮುನಿನಾರಾಯಣಪ್ಪ, ನರಸಿಂಹ ಮೂರ್ತಿ ಬಿನ್ ವೆಂಕಟೇಶಪ್ಪ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು ನೋವುಂಟು ಮಾಡಿದರು. ಅಷ್ಟರಲ್ಲಿ ತಮ್ಮ ಗ್ರಾಮದ ಲಕ್ಷ್ಮೀ ಕೊಂ ನರಸಿಂಹ ಮೂರ್ತಿ ಮತ್ತು ಚನ್ನ ಕೃಷ್ಣಪ್ಪ ಬಿನ್ ರಾಧಾಕೃಷ್ಣ ರವರು ಬಂದು ಜಗಳ ಬಿಡಿಸಿದರು. ಮೇಲ್ಕಂಡವರು ಸ್ಥಳದಿಂದ ಹೋಗುವಾಗ ತಮ್ಮ ತಂಟೆಗೆ ಬಂದರೆ ನಿಮ್ಮನ್ನು ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದರು. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.
3. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 156/2020 ಕಲಂ. 323,324,504 ರೆ/ವಿ 34 ಐಪಿಸಿ :-
ದಿನಾಂಕ 04-04-2020 ರಂದು ರಾತ್ರಿ 11-00 ಗಂಟೆಗೆ ಚಿಂತಾಮಣಿ ಸರ್ಕಾರಿ ಆಸ್ವತ್ರೆಯಿಂದ ಗಾಯಾಳು ಸತೀಶ ಕೆ ಎನ್ ಬಿನ್ ನಾರಾಯಣಸ್ವಾಮಿ, 32 ವರ್ಷ, ಗೊಲ್ಲರು, ದೇವನಹಳ್ಳಿ ಏರ್ ಪೋರ್ಟ್ ನಲ್ಲಿ ಕೆಲಸ, ಕರಡಿಗುಟ್ಟ ಗ್ರಾಮ ಚಿಂತಾಮಣಿ ತಾಲ್ಲೂಕು ರವರು ನೀಡಿದ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ದಿನ ದಿನಾಂಕ 04-04-2020 ರಂದು ಸಂಜೆ 5-30 ಗಂಟೆ ಸಮಯದಲ್ಲಿ ತಾನು ತನ್ನ ದ್ವಿಚಕ್ರ ವಾಹನದಲ್ಲಿ ತಮ್ಮ ಜಮೀನಿನ ಬಳಿ ಹೋಗುತ್ತಿದ್ದಾಗ ತಮ್ಮ ಗ್ರಾಮದ ಬಯಣ್ಣ ಬಿನ್ ಈರಪ್ಪ, ತನ ಹೆಂಡತಿ ಲಕ್ಷ್ಮೀದೇವಮ್ಮ ಕೊಂ ಬಯಣ್ಣ ರವರು ಹಳೇ ವೈಷಮ್ಯದ ಹಿನ್ನಲೆಯಲ್ಲಿ ಸಮಾನ ಉದ್ದೇಶದಿಂದ ತನ್ನ ಮೇಲೆ ಜಗಳ ಮಾಡಿ ನೀನು ತಮ್ಮ ಜಮೀನಿನಲ್ಲಿ ಹಾದು ಹೋಗಿರುವ ದಾರಿಯಲ್ಲಿ ಹೋಗಬಾರದೆಂದು ಅವಾಶ್ಚ ಶಬ್ದಗಳಿಂದ ಬೈದಿರುತ್ತಾರೆ. ಆ ಪೈಕಿ ಬಯಣ್ಣ ರವರು ಅಲ್ಲಿಯೇ ಬಿದ್ದಿದ್ದ ಕಲ್ಲಿನಿಂದ ತನ್ನ ಎಡ ಕೆನ್ನೆಗೆ ಹೊಡೆದು ತರಚಿದ ಗಾಯವನ್ನುಂಟು ಮಾಡಿರುತ್ತಾರೆ. ಲಕ್ಷ್ಮೀದೇವಮ್ಮ ರವರು ಕೈಗಳಿಂದ ತನ್ನ ಮೈ ಮೇಲೆ ಹೊಡೆದು, ಕೈಯನ್ನು ಹಿಡಿದು ಎಳೆದಾಡಿ ಮೈ ಕೈ ನೋವುಂಟು ಮಾಡಿರುತ್ತಾರೆ. ಅಷ್ಟರಲ್ಲಿ ತಮ್ಮ ಗ್ರಾಮದ ಮಂಜುನಾಥ ಬಿನ್ ವೆಂಕಟಸ್ವಾಮಿ, ನರಸಿಂಹ ದಾಸು ಬಿನ್ ಶ್ರೀನಿವಾಸ ರವರು ಮೇಲ್ಕಂಡವರಿಂದ ತನ್ನನ್ನು ಬಿಡಿಸಿರುತ್ತಾರೆ. ಆದ್ದರಿಂದ ಮೇಲ್ಕಂಡವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿದೆ.
4. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 83/2020 ಕಲಂ. 15(A),32(3) ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 04/04/2020 ರಂದು ಸಂಜೆ 5-30 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಚನ್ನಹಳ್ಳಿ ಗ್ರಾಮದ ವಾಸಿ ಚಂದ್ರಪ್ಪ ಬಿನ್ ನರಸಿಂಹಪ್ಪ ಎಂಬಾತನು ತನ್ನ ಮನೆಯ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯದ ಟೆಟ್ರಾ ಪಾಕೇಟ್ ಗಳನ್ನಿಟ್ಟುಕೊಂಡು ಅಲ್ಲಿಯೇ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು, ಕೂಡಲೇ ನಾನು ಪಿಸಿ-14 ಗೋವಿಂದಪ್ಪ ರವರೊಂದಿಗೆ ಠಾಣೆಗೆ ಒದಗಿಸಿರುವ ಜೀಪ್ ನಂಬರ್ ಕೆಎ-40-ಜಿ-357 ರಲ್ಲಿ ಅಬ್ಲೂಡು ಗ್ರಾಮಕ್ಕೆ ಹೋಗಿ ಪಂಚಾಯ್ತಿದಾರರನ್ನು ಬರಮಾಡಿಕೊಂಡು ಅವರಿಗೆ ವಿಷಯವನ್ನು ತಿಳಿಸಿ, ನಂತರ ಪಂಚರೊಂದಿಗೆ ಚಂದ್ರಪ್ಪ ಬಿನ್ ನರಸಿಂಹಪ್ಪ ಮನೆಯ ಸಮೀಪ ಹೋಗಿ ಜೀಪ್ ಅನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಮನೆಯ ಮುಂಭಾಗ ಯಾರೋ ಇಬ್ಬರು ಆಸಾಮಿಗಳು ಮದ್ಯವನ್ನು ಸೇವನೆ ಮಾಡುತ್ತಿರುವುದು ಕಂಡು ಬಂದಿದ್ದು, ಪಂಚರ ಸಮಕ್ಷಮ ದಾಳಿ ಮಾಡಲಾಗಿ ಮಧ್ಯವನ್ನು ಕುಡಿಯುತ್ತಿದ್ದ ಸಾರ್ವಜನಿಕರು ಮತ್ತು ಮದ್ಯವನ್ನು ಕುಡಿಯಲು ಅನುವು ಮಾಡುತ್ತಿದ್ದ ಆಸಾಮಿಯು ತನ್ನ ಬಳಿ ಇದ್ದ ಒಂದು ಕಪ್ಪು ಬಣ್ಣದ ಕವರ್ ಅನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು, ಸದರಿ ಕವರ್ ಅನ್ನು ತೆಗೆದು ಪರಿಶೀಲಿಸಲಾಗಿ ಅದರಲ್ಲಿ ORIGINAL CHOICE DELUXE WHISKY ಯ 8 ಟೆಟ್ರಾ ಪಾಕೇಟ್ ಗಳಿದ್ದು ಪ್ರತಿಯೊಂದು ಟೆಟ್ರಾ ಪಾಕೇಟ್ ಮೇಲೆ 30.32 ಎಂದು ಬೆಲೆ ನಮೂದಾಗಿದ್ದು, ಇವುಗಳ ಒಟ್ಟು ಬೆಲೆ 242.56 ಆಗಿರುತ್ತದೆ. ಸ್ಥಳದಲ್ಲಿಯೇ ORIGINAL CHOICE DELUXE WHISKY ಯ 2 ಖಾಲಿ ಟೆಟ್ರಾ ಪಾಕೇಟ್ ಗಳು, 2 ಖಾಲಿ ನೀರಿನ ವಾಟರ್ ಪಾಕೇಟ್ ಗಳು ಮತ್ತು 2 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು ಬಿದ್ದಿದ್ದು, ನಂತರ ಸ್ಥಳಕ್ಕೆ ಬಂದ ಸಾರ್ವಜನಿಕರನ್ನು ಮನೆಯ ಮಾಲೀಕನ ಹೆಸರು ವಿಳಾಸವನ್ನು ಕೇಳಲಾಗಿ ಚಂದ್ರಪ್ಪ ಬಿನ್ ನರಸಿಂಹಪ್ಪ, 45 ವರ್ಷ, ಪ ಜಾತಿ, ಗಾರೆ ಕೆಲಸ, ವಾಸ-ಚನ್ನಹಳ್ಳಿ ಗ್ರಾಮ, ಶಿಡ್ಲಘಟ್ಟ ತಾಲ್ಲೂಕು ಎಂದು ತಿಳಿಸಿದ್ದು, ಸದರಿ ಆಸಾಮಿಯು ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಾ ಹಾಗೂ ಕುಡಿಯಲು ಸಾರ್ವಜನಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದರಿಂದ ಸಂಜೆ 6.00 ಗಂಟೆಯಿಂದ 7.00 ಗಂಟೆಯವರೆಗೆ ಅಮಾನತ್ತು ಪಡಿಸಿಕೊಂಡು ಪಂಚನಾಮೆ ಮತ್ತು ಮಾಲಿನೊಂದಿಗೆ ಸಂಜೆ 7-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಆರೋಪಿಯ ವಿರುದ್ದ ಠಾಣಾ ಮೊಸಂ-83/2020 ಕಲಂ 15(ಎ), 32(3) ಕೆ.ಇ ಆಕ್ಟ್ ರೀತ್ಯಾ ಸ್ವಂತ ಕೇಸನ್ನು ದಾಖಲಿಸಿಕೊಂಡಿರುತ್ತೆ.
5. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ. 37/2020 ಕಲಂ. 87 ಕೆ.ಪಿ. ಆಕ್ಟ್ :-
ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನಂದರೆ, ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪ್ರಬಾರ ಪಿ.ಎಸ್.ಐ ಲಿಯಾಕತ್ ಉಲ್ಲಾ ಆದ ನಾನು ಕೊರೊನ ಸಾಂಕ್ರಮಿಕ ರೋಗದ ಪ್ರಯುಕ್ತ ಭಾರತ ದೇಶ ಲಾಕ್ ಡೌನ್ ಆಗಿದ್ದು, ಇದರ ಪ್ರಯುಕ್ತ ದಿನಾಂಕ.04.04.2020 ರಂದು ಸಂಜೆ 4.15 ಗಂಟೆಯಲ್ಲಿ ನಾನು ಸಿಬ್ಬಂದಿಯವರೊಂದಿಗೆ ಶಿಡ್ಲಘಟ್ಟ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಶಿಡ್ಲಘಟ್ಟ ಟೌನ್ ಕೆ.ಕೆ.ಪೇಟೆಯಲ್ಲಿ ಮಾಕರ್ೊಂಡ @ ಮಾತರ್ಾಂಡ ಎಂಬುವರ ಮನೆಯ ಮೇಲೆ ಯಾರೋ ಸಾರ್ವಜನಿಕರು ಗುಂಪು ಸೇರಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟ ಆಡುತ್ತಿರುವುದಾಗಿ ಮಾಹಿತಿ ಬಂದಿದ್ದು, ಸದರಿಯವರ ಮೇಲೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಅನುಮತಿ ನೀಡಲು ಕೋರಿ ಘನ ನ್ಯಾಯಾಲಯಕ್ಕೆ ವರದಿಯನ್ನು ನಿವೇದಿಸಿಕೊಂಡಿದ್ದು, ಇದೇ ದಿನ ನ್ಯಾಯಾಲಯದ ಪಿ.ಸಿ.129 ರವರ ಮೂಲಕ ನ್ಯಾಯಾಲಯದ ಅನುಮತಿಯನ್ನು ಪಡೆದು ಸಂಜೆ 4.45 ಗಂಟೆಗೆ ಠಾಣಾ ಮೊ.ಸಂ.37/2020 ಕಲಂ.87 ಕೆ.ಪಿ.ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.