ದಿನಾಂಕ :04/08/2020 ರ ಅಪರಾಧ ಪ್ರಕರಣಗಳು

 1. ಬಾಗೇಪಲ್ಲಿ ಪೊಲೀಸ್ ಠಾಣೆ ಮೊ.ಸಂ.182/2020 ಕಲಂ. 323,324,504 ರೆ/ವಿ 34 ಐ.ಪಿ.ಸಿ :-

          ದಿನಾಂಕ; 03-08-2020 ರಂದು ಮದ್ಯಾಹ್ನ 03-15 ಗಂಟೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳು ಸುಧಾಕರ್ ಬಿನ್ ಗಂಗಾಧರಪ್ಪ ,25,ವರ್ಷ,ಬೋವಿ ಜನಾಂಗ ,ವಾಸ; ಡಿ,ಸಜ್ಜುಪಲ್ಲಿ ಗ್ರಾಮ ,ಬಾಗೇಪಲ್ಲಿ ತಾಲ್ಲೂಕು, ರವರ ಹೇಳಿಕೆಯನ್ನು ಪಡೆದುಕೊಂಡಿದ್ದರ ಸಾರಾಂಶ- ದಿನಾಂಕ 03-08-2020 ನಾನು ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡು ಜೇವನ  ಸಾಗಿಸಿಕೊಂಡಿರುತ್ತೆನೆ. ನಮ್ಮ ಗ್ರಾಮದಲ್ಲಿ ನಮಗೂ ಮತ್ತು ನಮ್ಮ ದೊಡ್ಡಪ್ಪ ರವರಿಗೂ ಜಮೀನುಗಳ ವಿಚಾರದಲ್ಲಿ ತಕರಾರುಗಳಿದ್ದು,ಸದರಿ ಜಮೀನುಗಳ ಬಗ್ಗೆ ನ್ಯಾಯಾಲಯದಲ್ಲಿ ಕೇಸು ನಡೆಸುತ್ತಿದ್ದು ಈ ಬಗ್ಗೆ ನಿನ್ನೆ ದಿನಾಂಕ -2/08/2020 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ನಮ್ಮ ಗ್ರಾಮಕ್ಕೆ ಹೋದಾಗ 1)ಶ್ರೀರಾಮಪ್ಪ ಬಿನ್ ನಾಗಪ್ಪ 2)ವೆಂಕಟಾಚಲಪತಿ ಬಿನ್ ನಾಗಪ್ಪ 3)ಸೋಮಶೇಖರ ಬಿನ್ ಶ್ರೀ ರಾಮಪ್ಪ 4) ಸುನಿತಮ್ಮ ಕೋಂ ವೆಂಕಟಾಚಲಪತಿ ರವರು ಜಮೀನುಗಳ ವಿಚಾರದಲ್ಲಿ ಜಗಳ ತೆಗೆದು ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬ್ಯೆದಿದ್ದು ವೆಂಕಟಾಚಲಪತಿ ರವರ ಮನೆಯ ಮುಂಬಾಗ ರಸ್ತೆಯಲ್ಲಿ ನಾನು ನಿಂತಿದ್ದಾಗ ಶ್ರೀ ರಾಮಪ್ಪ ರವರು ತನ್ನ ಕೈಯಲ್ಲಿ ಇದ್ದ ಕಟ್ಟಿಗೆಯಿಂದ ನನ್ನ ಎಡ ಹಣೆಗೆ ಹೊಡೆದಿದ್ದು ರಕ್ತ ಗಾಯವಾಗಿದ್ದು ,ವೆಂಕಟಾಚಲಪತಿ ,ಸೋಮಶೇಖರ, ಸುನಿತಮ್ಮ ರವರು ಕೈಗಳಿಂದ  ನನ್ನ ಮೈಮೇಲೆ ಹೊಡೆದು ನೋವುಂಟು ಮಾಡಿರುತ್ತಾರೆ. ,ಸುನೀತಮ್ಮ ರವರು ನಮ್ಮ ಚಿಕ್ಕಮ್ಮನಾದ ವೆಂಕಟಲಕ್ಷಮ್ಮ ರವರಿಗೆ ಅವರ ಕೈಗಳಿಂದ ಮೈಕೈಗಳ ಮೇಲೆ ಹೊಡೆದು , ಬಟ್ಟೆಗಳನ್ನು ಹಿಡಿದು ಎಳೆದಾಡಿ  ಮೈಕೈ ನೋವುಂಟು ಮಾಡಿರುತ್ತಾರೆ.  ಅಷ್ಟರಲ್ಲಿ ಈಶ್ವರಪ್ಪ ಬಿನ್ ಸತ್ಯಪ್ಪರವರು ಅಡ್ಡಬಂದು ಜಗಳ ಬಿಡಿಸಿದರು.  ನಂತರ ನಾನು ನೆನ್ನೆ ಬಾಗೇಪಲ್ಲಿ ಆಸ್ಪತ್ರೆ ಬಂದು ಚಿಕಿತ್ಸೆಯನ್ನು ಪಡಿಸಿಕೊಂಡು ಹೋಗಿ, ನಂತರ ಈ ದಿನ ಸರ್ಕಾರಿ ಆಸ್ಪತ್ರೆ ಬಾಗೇಪಲ್ಲಿಗೆ ಬಂದು ಚಿಕಿತ್ಸೆಗಾಗಿ ದಾಖಲಾಗಿರುತ್ತೇನೆ. ಆದ್ದರಿಂದ ಮೇಲ್ಕಂಡವರ ಮೇಲೆ ಕ್ರಮ ಜರುಗಿಸ ಬೇಕಾಗಿ ತಮ್ಮಲ್ಲಿ ಕೋರುತ್ತೇನೆ ಎಂದು ದೂರು.

 1. ಚೇಳೂರು ಪೊಲೀಸ್ ಠಾಣೆ ಮೊ.ಸಂ.49/2020 ಕಲಂ. 15(A),32(3) ಕೆ.ಇ ಆಕ್ಟ್ :-

          ದಿನಾಂಕ:04/08/2020 ರಂದು ಮದ್ಯಾಹ್ನ 14:00 ಗಂಟೆಗೆ ಪಿಎಸ್ ಐ ಪ್ರತಾಪ್ ಕೆಆರ್ ರವರು ಮಾಲು , ಪಂಚನಾಮೆ ಹಾಗೂ ಆರೋಪಿಯೊಂದಿಗೆ ಠಾಣೆಗೆ ಹಾಜರಾಗಿ ನೀಡಿದ ವರದಿಯ ಸಾರಾಂಶವೇನೆಂದರೆ   ತಾನು ಮಧ್ಯಾಹ್ನ 12-30 ಗಂಟೆಯಲ್ಲಿ ನಾನು ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ 42 ಜಿ 61 ನ ಜೀಪ್ ನಲ್ಲಿ ಜೀಪ್ ಚಾಲಕನಾಗಿ ಎಪಿಸಿ 98 ಶ್ರೀನಾಥ ಹಾಗೂ  ಠಾಣೆಯ ಸಿಬ್ಬಂದಿಯವರಾದ ಸಿ.ಹೆಚ್.ಸಿ 129 ರವಣಪ್ಪ ರವರೊಂದಿಗೆ ಠಾಣಾ ಸರಹದ್ದು  ಬಾಬೇನಾಯಕನಪಲ್ಲಿ ಗ್ರಾಮದ ಕಡೆ ಗಸ್ತು ಮಾಡುತ್ತಿದ್ದಾಗ ಗ್ರಾಮದ ಈಶ್ವರನಾಯ್ಕ ಬಿನ್ ಲೇಟ್ ಜಮ್ಲಾ ನಾಯಕ ಎಂಬುವರು  ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ ಮಾಡಲು ಸ್ಥಳಾವಕಾಶವನ್ನು ನೀಡಿರುವುದಾಗಿ ಮಾಹಿತಿ ಬಂದಿದ್ದು ಅದರಂತೆ ಅದೇ ಗ್ರಾಮದಲ್ಲಿ ಪಂಚರನ್ನು ಬರಮಾಡಿಕೊಂಡು  ಈಶ್ವರನಾಯ್ಕ ರವರ ಮನೆಯ ಬಳಿ  ಹೋಗಿ ಮರೆಯಲ್ಲಿ ನಿಂತು ನೋಡಲಾಗಿ  ಮನೆಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವರು ಮಧ್ಯಪಾನವನ್ನು ಮಾಡುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ.  ಸದರಿ ಸ್ಥಳದಲ್ಲಿ  ಮಧ್ಯದ ಪ್ಯಾಕೇಟ್ ಗಳಿದ್ದು ಅಲ್ಲಿಯೇ ಇದ್ದ ಈಶ್ವರನಾಯ್ಕ ರವರನ್ನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ  ಮಧ್ಯದ ಪ್ಯಾಕೇಟ್ ಗಳನ್ನು ಇಟ್ಟಿಕೊಳ್ಳಲು  ಮತ್ತು ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡುವ ರೀತಿಯಲ್ಲಿ ಮಧ್ಯಪಾನ  ಮಾಡಲು ಸ್ಥಳಾವಕಾಶ ಮಾಡಿಕೊಡಲು ನಿಮ್ಮ ಬಳಿ ಯಾವುದಾರೂ ಪರವಾನಿಗೆ ಇದೆಯೇ ಎಂದು ಕೇಳಲಾಗಿ ಸದರಿಯವರು  ನನ್ನ ಬಳಿ ಯಾವುದೇ ಪರವಾನಿಗೆ ಇಲ್ಲಾ ಎಂದು ಹೇಳಿದ್ದು ಸದರಿ  ಆಸಾಮಿಯ ಹೆಸರು & ವಿಳಾಸ ಕೇಳಲಾಗಿ ತನ್ನ ಹೆಸರು  ಈಶ್ವರನಾಯ್ಕ ಬಿನ್ ಲೇಟ್ ಜಮ್ಲಾ ನಾಯಕ, 45 ವರ್ಷ, ಲಂಬಾಣಿ  ಜನಾಂಗ, ಚಿಲ್ಲರೆ ಅಂಗಡಿ ವ್ಯಾಪಾರ,  ಬಾಬೇನಾಯಕನಪಲ್ಲಿ ತಾಂಡ, ಬಾಗೇಪಲ್ಲಿ ತಾಲ್ಲೂಕು.  ಫೋ ನಂ:9880879285 ಎಂದು ತಿಳಿಸಿದ್ದು  ಸದರಿ  ಸ್ಥಳದಲ್ಲಿದ್ದ  ಮಧ್ಯದ ಪ್ಯಾಕೆಟ್ ಗಳನ್ನು ಪರಿಶೀಲಿಸಲಾಗಿ   90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 15 ಟೆಟ್ರಾ ಪ್ಯಾಕೇಟ್ ಗಳಿದ್ದು ಒಟ್ಟು 1350 ಎಮ್ ಎಲ್ ಇದ್ದು ಪ್ರತಿ ಪ್ಯಾಕೇಟ್ ನ ಬೆಲೆ 35.13  ಎಂದು ನಮೂದಿಸಿದ್ದು ಇವುಗಳು ಒಟ್ಟು 526.95 ರೂಗಳಾಗಿರುತ್ತೆ. ಸದರಿ ಸ್ಥಳದಲ್ಲಿದ್ದ 90 ಎಂ.ಎಲ್ ನ HAYWARRDS CHEERS WHISKY ಕಂಪನಿಯ 15 ಮಧ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  ಮಧ್ಯಫಾನ ಮಾಡಿರುವ ನಿಶಾನೆಗಳಿರುವ 2 ಪ್ಲಾಸ್ಟಿಕ್ ಗ್ಲಾಸ್ ಗಳನ್ನು ದಾಳಿ ಅಮಾನತು ಪಂಚನಾಮೆಯ ಮೂಲಕ ಅಮಾನತ್ತು ಪಡಿಸಿಕೊಂಡು ಮಾಲು ಮತ್ತು ಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಠಾಣೆಗೆ ಹಾಜರಾಗಿ ನೀಡಿದ  ವರದಿಯನ್ನು ಪಡೆದು ಠಾಣಾ ಮೊಸಂ:49/2020 ಕಲಂ 15(ಎ), 32(3) ಕೆ ಇ ಆಕ್ಟ್ ರೀತ್ಯ ಪ್ರಕರಣ ದಾಖಲಿಸಿರುತ್ತೇನೆ.

 1. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.107/2020 ಕಲಂ. 15(A),32(3) ಕೆ.ಇ ಆಕ್ಟ್ :-

          ದಿ:04.08.2020 ರಂದು ಬೆಳಿಗ್ಗೆ 9-10 ಗಂಟೆಗೆ ಪಿ.ಎಸ್.ಐ ಸಾಹೇಬರು ನೀಡಿದ ದೂರಿನ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ 9-00 ಗಂಟೆಗೆ ಠಾಣೆಯಲ್ಲಿದ್ದಾಗ ಬೊಮ್ಮೇನಹಳ್ಳಿ ಗೇಟ್ ಸಮೀಪ ಸಪ್ಪಲಮ್ಮ ದೇವಸ್ಥಾನ ಗೇಟ್ ಮುಂದೆ ಸುನೀಲ್ ಕುಮಾರ್ ವಿ ಎಂ  ಬಿನ್ ಮಹದೇವಪ್ಪ 28 ವರ್ಷ ವಕ್ಕಲಿಗರು ವಾಸ ಮಂಚೇನಹಳ್ಳಿ ಗ್ರಾಮ ರವರು ಬೊಮ್ಮೇನಹಳ್ಳಿ ಕ್ರಾಸ್ ನಲ್ಲಿ ಬೊಮ್ಮೇನಹಳ್ಳಿ ಕ್ರಾಸ್ ಬಳಿ ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಮೇಲ್ಕಂಡ ಆಸಾಮಿಯ ವಿರುದ್ದ ಕಲಂ 15[ಎ] 32[3] ಕೆ.ಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲು ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ ವ ವರಧಿ.

 1. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಮೊ.ಸಂ.37/2020 ಕಲಂ. 87 ಕೆ.ಪಿ ಆಕ್ಟ್ :-

          ದಿನಾಂಕ 03.08.2020 ರಂದು ಸಂಜೆ 5.00 ಗಂಟೆಗೆ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆಯೊಂದಿಗೆ ನೀಡಿದ ಮಾಲು, ಆರೋಪಿತರು, ನ್ಯಾಯಾಲಯದಿಂದ ಅನುಮತಿ ಪತ್ರ ಹಾಗೂ ವರದಿಯ ದೂರಿನ ಸಾರಾಂಶವೇನೆಂದರೆ  ತಾನು ಮದ್ಯಾಹ್ನ 1.00 ಗಂಟೆಯಲ್ಲಿ ಠಾಣೆಯಲ್ಲಿದ್ದಾಗ   ಬಂದ ಖಚಿತ ಮಾಹಿತಿಯಂತೆ ಚಿಕ್ಕಬಳ್ಳಾಪುರ ನಗರದ ವಾರ್ಡ್ ನಂ: 17 ಕೋಟೆ ಸರ್ಕಾರಿ ಸ್ಕೂಲ್ ಮೈದಾನದ ನಿರ್ಜನ ಪ್ರದೇಶದಲ್ಲಿ ಯಾರೋ ಆಸಾಮಿಗಳು ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್  ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆಂದು ಬಂದ ಖಚಿತವಾದ ಮಾಹಿತಿಯ ಮೇರೆಗೆ  ಘನ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಜೂಜಾಟ ದಾಳಿಗೆ ಪಂಚರಾಗಿ  ಚಿಕ್ಕಬಳ್ಳಾಪುರ ನಗರದ ಡಿವಿಟಿ ಪೇಟೆ ಶಶಿಕುಮಾರ್  ಮತ್ತು  ಕೋಟೆಯ ಏಜಾಜ್ ಎಂಬುವವರನ್ನು ಬರಮಾಡಿಕೊಂಡು  ಅವರಿಗೆ ಕೇಸಿನ ಸಾರಾಂಶವನ್ನು ತಿಳಿಸಿ ಪಂಚರಾಗಿ ಬರುವಂತೆ ಕೋರಿರುತ್ತೆ ಹಾಗೂ  ಸಿಬ್ಬಂಧಿಯಾದ ಅಶ್ವತ್ಥರಾಜು ಹೆಚ್.ಸಿ-131, ಸಿಪಿಸಿ-152 ಜಯಣ್ಣ, ಪಿಸಿ-541, ಗಂಗಾಧರ, ಪಿ.ಸಿ-35 ಸರ್ದಾರ್, ಪಿ.ಸಿ-142 ಪ್ರಕಾಶ್  ಪಿ.ಸಿ-277, ಲಕ್ಷ್ಮಿಕಾಂತ್, ರವರುಗಳೊಂದಿಗೆ  ಮದ್ಯಾಹ್ನ 2.30 ಗಂಟೆಗೆ ಸರ್ಕಾರಿ ಜೀಪ್ ಸಂಖ್ಯೆ: ಕೆ.ಎ-40-ಜಿ-139  ರಲ್ಲಿ ಠಾಣೆ ಬಿಟ್ಟು ಸರ್ಕಾರಿ ಆಸ್ಪತ್ರೆ, ಸಾಧುಮಠ ಸರ್ಕಲ್, ಮುಖಾಂತರ ಕೋಟೆ ಸರ್ಕಾರಿ ಶಾಲೆ ಕಾಂಪೌಂಡ್ ಬಳಿ ಹೋಗಿ ಜೀಪನ್ನು ನಿಲ್ಲಿಸಿ, ಮರೆಯಲ್ಲಿ ನಿಂತು ನೋಡಲಾಗಿ ಕೋಟೆ ಸರ್ಕಾರಿ ಶಾಲೆಯ ಆವರಣದ ನಿರ್ಜನ ಪ್ರದೇಶದಲ್ಲಿ  ಕೆಲವರು ಗುಂಪಾಗಿ ಕುಳಿತುಕೊಂಡು ಅಂದರ್ ಗೆ 100 ರೂ ಬಾಹರ್ ಗೆ 100 ರೂ ಎಂದು ಕೂಗುತ್ತಿದ್ದು,  ಅರೋಪಿಗಳು ಅಕ್ರಮ ಜೂಜಾಟ ಅಡುತ್ತಿರುವುದು ಖಚಿತ ಪಡಿಸಿಕೊಂಡು ಸಿಬ್ಬಂಧಿಯವರಿಗೆ  ಕೊಟ್ಟ ಸೂಚನೆಯಂತೆ  ಸಿಬ್ಬಂದಿಯವರು ಅವರನ್ನು ಸುತ್ತುವರೆದಿದ್ದು ಅಷ್ಟರಲ್ಲಿ  ಪೊಲೀಸರನ್ನು ಕಂಡು ಜೂಜಾಟುತ್ತಿದ್ದ 4 ಜನರು ಓಡಿ ಹೋಗಲು ಪ್ರಯತ್ನಿಸಿದ್ದು ಕೂಡಲೆ ಸಿಬ್ಬಂದಿಯವರು ಹಿಡಿದುಕೊಂಡು ತನ್ನ ಮುಂದೆ ಹಾಜರು ಪಡಿಸಿರುತ್ತಾರೆ. ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮ ವಿಚಾರಣೆ ಮಾಡಲಾಗಿ  ಅವರು ಒಬ್ಬೊಬ್ಬರಾಗಿ ತಮ್ಮ ಹೆಸರು ವಿಳಾಸ ತಿಳಿಸಿದ್ದು, 1, ಮುಜಾಯಿದ್ ಪಾಷ ಬಿನ್ ಸೈಯದ್ ಸರ್ದಾರ್, 28 ವರ್ಷ,ಮುಸ್ಲಿಂ, ತರಕಾರಿ, ವ್ಯಾಪಾರ, ವಾರ್ಡ್ ನಂ: 17, ಕೋಟೆ, ಚಿಕ್ಕಬಳ್ಳಾಪುರ ನಗರ. 2) ಮಹ್ಮದ್ ಕಾಲೂ @ ಉಸ್ಮಾನ್ ಬಿನ್ ಮಪ್ತಿಯಾರ್, 20 ವರ್ಷ, ಮುಸ್ಲಿಂ ಜನಾಂಗ, ಖಾಸಗಿ ಕಂಪನಿಯಲ್ಲಿ ಕೆಲಸ, ವಾಸ: ವಾರ್ಡ್ ನಂ: 17, ಕೋಟೆ, ಮುರಳಿ ಡಾ!! ಸಮೀಪ, ಚಿಕ್ಕಬಳ್ಳಾಪುರ ನಗರ. 3) ಮೋಹನ್ ಬಾಬು ಬಿನ್ ಮುನಿಶಾಮಪ್ಪ ಬಲಜಿಗ, 29 ವರ್ಷ, ಕಾರು ಚಾಲಕ, ವಾಸ: ಅಣಕನೂರು ಗ್ರಾಮ, ಚಿಕ್ಕಬಳ್ಳಾಪುರ ತಾಲ್ಲುಕು.4) ಕೃಷ್ಣ ಬಿನ್ ವೆಂಕಟೇಶ,26 ವರ್ಷ,ಪ.ಜಾತಿ, ಆಟೋ ಚಾಲಕ, ವಾಸ;ವಾರ್ಡ್ ನಂ: 13, ಬಾಪೂಜಿನಗರ, ಚಿಕ್ಕಬಳ್ಳಾಪುರ ನಗರ.   ವಾಸಿಗಳಾಗಿದ್ದು ಸದರಿ ಆಸಾಮಿಗಳು ಗುಂಪಾಗಿ ಕುಳಿತುಕೊಂಡು ಅಕ್ರಮವಾಗಿ ಅಂದರ್ ಬಾಹರ್  ಜೂಜಾಟ ವನ್ನು ಆಡುತ್ತಿದ್ದು ಆಸಾಮಿಗಳು ಜೂಜಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಲಾಗಿ  ಪಣಕ್ಕಿಟ್ಟಿದ್ದ ಹಣ ಮತ್ತು ಇಸ್ಪೀಟ್ ಎಲೆಗಳನ್ನು ಚೆಲ್ಲಾ ಪಿಲ್ಲಿಯಾಗಿ ಎಸೆದಿದ್ದನ್ನು  ಸಂಗ್ರಹಿಸಿಕೊಂಡು ಎಣಿಸಲಾಗಿ ನಗದು 1730/- ರೂ ಮತ್ತು 52 ಇಸ್ಪೀಟ್ ಎಲೆಗಳು ದೊರೆತಿರುತ್ತದೆ.  ಆಸಾಮಿಗಳು ಪಣಕ್ಕಿಟ್ಟಿದ್ದ ಹಣ 1730/- ರೂ ಮತ್ತು 52 ಇಸ್ಪೀಟ್ ಎಲೆಗಳನ್ನು  ಹಾಗೂ ಒಂದು ಪ್ಲಾಸ್ಟಿಕ್ ಚೀಲವನ್ನು ಅಮಾನತ್ತು ಪಡಿಸಿಕೊಂಡು ವಶಕ್ಕೆ ಪಡೆದುಕೊಂಡಿರುತ್ತದೆ. ಪಂಚನಾಮೆಯನ್ನು ಸಂಜೆ 3-00 ಗಂಟೆಯಿಂದ 4.00 ಗಂಟೆಯವರೆಗೆ ಕೈಗೊಂಡಿರುತ್ತೆ. ಅಮಾನತ್ತು ಪಡಿಸಿಕೊಂಡ ಮಾಲು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಸಂಜೆ 4.45 ಗಂಟೆಗೆ ವಾಪಾಸ್ಸಾಗಿ ಆಸಾಮಿಗಳು, ಮಾಲು, ಪಂಚನಾಮೆ ಮತ್ತು ಘನ ನ್ಯಾಯಾಲಯದ ಅನುಮತಿ ಪತ್ರವನ್ನು ಹಾಜರು ಪಡಿಸುತ್ತಿದ್ದು  ಅರೋಪಿಗಳ ವಿರುದ್ದ  ಕಲಂ 87 ಕೆಪಿ ಅಕ್ಟ್ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲು ಕೋರಿ ಸೂಚಿಸಿ ನೀಡಿದ ವರದಿಯ ದೂರಿನ ಮೇರೆಗೆ ಈ ಪ್ರ.ವ.ವರದಿ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.290/2020 ಕಲಂ. 143,447,427,504,506(B) ರೆ/ವಿ 149 ಐ.ಪಿ.ಸಿ:-

          ದಿನಾಂಕ: 03/08/2020 ರಂದು ಸಂಜೆ 7.00 ಗಂಟೆಗೆ ಮಾನ್ಯ ಪೊಲೀಸ್ ಉಪಾಧಿಕ್ಷಕರು, ಚಿಂತಾಮಣಿ ಉಪವಿಭಾಗ, ಚಿಂತಾಮಣಿ ರವರ ಕಛೇರಿಯಿಂದ ಟಪಾಲಿನಲ್ಲಿ ಬಂದ ಅರ್ಜಿಯ ಸಾರಾಂಶವೇನೆಂದರೆ, ಗೋವಿಂದಪ್ಪ ಬಿನ್ ಲೇಟ್ ಬೈರಪ್ಪ, 60 ವರ್ಷ, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿರುವ ಅರ್ಜಿಯ ಸಾರಾಂಶವೇನೆಂದರೆ, ತನಗೆ ಸೇರಿದ ನಾಯಿಂದ್ರಹಳ್ಳಿ ಗ್ರಾಮದ ಪಂಚಾಯ್ತಿ ಜಂಜರು ನಂ.128, ಆಸ್ತಿ ನಂ.154 ವಿಸ್ತೀರ್ಣ 30X40 ಅಡಿಗಳ ಪ್ರದೇಶದಲ್ಲಿ ತಾನು ಈಗ್ಗೆ ಸುಮಾರು 30 ವರ್ಷಗಳಿಂದ ಜಾನುವಾರು ಕಟ್ಟಿಕೊಂಡು ಹುಲ್ಲುವಾಮೆ ಹಾಕಿಕೊಂಡು ಪಶುಸಂಗೋಪನೆ ಮಾಡಿಕೊಂಡು ಸ್ವಾಧೀನಾನುಭವದಲ್ಲಿರುತ್ತೇನೆ. ಸದರಿ ಪ್ರದೇಶಕ್ಕೆ ಕಲ್ಲು ಚಪ್ಪಡಿ ಕಾಂಪೌಂಡ್ ಸಹ ಇದ್ದು, ಈಗ್ಗೆ ಒಂದು ವಾರದಿಂದ ಮಳೆ ಹೆಚ್ಚಾಗಿದ್ದರಿಂದ ಜಾನುವಾರು ರಕ್ಷಣೆಗಾಗಿ ಮೊದಲಿನಿಂದಲೂ ಇದ್ದ ಚಪ್ಪರ ದುರಸ್ತಿ ಮಾಡುತ್ತಿದ್ದೆ. ಹೀಗಿರುವಲ್ಲಿ ಈ ದಿನ ದಿನಾಂಕ: 02/08/2020 ರಂದು ರಾತ್ರಿ ಸುಮಾರು 8.40 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಗೊಲ್ಲರ ಕೋಮಿಗೆ ಸೇರಿದ ಗೋಪಿನಾಥ್ ಬಿನ್ ದೊಡ್ಡ ಮುನಿವೆಂಕಟಪ್ಪ, ಮಂಜುನಾಥ ಬಿನ್ ರಾಜಪ್ಪ, ಸುರೇಶ ಬಿನ್ ಮುನೇಗೌಡ, ಮುರಳಿ ಬಿನ್ ನಾರಾಯಣಸ್ವಾಮಿ, ಸಂಜಯ್ ಬಿನ್ ಪಾಪಣ್ಣ, ಸುನಿಲ್ ಬಿನ್ ಮುನೇಗೌಡ, ಲಕ್ಷ್ಮಿದೇವಮ್ಮ ಕೋಂ ಶ್ರೀರಾಮ, ಜಯಪ್ರಧ ಕೋಂ ನಾರಾಯಣಸ್ವಾಮಿ, ಲಕ್ಷ್ಮಿದೇವಮ್ಮ ಕೋಂ ನಾರಾಯಣಸ್ವಾಮಿ, ರಾಮಚಂದ್ರ ಬಿನ್ ಓಭಯ್ಯ, ದ್ಯಾವಮ್ಮ ಕೋಂ ನಾನೆಪ್ಪ ರವರುಗಳು ಮತ್ತು ಇವರೊಂದಿಗೆ ಇನ್ನೂ ಕೆಲಸವರು ಸೇರಿಕೊಂಡು ಅಕ್ರಮ ಗುಂಪುಕಟ್ಟಿಕೊಂಡು ವಿನಾ ಕಾರಣ ತಮ್ಮ ಮೇಲೆ ಜಗಳ ತೆಗೆದು ಮೇಲ್ಕಂಡ ತಮ್ಮ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಏಕೋದ್ದೇಶದಿಂದ ತನಗೆ ನಷ್ಠವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ಹಾಗೂ ತನ್ನನ್ನು ಸಾಯಿಸುವ ಉದ್ದೇಶದಿಂದ ತನ್ನ ಮೇಲ್ಕಂಡ ಅಸ್ತಿಯಲ್ಲಿದ್ದ ಜಾನುವಾರುಗಳನ್ನು ಆಚೆಗೆ ಓಡಿಸಿ, ಚಪ್ಪರವನ್ನು ತಳ್ಳಿ ಕಾಂಪೌಂಡ್ ಕಲ್ಲು ಚಪ್ಪಡಿಗಳನ್ನು ಹೊಡೆದು ಹಾಕಿ ಚಪ್ಪರಕ್ಕೆ ಹಾಕಿದ್ದ ಪೈಪುಗಳು ಮತ್ತು ಜಿಂಕ್ ಶೀಟ್ ಗಳನ್ನು ಹಾಳು ಮಾಡಿ ಸುಮಾರು ಎರಡು ಲಕ್ಷ ನಷ್ಠವನ್ನು ಉಂಟುಮಾಡಿರುತ್ತಾರೆ. ಆ ಪೈಕಿ ಪುರುಷ ಆರೋಪಿಗಳು ಮಚ್ಚು ಮತ್ತು ಲಾಂಗುಗಳನ್ನು ಹಾಗೂ ಮಹಿಳಾ ಆರೋಪಿಗಳು ದೊಣ್ಣೆ, ಪರಕೆ ಮತ್ತು ಕಾರದ ಪುಡಿಗಳನ್ನು ತಮಗೆ ತೋರಿಸಿ ಈ ಪ್ರದೇಶದೊಳಗೆ ಬಂದರೆ ನಿಮ್ಮನ್ನು ಇಲ್ಲಿಯೇ ಸಾಯಿಸಿ, ಊತು ಬಿಡುವುದಾಗಿ ಬೆದರಿಕೆ ಹಾಕಿ ಗಡಾರೆ, ಲಾಂಗ್, ಮಚ್ಚು, ದೊಣ್ಣೆ ಪರಕೆ, ಕಾರದ ಪುಡಿಯನ್ನು ತನ್ನ ಮೇಲೆ ಎರಚಿರುತ್ತಾರೆ. ಆದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.291/2020 ಕಲಂ. 143,447,427,147,148,506(B) ರೆ/ವಿ 149 ಐ.ಪಿ.ಸಿ:-

          ದಿನಾಂಕ: 03/08/2020 ರಂದು ಸಂಜೆ 7.30 ಗಂಟೆಗೆ ಮಾನ್ಯ ಪೊಲೀಸ್ ಉಪಾಧಿಕ್ಷಕರು, ಚಿಂತಾಮಣಿ ಉಪವಿಭಾಗ, ಚಿಂತಾಮಣಿ ರವರ ಕಛೇರಿಯಿಂದ ಟಪಾಲಿನಲ್ಲಿ ಬಂದ ಅರ್ಜಿಯ ಸಾರಾಂಶವೇನೆಂದರೆ, ಚಂದ್ರಪ್ಪ ಬಿನ್ ಲೇಟ್ ಮುನಿಶಾಮಪ್ಪ, 48 ವರ್ಷ, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ನೀಡಿರುವ ಅರ್ಜಿಯ ಸಾರಾಂಶವೇನೆಂದರೆ, ತನಗೆ ಸೇರಿದ ನಾಯಿಂದ್ರಹಳ್ಳಿ ಗ್ರಾಮದ ಪಂಚಾಯ್ತಿ ಜಂಜರು ನಂ.126, ಆಸ್ತಿ ನಂ.152 ವಿಸ್ತೀರ್ಣ 40X50 ಅಡಿಗಳ ಪ್ರದೇಶದಲ್ಲಿ ತಾನು ಈಗ್ಗೆ ಸುಮಾರು 30 ವರ್ಷಗಳಿಂದ ಜಾನುವಾರು ಕಟ್ಟಿಕೊಂಡು ಹುಲ್ಲುವಾಮೆ ಹಾಕಿಕೊಂಡು ಪಶುಸಂಗೋಪನೆ ಮಾಡಿಕೊಂಡು ಸ್ವಾಧೀನಾನುಭವದಲ್ಲಿರುತ್ತೇನೆ. ಸದರಿ ಪ್ರದೇಶಕ್ಕೆ ಕಲ್ಲು ಚಪ್ಪಡಿ ಕಾಂಪೌಂಡ್ ಸಹ ಇದ್ದು, ಈಗ್ಗೆ ಒಂದು ವಾರದಿಂದ ಮಳೆ ಹೆಚ್ಚಾಗಿದ್ದರಿಂದ ಜಾನುವಾರು ರಕ್ಷಣೆಗಾಗಿ ಮೊದಲಿನಿಂದಲೂ ಇದ್ದ ಚಪ್ಪರ ದುರಸ್ತಿ ಮಾಡುತ್ತಿದ್ದೆ. ಹೀಗಿರುವಲ್ಲಿ ಈ ದಿನ ದಿನಾಂಕ: 02/08/2020 ರಂದು ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ತಮ್ಮ ಗ್ರಾಮದ ಗೊಲ್ಲರ ಕೋಮಿಗೆ ಸೇರಿದ ಡಿಶ್ ಶ್ರೀರಾಮ ಬಿನ್ ಕೃಷ್ಣಪ್ಪ, ಪಾಪಣ್ಣ ಬಿನ್ ವೆಂಕಟರಾಯಪ್ಪ, ನಾನೆಪ್ಪ ಬಿನ್ ದೊಡ್ಡ ಮುನಿಶಾಮಪ್ಪ, ಗೋಪಿನಾಥ್ ಬಿನ್ ದೊಡ್ಡ ಮುನಿವೆಂಕಟಪ್ಪ, ಮುರಳಿ ಬಿನ್ ನಾರಾಯಣಸ್ವಾಮಿ, ಶ್ರೀನಿವಾಸ ಬಿನ್ ಕಿರಗಂಬಿ ಕೃಷ್ಣಪ್ಪ, ನಾರಾಯಣಸ್ವಾಮಿ ಬಿನ್ ನಾಗರಾಜಪ್ಪ, ರಾಮಕೃಷ್ಣ ಬಿನ್ ಸಂಗಪ್ಪ, ಕೃಷ್ಣಪ್ಪ ಬಿನ್ ಪೋತುಲಪ್ಪ, ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪರವರುಗಳು ವಿನಾ ಕಾರಣ ತಮ್ಮ ಮೇಲೆ ಜಗಳ ತೆಗೆದು ಮೇಲ್ಕಂಡ ತಮ್ಮ ಜಮೀನಿನೊಳಗೆ ಅಕ್ರಮ ಪ್ರವೇಶ ಮಾಡಿ ಏಕೋದ್ದೇಶದಿಂದ ತನಗೆ ನಷ್ಠವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ಹಾಗೂ ತನ್ನನ್ನು ಸಾಯಿಸುವ ಉದ್ದೇಶದಿಂದ ತನ್ನ ಮೇಲ್ಕಂಡ ಅಸ್ತಿಯಲ್ಲಿದ್ದ ಜಾನುವಾರುಗಳನ್ನು ಆಚೆಗೆ ಓಡಿಸಿ, ಚಪ್ಪರವನ್ನು ತಳ್ಳಿ ಕಾಂಪೌಂಡ್ ಕಲ್ಲು ಚಪ್ಪಡಿಗಳನ್ನು ಹೊಡೆದು ಹಾಕಿ ಚಪ್ಪರಕ್ಕೆ ಹಾಕಿದ್ದ ಪೈಪುಗಳು ಮತ್ತು ಜಿಂಕ್ ಶೀಟ್ ಗಳನ್ನು ಹಾಳು ಮಾಡಿ ಸುಮಾರು ಎರಡು ಲಕ್ಷ ನಷ್ಠವನ್ನು ಉಂಟುಮಾಡಿರುತ್ತಾರೆ. ಆ ಪೈಕಿ ಪುರುಷ ಆರೋಪಿಗಳು ಮಚ್ಚು ಮತ್ತು ಲಾಂಗುಗಳನ್ನು ಹಾಗೂ ಮಹಿಳಾ ಆರೋಪಿಗಳು ದೊಣ್ಣೆ, ಪರಕೆ ಮತ್ತು ಕಾರದ ಪುಡಿಗಳನ್ನು ತಮಗೆ ತೋರಿಸಿ ಈ ಪ್ರದೇಶದೊಳಗೆ ಬಂದರೆ ನಿಮ್ಮನ್ನು ಇಲ್ಲಿಯೇ ಸಾಯಿಸಿ, ಊತು ಬಿಡುವುದಾಗಿ ಬೆದರಿಕೆ ಹಾಕಿ ಗಡಾರೆ, ಲಾಂಗ್, ಮಚ್ಚು, ದೊಣ್ಣೆ ಪರಕೆ, ಕಾರದ ಪುಡಿಯನ್ನು ತನ್ನ ಮೇಲೆ ಎರಚಿರುತ್ತಾರೆ. ಆದ್ದರಿಂದ ಮೇಲ್ಕಂಡ ಆರೋಪಿಗಳ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ನೀಡಿದ ದೂರಾಗಿರುತ್ತೆ.

 1. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.292/2020 ಕಲಂ. 143,504,506 ರೆ/ವಿ 149 ಐ.ಪಿ.ಸಿ:-

          ದಿನಾಂಕ:03/08/2020 ರಂದು ರಾತ್ರಿ 8.30 ಗಂಟೆಗೆ ಪಾಪಣ್ಣ ಬಿನ್ ಲೇಟ್ ವೆಂಕಟರಾಯಪ್ಪ, 54 ವರ್ಷ, ಗೊಲ್ಲರು, ಜಿರಾಯ್ತಿ, ನಾಯಿಂದ್ರಹಳ್ಳಿ ಗ್ರಾಮ, ಚಿಂತಾಮಣಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ನಾಯಿಂದ್ರಹಳ್ಳಿ ಗ್ರಾಮದ ಸರ್ವೇ ನಂ.14 ರ 2-16 ಗುಂಟೆ ಜಮೀನು, ಸರ್ವೇ ನಂ.12ರ 0-27 ಗುಂಟೆ ಮತ್ತು ಸರ್ವೇ ನಂ.13 ರ 0-09 ಗುಂಟೆ ಜಮೀನು ಸರ್ಕಾರಿ ತೋಪು ಜಮೀನಾಗಿರುತ್ತೆ. ಹೀಗಿರುವಾಗ ತಮ್ಮ ಗ್ರಾಮದ ವಾಸಿಗಳಾದ ಗೋವಿಂದಪ್ಪ ಬಿನ್ ಬೈರಪ್ಪ, ನಾಗರಾಜ್ ಬಿನ್ ಮುನಿಯಪ್ಪ, ಚಂದ್ರಪ್ಪ ಬಿನ್ ಮುನಿಶಾಮಪ್ಪ, ಮಂಜುನಾಥ ಬಿನ್ ನಾರಾಯಣಪ್ಪ, ನಾರಾಯಣಸ್ವಾಮಿ ಬಿನ್ ಶ್ರೀರಾಮಪ್ಪ, ಗೋಪಾಲರೆಡ್ಡಿ ಬಿನ್ ಸೊಣ್ಣಪ್ಪ, ರಮೇಶ್ ಬಿನ್ ರಾಮರೆಡ್ಡಿ, ಮುನಿರೆಡ್ಡಿ ಬಿನ್ ಲೇಟ್ ಚಿಕ್ಕರಂಗಪ್ಪ, ನಾರಾಯಣಸ್ವಾಮಿ ಬಿನ್ ಚಿಕ್ಕ ರಂಗಪ್ಪ, ರಮೇಶ್ ಬಿನ್ ಚಿಕ್ಕ ರಂಗಪ್ಪ, ಪ್ರತೀಪ್ ಬಿನ್ ಜಯರಾಮಪ್ಪ, ಕಿಟ್ಟಪ್ಪ ಬಿನ್ ಇಸ್ಕೂಲಪ್ಪ, ರಮೇಶ್ ಬಿನ್ ರಾಮರೆಡ್ಡಿ, ಸುರೇಶ್ ಬಿನ್ ರಾಮರೆಡ್ಡಿ, ಸುಧಾಕರ್ ಬಿನ್ ರಾಮರೆಡ್ಡಿ, ಶ್ರೀಧರ್ ಬಿನ ರಾಮರೆಡ್ಡಿ, ಶ್ರೀರಾಮರೆಡ್ಡಿ ಬಿನ್ ಕೃಷ್ಣಪ್ಪ, ನಾರಾಯಣಸ್ವಾಮಿ ಬಿನ್ ಕೃಷ್ಣಪ್ಪ, ನಾಗರಾಜಪ್ಪ ಬಿನ್ ಈರಪ್ಪ, ಹರೀಶ್ ಬಿನ್ ನಾಗರಾಜು, ಶ್ರೀನಿವಾಸ ಬಿನ್ ರಾಮಪ್ಪ, ಗೋವಿಂದ ಬಿನ್ ರಾಮಪ್ಪ, ಪ್ರಭಾಕರ್ ಬಿನ್ ಗೋವಿಂದಪ್ಪ, ಬಚ್ಚಿರೆಡ್ಡಿ ಬಿನ್ ಮುನಿಶಾಮಪ್ಪ, ವಿಜಯ್ ಬಿನ್ ಗೋವಿಂದಪ್ಪ, ನಿಖಿಲ್ ಬಿನ್ ಚಂದ್ರಪ್ಪ, ಸಂಜಯ್ ಬಿನ್ ಚಂದ್ರಪ್ಪ, ಮಂಜುನಾಥ ಬಿನ್ ಯದ್ದುಲಪ್ಪ, ಬೋರ್ ವೆಲ್ ನಾರಾಯಣಸ್ವಾಮಿ ಬಿನ್ ಶ್ರೀರಾಮಪ್ಪ, ಪದ್ಮಮ್ಮ ಕೋಂ ನಾರಾಯಣಸ್ವಾಮಿ, ಅಮರಮ್ಮ ಕೋಂ ನಾರಾಯಣಸ್ವಾಮಿ, ಅನುಸೂಯಮ್ಮ ಕೋಂ ವೆಂಕಟರೆಡ್ಡಿ, ಮಂಜುಳ ಕೋಂ ಮುನಿಯಪ್ಪ, ಅಂಬರೀಶ ಬಿನ್ ವೆಂಕಟರೆಡ್ಡಿ, ನಾಗೇಶ್ ಬಿನ್ ವೆಂಕಟರೆಡ್ಡಿ, ರಾಮಚಂದ್ರಪ್ಪ ಬಿನ್ ಮುನಿಯಪ್ಪ, ರೆಡ್ಡಿ ಬಿನ್ ಚಿಕ್ಕಪ್ಪಯ್ಯ, ಬಾಬುರೆಡ್ಡಿ ಬಿನ್ ಚಿಕ್ಕಪ್ಪಯ್ಯ, ರತ್ನಮ್ಮ ಕೋಂ ಶ್ರೀರಾಮಪ್ಪ, ಬಾಬುರೆಡ್ಡಿ ಬಿನ್ ಮುನಿನಾರಾಯಣಪ್ಪ, ರಘುನಾಥ ಬಿನ್ ಮುನಿನಾರಾಯಣಪ್ಪ, ಐಪರೆಡ್ಡಿ ಬಿನ್ ಮುನಿಶಾಮಪ್ಪ, ಶಶಿಕುಮಾರ್ ಬಿನ್ ಐಪರೆಡ್ಡಿ, ನೀಲಮ್ಮ ಕೋಂ ಚಂದ್ರಪ್ಪ, ಲಕ್ಷ್ಮಿದೇವಮ್ಮ ಕೋಂ ನಾಗರಾಜಪ್ಪ, ಅಂಬಿಕಾ ಕೋಂ ಬಾಬುರೆಡ್ಡಿ, ಲಕ್ಷ್ಮಿ ಕೋಂ ಈಶ್ವರ, ವೀಣಾ ಕೋಂ ಲಕ್ಷ್ಮಣರೆಡ್ಡಿ, ನಿರ್ಮಲ ಕೋಂ ಶ್ರೀನಿವಾಸ್, ಮಾಲ ಕೋಂ ರಮೇಶ್, ಸರಸ್ವತಮ್ಮ ಕೋಂ ಶ್ರೀನಿವಾಸ, ದೊಡ್ಡ ರಂಗಪ್ಪ ಬಿನ್ ಗೋವಿಂದರೆಡ್ಡಿ, ನಾರಾಯಣಸ್ವಾಮಿ ಬಿನ್ ವೆಂಕಟಸ್ವಾಮಿ, ದೇವರಾಜ್ ಬಿನ್ ವೆಂಕಟಸ್ವಾಮಿ, ರಾಮಕೃಷ್ಣ ಬಿನ್ ರಂಗಾರೆಡ್ಡಿ, ವಿಶ್ವನಾಥ  ಬಿನ್ ರಂಗಾರೆಡ್ಡಿ, ಗಿರೀಶ್ ಬಿನ್ ಕೃಷ್ಣಪ್ಪ, ಶ್ರೀನಿವಾಸ್ ಬಿನ್ ವೆಂಕಟೇಶಪ್ಪ, ನಾರಾಯಣಸ್ವಾಮಿ ಬಿನ್ ವೆಂಕಟೇಶಪ್ಪ, ಸಂಜಯ್ ಬಿನ್ ಶ್ರೀನಿವಾಸಪ್ಪ, ಸಂಧ್ಯಾ ಬಿನ್ ಶ್ರೀನಿವಾಸ್, ಅನುಷಾ ಬಿನ್ ನಾಗರಾಜಪ್ಪ, ಶ್ರೀನಿವಾಸ್ ಬಿನ್ ಚಿಕ್ಕ ಮುನಿಯಪ್ಪ, ರೋಜಾ ಕೋಂ ಗೋವಿಂದ, ಮಂಜುಳಮ್ಮ ಕೋಂ ನಾರಾಯಣಸ್ವಾಮಿ, ಪ್ರಜ್ವಲ್ ಬಿನ್ ನಾರಾಯಣಸ್ವಾಮಿ, ಪ್ರಿಯಾಂಕ ಬಿನ್ ನಾರಾಯಣಸ್ವಾಮಿ, ಬಾಲಾಜಿ ಬಿನ್ ಮಂಜುಳಮ್ಮ, ನಾರಾಯಣಸ್ವಾಮಿ ಬಿನ್ ರಾಮಪ್ಪ, ವೆಂಕಟೇಶ್ ಬಿನ್ ಗೋಪಾಲಪ್ಪ, ನಂಜುಂಡರೆಡ್ಡಿ ಬಿನ್ ವೆಂಕಟಸ್ವಾಮಿರೆಡ್ಡಿ, ಶ್ರೀನಿವಾಸ್ ಬಿನ್ ವೆಂಕಟಸ್ವಾಮಿರೆಡ್ಡಿ, ಬೈರೆಡ್ಡಿ ಬಿನ್ ವೆಂಕಟಸ್ವಾಮಿರೆಡ್ಡಿ, ಪ್ರತಾಪ್ ಬಿನ್ ನಾರಾಯಣಸ್ವಾಮಿ, ಪ್ರಸನ್ನ ಬಿನ್ ನಾರಾಯಣಸ್ವಾಮಿ, ಮೋಹನ್ ಬಿನ್ ಮುನಿಯಪ್ಪ, ಗೋವಿಂದಪ್ಪ ಬಿನ್ ಮುನಿಯಪ್ಪ, ಬೈರೆಡ್ಡಿ ಬಿನ್ ಗೋವಿಂದಪ್ಪ, ಕೆಂಪರೆಡ್ಡಿ ಬಿನ್ ಮುನಿಯಪ್ಪ, ಚನ್ನಕೇಶವರೆಡ್ಡಿ ಬಿನ್ ನಾರಾಯಣಸ್ವಾಮಿ, ಶಿವಪ್ಪ ಬಿನ್ ನಾರಾಯಣಸ್ವಾಮಿ, ಮುರಳಿ ಬಿನ್ ರಾಮಚಂದ್ರಪ್ಪ, ಗೋಪಾಲಕೃಷ್ಣಪ್ಪ ಬಿನ್ ಮುನಿಶಾಮಪ್ಪ, ಮುನಿಶಾಮಿರೆಡ್ಡಿ ಬಿನ್ ಗೋಪಾಲಕೃಷ್ಣಪ್ಪ, ಜಯಮ್ಮ ಕೋಂ ಗೋಪಾಲಕೃಷ್ಣಪ್ಪ, ನಾರಾಯಣಸ್ವಾಮಿ ಬಿನ್ ಮುನಿಶಾಮಪ್ಪ, ರತ್ನಮ್ಮ ಕೋಂ ನಾರಾಯಣಸ್ವಾಮಿ, ಶಶಮ್ಮ ಕೋಂ ಗೋಪಾಲರೆಡ್ಡಿ, ಸಿಂಧು ಬಿನ್ ನಾರಾಯಣಸ್ವಾಮಿ ಮತ್ತು ಶ್ರೀಕಾಂತ ಬಿನ್ ನಾರಾಯಣಸ್ವಾಮಿ ರವರು ಸರ್ಕಾರಿ ಜಮೀನನ್ನು ದೌರ್ಜನ್ಯವಾಗಿ ಒತ್ತುವರಿ ಮಾಡಿಕೊಳ್ಳಲು ದಿನಾಂಕ: 02/08/2020 ರಂದು ರಾತ್ರಿ ಸುಮಾರು 8.30 ಗಂಟೆ ಸಮಯದಲ್ಲಿ ದೌರ್ಜನ್ಯದಿಂದ ಕಬ್ಬಿಣದ ಶೀಟ್ ಗಳನ್ನು ಹಾಕಿ ಶೆಡ್ ನಿರ್ಮಾಣ ಮಾಡುತ್ತಿದ್ದಾಗ ತಾನು ಮತ್ತು ಇನ್ನಿತರರು ಸ್ಥಳಕ್ಕೆ ಹೋಗಿ ಈ ಜಮೀನು ಸರ್ಕಾರಿ ಜಮೀನಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಅಳತೆ ಮಾಡಿ ಹದ್ದುಬಸ್ತು ಸಹ ಮಾಡಿದ್ದು, ನೀವು ಶೆಡ್ ನಿರ್ಮಾಣ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದು, ಆಗ ಮೇಲ್ಕಂಡವರು ಏಕಾಏಕೀ ಇದು ನಮ್ಮ ಜಾಗ, ನಾವು ಶೆಡ್ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದು, ತಾವು ಈ ಜಮೀನಿಗೆ ಸಂಬಂದಿಸಿದ ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಬನ್ನಿ, ನಂತರ ಶೆಡ್ ನಿರ್ಮಾಣ ಮಾಡಿಕೊಳ್ಳಿ ಎಂದು ಹೇಳಿದರೂ ಸಹ ಮೇಲ್ಕಂವರು ಸರ್ಕಾರಿ ಜಮೀನನ್ನು ಲಪಟಾಯಿಸುವ ಉದ್ದೇಶದಿಂದ ತಮ್ಮನ್ನು ಬಾಯಿಗೆ ಬಂದಂತೆ ಅವಾಚ್ಯಶಬ್ದಗಳಿಂದ ಬೈದು, ಹಲ್ಲೆ ಮಾಡಲು ಮುಂದಾಗಿ ಈ ಜಮೀನಿನ ವಿಚಾರಕ್ಕೆ ಬಂದರೆ ನಿಮ್ಮನ್ನು ಇಲ್ಲೆಯೇ ಸುಟ್ಟು ಹಾಕಿ ಬೂದಿಮಾಡುತ್ತೇವೆಂದು ಪ್ರಾಣ ಬೆದರಿಕೆಯನ್ನು ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೋರಿ ನೀಡಿದ ದೂರಾಗಿರುತ್ತೆ.

 1. ಚಿಂತಾಮಣಿ ನಗರ ಪೊಲೀಸ್ ಠಾಣೆ ಮೊ.ಸಂ.84/2020 ಕಲಂ. 143,324,448,504,506 ರೆ/ವಿ 149 ಐ.ಪಿ.ಸಿ:-

          ಪಿರ್ಯಾದಿದಾರರಾದ ಝೈಬುನ್ನಿಸ್ಸಾ ಕೋಂ ಮಹಬೂಬ್ ಸಾಬ್, 70 ವರ್ಷ, ಹೈದರಾಲಿ ನಗರ, ಚಿಂತಾಮಣಿ ನಗರ ರವರು ಚಿಂತಾಮಣಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 03.08.2020 ರಂದು ಬೆಳಗ್ಗೆ 10.00 ಗಂಟೆ ಸಮಯದಲ್ಲಿ ನನ್ನ ಮಗಳಾದ ನಜ್ಮಾಳ ಮಗ ಮಹ್ಮದ್ ನುಮಾನ್ ಮತ್ತು ಪಕ್ಕದ ಮನೆಯ ಮುಂಭಾಗದ ರಸ್ತೆಯಲ್ಲಿ ಆಟ ವಾಡುತ್ತಿದ್ದರು ಆ ಸಮಯದಲ್ಲಿ ಸಲ್ಮಾ ಮತ್ತು ರೇಷ್ಮಾ ರವರು ನಮ್ಮ ಮನೆಯ ಹತ್ತಿರ ಬಂದು ನಮ್ಮ ಮಗನನ್ನು ನಿಮ್ಮ ಮಗ ಹೊಡೆದಿದ್ದಾನೆ ಎನ್ನುತ್ತಾ ಕೆಟ್ಟ ಮಾತುಗಳಿಂದ ಬೈಯುತ್ತಿರುವಾಗ ನಾನು ಹಾಗೂ ನನ್ನ ಮಗಳಾದ ನಜ್ಮಾ ರವರು ಇದು ಚಿಕ್ಕ ಮಕ್ಕಳು ಮಾಡಿಕೊಂಡಿರುವುದು ನಾವು ಬುದ್ದಿವಾದ ಹೇಳಿದರೆ ಸರಿಹೋಗುತ್ತದೆ ಅನ್ನುವಾಗ ಏಕಾಏಕಿ ಅಪ್ಸರ್ ಬಿನ್ ಲೇಟ್ ಭಾಷಾ, ಅಮ್ಜದ್ ಬಿನ್ ಬಾಷ, ಅಪ್ರೋಜ್ ಬಿನ್ ಭಾಷ, ಸಲ್ಮಾ ಬಿನ್ ಭಾಷ, ರೇಷ್ಮಾ ಬಿನ್ ಭಾಷ ರವರು ಮನೆಗೆ ನುಗ್ಗಿ ವಯಸ್ಸಾದ ನನ್ನನ್ನು ಆಮ್ಜದ್ ರವರು ಕಬ್ಬಿಣದ ರಾಡ್ ನಿಂದ, ಅಪ್ಸರ್ ರವರು ಕಲ್ಲಿನಿಂದ ಹೊಡೆದು ನನ್ನ ತಲೆಗೆ ಹೊಡೆದು ಕೆಳಗಡೆ ಬೀಳಿಸಿ ರಕ್ತಗಾಯ ಮಾಡಿರುತ್ತಾರೆ ನನ್ನ ಪಕ್ಕದಲ್ಲಿದ್ದ ನಜ್ಮಾಳಿಗೆ ದೊಣ್ಣೆಯಿಂದ ಮೂಗೇಟುಗಳಾಗುವ ಹಾಗೆ ಹಾಗೂ ಸೈಯದ್ ಬಾಬಾ ರವರಿಗೆ ರಾಡ್ ನಿಂದ ಮೂಗೇಟುಗಳಾಗುವ ಹಾಗೆ ಹೊಡೆದು ನಿಮ್ಮನ್ನು ಸಾಯಿಸುತ್ತೆವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಹಾಗೂ ರಕ್ತಗಾಯಗಳಾಗುವ ಹಾಗೆ ಕಬ್ಬಿದ ರಾಡ್, ಕಲ್ಲಿನಿಂದ ಹೊಡೆದು ಪ್ರಾಣ ಬೆದರಿಗೆ ಹಾಕರಿರುವ ಈ ಮೇಲ್ಕಂಡವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಕೋರಿ ನೀಡಿದ ಹೇಳಿಕೆಯಾಗಿರುತ್ತೆ.

 1. ಗೌರಿಬಿದನೂರು ಪುರ ಪೊಲೀಸ್ ಠಾಣೆ ಮೊ.ಸಂ.105/2020 ಕಲಂ. 279,304(A) ಐ.ಪಿ.ಸಿ:-

          ದಿನಾಂಕ:03/08/2020 ರಂದು ಬೆಳಿಗ್ಗೆ 7:00 ಗಂಟೆಯಲ್ಲಿ ಪಿರ್ಯಾದಿ ಪ್ರವೀಣ್ ಕುಮಾರ್ S C ಬಿನ್ ಲೇಟ್ ಚಂದ್ರಶೇಖರ್, 30 ವರ್ಷ, ಗೊಲ್ಲ ಜನಾಂಗ, ಸುದ್ದೇಕುಂಟೆ ಗ್ರಾಮ, ಕೊಡಿಗೇನಹಳ್ಳಿ ಹೋಬಳಿ, ಮಧುಗಿರಿ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೆಂದರೆ, ದಿನಾಂಕ:02/08/2020 ರಂದು ನಮ್ಮ ದೊಡ್ಡಮ್ಮಳಾದ ನರಸಮ್ಮ ರವರಿಗೆ  ಕಾಲಿಗೆ ಗಾಯವಾಗಿದ್ದರಿಂದ ಅವರಿಗೆ ಚಿಕಿತ್ಸೆಕೊಡಿಸುವ ಸಲುವಾಗಿ  ನಮ್ಮ ದೊಡ್ಡಮ್ಮನ ಮಗನಾದ ಕಾಂತರಾಜು ರವರು ಅವರ ದ್ವಿಚಕ್ರವಾಹನ ಸಂಖ್ಯೆ:KA-06-EJ-1907 ರಲ್ಲಿ ನಮ್ಮ ಊರಿನಿಂದ ಯಲಹಂಕಗೆ ಹೋಗಲು ಗೌರಿಬಿದನೂರು ಕಡೆಗೆ ಕರೆದುಕೊಂಡು ಹೋದರು, ಈ ದಿನ ದಿನಾಂಕ:03/08/2020 ರಂದು  ನಮ್ಮ ಅಣ್ಣ  ಕಾಂತರಾಜು ರವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ: 02/08/2020 ರಂದು ಸಂಜೆ  ಸುಮಾರು 04:30 ಗಂಟೆಯ ಸಮಯದಲ್ಲಿ   ನಾನು  ನಮ್ಮ ತಾಯಿಯನ್ನು ಗೌರಿಬಿದನೂರು ನಗರದ ಕರೇಕಲ್ಲಹಳ್ಳಿಯ ಬ್ರಿಡ್ಜ್ ಬಳಿ ಕರೆದುಕೊಂಡು ಹೋಗುತ್ತಿದ್ದಾಗ ನಮ್ಮ ತಾಯಿಯು ತಲೆ ತಿರುಗುತ್ತಿದ್ದು, ವಾಹನವನ್ನು ನಿಲ್ಲಿಸುವಂತೆ ತಿಳಿಸಿದ್ದು,  ನಾನು ವಾಹನ ನಿಲ್ಲಿಸುವಷ್ಟರಲ್ಲಿ  ಕೆಳಗೆ  ಬಿದ್ದು ಹೋಗಿ ಪ್ರಜ್ಞೆ ತಪ್ಪಿದ್ದು,ಆ ಸಮಯದಲ್ಲಿ  ನಾನು ಆಟೋದಲ್ಲಿ  ಗೌರಿಬಿದನೂರು ಸರ್ಕಾರಿ ಆಸ್ಪತ್ರೆಗೆ ಹೋಗಿ ತೋರಿಸಲಾಗಿ ಬೆಂಗಳೂರಿನ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರ ಮೇರೆಗೆ ಆಂಬುಲೆನ್ಸ್ ನಲ್ಲಿ ಬೆಂಗಳುರಿನ ESI ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ವೈದೇಹಿ ಆಸ್ಪತ್ರೆಗೆ  ತೆಗೆದುಕೊಂಡು ಬಂದಿದ್ದು, ರಾತ್ರಿ 1:00 ಗಂಟೆಯ ಸಮಯದಲ್ಲಿ  ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದು, ಈ ಬಗ್ಗೆ  ನಮ್ಮ ದೊಡ್ಡಮ್ಮ ನರಸಮ್ಮ ರವರು ಮೃತಪಟ್ಟಿರುವುದಾಗಿ  ಈ ಬಗ್ಗೆ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೊರಿ ನೀಡಿದ ದೂರಾಗಿರುತ್ತದೆ.

 1. ಗುಡಿಬಂಡೆ ಪೊಲೀಸ್ ಠಾಣೆ ಮೊ.ಸಂ.124/2020 ಕಲಂ. 307 ಐ.ಪಿ.ಸಿ:-

          ದಿನಾಂಕ:04/08/2020 ರಂದು ಮದ್ಯರಾತ್ರಿ 12.30 ಗಂಟೆಗೆ ಪಿರ್ಯಾದಿದಾರರು  ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ: ತಮ್ಮ ತಂದೆ – ತಾಯಿಗಳಿಗೆ ಒಂದನೇ ಅಂಜಿನಮ್ಮ ,ಎರಡನೇ ಶಿವಪ್ಪ, ಮೂರನೇ ಮಲ್ಲೇಶ  ಮೂರು ಜನ ಮಕ್ಕಳಿದ್ದು ನಾವುಗಳು ಕೂಲಿ ಕೆಲಸ ಮಾಡಿಕೊಂಡು ಯಲಗಲಹಳ್ಳಿ ಗ್ರಾಮ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ  ವಾಸವಾಗಿರುತ್ತೇನೆ. ದಿನಾಂಕ:03/08/2020 ರಂದು ಸಂಜೆ 6.30 ಗಂಟೆಯಲ್ಲಿ ತಮ್ಮ ಗ್ರಾಮದ  ತಮ್ಮ ಮನೆಯ ಹಿಂಭಾಗ ತಾನು ತನ್ನ ತಮ್ಮನಾದ ಶಿವಪ್ಪ ಹಾಗೂ ತಮ್ಮ ಗ್ರಾಮದ ವಾಸಿಯಾದ ನಾಗರಾಜಪ್ಪ ಬಿನ್ ನಾರಾಯಣಪ್ಪರವರು ಕಾಂಗ್ರೇಸ್ ಗಿಡಗಳನ್ನು ಕೋಯುತ್ತಿದ್ದಾಗ ತನ್ನ ತಮ್ಮ ಶಿವಪ್ಪರವರು ಪೋನಿನಲ್ಲಿ ಮಾತನಾಡುತ್ತಿದ್ದಾಗ  ತಮ್ಮ ಗ್ರಾಮದ ಪಕ್ಕದ ಮನೆಯ ವಾಸಿಯಾದ ನವೀನ ಬಿನ್  ಅಶ್ವತ್ಥಪ್ಪ ರವರು  ಕೊಲೆ ಮಾಡುವ ಉದ್ದೇಶದಿಂದ ಏಕಾಏಕಿ ಬಂದು ತನ್ನ ತಮ್ಮನಾದ ಶಿವಪ್ಪನಿಗೆ ಮಚ್ಚಿನಿಂದ ತಲೆಗೆ ಹೊಡೆದು ತೀವ್ರ ಸ್ವರೂಪದ ರಕ್ತಗಾಯ ಉಂಟುಮಾಡಿದ್ದು ನಂತರ ತಾನು ಮತ್ತು ತಮ್ಮ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜಪ್ಪ ಬಿನ್ ನಾರಾಯಣಪ್ಪ ರವರು ನವೀನನನ್ನು ಹಿಡಿಯಲು ಹೋದಾಗ ಅವನು  ಮಚ್ಚನ್ನು ಕೈಯಲ್ಲಿ ಹಿಡಿದುಕೊಂಡು ಹೊಡಿ ಹೋದನು ನಂತರ ಯಾರೋ ತಮ್ಮ ಗ್ರಾಮಸ್ಥರು ಅಂಬುಲೇನ್ಸ್ ಗೆ ಕರೆಮಾಡಿ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ಹೋಗಿ  ಅಲ್ಲಿಂದ ವೈದ್ಯರ ಸಲಹೆಯ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ತನ್ನ ತಮ್ಮನ ಮೇಲೆ ಕೊಲೆಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ಮಾಡಿರುವ ನವೀನ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.207/2020 ಕಲಂ. 323,341,504,506 ರೆ/ವಿ 34 ಐ.ಪಿ.ಸಿ:-

          ದಿನಾಂಕ:03-08-2020 ರಂದು ಸಂಜೆ 5-00 ಗಂಟೆಯಲ್ಲಿ ಪಿರ್ಯಾದಿದಾರರಾದ ಶಿವಾನಂದ. ವಿ.ಎಂ ಬಿನ್ ಲೇಟ್ ವಿ ಮಾರಪ್ಪ, ಸುಮಾರು 41 ವರ್ಷ, ವಕ್ಕಲಿಗರು, ಜಿರಾಯ್ತಿ,  ವಾಸ:ವರದನಾಯಕನಹಳ್ಳಿ ಗ್ರಾಮ,ಶಿಡ್ಲಘಟ್ಟ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ. ತಮ್ಮ ಬಾಬತ್ತು  ತನ್ನ ತಂದೆಯ ಸ್ವತ್ತಾದ  ತಮ್ಮ  ಗ್ರಾಮದ ಸರ್ವೆ  ನಂ 10  ಪಿ 74 ಮತ್ತು 10 ಪಿ 46 ರಲ್ಲಿ ಒಟ್ಟು 4 ಎಕರೆ ಜಮೀನು ಇರುತ್ತೆ. ತನ್ನ ತಂದೆ ಮರಣ ಹೊಂದಿದ ನಂತರ ತನ್ನ ಹೆಸರಿಗೆ ಪಹಣಿ,ಮುಟೇಶನ್ ಬದಲಾವಣೆ ಮಾಡಿಸಿಕೊಂಡಿದ್ದು. ಈಗ ಹಾಲಿ ಪಹಣಿ ತನ್ನ  ಹೆಸರಿನಲ್ಲಿಯೇ ಬರುತ್ತಿರುತ್ತೆ. ಈಗಿರುವಲ್ಲಿ ದಿನಾಂಕ: 27-07-2020 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ ತಾನು ತಮ್ಮ ಜಮೀನಿನಲ್ಲಿ ಉಳಿಮೆ ಮಾಡುತ್ತಿದ್ದಾಗ ತಮ್ಮ ಗ್ರಾಮದ ತಮ್ಮ ಸಂಬಂದಿಕರಾದ ಶ್ರೀನಿವಾಸಮೂರ್ತಿ ಬಿನ್ ಲೇಟ್ ನಾರಾಯಣಪ್ಪ, ಮತ್ತು ಆತನ ಮಕ್ಕಳಾದ ಧರಣಿ ಬಿನ್ ಶ್ರೀನಿವಾಸಮೂರ್ತಿ,ಸುಭಾಷ್ ಬಿನ್ ಶ್ರೀನಿವಾಸಮೂರ್ತಿ ರವರುಗಳು ಬಂದು ಈ ಜಮೀನು ನಮಗೆ ಸೇರುತ್ತೆ ನೀನು ಉಳಿಮೆ ಮಾಡಬೇಡ ಎಂದು ಹೇಳಿ ತನ್ನ ಮೇಲೆ ಗಲಾಟೆ ಮಾಡಿರುತ್ತಾರೆ. ಆಗ ತಾನು ನೀವು ಯಾರೂ ಹೇಳಲು ಇದು ನನ್ನ ಜಮೀನು ನಾನು ಉಳಿಮೆ ಮಾಡಿಕೊಳ್ಳುತ್ತೇನೆಂದು ಹೇಳಿದಾಗ ಅವರು ಅವಾಚ್ಯ ಶಬ್ದಗಳಿಂದ ಬೈದು  ತನ್ನ ಮೇಲೆ ಕೈಗಳಿಂದ ಹಲ್ಲೆ ಮಾಡಿರುತ್ತಾರೆ. ಆಗ ತಾನು ಗ್ರಾಮದಲ್ಲಿ ಹಿರಿಯರಿಗೆ ತಿಳಿಸೊಣವೆಂದು ಸುಮ್ಮನಾಗಿದ್ದು. ತದ ನಂತರ ತಾನು ದಿನಾಂಕ:31-07-2020 ರಂದು ತಮ್ಮ ಜಮೀನಿನಲ್ಲಿ ರಾಗಿಯನ್ನು ಬಿತ್ತನೆ ಮಾಡಿರುತ್ತಾರೆ. ಈಗಿರುವಲ್ಲಿ ದಿನಾಂಕ:02-08-2020 ರಂದು ಮದ್ಯಾಹ್ನ  ಸುಮಾರು 3-50 ಗಂಟೆಯಲ್ಲಿ ತಾನು ತಮ್ಮ ಮನೆಯ ಹತ್ತಿರ ತಮ್ಮ ಜಮೀನಿನ ಬಳಿಗೆ ಹೋಗಣವೆಂದು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಅಲ್ಲಿಗೆ ಬಂದ ತಮ್ಮ ಸಂಬಂದಿಕರಾದ ಶ್ರೀನಿವಾಸಮೂರ್ತಿ ಬಿನ್ ಲೇಟ್ ನಾರಾಯಣಪ್ಪ, ವೇಣುಗೋಪಾಲ  ಬಿನ್ ಲೇಟ್ ನಾರಾಯಣಪ್ಪ ಮತ್ತು ಧರಣಿ ಬಿನ್ ಶ್ರೀನಿವಾಸಮೂರ್ತಿ ರವರುಗಳು  ಬಂದು  ತನ್ನನ್ನು ಅಡ್ಡಗಟ್ಟಿ ಏ ನೀನು ಅ ಜಮೀನಿನನ್ನು ಉಳಿಮೆ ಮಾಡಬೇಡ ಎಂದು ಹೇಳಿದರೂ ಸಹ ರಾಗಿ ಬಿತ್ತನೆ ಮಾಡಿರುತ್ತೀಯಾ ಎಂದು ಹೇಳಿ ಏಕಾ ಏಕಿ  ತನ್ನ ಮೇಲೆ ಗಲಾಟೆ ಮಾಡಿ ಲೋಪರ್ ನನ್ನ ಮಗನೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಎಲ್ಲರೂ ಸೇರಿ ಕೈಗಳಿಂದ ತನ್ನ ಮೇಲೆ ಹಲ್ಲೆ ಮಾಡಿ ನೋವಿನ ಗಾಯಗಳನ್ನುಂಟು ಮಾಡಿರುತ್ತಾರೆ ಮತ್ತೆ ಆ ಜಮೀನಿನ ತಂಟೆಗೆ ಹೋದರೇ ನಿನ್ನನ್ನು ಜೀವಸಹಿತ ಉಳಿಸುವುದಿಲ್ಲವೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ. ಆಗ ಅಲ್ಲಿಯೇ ಇದ್ದ ತನ್ನ ಹೆಂಡತಿ ತನ್ನನ್ನು ಬಿಡಿಸಿಕೊಳ್ಳಲು ಬಂದಾಗ ತನ್ನ ಹೆಂಡತಿಯನ್ನು  ತಳ್ಳಿರುತ್ತಾರೆ ಆಗ ಅಲ್ಲಿಯೇ ಇದ್ದ ತಮ್ಮ ಗ್ರಾಮದ ಕೃಷ್ಣಮೂರ್ತಿ ಬಿನ್ ಲೇಟ್ ನಂಜಪ್ಪ ಮತ್ತು ವೆಂಕಟರಮಣ ಬಿನ್ ಲೇಟ್ ಮುನಿಯಪ್ಪ ರವರು ಗಲಾಟೆಯನ್ನು ಬಿಡಿಸಿರುತ್ತಾರೆ.ಸದರಿ ವಿಚಾರವಾಗಿ ಗ್ರಾಮದಲ್ಲಿ ಹಿರಿಯರು ಮಾತನಾಡಿ ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದು ಅದರೇ ಅವರು ಇದುವರೆಗೆ ರಾಜಿ ಪಂಚಾಯ್ತಿಗೆ ಬಂದಿರುವುದಿಲ್ಲ  ಅದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರನ್ನು ನೀಡುತ್ತಿದ್ದು ಮೇಲ್ಕಂಡವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗ ಪ್ರಕರಣ ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ.209/2020 ಕಲಂ. 87 ಕೆ.ಪಿ ಆಕ್ಟ್:-

          ದಿನಾಂಕ 03/08/2020 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಯಾರೋ ಬಾತ್ಮೀದಾರರಿಂದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕದಾಸರಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಆಸಾಮಿಗಳು ಗುಂಪು ಕಟ್ಟಿಕೊಂಡು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವುದಾಗಿ ಬಾತ್ಮೀ ಬಂದಿದ್ದು, ಸದರಿ ಆಸಾಮಿಗಳ ವಿರುದ್ದ ಪ್ರ ವ ವರದಿಯನ್ನು ದಾಖಲಿಸಿಕೊಂಡು, ಸ್ಥಳದ ಮೇಲೆ ದಾಳಿ ಮಾಡಲು ಅನುಮತಿಗಾಗಿ ಪಿಸಿ-90 ರವರ ಮುಖಾಂತರ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿಕೊಂಡಿದ್ದು, ಪಿಸಿ-90 ರವರು ಘನ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ದಿನಾಂಕ 04/08/2020 ರಂದು ಬೆಳಗಿನ ಜಾವ 00-30 ಗಂಟೆಗೆ ಠಾಣೆಗೆ ವಾಪಸ್ಸಾಗಿ ಹಾಜರು ಪಡಿಸಿದ ಅನುಮತಿ ಆದೇಶದ ಪ್ರತಿಯನ್ನು ಪಡೆದುಕೊಂಡು ಆರೋಪಿಗಳ ವಿರುದ್ದ ಸ್ವತಃ ಪ್ರಕರಣವನ್ನು ದಾಖಲಿಸಿಕೊಂಡಿರುತ್ತೆ.

 1. ಶಿಡ್ಲಘಟ್ಟ ಪುರ ಪೊಲೀಸ್ ಠಾಣೆ ಮೊ.ಸಂ.89/2020 ಕಲಂ. 279,337 ಐ.ಪಿ.ಸಿ :-

          ದಿನಾಂಕ:03/08/2020 ರಂದು ಸಂಜೆ 4.00 ಗಂಟೆಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಿಂದ ಬಂದ ಮೆಮೋವನ್ನು ಪಡೆದು ಆಸ್ಪತ್ರೆಗೆ ಹೋಗಿ ಗಾಯಾಳುವಾದ ಜಗದೀಶ್ ಬಿನ್ ಮುನಿಯಪ್ಪ, ಕದಿರಿನಾಯಕನಹಳ್ಳಿ ಗ್ರಾಮ, ರವರ ಪಡೆದು ಠಾಣೆಗೆ ವಾಪಸ್ಸು ಬಂದು ಸಂಜೆ 4.45 ಗಂಟೆಗೆ ದಾಖಲಿಸಿದ ಹೇಳಿಕೆ ಸಾರಾಂಶವೇನೆಂದರೆ, ದಿನಾಂಕ:03/08/2020 ರಂದು ಮದ್ಯಾಹ್ನ ಸುಮಾರು 3-00 ಗಂಟೆಯಲ್ಲಿ ತಾನು ತಮ್ಮ ಗ್ರಾಮದ ಪಕ್ಕದಲ್ಲಿರುವ ಮಾರಪ್ಪನಹಳ್ಳಿ ಗ್ರಾಮದ ನಾಗರಾಜ ಬಿನ್ ಲೇಟ್ ಕ್ಯಾಸಪ್ಪ ರವರು ತಮ್ಮ ಸ್ವಂತ ಕೆಲಸದ ಮೇಲೆ ಓಮಿನಿ ಕಾರ್ ನಲ್ಲಿ ಶಿಡ್ಲಘಟ್ಟಕ್ಕೆ ಬಂದು ಗಾಡಿಯ ಚಕ್ರದಲ್ಲಿ ಬ್ಲೋ ಕಡಿಮೆ ಇದ್ದುದ್ದರಿಂದ ಶಿಡ್ಲಘಟ್ಟ ಬಸ್ ನಿಲ್ದಾಣದಿಂದ ಸ್ವಲ್ಪ ಮುಂದೆ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಪಂಚರ್ ಅಂಗಡಿ ಮುಂದೆ ತಮ್ಮ ಗಾಡಿಯನ್ನು ನಿಲ್ಲಿಸಿ ಪಂಚರ್ ಅಂಗಡಿ ಮಾಲೀಕರಿಗೆ ಬ್ಲೋ ಹೊಡೆಯಲು ತಿಳಿಸಿ ತಾವು ರಸ್ತೆ ಬದಿ ನಿಂತಿದ್ದಾಗ ಮದ್ಯಾಹ್ನ ಸುಮಾರು 3-15 ಗಂಟೆಯಲ್ಲಿ ಚಿಂತಾಮಣಿ ಕಡೆಯಿಂದ ಚಿಕ್ಕಬಳ್ಳಾಪುರ ಕಡೆಗೆ ಚಾಲನೆ ಮಾಡಿಕೊಂಡು ಬರುತ್ತಿದ್ದ TN.28.AQ.0963 ನಂಬರಿನ ಲಾರಿಯನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತನಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ತನ್ನ ಎಡ ಮೊಣಕೈ ಮತ್ತು ಹಿಂಭಾಗದ ಸೊಂಡದ ಬೆನ್ನು ಮೂಳೆಗೆ ಗಾಯಗಳಾಗಿರುತ್ತೆ. ಆಗ ತನ್ನ ಜೊತೆ ಬಂದಿದ್ದ ನಾಗರಾಜ ಮತ್ತು ಪಂಚರ್ ಅಂಗಡಿ ಮಾಲೀಕರು ತನ್ನನ್ನು ಉಪಚರಿಸಿ ಅಂಬುಲೇನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆದ್ದರಿಂದ ತನಗೆ ಅಪಘಾತಪಡಿಸಿದ ಮೇಲ್ಕಂಡ ಲಾರಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಿ ನೀಡಿದ ಹೇಳಿಕೆ ಮೇರೆಗಗೆ ಈ ಪ್ರಕರಣ ದಾಖಲಿಸಿರುತ್ತೆ.