ದಿನಾಂಕ : 04/10/2019ರ ಅಪರಾಧ ಪ್ರಕರಣಗಳು

 1. ಸಿ.ಇ.ಎನ್/ಡಿ.ಸಿ.ಬಿ ಪೊಲೀಸ್ ಠಾಣೆ ಮೊ.ಸಂ. 18/2019 ಕಲಂ.272-273 ಐ.ಪಿ.ಸಿ & 24 Cigarettes and Other Tobacco Products (Prohibition of Advertisement and Regulation of Trade and Commerce, Production,Supply and Distribution) Rules – 2004:-

     ಈ ದಿನ ದಿನಾಂಕ:03/10/2019 ರಂದು ಸಂಜೆ ಸುಮಾರು 5-00 ಗಂಟೆ ಸಮಯದಲ್ಲಿ ಚಿಕ್ಕಬಳ್ಳಾಪುರ ನಗರದಲ್ಲಿ  ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸಿಬ್ಬಂದಿಯಾದ ಹೆಚ್.ಸಿ-71 ಸುಬ್ರಮಣಿ, ಹೆಚ್.ಸಿ-205 ರಮೇಶ್, ಹೆಚ್.ಸಿ-208 ಗಿರೀಶ್ 192 ರಾಜಗೋಪಾಲ್  ಹಾಗೂ ಜೀಪ್ ಚಾಲಕ ಎಪಿಸಿ 138-ಮಹಬೂಬ್ ಬಾಷ ರವರೊಂದಿಗೆ ಸರ್ಕಾರಿ ಜೀಪು ಸಂಖ್ಯೆ ಕೆಎ-40 ಜಿ-270 ರಲ್ಲಿ ನಗರದ ಟೌನ್ ಹಾಲ್ ಬಳಿ ಗಸ್ತಿನಲ್ಲಿದ್ದಾಗ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆಯಲ್ಲಿರುವ ಕೋದಂಡ ರಾಮಸ್ವಾಮಿ ದೇವಸ್ಥಾನದ ಬಳಿ ಅಂಗಡಿ ಗೋಡಾನ್ ಒಂದರಲ್ಲಿ ಕಾನೂನು ಬಾಹಿರವಾಗಿ 2013 ನೇ ಮೇ 30 ರಲ್ಲಿ ಕರ್ನಾಟಕ ಸರ್ಕಾರವು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ಪದಾರ್ಥಗಳಾದ ಗುಟ್ಕಾ, ಪಾನ್ ಮಸಾಲಾ ಮತ್ತು ತಂಬಾಕುನಂತಹ ವಸ್ತುಳನ್ನು ನಿಷೇದ ಮಾಡಿದ್ದರೂ ಹಾಗೂ ಫುಡ್ ಸೇಪ್ಟಿ ಕಮೀಷನರೇಟ್ ರ ದಿನಾಂಕ:26/10/2016 ರ ಸುತ್ತೋಲೆಯಂತೆ ತಂಬಾಕು ಮತ್ತು ಪಾನ್ ಮಸಾಲದಂತಹ ಮಾದಕ ಪದಾರ್ಥಗಳನ್ನು ಒಟ್ಟಿಗೆ ಒಂದೇ ಕಡೆ ಶೇಖರಿಸಿ ಒಟ್ಟಿಗೆ ಮಾರಾಟ ಮಾಡಬಾರದೆಂತ ಸುತ್ತೋಲೆ ಹೊರಡಿಸಿದರೂ ಚಿಕ್ಕಬಳ್ಳಾಪುರ ನಗರದ ವಾಸಿ ಭರತ್ ಬಿನ್ ಜಗನ್ನಾಥ್, 34ವರ್ಷ, ಬಲಜಿಗರು, ವ್ಯಾಪಾರ, ವಾಸ ಬಸವನಗುಡಿ ಕ್ರಾಸ್ ರೋಡ್, ವಾರ್ಡ್ ನಂ.16, ಚಿಕ್ಕಬಳ್ಳಾಪುರ ನಗರ ಎಂಬುವವರು ತನ್ನ ಗೋಡಾನ್ ನಲ್ಲಿ ಅಕ್ರಮವಾಗಿ ಗುಟ್ಕಾ, ಪಾನ್ಮಸಾಲ ಹಾಗೂ ತಂಬಾಕು ಪದಾರ್ಥಗಳನ್ನು ಇಟ್ಟುಕೊಂಡಿದ್ದು ಅವುಗಳನ್ನು ಪರಿಶೀಲಿಸಲಾಗಿ  1] MIRAJ Tobacco ನ ಒಟ್ಟು 10 ಬಾಕ್ಸ್ ಗಳು  ಇದ್ದು ಇದರಲ್ಲಿ ಒಂದೊಂದು ಬಾಕ್ಸ್ ನಲ್ಲಿ 40 ಚಿಕ್ಕ ಚಿಕ್ಕ ರಟ್ಟಿನ ಬಾಕ್ಸ್ ಗಳಿದ್ದು ಒಂದೊಂದು ರಟ್ಟಿನ ಚಿಕ್ಕ ಬಾಕ್ಸ್ ನಲ್ಲಿ 15 ಸಾಚೆಟ್ ಗಳಿರುತ್ತೆ. 2] VIMAL Pan Masala ದ ಒಟ್ಟು 02 ಪ್ಲಾಸ್ಟಿಕ್ ಚೀಲಗಳಿದ್ದು ಒಂದೊಂದು ಚೀಲದಲ್ಲಿ 51 ಪಾಕೆಟ್ಸ್ ಗಳಿರುತ್ತೆ. ಒಂದೊಂದು ಪಾಕೆಟ್ ನಲ್ಲಿ 22 ಪೋಚ್ ಗಳಿರುತ್ತೆ. ಇವುಗಳಲ್ಲಿ  ಕ್ರ.ಸಂಖ್ಯೆ 1 ರಲ್ಲಿ ಪರೀಕ್ಷೆಗಾಗಿ ಸ್ಯಾಂಪಲ್ ಗಾಗಿ  MIRAJ Tobacco ಒಂದು ಚಿಕ್ಕ ರಟ್ಟಿನ ಬಾಕ್ಸ್ ನ್ನು ಮತ್ತು ಕ್ರಮ ಸಂಖ್ಯೆ 2 ರಲ್ಲಿ VIMAL Pan Masala ಇರುವ ಒಂದು ಚಿಕ್ಕ ರಟ್ಟಿನ ಬಾಕ್ಸ್ ನ್ನು  ಅಲಾಯಿದೆಯಾಗಿ ತೆಗೆದು ಇವುಗಳನ್ನು ಅಲಾಯಿದೆಯಾಗಿ ಒಂದು ಬಿಳಿ ಚೀಲದಲ್ಲಿ ಇಟ್ಟು ದಾರದಿಂದ ಒಲಿದು ಭದ್ರಪಡಿಸಿ “N” ಎಂಬ ಅಕ್ಷರದ ಸೀಲಿನಿಂದ ಅರಗು ಮಾಡಿ ಸೀಲು ಮಾಡಿಕೊಂಡು ಅಮಾನತ್ತು ಪಡಿಸಿಕೊಂಡಿರುತ್ತೆ. ಆರೋಪಿಯು  ಇವುಗಳನ್ನು ಒಟ್ಟಿಗೆ ಒಂದೇ ಗೋಡಾನ್ ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಶೇಖರಿಸಿ ಇವು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂತ ತಿಳಿದಿದ್ದರೂ ಸಹ ಸದರಿ ಮಾದಕ ಪದಾರ್ಥಗಳನ್ನು ಕಾನೂನು ಬಾಹಿರವಾಗಿ ದಾಸ್ತಾನು ಮಾಡಿಕೊಂಡಿದ್ದರಿಂದ ಈ ಬಗ್ಗೆ ನಾನು ಸಿಬ್ಬಂದಿಯ ಜೊತೆ ದಾಳಿ ಮಾಡಿ ಪಂಚನಾಮೆ ಮೂಲಕ ಮಾದಕ ಪದಾರ್ಥಗಳನ್ನು ಅಮಾನತ್ತು ಪಡಿಸಿಕೊಂಡು ಗೋಡಾನ್ ನ ಮಾಲೀಕನಾದ ಆರೋಪಿ ಭರತ್ ರವರನ್ನು ಮತ್ತು ಮೇಲ್ಕಂಡ ಮಾಲುಗಳೊಂದಿಗೆ  ಠಾಣೆಗೆ ವಾಪಸ್ಸಾಗಿ ಆರೋಪಿ ವಿರುದ್ದ ಸಂಜೆ 6.30 ಗಂಟೆಗೆ ಠಾಣೆಗೆ ಹಾಜರಾಗಿ ಠಾಣಾ ಎನ್.ಸಿ.ಆರ್ ಸಂಖ್ಯೆ:02/2019 ರಂತೆ ದಾಖಲಿಸಿಕೊಂಡು ಈ ಪ್ರಕರಣದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಘನ ನ್ಯಾಯಾಲಯದ  ಅನುಮತಿಯನ್ನು ಪಡೆದುಕೊಂಡು ಠಾಣಾ ಮೊ,ಸಂ-18/2019. ಕಲಂ-272.273 ಐಪಿಸಿ ಮತ್ತು ಕಲಂ-24 ಕೋಪ್ಟಾ ಕಾಯ್ದೆಯಡಿ ಸ್ವತಃ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 281/2019 ಕಲಂ.279-337 ಐ.ಪಿ.ಸಿ:-

     ದಿನಾಂಕ 03/10/2019 ರಂದು ಸಂಜೆ 04.30 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ ಮಗಳಾದ ರಜಿನಿಯವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದಲ್ಲಿರುವ ಜೀವನ್ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಈ ದಿನ ದಿನಾಂಕ:03/10/2019 ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ನನ್ನ ಗಂಡರವರು ತಾನು ಆಸ್ಪತ್ರೆಯಲ್ಲಿರುವ ಮಗಳ ಬಳಿಗೆ ಹೋಗುವುದಾಗಿ ನನ್ನೊಂದಿಗೆ  ಹೇಳಿ ನಮ್ಮ ಬಾಬತ್ತು ಕೆಎ.43 ಇ. 6437 ನಂಬರಿನ ಸ್ಪ್ಲೆಂಡರ್ ಪ್ಲಸ್  ದ್ವಿಚಕ್ರವಾಹನವನ್ನು ಚಾಲನೆ ಮಾಡಿಕೊಂಡು ಬಂದರು. ಮದ್ಯಾಹ್ನ ಸುಮಾರು 1.00 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮ ಗ್ರಾಮದ ವಾಸಿ ನಾಗರಾಜ ಬಿನ್ ಬೈರಪ್ಪರವರು ನನ್ನ ಮೊಬೈಲ್ ಪೋನಿಗೆ ಕರೆ ಮಾಡಿ ನನ್ನ ಗಂಡ ಆಂಜನಪ್ಪರವರಿಗೆ  ಚಿಕ್ಕಬಳ್ಳಾಪುರ ತಾಲ್ಲೂಕು ಅಂದಾರ್ಲಹಳ್ಳಿ ಗೇಟಿನ ಸಮೀಪ ಬಸ್ ಅಪಘಾತದಲ್ಲಿ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ  ದಾಖಲಿಸಿರುವುದಾಗಿ ಹೇಳಿದರು. ನಾನು  ಕೂಡಲೇ ಬಸ್ಸಿನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದು  ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಲಾಗಿ ನನ್ನ ಗಂಡನ ತಲೆಯ ಮೇಲೆ,  ಎರಡೂ ಕೈಗಳ ಮೇಲೆ, ಎಡಕಾಲಿನ ಮೇಲೆ, ದೇಹದ ಮೇಲೆ  ಮತ್ತು ಇತರೆ ಕಡೆಗಳಲ್ಲಿ ರಕ್ತಗಾಯಗಳಾಗಿದ್ದು ವೈದ್ಯರು ನನ್ನ ಗಂಡ ಆಂಜನಪ್ಪರವರಿಗೆ ಚಿಕಿತ್ಸೆ ನೀಡುತ್ತಿದ್ದರು. ನನ್ನ ಗಂಡನಿಗೆ  ವಿಚಾರ ಮಾಡಲಾಗಿ ತಾನು ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರಕ್ಕೆ ಬರುವ ರಸ್ತೆಯಲ್ಲಿ ತಮ್ಮ  ದ್ವಿಚಕ್ರವನ್ನು  ಸವಾರಿ ಮಾಡಿಕೊಂಡು ಚಿಕ್ಕಬಳ್ಳಾಪುರಕ್ಕೆ ರಸ್ತೆಯಲ್ಲಿ ಎಡಬದಿ ಬರುವಾಗ ಮದ್ಯಾಹ್ನ ಸುಮಾರು 12.30 ಗಂಟೆಗೆ  ಚಿಕ್ಕಬಳ್ಳಾಪುರ ತಾಲ್ಲೂಕು ಅಂದಾರ್ಲಹಳ್ಳಿ ಗೇಟಿನ ಸಮೀಪ  ತನ್ನ ಮುಂದೆ   ಚಿಕ್ಕಬಳ್ಳಾಪುರ ಕಡೆಗೆ ಬರುತ್ತಿದ್ದ್ದ ಕೆಎ.38-3995 ನಂಬರಿನ ಖಾಸಗಿ ಬಸ್ಸನ್ನು ಅದರ ಚಾಲಕ ಅತಿವೇಗವಾಗಿ  ಚಾಲನೆ ಮಾಡಿಕೊಂಡು ಬರುತ್ತಿದ್ದವರು ಯಾವುದೇ ನಿಲುಗಡೆ ಸೂಚನೆ ನೀಡದೆ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ನಿಲ್ಲಿಸಿದಾಗ ತಾನು   ಸವಾರಿ ಮಾಡುತ್ತಿದ್ದ ದ್ವಿಚಕ್ರವಾಹನ ಬಸ್ಸಿನ ಹಿಂಭಾಗಕ್ಕೆ ತಗುಲಿ ಅಪಘಾತವಾಗಿ ತನ್ನ ದೇಹದ ಮೇಲೆ  ರಕ್ತಗಾಯಗಳಾಗಿರುತ್ತೆಂದು  ದ್ವಿಚಕ್ರವಾಹನ ಜಖಂಗೊಂಡಿರುತ್ತೆ ಹೇಳಿದ್ದು ತನ್ನ ಗಂಡನಿಗೆ ಕೆಎ.38-3995 ನಂಬರಿನ ಖಾಸಗಿ ಬಸ್ಸನ್ನು ಅದರ ಚಾಲಕ ಅತಿವೇಗವಾಗಿ  ಚಾಲನೆ ಮಾಡಿಕೊಂಡು ಬರುತ್ತಿದ್ದವರು ಯಾವುದೇ ನಿಲುಗಡೆ ಸೂಚನೆ ನೀಡದೆ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ಅಪಘಾತ ಪಡಿಸಿದ ಕೆಎ.38-3995 ನಂಬರಿನ ಖಾಸಗಿ ಬಸ್ಸಿನ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ. 371/2019 ಕಲಂ.380-454-457 ಐ.ಪಿ.ಸಿ:-

     ದಿನಾಂಕ 04-10-2019 ರಂದು ಬೆಳಗ್ಗೆ 11-30 ಗಂಟೆಗೆ ಎಸ್.ಮಂಜುನಾಥ ಬಿನ್ ಎಂ.ಶ್ರೀನಿವಾಸಪ್ಪ, 36 ವರ್ಷ, ಒಕ್ಕಲಿಗರು, ಎಲೆಕ್ಟ್ರೀಷಿಯನ್ ಕೆಲಸ, ಜಂಗಮಶೀಗೇಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01/10/2019 ರಂದು ರಾತ್ರಿ 8.00 ಗಂಟೆ  ಸಮಯದಲ್ಲಿ ತಾನು, ತನ್ನ ಹೆಂಡತಿಯಾದ ಎಸ್.ವಿ.ಸುಷ್ಮ ಹಾಗೂ ಮಗನಾದ ಕಲ್ಯಾಣ ಪ್ರೇಮ್ ರವರು ತನ್ನ ಹೆಂಡತಿ ತವರು ಮನೆಯಾದ ಮಾಲೂರು ತಾಲ್ಲೂಕು ಸೀತಪ್ಪನಹಳ್ಳಿ ಗ್ರಾಮಕ್ಕೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿರುತ್ತೇವೆ. ಮಾರನೇ ದಿನ ದಿನಾಂಕ 02/10/2019 ರಂದು ಸಂಜೆ 7.00 ಗಂಟೆ ಸಮಯದಲ್ಲಿ ತಾವು ಮನೆಗೆ ಬಂದು ನೋಡಲಾಗಿ, ತಮ್ಮ ಮನೆಯ ಮುಂಭಾಗಿಲು ತೆರೆದಿದ್ದು, ಬಾಗಿಲಿಗೆ ಅಳವಡಿಸಿದ್ದ ಬೀಗ ಮತ್ತು ಚಿಲಕವನ್ನು ಕಿತ್ತು ಹಾಕಲಾಗಿದ್ದು, ಒಳಗೆ ಹೋಗಿ ನೋಡಲಾಗಿ, ತಮ್ಮ ಮನೆಯ ರೂಂನಲ್ಲಿದ್ದ ಬೀರುವಾ ಬಾಗಿಲನ್ನು ಕಿತ್ತು ತೆರೆಯಲಾಗಿದ್ದು, ಅದರಲ್ಲಿನ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದು, ಲಾಕರ್ ಓಪನ್ ಆಗಿದ್ದು, ಅದರಲ್ಲಿದ್ದ 26 ಗ್ರಾಂ ತೂಕದ ಒಂದು ಬಂಗಾರದ ನೆಕ್ಲೇಸ್, 5 ಗ್ರಾಂ ತೂಕದ ಒಂದು ಬಂಗಾರದ ಉಂಗುರ, 4 ಗ್ರಾಂ ತೂಕದ ಚಿಕ್ಕ ಮಕ್ಕಳ 3 ಬಂಗಾರದ ಉಂಗುರಗಳು, 250 ಗ್ರಾಂ ತೂಕದ ಬೆಳ್ಳಿಯ ಒಡವೆಗಳು ಮತ್ತು 15,000/- ರೂ ನಗದು ಕಳುವಾಗಿರುತ್ತೆ.    ದಿನಾಂಕ 01/10/2019 ರಂದು ರಾತ್ರಿ 8.00 ಗಂಟೆಯಿಂದ ದಿನಾಂಕ 02/10/2019 ರ ಸಂಜೆ 7.00 ಗಂಟೆ ಮದ್ಯೆ ಯಾರೋ ಕಳ್ಳರು ತಮ್ಮ ಮನೆಯ ಮುಂಬಾಗಿಲಿಗೆ ಅಳವಡಿಸಿದ್ದ ಬೀಗ ಮತ್ತು ಚಿಕಲವನ್ನು ಯಾವುದೋ ಆಯುಧದಿಂದ ಕಿತ್ತು ಒಳಗೆ ಹೋಗಿ ಬೀರುವ ಬಾಗಿಲನ್ನು ಕಿತ್ತು ತೆರೆದು ಬೀರುವಿನಲ್ಲಿದ್ದ ಲಾಕರ್ ಬೀಗವನ್ನು ತೆಗೆದು ಲಾಕರ್ ಓಪನ್ ಮಾಡಿ ಮೇಲ್ಕಂಡ ಬಂಗಾರದ ವಡವೆಗಳು, ಬೆಳ್ಳಿಯ ವಡವೆಗಳು ಮತ್ತು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳುವಾಗಿರುವ ಬಂಗಾರದ ವಡವೆಗಳು ಸುಮಾರು 1,05,000/- ರೂಗಳಾಗಿದ್ದು, ಬೆಳ್ಳಿಯ ವಡವೆಗಳು ಸುಮಾರು 12,000/- ರೂ ಬೆಲೆ ಬಾಳುತ್ತೆ. ತಾನು ಕಳ್ಳತನದ ವಿಚಾರವನ್ನು ತಮ್ಮ ಹಿರಿಯರಿಗೆ ತಿಳಿಸಿ ಈ ದಿನ ತಡವಾಗಿ ದೂರು ನೀಡುತ್ತಿದ್ದು, ಕಳುವಾಗಿರುವ ತನ್ನ ವಡವೆಗಳು ಮತ್ತು ಹಣವನ್ನು ಪತ್ತೆ ಮಾಡಿ ಕಳ್ಳರ ವಿರುಧ್ದ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿದೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ. 192/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ದಿನಾಂಕ 04/10/2019 ರಂದು ಬೆಳಗ್ಗೆ 11:45 ಗಂಟೆಗೆ ಪಿ.ಎಸ್.ಐ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರಧಿಯ ಸಾರಾಂಶವೇನೆಂದರೆ.ಅವಿನಾಶ್ ಆದ ನಾನು ಗೌರಿಬಿದನೂರು ಪುರ ಪೊಲೀಸ್ ಠಾಣೆಯಲ್ಲಿ ಪಿ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುತ್ತೇನೆ. ದಿನಾಂಕ 04/10/2019 ರಂದು ಬೆಳಗ್ಗೆ 10:15 ಗಂಟೆ ಸಮಯದಲ್ಲಿ ಠಾಣೆಯಲ್ಲಿದ್ದಾಗ, ಗೌರಿಬಿದನೂರು ಪುರದ ಹಿಂದೂಪುರ ರಸ್ತೆಯಿಂದ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ತಿರುವಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಓಬ್ಬ ಆಸಾಮಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟು ಮದ್ಯವನ್ನು ಮಾರಾಟ ಮಾಡುತ್ತಿರುತ್ತಾರೆಂದು ಮಾಹಿತಿ ಬಂದಿದ್ದು, ಕೂಡಲೇ ನಾನು ಠಾಣೆಗೆ ಪಂಚಾಯ್ತಿದಾರರನ್ನು ಕರೆಸಿಕೊಂಡು ಅವರಿಗೆ ಮಾಹಿತಿಯನ್ನು ತಿಳಿಸಿ ನಮ್ಮ ಠಾಣಾ ಹೆಚ್ ಸಿ 48 ದಿನೇಶ್ ಮತ್ತು ಪಿ.ಸಿ 481 ಮಂಜುನಾಥ  ರವರನ್ನು ಕರೆದುಕೊಂಡು ಮಾಹಿತಿಯಂತೆ ಸರ್ಕಾರಿ ಜೀಪಿನಲ್ಲಿ ಗೌರಿಬಿದನೂರು ಪುರದ ಹಿಂದೂಪುರ ರಸ್ತೆಯ ಎನ್ ಆರ್ ವೃತ್ತದಲ್ಲಿ  ಜೀಪನ್ನು ನಿಲ್ಲಿಸಿ ಕಾಲ್ನಡಿಗೆಯಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಯಾರೋ ಓಬ್ಬ ಆಸಾಮಿ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಟೆಟ್ರಾ ಪಾಕೆಟ್ ಗಳನ್ನು ಮಾರಾಟ ಮಾಡಿಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡುವುದಕ್ಕಾಗಿ ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿದ್ದು. ಸಿಬ್ಬಂದಿಯೊಂದಿಗೆ ಹತ್ತಿರ ಹೋಗುತ್ತಿದ್ದಾಗ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಮದ್ಯಪಾನ ಮಾಡುತ್ತಿದ್ದವರು ಅಲ್ಲಿಂದ ಓಡಿಹೋಗಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿಯಯನ್ನು ಸುತ್ತುವರೆದು  ಮದ್ಯವನ್ನು ಮಾರಾಟ ಮಾಡುವುದಕ್ಕೆ ನಿನ್ನಲ್ಲಿ ಪರವಾನಗಿ ಇದೇಯೇ ಎಂದು ಕೇಳಿದಾಗ ಆತನು ತನ್ನ ಬಳಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದ್ದು ,ಆತನನ್ನು ಸಿಬ್ಬಂದಿಯ ಮುಖಾಂತರ ವಶಕ್ಕೆ ತೆಗೆದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಆತನು ತನ್ನ ಹೆಸರು ಎಸ್ ನೂರುಲ್ಲಾ ಬಿನ್ ಎಸ್ ನಬೀಸಾಬ್, 35ವರ್ಷ, ಮುಸ್ಲಿಂ ಜನಾಂಗ, ಕೂಲಿ ಕೆಲಸ, ವಾಸ 16ವಾರ್ಡ್ ನೇತಾಜಿನಗರ, ಹಿಂದೂಪುರ ಟೌನ್ ಎಂತ ತಿಳಿಸಿರುತ್ತಾನೆ. ಸ್ಥಳದಲ್ಲಿ 1) BANGALORE WHISKY ಎಂದು ನಮೂದಿಸಿರುವ 90 ಎಂ.ಎಲ್ ನ 23 ಟೆಟ್ರಾ ಪಾಕೆಟ್ ಗಳು ಇದ್ದು, ಅವುಗಳಲ್ಲಿ 03 ಖಾಲಿಯಾಗಿದ್ದು, ಸ್ಥಳದಲ್ಲಿ 04 ಪೇಪರ್ ಲೋಟಗಳು ಇದ್ದವು. ಒಂದೊಂದು ಟೆಟ್ರಾ ಪಾಕೆಟ್ ನ ಬೆಲೆ 24.47/-ರೂಪಾಯಿಗಳು ಆಗಿದ್ದು, ಮೇಲ್ಕಂಡ ಟೆಟ್ರಾ ಪಾಕೆಟ್ ಗಳ ಒಟ್ಟು ಬೆಲೆ 489/- ರೂಪಾಯಿಗಳು ಆಗಿರುತ್ತೆ. ಅವುಗಳೆಲ್ಲವನ್ನು ಪಂಚರ ಸಮಕ್ಷಮ ಬೆಳಗ್ಗೆ 10:30 ಗಂಟೆಯಿಂದ 11:30 ಗಂಟೆಯವರೆಗೆ ಠಾಣಾ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡಿದ ಪಂಚನಾಮೆಯ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿ ಹಾಗೂ ಮಾಲಿನೊಂದಿಗೆ ಠಾಣೆಗೆ ಬೆಳಗ್ಗೆ 11:45 ಗಂಟೆಗೆ ವಾಪಸ್ಸಾಗಿದ್ದು, ಮುಂದಿನ ಕ್ರಮ ಕೈಗೊಳ್ಳಬೇಕಾಗಿ ನೀಡಿದ ವರಧಿಯ ಮೇರೆಗೆ ಠಾಣಾ ಮೊ ಸಂ 192/2019 ಕಲಂ 15(ಎ),32(3) ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 322/2019 ಕಲಂ.15(ಎ), 32(3) ಕೆ.ಇ ಆಕ್ಟ್:-

     ಗುಡಿಬಂಡೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಭಾರದಲ್ಲಿರುವ ಪೊಲೀಸ್ ಇನ್ಸ್ ಪೆಕ್ಟರ್  ಹನುಮಂತರಾಯಪ್ಪ ರವರು ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ:03-10-2019 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಗಸ್ತಿನಲ್ಲಿದ್ದಾಗ, ಠಾಣಾ ಸಿಬ್ಬಂದಿ ಸಿ.ಪಿ.ಸಿ.-89 ಮಂಜುನಾಥ ರವರು ಪೋನ್ ಮಾಡಿ ಗುಡಿಬಂಡೆ ತಾಲ್ಲೂಕಿನ ಸೊಮೇಶ್ವರ ಗ್ರಾಮದ ಸಾಯಿನಾಥ ರವರ ಮನೆಯ ಬಳಿಯಿರುವ  ಸಾರ್ವಜನಿಕ ಸ್ಥಳವಾದ ರಸ್ತೆಯಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ನೀಡಿರುತ್ತಾರೆಂದು ನೀಡಿದ ಮಾಹಿತಿ ಮೇರೆಗೆ ನಾನು ಸಕರ್ಾರಿ ಜೀಪು ಸಂಖ್ಯೆ-ಕೆ,ಎ-40 ಜಿ-1888 ರಲ್ಲಿ ಚಾಲಕ ಎ.ಎಚ್,ಸಿ-43 ವೆಂಕಟಚಲ ರವರೊಂದಿಗೆ ಸಿಬ್ಬಂದಿಯಾದ ಸಿ,ಪಿ,ಸಿ-416 ವಾಸು ರವರನ್ನು ಕರೆದುಕೊಂಡು ಬೆಳಿಗ್ಗೆ 11-15 ಗಂಟೆಯಲ್ಲಿ ಸೋಮೇಶ್ವರ ಗ್ರಾಮಕ್ಕೆ ಹೋಗಿ ಗ್ರಾಮದಲ್ಲಿದ್ದ ಪಂಚರನ್ನು ಬರಮಾಡಿಕೊಂಡು ಪಂಚರೊಂದಿಗೆ ಸೊಮೇಶ್ವರ ಗ್ರಾಮದ ಸಾಯಿನಾಥ ರವರ ಮನೆಯ ಸ್ವಲ್ಪ ದೂರದ ಮರೆಯಲ್ಲಿ ನಿಂತು ನೋಡಲಾಗಿ, ಸಾರ್ವಜನಿಕ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಮತಿ ನೀಡಿರುವುದು ಮತ್ತು ಸಾರ್ವಜನಿಕರಿಗೆ ಮಧ್ಯವನ್ನು ಕುಡಿಯಲು ಸ್ಥಳಾವಕಾಶ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತೆ. ಪಂಚರೊಂದಿಗೆ ನಾವುಗಳು ಸದರಿ ಮಧ್ಯಪಾನ ಮಾಡುತ್ತಿದ್ದವರ ಮೇಲೆ ಧಾಳಿ ಮಾಡಿದಾಗ, ಸಮವಸ್ತ್ರದಲ್ಲಿದ್ದ ನಮ್ಮನ್ನು ಕಂಡು ಮದ್ಯವನ್ನು ಕುಡಿಯುತ್ತಿದ್ದವರು ಓಡಿ ಹೋದರು, ಆ ಪೈಕಿ ಮದ್ಯವನ್ನು ಸರಬರಾಜು ಮಾಡುವ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಹೆಸರು & ವಿಳಾಸ ಕೇಳಲಾಗಿ ಸಾಯಿನಾಥ ಬಿನ್ ರಾಮಸ್ವಾಮಿ, 42 ವರ್ಷ, ಬಲಜಿಗರು, ಜಿರಾಯ್ತಿ ವಾಸ: ಸೊಮೇಶ್ವರ ಗ್ರಾಮ, ಗುಡಿಬಂಡೆ ತಾಲೂಕು ಎಂದು ತಿಳಿಸಿದ್ದು. ಸದರಿ ಆಸಾಮಿಯನ್ನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಧ್ಯ ಸೇವನೆ ಮಾಡಲು ಸ್ಥಳಾವಕಾಶ ನೀಡಿರುವ ಬಗ್ಗೆ ಇರುವಂತಹ ಲೈಸನ್ಸ್ ತೋರಿಸಲು ಕೇಳಲಾಗಿ, ಸದರಿ ಆಸಾಮಿಯು ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದನು, ನಂತರ ಸ್ಥಳವನ್ನು ಪರಿಶೀಲನೆ ಮಾಡಲಾಗಿ 1) ಓರಿಜಿನಲ್ ಚಾಯ್ಸ್ ಡಿಲಾಕ್ಸ್ ವಿಸ್ಕಿ ಕಂಪನಿಯ 90 ಎಮ್, ಎಲ್ ಅಳತೆಯ ಮಧ್ಯವಿರುವಂತಹ 14 ಟೆಟ್ರಾ ಪಾಕೆಟ್ಗಳು ಇದ್ದು, 2) ಓಪನ್ ಮಾಡಿರುವಂತ ಓರಿಜಿನಲ್ ಚಾಯ್ಸ್ ಡಿಲಾಕ್ಸ್ ವಿಸ್ಕಿ  90 ಒಐ, ಅಳತೆಯ 04 ಖಾಲಿ ಟೆಟ್ರಾ ಪಾಕೆಟ್ಗಳು 3) ಮದ್ಯವನ್ನು ಕುಡಿದು ಬಿಸಾಕಿದಂತಹ 4 ಖಾಲಿ ಪ್ಲಾಸ್ಟಿಕ್ ಗ್ಲಾಸುಗಳು 4) ಒಂದು ಲೀಟರ್ ಸಾಮಥ್ರ್ಯದ 1 ಖಾಲಿ ವಾಟರ್ ಬಾಟೆಲ್ ಇದ್ದು, ಮಧ್ಯವಿರುವ ಟೆಟ್ರಾ ಪಾಕೆಟ್ಗಳ ದ್ರವ ಪ್ರಮಾಣ ಲೆಕ್ಕ ಮಾಡಲಾಗಿ ಒಟ್ಟು- 1 ಲೀಟರ್ 260 ಎಮ್,ಎಲ್ ಆಗಿದ್ದು, ಆ ಪಾಕೆಟ್ಗಳ ಮೇಲಿನ ದರವನ್ನು ಲೆಕ್ಕ ಮಾಡಲಾಗಿ ಒಟ್ಟು 30.32*14=424-48/- ರೂ ಆಗಿರುತ್ತದೆ. ಸದರಿ ಮಾಲನ್ನು ಪಂಚಾಯ್ತಿದಾರರ ಸಮಕ್ಷಮದಲ್ಲಿ ಬೆಳಿಗ್ಗೆ 11-30 ಗಂಟೆಯಿಂದ 12-15 ಗಂಟೆಯವರೆಗೆ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡಿರುತ್ತದೆ, ಮೇಲ್ಕಂಡ ಆರೋಪಿ & ಮಾಲನ್ನು ಅಸಲು ಪಂಚನಾಮೆಯೊಂದಿಗೆ ಮಧ್ಯಾಹ್ನ 12-45 ಗಂಟೆಯಲ್ಲಿ ಠಾಣೆಯಲ್ಲಿ ಹಾಜರುಪಡಿಸಿ ಸದರಿ ಆರೋಪಿ & ಮಾಲಿನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ದೂರು ಆಗಿರುತ್ತೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ. 323/2019 ಕಲಂ.143-147-148-323-324-427-506 ರೆ/ವಿ 149 ಐ.ಪಿ.ಸಿ:-

     ದಿನಾಂಕ 03/10/2019 ರಂದು ಪಿರ್ಯಾದಿದಾರರಾದ ಶ್ರೀಮತಿ ಸುನಂದಮ್ಮ ಕೋಂ ಆನಂದ 36 ವರ್ಷ, ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:27/09/2019 ರಂದು ಬೆಳ್ಳಿಗ್ಗೆ 7.00 ಗಂಟೆ ಸಮಯದಲ್ಲಿ ತನ್ನ ಗಂಡ ಆನಂದ ಡೈರಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದಾಗ ತಮ್ಮ ಗ್ರಾಮದ 1) ಅನಿಲ್ ಬಿನ್ ಲೇಟ್ ನರಸಿಂಹಪ್ಪ 19 ವರ್ಷ, 2) ವೆಂಕಟ ಲಕ್ಷ್ಮಮ್ಮ ಕೊಂ ಲೇಟ್ ನರಸಿಂಹಪ್ಪ 50 ವರ್ಷ, 3) ಲಕ್ಷ್ಮೀದೇವಮ್ಮ ಕೋಂ ನರಸಿಂಹರೆಡ್ಡಿ 45 ವರ್ಷ, 4) ಭಾಗ್ಯಮ್ಮ ಕೊಂ ಚಿಕ್ಕನರಸಿಂಹಪ್ಪ 44 ವರ್ಷ, 5) ನವೀನ ಬಿನ್ ಚಿಕ್ಕನರಸಿಂಹಪ್ಪ 18 ವರ್ಷ, 6) ಚಿಕ್ಕನರಸಿಂಹಪ್ಪ ಬಿನ್ ಲೇಟ್ ನರಸಿಂಹಪ್ಪ 60 ವರ್ಷ, 7) ನರಸಿಂಹರೆಡ್ಡಿ ಬಿನ್ ಕದಿರಪ್ಪ 40 ವರ್ಷ, ರವರುಗಳು ಏಕಾಏಕಿ ಗುಂಪುಕಟ್ಟಿಕೊಂಡು ಬಂದು ದೌರ್ಜನ್ಯದಿಂದ ಹೊಡೆದು ಗಲಾಟೆ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ತಾನು ಸಮಾಧಾನದಿಂದ ಕೇಳಿದಾಗ ನರಸಿಂಹರೆಡ್ಡಿ ರವರು ಎಡ ಕಾಲಿನಿಂದ ಬಲವಾಗಿ ಒದ್ದಿದ್ದು, ಅನಿಲ್ ರವರು ತನ್ನ ಕೈನಲ್ಲಿದ್ದ ಕುಡುಗೋಲಿನಿಂದ ಎಡಭಾಗದ ತಲೆಗೆ ಹೊಡೆದು ರತ್ಕ ಗಾಯಗೊಳಿಸಿದ್ದು ನಂತರ ಎಲ್ಲರೂ ಸೇರಿ ತಮ್ಮ ಇಷ್ಟದಂತೆ ಹೊಡೆದಿರುತ್ತಾರೆ. ಮೇಲ್ಕಂಡವರು ಪ್ರತಿ ವರ್ಷ, ತಮ್ಮ ರಾಗಿ ಕುರಿಗಳಿಂದ ಮೇಯಿಸಿ ಬೆಲೆ ನಷ್ಟ ಮಾಡುತ್ತಿದ್ದು ದಿನಾಂಕ:26/09/2019 ರಂದು ತಮ್ಮ ರಾಗಿ ತೆನೆ ಹೊಲಕ್ಕೆ ಕುರಿಗಳು ಬಿಟ್ಟು ಮೇಯಿಸಿ ಬೆಳೆ ಹಾನಿ ಮಾಡಿ ನಷ್ಟ ಮಾಡಿ ತಮ್ಮ ಜೀವನಕ್ಕೆ ಆಹಾರ ಇಲ್ಲದೇ ಮಾಡಿ   ತಮ್ಮ ಪ್ರಾಣವನ್ನೇ ತೆಗೆಯಬೇಕು ಸಾಯಿಸಬೇಕೆಂದು ಗಲಾಟೆ ಮಾಡಿದ್ದು ನಂತರ ತನ್ನ ಗಂಡ ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪಂಚಾಯ್ತಿದಾರರು ನ್ಯಾಯ ತಿರ್ಮಾನ ಮಾಡುತ್ತಾರೆಂದು ಹೇಳಿದ್ದರಿಂದ ದೂರು ನೀಡುವುದು ತಡವಾಗಿರುತ್ತದೆ, ಮೇಲ್ಕಂಡಂತೆ ಗಲಾಟೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿದ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.265/2019 ಕಲಂ.420 ಐ.ಪಿ.ಸಿ:-

     ದಿನಾಂಕ:03/10/2019 ರಂದು ಪಿರ್ಯಾದಿದಾರರಾದ ಶ್ರೀಮತಿ ನವರತ್ನಮ್ಮ ಕೊಂ ಲೇಟ್ ಚಂದ್ರಕೀರ್ತಿ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:03/10/2019 ರಂದು ತಾನು ತಮ್ಮ ಮನೆಯ ಮುಂದೆ ಇಟ್ಟಿರುವ ಬ್ರಹ್ಮದೇವ ಸ್ಟೋರ್ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಸುಮಾರು 12-00 ಗಂಟೆಯ ಸಮಯದಲ್ಲಿ ಯಾರೋ ಇಬ್ಬರು ಸುಮಾರು 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳು ನಮ್ಮ ಅಂಗಡಿಯ ಬಳಿ ಬಂದು ಅದರಲ್ಲಿ ಒಬ್ಬರು ನನಗೆ 50 ರೂ ಕೊಟ್ಟು ಮೆಡಿಮಿಕ್ಸ್ ಸೋಪ್ ಕೊಡಲು ಕೇಳಿದ್ದು, ನಾನು ಮೆಡಿಮಿಕ್ಸ್ ಸೋಪನ್ನು ಕೊಟ್ಟು ಹೊಸ ನೋಟ್ ಚಿಲ್ಲರೆಯನ್ನು ಕೊಡಲು ಹೋದಾಗ ಆತನು ನನ್ನ ತಲೆ ಸವರಿದ ರೀತಿಯಾಗಿದ್ದು, ನನಗೆ ಹಳೇ ನೋಟು ಕೋಡು ಎಂದು ಮತ್ತೆ ಹೇಳಿದಾಗ ನನಗೆ ತಲೆ ಸುತ್ತಿದ ರೀತಿಯಾಗಿ ನನ್ನ ಕತ್ತಿನಲ್ಲಿದ್ದ ಸರವನ್ನು ತೆಗೆದುಕೊಂಡಿದ್ದು ನನಗೆ ಏನು ತೋಚದಂತೆ ಆಗಿದ್ದು, ಮಾತನಾಡಲು ಸಹ ಆಗಲಿಲ್ಲ ನಂತರ ಸ್ವಲ್ಪ ಸಮಯದ ನಂತರ ನನಗೆ ಚೇತರಿಕೆಯಾಗಿ ನೋಡಿಕೊಂಡಾಗ ಕತ್ತಿನಲ್ಲಿದ್ದ ಸರ ಕಾಣಿಸದೆ ಇದ್ದು, ಹೊರಗಡೆ ಯಾರು ಸಹ ಇರಲಿಲ್ಲ ಆ ಮೇಲೆ ನನ್ನ ಮಗನಾದ ರಾಜನಿಗೆ ವಿಚಾರ ತಿಳಿಸಿದಾಗ ನನ್ನ ಮಗನು ಸೂತ್ತಲೂ ಸಹ ನೋಡಿದ್ದು, ಯಾರು ಕಾಣಿಸದೆ ಇದ್ದು, ನನ್ನ ಕೊರಳಿನಲ್ಲಿದ್ದ  ಎರಡು ಎಳೆಯ ಚಿನ್ನದ ಸರ ಸುಮಾರು 48 ಗ್ರಾಂ ಇದ್ದು, ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಬೆಲೆ ಬಾಳುವ ಬಂಗಾರದ ಒಡವೆಯನ್ನು ಮೋಸಮಾಡಿ ತೆಗೆದುಕೊಂಡು ಹೋಗಿದ್ದು, ಸದರಿಯವರನ್ನು ಪತ್ತೆ ಮಾಡಿ ಕಾನೂನಿನ ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.266/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:03/10/2019 ರಂದು ಠಾಣಾ ಪಿ.ಸಿ.311 ಶ್ರೀ ಗೂಳಪ್ಪ ಶ್ರೀಶೈಲ ನಿಂಗನೂರ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 03/10/2019 ರಂದು ನಾನು  ಮತ್ತು ಪಿ.ಸಿ 283  ಅರವಿಂದ ಹೆಚ್. ರವರು ಗ್ರಾಮಗಳ  ಕಡೆ ಗಸ್ತಿನಲ್ಲಿದ್ದಾಗ ನನಗೆ ಮದ್ಯಾಹ್ನ 12-00 ಗಂಟೆಯ ಸಮಯದಲ್ಲಿ ಬಾತ್ಮೀದಾರರಿಂದ ಬಂದ ಮಾಹಿತಿ ಏನೇಂದರೆ  ನಂದಿಗಾನಹಳ್ಳಿ  ಗ್ರಾಮದ  ನರಸಿಂಹರಾಜು ಬಿನ್ ಲೇಟ್ ಹನುಮಂತರಾಯಪ್ಪ ಎಂಬುವರು ಅವರ ಮನೆಯ ಮುಂಭಾಗದಲ್ಲಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರನ್ನು ಬರಮಾಡಿಕೊಂಡು  ಮದ್ಯಾಹ್ನ 12-30 ಗಂಟೆಗೆ  ನಂದಿಗಾನಹಳ್ಳಿ ಗ್ರಾಮದ  ನರಸಿಂಹರಾಜು ಬಿನ್ ಲೇಟ್ ಹನುಮಂತರಾಯಪ್ಪ  ರವರ ಮನೆಯ ಮುಂಭಾಗದ  ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ನರಸಿಂಹರಾಜು ಬಿನ್ ಲೇಟ್ ಹನುಮಂತರಾಯಪ್ಪ 51 ವರ್ಷ ಜಿರಾಯ್ತಿ ನಂದಿಗಾನಹಳ್ಳಿ ಗ್ರಾಮ ತೊಂಡೇಬಾವಿ ಹೋಬಳಿ ಗೌರೀಬಿದನೂರು ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ HAYWARDS CHEERS WHISKY ಯ 10 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ  HAYWARDS CHEERS WHISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಚೀಲವನ್ನು ಮದ್ಯಾಹ್ನ 12-45  ಗಂಟೆಯಿಂದ 13-45  ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 303 /-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ   ನರಸಿಂಹರಾಜು ಬಿನ್ ಲೇಟ್ ಹನುಮಂತರಾಯಪ್ಪ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.268/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ: 03/10/2019 ರಂದು ಸಂಜೆ 5-45 ಗಂಟೆಗೆ ಪಿರ್ಯಾದಿದಾರರಾದ ಸಿಪಿಸಿ 100, ಮಹೇಶ ರವರು ಮಾಲು, ಮಹಜರ್, ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆನೆಂದರೆ, ಈ ದಿನ ದಿನಾಂಕ 03/10/2019 ರಂದು ಮದ್ಯಾಹ್ನ 3-30 ಗಂಟೆ ಸಮಯದಲ್ಲಿ ತಾನು ಮತ್ತು ಪಿಸಿ 336, ಉಮೇಶ್ ಬಿ ಶಿರಶ್ಯಾಡ ರವರು ತೊಂಡೆಬಾವಿ ಪೊಲೀಸ್ ಠಾಣೆಯಲ್ಲಿರುವಾಗ ಚರಕಮಟ್ಟೇನಹಳ್ಳಿ ಗ್ರಾಮದ ಕೃಷ್ಣೋಜಿರಾವ್ ಬಿನ್ ನಾರಾಯಣರಾವ್, ಎಂಬುವರು ಅವರ ಚಿಲ್ಲರೆ ಅಂಗಡಿಯ ಮುಂಭಾಗ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ತೊಂಡೆಬಾವಿ ಪೊಲೀಸ್ ಹೊರಠಾಣೆಯಲ್ಲಿದ್ದ ತಾನು ಮತ್ತು ಪಿಸಿ 336, ಉಮೇಶ ಬಿ ಶಿರಶ್ಯಾಡ ರವರೊಂದಿಗೆ ದ್ವಿ ಚಕ್ರ ವಾಹನಗಳಲ್ಲಿ  ಪಂಚರನ್ನು ಕರೆದುಕೊಂಡು ಸಂಜೆ 4-00 ಗಂಟೆಗೆ ಚರಕಮಟ್ಟೇನಹಳ್ಳೀ ಗ್ರಾಮದ ಕೃಷ್ಣೋಜಿರಾವ್ ರವರ ಚಿಲ್ಲರೆ ಅಂಗಡಿಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ತಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಮಧ್ಯಸೇವನೆಗೆ ಅವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದುಕೊಂಡು ಹೆಸರು ಮತ್ತು ವಿಳಾಸ ಕೇಳಲಾಗಿ ಕೃಷ್ಣೋಜಿರಾವ್ ಬಿನ್ ನಾರಾಯಣರಾವ್, 48 ವರ್ಷ, ಮರಾಠಿ ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ, ವಾಸ ಚರಕಮಟ್ಟೇನಹಳ್ಳಿ ಗ್ರಾಮ, ತೊಂಡೆಬಾವಿ ಹೋಬಳಿ, ಗೌರಿಬಿದನೂರು ತಾಲ್ಲೂಕು ಎಂದು ತಿಳಿಸಿದ್ದು ಈತನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್. ಸಾಮರ್ಥ್ಯದ HAYWARDS CHEERS WISKY ಯ 10 ಮದ್ಯದ ಟೆಟ್ರಾ ಪ್ಯಾಕೇಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ  ಅನುಮತಿ ಪತ್ರ ಇಲ್ಲವೆಂದು ಸಣ್ಣ ಪ್ರಮಾಣದಲ್ಲಿ ಸಾರ್ವಜನಿಕರಿಗೆ ಮಧ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ತಿಳಿಸಿದ್ದರ ಮೇರೆಗೆ ಅಲ್ಲಿಯೆ ಅಲ್ಲಿಯೇ ಸುತ್ತಲೂ ಖಾಲಿ ಬಿದ್ದಿದ್ದ 90 ಎಂ.ಎಲ್. ಸಾಮರ್ಥ್ಯದ HAYWARDS CHEERS WISKY ಯ 2 ಟೆಟ್ರಾ ಪ್ಯಾಕೇಟ್ ಗಳು ಮತ್ತು 2 ಪ್ಲಾಸ್ಟಿಕ್  ಕಪ್ ಗಳನ್ನು ಪಂಚರ ಸಮಕ್ಷಮ ಪಂಚನಾಮೆಯ ಮೂಲಕ ಸಂಜೆ 4-15 ಗಂಟೆಯಿಂದ 5-15 ಗಂಟೆಯವರೆಗೆ ಅಮಾನತ್ತುಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 303 /- ರೂಪಾಯಿಗಳು ಬೆಲೆಬಾಳದ್ದಾಗಿದ್ದು. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಕೃಷ್ಣೋಜಿರಾವ್ ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಈತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುತ್ತದೆ.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.269/2019 ಕಲಂ. 279-337 ಐ.ಪಿ.ಸಿ & 134 ಐ.ಎಂ.ವಿ ಆಕ್ಟ್:-

     ದಿನಾಂಕ:04/10/2019 ರಂದು ಬೆಳಿಗ್ಗೆ 10-00 ಗಂಟೆಗೆ ಠಾಣಾ ಪಿ.ಸಿ.211 ಶ್ರೀ ಶೇಖರಪ್ಪ ರವರು ಬೆಂಗಳೂರು ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಗಾಯಾಳುವಾದ ಶ್ರೀ ರಾಕೇಶ ಚಾರಿ ಬಿನ್ ನರಸಿಂಹಚಾರಿ ರವರಿಂದ ಹೇಳಿಕೆಯನ್ನು ತಂದು ಹಾಜರುಪಡಿಸಿದರ ಸಾರಾಂಶವೇನೆಂದರೆ ದಿನಾಂಕ:02/10/2019 ರಂದು ತನ್ನ ಬಾಬತ್ತು KA-21, E-1428 ನೋಂದಣಿ ಸಂಖ್ಯೆಯ ಹೀರೊ ಹೊಂಡಾ CDSS ದ್ವಿಚಕ್ರ ವಾಹನದಲ್ಲಿ ಮಂಚೇನಹಳ್ಳುಗೆ ಬಂದು ಮಂಚೇನಹಳ್ಳಿ ಯಿಂದ ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ವಾಪಾಸ್ ಮನೆಗೆ ಹೋಗಲು ಸಂಜೆ ಸುಮಾರು 6-30 ಗಂಟೆಯ ಸಮಯದಲ್ಲಿ ಛಾಯ ನಗರದ ಬಳಿ ಹೋಗುತ್ತಿದ್ದಾಗ ಏಕಾಏಕಿ ಪಕ್ಕದ ರಸ್ತೆ ಕಡೆಯಿಂದ ಅತಿವೇಗ ಮತ್ತು ಅಜಾಗರುಕತೆಯಿಂಧ ಚಾಲನೆ ಮಾಡಿಕೊಂಡು ಬಂದ KA-40 3125 ನೊಂದಣಿ ಸಂಖ್ಯೆಯ ಆಟೋ ಚಾಲಕ ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿಸಿದ ಪರಿಣಾಮ ನಾನು ರಸ್ತೆಯಲ್ಲಿ ಬಿದ್ದಾಗ ಆಟೋ ಚಕ್ರ ನನ್ನ ಬಲಕಾಲಿನ ಮೇಲೆ ಹರಿದು ಕೈಕಾಲುಗಳಿಗೆ ಗಾಯಗಳಾಗಿದ್ದು, ಅಲ್ಲಿಗೆ ಬಂದ ನಮ್ಮ ಚಿಕ್ಕಪ್ಪ ಸಂಜೀವಚಾರಿ ಬಿನ್ ಲೇಟ್ ರಾಮಚಾರಿ ರವರು ನನ್ನನ್ನು ಉಪಚರಿಸಿ 108 ಅಂಬ್ಯೂಲೇನ್ಸ್ ನಲ್ಲಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದು, ತನಗೆ ಅಪಘಾತ ಪಡಿಸಿದ ಆಟೋ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು, ತನಗೆ ಅಪಘಾತ ಪಡಿಸಿದ KA-40 3125 ನೊಂದಣಿ ಸಂಖ್ಯೆಯ ಆಟೋ ಚಾಲಕನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲು ಕೋರಿ ಕೊಟ್ಟ ಹೇಳಿಕೆ ದೂರು.

 1. ಮಂಚೇನಹಳ್ಳಿ ಪೊಲೀಸ್ ಠಾಣೆ ಮೊ.ಸಂ.270/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ:04/10/2019 ರಂದು ಠಾಣಾ ಪಿ.ಸಿ.336 ಶ್ರೀ ಉಮೇಶ್ ಶಿರಶ್ಯಾಡ್ ರವರು ಮಾಲು ಮತ್ತು ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:04/10/2019 ರಂದು ಬೆಳಿಗ್ಗೆ 10-30 ಗಂಟೆಯ ಸಮಯದಲ್ಲಿ ನಾನು ಗ್ರಾಮ ಗಸ್ತು ಮಾಡುತ್ತಿದ್ದಾಗ, ನನಗೆ ಬಂದ ಮಾಹಿತಿ ಏನೇಂದರೆ  ಬುದ್ದಿವಂತರಹಳ್ಳಿ ಗ್ರಾಮದ ಅಶ್ವತ್ಥಕಟ್ಟೆಯ ಬಳಿ ಯಾರೋ ಒಬ್ಬ ಆಸಾಮಿ ಯಾವುದೇ ರೀತಿಯ ಅನುಮತಿಯನ್ನು ಮತ್ತು ಪರ್ಮಿಟ್ ಪಡೆಯದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ ಮಾಹಿತಿ ಬಂದ್ದಿದ್ದು ದಾಳಿ ಮಾಡುವ ಸಲುವಾಗಿ ಪಂಚರೊಂದಿಗೆ  ಬೆಳಿಗ್ಗೆ 10-45  ಗಂಟೆಯ ಸಮಯಕ್ಕೆ ಬುದ್ದಿವಂತರಹಳ್ಳಿ  ಗ್ರಾಮದ ಅಶ್ವತ್ಥಕಟ್ಟೆಯ ಬಳಿ ಹೋಗುವಷ್ಟರಲ್ಲಿ ಅಲ್ಲಿ ಮದ್ಯವನ್ನು ಸೇವನೆ ಮಾಡುತ್ತಿದ್ದವರು ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಸ್ಥಳದಿಂದ ಓಡಿಹೋದರು ಮಾಹಿತಿಯಂತೆ ಅಲ್ಲಿದ್ದವನನ್ನು ಹಿಡಿದುಕೊಂಡು ಅವನ ಹೆಸರು ಮತ್ತು ವಿಳಾಸ ಕೇಳಲಾಗಿ ಸುರೇಶ ಬಿನ್ ನರಸಿಂಹಪ್ಪ, 28ವರ್ಷ, ಪೇಂಟಿಂಗ್ ಕೆಲಸ, ನಾಯಕರು, ವಾಸ ಕೇತೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂತ ತಿಳಿಸಿದ್ದು, ಅವನ ಬಳಿ ಒಂದು ಪ್ಲಾಸ್ಟಿಕ್ ಚೀಲವಿದ್ದು ಅದನ್ನು ತೆಗೆದು ಪರಿಶೀಲಿಸಲಾಗಿ ಅದರೊಳಗಡೆ 90 ಎಂ.ಎಲ್.ಸಾಮರ್ಥ್ಯದ ಮಧ್ಯ ತುಂಬಿರುವ ಹೈವಾಡ್ಸ್ ಚಿಯರ್ಸ್ ವಿಸ್ಕಿಯ 10  ಟೆಟ್ರಾ ಪ್ಯಾಕೆಟ್ ಗಳು ದೊರೆತಿದ್ದು, ಮದ್ಯವನ್ನು ಇಟ್ಟುಕೊಂಡಿರುವ  ಬಗ್ಗೆ ಮತ್ತು ಸಾರ್ವಜನಿಕರಿಗೆ ಮದ್ಯವನ್ನು ಸೇವನೆ ಮಾಡಲು ಅನುವು ಮಾಡಿಕೊಟ್ಟ ಬಗ್ಗೆ ಅನುಮತಿಯನ್ನು ಕೇಳಲಾಗಿ ತನ್ನ ಬಳಿ ಯಾವುದೇ ರೀತಿಯ ಅನುಮತಿ ಪತ್ರ ಇಲ್ಲವೆಂದು ತಿಳಿಸಿದ್ದರ ಮೇರೆಗೆ  ಮತ್ತು ಅಲ್ಲಿಯೇ ಸುತ್ತಲೂ 02 ಖಾಲಿ ಬಿದ್ದಿದ್ದ 90 ಎಂ.ಎಲ್ ನ ಹೈವಾಡ್ಸ್ ಚಿಯರ್ಸ್ ವಿಸ್ಕಿಯ ಟೆಟ್ರಾ ಪ್ಯಾಕೆಟ್ ಗಳು 2 ಪ್ಲಾಸ್ಟಿಕ್  ಕಪ್ ಗಳನ್ನು ಮತ್ತು ಒಂದು ಪ್ಲಾಸ್ಟಿಕ್ ಬ್ಯಾಗನ್ನು  ಪಂಚನಾಮೆಯ ಮೂಲಕ  ಬೆಳಿಗ್ಗೆ 11-00 ಗಂಟೆಯಿಂದ 12-00 ಗಂಟೆಯ ಸಮಯದವರೆಗೆ ಅವುಗಳನ್ನು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡಿರುತ್ತೆ ಸ್ಥಳದಲ್ಲಿ ದೊರೆತ ಮದ್ಯದ ಬೆಲೆ ಸುಮಾರು 310/-ರೂಪಾಯಿಗಳು ಬೆಲೆಬಾಳದ್ದಾಗಿರುತ್ತೆ. ದೊರೆತ ಮಾಲನ್ನು ಹಾಗೂ ಸಾರ್ವಜನಿಕರಿಗೆ ಕುಡಿಯಲು ಅನುವು ಮಾಡಿಕೊಟ್ಟಿದ್ದ ಸುರೇಶ ಬಿನ್ ನರಸಿಂಹಪ್ಪ, ರವರನ್ನು ವಶಕ್ಕೆ ಪಡೆದುಕೊಂಡು ಹಾಜರುಪಡಿಸುತ್ತಿದ್ದು, ಇವನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ಕೊಟ್ಟ ದೂರು.

 1. ಪಾತಪಾಳ್ಯ ಪೊಲೀಸ್ ಠಾಣೆ ಮೊ.ಸಂ.91/2019 ಕಲಂ. 323-324-504-506 ರೆ/ವಿ 34 ಐ.ಪಿ.ಸಿ:-

     ದಿನಾಂಕ: 03/10/2019 ರಂದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಕೃಷ್ಣಪ್ಪ ಬಿನ್ ಲೇಟ್ ತಿಪ್ಪಣ್ಣ ರವರ ಹೇಳಿಕೆಯನ್ನು ಎಎಸ್.ಐ ವೆಂಕಟರವಣಪ್ಪ ರವರು ಪಡೆದುಕೊಂಡು ಸಂಜೆ 05-45 ಗಂಟೆಗೆ ಠಾಣೆಗೆ ತಂದು ಹಾಜರ್ಪಡಿಸಿದ್ದರ ಸಾರಾಶವೇನೆಂದರೆ, ಈ ದಿನ ದಿನಾಂಕ:03/10/2019  ರಂದು ನಾನು ಬೆಳಗ್ಗೆ ಸುಮಾರು 10-45 ಗಂಟೆಯ ಸಮಯದಲ್ಲಿ ನನ್ನ ಬಾರ್ ಬರ್ ಷಾಪ್ ನಿಂದ ಮನೆಗೆ ಹೋಗುತ್ತಿದ್ದಾಗ ಪಂಚಾಯ್ತಿ ಕಛೇರಿ ಬಳಿ ನನಗೆ ನಮ್ಮ ಗ್ರಾಮದ ವಾಸಿಗಳಾದ ಅರವಿಂದ ಬಿನ್ ಶ್ರೀನಿವಾಸ ಮತ್ತು ಸಾಯಿಕುಮಾರ್ ಬಿನ್ ಆದಿ ರವರು ದ್ವಿ ಚಕ್ರ ವಾಹನದಲ್ಲಿ ಬಂದು ನನಗೆ ತಗುಲಿಸಿದರು ನಾನು ಏಕೆ ಎಂದು ಕೇಳಿದೆ ನಂತರ ಅವರಷ್ಟಕ್ಕೆ ಅವರು ಹೊರಟು ಹೋದರು ಪುನಃ ನಾನು ಪಿ.ಜಿ.ಎಸ್ ಅಂಗಡಿಯ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಪುನಃ ಇಬ್ಬರು ಸುಮಾರು 10-50 ಗಂಟೆಯಲ್ಲಿ ಬಂದು ನನ್ನ ಮೇಲೆ ಜಗಳ ತೆಗೆದು ಗಾಡಿ ತಗುಲಿಸುವುದಲ್ಲ. ಗುದ್ದಿದರೆ ಏನು ಮಾಡುತ್ತೀಯೋ ಎಂದು ಅರವಿಂದ ಎಂಬುವವನು ನನ್ನ ಕತ್ತು ಪಟ್ಟಿಯನ್ನು ಹಿಡಿದುಕೊಂಡು ನನ್ನ ಮಗನೇ ನಿನ್ನಿಂದ ಏನಾಗುತ್ತೋ ಎಂದು ಎಳೆದಾಡಿದನು. ಅಷ್ಟರಲ್ಲಿ ಸಾಯಿಕುಮಾರ್ ಒಂದು ಕಬ್ಬಿಣದ ರಾಡಿನಿಂದ ನನ್ನ ತಲೆಯ ಎಡಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದನು ನಂತರ ಅರವಿಂದ ನನ್ನನ್ನು ಕೈಗಳಿಂದ ಹೊಡೆದು ಮೂಗೇಟು ಉಂಟುಮಾಡಿದನು. ಸಾಯಿಕುಮಾರ್ ಎಂಬುವವನು ನಿನ್ನನ್ನು ಸಾಯಿಸುವವರೆಗೂ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿ ಕೈಗಳಿಂದ ಹೊಡೆದು ಮೂಗೇಟುಗಳನ್ನು ಉಂಟುಮಾಡಿದನು ಅಷ್ಟರಲ್ಲಿ ನನ್ನನ್ನು ಮತ್ತು ನನ್ನ ಮೇಲೆ ಗಲಾಟೆ ಮಾಡಿದವರನ್ನು ನಮ್ಮ ಗ್ರಾಮದ ವಾಸಿಗಳಾದ ಶಿವ ಬಿನ್ ನಾರಾಯಣ. ರಾಜೇಶ ಬಿನ್ನ ಮಲ್ಲಪ್ಪವರು ಅಡ್ಡ ಬಂದು ಜಗಳ ಬಿಡಿಸಿ ನನ್ನನ್ನು ಬಿಳ್ಳೂರು ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟು ಸದರಿಯವರು  ಆಸ್ಪತ್ರೆಯ ಬಳಿಗೆ ಬಂದು ಚಿಕಿತ್ಸೆ ಕೊಡಿಸುತ್ತಿದ್ದರು ಅಲ್ಲಿಗೂ ಸಹ ಪುನಃ ಅರವಿಂದ ಸಾಯಿಕುಮಾರ್ ರಾಕೇಶ ಬಿನ್ ನಾಗರಾಜರವರು ಬಂದು ನನ್ನನ್ನು ಈ ದಿನ ತಪ್ಪಿಸಿಕೊಂಡಿದ್ದೀಯಾ ನೋಡೋಣ ಎಂದು  ಬೆದರಿಕೆ ಹಾಕಿದರು. ಬಿಳ್ಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಇರುವುದರಿಂದ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ನನ್ನನ್ನು ನನ್ನ ಚಿಕ್ಕಪ್ಪನ ಮಗನಾದ ರಮಣ ಬಿನ್ ನಾರಾಯಣಪ್ಪರವರು ಕರೆದುಕೊಂಡು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು  ಚಿಕಿತ್ಸೆಗಾಗಿ ದಾಖಲುಮಾಡಿರುತ್ತಾರೆ. ಆದ್ದರಿಂದ ಅರವಿಂದ. ಸಾಯಿಕುಮಾರ್ . ರಾಕೇಶ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ  ಕೋರಿ ನೀಡಿದ ಹೇಳಿಕೆಯ ಮೇರೆಗೆ ಠಾಣಾ ಮೊ,ಸಂ 91/2019 ಕಲಂ 323,324,504,506, ರೆ,ವಿ 34 ಐ,ಪಿ,ಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.140/2019 ಕಲಂ. 15(ಎ), 32(3) ಕೆ.ಇ ಆಕ್ಟ್:-

     ದಿನಾಂಕ.03.10.2019 ರಂದು ಪಿ.ಎಸ್.ಐ ರವರು ಆರೋಪಿ ಮತ್ತು ಮಾಲನ್ನು ಮಹಜರ್ ನೊಂದಿಗೆ ಠಾಣೆಗೆ ಹಾಜರುಪಡಿಸಿ ನೀಡಿದ ದೂರಿನ ಸಾರಾಂಶವೇನಂದರೆ, ಶ್ರೀ.ಲಿಯಾಕತ್ ಉಲ್ಲಾ ಪಿ.ಎಸ್.ಐ ರವರು ದಿನಾಂಕ:03/10/2019 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ಠಾಣೆಯ ಕರ್ತವ್ಯದಲ್ಲಿದ್ದಾಗ ಯಾರೋ ಸಾರ್ವಜನಿಕರಿಂದ ಶಿಡ್ಲಘಟ್ಟ ನಗರದ ಕೆ.ಕೆ.ಪೇಟೆ ಯಲ್ಲಿರುವ ಹೇಮಾ ಬಾರ್ ಪಕ್ಕದಲ್ಲಿರುವ ಚಿಲ್ಲರೆ ಅಂಗಡಿ  ವ್ಯಾಪಾರಿಯೊಬ್ಬರು ಸಾರ್ವಜನಿಕರ ಸ್ಥಳದಲ್ಲಿ ಯಾರೋ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿರುವುದಾಗಿ ಮಾಹಿತಿ ನೀಡಿದ್ದು, ಸದರಿ ಸ್ಥಳದಲ್ಲಿ ದಾಳಿ ಮಾಡಲು ನಮ್ಮೊಂದಿಗೆ ಪಂಚರಾಗಿ ಸಹಕರಿಸಲು ಬರಬೇಕೆಂತ ಕೋರಿದಾಗ ಅದಕ್ಕೆ ನಾವುಗಳು ಒಪ್ಪಿಕೊಂಡೆವು. ನಂತರ ಸಬ್ ಇನ್ಸ್ ಪೆಕ್ಟರ್ ರವರು ಅವರ ಸಿಬ್ಬಂದಿಯವರಾದ ಪಿ.ಸಿ.134 ಧನಂಜಯ್, ಪಿ.ಸಿ.131 ರಾಜಪ್ಪ ರವರೊಂದಿಗೆ ದಾಳಿ ಮಾಡಲು ಮೇಲ್ಕಂಡ ಸ್ಥಳಕ್ಕೆ 11-00 ಗಂಟೆಗೆ ಕರೆದುಕೊಂಡು ಹೋಗಿ ನೋಡಿದಾಗ ಚಿಲ್ಲರೆ ಅಂಗಡಿ  ಮುಂದೆ ಯಾರೋ ಸಾರ್ವಜನಿಕರು ಮದ್ಯಪಾನ ಸೇವನೆ ಮಾಡುತ್ತಿದ್ದು, ಪೊಲೀಸರನ್ನು ಕಂಡು ಮದ್ಯಪಾನ ಮಾಡುತ್ತಿದ್ದ 3 ಜನರ ಆಸಾಮಿಗಳು ಓಡಿ ಹೋದರು. ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದುಕೊಂಡು ಅವರ ಹೆಸರು ವಿಳಾಸ ಕೇಳಲಾಗಿ ರಾಜಣ್ಣ ಬಿನ್ ಚಿಕ್ಕಮುನಿಯಪ್ಪ, ಪರಿಶಿಷ್ಟ ಜಾತಿ, ಗಿಡ್ನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲೂಕು ಎಂದು ತಿಳಿಸಿರುತ್ತಾನೆ. ಸದರಿ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿ ಬಿಸಾಡಿದ್ದ 90 ಎಂ.ಎಲ್ ನ ರಾಜಾ ವಿಸ್ಕೀ ಲೇಬಲ್ ಇರುವ 03 ಖಾಲಿ ಮದ್ಯದ ಪಾಕೇಟ್ ಗಳು, ಪಕ್ಕದಲ್ಲಿ 90 ಎಂ.ಎಲ್ ನ ರಾಜ ವಿಸ್ಕಿ ಲೇಬಲ್ ಇರುವ 07 ಮದ್ಯದ ಪಾಕೇಟ್ ಇದ್ದು ಇವುಗಳ ಬೆಲೆ 212-00 ರೂಗಳಾಗಿದ್ದು ಹಾಗೂ ಮದ್ಯಪಾನ ಸೇವನೆ ಮಾಡಿರುವ 03-ಖಾಲಿ ಪ್ಲಾಸ್ಟೀಕ್ ಪೇಪರ್ ಗ್ಲಾಸ್ ಗಳು ಇರುತ್ತೆ. ಅಂಗಡಿ ವ್ಯಾಪಾರಿ  ರಾಜಣ್ಣ ರವರು ಸಾರ್ವಜನಿಕರ ಸ್ಥಳದಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿರುವುದು ಕಂಡು ಬಂದಿದ್ದರಿಂದ ಸದರಿ ಅಂಗಡಿ ವ್ಯಾಪಾರಿ ರಾಜಣ್ಣ ರವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ದೊರೆತ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿ ದೊರೆತ ಮೇಲ್ಕಂಡ ಮಾಲುಗಳನ್ನು ಮುಂದಿನ ಕ್ರಮದ ಬಗ್ಗೆ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆರೋಪಿ ಮತ್ತು ಮಾಲು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಿಗೆ ಒಪ್ಪಿಸಿದ್ದು, ಸದರಿಯವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದರ ಮೇರೆಗೆ ಪ್ರಕರಣ ದಾಖಲಾಗಿರುತ್ತೆ.