ದಿನಾಂಕ :05/01/2021 ರ ಅಪರಾಧ ಪ್ರಕರಣಗಳು

  1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.03/2021  ಕಲಂ. ಮನುಷ್ಯ ಕಾಣೆ :-

  ದಿನಾಂಕ: 05/01/2021 ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಪಿರ್ಯಾದುದಾರರಾದ ಶ್ರೀಮತಿ ರತ್ನಮ್ಮ ಕೋಂ ತಿರುಮಲಪ್ಪ, 55 ವರ್ಷ, ನಾಯಕ ಜನಾಂಗ, ಕೂಲಿಕೆಲಸ, ಮರಳುಕುಂಟೆ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನಾನು ನನ್ನ ಗಂಡ ತಿರುಮಲಪ್ಪ ರವರು ನಮ್ಮ ಗ್ರಾಮದಲ್ಲಿ ವಾಸವಾಗಿದ್ದು, ಕೂಲಿಯಿಂದ ಜೀವನ ಮಾಡಿಕೊಂಡಿರುತ್ತೇವೆ. ದಿನಾಂಕ: 30/12/2020 ರಂದು ರಾತ್ರಿ ನನ್ನ ಗಂಡ ತಿರುಮಲಪ್ಪರವರು ಕೂಲಿಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದು, ಮನೆಯಲ್ಲಿ ಊಟ ಮಾಡಿ ಮನೆಯ ಹೊರಗೆ ಕುಳಿತಿದ್ದವರು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಎದ್ದು ಹೋದವರು ವಾಪಸ್ಸು ಬಾರದೇ ಇದ್ದು, ಆಗಿನಿಂದ ನಮ್ಮ ಗ್ರಾಮ, ಸುತ್ತಮುತ್ತಲ ಗ್ರಾಮಗಳಲ್ಲಿ ಮತ್ತು ನೆಂಟರು, ಸಂಬಂದಿಕರ ಮನೆಗಳಲ್ಲಿ ಇದುವರೆವಿಗೂ ಹುಡುಕಾಡಲಾಗಿ ನನ್ನ ಗಂಡ ತಿರುಮಲಪ್ಪರವರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ತಾವುಗಳು ಕಾಣೆಯಾಗಿರುವ ನನ್ನ ಗಂಡ ತಿರುಮಲಪ್ಪ ರವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನನ್ವಯ ಪ್ರ.ವ.ವರದಿ,

  1. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.04/2021 ಕಲಂ. 279 ಐ.ಪಿ.ಸಿ :-

  ದಿನಾಂಕ 05/01/2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿ ನಾರಾಯಣಸ್ವಾಮಿ ಬಿನ್ ಚಿನ್ನಪ್ಪ, ಈಡಿಗರು 58 ವರ್ಷ,ಅಭಿಲಾಷ್ ಲೇಔಟ್ ಹಳೇಮರಿಗಮ್ಮ ದೇವಸ್ಥಾನ ಹತ್ತಿರ ಗೌರಿಬಿದನೂರು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೇಂದರೆ ದಿನಾಂಕ 03/01/2021 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಕೆಲಸದ ನಿಮಿತ್ತ ತನ್ನ ಬಾಬ್ತು KA 40 M 4978 ಕಾರಲ್ಲಿ ಚಾಲನೆ ಮಾಡಿಕೊಂಡು ತೋಂಡೇಬಾವಿ ಕಡೆಗೆ ಹೋಗುತ್ತಿರುವಾಗ ಸಕ್ಕರೆ ಖಾರ್ಖಾನೆ ಬಳಿ ಹಿಂದೆಯಿಂದ ಆಂದರೆ ಗೌರಿಬಿದನೂರು ಕಡೆಯಿಂದ ಯಾವುದೋ ಲಾರಿ ಚಾಲಕ ಅತಿವೇಗವಾಗಿ ಚಾಲನೆ ಮಾಡಿಕೊಂಡು ತನ್ನ ಕಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತನ್ನ ಬಾಬ್ತು ಕಾರಿಗೆ ಹಿಂದೆ ಪೂರ್ತಿ ಜಖಂ ಆಗಿರುತ್ತೆ ನಂತರ ಯಾವುದೆ ಪ್ರಣಾಪಾಯವಾಗಿರುವುದಿಲ್ಲ ವಾಹನ ನಿಲ್ಲಿಸಿ ಚಾಲಕನ ಹೆಸರು ಕೇಳಲಾಗಿ ವೆಂಕಟೇಶ@ಸೀನ ಬಿನ್ ದೊರೆಸ್ವಾಮಿರೆಡ್ಡಿ ಚಾಲನೆ ಮಾಡುತ್ತಿದ್ದ ಲಾರಿಯ ಸಂಖ್ಯೆ KA 05 AB 0806 ಆಗಿದ್ದು ಸದರಿ ಆಪಘಾತ ಮಾಡಿದ ಲಾರಿ ಮತ್ತು ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ದೂರು. ಲಾರಿ ಮಾಲೀಕರು ಕಾರನ್ನು ರಿಪೇರಿ ಮಾಡಿಸಲು ತಿಳಿಸಿದ್ದು ಮಾಡದ ಕಾರಣ ಈ ದಿನ ದೂರನ್ನು ತಡವಾಗಿ ನೀಡಿರುತ್ತೇನೆ.

  1. ನಂದಿಗಿರಿಧಾಮ ಪೊಲೀಸ್ ಠಾಣೆ ಮೊ.ಸಂ.02/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ ;04-01-2021 ರಂದು ಮದ್ಯಾಹ್ನ 15-30 ಘಂಟೆಗೆ ಆ,ಉ.ನಿ ರವರು  ದಾಳಿಯಿಂದ ಠಾಣೆಗೆ ಪಂಚನಾಮೆ. ಆರೋಪಿ ಮತ್ತು ಮಾಲಿನೊಂದಿಗೆ ಹಾಜರಾಗಿ ನೀಡಿದ ಜ್ಞಾಪನದ ಸಾರಾಂಶ ವೇನೆಂದರೆ ಸಾಹೇಬರು ಇಧೇ ದಿನ ಮದ್ಯಾಹ್ನ 13-00 ಗಂಟೆಯ ಸಮಯದಲ್ಲಿ ಕೊಳವನಹಳ್ಳಿ ಗ್ರಾಮದ ಕಡೆ ಸರ್ಕಾರಿ ಜೀಪು ಸಂಖ್ಯೆ  KA-40-G-1555  ರ ವಾಹನದಲ್ಲಿ  ಚಾಲಕ  ಪಾರೂಖ್ ಮತ್ತು  ಸಿಬ್ಬಂದಿಯಾದ  ಮದುಸೂದನ, ಬಾಲಕೃಷ್ಣ  ರವರೊಂದಿಗೆ ಕೊಳವನಹಳ್ಳಿ ಗ್ರಾಮದ ಕಡೆ ಹಗಲು ಗಸ್ತಿನ ಲ್ಲಿದ್ದಾಗ  ನನಗೆ ಬಂದ  ಖಚಿತವಾದ ಮಾಹಿತಿ  ಏನೆಂದರೆ  ತೌಡನಹಳ್ಳಿ ಗ್ರಾಮದ ಶಿವಣ್ಣ ರವರು ತನ್ನ ಮನೆಯ ಬಳಿ  ತೌಡನಹಳ್ಳಿ  ಗ್ರಾಮದ ಶಿವಣ್ಣ ಬಿನ್ ವೆಂಕಟನರಸಿಂಹಯ್ಯ ರವರು ತನ್ನ ಮನೆಯ ಬಳಿ ಯಾವುದೇ ಪರವಾನಗಿಯನ್ನು ಪಡೆಯದೇ ತನ್ನ  ಮನೆಯ ಬಳಿ ಸಾರ್ವಜನಿಕರಿಗೆ ಮದ್ಯವನ್ನು  ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದಿದ್ದು ಮಾಹಿತಿಯಂತೆ ದಾಳಿ ನಡೆಸಲು ತೌಡನಹಳ್ಳಿ ಗೇಟಿನ ಬಳಿ ಇದ್ದಂತಹ ಪಂಚರನ್ನು ಬರಮಾಡಿಕೊಂಡು ಅವರುಗಳ ಸಮಕ್ಷಮದಲ್ಲಿ  ಮದ್ಯಾಹ್ನ 13-30 ಗಂಟೆಗೆಶಿವಣ್ಣ ಬಿನ್ ವೆಂಕಟನರಸಿಂಹಯ್ಯ ರವರ ಬಾಬತ್ತು ಮನೆಯ ಬಳಿ ಹೋಗುವಷ್ಟರಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಜನರು ಓಡಿ ಕುಡಿಯುತ್ತಿದ್ದ ಲೋಟಗಳನ್ನು ಬಿಸಾಡಿ ಓಡಿ ಹೋಗಿದ್ದು  ಮನೆಯಲ್ಲಿದ್ದವನ  ಹೆಸರು ವಿಳಾಸವನ್ನು ಕೇಳಲಾಗಿ  ಶಿವಣ್ಣ ಬಿನ್ ವೆಂಕಟನರಸಿಂಹಯ್ಯ  58 ವರ್ಷ  ಬಲಜಿಗರು ಜಿರಾಯ್ತಿ ತೌಡನಹಳ್ಳಿ  ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕು ಎಂತಾ ತಿಳಿಸಿದ್ದು ಇವನ  ಮನೆಯ ಮುಂದೆ  ಒಂದು ಪ್ಲಾಸ್ಟಿಕ್ ಕವರೊಂದಿದ್ದು ಅದನ್ನು ಪರಿಶೀಲಿಸಲಾಗಿ ಅದರಲ್ಲಿ 1) 90 ML ಸಾಮರ್ಥದ HAYWARDS CHEERS  WHISKY  ಹೆಸರಿನ 20 ಮದ್ಯದ ಪಾಕೇಟುಗಳಿದ್ದು ಪ್ರತಿ ಪಾಕೇಟಿನ ಮೇಲೆ ಬೆಲೆ 35.13 ರೂ.ಎಂದು ಮುದ್ರಿತ ವಾಗಿರುತ್ತದೆ.ಇದು ಒಟ್ಟು-1800 ML ಮದ್ಯವಿದ್ದು ಒಟ್ಟು ಬೆಲೆ 702.60/- ರೂ ಆಗುತ್ತದೆ.2) 90 ಎಂ ಎಲ್ ಸಾಮರ್ಥ್ಯದ HAYWARDS CHEERS  WHISKY  ಖಾಲಿ 5 ಟೆಟ್ರಾ ಪ್ಯಾಕೇಟುಗಳು ಇರುತ್ತವೆ, 3) 5 ಖಾಲಿ ಲೋಟಗಳು ಸಿಕ್ಕಿದ್ದು ಇವುಗಳನ್ನು ತನ್ನ ಮನೆಯ ಬಳಿ ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಸ್ಥಳವಕಾಶ ಮಾಡಿಕೊಟ್ಟ ಬಗ್ಗೆ ನಿನ್ನ ಬಳಿ ಪರವಾನಿಗೆ ಇದೆಯೇ? ಎಂದು ಮನೆಯ ಮಾಲೀಕ ಶಿವಣ್ಣ ಬಿನ್ ವೆಂಕಟನರಸಿಂಹಯ್ಯ ಕೇಳಿದಾಗ ತನ್ನ ಬಳಿ ಯಾವುದೇ ಪರವಾನಗಿ  ಇಲ್ಲವೆಂದು ಹೇಳಿದ್ದು ಸದರಿ ಮಾಲನ್ನು ಪಂಚರ ಸಮಕ್ಷಮ ಮದ್ಯಾಹ್ನ 13-40 ಗಂಟೆಯಿಂದ 14-40 ಗಂಟೆಯವರೆವಿಗೆ ಅಂಗಡಿಯ ಬಳಿ ಮಹಜರ್ ಕ್ರಮವನ್ನು ಜರುಗಿಸಿ ಮೇಲ್ಕಂಡ ಸ್ಥಳದಲ್ಲಿ ದೊರೆತ ಟೆಟ್ರಾ ಪ್ಯಾಕೇಟುಗಳನ್ನು ಮತ್ತು  ಮನೆಯ ಮಾಲೀಕ ಶಿವಣ್ಣ ಬಿನ್ ವೆಂಕಟನರಸಿಂಹಯ್ಯ ವಶಕ್ಕೆ ಪಡೆದುಕೊಂಡು ಠಾಣೆಗೆ ವಾಪಸ್ಸು ಬಂದು ವರದಿಯನ್ನು ನೀಡುತ್ತಿದ್ದು ಆರೋಪಿಯ ವಿರುದ್ದ ಮುಂದಿನ ಕಾನೂನು ರೀತ್ಯಾ ಕ್ರಮ ಜರುಗಿಸಲು  ನೀಡಿದ ಜ್ಞಾಪನದ ಮೇರೆಗೆ ಈ ಪ್ರವವರದಿ,

  1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.01/2021 ಕಲಂ. 15(A),32(3) ಕೆ.ಇ ಆಕ್ಟ್:-

  ದಿನಾಂಕ 05-01-2021 ರಂದು ಸಂಜೆ 4-15 ಗಂಟೆಗೆ ಪಿ.ಎಸ್.ಐ ಶ್ರೀ ಎನ್ ರತ್ನಯ್ಯರವರು ಆರೋಪಿ,ಪಂಚನಾಮೆ,ಮತ್ತು ಮಾಲುಗಳೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:05-01-2021 ರಂದು ತಾನು ಸಿಪಿಸಿ-281 ಶಂಕ್ರಪ್ಪ ಕಿರವಾಡಿ, ಸಿಪಿಸಿ-119 ಗೀರಿಶ್ ಹಾಗೂ ಜೀಪ್ ಚಾಲಕ  ಎ.ಹೆಚ್.ಸಿ-21 ಸತ್ಯಾ ನಾಯಕ್ ರವರೊಂದಿಗೆ ಕೆಎ-40 ಜಿ-59 ಸರ್ಕಾರಿ ಜೀಪ್ ನಲ್ಲಿ ಗಸ್ತು ಕರ್ತವ್ಯಕ್ಕೆ ಹೋಗಿ ಆಗಟಮಡುಕ ಗ್ರಾಮದಲ್ಲಿದ್ದಾಗ ಅದೇ ಗ್ರಾಮದ ಸೋಮಶೇಖರ್ ಬಿನ್ ಅಂಜಿನಪ್ಪ ಎಂಬುವವರು ತನ್ನ ಚಿಲ್ಲರೆ ಅಂಗಡಿಯ ಮುಂಭಾಗ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಖಚಿತ ವರ್ತಮಾನ ಬಂದಿದ್ದು, ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಮೇಲ್ಕಂಡ ಸೋಮಶೇಖರ್ ಬಿನ್ ಅಂಜಿನಪ್ಪರವರ ಅಂಗಡಿಯ ಬಳಿ ಹೋಗುತ್ತಿದ್ದಂತೆ ಪೊಲೀಸ್ ಜೀಪ್ ನ್ನು ಕಂಡು ಅಂಗಡಿಯ ಮುಂಭಾಗದಲ್ಲಿ ಮದ್ಯಪಾನ ಮಾಡುತ್ತಿದ್ದ ಯಾರೋ ಒಬ್ಬ ಆಸಾಮಿಯು ಓಡಿ ಹೋಗಿದ್ದು, ಸದರಿ ಅಂಗಡಿಯ ಬಳಿ ಒಬ್ಬ ಆಸಾಮಿಯು ಇದ್ದು  ಆತನ ಹೆಸರು ವಿಳಾಸ ಕೇಳಲಾಗಿ ಸೋಮಶೇಖರ್ ಬಿನ್ ಅಂಜಿನಪ್ಪ, 42ವರ್ಷ, ನಾಯಕರು, ವ್ಯಾಪಾರ, ವಾಸ:ಆಗಟಮಡುಕ ಗ್ರಾಮ, ಪಾತಪಾಳ್ಯ ಹೋಬಳಿ, ಬಾಗೇಪಲ್ಲಿ ತಾಲ್ಲೂಕು ಎಂದು ತಿಳಿಸಿದ್ದು,  ಸ್ಥಳದಲ್ಲಿ ಪರಿಶೀಲಿಸಲಾಗಿ  90 ML ನ 12 ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಮದ್ಯದ ಟೆಟ್ರಾ ಪಾಕೆಟ್ ಗಳು ( 1 ಲೀಟರ್ 80 ML ಮದ್ಯ, ಸುಮಾರು  421/- ರೂ ಬೆಲೆ ಬಾಳುವುದಾಗಿರುತ್ತೆ) ಮತ್ತು ಒಂದು ಲೀಟರ್ ನ 1 ಖಾಲಿ ವಾಟರ್ ಬಾಟಲ್ ಹಾಗೂ 1 ಪ್ಲಾಸ್ಟಿಕ್ ಖಾಲಿ ಗ್ಲಾಸ್ ಮತ್ತು ಉಪಯೋಗಿಸಿರುವ 90 ML ನ 1  ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ ಮದ್ಯದ ಖಾಲಿ ಟೆಟ್ರಾ ಪಾಕೆಟ್ ಇದ್ದು ಸೋಮಶೇಖರ್ ಬಿನ್ ಅಂಜಿನಪ್ಪರವರನ್ನು ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಡಲು ಪರವಾನಗಿಯನ್ನು ಪಡೆದಿರುವ ಬಗ್ಗೆ ಕೇಳಲಾಗಿ ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿರುತ್ತಾನೆ. ಸೋಮಶೇಖರ್ ಬಿನ್ ಅಂಜಿನಪ್ಪರವರನ್ನು ವಶಕ್ಕೆ ಪಡೆದುಕೊಂಡು ಮೇಲ್ಕಂಡ ವಸ್ತುಗಳನ್ನು ಪಂಚರ ಸಮಕ್ಷಮ ಮಧ್ಯಾಹ್ನ 3-00 ರಿಂದ 3-45 ಗಂಟೆಯವರೆಗೂ ಪಂಚನಾಮೆಯ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿ, ಪಂಚನಾಮೆ ಮತ್ತು ಮಾಲುಗಳೊಂದಿಗೆ ಸಂಜೆ 4-15 ಗಂಟೆಗೆ ಠಾಣೆಗೆ ವಾಪಸ್ಸಾಗಿದ್ದು ಸದರಿ ಆರೋಪಿಯ ವಿರುದ್ದ ಸೂಕ್ತ ಕ್ರಮ ಜರುಗಿಸಲು ಸೂಚಿಸಿರುವುದಾಗಿರುತ್ತೆ.